ಶಿಕ್ಷಣವೇ ಶಕ್ತಿ

Tuesday 19 January 2021

ವೇದಕಾಲದ ನಾಗರಿಕತೆ

ವೇದಕಾಲದ ನಾಗರಿಕತೆ

» ವೇದ ಎಂಬ ಪದದ ಅರ್ಥ - ಜ್ಞಾನ , ಅರಿವು ಅಥಾವ ತಿಳುವಳಿಕೆ

» ವೇದಘಲ ಸಂಖ್ಯೆ - 4

» 4 ವೇದಗಳು - ಋಗ್ವೇದ , ಯಜುರ್ವೇದ ,ಸಾಮವೇದ , ಅಥರ್ವಣ ವೇದ

» ಅತ್ಯಂತ ಪ್ರಾಚೀನ ವೇದ - ಋಗ್ವೇದ

» ಉಪನಿಷತ್ ಪದದ ಅರ್ಥ - ಬಳಿಸಾಗಿ ವರಮಿಸು

» ವೇದಗಳು ಈ ಭಾಷೆಯಲ್ಲಿದೆ - ಸಂಸ್ಕೃತ

» ಪ್ರಾಚೀನ ಆರ್ಯರ ಜೀವನ ವಿಧಾನ ಈ ವೇದದಲ್ಲಿದೆ - ಋಗ್ವೇದ

» ಆರ್ಯರು ಈ ಪ್ರಾಂತ್ಯದಲ್ಲಿ ಹೆಚ್ಚಾಗಿ ನೆಲೆಸಿದ್ದರು - ವಾಯುವ್ಯ

» ವೇದಗಳು ಈ ಹೆಸರಿನಿಂದಲೂ ಕರೆಯುವರು - ಸಂಹಿತೆಗಳು

________________________________________

ಆರ್ಯರ ಮೂಲ

» ಆರ್ಯರು ವಾಯುವ್ಯ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸದರು

» ಆರ್ಯರು ಮೂಲತಃ - ಮಧ್ಯ ಏಷ್ಯಾದಿಂದ ಬಂದವರು

» ಭಾರತದಲ್ಲಿ ಆರ್ಯರ ಮೂಲ ಸ್ಥಾನ - ಪಂಜಾಬ್

» ಆರ್ಯರ ಮೂಲ ಸ್ಥಾನ ಟಿಬೆಟ್ ಎಂದವರು - ದಯಾನಂದ ಸರಸ್ವತಿ ಮತ್ತು ಪಾಲ್ಗಿಟರ್

» ಪರ್ಷಿಯನ್ನರ ಪವಿತ್ರ ಗ್ರಂಥ - ಜೆಂಡ್ ಅವೆಸ್ಥಾ

» Arctic Home of the Aryan - ಕೃತಿಯ ಕರ್ತೃ - ಬಾಲಗಂಗಾಧರ್ ತಿಲಕ್

» ಭಾರತಕ್ಕೆ ವಲಸೆ ಬಂದ ಆರ್ಯರು ನೆಲೆಸಿದ ತೀರ ಪ್ರದೇಶ - ಸಿಂಧೂ , ಗಂಗಾ ನದಿಗಳ ತೀರದಲ್ಲಿ

» ಆರ್ಯರು ಪಂಜಾಬ್ ನ್ನು ಈ ಹೇಸರಿನಿಂದ ಕರೆದರು - ಸಪ್ತಸಿಂಧೂ

» ಸಪ್ತಸಿಂಧವ ಪದದ ಅರ್ಥ - ಏಳು ನದಿಗಳ ಪ್ರದೇಶ

» ವೇದಕಾಲದ ನಾಗರಿಕತೆಯನ್ನು - ಋಗ್ವೇದ ಕಾಲದ ನಾಗರಿಕತೆ ಎನ್ನುವರು

» ಆರ್ಯರನ್ನು ವಿರೋಧಿಸಿದವರು - ದ್ರಾವಿಡರು

» ವೇದಗಳನ್ನು ರಚಿಸಿದವರು - ಪ್ರಾಚೀನ ಭಾರತದ ಋಷಿಗಳು

» ವೇದಗಳು ಗ್ರಂಥ ರೂಪವನ್ನ ಪಡೆದಿದ್ದು - ಗುಪ್ತರ ಕಾಲದಲ್ಲಿ

» ಆರ್ಯರು ಮಧ್ಯಏಷ್ಯಾದಿಂದ ಬಂದವರು ಎಂದವರು - ಮೊಲ್ಲರ್

» ಆರ್ಯರು ಉತ್ತರ ಧೃವ (ಆರ್ಕಟಿಕ್ ) ದಿಂದ ಬಂದವರು ಎಂದವರು - ಬಿ.ಜಿ.ತಿಲಕ್

» ಆರ್ಯರು ಟಿಬೆಟ್ ನಿಂದ ಬಂದವರು ಎಂದವರು -ದಯನಂದ ಸರಸ್ವತಿ

» ಕಲ್ಕತ್ತಾದಲ್ಲಿ Asiatic Society ನಿರ್ಮಿಸಿದವರು - ಸರ್ ವಿಲಿಯಂ ಜೋನ್ಸ್ ( 1786 )

» ವೈದಿಕ ನಾಗರಿಕತೆಯ ಅವಧಿ - ಕ್ರಿ.ಪೂ. 500

» ವೇದ ಕಾಲದ ನಾಗರಿಕತೆ - ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಕಂಡುಬಂದಿತು

» ಯಜುರ್ವೇದದ ಭಾಗಗಳು - ಕೃಷ್ಣ ಮತ್ತು ಶುಕ್ಲ ಯಜುರ್ವೇದ

» ಯಜುರ್ವೇದ ಹೊಂದಿರುವ ಶಾಖೆಗಳ ಸಂಖ್ಯೆ - 101

» ಸಾಮವೇದ ಹೊಂದಿರುವ ಶ್ಲೋಕಗಳ ಸಂಖ್ಯೆ - 1549

» ವೇದಕಾಲದ ನಾಗರಿಕತೆಯ ಕರ್ತೃಗಳು - ಆರ್ಯರು

» ಆರ್ಯರ ಪ್ರಮುಖ ಕಸುಬು - ವ್ಯವಸಾಯ

» ಪ್ರಪಂಚದ ಪ್ರಾಚೀನ ಗ್ರಂಥಗಳು - ವೇದಗಳು

» ಋಕ್ಕುಗಳು ಅಥವಾ ಮಂತ್ರಗಳನ್ನು ಹೊಂದಿರುವ ವೇದ - ಋಗ್ವೇದ

» ಪ್ರಥಮ ವೈಧಿಕ ಸಾಹಿತ್ಯ - ಋಗ್ವೇದ

» ಋಗ್ವೇದ ಕಾಲದ ಜನರಿಗೆ ಅತ್ಯಂತ ಪ್ರಿಯವಾದ ನದಿ - ಸಿಂಧೂ ಹಾಗೂ ಅದರ ಉಪನದಿ

» ಸಿಂಧೂ ನದಿ ಈ ಹೆಸರಿನಿಂದ ಹೆಚ್ಚು ಪ್ರಚಲಿತದಲ್ಲಿತ್ತು - ಸಪ್ತ ಸಿಂಧೂ

» ಸಪ್ತ ಸಿಂಧೂವಿನಲ್ಲಿ ಹಲವಾರು ಭಾರಿ ಉಲ್ಲೇಖವಿರುವ ಮುಖ್ಯ ನದಿ - ಸರಸ್ವತಿ

» ನದಿತಮೇ ಅಥವಾ ದೊಡ್ಡ ನದಿ ಎಂದು ಕರೆಯಲ್ಪಡುವ ದೊಡ್ಡ ನದಿ - ಸರಸ್ವತಿ

» ಪ್ರಪಂಚದಲ್ಲಿಯೇ ಮೊಟ್ಟ ಮೊದಲ ಪ್ರಜಾ ಪ್ರಭುತ್ವ ಸಂಸ್ಥೆಗಳು - ಸಭಾ ಮತ್ತು ಸಮಿತಿ

 _________________________________________

ಆರ್ಯರ ರಾಜಕೀಯ ವ್ಯವಸ್ತೆ

» ಗ್ರಾಮದ ಅಧಿಕಾರವನ್ನು - ಗ್ರಾಮಿಣಿ ನೋಡಿಕೊಳ್ಳುತ್ತಿದ್ದನು

» ಗ್ರಾಮದ ಆಗುಹೋಗುಗಳು - ಗ್ರಾಮಿಣಿಯ ಅಧೀನದಲ್ಲಿತ್ತು

» ಹಲವಾರು ಗ್ರಾಮದ ಅಧಿಕಾರಿಯನ್ನು (ವಿಸ್) - ವಿಸ್ಪತಿ ನೋಡಿಕೊಳ್ಳುತ್ತಿದ್ದನು

» ಅಭಿವೃದ್ಧಿ ಕಾರ್ಯ ಹಾಗೂ ಶಾಂತಿ ಸ್ಥಾಪನೆ ಕಾರ್ಯದಲ್ಲಿ ಗ್ರಾಮಿಣಿಗೆ ಸಹಕಾರಿಯಾಗಿದ್ದನು

» ರಾಜ್ಯ ರಚನೆಯ ಎರಡನೇಯ ಘಟ್ಟ - ವಿಸ್ ಆಗಿತ್ತು

» ಅನೇಕ ವಿಸ್ ಗಳು ಸೇರಿದ ಪ್ರಾಂತ್ಯಕ್ಕೆ - ಜನಪದ ಎಂದು ಕರೆಯುತ್ತಿದ್ದರು

» ಈ ಜನಪದದ ಮುಖ್ಯ ಅಧಿಕಾರಿ - ಗೋಪ

» ಅನೇಕ ಜನಪದಗಳನ್ನ ಒಳಗೊಂಡ ರಾಜ್ಯದ ಒಡೆಯ - ಅರಸನಾಗಿದ್ದ

» ಅರಸನು ತನ್ನ ಸಲಹೆಗೆ ಸಭಾ ಮತ್ತು ಸಮಿತಿ ಎಂಬ ಎರಡು ಮಂಡಲಿಗಳನ್ನ ಇಟ್ಟುಕೊಂಡಿದ್ದನು

» ಪ್ರಧಾನ ಪುರೋಹಿತ ಹಾಗೂ ಸೇನಾನಿ - ಅರಸರಿಗೆ ಸಹಾಯಕರಾಗಿದ್ದರು

» ರಾಜನ ಅಧಿಕಾರ - ಪಿತ್ರಾರ್ಜಿತವಾಗಿತ್ತು

» ಅಶ್ವಮೇಧ ರಾಜಸೂಯ - ಯಾಗಗಳನ್ನ ಮಾಡುತ್ತಿದ್ದರು

» ಅಧಿರಾಜ ,ರಾಜಾಧಿರಾಜ ಹಾಗೂ ಸಾಮ್ರಾಟ ಎಂಬ ಬಿರುದನ್ನ ರಾಜ ಹೊಂದಿದ್ದ .

» ತಂತ್ರ ಮಂತ್ರಗಳಿಗೆ ಸಂಬಂಧಿಸಿದ ವೇದ - ಅಥರ್ವಣ ವೇದ

» ಕುಟುಂಬವು - ರಾಜಕೀಯ ವ್ಯವಸ್ಥೆಯ ಮೂಲ ಘಟಕವಾಗಿತ್ತು

» ಹಲವು ಕುಟುಂಬಗಳು ಸೇರಿ ಒಂದು - ಕುಲವಾಗುತ್ತಿತ್ತು

» ಅಥರ್ವಣ ವೇದ ಹೊಂದಿರುವ ಶ್ಲೋಕ ಹಾಗೂ ಪದ್ಯಗಳ ಸಂಖ್ಯೆ - 730 ಶ್ಲೋಕ ಹಾಗೂ 6000 ಪದ್ಯಗಳು

» ವಿವಿಧ ರಾಜ್ಯಗಳ ಇತಿಹಾಸದ ನಿರೂಪಣಿ - ಪುರಾಣಗಳು

» ಹಲವು ಕುಲಗಳು ಸೇರಿ - ಒಂದು ಪಂಗಡವಾಗಿತ್ತು

» ಇವರು ರಾಜ್ಯದ ಮುಖ್ಯಸ್ಥನನ್ನು - ರಾಜನ್ ಎಂದು ಕರೆಯುತ್ತಿದ್ದರು

» ತಮ್ಮ ರಕ್ಷಣಿಗೆ ಜನರು ರಾಜನಿಗೆ ನೀಡುತ್ತಿದ್ದ ಹಣವನ್ನು ಪೊಗದಿ ಎಂದು ಕರೆಯುತ್ತಿದ್ದರು

» ಪೋಗದಿಯನ್ನು - ಬಲಿ ಎಂದು ಕರೆಯುತ್ತಿದ್ದರು

» ಪೋಗದಿ - ಅಂದಿನ ತೆರಿಗೆ ಪದ್ದತಿಯಾಗಿತ್ತು

» ಭರತ ಎಂದರೆ ಈ ಕಾಲದ ಒಂದು ಪಂಗಡ

» ಭರತ ಎಂಬ ಪಂಗಡದಿಂದ ಭಾರತಕ್ಕೆ ಈ ಹೆಸರು ಬಂತು

» ಸಭೆ ಹಾಗೂ ಸಮಿತಿಗಳು - ಅತ್ಯಂತ ಪ್ರಾಚೀನ ಜನಪ್ರತಿ ನಿಧಿ ಸಭೆಗಳಾಗಿದ್ದವು

» ಪುರೋಹಿತರು - ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಿದ್ದರು

» ಪುರೋಹಿತರೇ - ಮುಖ್ಯ ಧರ್ಮಾಧಿಕಾರಿಯಾಗಿದ್ದರು

» ಸೇನಾ ನಾಯಕ ಅಥಾವ ಕುಟುಂಬಗಳು - ಸಮಾಜದ ಮುಖ್ಯ ಘಟಕವಾಗಿತ್ತು

» ಕುಟುಂಬದ ಮುಖ್ಯಸ್ಥನನ್ನು - ಕುಲಪತಿ ಎಂದು ಕರೆಯುತ್ತಿದ್ದರು

 _________________________________________

ಸಾಮಾಜಿಕ ಜೀವನ

» ಕುಟುಂಬವು - ಸಮಾಜದ ಪ್ರಥಮ ಮಹತ್ವದ ಘಟ್ಟವಾಗಿತ್ತು

» ತಂದೆಯನ್ನು - ಗೃಹಪತಿ ಎಂದು ಕರೆಯುತ್ತಿದ್ದರು

» ಸೋಮ ಹಾಗೂ ಸುರ - ಎಂಬ ಪಾನೀಯಗಳು ಚಿರಪರಿಚಿತವಾಗಿತ್ತು

» ಏಕಪತ್ನಿತ್ವ ತತ್ವದ ಆಧಾರದ ಮೇಲೆ ಕುಟುಂಬವು ರೂಪಿತವಾಗಿತ್ತು

» ಪಿತೃ ಪ್ರಧಾನ - ಕುಟುಂಬವು ವ್ಯವಸ್ಥೆಯು ಅಸ್ತಿತ್ವದಲ್ಲಿತು

» ಸೋಮಪಾನ ಹಾಗೂ ಜೂಜಾಟಗಳು ಇವರ ಹವ್ಯಾಸಗಳಾಗಿದ್ದು

» ಸ್ತ್ರೀಯರು ತಮ್ಮ ಪತಿಗಳೊಂದಿಗೆ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು

» ವಿಧ್ಯಾರ್ಜನೆಗೆ ಸ್ತ್ರೀಯರಿಗೂ ಮುಕ್ತ ಅವಕಾಶವಿತ್ತು ,ಗಾರ್ಗಿ ,ಮೈತ್ರೆಯಿ ಪ್ರಮುಖರು

» ಗೋವನ್ನು - ಅನಘ್ಯ ಎಂದು ನಂಬಿದ್ದರು

» ಅನಘ್ಯ ಎಂಬ ಪದದ ಅರ್ಥ - ಕೊಲ್ಲಲಾಗದ್ದು

» ಪಗಡೆ , ವೀಣಿ ನುಡೀಸುವುದು ಹಾಗೂ ಹಾಡುವುದು ಇವರ ಹವ್ಯಾಸ

» ಅವಿಭಕ್ತ ಕುಟುಂಬ - ಸಾಮಾಜಿಕ ವೈಶಿಷ್ಟ್ಯಗಳಲ್ಲಿ ಒಂದಾಗಿತ್ತು

» ಸ್ವಯಂವರ - ಪದ್ದತಿಯು ಅಸ್ತಿತ್ವದಲ್ಲಿತ್ತು

» ಆರ್ಯರನ್ನು - ದ್ವೀಜ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು

» ಆರ್ಯರಲ್ಲದವರನ್ನು - ಅದ್ವಿಜ ಎಂದು ಕರೆಯುತ್ತಿದ್ದರು

» ಒಟ್ಟು ಪುರಾಣಗಳ ಸಂಖ್ಯೆ - 18

» ವೇದಗಳ ಮೇಲೆ ಬರೆದ ಪ್ರಬಂಧಗಳು - ಬ್ರಾಹ್ಮಣಕಗಳು

» ವಧುವಿಗೆ - ಕುರಿರಾ ಎಂಬ ಆಭರಣ ತೆಡಿಸುತ್ತಿದ್ದರು

» ನಿಷ್ಕ , ರುಕ್ಮಾ ಮತ್ತು ಮಣಿ - ಇವರ ಪ್ರಮುಖ ಆಭರಣಗಳು

» ಸಾಗಾಣಿಕೆ ಹಾಗೂ ಪ್ರಯಾಣಕ್ಕೆ - ಒಂಟೆ ಹಾಗೂ ರಥಗಳನ್ನು ಬಳಸುತ್ತಿದ್ದರು

» ಜಿಹ್ಯಾ ಎಂದರೇ - ತೋಳ ಬಂಧಿ

» ಸಾಂಸಾರಿಕ ಜೀವನ ವಿಧಾನದ ಕುರಿತಾದ ಸೂತ್ರ - ಗೃಹ್ಯ ಸೂತ್ರ

 _________________________________________

ವಿಧ್ಯಾಭ್ಯಾಸ ಪದ್ದತಿ

» ವಿಧ್ಯಾರ್ಥಿ 6 ಮತ್ತು 7 ನೇ ವಯಸ್ಸಿನಲ್ಲಿ - ಉಪನಯನ ದ ಮೂಲಕ ಗುರುಕುಲ ಸೇರುತ್ತಿದ್ದರು

» ಗುರುಕುಲ - ದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು

» ಉಪ ಎಂದರೆ ಮತ್ತೋಂದು ನಯನ ಎಂದರೆ ಕಣ್ಣು ಅಂದರೇ ಮೂರನೇ ಕಣ್ಣು (ಜ್ಞಾನ) ಪಡೆಯುವದೇ ವಿಧ್ಯಾರ್ಥಿಯ ಗುರಿಯಾಗಿತ್ತು .

» ಇಪನಯನ ಎಂದರೇ - ಜನಿವಾರ ಧಾರಣಾ ಸಮಾರಂಭ

» ಉಪನಯನದ ನಂತರ ವಿಧ್ಯಾರ್ಥಿ - ದ್ವಿಜನಾಗುತ್ತಿದ್ದ

» ದ್ವಿಜ ಎಂದರೆ ಎರಡು ಸಾರಿ ಜನ್ಮ ಪಡೆದವನು ಎಂದರ್ಥ

» ಊರಿಂದ ಊರಿಗೆ ಹೋಗಿ ಕಲಿಯುತ್ತಿದ್ದವರನ್ನು - ಚರಕರು ಎಂದು ಕರೆಯುತ್ತಿದ್ದರು

» ಉದ್ದಾಲಕ ಅರುಣಿ - ಒಬ್ಬ ಪ್ರಮುಖ ಚರಕ

» ಪಾಂಚಾಲ ಪರಿಷತ್ತನ್ನು ನೆರವೇರಿಸಿದ ಅರಸ - ಜನಕ ಮಹಾರಾಜ

» ಹೋಮ ಹವನಕ್ಕೆ ಸಂಬಂಧಿಸಿದ ಸೂತ್ರ - ಸ್ರೌವತ್ ಸೂತ್ರ

__________________________________________

ಸಾಹಿತ್ಯ

» ವೈದಿಕ ಸಾಹಿತ್ಯವನ್ನು ರಚಿಸಿದವರು - - ಆರ್ಯರು

» ವೈಧಿಕ ಸಾಹಿತ್ಯವನ್ನು - ಸ್ಮೃತಿ ಸಾಹಿತ್ಯ ಎಂದು ಕರೆಯುವರು

» ವೈದಿಕ ಸಾಹಿತ್ಯ - ಪ್ರಪಂಚದ ್ತೀ ಪ್ರಾಚೀನ ಸಾಹಿತ್ಯ ಎಂದೂ ಕರೆಯುವರು

» ವೈದಿಕ ನಾಗರಿಕತೆಯ ವಿವಾಹ ಸಂಸ್ಕಾರಗಳು - ಪಾಣಿಗ್ರಹಣ , ಕನ್ಯಾಧಾನ

_________________________________________

ಆರ್ಥಿಕ ವ್ಯವಸ್ಥೆ

» ಆರ್ಯ ಎಂದರೆ - ವ್ಯವಸಾಯದಲ್ಲಿ ತೊಡಗಿ ಕೊಂಡವ ಅಥವಾ ಉತ್ತಮ ಕುಟುಂಬಕ್ಕೆ ಸೇರಿದವ ಎಂಬ ಅರ್ಥ ಬರತ್ತದೆ

» ಆರ್ಯರ ಮುಖ್ಯ ಕಸುಬು - ಕೃಷಿ

» ಆರ್ಯರ ಉಪ ಕಸುಬುಗಳು - ಪಶುಪಾಲನೆ

» ಆರ್ಯರು ಭೂಮಿಯನ್ನು ಊಳಲು ಉಪಯೋಗಿಸುತ್ತಿದ್ದ ಪ್ರಾಣಿ - ಎತ್ತು ಮತ್ತು ಕುದುರೆ

» ಆರ್ಯರು ಪವಿತ್ರ ಪ್ರಾಣಿ - ಹಸು

» ವ್ಯಾಪಾರದಲ್ಲಿ ಅಸ್ತಿತ್ವದಲ್ಲಿದ್ದ ಪದ್ದತಿ - ವಸ್ತು ವಿನಮಯ ಪದ್ದತಿ

» ಆರ್ಯರು ವರ್ತಕರನ್ನು ಈ ಹೆಸರಿನಿಂದ ಕರೆದಿದ್ದಾರೆ - ಪಣಿ

» ಕರ್ಮಸಿದ್ದಾಂತದಲ್ಲಿ ನಂಬಿಕೆ ಹೊಂದಿದ್ದವರು - ಆರ್ಯರು

__________________________________________

Extra Tips

» ಆರ್ಯರು ಬಹುಮುಖ್ಯ ಧಾರ್ಮಿಕ ಆಚರಣಿ - - ಯಜ್ಞ ಮಾಡುವುದು

» ಆರ್ಯರ ಕುಟುಂಬ - ಪಿತೃ ಪ್ರಧಾನವಾಗಿತ್ತು

» ಆರ್ಯರ ಜ್ಞಾನರ್ಜನೆಯ ಕೇಂದ್ರ - ಗುರುಕುಲ

» ಆರ್ಯರು ಮೊದಲು ನೆಲೆಸಿದ ಸ್ಥಳ - ಸಪ್ತ ಸಿಂಧೂ ಪ್ರದೇಶ

» ಪುರುಷ ಸೂಕ್ತ - ಋಗ್ವೇದದಲ್ಲಿದೆ

» ಆಚರಣಿಗೆಳನ್ನು ಕುರಿತಾದ ಪುಸ್ತಕ - ಬ್ರಾಹ್ಮಣಗಳು

» ವೇದ ಎಂಬ ಪದ ಧಾತು - ವಿದ್

» ಜೀವನದ ವಿವಿಧ ಹಂತಗಳನ್ನ ಸೂಚಿಸುವ ಪದ - ಆಶ್ರಮ

» ಯಜ್ಞ ಯಾಗಾದಿಗಳ ವಿವರ ಇರುವ ವೇದ - ಯಜುರ್ವೇದ

» ಋಗ್ವೇದ ಹೊಂದಿರುವ ಸೂಕ್ತಗಳ ಸಂಖ್ಯೆ - 1028

» ಸಂಗೀತ ರೂಪದಲ್ಲಿರುವ ವೇದ - ಸಾಮವೇದ

» ಸಾಮ ಪದದ ಅರ್ಥ - ಗಾನ

» ಗದ್ಯ ಪದ್ಯ ಮಿಶ್ರಿತ ವೇದ - ಅಥರ್ವಣ ವೇದ

» ಮಾಟ. ತಂತ್ರ , ಮಂತ್ರ ಒಳಗೊಂಡ ವೇದ - ಅಥರ್ವಣ ವೇದ

» ಆರ್ಯರ ಆಡಳಿತದ ಮುಖ್ಯಸ್ಥ - ರಾಜ

» ಆರ್ಯರ ಪ್ರಮುಖ ಆಹಾರ ಬೆಳೆಗಳು - ಭತ್ತ ಮತ್ತು ಬಾರ್ಲಿ

» ಸಂಗ್ರಹಿತ್ವ ಎಂದರೆ ಕೋಶಾಧಿಕಾರಿ

» ಆರ್ಯರ ತೆರೆಗೆ ವಸೂಲಿಗಾರ - ಭಾಗಧೃವ

» ಆರ್ಯರ ರಥದ ಸಾರಥಿಯನ್ನು - ಆರ್ಯರ ನಾಗರಿಕತೆ ಎಂದೂ ಕರೆಯುವರು

» ವೇದಗಳು ಹೊಂದಿರುವ ಭಾಷೆ - ಸಂಸ್ಕೃತ

» ಆರ್ಯರ ಸಮಾಜದ ಪ್ರಾಥಮಿಕ ಸಂಸ್ಥೆ - ಕುಟುಂಬ

» ಆರ್ಯರು - ಗ್ರಾಮಾಸಿಗಳಾಗಿದ್ದರು

» ಆರ್ಯರ ಸಮಾಜದಲ್ಲಿದ್ದ ಕುಟುಂಬ ವ್ಯವಸ್ಥೆ - ಅವಿಭಕ್ತ ಕುಟುಂಬ

» ಆರ್ಯರು ಧರಿಸುತ್ತಿದ್ದ ಮೇಲುಡುಗೆಗಳ ಹೆಸರು - ಆದಿವಾಸ

» ಆರ್ಯರು ಧರಿಸುತ್ತಿದ್ದ ಕೆಳ ಉಡುಗೆ - ವಾಸ ಅಥವಾ ನೀವಿ

» ಆರ್ಯರು ಮನೆಕಟ್ಟಲು ಬಳಸುತ್ತಿದ್ದ ವಸ್ತುಗಳು - ಮಣ್ಣು ಹಾಗೂ ಬೊಂಬು

» ಆರ್ಯರು ಕುಟುಂಬವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕುಲ

» ರಾಮಾಯಣವನ್ನು ಬರೆದವರು - ವಾಲ್ಮೀಕಿ

» ಮಹಾಭಾರತವನ್ನು ಬರೆದವರು - ವೇದವ್ಯಾಸರು

» ಪ್ರಪಂಚದಲ್ಲಿ ಮೊದಲು ರಚನೆಯಾದ ಮಹಾಕಾವ್ಯ - ರಾಮಾಯಣ

» ಭಗವದ್ಗೀತೆ ಿರುವುದು - ಮಹಾಭಾರತದ ಬೀಷ್ಮ ಪರ್ವದಲ್ಲಿ

» ಆರ್ಯರ ಸ್ವರ್ಗದ ದೇವರುಗಳು - ವಿಷ್ಣು.ವರುಣ , ಅಶ್ವನಿ , ಉಷಾ , ಸೂರ್ಯ , ಸಾವಿತ್ರಿ

» ಭೂದೇವರುಗಳು - ಅಗ್ನಿ , ಪೃಥ್ವಿ , ಸೋಮ ಹಾಗೂ ಸರಸ್ವತಿ

» ಆರ್ಯರ ತೂಕ ಮಾನದ ಹೆಸರು - ಮಣ

» ಆರ್ಯರ ವಾಯು ದೇವರುಗಳು - ಇಂದ್ರ , ರುದ್ರ , ಮಾರುತ , ವಾಯು ,ಪರ್ಜನ್ಯ

» ಆರ್ಯರ ಹಿರಿಯ ದೇವರು - ಇಂದ್ರ

» ಪ್ರಥಮ ವೇದಕಾಲವನ್ನು ಈ ಹೆಸರಿನಿಂದ ಕರೆಯವರು - ಋಗ್ವೇದ ಕಾಲ

» ವಿಶ್ವ ಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವಾದ ಧರ್ಮಗ್ರಂಥ - ಋಗ್ವೇದ

» ಋಗ್ವೇದ ಕಾಲದ ಆರ್ಯರ ಮುಖ್ಯ ದೈವ - ಇಂದ್ರ

» ಆರ್ಯರ ಪ್ರಮುಖ ದೇವರು - ಇಂದ್ರ , ವಾಯು , ವರುಣ , ಉಷಸ್

» ಆರ್ಯರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಬಂಗಾರದ ನಾಣ್ಯ - ನಿಷ್ಕಾ

» ಯಜ್ಞಾ ವೇದಿಗಳ ರಚನೆಯಿಂದ - ಜ್ಯಾಮಿತಿಯ ಜ್ಞಾನ ಬೆಳೆಯಿತು

» ಋಗ್ವೇದ ನಂತರದ ಆರ್ಯರ ಕಾಲದ ಪವಿತ್ರ ನದಿ - ಗಂಗಾನದಿ

» ಆರ್ಯರ ಕಾಲದಲ್ಲಿ ತಲೆಯೆತ್ತಿದ್ದ ಹೊಸ ರಾಜ್ಯಗಳು - ಕುರು , ಪಾಂಚಾಲಿ ,ಕಾಶಿ ಹಾಗೂ ಕೋಸಲ

» ಋಗ್ವೇದ ನಂತರದ ಆರ್ಯರ ಸೃಷ್ಥಿ ಕರ್ತ ದೈವ - ಪ್ರಜಾಪತಿ

» ಆರ್ಯರು ರುದ್ರನನ್ನು - ಶಿವ ಎಂದು ಕರೆಯುತ್ತಿದ್ದರು

» ಆರ್ಯರ ವಿಶ್ವ ರಕ್ಷಕ ದೈವ - ವಿಷ್ಣು

» ಉಪನಿಷತ್ ಪದದ ಅರ್ಥ - ಗುರುವಿನ ಬಳಿ ಕುಳಿತುಕೋ

» ಉಪನಿಷತ್ ನಲ್ಲಿ ದೇವರನ್ನು ಈ ಹೆಸರಿನಿಂದ ಕರೆದಿದೆ - - ಪರಬ್ರಹ್ಮ

» ವೇದಾಂತ ಎಂದರೆ - ಉಪನಿಷತ್ ಗಳ ಸಾರ

» ಸತ್ಯ ಮೇವ ಜಯತೆ ಎಂಬ ವಾಕ್ಯವಿರುವುದು - ಮಂಡುಕೋಪನಿಷತ್

» ಅಷ್ಟಧ್ಯಾಯ - ವ್ಯಾಕರಣ ಗ್ರಂಥದ ಕರ್ತೃ - ಪಾಣಿನಿ

» ಯೋಗಸೂತ್ರವನ್ನು ಬರೆದವರು - ಪತಂಜಲಿ ಮಹರ್ಷಿ

» ಸಂಸ್ಕೃತದ ಖ್ಯಾತ ವ್ಯಾಕರಣ ಗ್ರಂಥ - ಅಷ್ಟಧ್ಯಾಯಿ

» ಆರ್ಯರ ಕಾಲದಲ್ಲಿ ಕೃಷಿಗೆ ಮೀಸಲಾಗಿದ್ದ ಭೂಮಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕ್ಷೇತ್ರ

» ಆರ್ಯರು ಗಂಗಾ ನದಿಯ ಬಯಲಿನಲ್ಲಿ ಬೆಳೆದ ವಿಶೇಷ ಭತ್ತದ ಹೆಸರು - ರಾಜಸಾರಿ

» ಆರ್ಯರು ಪ್ರಕೃತಿಯ ಆರಾಧಕರಾಗಿದ್ದರು

» ದಶರಥ ಈ ದೇಶದವನು - ಕೋಸಲದ ಅರಸ

» ರಾಮನ ತಂದೆಯ ಹೆಸರು - ದಶರಥ ಮಹಾರಾಜ

» ರಾಮನ ಮಲ ತಾಯಿ - ಕೈಕೆ

» ಭರತನ ತಾಯಿ - ಕೈಕೆ

» ಹರಪ್ಪಾ ನಾಗರಿಕತೆಯ ಕರ್ತೃ - ದ್ರಾವಿಡರು

» ವೈದಿಕ ನಾಗರಿಕತೆಯ ಕರ್ತೃ - ಆರ್ಯರು

» ಋಗ್ವೇದದಲ್ಲಿ ಕುಲ್ವ ಎಂದರೆ - ವ್ಯವಸಾಯ ಕಾಲುವೆ

» ಋಗ್ವೇದ ಕಾಲದಲ್ಲಿ ಆರ್ಯರು ವೈದ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಭಾಷಜ್

» ಸುಪಾಶಾಸ್ತ್ರವು ಇದರ ಬಗ್ಗೆ ವಿವರಣಿ ನೀಡುತ್ತದೆ - ಪಾಕಶಾಸ್ತ್ರ

» ವೇದ ಕಾಲದ ಮತ್ಸ್ಯ ದೇಶ ಪ್ರಸ್ತುತ ಈ ರಾಜ್ಯದಲ್ಲಿದೆ - ರಾಜಶ್ತಾನ

» ಪುರೋಹಿತ ವರನಿಗೆ ಕನ್ಯಾಧಾನ ಮಾಡುವ ಪದ್ದತಿ - ದೈವ ವಿವಾಹ

» ವೇದ ಕಾಲದ ಕೋಶಾಧಿಕಾರಿಯನ್ನು ಈ ಹೆಸರಿನಿಂದ ಕರೆವರು - ಸುಗ್ರಹಿತ್ರಿ

» ಪ್ರಥಮ ವೇದ ಕಾಲದಲ್ಲಿ ಪ್ರಾಮುಖ್ಯತೆ ವಹಿಸಿದ ಆರ್ಯ ಪಂಗಡ - ಕುರು

» ವೇದ ಕಾಲದಲ್ಲಿ ಸೂರ್ಯನ ತಾಯಿ - ಅದಿತಿ

» ವೇದ ಕಾಲದ ಧಾನ್ಯವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವ್ರಿಹಿ

» ವೇದಕಾಲದಲ್ಲಿ ಮೊಟ್ಟ ಮೊದಲಿಗೆ ಕಬ್ಬಿಣವನ್ನು ಉಪಯೋಗಿಸಿದ ಪ್ರಾಂತ್ಯ - ಗುರುದ್ವಾರ

» ಪ್ರಾಚೀನ ಕಾಲದಲ್ಲಿ ನ್ಯಾಯ ಪರಿಪಾಲನೆ ಇದರ ಆಧಾರದ ಮೇಲೆ ನಿಂತಿತ್ತು - ಮನುಧರ್ಮ ಶಾಸ್ತ್ರ

 _________________________________________

ಸಂಗ್ರಹ ✍️ T.A.ಚಂದ್ರಶೇಖರ


ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು