ಶಿಕ್ಷಣವೇ ಶಕ್ತಿ

Thursday 8 February 2024

2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ / ಶ್ರೀಮತಿ. ಇಂದಿರಾ ಗಾಂಧಿ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ ಪರೀಕ್ಷೆಗಾಗಿ ಉಪಯುಕ್ತ ಬಹು ಆಯ್ಕೆ ಪ್ರಶ್ನೋತ್ತರಗಳ ಸಂಗ್ರಹ.

Saturday 27 January 2024

CLASS 5

ಪ್ರಥಮ ಭಾಷೆ ಕನ್ನಡ  - FIRST LANGUAGE KANNADA

ಪ್ರಥಮ ಭಾಷೆ ಇಂಗ್ಲಿಷ್ - FIRST LANGUAGE ENGLISH

ಪ್ರಥಮ ಭಾಷೆ ಹಿಂದಿ - FIRST LANGUAGE HINDI

ದ್ವಿತೀಯ ಭಾಷೆ ಕನ್ನಡ - SECOND LANGUAGE KANNADA

ದ್ವಿತೀಯ ಭಾಷೆ ಇಂಗ್ಲಿಷ್ - SECOND LANGUAGE ENGLISH

ಗಣಿತ  –  ಕನ್ನಡ ಮಾಧ್ಯಮ – MATHEMATICS  – KANNADA MEDIUM

ಗಣಿತ  –  ಇಂಗ್ಲಿಷ್ ಮಾಧ್ಯಮ – MATHEMATICS  – ENGLISH MEDIUM

ಪರಿಸರ ಅಧ್ಯಯನ –  ಕನ್ನಡ ಮಾಧ್ಯಮ – EVS - KANNADA MEDIUM

ಪರಿಸರ ಅಧ್ಯಯನ –  ಇಂಗ್ಲಿಷ್ ಮಾಧ್ಯಮ– EVS - ENGLISH MEDIUM

 

CLASS 8

ಪ್ರಥಮ ಭಾಷೆ ಕನ್ನಡ - FIRST LANGUAGE KANNADA

ಪ್ರಥಮ ಭಾಷೆ ಇಂಗ್ಲಿಷ್ - FIRST LANGUAGE ENGLISH

ಪ್ರಥಮ ಭಾಷೆ ಇಂಗ್ಲಿಷ್ (ಆದರ್ಶ ವಿದ್ಯಾಲಯಗಳಿಗೆ ಮಾತ್ರ) -

FIRST LANGUAGE ENGLISH (FOR ADARSHA VIDYALAYAS ONLY)

ದ್ವಿತೀಯ ಭಾಷೆ ಕನ್ನಡ - SECOND LANGUAGE KANNADA

ದ್ವಿತೀಯ ಭಾಷೆ ಇಂಗ್ಲಿಷ್ - SECOND LANGUAGE ENGLISH

ತೃತೀಯ ಭಾಷೆ ಹಿಂದಿ - THIRD LANGUAGE HINDI

ಗಣಿತ  –  ಕನ್ನಡ ಮಾಧ್ಯಮ - MATHEMATICS  – KANNADA MEDIUM

ಗಣಿತ  –  ಇಂಗ್ಲಿಷ್ ಮಾಧ್ಯಮ - MATHEMATICS  – ENGLISH MEDIUM

ವಿಜ್ಞಾನ  –  ಕನ್ನಡ ಮಾಧ್ಯಮ  – SCIENCE - KANNADA MEDIUM

ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ - SCIENCE – ENGLISH MEDIUM

ಸಮಾಜ ವಿಜ್ಞಾನ  –  ಕನ್ನಡ ಮಾಧ್ಯಮ – SOCIAL SCIENCE - KANNADA MEDIUM

ಸಮಾಜ ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ – SOCIAL SCIENCE - ENGLISH MEDIUM

 

CLASS 9

ಪ್ರಥಮ ಭಾಷೆ ಕನ್ನಡ - FIRST LANGUAGE KANNADA

ದ್ವಿತೀಯ ಭಾಷೆ ಕನ್ನಡ – SECOND LANGUAGE KANNADA

ದ್ವಿತೀಯ ಭಾಷೆ ಇಂಗ್ಲಿಷ್ - SECOND LANGUAGE ENGLISH

ತೃತೀಯ ಭಾಷೆ ಹಿಂದಿ - THIRD LANGUAGE HINDI

ಗಣಿತ  –  ಕನ್ನಡ ಮಾಧ್ಯಮ - MATHEMATICS  – KANNADA MEDIUM

ಗಣಿತ  –  ಇಂಗ್ಲಿಷ್ ಮಾಧ್ಯಮ - MATHEMATICS  – ENGLISH MEDIUM

ವಿಜ್ಞಾನ  –  ಕನ್ನಡ ಮಾಧ್ಯಮ – SCIENCE - KANNADA MEDIUM

ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ - SCIENCE – ENGLISH MEDIUM

ಸಮಾಜ ವಿಜ್ಞಾನ  –  ಕನ್ನಡ ಮಾಧ್ಯಮ – SOCIAL SCIENCE - KANNADA MEDIUM

ಸಮಾಜ ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ  – SOCIAL SCIENCE - ENGLISH MEDIUM

Sunday 7 January 2024


ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಮುಖ್ಯವಾಗಿ ಈ ಜಿಲ್ಲೆಯಲ್ಲಿ ಕಂಡುಬರುವ ಪ್ರಮುಖ ಪ್ರವಾಸಿ ತಾಣಗಳೆಂದರೆ ಅಂಕೋಲಾ, ಬನವಾಸಿ, ಭಟ್ಕಳ, ದಾಂಡೇಲಿ, ಗೋಕರ್ಣ, ಹೊನ್ನಾವರ, ಕಾರವಾರ, ಕುಮಟಾ, ಮುರುಡೇಶ್ವರ, ಸಿದ್ಧಾಪುರ, ಶಿರಸಿ ಹಾಗೂ ಯಲ್ಲಾಪುರ.

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಅಂಕೋಲಾ:

ಅಂಕೋಲಾ ಉತ್ತರ ಕನ್ನಡ ಜಿಲ್ಲೆಯ ಒಂದು ಪುಟ್ಟ ಪಟ್ಟಣವಾಗಿದ್ದು ಅರಬ್ಬಿ ಸಮುದ್ರ ಹಾಗೂ ಕಾಳಿ ನದಿಯಿಂದ ಸುಂದರವಾಗಿ ಆವೃತವಾಗಿದ್ದು ಜಿಲ್ಲೆಯ ಪ್ರವಾಸಿ ಆಕರ್ಷಣೆಯಾಗಿದೆ. ಅಲ್ಲದೆ ಈ ಪಟ್ಟಣವು ತನ್ನದೆ ಮಾವಿನ ಹಣ್ಣಿನ ತಳಿಯಾದ 'ಇಶಾದ್' ಗೆ ಹೆಸರುವಾಸಿಯಾಗಿದ್ದು, ಗೋಡಂಬಿ ಹಣ್ಣುಗಳಿಗೂ ಸಹ ಪ್ರಸಿದ್ಧಿ ಪಡೆದಿದೆ.

ಕಡಲತೀರಗಳು

ಅಂಕೋಲಾ ಅರಬ್ಬೀ ಸಮುದ್ರದ ತೀರದಲ್ಲಿದೆ ಮತ್ತು ಅನೇಕ ಕಡಲತೀರಗಳನ್ನು ಹೊಂದಿದೆ, ಅವುಗಳೆಂದರೆ: ಬೇಲೆಕೇರಿ ಬೀಚ್, ನಾಡಿಬಾಗ್ ಬೀಚ್, ಬೆಳಂಬರ್ ಬೀಚ್, ಶೇಡಿಕುಳ್ಳಿ ಬೀಚ್, ಗಾಬಿಟ್ಕೇಣಿ ಬೀಚ್, ಹೊನ್ನೆ ಗುಡಿ ಬೀಚ್ (ಅಂಕೋಲಾದಿಂದ ಐದು ಕಿಮೀ (3.1 ಮೈಲಿ)), ಹನಿ ಬೀಚ್, ಮತ್ತು ಕೆನಿ ಬೀಚ್. [9]

ಅಂಕೋಲಾ ಬೀಚ್ 2


ಚಿತ್ರಕೃಪೆ: indiawaterportal.org

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಬಸವರಾಜದುರ್ಗ ದ್ವೀಪ:

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಈ ಗಮ್ಯ ಪ್ರವಾಸಿ ತಾಣವನ್ನು ನೋಡಬಹುದು. ಅರೇಬಿಯನ್ ಸಮುದ್ರದ ಮಧ್ಯದಲ್ಲಿ ರೂಪಗೊಂಡ ದ್ವೀಪ ಇದಾಗಿದೆ. ಈ ದ್ವೀಪದಲ್ಲಿ ಕೋಟೆಯೊಂದನ್ನು ಸಹ ನೋಡಬಹುದು. ಅಲ್ಲದೆ 16 ನೇಯ ಶ್ತಮಾನದಲ್ಲಿ ನಿರ್ಮಾಣವಾದ ದೇವಾಲಯವೊಂದು ಸಹ ಇಲ್ಲಿದ್ದು ಪ್ರತಿ ವರ್ಷ ಜನವರಿ 14 ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗ್ರಾಮದ ಬೆಸ್ತರು ಕುಟುಂಬ ಸಮೇತ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಕೃತಿಯು ವಿಕೋಪಗೊಳ್ಳದೆ ತಮ್ಮನ್ನು ಕಾಪಾಡುವಂತೆ ಪ್ರಾರ್ಥಿಸುತ್ತಾರೆ.


ಚಿತ್ರಕೃಪೆ: Unique.creator

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಮಿರ್ಜಾನ್ ಕೋಟೆ:

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿ ತೀರದಲ್ಲಿ ನೆಲೆಸಿರುವ ಮಿರ್ಜಾನ್ ಕೋಟೆ ಒಂದು ಪ್ರಮುಖ ಐತಿಹಾಸಿಕ ಕೋಟೆಯಾಗಿದೆ. ಪ್ರಸಿದ್ಧ ಕ್ಷೇತ್ರ ಗೋಕರ್ಣದಿಂದ ಸುಮಾರು 11 ಕಿ.ಮೀ ದೂರದಲ್ಲಿ ಈ ಕೋಟೆಯನ್ನು ಕಾಣಬಹುದು.

ಚಿತ್ರಕೃಪೆ: Ramnath Bhat

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಕ್ಯಾಸಲ್ ರಾಕ್:

ಕ್ಯಾಸಲ್ ರಾಕ್ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿ. ಪ್ರಸ್ತುತ ದಾಂಡೇಲಿ ಹುಲಿ ಮೀಸಲು ಪ್ರದೇಶದ ಭಾಗವಾಗಿರುವ ಈ ಹಳ್ಳಿಯು ಹಿಂದೆ 1961 ರ ವರೆಗೂ ಪೋರ್ಚುಗೀಸರ ಸುಪರ್ದಿಯಲ್ಲಿತ್ತು ಹಾಗೂ ದಾಖಲೆಗಳ ಅವಲೋಕನ ಮುಂತಾದ ಅಂತಾರಾಷ್ಟ್ರೀಯ ಪ್ರಯಾಣದ ವಿಧಿ ವಿಧಾನಗಳನ್ನು ಇಲ್ಲಿ ಅನುಸರಿಸಲಾಗುತ್ತಿತ್ತು. ಅದು ಕೂಡ ಗೋವಾ ಹಾಗೂ ಬ್ರಿಟೀಷ್ ಭಾರತದ ಪ್ರಯಾಣಿಕರ ಮಧ್ಯದಲ್ಲಿ. ಗೋವಾದ ದೂಧ್ ಸಾಗರ್ ಜಲಪಾತ ಇಲ್ಲಿಂದ ಅತಿ ಸನಿಹದಲ್ಲಿದೆ.

ಚಿತ್ರಕೃಪೆ: Purshi

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಬನವಾಸಿ:

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬನವಾಸಿಯು ತನ್ನಲ್ಲಿರುವ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಅಲ್ಲದೆ ಕರ್ನಾಟಕದ ಅತಿ ಪುರಾತನ ಪಟ್ಟಣ ಎಂಬ ಹೆಗ್ಗಳಿಕೆಗೆ ಬನವಾಸಿಯು ಪಾತ್ರವಾಗಿದೆ. ಚೀನಾ ದೇಶದ ರಾಯಭಾರಿ ಹೂಯೆನ್ ತ್ಸಾಂಗ್ ತನ್ನ ದಾಖಲೆಗಳಲ್ಲಿ ಬನವಾಸಿಯನ್ನು ಕುರಿತು ಉಲ್ಲೇಖಿಸಿದ್ದಾನೆ.

ಚಿತ್ರಕೃಪೆ: Anannya deb

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಬನವಾಸಿ:

ಅತಿ ಕಲಾತ್ಮಕತೆಯಿಂದ ಕೂಡಿದ ಬನವಾಸಿಯ ಸುಪ್ರಸಿದ್ಧ ಮಧುಕೇಶ್ವರ ದೇವಸ್ಥಾನ.

ಚಿತ್ರಕೃಪೆ: Kumarcnaik

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಸಹಸ್ರಲಿಂಗ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸಹಸ್ರಲಿಂಗವು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಶಲ್ಮಲಾ ನದಿ ತಟದಲ್ಲಿ ಕಲ್ಲುಗಳ ಮೇಲೆ ಅಸಂಖ್ಯಾತ ಶಿವಲಿಂಗಗಳನ್ನು ಕೆತ್ತಲಾಗಿದ್ದು ನೋಡುಗರಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ. ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.


ಚಿತ್ರಕೃಪೆ: Clt13

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ದಾಂಡೇಲಿ:

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲಿ ನೆಲೆಸಿರುವ ಪ್ರಸಿದ್ಧ ಪ್ರವಾಸಿ ಪಟ್ಟಣ ದಾಂಡೇಲಿ. ಇಲ್ಲಿನ ವನ್ಯಜೀವಿ ಅಭಯಾರಣ್ಯದಿಂದ ತಾಣವು ಪ್ರಖ್ಯಾತವಾಗಿದೆ.

ಚಿತ್ರಕೃಪೆ: Sowmya Kidambi

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಗೋಕರ್ಣ:

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿ ತೀರದಲ್ಲಿ ನೆಲೆಸಿರುವ ತೀರ್ಥ ಕ್ಷೇತ್ರ ಪಟ್ಟಣ ಗೋಕರ್ಣ.

ಚಿತ್ರಕೃಪೆ: Uleli

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಗೋಕರ್ಣ:

ಈ ಪಟ್ಟಣದ ಮುಖ್ಯ ದೇವಾಲಯದ ಮುಖ್ಯ ದೇವ ಶಿವನ ರೂಪನಾದ ಮಹಾಬಲೇಶ್ವರ.

ಚಿತ್ರಕೃಪೆ: Vedamurthy.j

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಗೋಕರ್ಣ:

ಅಲ್ಲದೆ ಗೋಕರ್ಣದಲ್ಲಿ ಓಂ ಬೀಚ್, ಹಾಫ್ ಮೂನ್ ಬೀಚ್ ಗಳಂತಹ ಆಕರ್ಷಕ ಕಡಲ ತೀರಗಳನ್ನು ಕಾಣಬಹುದು.

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಗೋಕರ್ಣ:

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿ.

ಚಿತ್ರಕೃಪೆ: Nvvchar

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಗೋಕರ್ಣ:

ಇಲ್ಲಿನ ಕಡಲ ತೀರಗಳಲ್ಲಿ ಒಂಟೆಗಳ ಮೇಲೆ ಕುಳಿತು ಸುತ್ತುವುದು ಕೂಡ ಒಂದು ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Andre Engels

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಹಡವಳ್ಳಿ:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ 20 ಕಿ.ಮೀ ದೂರದಲ್ಲಿರುವ ಹಡವಳ್ಳಿ ಒಂದು ಸಣ್ಣ ಹಳ್ಳಿ. ಈ ಹಳ್ಳಿಯು ಮುಖ್ಯವಾಗಿ ಪುರಾತನ ಜೈನ ಬಸದಿಗಳಿಂದಾಗಿ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಚಂದ್ರನಾಥ ಬಸದಿ ಜೊತೆಗೆ ಹಲವಾರಿ ಇತರೆ ಬಸದಿಗಳನ್ನು ಇಲ್ಲಿ ಕಾಣಬಹುದು. ಸದ್ಯ ಇವುಗಳು ಕಡೆಗಣಿಸಲ್ಪಟ್ಟಿದ್ದು ದುರದೃಷ್ಟ.

ಚಿತ್ರಕೃಪೆ: Sandesh Bhat

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಹೊನ್ನಾವರ:

ಕಾರವಾರ ಪಟ್ಟಣದಿಂದ 90 ಕಿ.ಮೀ ದೂರದಲ್ಲಿರುವ ಹೊನ್ನಾವರವು ಉತ್ತರ ಕನ್ನಡ ಜಿಲ್ಲೆಯ ಒಂದು ಚಿಕ್ಕ ಕರಾವಳಿ ಪಟ್ಟಣವಾಗಿದೆ. ಅಪಾರವಾದ ಪ್ರಕೃತಿ ಸೊಬಗಿನಿಂದ ಕೂಡಿರುವ ಈ ಪಟ್ಟಣವು ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಶರಾವತಿ ನದಿಯಿಂದ ಸುತ್ತುವರೆದಿದೆ. ಹೊನ್ನಾವರದ ಸುತ್ತಮುತ್ತಲು ಮುರುಡೇಶ್ವರ, ಇಡಗುಂಜಿ, ಅಪ್ಸರಕೊಂಡ, ಗೇರುಸೊಪ್ಪ, ಕರಿಕಣ್ಣಮ್ಮ ಹೀಗೆ ಗುರುತರವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Benjamín Preciado

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಇಡಗುಂಜಿ:

ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯು, ಇಡಗುಂಜಿ ಗಣಪನ ದೇವಾಲಯದಿಂದಾಗಿ ಅತಿ ಜನಪ್ರಿಯವಾಗಿದೆ. ಪ್ರತಿ ವರ್ಷ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಗಣಪನ ದರುಶನ ಕೋರಿ ಇಲ್ಲಿಗೆ ಆಗಮಿಸುತ್ತಾರೆ. ದಂತಕಥೆಯ ಪ್ರಕಾರ, ದ್ವಾಪರಯುಗದ ಅಂತ್ಯದ ಸಮಯದಲ್ಲಿ ಶ್ರೀ ಕೃಷ್ಣನು ತನ್ನ ಲೋಕಕ್ಕೆ ಮರಳುವ ಸಂದರ್ಭದಲ್ಲಿ ಭೂಲೋಕದಲ್ಲಿ ಹಾಹಾಕರವೆದ್ದಿತು. ದೃಷ್ಟ ಶಕ್ತಿಗಳು ಬೆಳೆಯುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಲಖಿಲ್ಯ ಮುನಿಗಳು ಹವನ ಯಜ್ಞಾದಿಗಳನ್ನು ಪ್ರಾರಂಭಿಸಿದರಾದರೂ ತೊಂದರೆಗಳು ತಪ್ಪಲಿಲ್ಲ. ನಂತರ ನಾರದ ಮುನಿಯ ಸಲಹೆ ಮೆರೆಗೆ ಗಣೇಶನನ್ನು ಕುರಿತು ಇಲ್ಲಿ ನೆಲೆಸಿ ಬರುವ ವಿಘ್ನಗಳನ್ನು ನಿವಾರಿಸಬೇಕೆಂದು ಪ್ರಾರ್ಥಿಸಿದರು.

ಆಪ್ಸರ ಕೊಂಡ 

ಇದು ಹೊನ್ನಾವರ ತಾಲೂಕಿನ ಕಾಸರಕೋಡದಲ್ಲಿದೆ. ಹೊನ್ನಾವರದಿಂದ ಸುಮಾರು ೭ ಕೀ.ಮೀ. ದೂರದಲ್ಲಿರುವ ಈ ಪ್ರದೇಶ ಪ್ರವಾಸಿಗರಿಗರನ್ನು ಆಕರ್ಷಿಸುತ್ತದೆ[೧]


ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಕೋ ಬೀಚ್​ಗೆ ಮತ್ತೆ ಅಂತರಾಷ್ಟ್ರೀಯ ಮನ್ನಣೆ!


ಹೊನ್ನಾವರದ ಕರ್ಕಿಯಲ್ಲಿರುವ ತೂಗು ಸೇತುವೆ: ...

ಚಿತ್ರಕೃಪೆ: idagunji.org

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಉಂಚಳ್ಳಿ ಜಲಪಾತ:

ಲಶಿಂಗ್ಟನ್ ಜಲಪಾತ ಎಂತಲೂ ಕರೆಯಲ್ಪಡುವ ಉಂಚಳ್ಳಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿ ಸ್ಥಿತವಿದೆ. 381 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಅಘನಾಶಿನಿ ನದಿಯಿಂದ ರೂಪಿತವಾಗಿದೆ.

ಚಿತ್ರಕೃಪೆ: Balaji Narayanan

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಕರಿಕಣ್ಣಮ್ಮ:

ಇದು ಕಾಳಿ ದೇವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಳಿ ಇದೆ. ದೇವಾಲಯವು ಬೆಟ್ಟದ ಮೇಲಿದ್ದು ಇದರ ಮೇಲಿಂದ ನೋಡಿದಾಗ ಹೊನ್ನಾವರ ಪ್ರದೇಶದ ಸೊಬಗು ಕಣ್ಣು ಕಟ್ಟುವಂತೆ ಮಾಡುತ್ತದೆ.

ಚಿತ್ರಕೃಪೆ: uttarakannada.nic.in

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಕಾಳಿ ನದಿ:

ಕಾರವಾರ ಪಟ್ಟಣದ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿದಿರುವ ಕಾಳಿ ನದಿಯು ಜಿಲ್ಲೆಯ ಜೀವ ನಾಡಿಯಾಗಿದೆ. ಜಲ ವಿದ್ಯುತ್ ಉತ್ಪಾದನೆಗೆಂದು ಹಲವಾರು ಆಣೆಕಟ್ಟುಗಳನ್ನು ಈ ನದಿಗೆ ಕಟ್ಟಲಾಗಿದ್ದು ಇದೊಂದು ಜಿಲ್ಲೆಯ ಪ್ರಮುಖ ನದಿಯಾಗಿದೆ. ಗಣೇಶಗುಡಿಯಲ್ಲಿರುವ ಸೂಪಾ ಆಣೆಕಟ್ಟು ಈ ನದಿಗೆ ಕಟ್ಟಲಾದ ಪ್ರಮುಖ ಆಣೆಕಟ್ಟಾಗಿದ್ದು ಈ ನದಿಯು ಅರಬ್ಬಿ ಸಮುದ್ರದಲ್ಲಿ ಸಮಾಗಮಗೊಳ್ಳುವ ಮುಂಚೆ ಸುಮಾರು 184 ಕಿ.ಮೀ ದೂರದವರೆಗೆ ಜಿಲ್ಲೆಯಲ್ಲಿ ಹರಿದಿದೆ.

ಚಿತ್ರಕೃಪೆ: Rane.abhijeet

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಸದಾಶಿವಗಡ:

ಇದು ಕಾರವಾರ ಪಟ್ಟಣದ ಬಳಿಯಿರುವ ಒಂದು ಕೋಟೆಯ ತಾಣವಾಗಿದ್ದು ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದೆ.

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ನಂದನಗಡ್ಡ:

ಕಾರವಾರ ತಾಲೂಕಿನಲ್ಲಿರುವ ನಂದನಗಡ್ಡ ಒಂದು ಚಿಕ್ಕ ಕರಾವಳಿ ಹಳ್ಳಿಯಾಗಿದೆ. ಇಲ್ಲಿರುವ ಜೈ ಸಂತೋಷಿ ಮಾತೆಯ ಮಂದಿರವು ಪ್ರಮುಖವಾಗಿ ಭೇಟಿ ನೀಡಬಹುದಾದ ದೇವಿಯ ದೇವಾಲಯವಾಗಿದೆ.

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಮಾಗೋಡ ಜಲಪಾತ:

ಬೆಡ್ತಿ ನದಿಯಿಂದ ರೂಪಿತವಾದ, 200 ಮೀ. ಎತ್ತರದಿಂದ ಧುಮುಕುವ ಮಾಗೋಡು ಜಲಪಾತವು ಎರಡು ಪದರುಳ್ಳ ಜಲಪಾತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಿಂದ 17 ಕಿ.ಮೀ ದೂರದಲ್ಲಿ ಸ್ಥಿತವಿದೆ.

ಬೆಡ್ತಿ ನದಿಯಿಂದ ರೂಪಿತವಾದ, 200 ಮೀ. ಎತ್ತರದಿಂದ ಧುಮುಕುವ ಮಾಗೋಡು ಜಲಪಾತವು ಎರಡು ಪದರುಳ್ಳ ಜಲಪಾತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಿಂದ 17 ಕಿ.ಮೀ ದೂರದಲ್ಲಿ ಸ್ಥಿತವಿದೆ.

ಚಿತ್ರಕೃಪೆ: Prad.gk

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ನೇತ್ರಾಣಿ ದ್ವೀಪ:

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಿಂದ 19 ಕಿ.ಮೀ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ರೂಪಿತವಾದ ದ್ವೀಪ ತಾಣ ಇದಾಗಿದೆ. ಇದರ ಸುತ್ತಮುತ್ತಲು ನೀರಿನಾಳದಲ್ಲಿ ಹವಳದ ದಿಬ್ಬಗಳನ್ನು ಕಾಣಬಹುದಾಗಿದ್ದು ಬಣ್ಣ ಬಣ್ಣದ ವೈವಿಧ್ಯಮಯ ಮೀನುಗಳನ್ನು ಇಲ್ಲಿ ಕಾಣಬಹುದಾಗಿದೆ. ಸ್ಕೂಬಾ ಡೈವಿಂಗ್ ನಂತಹ ಚಟುವಟಿಕೆಗಳನ್ನು ನಡೆಸಲು ಇದು ಆದರ್ಶಪ್ರಾಯವಾಗಿದೆ.

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಸಾತೊಡ್ಡಿ ಜಲಪಾತ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಇರುವ ಕಲ್ಲರಮರನೆ ಘಾಟ್ ನಲ್ಲಿ ಈ ಜಲಪಾತವಿರುವುದನ್ನು ಕಾಣಬಹುದು. ಸುಮಾರು 50 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತದ ನೀರು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಕೊಡಸಳ್ಳಿ ಜಲಾಶಯದ ಹಿನ್ನೀರಿನಲ್ಲಿ ಸಮಾಗಮಗೊಳ್ಳುತ್ತದೆ.

ಚಿತ್ರಕೃಪೆ: Hema Priyadharshini

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಕುಮಟಾ:

ಕುಮಟಾ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಪಟ್ಟಣ ಹಾಗೂ ಕೊಂಕಣ ರೈಲು ಮಾರ್ಗದ ಒಂದು ಪ್ರಮುಖ ನಿಲುಗಡೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಸಿರುವ ಈ ಪಟ್ಟಣವು ಇನ್ನೊಂದೆಡೆಯಿಂದ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದ್ದು ಪ್ರವಾಸಿ ದೃಷ್ಟಿಯಿಂದ ಜನಪ್ರಿಯವಾದ ಸ್ಥಳವಾಗಿದೆ.

ಚಿತ್ರಕೃಪೆ: Kamat

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಮುರುಡೇಶ್ವರ:

ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ಪ್ರವಾಸಿ ಕ್ಷೇತ್ರವಾಗಿದೆ. ಅರಬ್ಬಿ ಸಮುದ್ರಕ್ಕೆ ಏದುರಾಭಿಮುಖ ಮಾಡಿ ನೆಲೆಸಿರುವ ಈ ಕ್ಷೇತ್ರಕ್ಕೆ ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Yogesa

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಮುರುಡೇಶ್ವರ:

ಅಲ್ಲದೆ ಇಲ್ಲಿ ನಿರ್ಮಿಸಲಾಗಿರುವ ಶಿವನ ಬೃಹತ್ ಪ್ರತಿಮೆಯು ನೋಡಲು ಅತಿ ಚೆಂದವಾಗಿದ್ದು ಜಗತ್ತಿನಲ್ಲೆ ಎರಡನೇಯ ಅತಿ ಎತ್ತರದ ಶಿವನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಚಿತ್ರಕೃಪೆ: Lucky vivs

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಯಾಣ:

ಚಾರಣಪ್ರಿಯ ಪ್ರವಾಸಿಗರಲ್ಲಿ ಅತಿ ಜನಪ್ರಿಯವಾದ ಸ್ಥಳ ಯಾಣ ಎಂಬ ಹಳ್ಳಿ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಹಳ್ಳಿಯು ತನ್ನಲ್ಲಿನ ಉಲ್ಕೆಯಿಂದ ವಿಶಿಷ್ಟವಾಗಿ ರಚಿತವಾದ ಭೈರವೇಶ್ವರ ಹಾಗೂ ಮೋಹಿನಿ ಶಿಖರಗಳಿಗಾಗಿ ಬಹು ಪ್ರಖ್ಯಾತವಾಗಿದೆ.

ಯಲ್ಲಾಪುರ

 ಮಾಗೋಡು ಜಲಪಾತ

ಯಲ್ಲಾಪುರದಿಂದ ನೈಋತ್ಯದಲ್ಲಿ ೨೦ ಕಿಲೋಮೀಟರ್ ದೂರದಲ್ಲಿದೆ. ಬೇಡ್ತಿ ನದಿ (ಗಂಗಾವಳಿ) ಯು ಸುಮಾರು ೨೦೦ ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುತ್ತದೆ.


ಮಾಗೋಡು ಜಲಪಾತ

ಈ ಜಲಪಾತದ ಮೂಲ ಬೇಡ್ತಿ ನದಿ.ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.ಯಲ್ಲಾಪುರದಿಂದ ೨೦ ಕಿ.ಮೀ ದೂರ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕು.

ಕಾರವಾರ-ಹುಬ್ಬಳ್ಳಿ ಮಾರ್ಗದಲ್ಲಿ ಯಲ್ಲಾಪುರಕ್ಕೆ ಪಶ್ಚಿಮದಲ್ಲಿ ಸುಮಾರು 3 ಕಿ.ಮೀ. ದೂರದಲ್ಲಿ ಕವಲೊಡೆಯುವುದು. ಈ ಕವಲಿನ ಎಡಮಾರ್ಗದಲ್ಲಿ ಸುಮಾರು 13ಕಿಮೀ ದೂರದಲ್ಲಿ ಮಾಗೋಡು ಗ್ರಾಮವಿದೆ. ಇದರ ಬಳಿಯೇ ಜಲಪಾತವಿದೆ.

ಸಾತೋಡಿ ಜಲಪಾತ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಇದು ಸಿರ್ಸಿಯಿಂದ ೭೩ ಕಿಲೋಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಸುಮಾರು ೩೨ ಕಿ.ಮೀ. ದೂರದಲ್ಲಿದೆ. ಈ ಜಲಪಾತವು ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವುದಲ್ಲದೆ ದಟ್ಟ ಕಾನನದ ನಡುವೆ ಸೇರಿಕೊಂಡಿದೆ. ಹಲವಾರು ಝರಿಗಳಿಂದ ಸೇರಿದ ನೀರು ಸುಮಾರು ೧೫ ಮೀಟರ್ ಎತ್ತರದಿಂದ ಧುಮುಕುತ್ತದೆ. ನಂತರ ಕೊಡಸಳ್ಳಿ ಜಲಾಶಯದ ಮೂಲಕ ಕಾಳಿ ನದಿಯನ್ನು ಸೇರುತ್ತದೆ. ಯಲ್ಲಾಪುರದಿಂದ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ೫ ಕಿ.ಮೀ. ನಷ್ಟು ಮುಂದೆ ಸಾಗಿ ಎಡಕ್ಕೆ (ಕಲಘಟಗಿ, ಹುಬ್ಬಳ್ಳಿಯಿಂದ ಬರುವವರು ಬಲಕ್ಕೆ ತಿರುಗಬೇಕು) ತಿರುಗಿ ೨೫ ಕಿ.ಮೀ. ಸಾಗಿದರೆ ಸಾತೋಡಿ ಜಲಪಾತದ ಪ್ರದೇಶವು ಕಾಣಸಿಗುತ್ತದೆ. ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆದು(ಕೆಲವೊಮ್ಮೆ ಪಡೆಯದೆಯೂ ತೆರಳಬಹುದು) ೨ ಕಿ.ಮೀ. ನಷ್ಟು ಕಚ್ಚಾರಸ್ತೆಯಲ್ಲಿ ನಡೆದು ಸಾಗಿದರೆ ಜಲಪಾತದ ಸೌಂದರ್ಯವು ಕಾಣುತ್ತದೆ.

ಸಾತೋಡಿ ಜಲಪಾತದ ನೋಟ


ಕೊಲ್ಲೂರು ಕೊಡಚಾದ್ರಿ ಬೆಟ್ಟ

ಮೂಕಾಂಬಿಕಾ ವನ್ಯಜೀವಿ ಧಾಮ
ಕೊಲ್ಲೂರಿನ ಮುಕಾಂಬಿಕೆ 
ಕೊಲ್ಲೂರಿನಲ್ಲಿ ಮಾಹಿಮಾನ್ವಿತವಾದ ತಾಯಿ ಮೂಕಾಂಬಿಕೆ ನೆಲೆಸಿದ್ದಾಳೆ. ಇದೊಂದು ಕೊಲ್ಲೂರಿನ ಪ್ರಖ್ಯಾತವಾದ ಪುಣ್ಯ ಕ್ಷೇತ್ರವಾಗಿದೆ. ಈ ದೇವಾಲಯಕ್ಕೆ ಕರ್ನಾಟಕದಿಂದಲೇ ಅಲ್ಲದೇ ಕೇರಳ ರಾಜ್ಯದಿಂದಲೂ ಭಕ್ತರು ಭೇಟಿ ನೀಡುತ್ತಾರೆ
ಕೊಲ್ಲೂರಿನಿಂದ ಪಶ್ಚಿಮಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ ಬೈಂದೂರು ಎಂಬ ಸುಂದರವಾದ ಕರಾವಳಿ ಪಟ್ಟಣವಿದೆ. ಇಲ್ಲಿ ಸೋಮೇಶ್ವರ ಕಡಲತೀರ, ಕೋಸಳ್ಳಿ ಜಲಪಾತಗಳನ್ನು ಕಾಣಬಹುದಾಗಿದೆ.


ಕುಂದಾಪುರ

ಮರವಂತೆ ಬೀಚ್ ಕುಂದಾಪುರದಿಂದ 12 ಕಿ.ಮೀ ದೂರದಲ್ಲಿದೆ, ಇದು ಉಡುಪಿಗೆ ಉತ್ತರಕ್ಕೆ 50 ಕಿ.ಮೀ ಮತ್ತು ಮಂಗಳೂರಿನಿಂದ 105 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಪ್ರತಿಯೊಂದು ಪ್ರವಾಸಿಗರಿಗೆ ನೋಡಲೇಬೇಕಾದ ಒಂದು ಸುಂದರ ಬೀಚ್ ಇದು.

ಅರಬ್ಬೀ ಸಮುದ್ರ ದಂಡೆ
ರಾಷ್ಟ್ರೀಯ ಹೆದ್ದಾರಿ (NH17) ತೀರದಿಂದ 100 ಮೀಟರ್ ದೂರದಲ್ಲಿ ಹಾದುಹೋಗುತ್ತದೆ. ಒಂದು ಕಿಲೋಮೀಟರ್ ವಿಸ್ತಾರಕ್ಕೆ ಕಡಲತೀರದ ಉದ್ದಕ್ಕೂ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ, ನೀವು ಒಂದು ಬದಿಯಲ್ಲಿ ಅರೇಬಿಯನ್ ಸಮುದ್ರವನ್ನು ನೋಡಬಹುದು ಮತ್ತು ಕೊಡಚಾದ್ರಿ ಬೆಟ್ಟಗಳು ಮತ್ತೊಂದರಲ್ಲಿ ಸೌಪರ್ಣಿಕಾ ನದಿಯ ಹಿನ್ನೆಲೆಯನ್ನು ರೂಪಿಸುತ್ತವೆ. 
ಕಡಲ ತೀರ ಮರವಂತೆ
ಮರವಂತೆ ಬೀಚ್ 
ಜೋಗ ಪಾಲ್ಸ್

ಕೆಮ್ಮಣ್ಣುಗುಂಡಿ

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು