ಶಿಕ್ಷಣವೇ ಶಕ್ತಿ

Wednesday, 27 December 2023

ಡಾ. ಬಿ.ಆರ್‌ ಅಂಬೇಡ್ಕರ್‌ ಜಯಂತಿ
ಬಿ.ಆರ್.ಅಂಬೇಡ್ಕರ್
https://kn.wikipedia.org/s/1vu
ಭೀಮರಾವ್ ರಾಮ್‌ಜೀ ಅಂಬೇಡ್ಕರ್
Ambedkar speech at Yeola.png
೧೩ ಅಕ್ಟೋಬರ್ ೧೯೩೫ ರಲ್ಲಿ ಯೋಲ ನಾಸಿಕ್ನಲ್ಲಿ ರಾಲಿಯಲ್ಲಿ ಉದ್ದೇಶಿಸಿ ಭಾಷಣ ಮಾಡುತ್ತಿರುವ ಡಾ.ಬಾಬಾ ಸಾಹೇಬ್ಅಂಬೇಡ್ಕರ್
ಅಧ್ಯಕ್ಷರು ಸಂವಿಧಾನ ರಚನಾ ಸಮಿತಿ
ಅಧಿಕಾರ ಅವಧಿ
೨೯ ಆಗಸ್ಟ್ ೧೯೪೭ – ೨೪ ಜನವರಿ ೧೯೫೦
ಮೊದಲನೆಯ ಕಾನೂನು ಮತ್ತು ನ್ಚವ
ಅಧಿಕಾರ ಅವಧಿ
೧೫ ಆಗಸ್ಟ್ ೧೯೪೭ – ಸೆಪ್ಟೆಂಬರ್ ೧೯೫೧
ರಾಷ್ಟ್ರಪತಿ ರಾಜೇಂದ್ರಪ್ರಸಾದ್
ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರು
ಪೂರ್ವಾಧಿಕಾರಿ ಸ್ಥಾನವನ್ನು ಸ್ಥಾಪಿಸಿದರು
ಕಾರ್ಮಿಕ ಸದಸ್ಯ ವೈಸ್ ರಾಯ್ ನಿರ್ವಾಹಕ ಸಮಿತಿ
ಅಧಿಕಾರ ಅವಧಿ
೧೯೪೨ – ೧೯೪೬
ಪೂರ್ವಾಧಿಕಾರಿ ಫಿರೋಜ್ ಖಾನ್ ನೂನ್
ಉತ್ತರಾಧಿಕಾರಿ ಸ್ಥಾನವನ್ನು ರದ್ದುಪಡಿಸಲಾಯಿತು
ವೈಯುಕ್ತಿಕ ಮಾಹಿತಿ
ಜನನ 14 ಏಪ್ರಿಲ್ 1891
ಮೊವ್, ಕೇಂದ್ರೀಯ ಪ್ರಾಂತಗಳು, ಬ್ರಿಟಿಷ್ ಭಾರತ (ಈಗ ಮಧ್ಯಪ್ರದೇಶದಲ್ಲಿದೆ)
ಮರಣ 6 ಡಿಸೆಂಬರ್ 1956 (ತೀರಿದಾಗ ವಯಸ್ಸು ೬೫)
ದೆಹಲಿ, ಭಾರತ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ರಮಾಬಾಯಿ (m. 1906)
ಸವಿತಾ ಅಂಬೇಡ್ಕರ್ (m. 1948)
ಅಭ್ಯಸಿಸಿದ ವಿದ್ಯಾಪೀಠ ಮುಂಬಯಿ ವಿಶ್ವವಿದ್ಯಾಲಯ
ಕೊಲಂಬಿಯಾ ವಿಶ್ವವಿದ್ಯಾಲಯ
ಲಂಡನ್ ವಿಶ್ವವಿದ್ಯಾಲಯದ
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್
ಧರ್ಮ ಬೌದ್ಧ ಧರ್ಮ
ಸಹಿ 
ಮಿಲಿಟರಿ ಸೇವೆ
ಪ್ರಶಸ್ತಿಗಳು ಭಾರತರತ್ನ

ಬಿ.ಆರ್. ಅಂಬೇಡ್ಕರ್

A meeting of the Constituent Assembly of India, in 1950. Ambedkar is seated top-right.

Ambedkar with wife Savita in 1948

ಅಂಬೇಡ್ಕರ್ ವಿದ್ಯಾರ್ಥಿಯಾಗಿದಾಗ

1922 ರಲ್ಲಿ ನ್ಯಾಯವಾದಿಯಾಗಿ ಅಂಬೇಡ್ಕರ್

ಔರಂಗಾಬಾದ್ ನ ಮರಾಠವಾಡ ವಿಶ್ವವಿದ್ಯಾಲಯದಲ್ಲಿರುವ ಡಾ ಬಾಬಾಸಾಹೇಬ್ ಅಂಬೇಡ್ಕರ್‍ರ ಪ್ರಮುಖ ಪ್ರತಿಮೆಗೆ ಜನರು ಗೌರವ ಸಲ್ಲಿಸುತ್ತಿರುವುದು

ದಿಕ್ಷಾಭೂಮಿ ನಾಗ್ಪುರದಲ್ಲಿ ಒಂದು ಸ್ತೂಪ, ಅಂಬೇಡ್ಕರ್ ಅವರ ಅನುಯಾಯಿಗಳ ಜೊತೆ ಬೌದ್ಧ ಧರ್ಮಕ್ಕೆ ಸೇರಿದ ಜಾಗ
Annal Ambedkar Manimandapam.jpg

ಅಂಬೇಡ್ಕರ್ ಮ್ಯೂಸಿಯಂನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಪುಣೆ
ಡಾ.ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬)- ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. , ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ. [೧] [೨] [೩] [೪]
ಪರಿವಿಡಿ
೧ ಅಂಬೇಡ್ಕರ್‍ರವರ ಜೀವನ ಚರಿತ್ರೆ
೨ ವಿದ್ಯಾಭ್ಯಾಸ
೩ ವೃತ್ತಿ ಜೀವನ
೪ ಅಸ್ಪೃಶ್ಯತೆಯ ವಿರುದ್ದ ಹೋರಾಟ
ಅಂಬೇಡ್ಕರ್‍ರವರ ಜೀವನ ಚರಿತ್ರೆ
ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್ 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.
ಇವರ ಅಜ್ಜ ಮಾಲೋಜಿ ಸಕ್ವಾಲ್, ಇವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬೊಂಬೆ ಸೇನೆಯಲ್ಲಿ ಸೇರಿದರು, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19ಮೇಡಲ್ ಗಳನ್ನು ಗಳಿಸ್ಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ವಾಲ್, ಮೀರಾ ಸಕ್ವಾಲ್. ರಾಮಜಿ ಸಕ್ವಾಲ್‍ರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು.
ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣರಾದ ಸತಿಪತಿಗಳಾಗಿದ್ದರು ಇವರಿಗೆ 14 ಮಕ್ಕಳು ಹುಟ್ಟಿದರು, ಈ 14 ನೆ ಮಗನೇ ಡಾ ಅಂಬೇಡ್ಕರ್. ಅಂಬೇಡ್ಕರವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಾಂದೆ ತಾಯಿಯರಿಗೆ 14ನೆ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ರಾಮಜಿ ಸಕ್ವಾಲ್‍ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು , ಅವರು ಮಂಜುಳಾ,ತುಳಸಿ,ಬಲರಾಮ,ಅನಂದರಾವ್ ಮತ್ತು ಭೀಮರಾವ್, ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆಸಲ್ಲಿಸಿದ್ದರು. ಇವರಿಗೆ ಮರಾಠಿ,ಹಿಂದಿ ಭಾಷೆಯಲ್ಲಿ ಪ್ರಭುದ್ಧ ಜ್ಞಾನಹೊಂದಿದ್ದರು.
ಜೊತೆಗೆ ಆಂಗ್ಲ ಭಾಷೆಯು ಬಲ್ಲವರಾಗಿದ್ದರು. ಮಕ್ಕಳಲ್ಲಿ ದೇಶಭಕ್ತಿ ಜ್ಞಾನ, ಹಾಗೂ ಧರ್ಮದ ಬಗ್ಗೆ ತಿಳಿಹೇಳಿಕೊಡುವಲ್ಲಿ ಸಫಲರಾದರು. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಇವರು ಕಬೀರ ಪಂಥದವರು, ಕಬಿರರ ಧೋಹೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು.
ರಾಮಜಿ ಸಕ್ವಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿಯಾದ ನಂತರ ಡಾಪೋಲಿಗೆ ಬಂದರು. ಆದರೆ ಕೆಲವೇ ದಿನಗಳಲ್ಲಿ ಮಿಲಿಟರಿ ಕ್ವಾರ್ಟಸ್ನಲ್ಲಿ ಅವರಿಗೆ ಸೇವೆ ಸಿಕ್ಕ ಕಾರಣ ಸಾತಾರಕ್ಕೆ ಕುಟುಂಬ ವರ್ಗಾಯಿಸಿದರು. ಭೀಮರಾವ್ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಭೀಮರಾವ್ ಆರು ವರ್ಶದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ.
ಈ ಕಾರಣಕ್ಕಾಗಿ ಭೀಮರಾವ್ ರು ತನ್ನ ತಾಯಿಯ ಮಮತೆ ತಾಂನ ಅತ್ತೆಯಾದ ಮಿರಾಳಲ್ಲಿ ಕಂಡುಕೊಳ್ಳುತ್ತಾರೆ. ಮೀರಾ ಕರುಣೆಯ ಮಿರ್ತಿಯಾಗಿದ್ದಳು, ಗುನುಬೆನ್ನಿನಿಂದಾಗಿ ಮದುವೆ ಯಾಗದೆ ಯನ್ನ ಅಣ್ಣನ ಮಕ್ಕಳ ಪಾಲಮ್ ಪೋಷಣೆಯಲ್ಲಿಯೇ ಸರ್ವಸ್ವವನ್ನೂ ಕಂಡುಕೊಳ್ಳುವಳು. ಭೀಮರಾವರವರಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಅಸ್ಪೃಶ್ಯತೆಯನ್ನು ಅನುಭವವಾಗುತ್ತದೆ, ಶಿಕ್ಷಕರು ಮತ್ತು ಸಹಪಾಠಿಗಳು ಇವರು ದಲಿತ ಜಾತಿಗೆ ಸೇರಿದವಎಂಎಂಬ ಕಾರಣಕ್ಕಾಗಿ ಸೇರುತ್ತಿರಲ್ಲಿಲ್ಲ.
ಅದಕ್ಕಾಗಿ ಶಿಕ್ಷಣ ಹೊರಗಫೆ ಕುಳಿತುಕೊಂಡು ಕಲಿಯಬೇಕಾಯಿತು.ಭರಾವರಿಗೆ ಪ್ರಾಥಮಿಕ ಶಾಲೆಯಲ್ಲಿ ಎಲ್ಲರ ಅಸಹ್ಯದಿಂದಾಗಿ ಶಿಕ್ಷಣದಲ್ಲಿ ಅವರಿಗೆ ಹೆಚ್ಚು ಒಲವ ಇರಲಿಲ್ಲ, ಉದ್ಯಾನ ಮಾಡುವುದು, ಮೇಕೆಯೊಡನೆ ಆಟವಾಡುವುದು ಅವರ ಹವ್ಯಾಸಗಳಾಗಿದ್ದವು. ಈ ಮಧ್ಯ ರಾಮಜಿ ಸಕ್ವಾಲ್ ರವರು ಸಂಸಾರದ ನಿರ್ವಾಹಣೆಗಾಗಿ ಇನ್ನೊಂದು ಮದುವೆಯಾದರು.
ಮಲತಾಯಿ ತನ್ನ ತಾಯಿಯ ಬಟ್ಟೆ ಹಾಗೂ ಒಡವೆಗಳನ್ನು ಹಾಕಿಕೊಂಡಾಗ, ಅಡಕ್ಕಾಗಿ ತಂದೆ, ಅತ್ತೆಯೊಂದಿಗೆ ಜಗಳವಾಡುತ್ತಿದ್ದರು ಸೋದರತ್ತೆ ವಾತ್ಸಲ್ಯದಿಂದ ಮಲತಾಯಿಯ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು ಆದ್ರೂ ಸಹ ಸೋದರತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಮನೆಯಲ್ಲಿ ಬದುಕುವುದು ಬೇಡ ಎಂದು ನಿರ್ಧರಿಸಿ ತನ್ನ ರೊಟ್ಟಿಯನ್ನು ತಾನೇ ಸಂಪಾದಿಸಿಕೊಳ್ಳಬೇಕೆಂದು ನಿರ್ಧರಿಸಿದರು.
ತನ್ನ ವಯಸ್ಸಿನವರು ಬಾಂಬೆಯ ಬಟ್ಟೆಯ ಮಿಲ್ಲಿನಲ್ಲಿ ಕಾರ್ಮಿಕರಾಗಿ ದುಡಿಯಬೇಕೆಂದು ನಿರ್ಧರಿಸಿ ಬಾಬ್ ಗೆಗೋಗಳು ಬೇಕಾಗುವು ಹಣವನ್ನು ತನ್ನ ಅತ್ತೆಯ ಪರ್ಸ್ ನ್ನು ಮುರು ದಿನ ರಾತ್ರಿ ಎದ್ದು ಹಣವನ್ನು ಕದಿಯಲು ಪ್ರೇತನುಸುತ್ತಾರೆ ಆದ್ರೆ ನಾಲ್ಕನೇ ದಿನ ರಾತ್ರಿ ಪರ್ಸ್ ಕದ್ದು ಅದ್ರಲ್ಲಿ ಕೇವಲ ಅರ್ಧ ಆಣೆ ಇದ್ದು, ಬಾಂಬೆಗೆ ರೈಲಿನ ಟಿಕೇಟು ಮೂರು ಆಣೆ ಇರುತ್ತದೆ ಕದ್ದ ಹಣದಿಂದ ಬಾಂಬೆಗೆ ಹೋಗಲು ಸರಿಹೋಗುವುದಿಲ್ಲ.
ಇದರಿಂದ ನೊಂದು ತನ್ನ ನಿರ್ಧಾರ ಬದಲಿಸಿ ಹೆಚ್ಚಿಗೆ ಓದಬೇಕೆಂದು ನಿರ್ಧರಿಸಿ ಓದುವ ಆಸೆ ಹೆಚ್ಚಿಸಿಕೊಳ್ಳುತ್ತಾರೆ. ಸಾತರ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗ ಮಹಾರ ಎಂಬ ಅಸ್ಪೃಶ್ಯರದವರೆಂಬ ಕಾರಣಕ್ಕಾಗಿ ಹೆಚ್ಚು ಕಡಿಮೆ ಎಲ್ಲ ಶಿಕ್ಷಕರು ಇವರನ್ನು ಆಶಯದಿಂದ ನೋಡಿಕೊಳ್ಳುತ್ತಿದ್ದರು. ಯಾರು ಇವರ ಪ್ರತಿಭೆ ಗುರುತಿಸಲ್ಲಿಲ್ಲ.
ಆದರೆ ಶಿಕ್ಷಕರಲ್ಲಿ ಒಬ್ಬರಾದ ಫೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ,ಕಲಿಯುವ ಹಂಬಲ,ಸೂಕ್ಷ್ಮಬುದ್ಧಿಶಕ್ತಿಯನ್ನು ಗುರಿಟಿಸಿ ಇವರಿಗೆ ಪ್ರೋತ್ಸಾಹಿಸಿದರು. ಜಾತಿಯಲ್ಲಿ ಶಿಕ್ಷಕರು ಬ್ರಹ್ಮಣರಾಗಿದ್ದರು ಕೂಡ ತಾವು ಊಟಕ್ಕೆ ತಂದಿದ್ದ ಬುತ್ತಿಯಲ್ಲಿ ಭೀಮರವರವರಿ ಓಂದಿಷ್ಟು ಕೊಟ್ಟು ಪ್ರೀತಿಯಿಂದ ಊಟ ಮಾಡಿಸುತ್ತಿದ್ದರು.
ಇದೆ ಫೆಂಡೆಸೆ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಅವರ ಅಡ್ಡ ಹೆಸರಿಗೆ ಬದಲಿಸಿ ಕೊಟ್ಟರು ಅಂದರೆ ಹಾಜರಿಯಲ್ಲಿ ಅವರ ಹೆಸರು ಭೀಮರಾವ್ ರಾಮಜಿ ಅಂಬೆವಾಡ್ಕರ್ ಎಂದು ಇದ್ದು, ಶಿಕ್ಷಕರು ಅದನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು.
ಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ,ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾತಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವಣೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಹಳೆಗೆ ಸೇರಿಸುತ್ತಾರೆ.
ಆದರೆ ಶಾಲೆಗೆ ಸೇರುವ ಸಂಧರ್ಭದಲ್ಲಿಯೇ ಇವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಾಲೆಯಲ್ಲಿ ಮೊದಲನೆಯ ಭಾಷೆ ಮರಾಠಿಯಾಗಿಯೂ,ಎರಡನೆಯ ಭಾಷೆ ಸಂಸ್ಕೃತ ಕಲಿಯಲು ಇಚ್ಛಿಸುತ್ತಾರೆ. ಆದರೆ ಸಂಸ್ಕೃತ ಶಿಕ್ಷಕರು ಇವರಿಗೆ ಸಂಸ್ಕೃತ ಕಲಿಸಲು ನಿರಾಕರಿಸುತ್ತಾರೆ.ಅದಕ್ಕಾಗಿಯೇ ಅನಿವಾರ್ಯವಾಗಿ ಪಾರ್ಸಿ ಭಾಷೆಯನ್ನು ಕಲಿಸಲು ನಿರ್ಧರಿಸುತ್ತಾರೆ.
ಒಂಬತ್ತನೆಯ ತರಗತಿಯಲ್ಲಿಯೂ ಇವರಿಗೆ ಅಸ್ಪೃಶ್ಯತೆಯ ಸಿಗುತ್ತದೆ. ಶಿಕ್ಷಕರು ಬೋರ್ಡ್ ಮೇಲೆ ಹಾಕಲಾಗಿದ್ದ ಬೀಜಗಣಿತದ ಲೆಕ್ಕ ಶಾಲೆಯ ಯಾವ ವಿದ್ಯಾರ್ಥಿ ಕೂಡ ಬಿಡಿಸದಿದ್ದಾಗ ಭೀಮರಾವ್ ರು ಬಿಡಿಸಲು ಬರುತ್ತಾರೆ. ಶಾಲೆಯ ಶಿಕ್ಷಕರು ಅನುಮತಿ ನೀಡುತ್ತಾರೆ . ಆದರೆ ವಿದ್ಯಾರ್ಥಿಗಳು ತಮ್ಮ ಊಟದ ಬುತ್ತಿ ಬೋರ್ಡಿನ ಹಿಂದುಗಡೆ ಇಟ್ಟಿರುವುದರಿಂದ ಮಹಾರ ವಿಧ್ಯಾರ್ಥಿ ಬೋರ್ಡ್ ಮುತ್ತಿದ್ದದರೆ ಬುತ್ತಿ ಅಸ್ಪೃಶ್ಯವಾಗುತ್ತದೆ ಎಂದು ನಿರಾಕರಿಸಿದರು.
ಇಂತಹ ಕಹಿ ಅನುಭವಗಳ ಮಧ್ಯಯೇ ಡಾ. ಅಂಬೇಡ್ಕರ್ 1907ರಲ್ಲಿ 10ನೆ ತರಗಟುಯಲ್ಲಿ ಪಾಸಾಗುತ್ತಾರೆ ಒಟ್ಟು 750 ಅಂಕಗಳಿಗೆ 282 ಅಂಕ ಪಡೆದುದರು. ಅಸ್ಪೃಶ್ಯರಲ್ಲಿಯೇ ಇವರು ಇಷ್ಟು ಅಂಕಗಳನ್ನು ಪಡೆದು ಪಾಸದ ಮೊದಲನೇ ವಿದ್ಯಾರ್ಥಿ ಯಾಗುತ್ತಾರೆ . ಅಸ್ಪೃಶ್ಯರ ವರ್ಗದವರು ಈ ಬಾಲಕನಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲು ಆಗಿನ ಸಮಾಜ ಸುಧಾರಕರಾದ ಎಸ್ ಕೆ ಭೋಲೆಯವರು ನಿರ್ಧರಿಸುತ್ತಾರೆ.
ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ ಎ ಕೆಲಸ್ಕರ್ ರವರಿಗೆ ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಕೆ ಎ ಕೆಲಸ್ಕರ್ ರವರು ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನನಂದಿಸಿದರು,ನೀವು ನಿಮ್ಮ ಸಮಾಜದ ಮತ್ತು ಸಂಹರ ಭಾರತದ ಸುಧಾರಕರಗಬೇಕೆಂದು ಹರಿಸುತ್ತಾರೆ. ಮತ್ತು ಉನ್ನತ ವ್ಯಾಸಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡುವೆಬು ಎಂದು ಹೇಳಿದರು.
ತಾಂಬೆ ಬರೆದ ಭಗವಾನ್ ಬುದ್ಧನ ಚಾಟಿತ್ರೆಯ ಪುಸ್ತಕವನ್ನು ಭೀಮರಾವರವರಿಗೆ ಕಾಣಿಕೆ ನೀಡುತ್ತಾರೆ. ಡಾ.ಅಂಬೇಡ್ಕರ್ ರವರು ಬೌದ್ಧ ಧರ್ಮಕ್ಕೆ ಒಲಿಯಲು ಈ ಪುಸ್ತಕವೇ ಪ್ರೋತ್ಸಾಹ ಕೊಡುತ್ತದೆ. ಅಂಬೇಡ್ಕರ್ ಅವರು 10ನೆ ತರಗತಿ ಪಾಸಾದ ನಂತರ ಇವರ ಮನೆಯವರು ಡಾಪೋಲಿಯ ಬಿಕ್ಕು ವಾಲಂಗಕರ್ರವ ಎರಡನೆಯ ಪುತ್ರಿ ರಮಾಬಾಯಿಯವರೊಂದಿಗೆ ಮದುವೆ ಮಾಡುತ್ತಾರೆ.
ಆಗ ಅವರಿಗೆ 17 ವರ್ಷ ರಮಾಬಾಯಿಯವರಿಗೆ 9 ವರ್ಷ ವಯಸ್ಸಾಗಿತ್ತು. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ್ 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ. ಇವರಿಗೆ ಕೆ.ಎ ಕೆಲಸ್ಕರ್‍ರವರು ಪಿಯುಸಿ ಮತ್ತು ಬಿ ಎ ವ್ಯಾಸಂಗಕ್ಕಾಗಿ ಬರೊಡದ ಮಹಾರಾಜರಿಂದ ಉಂಗಳಿಗೆ 25 ರೂಪಾಯಿಗಳನ್ನು ಶಿಕ್ಷಣ ವೇತನವನ್ನು ಕೊಡಿಸುತ್ತಾರೆ.
ಬಿ ಎ ಓದುವಾಗ ಪ್ರೊ ಮುಲ್ಲರ್ ಎಂಬುವರು ಹೆಚ್ಚು ಪ್ರೋತ್ಸಾಹವನ್ನು ಕೊಟ್ಟಿರುತ್ತಾರೆ. ಅದಕ್ಕಾಗಿ ಡಾ. ಅಂಬೇಡ್ಕರ್ ರವರಿಗೆ ಇವರು ಆದರ್ಶರಾಗಿರುತ್ತಾರೆ. ಮೊದಲೇ ಸಯ್ಯಾಜಿರಾವ್ ಗಾಯಕವಾಡರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಬಿ ಎ ಮುಗಿದ ನಂತರ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆಗಿ ನೇಮಕವಾಗುತ್ತಾರೆ.ಆದರೆ ಅವರು ಅಲ್ಲಿ ಹೆಚ್ಚು ಕಾಲ ಕೆಲಸ ಮಾಡಲಿಲ್ಲ.
ಕೇವಲ 15 ದಿನಗಳ ಕೆಲಸ ಮಾಡಿದರು,ತಂದೆ ಅನಾರೋಗ್ಯದಿಂದಿದ್ದಾರೆ ಎಂಬ ತೇಲಿಗ್ರಾಮ್ ಬಂದಾಗ ಅವರು ಬರೋಡಾದಿಂದ ಬಾಂಬೆಗೆ ಬರುತ್ತಾರೆ.ತಂದೆ ಅಂತಿಮ ಕ್ಷಣ ಕ್ಷಣ ಎಣಿಸುತ್ತಿದ್ದರು. ಬಂದ ಮಗನ ಮೈ ಮೇಲೆ ಕೈ ಎಳೆದು ಏನೋ ಹೇಳಲು ತಡವರಿಸಿ ಏನೂ ಹೇಳಲಾಗದೆ, ಫೆಬ್ರವರಿ 2 1913ಕ್ಕೆ ಪ್ರಾಣಬಿಟ್ಟರು. ತಂದೆ ಅಂತ್ಯಕ್ರಿಯೆಗಳನ್ನು ಮುಗಿಸಿದ ಡಾ. ಅಂಬೇಡ್ಕರರು ಮುಂದೆ ಏನು ಎಂಬ ಪ್ರಶ್ನೆಹಾಕಿಕೊಂಡು ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುತ್ತಾರೆ.
ಇದೆ ಸಂಧರ್ಭದಲ್ಲಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯಾರ್ಥಿಗಳಿಗೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಕ್ಷಕರಾದ ಕೆ. ಎ ಕೆಲಸ್ಕರ್ ರವರ ಜೊತೆಗೆ ಬರೊಡದ ಮಹಾರಾಜರಲ್ಲಿ ಬಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಪಡೆದು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಲು 1913ಕ್ಕೆ ಹೋಗುತ್ತಾರೆ.
ಅಲ್ಲಿ ಅರ್ಥಶಾಸ್ತ್ರ,ಸಮಾಜಶಾಸ್ತ್ರ,ಅತಿಹಾಸ,ತತ್ವಜ್ಞಾನ,ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಾರೆ. 1915ರಲ್ಲಿ ಪ್ರಾಚೀನ ಭಾರತದ ವಾಣಿಜ್ಯ ಬ ಪ್ರಬಂದ ಮಂಡಿಸಿ ಎಂ ಎ ಪದವಿ ಪಡೆದರು. ಅದೇ ವರ್ಷ ಅಂತಾರಾಷ್ಟ್ರೀಯ ಸಮಾಜ ಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ.
1916ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ ಎಂಬ ಪ್ರಬಂಧ ಮಾಫಿಸಿ ಅದೇ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿಯನ್ನು ಪಡೆದರು. 8 ವರ್ಷದ ನಂತರ ಇಂಗ್ಲೆಂಡಿನ ಪ್ರಕಾಶನ ಸಂಸ್ಥೆ ಎಸ್ ಪಿ ಅಂಡ್ ಸನ್ಸ್, ಭಾರತದಲ್ಲಿ ರಾಷ್ಟ್ರೀಯ ಹಣ ಕಾಸಿನ ವಿಕಾಸ ಎಂಬ ಶೀರ್ಷಿಕೆಯಲ್ಲಿ ಪುಸ್ತಕವೊಂದು ಪ್ರಕಟಿಸಿತು. ಅಮೆರಿಕಾದಲ್ಲಿ ಇವರ ಮೇಲೆ ಪ್ರಭಾವ ಬೀರಿದ ಶಿಕ್ಷಕರೆಂದರೆ ಎಡ್ವಿನ್ ಕ್ಯಾನಾನ್, ಆರ್ ಎ ಸಲಿಗಮ್,ಜಾನ್ ಡಿವೆ.
ಅಮೆರಿಕಾದಲ್ಲಿ ಎಂ ಎ ,ಪಿಎಚ್ ಡಿ,ಪಡೆದ ನಂತರ ಉನ್ನತ ವ್ಯಾಸಂಗ ಇಮೈಗ್ಲೆಂಡಿನಲ್ಲಿ ಮುಂದುವರೆಸಲು ಅಂಬೇಡ್ಕರರು ಅಮೆರಿಕಾದಿಂದ ಇಂಗ್ಲೆಂಡಿಗೆ ಹೋಗುತ್ತಾರೆ. ಅಲ್ಲಿ ಲಂಡನ್ನಿನ ಅರ್ಥಶಾಸ್ತ್ರ ರಾಜಕೀಯಶಸ್ತ್ರ ವಿಶ್ವವಿದ್ಯಾಲಯದಲ್ಲಿ ಡಿ ಎಸ್ ಸಿ ಪದವಿಗಾಗಿ ನೋಂದಾಯಿಸಿಕೊಳ್ಳುತ್ತಾರೆ, ಅಲ್ಲದೆ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪಡವಿಶೇ ಹೆಚ್ಚುವರಿಯಾಗಿ ಸೇರುತ್ತಾರೆ.
ಆದರೆ 1916ರ ಹೊತ್ತಿಗೆ ಸಯ್ಯಾಜಿರಾವ್ ಗಾಯಕವಾಡ ರ ಶಿಹ್ಯವೇತನ ಅವಧಿ ಮುಗಿದಿದೆ ಹಿಂದಕ್ಕೆ ಮರಳಿ ಬರಲು ಹೇಳಿದಾಗ ಅಂಬೇಡ್ಕರ್ ರವರಿಗೆ ತೀರ ನೋವಾಗುತ್ತದೆ. ಆದರೂ ಅನಿವಾರ್ಯವಾಗಿ ತಮ್ಮ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ಬರುತ್ತಾರೆ ಬರುವಾಗ ಅಂಬೇಡ್ಕರರು ತಮ್ಮ ಗುರುಗಳಿಗೆ ವಿನಂತಿಸಿ ತಮ್ಮ ಅಡ್ಮಿಷನ್ ರದ್ದು ಮಾಡದಂತೆ ಕೋರಿ ನಾಲ್ಕು ವರ್ಶದ ನಂತರ ಮರಳಿ ಬರುವುದಾಗಿ ಕೋರಿರುತ್ತಾರೆ.
ಪೂರ್ವ ನಿರ್ಧರಿತ ಒಪ್ಪಂದದಂತೆ,ಡಾ ಅಂಬೇಡ್ಕರ್ ರು ಬರೊಡದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು. ಮಹಾರಾಜರಿಗೆ ತಿಳಿಯದಂತೆ ಅಲ್ಲಿಯೇ ಆಸ್ಥಾನಿಕ ಹಿರಿಯ ಮಂತ್ರಿಗಳು ಇವರೊಂದಿಹೆ ಅಸ್ಪೃಶ್ಯ ಆಚರಣೆ ಮಾಡುತ್ತಿದ್ದರುಸಮಾನ್ಯ ಸಿಪಾಯಿ ಕೂಡ ಇವರ ಫೈಲುಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನಿವೇಶನ ನೀಡಲಿಲ್ಲ ಮತ್ತು ಉಳಿದಿದ್ದ ಪಾರ್ಸಿ ಹೊಟೇಲದಿಂದ ಇವರನ್ನು ದಬ್ಬಿ ಹೊರಹಾಕಿದರು.
ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಲಾಗದೆ ಬಾಂಬೆಗೆ ಬಂದರು. ಬಂದು ಕೆಲವು ದಿನಗಳಲ್ಲಿ ಅವರ ಮಲತಾಯಿ ಮರಣಹೊಂದುತ್ತಾರೆ. ಅಂಬೇಡ್ಕರರು ಸಿಡ್ಯಾಮ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರುತ್ತಾರೆ. ಈ ಸರಕಾರಿ ಕಲೆಜಿನಲ್ಲಿಯೂ ಕೂಡ ಇವರ ಜೊತೆಗೆ ಅಸ್ಪೃಶ್ಯರ ಆಚರಣೆ ಮಾಡುತ್ತಾರೆ.
ಇವರ ಸಹಪಾಠಿಗಳು, ಪಾಠಮಾಡಿ ಉಪನ್ಯಾಸಕರಿಗಾಗಿ ಕುಡಿಯಲು ಇಟ್ಟ ನೀರಿನ ಪಾತ್ರೆಯಿಂದ ಅಂಬೇಡ್ಕರರು ನೀರನ್ನು ಕುಡಿದಾಗ ಗುಜರಾತ್ ನ ಉಪನ್ಯಾಸಕರೊಬ್ಬರು ಅಪೇಕ್ಷಿಸುತ್ತಾರೆ. ಮುಂದೆ 1920ರಲ್ಲಿ ಮುಖನಾಯಕ ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಈ ಅವಧಿಯಲ್ಲಿ ಅಂಬೇಡ್ಕರ್ ರವರಿಗೆ ಕೊಲ್ಲಾಪುರದ ಸಾಹೋ ಮಹಾರಾಜರು ಅಂಬೇಡ್ಕರವರ ಉನ್ನತ ವ್ಯಾಸಂಗಕ್ಕೆ ಶಿಷ್ಯವೇತನ ನಿದಲು ಮುಂದಾಗುತ್ತಾರೆ.
ಹೇಗೂ ಅಂಬೇಡ್ಕರ್ ರವರು ಕಾಲೇಜಿನಲ್ಲಿ ಉಪನ್ಯಾಸ ಮಾಡಿ ಕೂಡಿಟ್ಟ ಸ್ವಲ್ಪ ಹಣ, ಸಾಹು ಮಹಾರಾಜರಿಂದ ಶಿಷ್ಯವೇತನ ಹಾಗೂ ಆತ್ಮೀಯ ಪಾರ್ಸಿ ಗೆಳೆಯ ನವಲಭೆತನಿಂದ ಸ್ವಲ್ಪ ಹಣ ಸಾಲ ಪಡೆದು ಅಂಬೇಡ್ಕರರವರು ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೆ ಹೊದ್ದರು. ಅಲ್ಲಿ 1920ರಲ್ಲಿ ಲಂಡನ್ ಸ್ಕೂಲ್ ಆಫ್ ಏಕನಿಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ವಿಶ್ವವಿದ್ಯಾಲಯದಲ್ಲಿ ಎಂ ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು ಹಗಲು ರಾತ್ರಿ ಅಧ್ಯಯನ ಮಾಡುತ್ತಾರೆ.
ಸ್ವಲ್ಪ ಹಣವಿರುವುದರಿಂದ ಅತ್ಯಧಿಕ ಕಷ್ಟ ಪಟ್ಟು ಅರ್ಧ ಬ್ರೆಡ್ ಒಂದು ದಿನಕ್ಕೆ ಊಟ ಮಾಡಿ ಲಂಡನ್ನಿನ ಮ್ಯೂಸಿಯಂ ಎಂಬ ಗ್ರಾಂ5ಹಲಯದಲ್ಲಿ ದಿನದ 18 ಗಂಟೆಗಳ ಕಾಲ ಅಧ್ಯಾಯನ ಮಾಡಿ ,1921 ರಲ್ಲಿ ಪ್ರೊ ಎದ್ವಿನ್ ಕ್ಯಾನನ ರವರ ಮಾರ್ಗದರ್ಶನದಲ್ಲಿ ಬ್ರಿಟಿಷ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ. ಎಂಬ ಪ್ರಬಂಧ ಮಂಡಿಸಿ, ಎಂ ಎಸ್ ಸಿ ಪದವಿಪಡೆಯುತ್ತಾರೆ.
ಇವರು ಇದೆ ರೀತಿ ವಿದ್ಯಾರ್ಜನೆ ಮಾಡಿ 1921ರಲ್ಲಿ ಡಿ.ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು 1922 ರಲ್ಲಿ ಹಣದ ಸಮಸ್ಯೆ ಎಂಬ ಪ್ರಬಂಧ ಮಂಡಿಸಿ ಡಿ ಎಸ್ ಸಿ ಪದವಿ ಪಡೆಯುತ್ತಾರೆ . ಅದೇ ವರ್ಷ ಗ್ರೇಸ್ ಇನ್ ಕಾಲೇಜಿನಿಂದ ಎಲ್ ಎಲ್ ಡಿ ಪಡೆಯುತ್ತಾರೆ. 1923 ರಲ್ಲಿ ಜರ್ಮನಿಯ ಬಾನ್ ಬಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಗಾಗಿ ನೊಂದಾಯಿಸಿಕೊಂಡು 6 ತಿಂಗಳವರೆಗೆ ಅಭ್ಯಾಸ ಮಾಡುತ್ತಾರೆ.
ಆರ್ಥಿಕ ಕಾಡುಬಡತನದಿಂದ ವ್ಯಾಸಂಗವನ್ನು ಮಧ್ಯದಲ್ಲಿಯೇ ನಿಲ್ಲಿಸಿ ಭಾರತಕ್ಕೆ ಬಂದು ವಕೀಲ ವರಿತಿಯನ್ನು ಪ್ರಭಿಸುತ್ತಸುತ್ತಾರೆ. ಕೆಲವು ದಿನಗಳ ಕಾಲ ಟ್ಯಾಕ್ಸ್ ಪ್ರ್ಯಾಕ್ಟಿಶನರ್ ಆಗಿಯೂ ಕೆಲಸ ಮಾಡುತ್ತಾರೆ. ಸಾಮಾಜಿಕ ಸೇವೆಯಲ್ಲಿ ಕಾಲಜಿವುಳ್ಳ ಇವರು ಸಾಮಾಜಿಕ ಸೇವೆಗಾಗಿ ತಮ್ಮ ಬದುಕನ್ನು ಹುರುತಿಸಿಕೊಳ್ಳುತ್ತಾರೆ.
ದಲಿತ ವರ್ಗದವರನ್ನು ಜಾಗೃತರನ್ನಾಗಿ ಮಾಡಲು ಅವರಲ್ಲಿ ಶಿಕ್ಷಣದ ಪ್ರಸಾರ ಮಾಡಲು ಸಂಸ್ಕೃತಿಯ ಬಗ್ಗೆ ತಿಳಿಸಲು ಆರ್ಥಿಕ ಸೌಕರ್ಯ ಮಾಡಲು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಇವರ ಉದ್ದೇಶವಾಗಿತ್ತು. ಅದೇ ರೀತಿ ಬಹಿಷ್ಕೃತ ಭಾರತ ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಸಾಮಾಜಿಮ ಹೋರಾಟದ ಜೀವನ ಪ್ರಾರಂಭಿಸಿದ ಇವರು 1927ರಲ್ಲಿ ಮಹಾಡದ ಚೌಡರ ಕೆರೆಯ ನೀರನ್ನು ಮುಟ್ಟುವ ಚಳುವಳಿಯನ್ನು ಹಮ್ಮಿಕೊಳ್ಳುತ್ತಾರೆ.
ತನ್ನ 10 ಸಾವಿರ ಅನುಯಾಯಿಗಳೊಂದಿಗೆ ಚೌಡರ ಕೆರೆಯ ನೀರನ್ನು ಮುಟ್ಟಿಸಿ ಬಹುದಿನಗಳಿಂದ ನಿಷೇಧಿಸಿದ ಈ ಕೆರೆಯಿಂದ ನೀರು ಕುದುಳಿಯುವ ಹಕ್ಕು ಒತ್ತಾಯಿಸಿದರು. 1927 ರಲ್ಲಿ ಶ್ರೇಣಿ ಪದ್ದತಿಯ ವರ್ಣಾಶ್ರಮ ಹಾಗೂ ಸ್ತ್ರಿದಮನ ಮಸ್ಡಿದ ಮನಸ್ಮೃತಿಯನ್ನು ಸುತ್ತು ಹಾಕುತ್ತಾರೆ. 1930 ತನ್ನ 15 ಸಾವಿರ ಅನುಯಾಯಿಗಳೊಂದಿಗೆ ನಾಸಿಕದ ಕಾಳರಾಂ ದೇವಾಲಯದ ಪ್ರವೇಶ ಚಲುಯನ್ನು ಮಾಡುತ್ತಾರೆ.
1927ರಲ್ಲಿ ಇವರಿಗೆ ಮುಂಬಯಿಯ ಶಾಸಕಾಂಗದ ಸದಸ್ಯರಾಗಿ ಬ್ರಿಟಿಷ್ ಸರ್ಕಾರ ನೇಮಿಸುತ್ತದೆ. 1930 ರಿಂದ 1932 ವರೆಗೆ ಲಂಡನ್ನಿನಲ್ಲಿ ನಡೆಯುವ ದುಂಡು ಮೇಜಿನ ಸಂಮ್ಮೇಳನದಲ್ಲಿ ದಲಿತರ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಪ್ರತುಏಕ ಮತದಾನದ ಸ್ಪುಲಭ್ಯ ಕಲ್ಪಿಸಿಕೊಟ್ಟು ಬಹುದಿನಗಳಿಂದ ಆಳ್ವಿಕೆ ಮಾಫ್ಯೂವ ಅಧಿಕಾರದಿಂದ ದೂರವಿದ್ದ ದಲಿತರಿಗೆ ಆಳ್ವಿಕೆ ಮಾಡುವ ಅಧಿಕಾರವನ್ನು ದೊರಕಿಸಿಕೊಡುತ್ತಾರೆ.
ಇಂಗ್ಲೆಂಡಿನ ಪ್ರಧಾನಿಯಾದ ಮ್ಯಾಕ್ ಡೊನಾಲ್ಡ್ ಕೋಮುಆದೇಶದ ಮೂಲಕ ಈ ಅಧಿಕಾರವನ್ನು ದಲಿತರಿಗೆ ನೀಡುತ್ತಾರೆ. ಆದ್ರೆ ಗಾಂಧೀಜಿ ದಲಿತರಿಗೆ ಪ್ರತ್ಯೇಕೆ ಮತದಾನ ಬೇಡ ಹಿಂದೂ ಧರ್ಮ ಒಡೆದು ಹೋಗುತ್ತದೆಂದು ಪುಣೆಯ ಯರವಾಡ ಜೈಲಿನಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಅಂತಿಮವಾಗಿ ಗಾಂಫ್ಹಿಜಿ ಮತ್ತು ಅಂಬೇಡ್ಕರ್ ರವರ ನಡುವೆ ಸಂಧಾನ ನಡೆಸಿ ಪ್ರತ್ಯೇಕ ಮತ ಕ್ಷೇತ್ರದ 71 ಸಿಟು ಗಳಬದಲ್ಲಾಗಿ 148 ಸೀಟು ಹಳ ಜಂಟಿ ಮತದಾನ ಪದ್ದತಿ ನೀಡಿ ದಲಿತರಿಗೆ ಮೀಸಲಾತಿ ನೀಡಲಾಯಿತು. ಇಫ್ಸ್ ಸೆಪ್ಟೆಂಬರ್ 24 1932 ರಲ್ಲಿ ನಡೆದಿದ್ದು ಇದನ್ನು ಪುನಾ ಒಪ್ಪಂದ ಎಂದು ಕಾರ್ಯಲಾಯಿತು.
ಡಾ ಅಂಬೇಡ್ಕರ ರವರು ಅಸ್ಪೃಶ್ಯರಿಗಾಗಿ ಮತ್ತು ಅವರ ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ನಿರಂತರವಾದ ಹೋರಾಟ ಬ್ರಿಟಿಷ್ ಮತ್ತು ವರ್ಣವ್ಯವಸ್ಥೆಯ ವಿರುದ್ಧ ನಡೆಸಿದರು. 1935ರಲಿ ಯೌಲ್ಲ ಸಮ್ಮೇಳನದಲ್ಲಿ ಅಂಬೇಡ್ಕರರವರುತಾನು ಹಿಂದೂ ಧರ್ಮದಲ್ಲಿ ಇರುವುದಿಲ್ಲ, ನಾನು ಹಿಂದುವಾಗಿ ಹುಟ್ಟಿದ್ದು ಅನಿಶ್ಚಿತವಾಗಿ ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ.
ಅದೇ ವರ್ಷ 1935 ರಲ್ಲಿ ಅವರ ಪತ್ನಿ ರಮ್ಮಬಾಯಿಯವರು ತೀರಿಕೊಳ್ಳುತ್ತಾರೆ. ಡಾ ಅಂಬೇಡ್ಕರ್ ರವರಿಗೆ ಒಟ್ಟು 5 ಮಕ್ಕಳು ಹುಟ್ಟಿದ್ದು ಯಶ್ವಂತರಾವ್ ಅಂಬೇಡ್ಕರರನ್ನು ಬಿಟ್ಟರೆ ಉಳಿದವರೆಲ್ಲ ತೀರಿಕೊಳ್ಳುತ್ತಾರೆ. ಅಸ್ಪೃಶ್ಯರಿಗೆ ಅಧಿಕಾರ ಪಡೆದು 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಸ್ಥಾಪಿಸಿ, ಪ್ರಾಂತೀಯ ಶಾಸಕಾಂಗದಲ್ಲಿ ನಡೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತಾರೆ.
ಅದರಲ್ಲಿ 15 ಅಭ್ಯರ್ಥಿಗಳು ಗೆಲ್ಲುತ್ತಾರೆ. ದಲಿತರಿಗೆ ಶಿಕ್ಶಹ್ನದ ಅವಶ್ಯಕತೆಯನ್ನು ಗಮನಿಸಿ 1946ರಲ್ಲಿ ಪಿಪಲ್ಸ್ ಎಜುಕೇಶನ್ ಇನ್ಸ್ಟಿಟ್ಯೂಶನ್ ಸ್ಥಾಪಿಸಿದರು. 1946ರಲ್ಲಿ ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರಾಂತದಿಂದ ಆಯ್ಕೆಯಾಗಿ ಮುಂದೆ 1947ರಲ್ಲಿ ಕರಡು ಸಮಿತಿ ಅಧ್ಯಕ್ಷರಾಗಿ ನೇಮಕ ಹೊಂದಿ, ಸತತವಾಗಿ ಮೂರು ವರ್ಷಗಳವರೆಗೆ ಹಗಲು ರಾತ್ರಿ ಸಂವಿಧಾನ ಬರೆದು 1950ರಲ್ಲಿ ಮುಗಿಸುತ್ತಾರೆ. ಅದಕ್ಕಾಗಿ ಇವರನ್ನು ಸಂವಿಧಾನದ ಶಿಲ್ಪಿ ಎಂದು ಪರಿಗಣಿಸಲಾಗಿದೆ.
1947 ರಲ್ಲಿ ಕಾನೂನು ಮಂತ್ರಿಯಾಗಿ ಪಂಡಿತ ಜವಹಾರಲಾಲ್ ನೆಹರೂ ಮಾಂತ್ರಿ ಮಂಡಲದಲ್ಲಿ ಇವರು ಪ್ರಧಾನ್ ಮಂತ್ರಿಗೆ ಆತ್ಮೀಯರಾಗಿರುತ್ತಾರೆ. ನೆಹರೂ ಕಲ್ಪಿಸಿದ ಸಮಾಜವಾದಿ ಪ್ರಜಾಸತ್ತಾತ್ಮಕ ರಾಜ್ಯವ್ಯವಸ್ಥೆ ಡಾ ಅಂಬೇಡ್ಕರ್ ರವರಿಂದಲೇ ಪ್ರಭಾವಿತರಾಗಿದ್ದರು. ನೆಹರುಜಿ ಹಾಕಿಕೊಂಡ ಪಂಚ ವಾರ್ಷಿಕ ಯೋಜನೆಗೆ ಅಂಬೇಡ್ಕರರವರು ಮಾರ್ಗದರ್ಶಿಗಳಗಿದ್ದರು. ಮತ್ತು ಭಾಕ್ರನಾಂಗಲ್ ಅಣೆಕಟ್ಟು ಕಟ್ಟಲು ಸಲಹೆ ನೀಡಿದವರೆ ಅಂಬೇಡ್ಕರರವರು.
ಅಂಬೇಡ್ಕರವರು ಭಾರತದ ನೀರಾವರಿ ಯೋಜನೆಯಾ ಜನಕನಾಗಿದ್ದು. ಉತ್ತರ ಉತ್ತರ ಭಾರತ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಗೆ1952ರಲ್ಲಿ ಸಲಹೆ ನೀಡಿದರು.ನೆಹರೂರವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ಇವರು ಡಾ ಅಂಬೇಡ್ಕರ್, ನನ್ನ ಮಂತ್ರಿ ಮಂಡಲದ ವಜ್ರವಾಗಿದ್ದರೆ.ಎಂದು ಪರಿಚಯಿಸುತ್ತಿದ್ದರು.
ನೆಹರು ರವರ ಸಹಕಾರ ಪಡೆದು ಅಂಬೇಡ್ಕರ್ ದೇಶದ ಮಹಿಳಾ ವಿಮೋಚನೆಯನ್ನು ಮನು ರವಾರ ಮನಸ್ಮೃತಿಯ ಮೂಲಕ ಶೋಷಿತ ಮಹಿಳೆಗೆ ಬಿಡುಗಡೆ ಗೊಳಿಸಲು ದ ಹಿಂದೂ ಕೋಡ್ ಬಿಲ್ ನ್ನು ರಚನೆ ಮಾಡಿ ಪಾರ್ಲಿಮೆಂಟಿನಲ್ಲಿ ಮಾಡಿಸಿದ್ದರು. ಸಂಪ್ರದಾಯವಾದಿಗಳಿಂದ ಕೂಡಿದ ಪಾರ್ಲಿಮೆಂಟ್ ನ ಸಭೆಯಲ್ಲಿ ಮಹಿಳೆಗೆ ಹಿಂದೂ ಕೋಡ್ ಬಿಲ್ ನಲ್ಲಿ ಕೋಫಾಲ್ಲದ ಹಕ್ಕುಗಳನ್ನು ನಿರಾಕರಿಸಿತು.
ಹಿಂದೂ ಕೋಡ್ ಬಿಲ್ ನಲ್ಲಿ ಪ್ರಮುಖ ನಾಲ್ಕು ಅಂಶಗಳು ಇದ್ದವು 1. ಮಹಿಳೆಯು ಕೂಡ ತನ್ನ ಪತಿಯನ್ನು ಆಯ್ಕೆಮಾಡುವ ಹಕ್ಕು 2. ಪುರುಷರ ಹಾಗೆ ವಿಚ್ಚೇಧಿಸುವ ಹಕ್ಕು 3. ತಂದೆಯ ಆಸ್ತಿಯಲ್ಲಿ ಗಂಡುಮಕ್ಕಳ ಸಮನಾಗಿ ಹೆಣ್ಣುಮಗಳಿಗೂ ಆಸ್ತಿ ಹಕ್ಕು 4.ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳ ಜೊತೆಯಲ್ಲಿ ಹೆಣ್ಣುಮಕ್ಕಳಿಗೂ ಮತ್ತು ವಿಧವೆ ಸೊಸೆಗೂ ಸಮ ಪಾಲು ಹಕ್ಕು.
ಕೊನೆಗೆ ಹಿಂದೂ ಕೋಡ್ ಬಿಲ್ ಪಾಸಾಗದ ಕಾರಣ ಅಂಬೇಡ್ಕರ್ ರವರು ಕಾನೂನು ಮ್ಯಾಟ್ರಿ ಪದವಿಗೆ ರಾಜೀನಾಮೆ ನೀಡಿದರು. 1950 ರಲ್ಲಿ ಅಮೆರರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಭಾರತ ಸಂವಿಧಾನ ರಚಿಸಿದ್ದಕ್ಕಾಗಿ ಇವರನ್ನು ಸಂವಿಧಾನ ಶಿಲ್ಪಿ ,ಆಧುನಿಕ ಭಾರದ ನಿರ್ಮಾಪಕ, ಸಮ್ಜಾದ ಪ್ರವರ್ತಕ, ಎಂದು ಪರಿಗಣಿಸಿ, ಡಾಕ್ಟರ್ ಆಫ್ ಲಾ ಪದವಿ ನೀಡಿತು
1953ರಲ್ಲಿ ಆಂಧ್ರಪ್ರದೇಹದ ಉಸ್ಮಾನಿಯ ವಿಶ್ವವಿದ್ಯಾಲಯ ಸಂವಿಧಾನದ ಸೇವೆಯನ್ನು ಪರಿಗಣಿಸಿ ಡಾಕ್ಟರ್ ಆಫ್ ಲಿಟರೇಚರ ಎಂಬ ಗೌರವ ಪದವಿಯನ್ನು ನೀಡಿತು. 1951ರಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಸಕ್ರಿಯ ರಾಜಕೀಯದಿಂದ ದೂರ ಉಳಿದು ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮದ ಆಚಾರ ಮತ್ತು ಪ್ರಚಾರಕ್ಕಾಗಿ ಜೀವನವನ್ನು ಅರ್ಪಿಸಿಕೊಂಡರು.
1951 ರಲ್ಲಿ ಜಾಗತಿಕ ಬೌದ್ಧ ಸಮ್ಮೇಳನ ರಂಗುನದಲ್ಲಿ ನಡೆಯಿತು, ಅದರಲ್ಲಿ ಭಾಗವಹಿಸಿದರು. 1954ರಲ್ಲಿ ಕಟ್ಮೊಂಡಾದಲ್ಲಿ ನಡೆದ ಜಾಗತಿಕ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿದರು. 1951ರಲ್ಲಿ ಭಾರತೀಯ ಬೌದ್ಧ ಸಂಘಟನೆಯಲ್ಲಿ ಬುದ್ಧ ಮತ್ತು ಮಾರ್ಕ್ಸ್ ಕುರಿತು ಪ್ರಬಂಧ ಮಂಡಿಸಿದರು. 1955ರಲ್ಲಿ ಭಾರತೀಯ ಬೌದ್ಧ ಮಹಾಸಭೆ ಸ್ಥಾಪಿಸಿದರು.
ಬದುಕಿನ ಕೊನೆಯ ದಿನಗಳಲ್ಲಿ ಡಾ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕಾರದ ನಿರ್ಧಾರಮಾಡಿ ಅಕ್ಟೊಬರ್ 14 1956ರಲ್ಲಿ ತನ್ನ 5ಲಕ್ಷ ಅನುಯಾಯಾಯಿಗಳೊಂದಿಗೆ ಪತ್ನಿ ಸವಿತಾ ಅಂಬೇಡ್ಕರ್ ಜೊತೆಗೆ ನಾಗ ಜನತೆಯ ಮೂಲ ನಾಡಾದ ನಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರಮಾಡಿ, ಹಿಂದುವಾಗಿ ಸಾಯಲಾರೆ ಎಂಬ ಪ್ರತಿಜ್ಞೆ ಪೂರ್ಣಗೊಳಿಸಿದರು.
ಇವರಿಗೆ ಬರ್ಮಾದ ಬೌದ್ಧ ಬಂತೆ, ವಿರ ಚಂದ್ರಮಣಿ ಬೌದ್ಧಧಿಕ್ಷೆ ನೀಡಿದರು. ಮುಂದೆ ಡಿಸೆಂಬರ್6 1956ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಡಿಸೆಂಬರ್7ಕ್ಕೆ ಮುಂಬಯಿಯ ದಾದರಿನಲ್ಲಿ ಬೌದ್ಧ ಧರ್ಮದ ನಿಯಮದ ಪ್ರಕಾರ ಮಹಾಪರಿನಿರ್ವಾಣದ ವಿಧಿಯನ್ನು ಅಂತ್ಯಕ್ರಿಯೆಯಲ್ಲಿ ಮಾಡಲಾಯಿತು.
ವಿದ್ಯಾಭ್ಯಾಸ
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತರು. ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು.
೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು.
ವಾಪಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ವಿದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು. ೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತೃ ಅಭ್ಯಾಸ ಮಾಡಿದರು.
೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು.
ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇ'ಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು.
೧೯೨೦ರವರೆಗೆ ಮುಂಬಯಿಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧವನ್ನು ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು.
ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.
ವೃತ್ತಿ ಜೀವನ
ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿನ ಆಗುಹೋಗುಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಲೇ, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಆರಂಭಿಸಿದರು.
ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ, ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು.
ಭಾರತಕ್ಕೆ ಹಿಂದಿರುಗಿದ ಮರುವರ್ಷವೇ “ಬಹಿಷ್ಕೃತ ಹಿತಕಾರಿಣೀ ಸಭಾ” ಎಂಬ ದಲಿತ ವರ್ಗದ ಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು.
ಅಸ್ಪೃಶ್ಯತೆಯ ವಿರುದ್ದ ಹೋರಾಟ
೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ.
ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ 'ಮನುಸ್ಮೃತಿ' ಎಂದು ಅಂಬೇಡ್ಕರ್ ನಂಬಿದ್ದರು.
ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ.
ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧-೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು.
ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು.
೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು.
ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.
ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು.
ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, "ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು"ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು:
ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.
ಕೃತಿಗಳು
ಸಂಶೋಧನಾಪ್ರಬಂಧಗಳು
ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ
“ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ)
ಮೊಟ್ಟ ಮೊದಲ ಪ್ರಕಾಶಿತ ಕೃತಿ
ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ
ಡಾ ಬಿ ಆರ್ ಅಂಬೇಡ್ಕರ್ ರವರ ಲೇಖನಗಳು
ಅಂಬೇಡ್ಕರ್ ರವರ ಪ್ರಮುಖ ಕೃತಿಗಳು
ಭಾರತದಲ್ಲಿ ಜಾತಿಪದ್ದತಿ
ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮ
ಕಾರ್ಮಿಕರು ಮತ್ತು ಸಂಸದೀಯ ಪ್ರಜಾಪ್ರಭುತ್ವ
ಬುದ್ಧ ಮತ್ತು ಅವನ ದಮ್ಮ
ಸಂಸದೀಯ ಪ್ರಜಾಪ್ರಭುತ್ವದ ಭವಿಷ್ಯ
ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳು
ನನ್ನ ವ್ಯಯಕ್ತಿಕ ತತ್ವಜ್ಞಾನ
ಬುದ್ಧಿಜಂ ಅಂಡ್ ಕಮ್ಯುನಿಜಮ್
ಇತರ ಬರಹಗಳು
ಭಾರತದಲ್ಲಿಯ ಸಂಪ್ರದಾಯ1917
ಭಾರತದಲ್ಲಿ ಸಣ್ಣಹಿದಾಬಾಲಿಗಳು ಮತ್ತು ಅದರ ಸಮಸ್ಯೆಗಳು1917
ಹಣದ ಸಮಸ್ಯೆ1923
ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಆರ್ಥಿಕ ವ್ಯವಸ್ಥೆಯ ಇತಿಹಾಸ1925
ಜಾತಿಯ ವಿನಾಶ1936
ಫೆಡರೇಷನ್ v/s ಫ್ರಿಡಂ 1939
ಪಾಕಿಸ್ತಾನದ ಮೇಲಿನ ವಿಚಾರಗಳು1941
ಗಾಂಧಿ ಮತ್ತು ಅಸ್ಪೃಶ್ಯತೆ ನಿವಾರಣೆ 1943
ರಾನಡೆ ಗಾಂಧಿ ಮತ್ತು ಜಿನ್ನ 1943
ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಏನು ಮಾಡಿದ್ದಾರೆ1945
ಕಮ್ಯುನಲ್ ಡೆಡ್ ಲಾಕ್ ಅಂಡ್ ಎ ವೇ ಟು ಸಾಲ್ವ್ ಇಟ್ 1945
ಪಾಕಿಸ್ತಾನ ಅಥವಾ ಭಾರತದ ವಿಭಜನೆ 1945
ಶೂದ್ರರು ಯಾರು1946
ಸ್ಟೇಟ್ ಅಂಡ್ ಮೈನರಿಟಿಸ್1947
ಭಾರತದ ಹಣ ಮತ್ತು ಬ್ಯಾಂಕ್ ಇತಿಹಾಸ ಭಾಗ 1947
ಅಸ್ಪೃಶ್ಯರು
ಮಹಾರಾಷ್ಟ್ರದ ಒಂದು ಭಾಷವಾರು ರಾಜ್ಯ 1948
ಹಿಂದುಮಹಿಳೆಯ ಏಳಿಗ್ಗೆ ಮತ್ತು ಪತನ 1950
ಗೋಸಾಲ್ ಆಫ್ ಬುದ್ಧಿಜಂ 1952
ಭಾಷಾವಾರು ರಾಜ್ಯಗಳ ಮೇಲಿನ ಒಂದು ಸಿದ್ಧಾಂತ 1955
ಬುದ್ಧ ಮತ್ತು ಅವನ ದಮ್ಮ1957
ರಾಜಕೀಯ ಜೀವನ
ಮುಂದಿನ ಕೆಲವರ್ಷಗಳಲ್ಲಿ, ಅಂಬೇಡ್ಕರ್ ಸ್ವತಂತ್ರ್ತ ಕಾರ್ಮಿಕ ಪಕ್ಷ ( ಇಂಡಿಪೆಂಡೆಂಟ್ ಲೇಬರ್ ಪಾರ್ಟಿ) ಸ್ಥಾಪಿಸಿ, ೧೯೩೫ರ ಭಾರತ ಸರಕಾರದ ಕಾಯಿದೆಯ ಪ್ರಕಾರ ನಡೆಸಲ್ಪಟ್ಟ ಪ್ರಾಂತೀಯ ಚುನಾವಣೆಗಳಲ್ಲಿ ಭಾಗವಹಿಸಿದರು. ಈ ಚುನಾವಣೆಯಲ್ಲಿ ವಿಜಯಶಾಲಿಯಾದ ಅವರು, ಮುಂಬಯಿ ವಿಧಾನ ಸಭೆಯಲ್ಲಿ (ಲೆಜಿಸ್ಲೇಟಿವ್ ಕೌನ್ಸಿಲ್) ದೊಡ್ಡ ಭೂ ಹಿಡುವಳಿದಾರಿಕೆಯ ನಿಷೇಧ, ಕೈಗಾರಿಕಾ ಕಾರ್ಮಿಕರಿಗೆ ಮುಷ್ಕರದ ಹಕ್ಕು, ಜನಸಂಖ್ಯಾ ನಿಯಂತ್ರಣ ಜಾರಿ ಇತ್ಯಾದಿ ವಿಷಯಗಳ ಬಗ್ಗೆ ಒತ್ತಾಯಿಸಿ, ಮುಂಬಯಿ ರಾಜ್ಯದ (ಪ್ರೆಸಿಡೆನ್ಸಿ) ವಿವಿಧ ಕಡೆಗಳಲ್ಲಿ ಸಭೆ, ಸಮ್ಮೇಳನಗಳಲ್ಲಿ ಭಾಗವಹಿಸಿದರು.
೧೯೩೯ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ, ಅಂಬೇಡ್ಕರ್, ನಾಜಿ ತತ್ವಗಳು ಭಾರತೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹವುಗಳು ಎಂಬ ನಿಲುವನ್ನು ತೆಗೆದುಕೊಂಡರು. ಬ್ರಿಟಿಷ್ ಸರಕಾರವನ್ನು ಈ ಯುದ್ಧದಲ್ಲಿ ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟ ಅವರು, ಅಸ್ಪೃಶ್ಯರನ್ನು ಭಾರತೀಯ ಸೇನೆಯಲ್ಲಿ ಭರ್ತಿಯಾಗುವಂತೆ ಪ್ರೋತ್ಸಾಹಿಸಿದರು. ೧೯೪೧ರಲ್ಲಿ ಅಂಬೇಡ್ಕರರನ್ನು ರಕ್ಷಣಾ ಸಲಹಾ ಸಮಿತಿಗೆ ( ಡಿಫೆನ್ಸ್ ಅಡ್ವೈಸರೀ ಕಮಿಟಿ) ನೇಮಕ ಮಾಡಲಾಯಿತು.
ಮರು ವರ್ಷ ವೈಸರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಕಾರ್ಮಿಕ ಸದಸ್ಯ ಎಂದು ನೇಮಕವಾದ ಅವರು, ಈ ಹುದ್ದೆಯಲ್ಲಿ ಮುಂದಿನ ನಾಲ್ಕು ವರ್ಷ ಮುಂದುವರಿದರು. ಇದೇ ಅವಧಿಯಲ್ಲಿ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟವಾಗಿ ಬದಲಾಯಿಸಿದರು; ಪ್ರಜಾ ಶಿಕ್ಷಣ ಸಮಾಜವನ್ನು(ಪೀಪಲ್ಸ್ ಎಜುಕೇಶನ್ ಸೊಸೈಟಿ) ಸ್ಥಾಪಿಸಿದರು.
ಅತ್ಯಂತ ವಿವಾದವನ್ನು ಹುಟ್ಟು ಹಾಕಿದ ಅನೇಕ ಪುಸ್ತಕಗಳನ್ನೂ, ಬಿಡಿಹಾಳೆಗಳನ್ನೂ (ಪಾಂಪ್ಲೆಟ್ಸ್) ಪ್ರಕಾಶಿಸಿದರು. ಅವುಗಳಲ್ಲಿ ಕೆಲವು “ ಪಾಕಿಸ್ತಾನದ ಬಗ್ಗೆ ವಿಚಾರಗಳು “ (ಥಾಟ್ಸ್ ಆನ್ ಪಾಕಿಸ್ತಾನ್) , "ಕಾಂಗ್ರೆಸ್ ಹಾಗೂ ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು" ( ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡನ್ ಟು ಅನ್ಟಚಬಲ್ಸ್) ಮತ್ತು “ ಶೂದ್ರರು ಯಾರಾಗಿದ್ದರು?”( ಹೂ ವರ್ ದ ಶೂದ್ರಾಸ್?) ಮುಖ್ಯವಾದುವು.
ಭಾರತದ ಸಂವಿಧಾನ ಶಿಲ್ಪಿ
೧೯೪೭ರಲ್ಲಿ ಭಾರತ ಸ್ವತಂತ್ರವಾದ ಮೇಲೆ, ಈಗಾಗಲೇ ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿದ್ದ ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು. ಕೆಲ ವಾರಗಳ ನಂತರ ಸಂಸತ್ತು ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿತು. ಈ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು.
ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ, ಮುಂದಿನ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, ೧೯೪೮ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿ ಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಇಡೀ ರಾಷ್ಟೃಕ್ಕೆ ಅದನ್ನು ಲೋಕಾರ್ಪಣೆ ಮಾಡಿದರು.
ಸಂಸತ್ತಿನ ವ್ಯವಸ್ಥೆಯಲ್ಲಿ ಇದನ್ನು ಅವರು ಸಮರ್ಥವಾಗಿ ಮುಂದೊಯ್ದ ಪರಿಣಾಮವಾಗಿ, ಕೆಲವೇ ಕೆಲವು ತಿದ್ದುಪಡಿಗಳೊಂದಿಗೆ, ಇದು ಸಂಸತ್ತಿನ ಅಂಗೀಕಾರವನ್ನು ಪಡೆಯಿತು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು. ೧೯೫೧ರಲ್ಲಿ ಅಂಬೇಡ್ಕರ್ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವುದರೊಂದಿಗೆ ಅವರ ರಾಜಕೀಯ ಜೀವನಕ್ಕೆ ಬಹುತೇಕ ತೆರೆ ಬಿದ್ದಿತು.
೧೯೫೨ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರುಚುನಾವಣೆಯಲ್ಲೇ ಆಗಲಿ, ಲೋಕಸಭೆಗೆ ಗೆದ್ದು ಬರಲು ವಿಫಲರಾದರು. ಆದರೆ ಮಾರ್ಚ್ ೧೯೫೨ರಲ್ಲಿ ಆಗಿನ ಮುಂಬಯಿ ರಾಜ್ಯದ ಹದಿನೇಳು ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರಾಗಿ ರಾಜ್ಯಸಭೆಯನ್ನು ಪ್ರವೇಶಿಸಿದರು. ಸರಕಾರದ ಮೇಲೆ ನಿಯಂತ್ರಣವಿಡಲು ಅವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರು.
ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ
ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ಹೇಗಿತ್ತು ಮತ್ತು ಅದರಿಂದ ಅವರು ಏನನ್ನು ನಿರೀಕ್ಷಿಸಿದ್ದರು ಅನ್ನುವುದರ ಬಗ್ಗೆ ಈ ಉಲ್ಲೇಖವು ಬಹಳಷ್ಟು ತಿಳಿಸುತ್ತದೆ. ಕ್ರಾಂತಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೂಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವುದು ಸಾಮಾನ್ಯ ತಿಳಿವಳಿಕೆ. ಅಲ್ಲದೆ ಕ್ರಾಂತಿಗಳು ಮತ್ತು ಪ್ರಜಾಪ್ರಭುತ್ವಗಳು ಪರಸ್ಪರ ಹೊಂದಣಿಕೆಯಾಗಲಾರವು ಎಂಬ ಗುಪ್ತ ಗುಮಾನಿಯೊ ಇದೆ.
ಕ್ರಾಂತಿಯ ಬಗ್ಗೆಯ ಈ ಸಾಮಾನ್ಯ ಭಾವನೆಗಳು ತಾತ್ವಿಕವಾಗಿ ತಪ್ಪು ಎಂದು ಎತ್ತಿ ತೋರಿಸಬಹುದು. ಆ ವಿಷಯ ಬೇರೆ ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೂ ಕೆಲವು ಸಾಮಾನ್ಯ ಭಾವನೆಗಳಿವೆ. ಕ್ರಮಬದ್ದ ಚುನಾವಣೆ ಗಳು, ಅನೇಕ ರಾಜಕೀಯ ಪಕ್ಷಗಳು ಮತ್ತು ಪ್ರತಿ ವ್ಯಕ್ತಿಗೂ ಸಮಾನ ರಾಜಕೀಯ ಮೌಲ್ಯವನ್ನು ನೀಡುವ ಒಂದು ಪ್ರಾತಿನಿಧಿಕ ಸರ್ಕಾರದ ರೂಪ ಅದು ಎಂದು ಪರಿಗಣಿಸಲ್ಪಟ್ಟಿದೆ.
ಪ್ರಜಾಪ್ರಭುತ್ವದ ಎದ್ದು ಕಾಣುವ ಸ್ಥೂಲ ಸಂರಚನೆಯ ಮುಖ್ಯ ಶಿಲ್ಪಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿಗಣಿಸಲ್ಪಟ್ಟಿದ್ದರು. ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಗಳನ್ನು ಒಟ್ಟಿಗೆ ಸಾಧಿಸಬಲ್ಲದೆಂಬಂತೆ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು.
ಪ್ರಜಾಪ್ರಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ.
ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರಜಾಪ್ರಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಅನ್ನುವುದನ್ನು ಗ್ರಹಿಸಲ್ಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ.
ಎರಡನೆಯದು ಪೆಡಸಾದ ಸಾಮಾಜಿಕ ಅಡೆ-ತಡೆಗಳಿಂದ ಮುಕ್ತ ಸಮಾಜ.ಸಾಮಾಜಿಕ ಪ್ರಜಾಪ್ರಭುತ್ವವ ಅನ್ನುವ ಪದ ಸಾಮಾನ್ಯವಾಗಿ ಆರ್ಥಿಕ ಸಂಸ್ಧೆಗಳು ಹಾಗೂ ಬಂಡವಾಳ ಕ್ರಮೇಣ ಸಮಾಜವಾದಕ್ಕೆ ಹೊರಳುತ್ತದೆಂಬ ಫೇಬಿಯನ್ ನಂಬಿಕೆ ಗಳನ್ನು ಒಳಗೊಂಡಿರುತ್ತದೆ. ಆದರೆ ಅಂಬೇಡ್ಕರ ಅವರ ಪ್ರ್ರಕಾರ ಅದು ಶ್ರೇಣೀಕೃತವಲ್ಲದ, ವಿಂಗಡಣೆ ಮತ್ತು ಪ್ರತ್ಯೇಕಗಳಿಲ್ಲದ ಸಮಾಜ. ಅದು ಭಾರತಿಯ ಸಮಾಜ ಮತ್ತು ಅದರ ಜಾತಿಗಳ ವ್ಯವಸ್ಥೆಗೆ ತೀಕ್ಷ್ಣವಾಗಿ ಅನ್ವಯಿಸುತ್ತದೆ.
ಸಾಮಾಜಿಕ ಪ್ರಜಾಪ್ರಭುತ್ವ
ಅದು ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ "ಸಾಮಾಜಿಕ ಪ್ರಜಾಪ್ರಭುತ್ವ"ದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ.ಸಹಕಾರ ಮತ್ತು ಸಮುದಾಯ (ಭ್ರಾತೃತ್ವವನ್ನು ಸೂಚಿಸುತ್ತದೆ). ಸಮಾನತೆ (ಅವಕಾಶ ಮತ್ತು ಗಳಿಕೆಗಳೆರಡರಲ್ಲೂ) ಮತ್ತು ಸ್ವಾತಂತ್ರ್ಯ-ಹೀಗೆ. ಆದರ ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ 'ಆರ್ಥಿಕ ಪ್ರಜಾಪ್ರಭುತ್ವ' ಅನ್ನುವ ಪದವನ್ನು ಬಳಸಿದ್ದಾರೆ. ಹೀಗೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವವು ಮೂರು ಭಾಗಗಳನ್ನು ಹೊಂದಿದೆ:
ಔಪಚಾರಿಕ ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ,
ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು
ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಗಳೊಂದಿಗೆ ಸಮೀಕೃತಗೊಳ್ಳುತ್ತವೆ.
ಕರಡು ಸಮಿತಿಯ ಅದ್ಯಕ್ಷರಾಗಿ
ಬಿ.ಆರ್.ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರು
1946ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗ ರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ತನ್ನ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅವರಿಗಿಂತ ಸೂಕ್ತ ವ್ಯಕ್ತಿ ಬೇರಾರಿದ್ದಾರು? ನರಸಿಂಗ ರಾಯರು (ಬಿ.ಎನ್.ರಾವ್) ಸರಕಾರ ಕೇಳಿ ಕೊಂಡಂತೆ ಸಂವಿಧಾನದ ಕರಡು ಸಿದ್ಧ ಪಡಿಸಿದರು.
ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟು ಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ಬಿ.ಎನ್.ರಾವ್ ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು; ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳೂ ಇದ್ದವು.
ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395ಕ್ಕೇರಿತು. ತನ್ನ ಈ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೆ ಉಚಿತವಾಗಿ ನಡೆಸಿ ಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಸಂವಿಧಾನವನ್ನು ಬರೆದವರೇ ಅಂಬೇಡ್ಕರ್ ಎಂಬ ತಪ್ಪು ಕಲ್ಪನೆ ಈಗ ಬೆಳೆದು ಬಂದಿದೆ. [೫]
ಕಾನೂನು ಸಚಿವರು
ಸ್ವಾತಂತ್ರ್ಯದ ಸಂದರ್ಭದಲ್ಲಿ ನೆಹರೂ ಅವರಿಂದ ಕಾನೂನು ಸಚಿವರಾಗಲು ಆಹ್ವಾನ ಪಡೆದ ಅಂಬೇಡ್ಕರ್ ಅವರು, ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರವಾದ ಶ್ರಮವಹಿಸಿ ದೇಶಕ್ಕೆ ಸಂವಿಧಾನವನ್ನು ಕಟ್ಟಿಕೊಟ್ಟರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.
ಇಡೀ ವಿಶ್ವದಲ್ಲಿ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿವೆ ಎಂಬ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ. ರಾಜಕೀಯ ಪ್ರಜಾಪ್ರಭುತ್ವವು ಬಹುಮತವನ್ನು ತಿರುಚಿ ಬದಲಾಯಿಸಲು ಸಾಧ್ಯವಿಲ್ಲದಂತೆ ಸಮಾಜದ ಆರ್ಥಿಕ ಚೌಕಟ್ಟನ್ನು ಸಂವಿಧಾನದೊಳಗೆ ಭದ್ರವಾಗಿ ಅಳವಡಿಸಬೇಕೆಂದು ಅವರು ಬಯಸಿದ್ದರು.
'ಲಿಬರಿಸಂ'ನಲ್ಲಿ ಇಂತ ಹೊಳಹುಗಳು ಅಪರೂಪ. ಅಂಬೇಡ್ಕರ ಅವರು ಮೂಲಭೂತವಾಗಿ ಒಬ್ಬ ಲಿಬರಲ್ (ಉದಾರವಾದಿ) ಆಗಿದ್ದರೂ, 'ಲಿಬರಿಸಂ'ನ ಚೌಕಟ್ಟನ್ನು ಎಂದಿನಂತೆ ಅನಾಯಾಸವಾಗಿ ಮೀರಿದ್ದರು. ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಖಾಸಗಿ ಉದ್ದಿಮೆಯು ಅದರ ಮೂಲದಲ್ಲಿ ಸಂಪತ್ತು ಮತ್ತು ತನ್ಮೂಲಕ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಿಸುತ್ತದೆ.
ಇದು ಅನಿವಾರ್ಯವಾಗಿ ಬದುಕಿರಲು ದುಡಿಯಲೇಬೇಕಾದ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಮಾಲಿಕ ತಪ್ಪು ಮಾಡಿದ್ದರೂ ಕೆಲಸಗಾರ ಪ್ರಶ್ನಿಸಲಾಗದು. ಪ್ರಶ್ನಿಸಿದರೆ ಅವನು ತನ್ನ ಕೆಲಸ ಕಳೆದುಕೊಳ್ಳಬಹುದು!ಅವರು ಹೇಳುತ್ತಾರೆ: "ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವದ ಮೂಲಾಧಾರವಾದ 'ವ್ಯಕ್ತಿಗಳ ಹಕ್ಕು'ಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕು ಗೊಳಿಸುತ್ತದೆ ಅನ್ನುವುದನ್ನು ಮನಗಾಣುವರು.
ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಬೇಕಾಗುವುದು? ಎಷ್ಟ್ಟು ಜನ ಖಾಸಗಿ ಮಾಲೀಕರಿಂದ ಆಳಿಸಿಕೊಳ್ಳಲು ಸಿದ್ದರಾಗಬೇಕು?"ಆದ್ದರಿಂದ ಪ್ರಜಾಪ್ರಭುತ್ವವನ್ನು ಸಹಕಾರಗೊಳಿಸಲು ಉತ್ಪಾದನೆಯ ಸಾಧನಗಳು ಸಮಾಜದ ಒಡೆತನದಲ್ಲಿ ಇರಬೇಕೆಂದು ಅವರು ಬಯಸಿದರು. ಸಂವಿಧಾನ ರಚನಾಸಭೆ ಯಲ್ಲಿ ಜವಹರಲಾಲ್ ನೆಹರುರ ಅವರು ಮಂಡಿಸಿದ್ದರು.
ಸಂವಿಧಾನದ ಉದೇಳನವನ್ನು ಕುರಿತು ಠರಾವಿನ ಬಗ್ಗೆ ಮಾತನಾಡುತ್ತ ೧೭ ಡಿಸೆಂಬರ್ ೧೯೪೬ರಲ್ಲಿ ಅವರು, ಠರಾವಿ ನಲ್ಲಿ ಪ್ರಸ್ತಾಪಿಸಿದ್ದಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಗೊಳಿಸಲು ಆರ್ಥಿಕ ವ್ಯವಸ್ಥೆಯಾಗಿರಬೇಕು ಎಂದು ಹೇಳಿದ್ದರು.ಆರ್ಥಿಕ ವ್ಯವಸ್ಥೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯಾಗದ ಹೊರತು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವಲ್ಲಿ ನಂಬಿಕೆ ಇಟ್ಟ ಯಾವುದೇ ಮುಂದಿನ ಸರ್ಕಾರಕ್ಕೆ ಇದು ಹೇಗೆ ಸಾಧ್ಯ ಅನ್ನುವುದು ನನಗೆ ಅರ್ಥವಾಗದು. ವಾಸ್ತವವಾಗಿ ಸಂವಿಧಾನ ರಚನಾಸಭೆಯನ್ನು ತಾವು ರೂಪುಗೊಳಿಸಿದ್ದ 'ರಾಷ್ಟ್ರವೇ ನಿಯಂತ್ರಿಸುವ ಸಮಾಜವಾದ' ವ್ಯವಸ್ಥೆಗೆ ಅವರು ದನಿ ಕೊಡುತ್ತಿದ್ದರು.
ಸಮಾಜವಾದಿ ಚೌಕಟ್ಟು ಆಥಿಕ ವ್ಯವಸ್ಥೆಯು 'ಸಂವಿಧಾನದ ಒಂದು ಭಾಗ'ವಾಗಿರಬೇಕೆಂದು ಅವರ ಪ್ರಸ್ತಾವನೆ ಇತ್ತು. ಮೂಲ ಮತ್ತು ಪ್ರಮುಖ ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆ ರಾಷ್ಟ್ರ್ದದ (ಸರ್ಕಾರದ )ಕೈಯಲ್ಲಿರಬೇಕು; ವಿಮೆಯು ರಾಷ್ಟ್ರ್ದದ ಏಕಸ್ವಾಮ್ಯದಲ್ಲಿರಬೇಕು; ಪ್ರತಿಯೊಬ್ಬ ವಯಸ್ಕನಿಗೂ ಅದು (ವಿಮಾಪಾಲಿಸಿ) ಕಡ್ಡಾಯವಾಗಿದ್ದು ಅವನ ವೇತನಕ್ಕೆ ಅನುಗುಣವಾಗಿ ಇರತಕ್ಕದ್ದು.
ಕೃಷಿಯು ರಾಷ್ಟ್ರೀಕೃತ ಉದ್ದಿಮೆಯಾಗಿರಬೇಕು. ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಇಂತಹ ಉದ್ದಿಮೆ ವಿಮೆ ಮತ್ತು ಕೃಷಿ ಭೂಮಿಯನ್ನು ರಾಷ್ಟ್ರ್ದ(ಸರ್ಕಾರ)ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಡಿಬೆಂಚರುಗಳ ಮೂಲಕ ಪರಿಹಾರ ನೀಡಿ ರಾಷ್ಟ್ರ್ದ(ಸರ್ಕಾರ), ಅವುಗಳಲ್ಲಿ ನಿರ್ಣಾಯಕ ಹಕ್ಕುಗಳನ್ನು ಪಡೆದುಕೊಳ್ಳಬೇಕು.
ಕೃಷಿಯನ್ನು ಸಾಮೂಹಿಕ ಉದ್ದಿಮೆಯಾಗಿ ಸಂಘಟಿಸಬೇಕು; ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಒಂದೇ ಪ್ರಮಾಣದ ಫಾರ್ಮಗಳನ್ನಾಗಿ ವಿಂಗಡಿಸಿ ಜಾತಿ ಜನಾಂಗಗಳ ಭೇದವಿಲ್ಲದಂತೆ ಹಳ್ಳಿಗರಿಗೆ ಗುತ್ತಿಗೆ ಮೇಲೆ ಸಾಮೂಹಿಕ ಕೃಷಿಗಾಗಿ ಬಿಟ್ಟುಕೊಡಬೇಕು, ತಾನು ಒದಗಿಸುವ ಭೂಮಿಗೆ ಬಾಡಿಗೆ, ಕೃಷಿ ಸಲಕರಣೆಗಳು, ಒಳಸುರಿ ಮತ್ತು ಸಾಲಕ್ಕೆ ಪ್ರತಿಯಾಗಿ ಅವರು ಸರ್ಕಾರಕ್ಕೆ ಹಣ ಪಾವತಿ ಮಾಡತಕ್ಕದ್ದು- ಹೀಗಿತ್ತು ಅವರ ಪ್ರಸ್ತಾವನೆ.
ತಮ್ಮ 'ರಾಷ್ಟ್ರಗಳನ್ನು ಮತ್ತು ಅಲ್ಪಸಂಖಾತರು' ಅನ್ನುವ ಪುಸ್ತಕದಲ್ಲಿ ಅವರು ಈ ಬಗ್ಗೆ ಈ ವ್ಯವಸ್ಥೆಯ ಬಗ್ಗೆ ಇನ್ನಷ್ಟು ವಿಷಾದವಾಗಿ ಹೇಳಿದ್ದಾರೆ. ಸಂವಿಧಾನದ ಕಾರ್ಯದ ನಿರ್ವಹಣೆಯ ೬೦ ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ: ಜಾಗತೀಕರಣಕ್ಕೆ ಸಂಬಂಧಿಸಿದ ಇಡೀ ನೀತಿ ನಿರೂಪಣೆಯು ಸಂಪೂರ್ಣವಾಗಿ ಈ ನಿರ್ದೇಶಕ ತತ್ವಗಳ ಉಲ್ಲಂಘನೆ ಎಂದು ಪರಿಗಣಿಸಬಹುದು.
ಬೌದ್ಧ ಧರ್ಮಕ್ಕೆ ಮತಾಂತರ
ಕೊನೆಯವರೆಗೂ ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರೂ , ಅಂಬೇಡ್ಕರರ ಶಕ್ತಿ ೧೯೫೨ರ ನಂತರ ಬೇರೆಯೇ ವಿಷಯಗಳಲ್ಲಿ ಹೆಚ್ಚು ಹೆಚ್ಚು ವ್ಯಯವಾಗತೊಡಗಿತು. ೧೯೩೫ರ ದಲಿತ ಸಮ್ಮೇಳನದಲ್ಲಿ (ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್), “ನಾನೊಬ್ಬ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ” ಎಂದು ಘೋಷಿಸಿ, ಅಸ್ಪೃಶ್ಯರನ್ನು ಹಿಂದುವೆಂದು ಒಪ್ಪಿಕೊಂಡಿರದ ಹಿಂದೂಸಮಾಜಕ್ಕೆ/ಹಿಂದೂಸ್ತಾನಕ್ಕೆ ಆಘಾತ ಉಂಟು ಮಾಡಿದರು.
ಅಂಬೇಡ್ಕರ್, ಆಗಿನಿಂದಲೇ ಮತಾಂತರದ ಬಗ್ಗೆ ಗಂಭೀರ ಚಿಂತನೆ ನಡೆಸಿ, ಅಸ್ಪೃಶ್ಯರಿಗೆ ಹಿಂದೂಧರ್ಮ ದಲ್ಲಿ ಏಳಿಗೆಯಿಲ್ಲವಾದ್ದರಿಂದ ಮತಾಂತರ ಅನಿವಾರ್ಯ, ಹಾಗೂ ಬೌದ್ಧಧರ್ಮ ಮತಾಂತರಕ್ಕೆ ಅತ್ಯಂತ ಸೂಕ್ತವಾದದ್ದು ಎಂಬ ನಿರ್ಣಯಕ್ಕೆ ಬಂದರು.ಕೊಲಂಬೋದ ಯಂಗ್ ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್ ಸಂಸ್ಥೆಯ ಆಹ್ವಾನದ ಮೇಲೆ ೧೯೫೦ರಲ್ಲಿ ಶ್ರೀಲಂಕಾ ಪ್ರಯಾಣ ಬೆಳೆಸಿದರು.
ಅಲ್ಲಿನ ಕ್ಯಾಂಡಿಯಲ್ಲಿ ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಭಾಷಣ ಮಾಡಿದ ಅಂಬೇಡ್ಕರ್, ಶ್ರೀಲಂಕಾದ ಅಸ್ಪೃಶ್ಯರಿಗೆ ಬೌದ್ಧಧರ್ಮವನ್ನು ಆಲಂಗಿಸಲು ಕರೆಕೊಟ್ಟರು. ಪುರಾತನ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನಗಳು ಕಡಿಮೆಯಾಗಲು ಗೌತಮ ಬುದ್ಧನೇ ಕಾರಣ ಎಂಬ ಆರೋಪಕ್ಕೆ ಪ್ರತಿಯಾಗಿ, ಬುದ್ಧನನ್ನು ಸಮರ್ಥಿಸಿ ೧೯೫೧ರಲ್ಲಿ ಲೇಖನವನ್ನು ಬರೆದರು.
ಅದೇ ವರ್ಷ, “ಬೌದ್ಧ ಉಪಾಸನಾ ಪಥ” ಎಂಬ ಹೆಸರಿನ ಬೌದ್ಧ ಧರ್ಮೀಯ ಗದ್ಯದ ಸಂಕಲನವನ್ನು ಹೊರತಂದರು. ೧೯೫೪ರಲ್ಲಿ ಅಂಬೇಡ್ಕರ್ ಬರ್ಮಾ ದೇಶವನ್ನು ಎರಡು ಬಾರಿ ಸಂದರ್ಶಿಸಿದರು. ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಮೂರನೆಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಎರಡನೆಯ ಬಾರಿ ಭೇಟಿ ಮಾಡಿದರು.
ಭಾರತೀಯ ಬೌದ್ಧ ಮಹಾಸಭಾವನ್ನು (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ) ಸ್ಥಾಪಿಸಿ, ಪುಣೆಯ ಸಮೀಪದ ದೇಹು ರೋಡ್ ನ ದೇವಾಲಯವೊಂದರಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ೧೯೫೪ರ ಡಿಸೆಂಬರ್ ೨೫ರಂದು ಪ್ರತಿಷ್ಠಾಪಿಸಿದರು. ಆ ಸಂದರ್ಭದಲ್ಲಿ ನೆರೆದಿದ್ದ ಸಹಸ್ರಾರು ಅಸ್ಪೃಶ್ಯ ಜನಾಂಗದ ಸಭಿಕರೆದುರಿನಲ್ಲಿ ಬೌದ್ಧ ಧರ್ಮವನ್ನು ಭಾರತದ ಎಲ್ಲೆಡೆ ಹರಡುವುದಕ್ಕೆ ತನ್ನ ಉಳಿದ ಜೀವನವನ್ನು ಮೀಸಲಾಗಿಡುವುದಾಗಿ ಘೋಷಿಸಿದರು.
ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬೌದ್ಧ ಧರ್ಮದ ಸಾರಸಂಗ್ರಹವನ್ನು ಬರೆದು ಪ್ರಕಟಿಸುವುದಾಗಿಯೂ ಅವರು ಈ ಸಭೆಯಲ್ಲಿ ನಿರ್ಣಯಿಸಿದರು. ಅದರ ಪ್ರಕಾರವೇ “ಬುದ್ಧ ಮತ್ತು ಅವರ ಧಮ್ಮ” (ಬುದ್ಧ ಅಂಡ್ ಹಿಸ್ ಧಮ್ಮ ) ಎಂಬ ಕೃತಿಯನ್ನು ಫೆಬ್ರುವರಿ ೧೯೫೬ರಲ್ಲಿ ಪೂರ್ಣಗೊಳಿಸಿದರು. ಇದಾದ ಸ್ವಲ್ಪ ಕಾಲದಲ್ಲಿಯೇ, ತಾವು ಅದೇ ವರ್ಷದ ಅಕ್ಟೋಬರಿನಲ್ಲಿ ಮತಾಂತರ ಗೊಳ್ಳುವುದಾಗಿ ಪ್ರಕಟಿಸಿದರು.
ನಾಗಪುರದಲ್ಲಿ ಈ ಕಾರ್ಯಕ್ರಮಕ್ಕೆ ವ್ಯವಸ್ಥೆಯಾಯಿತು. ೧೯೫೬ರ ಅಕ್ಟೋಬರ್ ೧೪ರಂದು, ಬುದ್ಧ ಭಿಕ್ಷುವಿನಿಂದ ಸಾಂಪ್ರದಾಯಿಕ ದೀಕ್ಷೆ ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳ ನ್ನೊಳಗೊಂಡ ೩,೮೦,೦೦೦ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ನಾಗಪುರ ಹಾಗೂ ಚಂದಾದಲ್ಲಿ ಇನ್ನೂ ಕೆಲವು ಇಂಥಾ ಮತಾಂತರ ಸಮಾರಂಭಗಳನ್ನು ನೆರವೇರಿಸಿ ಅಂಬೇಡ್ಕರ್ ದಿಲ್ಲಿಗೆ ಮರಳಿದರು.
ಕೆಲ ವಾರಗಳ ನಂತರ ನೇಪಾಳಕ್ಕೆ ತೆರಳಿ, ಅಲ್ಲಿ ವಿಶ್ವ ಬೌದ್ಧ ಸಮಾವೇಶದ ನಾಲ್ಕನೆಯ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಎಂಬ ವಿಷಯವಾಗಿ ಭಾಷಣ ಮಾಡಿದರು. ದಿಲ್ಲಿಗೆ ಮರಳುವಾಗ ದಾರಿಯಲ್ಲಿ ಬನಾರಸ್ ಹಾಗು ಬುದ್ಧ ಮೋಕ್ಷ ಪ್ರಾಪ್ತಿಹೊಂದಿದ ಕುಶೀನರ ಎಂಬಲ್ಲಿ ನಿಂತು ಭಾಷಣಗಳನ್ನು ಮಾಡಿದರು. ದಿಲ್ಲಿಗೆ ವಾಪಸಾದ ಮೇಲೆ ಅನೇಕ ಬೌದ್ಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿ, ತಮ್ಮ ಕೃತಿ “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್” ಪುಸ್ತಕದ ಕೊನೆಯ ಅಧ್ಯಾಯವನ್ನು ಬರೆದು ಮುಗಿಸಿದರು.೧೯೫೬ರ ಡಿಸೆಂಬರ್ ೦೬ನೆಯ ತಾರೀಖು ಅಂಬೇಡ್ಕರ್ ಇಹಲೋಕ ವ್ಯಾಪಾರ ಮುಗಿಸಿದರು. ಅಂಬೇಡ್ಕರ್ ಬೌದ್ಧರಾದ ಮೇಲೆ, ಕೇವಲ ಏಳು ವಾರ ಮಾತ್ರ ಬದುಕಿದ್ದರು.
ಆ ಅಲ್ಪ ಕಾಲಾವಧಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅವರು ಮಾಡಿದಷ್ಟು ಕಾರ್ಯವನ್ನು, ಅಶೋಕನನ್ನು ಬಿಟ್ಟರೆ, ಬಹುಶ: ಬೇರ್ಯಾರೂ ಮಾಡಿಲ್ಲ.ಅವರ ಮರಣದ ಹೊತ್ತಿಗಾಗಲೇ ಏಳೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿದ್ದರಷ್ಟೇ ಅಲ್ಲ, ಈ ಮಹಾನ್ ನಾಯಕನ ಹಠಾತ್ ನಿಧನದಿಂದ ಅನುಯಾಯಿಗಳಲ್ಲಿ ಅನಿಶ್ಚಿತತೆ ಮತ್ತು ಗೊಂದಲ ಉಂಟಾದರೂ ಸಹ, ಅವರ ಮರಣದ ಕೆಲ ತಿಂಗಳುಗಳಲ್ಲಿ ಇನ್ನೂ ಅನೇಕ ಲಕ್ಷ ಜನ ಬೌದ್ಧಮತೀಯರಾದರು.
ಅಂಬೇಡ್ಕರರ ಮಹಾಕೃತಿ ಎಂದು ಪರಿಗಣಿಸಲಾದ “ಬುದ್ಧ ಅಂಡ್ ಹಿಸ್ ಧಮ್ಮ” ವನ್ನು, ಅವರು ತೀರಿ ಕೊಂಡ ಸುಮಾರು ಒಂದು ವರ್ಷದ ನಂತರ , ೧೯೫೭ ನವೆಂಬರ್ ನಲ್ಲಿ ಜನ ಶಿಕ್ಷಣ ಸಮಾಜದ ವತಿಯಿಂದ ಪ್ರಕಟಿಸಲಾಯಿತು.
ಬೌದ್ಧಧರ್ಮಕ್ಕೆ ಸೇರುವಾಗ ಮಾಡಿದ ಪ್ರತಿಜ್ಞೆ
ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಕೈಗೊಂಡ ಪ್ರಮಾಣ ಹೀಗಿತ್ತು:
‘ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ’.
‘ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ’.
‘ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದಲ್ಲಿ ನೆಲೆಯಾಗಿರುವ ಬೌದ್ಧ ಧರ್ಮ ಮಾತ್ರ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ’.[೬]
ಸ್ಮಾರಕ
ಅಂಬೇಡ್ಕರ್ ದಿಲ್ಲಿಗೆ ವಸತಿ ಬದಲಾಯಿಸಿದ ಮೇಲೆ , ಬಹಳಷ್ಟು ಕಾಲ ಜೀವಿಸಿದ ಹಾಗೂ ಕೊನೆಯುಸಿರೆಳೆದ 26, ಆಲಿಪುರ ರಸ್ತೆಯ ಮನೆಯನ್ನು ಅಂಬೇಡ್ಕರ್ ಸ್ಮಾರಕವಾಗಿ ಕಾದಿಡಲಾಗಿದೆ ( ಪೂರ್ಣ ವಿಳಾಸ: 26,ಆಲಿಪುರ ರಸ್ತೆ, ಐಪಿ ಕಾಲೇಜಿನ ಹತ್ತಿರ, ಸಿವಿಲ್ ಲೈನ್ಸ್, ನವದೆಹಲಿ- 110 054).
ದಲಿತ ಸಂಘಟನೆಗಳು ಈ ಸ್ಮಾರಕಕ್ಕಾಗಿ ಸಾಕಷ್ಟು ಹೋರಾಟ ಮಾಡಿದ ಮೇಲೆ, ಸರಕಾರ ಈ ಮನೆಯನ್ನು ಅದರ ಮಾಲೀಕರಾದ ಜಿಂದಾಲ್ ಮನೆತನದವರಿಂದ ಪಡೆದುಕೊಂಡು ಸ್ಮಾರಕವನ್ನಾಗಿ ಪರಿವರ್ತಿಸಿತು.ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತಿದೆ.
ಅವರ ಅನೇಕ ಅಭಿಮಾನಿಗಳು ಆದರದಿಂದ ಅವರನ್ನು “ಬಾಬಾಸಾಹೇಬ್” ಎಂದು ಸಂಬೋಧಿಸುತ್ತಾರೆ. ಅಂಬೇಡ್ಕರರ ಅನುಯಾಯಿಗಳು ಅವರ ಹೆಸರಿಂದ “ಜಯಭೀಮ” ಎಂದು ಪರಸ್ಪರ ಅಭಿವಾದಿಸುವುದುಂಟು. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.
ಅಂಬೇಡ್ಕರ್ ಅವರ ಕೊನೆಯ ಸಂದೇಶ
ಬಾಬಾಸಾಹೇಬರ ಕೊನೆಯ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ "ಮಗ ನೋಡಪ್ಪ ನಾನು ಕಷ್ಟಪಟ್ಟು ಇಷ್ಟೆಲ್ಲಾ ಮಾಡಿದ್ದೇನೆ. ಇನ್ನು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಿನ್ನ ಜವಾಬ್ದಾರಿ" ಎಂದು ಹೇಳುವಾಗ ಯಾವ ಪರಿಯ ದುಖಃ ಒತ್ತರಿಸಿಬರುತ್ತದೆಯೋ, ಆದ್ರ್ರ ಭಾವನೆ ಉಕ್ಕಿ ಹರಿಯುತ್ತದೆಯೋ ಅಂತಹ ಭಾವ ಉಂಟಾಗುತ್ತದೆ.
ನಿಜ, ಕೊಟ್ಯಂತರ ದಲಿತರ ಆಯುಷ್ಯದ ಒಂದೊಂದು ಕ್ಷಣವನ್ನು ನೀಡಿ ಅಂಬೇಡ್ಕರರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅದು ಸಾದ್ಯವಿಲ್ಲವಲ್ಲ! ಈ ನಿಟ್ಟಿನಲಿ ಉಳಿದಿರುವುದು ಅವರ ಆ ಅಮರ ಸಂದೇಶ ಮಾತ್ರ. ಅಂದಹಾಗೆ ಬಾಬಾಸಾಹೇಬರ ಆ ಸಂದೇಶವನು ಅವರ ಆಪ್ತ ಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ"Last few years of Dr. Ambedkar" ಕೃತಿಯಲ್ಲಿ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ.
ಬಹುಶಃ ಅಂತಹ ದಾಖಲೆ ಬರೀ ದಲಿತ ಸಮುದಾಯವೊಂದಕ್ಕೆ ಅಲ್ಲ ಈ ಪ್ರಪಂಚದ ಪ್ರತಿಯೊಂದು ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತೆ ಕಾಣುತ್ತದೆ. ಅದು 1956 ಜುಲೈ 31ರ ಮಂಗಳವಾರದ ಒಂದು ದಿನ. ಸಮಯ ಸಂಜೆ 5-30. ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು dictate ಮಾಡಿದ ಬಾಬಾಸಾಹೇಬರು ಇದ್ದಕಿದ್ದಂತೆ upset ಆದರು!
ಕೆಲಹೊತ್ತು ಏನನ್ನು ಮಾತನಾಡದ ಅಂಬೇಡ್ಕರರ ಈ ವರ್ತನೆ ಕಾರ್ಯದರ್ಶಿ ರತ್ತುವರಿಗೆ ಗಾಭರಿಯುಂಟುಮಾಡಿತು. ತಕ್ಷಣ ಎಚ್ಚೆತ್ತುಕೊಂಡ ರತ್ತುರವರು ಅಂಬೇಡ್ಕರರ ತಲೆಯನ್ನು ನೇವರಿಸುತ್ತಾ ಕಾಲನ್ನು ಒತ್ತುತ್ತಾ ಅವರ ಹಾಸಿಗೆಯ ಒಂದು ಕಡೆ ಬಂದು ಸ್ಟೂಲ್‍ನ ಮೇಲೆ ಕುಳಿತುಕೊಂಡರು. ಹಾಗೆಯೇ ಭಯದಿಂದ ನಡುಗುತ್ತಾ ಅಂಬೇಡ್ಕರರನ್ನು "ಸರ್, ಕ್ಷಮಿಸಿ ನನಗೆ ಸತ್ಯ ತಿಳಿಯಬೇಕು. ಈಚಿನ ದಿನಗಳಲ್ಲಿ ನೀವು ತುಂಬಾ ದುಖಿಃತರಾಗಿರುತ್ತೀರಿ, ಖಿನ್ನರಾಗಿರುತ್ತೀರಿ, ಅಳುತ್ತಿರುತ್ತೀರಿ. ಯಾಕೆ ಹೀಗೆ?" ಎಂದು ಕೇಳಿಯೇ ಬಿಟ್ಟರು!
ರತ್ತುರವರ ಈ ಗಾಭರಿ ಅಂಬೇಡ್ಕರರಿಗೆ ಅರ್ಥವಾಗಿತ್ತು. ಸಾವರಿಸಿಕೊಂಡ ಅವರು ಆ ದಿನ ತಮ್ಮ ಆ ದುಖಃಕ್ಕೆ ಕಾರಣ ಮತ್ತು ಆ ಕಣ್ಣಿರಿನ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಅಂಬೇಡ್ಕರರ ಆ ನೋವಿನ ನುಡಿಗಳನ್ನು ಗೌರವದಿಂದ ದಾಖಲಿಸುವು ದಾದರೆ "ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು.
ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ.
ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ" ಎನ್ನುತ್ತಾ ಅಂಬೇಡ್ಕರರು ತಮ್ಮ ದುಖಃದ ಮೊದಲ ಪುಟವನ್ನು ಬಿಚ್ಚಿಟ್ಟರು. ಮುಂದುವರಿದು ಅವರು "ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ.
ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ.
ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ" ಎಂದು ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿ ಸ್ವಾರ್ಥಿಗಳಾಗಿರುವ ತನ್ನ ಸಮುದಾಯಾದ ಸರ್ಕಾರಿ ನೌಕರರ ಬಗ್ಗೆ ಅಂಬೇಡ್ಕರರು ಅಂದು ಹೇಳಿದರು. ಮುಂದುವರಿದು ಅವರು"ಆ ಕಾರಣಕ್ಕಾಗಿ ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ ಶೋಷಣೆಯನು ಇನ್ನೂ ಅನುಭವಿಸುತ್ತಿರುವ, ಆರ್ಥಿಕ ದುಸ್ಥಿತಿಯಲ್ಲಿ ಇನ್ನು ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನ ಹರಿಸಬೇಕೆಂದಿದ್ದೇನೆ.
ಆದರೆ? ನನಗಿರುವುದು? ಇನ್ನು ಕೆಲವೇ ದಿನಗಳು!" ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಮುಂದುವರಿದು ಅವರು "ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು ಬಯಸಿದ್ದೆ. "ಬುದ್ಧ ಮತ್ತು ಕಾರ್ಲ್‍ಮಾಕ್ರ್ಸ", "ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ" ಮತ್ತು "ಹಿಂದೂ ಧರ್ಮದ ಒಗಟುಗಳು" ಎಂಬ ಆ ನನ್ನ ಮಹೋನ್ನತ ಕೃತಿಗಳನ್ನು ಇನ್ನೂ ಪ್ರಕಟಗೊಂಡಿಲ್ಲ.
ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ. ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದು ಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ" ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಬಾಬಾಸಾಹೇಬರು ನೋವು ತೋಡಿಕೊಳ್ಳುತ್ತಾರೆ.
ನಿಜ, ನಂತರದ ಒಂದೆರಡು ದಶಕದ ನಂತರ ಅವರ ಕೃತಿಗಳು ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಆದರೆ ಅಂಬೇಡ್ಕರರು ಬದುಕಿದ್ದಾಗಲೇ ಅವು ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ "ಅಪ್ರತಿಮ ಲೇಖಕನಿಗೆ" ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು.
ಆದರೆ? ಮುಂದುವರಿದು ತಮ್ಮ ಚಳುವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು "ನನ್ನ ನಂತರ, ನನ್ನ ಜೀವತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯೆದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧÀರ್ಭದಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ!
ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ.
ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ.
ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!" ಎಂದು ಅಂಬೇಡ್ಕರರು ನಿಟ್ಟುಸಿರು ಬಿಡುತ್ತಾರೆ. ಹೌದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಹಿಂದೂ ಕಾನೂನು ಸಂಹಿತೆಗೆ ಸಂಬಂದಿಸಿದಂತೆ ಅಂದಿನ ಪ್ರದಾನಿ ನೆಹರುರವರ ನಿಲುವಿನ ಬಗ್ಗೆ ಅಂಬೇಡ್ಕರರಿಗೆ ಅಸಮಾಧಾನವಿತ್ತು. ಹಾಗೆಯೇ ತಮ್ಮ ದೂರದೃಷ್ಟಿಯ ನಿಲುವನ್ನು ಒಪ್ಪದ ಈ ದೇಶದ ಜಾತೀಯ ಮನಸ್ಸುಗಳ ಬಗ್ಗೆಯೂ ಅಂಬೇಡ್ಕರರಿಗೆ ಅಷ್ಟೇ ಅಕ್ರೋಶವಿತ್ತು.
ಮುಂದುವರಿದು ಅವರು "ಅದೇನೇ ಇರಲಿ ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ, ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ. ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ" ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ. ಹಾಗೆ ಅಳುತ್ತಾ ಸಹಾಯಕ ನಾನಕ್ ಚಂದ್ ರತ್ತುರತ್ತ ಒಮ್ಮೆ ನೊಡುತ್ತಾರೆ.
ಸಹಜವಾಗಿ ರತ್ತುರವರು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಖಃದಲ್ಲಿ ಸಹಪಾಠಿಯಾಗಿರುತ್ತಾರೆ! ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಕೊಂಡು ರತ್ತುರವನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ "ಧೈರ್ಯ ತಂದುಕೋ ರತ್ತು. ಎದೆಗುಂದಬೇಡ. ಎಂದಾದರೊಂದುದಿನ ಈ ಜೀವನ ಕೊನೆಗೊಳ್ಳಲೇಬೇಕು!"
"ಜೀವನ.... ಕೊನೆ...." ಬಾಬಾಸಾಹೇಬರ ಈ ಮಾತುಕೇಳುತ್ತಲೆ ರತ್ತು ಅಘಾತಕ್ಕೊಳಗಾದರು. ಅವರ ಈ ಮಾತಿನ ಅರ್ಥವಾದರೂ ಏನು ಎಂದು ಗಾಭರಿಗೋಂಡರು. ಆ ಕ್ಷಣ ಏನು ಮಾಡಬೇಕೆಂದು ರತ್ತುರವರಿಗೆ ತೋಚದೆ ಇರುವಾಗ ಬಾಬಾಸಾಹೇಬರೇ ತಮ್ಮ ಕಣ್ಣ ನೀರು ವರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆ ಎತ್ತಿ ಹೀಗೆ ಹೇಳುತ್ತಾರೆ.
"ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ.
ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು.
ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು...', ‘ಹೋಗು... ಅವರಿಗೆ ಹೇಳು...', ‘ಹೋಗು... ಅವರಿಗೆ ಹೇಳು..." ಎನ್ನುತ್ತಾ ಅಂಬೇಡ್ಕರರು ‘ನಿದ್ರೆಗೆ ಹೊರಳುತ್ತಾರೆ.
ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆ – ಚಾಚಾ ನೆಹರೂ ಅವರ ಜನ್ಮದಿನ


ಜವಾಹರ್ ಲಾಲ್ ನೆಹರು
ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ‘‘ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ’’ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ನವೆಂಬರ್ 14 ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ. ಅಂದು ಭಾರತದಲ್ಲೆಲ್ಲ ‘ಮಕ್ಕಳ ದಿನ’ ಎಂದು ಸಂಭ್ರಮದಿಂದ ಪ್ರತಿವರುಷ ಆಚರಿಸುತ್ತೇವೆ. ಜವಾಹರರನ್ನು ಮಕ್ಕಳು ‘ಚಾಚಾ ನೆಹರೂ’ ಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಾರೆ. ಚಾಚಾ ಎಂದರೆ ಚಿಕ್ಕಪ್ಪ.
ನೆಹರು ಅವರ ಪೂರ್ವಜರ ಹೆಸರು ‘ನೆಹರು’ ಆಗಿದ್ದಿರಲಿಲ್ಲ. ಅವರ ಪೂರ್ವಜರು ಕಾಶ್ಮೀರದಲ್ಲಿದ್ದರು. ಅವರಿಗೆ ‘ರಾಜಕೌಲ’ ಎಂಬ ಹೆಸರಿತ್ತು. ಪಂಡಿತ ರಾಜಕೌಲರು ಸಂಸ್ಕೃತ-ಫಾರಸೀ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಕ್ರಿ.ಶ. 1716ರಲ್ಲಿ ದಿಲ್ಲಿಯ ಮೊಗಲದೊರೆ ಫರುಕ್ಸಿಯರನು ಕಾಶ್ಮೀರಕ್ಕೆ ಭೆಟ್ಟಿ ಕೊಟ್ಟಾಗ ಪಂಡಿತ ರಾಜಕೌಲರನ್ನು ದಿಲ್ಲಿಗೆ ಕರೆತಂದು ನಗರದ ನಡುವೆ ಹರಿಯುತ್ತಿದ್ದ ಕಾಲುವೆಯ ಪಕ್ಕದಲ್ಲಿ ಮನೆ ಕಟ್ಟಿಸಿಕೊಟ್ಟನು. ಕಾಲುವೆಗೆ ಹಿಂದಿ ಭಾಷೆಯಲ್ಲಿ ‘ನಹರ್’ ಎನ್ನುತ್ತಾರೆ. ಹೀಗಾಗಿ ‘ನಹರ್’ ಪಕ್ಕದ ಮನೆಯವರು ‘ನೆಹರೂ’ ಆದರು.
ಬಾಲ್ಯ–ವಿದ್ಯಾಭ್ಯಾಸ
ಮೋತೀಲಾಲರು ಕಲಿತು ದೊಡ್ಡವರಾಗಿ ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಾರ ಕೀರ್ತಿ ಮತ್ತು ಹಣ ಗಳಿಸಿದರು. ಜವಾಹರರು ಹುಟ್ಟಿದ್ದು 1889ನೇ ನವಂಬರ 14 ರಂದು. ತಾಯಿ ಸ್ವರೂಪರಾಣಿ. ವೈಭವದ ಜೀವನ ಶ್ರೀಮಂತ ತಂದೆಯ ಒಬ್ಬನೇ ಮಗನಾದ ಜವಾಹರರು ರಾಜಕುಮಾರನಂತೆ ಅತ್ಯಂತ ಸುಖದಿಂದ ಬೆಳೆದರು. ಮೋತೀಲಾಲರು ಹೊಸದಾಗಿ ಕಟ್ಟಿಸಿದ ‘ಆನಂದಭವನ’ ವೆಂಬ ಹೆಸರಿನ ಮನೆಯು ಅರಮನೆಯಂತೆಯೇ ಇತ್ತು.
ಮೋತೀಲಾಲರು ಸಿಟ್ಟಿನ ಸ್ವಭಾವದವರು. ಜವಾಹರರಿಗೆ ಅವರ ಬಗ್ಗೆ ಹೆದರಿಕೆಯಿತ್ತು. ಒಮ್ಮೆ ಜವಾಹರರು ಚೆನ್ನಾಗಿ ಪೆಟ್ಟು ತಿಂದರು. ಆದದ್ದು ಇಷ್ಟೇ. ಮೋತೀಲಾಲರ ಕೋಣೆಯಲ್ಲಿ ಮೇಜಿನ ಮೇಲೆ ಎರಡು ಪೆನ್ನುಗಳಿದ್ದವು. ಅವನ್ನು ನೋಡಿದಾಗ ಬಾಲಕ ಜವಾಹರರು ‘‘ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ, ಒಂದನ್ನು ನಾನು ಇಟ್ಟುಕೊಂಡರೆ ತಪ್ಪೇನು?’’ ಎಂದು ಆಲೋಚಿಸಿ ಒಂದನ್ನು ತೆಗೆದುಕೊಂಡರು. ಆ ಬಳಿಕ ತಂದೆ ಪೆನ್ನು ಕಾಣದೆ ಎಲ್ಲರನ್ನು ಕೇಳಿದರು. ಮಗನನ್ನು ಕೇಳಿದಾಗ ತಾನು ತೆಗೆದುಕೊಂಡಿಲ್ಲವೆಂದ. ಆದರೆ ಹುಡುಕಿದಾಗ ಮಗನ ಬಳಿ ಸಿಕ್ಕಿಬಿಟ್ಟಿತು. ಮಗನಿಗೆ ಚೆನ್ನಾಗಿ ಏಟುಬಿದ್ದವು!
ಹೀಗೆ ಸಿಟ್ಟಿನ ಸ್ವಭಾವವಿದ್ದರೂ ತಂದೆಗೆ ಮಗನ ಮೇಲೆ ಬಹಳ ಪ್ರೇಮವಿತ್ತು. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂದು ಮನೆಯಲ್ಲಿಯೇ ಉತ್ತಮ ಶಿಕ್ಷಕರನ್ನಿಟ್ಟರು. ಆಗಿನ ಕಾಲದ ವಿದ್ಯಾವಂತರಂತೆ ಮೋತೀಲಾಲರಿಗೂ ಇಂಗ್ಲಿಷ್ ಭಾಷೆಯ ಬಗ್ಗೆ ಬಹಳ ಮೋಹವಿತ್ತು. ಅದಕ್ಕಾಗಿ ಮಗನಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲು ಫರ್ಡಿನೆಂಡ್ ಬ್ರುಕ್ಸ್ ಎಂಬುವನನ್ನು ನೇಮಿಸಿದ್ದರು. ಆತನು ಜವಾಹರರಲ್ಲಿ ಒಳ್ಳೊಳ್ಳೆಯ ಪುಸ್ತಕ ಓದುವ ರುಚಿ ಹುಟ್ಟಿಸಿದ. ಈ ರುಚಿಯು ಜವಾಹರರಿಗೆ ವಿದ್ಯಾರ್ಥಿಯಾಗಿದ್ದಾಗ ಮತ್ತು ಮುಂದೆಯೂ ಬಹಳ ಸಹಾಯಕವಾಯಿತು. ಚಿಕ್ಕಂದಿನಲ್ಲಿ ಜವಾಹರರೊಡನೆ ಆಟವಾಡಲು ‘ಆನಂದಭವನ’ ದಲ್ಲಿ ಸಣ್ಣ ಹುಡುಗರು ಇರಲಿಲ್ಲ. ಅವರ ತಂಗಿ ಸ್ವರೂಪಕುಮಾರಿ-ಮುಂದೆ ಶ್ರೀಮತಿ ವಿಜಯಲಕ್ಷಿ ಪಂಡಿತ್ ಎಂದು ಹೆಸರಾದರು – ಹುಟ್ಟದ್ದು 1900ರ ಆಗಸ್ಟ್ 18 ರಂದು. ಕಿರಿಯ ತಂಗಿ ಕೃಷ್ಣಾ-ಮುಂದೆ ಶ್ರೀಮತಿ ಕಷ್ಣಾ ಹಥೀಸಿಂಗ-ಹುಟ್ಟಿದ್ದು ೧೯೦೭ ರ ನವಂಬರ್ 2ರಂದು. ಆದರೆ ಜವಾಹರರಿಗೆ ಅವರ ಕಕ್ಕಿ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ, 1857ರ ಸ್ವಾತಂತ್ರ ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು. ಇದೆಲ್ಲ ಕೇಳಿದಾಗ ಬಾಲಕ ಜವಾಹರರಿಗೆ ಬ್ರಿಟಿಷರ ಮೇಲೆ ಸಿಟ್ಟು ಬರುತ್ತಿತ್ತು.
ಇಂಗ್ಲೆಂಡಿನಲ್ಲಿ
ಜವಾಹರರಿಗೆ 15 ವರುಷ ದಾಟಿದಾಗ ಮೋತಿಲಾಲರು ಅವರನ್ನು ಇಂಗ್ಲೆಂಡಿನಲ್ಲಿ ‘ಹ್ಯಾರೋ’ ಎಂಬ ಸಾರ್ವಜನಿಕ ಶಾಲೆಗೆ ಸೇರಿಸಿದರು. ಅಲ್ಲಿ ಜವಾಹರರು ಬೀಜಗಣಿತ, ರೇಖಾಗಣಿತ, ಇತಿಹಾಸ, ಸಾಹಿತ್ಯ ಮುಂತಾದ ಎಲ್ಲ ವಿಷಯಗಳಲ್ಲಿ ಉತ್ತಮ ವಿದ್ಯಾರ್ಥಿಯೆಂದು ಹೆಸರು ಪಡೆದು ಬಹುಮಾನ ಗಳಿಸಿದರು. ಜವಾಹರರು ಇಂಗ್ಲೆಂಡಿಗೆ ಹೋದರೂ ಭಾರತದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ತಿಳಿಯಲು ಉತ್ಸುಕರಾಗಿದ್ದರು ಮತ್ತು ಒಳ್ಳೊಳ್ಳೆಯ ಭಾರತೀಯ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಿದ್ದರು.
1912 ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಮರಳಿದ ಬಳಿಕ ಜವಾಹರರು ತಂದೆಯವರೊಡನೆ ವಕೀಲಿವೃತ್ತಿ ಪ್ರಾರಂಭಿಸಿದರು. ಅವರು ತೆಗೆದುಕೊಂಡ ಮೊದಲನೆಯ ಪ್ರಕರಣದಿಂದ ಅವರಿಗೆ ೫೦೦ ರೂಪಾಯಿ ಶುಲ್ಕ ಬಂದಿತು. 1916 ರ ಫೆಬ್ರವರಿ 8 ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು. ಜವಾಹರರಿಗೆ ಒಬ್ಬಳೇ ಮಗಳು, ಇಂದಿರಾ ಪ್ರಿಯದರ್ಶಿನಿ.
ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು. ಅವರು ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು.
ಭಾರತದ ಪ್ರಧಾನಿ
ಸ್ವತಂತ್ರ ಭಾರತಕ್ಕೆ ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಅವರು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ಈ ಕಾಲದಲ್ಲಿ ಅವರು ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಹೆಣಗಾಡಿದರು.
 ‘ಭಾರತ ರತ್ನ’
1955ರಲ್ಲಿ ದೇಶದ ಜನತೆಯ ಪರವಾಗಿ ರಾಷ್ಟ್ರಪತಿಯವರು ಜವಾಹರರಿಗೆ ‘ಭಾರತರತ್ನ’ ಪದವಿ ನೀಡಿ ಗೌರವಿಸಿದರು.
ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ ‘‘ಆರಾಮ್ ಹರಾಮ್ ಹೈ.’’ ನಾವು ಎಂದಿಗೂ ಸೋಮಾರಿಗಳಾಗಬಾರದೆಂಬುದೇ ಆ ಮಂತ್ರದ ಅರ್ಥ.
ಸಾಹಿತಿ ನೆಹರು
ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು. ಅವರಿಂದ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಮೂರು ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ. ಸಹಜವಾಗಿ ಅನುಕಂಪ ತೋರುವ ಹೃದಯ, ಯಾವ ಸಮಸ್ಯೆಯನ್ನೂ ವಿಶಾಲವಾದ ದೃಷ್ಟಿಯಿಂದ ಕಾಣುವ ವಿವೇಕ ಅವರ ಎಲ್ಲ ಪುಸ್ತಕಗಳಲ್ಲಿ ಕಾಣುತ್ತವೆ.
ದೀಪ ಆರಿತು
1964ರ ಮೇ 27
ರಂದು ನೆಹರು ನಿಧನರಾದರು. ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು.
ಅಪೂರ್ವ ದೇಶಭಕ್ತರು ಅಪೂರ್ವ ವ್ಯಕ್ತಿ
ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಹೊಸ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ನೆಹರೂ ಅವರು ಸಾರಿದರು. ಒಟ್ಟಿನಲ್ಲಿ ಅವರು ಅಪೂರ್ವ ದೇಶಭಕ್ತರು. ಅಪೂರ್ವ ಸ್ನೇಹಪರರಾದ, ಹೃದಯವಂತಿಕೆಯ ವ್ಯಕ್ತಿ.


2010-06-01
ವಿಶ್ವದಾದ್ಯಂತ ಮಕ್ಕಳ ದಿನಾಚರಣೆಯನ್ನು ನವೆಂಬರ್ ೨೦ರಂದು ಆಚರಿಸುತ್ತಾರೆ.[೧] ಭಾರತದಲ್ಲಿ ಜವಾಹರ್‌ಲಾಲ್ ನೆಹರುರವರ ಹುಟ್ಟುಹಬ್ಬದಂದು (ನವೆಂಬರ್ ೧೪ರಂದು) ಆಚರಿಸಲಾಗುತ್ತದೆ.
ಪರಿವಿಡಿ
೧ ಮಕ್ಕಳ ದಿನಾಚರಣೆ’ಯ ಹುಟ್ಟು
೨ ಹಿನ್ನೆಲೆ
೩ ಆಚರಣೆ
೪ ಉಲ್ಲೇಖಗಳು
೫ ಬಾಹ್ಯ ಸಂಪರ್ಕ
ಮಕ್ಕಳ ದಿನಾಚರಣೆ’ಯ ಹುಟ್ಟು
ವಿ.ಎನ್. ಕುಲಕರ್ಣಿ ಎನ್ನುವವರು 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡಿನ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಬಗ್ಗೆ ಮಿಡಿದಿತ್ತು.
ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದ ಚಾಚಾ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು. ಪಂಡಿತ್ ನೆಹರೂ ಇದಕ್ಕೆ ಒಪ್ಪಿಯಾರೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು.
ಆದರೆ ಚಾಚಾ ನೆಹರೂ ಅವರಿಗೆ ಮಕ್ಕಳ ಮೇಲಿನ ಮಮತೆ ಎಷ್ಟಿತ್ತೆಂದರೆ ಅವರು ಮಕ್ಕಳಿಗಾಗಿ ಏನು ಮಾಡಲೂ ಸಿದ್ಧವಿದ್ದರು. ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು. ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು.
ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20ರಂದು ‘ಯುನಿವರ್ಸಲ್ ಚಿಲ್ಡ್ರನ್ಸ್ ಡೇ’ ಎಂದಾದರೆ, ಜೂನ್ 1ರಂದು ‘ಇಂಟರ್‌ ನ್ಯಾಷನಲ್‌ ಚಿಲ್ಡ್ರನ್ಸ್ ಡೇ’ ಆಚರಣೆಯಲ್ಲಿದೆ. ಇಂದು ಬಹಳಷ್ಟು ದೇಶಗಳು, ತಮ್ಮ ಮಕ್ಕಳಪ್ರೇಮಿ ರಾಷ್ಟ್ರನಾಯಕರೊಬ್ಬರ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ ರೂಪದಲ್ಲಿ ಆಚರಿಸುತ್ತಿವೆ.
ಹಿನ್ನೆಲೆ
ಜವಾಹರ್ಲಾಲ್ ನೆಹರುವರಿಗೆ ಮಕ್ಕಳೆಂದರೆ ಬಹಳ ಇಷ್ಟ.ಅವರು ಅನಾಥ ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರಂತೆ. ಇಂದಿನ ಮಕ್ಕಳೇ ಮುಂದಿನ ಜನಾಂಗ.
ಆಚರಣೆ
ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಕೆಲವು ಘಂಟೆಗಳ ಬಳಿಕ ರಜೆ ಘೋಷಿಸಲಾಗುತ್ತದೆ. ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚಿತ್ರಕಲೆ ಸ್ಪರ್ಧೆಗಳು ಪ್ರಮುಖ.
ಕ್ರಾಂತಿವೀರನಿಗೊಂದು ಸಲಾಂ.
ಕ್ರಾಂತಿವೀರನಿಗೊಂದು ಸಲಾಂ.
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟ ತಿರುವಿದಾಗ ಕಿತ್ತೂರಿನ ಹೆಸರು ಪ್ರಸ್ತಾಪವಾದ ಕೂಡಲೇ ನೆನಪಾಗುವವರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ರಾಣಿ ಚನ್ನಮ್ಮನ ಬಲಗೈ ಬಂಟನಂತಿದ್ದ ರಾಯಣ್ಣನನ್ನು ಬ್ರಿಟಿಷರು ಮೋಸದಿಂದ ಬಂಧಿಸಿ, ನಂದಗಡದಲ್ಲಿ ಗಲ್ಲಿಗೇರಿಸಿ ಇಂದಿಗೆ 185 ವರ್ಷ. ತನ್ನಿಮಿತ್ತ ಈ ಲೇಖನ.
ಇಮಾಮಹುಸೇನ್ ಗೂಡುನವರ
ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ರಾಯಣ್ಣ ಗಲ್ಲಿಗೇರಿದ ಅವಿಸ್ಮರಣೀಯ ದಿನ ಇಂದು. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡಿ ಗಲ್ಲಿಗೇರಿದವರ ಚರಿತ್ರೆಯೇ ಇದೆ. ಕೆಲವರ ಕುತಂತ್ರಕ್ಕೆ ಒಳಗಾಗಿ ಬ್ರಿಟಿಷರಿಗೆ ಸೆರೆ ಸಿಕ್ಕು ಗಲ್ಲಿಗೆ ಕೊರಳೊಡ್ಡಿದವರ ಪೈಕಿ ಸಂಗೊಳ್ಳಿ ರಾಯಣ್ಣನೂ ಒಬ್ಬ, ಅಪ್ರತಿಮ ದೇಶಭಕ್ತ. ವಿಶೇಷ ಅಂದರೆ ರಾಯಣ್ಣನ ಜನ್ಮದಿನಾಂಕ(ಆ.15)ದಂದೇ ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲ್ಪಡುತ್ತಿದೆ. ಅದೇ ರೀತಿ, ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ದಿನ(ಜ.26)ವೇ ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ.
image
ಅದು ಕ್ರಿ.ಶ 1800ರ ಮಾತು. ದೇಶದ ತುಂಬೆಲ್ಲ ಸಣ್ಣ ಸಣ್ಣ ಸಂಸ್ಥಾನಗಳು- ತುಂಡರಸರದ್ದೇ ಕಾರುಬಾರು. ಅವುಗಳಿಗೆ ಸ್ವಾತಂತ್ರ್ಯ ಅಗತ್ಯ ಇತ್ತು. ದತ್ತು ಪುತ್ರ ಸೌಲಭ್ಯ ಅನುಭವಿಸುವುದಕ್ಕೆ ಹಕ್ಕು ಬೇಕಿತ್ತು. ಈ ದಿಸೆಯಲ್ಲಿ ಇಡೀ ದೇಶಾದ್ಯಂತ ಬ್ರಿಟಿಷರ ವಿರುದ್ಧ ಅಲ್ಲಲ್ಲಿ ದಂಗೆ ಉಂಟಾದವು. ಕೆಲ ಅರಸರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಬ್ರಿಟಿಷರ ಪರ ನಿಂತರೆ, ಅನೇಕರು ಬ್ರಿಟಿಷರ ವಿರುದ್ಧ ತೊಡೆ ತಟ್ಟಿದರು. ಈ ರೀತಿ ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಸಂಸ್ಥಾನದ ಪೈಕಿ ಮುಂಚೂಣಿಯಲ್ಲಿದ್ದುದು ಕಿತ್ತೂರು. ಇಲ್ಲಿ ಪ್ರಭುತ್ವ ಮುಂದುವರಿಯಬೇಕಾದರೆ ದತ್ತು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. ಆದರೆ, ಅದಕ್ಕೆ ಬ್ರಿಟಿಷರ ವಿರೋಧ ಇತ್ತು. ಇಂತಹ ಸಂಸ್ಥಾನದ ಸೇನೆಗೆ ರಾಯಣ್ಣ ಸೇರಿದ್ದೊಂದು ಕಥೆ.
●ಹಿನ್ನೆಲೆ:
ಮಲಪ್ರಭೆಯ ಮಡಿಲಲ್ಲಿರುವ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣನ ಹುಟ್ಟೂರು. ಮೂಲ ಹೆಸರು ರಾಯಪ್ಪ. ಪೂರ್ಣ ಹೆಸರು ರಾಯಣ್ಣ ಭರಮಣ್ಣ ರೋಗಣ್ಣವರ(ಕೆಂಚವ್ವನ ಮಗ). ಈ ದಂಪತಿಗೆ ಮೂವರು ಗಂಡು ಮಕ್ಕಳು. ಕೊನೆಯ ಮಗನೇ ರಾಯಣ್ಣ. ಈತ ಹುಟ್ಟಿದ್ದು 1798ರಲ್ಲಿ. ಇವರದ್ದು ಕೃಷಿ ನಿರತ ಹಾಲುಮತಕ್ಕೆ ಸೇರಿದ ಕುಟುಂಬ. ಹುಟ್ಟೂರಲ್ಲೇ ಬೆಳೆದ ರಾಯಣ್ಣ ಗೆರಿಲ್ಲಾ ಯುದ್ಧ ಪರಿಣತಿ ಹೊಂದಿದ್ದ.
ಅದು 1820ರ ಆಸುಪಾಸಿನ ಅವಧಿ. ರಾಯಣ್ಣನಿಗೆ 24 ವರ್ಷ ವಯಸ್ಸು. ಬಾಳಪ್ಪ ಸಾಧುನವರ, ಬಿಚ್ಚುಗತ್ತಿ ಚನ್ನಬಸಪ್ಪ ಈ ರಾಯಣ್ಣನ ಗೆಳೆಯರು. ಎಲ್ಲರೂ ಸಾಹಸಿಗರು. ರಾಯಣ್ಣನಂತೂ ಗುರಿ ಹೊಡೆಯುವುದರಲ್ಲಿ ನಿಪುಣ ಅಷ್ಟೇ ಅಲ್ಲ ಧೈರ್ಯಶಾಲಿಯೂ ಆಗಿದ್ದ. ಅದೊಂದು ದಿನ ಕಿತ್ತೂರು ಅರಮನೆಯಿಂದ ಈ ಮೂವರಿಗೆ ಸಂದೇಶವೊಂದು ರವಾನೆಯಾಯಿತು. ಅರಮನೆಯ ಅಂಗರಕ್ಷರಾಗಲು ಬನ್ನಿ ಎಂಬುದು ಅದರ ಒಕ್ಕಣೆ. ಹಾಗೆ ಅರಮನೆಗೆ ಕಾಲಿಟ್ಟ ರಾಯಣ್ಣ, ಬಲುಬೇಗ ರಾಣಿ ಚನ್ನಮ್ಮರ ಬಲಗೈ ಬಂಟನಾದ. ಬಲಿಷ್ಠವಾದೊಂದು ಸೈನ್ಯವನ್ನೂ ಕಟ್ಟಿದ.
ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಸಮರ ಸಾರಿದ. ಸಾಮ್ರಾಜ್ಯಷಾಹಿ ಬ್ರಿಟಿಷರು ಬಡವರಿಂದ ದೋಚಿದ್ದ ಅಪಾರ ಸಂಪತ್ತನ್ನು ಕಸಿದುಕೊಂಡಿದ್ದು ಮಾತ್ರವಲ್ಲದೇ, ಸರ್ಕಾರಕ್ಕೆ ಸೇರಿದ್ದ ಹತ್ತು ಹಲವು ಕಡತಗಳು, ಮಹತ್ವದ ದಾಖಲೆಗಳನ್ನು ಸುಟ್ಟು ಕರಕಲು ಮಾಡಿದ. ಬಡಜನರನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷ್ ಸರ್ಕಾರಕ್ಕೆ ಅಪಾರ ಹಾನಿ ಮಾಡುವ ಜತೆಗೆ, ಸಿಂಹಸ್ಪಪ್ನವಾಗಿ ಕಾಡಿದ್ದ. ಅಕ್ಷರಶಃ ಕ್ರಾಂತಿಕಾರಿ ಎನಿಸಿಕೊಂಡಿದ್ದ.
1824ರಲ್ಲಿ ನಡೆದ ಯುದ್ಧದಲ್ಲಿ ಬ್ರಿಟಿಷರಿಗೆ ಸೋಲುಣಿಸಿದ. ಈ ಸಂಗ್ರಾಮದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಕೊಲ್ಲಲ್ಪಟ್ಟ. ಈ ಯುದ್ಧ ಪರಿಣಾಮ ಆರಂಭದಲ್ಲಿ ಕಿತ್ತೂರಿನಲ್ಲಿ ಸಂಭ್ರಮ ನೆಲೆಸಿತ್ತಾದರೂ, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಕ್ಕೆ ಸಂಬಂಧಿಸಿದ ಹಲವು ಮುನ್ಸೂಚನೆಗಳು ಸಿಕ್ಕಿದ್ದವು. ಈ ಸೋಲಿನಿಂದ ಮುಖಭಂಗಕ್ಕೊಳಗಾದ ಬ್ರಿಟಿಷರಲ್ಲಿ ಕಿತ್ತೂರಿನ ಬಗೆಗೆ ಅಸಮಾಧಾನ, ಆಕ್ರೋಶ ಹೆಚ್ಚಾಯಿತು. ಕಿತ್ತೂರಿನ ಸೇನೆಯನ್ನು ನೇರ ಸೋಲಿಸಲಾಗದು ಎಂಬುದನ್ನು ಮನಗಂಡ ಬ್ರಿಟಿಷರು, ಹತ್ತಾರು ಆಸೆ-ಆಮಿಷಗಳನ್ನು ತೋರಿಸಿ, ಕಿತ್ತೂರಿನ ಅರಮನೆಯ ಪ್ರಮುಖರನ್ನು ಬುಟ್ಟಿಗೆ ಬೀಳಿಸಿಕೊಂಡರು. ಮೋಸದಿಂದ ಚನ್ನಮ್ಮನನ್ನು ಬೆನ್ನಟ್ಟಿ ಬಂಧಿಸಿದರು. ಆದರೆ, ಆ ಸಂದರ್ಭದಲ್ಲಿ ರಾಯಣ್ಣ ಬ್ರಿಟಿಷರಿಂದ ತಪ್ಪಿಸಿಕೊಂಡಿದ್ದ.
ಬ್ರಿಟಿಷರ ವಿರುದ್ಧದ ಹೋರಾಟವನ್ನು ರಾಯಣ್ಣ ಮುಂದುವರಿಸಿದ. ಸಂಗ್ರಾಮದ ನೊಗ ಹೊತ್ತ ಚನ್ನಮ್ಮನ ಬಲಗೈ ಬಂಟನನ್ನು ಬಲೆಗೆ ಬೀಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಅವಶ್ಯವಿರುವ ಎಲ್ಲ ತಂತ್ರಗಳನ್ನು ರೂಪಿಸಿತ್ತು. ಆದರೆ, ಆರಂಭಿಕ ಹಂತದ ಯಾವ ಪ್ರಯತ್ನವೂ ಫಲಪ್ರದವಾಗಲಿಲ್ಲ. ಆಗ ಬ್ರಿಟಿಷರ ನೆರವಿಗೆ ಬಂದದ್ದು ರಾಯಣ್ಣನ ಮಾವ. ಸ್ವತಃ ಮಾವನಿಂದಲೇ ಮೋಸಕ್ಕೊಳಗಾದ ರಾಯಣ್ಣ ಬ್ರಿಟಿಷರ ಬಲೆಗೆ ಬಿದ್ದ. ಗಲ್ಲಿಗೇರಿಸುವ ಮೊದಲು, ‘ನಿನ್ನ ಕೊನೆ ಆಸೆ ಏನು’ ಎಂದು ಬ್ರಿಟಿಷರು ರಾಯಣ್ಣನನ್ನು ಕೇಳಿದ್ದರು. ಅದಕ್ಕೆ ರಾಯಣ್ಣನು, ‘ನಮ್ಮ ದೇಶದಲ್ಲಿ ಮನೆ, ಮನೆಗೊಬ್ಬರಂತೆ ಸಾವಿರಾರು ದೇಶಭಕ್ತರು ಹುಟ್ಟಿಬರುತ್ತಾರೆ. ನಿಮ್ಮನ್ನು ಈ ದೇಶದಿಂದ ಒದ್ದೋಡಿಸುತ್ತಾರೆ ನೋಡಿ’ ಎಂದು ಹೇಳಿ ಎಚ್ಚರಿಸಿದ್ದು ಈಗ ಇತಿಹಾಸ. 1831ರ ಜ.26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಆತನನ್ನು ಗಲ್ಲಿಗೇರಿಸಲಾಯಿತು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ.
●ನಂದಗಡದ ಪ್ರಸ್ತುತ ಸ್ಥಿತಿಗತಿ:
ನಂದಗಡದಲ್ಲಿ ಆಲದ ಮರಕ್ಕೆ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಇಂದು ಐತಿಹಾಸಿಕ ಧಾರ್ವಿುಕ ಸ್ಥಳವಾಗಿ ಮಾರ್ಪಟ್ಟಿದ್ದು, ಜನರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದರೆ, ಇಲ್ಲಿ ಅಂದುಕೊಂಡಷ್ಟು ಸೌಲಭ್ಯಗಳಿಲ್ಲ. ಅದರಂತೆ ಹುಟ್ಟೂರು ಸಂಗೊಳ್ಳಿ ಕೂಡ ನಿರ್ಲಕ್ಷ್ಯ್ಕೆ ಒಳಗಾಗಿದ್ದು, ಮೂಲಸೌಲಭ್ಯಗಳಿಲ್ಲದೇ ನರಳುತ್ತಿದೆ. ಇಲ್ಲಿ ಮೂಲಸೌಕರ್ಯ ಒದಗಿ ಸಿ, ಇದನ್ನೊಂದು ಪ್ರವಾಸಿ ಸ್ಥಳವನ್ನಾಗಿಸುವ ಕಡೆಗೆ ಸರ್ಕಾರ ಗಮನಹರಿಸಬೇಕಿದೆ.
●ಅಧ್ಯಯನಕ್ಕೆ ಅವಕಾಶ ಸಿಗಲಿ:
ಯಾವುದೇ ಸ್ವಾರ್ಥವಿಲ್ಲದೇ ದೇಶಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ದೇಶಭಕ್ತ ರಾಯಣ್ಣ. ಬಡತನದಲ್ಲಿದ್ದರೂ ದೂರದೃಷ್ಟಿ, ಸಂಘಟನಾ ಚಾತುರ್ಯ, ನಾಡನಿಷ್ಠೆಯ ಮೂಲಕ ಬ್ರಿಟಿಷರ ಹುಟ್ಟಡಗಿಸಿದ್ದು ಮಹಾನ್ ಸಾಧನೆಯೇ ಸರಿ. ಅವರ ಇತಿಹಾಸವನ್ನು ಇಂದಿನ ಯುವಪೀಳಿಗೆ ಅಧ್ಯಯನ ಮಾಡುವುದು ಅವಶ್ಯ ಮತ್ತು ಅನಿವಾರ್ಯಎಂಬುದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ, ಸಾಹಿತಿ ರಂಗರಾಜ ವನದುರ್ಗ ಅವರ ಅಭಿಮತ.
ಬ್ರಿಟಿಷರ ಮೋಸದ ಬಲೆಗೆ ಸಿಲುಕಿ ಗಲ್ಲಿಗೇರಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೊಂದು ಗೌರವ ಸಲ್ಲಿಸುವುದಕ್ಕೆ ಈ ದಿನ ನಿಮಿತ್ತವಾಗಲಿ. ರಾಷ್ಟ್ರಹಿತ ಬಯಸಿದ ಅವರ ಜೀವನಾದರ್ಶ ಇಂದಿಗೂ ಪ್ರಸ್ತುತ.
●ಸಂಗೊಳ್ಳಿ ರಾಯಣ್ಣ ಒಬ್ಬ ಮಹಾನ್ ವ್ಯಕ್ತಿ. ಅವರ ಜನ್ಮದಿನವಾದ ಆ. 15ರಂದೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರು ಮರಣ ಹೊಂದಿದ ಜ. 26ರಂದೇ ದೇಶದ ಗಣರಾಜ್ಯೋತ್ಸವ. ಇವು ವಿಶೇಷ ದಿನಗಳಾಗಿವೆ. ಯಾರಿಗೆ ಅಂಥ ಪುಣ್ಯ ಸಿಗುತ್ತದೆ ಹೇಳಿ? ರಾಯಣ್ಣನಂಥ ವೀರ ಯೋಧನ ಜೀವನ ಚರಿತ್ರೆ ಆಧರಿಸಿದ ಸಿನಿಮಾದಲ್ಲಿ ನಟಿಸಿದ್ದೇನೆ ಎಂಬುದೇ ನನಗೆ ಹೆಮ್ಮೆ
ಸುಭಾಷ್ ಚಂದ್ರ ಬೋಸ್ -ಜನ್ಮ ದಿನಾಚರಣೆ.


ಸುಭಾಷ್ ಚಂದ್ರ ಬೋಸ್ -ಜನ್ಮ ದಿನಾಚರಣೆ.
ಜನನ ಜನವರಿ ೨೩,೧೮೯೭,ಕಟಕ್, ಒರಿಸ್ಸಾ
ಮರಣ ಆಗಸ್ಟ್ ೧೮, ೧೯೪೫
ಟೈಪೈ, ಟೈವಾನ್ (ಸಂಭಾವಿತ)
ಮರಣದ ಕಾರಣ ವಿಮಾನ ಅಪಘಾತ (ಸಂಭಾವಿತ)
ಇದಕ್ಕೆ ಪ್ರಸಿದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ರಾಷ್ಟ್ರೀಯ ಸೇನೆ
ಶೀರ್ಷಿಕೆ ನೇತಾಜಿ, ಆಜಾದ್ ಹಿಂದ್ ಮುಖ್ಯಸ್ಥ
ರಾಜಕೀಯ ಪಕ್ಷ ಫಾರ್ವರ್ಡ್ ಬ್ಲಾಕ್
ಧರ್ಮ ಹಿಂದು
ಸಂಗಾತಿ(ಗಳು) ಎಮಿಲಿ ಶೆಂಕ್ಲ್
ಮಕ್ಕಳು ಅನಿತ ಬೋಸ್ ಫಾಫ್.
ಸುಭಾಷ್ ಚಂದ್ರ ಬೋಸ್ (সুভাষ চন্দ্র বসু; ಜನನ: ಜನವರಿ ೨೩, ೧೮೯೭ — ಮರಣ (ಸಂಭಾವಿತ): ಆಗಸ್ಟ್ ೧೮, ೧೯೪೫) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.
●ಜನನ, ಜೀವನ
ಸುಭಾಷ್‌ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು, ಒರಿಸ್ಸಾದ ಕಟಕ್‌ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ ೯ ಮಕ್ಕಳಲ್ಲಿ ಸುಭಾಷ್ ೬ನೇ ಯವರು.ಕಟಕ್‌ನಲ್ಲಿ ರ‍್ಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ!
೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!
೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.೧೯೨೧ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ’ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
●ರಾಷ್ಟ್ರ ನಿರ್ಮಾಣದ ಜವಾಬ್ದಾರಿ.
ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.
ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.
ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ.
ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ಬೋಸ್.
●ಸ್ವರಾಜ್ಯಪಕ್ಷ ಸ್ಥಾಪನೆ
ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್‌ರು ದಾಸ್‌ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್‌ನಿಂದ ದಾಸ್‌ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್‌ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‌ರ ಬಂಧನ, ಬಿಡುಗಡೆ.
೧೯೨೭ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ.
ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.
●ರಾಜಕೀಯ ಅನುಭವ-ಒಳನೋಟ
ಕಾಂಗ್ರೆಸ್‌ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‌ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ‍್ಯಪದ್ಧತಿ ಕುರಿತ ಶ್ಲಾಘನೆ.
ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ.ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ.
’ಫಾರ್‌ವರ್ಡ್ ಬ್ಲಾಕ್’ ಸ್ಥಾಪನೆ.೧೯೪೦, ಜೂನ್ ೧೮ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ|| ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್ ಕಾಣೆಯಾಗಿದ್ದಾರೆ’ ಎಂಬ ಸುದ್ದಿ ೧೯೪೧ ಜನವರಿ ೨೬ಕ್ಕೆ!
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ. ’ಫ್ರೀ ಇಂಡಿಯಾ ಸೆಂಟರ್’ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಗೆ.
●ಆಜಾದ್ ಹಿಂದ್ ಸೇನೆ.
ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ).
ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‌ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್‌ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ.
ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು”
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಅನುಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ.

ಅಂಬಿಗರ ಚೌಡಯ್ಯ

image
ಅಂಬಿಗರ ಚೌಡಯ್ಯ🚣:
ಅಂಬಿಗರ ಚೌಡಯ್ಯನ ಕಾಲ ಕ್ರಿ. ಶ. ಸುಮಾರು 1160. ಈತನ ಜನ್ಮ ಸ್ಥಳ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಾದಾನಪುರ. ಇವರು ಸುಮಾರು 330 ವಚನಗಳನ್ನು ರಚಿಸಿದ್ದಾರೆ. ಇವರು ತಮ್ಮ ವಚನಗಳಲ್ಲಿ ಯಾವ ಇಷ್ಟದೈವಕ್ಕೆ ಋಣಿಯಾಗದೆ ತನ್ನ ಹೆಸರನ್ನೇ ವಚನಗಳ ಅಂಕಿತವಾಗಿಯೂ ಬಳಸಿಕೊಂಡು ದಿಟ್ಟತನದ ಎದೆಗಾರಿಕೆಯನ್ನು ತೋರಿಸಿದ್ದಾರೆ. ಅಂಬಿಗರ ಚೌಡಯ್ಯ ಸಾಮಾನ್ಯ ಅಂಬಿಗನಲ್ಲ, ತಡೆಯಿಲ್ಲದ ಮಹಾನದಿಯ ಕಡೆ ಗಾಣವೆ ಹಾಯಿಸಿ ನುಡಿವಿಲ್ಲದ ನಿನೇನು ಗ್ರಾಮದಲ್ಲಿರಿಸುವನಂತೆ ಅಬ್ಬಾ ಅದೆಂಥ ಅಂಬಿಗನನ ಬಡಲಿಲ್ಲದ ಅಂಬಿಗ ಕಡೆ ಗಾಣಿಸುವ ಅಂಬಿಗ ಕಾಸಿನ ಆಸೆಯಿಲ್ಲದ ಅಂಬಿಗ ಆತ್ಮ ವಿಶ್ವಾಸದ ಅಂಬಿಗ ಆಧ್ಯಾತ್ಮ ಸಂಪದದ ಅಂಬಿಗ ಅನುಭವಿ ಅಂಬಿಗ.
ಅಂಬಿಗ ಎಂದರೆ ನೀರಿನಲ್ಲಿ ವ್ಯವಹರಿಸುವವನು, ತಾನೆ ದೋಣಿ ಮುಂತಾದವನನ್ನು ನಡೆಸುವವನು ಎಂದರ್ಥ. ಸಂಸಾರ ಸಾಗರವನ್ನು ದಾಟಿ ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದ ಚಂದಗೆಟ್ಟವರೆಲ್ಲ ಬಂದೇರಿ ದೋಣಿಯನ್ನು ಶಿವನೊಂದೆ ಠಾವಿಗೊಯ್ದಿಳುಹುವೆ ಎಂದು ಎದೆ ತಟ್ಟಿ ಹೇಳಿಕೊಂಡು ತಾನು ತನ್ನ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತರನ್ನೆಲ್ಲಾ ಶಿವ ಪಥದತ್ತ ಹಾಯಿಸಿದ ಮಹಾ ನಿಸ್ಸೀಮವಾದ ಕಾಯಕವನ್ನು ಕೈಕೊಂಡವನು ಅಂಬಿಗನ ಚೌಡಯ್ಯ
ಅಂಬಿಗರ ಚೌಡಯ್ಯನ ವಚನಗಳು ವಿಹಿತರಿಗೆ ಕಾದ
image
ನೇಸದಂತಿದ್ದರೆ ಹಿತರಿಗೆ ಬೆಸುಗೆಯ ನೇಸದಂತಿದೆ. ಸಮಾಜವನ್ನು ಪ್ರತ್ಯಕ್ಷ ದರ್ಶಿಯಾಗಿ ಕಂಡದನ್ನು ಕಂಡ ಹಾಗೆ ಕೇಳಿ ಕೆಂಡದಂತಹ ಕೋಪ ಬರಿಸುವ ಚೌಡಯ್ಯ ಕೆಂಡಗಣ್ಣ ಮೂರ್ತಿಯಾಗಿದ್ದಾನೆ.
ಮುಚ್ಚು ಮರೆಯಿಲ್ಲದೆ. ತೆರೆದ ಮನಸ್ಸಿನ ಇತಿಮಾತಿನ ತಿರುಳು ಅವನ ವಚನಗಳಲ್ಲಿ ಉಂಟು ಡಂಬಾಚಾರ ಮೂಢ ನಂಬಿಕೆ ವಿಡಂಬನೆ ಆಡಂಬರಗಳಿಗೆ ಅನುಕೂಲಕ್ಕಾಗಿ ಸಾತ್ವಿಕದ ಕೆಚ್ಚನ್ನು ಕೆರಳಿಸಿ ಕೊಂಡಿದ್ದಾನೆ. ನಿಜದ ನಗಾರಿ ನಿರ್ಭಯತೆಯನ್ನು ಬೀರಿದವನು ಅಂಬಿಗರ ಚೌಡಯ್ಯ ಎಂದು ಶರಣರು ಹೋಗಳಿದ್ದಾರೆ.
ಅಂಬಿಗರ ಚೌಡಯ್ಯ ವಚನದಲ್ಲಿ ಶಿವನ ಚಿಂತೆಯಿಂದಿರುವವರೊಬ್ಬರನು ಕಾಣೆ ಎಂಬ ವಚನ ಚಿರ ಸತ್ಯವನ್ನು ಪ್ರತಿ ಬಿಂಬಿಸುತ್ತದೆ.
ಬಡತನಕ್ಕೆ ಉಂಬುವ ಚೀಂತೆ ಉಣಲಾದರೆ ಉಡುವ ಚಿಂತೆ
ಉಡಲಾದರೆ ಇಡುವ ಚಿಂತೆ ಇಡಲಾದರೆ ಹೆಂಡಿರ ಚಿಂತೆ
ಹೆಂಡಿರಾದರೆ ಮಕ್ಕಳ ಚಿಂತೆ ಮಕ್ಕಳಾದರೆ ಬದುಕಿನ ಚಿಂತೆ
ಬದುಕಾದರೆ ಕೇಡಿನ ಚಿಂತೆ ಕೇಡಾದರೆ ಮರಣದ ಚಿಂತೆ
ಇಂತೀ ಹಲವು ಚಂತೆಯಲ್ಲಿ ಇಸ್ರವರನ್ನು ಕಂಡೆನು
ಶಿವನ ಚಂತೆಯಲ್ಲಿದ್ದವರೊಬ್ಬರನೂ ಕಾಣೆ ವೇದಾಂತ ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು
ಈ ವಚನದಿಂದ ಯಾವ ಮನೆಯೂ ಚಿಂತೆಯಿಂದ ಬಿಡುಗಡೆ ಆಗಿಲ್ಲವೆಂಬ ಮಾತು ಮನದಟ್ಟಾಗುತ್ತದೆ. ನಮ್ಮ ಮನೆಯಲ್ಲಿ ಅಂತಹುದೇನು ನಡೆದಿಲ್ಲ ಎಂದು ಬೋರ್ಡು ಹಾಕುವ ಸ್ಥಿತಿಯಲ್ಲಿ ಯಾವ ಮನೆಯೂ ಇಲ್ಲ.
ಅಂಬಿಗರ ಚೌಡಯ್ಯನ ವಚನಗಳು ಚಾಟಿಯೇಟನ್ನು ಕೊಟ್ಟು ಹೊಡೆದೆಬ್ಬಿಸುವ ಚುಚ್ಚು ಮಾತಿನ ಬಿಚ್ಚು ಹೃದಯದ ಅನುಭವದ ಕೆಚ್ಚಿನ ಅಮರವಾಣಿಯ ಸಚ್ಚಿಯಂತಿದೆ ನುಡಿದಂತೆ ನಡೆದು ನಡೆದಂತೆ ನುಡಿದ ಧೀರ ಶರಣ. ಸಮಾಜ ವಿಮರ್ಶೆ, ವ್ಯಕ್ತಿ ಟೀಕೆ, ಮೂಡ ನಂಬಿಕೆಯನ್ನೇ ತೆಗಳದೆ ಅವುಗಳನ್ನು ಬೆರಳು ಮಾಡಿ ತೋರಿಸಿ ತಾನು ಪರಿಶುದ್ಧನಾಗಿ ಸಿದ್ಧ ಶುದ್ಧ ಬಾಳನ್ನು ಬಾಳಿ ಬೆಳಗಿಸಿ ಕೊಂಡವನು.
ಇವರ ವಚನಗಳು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ, ಸಮಾಜಕ್ಕಂಟಿರುವ ಭವ ರೋಗವನ್ನು ನಿರ್ಮೂಲನೆ ಮಾಡುವ ಕಹಿ ಲೇಪನದ ವಧುರ ವಚನ ಮಾತ್ರೆಗಳನ್ನಿತ್ತ ಜೀವನವನ್ನೇ ಸೂಕ್ಷ್ಮ ದರ್ಶನ ಯಂತ್ರದಿಂದ ಗ್ರಹಿಸಿ ಒಪ್ಪಿದ ದಾರಿ ತೋರಿಸಿದ ಮಹಾತ್ಮ ಮಹಾಶರಣ ಮಹಾನುಭಾವಿ ಮಹಾಭಕ್ತ ಅಂಬಿಗರ ಚೌಡಯ್ಯ ಎನ್ನಬಹುದು. ಬೇವು ತಿಂದವನು ಬಹಳ ಕಾಲ ಬದುಕುತ್ತಾನೆ. ಕಹಿ ಉಂಡವನು ಜೀವನದಲ್ಲಿ ಅಜರಾಮರನಾಗುತ್ತಾನೆ.
ಅಂಬಿಗರ ಚೌಡಯ್ಯ ಯಾವ ಮಾತನ್ನಾಡಿದರೂ ಅದು ಸಿಂಹ ಗರ್ಜನೆ ಇವರ ವಚನಗಳನ್ನು ಓದುತ್ತಿದ್ದರೆ, ಒಂದೆಡೆ ನಗು ಮತ್ತೊಂದೆಡೆ ಜಿಗುಪ್ಸೆ ಉಂಟಾಗುವುದು ಆದರೆ ಅವನು ಹಾಗೆ ಆಗಿರುವುದಕ್ಕೆ ಕಾರಣವಿಲ್ಲ ಕಿವಿಗೊಡುತ್ತಿರಲ್ಲ ವೆಂದು ತೋರುತ್ತದೆ. ಕಿವುಡರನ್ನು ಕಿವಿಗೊಡುವಂತೆ ಮಾಡಬೇಕಾಗಿದ್ದರೆ ಅಂಬಿಗರ ಚೌಡಯ್ಯನ ಬಲ್ಲರಿಯಂತಹ ನುಡಿಗಳೇ ಬೇಕಾಗಿದ್ದುವೆಂದು ತೋರುತ್ತದೆ.
ಅಂಬಿಗರ ಚೌಡಯ್ಯ ನಿಜವಾಗಿಯೂ ವಚನಕಾರರಲ್ಲಿ ಒಬ್ಬ ಕ್ರಾಂತಿ ಪುರುಷ ನಿಷ್ಠುರ ಮನುಜ ವಸವಾದಿ ಪ್ರಪಥರಪಾಳಿಯಲ್ಲಿ ಅಂಬಿಗರ ಚೌಡಯ್ಯನ ಹೆಸರು ಶಾಶ್ವತವಾಗಿ ನಿಂತಿದೆ ಸಂಸಾರ ಸಾಗರವನ್ನು ದಾಟಿ ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದ ಚಂಡಿಗೆಟ್ಟವರೆಲ್ಲ ಬಂದೇರಿ ದೋಣಿಯನ್ನು ಶಿವನೊಂದೆ ಠಾವಿಗೋಯ್ದಿಳುಹುನೇ ಎಂದು ಎದೆತಟ್ಟಿ ಹೇಳಿಕೊಂಡು ತಾನು ತನ್ನ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತ ರನ್ನೆಲ್ಲಾ ಶಿವಪಥ ದತ್ತ ಹಾಯಿಸಿದ ಕಾಯಕದಲ್ಲಿ ದುಡಿದು ಉಣ್ಣಬೇಕು ಎನ್ನುವ ಕಾಯಕನನ್ನು ಕೈ ಕೊಂಡವನ್ನು ಅಂಬಿಗರ ಚೌಡಯ್ಯಾ.
ತಾನು ಪರಿಶುದ್ಧವಾಗಿ ಸಿದ್ಧ ಶುದ್ಧ ಬಾಳನ್ನು ಬಾಳಿ ಬೆಳಗಿಸಿಕೊಂಡವನು ಚೌಡಯ್ಯ. ಶಿವಶರಣರು ಶರಣರೆಲ್ಲರೂ ಕಾಯಕದ ಕಲಿಗಳು ಇಂದಿಗೂ ಕನ್ನಡಿಗರ ನಾಲಗೆಯ ಮೇಲೆ ನಲಿದಾಡುವ ಅಂಬಿಗರ ಚೌಡಯ್ಯನ ವಚನಗಳು ಜನತೆಯ ಪಂಚ ಪ್ರಾಣದಂತಿವೆ.ನೇರ ನಡೆ ನುಡಿಯ ಇರುವದನ್ನು ಇರುವಂತೆ ನುಡಿದ ಜನರ ಮನದಾಳದಲ್ಲಿ ಸ್ಥಿರವಾಗಿ ಉಳಿದ ಅಂಬಿಗರ ಚೌಡಯ್ಯನವರಿಗೆ ಅವರ ಜಯಂತಿಯ ಶುಭಸಮಯದಲ್ಲಿ ನಮ್ಮದೊಂದು ನಮನ ಸಲ್ಲಿಸೋಣ.

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ
image
ಜನನ 12 ಜನವರಿ 1863 ಕಲ್ಕತ್ತಾ,
ಮರಣ 4 ಜುಲೈ 1902 (ತೀರಿದಾಗ ವಯಸ್ಸು ೩೯)
ಬೇಲೂರು ಮಠ, ಬಂಗಾಲ ಪ್ರಾಂತ್ಯ, ಬ್ರಿಟೀಶ್ ಭಾರತ
(ಈಗ ಪಶ್ಚಿಮ ಬಂಗಾಲ, ಭಾರತ)
ಜನ್ಮ ನಾಮ ನರೇಂದ್ರನಾಥ ದತ್ತ
Founder of ಬೇಲೂರು ಮಠ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಶನ್
●ಗುರು ರಾಮಕೃಷ್ಣ ಪರಮಹಂಸ
●ತತ್ವಶಾಸ್ತ್ರ ವೇದಾಂತ
ಸಾಹಿತ್ಯದ ಕೆಲಸಗಳು ರಾಜ ಯೋಗ, ಕರ್ಮ ಯೋಗ,ಭಕ್ತಿ ಯೋಗ ಮತ್ತು ಜ್ಞಾನ ಯೋಗ
ಸ್ವಾಮೀ ಅಶೋಕಾನಂದ, ಸ್ವಾಮಿ ವಿರಜಾನಂದ, ಸ್ವಾಮಿ ಪರಮಾನಂದ, ಅಳಸಿಂಗ ಪೆರುಮಾಳ್, ಸ್ವಾಮೀ ಅಭಯಾನಂದ,
●ಸೋದರಿ ನಿವೇದಿತ, ಸ್ವಾಮಿ ಸದಾನಂದ
●ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ – ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ.
●ಜನನ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩, ಜನವರಿ ೧೨ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು.
●ರಾಮಕೃಷ್ಣರ ಜೊತೆಗೆ
ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ “ದ ಎ‍ಕ್ಸಕರ್ಶನ್” ಎಂಬ ಕವಿತೆಯಲ್ಲಿನ “ಸಮಾಧಿ” ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
೧೮೮೧ನೇ ಇಸವಿ ನವೆಂಬರಲ್ಲಿ ಯಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕ್ರಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳಲ್ಲಿಲ್ಲ.ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂತ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರ ಕ್ಕೆಭೇಟಿ ನೀಡಲು ಪ್ರರೇಪಿಸಿತು. ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದ್ರಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು.
೧೮೮೪ ಇಸವಿಯಲ್ಲಿ ಅನೀರಿಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು. ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದರಾದಾಗ, ದೇವರ ಅಸ್ತಿತ್ವದ ಬಗ್ಗೆಯೆ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿದ್ದ್ಯ ಅವರಿಗೆ ಸಾಂತ್ವನ ನೀಡುತಿತ್ತು.
ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಾಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು. ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಲ್ಲಷ್ಟೇ ಶಕ್ತರಾದರು.
ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು. ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿದರು.
ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೆ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವ್ರಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು.
●ರಾಮಕೃಷ್ಣ ಮಠದ ಸ್ಥಾಪನೆ
ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿ ದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಯಾಟನೆ ಮೂಲಕ ತುಂಬುತಿದ್ದರು.
ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ “ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು” ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ “ಸಂಗೀತ ಕಲ್ಪತರು “ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆ ಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ.
●ವಿವೇಕಾನಂದರ ಭಾರತ ಪರ್ಯಟನೆ
೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವತ್ ಗೀತೆ ಹಾಗು ” ದಿ ಇಮಿಟೆಶ್ನ್ ಒಫ಼್ ಕ್ರಿಸ್ತ್” ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
●ಉತ್ತರ ಭಾರತ
೧೮೮೮ ರಲ್ಲಿ ಗೌತಮ ಬುದ್ಹ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗ ರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯ ರು ” ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ” ಎಂದು ಪ್ರಶಂಸಿಸಿದರು.
ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.
●ಅದ್ವೈತ ಸಿದ್ಧಾಂತದ ಉಪಯುಕ್ತತೆ
ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣ ರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.
ಇದೇ ಅವರ ಮಂತ್ರವಾಯಿತು ಮತ್ತು ಅವರ “ದರಿದ್ರ ನಾರಾಯಣ ಸೇವೆ’ ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನ ರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.
ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯ ಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.
●ವಿವೇಕಾನಂದರ ವಿಶ್ವಪರ್ಯಟನೆ
ವಿವೇಕಾನಂದರು ಭಾರತದ ತತ್ವಜ್ಞಾನ,ಯೋಗ,ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು. ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಆವರು ಅಮೇರಿಕಾ ಪ್ರವಾಸ ಕೈಗೊಂಡರು.
೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದುಧರ್ಮದ ತತ್ವವನ್ನು ಭೋಧಿಸಿದರು. ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು. ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆ ಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.
‘ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ’
* ಸ್ವದೇಶ ಮಂತ್ರ
ಕುವೆಂಪುರವರ ‘ಸ್ವಾಮಿ ವಿವೇಕಾನಂದ’ ಸಂಪಾದಿಸಿ
ನಮ್ಮ ರಾಷ್ಟ್ರ ಕವಿ ಕುವೆಂಪುರವರು ‘ಸ್ವಾಮಿ ವಿವೇಕಾನಂದ’ರನ್ನು ಕುರಿತು ಒಂದು ಕೃತಿ ರಚಿಸಿದ್ದಾರೆ. ಈ ಕೃತಿಯು ಅವರ ಜೀವನದ ಪರಿಚಯವನ್ನು ಮಾಡಿಸುತ್ತದೆ.ಬೇಲೂರಿನ ರಾಮಕೃಷ್ಣ ಮಠಕ್ಕೆ ಆಗಿಂದಾಗ ಬೇಟಿಯನ್ನು ನೀಡುತ್ತಿದ್ದರು.
* ಆಸಕ್ತಿಕರ ಮಾಹಿತಿ
ವಿವೇಕಾನಂದರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೌರ್ವಾತ್ಯ ತತ್ತ್ವಜ್ಞಾನದ ಗೌರವ ಪ್ರಾಧ್ಯಾಪಕರಾಗಿ ಆಯ್ಕೆಯಾದ ಮೊದಲ ಏಷ್ಯಾ ಖಂಡದ ವ್ಯಕ್ತಿ
ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ವಿವೇಕಾನಂದರ ಸೂಚನೆಯ ಮೇರೆಗೇ ಪ್ರಾರಂಭವಾದದ್ದು.
ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು ಸಂಪಾದಿಸಿ
ಕರ್ಮ, ಭಕ್ತಿ ಹಾಗೂ ಯೋಗ ಇವುಗಳ ಸಮನ್ವಯದಿಂದ ಪರಮಾತ್ಮನ ದರ್ಶನ ಲಭ್ಯವಾಗುತ್ತದೆ.
ನೀವು ಕೆಲಸಕ್ಕೆ ಬಾರದವರೆಂದು ತಿಳಿದುಕೊಳ್ಳಬೇಡಿ. ಭಗವಂತನ ಮಕ್ಕಳು ನೀವು. ಮಹಾಶಕ್ತಿ ನಮ್ಮ ಹಿಂದೆ ಇದೆ. ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಅರಿಯಬೇಕು.
ಕೆಲಸ ಯಾವುದು ಮೇಲಲ್ಲ, ಕೀಳಲ್ಲ ಎಲ್ಲಾ ಕೆಲಸವೂ ಒಂದು ಪ್ರಾರ್ಥನೆ, ಪೂಜೆಯಂತೆ.
ನೀವು ಪರಿಶುದ್ಧರಾಗಿ, ಸಹಾಯವನ್ನು ಕೋರಿ ನಿಮ್ಮ ಬಳಿಗೆ ಬಂದವರಿಗೆ ಸಾಧ್ಯವಾದ ಸಹಾಯ ಮಾಡಿ. ಇದು ಪುಣ್ಯ, ಕರ್ಮ. ಇದರಿಂದ ಚಿತ್ತ ಶುದ್ಧಿಯಾಗುವುದು, ಸರ್ವರಲ್ಲಿ ನೆಲೆಸಿರುವ ಭಗವಂತ ವ್ಯಕ್ತನಾಗುವನು.
ಒಂದು ಭಾವನೆಯನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ, ಅದನ್ನೇ ಕನಸು ಕಾಣಿ. ಆ ಒಂದು ಭಾವನೆಯಿಂದ ತುಂಬಿ ತುಳುಕಾಡಲಿ.
ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ ದಾರಿ.
ನನ್ನನ್ನು ನೀನು ಅಸಹಾಯಕನೆಂದು ಭಾವಿಸುವುದು ಬಹಳ ದೊಡ್ದ ತಪ್ಪು. ಇತರರ ನೆರವನ್ನು ನಿರೀಕ್ಷಿಸಲೇಬಾರದು. ನಮಗೆ ನಾವೇ ಸಹಾಯ ಮಾಡಿಕೊಳ್ಳದಿದ್ದರೆ ನಮಗೆ ಬೇರೆ ಯಾರ ಸಹಾಯವೂ ಬಾರದು.

ವಿಶ್ವ ಓಝೋನ್ ದಿನಾಚರಣೆ

ವಿಶ್ವ ಓಝೋನ್ ದಿನಾಚರಣೆ
ಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿರುತ್ತದೆ. ಇದು ವಾಯುಮಂಡಲದಲ್ಲಿ ಓಝೋನ್ O3 ನ ಅನಿಲದ ಅಧಿಕ ಸಾಂದ್ರತೆಯನ್ನು ಹೊಂದಿದೆ. ಭೂಮಿಯ ಮೇಲೆ ಸುಮಾರು ೧೦ ಕಿ.ಮೀ ನಿಂದ ೪೦ ಕಿ.ಮೀ.ರ ವರೆಗೆ ವ್ಯಾಪಿಸಲ್ಪಟ್ಟಿರುವ ಈ ಪ್ರದೇಶವು ಸೂರ್ಯನಿಂದ ಬಿಡುಗಡೆಯಾಗುವ ನೇರಳಾತೀತ ವಿಕಿರಣಗಳನ್ನು ಹೀರಿಕೊಂಡು ಭೂಮಿಗೆ ಅವುಗಳು ತಲಪುವುದನ್ನು ತಡೆಗಟ್ಟುತ್ತವೆ. ಓಝೋನ್ ಪದರ ಹಾಗೂ ಅದಕ್ಕೆ ಆಗಿರುವ ಅನಾಹುತದ ಬಗ್ಗೆ ಜನರಲ್ಲಿ ಅರಿವಿಲ್ಲ. ಕೈಗಾರಿಕೋದ್ಯಮ, ಕಾರ್ಖಾನೆಗಳು ಹೆಚ್ಚುತ್ತಲೇ ಇವೆ. ಮತ್ತೊಂದೆಡೆ ಗೃಹೋಪಯೋಗಿ, ದಿನಬಳಕೆ ವಸ್ತುಗಳಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ಮತ್ತು ಪ್ರಮುಖವಾಗಿ ರೆಫ್ರೀಜರೇಟರ್ ಮತ್ತು ಏರ್ ಕಂಡೀಶನರ್‍ಗಳಲ್ಲಿ ಉಪಯೋಗದಿಂದ ಬಿಡುಗಡೆಯಾಗುವ ಕ್ಲೋರೋ ಫ್ಲೋರೋ ಕಾರ್ಬನ್ ಅನಿಲ ಓಝೋನ್ ಪದರಕ್ಕೆ ರಂಧ್ರ ಉಂಟು ಮಾಡುತ್ತಿದೆ. ಭೂಮಿಯ ಓಝೋನ್‌ ಪದರವೂ ಸೂರ್ಯನಿಂದ ಬರುವ ಕಾಸ್ಮಿಕ್‌ ಕಿರಣಗಳನ್ನು ಶೋಧಿಸಿ, ವಾತಾವರಣವನ್ನು ಶುದ್ಧವಾಗಿರಿಸಿದೆ. ಆದರೆ ಹೆಚ್ಚಿನ ಪ್ರಮಾಣದ ಕಾರ್ಬನ್‌ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಬಿಟ್ಟು ವಾಯುಮಂಡಲವನ್ನು ಮಲಿನಗೊಳಿಸುತ್ತಿದ್ದೇವೆ. ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್‌ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿರುತ್ತದೆ. ಮನುಷ್ಯನ ಅಟ್ಟಹಾಸಕ್ಕೆ ಬಲಿಯಾದ ವಸ್ತು-ವಿಶೇಷಗಳ ಪಟ್ಟಿಯಲ್ಲಿ ಓಝೋನ್ ಪದರವು ಒಂದು. ಅದಿಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಕ್ಕಿ ಕ್ಯಾನ್ಸರ್‌ನಂತಹ ಮಾರಕ ರೋಗಳಿಗೆ ಸಿಲುಕುತ್ತಿದ್ದವು ಎಂಬ ಆತಂಕವಿದೆ.
ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ
“ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ.
ಹೀಗಾಗಿ ಕಷ್ಟ-ಸಂಕಷ್ಟ,
ಕೀಟ-ಕೋಟಲೆಗಳ ಭಯವೇಕೆ?
ಸಂಕಷ್ಟ ಬಂದರೆ
ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು.” ಎಂಬ ಮಾತಿನಂತೆ
ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಜೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ವಿಶ್ವ ಓಜೋನ್ ದಿನವನ್ನು(ಸೆ.16) ಆಚರಿಸಲಾಗುತ್ತಿದೆ.
“If earth is our mother,
then Ozone is our father”
ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ,
ಆದ್ದರಿಂದ ಭೂಮಿಯನ್ನು (ಭೂ)ತಾಯಿಗೆ ಹೊಲಿಸುತ್ತೇವೆ.
ಅದೇ ರೀತಿ ಓಝೋನ್ ಪದರು ಸಹ ಜೀವಿಸಲು ಅಷ್ಟೇ ಮುಖ್ಯ ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗದು.
ಜೀವಿಗಳು ಬದುಕಿ ಬಾಳಲು ಭೂಮಿ ಬೇಕು, ಆದರೆ!!
ಭೂಮಿ ಬದುಕಲು
ಓಝೋನ್ ಬೇಕೇ-ಬೇಕು.
ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ,
ಓಝೋನ್ ಪದರು ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ(UV-Rays) ಕಿರಣಗಳಿಂದ ರಕ್ಷಿಸುತ್ತದೆ.
ಇತಿಹಾಸ:
ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲಬಾರಿಗೆ ಗುರುತಿಸಲ್ಪಟ್ಟ ಓಝೋನ್‌,
ಒಂದು ಭಿನ್ನವಾದ ರಾಸಾಯನಿಕ ಸಂಯುಕ್ತವಾಗಿ ಕ್ರಿಸ್ಟಿಯನ್‌ ಫ್ರೆಡ್ರಿಕ್‌ ಸ್ಕಾನ್‌ಬೀನ್‌ ಎಂಬಾತನಿಂದ 1840ರಲ್ಲಿ ಸೂಚಿಸಲ್ಪಟ್ಟಿತು.
ಮಿಂಚಿನ ಬಿರುಗಾಳಿಗಳಲ್ಲಿನ ಒಂದು ವಿಲಕ್ಷಣವಾದ ವಾಸನೆಗೆ ಉಲ್ಲೇಖಿಸಲಾಗುವ ‘ಓಝೀನ್’‌
(ವಾಸನೆ ಬೀರುವುದು) ಎಂಬ ಗ್ರೀಕ್‌ ಕ್ರಿಯಾಪದದ ಹೆಸರನ್ನು ಅವನು ಓಝೋನ್‌ಗೆ ಇರಿಸಿದ.
ಓಝೋನ್‌ಗೆ ಸಂಬಂಧಿಸಿದ ಸೂತ್ರವಾದ O3 ಎಂಬುದು,
ಜಾಕ್ವೆಸ್‌-ಲೂಯಿಸ್‌ ಸೋರೆಟ್‌ ಎಂಬಾತನಿಂದ 1865ರಲ್ಲಿ ನಿರ್ಣಯಿಸಲ್ಪಡುವವರೆಗೆ ಮತ್ತು ಸ್ಕಾನ್‌ಬೀನ್‌ ಎಂಬಾತನಿಂದ 1867ರಲ್ಲಿ ದೃಢೀಕರಿಸಲ್ಪಡುವವರೆಗೆ ತೀರ್ಮಾನಿಸಲ್ಪಟ್ಟಿರಲಿಲ್ಲ.
1985ರಲ್ಲಿ ಓಝೋನ್ ಪದರದಲ್ಲಿ ರಂಧ್ರ ಹಾಗೂ ಪದರ ತೆಳುವಾಗಿರುವುದು ಕಂಡುಬಂದಿತು.ಇದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿತ ವಿವಿಧ ದೇಶಗಳ ಸಕಾ೯ರದ ಮುಖ್ಯಸ್ಥರು ಒಟ್ಟಾಗಿ ಸೇರಿ
1987ರ ಸೆ.16ರಲ್ಲಿ ವಿಯೆನ್ನಾದಲ್ಲಿ ಓಜೋನ್ ಪದರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು.
ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಯವನ್ನು ಅಲ್ಲಿ ಕೈಗೊಳ್ಳಲಾಯಿತು. ಈ ಸಂಬಂಧದ
“ಮಾಂಟ್ರೆಲ್ ಪ್ರೊಟೊಕಾಲ್‌”ಗೆ 24 ದೇಶಗಳು ಸಹಿ ಹಾಕಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ಓಜೋನ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
ಹಾಗೂ 1994 ಸೆಪ್ಟೆಂಬರ್ 16 ರಂದು ನಡೆದ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಿ,
1987ರ ಸೆಪ್ಟೆಂಬರ್ 16ರಂದು     ಮಾಂಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿರುವುದನ್ನು ನೆನಪಿಸಲು,
ಸೆಪ್ಟೆಂಬರ್ 16 ಅನ್ನು
“ವಿಶ್ವ ಓಝೋನ್ ದಿನ” ಆಚರಿಸಲು ತೀರ್ಮಾನಿಸಿತು.
ಇದರ ಉದ್ದೇಶ ಓಜೋನ್ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.
“Ozone is like your Heart,
If broken,
then you are Finish.” ಎಂಬ ಮಾತಿನಂತೆ ಓಝೋನ್ ಪದರ
250 ರಿಂದ 305 ಡಾಬ್ಸನ್ ಯುನಿಟ್ಟಿಗೆ ನಷ್ಟು ದಪ್ಪ (ಗಟ್ಟಿ)  ಇರಬೇಕು. ಆದರೆ ಈ ಹಿಂದೆ ಓಝೋನ್ ಪದರದಲ್ಲಿ ರಂಧ್ರವಾಗಿದೆ, ಅದರ ಸಾಂದ್ರತೆ ಕಡಿಮೆಯಾಗಿದೆ ಎಂದು ತಿಳಿದಾಗ ಕೇವಲ 90 ಡಾಬ್ಸನ್ ನಷ್ಟಿತ್ತು.
2016 ಸಾಲಿನ ಘೋಷವಾಕ್ಯ(Theme):
“Ozone and climate: Restored by a world united”
ಅಂದರೆ ವಿಶ್ವವೇ ಒಗ್ಗೂಡಿ ಓಝೋನ್ ಪದರ ರಕ್ಷಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆಯಾಗಿಸುವುದು.
ಆಮ್ಲಜನಕದ ಮೂರು ಪರಮಾಣುಗಳು ಸೇರಿ ಓಝೋನ್ (03) ಆಗುತ್ತದೆ.
ವಾತಾವರಣದ ಮೇಲೆ ಭೂಮಿಯನ್ನು ಆವರಿಸಿರುವ ಓಝೋನ್ ಪದರವು ಅಪಾಯಕಾರಿಯಾದ ಸೂರ್ಯನಿಂದ ಬರುವ ಅತಿನೇರಳೆ ಕಿರಣವನ್ನು ಹೀರಿಕೊಳ್ಳುವುದರ ಮೂಲಕ ಜೀವಸಂಕುಲದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಭೂಮಿಯ ಮೇಲೆ ಸುಮಾರು 15 ಕಿ.ಮೀ. ದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ  ಓಝೋನ್ ಪದರು ಭೂಮಿಯನ್ನು ಆವರಿಸಿದೆ.
ಓಝೋನ್ ಪದರಿನ ಮುಖ್ಯವಾದ ಕಾರ್ಯವೆಂದರೆ ಸೂರ್ಯನಿಂದ ಬಂದ 97-98% ಅತಿನೇರಳೆ ಕಿರಣಗಳನ್ನು ಹೀರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರಭೂಮಿ ಮೇಲೆ ಬೀಳುವಂತೆ ಮಾಡುತ್ತದೆ.
ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳು ವಾತಾವರಣದಲ್ಲಿರುವ ಆಮ್ಲಜನಕದ(O2) ಮೇಲೆ ಬಿದ್ದಾಗ ಆಮ್ಲಜನಕ ಎರಡು ಅಣುಗಳಾಗಿ (O+O) ಬೇರ್ಪಡುತ್ತವೆ.
ಬೇರ್ಪಡದೇ ಇದ್ದ ಆಮ್ಲಜನಕದ(O2) ಜೊತೆ ಮತ್ತೊಂದು ಅಣು ಸಂಯೋಗವಾಗಿ ಓಜೋನ್ (O3) ಆಗುತ್ತದೆ.
ಓಝೋನ್ ಪದರು ನಾಶವಾಗಲು ಮುಖ್ಯವಾದ ಕಾರಣಗಳು:
*ಪ್ರಿಜ್ ಮತ್ತು ಕೋಲ್ಡ ಹೌಸಗಳಲ್ಲಿ ಉಪಯೋಗಿಸುವ ChloroFluoroCarbons (CFC’s) ಮತ್ತು ವಾಯುಮಾಲಿನ್ಯ,
CFCನ ಒಂದು ಅಣುವು
ಓಝೋನ್ ನ 1,00,000 ಅಣುಗಳನ್ನು ನಾಶ ಮಾಡುತ್ತದೆ.
ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ.
*ಬಾಹ್ಯಾಕಾಶ ಸಂಶೋಧನೆ, ಉಪಗ್ರಹಗಳ ಉಡಾವಣೆಗೆ ಹಾರಿಬಿಡುವ ರಾಕೆಟ್‌ಗಳಿಂದ ಹಾನಿ.
*ಬೃಹತ್ ಕೈಗಾರಿಕೆ ಮತ್ತು ವಾಹನಗಳ ಹೊಗೆ.
ಓಝೋನ್ ಪದರದ ನಾಶದಿಂದಾಗುವ ಪರಿಣಾಮಗಳು:
ಅತಿಯಾದ ಮಳೆ,
ಅತಿಯಾದ ಬರ,
ಸಮುದ್ರ ಮಟ್ಟದ ಏರಿಕೆ,
ನದಿ ಪ್ರವಾಹಗಳು,
ಒಣಗುತ್ತಿರುವುದು & ಬರಿದಾಗುವ ಕಾಡುಗಳು,
ಭೂತಾಪ ಏರಿಕೆ,
ಅತಿಯಾದ ಚಳಿ,
ಅತಿಯಾದ ಶಾಖ,
ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿ ವಾಯುಗಳ ಹೊರಸೊಸುವಿಕೆ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ಇದರಿಂದಾಗಿ ಶಹರದಲ್ಲಿ ಉಸಿರಾಡಲು ಶುದ್ಧವಾದ ಗಾಳಿಸಿಗುವುದೇ ಕಷ್ಟವಾಗಿದೆ. ಮತ್ತು ಮನುಷ್ಯನು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.
ಭೂಮಿಯ ಮೇಲಿರುವ ಓಝೋನ್ ಪದರು ನಾಶವಾದರೆ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ.
ಆಗ ಭೂಮಿಯ ಮೇಲೆ ಅತಿಯಾದ ಶಾಖ, ಉಂಟಾಗುತ್ತದೆ.
ಭೂಮಿಯ ಮೇಲೆ ಇರುವ ಉತ್ತರ,
ದಕ್ಷಿಣ ಧೃವದಲ್ಲಿ ಹಾಗೂ ಭೂಮಿಯ ಮೇಲೆ ಇರುವ ಎಲ್ಲ ಮಂಜುಗಡ್ಡೆ ಕರಗಿ ನೀರಾಗಿ ನದಿಗಳ ಮುಖಾಂತರ ಸಮುದ್ರವನ್ನು ಸೇರುತ್ತವೆ.
ಆಗ ಸಮುದ್ರದ ಮಟ್ಟವು 113 ಅಡಿಗಳಷ್ಟು ಏರುತ್ತದೆ.
ಸಮುದ್ರ ಮಟ್ಟ ಇಷ್ಟು ಏರಿದರೆ ಭೂಮಿಯು ನೀರಿನಿಂದ ಆವರಿಸುತ್ತದೆ.
ಈ ದಿನವನ್ನೇ ನಾವು “ಡೂಮ್ಸಡೇ” ಎಂದು ಕರೆಯುತ್ತೇವೆ.
ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶಮಾಡುತ್ತ ಹೋದರೆ ಒಂದು ದಿನ ಭೂಮಿಯು ಮಂಗಳ ಗ್ರಹದಂತೆ ಬರಡಾಗಿ ಬಿಡುತ್ತದೆ.
ಓಝೋನ ಪದರನ್ನು ರಕ್ಷಣೆ ಮಾಡುವ ವಿಧಾನಗಳು :
ಓಜೋನ್ ರಕ್ಷಣೆಗಾಗಿ ಇಷ್ಟು ಮಾಡಬೇಕು
* ಕೃಷಿಯಲ್ಲಿ ಕೀಟನಾಶಕವಾಗಿ ಬಳಸುತ್ತಿರುವ ಮಿಥೈಲ್ ಬ್ರೋಮೈಡ್‌ಗೆ ನಿಷೇಧ
* ಅವಶ್ಯವಿದ್ದಾಗ ಮಾತ್ರ ವಾಹನ ಬಳಕೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ
* ಸಿಎಫ್‌ಸಿ ಇಲ್ಲದ ಶೀತಲ ಯಂತ್ರಗಳು, ಹವಾ ನಿಯಂತ್ರಣದ ಉಪಕರಣಗಳ ಬಳಕೆ.
* ಭೂಗ್ರಹದ ರಕ್ಷಣೆಗೆ ಹಸಿರನ್ನು ಬೆಳೆಯಿರಿ,
* ಅರಣ್ಯನಾಶ ಮಾಡಬಾರದು
* ಹೆಚ್ಚೆಚ್ಚು ಸಸ್ಯ ಬೆಳೆಸುವುದು
* ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.
* ಪೆಟ್ರೋಲ್, ಡಿಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು.
* ರೆಪ್ರಿಜರೇಟರ್ ಹಾಗೂ ಕೋಲ್ಡ್ ಹೌಸಗಳಲ್ಲಿ CFCs ಅಣುವಿನ ಬದಲು Hydro ChloroFluoroCarbon (HCFCs) ರಾಸಾಯಿನಿಕ ಉಪಯೋಗಿಸಬೇಕು.
ನಾವೆಲ್ಲರೂ ಮಾಡಲೇಬೇಕಾದ ಸಂಕಲ್ಪ:
“Save ozone layer else you may lie in no zone”
“ಓಝೋನ್ ಇಲ್ಲದ ಭೂಮಿಯು
ಮೇಲ್ಛಾವಣಿ ಇಲ್ಲದ ಮನೆಯಂತೆ”
ಆದ್ದರಿಂದ
‘ವಿಶ್ವ ಓಝೋನ್ ದಿನ’ ದಂದು ನಾವು ಪ್ರತಿಜ್ಞೆ ಗೈಯೋಣ
“ನಾವು ಇಂದಿನಿಂದ ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರಿನ ನಾಶ ಮಾಡುವುದನ್ನು ನಿಲ್ಲಿಸುತ್ತೇವೆ.
ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿ ಇಟ್ಟುಕೊಂಡು ಹೇಗೆ ನಮ್ಮ ಹಿಂದಿನವರು ಓಝೋನ್ ಸಹಿತ ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟರೋ, ಹಾಗೆ ನಾವು ಮುಂದಿನ ಪೀಳಿಗೆಗೆ ಓಝೋನ್ ಸಹಿತ ಭೂಮಿಯನ್ನು ಕೊಡುತ್ತೇವೆ”.ಎಂದು ಸಂಕಲ್ಪ ಮಾಡೋಣ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಇದರ ಮಹತ್ವವನ್ನು ಎಲ್ಲರಿಗೂ ಸಾರೋಣ “ನಾವು ಬದುಕಿ ನಮ್ಮ ಮುಂದಿನ ಪೀಳಿಗೆಗೆ ಬದುಕಲು ಅವಕಾಶ ಮಾಡುವ ಮೂಲಕ ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳೋಣ”
ವಿಶ್ವ ಓಝೋನ್ ದಿನದ ಶುಭಾಶಯಗಳ

ಶಿಕ್ಷಕರ ದಿನಾಚರಣೆ

‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್’ 
image
ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರಾಗಿದ್ದ ‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್’ ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ ೫ ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ “ಸೆಪ್ಟೆಂಬರ್ ೫ “ನ್ನು ‘ಶಿಕ್ಷಕರ ದಿನ’ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ(1962) ಅವರ ಜನ್ಮದಿನವನ್ನ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ.
ಜನನ ಬಾಲ್ಯ ಹಾಗೂ ವಿದ್ಯಾಭ್ಯಾಸ
‘ಸರ್ವಪಲ್ಲಿ ರಾಧಾಕೃಷ್ಣನ್’ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ‘ತಿರುತ್ತಣಿ’ ಎಂಬಲ್ಲಿ ಸೆಪ್ಟೆಂಬರ್ ೫, ೧೮೮೮ ರಲ್ಲಿ.(ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುತ್ರ ಸರ್ವಪಲ್ಲಿ ಗೋಪಾಲ್ ಅವರು ತಮ್ಮ ತಂದೆಯ ಬಗ್ಗೆ ಬರೆದ ಜೀವನಚರಿತ್ರೆಯಲ್ಲಿ ರಾಧಾಕೃಷ್ನನ್ ಅವರ ಜನ್ಮದಿನಾಂಕ 20-09-1887 ಎಂದಿದೆ) ಸರ್ವಪಲ್ಲಿಎನ್ನುವುದು ಮನೆತನದ ಹೆಸರಾದರೆ, ‘ರಾಧಾಕೃಷ್ಣನ್’ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟ ಪಡುವ ಸಂದರ್ಭದಲ್ಲಿ ‘ರಾಧಾಕೃಷ್ಣನ್‌’ಗೆ ಓದಬೇಕೆನ್ನುವ ಅಪಾರ ಹಂಬಲ! ‘ಸ್ಕಾಲರ್‌ಶಿಪ್ ಹಣ’ದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ ನಲ್ಲಿ ‘ತತ್ವಜ್ಞಾನ’ ವಿಷಯದ ಮೇಲೆ ‘ಬಿ.ಎ’ ಮತ್ತು ‘ಎಂ.ಎ. ಪದವಿ’ಗಳನ್ನು ಪಡೆದು ಕೊಂಡರು. ‘ಸ್ನಾತಕೋತ್ತರ ಪದವಿ’ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ ‘ದಿ ಎಥಿಕ್ಸ್ ಆಫ್ ವೇದಾಂತ’ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ ೨೦ ವರ್ಷದ ಬಾಲಕನ ತಲೆಯಲ್ಲಿದ್ದ ‘ಹಲವು ಬಗೆಯ ಸಿದ್ಧಾಂತಗಳು’, ‘ವೇದಾಂತ ವಿಚಾರಗಳು’ ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.
ವಿವಾಹ
ವೆಲ್ಲೂರಿನಲ್ಲಿರುವಾಗಲೇ ಕೇವಲ ೧೬ ನೇ ವಯಸ್ಸಿನಲ್ಲಿಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
ಮಹಾ ಶಿಕ್ಷಕನಾಗಿ
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು “ರಾಧಾಕ್ರಿಶ್ಣಯ್ಯ”ಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.
ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ
ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ ‘ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಮತ್ತು ‘ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ’ ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ‘ಧರ್ಮ ಮತ್ತು ನೀತಿಶಾಸ್ತ್ರ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು
೧೯೩೧ ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.೧೯೩೯ ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, ೧೯೪೮ ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. ೧೯೪೯ ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ
೧೯೫೨ ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ‘ರಾಧಾಕೃಷ್ಣನ್’, ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. ‘ರಾಧಾಕೃಷ್ಣನ್’ ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ ೧೯೫೪ ರಲ್ಲಿ ಪ್ರತಿಷ್ಠಿತ ‘ಭಾರತ ರತ್ನ ಪ್ರಶಸ್ತಿ’ ನೀಡಿ ಗೌರವಿಸಿತು.ಆಗ ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು.ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ ‘ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್’ ಪುಸ್ತಕ ಬಿಡುಗಡೆಗೊಂಡಿತು. ‘ಡಾ. ರಾಜೇಂದ್ರ ಪ್ರಸಾದ್’ ನಂತರ, ೧೯೬೨ ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ ‘ಡಾ.ರಾಧಾ ಕೃಷ್ಣನ್’ ಅವರಿಗೆ ಸಲ್ಲುತ್ತದೆ.
‘ ಶಿಕ್ಷಕರ ದಿನಾಚರಣೆಯ ದಿನ’
image
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಬಿರುದುಗಳು
ಬ್ರಿಟನ್ ಆಕ್ಸ್ ಫಾರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೨ ),ಅಮೇರಿಕ ಹಾರ್ವರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೩ ),ಲಂಡನ್ ಪ್ರವಾಸದಲ್ಲಿದ್ದಾಗ “ಆರ್ಡರ್ ಆಫ್ ಮೆರಿನ್”ಪ್ರಶಸ್ತಿ,ವ್ಯಾಟಿಕನ್ ಸಿಟಿ ಪೋಪ್ ಜಾನ್ ರಿಂದ “ನೈಟ್ ಆಫ್ ದ ಆರ್ಮಿ.ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ -೧೯೬೮ , ಭಾರತೀಯ ವಿದ್ಯಾಭವನ “ಬ್ರಹ್ಮ ವಿದ್ಯಾ ಭಾಸ್ಕರ “ಬಿರುದು,”ಟೆಂಪಲ್ಟನ್”ಪ್ರಶಸ್ತಿ ೧೯೭೩ರಲ್ಲಿ. “೧೯೫೪ ರಲ್ಲಿ ಪ್ರತಿಷ್ಠಿತ ‘ಭಾರತ ರತ್ನ ಪ್ರಶಸ್ತಿ’ ಗೌರವ
ನಿಧನ
ತಮ್ಮ ‘ರಾಷ್ಟ್ರಪತಿ ಹುದ್ದೆ’ಯ ಅಧಿಕಾರಾವಧಿ ಮುಗಿದ ನಂತರ ೧೯೬೭ ರಲ್ಲಿ ತಮ್ಮ ‘ನಿವೃತ್ತಿ ಜೀವನ’ವನ್ನು ಮದ್ರಾಸಿನ ‘ಮೈಲಾಪುರ’ದಲ್ಲಿರುವ ತಮ್ಮ ಅಧಿಕೃತ ನಿವಾಸ ‘ಗಿರಿಜಾ’ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ ರ ಏಪ್ರಿಲ್ ೧೭ ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.

ಜಗಜ್ಯೋತಿ, ಕ್ರಾಂತಿಯೋಗಿ, ಭಕ್ತಿ ಭಂಡಾರಿ ಬಸವಣ್ಣನವರು.

ನಮ್ಮ ನಾಡು, ನಮ್ಮ ಹೆಮ್ಮೆ – ದಾರ್ಶನಿಕರು 

ಹಿಂದೆ ಕವಿಗಳಿಗೆ ರಾಜರು ಆಶ್ರಯ ನೀಡುತ್ತಿದ್ದರು.ಅದ್ದರಿಂದ ಕವಿಗಳು ಹೆಚ್ಚಾಗಿ ಆಶ್ರಯದಾತನಿಗೆ ಗೌರವ ಸೂಚಿಸುವ ಸಲುವಾಗಿ ತನ್ನ ಒಡೆಯನನ್ನು ಪುರಾಣದಲ್ಲಿ ಬರುವ ಮಹಾಪುರುಷರಿಗೆ ಹೋಲಿಕೆ ಮಾಡಿ  ಕೃತಿಗಳನ್ನು ರಚನೆ ಮಾಡುತ್ತಿದ್ದರು. ಅವರು ಸಮಾಜದಲ್ಲಿ ಇದ್ದ ಪದ್ಧತಿಗಳನ್ನು ವಿಡಂಬನೆ ಮಾಡದೇ ವ್ಯಕ್ತಿಯನ್ನುಆಧರಿಸುತ್ತಿದ್ದರು. ನಂತರ ಬಂದ ಕವಿಗಳು ಇದೇ ಸಂಸ್ಕೃತಿಯನ್ನು ಮುಂದುವರೆಸಿದರು. ಆದರೆ ಲೋಕದ ಡೊಂಕುಗಳನ್ನು ತಿದ್ದುವ ಕಾಯಕಕ್ಕೆ ಯಾರು ಮುಂದಾಗಲಿಲ್ಲ . ಕಡೆಗೆ ಮಹಾಪುರುಷನೊಬ್ಬ ಮೊದಲ ಬಾರಿಗೆ ಸಮಾಜವನ್ನು ತಿದ್ದುವ ಕೆಲಸವನ್ನು ಜನಸಾಮಾನ್ಯರಿಗೆ ಅರ್ಥವಾಗುವ ಆಡುಭಾಷೆಯಲ್ಲಿ ಪ್ರಯತ್ನ ಮಾಡಿದರು. ಅವರೇ ನಮ್ಮ  ಜಗಜ್ಯೋತಿ, ಕ್ರಾಂತಿಯೋಗಿ, ಭಕ್ತಿ ಭಂಡಾರಿ ಬಸವಣ್ಣನವರು.
ಜಗಜ್ಯೋತಿ ಬಸವೇಶ್ವರ
ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿ. ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಮಾದಲಾಂಬಿಕೆ ತನಗೆ ಗಂಡು ಮಗು ಬೇಕೆಂದು ಶಿವನಲ್ಲಿ ಬೇಡಿ ಕೊಳ್ಳುತ್ತಿದ್ದಳು. ಒಮ್ಮೆ ಧ್ಯಾನಿಸುವಾಗ ಶಿವನ ವಿಗ್ರಹದ  ಮೇಲಿದ್ದ ಮಲ್ಲಿಗೆ ಹೊವೊಂದು ಆಕೆಯ ಉಡಿಯಲ್ಲಿ ಬಿತ್ತು. ಅದನ್ನೇ ಭಕ್ತಿಯಿಂದ ಸ್ವೀಕರಿಸಿ  ಮುಡಿದುಕೊಂಡಳು. ಅಂದು ರಾತ್ರಿ ಅಕೆಗೆ   ಶಿವನು ಪ್ರತ್ಯಕ್ಷನಾಗಿ ತನ್ನ ನಂದಿಯನ್ನು ಭೂಲೋಕಕ್ಕೆ ಕಳುಹಿಸುವ ಮತ್ತು ನಂದಿಯು ಇವರ ಮನೆಯ ಮುಂದೆ ಪ್ರತ್ಯಕ್ಷವಾಗುವ ಕನಸು ಬೀಳುತ್ತದೆ. ಮಾರನೆಯ ದಿನ ಸುದ್ದಿಯನ್ನು  ತನ್ನ ಗುರುಗಳ  ಹತ್ತಿರ ಮಾದಲಾಂಬಿಕೆ ಸಂತೋಷದಿಂದ ಹಂಚಿಕೊಂಡಳು. ಗುರುಗಳು ನಿಮಗೆ ಒಬ್ಬ ಮಗ ಜನಿಸುತ್ತಾನೆ ಅವನು ಮುಂದೆ ಲೋಕ ಕಲ್ಯಾಣದಲ್ಲಿ ತೊಡಗುವನು ಎಂದು ಹೇಳುತ್ತಾರೆ.
ಸ್ವಲ್ಪ ಸಮಯದ ನಂತರ ಮಾದಲಾಂಬಿಕೆ ಗರ್ಭವತಿಯಾದಳು . ವೈಶಾಖ ಶುದ್ಧ ತದಿಗೆಯಂದು ಬಸವಣ್ಣನ ಜನನವಾಯಿತು. ಮಗು ಹುಟ್ಟಿದಾಗ ದಿವ್ಯ ತೇಜಸ್ಸಿನಿಂದ ಮಹಾನ್ ಯೋಗಿಯ ಹಾಗೆ ಮೌನದಿಂದ ಇರುತ್ತಿತ್ತು. ಮಗು ಅಳದೆ ,ಸದ್ದು ಮಾಡದೇ ಇರುವುದನ್ನು ಕಂಡ ಪೋಷಕರು ಕೊಡಲ ಸಂಗಮದಲ್ಲಿ ಇರುವ ಗುರುಗಳಿಗೆ ತಿಳಿಸಿದರು. ವಿಷಯ ತಿಳಿದು ಬಾಗೇವಾಡಿಗೆ ಬಂದ ಗುರುಗಳು ಮಗುವಿನ ಹಣೆಯ ಮೇಲೆ ವಿಭೂತಿ ಹಚ್ಚಿದರು. ಅಗ ಮಗು ಕಣ್ಣು ತೆರೆಯಿತು. ಕೊರಳಿಗೆ ಲಿಂಗ ಕಟ್ಟಿದಾಗ ಮಗು ನಗ ತೊಡಗಿತು. ಆಗ ಗುರುಗಳು ಶಿವನ ಕೃಪೆಯಿಂದ ನಂದಿಯೇ ನಿಮ್ಮ ಮಗನಾಗಿ ಜನಿಸಿದ್ದಾನೆ ಅದ್ದರಿಂದ ಬಸವ ಎಂದು ನಾಮಕರಣ ಮಾಡಿ ಎಂದು ಸೂಚಿಸಿದರು. ಮುಂದೆ ಬಸವೇಶ್ವರರಾದರು. ಜನರು ಪ್ರೀತಿಯಿಂದ ಬಸವಣ್ಣ ಎಂದು ಕರೆಯತೊಡಗಿದರು.
ಬಾಲಕ ಬಸವಣ್ಣ ಸಮಾಜದ ಹಲವು ಪದ್ದತಿಗಳ ಬಗ್ಗೆ ಹಾಗೇಕೆ? ಹೀಗೇಕೆ ? ಎಂದು ಪ್ರಶ್ನೆ ಮಾಡುತ್ತಿದ್ದರು. ಅವರು ಬಾಲಕನಾಗಿದ್ದಾಗ ವಿಚಾರಿಸುವ ಪರಿಯನ್ನು ನೋಡಿದವರಿಗೆ ಉತ್ತರ ನೀಡುವುದು ಕಷ್ಟವಾಗುತ್ತಿತ್ತು. ಬಸವಣ್ಣನಿಗೆ  ಎಲ್ಲರೂ ಸಮಾನರು,ಎಲ್ಲರೂ ದುಡಿಯಬೇಕು, ಭಕ್ತಿಯಿಂದ ಇರಬೇಕು ಎಂದು ಬಾಲ್ಯದಲ್ಲಿಯೇ ಮೂಡಿಬಂದವು. ಎಂಟು ವರ್ಷ ತುಂಬಿದಾಗ ಮನೆಯ ಸಂಪ್ರದಾಯದಂತೆ ಬಸವಣ್ಣನಿಗೆ ಉಪನಯನ ಮಾಡಬೇಕೆಂದು ಪೋಷಕರು ನಿರ್ಧರಿಸಿದರು. ಆಗ ಉಪನಯನವನ್ನು ಪ್ರಶ್ನಿಸಿದ ಬಸವಣ್ಣ ತನಗೆ ಏಕೆ ಬೇಕು. ಆಗಲೇ ಗುರುಗಳು ನನಗೆ ಲಿಂಗವನ್ನು ಕಟ್ಟಿದ್ದರಲ್ಲಾ ಮತ್ತೊಂದು ಯಾಕೆ ಎಂದು ಪ್ರಶ್ನೆ ಹಾಕಿದರು. ಕಡೆಗೆ ಪೋಷಕರು ಬಸವಣ್ಣನ ಮನವೊಲಿಸಲು ಎಲ್ಲ ಪ್ರಯತ್ನ ಮಾಡಿದರು ಎಲ್ಲವೂ ಬಸವಣ್ಣನ ಮುಂದೆ ವಿಫಲವಾಯಿತು. ಕಡೆಗೆ ಬಸವಣ್ಣ ಮನೆಯನ್ನು ತೊರೆದು ಕೊಡಲಸಂಗಮದಲ್ಲಿರುವ ಸಂಗಮೇಶ್ವರ ಗುರುಗಳ  ಆಶ್ರಮಕ್ಕೆ ಬಂದರು. ಅಲ್ಲೇ ವಿದ್ಯಾಬ್ಯಾಸ ಮುಂದುವರೆಸಿದರು.
 ಒಮ್ಮೆ ಸಂಗಮೇಶ್ವರರ ಆಶ್ರಮಕ್ಕೆ ಕಲ್ಯಾಣದ ಚಾಲುಕ್ಯರ ರಾಜ ಬಿಜ್ಜಳನ  ಮಂತ್ರಿಯಾದ ಬಲದೇವನು ಭೇಟಿ ನೀಡಿದಾಗ ಬಸವಣ್ಣ ಬಗ್ಗೆ ಸಂಗಮೇಶ್ವರರು ಕೊಂಡಾಡಿದರು. ಮಂತ್ರಿಯು ಇಂತಹ ಅರ್ಹರು ನಮ್ಮ ರಾಜ್ಯಕ್ಕೆ ಬೇಕು ಎಂದು ಅರಿತು ಹಾಗು ತನ್ನ ಮಗಳಿಗೆ ಬಸವಣ್ಣ ಯೋಗ್ಯ ವರನೆಂದು ಗುರುಗಳ ಮುಂದೆ ವಿಚಾರವನ್ನು ಪ್ರಸ್ತಾಪಿಸಿದನು. ಗುರುಗಳಿಗೆ ಸಹ ಇದು ಸರಿಯೆನಿಸಿತು. ಕಡೆಗೆ ಗುರುಗಳು ಬಸವಣ್ಣನನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಕೊಡಲ ಸಂಗಮದಿಂದ ಕಲ್ಯಾಣ ನಗರಕ್ಕೆ ಆಗಮಿಸಿದ ಬಸವಣ್ಣ ಮೊದಲು ಕೋಶಾಧಿಕಾರಿಯಾಗಿ ರಾಜ್ಯದ ಭಂಡಾರದ ವ್ಯವಸ್ತೆಯನ್ನು ಸರಿಪಡಿಸಿದರು. ಒಮ್ಮೆ ಅರಮನೆಯಲ್ಲಿ ಒಂದು ತಾಮ್ರಪಟವು ಸಿಕ್ಕಿತು. ಅದನ್ನು ಓದಲು ಅಲ್ಲಿದ್ದ ಯಾರಿಗೂ ಬರಲಿಲ್ಲ ಅಗ ಬಸವಣ್ಣ ಅದನ್ನು ಓದಿ  ಅರ್ಥವನ್ನು ತಿಳಿಸಿದರು. ಇದರಿಂದ ಹಿಂದಿನ ರಾಜರು ಸುರಕ್ಷಿತವಾಗಿ ಇಟ್ಟಿದ್ದ ಅಪಾರ ನಿಧಿಯು ಪತ್ತೆಯಾಯಿತು.ನಿಧಿಯನ್ನು ಸಮಾಜದ ಒಳಿತಿಗೆ ಬಳಸುವ ಮಾರ್ಗವನ್ನು ಬಸವಣ್ಣ ನೀಡಿದರು . ಇವರ ಬುದ್ದಿಶಕ್ತಿಗೆ ಮೆಚ್ಚಿ ಬಿಜ್ಜಳನು ಬಸವಣ್ಣನನ್ನು ಭಂಡಾರದ ಮುಖ್ಯಸ್ತನನ್ನಾಗಿ ಮಾಡಿದನು.
ಬಿಜ್ಜಳನ  ಸಾಕು ತಂಗಿ ನೀಲಾಂಬಿಕೆ ಮತ್ತು ಬಲದೇವನ ಮಗಳಾದ ಗಂಗಾಂಬಿಕೆಯ ಜೊತೆ ಬಸವಣ್ಣನ ಮದುವೆಯಾಯಿತು. ಬಸವಣ್ಣ ಅನುಭವ ಮಂಟಪವನ್ನು ಸ್ಥಾಪಿಸಿದರು. ಅಲ್ಲಿ ಭಕ್ತಿಯೇ ಪ್ರಧಾನವಾಗಿತ್ತು. ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎನ್ನುವ ತತ್ವವನ್ನು ಸಾರಿದರು. ಅನುಭವ ಮಂಟಪದಲ್ಲಿ ಕಾಯಕವೇ ಕೈಲಾಸ ಎಂದು ಎಲ್ಲರು ದುಡಿಮೆಯಲ್ಲಿ ತೊಡಗಿ , ಜಾತಿ ಭೇದವಿಲ್ಲದೆ ನಡೆದು ಕೊಳ್ಳುತ್ತಿದ್ದರು. ಬಲದೇವನ ಮರಣದ ನಂತರ ಬಿಜ್ಜಳನು ಬಸವಣ್ಣನನ್ನು ಮಂತ್ರಿಯನ್ನಾಗಿ ಮಾಡಿದ ಬಸವಣ್ಣನವರ ಕಾರ್ಯ ಕ್ಷೇತ್ರ ಇನ್ನೂ ವಿಸ್ತಾರವಾಯಿತು. ದುಡಿಯುವವರಿಗೆ ಜಾತಿ ಇಲ್ಲ , ಎಲ್ಲರೂ ಸಮಾನರು ಎಂದು ಸಾರಿದರು. ಇವರ ವಿಚಾರವನ್ನು ಒಪ್ಪಿಕೊಳ್ಳಲು ಸಂಪ್ರದಾಯವಾದಿಗಳು ಸಿದ್ದಲಿರಲಿಲ್ಲ ಯಾವಾಗಲು ವಿರೋಧಿಸುತ್ತಿದ್ದರು . ಹೀಗಿರುವಾಗ ಬಸವಣ್ಣನವರು ಮಧುವರಸ ಮತ್ತು ಸಮಗಾರ ಹರಳಯ್ಯನವರಿಗೆ ಲಿಂಗಧಾರಣೆ ಮಾಡಿಸಿದರು. ಹರಳಯ್ಯನ ಮಗ ಮಧುವರಸನ ಮಗಳನ್ನು ಮದುವೆಯಾದನು. ಇದರಿಂದ ಬಸವಣ್ಣನ ವಿರೋಧಿಗಳು ಕೆಂಡ ಮಂಡಲರಾದರು. ಬಿಜ್ಜಳನ ಕಿವಿ ಚುಚ್ಚಿ ಹರಳಯ್ಯ ಮತ್ತು ಮಧುವರಸರಿಗೆ ಕ್ರೋರ ಶಿಕ್ಷೆಯಲ್ಲಿ ವಿಧಿಸುವಲ್ಲಿ ಯಶಸ್ವಿಯಾದರು. ಇದರಿಂದ ನೊಂದ ಬಸವಣ್ಣ ಕಲ್ಯಾಣವನ್ನು ಬಿಟ್ಟು ಕೊಡಲ ಸಂಗಮದಲ್ಲಿ ತನ್ನ ಆರಾಧ್ಯ ದೈವ ಕೊಡಲ ಸಂಗಮನಲ್ಲಿ ಐಕ್ಯರಾದರು.  
ಬಸವಣ್ಣನವರ ಆಯ್ದ ವಚನಗಳು 

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?

ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |

ಎನಗಿಂತ ಕಿರಿಯರಿಲ್ಲ!
ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ ಎನಗಿದೇ ದಿಬ್ಯ.

ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರು ಇಲ್ಲವಯ್ಯ!
ಕೂಡಲಸಂಗಮದೇವ,
ಹಾಲಲದ್ದು ನೀರಲದ್ದು.

ವಚನದಲ್ಲಿ ನಾಮಾಮೃತ ತುಂಬಿ.
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ;
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ;
ಕೂಡಲಸಂಗಮದೇವ,
ನಿಮ್ಮ ಚರಣಕಮಲದೊಳಗಾನು ತುಂಬಿ!

ಎನ್ನ ವಾಮ-ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನವು ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.

ಕರಿಯಂಜುವುದು ಅಂಕುಶಕ್ಕಯ್ಯ!
ಗಿರಿಯಂಜುವುದು ಕುಲಿಶಕ್ಕಯ್ಯ!
ತಮಂಧವಂಜುವುದು ಜ್ಯೋತಿಗಯ್ಯ!
ಕಾನನವಂಜುವುದು ಬೇಗೆಗಯ್ಯ!
ಪಂಚಮಹಾಪಾತಕವಂಜುವುದು
ನಮ್ಮ ಕೂಡಲಸಂಗನ ನಾಮಕ್ಕಯ್ಯ!

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.

ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ.

ಹಾವು ತಿಂದವರ ನುಡಿಸ ಬಹುದು!
ಗರ ಹೊಡೆದವರ ನುಡಿಸ ಬಹುದು!
ಸಿರಿಗರ ಹೊಡೆದವರ ನುಡಿಸ ಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.

ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ.
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ.

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ.
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

ಕಳಬೇಡ ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.

ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ.

ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!
ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!
ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಕೂಡಲಸಂಗಮದೇವ.

ನಾನೊಂದ ನೆನೆದರೆ, ತಾನೊಂದ ನೆನೆವುದು;
ನಾನಿತ್ತಲೆಳೆದರೆ, ತಾನತ್ತಲೆಳೆವುದು;
ತಾ ಬೇರೆ ಎನ್ನನಳಲಿಸಿ ಕಾಡಿತ್ತು;
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದರೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?

ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು.
ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು
ಕಿಚ್ಚಿನೊಳಿಕ್ಕುವೆನು.

ಕಾಯವಿಕಾರ ಕಾಡಿಹುದಯ್ಯ!
ಮನೋವಿಕಾರ ಕೂಡಿಹುದಯ್ಯ!
ಇಂದ್ರಿಯವಿಕಾರ ಸುಳಿದಿಹುದಯ್ಯ!
ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!
ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!
ಅನುಪಮಸುಖ ಸಾರಾಯ ಶರಣರಲ್ಲಿ,
ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

ವಿಷಯವೆಂಬ ಹಸುರನೆನ್ನ ಮುಂದೆ ತಂದು
ಪಸರಿಸಿದೆಯಯ್ಯ;
ಪಶುವೇನ ಬಲ್ಲುದು ಹಸುರೆಂದೆಳಸುವುದು
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ
ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯ
ಕೂಡಲಸಂಗಮದೇವ.

ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ.

ಅಬ್ದುಲ್ ಕಲಾಮ್

ಮೇಲಿನ ಟೈಟಲ್  ನೋಡಿದರೆ, ಮೇಲುನೋಟಕ್ಕೆ  ಆಪಲ್  ಸಂಸ್ಥೆ ನೆನಪಿಗೆ ಬರಬಹುದು. ಈ ವಾರದ ಲೇಖನ ಆಪಲ್ ಸಂಸ್ಥೆಯ ಬಗ್ಗೆಯಾಗಲಿ , ಸ್ಟಿವ್ ಜಾಬ್ಸ್ ಬಗ್ಗೆಯಾಗಲಿ ಅಲ್ಲ. ಇದು ಭಾರತೀಯ ವಿಜ್ಞಾನಿಯೊಬ್ಬರ ಯಶೋಗಾಥೆ.
ಒಮ್ಮೆ ಅಬ್ದುಲ್ ಕಲಾಂ ಅವರು ಹೈದರಬಾದಿನ ನಿಜಾಂ ಆಸ್ಪತ್ರೆಗೆ ಭೇಟಿ ಕೊಟ್ಟ ಸಂಧರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರು . ಅಲ್ಲಿ ಅಂಗವಿಕಲ ಮಕ್ಕಳು ತಮಗೆ ಅಳವಡಿಸಿದ ಲೋಹದಿಂದ  ಮಾಡಿದ ಭಾರವಾದ  ಕ್ಯಾಲಿಪೆರ್ಸ್ ನಿಂದ ಓಡಾಡಲು ಬಹಳ ಕಷ್ಟ ಪಡುತ್ತಿದ್ದರು. ಅದನ್ನು ನೋಡಿದ ಕಲಾಂಗೆ ಮನ ಕರಗಿತು. ಅಲ್ಲಿಂದ ಹಿಂತಿರುಗಿದ ಮೇಲೆ  ತಮ್ಮ ಪ್ರಯೋಗಾಲಯದಲ್ಲಿ  ಕ್ಷಿಪಣಿಗಳಲ್ಲಿ ಬಳಸುವ ಹಗುರವಾದ ಲೋಹದಿಂದ “ಫ್ಲೂರ್ ರಿಯಾಕ್ಶನ್  ಅರ್ತೊಸಿಸ್  ಕ್ಯಾಲಿಪರ್ಸ್” ತಯಾರಿಸಿ  ಅಂಗವಿಕಲ ಮಕ್ಕಳಿಗೆ ಅಳವಡಿಸಿದರು. ಹಗುರವಾದ ಲೋಹದಿಂದ ಮಾಡಿದ ಕ್ಯಾಲಿಪೆರ್ಸ್ ಧರಿಸಿದ ಮಕ್ಕಳು ತುಂಬಾ ಸಂತೋಷದಿಂದ ನಡೆದಾಡ ತೊಡಗಿದರು. ಮಕ್ಕಳು ನಲಿದಾಡುವುದನ್ನು ಕಂಡ ಕಲಾಂ ಭಾವುಕರಾದರು 
ಮೇಲಿನ ಸಂಧರ್ಭ ನನಗೆ ಅತ್ಯಂತ ಸಂತೋಷ ನೀಡಿದ ಪ್ರಸಂಗ ಎಂದು ಕಲಾಂ ಅವರು ಹೇಳುತ್ತಾರೆ.
ಹಾಗು ಹೃದಯ ರೋಗಿಗಳ ಹೃದಯದಲ್ಲಿ ಅಳವಡಿಸಿದ  ಕಾರೋನರಿ ಸ್ಟೆಂಟ್ ಕೂಡ ಕ್ಷಿಪಣಿ ತಂತ್ರಜ್ಞಾನದ ಫಲ.
ಅಂದು ಕೇವಲ ಕ್ಷಿಪಣಿಗಳ ಬಗ್ಗೆ ಯೋಚನೆ ಮಾಡಿದ್ದರೆ ಕಲಾಂ ಕೇವಲ ಸಾಮಾನ್ಯ ಮಾನವರಾಗುತ್ತಿದ್ದರು. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಗುಣ ಕೇವಲ ವಿಶ್ವ ಮಾನವನಿಗೆ ಸಾಧ್ಯ. ಕಲಾಂ ಅದನ್ನು ನಿರೂಪಿಸಿದರು..
ನಾವು ಸಹ ಸ್ವಲ್ಪ  ಥಿಂಕ್  ಡಿಫರೆಂಟ್ ಅಂತ ಯೋಚನೆ ಮಾಡಿದರೆ. ಏನಾಗಬಹುದು.
ಸೊ ಸ್ಟಾರ್ಟ್ ಥಿಂಕಿಂಗ್ ಡಿಫರೆಂಟ್…..
ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು!!!ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಯಾರಿಗೆ ಗೊತ್ತಿಲ್ಲ ಹೇಳಿ , ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗು ಕ್ಷಿಪಣಿ ಗಳ ಜನಕ ಎಂದೇ ಪ್ರಸಿದ್ಧರು. ಕಲಾಂ ಅವರು ಇಸ್ರೋ ಸಂಸ್ಥೆಯ  ಉಪಗ್ರಹ  ಉಡಾವಣ ವಾಹನಗಳ ಯೋಜನೆಯ ಕಾರ್ಯದಲ್ಲಿ  ತೊಡಗಿದ್ದಾಗ, ಅವರಿಗೆ ಬೆರಿಲಿಯಮ್  ಡಯಾ ಫಾರ್ಮ್ಗಳ ಅವಶ್ಯಕತೆ ಇತ್ತು. ಬೇರಿಲಿಂ ಡಯಾ ಫಾರ್ಮ್ಗಳನ್ನು ವಿಮಾನ, ರಾಕೆಟ್  ಹಾಗು ಕ್ಷಿಪಣಿಗಳ ಭ್ರಮಣ ದಿಕ್ಸೂಚಿಗಳಲ್ಲಿ ಬಳಸುತ್ತಾರೆ.  ಭ್ರಮಣ ದಿಕ್ಸೂಚಿಗಳಿಂದ  ವಿಮಾನ , ರಾಕೆಟ್ ಹಾಗು ಕ್ಷಿಪಣಿಗಳು  ನೆಲದ ಮೇಲೆ ಎಷ್ಟು ಎತ್ತರದಲ್ಲಿ ಹಾರುತ್ತಿವೆ ಎಂದು ಸೂಚಿಸುತ್ತವೆ.
ಅಂದು  ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಯಾವುದೇ ಉದ್ಯಮಗಳು ಇಲ್ಲದೆ ಇರುವುದರಿಂದ , ಇದನ್ನು ಅಮೇರಿಕದಿಂದ ಅಮದು ಮಾಡಿಕೊಳ್ಳುತ್ತಿದ್ದರು . ಇಸ್ರೋದಿಂದ ನಮ್ಮ ಯೋಜನೆಗೆ ನಮಗೆ ಇಷ್ಟು  ಡಯಾ ಫಾರ್ಮ್ಗಳು ಬೇಕು ಎಂದು ಅಮೆರಿಕಕ್ಕೆ ಬೇಡಿಕೆ ಇಟ್ಟರು.
ಮೂರು ತಿಂಗಳ ನಂತರ ಅಮೆರಿಕವು, ಭಾರತವು  ಖಂಡಾಂತರ ಕ್ಷಿಪಣಿಗಳ  ಅಭಿರುದ್ದಿಯಲ್ಲಿ  ಬೇರಿಲಿಂ ಡಯಾ ಫಾರ್ಮ್ಗಳನ್ನು ಬಳಸುತ್ತಾರೆ  ಎಂದು ಬೇಡಿಕೆ ಪೂರೈಸಲು ನಿರಾಕರಿಸಿತು.
ಬಂದ ಆಪತ್ತನ್ನು  ಪರಿಹರಿಸಲು ತಕ್ಕ್ಷಣ ಒಂದು ಟಾಸ್ಕ್ ಫೂರ್ಸೆ ರಚನೆಯಾಯಿತು. ಆಗ ಬೆಳಕಿಗೆ ಬಂದ ಅಂಶ, ತುಂಬಾ ಕೌತುಕ ಹಾಗು ಆಘಾತವನ್ನು ತಂದಿತ್ತು.
ಅಮೆರಿಕಾವು ಬೆರಿಲಿಯಮ್  ಡಯಾ ಫಾರ್ಮ್ಗಗಳ   ಅಭಿರುದ್ದಿಗೆ   ಬೇರಿಲಿಂ ರಾಡ್ ಮತ್ತು ಶೀಟ್ ಗಳನ್ನೂ  ಜಪಾನಿನಿಂದ ಅಮದು ಮಾಡಿ ಕೊಂಡಿತ್ತು . ಜಪಾನ್  ಬೇರಿಲಿಂ ರಾಡ್ ಮತ್ತು ಶೀಟ್ ಗಳನ್ನೂ  ತಯಾರಿಸಲು , ಭಾರತದಿಂದ   ಬೇರಿಲಿಂ ಅದಿರನ್ನು ಅಮದು ಮಾಡಿಕೊಂಡಿತ್ತು. ಕೊನೆಗೆ, ನಮ್ಮ ದೇಶ  ಬೇರಿಲಿಂ ಅದಿರು ರಫ್ತಿಗೆ  ನಿಷೇಧ ಹೇರಿತು.
ನಮ್ಮ ಮನೆ ವಸ್ತುನ ನಮಗೆ ಮಾರೋಕೆ ಇಷ್ಟು ನಕಾರ ಮಾಡು ಅಮೆರಿಕಕ್ಕೆ ಬುದ್ದಿ ಕಲಿಸಿ, ನಾವು ಕಲಿತು , ತಾನೆ ಅಭಿರುದ್ದಿ ಪಡಿಸುವಲ್ಲಿ ಯೋಜನೆ ರೋಪಿಸಿತು.
ಇದೆಲ್ಲ ನೋಡಿದ್ರೆ ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು ಅಂತ ಸಂದೇಹವಿಲ್ಲದೇ ಹೇಳಬಹುದು.
 
ನಾವು ಯಾರನ್ನೇ ಮಾತನಾಡಿಸಿದರು ಒಂದು ವಿಷಯ ಹೇಳುತ್ತಾರೆ. ನಮಗೆ ವಯಸ್ಸು ಆಯಿತು. ಏನು ಮಾಡೋಕೆ ಆಗೋದಿಲ್ಲ. ಆದರೆ  ವಯಸ್ಸು ಮತ್ತು ಮುಪ್ಪು ಕೇವಲ ದೇಹಕ್ಕೆ ಅಷ್ಟೇ ಸೀಮಿತ, ಮನಸ್ಸಿಗಲ್ಲ ಮತ್ತು ಸಾಧನೆ ಮಾಡಲು ಅಲ್ಲ. ಎನ್ನುವ ಅರಿವು ಬಹಳ ಕಡಿಮೆ.  ತಮ್ಮ ಇಳಿ ಹರೆಯದಲ್ಲಿ ಸಾಧಿಸಿದ ಕೆಲವು ಮಹನೀಯರ ಪಟ್ಟಿ ಇಲ್ಲಿದೆ .
ಆಗತಾನೆ ನೂರನೇ ವಸಂತ ಕಂಡ ಹಿರಿ ಜೀವವೊಂದಕ್ಕೆ ಅವರ ಸಂಬಂಧಿಯೊಬ್ಬರು ಕೇಳುತ್ತಾರೆ ” ನಾನು  ಮದರಾಸಿಗೆ  ಹೋಗುತ್ತಿದ್ದೇನೆ , ನಿಮಗೆ ಏನಾದರು ಅಲ್ಲಿಂದ ತರಲೆ ” ಎಂದು ಕೇಳಿದರು. ಅದಕ್ಕೆ  ಹಿರಿ ಜೀವವು “ನಾನು ನನ್ನ  ಇಂಗ್ಲಿಷ್ ಭಾಷೆ ಉತ್ತಮ ಪಡಿಸಿ ಕೊಳ್ಳಬೇಕು, ಇತ್ತೀಚಿಗೆ ಬಿಡುಗಡೆಯಾದ ಇಂಗ್ಲಿಷ್ ಶಬ್ದಕೋಶ ಬೇಕು , ತನ್ನಿ” ಎಂದರು. ಹಿರಿ ಜೀವ ಮತ್ತಾರು ಅಲ್ಲ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ.
ಬಿಹಾರದ ಗಂಗಾ ನದಿಗೆ ಸೇತುವೆ ಕಟ್ಟಲು ಸ್ಥಳದ ಅನ್ವೇಷಣೆ ಮತ್ತು ಯೋಜನೆಯನ್ನು ಮತ್ತು ಕೊಸಿ ನದಿಗೆ ಅಣೆಕಟ್ಟಿನ ನೀಲ ನಕ್ಷೆಯನ್ನು  ವಿಶ್ವೇಶ್ವರಯ್ಯನವರು ತಮ್ಮ  ೯೦ರ ಹರೆಯದಲ್ಲಿ ಮಾಡಿದರು.
ಸರ್ ಸಿ ವಿ ರಾಮನ್ ಅವರು ತಮ್ಮ ಸಂಶೋಧನೆ ರಾಮನ್ ಎಫೆಕ್ಟ್ – ಸಣ್ಣ ಕಣದ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ವ್ಯತ್ಯಾಸವನ್ನು ಮಾಡಿದ್ದೂ ತಮ್ಮ  ೫೦ನೆ ವಯಸ್ಸಿನಲ್ಲಿ.
ಮಗ ಅವನು  ಐನ್ಸ್ಟೈನ್  ಕಣೋ ಅಂತ ಸಿಕ್ಕಾಪಟ್ಟೆ ಬುದ್ದಿವಂತನಿಗೆ ಹೇಳುತಿವಿ . ಹಾಗೆ ಐನ್ಸ್ಟೈನ್  ೧೯೧೬ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ರಿಲೇಟಿವಿಟಿ ಥಿಯರಿ)  ಮಂಡಿಸಿದಾಗ ಅವರಿಗೆ ೪೭ರ ಹರೆಯ.
ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರು ಭಾರತೀಯ ಸ್ವಾತಂತ್ರ್ಯ ಆಂದೋಲನದ ಮುಂದಾಳತ್ವ ವಹಿಸಿ ಕೊಂಡಾಗ ೪೫ ಹರೆಯ.
ಭಾರತದ  ಚಿತ್ರರಂಗದ  ಎಂದು ಆರದ ಧ್ರುವ ತಾರೆ   ಅಮಿತಾಬ್ ಬಚ್ಚನ್ ಜೀವನದಲ್ಲಿ ಸಾಲು ಸಾಲು ಸೋಲುಂಡು ಮರುಜನ್ಮ ಪಡೆದದು ತಮ್ಮ ೬೦ನೆ ವಯಸ್ಸಿನ ನಂತರವೆ.
ವಯಸ್ಸಾದರೆ ವಾಹನಗಳಲ್ಲಿ ಓಡಾಡಲು ಹಿಂಜರಿಯುವ ಸಂಧರ್ಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿಯಾದ  ಅಬ್ದುಲ್ ಕಲಾಂ ಗಂಟೆಗೆ ೨೧೨೦ ಕಿಲೋಮೀಟರು ವೇಗದಲ್ಲಿ ಸಾಗುವ ಸುಕೊಯಿ ೩೦ ಯುದ್ದ ವಿಮಾನವೆರಿದಾಗ ಅವರಿಗೆ ೭೫ದರ ಹರೆಯ. 
 
ಮಹಾಭಾರತದ ಯುದ್ದ ನಡೆದಾಗ ಪಾಂಡವರ ಮತ್ತು ಕೌರವರ ವಯಸ್ಸು ಎಪ್ಪತ್ತು ದಾಟಿತ್ತು. ಒಮ್ಮೆ ಯೋಚಿಸಿ ನೋಡಿ ಭೀಷ್ಮ,ದ್ರೋಣ ಮತ್ತು  ಕೃಪಾಚಾರ್ಯರ ವಯಸ್ಸು ಎಷ್ಟಿರ ಬಹುದು ಎಂದು.
 ಕೊನೆ ಮಾತು    :                                                                                                                                ನೀವು ಒಂದು ಬಾರಿ ಯೋಚಿಸಿ. ನನಗೆ ವಯಸ್ಸು ಆಯಿತು ಎಂದು ಹೇಳುವ ಮುನ್ನ...

ಸರ್ಧಾರ್ ವಲ್ಲಭಬಾಯಿ ಪಟೇಲ್




✍🌹 *ಬ್ರಿಟಿಷರ ನಿದ್ದೆಗೆಡಿಸಿದ್ದ 'ಉಕ್ಕಿನ ಮನುಷ್ಯ' - ಸರ್ಧಾರ್ ವಲ್ಲಭಬಾಯಿ ಪಟೇಲ್*

(ಇಂದು ರಾಷ್ಟ್ರೀಯ ಏಕತಾ ದಿನ & ಸರ್ಧಾರ್ ವಲ್ಲಭಬಾಯಿ ಪಟೇಲ್ ಜನ್ಮ ದಿನ ಕುರಿತಾದ ಮಾಹಿತಿ)
🌳🌳🌳🌳🌳🌳🌳🌳🌳🌳🌳
✍ *ನಂಬಿಕೆಯಿಲ್ಲದ ಶಕ್ತಿ ಅಪ್ರಯೋಜಕವಾದದ್ದು. ಯಾವುದೇ ಕೆಲಸ ಸಾಧಿಸಲು ನಂಬಿಕೆ ಮತ್ತು ಶಕ್ತಿ ಎರಡೂ ಆವಶ್ಯ*
 - ಸರ್ಧಾರ್ ವಲ್ಲಭಬಾಯಿ ಪಟೇಲ್

✍ *ಜನನ* -ಅಕ್ಟೋಬರ್ 31,1875
✍ *ಹುಟ್ಟು*-ನಾಡಿಯಾದ್, ಗಜರಾತ್,
✍ *ಪ್ರಶಸ್ತಿ*
ಗುಜರಾತಿನ ಜನರಿಂದ ಗೌರವಾರ್ಥ 'ಸರ್ದಾರ್' ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯ' ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ ೧೯೯೧ ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

🌹 *ಹಲವಾರು ಮಹಾನುಭಾವರ ತ್ಯಾಗ ಬಲಿದಾನಗಳ ಮೂಲಕ ಗಳಿಸಿದ ಭಾರತದ ಸ್ವಾತಂತ್ರ್ಯದ ಇತಿಹಾಸ ರೋಚಕವಾದದ್ದು, ದೇಶ ಸ್ವಾತಂತ್ರ್ಯ ಗಳಿಸುವ ನಿಟ್ಟಿನಲ್ಲಿ ಚಳುವಳಿಗೆ ಧುಮುಕಿ ಹೋರಾಟ ನಡೆಸಿದವರು ಅಸಂಖ್ಯಾತ ಮಂದಿ. ಅವರಲ್ಲಿ "ಭಾರತದ ಉಕ್ಕಿನ ಮನುಷ್ಯ" ಎಂದೇ ಕರೆಸಿಕೊಂಡ ವಲ್ಲಭಭಾಯಿ ಪಟೇಲ್ ಕೂಡಾ ಪ್ರಮುಖರು.*

*ಗುಜರಾತ್‌ನ ನಡಿಯಾಡ್ ಗ್ರಾಮದಲ್ಲಿ ಝವೇರ್‌ ಭಾಯಿ ಮತ್ತು ಲಾಡ್‌ಬಾಯಿ ದಂಪತಿಗಳ ಸುಪುತ್ರರಾಗಿ ರೈತರ ಕುಟುಂಬದಲ್ಲಿ ಜನಿಸಿದ ಅವರು, 1917ರಲ್ಲಿ ಗೆಳೆಯರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಹಮದಾಬಾದ್‌ನ ನೈರ್ಮಲ್ಯ ಆಯಕ್ತರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ನಾಗರಿಕ ಸಮಸ್ಯೆಗಳ ಕುರಿತಂತೆ ಬ್ರಿಟಿಷ್ ಅಧಿಕಾರಿಗಳ ಮಧ್ಯೆ ಕೆಲ ಬಾರಿ ವಾಗ್ವಾದ ನಡೆಯುತ್ತಿತ್ತು. ಆದರೆ ವಲ್ಲಭಭಾಯಿಯವರಿಗೆ ರಾಜಕೀಯದಲ್ಲಿ ಇಷ್ಟವಿರಲಿಲ್ಲ. ಚಂಪಾರಣ್ಯದಲ್ಲಿ ಗಾಂಧಿ ನೇತೃತ್ವದಲ್ಲಿ ರೈತರ ಪರವಾಗಿ ಬ್ರಿಟಿಷರ ವಿರುದ್ದ ನಡೆಸಿದ ಹೋರಾಟದಲ್ಲಿ ಜಯ ಸಾಧಿಸಿದ ರೀತಿಯನ್ನು ಕಂಡು ಪ್ರಭಾವಿತರಾದ ವಲ್ಲಭಭಾಯಿ ಪಟೇಲ್, ಸ್ವಾತಂತ್ರ್ಯ ಚಳುವಳಿಗೆ ಧುಮುಕುವುದಾಗಿ ಘೋಷಿಸಿದರು. ಪ್ರಪ್ರಥಮ ಬಾರಿಗೆ 1917ರಲ್ಲಿ ಗುಜರಾತ್‌ನ ಬೋರ್ಸಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಲ್ಲಭಭಾಯಿ ಪಟೇಲರು, ರಾಷ್ಟ್ರಾದ್ಯಂತ ಗಾಂಧೀಜಿಯವರ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂಬ ಮನವಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.*

*'ಕರ ನಿರಾಕರಣೆ' ಆಂದೋಲನದ ಅಂಗವಾಗಿ, ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಖೇಡಾ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ತೆರಿಗೆ ನೀಡುವುದನ್ನು ತಿರಸ್ಕರಿಸುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದರಿಂದ ಕೆಂಡಾಮಂಡಲವಾದ ಸರಕಾರ ಪೊಲೀಸರನ್ನು ಹಲವು ತಂಡಗಳಾಗಿ ರಚಿಸಿ ಗ್ರಾಮಸ್ಥರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿತು. ಸರಕಾರ ಸಾವಿರಾರು ರೈತರನ್ನು ಬಂಧಿಸಿತು. ಇದರಿಂದ ದೇಶಾದ್ಯಂತ ಅನುಕಂಪದ ಅಲೆ ಮೂಡಿ ಬಂದ ಹಿನ್ನೆಲೆಯಲ್ಲಿ ಸರಕಾರ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಚರ್ಚಿಸಲು ನಿರ್ಧರಿಸಿ ರೈತರ ಒಂದು ವರ್ಷದ ತೆರಿಗೆಯನ್ನು ರದ್ದುಗೊಳಿಸಿತು. ಈ ಘಟನೆಯಿಂದಾಗಿ ಗುಜರಾತ್‌ನಾದ್ಯಂತ ವಲ್ಲಭಭಾಯಿ ಪಟೇಲ್ ಹೀರೋ ಆಗಿ ಕಂಗೊಳಿಸಿ ದೇಶದೆಲ್ಲೆಡೆ ಹೆಸರುವಾಸಿಯಾದರು.*


*ಗಾಂಧೀಜಿಯವರ ಅಸಹಕಾರ ಚಳವಳಿಯನ್ನು ಬೆಂಬಲಿಸಿದ ಪಟೇಲ್ 3 ಲಕ್ಷ ಕಾರ್ಯಕರ್ತರ ಪಡೆಯನ್ನು ಸಿದ್ಧಗೊಳಿಸಿ 1.5 ಮಿಲಿಯನ್ ಹಣವನ್ನು ಸಂಗ್ರಹಿಸಿದರು. ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿ ತಾವು ಸ್ವತಃ ಖಾದಿ ಬಟ್ಟೆಗೆ ಮಾರು ಹೋದರು.*

*1923ರಲ್ಲಿ ಗಾಂಧೀಜಿಯವರು ಕಾರಾಗೃಹದಲ್ಲಿದ್ದಾಗ ನಾಗ್‌ಪುರದಲ್ಲಿ ನಡೆಯುವ ಸತ್ಯಾಗ್ರಹದ ಮುಖಂಡತ್ವವನ್ನು ವಹಿಸುವಂತೆ ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು. ಸಾವಿರಾರು ಬೆಂಬಲಿಗರ ಪಡೆಯನ್ನು ರಚಿಸಿ ಹೋರಾಟಕ್ಕಿಳಿದ ವಲ್ಲಭಭಾಯಿ ಪಟೇಲ್ ಬ್ರಿಟಿಷರ ನಿದ್ದೆಗೆಡಿಸಿದರು.*

*1937ರಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್‌ರನ್ನು ಸಂಸದೀಯ ಉಪಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆ ಅವರ ಮೇಲೆ ಬಿದ್ದಿತು. ಸರ್ದಾರ್ ಪಟೇಲ್‌ರ ಶ್ರಮ ಹಾಗೂ ದೂರದೃಷ್ಟಿಯಿಂದಾಗಿ ಕಾಂಗ್ರೆಸ್ ಬಲಿಷ್ಠವಾಗುತ್ತಾ ಸಾಗಿತು.*

*1942ರ ಅಗಸ್ಟ್ 8 ರಂದು 'ಕ್ವಿಟ್ ಇಂಡಿಯಾ' ಮಸೂದೆಯನ್ನು ಜಾರಿಗೊಳಿಸಲಾಯಿತು. ಈ ಹೋರಾಟದಲ್ಲಿ ಬ್ರಿಟನ್ ಸರಕಾರವು ಸರ್ದಾರ್ ಪಟೇಲ್, ಜವಾಹರ್ ಲಾಲ್ ನೆಹರು, ಗಾಂಧೀಜಿ ಮತ್ತಿತರ ಕಾಂಗ್ರೆಸ್ ನಾಯಕರನ್ನು ಬಂಧಿಸಿತು.*

*1946ರ ಮಾರ್ಚ್ 23ರಂದು ಬ್ರಿಟನ್‌ನ ಲೇಬರ್ ಪಕ್ಷದ ಪ್ರಧಾನ ಮಂತ್ರಿ ಭಾರತಕ್ಕೆ ಭೇಟಿ ನೀಡಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಭರವಸೆಯನ್ನು ನೀಡಿದರು. ಮಧ್ಯಂತರ ಸರಕಾರ ರಚಿಸಲು ಚುನಾವಣೆಗಳು ನಡೆದು ಕಾಂಗ್ರೆಸ್ ಪರಿಪೂರ್ಣ ಬಹುಮತ ಪಡೆದು ಜವಾಹರಲಾಲ್ ನೆಹರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಹಾಗೂ ವಾರ್ತಾ ಮತ್ತು ಮಾಹಿತಿ ಖಾತೆ ಸಚಿವರಾಗಿ ಪಟೇಲ್ ಕಾರ್ಯನಿರ್ವಹಿಸಿದರು. ಪಾಕಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಿಸಿದ ನಂತರ ಅಗಸ್ಟ್ 15, 1947 ರಂದು ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರೆಯಿತು.*

*ಸರ್ದಾರ್ ಪಟೇಲ್‌ ಗೃಹ ಹಾಗೂ ವಾರ್ತಾ - ಮಾಹಿತಿ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಕೋಮುವಾದಿಗಳು ಹಾಗೂ ದೇಶದ್ರೋಹಿಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದಾಗ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಸೆರೆಮನೆಗೆ ಅಟ್ಟಿದರು. ಹತ್ತು ಸಾವಿರ ಸಂಖ್ಯೆಯಲ್ಲಿರುವ ಮುಸ್ಲಿಮರು ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿದಾಗ ಸೇನೆಯನ್ನು ಬಳಸಿ ದೊಂಬಿಯನ್ನು ಹತ್ತಿಕ್ಕಿದರು. ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾಗಲು ಹೈದ್ರಾಬಾದ್ ನಿಜಾಮ ನಿರಾಕರಿಸಿದ ಹಿನ್ನೆಲೆಯಲ್ಲಿ ಹೈದ್ರಾಬಾದ್‌ಗೆ ಸೇನೆಯನ್ನು ನುಗ್ಗಿಸಿ ಒಂದೇ ರಾತ್ರಿಯಲ್ಲಿ ಯಾವುದೇ ಹಿಂಸಾಚಾರವಿಲ್ಲದೇ ನಿಜಾಮರು ಶರಣಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.*

*ರಾಷ್ಟ್ರ ನಿರ್ಮಾಣಕ್ಕಾಗಿ ಭಾರತೀಯ ಅಡಳಿತಾತ್ಮಕ ಸೇವೆ ಹಾಗೂ ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳನ್ನು ಆರಂಭಿಸಿ ಉಕ್ಕಿನ ಮನುಷ್ಯರೆಂದು ಖ್ಯಾತಿಪಡೆದ ಸರ್ದಾರ್ ವಲ್ಲಭಭಾಯಿ ಪಟೇಲರು 1950ರಲ್ಲಿ ನಿಧನ ಹೊಂದಿದರು. ಆದರೆ ಅವರ ಧೈರ್ಯ ಸಾಹಸಗಳು ಜನಮಾನಸದಲ್ಲಿ ಇನ್ನೂ ಚಿರಸ್ಥಾಯಿಯಾಗಿ ಉಳಿದಿದೆ*
ರಾಷ್ಟ್ರದ ಹೆಮ್ಮೆಯ ಪುತ್ರ 🙏🙏🙏🙏🙏🙏🙏🙏🙏🙏🙏🙏

ಸೇವಾಲಾಲ್


🌸ಶ್ರೀ ಸೇವಾ  ಲಾಲ್🌸

👉 ಸೇವಾಭಾಯ,ಸೇವಲಾಲ್ ಎಂಬ ನಾಮಾದೊಂದಿಗೆ ಬಡ ಬಂಜಾರರ ಅಜ್ಞಾನ ದೂರ ಮಾಡಲು ಫೆಬ್ರವರಿ 15 .1739 ರಲ್ಲಿ ಶ್ರೀ ಭೀಮ ನಾಯ್ಕ ಶ್ರೀಮತಿ ಧರ್ಮಿಣಿ ಮಾತೆ ಎಂಬ ದಂಪತಿಯ ಉದರದಲ್ಲಿ ಕರ್ನಾಟಕದ ಈಗಿನ ದಾವಣಗೆರೆ ಜಿಲ್ಲೆಯ  ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೋಪ್ಪ(ಭಾಯಗಡ್, ಸೂರ ಖಂಡ್) ಎಂಬಲ್ಲಿ ಈ ದೈವ ಪುರುಷನ ಜನನವಾಯಿತು.

👉 ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರರು.ಸಾವಿರಾರು ವರ್ಷಗಳಿಂದ ಗ್ರಾಮ,ನಗರ ಜೀವನಗಳಿಂದ ದೂರವಿದ್ದು,ಅಜ್ಞಾನ,ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಇವರಿಗೆ ಶ್ರೀ ಸೇವಾ ಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೇಟ್ಟಿಲಾಯಿತು.

👉 ಬಂಜಾರರು ಈ ದೈವ ಪುರುಷನನ್ನು "ಮೋತಿವಾಳೋ" "ಲಾಲ್ ಮೋತಿ" ಎಂದು ಕರೆಯುತ್ತರೆ.

👉 ಕಾರಣ ಮುಂಬಯಿಯ "ಸ್ಮಿತ್ ಭಾವುಚಾ" ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿ ಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದ ವೀರರಾಗಿದ್ದರು.ಅದರ ಪ್ರತಿಯಾಗಿ ಪೋರ್ಚುಗೀಸರು ಇವನಿಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು.ಅದಕ್ಕಾಗಿ ಇತನನ್ನು ಮೋತಿವಾಳೋ ಎಂದು ಕರೆಯುತ್ತರೆ.

👉  ಬುದ್ಧ,ಬಸವ,ಕಬೀರ,ಗುರು ನಾನಕ್ ,ಮುಂತಾದ ಧಾರ್ಮಿಕ ಮಾನವತವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತ ದನಗಾಹಿ ಗೋಪಾಲನಾಗಿದ್ದ ಸೇವಾಲಾಲ್ ತಮ್ಮ ಜೀವನನುಭವದ ಮೂಲಕ ಗೌರಯುತ ಮಾತುಗಳಲ್ಲಿ ಸತ್ಯ,ಅಹಿಂಸಾ ಮಾರ್ಗಗಳನ್ನು ಪ್ರಕಾಶಗೋಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು.ಒಂದು ಸಹೋದರತ್ವದ,ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು.

👉 ಇಂತ ಮಾನವತಾವಾದಿಯ ಜನನದ ಮತ್ತು ಜೀವನ ಮೌಲ್ಯಗಳು  ಇಂದು ತಾಂಡಗಳಲ್ಲಿ ಜನ ಜನಿತವಾಗಿವೆ.

👉 ಹಲವಾರು ಅಜ್ಞಾನಗಳು,ಮೌಢ್ಯತೆಯ ಪರಾಕಾಷ್ಟೆ ತಲುಪಿ ಅಂಧಕಾರಲ್ಲಿ ಮುಳಗಿರುವ ಸಂದರ್ಭದಲ್ಲಿ ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಸೇವಾಲಾಲ್ ರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿವೆ.

🌺 ನುಡಿಗಳು,ತತ್ವಗಳು💐


*  ಸೇನ ಸಾಯಿ ವೇಸ್
   ಜೀವ ಜನಗಾನಿನ ಸಾಯಿವೇಸ್
ಖೂಂಟಾ ಮುಂಗ್ರಿನ್ ಸಾಯಿ ವೇಸ್
ಕೊರೆ - ಗೋರೂನ ಸಾಯಿವೇಸ್.
ಕೀಡಾ ಮಕೋಡಾನ ಸಾಯಿವೇಸ್.

ಅರ್ಥ : ಮನುಷ್ಯನಿಗೆ ಮಾತ್ರವಲ್ಲದೆ ಜೀವ
 ಜಂತುಗಳಿಗೆ ಕ್ರೀಮಿ ಕೀಟಗಳಿಗೆ ಒಳ್ಳೆದಾಗಲಿ.ಎಂದು( ಇಲ್ಲಿ ತನ್ನ ಸ್ವರ್ಥಕ್ಕಿಂತ ಇಡಿ ಭೂಮಿಗೆ ಒಳ್ಳೆಯದನ್ನು ಬಯಸುತ್ತರೆ)

* "ಧನ್ ಧಾನೇತಿ ಧಪಾಡೇಸ್"

ಅರ್ಥ : ಧರ್ಮದ ವ್ಯಾಖ್ಯಾನು ಮಾಡುತ್ತ ಸತ್ಯ, ಅಹಿಂಸೆ,ದಯೆ,ಕರುಣೆ,ಪ್ರಜ್ಞೆಗಳನ್ನು ಪವಿತ್ರವೆಂದು ಒಪ್ಪಿಕೊಂಡು ಯಾರು ಕರ್ತವ್ಯವನ್ನು ಮಾಡುತ್ತಾರೋ ಅವರೇ ಧರ್ಮಿಗಳು,ಆದ್ದರಿಂದ ' ಪ್ರಕೃತಿಯೆ ಧರ್ಮ' ಎಂದು ಸಾರಿದರೂ.

* " ಬೋಲಜೋ ಮತ್ತ್ ಲುಚಿ(ಲಾಟಿ) ಲಬಾಡಿ"

ಅರ್ಥ : ಸುಳ್ಳನ್ನು ಯಾರು ನುಡಿಯ ಬಾರದು. ಎಂದು ಹೇಳಿದರು.ಸತ್ಯ ನುಡಿಯಿರಿ ಎಂದು ಜಗತ್ತಿಗೆ ಸಾರಿದರೂ.

* "ಮತ ಲೋ ಜೀವ
    ಕಾಡೋ ಮತ್ ಕೋಯಿ ಲೋಯಿ"

ಅರ್ಥ : ಯಾವುದೇ ಜೀವಿಯನ್ನು ಕೋಲ್ಲಬೇಡ,ಅದರ ರಕ್ತವನ್ನು ತೆಗೆಯಬೇಡ. (ಅಹಿಂಸೆ ಯನ್ನು ಪ್ರತಿಪಾದಿಸಿದರೂ)

*  ಚೋರಿ ಮತ್ತ್ ಕರೋ
   ಕರಿಯೇ ಚೋರಿ ಖಾಂಯೆ ಕೋರಿ
    ಹಾತೆ ಮಾಯಿ ಹತಕಡಿ,ಪಗಮಾಯಿ ಬೇಡಿ
ಡೋರಿ ಡೋರಿ ಹಿಂಡಿಯೇ.....,

ಅರ್ಥ : ಕಳ್ಳತನ ಮಾಡಬೇಡಿ,ಕಳ್ಳತನ ಮಾಡುವವರನ್ನು ಬೇಡಿ ಹಾಕಿ ಓಡಾಡಿಸುತ್ತರೆ.

* " ದಾರೂ,ಗಾಂಜಾ ಮತ್ ಪೀವೋ"

ಅರ್ಥ : ವ್ಯಸನ ಮುಕ್ತರಾಗಿ.

* "ಜೋರ್ ಜುಲೂಮ್
ಗೋರ್ ಗರೀಬ ದಾಂಡನ್ ಖಾಯೇ
ವೋರಿ ಸಾತ್ ಪೀಡೀ ಪರ ದಾಗ್ ಲಗ ಜಾಯೆ
ವಂಶ ಪರ ದೀವೋ ಕೋನಿ ರೀಯೇ.

ಅರ್ಥ : ಬಡವರಿಗೆ ಎಂದು ದಂಡ ಹಾಕಬೇಡಿ .

* ಕಾಮಾ ಕ್ರೋಧೇರಿ ಧೂಣಿ ಬಾಳೋ,ಸತ್ಯ ಧರ್ಮೆನ ಆಂಗ ಚಲಾಯೋ
ಭೂಕ ಜೇನ ಅನ್ನ ಖರಾಯೋ,ತರಸ ಜೇನ ಪಾಣಿ ಪರಾಯೋ.

ಅರ್ಥ :  ತಮ್ಮ ಜೀವನದಲ್ಲಿ ಅರಿಷಡ್ ವರ್ಗಗಳನ್ನು ಸುಟ್ಟು  ಹಾಕಿ.ಸತ್ಯ ಧರ್ಮವನ್ನು ಮುನ್ನೆಡೆಸಿ.
ಹಸಿದವರಿಗೆ ಅನ್ನ ನೀಡಿ.ಬಾಯಾರಿದವರಿಗೆ ಜಲ ಪ್ರಾಪ್ತಿಮಾಡಿ.

* ದಕ್ಯಾರೋ ದಕ್ ಕಾಡ್,ಪಾಪೀರ ಛಾತ್ತೀಪರ ಲಾತ್ ಮಾರ್.
ಸೂತೇರ ಸಪನೇಮ,ಬೇಟೇರ ಹರದೇಮ.
ಸೋನಾವಳಿ ಛಾಂಯ್ ರಕಾಡ್
ಅರಕತೇಮ ಬರಕತ್ ಕರ್.

ಅರ್ಥ : ದುಃಖದಲ್ಲಿರುವವರನ್ನು ಕಾಪಾಡು,ಪಾಪಿಗಳನ್ನು ನಾಶಪಡಿಸು .

ಈ ಮೇಲಿನ ತತ್ವಗಳನ್ನು ಲೋಕಕ್ಕೆ ಸಾರಿದ ಮಹಾರಾಜರ    279 ನೇ( ಜಯಂತಿ) ಆಚರಣೆಯನ್ನು ಇಂದು ರಾಜ್ಯದಾದ್ಯಂತ ಆಚರಿಸುತ್ತಿದ್ದೆವೆ. ಆದರೆ ಎಲ್ಲಿಯವರೆಗೂ ನಾವು ಇವರ ತತ್ವಗಳನ್ನು ನಮ್ಮ ತನು ಮನದಲ್ಲಿ ಆಳವಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗ ಇಂತಹ ದೈವಪುರುಷರ ಜಯಂತಿಗಳಿಗೆ ನಿಜವಾದ ಅರ್ಥ ಬರುವುದಿಲ್ಲ.

     *ಜೈ ಸೇವಾಲಾಲ್*

ದಿನಾಚರಣೆಗಳು

ದಿನಾಚರಣೆಗಳು

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು