ವಿಶ್ವ ಓಝೋನ್ ದಿನಾಚರಣೆ
ವಿಶ್ವ ಓಝೋನ್ ದಿನಾಚರಣೆ
ಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿರುತ್ತದೆ. ಇದು ವಾಯುಮಂಡಲದಲ್ಲಿ ಓಝೋನ್ O3 ನ ಅನಿಲದ ಅಧಿಕ ಸಾಂದ್ರತೆಯನ್ನು ಹೊಂದಿದೆ. ಭೂಮಿಯ ಮೇಲೆ ಸುಮಾರು ೧೦ ಕಿ.ಮೀ ನಿಂದ ೪೦ ಕಿ.ಮೀ.ರ ವರೆಗೆ ವ್ಯಾಪಿಸಲ್ಪಟ್ಟಿರುವ ಈ ಪ್ರದೇಶವು ಸೂರ್ಯನಿಂದ ಬಿಡುಗಡೆಯಾಗುವ ನೇರಳಾತೀತ ವಿಕಿರಣಗಳನ್ನು ಹೀರಿಕೊಂಡು ಭೂಮಿಗೆ ಅವುಗಳು ತಲಪುವುದನ್ನು ತಡೆಗಟ್ಟುತ್ತವೆ. ಓಝೋನ್ ಪದರ ಹಾಗೂ ಅದಕ್ಕೆ ಆಗಿರುವ ಅನಾಹುತದ ಬಗ್ಗೆ ಜನರಲ್ಲಿ ಅರಿವಿಲ್ಲ. ಕೈಗಾರಿಕೋದ್ಯಮ, ಕಾರ್ಖಾನೆಗಳು ಹೆಚ್ಚುತ್ತಲೇ ಇವೆ. ಮತ್ತೊಂದೆಡೆ ಗೃಹೋಪಯೋಗಿ, ದಿನಬಳಕೆ ವಸ್ತುಗಳಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ಮತ್ತು ಪ್ರಮುಖವಾಗಿ ರೆಫ್ರೀಜರೇಟರ್ ಮತ್ತು ಏರ್ ಕಂಡೀಶನರ್‍ಗಳಲ್ಲಿ ಉಪಯೋಗದಿಂದ ಬಿಡುಗಡೆಯಾಗುವ ಕ್ಲೋರೋ ಫ್ಲೋರೋ ಕಾರ್ಬನ್ ಅನಿಲ ಓಝೋನ್ ಪದರಕ್ಕೆ ರಂಧ್ರ ಉಂಟು ಮಾಡುತ್ತಿದೆ. ಭೂಮಿಯ ಓಝೋನ್ ಪದರವೂ ಸೂರ್ಯನಿಂದ ಬರುವ ಕಾಸ್ಮಿಕ್ ಕಿರಣಗಳನ್ನು ಶೋಧಿಸಿ, ವಾತಾವರಣವನ್ನು ಶುದ್ಧವಾಗಿರಿಸಿದೆ. ಆದರೆ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಟ್ಟು ವಾಯುಮಂಡಲವನ್ನು ಮಲಿನಗೊಳಿಸುತ್ತಿದ್ದೇವೆ. ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿರುತ್ತದೆ. ಮನುಷ್ಯನ ಅಟ್ಟಹಾಸಕ್ಕೆ ಬಲಿಯಾದ ವಸ್ತು-ವಿಶೇಷಗಳ ಪಟ್ಟಿಯಲ್ಲಿ ಓಝೋನ್ ಪದರವು ಒಂದು. ಅದಿಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಕ್ಕಿ ಕ್ಯಾನ್ಸರ್‌ನಂತಹ ಮಾರಕ ರೋಗಳಿಗೆ ಸಿಲುಕುತ್ತಿದ್ದವು ಎಂಬ ಆತಂಕವಿದೆ.
ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ
“ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ.
ಹೀಗಾಗಿ ಕಷ್ಟ-ಸಂಕಷ್ಟ,
ಕೀಟ-ಕೋಟಲೆಗಳ ಭಯವೇಕೆ?
ಸಂಕಷ್ಟ ಬಂದರೆ
ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು.” ಎಂಬ ಮಾತಿನಂತೆ
ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಜೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ವಿಶ್ವ ಓಜೋನ್ ದಿನವನ್ನು(ಸೆ.16) ಆಚರಿಸಲಾಗುತ್ತಿದೆ.
“If earth is our mother,
then Ozone is our father”
ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ,
ಆದ್ದರಿಂದ ಭೂಮಿಯನ್ನು (ಭೂ)ತಾಯಿಗೆ ಹೊಲಿಸುತ್ತೇವೆ.
ಅದೇ ರೀತಿ ಓಝೋನ್ ಪದರು ಸಹ ಜೀವಿಸಲು ಅಷ್ಟೇ ಮುಖ್ಯ ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗದು.
ಜೀವಿಗಳು ಬದುಕಿ ಬಾಳಲು ಭೂಮಿ ಬೇಕು, ಆದರೆ!!
ಭೂಮಿ ಬದುಕಲು
ಓಝೋನ್ ಬೇಕೇ-ಬೇಕು.
ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ,
ಓಝೋನ್ ಪದರು ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ(UV-Rays) ಕಿರಣಗಳಿಂದ ರಕ್ಷಿಸುತ್ತದೆ.
ಇತಿಹಾಸ:
ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲಬಾರಿಗೆ ಗುರುತಿಸಲ್ಪಟ್ಟ ಓಝೋನ್,
ಒಂದು ಭಿನ್ನವಾದ ರಾಸಾಯನಿಕ ಸಂಯುಕ್ತವಾಗಿ ಕ್ರಿಸ್ಟಿಯನ್ ಫ್ರೆಡ್ರಿಕ್ ಸ್ಕಾನ್‌ಬೀನ್ ಎಂಬಾತನಿಂದ 1840ರಲ್ಲಿ ಸೂಚಿಸಲ್ಪಟ್ಟಿತು.
ಮಿಂಚಿನ ಬಿರುಗಾಳಿಗಳಲ್ಲಿನ ಒಂದು ವಿಲಕ್ಷಣವಾದ ವಾಸನೆಗೆ ಉಲ್ಲೇಖಿಸಲಾಗುವ ‘ಓಝೀನ್’
(ವಾಸನೆ ಬೀರುವುದು) ಎಂಬ ಗ್ರೀಕ್ ಕ್ರಿಯಾಪದದ ಹೆಸರನ್ನು ಅವನು ಓಝೋನ್‌ಗೆ ಇರಿಸಿದ.
ಓಝೋನ್‌ಗೆ ಸಂಬಂಧಿಸಿದ ಸೂತ್ರವಾದ O3 ಎಂಬುದು,
ಜಾಕ್ವೆಸ್-ಲೂಯಿಸ್ ಸೋರೆಟ್ ಎಂಬಾತನಿಂದ 1865ರಲ್ಲಿ ನಿರ್ಣಯಿಸಲ್ಪಡುವವರೆಗೆ ಮತ್ತು ಸ್ಕಾನ್‌ಬೀನ್ ಎಂಬಾತನಿಂದ 1867ರಲ್ಲಿ ದೃಢೀಕರಿಸಲ್ಪಡುವವರೆಗೆ ತೀರ್ಮಾನಿಸಲ್ಪಟ್ಟಿರಲಿಲ್ಲ.
1985ರಲ್ಲಿ ಓಝೋನ್ ಪದರದಲ್ಲಿ ರಂಧ್ರ ಹಾಗೂ ಪದರ ತೆಳುವಾಗಿರುವುದು ಕಂಡುಬಂದಿತು.ಇದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿತ ವಿವಿಧ ದೇಶಗಳ ಸಕಾ೯ರದ ಮುಖ್ಯಸ್ಥರು ಒಟ್ಟಾಗಿ ಸೇರಿ
1987ರ ಸೆ.16ರಲ್ಲಿ ವಿಯೆನ್ನಾದಲ್ಲಿ ಓಜೋನ್ ಪದರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು.
ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಯವನ್ನು ಅಲ್ಲಿ ಕೈಗೊಳ್ಳಲಾಯಿತು. ಈ ಸಂಬಂಧದ
“ಮಾಂಟ್ರೆಲ್ ಪ್ರೊಟೊಕಾಲ್”ಗೆ 24 ದೇಶಗಳು ಸಹಿ ಹಾಕಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ಓಜೋನ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
ಹಾಗೂ 1994 ಸೆಪ್ಟೆಂಬರ್ 16 ರಂದು ನಡೆದ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಿ,
1987ರ ಸೆಪ್ಟೆಂಬರ್ 16ರಂದು ಮಾಂಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿರುವುದನ್ನು ನೆನಪಿಸಲು,
ಸೆಪ್ಟೆಂಬರ್ 16 ಅನ್ನು
“ವಿಶ್ವ ಓಝೋನ್ ದಿನ” ಆಚರಿಸಲು ತೀರ್ಮಾನಿಸಿತು.
ಇದರ ಉದ್ದೇಶ ಓಜೋನ್ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.
“Ozone is like your Heart,
If broken,
then you are Finish.” ಎಂಬ ಮಾತಿನಂತೆ ಓಝೋನ್ ಪದರ
250 ರಿಂದ 305 ಡಾಬ್ಸನ್ ಯುನಿಟ್ಟಿಗೆ ನಷ್ಟು ದಪ್ಪ (ಗಟ್ಟಿ) ಇರಬೇಕು. ಆದರೆ ಈ ಹಿಂದೆ ಓಝೋನ್ ಪದರದಲ್ಲಿ ರಂಧ್ರವಾಗಿದೆ, ಅದರ ಸಾಂದ್ರತೆ ಕಡಿಮೆಯಾಗಿದೆ ಎಂದು ತಿಳಿದಾಗ ಕೇವಲ 90 ಡಾಬ್ಸನ್ ನಷ್ಟಿತ್ತು.
2016 ಸಾಲಿನ ಘೋಷವಾಕ್ಯ(Theme):
“Ozone and climate: Restored by a world united”
ಅಂದರೆ ವಿಶ್ವವೇ ಒಗ್ಗೂಡಿ ಓಝೋನ್ ಪದರ ರಕ್ಷಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆಯಾಗಿಸುವುದು.
ಆಮ್ಲಜನಕದ ಮೂರು ಪರಮಾಣುಗಳು ಸೇರಿ ಓಝೋನ್ (03) ಆಗುತ್ತದೆ.
ವಾತಾವರಣದ ಮೇಲೆ ಭೂಮಿಯನ್ನು ಆವರಿಸಿರುವ ಓಝೋನ್ ಪದರವು ಅಪಾಯಕಾರಿಯಾದ ಸೂರ್ಯನಿಂದ ಬರುವ ಅತಿನೇರಳೆ ಕಿರಣವನ್ನು ಹೀರಿಕೊಳ್ಳುವುದರ ಮೂಲಕ ಜೀವಸಂಕುಲದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಭೂಮಿಯ ಮೇಲೆ ಸುಮಾರು 15 ಕಿ.ಮೀ. ದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಓಝೋನ್ ಪದರು ಭೂಮಿಯನ್ನು ಆವರಿಸಿದೆ.
ಓಝೋನ್ ಪದರಿನ ಮುಖ್ಯವಾದ ಕಾರ್ಯವೆಂದರೆ ಸೂರ್ಯನಿಂದ ಬಂದ 97-98% ಅತಿನೇರಳೆ ಕಿರಣಗಳನ್ನು ಹೀರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರಭೂಮಿ ಮೇಲೆ ಬೀಳುವಂತೆ ಮಾಡುತ್ತದೆ.
ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳು ವಾತಾವರಣದಲ್ಲಿರುವ ಆಮ್ಲಜನಕದ(O2) ಮೇಲೆ ಬಿದ್ದಾಗ ಆಮ್ಲಜನಕ ಎರಡು ಅಣುಗಳಾಗಿ (O+O) ಬೇರ್ಪಡುತ್ತವೆ.
ಬೇರ್ಪಡದೇ ಇದ್ದ ಆಮ್ಲಜನಕದ(O2) ಜೊತೆ ಮತ್ತೊಂದು ಅಣು ಸಂಯೋಗವಾಗಿ ಓಜೋನ್ (O3) ಆಗುತ್ತದೆ.
ಓಝೋನ್ ಪದರು ನಾಶವಾಗಲು ಮುಖ್ಯವಾದ ಕಾರಣಗಳು:
*ಪ್ರಿಜ್ ಮತ್ತು ಕೋಲ್ಡ ಹೌಸಗಳಲ್ಲಿ ಉಪಯೋಗಿಸುವ ChloroFluoroCarbons (CFC’s) ಮತ್ತು ವಾಯುಮಾಲಿನ್ಯ,
CFCನ ಒಂದು ಅಣುವು
ಓಝೋನ್ ನ 1,00,000 ಅಣುಗಳನ್ನು ನಾಶ ಮಾಡುತ್ತದೆ.
ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ.
*ಬಾಹ್ಯಾಕಾಶ ಸಂಶೋಧನೆ, ಉಪಗ್ರಹಗಳ ಉಡಾವಣೆಗೆ ಹಾರಿಬಿಡುವ ರಾಕೆಟ್‌ಗಳಿಂದ ಹಾನಿ.
*ಬೃಹತ್ ಕೈಗಾರಿಕೆ ಮತ್ತು ವಾಹನಗಳ ಹೊಗೆ.
ಓಝೋನ್ ಪದರದ ನಾಶದಿಂದಾಗುವ ಪರಿಣಾಮಗಳು:
ಅತಿಯಾದ ಮಳೆ,
ಅತಿಯಾದ ಬರ,
ಸಮುದ್ರ ಮಟ್ಟದ ಏರಿಕೆ,
ನದಿ ಪ್ರವಾಹಗಳು,
ಒಣಗುತ್ತಿರುವುದು & ಬರಿದಾಗುವ ಕಾಡುಗಳು,
ಭೂತಾಪ ಏರಿಕೆ,
ಅತಿಯಾದ ಚಳಿ,
ಅತಿಯಾದ ಶಾಖ,
ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿ ವಾಯುಗಳ ಹೊರಸೊಸುವಿಕೆ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ಇದರಿಂದಾಗಿ ಶಹರದಲ್ಲಿ ಉಸಿರಾಡಲು ಶುದ್ಧವಾದ ಗಾಳಿಸಿಗುವುದೇ ಕಷ್ಟವಾಗಿದೆ. ಮತ್ತು ಮನುಷ್ಯನು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.
ಭೂಮಿಯ ಮೇಲಿರುವ ಓಝೋನ್ ಪದರು ನಾಶವಾದರೆ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ.
ಆಗ ಭೂಮಿಯ ಮೇಲೆ ಅತಿಯಾದ ಶಾಖ, ಉಂಟಾಗುತ್ತದೆ.
ಭೂಮಿಯ ಮೇಲೆ ಇರುವ ಉತ್ತರ,
ದಕ್ಷಿಣ ಧೃವದಲ್ಲಿ ಹಾಗೂ ಭೂಮಿಯ ಮೇಲೆ ಇರುವ ಎಲ್ಲ ಮಂಜುಗಡ್ಡೆ ಕರಗಿ ನೀರಾಗಿ ನದಿಗಳ ಮುಖಾಂತರ ಸಮುದ್ರವನ್ನು ಸೇರುತ್ತವೆ.
ಆಗ ಸಮುದ್ರದ ಮಟ್ಟವು 113 ಅಡಿಗಳಷ್ಟು ಏರುತ್ತದೆ.
ಸಮುದ್ರ ಮಟ್ಟ ಇಷ್ಟು ಏರಿದರೆ ಭೂಮಿಯು ನೀರಿನಿಂದ ಆವರಿಸುತ್ತದೆ.
ಈ ದಿನವನ್ನೇ ನಾವು “ಡೂಮ್ಸಡೇ” ಎಂದು ಕರೆಯುತ್ತೇವೆ.
ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶಮಾಡುತ್ತ ಹೋದರೆ ಒಂದು ದಿನ ಭೂಮಿಯು ಮಂಗಳ ಗ್ರಹದಂತೆ ಬರಡಾಗಿ ಬಿಡುತ್ತದೆ.
ಓಝೋನ ಪದರನ್ನು ರಕ್ಷಣೆ ಮಾಡುವ ವಿಧಾನಗಳು :
ಓಜೋನ್ ರಕ್ಷಣೆಗಾಗಿ ಇಷ್ಟು ಮಾಡಬೇಕು
* ಕೃಷಿಯಲ್ಲಿ ಕೀಟನಾಶಕವಾಗಿ ಬಳಸುತ್ತಿರುವ ಮಿಥೈಲ್ ಬ್ರೋಮೈಡ್‌ಗೆ ನಿಷೇಧ
* ಅವಶ್ಯವಿದ್ದಾಗ ಮಾತ್ರ ವಾಹನ ಬಳಕೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ
* ಸಿಎಫ್‌ಸಿ ಇಲ್ಲದ ಶೀತಲ ಯಂತ್ರಗಳು, ಹವಾ ನಿಯಂತ್ರಣದ ಉಪಕರಣಗಳ ಬಳಕೆ.
* ಭೂಗ್ರಹದ ರಕ್ಷಣೆಗೆ ಹಸಿರನ್ನು ಬೆಳೆಯಿರಿ,
* ಅರಣ್ಯನಾಶ ಮಾಡಬಾರದು
* ಹೆಚ್ಚೆಚ್ಚು ಸಸ್ಯ ಬೆಳೆಸುವುದು
* ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.
* ಪೆಟ್ರೋಲ್, ಡಿಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು.
* ರೆಪ್ರಿಜರೇಟರ್ ಹಾಗೂ ಕೋಲ್ಡ್ ಹೌಸಗಳಲ್ಲಿ CFCs ಅಣುವಿನ ಬದಲು Hydro ChloroFluoroCarbon (HCFCs) ರಾಸಾಯಿನಿಕ ಉಪಯೋಗಿಸಬೇಕು.
ನಾವೆಲ್ಲರೂ ಮಾಡಲೇಬೇಕಾದ ಸಂಕಲ್ಪ:
“Save ozone layer else you may lie in no zone”
“ಓಝೋನ್ ಇಲ್ಲದ ಭೂಮಿಯು
ಮೇಲ್ಛಾವಣಿ ಇಲ್ಲದ ಮನೆಯಂತೆ”
ಆದ್ದರಿಂದ
‘ವಿಶ್ವ ಓಝೋನ್ ದಿನ’ ದಂದು ನಾವು ಪ್ರತಿಜ್ಞೆ ಗೈಯೋಣ
“ನಾವು ಇಂದಿನಿಂದ ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರಿನ ನಾಶ ಮಾಡುವುದನ್ನು ನಿಲ್ಲಿಸುತ್ತೇವೆ.
ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿ ಇಟ್ಟುಕೊಂಡು ಹೇಗೆ ನಮ್ಮ ಹಿಂದಿನವರು ಓಝೋನ್ ಸಹಿತ ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟರೋ, ಹಾಗೆ ನಾವು ಮುಂದಿನ ಪೀಳಿಗೆಗೆ ಓಝೋನ್ ಸಹಿತ ಭೂಮಿಯನ್ನು ಕೊಡುತ್ತೇವೆ”.ಎಂದು ಸಂಕಲ್ಪ ಮಾಡೋಣ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಇದರ ಮಹತ್ವವನ್ನು ಎಲ್ಲರಿಗೂ ಸಾರೋಣ “ನಾವು ಬದುಕಿ ನಮ್ಮ ಮುಂದಿನ ಪೀಳಿಗೆಗೆ ಬದುಕಲು ಅವಕಾಶ ಮಾಡುವ ಮೂಲಕ ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳೋಣ”
ವಿಶ್ವ ಓಝೋನ್ ದಿನದ ಶುಭಾಶಯಗಳ

No comments:
Post a Comment