ಸಾಮಾನ್ಯ ವಿಜ್ಞಾನ
ವಿಷಯ :- ಸಾಮಾನ್ಯ ವಿಜ್ಞಾನ.
ದಿನಾಂಕ :- 30/12/15.
ಸಂಗ್ರಹ :- 9 ನೇ ತರಗತಿ ವಿಜ್ಞಾನ.
1) ಪ್ರಪಂಚದ ಮೊದಲ ಪ್ರನಾಳಶಿಶು ಯಾವುದು?
* ಲೂಯಿಸ್ ಬ್ರೌನ್.
2) ಭಾರತದ ಮೊದಲ ಪ್ರನಾಳಶಿಶು ಯಾವುದು?
* ದುರ್ಗಾ (ಕನುಪ್ರಿಯ ಅಗರ್ ವಾಲ್).
3) ಐ ವಿ ಎಫ಼್ ನಿಂದ ದುರ್ಗಾಳನ್ನು ಸೃಷ್ಟಿಸಿದವರು ಯಾರು?
* ಡಾ. ಸುಭಾಷ್ ಮುಖ್ಯೋಪಾಧ್ಯಾಯ.
4) ಆನೆಯ ಗರ್ಭಾವಧಿ ದಿನಗಳು ಎಷ್ಟು?
* 616 ದಿನಗಳು.
5) ಗರ್ಭಾವಧಿ ಎಂದರೇನು?
* ಬಸಿರಿನ ಗರ್ಭಾವಸ್ಥೆಯ ಅವಧಿ.
6) ಅಂಡವು --- ರಿಂದ --- ಗಂಟೆಗಳವರೆಗೆ ಜೀವಿಸುತ್ತದೆ?
* 24 ರಿಂದ 48 ಗಂಟೆಗಳವರೆಗೆ
7) ನಿಷೇಚನದ ಫಲವನ್ನು ---- ಎನ್ನುತ್ತಾರೆ?
* ಯುಗ್ಮ.
8) ಪ್ರೌಢ ಸ್ತ್ರೀಯರಲ್ಲಿ ನಿಯತವಾಗಿ ಸಂತಾನೋತ್ಪತ್ತಿಯ ಚಕ್ರವು ಎಷ್ಟು ದಿನಗಳವರೆಗೂ ವ್ಯಾಪಿಸಿದೆ?
* 28.
9) ಮಾನವನ ಭ್ರೂಣದ ಅವಧಿ ತಿಳಿಸಿರಿ?
* ಸುಮಾರು 38 ರಿಂದ 40 ವಾರಗಳು ಅಥವಾ 280 ದಿನಗಳು.
10) ಯಾವ ರಾಜ್ಯದಲ್ಲಿ ಅತಿಹೆಚ್ಚು ಹೆಣ್ಣು ಭ್ರೂಣ ಹತ್ಯೆಯಾಗಿವೆ?
* ಹರಿಯಾಣ.
11) ಅವಳಿಗಳೆಂದರೆ -----.
* ಎರಡು ಶಿಶುಗಳು ಒಬ್ಬಳೇ ತಾಯಿಯಿಂದ , ಒಂದೇ ಗರ್ಭಧಾರಣೆಯಲ್ಲಿ ಒಟ್ಟಿಗೇ ಜನಿಸುವುದು.
12) ಭಾರತದ ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಯಾರು?
* ಡಾ.ಸುಭಾಷ್ ಮುಖ್ಯೋಪಾಧ್ಯಾಯ.
13) ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 28.
14) ಪ್ರತಿ ನಿಮಿಷ ಹೃದಯವು ಸುಮಾರು ಎಷ್ಟು ಲೀಟರ್ ನಷ್ಟು ರಕ್ತವನ್ನು ಪಂಪ್ ಮಾಡುತ್ತದೆ?
* 5 ಲೀಟರ್ ನಷ್ಟು.
15) ಮಾನವನಲ್ಲಿ ಸುಮಾರು --- ರಿಂದ --- ಲೀಟರ್ ರಕ್ತ ಇದೆ?
* 4.5 ರಿಂದ 5.5 ಲೀಟರ್.
16) ಒಬ್ಬ ಆರೋಗ್ಯವಂತ ವ್ಯಕ್ತಿಯ ರಕ್ತದ ಒತ್ತಡ ಎಷ್ಟು?
* 120/80 ಎಮ್ ಎಮ್ ಎಚ್ ಜಿ.
17) ಬೆಳಕು ಒಂದು ನಿರ್ದಿಷ್ಟವಾದ ದಿಕ್ಕಿನಲ್ಲಿ ಚಲಿಸುವದನ್ನು ----- ಎನ್ನುತ್ತೇವೆ?
* ಬೆಳಕಿನ ಕಿರಣ.
18) ಸಿಮೆಂಟ್ ಎಂಬ ಪದವು ಯಾವ ಮೂಲದಿಂದ ಬಂದಿದೆ?
* ರೋಮನ್.
19) ಕೆಪ್ಲರ್ ನ ಮೊದಲ ನಿಯಮ ತಿಳಿಸಿ?
* ಸೂರ್ಯನು ಎಲಿಪ್ಸಿಯಾದ ಕೇಂದ್ರವಾಗಿರದೇ ಅದೇ ನೇರದಲ್ಲಿರುವ ಒಂದು ಬಿಂದುವಾಗಿದೆ.
20) ವಿಜ್ಞಾನದ ಪಿತಾಮಹ ಯಾರು?
* ರೋಜರ್ ಬೇಕನ್.
By RBS
21) ಜೀವಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.
22) ಪ್ಲಾಟಿಪಸ್ ----- ಸೇರಿದ ಪ್ರಾಣಿ?
* ಪೂರ್ವ ಆಸ್ಟ್ರೇಲಿಯಕ್ಕೆ.
23) ಎಕಿಡ್ನಾವನ್ನು --- ಎಂದು ಸಾಮಾನ್ಯವಾಗಿ ಕರೆಯುತ್ತಾರೆ?
* ಮುಳ್ಳಿನ ಇರುವೆ ಬಾಕ.
24) ಪ್ರೋಟೊಥೀರಿಯ ಎಂಬುದು -----.
* ಸಸ್ತನಿಗಳ ಒಂದು ಉಪವರ್ಗ.
25) ಪುಪ್ಪಸ ಮೀನುಗಳು ಯಾವ ಗುಂಪಿಗೆ ಸೇರಿದವು?
* ಡಿಪ್ ನಾಯ್.
26) ಶಿಲೀಕರಣವೆಂದರೆ ------.
* ಕಲ್ಲಾಗಿ ಬದಲಾವಣೆಯಾಗುವುದು.
27) ಭ್ರೂಣಶಾಸ್ತ್ರ ಎಂದರೇನು?
* ಒಂದು ಪ್ರಾಣಿಯ ಬೆಳವಣಿಗೆಯನ್ನು ಅಭ್ಯಾಸಿಸುವ ಜೀವಶಾಸ್ತ್ರದ ಒಂದು ಶಾಖೆ.
28) ಎಲೆಕ್ಟ್ರಿಕಾ ಎಂಬ ಪದವನ್ನು ಹುಟ್ಟು ಹಾಕಿದವನು ಯಾರು?
* ಡಾ.ವಿಲಿಯಂ ಗಿಲ್ ಬರ್ಟ್ ( 1600 ರಲ್ಲಿ)
29) ರಣಥಂಭೋರ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
30) ಬಿ ಆರ್ ಹಿಲ್ಸ್ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
* ಕರ್ನಾಟಕ.
31) ಬಿಳಿ ಹುಲಿ ಕಂಡು ಬರುವ ಒರಿಸ್ಸಾದ ರಾಷ್ಟ್ರೀಯ ಉದ್ಯಾನವನ ಯಾವುದು?
* ನಂದನ್-ಕಾನನ್.
32) ಹಸಿರು ಸಸ್ಯಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?
* ಸಸ್ಯ.
33) ಡಯಾಟಮ್ ಮತ್ತು ಪ್ರೋಟೋಜೋವ ಯಾವ ಸಾಮ್ರಾಜ್ಯಕ್ಕೆ ಸೇರಿವೆ?
* ಪ್ರೋಟಿಸ್ಟಾ.
34) ಪ್ರಾಣಿಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?
* ಪ್ರಾಣಿ.
35) ಪ್ರಥಮವಾಗಿ ದೂರದರ್ಶಕದ ಮಾದರಿ ತಯಾರಿಸಿದವನು ಯಾರು?
* ಜಾನ್ ಲಿಪ್ಪರ್ ಷೇ (1608).
36) 1609 ರಲ್ಲಿ ದೂರದಲ್ಲಿರುವ ಆಕಾಶ ಕಾಯಗಳನ್ನು ನೋಡಲು ದೂರದರ್ಶಕವನ್ನು ರಚಿಸಿದವನು ಯಾರು?
* ಗೆಲಿಲಿಯೋ.
37) ಕಡಿಮೆ ಸಂಗಮ ದೂರದ ಮಸೂರವನ್ನು ----- ಎನ್ನುವರು?
* ವಸ್ತು ಮಸೂರ.
38) ಹೆಚ್ಚು ಸಂಗಮ ದೂರದ ಮಸೂರವನ್ನು ----- ಎನ್ನುವರು?
* ನೇತ್ರ ಮಸೂರ.
39) ಆಧುನಿಕ ಗಣಕಯಂತ್ರದ ಪಿತಾಮಹ ಯಾರು?
* ಚಾಲ್ಸ್ ಬ್ಯಾಬೇಜ್.
40) ಸಿ ಪಿ ಯು ವಿವರಿಸಿರಿ?
* ಸೆಂಟ್ರಲ್ ಪ್ರೋಸಸಿಂಗ್ ಯುನಿಟ್.
41) ಡಿ ಟಿ ಪಿ ವಿವರಿಸಿರಿ?
* ಡೆಸ್ಕ್ ಟಾಪ್ ಪಬ್ಲಿಸಿಂಗ್.