ಶಿಕ್ಷಣವೇ ಶಕ್ತಿ
Friday, 12 February 2021
💮 ಕನ್ನಡ ವ್ಯಾಕರಣ💮
ಜಗತ್ತಿನ ಹಾಗೂ ಭಾರತದ ಪ್ರಥಮ ಪಿತಾಮಹರು
☀ಜಗತ್ತಿನ ಹಾಗೂ ಭಾರತದ ಪ್ರಥಮ ಪಿತಾಮಹರು :
★ ಸಾಮಾನ್ಯ ಅಧ್ಯಯನ
(General Studies)
★ ಸಾಮಾನ್ಯ ಜ್ಞಾನ
(General Knowledge)
■. ಭಾರತ ಇತಿಹಾಸದ ಪಿತಾಮಹ :••┈┈┈┈┈┈•• ಕಲ್ಹಣ.
■. ಭಾರತದ ಸಮಾಜಶಾಸ್ತ್ರದ ಪಿತಾಮಹ :••┈┈┈┈┈┈•• ಎಮ್,ಎನ್,ಶ್ರೀನಿವಾಸ.
■. ಭಾರತದ ಪುನರುಜ್ಜೀವನದ ಪಿತಾಮಹ :••┈┈┈┈┈┈•• ರಾಜಾರಾಮ ಮೋಹನ್ ರಾಯ್.
■. ಭಾರತದ ಹಸಿರುಕ್ರಾಂತಿಯ ಪಿತಾಮಹ:••┈┈┈┈┈┈•• M.S.ಸ್ವಾಮಿನಾಥನ್.
■. ಭಾರತದ ಯೋಜನೆಗಳ ಪಿತಾಮಹ :••┈┈┈┈┈┈•• ಸರ್.ಎಂ.ವಿಶ್ವೇಶ್ವರಯ್ಯ.
■. ಕರ್ನಾಟಕದ ಸುಗಮ ಸಂಗೀತದ ಪಿತಾಮಹ :••┈┈┈┈┈┈•• ಸಂತ ಶಿಶುನಾಳ ಶರೀಫ್.
■. ಕರ್ನಾಟಕದ ಶಾಸನಗಳ ಪಿತಾಮಹ :••┈┈┈┈┈┈•• ಬಿ.ಎಲ್.ರೈಸ್.
■. ಪುನರುಜ್ಜೀವನದ ಪಿತಾಮಹ :••┈┈┈┈┈┈•• ಪೆಟ್ಟ್ರಾರ್ಕ್.
■. ಭೂಗೋಳ ಶಾಸ್ತ್ರದಪಿತಾಮಹ :••┈┈┈┈┈┈•• ಎರಟೋಸನೀಸ್.
■. ಪ್ರತಿಸುಧಾರಣೆಯ ಪಿತಾಮಹ :••┈┈┈┈┈┈••ಇಗ್ನೇಷಿಯಸ್ ಲಯೋಲ.
■. ಮತಸುಧಾರಣೆಯ ಪಿತಾಮಹ :••┈┈┈┈┈┈•• ಮಾರ್ಟಿನ್ ಲೂಥರ್.
■. ಭಾರತದ ಚಲನಚಿತ್ರದ ಪಿತಾಮಹ:••┈┈┈┈┈┈•• ದಾದಾಸಾಹೇಬ್ ಫಾಲ್ಕೆ.
■. ವಿಜ್ಞಾನದ ಪಿತಾಮಹ :••┈┈┈┈┈┈•• ರೋಜರ್ ಬೇಕನ್.
■. ವಿಕಾಸವಾದದ ಪಿತಾಮಹ ••┈┈┈┈┈┈•• ಚಾರ್ಲ್ಸ್ ಡಾರ್ವಿನ್.
■. ಅಣುವಂಶಿಯವಾದ ಪಿತಾಮಹ ••┈┈┈┈┈┈•• ಗ್ರೇಗರ ಮೆಂಡಲ್.
■. ಚಲನಶಾಸ್ರದ ಪಿತಾಮಹ ••┈┈┈┈┈┈•• ನ್ಯೂಟನ್.
■. ಪರಮಾಣು ಸಿದ್ಧಾಂತದ ಪಿತಾಮಹ ••┈┈┈┈┈┈•• ಜಾನ್ ಡಾಲ್ಟನ್
■. ಸೌರ ಕೇಂದ್ರ ಸಿದ್ಧಾಂತದ ಪಿತಾಮಹ ••┈┈┈┈┈┈•• ಕೋಪರ್ ನಿಕಸ್
■. ಗ್ರಹಗಳ ಚಲನೆ ನಿಯಮದ ಪಿತಾಮಹ ••┈┈┈┈┈┈•• ಜೋಹಾನ್ಸ್ ಕೆಪ್ಲರ್
■. ಆಯಾನಿಕರಣ ಸಿದ್ಧಾಂತದ ಪಿತಾಮಹ ••┈┈┈┈┈┈•• ಹೀನಿಯಸ್
■. ಆವರ್ತಕೋಷ್ಟಕದ ಜನಕ ••┈┈┈┈┈┈•• ಡಿಮಿಟ್ರಿ ಮೆಂಡಲಿವ್
■. ಸಾಪೇಕ್ಷವಾದದ ಪಿತಾಮಹ ••┈┈┈┈┈┈•• ಐನ್ಸ್ಟಿನ್
■. ಜೀವಶಾಸ್ತ್ರದ ಪಿತಾಮಹ ••┈┈┈┈┈┈•• ಅರಿಸ್ಟಾಟಲ್
■. ವೈದ್ಯಕೀಯ ಶಾಸ್ತ್ರದ ಪಿತಾಮಹ ••┈┈┈┈┈┈•• ಹಿಪ್ಪೋಕ್ರೆಟಸ್
■. ಅಂಗರಚನಾಶಾಸ್ರದ ಪಿತಾಮಹ ••┈┈┈┈┈┈•• ಚರಕ
■. ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ••┈┈┈┈┈┈•• ಸುಶ್ರುತ
■. ಯೋಗಶಾಸ್ತ್ರದ ಪಿತಾಮಹ ••┈┈┈┈┈┈•• ಪತಂಜಲಿ
ಹೃದಯ ❤️
# ಮನುಷ್ಯನ ಹೃದಯವು ಶಂಖಾಕೃತಿಯ ಒಂದು ಸ್ನಾಯಿಕ ಅಂಗವಾಗಿದೆ. ಇದು ಮುಷ್ಠಿಯ ಗಾತ್ರವಿರುತ್ತದೆ.
# ಎದೆಗೂಡಿನಲ್ಲಿ ಎರಡು ಶ್ವಾಸಕೋಶಗಳ ನಡುವೆ ಕಂಡುಬಂದು ಸ್ವಲ್ಪ ಎಡಭಾಗಕ್ಕೆ ಓರೆಯಲ್ಲಿದೆ.
# ಹೃದಯವು ’ಹೃದಯಾವರಣ’ (Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ.
# ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.
# ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ.
# ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’ (Ventricles) ಗಳೆಂದು ಕರೆಯುತ್ತಾರೆ.
# ಹೃದಯದ ಎಡ ಮತ್ತು ಬಲ ಭಾಗಗಳ ನಡುವೆ ಒಂದು ಸ್ನಾಯಿಕ ಪೊರೆ (Septum) ಇದೆ.
# ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ.
# ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ.
# ಈ ಕವಾಟವು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.
# ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ.
# ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ.
# ಶ್ವಾಸಕೋಶಗಳಿಗೆ ಆಕ್ಸಿಜನ್ ರಕ್ತ ರಹಿತ ರಕ್ತವನ್ನು ಒಯ್ಯುವ ಪುಪ್ಪುಸಕ ಅಭಿಧಮನಿ ಬಲಹೃತ್ಕುಕ್ಷಿಯಿಂದ ಹೊರಡುತ್ತದೆ.
# ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ.
# ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
# ’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ.
# ಹೃದಯದ ಸ್ನಾಯುಗಳ ಸಂಕೊಚನ ಕ್ರಿಯೆಗೆ ’ಸಿಸ್ಟೋಲ್’ ಎಂದು ಕರೆಯುತ್ತಾರೆ.
# ಹೃದಯದ ಸ್ನಾಯುಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ.
# ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ವಾಗುತ್ತದೆ.
# ಹೃದಯದ ಬಡಿತವನ್ನು ಸ್ಟೆತೋಸ್ಕೋಪ್’ ಎಂಬ ಉಪಕರಣದಿಂದ ಅಳೆಯುತ್ತಾರೆ.
# ಆರೋಗ್ಯವಂತನಾದ ಮನುಷ್ಯನಲ್ಲಿ ಒಂದು ನಿಮಿಷಕ್ಕೆ 72 ಸಲ ಹೃದಯ ಬಡಿಯುತ್ತದೆ.
# ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು ’ರಕ್ತದ ಒತ್ತಡ’ ಎನ್ನುವರು.
# ರಕ್ತದ ಒತ್ತಡವನ್ನು ಅಳೆಯುವ ಉಪಕರಣವನ್ನು ’ಸ್ಪಿಗ್ಮೋ ಮೊನೋಮೀಟರ್’ ಎಂದು ಕರೆಯುತ್ತಾರೆ.
# ಆರೋಗ್ಯವಂತನಾದ ವಯಸ್ಕ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ರಕ್ತದ ಒತ್ತಡವನ್ನು 120/80 ಮಿ.ಮಿ.ಹೆಚ್.ಜಿ. ಎಂದು ಗುರುತಿಸುತ್ತಾರೆ.
# 1819 ರಲ್ಲಿ ಫ್ರಾನ್ಸ್ ದೇಶದ ರೇನೆ ಲೆನಿಕ್ ಎಂಬ ವಿಜ್ಞಾನಿಯು ’ಸ್ಟೆತೋಸ್ಕೋಪ್’ನ್ನು ಕಂಡುಹಿಡಿದನು.
# ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮೀಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿ ಬಡಿತವಿರುತ್ತದೆ.
〰️〰️〰️〰️〰️〰️〰️〰️〰️〰️〰️〰️〰️〰️〰️
Questions :
1.)
ಹೃದಯದ ಬಡಿತವನ್ನು ಕಂಡು ಹಿಡಿಯುವ ಸಾಧನ ಯಾವುದು?
A). ಅಮ್ಮೀಟರ್
B). ಸ್ಟೆತೆಸ್ಕೋಪ್
C). ಬಯೋಸ್ಕೋಪ್
D). ಹಾರ್ಟ್ ಮೀಟರ್
Correct Ans: (B)
Description:
ಸ್ಟೆತೆಸ್ಕೋಪ್
ಹೃದಯದ ಬಡಿತವನ್ನು ಕಂಡು ಹಿಡಿಯುಲು ಬಳಸುವ ಸಾಧನ ಸ್ಟೆತೆಸ್ಕೋಪ್. 1819ನೇ ಇಸವಿಯಲ್ಲಿ ಫಾನ್ಸ್ ದೇಶದ ವಿಜ್ಞಾನಿ 'ರೇನೆ ಲೆನೆಕ್' ಎಂಬುವವನು ಸ್ಟೆತೆಸ್ಕೋಪ್ ಸಾಧನವನ್ನು ಕಂಡು ಹಿಡಿದನು.
2.)
ಹೃದಯವನ್ನು ಆವರಿಸಿರುವ ಇಪ್ಪರದ ಪೊರೆ ಯಾವುದು?
A). ಪೆರಿಕಾರ್ಡಿಯಂ
B). ಮಹಾ ಅಪಧಮನಿ
C). ಹೃತ್ಕರ್ಣ
D). ಸ್ಥಾಯಿಕ ಪೊರೆ
Correct Ans: (A)
Description:
ಪೆರಿಕಾರ್ಡಿಯಂ
ಹೃದಯವು ’ಹೃದಯಾವರಣ’(Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ. ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.
3.)
ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಯಾವುದು?
A). ಡಯಾಸ್ಟೋಲ್
B). ಫೈಭ್ರಿನೋಜನ್
C). ಲೋಮನಾಳಗಳು
D). ಅಂಗಾಮನಾಳಗಳು
Correct Ans: (C)
Description:
ಲೋಮನಾಳಗಳು
ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಲೋಮನಾಳ. ರಕ್ತವು ಮಹಾ ಅಪಧಮನಿಯ ಕವಲುಗಳ ಮೂಲಕ ಅಂಗಾಂಶದಲ್ಲಿ ಹರಡಿರುವ ಲೋಮನಾಳಗಳ ಬಲೆಯ ಮೂಲಕ ಅಭಿಧಮನಿಮನಿಗಳಿಗೆ ಸಾಗಿ ನಂತರ ಹೃತ್ಕರ್ಣಗಳನ್ನು ಸೇರುತ್ತವೆ.
4.)
ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಯಾವುದು?
A). ಲೋಮನಾಳಗಳು
B). ಅಪಧಮನಿ
C). ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ಅಭಿಧಮನಿ
ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಅಭಿಧಮನಿ. ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ. ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ.
5.)
ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ನಿಫ್ರಾನ್
B). ಅಭಿಧಮನಿ
C). ನಾಡಿ
D). ಅಪಧಮನಿ
Correct Ans: (D)
Description
:
ಅಪಧಮನಿ
ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಅಪಧಮನಿ. ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
6.)
ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
A). ನಾಲ್ಕು
B). ಮೂರು
C). ಎರಡು
D). ಒಂದು
Correct Ans: (A)
Description:
ನಾಲ್ಕು
ಮಾನವನ ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ. ಮತ್ತು ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’(Ventricles)ಗಳೆಂದು ಕರೆಯುತ್ತಾರೆ.
7.)
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳ ನಡುವೆ ಇರುವ ಕವಾಟ ಯಾವುದು?
A). ಏಕದಳ ಕವಾಟ
B). ದ್ವಿದಳ ಕವಾಟ
C). ತ್ರಿದಳ ಕವಾಟ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ತ್ರಿದಳ ಕವಾಟ
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ. ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ. ಈ ಕವಾಟಗಳು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.
8.)
ದೊಡ್ಡದಾದ ಅಭಿಧಮನಿ ಯಾವುದು?
A). ಊರ್ಧ್ವ ಅಭಿಧಮನಿ
B). ಅಧೋ ಅಭಿಧಮನಿ
C). ಪುಪ್ಪುಸಕ ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (B)
Description:
ಅಧೋ ಅಭಿಧಮನಿ
ದೊಡ್ಡದಾದ ಅಭಿಧಮನಿಯ ಹೆಸರು 'ಅಧೋ ಅಭಿಧಮನಿ'. ದೊಡ್ಡದಾದ ಅಪಧಮನಿಯ ಹೆಸರು ಮಹಾ ಅಪಧಮನಿ.
9.)
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಏನೆಂದು ಕರೆಯುತ್ತಾರೆ?
A). ಸಿಸ್ಟೋಲ್
B). ಡಯಾಸ್ಟೋಲ್
C). ಕಾರ್ಡಿಯಾಕ್ ಔಟ್‌ಪುಟ್
D). ಮೇಲಿನ ಎಲ್ಲವು ತಪ್ಪು
Correct Ans: (A)
Description:
ಸಿಸ್ಟೋಲ್
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಸಿಸ್ಟೋಲ್ ಕರೆಯುತ್ತಾರೆ. ಹೃದಯದ ಕೋಣೆಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ. ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ ವಾಗುತ್ತದೆ.
10.)
ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತ ಪರಿಚಲನೆಯನ್ನು ಏನೆಂದು ಕರೆಯುವರು?
A). ಪುಪ್ಪಸಕ ಪರಿಚಲನೆ
B). ದೈಹಿಕ ಪರಿಚಲನೆ
C). ಇಮ್ಮಡಿ ಪರಿಚಲನೆ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಪುಪ್ಪಸಕ ಪರಿಚಲನೆ
ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತಪರಿಚಲನೆಯ ಪಥವನ್ನು 'ಪುಪ್ಪಸಕ ಪರಿಚಲನೆ'ಎನ್ನುವರು. ಆಮ್ಮಜನಕ ರಹಿತ ರಕ್ತವು ಹೃತ್ಕುಕ್ಷಿಯಿಂದ ಪುಪ್ಪಸಕ ಅಭಿಧಮನಿ ಹಾಗೂ ಅದರ ಶಾಖೆಗಳ ಮೂಲಕ ಶ್ವಾಸಕೋಶಗಳಲ್ಲಿರುವ ಲೋಮನಾಳಗಳ ಬಲೆಯಲ್ಲಿ ಹರಿಯುತ್ತದೆ. ವಿಸರಣದಿಂದ ವಾಯುಕೋಶಗಳಲ್ಲಿರುವ ಆಕ್ಸಿಜನ್ ಪಡೆದು ಕಾರ್ಬನ್ ಡೈ ಆಕ್ಸೈಡನ್ನು ವಾಯುಕೋಶಗಳಿಗೆ ಬಿಡುಗಡೆ ಮಾಡಿ ಅಕ್ಸಿಜನ್ ಸಹಿತ ರಕ್ತವಾಗಿ ಪುಪ್ಪಸಕ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ ಹಿಂದಿರುಗುತ್ತದೆ.
11.)
ಅಪಧಮನಿಗಳ ಗೋಡೆಗಳಲ್ಲಿ ರಕ್ತದ ಚಲನೆಯಿಂದ ಉಂಟಾಗುವ ಅಲೆಯಂತಹ ಚಲನೆಯನ್ನು _______ ಎನ್ನುವರು.
A). ಡಯಾಸ್ಟೂರ್
B). ಸಿಸ್ಟೋರ್
C). ನಾಡಿ ಮಿಡಿತ
D). ರಕ್ತದ ಒತ್ತಡ
Correct Ans: (C)
Description:
ನಾಡಿ ಮಿಡಿತ
ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮಿಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿಬಡಿತವಿರುತ್ತದೆ.
12.)
ಒಬ್ಬ ಆರೋಗ್ಯವಂತ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
A). 80 ಬಾರಿ
B). 72 ಬಾರಿ
C). 90 ಬಾರಿ
D). 102 ಬಾರಿ
Correct Ans: (B)
Description:
72 ಬಾರಿ
ಒಬ್ಬ ಆರೋಗ್ಯವಂತ ಮನುಷ್ಯನ ಹೃದಯ ಬಡಿತ ನಿಮಿಷಕ್ಕೆ 72ಬಾರಿ ಬಡಿದುಕೊಳ್ಳುತ್ತದೆ. ಹೃದಯ ಬಡಿತವನ್ನು ಅಳೆಯಲು ;ಸ್ಟೆತೆಸ್ಕೋಪ್' ಎಂಬ ಉಪಕರಣವನ್ನು ಬಳಸುತ್ತಾರೆ.
13.)
ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಯಾವುದು?
A). ಊರ್ಧ್ವ ಅಪಧಮನಿ
B). ರೀನಲ್ ಅಪಧಮನಿ
C). ಕರೋನರಿ ಅಪಧಮನಿ
D). ಮೇಲಿನ ಎಲ್ಲವೂ ತಪ್ಪು
Correct Ans: (C)
Description:
ಕರೋನರಿ ಅಪಧಮನಿ
ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಕರೋನರಿ ಅಪಧಮನಿ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
14.)
ಆಮ್ಲಜನಕ ರಹಿತ ರಕ್ತವನ್ನು ಬಲಹೃತ್ಕರ್ಣಕ್ಕೆ ಒಯ್ಯುವ ರಕ್ತನಾಳ ಯಾವುದು?
A). ರಿನಲ್ ಕಾಪ್ಸೂಲ್
B). ಕರೋನರಿ ಸೈನಸ್
C). ರೀನಲ್ ಪ್ಯಾಪಿಲ್ಲಾ
D). ಕರೋನರಿ ಪ್ರಾಪಿಲ್ಸ್
Correct Ans: (B)
Description:
ಕರೋನರಿ ಸೈನಸ್
’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ. ಶ್ವಾಸಕೋಶಗಳಿಂದ ಆಮ್ಲಜನಕ ಸಹಿತ ರಕ್ತವನ್ನು ಹೃದಯದ ಎಡ ಹೃತ್ಕರ್ಣಕ್ಕೆ ತರುವ ಅಭಿಧಮನಿ ಪುಪ್ಪುಸಕ ಆಭಿಧಮನಿ.
15.)
ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಯಾವುದು?
A). ಹೃತ್ಕುರ್ಷಿ
B). ಹೃತ್ಕರ್ಣ
C). ಎ ಮತ್ತು ಬಿ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಹೃತ್ಕುರ್ಷಿ
ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಹೃತ್ಕುರ್ಷಿ. ರಕ್ತವನ್ನು ಒಳಗೆ ತೆಗೆದುಕೊಳ್ಳುವ ಹೃದಯದ ಕೋಣೆ ಹೃತ್ಕರ್ಣ.
16.)
ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ಕರೋನರಿ ಅಪಧಮನಿ
B). ಕರೋನರಿ ಅಭಿಧಮನಿ
C). ರೀನಲ್ ಅಪಧಮನಿ
D).
ರೀನಲ್ ಅಭಿಧಮನಿ
Correct Ans: (D)
Description:
ರೀನಲ್ ಅಭಿಧಮನಿ
ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ರೀನಲ್ ಅಭಿಧಮನಿ. ಮೂತ್ರ ಪಿಂಡಗಳಿಗೆ ಹೃದಯದಿಂದ ರಕ್ತವನ್ನು ಸರಬರಾಜು ಮಾಡುವ ರಕ್ತನಾಳ ರೀನಲ್ ಅಪಧಮನಿ.
17.)
ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಏನೆಂದು ಕರೆಯುತ್ತಾರೆ?
A). ಸೀನೋ ಅಟ್ರಿಯಲ್
B). ಸಿಸ್ಟಾಲ್ ವ್ಯಾಲೂಂ
C). ಸ್ಟ್ರೋಕ್‌ವ್ಯಾಲೂಂ
D). ಕಾರ್ಡಿಯಕ್ ಔಟ್‌ಪುಟ್
Correct Ans: (C)
Description:
ಸ್ಟ್ರೋಕ್‌ವ್ಯಾಲೂಂ
ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಸ್ಟ್ರೋಕ್‌ವ್ಯಾಲೂಂ ಎಂದು ಕರೆಯುತ್ತಾರೆ. ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣ 70 ಮೀ.ಲಿ ಆಗಿರುತ್ತದೆ.
18.)
ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ _____.
A). ಲಬ್ (Lubb)
B). ಡಬ್ (Dubb)
C). ಎಡರೂ ಒಂದೇ ಸಾರಿ ಬರುತ್ತದೆ
D). ಯಾವ ಶಬ್ದವು ಬರುವುದಿಲ್ಲ
Correct Ans: (A)
Description:
ಲಬ್ (Lubb)
ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ ಲಬ್ (Lubb). ಅದೇ ರೀತಿ ಅರ್ಧ ಚಂದ್ರಾಕೃತಿಯ ಕವಾಟಗಳು ಮುಚ್ಚುವಾಗ ಬರುವ ಹೃದಯದ ಶಬ್ದವು ಡಬ್ (Dubb) ಎಂದು ಕೇಳಿಸುತ್ತದೆ.
19.)
ರಕ್ತವು ಅಪಧಮನಿಗಳ ಮೇಲೆ ಉಂಟುಮಾಡುವ ಒತ್ತಡ ಯಾವುದು?
A). ಜಲ ಒತ್ತಡ
B). ನಾಡಿ ಮಿಡಿತ
C). ರಕ್ತದ ಒತ್ತಡ
D). ವಾಯು ಒತ್ತಡ
Correct Ans: (C)
Description:
ರಕ್ತದ ಒತ್ತಡ
ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು’ರಕ್ತದ ಒತ್ತಡ’ ಎನ್ನುವರು.
20.)
ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ ಎಷ್ಟು?
A). 140/20 mm Hg
B). 120/80 mm Hg
C). 72/70 mm Hg
D). 220/80 mm Hg
Correct Ans: (B)
Description:
120/80 mm Hg
ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ 120/80 mm Hg ಇರುತ್ತದೆ. SP (ಸಿಸ್ಟಾಲಿಕ್ ಒತ್ತಡ) =120 mm Hg ಮತ್ತು DP (ಡಯಾಸ್ಟಾಲಿಕ್ ಒತ್ತಡ) = 80 mm Hg.
21.)
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಯಾವುದು?
A). ಸ್ಪಿಗ್ಮೋ ಮಾನೋ ಮೀಟರ್
B). ಅಮ್ಮೀಟರ್
C). ಗ್ಯಾಲೋನೋ ಮೀಟರ್
D). ಡೆಸಿಬಲ್ ಮೀಟರ್
Correct Ans: (A)
Description:
ಸ್ಪಿಗ್ಮೋ ಮಾನೋ ಮೀಟರ್
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಸಿಗ್ಮೋ ಮಾನೋ ಮೀಟರ್ . ಇದನ್ನು ಕಂಡು ಹಿಡಿದ ವಿಜ್ಞಾನಿ 'ರಿವ್ ರಾಕ್ಷೀ'. ಮೊಟ್ಟ ಮೊದಲ ಬಾರಿಗೆ ರಕ್ತದ ಒತ್ತಡವನ್ನು ಅಳೆದ ವಿಜ್ಞಾನಿ 'ಸ್ಟೀಫನ್ ಹಾರ್ಲ್ಸ್'.
22.)
ಕೆಳಗಿನವುಗಳಲ್ಲಿ ಯಾವುದು ಹೃದಯದ ಬಲ ಹೃತ್ಕರ್ಣದಲ್ಲಿ ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ?
A). WAN
B). SEEP
C). PAN
D). SAN
Correct Ans: (D)
Description:
SAN
ಹೃದಯದ ಬಲ ಹೃತ್ಕರ್ಣದಲ್ಲಿರುವ SAN (ಸೀನೋ ಆಟ್ರಿಯಲ್ ನೋಡ್) ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ. ಈ ತರಂಗಗಳು ಹೃದಯ ಬಡಿತಕ್ಕೆ ಕಾರಣವಾಗಿದೆ. SANನ್ನು Pace Maker ಎಂದು ಕರೆಯುತ್ತಾರೆ.
23.)ಹೃದಯಘಾತದ ಮತ್ತೊಂದು ಹೆಸರು ಏನು?
A). ಹಾರ್ಟ್‌ಡೆಡ್
B). ಹೃದಯಾಮರಣ
C). ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್
D). ಹಾರ್ಟ್‌ಇನ್ ಡಿಸಿಸ್
Correct Ans: (C)
Description:
ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್
ಹೃದಯಘಾತದ ಮತ್ತೊಂದು ಹೆಸರು ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್ (Myocardial infarction). ಹೃದಯಘಾತಕ್ಕಿರುವ ಚಿಕಿತ್ಸೆಗಳು ಹೀಗಿವೆ 'ಆ್ಯಂಜಿಯೊಪ್ಲಾಸ್ಟಿ' ಮತ್ತು 'ಬೈಪಾಸ್ ಸರ್ಜರಿ'
24.)ECG ಯನ್ನು ಕಂಡು ಹಿಡಿದವರು ಯಾರು?
A). ಐಸ್ತೊವನಿ
B). ಸ್ಟೀಫನ್ ಹಾರ್ಲ್ಸ್
C). ರಿವ್ ರಾಕ್ಷೀ
D). ಅಲೆಕ್ಸಾಂಡರ್ ಫ್ಲೇಮಿಂಗ್
Correct Ans: (A)
Description:
ಐಸ್ತೊವನಿ
ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ) ಯನ್ನು ಕಂಡು ಹಿಡಿದವರು ಐಸ್ತೊವನಿ. SAN ದಿಂದ ಉತ್ಪತ್ತಿಯಾಗುವ ವಿದ್ಯುತ್ ತರಂಗಗಳನ್ನು ಸ್ವೀಕರಿಸಿ ಹೃದಯದ ಆರೋಗ್ಯವನ್ನು ತಿಳಿಸುವ ಉಪಕರಣ ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ).
25.)ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕ ಸಾಗಾಣಿಕೆಯಿಂದ ಹುಟ್ಟುವ ಮಗುವಿನ ನಾಲಿಗೆ, ಕಣ್ಣು ಯಾವ ಬಣ್ಣಕ್ಕೆ ತಿರುಗುತ್ತದೆ?
A). ಕೆಂಪು
B). ನೀಲಿ
C). ಹಸಿರು
D). ಹಳದಿ
Correct Ans: (B)
Description:
ನೀಲಿ
ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕವಾಗಿ ಸಾಗಾಣಿಕೆ ಆಗುವುದರಿಂದ ಹುಟ್ಟುವ ಮಗುವಿನ ತುಟಿ, ನಾಲಿಗೆ, ಕಣ್ಣು ಗುಡ್ಡೆಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಮಗುವನ್ನು ಬ್ಲೂ ಬೇಬಿ (Blue Baby) ಅಥವಾ ನೀಲಿ ಮಗು ಎಂದು ಕರೆಯುತ್ತಾರೆ.
26.)ಕೆಳಗಿನವುಗಳಲ್ಲಿ ಹೃದಯಘಾತಕ್ಕೆ ಕಾರಣವಾದ ಅಂಶ ಯಾವುದು?
A). ರಕ್ತದಲ್ಲಿನ ಪ್ರೋಟೀನ್
B). ರಕ್ತದಲ್ಲಿ ಸಕ್ಕರೆ
C). ರಕ್ತದಲ್ಲಿನ ಯೂರಿಯಾ
D). ಕೊಲೆಸ್ಟ್ರಾಲ್
Correct Ans: (D)
Description:
ಕೊಲೆಸ್ಟ್ರಾಲ್
ರಕ್ತನಾಳದಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳುವುದರಿಂದ ರಕ್ತನಾಳಗಳು ಸ್ಥಿತಿಸ್ಥಾಪಕ ಗುಣಗಳನ್ನು ಕಳೆದುಕೊಳ್ಳುತ್ತವೆ. ಈ ಸ್ಥಿತಿಯನ್ನು 'ಅಥೆರೊಸ್ಕ್ಲಿರೊಸಿಸ್' ಎನ್ನುವರು. ಇದು ಹೃದಯಘಾತಕ್ಕೆ ಕಾರಣವಾಗುತ್ತದೆ.
__________________________________________
ಸಂಗ್ರಹ ✍️ T. A. ಚಂದ್ರಶೇಖರ
ಪ್ರಮುಖ ಅಂಶಗಳು
ಹಿಂದೂ ಮಾಸಗಳು ಮತ್ತು ಋತುಗಳು BY MAYA · 28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...