ಶಿಕ್ಷಣವೇ ಶಕ್ತಿ

Sunday 3 January 2021

ವಿಶ್ವದ ಪ್ರಮುಖ ಭಾಷೆಗಳು

ಪ್ರಪಂಚದ ಪ್ರಮುಖ ಭಾಷೆಗಳು

ADD ARTICLE DESCRIPTION


ಇದು ಪ್ರಪಂಚದ ಪ್ರಮುಖ ಭಾಷೆಗಳ ಪಟ್ಟಿ. ಅಂದಾಜಿತ ಮಾತುಗಾರರ ಸಂಖ್ಯೆ ಕೇವಲ ಮಾತೃಭಾಷೆಯಾಗಿ ಬಳಸುವವರ ಸಂಖ್ಯೆಗಳು.

ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳ ವಿಸ್ತಾರ

೬೦ ಮಿಲಿಯನ್ ಗಿಂತ ಹೆಚ್ಚು

೧. ವಿಶ್ವದಲ್ಲಿ ೬೦ ಮಿಲಿಯನ್ ಗಿಂತ ಹೆಚ್ಚಿಗೆ ಜನರಿಂದ ನುಡಿಯಲ್ಪಡುವ ಭಾಷೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

More information: ಕ್ರ.ಸಂ., ಭಾಷೆ ...
ಕ್ರ.ಸಂ.ಭಾಷೆಭಾಷೆಯ ಕುಟುಂಬಎಥ್ನೋಲಾಗ್ ಅಂದಾಜುಎನ್ಕಾರ್ಟಾ ಅಂದಾಜು
1ಮ್ಯಾಂಡರಿನ್ಸಿನೋ-ಟಿಬೆಟಿಯನ್ಚೈನೀಸ್873 ಮಿಲಿಯನ್
2ಸ್ಪ್ಯಾನಿಷ್ಇಂಡೋ-ಯುರೋಪಿಯನ್ಇಟಾಲಿಕ್ರೊಮಾನ್ಸ್322 ಮಿಲಿಯನ್322 ಮಿಲಿಯನ್
3ಇಂಗ್ಲಿಷ್ಇಂಡೋ-ಯುರೋಪಿಯನ್, ಜರ್ಮ್ಯಾನಿಕ್ (ಪಶ್ಚಿಮ)309 ಮಿಲಿಯನ್341 ಮಿಲಿಯನ್
4ಅರಾಬಿಕ್ಆಫ್ರೋ-ಏಷ್ಯಾಟಿಕ್ಸೆಮೆಟಿಕ್206 ಮಿಲಿಯನ್422 ಮಿಲಿಯನ್
5ಹಿಂದಿಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್ಇಂಡೋ-ಆರ್ಯನ್181 ಮಿಲಿಯನ್ (ಖಡಿಬೋಲಿ ಉಪಭಾಷೆ)366 ಮಿಲಿಯನ್
6ಪೋರ್ಚುಗೀಸ್ಇಂಡೋ-ಯುರೋಪಿಯನ್, ಇಟಾಲಿಕ್, ರೊಮಾನ್ಸ್177.5 ಮಿಲಿಯನ್176 ಮಿಲಿಯನ್
7ಬೆಂಗಾಲಿಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್171 ಮಿಲಿಯನ್207 ಮಿಲಿಯನ್
8ರಷ್ಯನ್ಇಂಡೋ-ಯುರೋಪಿಯನ್, ಸ್ಲಾವಿಕ್ (ಪೂರ್ವ)145 ಮಿಲಿಯನ್167 ಮಿಲಿಯನ್
9ಜಪಾನೀಸ್ಜಾಪನೀಸ್-ರ್ಯುಕ್ಯುವಾನ್122 ಮಿಲಿಯನ್125 ಮಿಲಿಯನ್
10ಜರ್ಮನ್ಇಂಡೋ-ಯುರೋಪಿಯನ್, ಸ್ಲಾವಿಕ್ (ಪಶ್ಚಿಮ)95.4 ಮಿಲಿಯನ್100.1 ಮಿಲಿಯನ್
11ಜಾವಾನೀಸ್ಆಸ್ಟ್ರೋನೇಷ್ಯನ್ಮಲಯೋ-ಪಾಲಿನೇಶ್ಯನ್ಸುಂಡಾ-ಸುಲವೇಸಿ75.5 ಮಿಲಿಯನ್75.6 ಮಿಲಿಯನ್
12ವೂಸಿನೋ-ಟಿಬೆಟಿಯನ್, ಚೈನೀಸ್77.2 ಮಿಲಿಯನ್
13ತೆಲುಗುದ್ರಾವಿಡ (ದಕ್ಷಿಣ ಮಧ್ಯ)69.7 ಮಿಲಿಯನ್69.7 ಮಿಲಿಯನ್
14ಫ್ರೆಂಚ್ಇಂಡೋ-ಯುರೋಪಿಯನ್, ಇಟಾಲಕ್, ರೊಮಾನ್ಸ್70 ಮಿಲಿಯನ್78 ಮಿಲಿಯನ್
15ಮರಾಠಿಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್68 ಮಿಲಿಯನ್68 ಮಿಲಿಯನ್
16ವಿಯೆಟ್ನಮೀಸ್ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳುಮೋನ್-ಖ್ಮೇರ್ವಿಯೆಟಿಕ್67.4 ಮಿಲಿಯನ್68 ಮಿಲಿಯನ್
17ಕೊರಿಯನ್ಆಲ್ಟೈಕ್67 ಮಿಲಿಯನ್78 ಮಿಲಿಯನ್
18ತಮಿಳುದ್ರಾವಿಡ (ದಕ್ಷಿಣ)66 ಮಿಲಿಯನ್66 ಮಿಲಿಯನ್
19ಇಟಾಲಿಯನ್ಇಂಡೋ-ಯುರೋಪಿಯನ್, ಇಟಾಲಿಕ್, ರೊಮಾನ್ಸ್61.5 ಮಿಲಿಯನ್62 ಮಿಲಿಯನ್
20ಪಂಜಾಬಿಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ಪಶ್ಚಿಮ ಪಂಜಾಬಿ: 60.8 ಮಿಲಿಯನ್57 ಮಿಲಿಯನ್
ಪೂರ್ವ ಪಂಜಾಬಿ: 28 ಮಿಲಿಯನ್
21ಉರ್ದುಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್60.5 ಮಿಲಿಯನ್60.3 ಮಿಲಿಯನ್
Close

೩೦ಮಿಲಿಯನ್ ದಿಂದ ೬೦ಮಿಲಿಯನ್

೨. ೩೦ ಮಿಲಿಯನ್ ದಿಂದ ೬೦ ಮಿಲಿಯನ್ ದಷ್ಟು ಜನರಿಂದ ನುಡಿಯಲ್ಪಡುವ ಭಾಷೆಗಳ ಪಟ್ಟಿ ಇಂತಿದೆ.

More information: ಕ್ರ.ಸಂ., ಭಾಷೆ ...
ಕ್ರ.ಸಂ.ಭಾಷೆಭಾಷೆಯ ಕುಟುಂಬಎಥ್ನೋಲಾಗ್ ಅಂದಾಜು(2005)ಎನ್ ಕಾರ್ಟಾ ಅಂದಾಜು
1ಕ್ಯಾಂಟನೀಸ್ಸಿನೊ-ಟಿಬೆಟನ್ , ಚೈನೀಸ್54.8 ಮಿಲಿಯನ್
2ಟರ್ಕಿಶ್ಆಲ್ಟೈಕ್ , ಟರ್ಕಿಕ್ , ಒಘುಝ್50.6 ಮಿಲಿಯನ್61 ಮಿಲಿಯನ್
3ಮಿನ್ಸಿನೊ-ಟಿಬೆಟನ್ , ಚೈನೀಸ್46.2 ಮಿಲಿಯನ್
4ಗುಜರಾತಿಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್46.1 ಮಿಲಿಯನ್46.1 ಮಿಲಿಯನ್
5ಮೈಥಿಲಿಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್45 ಮಿಲಿಯನ್ಹಿಂದಿ ಭಾಷೆಯಡಿ ಸೇರಿಸಲಾಗಿದೆ.
6ಪೋಲಿಶ್ಇಂಡೋ-ಯುರೋಪಿಯನ್ , ಸ್ಲಾವಿಕ್ , ಪಶ್ಚಿಮ42.7 ಮಿಲಿಯನ್52 ಮಿಲಿಯನ್
7ಉಕ್ರೇನಿಯನ್ಇಂಡೋ-ಯುರೋಪಿಯನ್ , ಸ್ಲಾವಿಕ್ , ಪೂರ್ವ39.4 ಮಿಲಿಯನ್47 ಮಿಲಿಯನ್
8ಪರ್ಶಿಯನ್ಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇರಾನಿಯನ್39.4 ಮಿಲಿಯನ್31.3 ಮಿಲಿಯನ್
9ಮಲಯಾಳಮ್ದ್ರಾವಿಡ (ದಕ್ಷಿಣ)35.8 ಮಿಲಿಯನ್35.7 ಮಿಲಿಯನ್
10ಕನ್ನಡದ್ರಾವಿಡ (ದಕ್ಷಿಣ)60.10 ಮಿಲಿಯನ್60.10 ಮಿಲಿಯನ್
11ಅಜರ್ಬೈಜಾನಿಆಲ್ಟೈಕ್ , ಟರ್ಕಿಕ್ , ಒಘುಝ್31.0 ಮಿಲಿಯನ್31.4 ಮಿಲಿಯನ್
12ಒರಿಯಾಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್31.7 ಮಿಲಿಯನ್32.3 ಮಿಲಿಯನ್
13ಹಕ್ಕಾಸಿನೊ-ಟಿಬೆಟನ್ , ಚೈನೀಸ್29.9 ಮಿಲಿಯನ್
14ಭೋಜ್ ಪುರಿಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್26 ಮಿಲಿಯನ್ಹಿಂದಿ ಭಾಷೆಯಡಿ ಸೇರಿಸಲಾಗಿದೆ.
15ಬರ್ಮೀಸ್ಸಿನೊ-ಟಿಬೆಟನ್ , ಟಿಬೆಟೊ-ಬರ್ಮನ್ , ಲೋಲೋ-ಬರ್ಮೀಸ್22 ಮಿಲಿಯನ್ (1996)32.3 ಮಿಲಿಯನ್ (2006)
16ಥಾಯ್ಟಾಯ್-ಕಡಾಯ್ , ಕಾಮ್-ಟಾಯ್ , ಬೆ-ಟಾಯ್ , ಟಾಯ್-ಸೆಕ್ , ಟಾಯ್20.05 ಮಿಲಿಯನ್ (1996)46.1 ಮಿಲಿಯನ್ (2006)
Close

೧೦ ಮಿಲಿಯನ್ ದಿಂದ ೩೦ ಮಿಲಿಯನ್

೩. ೧೦ ಮಿಲಿಯನ್ ದಿಂದ ೩೦ ಮಿಲಿಯನ್ ದಷ್ಟು ಜನರಿಂದ (ಮಾತೃಭಾಷೆಯಾಗಿ ಯಾ ದ್ವಿತೀಯ ಭಾಷೆಯಾಗಿ)ನುಡಿಯಲ್ಪಡುವ ಭಾಷೆಗಳ ಪಟ್ಟಿ ಇಂತಿದೆ.


More information: ಕ್ರ.ಸಂ., ಭಾಷೆ ...
ಕ್ರ.ಸಂ.ಭಾಷೆಭಾಷೆಯ ಕುಟುಂಬಎಸ್.ಐ.ಎಲ್. ಅಂದಾಜುಬೇರೊಂದು ಅಂದಾಜು
1ಅಮ್ಹಾರಿಕ್ಆಫ್ರೋ-ಏಷ್ಯಾಟಿಕ್, ಸೆಮಿಟಿಕ್,ದಕ್ಷಿಣ17.4 ಮಿಲಿಯನ್ (2006)34 ಮಿಲಿಯನ್
2ಸುಂಡನೀಸ್ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಸುಂಡಾ-ಸುಲವೇಸಿ27 ಮಿಲಿಯನ್ (2006)27 ಮಿಲಿಯನ್ (1990)
3ರೊಮಾನಿಯನ್ಇಂಡೋ-ಯುರೋಪಿಯನ್, ಇಟಾಲಿಕ್,ರೊಮಾನ್ಸ್26.3 ಮಿಲಿಯನ್ (2006)30 ಮಿಲಿಯನ್
4ಕುರ್ದಿಶ್ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇರಾನಿಯನ್, ಪಶ್ಚಿಮ,ವಾಯವ್ಯ16 ಮಿಲಿಯನ್ (all varieties)~31,417,000
5ಡಚ್ಇಂಡೋ-ಯುರೋಪಿಯನ್, ಜರ್ಮ್ಯಾನಿಕ್,ಪಶ್ಚಿಮ20 ಮಿಲಿಯನ್ (2006)25 ಮಿಲಿಯನ್
6ಪಶ್ತೋಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇರಾನಿಯನ್, ಪೌರ್ವಾತ್ಯ22.8 ಮಿಲಿಯನ್ (2006)21–25 ಮಿಲಿಯನ್
7ಹೌಸಾಆಫ್ರೋ-ಏಷ್ಯಾಟಿಕ್, ಚಾಡಿಕ್,ಪಶ್ಚಿಮ24.2 ಮಿಲಿಯನ್ (2006)40 ಮಿಲಿಯನ್
8ಇಂಡೋನೇಷ್ಯನ್ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್17.1 ಮಿಲಿಯನ್140 ಮಿಲಿಯನ್
9ಒರೊಮೋಆಫ್ರೋ-ಏಷ್ಯಾಟಿಕ್, ಕುಶಿಟಿಕ್,ಪೂರ್ವ ಕುಶಿಟಿಕ್17.2 ಮಿಲಿಯನ್ (2006)26 ಮಿಲಿಯನ್ (1998)
10ಟಗಲಾಗ್ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಬೋರ್ನಿಯೋ-ಫಿಲಿಪ್ಪೀನ್ಸ್17 ಮಿಲಿಯನ್ (2006)85 ಮಿಲಿಯನ್
11ಸೆರ್ಬೋ-ಕ್ರೊವೇಶಿಯನ್ಇಂಡೋ-ಯುರೋಪಿಯನ್, ಸ್ಲಾವಿಕ್,ದಕ್ಷಿಣ21.1 ಮಿಲಿಯನ್ (2006)17 ಮಿಲಿಯನ್
12ಉಝ್ಬೆಕ್ಆಲ್ಟೈಕ್,ಟರ್ಕಿಕ್,ಪೌರ್ವಾತ್ಯ20.1 ಮಿಲಿಯನ್ (2006)20 ಮಿಲಿಯನ್ (1995)
13ಸಿಂಧಿಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್24.5 ಮಿಲಿಯನ್ (2006)30 ಮಿಲಿಯನ್ (2001)
14ಯೊರೂಬಾನೈಜರ್-ಕಾಂಗೋ, ಬೆನ್ಯು-ಕಾಂಗೋ, ಡಿಫೋಯ್ಡ್,ಯೋರುಬೋಯ್ಡ್20 ಮಿಲಿಯನ್ (2006)21 ಮಿಲಿಯನ್(1993)
15ಸೋಮಾಲಿಆಫ್ರೋ-ಏಷ್ಯಾಟಿಕ್, ಕುಶಿಟಿಕ್,ಪೂರ್ವ9.8 ಮಿಲಿಯನ್ (2006)10-16 ಮಿಲಿಯನ್(2004 WCD)
16ಲಾವೊಟಾಯ್-ಕಡಾಲ್,ಕಾಮ್-ಟಾಯ್,ಟಾಯ್3.2 ಮಿಲಿಯನ್ (2006)~19 ಮಿಲಿಯನ್
17ಸೆಬುವಾನೋಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಬೋರ್ನಿಯೋ-ಫಿಲಿಪ್ಪೀನ್ಸ್15 ಮಿಲಿಯನ್ (2006)30 ಮಿಲಿಯನ್(2000 census)
18ಗ್ರೀಕ್ಇಂಡೋ-ಯುರೋಪಿಯನ್, ಗ್ರೀಕ್15 ಮಿಲಿಯನ್ (2007)12 ಮಿಲಿಯನ್ (2004)
19ಮಲಯ್ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಸುಂಡಾ-ಸುಲವೇಸಿ,ಮಲಯಿಕ್23.6 ಮಿಲಿಯನ್ (2006)21 ಮಿಲಿಯನ್
20ಇಗ್ಬೋನೈಜರ್-ಕಾಂಗೋ, ಬೆನ್ಯು-ಕಾಂಗೋ, ಇಗ್ಬೋಯ್ಡ್18 ಮಿಲಿಯನ್ (2006)18 ಮಿಲಿಯನ್ native (1999 WA)
21ಮಲಗಸಿಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಬೋರ್ನಿಯೋ-ಫಿಲಿಪ್ಪೀನ್ಸ್, ಬೆರಿಟೋ10.5 ಮಿಲಿಯನ್ (2006)17 ಮಿಲಿಯನ್
22ನೇಪಾಲಿಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ಸುಮಾರು 30 ಮಿಲಿಯನ್ (2006)40 ಮಿಲಿಯನ್(2006)
23ಅಸ್ಸಾಮೀಸ್ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್15.4 ಮಿಲಿಯನ್ (2006)15 ಮಿಲಿಯನ್ (1997).
24ಶೋನಾನೈಜರ್-ಕಾಂಗೋ, ಬೆನ್ಯು-ಕಾಂಗೋ, ಬಂಟು14 ಮಿಲಿಯನ್ (2006)16–17 ಮಿಲಿಯನ್(2000 A. Chebanne)
25ಖ್ಮೇರ್ಆಸ್ಟ್ರೋ-ಏಷ್ಯಾಟಿಕ್, ಮೊನ್-ಖ್ಮೇರ್,ಖ್ಮೇರ್8 ಮಿಲಿಯನ್ (2006)15 ಮಿಲಿಯನ್(2004)
26ಝುವಾಂಗ್ಟಾಯ್-ಕಡಾಲ್,ಕಾಮ್-ಟಾಯ್,ಟಾಯ್14 ಮಿಲಿಯನ್ (2006)14 ಮಿಲಿಯನ್(1992)
27ಮಡುರೀಸ್ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಸುಂಡಾ-ಸುಲವೇಸಿ13.7 ಮಿಲಿಯನ್ (2006)14 ಮಿಲಿಯನ್ (1995)
28ಹಂಗೇರಿಯನ್ಯೂರಲಿಕ್,ಫಿನ್ನೋ-ಉರ್ಗಿಕ್,ಉರ್ಗಿಕ್14.5 ಮಿಲಿಯನ್ (2006)14 ಮಿಲಿಯನ್ (1995)
29ಸಿಂಹಳೀಸ್ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್13.2 ಮಿಲಿಯನ್ (2006)15 ಮಿಲಿಯನ್ (1993)
30ಫುಲಾನೈಜರ್-ಕಾಂಗೋ, ಅಟ್ಲಾಂಟಿಕ್,ಔತ್ತರೇಯ,ಸೆನೆಗ್ಯಾಂಬಿಯನ್11.4 ಮಿಲಿಯನ್ (2006)~13 ಮಿಲಿಯನ್ (all varieties)
31ಟಮಝೈಟ್ಆಫ್ರೋ-ಏಷ್ಯಾಟಿಕ್, ಬೆರ್ಬೆರ್,ಔತ್ತರೇಯ3.5 ಮಿಲಿಯನ್ (2006)13+ ಮಿಲಿಯನ್ (1998)
32ಝೆಕ್ಇಂಡೋ-ಯುರೋಪಿಯನ್, ಸ್ಲಾವಿಕ್,ಪಶ್ಚಿಮ12 ಮಿಲಿಯನ್ (2006)12 ಮಿಲಿಯನ್ (1990 WA).
Close

ನೋಡಿ

[[ಭಾಷೆ ; ಭಾಷೆಯ ರಚನೆ ; ಭಾಷಾ ವಂಶವೃಕ್ಷ ; ಭಾಷಾ ವಿಜ್ಞಾನ ; ಭಾಷಾವೈಶಿಷ್ಟ್ಯ ; ಭಾಷಾಶಾಸ್ತ್ರ ಚಿಂತನೆಯ ಇತಿಹಾಸ ; ಭಾಷಾ ಪ್ರಯೋಗಾಲಯ ; ಭಾಷಿಕ ಸಾಪೇಕ್ಷತೆ ; ಭಾಷಾಂತರ;ಭಾಷಾ ಕುಟುಂಬಗಳ ಪಟ್ಟಿ

ಸಂಗ್ರಹ ✍️T.A.ಚಂದ್ರಶೇಖರ


ವಿಶ್ವದ ಅದ್ಭುತಗಳು

ವಿಶ್ವದ ಅದ್ಭುತಗಳು

ADD ARTICLE DESCRIPTION


ವಿಶ್ವದಲ್ಲಿಯ ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. ಪ್ರಾಚೀನ ವಿಶ್ವದ ಏಳು ಅದ್ಭುತಗಳು ಈ ರೀತಿಯ ಪಟ್ಟಿ ಗಳಲ್ಲಿ ಮೊದಲನೆಯದು. ಈ ಪಟ್ಟಿಯಲ್ಲಿ ಮಾನವನಿರ್ಮಿತ ಉತ್ಕೃಷ್ಟ ಪ್ರಾಚೀನಾವಶೇಷಗಳನ್ನು ಹೆಲೆನಿಕ್ ಸ್ಥಳ ವೀಕ್ಷಕರ ಮಾಹಿತಿ ಗ್ರಂಥದಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪಟ್ಟಿ ಮಾಡಿದವುಗಳೆಲ್ಲ ಮೆಡಿಟರೇನಿಯನ್ ಭಾಗದಲ್ಲಿರುವವುಗಳಾಗಿವೆ. ಸಂಖ್ಯೆ 7 ಪರಿಪೂರ್ಣತೆ ಮತ್ತು ಅಧಿಕ್ಯವನ್ನು ಪ್ರತಿನಿಧಿಸುತ್ತದೆ ಎಂದು ಗ್ರೀಕರ ನಂಬಿಕೆಯಿರುವುದರಿಂದ ಈ ಸಂಖ್ಯೆಯನ್ನು ಅಯ್ಕೆಮಾಡಿಕೊಳ್ಳಲಾಗಿದೆ. ಮಧ್ಯಯುಗ ಮತ್ತು ಆಧುನಿಕ ಯುಗದ ಅದ್ಭುತಗಳ ಪಟ್ಟಿಯ ಜೊತೆಗೆ ಇದೇ ರೀತಿಯ ಇನ್ನೂ ಹಲವಾರು ಪಟ್ಟಿಗಳನ್ನು ಮಾಡಲಾಗಿದೆ.

ಪ್ರಾಚೀನ ವಿಶ್ವದ ಏಳು ಅದ್ಭುತಗಳು

ಗೀಜಾದ ಮಹಾ ಪಿರಾಮಿಡ್, ಇಂದಿಗೂ ಅಸ್ಥಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ಜಗತ್ತಿನ ಅದ್ಬುತ
ರೋಮ್‌ನ ಕೊಲೊಸಿಯಮ್
ಚೀನಾದ ಮಹಾ ಗೋಡೆ
ಹಾಗಿಯಾ ಸೋಪಿಯ
ತಾಜ್‌ ಮಹಲ್‌
ಗೋಲ್ಡನ್ ಗೇಟ್ ಸೇತುವೆ
ಚಿತ್ರ:Chichen.JPG
ಚಿಚೆನ್ ಇಟ್ಜಾ
ಜೆರುಸಲೆಮ್ ನ ಪ್ರಾಚೀನ ನಗರ
ದಿ ಅರೋರಾ ಬೋರಿಯಾಲಿಸ್ ಅಥವಾ ನಾರ್ದನ್ ಲೈಟ್ಸ್‌
ಗ್ರ್ಯಾಂಡ್‌ ಕೆನನ್
ಗ್ರೇಟ್ ಬ್ಯಾರಿಯರ್ ರೀಫ್
ಲಂಡನ್ ಒಳಚರಂಡಿ ವ್ಯವಸ್ಥೆಯ ಮೂಲ ಅಬ್ಬೆ ಮಿಲ್ಸ್‌ ಪಂಪಿಂಗ್‌ ಸ್ಟೇಷನ್‌
ಮಾಚು ಪಿಕು

ಇತಿಹಾಸ ತಜ್ಞ ಹೆರೋಡೋಟಸ್ (484 BC–ca. 425 BC)ಮತ್ತು ಅಲೆಗ್ಸಾಂಡ್ರಿಯಾ ವಸ್ತು ಸಂಗ್ರಹಾಲಯದಲ್ಲಿದ್ದ ಸೈರೆನ್ನ ವಿದ್ವಾಂಸ ಕ್ಯಾಲಿಮ್ಯಾಕಸ್, ಏಳು ಅದ್ಭುತಗಳ ಪಟ್ಟಿಯನ್ನು ಮುಂಚಿತವಾಗಿಯೇ ರಚಿಸಿದ್ದರೂ ಉಲ್ಲೇಖ ಹೊರತುಪಡಿಸಿ ಅವನ ಬರವಣಿಗೆ ಅಸ್ತಿತ್ವದಲ್ಲಿ ಉಳಿಯಲಿಲ್ಲ. ಪ್ರಾಚೀನ ಜಗತ್ತಿನ ಏಳು ಅದ್ಭುತಗಳು ಈ ರೀತಿ ಇವೆ:

  • ೧.ಗೀಜಾದ ಮಹಾ ಪಿರಾಮಿಡ್
  • ೨.ಬ್ಯಾಬಿಲೊನ್‌ನ ತೂಗು ಉದ್ಯಾನ
  • ೩.ಒಲಿಂಪಿಯಾದ ಜೂಸ್‌ನ ಪ್ರತಿಮೆ
  • ೪.ಎಫೆಸಿಸ್ ನಲ್ಲಿರುವ ಆರ್ತೆಮಿಸ್ ದೇವಾಲಯ
  • ೫.ಹ್ಯಾಲಿಕಾರ್ನೆಸಸ್‌ನಲ್ಲಿರುವ ಮುಸ್ಸೊಲಸ್‌ನ ಭವ್ಯ ಸಮಾಧಿ
  • ೬.ರೋಡ್ಸ್‌ನ ಬೃಹದಾಕಾರದ ಪ್ರತಿಮೆ
  • ೭.ಅಲೆಗ್ಸಾಂಡ್ರಿಯಾದ ದೀಪಸ್ತಂಭ

ಹಿಂದಿನ ಪಟ್ಟಿಯು ಅಲೆಗ್ಸಾಂಡ್ರಿಯಾದ ದೀಪಸ್ತಂಭದ ಬದಲಾಗಿ ಇಶ್ತಾರ್ ಗೇಟ್ನ್ನು ಜಗತ್ತಿನ ಏಳನೆಯ ಅದ್ಭುತವಾಗಿ ಗುರುತಿಸಿತ್ತು. ಗ್ರೀಕ್‌ರೂ ಕೂಡ ಒಂದು ಪಟ್ಟಿಯನ್ನು ಮಾಡಿದ್ದು, ಅದನ್ನು ವಿಶ್ವದ ಅದ್ಭುತಗಳ ಪಟ್ಟಿ ಎಂದು ಕರೆಯಲಾಗುವುದಿಲ್ಲ. ಆದರೆ ಅದನ್ನು ಅವರು ತೌಮಾಟಾ (ಗ್ರೀಕ್:Θαύματα ), ಇದನ್ನು, "ನೋಡಲೇಬೇಕಾದಂತವುಗಳು" ಎಂದು ಸುಮಾರಾಗಿ ಅರ್ಥೈಸಬಹುದು. ಇಂದು ನಮಗೆ ತಿಳಿದಿರುವ ಪಟ್ಟಿಯು ಸಕಲನಗೊಂಡಿದ್ದು ಮಧ್ಯ ಯುಗೀನ ಕಾಲದಲ್ಲಿ, ಆ ಸಮಯದಲ್ಲಾಗಲೇ ಹಲವಾರು ಸ್ಥಳಗಳು ಅಸ್ತಿತ್ವದಲ್ಲಿ ಉಳಿದಿರಲಿಲ್ಲ. ಈಗ, ಇಂದಿಗೂ ಅಸ್ತಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ವಿಶ್ವದ ಅದ್ಭುತವೆಂದರೆ ಅದು ಗೀಜಾದ ಮಹಾ ಪಿರಾಮಿಡ್.

ಮಧ್ಯಯುಗದ ಅದ್ಭುತಗಳು :

  • ಬಹಳಷ್ಟು ಅದ್ಭುತಗಳು ಮಧ್ಯಯುಗದ ಸಮಯದಲ್ಲಿ ಅಸ್ತಿತ್ವದಲ್ಲಿದ್ದವುಗಳಾಗಿವೆ. ಮಧ್ಯಯುಗ ಅನ್ನುವ ಶಬ್ಧವೇ ಆ ಕಾಲದಲ್ಲಿ ಚಾಲ್ತಿಯಲ್ಲಿರಲಿಲ್ಲ. ಬೌದ್ಧಿಕ ಉಚ್ಚ್ರಾಯದ ಕಾಲದಲ್ಲಿ ಆ ಶಬ್ಧ ಹಾಗೂ ಪರಿಕಲ್ಪನೆ ಮೂಡಿಬಂತು. 16 ನೇ ಶತಮಾನದ ನಂತರವೇ ಮಧ್ಯಯುಗ ಅನ್ನುವ ಪರಿಕಲ್ಪನೆ ಪ್ರಸಿದ್ಧಿಗೆ ಬಂತು. ಮಧ್ಯಯುಗದ ನಂತರ ರಚಿಸಿದ್ದು ಎಂದು ತಿಳಿಸುತ್ತಾ ಬ್ರೆವರ್ ಇದನ್ನು "ನಂತರದ ಪಟ್ಟಿ(ಗಳು)" ಎಂದು ಗುರುತಿಸುತ್ತಾನೆ.
  • ಈ ಪಟ್ಟಿಯಲ್ಲಿರುವ ಹಲವಾರು ರಚನೆಗಳು ಮಧ್ಯಯುಗಕ್ಕಿಂತಲೂ ಮುಂಚಿತವಾಗಿಯೇ ಕಟ್ಟಲ್ಪಟ್ಟಿದ್ದು, ಅದಾಗಲೇ ಪ್ರಸಿದ್ಧಿಯಾಗಿದ್ದವು. 
  • ಈ ಪಟ್ಟಿಗಳು "ಮಧ್ಯಯುಗೀನ ಅದ್ಭುತಗಳು"(ಏಳು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಮಿತಿಯನ್ನು ಸೂಚಿಸಲಾಗಿಲ್ಲ), "ಮಧ್ಯಯುಗೀನ ಏಳು ಅದ್ಭುತಗಳು", "ಮಧ್ಯಯುಗದ ವಾಸ್ತುಶಿಲ್ಪದ ಅದ್ಭುತಗಳು ಮತ್ತು ಮಧ್ಯಕಾಲಿನ ಮನಸ್ಸುಗಳು" ಎಂಬ ಹೆಸರನ್ನು ಹೊಂದಿದ್ದವು. ಮಧ್ಯ ಯುಗದ ಏಳು ಪ್ರಧಾನ ಅದ್ಭುತಗಳ ವಿಶಿಷ್ಟ ಪ್ರತಿನಿಧಿಗಳು :
  • ೧.ಸ್ಟೋನ್‌ಹೆಂಜ್
  • ೨.*ಬಯಲುಕುಸ್ತಿ ಪ್ರಾಂಗಣ
  • ೩.ಕೊಮ್ ಎಲ್ ಸೊಕ್ಯಾಫಾ ಕ್ಯಾಟಕೊಂಬ್‌
  • ೪.ಚೀನಾದ ಮಹಾ ಗೋಡೆ
  • ೫.ನಾನ್‌ಜಿಂಗ್‌ನ ಪಿಂಗಾಣಿ ಗೋಪುರ
  • ೬.ಹ್ಯಾಗಿಯಾ ಸೊಫಿಯ
  • ೭.ಪೀಸಾದ ವಾಲುಗೋಪುರ

ಈ ಪಟ್ಟಿಗಳಲ್ಲಿರುವ ಇತರ ಸ್ಥಳಗಳು:

  • ೧.ತಾಜ್ ಮಹಲ್
  • ೨.ಕೈರೊ ಕೋಟೆ
  • ೩.ಎಲಿ ಪ್ರಧಾನ ಚರ್ಚ್‌
  • ೪.ಕ್ಲೂನಿ ಚರ್ಚ್‌

ಆಧುನಿಕ ವಿಶ್ವದ ಅದ್ಭುತಗಳು

ಆಧುನಿಕ ಯುಗದಲ್ಲಿ ನಿರ್ಮಾಣವಾದ ಶ್ರೇಷ್ಠ ರಚನೆಗಳನ್ನು ಅಥವಾ ಪ್ರಸ್ತುತ ವಿಶ್ವದಲ್ಲಿರುವ ಅದ್ಭುತಗಳನ್ನು ನಮೂದಿಸುವ ಸಲುವಾಗಿ ಅನೇಕ ಪಟ್ಟಿಗಳನ್ನು ರಚಿಸಲಾಗಿದೆ. ಕೆಲವು ಗಮನಾರ್ಹವಾದ ಪಟ್ಟಿಗಳನ್ನು ಈ ಕೆಳಗೆ ನೀಡಲಾಗಿದೆ.

ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್

ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್ ಆಧುನಿಕ ವಿಶ್ವದ ಅದ್ಭುತಗಳನ್ನು ಪಟ್ಟಿ ಮಾಡಿದೆ.

ಆದ್ಭುತಗಳುಆರಂಭಗೊಂಡ ದಿನಾಂಕಮುಕ್ತಾಯಗೊಂಡ ದಿನಾಂಕಸ್ಥಳ
ಸುರಂಗ ಕಾಲುವೆಡಿಸೆಂಬರ್ 11987ಮೇ 61994ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಫ್ರಾನ್ಸ್ ನಡುವಿನ ಡೊವರ್ ಜಲಸಂಧಿ
ಸಿಎನ್‌ ಗೋಪುರಫೆಬ್ರುವರಿ 61973ಜೂನ್ 261976, ಯಾವುದೇ ಆಧಾರವಿಲ್ಲದೆ ನಿಂತಿರುವ ಜಗತ್ತಿನ ಅತ್ಯಂತ ಎತ್ತರದ ಗೋಪುರ 1976-2007.ಟೊರಾಂಟೊಒಂಟೆರಿಯೊಕೆನಡಾ
ಎಂಪೈರ್ ಸ್ಟೇಟ್ ಬಿಲ್ಡಿಂಗ್ಜನವರಿ 221930ಮೇ 11931, ಜಗತ್ತಿನ ಅತ್ಯಂತ ಎತ್ತರದ ರಚನೆ 1931-1967. ನೂರಕ್ಕೂ ಹೆಚ್ಚು ಮಹಡಿ ಹೊಂದಿರವ ಮೊದಲ ಕಟ್ಟಡನ್ಯೂಯಾಕ್೯NYU.S.
ಗೋಲ್ಡನ್ ಗೇಟ್ ಸೇತುವೆಜನವರಿ 51933ಮೇ 271937ಗೋಲ್ಡನ್ ಗೇಟ್ ಜಲಸಂಧಿದಕ್ಷಿಣ ಸ್ಯಾನ್ ಪ್ರಾನ್ಸಿಸ್ಕೊ ಕ್ಯಾಲಿಪೋರ್ನಿಯಾ,U.S.
ಇತೈಪು ಆಣೆಕಟ್ಟುಜನವರಿ 1970ಮೇ 51984ಬ್ರಾಜಿಲ್ ಮತ್ತು ಪೆರುಗ್ವೆ ನಡುವಿನ ಪರಾನ ನದಿ
ಡೆಲ್ಟಾ ವರ್ಕ್ಸ್ ಜ್ಯೂಡರ್ಜಿ ವರ್ಕ್ಸ್1950ಮೇ 101997ನೆದರ್ಲೆಂಡ್ಸ್‌
ಪನಾಮ ಕಾಲುವೆಜನವರಿ 11880ಜನವರಿ71914ಪನಾಮಾ ಭೂಸಂಧಿ

ನ್ಯೂ 7 ವಂಡರ್ಸ್‌ ಪೌಂಡೇಷನ್‌ ಪಟ್ಟಿ ಮಾಡಿರುವ ವಿಶ್ವದ ಏಳು ಅದ್ಭುತಗಳು

  • 2001ರಲ್ಲಿ ಮೊದಲ ಬಾರಿಗೆ ಸ್ವಿಸ್ ಕಾರ್ಫೊರೇಶನ್‌ನ ನ್ಯೂ 7 ವಂಡರ್ಸ್‌ ಸಂಸ್ಥೆಯು, ಪಟ್ಟಿಮಾಡಿರುವ 200 ಸ್ಮಾರಕಗಳಲ್ಲಿ ವಿಶ್ವದ ಹೊಸ ಏಳು ಅದ್ಭುತಗಳನ್ನ ಅಯ್ಕೆ ಮಾಡಿತು. ಮೊದಲು ಜನವರಿ 12006. ರಲ್ಲಿ ಇಪ್ಪತ್ತೊಂದು ಅಂತಿಮ ಸ್ಪರ್ಧಿಗಳನ್ನು ಘೋಷಣೆ ಮಾಡಲಾಯಿತು.
  • ಈಜಿಪ್ಟ್‌ ಈ ಸಂಗತಿಯಿಂದಾಗಿ ಅಷ್ಟು ಸಂತೋಷಗೊಳ್ಳಲಿಲ್ಲ. ಕೇವಲ ಮೂಲ ಅದ್ಭುತಗಳು ಅಂದರೆ ಸ್ವಾತಂತ್ರ್ಯ ದೇವಿ ಪ್ರತಿಮೆ, ಸಿಡ್ನಿಯ ಒಪೆರಾ ಹೌಸ್ ಹಾಗೂ ಇತರ ಚಾರಿತ್ರಿಕ ಹೆಗ್ಗುರುತುಗಳು ಮಾತ್ರ ಸ್ಪರ್ಧಿಸಬೇಕಿತ್ತು. ಆದ್ದರಿಂದ ಇದನ್ನು ಈಜಿಪ್ಟ್‌ ಇದೊಂದು ಅಸಂಬದ್ಧ ಯೋಜನೆಯೆಂದು ಹೆಸರಿಸಿತು. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೋಸ್ಕರ ಗೀಜಾವನ್ನು ಗೌರವಾರ್ಥ ಅಭ್ಯರ್ಥಿಯನ್ನಾಗಿ ಹೆಸರಿಸಲಾಯಿತು
  • ಫಲಿತಾಂಶವನ್ನು ಜುಲೈ 72007 ರಂದು ಪೋರ್ಚುಗಲ್‌ ಲಿಸ್‌ಬೊನ್‌ನಲ್ಲಿನ ಬೆ‍ನ್‌ಪಿಕಾ ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಘೋಷಿಸಲಾಯಿತು. ಅಂದು ಪ್ರಕಟಿಸಲಾದ ಅದ್ಭುತಗಳ ಪಟ್ಟಿಯನ್ನು ಕೆಳಗೆ ನಮೂದಿಸಲಾಗಿದೆ
More information: ಅದ್ಭುತಗಳು, ರಚನೆಯ ದಿನಾಂಕ ...
ಅದ್ಭುತಗಳುರಚನೆಯ ದಿನಾಂಕಸ್ಥಳ
ಚೀನಾದ ಮಹಾ ಗೋಡೆಕ್ರಿ.ಪೂ 5 ನೇ ಶತಮಾನ –ಕ್ರಿ.ಶ 16ನೇ ಶತಮಾನಚೀನಾ
ಪೆಟ್ರಾc. 100 BCEಜೋರ್ಡಾನ್
ವಿಮೋಚಕ ಕ್ರಿಸ್ತಆರಂಭ 12 ಅಕ್ಟೋಬರ್1931ಬ್ರೆಜಿಲ್‌
ಮಾಚು ಪಿಕುc. 1450ಪೆರು
ಚಿಚೆನ್ ಇಟ್ಜಾc. 600ಮೆಕ್ಸಿಕೊ
ರೋಮ್‌ನ ಕೊಲೋಸಿಯಮ್ಮುಕ್ತಾಯ 80 CEಇಟಲಿ
ತಾಜ್‌ ಮಹಲ್‌ಮುಕ್ತಾಯc. 1648ಭಾರತ
ಗ್ರೇಟ್ ಪಿರಾಮಿಡ್ (ಗೌರವಾರ್ಥ ಅಭ್ಯರ್ಥಿ)ಮುಕ್ತಾಯ c. ಕ್ರಿ.ಪೂ 2560ಈಜಿಪ್ಟ್‌
Close

ಯು.ಎಸ್.ಎ ಟುಡೆಯ ಹೊಸ ಏಳು ಅದ್ಭುತಗಳು

  • ನವೆಂಬರ್ 2006ರಲ್ಲಿ, ಅಮೇರಿಕಾದ ರಾಷ್ಟ್ಟ್ರೀಯ ವೃತ್ತ ಪತ್ರಿಕೆ ಯು.ಎಸ್.ಎ ಟುಡೆ ಅಮೇರಿಕಾದ ದೂರದರ್ಶನ ಕಾರ್ಯಕ್ರಮ ಗುಡ್ ಮಾರ್ನಿಂಗ್ ಅಮೇರಿಕಾ ದ ಸಹಯೋಗದೊಂದಿಗೆ ಆರು ತೀರ್ಪುಗಾರರಿಂದ ಆಯ್ಕೆಗೊಂಡ ವಿಶ್ವದ ಹೊಸ ಏಳು ಅದ್ಭುತಗಳನ್ನು ಬಹಿರಂಗಗೊಳಿಸಿತು.
  • ದಿನಕ್ಕೊಂದರಂತೆ ವಾರದ ಏಳುದಿನ ಗುಡ್ ಮಾರ್ನಿಂಗ್ ಅಮೇರಿಕಾ ಕಾರ್ಯಕ್ರಮದಲ್ಲಿ ಅದ್ಭುತಗಳನ್ನು ಘೋಷಿಸಲಾಯಿತು. ಎಂಟನೆಯ ಅದ್ಭುತವು ನವೆಂಬರ್ 24ರಂದು ವೀಕ್ಷಕರ ಅಭಿಪ್ರಾಯದ ಮೇರೆಗೆ ಆಯ್ಕೆಯಾಯಿತು.
More information: ಕ್ರಮ ಸಂಖ್ಯೆ, ಆದ್ಭುತ ...
ಕ್ರಮ ಸಂಖ್ಯೆಆದ್ಭುತಪ್ರದೇಶ
1ಪೊಟಾಲಾ ಅರಮನೆಲ್ಹಾಸಾಟಿಬೇಟ್ಚೀನಾ
2ಜೆರುಸಲೆಮ್ ನ ಪ್ರಾಚೀನ ನಗರಜೆರುಸಲೆಮ್ಇಸ್ರೇಲ್
3ಧೃವ ಪ್ರದೇಶದ ಮಂಜುಗುಡ್ಡಗಳುಧೃವ ಪ್ರದೇಶ
4ಪಾಪಾನೊಮ್‌ಮೌವ್‌ಕುಕಿ ಮರೈನ್‌ನ ರಾಷ್ಟ್ರೀಯ ಪ್ರತಿಮೆಹವಾಯಿಸಂಯುಕ್ತ ರಾಷ್ಟ್ರ
5ಅಂತರ್ಜಾಲಲಭ್ಯವಿಲ್ಲ
6ಮಾಯಾ ಭಗ್ನಾವಶೇಷಗಳುಯುಕಾಟನ್ ಪೆನಿನ್ಸುಲಾಮೆಕ್ಷಿಕೊ
7ಸೆರೆಂಗೆಟಿ ಮತ್ತು ಮಸೈ ಮಾರಾದ ಮಹಾವಲಸೆತಾಂಜಾನಿಯ ಮತ್ತು ಕೀನ್ಯಾ
8ಮಹಾ ಕಣಿವೆ (ವೀಕ್ಷಕರಿಂದ ಆಯ್ಕೆಗೊಂಡ ಎಂಟನೆಯ ಅದ್ಭುತ)ಅರಿಜೊನಾಸಂಯುಕ್ತ ರಾಷ್ಟ್ರ
Close

ವಿಶ್ವದ ಏಳು ನೈಸರ್ಗಿಕ ಅದ್ಭುತಗಳು

ಇತರ ಅದ್ಭುತಗಳ ಪಟ್ಟಿಯಂತೆ, ವಿಶ್ವದ ಹೊಸ ಏಳು ನೈಸರ್ಗಿಕ ಅದ್ಭುತಗಳ ಪಟ್ಟಿಗಳ ಬಗ್ಗೆ ಒಮ್ಮತವಿರಲಿಲ್ಲ, ಅಲ್ಲದೆ ವಿವರಗಳ ಪಟ್ಟಿ ಎಷ್ಟು ವಿಸ್ತಾರವಾಗಿರಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಸಿಎನ್ಎನ್‌ ನಿಂದ ಸಂಗ್ರಹಿಸಲ್ಪಟ್ಟ ವಿವರಗಳ ಒಂದು ಪಟ್ಟಿ :

  • ೧.ಮಹಾ ಕಣಿವೆ
  • ೨.ಮಹಾ ತಡೆಗೋಡೆ
  • ೩.ರಿಯೊ ಡಿ ಜನೈರೊದ ಬಂದರು
  • ೪.ಮೌಂಟ್‌ ಎವರೆಸ್ಟ್‌
  • ೫.ಔರೋರಾ
  • ೬.ಪರಿಕ್ಯೂಟಿನ್ ಜ್ವಾಲಾಮುಖಿ
  • ೭.ವಿಕ್ಟೋರಿಯ ಜಲಪಾತ

ಜಾಗತಿಕ ಮತದಾನದ ಮೂಲಕ ಜನರಿಂದ ಆಯ್ಕೆಗೊಂಡ ಹೊಸ ಏಳು ನೈಸರ್ಗಿಕ ಅದ್ಭುತಗಳ ರಚನೆ ನ್ಯೂ ಸೆವೆನ್ ವಂಡರ್ಸ್ ಅಪ್ ನೇಚರ್‌ನ ಒಂದು ಸಮಕಾಲೀನ ಪ್ರಯತ್ನ. ಇದನ್ನು ಸಂಘಟಿಸಿದ್ದು ವಿಶ್ವದ ಹೊಸ ಏಳು ಅದ್ಬುತಗಳು ಎಂಬ ಕಾರ್ಯಾಚರಣೆಯನ್ನು ಆರಂಭಿಸಿದ್ದು ನ್ಯೂ ಒಪನ್ ವರ್ಲ್ಡ್ ಕಾರ್ಪೊರೇಶನ್ (NOWC) ಏಳು ನೈಸರ್ಗಿಕ ಅದ್ಭುತಗಳು:ಇದನ್ನು ಈಗಾಗಲೆ ಸ್ಥಾಪಿಸಲ್ಪಟ್ಟಿರುವ ಏಳು ನೈಸರ್ಗಿಕ ಅದ್ಭುತಗಳನ್ನು ರಕ್ಷಣೆ ಮಾಡುವುದಕ್ಕೋಸ್ಕರ ರಚಿಸಲಾಗಿತ್ತು ಹೊರತು ಇದು ಲಾಭದ ಕಾರ್ಯಾಚರಣೆಯಾಗಿರಲಿಲ್ಲ.

ವಿಶ್ವದ ಜಲಾಂತರ್ಗತ ಏಳು ಅದ್ಭುತಗಳು

ವಿಶ್ವದ ಜಲಾಂತರ್ಗತ ಏಳು ಅದ್ಭುತಗಳ ಪಟ್ಟಿಯನ್ನು ರಚನೆ ಮಾಡಿದ್ದು ಸಮುದ್ರ ಸಂರಕ್ಷಣೆ ಮತ್ತು ಸಂಶೋಧನೆಗೆ ಮೀಸಲಾಗಿರುವ ಅಮೇರಿಕಾ ಮೂಲದ ಸಾಮಾಜಿಕ ಮೌಲ್ಯೋತ್ಪಾದಕ ಸಂಘಟನೆಯಾದ ಸಿಇಡಿಎಎಮ್ ಇಂಟರ್‌ನ್ಯಾಷನಲ್‌. ಸಂರಕ್ಷಣೆಗೆ ಯೋಗ್ಯವಾದ ನೀರೊಳಗಿನ ಪ್ರದೇಶವನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಿಇಡಿಎ‌ಎಮ್ 1989ರಲ್ಲಿ ಡಾ.ಯುಗೀನ್ ಕ್ಲಾರ್ಕ್ ಸೇರಿದಂತೆ ಜಲವಿಜ್ಞಾನಿ ತಜ್ಞರ ಸಮಿತಿ ರಚನೆ ಮಾಡಿತು. ಸೀ ಹಂಟ್ ಕಿರುತೆರೆ ಕಾಯ೯ಕ್ರಮದ ನಟ ಲಾಯಿಡ್ ಬ್ರಿಡ್ಜ್‌ಸ್ ವಾಷಿಂಗ್‌ಟನ್ ನ್ಯಾಶನಲ್ ಅಕ್ವೇರಿಯಮ್‌ನಲ್ಲಿ ಈ ಫಲಿತಾಂಶವನ್ನು ಘೋಷಿಸಿದರು.{3/

  • ೧.ಪಾಲಾವ್
  • ೨.ಬೆಲೈಜ್ ತಡೆಗೋಡೆ
  • ೩.ಮಹಾ ತಡೆಗೋಡೆ
  • ೪.ಆಳವಾದ ಸಮುದ್ರ ಕಿಂಡಿ
  • ೫.ಗ್ಯಾಲಪಗೊಸ್ ದ್ವೀಪ
  • ೬.ಬೈಕಲ್‌ ಸರೋವರ
  • ೭.ದಕ್ಷಿಣದ ಕೆಂಪು ಸಮುದ್ರ

ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು

ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು ಎಂಬ ಪುಸ್ತಕ ಬರೆದವರು ಬ್ರಿಟೀಷ್ ಲೇಖಕ ದೆಬೋರಾ ಕ್ಯಾಡ್‌ಬರಿ. ಈ ಪುಸ್ತಕ ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಯಂತ್ರವಿಜ್ಞಾನದ ಏಳು ಅದ್ಭುತಗಳ ಕತೆಯನ್ನು ಹೇಳುತ್ತದೆ.ಈ ಪುಸ್ತಕದ ಮೇಲೆ 2003 ರಲ್ಲಿ ಬಿಬಿಸಿ ಏಳು ಭಾಗಗಳಿರುವ ಸಾಕ್ಷ್ಯಚಿತ್ರ ಸರಣಿಯನ್ನು ರಚಿಸಿತು. ಈ ಕೈಗಾರಿಕಾ ಅದ್ಭುತಗಳಲ್ಲಿ ಪ್ರತಿಯೊಂದನ್ನೂ ಈ ಮೊದಲು ಹೇಗೆ ಕಟ್ಟಿರಬಹುದು ಎಂಬುದನ್ನು ಈ ಸಾಕ್ಷ್ಯ ಚಿತ್ರಗಳಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಏಳು ಕೈಗಾರಿಕಾ ಅದ್ಭುತಗಳು:

ಜಗತ್ತಿನ ಪ್ರವಾಸಿ ಅದ್ಭುತಗಳು

ಪ್ರಮುಖ ಮಾನವ ನಿರ್ಮಿತ ಅದ್ಭುತಗಳ ಪಟ್ಟಿಯ ಸಂಕಲನಕಾರರಲ್ಲಿ ಪ್ರವಾಸಿ ಬರಹಗಾರನಾದ ಹಾವರ್ಡ್‌ ಹಿಲ್‌ಮನ್ ಕೂಡ ಒಬ್ಬ ಮತ್ತು ನೈಸರ್ಗಿಕ ಜಗತ್ತಿನ ಯಾತ್ರಿಕರ ಪ್ರವಾಸಿ ಅದ್ಭುತಗಳು:

ಮಾನವ ನಿರ್ಮಿತ ಪ್ರವಾಸಿ ಅದ್ಬುತಗಳು

  1. ಗೀಜಾದ ಪಿರಾಮಿಡ್ ಸಂಕೀರ್ಣ
  2. ಚೀನಾದ ಮಹಾ ಗೋಡೆ
  3. ತಾಜ್‌ ಮಹಲ್‌
  4. ಮಾಚು ಪಿಚು
  5. ಬಾಲಿ
  6. ಅಂಕೂರ್ ವಾಟ್
  7. ನಿಷೇಧಿತ ನಗರ
  8. ಬಾಗನ್ ದೇವಾಲಯ ಮತ್ತು ಪವಿತ್ರ ಭವನ
  9. ಕರ್ನಾಕ್ ದೇವಾಲಯ
  10. ಟಿಹೋತಿಹ್ಯೂಕಾನ್

ನೈಸರ್ಗಿಕ ಪ್ರವಾಸಿ ಅದ್ಭುತಗಳು

  1. ಸೆರೆಂಗೆಟಿ ವಲಸೆ
  2. ಗ್ಯಾಲಪಾಗೋಸ್ ಐಸ್‌ಲ್ಯಾಂಡ್
  3. ಬೃಹದ್ ಕಣಿವೆ
  4. ಇಗುವಾಜು ಜಲಪಾತ
  5. ಅಮೆಜಾನ್ ಮಳೆಕಾಡು
  6. ನುಗೊರೊಂಗೊರೊ ಜ್ವಾಲಾಮುಖಿ
  7. ಮಹಾ ತಡೆಗೋಡೆ
  8. ವಿಕ್ಟೋರಿಯಾ ಜಲಪಾತ
  9. ಬೋರಾ ಬೋರಾ
  10. ಕ್ಯಾಪಡೋಸಿಯ

ವಿವರಗಳಿಗಾಗಿ ನೋಡಿ

  • ವಿಶ್ವದ ಎಂಟನೆಯ ಅದ್ಭುತ
  • ವಿಶ್ವ ಪರಂಪರಾ ಪಟ್ಟಿ-800ಕ್ಕಿಂತ ಹೆಚ್ಚು ಸ್ಥಳಗಳನ್ನು ಯುನೆಸ್ಕೊ "ಮಹೋನ್ನತ ಸಾರ್ವತ್ರಿಕ ಮೌಲ್ಯವುಳ್ಳವುಗಳಾಗಿ" ಗುರುತಿಸಿದೆ.
  • ಏಳು ಅದ್ಭುತಗಳ ರಾಷ್ಟ್ರೀಯ ಪಟ್ಟಿಗಳು
    • ಕೆನಡಾದ ಏಳು ಅದ್ಭುತಗಳು
    • ಪೋಲ್ಯಾಂಡ್‌ನ ಏಳು ಅದ್ಭುತಗಳುಪೋಲಾಂಡ್‌ನ ಏಳು ಅದ್ಭುತಗಳು/0}
    • ಪೋ‍ರ್ಚುಗ‍ಲ್‌ನ ಏಳು ಅದ್ಭುತಗಳು
    • ಉಕ್ರೇನಿನ ಏಳು ಅದ್ಭುತಗಳು
    • ವೇಲ್ಸ್‌ನ ಏಳು ಅದ್ಭುತಗಳು
  • ಸೆವೆನ್ ವಂಡರ್ಸ್‌ ಅಪ್ ದಿ ಪೋರ್ (ಪೋರ್‍ನ ಚರ್ಚ್‌, ಐರ್ಲೇಂಡ್)
  • ಮಹಾತ್ಮಾ ಗಾಂಧಿಯವರ ಪಟ್ಟಿ-ವಿಶ್ವದ ಏಳು ಪ್ರಸಿದ್ಧ ಪ್ರಮಾದಗಳು

ಸಂಗ್ರಹ✍️T.A.ಚಂದ್ರಶೇಖರ

English Grammar - NOUN

Nouns


Definition
Nouns are words that name a person, place or any entity. Anything that exists; ideas, thoughts, emotions, people, all the objects (cars, planets, televisions, phones...) can be named.
Most sentences have multiple nouns, some sentences have only a single noun.

Also See:

Nouns Exercises / Exercise 2
Gender of Nouns
Noun Clauses
Singular / Plural
Adjective Vs Noun

Proper / Common Nouns


Nouns that name a particular item in a group are called proper nouns. The first letter is capitalized.

Michael Jordan (person, athlete...)
Pepsi Cola (drinks, soda),
New York (city)

Nouns that refer to a general class of person, place, entity are common nouns and they are not capitalized.

basketball player, soda, city

See more on common and proper nouns


Count / Non-Count (Mass) Nouns


This is the classification according to whether a noun can be counted or not. Count nouns are countable.

cat
tree
Dr. Adams
book
nut
bean

Mass nouns name undifferentiated mass, things that are not usually considered countable..

water
milk
grass
sand
news
money

Non-count nouns are usually singular and quantified by quantifiers such as much, more, less, some...

some sugar
less water
little butter

See more on count / mass nouns


Abstract/Concrete/Collective Nouns


Abstract nouns name ideas, thoughts, emotions.

love, peace, honor

Concrete nouns name physical objects that have a mass.

ball, tree, glass

Collective nouns refer to a group of people or entities.

herd, bunch, army, family, tribe

See more on abstract nouns / concrete nouns
You are here: >> Home >> English Grammar Lessons >> Nouns

__________________________________________
✍️T.A.ಚಂದ್ರಶೇಖರ

ಸಾವಿತ್ರಿಬಾಯಿ ಫುಲೆ

ADD ARTICLE DESCRIPTION


ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು.

ಸಾವಿತ್ರಿಬಾಯಿ ಫುಲೆ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು.

ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ ೮ ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಭೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಭೇತಾದ ಮೊದಲ ಶಿಕ್ಷಕಿಯಾದರು

  • ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಅವರನ್ನು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು.
  • ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. ೧೮೪೮ರಿಂದ ೧೮೫೨ರ ಅವಧಿಯಲ್ಲಿ ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು.
  • ಈ ಪಾಠಶಾಲೆಗಳ ಶಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು.
  • ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಇವರು ಒಟ್ಟು 14 ಶಾಲೆಗಳನ್ನು ಸ್ಥಾಪನೆ ಮಾಡುತ್ತಾರೆ.
  • ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ,‌ ಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ - ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.
  • ೧೮೫೪ರಲ್ಲಿ ಸಾವಿತ್ರಿಬಾಯಿಯವರು 'ಕಾವ್ಯಫೂಲೆ'(ಕಾವ್ಯ ಅರಳಿದೆ)ಎನ್ನುವ ಕವನಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು ೧೯ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಇವರು ಈ ಕೃತಿಯನ್ನು'ಅಭಂಗ್' ಶೈಲಿಯಲ್ಲಿ ರಚಿಸಿದ್ದಾರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ.
  • ಅವರ ಎರಡನೇಯ ಕೃತಿ 'ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) ೧೮೯೧ರಲ್ಲಿ ಪ್ರಕಟವಾಯಿತು. ಇದು ಜ್ಯೋತಿಬಾ ಅವರನ್ನು ಒಳಗೊಂಡಂತೆ ಬರೆದ ಒಂದು ಬಯೋಗ್ರಫಿ.
  • ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು ೧೮೯೨ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ

ಕವನಸಂಕಲನ

  • ಕಾವ್ಯಫೂಲೆ (ಕಾವ್ಯ ಅರಳಿದೆ)-೧೮೫೪

ಆತ್ಮಕಥೆ

  • ಭವನಕಾಶಿ ಸುಬೋಧ ರತ್ನಾಕರ್(ಅಪ್ಪಟ ಮುತ್ತುಗಳ ಸಾಗರ)-೧೮೯೧

ಸಂಪಾದಿತ ಕೃತಿ

  • ಜ್ಯೋತಿಬಾ ಅವರ ಭಾಷಣಗಳು -೧೮೯೨

ಪ್ರಬಂಧ

  • ಕರ್ಜೆ(ಸಾಲ)
  • ಜ್ಯೋತಿಬಾ ಅವರ ತತ್ವ್ತ ಮತ್ತು ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಳ್ಳುವ ಸಾವಿತ್ರಿಬಾಯಿಯವರು ಜೀವಮಾನವಿಡೀ ಪತಿಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತಾರೆ. ಇವರಿಬ್ಬರ ನಡುವೆ ಒಂದು ಮಧುರವಾದ ಬಾಂಧವ್ಯ ಮತ್ತು ವೈಯಕ್ತಿಕ ಭಾವನೆಗಳನ್ನು ಗೌರವಿಸಿಕೊಳ್ಳುವ ಗುಣವಿತ್ತು. ಅವರಿಗೆ ಮಕ್ಕಳಿರದಿದ್ದರು ಸಂತೋಷವಾಗಿದ್ದರು. ಪತ್ನೀಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಜ್ಯೋತಿಬಾ ಫುಲೆ ಅವರು ಮಕ್ಕಳಿಗಾಗಿ ಮರುಮದುವೆಯಾಗಲಿಲ್ಲ.
  • ಮುಂದೆ ಫುಲೆ ದಂಪತಿಗಳು ೧೮೭೪ರಲ್ಲಿ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು, ಆತ ಸಮಾಜದಲ್ಲಿ ಸತ್ಪ್ರಜೆಯಾಗುವ ಅವಕಾಶವನ್ನು ಕಲ್ಪಿಸುತ್ತಾರೆ. ೧೮೬೩ರಲ್ಲಿ ಅನಾಥ ಮಕ್ಕಳಿಗಾಗಿ ಶಿಶುಕೇಂದ್ರವನ್ನು ತೆರೆಯುತ್ತಾರೆ. ಆ ಅನಾಥ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆಯುತ್ತಾರೆ.
  • ೧೫೦ ವರ್ಷಗಳ ಹಿಂದೆಯೇ ಸಾವಿತ್ರಿ ಬಾಯಿ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಶಿಕ್ಷಣದಲ್ಲಿ ವೈವಿಧ್ಯತೆ ತಂದಿದ್ದರು.
  • ೧೮೬೦ರ ದಶಕದಲ್ಲಿ ವಿಧವೆಯರ ತಲೆಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು.
  • ಸಾವಿತ್ರಿಬಾಯಿ 'ಸತ್ಯೋಧಕ' ಸಮಾಜದ ಅಧ್ಯಕ್ಷೆಯಾಗಿದ್ದರು. ೧೯ನೇ ಶತಮಾನದ ಇತಿಹಾಸದಲ್ಲಿ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಸಂಗತಿ.
  1. ೧೮೪೮ ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು.
  2. ೧೮೫೫ ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳೆಯದ ಶಾಲೆ ಸ್ಥಾಪನೆ.
  3. ೧೮೬೮ ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟುಕೊಟ್ಟರು.
  4. ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡುದು.
  5. ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದುದು.
  1. ಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ
  1. ಥಾಮ್ ವುಲ್ಫ್ ಮತ್ತು ಸುಜನ ಆಂಡ್ರಡೆ - ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನೀನು ಚಿರಋಣಿಯಾಗಿರಬೇಕು. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ.
  2. ಮುಖೇಶ್ ಮಾನಸ್ - ಶಿಕ್ಷಣದ ಕ್ಷೇತ್ರಕ್ಕೆ ಯಾವ ಬಗೆಯ ಕಾಣಿಕೆಯನ್ನೂ ನೀಡದಂತಹ ವಿದ್ವಾಂಸರ ಹೆಸರಿನಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳುವಳಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ ?
  3. ಮೃದುವರ್ಮ - ೧೫೦ ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ. ಆದರಿಂದು ಸ್ತ್ರೀ ವಿಮೋಚನೆ ಫ್ಯಾಷನ್ ಆಗಿದೆ.
  4. ಗೋವಂಡೆ - ಫುಲೆ ದಂಪತಿಗಳ ಪ್ರಕಾರ ಹುಟ್ಟುವ ಪ್ರತಿಯೊಂದು ಮಗುವು ವಿಶೇಷವಾದುದು. ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. ಅವರ ಈ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆ !

೧೮೯೭ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು