ರಾಜೀವ್ ಗಾಂಧಿ
ಭಾರತದ ಮಾಜಿ ಪ್ರಧಾನ ಮಂತ್ರಿ
ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ.
ರಾಜೀವ್ ಗಾಂಧಿ राजीव गांधी | |
---|---|
೬ನೆಯ ಭಾರತದ ಪ್ರಧಾನ ಮಂತ್ರಿ | |
ಅಧಿಕಾರ ಅವಧಿ ೩೧ ಅಕ್ಟೊಬರ್ ೧೯೮೪ – ೨ ಡಿಸೆಂಬರ್ ೧೯೮೯ | |
ರಾಷ್ಟ್ರಪತಿ | ಜೈಲ್ ಸಿಂಗ್ ರಾಮಸ್ವಾಮಿ ವೆಂಕಟರಾಮನ್ |
ಪೂರ್ವಾಧಿಕಾರಿ | ಇಂದಿರಾ ಗಾಂಧಿ |
ಉತ್ತರಾಧಿಕಾರಿ | ವಿಶ್ವನಾಥ ಪ್ರತಾಪ ಸಿಂಗ್ |
ವಿದೇಶಾಂಗ ಸಚಿವ | |
ಅಧಿಕಾರ ಅವಧಿ ೨೫ ಜುಲೈ ೧೯೮೭ – ೨೫ ಜೂನ್ ೧೯೮೮ | |
ಪೂರ್ವಾಧಿಕಾರಿ | ನಾರಾಯಣ ದತ್ತ ತಿವಾರಿ |
ಉತ್ತರಾಧಿಕಾರಿ | ನರಸಿಂಹ ರಾವ್ |
ಅಧಿಕಾರ ಅವಧಿ ೩೧ ಅಕ್ಟೋಬರ್ ೧೯೮೪ – ೨೫ ಸೆಪ್ಟೆಂಬರ್ ೧೯೮೫ | |
ಪೂರ್ವಾಧಿಕಾರಿ | ಇಂದಿರಾ ಗಾಂಧಿ |
ಉತ್ತರಾಧಿಕಾರಿ | ಬಲಿರಾಂ ಭಗತ್ |
ಹಣಕಾಸು ಸಚಿವ | |
ಅಧಿಕಾರ ಅವಧಿ ೨೪ ಜನವರಿ ೧೯೮೭ – ೨೫ ಜುಲೈ ೧೯೮೭ | |
ಪೂರ್ವಾಧಿಕಾರಿ | ವಿಶ್ವನಾಥ ಪ್ರತಾಪ ಸಿಂಗ್ |
ಉತ್ತರಾಧಿಕಾರಿ | ನಾರಾಯಣ ದತ್ತ ತಿವಾರಿ |
ರಕ್ಷಣಾ ಸಚಿವ | |
ಅಧಿಕಾರ ಅವಧಿ ೨೫ ಸೆಪ್ಟೆಂಬರ್ ೧೯೮೫ – ೨೪ ಜನವರಿ ೧೯೮೭ | |
ಪೂರ್ವಾಧಿಕಾರಿ | ನರಸಿಂಹ ರಾವ್ |
ಉತ್ತರಾಧಿಕಾರಿ | ವಿಶ್ವನಾಥ ಪ್ರತಾಪ ಸಿಂಗ್ |
ವೈಯಕ್ತಿಕ ಮಾಹಿತಿ | |
ಜನನ | ೨೦ ಆಗಸ್ಟ್ ೧೯೪೪ ಮುಂಬಯಿ, British India |
ಮರಣ | ೨೧ ಮೇ ೧೯೯೧ (aged ೪೬) ಶ್ರಿಪೆರುಂಬುದೂರ್,ಭಾರತ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಸೊನಿಯಾ ಗಾಂಧಿ |
ಮಕ್ಕಳು | ರಾಹುಲ್ ಗಾಂಧಿ ಪ್ರಿಯಾಂಕ |
ಅಭ್ಯಸಿಸಿದ ವಿದ್ಯಾಪೀಠ | ಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್ ಇಂಪೀರಿಯಲ್ ಕಾಲೇಜು,ಲಂಡನ್ |
ಧರ್ಮ | ಹಿಂದೂ |
ಸಹಿ | ಚಿತ್ರ:Rajiv Gandhi Signature.svg |
- ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು.
- ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು.
- ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು.
ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು.