ಹಾವೇರಿ ಜಿಲ್ಲೆ ಪರಿಚಯ ಏಲಕ್ಕಿ ನಾಡು, ಸರ್ವಜ್ಞನ ಬೀಡು, ಕನಕರ ನೆಚ್ಚಿನ ಊರು, ಬ್ಯಾಡಗಿ ಮೆಣಸಿನಕಾಯಿ ಸೀಮೆ, ವರದಾ ನದಿ ತಾಣ, ಅಪ್ಪಟ ರೈತಾಪಿ ಜನರ ಕರ್ಮಭೂಮಿ ಹಾವೇರಿ. ಧಾರವಾಡವನ್ನು 24.08.1997ರಲ್ಲಿ ವಿಭಜಿಸಿ ಹಾವೇರಿ ಜಿಲ್ಲೆಯನ್ನು ರಚಿಸಲಾಯಿತು. ಹಾವೇರಿ ಜಿಲ್ಲೆಯು ಏಳು ತಾಲೂಕುಗಳನ್ನು ಹೊಂದಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯನ್ನು ಹೊಂದಿದೆ.
ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು, ಶಿಗ್ಗಾಂವ, ಬ್ಯಾಡಗಿ, ಹಾನಗಲ್ ಮತ್ತು ಸವಣೂರು ತಾಲೂಕುಗಳು ಒಂದೊಂದು ಕಾರಣಕ್ಕೆ ಜನರಿಗೆ ನೆನಪಾಗುತ್ತದೆ. ವಾರ್ಷಿಕವಾಗಿ ಸರಾಸರಿ 752.88 ಮಿ.ಮೀ. ಮಳೆ ಕಾಣುವ ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ - ಜೋಳ, ಹತ್ತಿ, ಮೆಣಸಿನಕಾಯಿ, ಭತ್ತ, ಕಬ್ಬು, ಗೋವಿನಜೋಳ, ಎಣ್ಣೆ ಬೀಜಗಳು ಹಾಗೂ ದ್ವಿದಳ ಧಾನ್ಯಗಳು.
ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಾವೇರಿಯಲ್ಲಿ ನಡೆದ ಗೋಲಿಬಾರ್ ನಲ್ಲಿ ರೈತನೊಬ್ಬ ಸಾವನ್ನಪ್ಪಿದ್ದು, ನಂತರ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟ ಮೇಲೆ ಪ್ರಾಯಶ್ಚಿತಕ್ಕಾಗಿ ಹಾವೇರಿಯಲ್ಲೇ ನೂತನ ಪ್ರಾದೇಶಿಕ ಪಕ್ಷ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದ್ದು ವಿಶೇಷ.
ಪ್ರವಾಸಿ ತಾಣಗಳು: ಕೆಂಪು ಮೆಣಸಿನ ಕಾಯಿಗೆ ಪ್ರಸಿದ್ಧವಾದ ಬ್ಯಾಡಗಿ, ಗಾನ ವಿಶಾರದೆ ಗಂಗೂಬಾಯಿ ಅವರ ಹಾನಗಲ್ಲು, ಶಿಶುನಾಳ ಷರೀಫರ ಜನ್ಮಭೂಮಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮ (ಈ ಮುಂಚೆ ಧಾರವಾಡಜಿಲ್ಲೆಯಲ್ಲಿತ್ತು) 'ರಾಷ್ಟ್ರಕೂಟ', 'ಕಲ್ಯಾಣದ ಚಾಲುಕ್ಯ' ಹಾಗೂ 'ವಿಜಯನಗರದ ಅರಸರ ಶಾಸನಗಳನ್ನು ಹೊಂದಿರುವ ಬನವಾಸಿ ಭಾಗವಾಗಿದ್ದ ಹಿರೇಕೆರೂರು,ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಪ್ರಮುಖ ವ್ಯಾಪಾರ ಕೇಂದ್ರವಾದ ರಾಣೇಬೆನ್ನೂರು,ಅತ್ಯದ್ಭುತ ತ್ರಿವಳಿ ಮರಗಳನ್ನು ಹೊಂದಿರುವ, ಮಾಧ್ವರ ಶ್ರೀ ಕ್ಷೇತ್ರ ಸವಣೂರು ಖಾರಕ್ಕೂ, ತಾಂಬೂಲಕ್ಕೂ ಪ್ರಸಿದ್ಧ. ಹಿರೇಕೆರೂರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಮಾಸೂರು ಮದಗದ ಮಾಸೂರು ಕೆರೆಯೇ 'ಕೆರೆಗೆ ಹಾರ' ಜಾನಪದ ಕತೆಗೆ ಸ್ಪೂರ್ತಿ. ಶ್ರೀಕ್ಷೇತ್ರ ಗುಡ್ಡದಮಲ್ಲಾಪೂರ,ಶ್ರೀ ಮುಕಪ್ಪ ಮಹಾಸ್ವಾಮಿಗಳ ಹಾಗೂ ಕತೃ,ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ, ಕನಕದಾಸರ ಕಾಗಿನೆಲೆ, ಸರ್ವಜ್ಞನ ಅಬಲೂರು, ಹಾವನೂರಿನ ದ್ಯಾಮವ್ವನ ದೇವಸ್ಥಾನ, ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ) ಇತ್ಯಾದಿ
ರಾಜ್ಯ ಪ್ರಶಸ್ತಿಯನ್ನು ಪಡೆದಿರುವ ಪಟವೆಗಾರ ಮನೆತನದವರು ಯಾಲಕ್ಕಿಯನ್ನು ಸರ ಮಾಡಿ ಮಾರಾಟ ಮಾಡುವ ಶ್ರಮಿಕ ವರ್ಗದವರು. ಒಂದರಿಂದ ಎಳೆಯಿಂದ ಇಪ್ಪತ್ತು ಎಳೆಯವರೆಗೂ ಯಾಲಕ್ಕಿ ಮಾಲೆಯನ್ನು ತಯಾರಿಸುತ್ತಾರೆ. ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿವೆ.
ಗಣ್ಯ ವ್ಯಕ್ತಿಗಳು: ಸರ್ವಜ್ಞ, ಕನಕದಾಸರು, ಕವಿ ಸುರಂ ಎಕ್ಕುಂಡಿ, ಪ್ರಪ್ರಥಮ ಕಾದಂಬರಿಕಾರರಾದ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕ, ಸಂಗೂರಿನ ಯರೆಶೀಮಿ ಕರಿಯಪ್ಪ, ಸ್ವಾತಂತ್ರ್ಯ ಹೋರಾಟಗಾರ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ, ಸಿದ್ದಪ್ಪ ಹೊಸಮನಿ ಕರಜಗಿ, ಹೊಸರಿತ್ತಿಯ ಗುದ್ಲೆಪ್ಪಾ ಹಳ್ಳಿಕೇರಿ, ರಮಾನಂದ ಮನ್ನಗಿ,
ವಿಧಾನಸಭಾ ಕ್ಷೇತ್ರಗಳು/ ತಾಲೂಕುಗಳು:ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೇಬೆನ್ನೂರು, ಸವಣೂರು, ಶಿಗ್ಗಾಂವ
ಪ್ರಮುಖ ಭಾಷೆ: ಕನ್ನಡ,
ಪ್ರಮುಖ ಜನಾಂಗ: ಲಿಂಗಾಯತ,
ಜನಸಂಖ್ಯೆ: - 14, 39,116
ಸಾರಿಗೆ: ಬೆಂಗಳೂರು ಮುಂಬೈ ರಾಷ್ಟ್ರೀಯ ಹೆದ್ದಾರಿ 4, ರೈಲ್ವೆ ಸಂಪರ್ಕ, ದಾವಣಗೆರೆ, ಹುಬ್ಬಳ್ಳಿ ಹತ್ತಿರದ ವ್ಯಾಪಾರ ಕೇಂದ್ರಗಳು
ನೀರಿನ ಆಸರೆ: ತುಂಗ ಭದ್ರಾ ಹಾಗೂ ವರದಾ ನದಿ
ನೈಸರ್ಗಿಕ/ಖನಿಜ, ಪ್ರಾಣಿ ಸಂಪತ್ತು:ರಾಣೇಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ
ಬ್ಯಾಡಗಿ: ಪಾಟೀಲ್ ಸುರೇಶ್ ಗೌಡ ಬಸವಲಿಂಗಗೌಡ್ರ (ಬಿಜೆಪಿ) 1,20,443 ಮತಗಳು
ಹಾನಗಲ್: ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ (ಬಿಜೆಪಿ) 1,23,242 ಮತಗಳು
ಹಾವೇರಿ: ನೆಹರೂ ಓಲೇಕಾರ(ಬಿಜೆಪಿ) 1,13,543 ಮತಗಳು
ಹಿರೇಕೆರೂರು: ಬಿ.ಸಿ ಪಾಟೀಲ್ (ಕಾಂಗ್ರೆಸ್, 1,14,060 ಮತಗಳು
ರಾಣೇಬೆನ್ನೂರು: ಜಿ. ಶಿವಣ್ಣ (ಬಿಜೆಪಿ) 1,25,603 ಮತಗಳು
ಶಿಗ್ಗಾಂವ್: ಬಸವರಾಜ ಬೊಮ್ಮಾಯಿ (ಬಿಜೆಪಿ) 1,23,229 ಮತಗಳು
ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ:
* ಒಳನಾಡು ರಸ್ತೆ ವ್ಯವಸ್ಥೆ, ಪ್ರಮುಖ ಯಾತ್ರಾ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಇಲ್ಲ
* ರೈತರೇ ಜಿಲ್ಲೆಯ ಆಧಾರವಾಗಿದ್ದರೂ ಸರಿಯಾದ ಸೌಲಭ್ಯಗಳು ತಲುಪಿಲ್ಜ
* ವ್ಯಾಪರಕ್ಕೆ ದಾವಣಗೆರೆ, ಹುಬ್ಬಳ್ಳಿ ನೆಚ್ಚಿಕೊಳ್ಳಬೇಕಾಗಿರುವುದು ಕಷ್ಟಕರವಾಗಿದೆ.