ಕರ್ತೃ ಪದ
“ಕ್ರಿಯೆಯ ಕೆಲಸವನ್ನು ಯಾರು ಮಾಡಿದರು / ಯಾವುದು ಮಾಡಿತು ಎಂದು ತಿಳಿಸುವ ಪದವನ್ನು ಕರ್ತೃಪದವೆಂದು ಕರೆಯುವರು.”

ಕರ್ಮ ಪದ : ” ಕ್ರಿಯಾ ಪದದ ಅರ್ಥವನ್ನು ಪೂರ್ತಿಗೊಳಿಸುವ ಪದಗಳಿಗೆ ಕರ್ಮಪದಗಳೆಂದು ಹೆಸರು.”

ಕ್ರಿಯಾ ಪದ ; ” ಕೆಲಸವನ್ನು ಹೇಳುವ ಪದವನ್ನು ಕ್ರಿಯಾಪದವೆಂದು ಕರೆಯುವರು.”

ಕ್ರಿಯಾ ರೂಪಗಳು
ಕ್ರಿಯಾ ರೂಪಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು

ಕಾಲರೂಪಗಳು
ಅರ್ಥ ರೂಪಗಳು


ಕಾಲರೂಪಗಳು

ವರ್ತಮಾನ , ಭೂತ , ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲರೂಪಗಳು ಎನ್ನಲಾಗಿದೆ.ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕಾರ್ಯರೂಪಗಳಾಗುತ್ತವೆ.

ಕಾಲ ರೂಪಗಳ ವಿಧಗಳು
ಕಾಲ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು.

ವರ್ತಮಾನ ಕಾಲ.
ಭೂತ ಕಾಲ.
ಭವಿಷ್ಯತ್ ಕಾಲ.


ವರ್ತಮಾನ
ಕಾಲದ ಕ್ರಿಯಾರೂಪ “ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು.” ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು.

 ಉದಾ : ಧಾತು + ಕಾ.ಸೂ + ಅಖ್ಯಾತ =ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ. ವಚನ ಬ. ವಚನಹೊಗು +ಉತ್ತ + ಆನೆ =ಹೋಗುತ್ತಾನೆ – ತ್ತಾರೆ ಹೊಗು + ಉತ್ತ + ಆಳೆ = ಹೋಗುತ್ತಾಳೆ – ತ್ತಾರೆ ಹೋಗು + ಉತ್ತ + ಆದೆ = ಹೋಗುತ್ತದೆ – ತ್ತವೆ ಹೋಗು +ಉತ್ತ + ಈಯ = ಹೋಗುತ್ತೀಯೆ – ತ್ತೀರಿ ಹೋಗು + ಉತ್ತ + ಏನೆ = ಹೋಗುತ್ತೇನೆ – ತ್ತೇವೆ

ಭೂತ ಕಾಲ ಕ್ರಿಯಾರೂಪ ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾಲ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ.ಪ್ರತ್ಯಯವು ಬರುವುದು” 

ಉದಾ : ತಿಳಿ – ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ ಏ. ವ ಬಹುವಚನ ತಿಳಿ + ದ + ಅನು = ತಿಳಿದನು ತಿಳಿದರುತಿಳಿ + ದ + ಅಳು = ತಿಳಿದಳು ತಿಳಿದರು ತಿಳಿ + ದ + ಇತು = ತಿಳಿಯಿತು ತಿಳಿದವುತಿಳಿ + ದ + ಎ = ತಿಳಿದೆ ತಿಳಿದಿರಿ ತಿಳಿ + ದ + ಎನು = ತಿಳಿದೆನು ತಿಳಿದೆವು

ಭವಿಷ್ಯತ್ ಕಾಲದ ಕ್ರಿಯಾರೂಪ ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.

ಉದಾ : ಕೊಡು – ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ.ವಚನ ಬಹುವಚನ ಕೊಡು + ವ + ಅನು = ಕೊಡುವನು ಕೊಡುವರು ಕೊಟು + ವ + ಅಳು = ಕೊಡುವಳು ಕೊಡುವರು ಕೊಡು + ವ + ಅದು = ಕೊಡುವುದು ಕಡುವುದು ಕೊಡು + ವ + ಎ = ಕೊಡುವೆ ಕೊಡುವಿರಿ ಕೊಡು + ವ + ಎನು = ಕೊಡುವೆನು ಕೊಡುವೆವು.

ಅರ್ಥರೂಪಗಳು
ಕ್ರಿಯಾಪದಗಳು ಕಾಲ ರೂಪಗಳನ್ನು ಹೊಂದುವುದಲ್ಲದೆ ಅರ್ಥ ರೂಪಗಳನ್ನು ಹೊಂದಿರುತ್ತವೆ .ಅರ್ಥ ರೂಪಗಳಲ್ಲಿ ಧಾತುವಿಗೆ ಅಖ್ಯಾತ ಪ್ರತ್ಯಯ ಗಳು ನೇರವಾಗಿ ಸೇರಿಕೊಳ್ಳುತ್ತವೆ .”“ಅರ್ಥರೂಪಗಳು, ಆಜ್ಞೆ, ಹಾರೈಕೆ , ನಿಷೇಧ, ಸಂಶಯ ಮುಂತಾದ ಅರ್ಥಗಳನ್ನು ಸೂಚಿಸುತ್ತವೆ.”

ಅರ್ಥರೂಪಗಳ ವಿಧಗಳು
ಅರ್ಥ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು

ವಿದ್ಯರ್ಥಕ ರೂಪ
ನಿಷೇಧಾರ್ಥಕ ರೂಪ
ಸಂಭಾವನಾರ್ಥಕ ರೂಪ


1.ವಿಧ್ಯರ್ಥಕ ರೂಪ ವಿಧಿ ಎಂದರೆ ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”

ಉದಾ : ಧಾತು + ಅಖ್ಯಾತ ಪ್ರತ್ಯಯ = ವಿಧ್ಯರ್ಥಕ ಕ್ರಿಯಾ ಹೋಗು + ಅಲಿ = ಹೋಗಲಿಬರೆ + ಇರಿ = ಬರೆಯಿರಿ ಹೋಗು + ಓಣ = ಹೋಗೋಣ ಬರೆ + ಓಣ = ಬರೆಯೋಣ

ಉದಾ :
ಕಣ್ಣು ಕಾಣದ ಮುದುಕನಿಗೆ ಭಕ್ಷೆ ನೀಡಿ ತಾಯಿ – ಕೋರಿಕೆ
ಮಳೆಬೆಳೆಗಳು ಚೆನ್ನಾಗಿ ನಡೆಯಲಿ.
ದೇವರು ನಿನಗರ ಒಳ್ಳೆಯದನ್ನು ಮಾಡಲಿ.
ಅವರು ಪಾಠವನ್ನು ಓದಲಿ – ಅಜ್ಞೆ.
ಅವನು ಹಾಳಾಗಿ ಹೋಗಲಿ – ಅಪ್ಪಣೆ.
ಅವನಿಗೆ ಜಯವಾಗಲಿ – ಹಾರೈಕೆ.


2.ನಿಷೇಧಾರ್ಥಕ ರೂಪ ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.

ಉದಾ : ಧಾತು + ಅ. ಪ್ರತ್ಯಯ + ನಿಷೇದಾರ್ಥಕ ಕ್ರಿ ರೂಪ ಹೋಗು + ಅಳು + ಹೋಗಳು ಬರೆ + ಅನು + ಬರೆಯನು ಮಾಡು + ಎವು + ಮಾಡೆವು ಕುಡಿ + ಅಳು + ಕುಡಿಯಳು ಮಾಡು + ಅದು + ಮಾಡದು

3.ಸಂಭಾವನಾರ್ಥಕ ಕ್ರಿಯಾಪದ ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು”ಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.

ಉದಾ : ಧಾತು +ಅಖ್ಯಾತ ಪ್ರ = ಸಂಭಾವನಾರ್ಥಕ ರೂಪ ಮಾಡು +ಆನು = ಮಾಡಾನು ಬರೆ +ಆನು = ಬರೆದಾನು ಕುಡಿ +ಏನು = ಕುಡಿದೇನು ಬರೆ +ಏವು = ಬರೆದೇವು ಕುಡಿ +ಏವು = ಕುಡಿದೇವು ಮಾಡು +ಈತು = ಮಾಡೀತು ತಿಳಿ +ಆನು = ತಿಳಿದಾನು……ಇತ್ಯಾದಿ

ಅಖ್ಯಾತ ಪ್ರತ್ಯಯಗಳು ಪುರುಷ , ವಚನ , ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುವಿಗೆ ಸೇರುವ ಪ್ರತ್ಯಯಗಳಿಗೆ ಅಖ್ಯಾತ ಪ್ರತ್ಯಯಗಳೆಂದು ಹೆಸರು .”

ಕ್ರಿಯಾ ಪದದ ರೂಪಗಳು
ರೂಪ ಹಾಗೂ ಕೆಲಸಕ್ಕೆ ಅನುಗುಣವಾಗಿ ಕ್ರಿಯಾಪದಗಳು ಬಳಕೆಯಾಗುತ್ತವೆ.ಅವುಗಳು ಈ ಕೆಳಕಂಡಂತಿವೆ.

ಪೂರ್ಣ ಕ್ರಿಯಾಪದಗಳು.
ಸಾಪೇಕ್ಷ ಕ್ರಿಯಾಪದಗಳು.
೩ಸಂಯುಕ್ತ ಕ್ರಿಯಾಪದಗಳು
.

ಪೂರ್ಣಕ್ರಿಯಾಪದಗಳು
ಕಾಲ, ರೂಪ , ಅರ್ಥಗಳನ್ನು ಹೊಂದಿರುವ ಕ್ರಿಯಾಪದಗಳು ವಾಕ್ಯಗಳ ಅರ್ಥವನ್ನು ಪೂರ್ಣಗೊಳಿಸುತ್ತವೆ ಇಂತಹ ಕ್ರಿಯಾ ಪದಗಳಿಗೆ ಪೂರ್ಣಕ್ರಿಯಾಪದ ಎಂದು ಹೆಸರು .”

➖➖➖➖➖➖➖➖➖➖➖➖

ಪ್ರತಿ ನಿತ್ಯ ಎಲ್ಲ ವಿಷಯಾಧರಿತ ವಿಷಯಗಳು ಇಲ್ಲಿ ಅಪಡೇಟ್ ಆಗುತ್ತಿರುತ್ತವೆ. ಇಲ್ಲಿ ಕೇವಲ ಸ್ಟಡಿಗೆ ಸಂಬಂಧಿಸಿದ್ದು ಮಾತ್ರ ಹಂಚಿಕೊಳ್ಳಲಾವುದು. (ವಿಷಯ ಆಧಾರಿತ , ಪ್ರಚಲಿತ ವಿದ್ಯಮಾನ, 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗೆ ಅವಕಾಶ

⭐⭐⭐⭐⭐⭐⭐⭐⭐⭐⭐⭐⭐⭐⭐

ವಾಟ್ಸ್ ಅಪ್ ಗ್ರೂಪ್ಸ್

ಹೊಸಬೆಳಕು 1

1 to 7th ಕ್ಲಾಸ್ ಸ್ಟಡಿ ಗ್ರೂಪ್ 

ಶಿಕ್ಷಣವೇ ಶಕ್ತಿ

ENGLISH LANGUAGE CLUB

8th to 10th class study groups

PUC ಸ್ಟಡಿ ಗ್ರೂಪ್ಸ್

ಮಾಥ್ಸ್ ಸ್ಟಡಿ ಸರ್ಕಲ್ ೨


*ಪ್ರತಿನಿತ್ಯ ಅಪ್ಡೇಟ್ ನಮ್ಮ ಈ ಸಂಖ್ಯೆಯನ್ನು 6360396463 save  ಮಾಡಿ ಎಲ್ಲಾ ಗ್ರೂಪ್ ಗೆ ಸೇರಿಸಿ.*

➖➖➖➖➖➖➖➖➖➖➖➖