ಕನ್ನಡ ಸಂಧಿ
ADD ARTICLE DESCRIPTION
ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು. ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.
- ವಿದ್ವಾಂಸರ ಅಭಿಪ್ರಾಯ
- ಸ0ಧಿ ಎಂದರೇನು?
ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.
- ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.
- ಸಂಧಿಗಳಲ್ಲಿ ಎರಡು ವಿಧ.
- ಕನ್ನಡ ಸಂಧಿ.
- ಸಂಸ್ಕೃತ ಸಂಧಿ.
ಕನ್ನಡ ಸಂಧಿ
- ಕನ್ನಡ ಸಂಧಿ ಎಂದರೇನು ?
- ಕನ್ನಡ ಕನ್ನಡ ಪದಗಳು ಕೂಡಿ ಆಗುವುದು ಕನ್ನಡ ಸಂಧಿ. ಉದಾ : ಎಳೆ+ಕರು=ಎಳೆಕರು. ಇಲ್ಲಿ ಎರಡೂ ಕನ್ನಡ+ಕನ್ನಡ ಪದಗಳು ಸೇರಿ ಸಂಧಿಯಾಗಿದೆ.
- ಒಂದು ಕನ್ನಡ ಪದ, ಇನ್ನೊಂದು ಸಂಸ್ಕೃತ ಪದ ಕೂಡಿ ಸಂಧಿಯಾದರೂ ಕನ್ನಡ ಸಂಧಿಯಾಗಬಹುದು.
- ಕನ್ನಡ ಸಂಧಿಗಳು ಯಾವುವು?
- ಲೋಪಾಗಮಾದೇಶ ಎಂದು ಕನ್ನಡದ ಮೂರು ಸಂಧಿಗಳು. : ಲೋಪ-ಆಗಮ-ಆದೇಶ
- ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.
- ಲೋಪಸಂಧಿ
- ಆಗಮ ಸಂಧಿ
- ಆದೇಶ ಸಂಧಿ
== ಸ್ವರ ಸಂಧಿ ==ಸ್ವರಸಂಧಿ ಎಂದರೇನು? ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ ಸ್ವರಸಂಧಿ. ಎಂದರೆ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲನೆಯ ಅಕ್ಷರ ಸಂಧಿಸಿದಾಗ ಸಂಧಿ ಆಗುವುದು. ಇದನ್ನು ಸಂಧಿಕಾರ್ಯವೆನ್ನುವರು. ಉದಾ: ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+ಇ (ಸಂಧಿಪದ ಸಂದರ್ಭ) ಮರ+ಅನ್ನು = ಮರವನ್ನು. ಅ+ಅ(ಸಂಧಿಪದ ಸಂದರ್ಭ)
ಲೋಪ-ಆಗಮ-ಆದೇಶ, ಈ ಮೂರೂ ಸಂಧಿಗಳು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.
- ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
- ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
- ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
- ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ‘ಪ್ರಕೃತಿಭಾವ’ / ವಿಸಂಧಿ.
ಸಂಧಿಯಾಗುವ ಸ್ಥಳಗಳಲ್ಲಿ ಎರಡು ವಿಧ
- ಪದಮಧ್ಯ ಸಂಧಿ : ಪ್ರಕೃತಿ+ಪ್ರತ್ಯಯಗಳ ಸೇರುವಿಕೆಯಿಂದ ಪದವಾಗುತ್ತದೆ. ಇದರ ಮಧ್ಯದಲ್ಲಿ ಉಂಟಾಗುವ ಸೇರುವಿಕೆಯೇ ಪದಮಧ್ಯ ಸಂಧಿ. ಉದಾ: ಮನೆಯಿಂದ=ಮನೆ+ಇಂದ, ನೋಡು+ಅ+ಅನ್ನು=ನೋಟವನ್ನು. ಮಾತು+ಒಳ್=ಮಾತೊಳ್.
- ಪದಾಂತ್ಯ ಸಂಧಿ : ಒಂದು ಪದದ ಮುಂದೆ ಇನ್ನೊಂದು ಪದವೋ, ಪ್ರತ್ಯಯವೋ ಸೇರಿದರೆ ಆ ಸಂಧಿಯನ್ನು ಪದಾಂತ್ಯ ಸಂಧಿಯೆನ್ನುತ್ತಾರೆ. ವಾಕ್ಯದಲ್ಲಿ ಎರಡು ಪದಗಳ ನಡುವೆ ಆಗುವ ಸಂಧಿ. ಉದಾ: ಮರ+ಎಂಬಲ್ಲಿ=ಮರವೆಂಬಲ್ಲಿ, ಶಿಖರ+ಅನ್ನು+ಏರಿ=ಶಿಖರವನ್ನೇರಿ. [ಪದಮಧ್ಯೆ ಸಂಧಿ ನಿತ್ಯವೂ ಬರುವುದು. ಪದಾಂತ್ಯ ಸಂಧಿ ವಿಕಲ್ಪವಾಗಿ ಬರುವುದು. ವಿಕಲ್ಪ=ಸಂಧಿಮಾಡಬಹುದು/ಬಿಡಬಹುದು]