ಭಾರತದ ಈ ಕೆಳಕಂಡ 24 ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು 1954ರಲ್ಲಿ ಸ್ಥಾಪಿಸಲಾಯಿತು.
ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ 1955ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.
ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು ಭಾಷೆಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀದಲ್ಲಾಗುತ್ತದೆ.
ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು 12 ತಿಂಗಳು ನಡೆಯುತ್ತದೆ. ವಿಜೇತರಿಗೆ 1 ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
# ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ :
1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ
3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ
4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ
5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ
6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ
7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ
8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ
9. 1965 - ರಂಗ ಬಿನ್ನಪ (Philosophical reflections) - ಎಸ್.ವಿ.ರಂಗಣ್
10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್
11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ.
12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್
13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ
14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ
15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ
16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ (Commentary) - ಎಸ್.ಎಸ್.ಭೂಸನೂರಮಠ
17. 1973 - ಅರಲು ಬರಲು (Poetry) - ವಿ. ಸೀತಾರಾಮಯ್ಯ
18. 1974 - ವರ್ಧಮಾನ (Poetry) - ಗೋಪಾಲಕೃಷ್ಣ ಅಡಿಗ
19. 1975 - ದಾಟು (Novel) - ಎಸ್.ಎಲ್.ಭೈರಪ್ಪ
20. 1976 - ಮನ ಮಂಥನ (Psychiatric studies) - ಎಂ. ಶಿವರಾಂ
21. 1977 - ತೆರೆದ ಬಾಗಿಲು (Poetry) - ಕೆ.ಎಸ್.ನರಸಿಂಹಸ್ವಾಮಿ
23. 1979 - ಚಿತ್ರಗಳು ಪತ್ರಗಳು - ಎ.ಎನ್.ಮೂರ್ತಿರಾವ್
24. 1980 - ಅಮೆರಿಕದಲ್ಲಿ ಗೊರೂರು (Travelogue) - ಗೊರೂರು ರಾಮಸ್ವಾಮಿ ಅಯ್ಯಂಗಾರ್
25. 1981 - ಜೀವ ಧ್ವನಿ (Poetry) - ಚನ್ನವೀರ ಕಣವಿ
26. 1982 - ವೈಶಾಖ (Novel) - ಚದುರಂಗ
27. 1983 - ಕಥೆಯಾದಳು ಹುಡುಗಿ (Short stories) - ಯಶವಂತ ಚಿತ್ತಾಲ
28. 1984 - ಕಾವ್ಯಾರ್ಥ ಚಿಂತನ (Literary criticism) - ಜಿ.ಎಸ್.ಶಿವರುದ್ರಪ್ಪ
29. 1985 - ದುರ್ಗಾಸ್ತಮಾನ (Novel) - ತ.ರಾ.ಸು.
30. 1986 - ಬಂಡಾಯ (Novel) - ವ್ಯಾಸರಾಯ ಬಲ್ಲಾಳ್
31. 1987 - ಚಿದಂಬರ ರಹಸ್ಯ (Novel) - ಕೆ.ಪಿ.ಪೂರ್ಣಚಂದ್ರ ರಹಸ್ಯ
32. 1988 - ಅವಧೇಶ್ವರಿ (novel) - ಶಂಕರ ಮೊಕಾಶಿ ಪುಣೇಕರ್
33. 1989 - ಸಂಪ್ರತಿ (Belles Lettres) - ಹಾ.ಮಾ.ನಾಯಕ
34. 1990 - ಕುಸುಮ ಬಾಲೆ (Novel) - ದೇವನೂರ ಮಹಾದೇವ
35. 1991 - ಸಿರಿ ಸಂಪಿಗೆ (Play) - ಚಂದ್ರಶೇಖರ ಕಂಬಾರ
36. 1992 - ಬಕುಳದ ಹೂವುಗಳು (Poetry) - ಎಸ್.ಆರ್.ಎಕ್ಕುಂಡಿ
37. 1993 - ಕಲ್ಲು ಕರಗುವ ಸಮಯ (Short stories) - ಪಿ. ಲಂಕೇಶ್
38. 1994 - ತಲೆ ದಂಡ (play) - ಗಿರೀಶ್ ಆರ್.ಕಾರ್ನಾಡ್
39. 1995 - ಉರಿಯ ನಾಲಗೆ (Criticism) - ಕೀರ್ತಿನಾಥ ಕುರ್ತಕೋಟಿ
40. 1996 - ಭುವನದ ಭಾಗ್ಯ (Literary Criticism) - ಜಿ.ಎಸ್.ಆಮೂರ್
41. 1997 - ಹೊಸತು ಹೊಸತು (Criticism) - ಎಂ. ಚಿದಾನಂದ ಮೂರ್ತಿ
42. 1998 - ಸಪ್ತಪದಿ (Poetry) - ಬಿ.ಸಿ.ರಾಮಚಂದ್ರ ಶರ್ಮ
43. 1999 - ಸಾಹಿತ್ಯ ಕಥನ (Essays) - ಡಿ.ಆರ್.ನಾಗರಾಜ್
44. 2000 - ಓಂ ನಮೋ (Novel) - ಶಾಂತಿನಾಥ ಕುಬೇರಪ್ಪ ದೇಸಾಯಿ
45. 2001 - ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) - ಎಲ್.ಎಸ್.ಶೇಷಗಿರಿರಾವ್
46. 2002 - ಯುಗಸಂಧ್ಯಾ (Epic) - ಸುಜನಾ ( ಎಸ್.ನಾರಾಯಣ ಶೆಟ್ಟಿ)
47. 2003 - ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) - ಕೆ.ವಿ.ಸುಬ್ಬಣ್ಣ
48. 2004 - ಬದುಕು (Novel) - ಗೀತಾ ನಾಗಭೂಷಣ
49. 2005 - ತೇರು (Novel) - ರಾಘವೇಂದ್ರ ಪಾಟೀಲ
50. 2006 - ಮಾರ್ಗ-4 (Essays) - ಎಂ.ಎಂ.ಕಲಬುರ್ಗಿ
51. 2007 - ಅರಮನೆ - ಕುಂ. ವೀರಭದ್ರಪ್ಪ
52. 2008 - ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ
53. 2009 - ಕ್ರೌಂಚ ಪಕ್ಷಿಗಳು - ವೈದೇಹಿ
54. 2010 - ಕತ್ತಿಯಂಚಿನ ದಾರಿ - ರಹಮತ್ ತರೀಕೆರೆ
55. 2011 - ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ
56. 2012-ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ) - ಎಚ್. ಎಸ್. ಶಿವಪ್ರಕಾಶ್
57. 2013-ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)- ಸಿ. ಎನ್. ರಾಮಚಂದ್ರನ್
58. 2014-ಉತ್ತರಾರ್ಧ (ಪ್ರಬಂಧಗಳು) - ಜಿ. ಎಚ್. ನಾಯಕ
59. 2015-ಅಕ್ಷಯ ಕಾವ್ಯ (ಕವನ ಸಂಕಲನ) - ಕೆ. ವಿ. ತಿರುಮಲೇಶ್
60. 2016-ಸ್ವಾತಂತ್ರ್ಯದ ಓಟ (ಕಾದಂಬರಿ) - ಬೊಳುವಾರು ಮಹಮದ್ ಕುಂಞ್
61. 2017-ಕಥನ ಭಾರತಿ (ವಿಮರ್ಶೆ) - ಟಿ.ಪಿ.ಅಶೋಕ
62. 2018-ಅನುಶ್ರೇಣಿ ಯಜಮಾನಿಕೆ (ವಿಮರ್ಶೆ)- ಕೆ. ಜಿ. ನಾಗರಾಜಪ್ಪ
63. 2019-ಕುದಿ ಎಸರು (ಆತ್ಮಕಥೆ)- ವಿಜಯಮ್ಮ