ಪ್ರಮುಖ ಸಂಘಟನೆಗಳ ಸ್ಥಾಪಕರು
━━━━━━━━━━━━━━━━━━━━
✴ಬ್ರಹ್ಮ ಸಮಾಜ✴
━━━━✰✰✰━━━━
●ಸ್ಥಾಪಕ:-ರಾಜಾ ರಾಮ್ ಮೋಹನ್ ರಾಯ್

●ಸ್ಥಾಪನೆಯಾದ ವರ್ಷ:-1828

●1814 ರಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು

●1819 ರಲ್ಲಿ ಆತ್ಮೀಯ ಸಭಾ ಸ್ಥಗಿತವಾಯಿತು ನಂತರ 1828 ರಲ್ಲಿ ಬ್ರಹ್ಮ ಸಭಾ ಸ್ಥಾಪಿಸಿದರು

●1829ರಲ್ಲಿ ಬ್ರಹ್ಮ ಸಮಾಜ ಎಂದು ಮರು ನಾಮಕರಣಗೊಂಡಿತು

●ಸತಿ ಪದ್ದತಿ, ಜಾತಿ ಪದ್ದತಿ‌, ಮೂರ್ತಿ ಪೂಜೆ, ಬಹುಪತ್ನಿತ್ವ, ಬಾಲ್ಯ ವಿವಾಹ ಹಾಗೂ ಎಲ್ಲ ತರಹದ ಮೂಢನಂಬಿಕೆಗಳನ್ನು ಬ್ರಹ್ಮ ಸಮಾಜ ವಿರೋಧಿಸಿತು

●ಸತಿ ಪದ್ದತಿಯನ್ನು ನಿರ್ಮೂಲಗೊಳಿಸಲು ಬ್ರಿಟಿಷ್ ಸರ್ಕಾರವನ್ನು ಕೋರಿದರು. ಸತಿ ಪದ್ದತಿಯ ವಿರುದ್ದದ ರಾಜಾ ರಾಮ್ ಮೋಹನ್ ರಾಯರ ಹೋರಾಟದ ಫಲವಾಗಿ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಸತಿ ಪದ್ದತಿಯು ಕಾನೂನು ಬಾಹಿರ ಎಂದು ಘೋಷಿಸಿದನು

●ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

●ಸಂವಾದ ಕೌಮುದಿ ಪತ್ರಿಕೆ ಆರಂಬಿಸಿ ಅದರ ಮೂಲಕ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು

●ಇವರು ಇಂಗ್ಲೀಷ್ ಶಿಕ್ಷಣವನ್ನು ಪ್ರತಿಪಾದಿಸಿದರು

●ವೇದಾಂತ ಕಾಲೇಜನ್ನು ಸ್ಥಾಪಿಸಿದರು
━━━━━━━━━━━━━━━━━━━━
✴ಸತ್ಯಶೋಧಕ ಸಮಾಜ✴
  ━━━━✰✰✰━━━━
●ಸ್ಥಾಪಕ:-ಮಹಾತ್ಮ ಜ್ಯೋತಿಬಾ ಪುಲೆ

●ಸ್ಥಾಪನೆಯಾದ ವರ್ಷ:-1873

●ಮಹಾರಾಷ್ರದಲ್ಲಿ ಆರಂಭವಾದ ಬ್ರಾಹ್ಮನೇತರ ಚಳುವಳಿ

●ಅಸ್ಪ್ರಷ್ಯ ಅನಾಥರಿಗಾಗಿ, ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು

● ಪುರೋಹಿತಶಾಹಿಯನ್ನು ಖಂಡಿಸಿದರು

●ಗುಲಾಮಗಿರಿ ಎಂಬ ಕೃತಿ ರಚಿಸಿದರು

●ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಪ್ರಾರಂಬಿಸಿದರು

●1863 ರಲ್ಲಿ ಬಾಲ ವಿಧವೆಯರ ಉದ್ಧಾರಕ್ಕಾಗಿ ಪುನರ್ ವಸತಿ ಕೇಂದ್ರ ತೆರೆದರು

●ಪುಲೆಯವರು ಅಂಬೇಡ್ಕರ್ ಅವರ ತಾತ್ವಿಕ ಗುರುವಾಗಿದ್ದರು
━━━━━━━━━━━━━━━━━━━━
✴ಪ್ರಾರ್ಥನಾ ಸಮಾಜ✴
  ━━━━✰✰✰━━━━
●ಸ್ಥಾಪಕ:- ಆತ್ಮರಾಮ್ ಪಾಂಡುರಂಗ

●ಸ್ಥಾಪನೆಯಾದ ವರ್ಷ:-1867

●ಇವರು ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

●ನಿರ್ಗತಿಕರಿಗೆ ಮತ್ತು ಅನಾಥರಿಗೆ ಆಶ್ರಮಗಳನ್ನು ಸ್ಥಾಪಿಸಿದರು

●ವಿಧವೆಯರ ಉದ್ಧಾರಕ್ಕಾಗಿ ಶಾಲೆಗಳನ್ನು ತೆರೆದರು
━━━━━━━━━━━━━━━━━━━━
✴ಆರ್ಯ ಸಮಾಜ✴
━━━━✰✰✰━━━━
●ಸ್ಥಾಪಕ:-ದಯಾನಂದ್ ಸರಸ್ವತಿ

●ಸ್ಥಾಪನೆಯಾದ ವರ್ಷ:-1875

●ಇವರ ಮೊದಲ ಹೆಸರು ಮೂಲಶಂಕರ 

●ವೇದಗಳಿಗೆ ಹಿಂದಿರುಗಿ ಎಂಬುದು ಇವರ ಕರೆಯಾಗಿತ್ತು

●ಮೂರ್ತಿ ಪೂಜೆ, ಅಸ್ಪ್ರಶ್ಯತೆ, ಬಾಲ್ಯ ವಿವಾಹ, ಜಾತಿ ಪದ್ದತಿಗಳನ್ನು ಖಂಡಿಸಿದರು

●ಅಂತರ್ಜಾತಿ ವಿವಾಹ ಹಾಗೂ ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

●ಏಕ ದೇವತಾರಾಧನೆಯನ್ನು ಪ್ರತಿಪಾದಿಸಿದರು

●ಸತ್ಯಾರ್ಥ ಪ್ರಕಾಶ ಎಂಬ ಕ್ರತಿ ರಚಿಸಿದರು

●ಆರ್ಯ ಸಮಾಜದ ಸಮಾಜದ ನಾಯಕರಾದ ಲಾಲಾ ಹಂಸರಾಜ್ ಅವರು ಲಾಹೋರ್ ರಲ್ಲಿ -ದಯಾನಂದ್ ಆಂಗ್ಲೋ ವೇದಿಕ್ ಶಾಲೆಯನ್ನು ಪ್ರಾರಂಭಿಸಿದರು(1886).
ಮುಂದುವರೆಯುವುದು........
━━━━━━━━━━━━━━━━━━━━━━━━━━━

ಸಂಗ್ರಹ ✍️ T. A. ಚಂದ್ರಶೇಖರ