ಶಿಕ್ಷಣವೇ ಶಕ್ತಿ

Thursday 28 January 2021

ಸಾಮಾನ್ಯ ಜ್ಞಾನ

                          ಸಾಮಾನ್ಯ ಜ್ಞಾನ
__________________________________________

ಸೂಕ್ಷ್ಮಜೀವಿಗಳು - ಭಯಾನಕ ವೈರಸ್ಗಳು
1.AIDSನ್ನು ವಿಸ್ತರಿಸಿ.
ಅಕ್ವೈರ್ಡ್ ಇಮ್ಯುನೋ ಡಿಫಿಷಿಯನ್ಸಿ ಸಿಂಡ್ರೋಮ್

2. ಏಡ್ಸ್ ರೋಗಕ್ಕೆ ಕಾರಣವಾದ ವೈರಸ್ನ್ನು ಹೆಸರಿಸಿ. 
ಹೆಚ್, ಐ. ವಿ ((HIV)

3. ಏಡ್ಸ್ ರೋಗವನ್ನು ಮೊಟ್ಟಮೊದಲು ಎಲ್ಲಿ ಗುರ್ತಿಸಲಾಯಿತು?
1981 ರಲ್ಲಿ ಅಮೇರಿಕಾದಲ್ಲಿ ಗುರ್ತಿಸಲಾಯಿತು.

4. ಭಾರತದಲ್ಲಿ ಮೊದಲು ಎಲ್ಲಿ ಗುರ್ತಿಸಲಾಯಿತು?
1987 ರಲ್ಲಿ ಚೆನ್ನೈ ನಲ್ಲಿ ಗುರ್ತಿಸಲಾಯಿತು.

5.ಹೆಚ್, ಐ. ವಿ (HIV) ಯಲ್ಲಿ ಕಂಡುಬರುವ ಅನುವಂಶೀಯ ವಸ್ತುವನ್ನು ಹೆಸರಿಸಿ.    
ಆರ್.ಎನ್.ಎ (ಖಓಂ)

6. ಹೆಚ್, ಐ. ವಿ (HIV) ಯ ಅನುವಂಶೀಯ ವಸ್ತುವಿನಲ್ಲಿ ಕಂಡುಬರುವ ಕಿಣ್ವವನ್ನು ಹೆಸರಿಸಿ.
ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್.

7. ಏಡ್ಸ್ ರೋಗವನ್ನು ಮೊದಲು ಯಾವ ರೋಗಗಳ ಜೊತೆಯಲ್ಲಿ ಪತ್ತೆ ಹಚ್ಚಲಾಯಿತು?
ಈ ರೋಗವನ್ನು ಮೊದಲು ಚಿಂಪಾಂಜಿ, ಗೊರಿಲ್ಲಾ ಮತ್ತು ಸಲಿಂಗಿ ಮಾನವರಲ್ಲಿ ನ್ಯುಮೋನಿಯಾ ಮತ್ತು ಚರ್ಮದ ಕ್ಯಾನ್ಸರ್ ಜೊತೆ ಪತ್ತೆ ಹಚ್ಚಲಾಯಿತು.

8. ಹೆಚ್, ಐ. ವಿ (ಊ  ಗಿ) ಹರಡುವ ವಿಧಾನಗಳನ್ನು ಹೆಸರಿಸಿ.
* ಸೋಂಕಿತ ವ್ಯಕ್ತಿಯೊಡನೆ ಅಸುರಕ್ಷಿತ ಲೈಂಗಿಕ ಸಂಪರ್ಕ, * ಸೋಂಕಿತ ವ್ಯಕ್ತಿಗಳು ಬಳಸಿದ ಸೂಜಿ ಮತ್ತು ಸಿರಂಜ್ಗಳನ್ನು ಶುಷ್ಕಿಕರಿಸದೆ ಬಳಸುವುದರಿಂದ
* ಸೋಂಕಿತ ವ್ಯಕ್ತಿಯಿಂದ ರಕ್ತವನ್ನು ಪರೀಕಿಸದೆ ಪಡೆಯುವುದರಿಂದ    * ಸೋಂಕಿತ ತಾಯಿ ಯಿಂದ ಮಗುವಿಗೆ

9. ಯಾವ ಅಂಗವನ್ನು ದೇಹದ ರಾಸಾಯನಿಕ ಕಾಖರ್ಾನೆ ಎಂದು ಕರೆಯಲಾಗಿದೆ?  
ಪಿತ್ತಕೋಶ.

10. ಹೆಪಟೈಟಿಸ್ ರೊಗಕ್ಕೆ ಕಾರಣವಾದ ಜೀವಿಯನ್ನು ಹೆಸರಿಸಿ.   
ಹೆಚ್. ಬಿ. ವಿ. (HIV)

11. ಹೆಚ್, ಐ. ವಿ (HIV) ಪತ್ತೆಹಚ್ಚುವ ಪರೀಕ್ಷೆಗಲನ್ನು ಹೆಸರಿಸಿ.
* ಎಲಿಸಾ(ಎಂಜೈಮ್ ಲಿಂಕ್ಡ್ ಇಮ್ಯುನೋ ಸಾರ್ಬೆಂಟ್ ಅಸ್ಸೆ)
* ಪಿ.ಸಿ.ಆರ್ ಪರೀಕ್ಷೆ
* ವೆಸ್ಟರ್ನ್ ಬ್ಲಾಟ್ ಪರೀಕ್ಷೆ

12. ಹೆಚ್, ಐ. ವಿ (HIV)ದೇಹದ ಯಾವ ಕಣಗಳನ್ನು ನಾಶಪಡಿಸುತ್ತದೆ?  
ಟಿ- ಲಿಂಪೋಸೈಟ್ಗಳನ್ನು ನಾಶಪಡಿಸುತ್ತದೆ.

ಆಹಾರೋತ್ಪಾದನೆ ಮತ್ತು ನಿರ್ವಹಣೆ
1. ಆಹಾರ ಕಲಬೆರಕಯ ಎರಡು ವಿಧಗಳನ್ನು ಹೆಸರಿಸಿ.
ಆಕಸ್ಮಿಕ ಕಲಬೆರಕೆ ಮತ್ತು ಉದ್ದೇಶ ಪೂರ್ವಕ ಕಲಬೆರಕೆ

2. ಆಕಸ್ಮಿಕ ಕಲಬೆರಕೆಗೆ ಉದಾ.ಕೊಡಿ. 
* ಹಣ್ಣುಗಳ ಮೇಲೆ ರಾಸಾಯನಿಕಗಳ ಸಿಂಪಡಣೆ * ತರಕಾರಿಗಳಮೇಲಿನ ಕೀಟನಾಶಕಗಳು

3. ಆಹಾರವಸ್ತುಗಳಿಗೆ ಸೇರಿಸುವ ಕಲಬೆರಕೆ ವಸ್ತುಗಳು:
ಕಾಫಿ ಪುಡಿ- ಹುಣಸೆಬೀಜದ ಪುಡಿ,     ಟೀ ಪುಡಿ-ಕಬ್ಬಿಣದ ಚೂರುಗಳು,     ಒಣಗಿದ ಮೆಣಸಿನಕಾಯಿ ಪುಡಿ-ಬಣ್ಣ ಕಟ್ಟಿದ ಮರದ ಹೊಟ್ಟು  ಸಕ್ಕರೆ ಪುಡಿ- ವಾಷಿಂಗ್ ಸೋಡಾ    ತುಪ್ಪ ಮತ್ತು ಬೆಣ್ಣೆ - ವನಸ್ಪತಿ,  ಜೇನು ತುಪ್ಪ - ಬೆಲ್ಲ ಅಥವಾ ಸಕ್ಕರೆ ಪಾಕ
ಅಡಿಗೆ - ದತ್ತೂರಿ ಎಣ್ಣೆ    ಅರಿಶಿನದ ಪುಡಿ - ಮೆಟಾನಿಲ್ ಹಳದಿ,   ಹಾಲು- ನೀರು,    ಅಕ್ಕಿ ಮತ್ತು ಗೋಧಿ - ಮರಳು. ಕಲ್ಲಿನ ಚೂರುಗಳು, ಮಣ್ಣಿನ ಹೇಂಟೆ

4. ಕಲಬೆರಕೆಯುಕ್ತ ಆಹಾರಪದಾರ್ಥಗಳ ಸೇವನೆಯಿಂದ ಬರುವ ರೋಗಗಳು:
* ದತ್ತೂರಿ ಎಣ್ಣೆಯುಕ್ತ ಅಡಿಗೆ ಎಣ್ಣೆ- ಜಲೋದರ ಅಥವಾ ಮಹೋದರ,     * ಮೆಟಾನಿಲ್ ಹಳದಿಯುಕ್ತ ಅರಿಶಿನ ಪುಡಿ- ಕ್ಯಾನ್ಸರ್
* ಸೋಡಿಯಂ ಕಾಬರ್ೋನೇಟ್ಉಕ್ತ ಸಕ್ಕರೆ ಪುಡಿ - ಕರುಳು ಬೇನೆ        

5. ಆಹಾರ ಪದಾರ್ಥಗಳು ಯಾವ ಹಂತದಲ್ಲಿ ಕಲಬೆರಕೆಯಾಗುವ ಸಂಭವ ಹೆಚ್ಚು?
ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಹಂತದಲ್ಲಿ ಹೆಚ್ಚು ಕಲಬೆರಕೆ ಯಾಗುತ್ತದೆ.

6. ಆಹಾರ ಕಲಬೆರಕೆ ನಿವಾರಣಾ ಕಾನೂನು ಜಾರಿಗೆ ಬಂದ ವರ್ಷ ತಿಳಿಸಿ.  
1954

7. ಆಹಾರ ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆಗಳನ್ನು ಹೆಸರಿಸಿ.
* ಆಗ್ಮಾರ್ಕ್       * ಐಎಸ್ಐ    * ಸಿ.ಎಫ್.ಟಿ.ಆರ್.ಐ    *ಎಫ್.ಪಿ.ಒ

8. ಸಂಸ್ಕರಿಸಿದ ಆಹಾರ ಪದಾರ್ಥಗಳು ಯಾವ ಸಂಸ್ಥೆಯ ಮೊಹರನ್ನು ಹೊಂದಿರಲೇಬೇಕು?  
ಎಫ್.ಪಿ,ಒ.

9. ಆಹಾರ ವಸ್ತುಗಳನ್ನು ಕೊಂಡುಕೊಳ್ಳುವಾಗ ಪೊಟ್ಟಣದ ಮೇಲೆ ಗಮನಿಸಬೇಕಾದ ಅಂಶಗಳನ್ನು ಹೆಸರಿಸಿ.
* ತಯಾರಿಸಿದ ದಿನಾಂಕ    * ಅವದಿ ಮುಗಿಯುವ ದಿನಾಂಕ    * ತಯಾರಿಸಲು ಬಳಸಿದ ವಸ್ತುಗಳು ಮತ್ತು ಪ್ರಮಾಣ    
* ಪೊಟ್ಟಣದ ತೂಕ   * ಬೆಲೆ . . . 

10. ಕೇಂದ್ರಿಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (C F T R I )ಎಲ್ಲಿದೆ?  
ಕರ್ನಾಟಕದ ಮೈಸೂರು ಜಿಲ್ಲೆ.

11. ಹಾಲಿನ ಶುದ್ಧತೆ(ಸಾಂದ್ರತೆ)ಯನ್ನು ಅಳೆಯುವ ಸಾಧನವನ್ನು ಹೆಸರಿಸಿ.  
ಲ್ಯಾಕ್ಟೋಮೀಟರ್ (ದುಗ್ಧಮಾಪಕ)

12. ಬೆಣ್ಣೆ ಅಥವಾ ತುಪ್ಪದಲ್ಲಿ ಬೆರೆತಿರುವ ಕಲಬೆರಕೆ ವಸ್ತುವನ್ನು ಪತ್ತೆ ಹಚ್ಚಲು ಬಳಸುವ ಆಮ್ಲ ಯಾವುದು?
ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ (HCl)

13. ಅಡಿಗೆ ಎಣ್ಣೆಯಲ್ಲಿ ಮಿಶ್ರಣವಾಗಿರುವ ದತ್ತೂರಿ ಎಣ್ಣೆಯನ್ನು ಪತೆಹಚ್ಚಲು ಬಳಸುವ ಆಮ್ಲವನ್ನು ಹೆಸರಿಸಿ.
 ಪ್ರಬಲ ನೈಟ್ರಿಕ್ ಆಮ್ಲ (HNO3) 

ಪರಿಸರ ವಿಜ್ಞಾನ

1. ಸಸ್ಯಗಳು ಪ್ರಾಣಿಗಳನ್ನು ಪೋಷಕಾಂಶಗಳಿಗೆ ನೇರವಾಗಿ ಅವಲಂಬಿಸಿರುವ ಉದಾಹರಣೆ ಕೊಡಿ.
ಕೀಟಹಾರಿ ಸಸ್ಯಗಳು ( ಡ್ರಾಸೆರಾ, ನೆಪೆಂಥಿಸ್. . .) ಕೀಟಗಳನ್ನು ಹಿಡಿದು ಭಕ್ಷಿಸಿ ಸಾರಜನಕವನ್ನು ಪಡೆಯುತ್ತವೆ.

2. ಜೀವ ಭೂ ರಾಸಾಯಿಕ ಚಕ್ರಗಳು ಎಂದರೇನು? ಅವುಗಳನ್ನು ಹೆಸರಿಸಿ. ಉದಾ.ಕೊಡಿ.
ಪರಿಸರ ವ್ಯವಸ್ಥೆಯಲ್ಲಿ ಮೂಲವಸ್ತುಗಳ ಚಕ್ರೀಯ ಚಲನೆಗೆ ಜೀವ ಭೂ ರಾಸಾಯನಿಕ ಚಕ್ರಗಳು ಎಂದು ಹೆಸರು.ಇವುಗಳಲ್ಲಿ ಎರಡು ವಿಧ: ಎ. ಅನಿಲದ ಚಕ್ರಗಳು, ಉದಾ: ಕಾರ್ಬನ್ ಚಕ್ರ, ನೈಟ್ರೋಜನ್ ಚಕ್ರ, ಆಕ್ಸಿಜನ್ ಚಕ್ರ. ಬಿ. ಚರಟದ ಚಕ್ರಗಳು, ಉದಾ: ಗಂಧಕದ ಚಕ್ರ, ರಂಜಕದ ಚಕ್ರ.

3. ಸಂಗ್ರಹ ಮೂಲ ಎಂದರೇನು? ಉದಾ.ಕೊಡಿ.
ಜೀವಿಗಳಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆಯುವ ಪ್ರದೇಶಗಳನ್ನು ಸಂಗ್ರಹಮೂಲ ಎನ್ನುವರು.  ಉದಾ: ಶಿಲಾವರಣ, ಜಲಾವರಣ ಮತ್ತು ವಾತಾವರಣ

4. ವಿನಿಮಯಮೂಲ ಎಂದರೇನು? ಉದಾ.ಕೊಡಿ.
ಪೋಷಕಾಂಶಗಳು ಬಳಸಲ್ಪಡುವ ಪ್ರದೇಶವನ್ನು ವಿನಿಮಯ ಮೂಲ ಎನ್ನುವರು. ಉದಾ. ಜೀವಿಗೋಳ 

5. ಸ್ಥಿರೀಕರಣ ಎಂದರೇನು?  
ರಾಸಾಯನಿಕವಸ್ತುಗಳು ಸಂಗ್ರಹಮೂಲದಿಂದ ವಿನಿಮಯ ಮೂಲಕ್ಕೆ ಚಲಿಸುವುದನ್ನು ಸ್ಥಿರೀಕರಣ ಎನ್ನುವರು. 

6. ಮರುಚಕ್ರೀಕರಣ ಎಂದರೇನು?
ರಾಸಾಯನಿಕವಸ್ತುಗಳು ವಿನಿಮಯ ಮೂಲದಿಂದ ಸಂಗ್ರಹಮೂಲಕ್ಕೆ ಹರಿಯುವುದನ್ನು ಮರುಚಕ್ರೀಕರಣ ಎನ್ನುವರು.

7. ನೈಟ್ರೋಜನ್ ಸ್ಥಿರೀಕರಣ ಎಂದರೇನು?
ವಾತಾವರಣದಲ್ಲಿರುವ ಮುಕ್ತವಾದ ನೈಟ್ರೋಜನ್ ಅನಿಲವನ್ನು ಉಪಯುಕ್ತವಾದ ನೈಟ್ರೋಜನ್ ಸಂಯುಕ್ತಗಳ ರೂಪಕ್ಕೆ ಪರಿವರ್ತಿಸುವ ಕ್ರಿಯೆ, ಇದು ರಡು ವಿಧಗಳಲ್ಲಿ ನಡೆಯುತ್ತದೆ. ನೈಸಗರ್ಿಕ ಸ್ಥಿರೀಕರಣ ಮತ್ತು ಕೃತಕ ಸ್ಥಿರೀಕರಣ.

8. ನೈಸರ್ಗಿಕ ಅಥವಾ ಜೈವಿಕ ಸ್ಥಿರೀಕರಣ ಎಂದರೇನು?
ವಾತಾವರಣದಲ್ಲಿರುವ ನೈಟ್ರೋಜನ್ ಅನಿಲವು ಸೂಕ್ಷ್ಮಾಣುಜೀವಿಗಳಾದ ರೈಜೋಬಿಯಂ, ನಾಸ್ಟಾಕ್, ಅನಾಬಿನಾ ಮುಂತಾದ ಜೀವಿಗಳಿಂದ ನಡೆದರೆ ಅದು ನೈಸರ್ಗಿಕ ಅಥವಾ ಜೈವಿಕ ಸ್ಥಿರೀಕರಣ.

9. ಕೃತಕ ಸ್ಥಿರೀಕರಣ ಅಥವಾ ವಿದ್ಯುತ್ರಾಸಾಯನಿಕ ಸ್ಥಿರೀಕರಣ ಎಂದರೇನು?
ವಾತಾವರಣದಲ್ಲಿರುವ ನೈಟ್ರೋಜನ್ ಅನಿಲವು ಆಕಾಶದಲ್ಲಿ ಗುಡುಗು ಉಂಟಾದಾಗ ನಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಹೆಚ್ಚು ತಾಪಮಾನದಿಂದಾಗಿ ನೈಟ್ರೋಜನ್ ಆಕ್ಸಿಜನ್ ಜೊತೆ ಸೇರಿ ನೈಟ್ರೋಜನ್ ಆಕ್ಸೈಡ್ ಆಗಿ ನೀರಿನೊಂದಿಗೆ ಬೆರೆತು ಸಾರಜನಕ ಸಂಯುಕ್ತಗಳಾಗುತ್ತವೆ.

10. ನೈಟ್ರೋಜನ್ ಮರುಚಕ್ರೀಕರಣದಲ್ಲಿ ಪಾಲ್ಗೊಳ್ಳುವ ಬ್ಯಾಕ್ಟೀರಿಯಾಗಳನ್ನು ಹೆಸರಿಸಿ.
ರೈಜೋಬಿಯಂ ಗುಂಪಿಗೆ ಸೇರಿದ ಬ್ಯಾಕ್ಟೀರಯಾಗಳಾದ ಸೂಡೋಮೊನಾಸ್, ನೈಟ್ರಸೋಮೊನಾಸ್, ನೈಟ್ರೋಬ್ಯಾಕ್ಟರ್, ಅಜಟೋಬ್ಯಾಕ್ಟರ್. . ಇತ್ಯಾದಿ 

11. ಬ್ಯಾಕ್ಟೀರಿಯಾ ಹೊರತುಪಡಿಸಿ ಇತರ ಯಾವ ಜೀವಿಗಳು ಸಾರಜನಕ ಸ್ಥಿರೀಕರಣದಲ್ಲಿ ಪಾಲ್ಗೊಳ್ಳುತ್ತವೆ ?
ನಾಸ್ಟಾಕ್, ಅನಾಬಿನಾ, ಅಜೋಲ್ಲಾ, ಅಜೋಸ್ಪೈರಿಲ್ಲಂ. . .

12. ನೈಟ್ರೋಜನ್ ಚಕ್ರದಲ್ಲಿ ಪಾಲ್ಗೊಳ್ಳುವ ಬ್ಯಾಕ್ಟೀರಿಯಾಗಳು ಮತ್ತು ಕಾರ್ಯ;
ನೈಟ್ರಸೋಮೊನಾಸ್: ಅಮೋನಿಯ ಲವಣಗಳನ್ನು ನೈಟ್ರೇಟ್ಗಳಾಗಿ ಪರಿವರ್ತಿಸುತ್ತವೆ(ನೈಟ್ರೀಕರಣ) ನೈಟ್ರೋಬ್ಯಾಕ್ಟರ್: ನೈಟ್ರೈಟ್ಗಳನ್ನು ನೈಟ್ರೇಟ್ಗಳಾಗಿ ಪರಿವರ್ತಿಸುತ್ತವೆ. (ನೈಟ್ರೀಕರಣ) ಸೂಡೋಮೊನಾಸ್: ಮಣ್ಣಿನಲ್ಲಿರುವ ನೈಟ್ರೇಟ್ಗಳನ್ನು ಮುಕ್ತ ನೈಟ್ರೋಜನ್ ಅನಿಲದ ರೂಪಕ್ಕೆ ಪರಿವರ್ತಿಸುತ್ತದೆ. (ಡಿನೈಟ್ರೀಕರಣ)

13. ಜೀವಿಗಳ ದೇಹದಲ್ಲಿನ ಶಕ್ತಿಯ ಅಣುಗಳಲ್ಲಿ ರಂಜಕದ ರೂಪಗಳನ್ನು ಹೆಸರಿಸಿ.
ಅಡಿನೋಸಿನ್ ಟ್ರೈ ಪಾಸ್ಪೇಟ್ (ATP) ಮತ್ತು ನಿಕೋಟಿನಮೈಡ್ ಅಡಿನಿನ್ ಡೈ ನ್ಯೂಕ್ಲಿಯೋಟೈಡ್ ಪಾಸ್ಪೇಟ್ (ಓಂಆಕಊ)

14. ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳನ್ನು ಹೆಸರಿಸಿ.
ಡಿ.ಡಿ.ಟಿ., ಗಾಜು, ಎಂಡೋಸಲ್ಪಾನ್, ಪ್ಲಾಸ್ಟಿಕ್, ಪಾಲಿತಿನ್ದಾರಗಳು, ರಬ್ಬರ್, ಸೀಸಯುಕ್ತ ರಾಸಾಯನಿಕಗಳು . . .

15. ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕಗಳನ್ನು ಹೆಸರಿಸಿ.
ಒಳಚರಂಡಿ ನೀರು, ಸಲ್ಫರ್ಡೈಆಕ್ಸೈಡ್, ಸಸ್ಯಗಳ ಕೊಳೆತ ಭಾಗಗಳು, ಕಾಗದ, ಹತ್ತಿ ಬಟ್ಟೆಗಳು, ಇತ್ಯಾದಿ. .. .

16. ದ್ಯತಿರಾಸಾಯನಿಕ ಸ್ಮಾಗ್ ಎಂದರೇನು?
ಕೆಲವು ರಾಸಾಯನಿಕಗಳು ವಾತಾವರಣದಲ್ಲಿನ ನೈಟ್ರೋಜನ್ ಆಕ್ಸೈಡ್ಗಳ ಜೊತೆ ಸೇರಿ ದ್ಯುತಿರಾಸಾಯನಿಕಕ್ರಿಯೆಗಳಿಗೆ ಒಳಗಾಗಿ ಉಂಟುಮಾಡುವ ರಾಸಾಯನಿಕ ವಸ್ತುಗಳನ್ನು ದ್ಯುತಿರಾಸಾಯನಿಕ ಸ್ಮಾಗ್ ಎನ್ನುವರು.

17. ಸ್ಮಾಗ್ನಲ್ಲಿ ಕಂಡುಬರುವ ಅನಿಲಗಳನ್ನು ಹೆಸರಿಸಿ.
ನೈಟ್ರೋಜನ್ ಡೈಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್, ಇವು ಆಮ್ಲ ಮಳೆಗೆ ಕಾರಣವಾದ ಅನಿಲಗಳು.

18. ಓಝೋನ್ ಪದರವನ್ನು ನಾಶ ಮಾಡುವಂತಹ ವಾಯುಮಾಲಿನ್ಯಕಾರಕ ಯಾವುದು?
ಕ್ಲೋರೋಫ್ಲುರೋಕಾರ್ಬನ್ (ಅ ಈ ಅ)

19. ಮಿನಮಾಟ ರೋಗ ಹರಡುವ ಮಾಲಿನ್ಯಕಾರಕವನ್ನು ಹೆಸರಿಸಿ.
ಸೀಸಯುಕ್ತನೀರು ಮತ್ತು ಆಹಾರ

20. ಕೃಷಿ ಮೂಲಗಳಿಂದ ಬರುವ ತ್ಯಾಜ್ಯಗಳನ್ನು ಹೆಸರಿಸಿ.
ರಾಸಾಯನಿಕ ಗೊಬ್ಬರಗಳ ಉಳಿಕೆಗಳು, ಕೀಟನಾಶಕಗಳು, ಕಳೆನಾಶಕಗಳು . . .

21. ಮಣ್ಣುಮಾಲಿನ್ಯದ ನಿಯಂತ್ರಣ ಕ್ರಮಗಳನ್ನು ತಿಳಿಸಿ.
* ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದು    * ರಾಸಾಯನಿಕ ಗೊಬ್ಬರಗಲ ಮಿತವಾದ ಬಳಕೆ        
* ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು.    * ಬೆಳೆ ಬದಲಾವಣೆ    * ಆಸ್ಪತ್ರೆ ತ್ಯಾಜ್ಯಗಳನ್ನು ಸುಡುವುದು ಆಥವಾ ಊಳುವುದು
* ಇಳಿಜಾರು ಪ್ರದೇಶಗಳನ್ನು ಬದುಗಳನ್ನು ನಿಮರ್ಾಣ ಮಾಡುವುದು    * ಹೆಚ್ಚು ಮರಗಿಡಗಳನ್ನು ಬೆಳೆಸುವುದು.

22. ಶಬ್ಧಮಾಲಿನ್ಯದ ಪರಿಣಾಮಗಳನ್ನು ಹೆಸರಿಸಿ.
* ಕಿವುಡುತನ    * ರಕ್ತದೊತ್ತಡ ಏರಿಕೆ    * ಮಿದುಳಿನ ಅಪಸಾಮಾನ್ಯತೆ    * ಮುಂಗೋಪ    * ಹೃದಯ ಸಂಬಂದಿ ಕಾಯಿಲೆ

23. ಶಬ್ಧಮಾಲಿನ್ಯದ ನಿಯಂತ್ರಣ ಕ್ರಮಗಳೇನು?
* ಹಳೆಯ ಯಂತ್ರೋಪಕರಣಗಳನ್ನು ಬದಲಾಯಿಸುವುದು    * ಕೈಗಾರಿಕೆಗಳಲ್ಲಿ ಶಬ್ಧನಿಯಂತ್ರಣಗಳ ಅಳವಡಿಕೆ    
ರಸ್ತೆ ಬದಿಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳನ್ನು ಬೆಳೆಸುವುದು    * ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವುದು 
__________________________________________
ಸಂಗ್ರಹ ✍️ T.A. ಚಂದ್ರಶೇಖರ

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು