ಶಿಕ್ಷಣವೇ ಶಕ್ತಿ

Wednesday 19 May 2021

ಸಾಮಾನ್ಯ ಜ್ಞಾನ ೦೯

SHEKHAR TALAWAR:
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )☘
🍁🔹🍁🔹🍁🔹🍁🔹🍁🔹🍁

1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
  ಜಲಜನಕ.

2) ಅತಿ ಹಗುರವಾದ ಲೋಹ ಯಾವುದು?
 ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?
 ಒಸ್ಮೆನೆಯಂ

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
  ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?
 ಜಲಜನಕ.

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
ಸಾರಜನಕ.

7) ಪ್ರೋಟಾನ್ ಕಂಡು ಹಿಡಿದವರು ಯಾರು?
    ರುದರ್ ಫರ್ಡ್.

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
   ಆಮ್ಲಜನಕ.

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
  ಜೇಮ್ಸ್ ಚಾಡ್ ವಿಕ್

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
ಜೆ.ಜೆ.ಥಾಮ್ಸನ್

11) ಒಂದು ಪರಮಾಣುವಿನಲ್ಲಿರುವ   ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ  ಸಂಖ್ಯೆಯೇ —–?
ಪರಮಾಣು ಸಂಖ್ಯೆ.

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ  ಮೂಲವಸ್ತು ಯಾವುದು?   ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು  ಕರೆಯುತ್ತಾರೆ?
ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು —–  ಬಳಸುತ್ತಾರೆ?
 ಒಸ್ಮೆನಿಯಂ.

15) ಪ್ರಾಚೀನ ಕಾಲದ ಮಾನವ ಮೊದಲ  ಬಳಸಿದ ಲೋಹ ಯಾವುದು?
  ತಾಮ್ರ.

16) ಉದು ಕುಲುಮೆಯಿಂದ ಪಡೆದ ಕಬ್ಬಿಣ  ಯಾವುದು?
   ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು ——- ದ  ಅದಿರು.
  ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
  ಅಕ್ಸಾಲಿಕ್.

20) “ಆಮ್ಲಗಳ ರಾಜ” ಎಂದು ಯಾವ   ಆಮ್ಲವನ್ನು ಕರೆಯುವರು?
  ಸಲ್ಫೂರಿಕ್ ಆಮ್ಲ.

21) ಕಾಸ್ಟಿಕ್ ಸೋಡದ ರಾಸಾಯನಿಕ   ಹೆಸರೇನು?
 ಸೋಡಿಯಂ ಹೈಡ್ರಾಕ್ಸೈಡ್.

22) “ಮಿಲ್ಖ್ ಆಫ್ ಮೆಗ್ನಿಷಿಯಂ” ಎಂದು  ಯಾವುದನ್ನು ಕರೆಯುವರು?
  ಮೆಗ್ನಿಷಿಯಂ ಹೈಡ್ರಾಕ್ಸೈಡ್

23) ಅಡುಗೆ ಉಪ್ಪುವಿನ ರಾಸಾಯನಿಕ   ಹೆಸರೇನು?
  ಸೋಡಿಯಂ ಕ್ಲೋರೈಡ್

24) ಗಡಸು ನೀರನ್ನು ಮೃದು ಮಾಡಲು —– ಬಳಸುತ್ತಾರೆ?
  ಸೋಡಿಯಂ ಕಾರ್ಬೋನೆಟ್.

25) ಕೆಂಪು ಇರುವೆ ಕಚ್ಚಿದಾಗ ಉರಿಯಲು   ಕಾರಣವೇನು?
ಪಾರ್ಮಿಕ್ ಆಮ್ಲ.

26) ಗೋಧಿಯಲ್ಲಿರುವ ಆಮ್ಲ ಯಾವುದು?
 ಗ್ಲುಮಟಿಕ್.

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
  ಪೋಲಿಕ್.

28) ಸಾರಜನಕ ಕಂಡು ಹಿಡಿದವರು ಯಾರು?
 ರುದರ್ ಪೊರ್ಡ್.

29) ಆಮ್ಲಜನಕ ಕಂಡು ಹಿಡಿದವರು ಯಾರು?
  ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು —-  ಬಳಸುತ್ತಾರೆ?
ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು —– ಎಂದು  ಕರೆಯುತ್ತಾರೆ?
  ಸೈಕೋಮೀಟರ್.

32) ಯಾವುದರ ವಯಸ್ಸು ಪತ್ತೆಗೆ ಸಿ-14   ಪರೀಕ್ಷೆ ನಡೆಸುತ್ತಾರೆ?
  ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ  ಚಿಕಿತ್ಸೆಯಲ್ಲಿ ಬಳಸುತ್ತಾರೆ?
   ಕ್ಯಾನ್ಸರ್.

34) ಡುರಾಲು ಮಿನಿಯಂ ಲೋಹವನ್ನು  ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
 ವಿಮಾನ.

35) ನೀರಿನಲ್ಲಿ ಕರಗುವ ವಿಟಮಿನ್ ಗಳು  ಯಾವುವು?
   ಬಿ & ಸಿ.

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು  ಬರುವುದು?
  ಮಕ್ಕಳಲ್ಲಿ.

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು  ಬಾಗಿರುವ ಬಣ್ಣ ಯಾವುದು?
 ನೇರಳೆ.

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ  ಬಣ್ಣ ಯಾವುದು?
  ಕೆಂಪು.

39) ಆಲೂಗಡ್ಡೆ ಯಾವುದರ   ರೂಪಾಂತರವಾಗಿದೆ?
ಬೇರು.

4 0) ಮಾನವನ ದೇಹದ ಉದ್ದವಾದ ಮೂಳೆ  ಯಾವುದು?
ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು   ಹುಟ್ಟುವ ಸ್ಥಳ ಯಾವುದು?
ಅಸ್ಥಿಮಜ್ಜೆ.

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ  ವಿಟಮಿನ್ ಯಾವು?
  ಎ & ಡಿ.

43) ರಿಕೆಟ್ಸ್ ರೋಗ ತಗುಲುವ ಅಂಗ   ಯಾವುದು?
 ಮೂಳೆ.

44) ವೈರಸ್ ಗಳು —– ಯಿಂದ   ರೂಪಗೊಂಡಿರುತ್ತವೆ?
  ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?
  ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು?  
 ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
 ಬ್ಯೂಟೆನ್ & ಪ್ರೋಫೆನ್.

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
 ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ  ಬಳಸುವ ಅನಿಲ ಯಾವುದು?
 ಜಲಜನಕ.

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ   ರಾಸಾಯನಿಕ ಯಾವುದು?
ಎಥಲಿನ್.

51) ಆಳಸಾಗರದಲ್ಲಿ ಉಸಿರಾಟಕ್ಕೆ    ಆಮ್ಲಜನಕದೊಂದಿಗೆ ಬಳಸುವ ಅನಿಲ   ಯಾವುದು?
  ಸಾರಜನಕ.

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ  ಯಾವುದು?
 ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ   ಯಾವುದು?
 ಹೀಲಿಯಂ.

54) ಪರಿಶುದ್ಧವಾದ ಕಬ್ಬಿಣ ಯಾವುದು?
ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ  ಯಾವುದು?
  ಕಾರ್ಬನ್ ಡೈ ಆಕ್ಸೈಡ್.

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ   ಯಾವುದು?
  ಕಾರ್ಬೋನಿಕ್ ಆಮ್ಲ.

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ   ರಾಸಾಯನಿಕ ಯಾವುದು?
  ಸೋಡಿಯಂ ಬೆಂಜೋಯಿಟ್.

58) “ಆತ್ಮಹತ್ಯಾ ಚೀಲ”ಗಳೆಂದು ——  ಗಳನ್ನು ಕರೆಯುತ್ತಾರೆ?
  ಲೈಸೋಜೋಮ್

59) ವಿಟಮಿನ್ ಎ ಕೊರತೆಯಿಂದ —-  ಬರುತ್ತದೆ?
 ಇರುಳು ಕುರುಡುತನ

60) ಐಯೋಡಿನ್ ಕೊರತೆಯಿಂದ ಬರುವ ರೋಗ   ಯಾವುದು?
  ಗಳಗಂಡ (ಗಾಯಿಟರ್)

🌺🔹🌺🔹🌺🔹🌺🔹🌺🔹🌺

⚜  COVID - 19 -  ಪ್ರಮುಖ ಯೋಜನೆಗಳು
⭕️⭕️⭕️⭕️⭕️⭕️⭕️⭕️

🌳 *ಕರೋನಾ ಕವಚ* - _ಭಾರತ ಸರ್ಕಾರ_ 

🌳 *ಬ್ರೇಕ್ ದಿ ಚೈನ್* - _ಕೇರಳ_ 

🌳 *ಆಪರೇಷನ್ ಶೀಲ್ಡ್* - _ದೆಹಲಿ ಸರ್ಕಾರ_ 

🌳 *ನಾಡಿ ಅಪ್ಲಿಕೇಶನ್* - _ಪುಂಡುಚೇರಿ_ 

🌳 *ರಕ್ಷಣಾ ಸೇವೆಗಳು* - _ಛತ್ತೀಸ್‌ಗಢ  ಪೊಲೀಸ್_ 

🌳 *G i GOT* - _ಭಾರತ ಸರ್ಕಾರ_ 

🌳 *ಕರೋನಾ ಕೇರ್* - _ಫೋನ್‌ಪೇ_ 

🌳 *ಪ್ರಜ್ಞಾಮ್ ಆ್ಯಪ್* --- _ಜಾರ್ಖಂಡ್_ 
 
🌳 *ಕೋವಿಡ್ಕೇರ್ ಅಪ್ಲಿಕೇಶನ್* - _ಅರುಣಾಚಲ ಪ್ರದೇಶ_ 

🌳 *ಕರೋನಾ ಸಪೋರ್ಟ್ ಅಪ್ಲಿಕೇಶನ್* - _ಬಿಹಾರ_ 
 
🌳 *ಆರೋಗ್ಯ ಸೇತು* - *_ಭಾರತ ಸರ್ಕಾರ_* 

🌳 *ಪರಿಹಾರಗಳು* - _ಮಾನವ ಸಂಪನ್ಮೂಲ ಸಚಿವಾಲಯ_ 
 
🌳 *5 ಟಿ* --- _ದೆಹಲಿ_ 
 
🌳 *ಕೊರೆಂಟೈನ್ ಅಪ್ಲಿಕೇಶನ್* - _ಐಐಟಿ ಅಪ್ಲಿಕೇಶನ್_ 

🌳 *ಸಹಾನುಭೂತಿ ಅಪ್ಲಿಕೇಶನ್* --- _ನಾಗರಿಕ ಸೇವಾ ಸಂಘ_ 
 
🌳 *ವಿ-ಸೇಫ್ ಟನಲ್* - _ತೆಲಂಗಾಣ_ 
 
🌳 *ಲೈಫ್‌ಲೈನ್ ಉಡಾನ್* - _ನಾಗರಿಕ ವಿಮಾನಯಾನ ಸಚಿವಾಲಯ_ 
 
🌳 *ವೆರಾಸ್ ಕೋವಿಡ್ 19 ಮಾನಿಟರಿಂಗ್ ಸಿಸ್ಟಮ್* - _ತೆಲಂಗಾಣ_ 
 
🌳 *ಸೆಲ್ಫ್ ಡಿಕ್ಲೀರೇಶನ್ ಅಪ್ಲಿಕೇಶನ್* - _ನಾಗಾಲ್ಯಾಂಡ್_ 

🌳 *ಆಪರೇಷನ್ ನಮಸ್ತೆ* - _ಭಾರತೀಯ ಸೇನೆ_ 

🌳 *ಕರೋನಾ ವಾಚ್ ಅಪ್ಲಿಕೇಶನ್* - _ಕರ್ನಾಟಕ_ 
 
🌳 *ನಮಸ್ತೆ ಓವರ್ ಹ್ಯಾಂಡ್ಶೇಕ್* - _ಕರ್ನಾಟಕ_ 

🌳 *ಮೊ ಜೀವನ್* - _ಒಡಿಶಾ_ 

🌳 *Team 11* -- _ಉತ್ತರ ಪ್ರದೇಶ_.
=========🔹=======

❇️ಪ್ರಚಲಿತ ಘಟನೆಗಳು19-05-2021
 ═════════════════
 ಪ್ರ .1.  "ಇಟಾಲಿಯನ್ ಓಪನ್ ವುಮೆನ್ಸ್ ಸಿಂಗಲ್ಸ್" ಪ್ರಶಸ್ತಿಯನ್ನು ಗೆದ್ದವರು ಯಾರು?
 ಉತ್ತರ.  ಇಂಗಾ ಸ್ವಿಟೆಕ್

 ಪ್ರ .2.  ಇಟಲಿಯ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿಯನ್ನು ಸ್ಪೇನ್‌ನ ರಾಫೆಲ್ ನಡಾಲ್ ಎಷ್ಟು ಬಾರಿ ಗೆದ್ದಿದ್ದಾರೆ?
 ಉತ್ತರ.  10 ನೇ ಬಾರಿ

 ಪ್ರ .3.  ಬಾರ್ಸಿಲೋನಾ ಯುಇಎಫ್ಎ ಮಹಿಳಾ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಯಾವ ಸಮಯದಲ್ಲಿ ಗೆದ್ದಿದೆ?
 ಉತ್ತರ.  ಮೊದಲ ಸಲ

 ಪ್ರ .4.  ಚೀನಾದ ಚುರೊಂಗ್ ರೋವರ್ 7 ತಿಂಗಳ ಬಾಹ್ಯಾಕಾಶ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಯಾವ ಗ್ರಹದಲ್ಲಿ ಯಶಸ್ವಿಯಾಗಿ ಇಳಿದಿದೆ?
 ಉತ್ತರ.  ಮಂಗಳ

 ಪ್ರ .5.  ಯಾವ ನಟ ತಮಿಳುನಾಡು ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ?
 ಉತ್ತರ.  ರಜನಿಕಾಂತ್

 ಪ್ರ .6.  ರಾಜನಾಥ್ ಸಿಂಗ್ ಮತ್ತು ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2-ಡಿಜಿ, ಕೋವಿಡ್ -19 ವಿರೋಧಿ ಔಷಧದ ಮೊದಲ ಬ್ಯಾಚ್ ಅನ್ನು ಬಿಡುಗಡೆ ಮಾಡಿದವರು ಯಾರು?
 ಉತ್ತರ.  ಡಾ. ಹರ್ಷವರ್ಧನ್

 ಪ್ರ .7.  ಕರೋನಾದಿಂದ ನಿರ್ಗತಿಕ ಮಕ್ಕಳ ವೆಚ್ಚವನ್ನು ಭರಿಸುವುದಾಗಿ ಯಾವ ರಾಜ್ಯ ಘೋಷಿಸಿದೆ?
 ಉತ್ತರ.  ದೆಹಲಿ ಸರ್ಕಾರ

 ಪ್ರ .8.  ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಯಾವ ಭಾರತೀಯ ಮೂಲದ ಮಹಿಳೆಯನ್ನು ಶ್ವೇತಭವನದ ಹಿರಿಯ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ?
 ಉತ್ತರ.  ನೀರಾ ಟಂಡನ್

 ಪ್ರ .9.  ಇತ್ತೀಚೆಗೆ ಮಿಸ್ ಯೂನಿವರ್ಸ್ 2020 ಪ್ರಶಸ್ತಿಯನ್ನು ಗೆದ್ದ ಮೆಕ್ಸಿಕನ್ ಮಹಿಳೆ ಯಾರು?
 ಉತ್ತರ.  ಆಂಡ್ರಿಯಾ ಮೇಜಾ

 ಪ್ರ .10.  ಮೇ 18 ರಂದು ವಿಶ್ವದಾದ್ಯಂತ ಯಾವ ದಿನವನ್ನು ಆಚರಿಸಲಾಗುತ್ತದೆ?
 ಉತ್ತರ.  ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ ಮತ್ತು ವಿಶ್ವ ಏಡ್ಸ್ ಲಸಿಕೆ ದಿನ

__________________________________________
*♦️General Knowledge
🍁 *ಅಸ್ಸಾಂ* ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ. 
🔸 ಅಸ್ಸಾಂ ರಾಜ್ಯದ ವಿಸ್ತೀರ್ಣ= *78,438 km*

🔹ಅಸ್ಸಾಂ ರಾಜ್ಯಕ್ಕೆ ಸಂವಿಧಾನದ *371(B)* ವಿಧಿಯು ವಿಶೇಷ ಸ್ಥಾನಮಾನ ನೀಡಿದೆ, 

🔹 ರಾಜಧಾನಿ= *ದಿಸ್ಪುರ್*

🔸 ಪ್ರಸ್ತುತ ಮುಖ್ಯಮಂತ್ರಿ= *ಸರ್ಬಾನಂದ ಸೋನೊವಾಲ್*

🔹 ಪ್ರಸ್ತುತ ರಾಜ್ಯಪಾಲರು= *ಜಗದೀಶ್ ಮುಖಿ*

🔸 ಸಾಕ್ಷರತೆ= *72.19%*

🔹 ಲಿಂಗಾನುಪಾತ= *958/1000*

🔸 ಅಸ್ಸಾಂ ರಾಜ್ಯದ ಪ್ರಮುಖ ನೃತ್ಯ= *ಬಿಹು*

🔸 ಅಸ್ಸಾಂ ರಾಜ್ಯದ ಅಧಿಕೃತ ಭಾಷೆ= *ಅಸ್ಸಾಮೀ*

🔹 ಅಸ್ಸಾಂ ರಾಜ್ಯದ ಪ್ರಾಣಿ = *ಒಂದು ಕೊಂಬಿನ ಖಡ್ಗಮೃಗ*

🔸ಅಸ್ಸಾಂ ರಾಜ್ಯದ ಪಕ್ಷಿ= *ಬಿಳಿ ರೆಕ್ಕೆಯ ಮರದ ಬಾತುಕೋಳಿ*

🔹ಅಸ್ಸಾಂ ರಾಜ್ಯದ ಹೂವು= *ರೈನ್‌ಕೋಸ್ಟೈಲಿಸ್ ರೆಟುಸಾ*

🔸ಅಸ್ಸಾಂ ರಾಜ್ಯದ ಮರ= *ಡಿಪ್ಟೆರೊಕಾರ್ಪಸ್ ಮ್ಯಾಕ್ರೋಕಾರ್ಪಸ್*

🔹ಅಸ್ಸಾಂ ರಾಜ್ಯದ ವಿಧಾನಸಭೆ= *126 ಸದಸ್ಯರು*

🔸ಅಸ್ಸಾಂ ರಾಜ್ಯದಲ್ಲಿ *ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇದೆ*
( ಈ ಉದ್ಯಾನವನದಲ್ಲಿ ರೈನೋಸಾರಸ್ ಅಥವಾ *ಒಂದು ಕೊಂಬಿನ ಘೇಂಡಾಮೃಗ ಗಳಿಗೆ ಹೆಸರುವಾಸಿಯಾಗಿದೆ*, 

🔹 ಅಸ್ಸಾಂ ರಾಜ್ಯದಲ್ಲಿ= *ಸುರ್ಮಾ ಕಣಿವೆ ಇದೆ*

🔸 ಅಸ್ಸಾಂ ರಾಜ್ಯದಲ್ಲಿ *ಮಾನಸ ಹುಲಿ ಸಂರಕ್ಷಣಾ ಕೇಂದ್ರ ಇದೆ*

🔸1867 ಮಾರ್ಚ್ 26ರಲ್ಲಿ ಭಾರತದ ಮೊದಲ ಪೆಟ್ರೋಲಿಯಂ ಬಾವಿ ಅಸ್ಸಾಂ ರಾಜ್ಯದ *ಮಾಕುಂನಲ್ಲಿ ಪತ್ತೆಯಾಯಿತು.*

🔹ಅಸ್ಸಾಂ ರಾಜ್ಯದಲ್ಲಿ 1889 ರಲ್ಲಿ *ದಿಗ್ಬಾಯ್ ಪೆಟ್ರೋಲಿಯಂ ಬಾವಿ ಪತ್ತೆಯಾಯಿತು. ಇದಕ್ಕೆ ( *ಬೊಂಗೈಗಾವ್ ಎಂದು ಹೆಸರಿಸಲಾಗಿದೆ*)

🔸 ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವ ರಾಜ್ಯ 
*ಅಸ್ಸಾಂ*(68%)

🔹ಅಸ್ಸಾಂ ರಾಜ್ಯವು *GST ಮಸೂದೆಗೆ* ಅಂಗೀಕಾರ ನೀಡಿದ ಮೊದಲ ರಾಜ್ಯವಾಗಿದೆ,

🔸 ಅಸ್ಸಾಂ ರಾಜ್ಯದಲ್ಲಿ ಸಂವಿಧಾನದ *169ನೇ ವಿಧಿಯ ಪ್ರಕಾರ ಹೊಸ ವಿಧಾನ ಪರಿಷತ್ತನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ,*

🔹 ಅಸ್ಸಾಂ ರಾಜ್ಯದಲ್ಲಿ *ಲೋಕಪ್ರಿಯ ಗೋಪಿನಾಥ್ ಅವರ ಡೋಲಿ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.*

🔸 *ಡಾ// ಮನಮೋಹನ್ ಸಿಂಗ್* ರವರು ಅಸ್ಸಾಂ ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ, 

🔹 ಬ್ರಹ್ಮಪುತ್ರ ನದಿ *ಅಸ್ಸಾಂ ರಾಜ್ಯದ ಕಣ್ಣೀರಿನ ನದಿಯಾಗಿದೆ*, 

🔸ಅಸ್ಸಾಂ ರಾಜ್ಯದಲ್ಲಿರುವ *ಮಜಲಿ ದ್ವೀಪವು ಪ್ರಪಂಚದ ಅತಿ ದೊಡ್ಡ ನದಿ ದ್ವೀಪವಾಗಿದೆ*.

( ಈ ಮಜಲಿ ದ್ವೀಪವು *ಬ್ರಹ್ಮಪುತ್ರ ನದಿ* ಇಂದ ಸೃಷ್ಟಿಯಾಗಿದೆ)

🔹ಅಸ್ಸಾಂ ರಾಜ್ಯದಲ್ಲಿ *ಚಹಾ ಸಂಶೋಧನ ಕೇಂದ್ರ ಇದೆ,*

🔸 ಅಸ್ಸಾಂ ರಾಜ್ಯದ "ಗುವಾಹಟಿಯಲ್ಲಿ" *ಐ.ಐ.ಟಿ.ಯನ್ನು 1994 ರಲ್ಲಿ ಸ್ಥಾಪಿಸಲಾಯಿತು,*

 
🔹 ಭಾರತದ ಮೊಟ್ಟ ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ= *ಸೈಯದ್ ಅನ್ವರ್ ತೈಮೂರ್*

🔸ಅಸ್ಸಾಂ ರಾಜ್ಯದಲ್ಲಿ ಭಾರತೀಯ ಸೇನೆಯು *ಆಪರೇಷನ್ ಆಲ್ ಪ್ಲೇಯರ್ ಕಾರ್ಯಾಚರಣೆ* ನಡೆಸಿದೆ,

(ಅಸ್ಸಾಂ ಪ್ರತ್ಯೇಕತಾವಾದಿ ದಂಗೆಕೋರ ಗುಂಪುಗಳ ವಿರುದ್ಧ ಭೂತಾನ್‌ನ ದಕ್ಷಿಣ ಪ್ರದೇಶಗಳಲ್ಲಿ *15 ಡಿಸೆಂಬರ್ 2003 ಮತ್ತು ಜನವರಿ 3, 2004 ರ ನಡುವೆ ನಡೆಸಿದ ಮಿಲಿಟರಿ ಕಾರ್ಯಚರಣೆ* )

🔸ಅಸ್ಸಾಂ ರಾಜ್ಯದಲ್ಲಿ *ಡಿಪೋರ್ ಬಿಲ್ ಎಂಬ ತೇವಯುತ ಪ್ರದೇಶ* ಕಂಡುಬರುತ್ತದೆ, 

🔹ಅಸ್ಸಾಂ ರಾಜ್ಯದಲ್ಲಿ *ಹೋಲಾಕ್ ಗಿಬ್ಬನ್ ಎಂಬ ಮಂಗವು* ಕಂಡುಬರುತ್ತದೆ, 

🔸 *ಮುಗಾಸಿಲ್ಕ್ ಭೌಗೋಳಿಕ ಸಂಕೇತ* ("ಜಿಯೋಗ್ರಾಫಿಕಲ್ ಇಂಡಿಕೇಶನ್") (GI) ಟ್ಯಾಗ್ ಸಂರಕ್ಷಿತ ಭಾರತದ ಅಸ್ಸಾಂ ರಾಜ್ಯದಲ್ಲಿ ಉತ್ಪಾದಿಸಲಾಗುತ್ತದೆ, 

🔹 *ಚುಟಿಯಾ  ಎಂಬ ಆದಿವಾಸಿ ಗುಂಪು* ಅಸ್ಸಾಂ ರಾಜ್ಯದಲ್ಲಿ ಕಂಡು ಬರುತ್ತಾರೆ, 

🔸ಅಸ್ಸಾಂ ರಾಜ್ಯವು *ಭೂತಾನ ಮತ್ತು ಬಾಂಗ್ಲಾದೇಶದೊಂದಿಗೆ ಭೂಗಡಿ ಗಡಿಯನ್ನು ಹಂಚಿಕೊಂಡಿದೆ*, 

🔹NRC ನೊಂದಣಿಗೆ ಅವಕಾಶ ನೀಡಿದ ಮೊದಲ ರಾಜ್ಯ= *ಅಸ್ಸಾಂ*
=====================

💠ಥಾಮಸ್ ಬ್ಯಾಚ್ 2025 ರವರೆಗೆ ಐಒಸಿ ಅಧ್ಯಕ್ಷರಾಗಿ ಮರು ಆಯ್ಕೆಯಾದರು.

💠ರಷ್ಯಾದ ಡೋಪಿಂಗ್ ಹಗರಣದ ಪ್ರಾಬಲ್ಯದ ಎಂಟು ವರ್ಷಗಳ ಜನಾದೇಶ ಮತ್ತು ಶಾಂತಿಕಾಲದಲ್ಲಿ ಮುಂದೂಡಲ್ಪಟ್ಟ ಮೊದಲ ಒಲಿಂಪಿಕ್ಸ್‌ನ ನಂತರ ಜರ್ಮನಿಯ ವಕೀಲರು ಅವಿರೋಧವಾಗಿ ಮತ್ತು 93-1 ಮತಗಳನ್ನು ಗೆದ್ದರು.

_________________________________________
📝"PSI"  ಮತ್ತು"FDA" ಪರೀಕ್ಷೆಯಲ್ಲಿ ಕೇಳಿರುವ ಭೂಗೋಳ ಶಾಸ್ತ್ರದ ಪ್ರಶ್ನೋತ್ತರಗಳು📚🌻✨

1) "ಬಿರುಕು ಕಮರಿಯಲ್ಲಿ" ಹರಿಯುವ ನದಿ ಯಾವುದು? 
🔅 ನರ್ಮದಾ ನದಿ

2) ಗಂಗಾ ನದಿಯ ಅತಿ ದೊಡ್ಡ ಉಪನದಿ ಯಾವುದು? 
🔅 ಯಮುನಾ ನದಿ

3) ಅರಬ್ಬಿ ಸಮುದ್ರದಲ್ಲಿರುವ ಭಾರತೀಯ ದ್ವೀಪಗಳ ಅತಿಪ್ರಮುಖ ಲಕ್ಷಣವೇನು? 
🔅 ಅವುಗಳು ಹವಳದ ಮೂಲಗಳಾಗಿವೆ

4) ತಾಮ್ರದ ಅದಿರು ದೊರಕುವ   "ಖೇತ್ರಿ" ಪ್ರದೇಶವು ಯಾವ ರಾಜ್ಯದಲ್ಲಿದೆ? 
🔅 ರಾಜಸ್ಥಾನ್

6) ಭಾರತದ ದಕ್ಷಿಣದ ತುತ್ತ ತುದಿಯ ಪರ್ವತ ಶ್ರೇಣಿ ಯಾವುದು? 
🔅 ಕಾರ್ಡಮಮ್ ಬೆಟ್ಟಗಳು

7) "ಟಿಬೆಟ್ ನ್  ಕೈಲಾಸ" ಪರ್ವತದಲ್ಲಿ ಉಗಮವಾಗುವ ನದಿಗಳು ಗುಂಪು? 
🔅 ಬ್ರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೊ

8) ದಕ್ಷಿಣ ಭಾರತದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು? 
🔅 ಗೋದಾವರಿ

9) ಡಿಸೆಂಬರ್ ತಿಂಗಳಲ್ಲಿ ಯಾವ ಸ್ಥಳವು ಸೌರ ಶಕ್ತಿಯನ್ನು ಪಡೆಯುತ್ತದೆ? 
🔅 ಚೆನ್ನೈ

10) ಭಾರತದ "ಸಕ್ಕರೆಯ ತೊಟ್ಟಿಲು" ಎಂದು ಯಾವ ರಾಜ್ಯವನ್ನು  ಕರೆಯುತ್ತಾರೆ? 
🔅 ಉತ್ತರಪ್ರದೇಶ

11) ಪಶ್ಚಿಮ ಬಂಗಾಳದ "ರಾಣಿಗಂಜ್" ಪ್ರದೇಶವು ಯಾವ ಖನಿಜದ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ? 
🔅 ಕಲ್ಲಿದ್ದಲು

12) "ತೋಡ ಬುಡಕಟ್ಟು ಜನಾಂಗವು" ಎಲ್ಲಿ ಕಂಡುಬರುತ್ತಾರೆ? 
🔅 ತಮಿಳುನಾಡಿನ ನೀಲಗಿರಿ

13) "ವಜ್ರದ ಗಣಿಗಳು" ಯಾವ ರಾಜ್ಯದಲ್ಲಿವೆ? 
🔅 ಮಧ್ಯ ಪ್ರದೇಶ್

14) ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯಾವುದು? 
🔅 ಶಾಖೋತ್ಪನ್ನ ವಿದ್ಯುಚಕ್ತಿ

15)"ಬಾರಾಮುಲ" ಜಲ ವಿದ್ಯುತ್ ಯೋಜನೆ ಯಾವ ಸ್ಥಳದಲ್ಲಿದೆ? 
🔅 ಜಮ್ಮು ಮತ್ತು ಕಾಶ್ಮೀರ

16) ಪೊಂಗ್ ಆಣೆಕಟ್ಟನ್ನು  ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? 
🔅 ಬಿಯಾಸ್ ನದಿ

__________________________________________

🌀Capital of knowledge 🌐:
🌲ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ರಾಜ್ಯಗಳು (ಇಂಟರ್ನ್ಯಾಷನಲ್ ಬಾರ್ಡರ್ ಆಫ್ ಇಂಡಿಯಾ)🌲

⛳️⛳️⛳️⛳️⛳️⛳️⛳️⛳️⛳️⛳️⛳️⛳️⛳️⛳️

🌳 ವಾಗಾ ಗಡಿ - ಪಂಜಾಬ್ (ಭಾರತ-ಪಾಕಿಸ್ತಾನ್)

 🌳ಮೊರೆಹ್ - ಮಣಿಪುರ (ಭಾರತ-ಮ್ಯಾನ್ಮಾರ್)

 🌳 ನಾಥು ಲಾ ಪಾಸ್ - ಸಿಕ್ಕಿಂ (ಭಾರತ-ಚೀನಾ)

🌳 ಲೋಂಗವಾಲಾ - ರಾಜಸ್ಥಾನ (ಭಾರತ-ಪಾಕಿಸ್ತಾನ್)

 🌳ಡಾಕಿ ತಮಾಬಿಲ್ - ಮೇಘಾಲಯ (ಭಾರತ-ಬಾಂಗ್ಲಾದೇಶ)

 🌳 ರನ್ ಆಫ್ ಕಚ್ - ಗುಜರಾತ್ (ಭಾರತ-ಪಾಕಿಸ್ತಾನ್)

 🌳 ಜೈಗಾಂವ್ - ಪಶ್ಚಿಮ ಬಂಗಾಳ (ಭಾರತ-ಭೂತಾನ್)

 🌳 ಪ್ಯಾಂಗೊಂಗ್ ಸರೋವರ - ಲಢಾಕ (ಭಾರತ-ಚೀನಾ)

🌳 ಸುನೌಲಿ ಗಡಿ - ಉತ್ತರ ಪ್ರದೇಶ (ಭಾರತ-ನೇಪಾಳ)

 🌳 ಧನುಷ್ಕೋಡಿ - ತಮಿಳುನಾಡು (ಭಾರತ-ಶ್ರೀಲಂಕಾ)


ಭೂಗೋಳಶಾಸ್ತ್ರದ 
ಅದ್ಭುತ ಮಾಹಿತಿ #
━━━━━━━━━━━━━━━━━━━
ಭಾರತೀಯ ಬಾಹ್ಯಾಕಾಶ ಸಂಶೋಧನೆ  ಕೇಂದ್ರ ---💥 ಬೆಂಗಳೂರು
-----------------------------------------
ಇನ್ಸಾಟ್ ಉಪಗ್ರಹಗಳ ನಿಯಂತ್ರಣ ಕೇಂದ್ರ ---
👉 ಹಾಸನ👈
--------------------------------------
ವಿಕ್ರಮ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ---
👉 ತಿರುವನಂತಪುರ👈
------------------------------------------
ಇಸ್ರೋದ ಮುಖ್ಯ ಉಪಗ್ರಹ  ಉಡಾವಣ ಕೇಂದ್ರ --- 
👉ಶ್ರೀ ಹರಿಕೋಟ👈
-------------------------------------------
ರಾಷ್ಟ್ರೀಯ ದೂರಸಂವೇದಿ ಸಂಸ್ಥೆ ---👉 ಹೈದರಾಬಾದ್👈
━━━━━━━━━━━━━━━━━━━
ಸೆಪ್ಟೆಂಬರ್ ೨೩ & ಮಾರ್ಚ್ ೨೧ ವಿಷುವತ್ಸಂಕ್ರಾಂತಿ..🌞🌞
___
ಜೂನ್ ೨೧ ಕಟಕಾಯನ್☀️
_
ಡಿಸೆಂಬರ್ ೨೨ ಮಕರಾಯನ ☀️
__
ಸೆಪ್ಟೆಂಬರ್ ೨೩ & ಮಾರ್ಚ್ ೨೧ ವಿಷುವತ್ಸಂಕ್ರಾಂತಿ..ಹಗಲು & ರಾತ್ರಿ ಸಮನಾಗಿರುತ್ತದೆ.🌞🌞
___

ಮಾರ್ಚ್ ೨೧--- ಮೇಷ ಸಂಕ್ರಾಂತಿ
_
━━━━━━━━━━━━━━━━━━━
ಸಿಯಾಲ್ --- ಸಿಲಿಕೇಟ್ & ಅಲ್ಯೂಮಿನಿಯಂ

ಸೀಮಾ ಪದರು ---- ಸಿಲಿಕೇಟ್ & ಮೆಗ್ನೇಸಿಯಮ್

ನಿಫೆ--- ಕಬ್ಬಿಣ & ನಿಕ್ಕಲ್ 
━━━━━━━━━━━━━━━━━━━
🌞🌞ಉತ್ತರ ಧ್ರುವ --- ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ೬ ತಿಂಗಳು ಹಗಲು🌞🌞

🌚ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ೬ ತಿಂಗಳು ರಾತ್ರಿ🌚

🌞🌞ದಕ್ಷಿಣ ಧ್ರುವ --- ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ೬ ತಿಂಗಳು  ಹಗಲು🌞🌞

🌑🌑ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ೬ ತಿಂಗಳು ರಾತ್ರಿ ..🌚🌚
━━━━━━━━━━━━━━━━━━━

☀️ಕರ್ನಾಟಕದ ಪ್ರಮುಖ ಜಲವಿದ್ಯುತ್ ಯೋಜನೆಗಳು
------------------------------------------
ಏಷ್ಯಾಖಂಡದಲ್ಲೆ ಮೊಟ್ಟ ಮೊದಲ ಜಲವಿದ್ಯುತ್ ಯೋಜನೆಯು 1902 ರಲ್ಲಿ ಕಾವೇರಿ ನದಿಗೆ ಶಿವನಸಮುದ್ರ ಎಂಬಲ್ಲಿ ಸ್ಥಾಪಿಸಲಾಯಿತು ..
-------------------------------------------
ಶಿಂಷಾ ಜಲವಿದ್ಯುತ್ ಯೋಜನೆ
ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿಗೆ ಮಂಡ್ಯ ಜಿಲ್ಲೆಯ ಶಿಂಷಾಪುರ ಬಳಿ 1940 ರಲ್ಲಿ ಜಲವಿದ್ಯುತ್ ಘಟಕವನ್ನು ಸ್ಥಾಪಿಸಲಾಯಿತು ..
--------------------------------------------
ಶರಾವತಿ ಜಲವಿದ್ಯುತ್ ಯೋಜನೆ ..
ಶರಾವತಿ ಜಲವಿದ್ಯುತ್ ಘಟಕವನ್ನು 1948 ರಲ್ಲಿ ಶರಾವತಿ ನದಿಗೆ ಸ್ಥಾಪಿಸಲಾಯಿತು ..
------------------------------------------
ಕಾಳಿ ಜಲವಿದ್ಯುತ್ ಯೋಜನೆ
ಕಾಳಿ ಜಲವಿದ್ಯುತ್ ಘಟಕವನ್ನು 1979 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಕಾಳಿ ನದಿಗೆ ನಿರ್ಮಿಸಲಾಗಿದೆ 📔

━━━━━━━━━━━━━━━━━━━
# ಪ್ರಪಂಚದ ಮ್ಯಾಂಚೆಸ್ಟರ್ ಗಳು #
━━━━━━━━━━━━━━━━━━━
೧) ಭಾರತದ ಮ್ಯಾಂಚೆಸ್ಟರ್ ---
👉 ಮುಂಬಯಿ

೨) ಬಾಂಗ್ಲಾದೇಶದ ಮ್ಯಾಂಚೆಸ್ಟರ್---👉 ಡಾಕಾ

೩) ಜಪಾನಿನ ಮ್ಯಾಂಚೆಸ್ಟರ್----- 
👉ಓಸಾಕಾ

೪) ಪಾಕಿಸ್ತಾನದ ಮ್ಯಾಂಚೆಸ್ಟರ್--- ಕರಾಚಿ

೫) ಚೀನಾದ ಮ್ಯಾಂಚೆಸ್ಟರ್-----
👉 ಶಾಂಘೈ

೬) ರಷ್ಯಾದ ಮ್ಯಾಂಚೆಸ್ಟರ್----
👉 ಮಾಸ್ಕೋ

೭) ಅಮೆರಿಕದ ಮ್ಯಾಂಚೆಸ್ಟರ್ -----
👉 ಕ್ಯಾಲಿಫೋರ್ನಿಯಾ📕
_________________________________________

🔰ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು🔰

👇👇👇👇👇👇👇👇👇👇
1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999)
🌹 ಕಲ್ಯಾಣಸ್ವಾಮಿ

2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999)
🌹 ಧಾರವಾಡ

3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ? 
🌹 ಅಂಕೋಲಾ

4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999)
🌹 ಉಪ್ಪಿನ ಸತ್ಯಾಗ್ರಹ

5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999)
🌹 1947ರಲ್ಲಿ
 
6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999)
🌹 ನವೆಂಬರ್ 1, 1956

7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005)
🌹 ಮುಂಬೈ

8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು    ಎಕರೆಯಲಾಗಿದೆ,  ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002)
🌹 ಅಖಿಲ ಭಾರತ ಸಾಮಾಜಿಕ ಸಮ್ಮೇಳನ

9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015)
🌹 21ಬಂದೂಕು ಸಲಾಮಿನ ರಾಜ್ಯ

10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017)
🌹 ಗಂಗಾಧರರಾವ್ ದೇಶಪಾಂಡೆ

11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017)
🌹 ಮೈಲಾರ ಮಹದೇವಪ್ಪ

12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು? 
🌹 ವೆಸ್ಲಿಯನ್

13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017)
🌹 ಸಂಗೊಳ್ಳಿ ರಾಯಣ್ಣ

14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು  ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017)
🌹 ಮಿಲ್ಲರ್ ಸಮಿತಿ

15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು?  ( KAS-2017)
🌹 ಅಧ್ಯಕ್ಷರು= ಫಜಲ್ ಅಲಿ, 
 ಸದಸ್ಯರು= H,N,ಕುಂಜರು, ಕೆ, ಎಂ,  ಪನಿಕರ್

16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017)
🌹 ಸರ್ ಎಂ ವಿಶ್ವೇಶ್ವರಯ್ಯ

17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018)
🌹 ಫಜಲ್ ಅಲಿ ಸಮಿತಿ

18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016)
🌹 ಹೆನ್ರಿ ಇರ್ವಿನ್

19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015)
🌹 ಕುವೆಂಪು

20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015)
🌹 ಜಾನ್ ವೀಡ

21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014)
🌹 ಮಂಗಳೂರು ಸಮಾಚಾರ

22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014)
🌹 ಚಿಕ್ಕಬಳ್ಳಾಪುರ

23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014)
🌹 ಬೆಳಗಾವಿ-1924ರಲ್ಲಿ

24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018)
🌹 ಎನ್ ಎಸ್ ಹರ್ಡೆಕರ್

25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013)
🌹 1947

26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009)
🌹 ಎಂ ರಾಮಮೂರ್ತಿ

27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009)
🌹 ನವರಾತ್ರಿ

28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009)
🌹 4ನೇ ಶ್ರೀ ಕೃಷ್ಣರಾಜಒಡೆಯ

29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?   ( PSI-2009)
🌹 ಮಂಡ್ಯ

30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ?( PSI-2007)
👉 1927

31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006)
👉 ಶಿರಾ

32) ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006)
👉 ಅಂಕೋಲಾ

33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005)
👉 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ

34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005)
👉 ಹುಯಿಗೋಳ್  ನಾರಾಯಣರಾವ್

35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002)
👉 1948 ಸಪ್ಟಂಬರ್

36) ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( PSI-2002)
👉 ನಂದಗಡ

37)1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( PSI 2000)
👉 ಮಹಾತ್ಮ ಗಾಂಧೀಜಿ

38) ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( PSI-2000)
👉 ಕಿತ್ತೂರು
🌸🌸🌺🌺🌺🌺🌺🌺🌺🌺🌺✍

ಕವಿ ಪರಿಚಯ':-


ಗಿರೀಶ್ ಕಾರ್ನಾಡ್ ☀️

❄️ ಜನನ: 19-ಮೇ -1938

❄️ ಸ್ಥಳ: ಮಹಾರಾಷ್ಟ್ರದ ಮಥೆರಾನ್,  ಬಾಂಬೆ

❄️ ತಂದೆ-ತಾಯಿ ರಘುನಾಥ ಕಾರ್ನಾಡ್, 
 ಕೃಷ್ಣಾಬಾಯಿ

❄️ ವೃತ್ತಿ: ನಾಟಕಕಾರ, ನಿರ್ದೇಶಕ, ನಟ

❄️ ನಿಧನ: 10 ಜೂನ್ 2019 (ವಯಸ್ಸು 81)

         📝 ಸಾಹಿತಿಕ ಜೀವನ📝

📌 ನಾಟಕಗಳು: ತುಗಲಕ್, ಯಯಾತಿ,  ಹಯವದನ, ಮಾನಿಷಾದ,  ಹಿಟ್ಟಿನಹುಂಜ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ತಲೆದಂಡ, ನಾಗಮಂಡಲ.

📌 ನಿರ್ದೇಶಿಸಿದ ಚಲನಚಿತ್ರಗಳು: ಒಂದಾನೊಂದು ಕಾಲದಲ್ಲಿ, ಉತ್ಸವ, ಕಾನೂರು ಹೆಗ್ಗಡತಿ, ತಬ್ಬಲಿಯುನೀನಾದೆ ಮಗನೆ, ಕಾಡು, ಬಿ ವಿ ಕಾರಂತರೊಡನೆ ವಂಶವೃಕ್ಷ, ಹೂಗಳು, ಬೆಂಡಾ ಕಾಲು ಆನ್ ಟೋಸ್ಟ್, ರಕ್ಷಾಸ ತಂಗಡಿ.

📌 ಅನುವಾದಗಳು:  ಚೆಲುವೆ.

📌 ಆತ್ಮಕಥೆ: ಆದಾದಾ ಆಯುಶ್ಯ, ಮನೋಹರ ಗ್ರಂಥ ಮಾಲಾ
 
             🎥  ನಟರಾಗಿ ಕಾರ್ನಾಡ್ 🎥

🔷ಧಾರವಾಹಿಗಳು : ಮಾಲ್ಗುಡಿ ಡೇಸ್ (1987), 
ಇಂದ್ರಧನುಷ್ (1989), ಅಪ್ನಾ ಅಪ್ನಾ ಆಸ್ಮನ್.

🔶 ಚಲನಚಿತ್ರಗಳು : ಸಂಸ್ಕಾರ, ವಂಶವೃಕ್ಷ, ನೀ ತಂದ ಕಾಣಿಕೆ, ಟೈಗರ್ ಜಿಂದಾ ಹೆ, ಏಕೆ 47 etc....

      🏅🎖 ಪ್ರಶಸ್ತಿಗಳು 🎖🏅

🏵 ಸಾಹಿತ್ಯಕ್ಕಾಗಿ ಪ್ರಶಸ್ತಿಗಳು🏵

✳️ ಜ್ಞಾನಪೀಠ ಪ್ರಶಸ್ತಿ-- 1998 ( ಸಮಗ್ರ ಸಾಹಿತ್ಯ)

✳️ ಪದ್ಮಶ್ರೀ ಪ್ರಶಸ್ತಿ --1974

✳️ ರಾಜ್ಯೋತ್ಸವ ಪ್ರಶಸ್ತಿ --1970

✳️ ಪದ್ಮಭೂಷಣ

✳️ ಕಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ

✳️ ನಂದಿಕಾರ್/ ಕಾಳಿದಾಸ ಸಮ್ಮಾನ್ ಪ್ರಶಸ್ತಿ

✳️ ಗಂಗಾ ಶರಣ್ ಸಿಂಗ್ ಪ್ರಶಸ್ತಿ

✳️ ತಸ್ವೀರ್ ಸಮ್ಮಾನ್ ಪ್ರಶಸ್ತಿ

💠 ಸಿನಿಮಾ ರಂಗದಲ್ಲಿನ ಸಾಧನೆಗಾಗಿ ಪ್ರಶಸ್ತಿಗಳು💠

🏆 ಅನೇಕ ಚಲನಚಿತ್ರಗಳಿಗಾಗಿ ಅತ್ಯುತ್ತಮ ಚಲನಚಿತ್ರ, ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

🏆 ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ, ಪೋಷಕ ನಟನೆಗಾಗಿ, ಚಿತ್ರಕಥೆಗಾಗಿ ಅನೇಕ ಬಾರಿ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

🎗🎗🎗 ವಿಶೇಷ ಅಂಶಗಳು🎗🎗🎗

🎯 ಕಾರ್ನಾಡ್ ಅವರು ಅನೇಕ ಕನ್ನಡ, ಹಿಂದಿ, ತೆಲುಗು ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ

ಕಿರು ಪರಿಚಯ

ನಾಥೂರಾಮ್ ಗೋಡ್ಸೆ


ನಾಥೂರಾಮ್‌ ವಿನಾಯಕ್‌ ಗೋಡ್ಸೆ (೧೯ ಮೇ ೧೯೧೦ – ೧೫ ನವೆಂಬರ್‌‌ ೧೯೪೯), ಹಿಂದೂ ರಾಷ್ಟ್ರೀಯತಾವಾದಿ; ಮಹಾತ್ಮಾ ಗಾಂಧಿಯವರ ಹಂತಕ; ತನ್ನ ಸಹೋದರ ಗೋಪಾಲ ಗೋಡ್ಸೆ ಮತ್ತು ಇತರ ಆರು ಮಂದಿ ಸಹ-ಸಂಚುಗಾರರೊಂದಿಗೆ ಸೇರಿಕೊಂಡು ಗಾಂಧಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದ್ದನು.

The story ended usual way
 The way its always been
A bullet came out from Godse's gun
 And shot the beggar clean
- J S Khurmi
Collected Poems

Quick Facts ನಾಥೂರಾಮ್‌ ವಿನಾಯಕ್‌ ಗೋಡ್ಸೆ Nathuram Vinayak Godse नथूराम गोडसे, ಹುಟ್ಟು ...
ನಾಥೂರಾಮ್‌ ವಿನಾಯಕ್‌ ಗೋಡ್ಸೆ Nathuram Vinayak Godse नथूराम गोडसे
Nathuram Godse at his trial for the murder of Mahatma Gandhi
ಹುಟ್ಟು೧೯ ಮೇ ೧೯೧೦
BaramatiPune DistrictBombay PresidencyBritish India
(now in ಮಹಾರಾಷ್ಟ್ರ, India)
ಸಾವು೧೫ ನವೆಂಬರ್ ೧೯೪೯ (aged ೩೯)
Ambala Prison, East PunjabIndia
(now in ಹರಿಯಾಣ, India)
ಸಾವಿನ ಕಾರಣExecution by hanging
ರಾಷ್ಟ್ರೀಯತೆಭಾರತೀಯ
ದುಷ್ಕೃತ್ಯ ಆಪಾದನೆ(ಗಳು)Assassination of Mohandas Karamchand Gandhi
Close

ಆರಂಭಿಕ ಜೀವನ

  • ನಾಥೂರಾಮ್‌ ಹುಟ್ಟಿದ್ದು ಪುಣೆ ಜಿಲ್ಲೆಗೆ ಸೇರಿದ ಬಾರಾಮತಿ ಎಂಬಲ್ಲಿ, ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ. ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದ ತಂದೆ ವಿನಾಯಕ ವಾಮನರಾವ್‌ ಗೋಡ್ಸೆ . ತಾಯಿ ಲಕ್ಷ್ಮೀ (ಜನ್ಮನಾಮ ಗೋದಾವರಿ) ಎಂಬುದಾಗಿತ್ತು. ನಾಥೂ ರಾಮನ ಹುಟ್ಟಿನ ಹೆಸರು ರಾಮಚಂದ್ರ ಎಂಬುದಾಗಿತ್ತು. ಸಾಮಾನ್ಯವಾಗಿ ಪ್ರಚಲಿತವಾಗಿರುವ ವಾದದ ಪ್ರಕಾರ ನಾಥೂರಾಮ್‌ಗೆ ಈ ಹೆಸರನ್ನು ನೀಡಲು ಒಂದು ದುರದೃಷ್ಟಕರ ಘಟನೆಯು ಕಾರಣವಾಗಿತ್ತು.
  • ನಾಥೂರಾಮನಿಗಿಂತ ಮೊದಲು ಹುಟ್ಟಿದ ಮೂರು ಗಂಡು ಮಕ್ಕಳೂ ಕಿರಿವಯಸ್ಸಿನಲ್ಲಿಯೇ ತೀರಿಹೋದರು. ಬದುಕಿದ್ದು ಒಬ್ಬ ಸೋದರಿ ಮಾತ್ರಾ. ತಮ್ಮ ಕುಟುಂಬದ ಗಂಡು ಮಕ್ಕಳ ಮೇಲೆ ಯಾವುದೋ ಶಾಪವಿದೆ ಎಂದುಕೊಂಡು , ಬಾಲಕ ರಾಮಚಂದ್ರನನ್ನು ಬಾಲ್ಯದಲ್ಲಿ ಮೂಗು ಚುಚ್ಚಿಸುವುದು, ಮೂಗುತಿ ಹಾಕುವುದು (ಮರಾಠಿಯಲ್ಲಿ "ನತ್‌" ಎಂದರೆ ಮೂಗುತಿ) ಸೇರಿದಂತೆ, ಹುಡುಗಿಯ ರೀತಿಯಲ್ಲಿ ಬೆಳೆಸಲಾಯಿತು. ಹೀಗಾಗಿ ಆತನಿಗೆ ನಾಥೂರಾಮ್ (ಮೂಗು ಚುಚ್ಚಿಸಿಕೊಂಡ ರಾಮ) ಎಂಬ ಹೆಸರು ಬಂತು.
  • ಆತನಿಗೊಬ್ಬ ತಮ್ಮನು ಹುಟ್ಟಿ,ದ ತರುವಾಯ ಅವರು ಮತ್ತೆ ಆತನನ್ನು ಹುಡುಗನಂತೆ ಬೆಳೆಸುವುದನ್ನು ಆರಂಭಿಸಿದರು.
  • ನಾಥೂರಾಮ್‌ ಗೋಡ್ಸೆಯು ಐದನೆಯ ತರಗತಿಯವರೆಗೆ ಬಾರಾಮತಿಯಲ್ಲಿನ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕೈಗೊಂಡ ನಂತರ, ಆಂಗ್ಲ-ಭಾಷಿಕ ಶಾಲೆಯಲ್ಲಿ ಓದಲೆಂಬ ದೃಷ್ಟಿಯಿಂದ ಆತನನ್ನು ಪುಣೆಯಲ್ಲಿನ ಚಿಕ್ಕಮ್ಮನ ಬಳಿಯಲ್ಲಿಯೇ ಉಳಿದು ಓದುವಂತೆ ಕಳಿಸಲಾಯಿತು. ತನ್ನ ಶಾಲಾದಿನಗಳಲ್ಲಿ ಆತನು ಗಾಂಧಿಯವರನ್ನು ಬಹಳವೇ ಗೌರವಿಸುತ್ತಿದ್ದ.
  • ೧೯೩೦ರಲ್ಲಿ ನಾಥೂರಾಮ್‌ನ ತಂದೆಯವರಿಗೆ ರತ್ನಾಗಿರಿ ಎಂಬ ಪಟ್ಟಣಕ್ಕೆ ವರ್ಗವಾಯಿತು. ಅಲ್ಲಿ ತನ್ನ ತಂದೆತಾಯಿಗಳೊಂದಿಗೆ ವಾಸಿಸುತ್ತಿರುವಾಗ ಬಾಲಕ ನಾಥೂರಾಮನಿಗೆ ಮೊತ್ತಮೊದಲಿಗೆ ಹಿಂದುತ್ವ ಸಿದ್ಧಾಂತ ಪ್ರತಿಪಾದಕರಾದ ವೀರ್‌ ಸಾವರ್ಕರ್‌‌ರನ್ನು ಭೇಟಿಯಾಯಿತು, ಇಬ್ಬರ ನಡುವೆ ಸ್ನೇಹವು ಬೆಳೆಯಿತು.

ರಾಜಕೀಯ ಜೀವನ

ಮೋಹನದಾಸ ಗಾಂಧಿಯವರ ಕೊಲೆಯ ಆಪಾದಿತರ ಸಮೂಹ ಭಾವಚಿತ್ರ. ನಿಂತಿರುವವರು, L ನಿಂದ R: ಶಂಕರ್‌ ಕಿಸ್ತೈಯಾ, ಗೋಪಾಲ ಗೋಡ್ಸೆ , ಮದನ್‌ಲಾಲ್‌ ಪಹ್‌ವಾ, ದಿಗಂಬರ್‌ ರಾಮಚಂದ್ರ ಬಡ್ಗೆ. ಕುಳಿತಿರುವವರು, L ನಿಂದ R: ನಾರಾಯಣ್‌ ಆಪ್ಟೆ , ವಿನಾಯಕ್‌ D. ಸಾವರ್ಕರ್‌‌ , ನಾಥೂರಾಮ್‌ ಗೋಡ್ಸೆ , ವಿಷ್ಣು ಕರ್ಕರೆ
  • ಗೋಡ್ಸೆಯು ಪ್ರೌಢಶಾಲೆಯಲ್ಲಿದ್ದಾಗ ಓದು ನಿಲ್ಲಿಸಿ, ಹಿಂದೂ ಮಹಾಸಭಾದ ಕಾರ್ಯಕರ್ತನಾದನು. ಆತನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತನಾಗಿದ್ದನೆಂಬ ಭಾರೀ ಪ್ರಚಾರವಾದ ಪ್ರತಿಪಾದನೆಗೆ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಅವರುಗಳು ನಿರ್ದಿಷ್ಟವಾಗಿ ಅಖಿಲ ಭಾರತ ಮುಸ್ಲಿಮ್‌ ಲೀಗ್‌ನ ಪ್ರತ್ಯೇಕತಾವಾದಿ ರಾಜಕೀಯನೀತಿಯನ್ನು ವಿರೋಧಿಸುತ್ತಿದ್ದರು.
  • ಗೋಡ್ಸೆಯು ಹಿಂದೂ ಮಹಾಸಭಾದ ಪರವಾಗಿ ಅಗ್ರಣಿ ಎಂಬ ಒಂದು ಮರಾಠಿ ವಾರ್ತಾಪತ್ರಿಕೆ/ವೃತ್ತಪತ್ರಿಕೆಯನ್ನು ಆರಂಭಿಸಿದನು, ಮುಂದೆ ಅದರ ಹೆಸರನ್ನು ಹಿಂದೂ ರಾಷ್ಟ್ರ ಎಂದು ಬದಲಾಯಿಸಲಾಯಿತು. ಹಿಂದೂ ಮಹಾಸಭಾವು ಮೊದಲಿಗೆ ಗಾಂಧಿಯವರ ಬ್ರಿಟಿಷ್‌ ಸರ್ಕಾರದ ವಿರುದ್ಧದ ನಾಗರಿಕ ಅಸಹಕಾರ ಚಳುವಳಿಯನ್ನು ಬೆಂಬಲಿಸಿತ್ತು.
  • ಆದರೆ, ಕಾಲಕ್ರಮೇಣ, ಮುಸಲ್ಮಾನರನ್ನು ಸಂತೋಷಗೊಳಿಸುವ ಪ್ರಯತ್ನದಲ್ಲಿ ಗಾಂಧಿಯವರು ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆಂಬ ಅಭಿಪ್ರಾಯ ತಳೆದು ,ಗೋಡ್ಸೆ ಹಾಗೂ ಆತನ ಮಾರ್ಗದರ್ಶಕರು ಗಾಂಧಿಯವರ ಪ್ರತಿಪಾದನೆಗಳ ವಿರೋಧಕರಾದರು. ಭಾರತದ ವಿಭಜನೆಯ ಕಾಲದಲ್ಲಿ ಉಂಟಾದ ಮತೀಯ ದಂಗೆಗೆ , ಅದರಿಂದಾದ ಸಾವಿರಾರು ಜನರ ಸಾವಿಗೆ,ಗಾಂಧಿಯವರೇ ಕಾರಣಕರ್ತರು ಎಂದು ಅವರ ಅಭಿಪ್ರಾಯವಾಗಿತ್ತು.
  • ಗೋಡ್ಸೆಯು ಗಾಂಧಿಯವರ ಕಟ್ಟಾ ಅಹಿಂಸೆಯ ಪ್ರತಿಪಾದನೆಗೆ ವಿರೋಧಿಯಾಗಿದ್ದನು. ಆತನ ಭಾವನೆಯ ಪ್ರಕಾರ ಇಂತಹಾ ಬೋಧನೆಗಳು ಹಿಂದೂಗಳು ತಮ್ಮ ಸ್ವರಕ್ಷಣೆಗೆ ನಡೆಸಲು ಬೇಕಾದ ಹೋರಾಟಕ್ಕೆ ಅಗತ್ಯವಾದ ಸಂಕಲ್ಪಶಕ್ತಿಯನ್ನೇ ಕಳೆದುಕೊಳ್ಳುವ ಹಾಗೆ ಮಾಡಿ ಅವರನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಿಬಿಡುತ್ತವೆ ಎಂಬುದಾಗಿತ್ತು. ಗಾಂಧಿಯವರನ್ನು ಹತ್ಯೆ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಆತನಿಗಿದ್ದ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿತ್ತು ಎನ್ನಲಾಗಿದೆ. ಗೋಡ್ಸೆಯು ಒಬ್ಫ ರಾಷ್ಟ್ರಪ್ರೇಮಿಯೂ ಆಗಿದ್ದ .

ಗಾಂಧಿ ಹತ್ಯೆ

  • ಗೋಡ್ಸೆಯು ಗಾಂಧಿಯವರನ್ನು ಜನವರಿ ೩೦, ೧೯೪೮ರಂದು ಹತ್ಯೆಗೈದನು. ಆತನು ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಅವರ ಬಳಿಗೆ ಸರಿದು ಬಾಗಿದನು. ಗಾಂಧಿಯವರ ಜೊತೆಗಿದ್ದ ಓರ್ವ ಹುಡುಗಿಯು "ಸಹೋದರ, ಬಾಪುರವರಿಗೆ ಈಗಾಗಲೇ ತಡವಾಗಿದೆ " ಎಂದು ಹೇಳಿ ಆತನನ್ನು ಪಕ್ಕಕ್ಕೆ ಸರಿಸಲು ಹೋದಾಗ ಆತನು ಆಕೆಯನ್ನು ಪಕ್ಕಕ್ಕೆ ತಳ್ಳಿ. ೩೮ ಬೆರೆಟ್ಟಾ ಅರೆ-ಸ್ವಯಂಚಾಲಿತ ಕೈಕೋವಿಯಿಂದ/ಪಿಸ್ತೂಲಿನಿಂದ ತೀರ ಸನಿಹದಿಂದ ಮೂರು ಬಾರಿ ಗುಂಡು ಹಾರಿಸಿ ಕೊಂದನು. ಗುಂಡು ಹಾರಿಸಿದ ನಂತರ ಆತನು ಓಡಲೂ ಪ್ರಯತ್ನಿಸಲಿಲ್ಲ ಅಥವಾ ಪಿಸ್ತೂಲು/ ಬಂದೂಕು/ ಕೈ ಕೋವಿಯು ತನ್ನ ಬಳಿಯೇ ಇದ್ದರೂ ಉಳಿದ ಯಾರನ್ನೂ ಬೆದರಿಸಲೂ ಹೋಗಿರಲಿಲ್ಲ. ಆತನನ್ನು ನೆಲದ ಕಡೆಗೆ ತಳ್ಳಿ ಒತ್ತಿಹಿಡಿದು ತದನಂತರ ಆತನನ್ನು ಬಂಧಿಸಲಾಯಿತು.

ವಿಚಾರಣೆ ಹಾಗೂ ಗಲ್ಲುಶಿಕ್ಷೆ ಜಾರಿ

  • ಮೋಹನದಾಸ ಗಾಂಧಿಯವರ ಹತ್ಯೆಯ ನಂತರ ಆತನ ವಿಚಾರಣೆಯನ್ನು ಮೇ ೨೭, ೧೯೪೮ರಂದು ಆರಂಭಿಸಲಾಯಿತು. ವಿಚಾರಣೆಯ ಸಮಯದಲ್ಲಿ ಆತನು ಯಾವುದೇ ಆರೋಪದ ವಿರುದ್ಧ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿಲ್ಲ ಮಾತ್ರವಲ್ಲ ಮುಕ್ತವಾಗಿಯೇ ಗಾಂಧಿ ಯವರನ್ನು ಕೊಲ್ಲಲು ತನಗಿರುವ ಕಾರಣಗಳ ಕುರಿತು ದೀರ್ಘ ಕಾಲ ಯೋಚಿಸಿ ಸನ್ನಾಹ ನಡೆಸಿದ ನಂತರ ಗಾಂಧಿಯವರನ್ನು ತಾನು ಕೊಂದೆನೆಂದು ಒಪ್ಪಿಕೊಂಡನು.  ನವೆಂಬರ್‌‌ ೮, ೧೯೪೯ರಂದು, ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು.
  • ಆರೋಪಿಗಳಿಗೆ ವಿಧಿಸಲಾದ ಮರಣದಂಡನೆಯನ್ನು ರದ್ದುಪಡಿಸಬೇಕೆಂದು ಕರೆ ನೀಡಿದವರಲ್ಲಿ ಜವಾಹರ್‌ಲಾಲ್‌ ನೆಹರೂ , ಹಾಗೂ ಗಾಂಧಿಯವರ ಇಬ್ಬರು ಪುತ್ರರು ಸೇರಿದ್ದರು, ಅವರುಗಳ ಪ್ರಕಾರ ವಿಚಾರಣೆಯಲ್ಲಿರುವ ಇಬ್ಬರು ವ್ಯಕ್ತಿಗಳು RSS ಮುಖಂಡರುಗಳ ಕೈಗೊಂಬೆಯಾಗಿದ್ದಾರೆಂದು ಹಾಗೂ ತಮ್ಮ ತಂದೆಯನ್ನು ಹತ್ಯೆ ಮಾಡಿದವರನ್ನು ಮರಣದಂಡನೆಗೆ ಗುರಿಪಡಿಸಿದರೆ ಮರಣದಂಡನೆಯ ಕಟ್ಟಾ ವಿರೋಧಿಯಾಗಿದ್ದ ತಮ್ಮ ತಂದೆಯ ಸ್ಮರಣೆ ಹಾಗೂ ಹಿರಿಮೆಗೆ ಅವಮರ್ಯಾದೆ ಸಲ್ಲಿಸಿದಂತಾಗುತ್ತದೆಂಬುದಾಗಿತ್ತು.
  • ಅಂಬಾಲಾದ ಸೆರೆಮನೆಯಲ್ಲಿ ನವೆಂಬರ್‌‌ ೧೫, ೧೯೪೯,ರಂದು ಮತ್ತೋರ್ವ ಸಂಚುಗಾರ ನಾರಾಯಣ್‌ ಆಪ್ಟೆಯೊಡನೆ ಗೋಡ್ಸೆಯನ್ನು ಗಲ್ಲಿಗೇರಿಸಲಾಯಿತು. ಆರ್‍ಎಸ್‍ಎಸ್‍ ಜೊತೆ ನಿಕಟ ಸಂಪರ್ಕವಿದ್ದ ಸಾವರ್ಕರ್‌‌ರ ಮೇಲೂ ಗಾಂಧಿಯವರ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದ್ದಿತಾದರೂ ಅವರನ್ನು ಖುಲಾಸೆಗೊಳಿಸಲಾಗಿ, ತದನಂತರ ಬಿಡುಗಡೆಗೊಳಿಸಲಾಯಿತು.

ಪರಿಣಾಮಗಳು

  • ಗಾಂಧಿಯವರ ಹತ್ಯೆಯಾದುದಕ್ಕಾಗಿ ಸಾವಿರಾರು ಮಂದಿ ಭಾರತೀಯರು ಶೋಕಿಸಿದರು.ಹಿಂದೂ ಮಹಾಸಭಾವನ್ನು ಬಹಳವಾಗಿ ಹೀಗಳೆಯಲಾಯಿತು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ RSS ಸಂಘವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಯಿತು. ಇಷ್ಟೆಲ್ಲಾ ಆದರೂ, ತನಿಖಾಧಿಕಾರಿಗಳು RSS ಪ್ರಭುತ್ವವು ಗೋಡ್ಸೆಯ ಸಂಚಿಗೆ ಯಾವುದೇ ವಿಧವಾದ ಔಪಚಾರಿಕ ಬೆಂಬಲವನ್ನು ಕೊಟ್ಟಿತ್ತು ಎಂಬುದಕ್ಕಾಗಲಿ ಅಥವಾ ಆತನ ಸಂಚು ಅವರಿಗೆ ತಿಳಿದಿತ್ತು ಎಂಬುದಕ್ಕೇ ಆಗಲಿ ಯಾವುದೇ ಸಾಕ್ಷ್ಯವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
  • RSS ಮೇಲಿನ ನಿಷೇಧವನ್ನು ೧೯೪೯ರಲ್ಲಿ ಪ್ರಧಾನಮಂತ್ರಿ ನೆಹರೂ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲರು ಹಿಂತೆಗೆದುಕೊಂಡರು. ಇಂದಿನ ದಿನದವರೆಗೂ RSS ಸಂಘವು ಗೋಡ್ಸೆಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲವೆಂದು ನಿರಾಕರಿಸುತ್ತದಲ್ಲದೇ ಆತನು ಅದರ ಸದಸ್ಯನಾಗಿದ್ದನೆಂಬ ಹೇಳಿಕೆಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತದೆ.
  • ಹತ್ಯೆಯಾದ ನಂತರ ಹಲವರು ಭಾರತದ ಸರ್ಕಾರವನ್ನು ಹಿಂದೊಮ್ಮೆ ಅದೇ ವಾರದಲ್ಲಿಯೇ ನಂತರ ಗುಂಡಿಟ್ಟು ಕೊಂದ ಇದೇ ಸಂಚುಗಾರರಿಂದ ಬಾಂಬ್‌ ದಾಳಿಗೆ ಗುರಿಯಾಗಲಿದ್ದು ಉಳಿದುಕೊಂಡಿದ್ದ ಗಾಂಧಿಯವರನ್ನು ರಕ್ಷಿಸಲು ಯಾವುದೇ ವಿಶೇಷ ಪ್ರಯತ್ನವನ್ನು ಕೈಗೊಂಡಿರಲಿಲ್ಲ ವೆಂದು ಟೀಕಿಸಿದರು.
  • ಇದಕ್ಕೆ ಪೂರಕವಾಗಿದ್ದ ನಿರ್ದಿಷ್ಟ ಆತಂಕದ ಪ್ರಕಾರ ಬಾಂಬೆಯ ಓರ್ವ ಗುಪ್ತಚರನು ಈ ಹಂತಕರ ಹೆಸರುಗಳು ಹಾಗೂ ಅವರ ಕುರಿತು ವಿವರಗಳನ್ನು ಅವರು ದೆಹಲಿಯಲ್ಲಿ ಗಾಂಧಿಯವರನ್ನು ಮರೆಯಲ್ಲಿ ಅನುಸರಿಸುತ್ತಾ ಬಂದಿದ್ದರೆಂದು ತಿಳಿದು ಬಂದಿದೆ ಎಂಬ ಮಾಹಿತಿಯೊಂದಿಗೆ ಎಚ್ಚರಿಕೆಯನ್ನು ರವಾನಿಸಿದ್ದರು. ಮತ್ತೊಂದೆಡೆಯಲ್ಲಿ ಗಾಂಧಿಯವರು ಪದೇ ಪದೇ ತನ್ನ ರಕ್ಷಣಾ ದಳದವರೊಂದಿಗೆ ಸಹಕರಿಸಲು ನಿರಾಕರಿಸುತ್ತಾ ಹಿಂಸಾತ್ಮಕ ಸಾವೇ ತನಗೆ ವಿಧಿನಿಯಾಮಕವಾಗಿದೆ ಎಂಬುದನ್ನು ಒಪ್ಪಿಕೊಂಡವರಂತೆ ನಡೆದುಕೊಂಡಿದ್ದರು.
  • ನೈನ್‌ ಅವರ್ಸ್ ಟು ರಾಮ ಎಂಬ ಚಲನಚಿತ್ರವೊಂದನ್ನು ೧೯೬೩ರಲ್ಲಿ ತಯಾರಿಸಲಾಗಿದ್ದು ಇದು ಹತ್ಯೆಯಾಗುವವರೆಗೆ ನಡೆದ ಘಟನೆಗಳನ್ನು ಆಧರಿಸಿತ್ತಾಗಿ ಪ್ರಮುಖವಾಗಿ ಗೋಡ್ಸೆಯ ದೃಷ್ಟಿಕೋನದಿಂದ ಇದನ್ನು ಚಿತ್ರಿಸಲಾಗಿತ್ತು. ೨೦೦೦ರಲ್ಲಿ ತಯಾರಾಗಿದ್ದ ಹೇ ರಾಮ್‌ ಎಂಬ ಚಿತ್ರವು ಕೂಡಾ ಹತ್ಯೆಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸುತ್ತದೆ. ಜನಪ್ರಿಯ ಮರಾಠಿ ಭಾಷಿಕ ನಾಟಕ ಮೀ ನಾಥೂರಾಮ್‌ ಗೋಡ್ಸೆ ಬೋಲ್ತೋಯ್‌ (ಮರಾಠಿ:मी नथुराम गोडसे बोलतोय)("ನಾನು ನಾಥೂರಾಮ್‌ ಗೋಡ್ಸೆ , ಮಾತನಾಡುತ್ತಿರುವುದು ")ವನ್ನು ಕೂಡಾ ಗೋಡ್ಸೆಯ ದೃಷ್ಟಿಕೋನದಿಂದಲೇ ರಚಿಸಲಾಗಿತ್ತು.

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು