ಶಿಕ್ಷಣವೇ ಶಕ್ತಿ

Friday, 25 December 2020

ಕನ್ನಡ ಸಾಹಿತ್ಯ


ಕನ್ನಡ ಸಾಹಿತ್ಯ


ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು . ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯಕ ಸಂಪ್ರದಾಯ, ಸಂಸ್ಕೃತ ಸಾಹಿತ್ಯ (ಮತ್ತು ಅದರ ಉಪಭಾಷೆಗಳಾದ ಪ್ರಾಕೃತ ಇತ್ಯಾದಿ).

ಕವಿರಾಜಮಾರ್ಗದಲ್ಲಿ ಕವಿ ಕನ್ನಡಿಗರನ್ನು ಕೊಂಡಾಡಿರುವ ಪರಿ

ಇತಿವೃತ್ತ

  • ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನ ದಲ್ಲಿ (ಸು. ಕ್ರಿ.ಶ೩೭೦ ರಿಂದ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ. ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು.
  • ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖ ಈ ಪುಸ್ತಕದಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬-೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸ ಬಹುದು: ಹಳೆಗನ್ನಡನಡುಗನ್ನಡ ಹಾಗೂ ಆಧುನಿಕ ಕನ್ನಡ.

ಹಳೆಗನ್ನಡ

  • ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ (ಕ್ರಿ.ಶ. ೯೦೨-೯೭೫).
  • ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.' ಮಾನವ ಕುಲ ತಾನೊಂದೇ ವಲಂ' ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.
  • ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (೯೩೯-೯೬೬). ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (೯೪೯-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ.
  • ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ)

ನಡುಗನ್ನಡ

  • ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.
  • ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.
  • ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದಮಣಿದರ್ಪಣ.

ವಚನ ಸಾಹಿತ್ಯ

  • ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ಲಿಂಗಾಯತ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ. ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ. ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ.
  • ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು. ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.
  • ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (೧೧೩೪-೧೧೯೬), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (೧೨ನೇ ಶತಮಾನ). ಇವರಲ್ಲದೆ ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ ಇನ್ನೂ ಮೊದಲಾದ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.

ಕುಮಾರವ್ಯಾಸ

  • ಕುಮಾರವ್ಯಾಸ ಪ್ರಾಯಶಃ ಕನ್ನಡದ ಅತ್ಯಂತ ಪ್ರಸಿದ್ಧ ಹಾಗೂ ಅತ್ಯಂತ ಪ್ರಭಾವಶಾಲಿ ಕವಿ ಎಂದರೂ ಸರಿ. ಅವನ ಜೀವನಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಅತ್ಯದ್ಭುತ ಶೈಲಿಯಲ್ಲಿ ಭಾಮಿನಿ ಷಟ್ಪ್ದಿದಿಯಲ್ಲಿ ರಚಿಸಿದ್ದಾನೆ. ಅದು ಕೇವಲ ರೂಪಾಂತರವಲ್ಲ ; ಅನೇಕ ಕವಿ ಸಮಯ ದಿಂದ ಕೂಡಿದ್ದು, ಸ್ವಂತ ಕೃತಿಯೆಂಬಂತೆ ರಚಿಸಿದ್ದಾನೆ .
  • ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದ ಕೃತಿಯಿದ್ದೀತು. ಇದರ ಪ್ರಸಿದ್ಧಿಗೆ ಪ್ರಮುಖ ಕಾರಣ ಇದು ಎಲ್ಲ ಕಾಲಗಳಲ್ಲಿಯೂ ಎಲ್ಲ ಬುದ್ಧಿಮತ್ತೆಯ ಜನರಿಗೂ ಸಹ ಅವರವರ ಶಕ್ತಿಗನುಸಾರವಾಗಿ ನಿಲುಕಿದೆ. ಇಡೀ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ. ಕುಮಾರವ್ಯಾಸ ಹುಡುಕಿ ನೋಡುವ ಮಾನವ ಭಾವಗಳ ವ್ಯಾಪ್ತಿ, ಆತನ ಕಾವ್ಯದ ವೈವಿಧ್ಯತೆ ಮತ್ತು ಶಬ್ದಭಂಡಾರ ಓದುಗರನ್ನು ಬೆರಗುಗೊಳಿಸುತ್ತವೆ.
  • ಕುಮಾರವ್ಯಾಸ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ರೂಪಕಾಲಂಕಾರ ಚಮತ್ಕಾರಕ್ಕೆ ಪ್ರಸಿದ್ಧನಾಗಿದ್ದಾನೆ. ಇದರಿಂದಾಗಿಯೇ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರನಾಗಿದ್ದಾನೆ. ಕುಮಾರವ್ಯಾಸನು ಗದುಗಿನ ವೀರನಾರಾಯಣನ ಭಕ್ತ, ಅವನನ್ನು ಗದುಗಿನ ನಾರಣಪ್ಪ ಎಂದು ಕರೆಯುತ್ತಾರೆ. ಈತನ ಮೊದಲಿನ ಹೆಸರು ನಾರಯಣಪ್ಪ . ಕುವೆಂಪುರವರು ಕುಮಾರವ್ಯಾಸನನ್ನು ಕುರಿತು,

ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು .
ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು... ಎಂದಿದ್ದಾರೆ.

ಪಂಪ ಕಲಿತವರ ಪಾಲಿನ ಕಲ್ಪವೃಕ್ಷ ವಾದರೆ, ಕುಮಾರವ್ಯಾಸ ಕಲಿಯದವರ ಪಾಲಿನ ಕಾಮಧೇನು.

ದಾಸ ಸಾಹಿತ್ಯ

  • ದಾಸ ಸಾಹಿತ್ಯ (ಭಕ್ತಿ ಸಾಹಿತ್ಯ) ೧೫ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪಂಥದ ಹರಿದಾಸರಿಂದ ವಿರಚಿತವಾದದ್ದು. ಈ ಪದ್ಯಗಳಿಗೆ ಸಾಮಾನ್ಯವಾಗಿ 'ಪದ' ಗಳೆಂದು ಹೆಸರು. ಇವು ಭಗವಂತನಲ್ಲಿ ಒಂದಾಗ ಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ. ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ.
  • ದಾಸ ಸಾಹಿತ್ಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ. ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು. ಈ ಪ್ರಕಾರದ ಮುಖ್ಯ ಕನ್ನಡ ಕವಿಗಳೆಂದರೆ ಪುರಂದರದಾಸ (೧೪೯೪-೧೫೬೪) ಮತ್ತು ಕನಕದಾಸ(೧೫೦೯-೧೬೦೯). ಇವರನ್ನು ದಾಸ ಸಾಹಿತ್ಯದ ಅಶ್ವಿನಿದೇವತೆಗಳೆಂದು ಕರೆಯಲಾಗಿದೆ.

ಆಧುನಿಕ ಕನ್ನಡ

ಕನ್ನಡದ ನವೋದಯ

  • ನವೋದಯ ಎಂದರೆ ಹೊಸ ಹುಟ್ಟು/ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀಕುವೆಂಪುಬೇಂದ್ರೆಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು.
  • ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀ, ತಮ್ಮ ಇಂಗ್ಲಿಷ್ ಗೀತಗಳ ಪುಸ್ತಕ ದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡು ಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
  • ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕಾವ್ಯಕೃತಿ ಶ್ರೀ ರಾಮಾಯಣ ದರ್ಶನಂ.
  • ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು-ಚೋಮನ ದುಡಿ, ಬೆಟ್ಟದ ಜೀವ, ಮೈಮನಗಳ ಸುಳಿಯಲ್ಲಿ, ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು ಮೊದಲಾದುವು.

ಈ ಕಾಲದ ಪ್ರಸಿದ್ಧ ಕವಿಗಳು

  1. ಕುವೆಂಪು,
  2. ಬಿ.ಎಂ.ಶ್ರೀ,
  3. ದ.ರಾ.ಬೇಂದ್ರೆ,
  4. ಪು ತಿ ನ,
  5. ಕೆ.ಎಸ್. ನರಸಿಂಹಸ್ವಾಮಿ,
  6. ಎಂ.ಗೋಪಾಲಕೃಷ್ಣ ಅಡಿಗ,
  7. ಪ್ರೊ‌.ನಿಸಾರ್ ಅಹಮದ್
  8. ಚೆನ್ನವೀರ ಕಣವಿ ಮೊದಲಾದವರು.
  9. ಡಾ.ಚಂದ್ರಶೇಖರ್ ಕಂಬಾರ-ಕವಿ- ನಾಟಕಕಾರ - ಕಾದಂಬರಿಕಾರ- ಸಂಶೋಧಕ
  10. ಡಿ.ವಿ.ಜಿ.

ಈ ಕಾಲದ ಪ್ರಸಿದ್ಧ ಕಾದಂಬರಿಕಾರರು

  1. ಕುವೆಂಪು,
  2. ಶಿವರಾಮ ಕಾರಂತ,
  3. ಮಾಸ್ತಿ ವೆಂಕಟೇಶ ಐಯ್ಯಂಗಾರ್,
  4. ಅ.ನ.ಕೃ,
  5. ಯು.ಆರ್.ಅನಂತಮೂರ್ತಿ,
  6. ವಿ. ಕೃ. ಗೋಕಾಕ್
  7. ಡಿ.ವಿ.ಗುಂಡಪ್ಪ
  8. ಗೊರೂರು ರಾಮಸ್ವಾಮಿ ಅಯ್ಯಂಗಾರ್
  9. ಕೆ.ವಿ.ಅಯ್ಯರ್
  10. ಮಂಜೇಶ್ವರ ಗೋವಿಂದ ಪೈ
  11. ತೀ ನಂ ಶ್ರೀ
  12. ಎಸ್. ಎಲ್. ಭೈರಪ್ಪ
  13. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು.

ಈ ಕಾಲದ ಪ್ರಸಿದ್ಧ ನಾಟಕಕಾರರು

  1. ಟಿ.ಪಿ.ಕೈಲಾಸಂ,
  2. ಶ್ರೀರಂಗ,
  3. ಕುವೆಂಪು,
  4. ಬಿ.ಎಂ.ಶ್ರೀ,
  5. ಬಿ.ವಿ. ಕಾರಂತ ಮೊದಲಾದವರು.

ನವ್ಯ

೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾ ವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.

ಇತರ ಪ್ರಕಾರಗಳು

ಕಳೆದ ಐದು ದಶಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ. ಜಾತಿಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಪ್ರೇರಿತವಾಗಿದೆ. ಸ್ತ್ರೀ-ವಿಮೋಚನಾ ಚಳುವಳಿಗಳು ಸ್ತ್ರೀ-ಕಾವ್ಯ ಪ್ರಕಾರಕ್ಕೆ ಎಡೆ ಮಾದಿಕೊಟ್ಟಿವೆ. ಸಣ್ಣ ಕಥೆಗಳು ಹಾಗೂ ಭಾವಗಿತೆಗಳು ಸಹ ಇಪ್ಪತ್ತನೆ ಶತಮಾನದಲ್ಲಿ ಜನಪ್ರಿಯವಾದ ಸಾಹಿತ್ಯ ಪ್ರಕಾರಗಳು ರಾಜ್ಯದ ಹಲವರು ತಮ್ಮನ್ನು ಸ್ಥಳೀಯ ಬಾಷೆಯಲ್ಲಿ ಕಥೆ ಕಾದಂಬರಿ ಬರೆಯುವಲ್ಲಿ ಗುರುತಿಸಿಕೊಂಡರು. ಅದರಲ್ಲಿ ಬಾಳಾಸಾಹೇಬ ಲೋಕಾಪುರ ಅಮರೇಶ ನುಗಡೋಣಿ ಶಂಕರ ಬೈಚಬಾಳ ಲೋಕೆಶ ಅಗಸನಕಟ್ಟೆ ಮುಂತಾದ ಹಲವರನ್ನು ಇಲ್ಲಿ ಹೆಸರಿಸಬಹುದಾಗಿದೆ.

ಪ್ರಶಸ್ತಿಗಳು

ಕನ್ನಡ ಸಾಹಿತ್ಯದ ಶಕ್ತಿಗೆ ಕನ್ನಡಿಯಾಗಿ ಕನ್ನಡ ಸಾಹಿತ್ಯಕ್ಕೆ ಇದುವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇದು ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು. ಆಗಸ್ಟ್ ೨೦೦೪ ರ ವರೆಗೆ ಒಟ್ಟು ೪೬ ಕನ್ನಡ ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಜನಸಂಪರ್ಕ

ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದು ಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ.

ಹಳೆ ಕನ್ನಡದ ಗದ್ಯ/ಕವಿಗಳು

  1. ಕವಿರಾಜಮಾರ್ಗ - ಶ್ರೀವಿಜಯ
  2. ಛಂದೊಂಬುಧಿ - ನಾಗವರ್ಮ-1
  3. ಕವಿಜೀಹ್ವಾಬಂಧನ - ಈಶ್ವರಕವಿ
  4. ಛಂದಸ್ಸಾರ - ಗುಣವರ್ಮ
  5. ನಂದಿಛಂದಸ್ಸು - ವೀರಭದ್ರ
  6. ವಡ್ಡಾರಾಧನೆ -ಶಿವಕೋಟ್ಯಾಚಾರ್ಯ

ನಾಗವರ್ಮ-೨

  1. ಉದಯಾದಿತ್ಯಾಲಂಕಾರ - ಉದಯಾದಿತ್ಯ
  2. ಶೃಂಗಾರ ರತ್ನಾಕರ - ಕಾಮದೇವ
  3. ಮಾಧವಾಲಂಕಾರ - ಮಾಧವ
  4. ರಸರತ್ನಾಕರ - ಸಾಳ್ವ
  5. ನರಪತಿಚರಿತೆ - ಲಿಂಗರಾಜ
  6. ಅಪ್ರತಿಮವೀರಚರಿತೆ - ತಿರುಮಲರಾಯ
  7. ಶಬ್ದಮಣಿದರ್ಪಣ - ಕೇಶಿರಾಜ
ಸಂಗ್ರಹ✍️ T.A.ಚಂದ್ರಶೇಖರ

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ಕರ್ತೃಗಳು

ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ ‘ಸ್ಪರ್ಧಾಲೋಕ’ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ.

> ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ : ಹರಿಷೇಣ


> ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ : ಅಲಹಾ ಬಾದ್ ಸ್ತಂಭ ಶಾಸನ


> ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ : ಕೌಸಂಬಿ


> ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ : ಫೀರೋಜ್ ಷಾ ತುಘಲಕ್


> ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ : ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ


> ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು: ಮಿರತ್ ಶಾಸನ ಹಾಗೂ ತೋಪ್ರ ಶಾಸನ


> ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ : ಕಂದಾಹಾರ್


> ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ : ರುದ್ರದಾಮನ್


> ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು : ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು


> ತೆಲುಗಿನ ಪ್ರಥಮ ಶಾಸನ : ಕಲಿಮಲ್ಲ ಶಾಸನ


> ತಮಿಳಿನ ಪ್ರಥಮ ಶಾಸನ : ಮಾಂಗುಳಂ ಶಾಸನ


> ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ : ಅಶೋಕ


> ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ : ಬ್ರಾಹ್ಮಿ ಹಾಗೂ ಖರೋಷಠಿ


> ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ : 13 ನೇ ಶಿಲಾ ಶಾಸನ


> ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು : 1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್


> ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ : ಮಸ್ಕಿ ಶಾಸನ


> ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ : ಕೊಪ್ಪಳ


> ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ : ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ


> ನಿಟ್ಟೂರಿನ ಶಾಸನದ ರಚನಾಕಾರ : ಉಪಗುಪ್ತ


> ನಿಟ್ಟೂರಿನ ಶಾಸನದ ಲಿಪಿಕಾರ : ಚಡಪ


> ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ : 1950 ರಲ್ಲಿ


> ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ : ದೇವನಾಗರಿ


> ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ : ಬಬ್ರುಶಾಸನ


> ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ : ಶಕರ ಪ್ರಸಿದ್ದ ಅರಸ ರುದ್ರಧಮನ


> ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ : ಸಂಜಾನ್ ದತ್ತಿ ಶಾಸನ


> ದಂತಿದುರ್ಗ: ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ


> ಒಂದನೇ ಕೃಷ್ಣ : ಭಾಂಡ್ಕ ಮತ್ತು ತಾಳೇಗಾಂ ಶಾಸನ
> ಧೃವ : ಜೆಟ್ಟಾಯಿ ಶಾಸನ


> ಅಮೋಘವರ್ಷ : ಸಂಜನ ತಾಮ್ರ ಶಾಸನ


> ಬಾದಾಮಿ ಶಾಸನದ ಕರ್ತೃ : 1 ನೇ ಪುಲಿಕೇಶಿ


> ಮಹಾಕೂಟ ಸ್ತಂಭ ಶಾಸನದ ಕರ್ತೃ : ಮಂಗಳೇಶ


> ಮಹಾಕೂಟ ಸ್ತಂಭ ಶಾಸನ : ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ


> ರವಿ ಕೀರ್ತೀ : ಐಹೋಳೆ ಶಾಸನ


> ಐಹೋಳೆ ಶಾಸನ : ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ


> ಚಂದ್ರವಳ್ಳಿ ಶಾಸನದ ಕರ್ತೃ : ಮಯೂರವರ್ಮ (ಚಿತ್ರದುರ್ಗ)


> ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ.


> ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ


> ಕನ್ನಡದ ಮೊಟ್ಟ ಮೊದಲ ಶಾಸನ : ಹಲ್ಮಿಡಿ ಶಾಸನ.


> ಹಲ್ಮಿಡಿ ಶಾಸನ ಇಲ್ಲಿ ಇರುವುದು : ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ


> ಹಲ್ಮಿಡಿ ಶಾಸನದ ಕರ್ತೃ : ಕಾಕುಸ್ಥವರ್ಮ .


> ತಾಳಗುಂದ ಶಾಸನದ ಕರ್ತೃ : ಕವಿ ಕುಬ್ಜ


> ತಾಳಗುಂದ ಶಾಸನವನ್ನು ಬರೆಯಿಸಿದವರು : ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)


> ಮಹಿಪವೊಲು ತಾಮ್ರ ಶಾಸನದ ಕರ್ತೃ : ಶಿವಸ್ಕಂದ ವರ್ಮ .


> ವಾಯಲೂರು ಸ್ತಂಭ ಶಾಸನದ ಕರ್ತೃ : ರಾಜ ಸಿಂಹ .
> ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ : 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”


> ನಾನಾ ಘಾಟ್ ಶಾಸನದ ಕರ್ತೃ : ನಾಗನೀಕ .


> ಗುಹಾಂತರ ನಾಸಿಕ್ ಶಾಸನದ ಕರ್ತೃ : ಗೌತಮೀ ಬಾಲಾಶ್ರೀ


> ವೆಳ್ವಕುಡಿ ತಾಮ್ರ ಶಾಸನದ ಕರ್ತೃ : ಪರಾಂತಕ ಚೋಳ.

__________________________________________

ಸಂಗ್ರಹ ✍️T.A. ಚಂದ್ರಶೇಖರ


ಕದಂಬರು

ಕದಂಬರು
https://drive.google.com/file/d/102um9ysUW7chaykg-UjCYwGrfeA4zUfZ/view?usp=drivesdk

English Grammar - homonyms

Homonyms generally include two categories of word types: homophones and homographs.

  • Homographs are words that are spelled the same but have different meanings.
  • Homophones are words that sound the same when you pronounce them, but have different meanings.

This list contains both homophones and homographs.

ade - drink type, as in lemonade

aid - to help or assist
aide - assistant

affect - change
effect - result or consequence

air - atmosphere (the stuff we breathe)
err - to make a mistake

aisle - walkway
I'll - I will
isle - island

allowed - permitted
aloud - out loud

ant - picnic pest
aunt - relative, as in your mom's sister

arc - curve
ark - Noah's boat

ate - chewed up and swallowed
eight - number after seven

bare - uncovered
bear - grizzly animal

berry - fruit from a bush
bury - to put underground

base - bottom part
bass - deep or low

be - to exist
bee - buzzing insect

beach - sandy shore
beech - type of tree

beat - to pound
beet - type of edible plant

berth - tie up
birth - to be born

bite - nibble
byte - 8 bits (computer data)

blew - past of blow
blue - color of ocean

boar - pig
bore - not interesting bore - to drill

borough - area or district
burrow - dig through
burro - small donkey

bough - branch
bow - bend or curtsy

buoy - floater
boy - young man

brake - stop pedal
break - smash

bread - bakery food
bred - form of breed

broach - mention
brooch - pin

brows - eyebrows
browse - look around

buy - purchase
by - beside
by - originating from,BR. bye - short for goodbye

cell - compartment
sell - vend

cent - penny coin
sent - did send

cereal - breakfast food
serial - sequential

Chile - country in South America
chili - bean stew
chilly - frosty

chord - musical tone
cord - rope

cite - quote
site - location
sight - view

close - opposite of open
clothes - clothing

complement - enhance; go together
compliment - praise

council - committee
counsel - guidance

creak - squeak
creek - stream of water

crews - gangs
cruise - ride on a boat

dear - darling
deer - woodland animal

dew - morning mist
do - operate
due - payable

die - cease to exist
dye - color

doe - female dear
dough - uncooked bread

dual - double
duel - battle

ewe - female sheep
you - second-person personal pronoun

eye - sight organ
I - me

fair - equal
fare - price

fairy - elflike creature with wings
ferry - boat

faze - impact
phase - stage

feat - achievement
feet - plural of foot

fir - type of tree
fur - animal hair

flea - small biting insect
flee - run

flew - did fly
flu - illness

flour - powdery, ground up grain
flower - blooming plant

for - on behalf of
fore - front
four - one more than three

forth - onward
fourth - number four

knew - did know
new - not old

gorilla - big ape
guerrilla - warrior

grease - fat
Greece - country in Europe

groan - moan
grown - form of grow

hair - head covering
hare - rabbit-like animal

hall - passageway
haul - tow

halve - cut in two parts
have - possess

hay - animal food
hey - interjection to get attention

heal - mend
heel - back of foot

hi - hello
high - up far

hoarse - croaky
horse - riding animal

hole - opening
whole - entire

holey - full of holes
holy - divine
wholly - entirely

hour - sixty minutes
our - belonging to us

knead - massage
need - desire

knight - feudal horseman
night - evening

knot - tied rope
not - negative

know - have knowledge
no - opposite of yes

lead - metal
led - was the leader

lessen - make smaller
lesson - class

loan - lend
lone - solitary

made - did make
maid - servant

mail - postage
male - opposite of female

marry - to wed
merry - very happy

meat - animal protein
meet - encounter

none - not any
nun - woman who takes special vows

oar - boat paddle
or - otherwise
ore - mineral

oh - expression of surprise or awe
owe - be obligated

one - single
won - did win

overdo - do too much
overdue - past due date

pail - bucket
pale - not bright

pain - hurt
pane - window glass

peace - calm
piece - segment

peak - highest point
peek - glance

plain - ordinary
plane - flight machine plane - flat surface

pole - post
poll - survey

poor - not rich
pour - make flow

pray - implore God
prey - quarry

principal - most important
principle - belief

rain - water from sky
rein - bridle

rap - tap
wrap - drape around

real - factual
reel - roll

right - correct; not left
write - scribble

ring - encircle
wring - squeeze

role - function
roll - rotate

rose - flower
rows - lines

sail - move by wind power
sale - bargain price

scene - landscape
seen - viewed

sea - ocean segment
see - observe with eyes

seam - joining edge
seem - appear

sew - connect with thread
so - as a result
sow - plant

soar - ascend
sore - hurt place

sole - single
soul - essence

some - a few
sum - amount

steal - swipe
steel - alloy

tail - animal's appendage
tale - story

their - belonging to them
there - at that place
they're - they are

to - toward
too - also

toe - foot appendage
tow - pull along

vary - differ
very - much

wail - howl
whale - huge swimming mammal

waist - area below ribs
waste - squander

wait - kill time
weight - measurable load

war - battle
wore - did wear

warn - caution
worn - used

way - path
weigh - measure mass

we - us
wee - tiny

weak - not strong
week - period of seven days

weather - climate
whether - if

which - that
witch - sorcerer

your - belonging to you
you're - you are

__________________________________________

✍️T.A. Chandrashekhar


ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು

ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು

*ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು*

ಯೋಜನೆಗಳು👉  ರಾಜ್ಯಗಳು👈
👇👇👇👇👇👇👇👇👇👇👇👇👇👇👇

ಕರ್ನಾಟಕ ರಾಜ್ಯದ ಜಲವಿದ್ಯುತ್ ಯೋಜನೆಗಳು
*೧}ಶಿವನಸಮುದ್ರ ಜಲವಿದ್ಯುತ್ ಯೋಜನೆ  -ಕರ್ನಾಟಕ*
*೨}ಶರಾವತಿ ಜಲವಿದ್ಯುತ್ ಯೋಜನೆ  -ಕರ್ನಾಟಕ*
*೩}ಕಾಳಿ ಜಲವಿದ್ಯುತ್ ಯೋಜನೆ  -ಕರ್ನಾಟಕ*
*೪}ಶಿಂಷಾ ಜಲವಿದ್ಯುತ್ ಯೋಜನೆ  -ಕರ್ನಾಟಕ*
*೫}ಮಹಾರಾಷ್ಟ್ರ ಜಲವಿದ್ಯುತ್ ಯೋಜನೆ  -ಕರ್ನಾಟಕ*
___________________

*ಮಹಾರಾಷ್ಟ್ರ ರಾಜ್ಯದ ಜಲವಿದ್ಯುತ್ ಯೋಜನೆಗಳು*

👇👇👇👇👇👇👇👇👇👇👇👇👇👇👇

೧}ಟಾಟಾ ಜಲವಿದ್ಯುತ್ ಯೋಜನೆ
೨}ಕೋಯ್ನಾ ಜಲವಿದ್ಯುತ್ ಯೋಜನೆ
೩}ಗಿರನಾ ಜಲವಿದ್ಯುತ್ ಯೋಜನೆ
೪}ಪುರ್ ನಾ ಜಲವಿದ್ಯುತ್ ಯೋಜನೆ
೫}ಕೋರಾಡಿ ಜಲವಿದ್ಯುತ್ ಯೋಜನೆ
___________________

*ತಮಿಳನಾಡು ಜಲವಿದ್ಯುತ್ ಯೋಜನೆಗಳು*

👇👇👇👇👇👇👇👇👇👇👇👇👇👇👇
೧}ಪೈಕಾರ್ ಜಲವಿದ್ಯುತ್ ಯೋಜನೆ
೨}ಮೆಟ್ಟೂರ ಜಲವಿದ್ಯುತ್ ಯೋಜನೆ
೪}ಪಾಪನಾಶಂ ಜಲವಿದ್ಯುತ್ ಯೋಜನೆ
ಸಬರಗಿರಿ ಜಲವಿದ್ಯುತ್ ಯೋಜನೆ
೬}ಕುಂದ್ಹಾ ಜಲವಿದ್ಯುತ್ ಯೋಜನೆ
__________________

*ಕೇರಳ ರಾಜ್ಯದ ಜಲವಿದ್ಯುತ್ ಯೋಜನೆಗಳು* 

👇👇👇👇👇👇👇👇👇👇👇👇👇👇👇


೧}ಸತ್ರಗಿರಿ ಜಲವಿದ್ಯುತ್ ಯೋಜನೆ
೨}ಇಡುಕ್ಕಿ ಜಲವಿದ್ಯುತ್ ಯೋಜನೆ
೩}ಪಂಬಾ ಜಲವಿದ್ಯುತ್ ಯೋಜನೆ
___________________

*ಉತ್ತರಾಂಚಲ ಜಲವಿದ್ಯುತ್ ಯೋಜನೆ*
೧}ಸರ್ದಾ ಜಲವಿದ್ಯುತ್ ಯೋಜನೆ
೨}ತಪೋವನ ಜಲವಿದ್ಯುತ್ ಯೋಜನೆ
೩}ವಿಷ್ಣುಘರ್ ಜಲವಿದ್ಯುತ್ ಯೋಜನೆ
೪}ತೆಹರಿ ಜಲವಿದ್ಯುತ್ ಯೋಜನೆ

ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು ಮತ್ತು ಸ್ಥಳಗಳು

ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು & ಸ್ಥಳಗಳು

👿 ಕಾರ್ಮಿಕರ ಸಂಸ್ಥೆ :- ಜಿನೇವಾ

👿 ಆರೋಗ್ಯ ಸಂಸ್ಥೆ :- ಜಿನೇವಾ

👿 ಹವಾಮಾನ ಸಂಸ್ಥೆ :- ಜಿನೇವಾ

👿 ವಿಶ್ವ ವ್ಯಾಪಾರ & ವಾಣಿಜ್ಯ ಸಂಸ್ಥೆ :- ಜಿನೇವಾ

👿 ದೂರ ಸಂಪರ್ಕ ಸಂಸ್ಥೆ :- ಪ್ಯಾರಿಸ್

👿 ಶಿಕ್ಷಣ ವೈಜ್ಞಾನಿಕ & ಸಾಂಸ್ಕೃತಿಕ ಸಂಸ್ಥೆ :- ಪ್ಯಾರಿಸ್

👿ಮಕ್ಕಳ ಸಂಸ್ಥೆ :- ನ್ಯೂಯಾರ್ಕ್

👿 ಅಣುಶಕ್ತಿ ಸಂಸ್ಥೆ :- ವಿಯೆನ್ನಾ

👿 ವಿಶ್ವ ಕೈಗಾರಿಕಾ ಸಂಸ್ಥೆ :- ವಿಯೆನ್ನಾ

👿 ಪರಿಸರ ಸಂಸ್ಥೆ :- ನೈರೋಬಿ

👿 ವಿಮಾನ ಯಾನ ಸಂಸ್ಥೆ :- ಮಾಂಡ್ರಿಯಾಲ್

👿 ಆಹಾರ ಕೃಷಿ ಸಂಸ್ಥೆ :- ರೋವರ್

👿 ವಿಶ್ವ ನ್ಯಾಯಾಲಯ :- ಹೇಗ್

👿 ವಿಶ್ವ ಬ್ಯಾಂಕ್ :- ವಾಷಿಂಗ್ಟನ್

👿 ವಿಶ್ವ ಹಣಕಾಸು ಸಂಸ್ಥೆ :- ವಾಷಿಂಗ್ಟನ್



ಅಂತರರಾಷ್ಟ್ರೀಯ ಸಂಘಟನೆಗಳು


ಸಾರ್ವಭೌಮ ರಾಷ್ಟ್ರಗಳು ಅಥವಾ ರಾಷ್ಟ್ರ ಸಂಘಟನೆಗಳು (ಯುರೋಪಿಯನ್ ಒಕ್ಕೂಟದ ಹಾಗೆ) ಸೇರಿ ಸರಕಾರೀ ಮಟ್ಟದಲ್ಲಿ ಒಪ್ಪಂದ ಮಾಡಿಕೊಂಡು ಸ್ಥಾಪಿಸುವ ಸಂಘಟನೆಗಳು ಅಂತಾರಾಷ್ಟ್ರೀಯ ಸಂಘಟನೆಗಳು ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು ಎಂದು ಕರೆಯಲ್ಪಡುತ್ತವೆ.


The headquarters of the International Committee of the Red CrossGeneva (Switzerland) is the city that hosts the highest number of international organizations in the world.

ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಬೆಳೆದಂತೆಲ್ಲ ಜಾಗತಿಕ ಸಮಸ್ಯೆಗಳನ್ನು ಸೌಹಾರ್ದದಿಂದ ಬಿಡಿಸಬಲ್ಲ ಜಾಗತಿಕ ಪ್ರಗತಿಯನ್ನು ಸಾಧಿಸಬಲ್ಲ ಅಂತಾರಾಷ್ಟ್ರೀಯ ಸಂಸ್ಥೆಗಳ ಅಗತ್ಯ ಹೆಚ್ಚಾಗುತ್ತದೆ. ಇಂಥ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕೆನ್ನುವ ಅಭಿಪ್ರಾಯ ಹೊಸದೇನಲ್ಲ. ಪ್ರಪಂಚ ಅನೇಕ ವರ್ಷಗಳಿಂದಲೂ ಇವುಗಳ ಸ್ಥಾಪನೆಗೆ ಪ್ರಯೋಗಗಳನ್ನು ಮಾಡುತ್ತಲೇ ಇದೆ. ಪ್ರಾಚೀನ ಗ್ರೀಕರು ಇಂಥ ಕೆಲವು ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಪುರಾತನ ರೋಮನ್ನರೂ ಇಂಥ ಸಂಸ್ಥೆಯ ಅಗತ್ಯವನ್ನು ಮನಗಂಡಿದ್ದರು. ಆಧುನಿಕ ಕಾಲದಲ್ಲಿ ಅನೇಕ ತತ್ತ್ವಜ್ಞಾನಿಗಳೂ ರಾಜನೀತಿನಿಪುಣರೂ ಈ ಬಗೆಯ ಸಂಸ್ಥೆಗಳ ಸ್ಥಾಪನೆಗೆ ಒತ್ತಾಯ ಮಾಡಿದ್ದಾರೆ. ಅವರಲ್ಲಿ ವಿಲಿಯಮ್ ಪೆನ್, ಗ್ರೋಷಿಅಸ್, ರೂಸೋ, ಬೆಂಥಾಮ್ ಮತ್ತು ಕ್ಯಾಂಟ್ ಮುಖ್ಯರು. ಈ ದೃಷ್ಟಿಯಿಂದ ನಿಜವಾದ ಅಂತಾರಾಷ್ಟ್ರೀಯ ಸಂಸ್ಥೆ 19ನೆಯ ಶತಮಾನದಲ್ಲೇ ಪ್ರಾರಂಭವಾಯಿತೆನ್ನಬಹುದು. ಆದರೆ, ಒಂದು ಗೊತ್ತಾದ ಆಕಾರ ಪಡೆದದ್ದು 20ನೆಯ ಶತಮಾನದಲ್ಲಿ.

ಆಧುನಿಕ ಸಂಸ್ಥೆಗಳ ಉಗಮ

ಆಧುನಿಕ ಅಂತಾರಾಷ್ಟ್ರೀಯ ಸಂಸ್ಥೆಯ ಮಾದರಿ 1948ರ ವೆಸ್್ಟಫೇಲಿಯ ಶಾಂತಿಕೌಲಿನಿಂದ ಉದ್ಭವಿಸಿತು. ಈ ಕೌಲು ಅಂತಾರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಯಲ್ಲಿ ಒಂದು ಬಹುಮುಖ್ಯವಾದ ಮೈಲಿಗಲ್ಲಾಗಿದೆ. ವಿಯೆನ್ನ ಕಾಂಗ್ರೆಸ್ (1814-15) ನೆಪೋಲಿಯನ್ನನ ಪತನದ ಅನಂತರ ಸೇರಿ, ಪ್ರಪಂಚದ ವ್ಯವಹಾರಗಳನ್ನು ಪರಿಶೀಲಿಸಿ, ಇಂಥ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಇವುಗಳ ಜೊತೆ 19 ಮತ್ತು 20ನೆಯ ಶತಮಾನದ ಸಂಧಿಕಾಲದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಯಿತು; ಅನೇಕ ಸಮ್ಮೇಳನಗಳನ್ನು ನಡೆಸಲಾಯಿತು. ಆದಾಗ್ಯೂ ಮೊದಲನೆಯ ಮಹಾಯುದ್ಧ ಮುಗಿಯುವವರೆಗೂ ಒಂದು ಸರಿಯಾದ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಏರ್ಪಡಿಸಲು ಸಾಧ್ಯವಾಗಲಿಲ್ಲ. ಮೊದಲನೆಯ ಮಹಾಯುದ್ಧವಾದ ಮೇಲೆ, ಶಾಂತಿ ಒಪ್ಪಂದದ ತೀರ್ಮಾನದಂತೆ ಅಂತಾರಾಷ್ಟ್ರೀಯ ಸಂಸ್ಥೆಯ ಇತಿಹಾಸದಲ್ಲಿ ಮೊದಲಯದಾಗಿ ರಾಷ್ಟ್ರಗಳ ಒಕ್ಕೂಟ (ಲೀಗ್ ಆಫ್ ನೇಷನ್ಸ್) ಪ್ರಾರಂಭಿಸಿದ ನಂತರ ಈಗಿನ ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ ಆರ್ಗನೈಸೇಷನ್) ಸ್ಥಾಪನೆಯಾಯಿತು. ವಿಶ್ವದ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯ ಕಲ್ಪನೆ ನಿಧಾನವಾಗಿ ವಿಕಾಸಗೊಂಡಿತೇ ವಿನಾ, ಆಕಸ್ಮಿಕವಾಗಿ ಅಲ್ಲ.

ಇಪ್ಪತ್ತನೆಯ ಶತಮಾನದಲ್ಲಿ ಎರಡು ಸಂಸ್ಥೆಗಳು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಬಹು ಮುಖ್ಯವಾದುವು. ಮೊದಲನೆಯದು ರಾಷ್ಟ್ರಗಳ ಒಕ್ಕೂಟ. ಎರಡನೆಯದು ವಿಶ್ವಸಂಸ್ಥೆ. ಮೊದಲನೆಯ ಸಂಸ್ಥೆ ಮೊದಲನೆಯ ಮಹಾಯುದ್ಧವಾದ ಅನಂತರ 1919ರಲ್ಲಿ ಶಾಂತಿಕೌಲಿನ ಪ್ರಕಾರ ಸ್ಥಾಪಿತವಾಯಿತು. ಆಗ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಲನ್ನರೇ ಇದರ ಸ್ಥಾಪನೆಗೆ ಮುಖ್ಯ ಕಾರಣರು. ಇದರಲ್ಲಿ ಒಟ್ಟು 63 ಸದಸ್ಯ ರಾಷ್ಟ್ರಗಳಿದ್ದುವು. ಆದರೆ ನಾನಾ ಕಾರಣಗಳಿಂದ ಇದು ತನ್ನ ಧ್ಯೇಯಗಳನ್ನು ಪಾಲಿಸಲಾಗಲಿಲ್ಲ. ಜೊತೆಗೆ ಎರಡನೆಯ ಮಹಾಯುದ್ಧ 1939ರಲ್ಲಿ ಪ್ರಾರಂಭವಾಯಿತು. ಆಗ ಈ ಒಕ್ಕೂಟ ಕೊನೆಗೊಂಡಿತು. ಅದಾದ ಅನಂತರ ಎರಡನೆಯ ಮಹಾಯುದ್ಧ ನಡೆಯುತ್ತಿರುವಾಗ ಈಗಿನ ವಿಶ್ವಸಂಸ್ಥೆ 1945ರಲ್ಲಿ ಸ್ಥಾಪಿಸಲ್ಪಟ್ಟು ಈಗ ಒಟ್ಟು 193 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯತ್ವ ಪಡೆದಿವೆ.

ಉದ್ದೇಶಗಳು

ಪ್ರಪಂಚದಲ್ಲಿ ಶಾಂತಿ ಮತ್ತು ರಕ್ಷಣೆ ಏರ್ಪಡಿಸಲು, ಅನಂತರ ರಾಷ್ಟ್ರೀಯ ವ್ಯವಹಾರಗಳಲ್ಲಿರುವ ಲೋಪದೋಷಗಳನ್ನು ನಿವಾರಿಸಲು, ರಾಷ್ಟ್ರಗಳು ಪರಸ್ಪರ ಸಹಕಾರ ಮತ್ತು ಸ್ನೇಹದಿಂದಿರಲು, ರಾಷ್ಟ್ರಗಳನ್ನು ಯುದ್ಧ ಮತ್ತು ಯುದ್ಧಭಯದಿಂದ ತಪ್ಪಿಸಲು, ಪ್ರಪಂಚದ ರಾಷ್ಟ್ರಗಳನ್ನು ಒಟ್ಟುಗೂಡಿಸಲು, ಯಾವುದೇ ಸಮಸ್ಯೆಗಳು ಬರಲಿ ಅವುಗಳನ್ನು ಶಾಂತಿ ಮಾರ್ಗದಿಂದಲೇ ತೀರ್ಮಾನಿಸಲು ಜನರ ಜೀವನದ ಮಟ್ಟವನ್ನು ಹೆಚ್ಚಿಸಲು ಮತ್ತು ಪ್ರಪಂಚದ ಎಲ್ಲ ರಾಷ್ಟ್ರಗಳೂ ಪ್ರಜಾಪ್ರಭುತ್ವಗಳನ್ನು ಸ್ಥಾಪಿಸಿ, ನಡೆಸಿಕೊಂಡು ಹೋಗಲು ಇಂಥ ಸಂಸ್ಥೆಗಳು ಅಗತ್ಯ. ಈ ಮೇಲ್ಕಂಡ ಆದರ್ಶಗಳು ಪ್ರಪಂಚದ ಏಳಿಗೆಗೆ ಅತ್ಯಾವಶ್ಯಕವಾಗಿರುವುದರಿಂದ, ಅಂತಾರಾಷ್ಟ್ರೀಯ ಸಂಸ್ಥೆಗಳು ವಿಶ್ವದ ಕಲ್ಯಾಣಕ್ಕಾಗಿ ಶ್ರಮಿಸುವ ಬಹು ಮುಖ್ಯವಾದ ಅಂಗಗಳಾಗಿವೆ.

ಪ್ರಮುಖ ಅಂತರರಾಷ್ಟ್ರೀಯ ಸಂಘಟನೆಗಳು

ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ಮುಖ್ಯ ಸಂಸ್ಥೆಗಳ ಸೂಕ್ಷ್ಮಪರಿಚಯವನ್ನಿಲ್ಲಿ ಕೊಡಲಾಗಿದೆ.

ಜಾಗತಿಕ ಸಂಘಟನೆಗಳು

  • ಸಂಯುಕ್ತ ರಾಷ್ಟ್ರ ಸಂಸ್ಥೆ, ಮತ್ತು ಅದರ ವಿಭಾಗೀಯ ಸಂಸ್ಥೆಗಳು.
  • ಇಂಟರ್‍ಪೋಲ್
  • International Hydrographic Organization
  • ವಿಶ್ವ ವ್ಯಾಪಾರ ಸಂಸ್ಥೆ
  • Universal Postal Union
  • ಅಂತಾರಾಷ್ಟ್ರೀಯ ಗ್ರಂಥಾಲಯ ಸಂಘಗಳ ಸಂಯುಕ್ತ ಸಂಘ (ಇಂಟನಾರ್ಯಷನಲ್ ಫೆ಼ಡರೇಷನ್ ಆ¥sóï ಲೈಬ್ರರಿ ಅಸೋಸಿಯೇಷನ್ಸ) : ಸ್ಥಾಪನೆ 1962ರಲ್ಲಿ. ಆಡಳಿತ ಕಚೇರಿ ಇಂಗ್ಲೆಂಡಿನಲ್ಲಿದೆ. ಗ್ರಂಥಾಲಯ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸುವುದು, ಅದರಲ್ಲೂ ಮುಖ್ಯವಾಗಿ ಗ್ರಂಥಾಲಯಗಳ, ಗ್ರಂಥಾಲಯ ಸಂಘಗಳ ಹಾಗೂ ಗ್ರಂಥಸೂಚಿಕಾರರ ನಡುವೆ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕವನ್ನೇರ್ಪಡಿಸುವುದು ಇದರ ಮುಖ್ಯ ಉದ್ದೇಶ. ಅಂತಾರಾಷ್ಟ್ರೀಯ ಮೈತ್ರಿ ಒಕ್ಕೂಟ (ಇಂಟನಾರ್ಯಷನಲ್ ಫೆ಼್ರಂಡ್ಷಿಪ್ ಲೀಗ್) : ಸ್ವಯಂಪ್ರೇರಿತ ಹಾಗೂ ರಾಜಕೀಯದಿಂದ ದೂರವಿರುವ ಈ ಒಕ್ಕೂಟದ ಉದ್ದೇಶ ಪ್ರಪಂಚದ ಜನರ ಪ್ರವಾಸಾಭಿಲಾಷೆ ಮೈತ್ರಿಮನೋಭಾವಗಳನ್ನು ಬೆಳೆಸುವುದೇ ಆಗಿದೆ.
  • ಅಂತಾರಾಷ್ಟ್ರೀಯ ಆರೋಗ್ಯ ಶಿಕ್ಷಣದ ಬ್ರಿಟಿಷ್ ಸಂಘ (ಬ್ರಿಟಿಷ್ ಸೊಸೈಟಿ ಫಾ಼ರ್ ಇಂಟನಾರ್ಯಷನಲ್ ಹೆಲ್ತ ಎಜ್ಯುಕೇಷನ್) : ಶೈಕ್ಷಣಿಕ ವಿಧಾನಗಳಿಂದ ಜನಾರೋಗ್ಯವನ್ನು ಉತ್ತಮಗೊಳಿಸಲು ತಾಂತ್ರಿಕ ನೆರವನ್ನು ನೀಡುತ್ತಿರುವ ಈ ಸಂಘಕ್ಕೆ ಆರೋಗ್ಯ ಶಿಕ್ಷಣ ಹಾಗೂ ಕೈಗಾರಿಕಾಕ್ಷೇತ್ರದ ಪ್ರಮುಖ ಪರಿಣತರು ಸದಸ್ಯರಾಗಿದ್ದಾರೆ. ವಿಶ್ವಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು ಈ ಸಂಸ್ಥೆ ಗಣನೀಯ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಕೇಂದ್ರ ಕಚೇರಿ ಲಂಡನ್ನಿನಲ್ಲಿದೆ.
  • ಅಂತಾರಾಷ್ಟ್ರೀಯ ಬೌದ್ಧಿಕ ಸಹಕಾರ ಸಂಸ್ಥೆ (ಇಂಟನಾರ್ಯಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಟಲೆಕ್ಚುಯಲ್ ಕೋಆಪರೇಷನ್) : 1922ರಲ್ಲಿ ರಾಷ್ಟ್ರಗಳ ಒಕ್ಕೂಟದ ಅಂಗವಾಗಿ ರೂಪುಗೊಂಡ ಈ ಸಂಘದ ಉದ್ದೇಶ ಸಾಹಿತ್ಯ ವಿಜ್ಞಾನ ಹಾಗೂ ಕಲೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಂತರರಾಷ್ಟ್ರೀಯ ಸಹಕಾರ ದೃಷ್ಟಿಯಿಂದ ಪರಿಶೀಲಿಸುವುದೇ ಆಗಿದೆ. ಈಗ ಈ ಸಂಸ್ಥೆಯ ಕೆಲಸವನ್ನು ಯುನೆಸ್ಕೊ ವಹಿಸಿಕೊಂಡಿದೆ.
  • ಅಂತಾರಾಷ್ಟ್ರೀಯ ಭಾಷೆ : ಅಂತಾರಾಷ್ಟ್ರೀಯ ವ್ಯವಹಾರ ಮಾಧ್ಯಮವಾಗಿ ವಿಶ್ವಭಾಷೆಯೊಂದನ್ನು ರೂಪಿಸುವ ಕೆಲಸ ನಡೆದಿದೆ.
  • ಅಂತಾರಾಷ್ಟ್ರೀಯ ನ್ಯಾಯ : ಅಂತಾರಾಷ್ಟ್ರೀಯ ವ್ಯವಹಾರಗಳು ಯಾವ ರೀತಿಯಲ್ಲೂ ತೊಡಕಿಲ್ಲದೆ ಸಾಗಲು, ಒದಗಬಹುದಾದ ಸಮಸ್ಯೆಗಳನ್ನು ಒಡಂಬಡಿಕೆಯ ಮೂಲಕ ಪರಿಹಾರ ಮಾಡಿಕೊಳ್ಳಲು, ಕಾಯಿದೆಗಳಿಗೆ ಮಾನ್ಯತೆ ಕೊಟ್ಟು ಪರಸ್ಪರ ಕೀರ್ತಿಗೌರವಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ತಯಾರಾದ ನ್ಯಾಯಸೂತ್ರಗಳಿವು. 1945ರಲ್ಲಿ ವಿಶ್ವಸಂಸ್ಥೆ ಈ ಬಗ್ಗೆ ಒಂದು ನ್ಯಾಯ ಪ್ರಣಾಳಿಕೆಯನ್ನು ಹೊರತಂದಿದೆ. ನ್ಯಾಯಪರಿಪಾಲನೆ, ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಷಯಗಳು ಇಲ್ಲಿ ಅಡಕವಾಗಿವೆ.
  • ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಇಂಟನಾರ್ಯಷನಲ್ ಪ್ರೆಸ್ ಇನ್ಸ್ಟಿಟ್ಯೂಟ್) : ಪತ್ರಿಕಾ ಸ್ವಾತಂತ್ರ್ಯ, ಸಂಬಂಧಗಳಿಗೆ ಸಂಬಂಧಪಟ್ಟ ಸಂಸ್ಥೆ (ನೋಡಿ-ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ).

ಇತರೆ

Regional organizations


Organizations grouping almost all the countries in their respective continents. ರಷ್ಯಾ is member of both the Council of Europe and the ACD.

Several smaller regional organizations with non-overlapping memberships.

Several non-overlapping large alliances. Softer colors indicate observer/associate or candidate countries.

ಯುರೋಪ್:

ಏಷ್ಯಾ:

  • Asian Cooperation Dialogue (ACD)
  • ಆಸಿಯಾನ್ (ASEAN)
  • ಸಾರ್ಕ (SAARC)
  • Gulf Cooperation Council
  • Colombo Plan

ಯುರೇಷ್ಯಾ:

  • Commonwealth of Independent States (CIS)
  • Shanghai Cooperation Organization (SCO)
  • Eurasian Economic Community
  • Central Asian Cooperation Organization
  • GUAM
  • Organization of the Black Sea Economic Cooperation (BSEC)

ಆಫ್ರಿಕ:

  • ಆಫ್ರಿಕನ್ ಒಕ್ಕೂಟ
  • Conseil de l'Entente
  • Economic Community of West African States (ECOWAS)
  • Southern African Development Community (SADC)
  • Intergovernmental Authority on Development (IGAD)
  • Arab Maghreb Union

Western Hemisphere:

  • Organization of American States (OAS)
  • South American Community of Nations
  • Mercosur
  • Andean Community
  • Caribbean Community (CARICOM)
  • Organisation of Eastern Caribbean States (OECS)
  • Central American Parliament
  • Rio Group
  • NAFTA
  • Cooperation System of the American Air Forces(SICOFAA)

Trans-atlantic:

  • ನೇಟೊ (NATO)
  • Organization for Security and Co-operation in Europe (OSCE)

ಆರ್ಕ್ಟಿಕ್ ಮಹಾಸಮುದ್ರ:

  • Arctic Council

ಹಿಂದೂ ಮಹಾಸಾಗರ:

  • Indian Ocean Rim Association for Regional Cooperation (IOR-ARC)
  • Indian Ocean Commission (IOC)

ಪೆಸಿಫಿಕ್ ಮಹಾಸಾಗರ:

  • Asia-Pacific Economic Cooperation (APEC)
  • Pacific Islands Forum
  • Pacific Regional Environment Programme (SPREP)
  • Secretariat of the Pacific Community


ಸಂಗ್ರಹ✍️T.A. ಚಂದ್ರಶೇಖರ

ಭಾರತದ ಮಹಾನ್ ವಿಜ್ಞಾನಿಗಳು

ಭಾರತದ ಮಹಾನ್ ವಿಜ್ಞಾನಿಗಳು


ಆರ್ಯಭಟ ಕ್ರಿ.ಶ. ೪೭೬ ರಲ್ಲಿ ಅಷ್ಮಕದಲ್ಲಿ ಜನಿಸಿದ್ದು. ನಂತರ ಜೀವಿಸಿದ್ದು ಕುಸುಮಪುರದಲ್ಲಿ. ಈ ಕುಸುಮಪುರ ಇ೦ದಿನ ಪಾಟ್ನಾ (ಪಾಟಲಿಪುತ್ರ).
 ಆರ್ಯಭಟ ತನ್ನ ಮುಖ್ಯ ಕೃತಿಯಾದ "ಆರ್ಯಭಟೀಯ"ದಲ್ಲಿ ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುವ ಬಗೆಯ ಬಗ್ಗೆ ಗಣಿತದ ಮತ್ತು ಖಗೋಳಶಾಸ್ತ್ರದ ಬಗ್ಗೆ ತನ್ನ ಸಿದ್ಧಾ೦ತಗಳನ್ನು ಮ೦ಡಿಸಿದ. ಹಾಗೆಯೇ ಎಲ್ಲ ಗ್ರಹಗಳೂ ಸೂರ್ಯನ ಸುತ್ತಲೂ ಸುತ್ತುವ ಕಕ್ಷೆಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದ. ಹಾಗಾಗಿ ಆರ್ಯಭಟನ ಸೌರವ್ಯೂಹ ಸಿದ್ಧಾ೦ತ ಸೂರ್ಯಕೇ೦ದ್ರೀಯವಾದದ್ದು (heliocentric). 


1. ಖಗೋಳಶಾಸ್ತ್ರದ ಸ್ಥಿರ ಸ೦ಖ್ಯೆಗಳು (astronomical constants) ಮತ್ತು ತ್ರಿಕೋನಮಿತಿಯ ಬಗ್ಗೆ ಆರ್ಯಭಟನ ಫಲಿತಾ೦ಶಗಳು
2. ಖಗೋಳಶಾಸ್ತ್ರದ ಲೆಕ್ಕಾಚಾರಕ್ಕೆ ಅಗತ್ಯವಾದ ಗಣಿತ
3. ಕಾಲದ ವಿ೦ಗಡಣೆ ಮತ್ತು ಗ್ರಹಗಳ ರೇಖಾ೦ಶಗಳನ್ನು ಲೆಕ್ಕ ಹಾಕಲು ಬೇಕಾದ ಸಿದ್ಧಾ೦ತಗಳು
4. ತ್ರಿಕೋನಮಿತಿ ಮತ್ತು ಗ್ರಹಣಗಳನ್ನು ಲೆಕ್ಕ ಹಾಕಲು ಬೇಕಾದ ಫಲಿತಾ೦ಶಗಳು.


ಈ ಕೃತಿಯಲ್ಲಿ ಆರ್ಯಭಟ ಒಂದು ದಿನವನ್ನು ಸೂರ್ಯೋದಯದಿ೦ದ ಆರ೦ಭವಾಗುವುದೆ೦ದು ಲೆಕ್ಕಕ್ಕೆ ತೆಗೆದುಕೊ೦ಡರೆ, ತನ್ನ ಇನ್ನೊ೦ದು ಕೃತಿಯಾದ "ಆರ್ಯಭಟ-ಸಿದ್ಧಾ೦ತ"ದಲ್ಲಿ ದಿನದ ಆರ೦ಭವನ್ನು ಮಧ್ಯರಾತ್ರಿಯಾಗಿ ಪರಿಗಣಿಸಿದ್ದಾನೆ. ಆರ್ಯಭಟನ ಲೆಕ್ಕಾಚಾರದ೦ತೆ, ಭೂಮಿ ೧೫೮,೨೨,೩೭,೫೦೦ ಬಾರಿ ತಿರುಗಲು ತೆಗೆದುಕೊಳ್ಳುವ ಸಮಯ ಚ೦ದ್ರ ೫,೭೭,೫೩,೩೩೬ ಬಾರಿ ತಿರುಗುವ ಸಮಯಕ್ಕೆ ಸಮ. ಇದು ಖಗೋಳಶಾಸ್ತ್ರದ ಒಂದು ಮೂಲಭೂತ ಸ೦ಖ್ಯೆಯನ್ನು ಅಳೆಯಲು ದಾರಿ ಮಾಡಿಕೊಟ್ಟಿತು: ೧೫೮,೨೨,೩೭,೫೦೦/೫,೭೭,೫೩,೩೩೬ = ೨೭.೩೯೬೪೬೯೩೫೭೨. ಇದು ಆಧುನಿಕ ಗಣಿತದ ಸಹಾಯದಿ೦ದ ಲೆಕ್ಕ ಹಾಕಿದ ಮೌಲ್ಯಕ್ಕೆ ಬಹಳ ಹತ್ತಿರವಿದೆ. ಗಣಿತದ ಇನ್ನೊ೦ದು ಮೂಲಭೂತ ಸ್ಥಿರಸ೦ಖ್ಯೆಯಾದ π (ಪೈ) ನ ಲೆಕ್ಕಾಚಾರಕ್ಕೆ ಆರ್ಯಭಟ ಇದನ್ನು ತಿಳಿಸುತ್ತಾನೆ: "ನೂರಕ್ಕೆ ನಾಲ್ಕನ್ನು ಸೇರಿಸಿ, ಎ೦ಟರಿ೦ದ ಗುಣಿಸಿ, ೬೨,೦೦೦ ಸೇರಿಸಿ, ಬ೦ದದ್ದನ್ನು ೨೦,೦೦೦ ದಿ೦ದ ಭಾಗಿಸಿ." ಇದರಿ೦ದ ಗಣಿಸಬಹುದಾದ π ನ ಮೌಲ್ಯ ೬೨೮೩೨/೨೦,೦೦೦ = ೩.೧೪೧೬. ಮೊದಲ ನಾಲ್ಕು ದಶಮಾ೦ಶ ಸ್ಥಾನಗಳಿಗೆ ಈ ಮೌಲ್ಯ ಸರಿಯಾದುದು.

ಭಾಸ್ಕರಾಚಾರ್ಯ ಅಥವಾ ಎರಡನೆಯ ಭಾಸ್ಕರ (೧೧೧೪ - ೧೧೮೫), ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ.


ಕರ್ನಾಟಕ ರಾಜ್ಯದ ವಿಜಯಪುರ ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ
ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. 

ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲ್ ಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ.


ಲೀಲಾವತಿ ಗಣಿತ (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ).
ಬೀಜಗಣಿತ
ಸಿದ್ಧಾಂತಶಿರೋಮಣಿ: ಇದರಲ್ಲಿ ಎರಡು ಭಾಗಗಳಿವೆ:
ಗೋಳಾಧ್ಯಾಯ
ಗ್ರಹಗಣಿತ.

ಸರ್.ಸಿ.ವಿ.ರಾಮನ್',ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ,'ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ.ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.


ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು.
ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, 'ಪಾರ್ವತಿ ಅಮ್ಮಾಳ್'.

ತಮ್ಮ ೧೨ ನೆ ವಯಸ್ಸಿನಲ್ಲೇ 'ಮೆಟ್ರಿಕ್ಯುಲೆಶನ್' ಮುಗಿಸಿದರು.
'ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ಬಿ.ಎಸ್ಸಿ(೧೯೦೪) ಪದವಿ,
ಎಂ.ಎಸ್ಸಿ (೧೯೦೭) ಪದವಿಗಳನ್ನು ಗಳಿಸಿದರು.
೧೯೦೭ರಲ್ಲಿ 'ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾಗಿ 'ಕಲ್ಕತ್ತೆ'ಯಲ್ಲಿ 'ಡೆಪ್ಯುಟಿ ಅಕೌಂಟೆಂಟ್ ಜನರಲ್' ಆಗಿ ವೃತ್ತಿ-ಜೀವನ ಆರಂಭಿಸಿದರು, 
ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.

೧೯೧೭ರಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯ'ರಾದರು.

೧೯೨೪ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು.


ರಾಮನ್ ಎಫೆಕ್ಟ್ : 


ಮಾರ್ಚ್ ೧೬ ೧೯೨೮ರಲ್ಲಿ ತಮ್ಮ ಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, ೧೯೩೦ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ'ಗಳಿಸಿದರು.

 “ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು'. ಅದು ಹೇಗೆ ಸಾಧ್ಯ  ? ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ. 

ಒಬ್ಬ ಭಾರತೀಯ ಖಭೌತಿಕ ವಿಜ್ಞಾನಿಯಾಗಿದ್ದು, ಆತ ಸಹಾ ಸಮೀಕರಣವನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಸಮೀಕರಣವನ್ನು ನಕ್ಷತ್ರಗಳಲ್ಲಿ ರಾಸಾಯನಿಕ ಮತ್ತು ಭೌತಿಕ ಸ್ಥಿತಿಗಳನ್ನು ವಿವರಿಸಲು ಬಳಸಲಾಗುತ್ತದೆ.
ಆರಂಭಿಕ ಜೀವನ
ಅಕ್ಟೋಬರ್ ೬,೧೮೯೩ರಲ್ಲಿ ಬಂಗಾಲದ ಢಾಕಾಜಿಲ್ಲೆಯ ಶಿಯೋರಟೋಲಿ ಎಂಬ ಹಳ್ಳಿಯಲ್ಲಿ ಜನಿಸಿದರು.ಬಡ ಕುಟುಂಬದಲ್ಲಿ ಜನಿಸಿದ, ಅಸಾಧಾರಣ ಬುದ್ಧಿವಂತರಾದ ಅವರಿಗೆ ಮಾಧ್ಯಮಿಕ ಶಾಲೆಯಲ್ಲೇ ವಿದ್ಯಾರ್ಥಿ ವೇತನವೂ ದೊರೆತು,೧೯೦೯ರಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ,ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಅಧ್ಯಾಪಕರಾದರು.

ಮೇಘನಾದ ಸಾಹ ಬೆಳಕಿನ ಒತ್ತಡವನ್ನು ಅಳೆಯುವ ಸೂಕ್ಷ್ಮ ಉಪಕರಣವನ್ನು ಸೃಷ್ಟಿಸಿದರು.

ವಿಜ್ಞಾನಿ ಐನ್ ಸ್ಟೀನ್ ರವರ 'ಬೆಳಕಿಗೂ ಭಾರವಿದೆ'ಎಂಬ ವಿಷಯವನ್ನು ಪ್ರಯೋಗಗಳಿಂದ ದೃಢೀಕರಿಸಿದರು.

ನಕ್ಷತ್ರಗಳಲ್ಲಿರುವ ವಸ್ತುವನ್ನು ಪತ್ತೆ ಹಚ್ಚಲು 'ಸೂರ್ಯನ ಶಾಖಕ್ಕೆ ಪರಮಾಣುಗಳು ಒಡೆಯುತ್ತವೆ'ಎಂಬ ತತ್ವವನ್ನು ತಮ್ಮ ೨೭ನೇ ವಯಸ್ಸಿನಲ್ಲೇ ಪ್ರಯೋಗ ಮಾಡಿ ತೋರಿಸಿದರು.

ತಮ್ಮ ಸಾಧನೆಗಳಿಂದಾಗಿ ಯೂರೋಪು,ಜರ್ಮನಿಗೆ ಹೋಗಿ ಬಂದರು.

ಅಲಹಾಬಾದಿನಲ್ಲಿ ರೇಡಿಯೋ ತರಂಗಗಳ ಬಗ್ಗೆ ಅಧ್ಯಯನ ನಡೆಸಿದರು.

ನ್ಯೂಕ್ಲಿಯರ್ ಭೌತವಿಜ್ಞಾನ ಹಾಗೂ ಜೀವ ಭೌತವಿಜ್ಞಾನದಲ್ಲಿ ಸಂಶೋಧನೆ ನಡೆಸಲು ೧೯೫೦ರಲ್ಲಿ ಕಲ್ಕತ್ತಾದಲ್ಲಿ 'ಸಾಹ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್'ಎಂಬ ಸಂಸ್ಥೆ ಸ್ಥಾಪನೆಯಾಯಿತು.

ವೈಜ್ಞಾನಿಕ ವಿಷಯಗಳ ತಿಳಿವಳಿಕೆಗಾಗಿ 'ಸೈನ್ಸ್ ಅಂಡ್ ಕಲ್ಚರ್'ಎಂಬ ಪತ್ರಿಕೆಯನ್ನು ನಡೆಸಿದರು.

ಮೇಘನಾದ ಸಾಹ ಅವರಿಗೆ ವಿಜ್ಞಾನವಲ್ಲದೆ ಹಿಂದೂಧರ್ಮ,ಇತಿಹಾಸ,ಸಂಸ್ಕೃತಿಗಳಲ್ಲಿ ಅಪಾರವಾದ ಆಸಕ್ತಿ ಇತ್ತು.

೧೯೫೧ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

೧೯೫೬ರ ಫೆಬ್ರುವರಿ ೬ರಂದು ದೆಹಲಿಯ ಸಂಸತ್ ಭವನಕ್ಕೆ ನಡೆದು ಬರುತ್ತಿದ್ದಾಗಲೇ ಕುಸಿದು ಬಿದ್ದು ತೀರಿಕೊಂಡರು.

ಉಜ್ಜಯಿನಿಯಲ್ಲಿ ಜನಿಸಿದ ಇವನು ಒಬ್ಬ ಭಾರತೀಯ ಖಗೋಳ ಶಾಸ್ತ್ರಜ್ಞ,ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ.ವರಾಹಮಿಹಿರನು ಅವಂತಿ ದೇಶದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದನು.ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆದನು.ಯಶೋವರ್ಮನ ಆಸ್ಥಾನದ ನವರತ್ನಗಳಲೊಬ್ಬ.

'ಪಂಚ ಸಿದ್ಧಾಂತಿಕ'-ಇದು ವರಾಹಮಿಹಿರ ರಚಿಸಿದ ಮುಖ‍್ಯ ಸಿದ್ಧಾಂತಗಳಲ್ಲೊಂದು.ಇದು ಸೂರ್ಯಸಿದ್ಧಾಂತ,ರೋಮಕಸಿದ್ಧಾಂತ,ಪೌಲಿಸಸಿದ‍್ಧಾಂತ,ವಸಿಷ್ಠಸಿದ್ಧಾಂತ,ಪೈತಾಮಹಸಿದ್ಧಾಂತ ಹಾಗೂ ಖಗೋಳ ಶಾಸ್ತ್ರದ ಎಲವು ತುಣುಕುಗಳನ್ನು ಹೊಂದಿದೆ. 

ಸುಮಾರು ೧೫೦೦ ವರ್ಷಕ್ಕೂ ಮುನ್ನವೇ ಮಂಗಳ ಗ್ರಹದಲ್ಲಿ ನೀರು, ಕಬ್ಬಿಣ ಇದೆ ಎಂದು ಹೇಳಿದ್ದ. ಆಕಾಶ, ಸೂರ್ಯ,ಚಂದ್ರ,ನಕ್ಷತ್ರಗಳೆಲ್ಲ ದೇವರುಗಳೆಂದು ಪೂಜಿಸುತ್ತಿದ್ದ ಕಾಲದಲ್ಲಿ ಅವರಲ್ಲಾ ಸೃಷ್ಟಿಯ ಕೊಡುಗೆ ಎಂದು ಸಾರಿ ಹೇಳಿದ. 

ಯಾವುದೇ ಉಪಕರಣಗಳಿಲ್ಲದ ಆ ಕಾಲದಲ್ಲಿ ಸೂರ್ಯ, ಚಂದ್ರ,ಭೂಮಿ, ಗ್ರಹಗಳ ಗತಿಯನ್ನು ಕರಾರುವಾಕ್ಕಾಗಿ ಹೇಳಿದ. ೫೧೨ನೇ ಇಸವಿಯಲ್ಲಿ ಅಂದರೆ ತನ್ನ ೧೩ನೇ ವಯಸ್ಸಿನಲ್ಲಿ 'ಸೂರ್ಯಸಿದ್ಧಾಂತ' ಬರೆದ. ಇದರಲ್ಲಿ ನಕ್ಷತ್ರ ಮಂಡಲ, ಊರ್ಯ ಗ್ರಹಣ ಮತ್ತು ಗ್ರಹಗಳ ಸ್ಥಾನಗಳ ಕುರಿತು ವಿವರಿಸಿದ. ಗಣಿತದ ತ್ರಿಕೋಣಮಿತಿ ನಿಯಮ ಹಾಗು 'ಜ್ಯಾ' ಮಾನದ ಸರಣಿಯನ್ನೂ ಆರಂಭಿಸಿದ. ಇದಲ್ಲದೇ ಈತ ಷಟ್ ಪಂಚಾಂಗ, ಹೋರಾ-ಪಂಚ-ಹೋತ್ರೀಯ ಯೊಗಯಾತ್ರಾ, ಟಿಕನಿಯಾತ್ರಾ, ಬೃಹಜ್ಜಾತಕ, ವಾಹ ಪಟಲ ಮೊದಲಾದ ಕೃತಿಗಳನ್ನು ರಚಿಸಿದ. ಇವನ ಕಾಲದಲ್ಲಿ ಉಜ್ಜಯಿನ ವಿಶ್ವವಿದ್ಯಾಲಯದಲ್ಲಿ ಗಣಿತ ಸಂಶೋಧನೆಗಳು ಆರಂಭವಾಗಿದ್ದಉ. ಇವನ ನಂತರ ಬಂದ ಆರ್ಯಭಟ ಇದನ್ನು ಮುಂದುವರಿಸಿ ಆಧುನಿಕ ಗಣಿತದ ರೂವಾರಿಯಾದ. ಇವನು ಮೊತ್ತ ಮೊದಲ ಜಲವಿಜ್ಞಾನಿಯೂ ಹೌದು. ಮಳೆ, ಅಂತರ್ಜಲದ ಮಟ್ಟ, ಈರಿನ ಒಳಹರಿಉ, ಭೂಜಲವನ್ನು ಗುರುತಿಸುಉದು, ಮಣ್ಣಿನ ಗುಣಮಟ್ಟದಿಂದ ನೀರಿನ ಪ್ರಮಾಣ ಅಳೆಯುಉದು, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ನೀರು ಹರಿಯುತ್ತದೆ, ಪ್ರವಾಹ ತಡೆ, ಬರಪರಿಹಾರಕ್ಕೆ ಮಾರ್ಗೋಪಾಯಳ ಬಗ್ಗೆ ಕೂಡ ಹೇಳಿದ್ದಾನೆ.

ಬೃಹತ್ ಸಂಹಿತ-ಇದೂ ವರಾಹಮಿಹಿರನ ಕೊಡುಗೆಗಳಲ್ಲೊಂದು.ಇದು ಜ್ಯೊತಿಷ್ಯ,ಗ್ರಹಗಳ ಚಲನೆ,ಗ್ರಹಣ,ಮೋಡ,ಮಳೆ,ಶಿಲ್ಪಕಲೆ,ಬೆಳೆಗಳ ಬೆಳವಣಿಗೆ,ಸುಗನಧ ದ್ರವ್ಯಗಳ ತಯಾರಿಕೆ,ಮದುವೆ,ಮುತ್ತು,ರತ್ನ ಹಾಗೂ ಸಂಪ್ರದಾಯದ ವಿಷಯಗಳನ್ನೊಳಗೊಂದಿದೆ.ಬೃಹತ್ ಜಟಕ,ಲಘುಜತಕ,ಸಮಾಸ ಜಟಕ,ಬೃಹತ್ ಯೋಗಯಾತ್ರ,ಯೋಗಯಾತ್ರ,ಟಿಕ್ಕಾಣಿ ಯಾತ್ರ,ಬೃಹತ್ ವಿವಾಹ ಪತಲ್,ಲಘು ವಿವಾಹ ಪತಲ್,ಲಗ್ನ ವರಾಹಿ,ಕುತೂಹಲ ಮಂಜರಿ,ದೈವಜ್ಞ ವಲ್ಲಭ ಇವು ವರಾಹಮಿಹಿರ ಬರೆದ ಜ್ಯೋತಿಷ‍್ಯ ಶಾಸ್ತ್ರಗಳು.ತ್ರಿಕೋನಮಿತೀಯಕ್ಕೆ ಇವನ ಕೊಡುಗೆಗಳು ಅಪಾರ.

(8 ಜನವರಿ 1942 - 14 ಮಾರ್ಚ್ 2018) ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಥಿಯರಿಟಿಕಲ್ ಕಾಸ್ಮಾಲಜಿ ಸೆಂಟರ್ನಲ್ಲಿ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ, ವಿಶ್ವವಿಜ್ಞಾನಿ.
ಜೀವನ
ಸ್ಟೀಫನ್ ಹಾಕಿಂಗ್ ಜನಿಸಿದ್ದು ಜನವರಿ 8, 1942ರಂದು. 1962ನೇ ಇಸ್ವಿಯಲ್ಲಿ ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾರೋಗ್ಯವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿಸಿತು. ವೈದ್ಯರ ತೀರ್ಮಾನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್.
ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾನವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿಹಾರವಿಲ್ಲದ, ಖಚಿತವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆರಡು ವರ್ಷಗಳ ಬದುಕು ಉಳಿದಿದೆ ಎಂದರು. ಆಗ ಸ್ಟೀಫನ್ ಹಾಕಿಂಗ್ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಸಂಶೋಧನೆ ಮಾಡುತ್ತಿದ್ದರು.
ಒಂದೆರಡು ವರ್ಷಗಳೂ ಬದುಕುವುದು ಸಾಧ್ಯವಿಲ್ಲವೆಂದು ನಲವತ್ತಾರು ವರ್ಷಗಳ ಹಿಂದೆ ಹೇಳಿದ್ದ ವಿಜ್ಞಾನಕ್ಕೆ ಸವಾಲೆಂಬಂತೆ ತಮ್ಮ ಕೊನೆಯ ದಿನಗಳವರೆವಿಗೂ ಸಂಶೋಧನೆಯನ್ನು ನಡೆಸಿದ್ದರು. ಅವರ ದೇಹ ಸಂಪೂರ್ಣ ನಿಶ್ಚೇಷ್ಟಿತವಾಗಿತ್ತು, ಅವರು ಸದಾಕಾಲವೂ ಗಾಲಿಕುರ್ಚಿಯ ಮೇಲೆಯೇ ಇರಬೇಕಾಗಿತ್ತು. ಅವರ ಧ್ವನಿಯನ್ನು ಅರ್ಥೈಸಿಕೊಳ್ಳಲು ಕಂಪ್ಯೂಟರ್‌ ಬಳಸಬೇಕಿತ್ತು.
ಸಾಧನೆ 

ಅವರ ವೈಜ್ಞಾನಿಕ ಕೃತಿಗಳು ಸಾಮಾನ್ಯ ಸಾಪೇಕ್ಷತೆಯ ಚೌಕಟ್ಟಿನಲ್ಲಿನ ಗುರುತ್ವ ಏಕತ್ವ ಪ್ರಮೇಯಗಳ ಮೇಲೆ ರೋಜರ್ ಪೆನ್ರೋಸ್ ಸಹಯೋಗದೊಂದಿಗೆ ಮತ್ತು ಕಪ್ಪು ಕುಳಿಗಳು ವಿಕಿರಣವನ್ನು ಹೊರಸೂಸುವ ಸೈದ್ಧಾಂತಿಕ ಭವಿಷ್ಯವನ್ನು ಸಾಮಾನ್ಯವಾಗಿ ಹಾಕಿಂಗ್ ವಿಕಿರಣ ಎಂದು ಕರೆಯಲಾಗುತ್ತಿತ್ತು.
ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಒಕ್ಕೂಟವು ವಿವರಿಸಿರುವ ವಿಶ್ವವಿಜ್ಞಾನದ ಸಿದ್ಧಾಂತವನ್ನು ಮೊದಲ ಬಾರಿಗೆ ಹಾಕಿಂಗ್ ರಚಿಸಿದರು. ಅವರು ಕ್ವಾಂಟಮ್ ಮೆಕ್ಯಾನಿಕ್ಸ್ನ ಅನೇಕ-ಲೋಕಗಳ ವ್ಯಾಖ್ಯಾನದ ಹುರುಪಿನ ಬೆಂಬಲಿಗರಾಗಿದ್ದರು. 
ಹಾಕಿಂಗ್ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನ ಜೀವಮಾನದ ಸದಸ್ಯರಾಗಿದ್ದ ರಾಯಲ್ ಸೊಸೈಟಿ ಆಫ್ ಆರ್ಟ್ಸ್ (FRSA) ನ ಗೌರವಾನ್ವಿತ ಫೆಲೋ ಆಗಿದ್ದರು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಧ್ಯಕ್ಷೀ8ಯ ಪದಕ ಸ್ವಾತಂತ್ರ್ಯದ ಸ್ವೀಕರಿಸುವವರಾಗಿದ್ದರು.
ನಿಧನ
ವಿಜ್ಞಾನದ ವಿಸ್ಮಯರೆಂದೆನಿಸಿದ್ದ, ಆಲ್ಬರ್ಟ್ ಐನ್ ಸ್ಟೈನ್ ನಂತರದ ಮಹಾನ್ ಭೌತವಿಜ್ಞಾನಿ ಎನಿಸಿದ್ದ ಸ್ಟೀಫನ್ ಹಾಕಿಂಗ್ ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾದರು.

'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಇನ್ನು ನೆನಪು ಮಾತ್ರ. ರಾಷ್ಟ್ರಪತಿಯಾದರೂ ಜನಸಾಮಾನ್ಯರ ಜೊತೆ ಬೆರೆತು, ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಅಬ್ದುಲ್ ಕಲಾಂ ಅವರ ಸರಳ ಬದುಕು ಹಲವಾರು ಎಲ್ಲರಿಗೂ ಮಾದರಿ.

ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಅವುಲ್‌ ಪಕೀರ್‌ ಜೈನುಲಾಬ್ದಿನ್‌ ಅಬ್ದುಲ್‌ ಕಲಾಂ. ಕಲಾಂ 1931ರಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ಹುಟ್ಟಿದರು. ತಂದೆ ಮೀನುಗಾರಿಕಾ ಬೋಟ್ ಇಟ್ಟುಕೊಂಡಿದ್ದರು. ತಾಯಿ ಗೃಹಿಣಿ, ಮನೆಯಲ್ಲಿ ಬಡತನವಿತ್ತು. ['ಕ್ಷಿಪಣಿ ಮಾನವ' ಎಪಿಜೆ ಅಬ್ದುಲ್ ಕಲಾಂ ವಿಧಿವಶ']

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಅಬ್ದುಲ್ ಕಲಾಂ ರಾಮೇಶ್ವರದಲ್ಲಿಯೇ ಪೂರ್ಣಗೊಳಿಸಿದರು. ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಕಲಾಂ ಅವರು ಇಸ್ರೋ ಮತ್ತು ಡಿಆರ್‌ಡಿಒದಲ್ಲಿ ಕಾರ್ಯನಿರ್ವಹಿಸಿದರು.
ಜು.1980ರಲ್ಲಿ ಭಾರತದ ಮೊದಲ ಉಪಗ್ರಹ ರೋಹಿಣಿಯನ್ನು ಕಕ್ಷೆ ಸೇರಿದಾದ ಅದರ ಹಿಂದೆ ಅಬ್ದುಲ್ ಕಲಾಂ ಅವರ ಶ್ರಮವಿತ್ತು. ಇಸ್ರೋದ ಪಿಎಸ್‌ಎಲ್‌ವಿ ಕಾರ್ಯಯೋಜನೆಯ ರೂವಾರಿ ಕಲಾಂ. ಡಿಆರ್‌ಡಿಒದಲ್ಲಿ ಸ್ವದೇಶೀ ತಂತ್ರಜ್ಞಾನದ ಕ್ಷಿಪಣಿ ತಯಾರಿಸುವ ತಂಡದ ಮುಖ್ಯಸ್ಥರಾಗಿದ್ದರು.
ಅಬ್ದುಲ್ ಕಲಾಂ 1992ರಿಂದ 1999ರ ವರೆಗೆ ರಕ್ಷಣಾ ಸಚಿವರ ಸಲಹೆಗಾರರಾಗಿದ್ದರು. ಅಣುಶಕ್ತಿ ಆಯೋಗದ ಸಹಭಾಗಿತ್ವದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಯ ನೇತೃತ್ವ ವಹಿಸಿದ್ದರು. ಹಗುರ ಯುದ್ಧ ವಿಮಾನಗಳ ನಿರ್ಮಾಣ ಯೋಜನೆಗೂ ಕಲಾಂ ಅವರ ಕೊಡುಗೆ ಅಪಾರವಾಗಿದೆ.
ಅಬ್ದುಲ್ ಕಲಾಂ ಭಾರತದ 11ನೇ ರಾಷ್ಟ್ರಪತಿಯಾಗಿ ಜುಲೈ 22, 2002ರಂದು ಆಯ್ಕೆಯಾದರು. ಲೇಖಕರಾಗಿದ್ದ ಕಲಾಂ ಅವರು 'ವಿಂಗ್ಸ್ ಆಫ್ ಫೈರ್' ಸೇರಿದಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಜೀವನದ ಬಗ್ಗೆ ಅಬ್ದುಲ್ ಕಲಾಂ ಅವರು ಹೇಳಿದ ಮಾತುಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿ ತುಂಬುತ್ತಿವೆ.

ಕಲಾಂ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ 1981ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮ ವಿಭೂಷಣ, 1997ರಲ್ಲಿ ದೇಶದ ಅತ್ಯುನ್ನುತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಸುಮಾರು ಮೂವತ್ತು ವಿಶ್ವವಿದ್ಯಾಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ.
ನಿನ್ನ 

ಭಾರತದ ಪ್ರಸಿದ್ಧ ಖಗೋಳ ವಿಜ್ಞಾನಿ.
ಇವರು ಜುಲೈ ೧೯,೧೯೩೮ ರಲ್ಲಿ ಕೊಲ್ಲಾಪುರದಲ್ಲಿ ಜನಿಸಿದರು.ಇವರ ತಂದೆ ವಿ.ವಿ.ನಾರ್ಳಿಕರ್ ಪ್ರಸಿದ್ಧ ಗಣಿತಜ್ಞ.ತಾಯಿ ಸಂಸ್ಕೃತದಲ್ಲಿ ವಿದ್ವಾಂಸೆ
.ಇವರು ಪ್ರೊಫೆಸರ್ ಫ್ರೆಡ್ ಹೋಯ್ಲ್ (Fred Hoyle)ರವರೊಂದಿಗೆ ಪ್ರತಿಪಾದಿಸಿದ ತತ್ವ 'ಹೋಯ್ಲ್ -ನಾರ್ಲಿಕರ್ ಥಿಯರಿ'ಎಂದು ಪ್ರಸಿದ್ಧವಾಗಿದೆ. 
ಇವರಿಗೆ ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿ, ಪದ್ಮ ವಿಭೂಷಣಪ್ರಶಸ್ತಿ ದೊರೆತಿದೆ.ಇವರು ಹಲವಾರು ಲೇಖನ,ವೈಜ್ಞಾನಿಕ ಬರಹ,ಕಥೆಗಳ ಮೂಲಕ ಜನರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಪ್ರಯತ್ನಶೀಲರಾಗಿದ್ದಾರೆ.

ಜಿ. ಮಾಧವನ್ ನಾಯರ್ (ಹುಟ್ಟು: ಅಕ್ಟೋಬರ್ ೩೧, ೧೯೪೩) ಇಸ್ರೋ ಸಂಸ್ಥೆಯ ಈಗಿನ ಅಧ್ಯಕ್ಷರು.
 ಇವರು ರಾಕೆಟ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. 
ಅಧ್ಯಕ್ಷರಾಗುವುದಕ್ಕೆ ಮುಂಚೆ ತಿರುವನಂತಪುರದ ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪದ್ಮ ವಿಭೂಷಣ ಪುರಸ್ಕೃತರು.
ಪ್ರಶಸ್ತಿಗಳು
ರಾಷ್ಟ್ರೀಯ ವೈಮಾನಿಕ ಪ್ರಶಸ್ತಿ, ಎಫ್ಐಎಇ ಫೌಂಡೇಶನ್ನ ಪ್ರಶಸ್ತಿ
, ಶ್ರೀ ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ, ಸ್ವದೇಶಿ ಶಾಸ್ತ್ರ ಪುರಸ್ಕಾರ ಪ್ರಶಸ್ತಿ,
 ವಿಕ್ರಮ್ ಸಾರಾಭಾಯಿ ಸ್ಮಾರಕ ಚಿನ್ನದ ಪದಕ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ಡಾ ಯೆಲವರ್ತಿ ನಾಯುಡಮ್ಮ ಸ್ಮಾರಕ ಪ್ರಶಸ್ತಿ 
, ಐದನೇ "ಶ್ರೀ ಬಲ್ವನ್ಬಾಯ್ ಪಾರೇಖ್ ಪ್ರಶಸ್ತಿ"
 ತಿಲಕ್ ಸ್ಮಾರಕ ಟ್ರಸ್ಟ್ನಿಂದ ಲೋಕಮಾನ್ಯ ತಿಲಕ್ ಪ್ರಶಸ್ತಿ.

ರಘುನಾಥ್ ಅನಂತ ಮಶೇಲ್ಕರ್ ಒಬ್ಬ  ಖ್ಯಾತ ಖಗೋಳ  ವಿಜ್ಞಾನಿಯಾಗಿದ್ದಾರೆ . 

ಇವರು ಗೋವಾದ ಮಾಶೇಲ್ ಎಂಬಲ್ಲಿ  ಜನವರಿ ೧,೧೯೪೩ ಜನಿಸಿದರು.
ಬಾಂಬೆ ವಿಶ್ವವಿದ್ಯಾನಿಲಯದಲ್ಲಿ   (ಈಗ ಇಂಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ)  ಮಷೇಲ್ಕರ್ ಅವರು ಅಧ್ಯಯನ ಮಾಡಿದರು, ಅಲ್ಲಿ  ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು.   ನಂತರ  ಅವರು ಪಿಎಚ್ಡಿ ಪದವಿ ಪಡೆದರು  
ಇವರು ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್ ಅಥವಾ ಸಿಎಸ್‍ಐಆರ್ (CSIR)ನ ಮಾಜಿ ಮುಖ್ಯ ನಿರ್ದೇಶಕರು. 

 ಇವರ ವೈಜ್ಯ್ಞಾನಿಕ ಮತ್ತು ಆಡಳಿತಾತ್ಮಕ ಸಾಧನೆಗೆ ಇವರಿಗೆ ೨೦೧೪ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.

(ಅಕ್ಟೋಬರ್ ೧೯, ೧೯೧೦ - ಆಗಸ್ಟ್ ೨೧, ೧೯೯೫) ಭಾರತೀಯ ಮೂಲದ ಅಮೇರಿಕ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ. ಗೆಳೆಯರೆಲ್ಲರು ಅವರನ್ನು ಪ್ರೀತಿಯಿಂದ 'ಚಂದ್ರ' ಎಂದೇ ಸಂಬೋಧಿಸುತ್ತಿದ್ದರು.

೧೯೮೫ ರಲ್ಲಿ 'ಡಾ. ಚಂದ್ರ' ಮತ್ತು ಅಮೆರಿಕಾದ 'ವಿಲ್ಲಿಫೌಲರ್' ಜಂಟಿಯಾಗಿ 'ನೋಬೆಲ್ ಪ್ರಶಸ್ತಿ'ಯನ್ನು ಹಂಚಿಕೊಂಡರು. ವಿಶ್ವದ ಶ್ರೇಷ್ಟ ವಿಜ್ಞಾನ ಬರಹಗಾರರಲ್ಲಿ ಒಬ್ಬರಾದ 'ಆರ್ಥರ್ ಮಿಲ್ಲರ್' ಹೇಳುವಂತೆ, ಅವರೊಬ್ಬ 'ಖಭೌತ ವಿಜ್ಞಾನಿ'-'ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿ'ಯೆಂದು

ಡಾ.ಚಂದ್ರಾರವರು',  ನೊಬೆಲ್ ವಿಜ್ಞಾನಿ ಸರ್ ಸಿ.ವಿ.ರಾಮನ್‌ರ ಸಮೀಪ ಸಂಬಂಧಿ. ಜನನ ಅಕ್ಟೋಬರ್ ೧೯,೧೯೧೦ ಲಾಹೋರ್ನಲ್ಲಿ. ತಂದೆ ಸುಬ್ರಹ್ಮಣ್ಯಂ ಅಯ್ಯರ್ ವಾಯವ್ಯ ರೈಲ್ವೆಯಲ್ಲಿ 'ಸಹಾಯಕ ಆಡಿಟರ್ ಜನರಲ್' ಆಗಿದ್ದರು.

ತಂದೆಯವರು ಚೆನ್ನೈಗೆ ವರ್ಗವಾಗಿ ಬಂದಾಗ, 'ಟ್ರಿಪ್ಲಿಕೇನ್‌'ನಲ್ಲಿ 'ಹಿಂದೂ ಹೈಸ್ಕೂಲ್' ಸೇರಿದರು. ಗಣಿತದಲ್ಲಿ ಅಪಾರ ಪ್ರತಿಭೆ, ಮತ್ತು ಅದ್ಭುತ ನೆನೆಪಿನ ಶಕ್ತಿಯನ್ನು ಹೊಂದಿದ್ದರು. ಅದಕ್ಕೆ ಪುಟವಿಟ್ಟಂಥ ವಿಜ್ಞಾನದಲ್ಲಿ ತೀವ್ರವಾದ ಆಸಕ್ತಿ, ಉತ್ಸಾಹ. 

೧೯೨೫ರಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಸೇರಿದಾಗ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. 

೧೯೩೦ರಲ್ಲಿ ಪದವೀಧರರಾದರು. ಇಂಗ್ಲೀಷ್ ಸಾಹಿತ್ಯದಲ್ಲಿ ಅದರಲ್ಲೂ 'ವಿಕ್ಟೋರಿಯನ್ ಯುಗದ ಶೈಲಿಯ ಸುಂದರ-ಇಂಗ್ಲೀಷ್-ಸಾಹಿತ್ಯ'ದಲ್ಲಿ ಅತ್ಯಾಸಕ್ತರು.

ಆಗಿನ ಕಾಲದ ಇಂಗ್ಲೀಷ್ ಭಾಷೆಯ ಪ್ರಕಾಂಡ ಪಂಡಿತರ ಸಾಹಿತ್ಯವನ್ನು ಚೆನ್ನಾಗಿ ಅರಗಿಸಿಕೊಂಡ 'ಚಂದ್ರ', ತಮ್ಮ ವೈವಿಜ್ಞಾನಿಕ ಬರಹದಲ್ಲಿ ಸಾಹಿತ್ಯದ ಸೊಗಡನ್ನು ತುಂಬಿಡುತ್ತಿದ್ದರು. ಆಗಿನ ಕಾಲದ 'ನೋಬೆಲ್ ಪ್ರಶಸ್ತಿ ವಿಜೇತ', 'ಹ್ಯಾನ್ಸ್ ಬೇಥ್' ಹೇಳುವಂತೆ-ಚಂದ್ರಾರವರ ಬರಹವೆಂದರೆ, 'ವಿಕ್ಟೋರಿಯನ್ ಯುಗದ ಸೌಂದರ್ಯ'ವೆಲ್ಲವೂ ಅವರ ಸಾಹಿತ್ಯದಲ್ಲಿ ಮೇಳೈಸಿರುತ್ತಿತ್ತು. ವಿದ್ಯಾರ್ಥಿ ದೆಸೆಯಲ್ಲೇ 'ವೈಜ್ಞಾನಿಕ ವಿಷಯಗಳ ಮೇಲೆ ಪ್ರಬಂಧ' ಬರೆದಿದ್ದರು.

ಬ್ರಹ್ಮಗುಪ್ತ ಭಾರತದ ಒಬ್ಬ ಮಹಾನ್ ಗಣಿತಶಾಸ್ತ್ರಜ್ಞ,ಖಗೋಳಶಾಸ್ತ್ರ ಹಾಗೂ  ಬೀಜಗಣಿತ ಪ್ರತಿಪಾದಕ. ಇವರು ಭಾರತೀಯ ಗಣಿತಶಾಸ್ತ್ರವನ್ನ ಉನ್ನತ ಸ್ಥಾನಕ್ಕೆರಿಸಿದರು. ಹೀಗಾಗಿ ಇವರನ್ನು ಭಾಸ್ಕರಚಾರ್ಯರು ಹನ್ನೆರಡನೇ ಶತಮಾನದ ಗಣಿತ ಚಕ್ರ ಚೂಡಾಮಣಿ ಎಂದು ಕರೆದು, ಇವರ ಗಣಿತ ಪಾಂಡಿತ್ಯವನ್ನ ಹೊಗಳಿದರು. 

ಇವರು ಭಿನ್ನಲಿ ಎಂಬ ಸ್ಥಳದಲ್ಲಿ ಜನಿಸಿದರು ಎನ್ನಲಾಗುತ್ತದೆ. ಮಾಹಿತಿಗಳ ಪ್ರಕಾರ ಇವರು ಚಾಪವಂಶದ ರಾಜ ವ್ಯಘ್ರಮುಖನ ದರ್ಬಾರಿನಲ್ಲಿ ರಾಜ ಜ್ಯೋತಿಷಿಯಾಗಿದ್ದರು. ಇವರು ರಚಿಸಿದ ಬ್ರಹ್ಮ ಸ್ಪುಟ ಸಿದ್ಧಾಂತ ಮತ್ತು ಕರುಣ ಖಂಡ ಸಂಹಿತೆಗಳು ಪ್ರಖ್ಯಾತಿ ಗಳಿಸಿವೆ. 

 


ಇವರು ಶೂನ್ಯ ಬಳಕೆಯ ನಿಯಮವನ್ನ ಪ್ರತಿಪಾದಿಸಿದರು. ಈ ನಿಯಮದ ಪ್ರಕಾರ ಶೂನ್ಯದಿಂದ ಯಾವುದೇ ಸಂಖ್ಯೆಯನ್ನ ಕೂಡಿಸಿದರೆ ಅಥವಾ ಕಳೆದರೆ ಆ ಸಂಖ್ಯೆಯಲ್ಲಿ ಯಾವ ಅಂತರವೂ ಬರುವುದಿಲ್ಲ. ಅಷ್ಟೇ ಅಲ್ಲದೆ ಶೂನ್ಯವನ್ನ ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಶೂನ್ಯವೇ ಆಗುತ್ತದೆ.

 ಬ್ರಹ್ಮಗುಪ್ತ, ತಮ್ಮ ಬ್ರಹ್ಮ ಸ್ಫುಟ ಸಿದ್ಧಾಂತ ಗ್ರಂಥದಲ್ಲಿ ಜ್ಯೋತಿಷ್ಯ ಹಾಗು ಗಣಿತದ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಅಂಕಗಣಿತ ಮತ್ತು ಬೀಜಗಣಿತದ ಅಧ್ಯಯಗಳನ್ನೂ ಈ ಗ್ರಂಥದಲ್ಲಿ ವಿವರಿಸಲಾಗಿದೆ. ಇವರ ಗ್ರಂಥಗಳಲ್ಲಿ ಬೀಜಗಣಿತವೇ ಪ್ರಮುಖವಾಗಿ ವಿವರಿಸಲಾಗಿದೆ. ಇವರು ಬರೆದ ಕರುಣ ಖಂಡ ಗ್ರಂಥಖಗೋಳ ಶಾಸ್ತ್ರದ ಬಗ್ಗೆ ವಿವರಣೆ ನೀಡುತ್ತದೆ. 

ವಿಕ್ರಮ್ ಸಾರಾಭಾಯಿ (೧೨ ಆಗಸ್ಟ್ ೧೯೧೯ - ೨೬ ಡಿಸೆಂಬರ್ ೧೯೭೧) ಭಾರತದ ಖ್ಯಾತ ವಿಜ್ಞಾನಿ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಮುಖರು. 


ಇವರ ಜನನ   ಗುಜರಾತಿನ ಅಹ್ಮದಾಬಾದ್‌ನ ಶ್ರೀಮಂತ ಕುಟುಂಬದಲ್ಲಿ. ತಂದೆ ಅಂಬಾಲಾಲ್ ಸಾರಾಭಾಯ್. ತಾಯಿ ಸರಳಾದೇವಿ. ಚಿಕ್ಕಂದಿನಿಂದಲೇಬುದ್ಧಿವಂತನಾಗಿದ್ದ ಬಾಲಕ ಸಾಹಸಪ್ರಿಯ ಕೂಡಾ. ಇವರ ಮನೆಗೆ ಬರುತ್ತಿದ್ದ  ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸಿ.ವಿ.ರಾಮನ್ಮುಂತಾದಮಹನೀಯರುಗಳ ವ್ಯಕ್ತಿತ್ವ ಈ ಧೀಮಂತ ಬಾಲಕನ ಮೇಲೆ ಸಾಕಷ್ಟು ಪ್ರಭಾವ ಬೀರಿತು. 

 ವಿದ್ಯಾಭ್ಯಾಸ :

ಭಾರತದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ತಮ್ಮ ೨೦ನೇ ವಯಸ್ಸಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ 'ಪ್ರಕೃತಿವಿಜ್ಞಾನ'ದಲ್ಲಿ ಟ್ರೈಪಾಸ್ ಎಂಬಪರೀಕ್ಷೆಯಲ್ಲಿ ಉತ್ತೀರ್ಣರಾದರು.೧೯೪೭ರಲ್ಲಿ ಕೇಂಬ್ರಿದ್ಜ್‌ನಿಂದ ಪಿಹೆಚ್‌ಡಿ ಪದವಿ ಪಡೆದರು.

 ಸಾಧನೆಗಳು :

ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿ ಸಿ.ವಿ.ರಾಮನ್‌ರೊಂದಿಗೆ ಸಂಶೋಧನೆಯಲ್ಲಿ ತೊಡಗಿದರು. ವಿಶ್ವ ಕಿರಣಗಳತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಸಿದರು ಹಾಗೂ ಅವುಗಳ ಕಾಲ ತೀಕ್ಷ್ಣತೆ ದಿನಕ್ಕೆ ೨ ಬಾರಿ ಬದಲಾಗುವುದನ್ನುಕಂಡುಹಿಡಿದು,ಅದರ ಬಗ್ಗೆ ಪ್ರಬಂಧ ಬರೆದು ಪ್ರಕಟಿಸಿದರು.ಈ ವಿಚಾರ ಬಾಹ್ಯಾಕಾಶ ಸಂಶೋಧನೆಗಳಿಗೆ ಸಹಾಯಕವಾಯಿತು. 

೧೯೬೬ರಲ್ಲಿ ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜಹಾಂಗೀರ್ ಭಾಭಾ  ನಿಧನ ಹೊಂದಿದಾಗ, ಅವರ ಉತ್ತರಾಧಿಕಾರಿಯಾಗಿನೇಮಕಗೊಂಡವರು ವಿಕ್ರಮ್ ಸಾರಾಭಾಯಿ. ಈ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅವರು ಒಳ್ಳೆಯ ಆಡಳಿತಗಾರರೆಂದು ಹೆಸರು ಪಡೆದರು.ಅಧ್ಯಕ್ಷ ಸ್ಥಾನದಲ್ಲಿದ್ದು ಕೊಂಡೇ ಅಹರ್ನಿಶಿ ಸಂಶೋಧನೆಗಳನ್ನು ಮಾಡಿದರು.

ಅಹ್ಮದಾಬಾದಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ,ಕೆಲಕಾಲ ಅದರ ನಿರ್ದೇಶಕರಾಗಿದ್ದರು. ೧೯೫೫ರಲ್ಲಿ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ವಿಶ್ವಕಿರಣಗಳಸಂಶೋಧನಾ ಕೇಂದ್ರ ಸ್ಥಾಪಿಸಿದರು. ತಮ್ಮ ೪೦ನೇ ವಯಸ್ಸಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನಡೆಸಿದ ಸಮ್ಮೇಳನವೊಂದರಲ್ಲಿ ಭೌತ ವಿಜ್ಞಾನವಿಭಾಗದ ಅಧ್ಯಕ್ಷತೆ ವಹಿಸಿದ್ದರು. ಇಷ್ಟೇ ಅಲ್ಲದೆ ಹಲವು ಸಂಘ,ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಅವು ಹೀಗಿವೆ:

ಗ್ರೂಪ್ ಫಾರ್ ಇಂಪ್ರೂವ್‌ಮೆಂಟ್ ಆಫ್ ಸೈನ್ಸ್ ಎಜುಕೇಷನ್

ನೆಹರೂ ಫೌಂಡೇಷನ್

ಕಮ್ಯೂನಿಟಿ ಸೈನ್ಸ್ ಸೆಂಟರ್

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಪುರಸ್ಕಾರಗಳು:

೧೯೬೨-ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ

೧೯೬೬-ಪದ್ಮಭೂಷಣ

೧೯೭೨-(ಮರಣೋತ್ತರ) ಪದ್ಮವಿಭೂಷಣ

👍👍👍👍👍👍👍👍👍👍👍👍👍👍

 ಸಂಗ್ರಹ ✍️T.A.ಚಂದ್ರಶೇಖರ

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು