🎈ಭಾರತೀಯ ವಿಮಾನಯಾದಲ್ಲಿ ಮೊದಲುಗಳು 🎈
➤ ಅಲಹಾಬಾದ್ ಮತ್ತು ನೈನಿ ನಡುವೆ ಮೊದಲ ವಾಣಿಜ್ಯ ನಾಗರಿಕ ವಿಮಾನಯಾನ ಹಾರಾಟ ನಡೆಯಿತು .ಇದು ವಿಶ್ವದ ಮೊದಲ ಏರ್ ಮೇಲ್ ಸೇವೆ ಎಂದು ಪರಿಗಣಿಸಲಾಗಿದೆ
➤ 12 1912 ರಲ್ಲಿ ಲಂಡನ್-ಕರಾಚಿ – ದೆಹಲಿ ವಿಮಾನಗಳ ನಡುವೆ ಮೊದಲ ಅಂತರರಾಷ್ಟ್ರೀಯ ವಿಮಾನವನ್ನು ಪರಿಚಯಿಸಲಾಯಿತು
➤ 1932 ರಲ್ಲಿ ಜೆಆರ್‌ಡಿ ಟಾಟಾ ಅವರಿಂದ ಮೊದಲ ವಿಮಾನ ಕರಾಚಿ ಮತ್ತು ಬಾಂಬೆ ನಡುವೆ ಹಾರಿತು
➤ ಮೊದಲ ನಾಗರಿಕ ವಿಮಾನ ನಿಲ್ದಾಣವನ್ನು 1928 ರಲ್ಲಿ ಮುಂಬೈನ ಜುಹುನಲ್ಲಿ ರಚಿಸಲಾಯಿತು
➤ ಭಾರತದ ಮೊದಲ ವಿಮಾನಯಾನ ಸಂಸ್ಥೆ ಇಂಪೀರಿಯಲ್ ಏರ್ವೇಸ್
➤ಮೊದಲ ವಿಮಾನವನ್ನು ಹಾರ್ಲೋ ತರಬೇತುದಾರನನ್ನು 1941 ರಲ್ಲಿ ಪರೀಕ್ಷಾ ಹಾರಾಟಕ್ಕಾಗಿ ಹೊರತರಲಾಯಿತು
➤ ನಾಗರಿಕ ವಿಮಾನಯಾನದ ಪ್ರಥಮ ಮಹಾನಿರ್ದೇಶಕ (ಡಿಜಿಸಿಎ) – ಎಲ್.ಟಿ.ಕೋಲ್. 1931 ರಲ್ಲಿ ಶೆಲ್ಮರ್ಡಿನ್
➤ ಕೈರೋ ಮತ್ತು ಜಿನೀವಾ ಮೂಲಕ ಬಾಂಬೆ ಮತ್ತು ಲಂಡನ್ ನಡುವೆ ಮೊದಲ ಅಂತರರಾಷ್ಟ್ರೀಯ ಸೇವೆಗಳ ಹಾರಾಟವು 1948 ರಲ್ಲಿ ಪ್ರಾರಂಭವಾಯಿತು
➤ ಮೊದಲ ಸಿವಿಲ್ ಹೆಲಿಕಾಪ್ಟರ್ ಸೇವೆಗಳು 1953 ರಲ್ಲಿ ಪರಿಚಯಿಸಲ್ಪಟ್ಟವು
➤ ಈಸ್ಟ್-ವೆಸ್ಟ್ ಏರ್ಲೈನ್ಸ್ 1991 ರಲ್ಲಿ ಮೊದಲ ನಿಗದಿತ ಖಾಸಗಿ ವಿಮಾನಯಾನ ಸಂಸ್ಥೆಯಾಗಿದೆ
➤ ಇಂಡಿಯನ್ ಏರ್‌ಲೈನ್ಸ್‌ನ ಐಸಿ 814 ವಿಮಾನವನ್ನು 1999 ರಲ್ಲಿ ಕಂದಹಾರ್‌ಗೆ ಅಪಹರಿಸಲಾಯಿತು
➤ ಜಹಾಂಗೀರ್ ರತನ್ ಜಿ ದಾದಾಭಾಯ್ ಟಾಟಾ 1929 ರಲ್ಲಿ ಭಾರತದ ಮೊದಲ ಪರವಾನಗಿ ಪಡೆದ ಪೈಲಟ್.
➤ 1936 ರಲ್ಲಿ ಪರವಾನಗಿ ಹೊಂದಿದ ಮೊದಲ ಭಾರತೀಯ ಮಹಿಳಾ ಪೈಲಟ್ ಸರಳ ಥಕ್ರಲ್
➤ಸೆಪ್ಟೆಂಬರ್ 1989 ರಂದು ಕ್ಯಾಪ್ಟನ್ ಸೌದಾಮಿನಿ ದೇಶ್ಮುಖ್ ನೇತೃತ್ವದಲ್ಲಿ ಮೊದಲ ಬೋಯಿಂಗ್ ಮಹಿಳಾ ಸಿಬ್ಬಂದಿ ವಿಮಾನ ಹಾರಾಟ
➤ 1990 ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನ ಮೊದಲ ಕಿರಿಯ ವಯಸ್ಸಿನ ಪೈಲಟ್ ಕ್ಯಾಪ್ಟನ್ ನಿವೇದಿತಾ ಭಾಸಿನ್ (26 ವರ್ಷ)
➤ ಮೊದಲ ಮಹಿಳಾ ವಾಣಿಜ್ಯ ಪೈಲಟ್ – ಪ್ರೇಮ್ ಮಾಥುರ್( 1948 ರಲ್ಲಿ ಡೆಕ್ಕನ್ ಏರ್ವೇಸ್ )
➤ ಮೊದಲ ಏಷ್ಯನ್ ವಿಮಾನಯಾನ ಬೋಯಿಂಗ್ 707–420 (ಗೌರಿ ಶಂಕರ್) 1960 ರಲ್ಲಿ ತನ್ನ ಪಲಾಯನದಲ್ಲಿ ಜೆಟ್ ವಿಮಾನವನ್ನು ಸೇರಿಸಿತು
➤ 1990 ರಲ್ಲಿ 37 ವರ್ಷಗಳ ನಂತರ ದೇಶದಲ್ಲಿ ಕಾರ್ಯನಿರ್ವಹಿಸಿದ ಮೊದಲ ರಾಷ್ಟ್ರೀಯ ಮಟ್ಟದ ಖಾಸಗಿ ವಿಮಾನಯಾನ ಈಸ್ಟ್ ವೆಸ್ಟ್ ಏರ್ಲೈನ್ಸ್
✈️ವಿಮಾನಯಾನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸಂಗತಿಗಳು✈️
➤ 2015 ರಲ್ಲಿ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ)ಯಿಂದ ವಾಯುಯಾನ ಮಾರುಕಟ್ಟೆಯಲ್ಲಿ ವಿಶ್ವದ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ.
➤ ಭಾರತವು 16 ಬಿಲಿಯನ್ ಮಾರುಕಟ್ಟೆ ಗಾತ್ರವನ್ನು ಹೊಂದಿರುವ ವಿಶ್ವದ ಒಂಬತ್ತನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿದೆ
➤ ಬೆಂಗಳೂರು ಭಾರತದ ವಾಯುಯಾನ ಉತ್ಪಾದನಾ ಕೇಂದ್ರವಾಗಿದೆ (65%)
➤ ಪ್ರಯಾಣಿಕರ ವಿಷಯದಲ್ಲಿ ಭಾರತದಲ್ಲಿ ಮೂರು ದೊಡ್ಡ ವಿಮಾನಯಾನ ಸಂಸ್ಥೆಗಳು – ಇಂಡಿಗೊ, ಜೆಟ್ ಏರ್ವೇಸ್ ಮತ್ತು ಇಂಡಿಯನ್ ಏರ್ಲೈನ್ಸ್
➤ ವಾಯು ನಿಗಮ ಕಾಯ್ದೆ(Corporations Act )ಯನ್ನು ಭಾರತೀಯ ಸಂಸತ್ತು 1953 ರಲ್ಲಿ ಅಂಗೀಕರಿಸಿತು
➤ ಇಂಟರ್ನ್ಯಾಷನಲ್ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (• International Airports Authority of India-IAAI) ಅನ್ನು 1972 ರಲ್ಲಿ ರಚಿಸಲಾಯಿತು
➤ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವನ್ನು 1986 ರಲ್ಲಿ ರಚಿಸಲಾಯಿತು.
➤ ಸ್ವಾತಂತ್ರ್ಯದ ಸಮಯದಲ್ಲಿ ಎಂಟು ಕಂಪನಿಗಳು ದೇಶದ ಒಳಗೆ ಮತ್ತು ಹೊರಗೆ ಸೇವೆಯಲ್ಲಿದ್ದವು, ಅವುಗಳೆಂದರೆ ಟಾಟಾ ಏರ್ಲೈನ್ಸ್, ಇಂಡಿಯನ್ ನ್ಯಾಷನಲ್ ಏರ್ವೇಸ್, ಭಾರತದ ವಾಯು ಸೇವೆ, ಡೆಕ್ಕನ್ ಏರ್ವೇಸ್, ಅಂಬಿಕಾ ಏರ್ವೇಸ್, ಭಾರತ್ ಏರ್ವೇಸ್ ಮತ್ತು ಮಿಸ್ತ್ರಿ ಏರ್ವೇಸ್
➤ 1990ರಲ್ಲಿ ನಡೆದ ಮೊದಲ ಕೊಲ್ಲಿ ಯುದ್ಧದ ಮೊದಲು ಅತಿದೊಡ್ಡ ನಾಗರಿಕರ ಸ್ಥಳಾಂತರಿಸುವ ಪ್ರಯತ್ನಕ್ಕಾಗಿ ಏರ್ ಇಂಡಿಯಾವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರಿಸಲಾಗಿದೆ.
➤ ಭಾರತದ ಮೊದಲ ಬಜೆಟ್ ವಿಮಾನಯಾನ ಏರ್ ಡೆಕ್ಕನ್ ಆಗಸ್ಟ್ 25 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ಮೊದಲ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ.
➤ ಇಂಡಿಯನ್ ಏರ್ಲೈನ್ಸ್ ಅನ್ನು 2005 ರಲ್ಲಿ ಭಾರತೀಯ ಎಂದು ಮರುನಾಮಕರಣ ಮಾಡಲಾಯಿತು
➤ ಪ್ರಾದೇಶಿಕ ವಿಮಾನಯಾನ ನೀತಿಯನ್ನು 2007 ರಲ್ಲಿ ಘೋಷಿಸಲಾಯಿತು
➤ ವಿಮಾನ ನಿಲ್ದಾಣಗಳ ಆರ್ಥಿಕ ಅಂಶಗಳನ್ನು ನಿಯಂತ್ರಿಸಲು • AERAವನ್ನು ಸ್ಥಾಪಿಸಲಾಯಿತು. ಇದು 2009 ರಲ್ಲಿ ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ ಸಂಸ್ಥೆಯಾಗಿದೆ.
➤ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಮೇಲ್ಮನವಿ ನ್ಯಾಯಮಂಡಳಿ (• Airport Economic Regulatory Authority Appellate Tribunal-AERAAT) ಅನ್ನು 2010 ರಲ್ಲಿ ಸ್ಥಾಪಿಸಲಾಯಿತು
➤ ‘ನಿಜವಾದ‘ ಏರ್‌ಲಿಫ್ಟ್ ’ : ಕುವೈತ್‌ನಲ್ಲಿನ ಏರ್ ಇಂಡಿಯಾದ ರಕ್ಷಣಾ ಮಿಷನ್ 2016 ರಲ್ಲಿ ಗಿನ್ನೆಸ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿತು
🌀☘🌀☘🌀☘🌀☘🌀☘🌀
🌀ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಕ್ರೀಡೆಗಳಿಗೆ ಸಂಬಂಧಿಸಿದ ಪ್ನಶ್ನೆಗಳ ಸಂಗ್ರಹ🌀
1. ಒಲಂಪಿಕ್ ಕಿಈಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ..?
ನಾಲ್ಕು ವರ್ಷಗಳು
2. ಕ್ರಿ.ಶ 1894 ರಲ್ಲಿ ಪುನರುತ್ಥಾನಗೊಂಡ ಒಲಂಪಿಕ್ ಕ್ರೀಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು..?
ಅಥೆನ್ಸ್
3. ಒಲಂಪಿಕ್ ಕ್ರೀಡೆಯ ಲಾಂಛನ ಯಾವುದು..?
ಪರಸ್ಪರ ಹೆಣೆದುಕೊಂಡಿರುವ ನೀಲಿ, ಹಳದಿ, ಕಪ್ಪು, ಹಸಿರು, ಮತ್ತು ಕೆಂಪು ಬಣ್ಣದ ಸುರುಳಿಗಳು
4. ಒಲಂಪಿಕ್ ನಂತರ ಅತೀ ದೊಡ್ಡ ಕ್ರೀಡಾಕೂಟ ಯಾವುದು..?
ಕಾಮನ್‍ವೆಲ್ತ್ ಕ್ರೀಡಾಕೂಟ
5. ಮೊದಲ ಕಾಮನ್‍ವೆಲ್ತ್ ಕ್ರೀಡಾಕೂಟ ಯಾವಾಗ ನಡೆಯಿತು..?
1930
6. ಮೊದಲ ಏಶಿಯನ್ ಕ್ರೀಡಾಕೂಟವು ಯಾವಾಗ ನಡೆಯಿತು..?
1951
7. ಮೊದಲ ಏಶಿಯನ್ ಕ್ರೀಡಾಕೂಟವು ಎಲ್ಲಿ ನಡೆಯಿತು..?
ನವದೆಹಲಿ
8. ಭಾರತವು ಯಾವಾಗ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತು..?
1983
9. 2004 ರಲ್ಲಿ ಎಸ್‍ಎಎಫ್ ಕ್ರೀಡಾಕೂಟಕ್ಕೆ ಏನೆಂದು ಮರು ನಾಮಕರಣ ಮಾಡಲಾಗಿದೆ..?
ಸೌತ್ ಏಶಿಯನ್ ಗೇಮ್ಸ್
10. ಮಹಾನ್ ಕ್ರಿಕೆಟಿಗ ಸರ್. ಡೊನಾಲ್ಡ್ ಬ್ರಾಡ್‍ಮನ್ ಯಾವ ದೇಶದವರು..?
ಆಸ್ಟ್ರೇಲಿಯಾ
11. ಲವ್ ಮತ್ತು ಸ್ಮಾಶ್ ಎಂಬ ಪದಗಳು ಯಾವ ಆಟದಲ್ಲಿ ಬಳಸಲ್ಪಡುತ್ತವೆ..?
ಬ್ಯಾಡ್ಮಿಂಟನ್ ಮತ್ತು ಟೆನಿಸ್
12. ವಿಂಬಲ್ಡನ್ ಟ್ರೋಫಿಯು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಲಾನ್ ಟೆನಿಸ್
13. ಕ್ರಿಕೆಟ್ ಆಟಕ್ಕೆ ಹೆಸರಾದ ಲಾಡ್ರ್ಸ್ ಮತ್ತು ಲೀಡ್ಸ್ ಕ್ರೀಡಾಂಗಣಗಳು ಎಲ್ಲಿದೆ…?
ಲಂಡನ್
14. ‘ ಬಟರ್ ಪ್ಲೈ ‘ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..
ಈಜು
15. ಬುಲ್ ಫೈಟಿಂಗ್ ( ಗೂಳಿ ಕಾಳಗ) ಯಾವ ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ..?
ಸ್ಪೇನ್
16. 1983 ರಲ್ಲಿ ವಿಶ್ವಕಪ್ ಗೆದ್ದ ಭಾರತಿಯ ಕ್ರಿಕೆಟ್ ತಂಡದ ನಾಯಕ ಯಾರಾಗಿದ್ದರು..?
ಕಪಿಲ್ ದೇವ್
17. ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು.?
ಕರ್ಣಂ ಮಲ್ಲೇಶ್ವರಿ
18. ರೂಕ್ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಚೆಸ್
19. ‘ ಒನ್ ಮೋರ್ ಓವರ್’ ಎಂಬುದು ಯಾರ ಆತ್ಮಕಥೆಯಾಗಿದೆ..?
ಇ. ಪ್ರಸನ್ನ
20. ಅಮೇರಿಕಾ ಸಂಯುಕ್ತ ಸಂಸ್ಥಾನದ ಹೆಸರುವಾಸಿ ಆಟ ಯಾವುದು..?ಬೇಸ್‍ಬಾಲ್
21. ಒಲಂಪಿಕ್ ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ ಯಾರು..?
ಪಿ.ಟಿ ಉಷಾ
22. ಸ್ವಾತ್ಲಿಂಗ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ..?
ಟೇಬಲ್ ಟೆನಿಸ್
23. ‘ ಬೀಮರ್’ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಕ್ರಿಕೆಟ್
24. ‘ಡೇವಿಸ್ ಕಪ್’ ಯಾವ ಕ್ರೀಡೆಗೆ ಸಂಬಂಧಿಸಿದೆ..?
ಟೆನಿಸ್
25. ‘ಇಂದಿರಾಗಾಂಧಿ’ ಒಳಾಂಗಣ ಕ್ರೀಡಾಂಗಣ ಎಲ್ಲಿದೆ..?
ನವದೆಹಲಿ
🔹☘🔹☘🔹☘🔹☘🔹☘🔹
🌀ವಿಜ್ಞಾನ ಪ್ರಶ್ನೋತ್ತರಗಳು 🌀
1. ಲ್ಯೂಸರ್ನ್ ಎಂದರೆ ಏನು?
ಎಲೆಗಳಿಗಾಗಿ ಬೆಳಸಿದ ಬೆಳೆ
2. ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?
ಒಂದು ಶೀಲಿಂಧ್ರ
3. ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪವನಶಾಸ್ತ್ರ
4. ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?
ಅಂಕಿಶಾಸ್ತ್ರ
5. ಪಾರಾಸಿಟಾಮಾಲ್….
ನೋವು ನಿವಾರಿಸುತ್ತದೆ.
6. ಜಿಯೋಲೈಟ್ ಉಪಯೋಗಿಸುವುದು…..
ಕಾಗದವನ್ನು ವಿವರ್ಣಿಕರಣಗೊಳಿಸಲು
7. ಶರ್ಬತಿ ಸೊನೋರ ಎಂಬುದು?
ಗೋಧಿಯ ಒಂದು ಮಾದರಿ
8. ಸಾರಜನೀಕರಣ ಎಂದರೆ ಏನು?
ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು
9. ಅತಿ ಸೂಕ್ಷ್ಮ ಗಾತ್ರದ ಜೀವಕೋಶ
ವೈರಸ್
10. ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..
ತಂಪಾದ ಶುಷ್ಕ ಪರಿಸ್ಥಿತಿ
11. ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?
ಎಂಟೆಮೋಫಿಲಿ
12.ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪೆಥಾಲಜಿ
13. ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?
ದ್ಯುತಿ ಮಾಪನ
14. ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?
ಪ್ಯಾಸ್ಕಲ್ ನಿಯಮ
15. ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…
ಉಷ್ಣವಹನ
16. ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?
ಟಂಗ್‍ಸ್ಟನ್
17. ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..
ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು
18. ನೀರನ್ನು ಕ್ಲೋರಿಕರಣ ಮಾಡಲು ಕಾರಣ…
ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು
19. ಟಿಂಚರು ಇದು….
ಅಲ್ಕೋಹಾಲಿನ ದ್ರವ
20. ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..
ಪತ್ರಶೀಲತ್ವ
🍁🔹🍁🔹🍁🔹🍁🔹🍁🔹🍁
🌷ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು🌷
🏅 ನೊಬೆಲ್ ಪ್ರಶಸ್ತಿ
ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಡೈನಮೈಟ್ ಸಂಶೋಧಕ ‘ಸ್ವೀಡನ್’ ವಿಜ್ಞಾನಿ ‘ಆಲ್ಫ್ರೇಡ್ ನೊಬೆಲ್’ ಹೆಸರಿನಲ್ಲಿ ನೀಡಲಾಗುತ್ತದೆ.ಈ ಪ್ರಶಸ್ತಿಗಳನ್ನು ಪ್ರತಿವರ್ಷ ಔಷಧ, ವಿಶ್ವ ಶಾಂತಿ,ಭೌತಶಾಸ್ತ್ರ, ರಸಾಯನಶಾಸ್ತ್ರ, ಸಹಿತ್ಯ, ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವ್ಯಕ್ಕಿಗಳಿಗೆ ನೀಡಲಾಗುತ್ತದೆ.
🏅 ಮ್ಯಾನ್ ಬುಕರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1968 ರಲ್ಲಿ ಬುಕರ್ ಕಂಪನಿ ಮತ್ತು ಬ್ರಿಟಿಷ್ ಪ್ರಕಾಶಕರ ಸಂಘದಿಂದ ಜಂಟಿಯಾಗಿ ಸ್ಥಾಪಿಸಲಾಯಿತು. ಇದೊಂದು ಪ್ರತಿಷ್ಠಿತ ಸಾಹಿತಿಕ ಪ್ರಶಸ್ತಿಯಾಗಿದೆ.
🏅 ಕಳಿಂಗ ಪ್ರಶಸ್ತಿ
ಈ ಪ್ರಶಸ್ತಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿದೆ.ಈ ಪ್ರಶಸ್ತಿಯನ್ನು ವಿಜ್ಞಾನದ ಬರಹಗಾರರಿಗೆ ಅಥವಾ ಸಂಪಾದಕರಾಗಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.
🏅ಆಸ್ಕರ್ ಪ್ರಶಸ್ತಿ
ಈ ಪ್ರಶಸ್ತಿಗಳನ್ನು ಸಿನಿಮಾ ಕ್ಷೇತ್ರದ ಮಹತ್ತರ ಸಾಧನೆಗಾಗಿ ಪ್ರತಿ ವರ್ಷವೂ ನೀಡಲಾಗುತ್ತದೆ.ಇದು ಸಿನಿಮಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಮಟ್ಟದ ಪ್ರಶಸ್ತಿಯಾಗಿದೆ.
🏅ರೈಟ್ ಲೈವ್ಲಿ ಹುಡ್ ಪ್ರಶಸ್ತಿ
ಈ ಪ್ರಶಸ್ತಿಯು 1980 ರಲ್ಲಿ ಸ್ವೀಡಿಸ್ – ಜರ್ಮನ್ ಬರಹಗಾರ ಜಾಕಬ್ ವೋನ್ ವೆಸ್ಕಲ್‍ರಿಂದ ಸ್ಥಾಪಿಸಲ್ಪಟ್ಟಿತು. ಇದು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಖ್ಯಾತವಾಗಿದ್ದು, ಇದನ್ನು ಇಂದಿನ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಯೋಗಿಕವಾಗಿ ಮತ್ತು ನೇರವಾಗಿ ದುಡಿದು ಮಹತ್ತರ ಸಾಧನೆಗೈದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
🏅ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಈ ಪ್ರಶಸ್ತಿಯನ್ನು ಫಿಲಿಫೈನ್ಸ್ ಸರ್ಕಾರವು 1958 ರಲ್ಲಿ ಆ ದೇಶದ ದಿವಂಗತ ಅಧ್ಯಕ್ಷ ರೇಮನ್ ಮ್ಯಾಗ್ಸೆಸ್ಸೆಯವರ ಗೌರವಾರ್ಥ ಸ್ಥಾಪಿಸಿತು. ಈ ಪ್ರಶಸ್ತಿಯನ್ನು ಸಾರ್ವಜನಿಕ ಸೇವೆ, ಸಮುದಾಯ ನಾಯಕತ್ವ, ಪತ್ರಿಕೋದ್ಯಮ, ಸರ್ಕಾರಿಸೇವೆ, ಸಾಹಿತ್ಯ, ರಚನಾತ್ಮಕ ಕಲೆ, ಮತ್ತು ಅಂತರಾಷ್ಟ್ರೀಯ ಅರಿವು ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿರುವ ಏಷ್ಯಾ ಖಂಡದ ದೇಶದ ವ್ಯಕ್ಕಿಗಳಿಗೆ ಅಥವಾ ಸಂಸ್ಥೆಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.
🏅ಸೈಮನ್ ಬೋಲಿವರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು ವಿಶ್ವ ಸಂಸ್ಥೆಯ ಯುನೆಸ್ಕೋ ಸ್ಥಾಪಿಸಿದ್ದು, ಇದನ್ನು ಎರಡು ವರ್ಷಕ್ಕೋಮ್ಮೆ ಸ್ವಾತಂತ್ರ್ಯ, ಪ್ರಜೆಗಳ ಘನತೆ ಮತ್ತು ಹೊಸ ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತ ನೆಮ್ಮದಿಯನ್ನು ಬಲಗೊಳಿಸುವ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
🏅 ಟೆಂಪ್ಲಟನ್ ಫೌಂಡೇಷನ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1972 ರಲ್ಲಿ ಟೆಂಪ್ಲಟನ್ ಫೌಂಡೇಷನ್ ಸ್ಥಾಪಿಸಿದ್ದು, ಇದನ್ನು ಧಾರ್ಮಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದವರಿಗೆ ನೀಡಲಾಗುತ್ತದೆ
🌸🌺🌸🌺🌸🌺🌸🌺🌸🌺
🏅ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು🏅
1. ಗ್ರಾಮಿ ಪ್ರಶಸ್ತಿ – ಸಂಗೀತ
2. ಟ್ಯಾನ್ಸೆನ್ ಪ್ರಶಸ್ತಿ – ಸಂಗೀತ
3. ಮ್ಯಾಗ್ಸೆಸೆ ಪ್ರಶಸ್ತಿ – ಸಾರ್ವಜನಿಕ ಸೇವೆ
4. ಮ್ಯಾನ್ ಬುಕರ್ ಪ್ರಶಸ್ತಿ – ಕಾದಂಬರಿಗಳ ಲೇಖಕರು
5. ಪುಲಿಟ್ಜರ್ – ಪತ್ರಿಕೋದ್ಯಮ ಮತ್ತು ಸಾಹಿತ್ಯ
6. ಭಾರತೀಯ ಜ್ಞಾನಪೀಠ ಪ್ರಶಸ್ತಿ – ಸಾಹಿತ್ಯ
7. ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ
8. ಕಳಿಂಗ ಪ್ರಶಸ್ತಿ – ವಿಜ್ಞಾನ
9. ಧನ್ವಂತ್ರಿ ಪ್ರಶಸ್ತಿ – ವೈದ್ಯಕೀಯ ವಿಜ್ಞಾನ
10. ಭಟ್ನಾಗರ್ ಪ್ರಶಸ್ತಿ – ವಿಜ್ಞಾನ
11. ನೊಬೆಲ್ ಪ್ರಶಸ್ತಿ – ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ
12. ಶೌರ್ಯ ಚಕ್ರ – ನಾಗರಿಕ ಅಥವಾ ಮಿಲಿಟರಿ
13. ಅಶೋಕ್ ಚಕ್ರ – ನಾಗರಿಕರು
14. ಪರಮ ವೀರ ಚಕ್ರ – ಮಿಲಿಟರಿ
15. ಕಾಳಿದಾಸ ಸಮ್ಮಾನ್ – ಕ್ಲಾಸಿಕಲ್ ಮ್ಯೂಸಿಕ್
16. ವ್ಯಾಸ್ ಸಮ್ಮಾನ್ – ಸಾಹಿತ್ಯ
17. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಸಾಹಿತ್ಯ
18. ಆರ್.ಡಿ.ಬಿರ್ಲಾ ಅವಾರ್ಡ್ – ಮೆಡಿಕಲ್ ಸೈನ್ಸ್
19. ಲೆನಿನ್ ಶಾಂತಿ ಪ್ರಶಸ್ತಿ – ಶಾಂತಿ ಮತ್ತು ಸ್ನೇಹ
20. ಜೂಲಿಯೆಟ್ ಕ್ಯೂರಿ ಪ್ರಶಸ್ತಿ: ಶಾಂತಿ
21. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಭಾರತೀಯ ಭಾಷೆಗಳು ಮತ್ತು ಇಂಗ್ಲೀಷ್ ಪುಸ್ತಕಗಳು
22. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ
23. ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ – ಕಲೆ
24. ರಾಜೀವ್ ಗಾಂಧಿ ಖೇಲ್ ರತ್ನ – ಕ್ರೀಡೆ (ಆಟಗಾರರು)
25. ದ್ರೋಣಾಚಾರ್ಯ ಪ್ರಶಸ್ತಿ -ಕ್ರೀಡೆ ತರಬೇತುದಾರರು
26. ಧ್ಯಾನ್ ಚಂದ್ – ಕ್ರೀಡೆ
27. ಏಕಲವ್ಯ ಪ್ರಶಸ್ತಿ – ಕ್ರೀಡೆ
28. ಕೋಲಂಕಾ ಕಪ್ – ಕ್ರೀಡೆ
29. ಏಕಲವ್ಯ ಪ್ರಶಸ್ತಿ – ಕ್ರೀಡೆ
30. ಅರ್ಜುನ ಪ್ರಶಸ್ತಿ – ಕ್ರೀಡೆ
31. ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿ – ಕ್ರೀಡೆ
32. ಆಸ್ಕರ್ – ಚಲನಚಿತ್ರ
33. ದಾದಾ ಸಾಹಿಬ್ ಫಾಲ್ಕೆ – ಚಲನಚಿತ್ರ
34. ನಂದಿ ಪ್ರಶಸ್ತಿಗಳು – ಸಿನಿಮಾ
35. ಸ್ಕ್ರೀನ್ ಪ್ರಶಸ್ತಿಗಳು – ಸಿನಿಮಾ
🌀🌸🌀🌸🌀🌸🌀🌸🌀🌸🌀
🌺ಭಾರತ ರತ್ನ ಪ್ರಶಸ್ತಿ ಭಾಜನರಾದ ವರ್ಷ – ಪುರಸ್ಕೃತರ ಹೆಸರು ಮತ್ತು ಅವರ ರಾಜ್ಯ/ ದೇಶ🌺
👇👇👇👇👇👇👇
1) 1954- ಎಸ್ ರಾಧಾಕೃಷ್ಣನ್ -ಆಂಧ್ರಪ್ರದೇಶ
2) 1954- ಸಿ.ರಾಜಗೋಪಾಲಚಾರಿ – ತಮಿಳುನಾಡು
3) 1954- ಡಾ.ಸಿ.ವ್ಹಿ.ರಾಮನ್ – ತಮಿಳುನಾಡು
4) 1955- ಭಗವಾನದಾಸ – ಉತ್ತರ ಪ್ರದೇಶ
5) 1955- ಸರ್.ಎಮ್.ವಿಶ್ವೇಶ್ವರಯ್ಯ – ಕರ್ನಾಟಕ
6) 1955- ಜವಾಹರಲಾಲ್ ನೆಹರು – ಉತ್ತರ ಪ್ರದೇಶ
7) 1957- ಪಂ.ಗೋ.ವಲ್ಲಭಿ ಪಂಥ – ಉತ್ತರ ಪ್ರದೇಶ
8) 1958- ಧೊಂಡೊ ಕೇಶವ ಕರ್ವೆ – ಮಹಾರಾಷ್ಟ್ರ
9) 1961- ಬಿಧಾನ್ ಚಂದ್ರ ರಾಯ್ – ಪಶ್ಚಿಮ ಬಂಗಾಳ
10) 1961- ಪುರುಷೋತ್ತಮದಾಸ ಟಂಡನ್ – ಉತ್ತರ ಪ್ರದೇಶ
11) 1962- ಡಾ.ರಾಜೇಂದ್ರ ಪ್ರಸಾದ್ – ಬಿಹಾರ
12) 1963- ಜಾಕೀರ್ ಹುಸೇನ್ – ಉತ್ತರ ಪ್ರದೇಶ
13) 1963- ಡಾ.ಪಾಂಡುರಂಗ ವಾಮನ ಕಾಣೆ – ಮಹಾರಾಷ್ಟ್ರ
14) 1966- ಲಾಲ್ ಬಹಾದ್ದೂರ ಶಾಸ್ತ್ರೀ – ಉತ್ತರ ಪ್ರದೇಶ
15) 1971- ಇಂದಿರಾಗಾಂಧಿ – ಉತ್ತರ ಪ್ರದೇಶ
16) 1975- ವ್ಹಿ.ವ್ಹಿ.ಗಿರಿ – ಒಡಿಶಾ
17) 1976- ಕೆ.ಕಾಮರಾಜ್ – ತಮಿಳುನಾಡು
18) 1980- ಮಧರ್ ಥೆರಿಸಾ -ಪಶ್ಚಿಮ ಬಂಗಾಳ (ಉತ್ತರ ಮ್ಯಾಸಿಡೋನಿಯಾ)
19) 1983- ವಿನೋಬಾ ಭಾವೆ – ಮಹಾರಾಷ್ಟ್ರ
20) 1987- ಖಾನ್ ಅಬ್ದಲ್ ಗಫಾರಖಾನ್ – ಪಾಕಿಸ್ತಾನ
21) 1988- ಎಂ.ಜಿ.ರಾಮಚಂದ್ರನ್ – ತಮಿಳುನಾಡು
22) 1990- ಡಾ.ಅಂಬೇಡ್ಕರ್ – ಮಹಾರಾಷ್ಟ್ರ
23) 1990- ನೆಲ್ಸನ್ ಮಂಡೇಲಾ – ದಕ್ಷಿಣ ಆಫ್ರಿಕಾ
24) 1991- ಮೊರಾರ್ಜಿ ದೇಸಾಯಿಯ – ಗುಜರಾತ್
25) 1991- ರಾಜೀವ್ ಗಾಂಧೀ – ಉತ್ತರ ಪ್ರದೇಶ
26) 1991- ಸರ್ದಾರ್ ಪಟೇಲ್ – ಗುಜರಾತ್
27) 1992- ಜೆ.ಆರ್.ಡಿ.ಟಾಟಾ – ಮಹಾರಾಷ್ಟ್ರ
28) 1992- ಮೌಲಾನಾ ಅಬ್ದುಲ್ ಕಲಾಂ ಆಜಾದ್ – ಪಶ್ಚಿಮ ಬಂಗಾಳ
29) 1992- ಸತ್ಯಜಿತ್ ರೇ – ಪಶ್ಚಿಮ ಬಂಗಾಳ
30) 1997- ಗುಲ್ಜಾರಿಲಾಲ್ ನಂದಾ – ಪಂಜಾಬ್
31) 1997- ಅರುಣಾ ಅಸಫ್ ಅಲಿ – ಪಶ್ಚಿಮ ಬಂಗಾಳ
32) 1997- ಎ.ಪಿ.ಜೆ.ಅಬ್ದುಲ್ ಕಲಾಂ – ತಮಿಳುನಾಡು
33) 1998- ಎಂ.ಎಸ್.ಸುಬ್ಬುಲಕ್ಷ್ಮಿ – ತಮಿಳುನಾಡು
34) 1998- ಸಿ. ಸುಬ್ರಹ್ಮಣ್ಯಂ – ತಮಿಳುನಾಡು
35) 1999- ಜಯಪ್ರಕಾಶ ನಾರಾಯಣ – ಬಿಹಾರ
36) 1999- ಅಮರ್ತ್ಯಸೇನ್ – ಪಶ್ಚಿಮ ಬಂಗಾಳ
37) 1999- ರವಿಶಂಕರ್ – ಶ್ಚಿಮ ಬಂಗಾಳ
38) 1999- ಗೋಪಿನಾಥ್ ಬೋರ್ಡೊಲೋಯಿ – ಅಸ್ಸಾಂ
39) 2001- ಉ.ಬಿಸ್ಮಲ್ಲಾಖಾನ್ -ಉತ್ತರ ಪ್ರದೇಶ
40) 2001- ಲತಾ ಮಂಗೇಶ್ಕರ್ -ಮಹಾರಾಷ್ಟ್ರ
41) 2008- ಭೀಮಸೇನ ಜೋಶಿ – ಕರ್ನಾಟಕ
42) 2013- ಸಚಿನ್ ತೆಂಡೂಲ್ಕರ್ – ಮಹಾರಾಷ್ಟ್ರ
43) 2013- ಸಿ.ಎನ್.ಆರ್.ರಾವ್ – ಕರ್ನಾಟಕ
44) 2015- ಮದನ ಮೋಹನ ಮಾಳ್ವೀಯಾ – ಉತ್ತರ ಪ್ರದೇಶ
45) 2015- ಅಟಲ ಬಿಹಾರಿ ವಾಜಪೇಯಿ – ಮಧ್ಯಪ್ರದೇಶ
46) 2019- ಪ್ರಣಬ್ ಮುಖರ್ಜಿ – ಪಶ್ಚಿಮ ಬಂಗಾಳ
47) 2019 – ಭೂಪೇನ್ ಹಜಾರಿಕಾ – ಅಸ್ಸಾಂ
48) 2019 – ನಾನಾಜಿ ದೇಶಮುಖ್ – ಮಹಾರಾಷ್ಟ್ರ
💐👇💐👇💐👇💐👇💐👇
🌀ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು🌀
1. ಭೂಶೃಂಗಗಳು🌷
➤ಮೊದಲ ಭೂಶೃಂಗ ಸಭೆ : 1992 ಜೂನ್ 3 ರಿಂದ 14 ರವರೆಗೆ ಬೆರೆಜಿಲ್‍ನ ರಿಯೋ ಡಿ ಜನಿರೋದಲ್ಲಿ ಜರುಗಿತು. ಇದನ್ನು ರಿಯೋ ಶೃಂಗ ಎಂದು ಕೂಡ ಕರೆಯುತ್ತಾರೆ. ಇದೊಂದು ವಿಶ್ವಸಂಸ್ಥೆಯ ಸಮ್ಮೇಳನವಾಗಿದೆ.
➤ಎರಡನೇ ಭೂಶೃಂಗಸಭೆ : 2002 ಆಗಸ್ಟ್ 26 ರಿಂದ ಸೆಪ್ಟೆಂಬರ್ 4 ರವರೆಗೆ ಎರಡನೇ ಭೂಶೃಂಗಸಭೆಯು ದಕ್ಷಿಣ ಆಫ್ರಿಕಾದ ಜೋಹಾನ್ಸ್‍ಬರ್ಗ್‍ನಲ್ಲಿ ಜರುಗಿತು. ಇದನ್ನು ರಿಯೋ + 10 ಎಂದು ಕರೆಯಲಾಗುತ್ತದೆ. ಇದು ಮೊದಲ ಶೃಂಗಸಭೆ ಜರುಗಿದ 10 ವರ್ಷಗಳ ನಂತರ ಜರುಗಿದ ಶೃಂಗಸಭೆಯಾಗಿದೆ.
➤ಮೂರನೇ ಭೂಶೃಂಗಸಭೆ : ಮೂರನೇ ಭೂಶೃಂಗಸಭೆಯು 2012 ಜೂನ್ 20 ರಿಂದ 22 ರವರೆಗೆ ಜರುಗಿತು. ಇದನ್ನು ರಿಯೋ + 20 ಎಂದು ಕರೆಯುವರು. ಮೂರನೇ ಭೂಶೃಂಗಸಭೆಯು ಬ್ರೆಜಿಲ್‍ನ ರಿಯೋ ಡಿ ಜನೀರೋದಲ್ಲಿ ಜರುಗಿತು.
2. ವಿಶ್ವ ಪರಿಸರ ದಿನ🌷
ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ ಮತ್ತು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುವ ವಿಶ್ವಸಂಸ್ಥೆಯ ಪ್ರಮುಖ ವಾಹನವಾಗಿದೆ. 1974 ರಲ್ಲಿ ಮೊದಲ ಬಾರಿಗೆ ನಡೆದ ಇದು ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳ ಬಗ್ಗೆ ಸುಸ್ಥಿರ ಬಳಕೆ ಮತ್ತು ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಅಭಿಯಾನವಾಗಿದೆ.
ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ, ವಾರ್ಷಿಕವಾಗಿ 143ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆ. ಪ್ರತಿ ವರ್ಷ, ವಿಶ್ವ ಪರಿಸರ ದಿನವು ಹೊಸ ವಿಷಯಗಳು ಒದಗಿಸಿದ್ದು, ಪ್ರಮುಖ ಸಂಸ್ಥೆಗಳು, ಎನ್‌ಜಿಒಗಳು, ಸಮುದಾಯಗಳು, ಸರ್ಕಾರಗಳು ಮತ್ತು ವಿಶ್ವಾದ್ಯಂತದ ಎಲ್ಲ ಪ್ರಸಿದ್ಧ ವ್ಯಕ್ತಿಗಳು ಪರಿಸರ ಕಾರಣಗಳನ್ನು ಪ್ರತಿಪಾದಿಸಲು ಅಳವಡಿಸಿಕೊಂಡಿದ್ದಾರೆ.
ಮಾನವ ಪರಿಸರ ಕುರಿತ ಸ್ಟಾಕ್‌ಹೋಮ್ ಸಮ್ಮೇಳನದ ಮೊದಲ ದಿನದಂದು ವಿಶ್ವಸಂಸ್ಥೆಯು 1972 ರಲ್ಲಿ ವಿಶ್ವ ಪರಿಸರ ದಿನವನ್ನು ಸ್ಥಾಪಿಸಿತು, ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ಪರಿಸರದ ಏಕೀಕರಣ ಕುರಿತು ಚರ್ಚೆಗಳು ನಡೆದವು. ಎರಡು ವರ್ಷಗಳ ನಂತರ, 1974 ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು “ಕೇವಲ ಒಂದು ಭೂಮಿ” ಎಂಬ ವಿಷಯದೊಂದಿಗೆ ನಡೆಸಲಾಯಿತು. 1974 ರಿಂದ ವಾರ್ಷಿಕವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಆತಿಥೇಯ ರಾಷ್ಟ್ರಗಳನ್ನು ಆಯ್ಕೆ ಮಾಡುವ ಮೂಲಕ ಈ ಚಟುವಟಿಕೆಗಳ ಕೇಂದ್ರವನ್ನು ತಿರುಗಿಸುವ ಆಲೋಚನೆ ಪ್ರಾರಂಭವಾಯಿತು.
3. ಪೃಥ್ವಿ ದಿನ🌷
1970ರಿಂದ ಪ್ರತಿ ವರ್ಷವೂ ಏಪ್ರಿಲ್ 22ರಂದು ಪೃಥ್ವಿ ದಿನ~ ಆಚರಿಸಲಾಗುತ್ತಿದೆ. 1960ರಲ್ಲಿ ನೆಲ ಮತ್ತು ಪೆಸಿಫಿಕ್ ಸಮುದ್ರ ದ್ವೀಪಗಳಲ್ಲಿ ಯುದ್ಧಾಸ್ತ್ರ, ಪರಮಾಣು ಬಾಂಬ್ ಪರೀಕ್ಷೆ ನಡೆಸಲಾಗಿತ್ತು. ಈ ದಶಕದಲ್ಲಿಯೇ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸುವ್ಯವಸ್ಥಿತ ಪರಿಸರ ಸಂರಕ್ಷಣಾ ಸಂಸ್ಥೆಗಳಿರಲಿಲ್ಲ. ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಜನಸಾಂದ್ರತೆಯು ಹೆಚ್ಚಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಅಮೆರಿಕದ ಸೆನೆಟರ್ ಗೆಲಾರ್ಡ್ ನೆಲ್ಸನ್ ಮೊದಲ ಬಾರಿಗೆ ಧ್ವನಿ ಎತ್ತಿ ಚಳವಳಿ ಆರಂಭಿಸಿದರು.
ನಂತರ ಈ ಚಳವಳಿ ವಿಶ್ವ ಪೃಥ್ವಿ ದಿನ’ದ ಹೆಸರು ಪಡೆಯಿತು. ಕೊಲಂಬಿಯಾ ಮತ್ತು ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದರಿಂದ ಪ್ರೇರೇಪಣೆಗೊಂಡು ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದರು. ಮಿತಿಮೀರಿದ ವಾಹನಗಳು, ಕೈಗಾರಿಕೆಗಳಿಂದ ಆಗುವ ವಾಯುಮಾಲಿನ್ಯ, ವಿಷಕಾರಿ ರಾಸಾಯನಿಕಗಳು ಮತ್ತು ಕ್ರಿಮಿನಾಶಕಗಳಿಂದ ನೀರು ಯಾವ ರೀತಿ ಮಲಿನವಾಗುತ್ತಿದೆ ಎನ್ನುವುದರ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ಪ್ರಯತ್ನಕ್ಕೆ 1970 ಏಪ್ರಿಲ್ 22ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
4. ಅರ್ಥ್ ಅವರ್🌷
ಪ್ರತಿ ವರ್ಷ ವಲ್ರ್ಡ್ ವೈಡ್ ಫಂಡ್‍ರವರು ಮಾರ್ಚ್ ತಿಂಗಳ ಕೊನೆಯ ಶನಿವಾರದಂದು ರಾತ್ರಿ 8.30 ರಿಂದ 9.30 ರ ಒಂದು ಗಂಟೆ ಅವಧಿಗೆ ಅನಗತ್ಯವಾದ ದೀಪಗಳನ್ನು ಆರಿಸಿ ಭೂಮಿ ಸಂರಕ್ಷಿಸುವ , ತಾಪಮಾನ ತಗ್ಗಿಸುವ ಪ್ರಯತ್ನ ಮಾಡಲಾಗುತ್ತದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ವಿಶ್ವ ವನ್ಯಜೀವಿ ನಿಧಿ) ಸಂಘಟನೆ ಕರೆಯಂತೆ 2007ರಲ್ಲಿ ಹವಾಮಾನ ಬದಲಾವಣೆ ತಡೆಗಟ್ಟುವ ಪ್ರಯತ್ನವಾಗಿ ಅನಗತ್ಯ ವಿದ್ಯುತ್ ದೀಪಗಳು ಮತ್ತು ಇತರ ಉಪಕರಣಗಳನ್ನು ಬಳಸದಿರುವ ಪ್ರತಿಜ್ಞೆ ಕೈಗೊಳ್ಳಲಾಗಿದೆ.2007ರಲ್ಲಿ ಮೊದಲ ಬಾರಿ ಅರ್ಥ್ ಅವರ್ ಆಚರಿಸಲು ಕರೆ ನೀಡಿದಾಗ ಸಿಡ್ನಿ ನಗರದ 22 ಲಕ್ಷ ಮಂದಿ ಅಗತ್ಯವಿಲ್ಲದ ವಿದ್ಯುತ್ ದೀಪಗಳನ್ನು ಆರಿಸಿ ಸ್ಪಂದಿಸಿದರು. 2008ರಲ್ಲಿ ಜಗತ್ತಿನ ಇತರ ಹಲವು ನಗರಗಳು ಅರ್ಥ್ ಅವರ್ ಆಚರಣೆಯಲ್ಲಿ ಭಾಗಿಯಾದವು. ಭಾರತದ ಹಲವು ನಗರಗಳೂ ಅರ್ಥ್ ಅವರ್ ಆಚರಿಸಿದವು.
5. ವಿಶ್ವಜಲದಿನ🌷
ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವಜಲದಿನವನ್ನು ಆಚರಿಸಲಾಗುತ್ತದೆ. ವಿಶ್ವ ಜಲ ದಿನವನ್ನು ಮಾರ್ಚ್ 22ರಂದು ಸಿಹಿ ನೀರಿನ ಪ್ರಾಮುಖ್ಯದ ಮೇಲೆ ಗಮನ ಕೇಂದ್ರೀಕರಿಸುವುದಕ್ಕಾಗಿ ಮತ್ತು ಸಿಹಿ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಆಚರಿಸಲಾಗುತ್ತದೆ. 1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸಲು ಶಿಫಾರಸು ಮಾಡಲಾಯಿತು. ಅದೇ ವರ್ಷ ಡಿ. 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯವನ್ನು ಸ್ವೀಕರಿಸಿ 1993 ಮಾರ್ಚ್ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು.
6. ಅಂತರಾಷ್ಟ್ರೀಯ ಓಜೋನ್ ಪದರ ಸಂರಕ್ಷಣಾ ದಿನ🌷
ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ಅಂತರಾಷ್ಟ್ರೀಯ ಓಜೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ 16, 1987 ರಲ್ಲಿ ಓಜೋನ್ ಸಂರಕ್ಷಣೆಗಾಗಿ ಮಾಂಟ್ರಿಯಲ್ ಒಪ್ಪಂದ ಕೈಗೊಳ್ಳಲಾಯಿತು. ಇದರ ಸ್ಮರಣಾರ್ಥ ಸೆಪ್ಟೆಂಬರ್ 16 ರಂದು ಅಂತರಾಷ್ಟ್ರೀಯ ಓಜೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.
🍁🌺🍁🌺🍁🌺🍁🌺🍁🌺
☘ಅರ್ಥಶಾಸ್ತ್ರ ಕುರಿತು ಹಿಂದಿನ ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು ☘
👇👇👇👇👇👇👇👇
➤ ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..?
– ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್
➤ SAARC ನ ಪ್ರಧಾನ ಕಚೇರಿ..? – ಕಟ್ಮಂಡು
➤ ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..?
- ಜಿನಿವಾ
➤ ಭಾರತದ ಹತ್ತು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ..?
- RBI ಗವರ್ನರ್( “ಒಂದು ರೂಪಾಯಿ” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ ಇರುತ್ತೆ,)
➤ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..?
– ಹೆಚ್ಚುತ್ತದೆ
➤ ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..? – 11
➤ ILO ಪ್ರಧಾನ ಕಛೇರಿ ಇರುವುದು..? – ಜಿನಿವಾ
➤ “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?
- ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ
➤ ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..? – ಜವಾಹರಲಾಲ್ ನೆಹರು
➤ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?
- ಭಾರತೀಯ ರಿಸರ್ವ್ ಬ್ಯಾಂಕ್
➤ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?
- ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ
➤ 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?
-ಇಂದಿರಾಗಾಂಧಿಯವರು
➤ ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?
- ಜವಾಹರಲಾಲ್ ನೆಹರು
➤ “The Argumentative India” ಇದು ಯಾರ ಆತ್ಮಕಥನ..?
- ಅಮರ್ತ್ಯಸೇನ
➤ ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?
- ಎಂ ಎಸ್ ಸ್ವಾಮಿನಾಥನ್
➤ “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..?
- ಹಾಲು ಉತ್ಪಾದನೆ
➤ ಹಣದ ಅಪಮೌಲ್ಯ ಎಂದರೆ..? – ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ ಮೌಲ್ಯ ಕಡಿಮೆಯಾಗುವುದು
➤ ಯುನಿಸೆಫ್(UNICEF) ವಿಸ್ತರಣೆ..? – ಯುನೈಟೆಡ್ ನೇಷೆನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್
➤ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..?
– 5
➤ ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? – ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ
➤ ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? – ಮೀನುಗಳು
➤ ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..?
– ಒಂದನೇ ಎಪ್ರಿಲ್
➤ ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?
- ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು
➤ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..?-
1945 ಅಕ್ಟೋಬರ್ 24
➤ ಮಲೇಶಿಯಾ ದೇಶದ ಹಣದ ಹೆಸರು..?
– ರಿಂಗಿಟನ್
➤ ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –
ಭಾರತೀಯ ಸ್ಟೇಟ್ ಬ್ಯಾಂಕ್
➤ ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..?
– RBI
➤ ಶ್ವೇತ ಕ್ರಾಂತಿ ಹರಿಕಾರ..? – ವರ್ಗೀಸ್ ಕುರಿಯನ್
➤ “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? – ದಾದಾಬಾಯಿ ನವರೋಜಿ
➤ ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? – ವಿಶ್ವಬ್ಯಾಂಕ್
➤ ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? – ಅಂತರಾಷ್ಟ್ರೀಯ ಹಣಕಾಸು ನಿಧಿ
➤ ಯಾವುದು ರಾಜ್ಯಗಳ ಮುಖ್ಯ ಆದಾಯ..? – ಮಾರಾಟ ತೆರಿಗೆ
➤ ಭಾರತದ ಜನಗಳ ಮುಖ್ಯ ಉದ್ಯೋಗ..? – ಕೃಷಿ
➤ ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – ಅಕ್ಟೋಬರ್ 2, 2014
➤ “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..?
– ಷೆರು ಮಾರುಕಟ್ಟೆ
➤ “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..?
ಷೇರು ಮಾರುಕಟ್ಟೆ
➤ “ಜೀವ ನಿರೀಕ್ಷಿಸುವಿಕೆ” ಎಂದರೆ..?
- ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ
➤ ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..?
– ಜಿನಿವಾ
➤ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..?
– ದಕ್ಷಿಣ ಕನ್ನಡ
➤ “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? – ಅಡಂಸ್ಮಿತ್
➤ ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? – ಮೂರು ವರ್ಷಗಳು
➤ ಹೊಸ 2000 ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? – 15
➤ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..? – ಪ್ರಾಥಮಿಕ ವಲಯ
➤ ಹಣದುಬ್ಬರ ವೆಂದರೆ..? – ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ
➤ ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? – HSBC ಬ್ಯಾಂಕ್
➤ PAN ನ ವಿಸ್ತರ ರೂಪ..? ಪರ್ಮೆಂಟ್ ಅಕೌಂಟ್ ನಂಬರ್
➤ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – one state Many world
➤ ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – ಸಿಬಿ
🌹🌸🌹🌸🌹🌸🌹🌸🌹🌸
🌎ಮಂಗಳ ಗ್ರಹದ ಕುರಿತು ಇಲ್ಲಿದೆ ವಿಶೇಷ ಮಾಹಿತಿ🌎
🌺 ಮಂಗಳ ಗ್ರಹವನ್ನು ಅಂಗಾರಕ, ಕುಜ, ಕೆಂಪು ಗ್ರಹ, ಕಿತ್ತಳೆ ಗ್ರಹ ಎಂದು ಕರೆಯುತ್ತಾರೆ.
🌺ಮಂಗಳ ಗ್ರಹವು ತನ್ನ ಮೇಲ್ಮೈನಲ್ಲಿ ಕಬ್ಬಿಣದ ಆಕ್ಸೈಡ್‍ನ್ನು ಹೊಂದಿರುವುದರಿಂದ ‘ ಕೆಂಪು / ಕಿತ್ತಳೆ ಬಣ್ಣವಾಗಿ ಈ ಗ್ರಹ ಗೋಚರಿಸುತ್ತದೆ.
🌺 ಮಂಗಳ ಗ್ರಹದಲ್ಲಿ ಎರಡು ಉಪಗ್ರಹಗಳಿವೆ. 1. ಪೋಬೊಸ್ 2. ಡಿಮೋಸ್
🌺ಮಂಗಳ ಗ್ರಹವು ಸೌರವ್ಯೂಹದ 4 ನೇ ಗ್ರಹವಾಗಿದೆ.
🌺ಸೌರಮಂಡಲದ ಎರಡನೇಯ ಅತಿ ಚಿಕ್ಕ ಗ್ರಹವಾಗಿದೆ.
🌺ಸೌರಮಂಡಲದಲ್ಲಿ ಭೂಮಿಯ ನಂತರದ ಗ್ರಹವಾಗಿದೆ.
🌺 ಮಂಗಳ ಗ್ರಹಕ್ಕೆ ‘ ಮಾರ್ರ್ಸ್’ ಎಂಬ ಹೆಸರನ್ನು ನೀಡಲಾಗಿದ್ದು, ಈ ಹೆಸರು ರೋಮನ್ ಉಪದೇವತೆಯ ಹೆಸರಾಗಿದೆ.
🌺 ಮಂಗಳ ಮತ್ತು ಗುರು ಗ್ರಹಗಳ ನಡುವೆ ಕ್ಷುದ್ರಗ್ರಹಗಳಿವೆ.
🌺ಮಂಗಳನ ಅಕ್ಷಭ್ರಮಣ ಅವಧಿಯು 24 ಗಂಟೆ 6 ನಿಮಿಷಗಳು.
🌺 ಮಂಗಳನ ಪರಿಭ್ರಮಣ ಅವಧಿಯು 687 ದಿನಗಳು.
🌺ಈ ಗ್ರಹದ ಗರ್ಭದಲ್ಲಿ ಘನ ಸ್ಥಿತಿ ಇದ್ದು, ಪ್ರಧಾನವಾಗಿ ಕಬ್ಬಿಣ, ನಿಕಲ್ ಮತ್ತು ಗಂಧಕಗಳಿವೆ.
🌺ಅತಿ ಶೈತ್ಯ ಮತ್ತು ತುಂಬಾ ತೆಳುವಾದ ಸಾಂದ್ರತೆ ಕಡಿಮೆ ಇರುವ ವಾಯುಮಂಡಲ, ಪರಿಣಾಮವಾಗಿ ದ್ರವನೀರು ಅಲಭ್ಯ.
🌺 ಕಾಲುವೆಗಳು, ಕಣಿವೆಗಳು, ಕೊರಕಲುಗಳು, ಕಮರಿಗಳು ಹಿಂದೆ ಸಮೃದ್ಧವಾಗಿ ನೀರು ಹರಿದಿರಬೇಕೆಂಬ ಊಹೆಗೆ ಇಂಬು ನೀಡಿದೆ.
🌺 ಮಂಗಳ ಗ್ರಹವನ್ನು ಅಧಯಯನ ಮಾಡಲು ಮೊಟ್ಟ ಮೊದಲ ಭಾರಿಗೆ 1965 ರಲ್ಲಿ ಮರಿನರ್ – 4 ಎಂಬ ಉಡಾಯನವನ್ನು ಉಡಾವಣೆ ಮಾಡಿ ಮಂಗಲನಲ್ಲಿ ಹಸಿರಿಲ್ಲವೆಂದು ಪತ್ತೆ ಹಚ್ಚಲಾಯಿತು.
🌺 1997 ರ ‘ ಸೋರ್ಜನರ್’ ನೌಕೆ ಮಂಗಳನ ಅಂಗಳದಲ್ಲಿ ಸುತ್ತಾಡಿ ಸಾಕಷ್ಟು ಮಾಹಿತಿ ರವಾನಿಸಿತು.
🌺ಅಮೇರಿಕಾದ ನಾಸಾವು ನವೆಂಬರ್ 26, 2011 ರಂದು ‘ ಕ್ಯೂರಾಸಿಟಿ ರೋವರ್” ಎಂಬ ರೋಬೋಟ್ ನ್ನು ಮಂಗಳ ಗ್ರಹದ “ ಗೇಲ್‍ಕ್ರೆಟರ್’ ಎಂಬ ಸ್ಥಳಕ್ಕೆ ಕಳುಹಿಸಿ, ಆಗಸ್ಟ್ 6, 2012 ರಂದು ಯಶಸ್ವಿಯಾಗಿ ತಲುಪಿತು. ಕ್ಯೂರಾಸಿಟಿ ರೋವರ್ ಮಂಗಳ ಗ್ರಹದ ವೈಜ್ಞಾನಿಕ ಪ್ರಯೋಗಾಲಯವಾಗಿದ್ದು, ಮಂಗಳನ ವಾಯುಗುಣ, ಭೂಗರ್ಭದಲ್ಲಿರುವ ಅಂಶಗಳು, ಭೂತಕಾಲದಲ್ಲಿ ಜೀವಿಗಳು ಅಸ್ಥಿತ್ವದಲ್ಲಿದ್ದವು, ಭವಿಷ್ಯದಲ್ಲಿ ಜೀವಿಗಳು ಬದುಕಲು ಅವಶ್ಯಕವಾದ ವಾತಾವರಣದ ಕುರಿತು ಸಂಶೋಧಿಸುವ ಉದ್ದೇಶ ಹೊಂದಿತ್ತು.
🌺 ಭಾರತದ ಮಂಗಳಯಾನ : ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸಿರುವ ಉಪಗ್ರಹವಾಗಿದೆ. ಇದನ್ನು ನವೆಂಬರ್ 5 , 2013 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ( ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಇಸ್ರೋ ಪ್ರಥಮ ಪ್ರಯತ್ನದಲ್ಲಿ ಉಪಗ್ರಹವನ್ನು ಸೆಪ್ಟೆಂಬರ್ 24- 9- 2014 ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸಿದೆ.
🌺ಭಾರತದ ಪ್ರಥಮ ಪ್ರಯತ್ನದಲ್ಲಿ ಮಂಗಳಯಾನ ಯಶಸ್ವಿಯಾಯಿತು. ಅಲ್ಲದೆ ಮಂಗಳಗ್ರಹಕ್ಕೆ ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿದ ಅಮೇರಿಕ, ರಷ್ಯಾ, ಐರೋಪ್ಯ ಒಕ್ಕೂಟದ ಸಾಲಿಗೆ ಸೇರ್ಪೆಡೆಯಾಯಿತು. ಮಂಗಳಯಾನಕ್ಕೆ ಭಾರತದ ಉಡ್ಡಯನ ವೆಚ್ಚ ಸುಮಾರು 450 ಕೋಟಿ.
💧🌸💧🌸💧🌸💧🌸💧🌸💧
🌷ಜೀವಿಗಳ ಉಸಿರಾಟದ ಅಂಗಗಳು ಮತ್ತು ಚಲನಾಂಗಗಳು🌷
🌺ಉಸಿರಾಟದ ಅಂಗಗಳು🌺
🦟 ಕೀಟಗಳು – ಟ್ರೇಕಿಯಾ
🐠. ಮೀನುಗಳು – ಕಿವಿರು
🐸 ಕಪ್ಪೆ – ಚರ್ಮ ಮತ್ತು ಶ್ವಾಸಕೋಶ
🧍 ಮಾನವ – ಶ್ವಾಸಕೋಶ
🪴ಸಸ್ಯಗಳು – ಪತ್ರರಂಧ್ರಗಳು
🦋 ಚಲನಾಂಗಗಳು🦋
1. ಅಮೀಬ – ಮಿಥ್ಯಾಪಾದ (ಸೂಡೋಪೋಡಿಯಾ)
2. ಯೂಗ್ಲಿನ – ಲೋಮಾಂಗ (ಸೀಲಿಯಾ)
3. ಪ್ಯಾರಾಮೀಸಿಯಂ – ಕಶಾಂಗ (ಫ್ಲಾಜಿಲ್ಲಾ)
4. ಹೈಡ್ರಾ – ಕರಬಳ್ಳಿ(ಟೆಂಟಕಲ್ಸ್)
5. ಮೀನು – ಈಜುರೆಕ್ಕೆ
6. ಪಕ್ಷಿ – ರೆಕ್ಕೆ
7. ಹಸು – ಕಾಲು
8. ನೀರಸ್ಪಾ – ಶ್ವಪಾದಗಳು(ಪ್ಯಾರಾಪೋಡಿಯಾ)
9. ಎರೆಹುಳು – ಬಿರುಗೂದಲು
10. ಕಂಟಕ ಚರ್ಮಿಗಳು – ನಳಿಕಾಪಾದ
🍁🌺🍁🌺🍁🌺🍁🌺🍁
🌀ರಕ್ತದ ಬಗ್ಗೆ ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು 🌀
1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
120 ದಿನಗಳು.
2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
6-12 ದಿನಗಳು
3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
ಬಿಳಿ ರಕ್ತಕಣಗಳು
4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
12 ದಿನಗಳು
5. _____ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
ಕಿರುತಟ್ಟೆ.
6. ___ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
ಬಿಳಿ ರಕ್ತಕಣಗಳ.
7. ____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
ಪಿತ್ತಜನಕಾಂಗ.
8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
9% ರಷ್ಟು.
9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
ವಿಲಿಯಂ ಹಾರ್ವೆ.
10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.
11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಹೆಮಟಾಲೋಜಿ.
12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಕಾರ್ಲ್ ಲ್ಯಾಂಡ್ ಸ್ಪಿನರ್.
13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು? ಅಪಧಮನಿ.
14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
O ಗುಂಪು.
15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
AB ಗುಂಪು.
🌸🌺🌸🌺🌸🌺🌸🌺🌸🌺🌸