ಶಿಕ್ಷಣವೇ ಶಕ್ತಿ

Monday, 28 December 2020

ಖನಿಜ ಶಾಸ್ತ್ರ

ಖನಿಜ ಶಾಸ್ತ್ರ

ADD ARTICLE DESCRIPTION


ಖನಿಜಶಾಸ್ತ್ರ ಖನಿಜಗಳ ಸ್ಫಟಿಕಶಾಸ್ತ್ರ, ಭೌತ ಹಾಗೂ ರಾಸಾಯನಿಕ ಗುಣಗಳ ವರ್ಗೀಕರಣ, ಅನ್ವೇಷಣೆ ಇವೇ ಮುಂತಾದವನ್ನು ವಿವೇಚಿಸುವ ವಿಜ್ಞಾನ ನಿಭಾಗ (ಮಿನರಾಲಜಿ). ಖನಿಜಗಳ ಜೊತೆಗೆ ಆಕಾಶದಿಂದ ಭೂಮಿಯ ಮೇಲೆ ಆಗಾಗ ಬೀಳುವ ಉಲ್ಕೆಗಳನ್ನು ಸಹ ಈ ಶಾಸ್ತ್ರದಲ್ಲಿ ವಿವೇಚಿಸಲಾಗುತ್ತದೆ. ಇನಾಗ್ರ್ಯಾನಿಕ್ ಕ್ರಿಯೆಗಳಿಂದ ಉಂಟಾಗುವ ವಸ್ತು ಖನಿಜ. ಇದಕ್ಕೆ ಒಂದು ನಿರ್ದಿಷ್ಟವಾದ ರಾಸಾಯನಿಕ ಸಂಯೋಜನೆ ವಸ್ತು ಉಂಟು. ಪ್ರಕೃತಿಯಲ್ಲಿ ಅನುಕೂಲಕರವಾದ ವಾತಾವರಣದಲ್ಲಿ ಖನಿಜಗಳು ಉಂಟಾದಲ್ಲಿ ಇವುಗಳಿಗೆ ಒಂದು ನಿಖರವಾದ ಒಳ ಅಣುರಚನೆಯೂ ಇರುವುದು. ಈ ಕಾರಣದಿಂದಲೇ ಅನೇಕ ಖನಿಜಗಳು ಹರಳುಗಳಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಅವುಗಳಲ್ಲಿ ಕಂಡುಬರುವ ಹಲವಾರು ಭೌತ ಗುಣಗಳಿಗೂ ಈ ಅಣುರಚನೆಯೇ ಕಾರಣ. ಇವೆಲ್ಲಕ್ಕೂ ಮಿಗಿಲಾಗಿ ಮುಖ್ಯ ಲಕ್ಷಣವೆಂದರೆ ಖನಿಜವನ್ನು ಉಂಟುಮಾಡುವ ಮೂಲಧಾತುಗಳ ಸಂಪೂರ್ಣ ಸಮ್ಮಿಳನ. ಆದ್ದರಿಂದಲೇ ಖನಿಜಗಳನ್ನು ಕೆಲವು ರಾಸಾಯನಿಕ ಸಂಕೇತಗಳಿಂದ ಗುರುತಿಸಲಾಗಿದೆ.

ಖನಿಜಶಾಸ್ತ್ರವು ರಸಾಯನಶಾಸ್ತ್ರ, ಭೌತಶಾಸ್ತ್ರ,ಮೆಟೀರಿಯಲ್ಸ್ ಸೈನ್ಸ್,ಭೂವಿಜ್ಞಾನ ಒಟ್ಟಾದ ರೂಪ.

ಇತಿಹಾಸ

೧೯ನೆಯ ಶತಮಾನದ ಆದಿಭಾಗದವರೆಗೂ ಖನಿಜಶಾಸ್ತ್ರದ ವೈಜ್ಞಾನಿಕ ಬೆಳವಣಿಗೆ ಕಂಡುಬರುವುದಿಲ್ಲ. ಆ ವೇಳೆಗೆ ಸುಪ್ರಸಿದ್ಧ ವಿಜ್ಞಾನಿ ಜವಾಯ್ ಸ್ಫಟಿಕಶಾಸ್ತ್ರದ ಮೂಲಭೂತ ತತ್ತ್ವಗಳನ್ನು ಪ್ರತಿಪಾದಿಸಿ ಖನಿಜಶಾಸ್ತ್ರಕ್ಕೆ ಒಂದು ಹೊಸ ಆಯಾಮ ನೀಡಿದ. ಅಲ್ಲದೇ ಅದೇ ಸುಮಾರಿಗೆ ರಸಾಯನ ವಿಜ್ಞಾನದಲ್ಲಿ ಒಂದು ಹೊಸ ಸ್ಪಂದನ ತಲೆದೋರಿತ್ತು. ಹೀಗಾಗಿ ರಾಸಾಯನಿಕ ಸಂಯೋಜನೆ ಮತ್ತು ಅವುಗಳ ಬಾಹ್ಯರೂಪ ಬಹು ಪ್ರಮುಖವಾದ ಅಂಶಗಳೆಂದೂ ಇತರ ಗುಣಗಳು ಅನೇಕ ಬಾರಿ ಅಲ್ಪಸ್ವಲ್ಪ ಬದಲಾವಣೆಗಳನ್ನು ತೋರಿಸಬಹುದೆಂದೂ ಅಭಿಪ್ರಾಯಪಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಖನಿಜಗಳಿಗೆ ಪ್ರಕಾಶ ವಿಜ್ಞಾನದ (ಆಪ್ಟಿಕ್ಸ್) ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸಿ ಖನಿಜಕರಣ ಎಷ್ಟೇ ಸೂಕ್ಷ್ಮವಾಗಿದ್ದರೂ ಸೂಕ್ಷ್ಮದರ್ಶಿಯ ಸಹಾಯದಿಂದ ಅದರ ನಿರ್ದಿಷ್ಟ ಗುಣಗಳನ್ನು ನಿರ್ಧರಿಸಲು ಸಾಧ್ಯವಾಗಿದೆ. ಈಗ ಖನಿಜಗಳ ಅಧ್ಯಯನದಲ್ಲಿ ಅವುಗಳ ಭೌತ ಲಕ್ಷಣಗಳು ಮತ್ತು ರಾಸಾಯನಿಕ ಸಂಯೋಜನೆಯ ಜೊತೆಗೆ ಅವುಗಳ ಸ್ಫಟಿಕ ರೂಪ, ಪ್ರಕಾಶವಿಜ್ಞಾನಕ್ಕೆ ಸಂಬಂಧಿಸಿದ ಗುಣಗಳು, ಅವುಗಳ ಅಣು ಗಾತ್ರ ಮತ್ತು ರಚನಾವೈವಿಧ್ಯಗಳನ್ನು ಕೂಡ ನಿರ್ಧರಿಸಲಾಗುತ್ತದೆ.

ಖನಿಜಶಾಸ್ತ್ರ ವಿಭಾಗದ ಶೀರ್ಷಿಕೆಗಳಲ್ಲಿ

೧. ಸ್ಫಟಿಕಶಾಸ್ತ್ರ

ಇದು ಮುಖ್ಯವಾಗಿ ಖನಿಜಗಳ ಆಕೃತಿ ಅಥವಾ ಹೊರರೂಪಕ್ಕೆ ಸಂಬಂಧಿಸಿದ್ದು. ಖನಿಜದ ಸ್ಫಟಿಕಾಕೃತಿ ಅದರ ಒಳರಚನೆಯನ್ನು ಅವಲಂಬಿಸಿದೆ. ಹಲವು ಖನಿಜಗಳಂತೂ ತಮ್ಮದೇ ಆದ ಒಂದು ವಿಶಿಷ್ಟ ರೀತಿಯ ಆಕಾರವನ್ನು ಎಂಥ ಸಂದರ್ಭಗಳಲ್ಲಾದರೂ ಪಡೆಯುತ್ತದೆ. ಸ್ಫಟಿಕಾಕೃತಿಗೂ ಖನಿಜಕ್ಕೂ ಹೆಚ್ಚಿನ ನಂಟುತನ ಉಂಟು. ಹೊರ ಆಕಾರವನ್ನು ಆಧರಿಸಿ ಇಂಥದೇ ಖನಿಜವೆಂದು ಹೆಚ್ಚು ಕಷ್ಟವಿಲ್ಲದೆ ಗುರುತಿಸಬಹುದು. ಈ ದೃಷ್ಟಿಯಿಂದ ಖನಿಜ ಶಾಸ್ತ್ರದಲ್ಲಿ ಸೂಜಿಯಿಂದ, ನಕ್ಷತ್ರದಂಥ, ನೂಲಿನಂಥ, ಸ್ತಂಭಾಕೃತಿಯ ಅಲಗಿನಂಥ, ಪಟ್ಟಿಯಂಥ ಅನೇಕ ಆಕಾರಗಳನ್ನು ನೋಡಿ ಹೆಸರಿಸಬಹುದು.

೨. ಸ್ಫಟಿಕಗಳ ಒಳರಚನೆ

ಖನಿಜಗಳ ಅಣುರಚನೆಯನ್ನು ಎಕ್ಸ್ ಕಿರಣಗಳ ಸಹಾಯದಿಂದ ಸುಲಭವಾಗಿ ನಿರ್ಧರಿಸಬಹುದು. ಈಚಿನ ವರ್ಷಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿದೆ. ಖನಿಜಶಾಸ್ತ್ರದಲ್ಲಿ ಎಕ್ಸ್‍ಕಿರಣಗಳ ಬಳಕೆಯನ್ನು ಲಾವೆ ಎಂಬಾತ ಮೊದಲ ಬಾರಿಗೆ ಜಾರಿಗೆ ತಂದ. ಇದರಿಂದ ಖನಿಜಗಳ ಒಳರಚನೆಯೇ ಅಲ್ಲದೆ ಆ ರಚನೆಯ ಚೌಕಟ್ಟಿನಲ್ಲಿ ವಿವಿಧ ಅಣುಗಳಿರುವ ಸ್ಥಾನಗಳನ್ನು ಸಹ ಗುರುತಿಸಬಹುದು. ಒಂದು ಸಣ್ಣ ಪ್ರನಾಳದಲ್ಲಿರುವ ಖನಿಜದ ಪುಡಿಯ ಮೇಲೆ ಎಕ್ಸ್‍ಕಿರಣಗಳನ್ನು ಹಾಯಿಸಿ ಛಾಯಾಚಿತ್ರವನ್ನು ತೆಗೆದಲ್ಲಿ ಅಣು ಚೌಕಟ್ಟು ಸ್ಪಷ್ಟಗೊಳ್ಳುತ್ತದೆ.

೩. ಭೌತ ಖನಿಜಶಾಸ್ತ್ರ

ಇದರಲ್ಲಿ ಮುಖ್ಯವಾಗಿ ಖನಿಜಗಳ ಭೌತ ಲಕ್ಷಣಗಳನ್ನು ವಿವೇಚಿಸಲಾಗುವುದು. ಖನಿಜಗಳ ಕಾಠಿಣ್ಯ, ಸಾಂಧ್ರತೆ, ಬಣ್ಣ, ಒರೆ, ಸೀಳುಗಳು, ಬಿರಿತಗಳು ಮತ್ತು ವಿದ್ಯುತ್ತು ಹಾಗೂ ಕಾಂತದ ಪ್ರಭಾವಕ್ಕೆ ಒಳಗಾದಾಗ ಉಂಟಾಗುವ ಗುಣಗಳು ಇವೇ ಮುಖ್ಯವಾದವು. ಇವು ಕೂಡ ವಿವಿಧ ಖನಿಜಗಳನ್ನು ಗುರುತಿಸಲು ಬಹು ಸಹಾಯಕವಾಗಿದೆ.

೪. ರಾಸಾಯನಿಕ ಖನಿಜಶಾಸ್ತ್ರ

ಖನಿಜಗಳ ರಾಸಾಯನಿಕ ಸಂಯೋಜನೆಯನ್ನು ಅವುಗಳ ಒಂದು ಬಹುಮುಖ್ಯ ಗುಣವೆಂದು ಪರಿಗಣಿಸಬಹುದು. ಕೆಲವು ಪ್ರಯೋಗಗಳಿಂದ ಖನಿಜಗಳ ನಿಜಸ್ವರೂಪವನ್ನು ಅಷ್ಟು ಕಷ್ಟವಿಲ್ಲದೆ ಗುರುತಿಸಬಹುದು. ಇವುಗಳಲ್ಲಿ ಊದುಕೊಳವೆ ಮತ್ತು ಸೂಕ್ಷ್ಮ ರಾಸಾಯನಿಕ ಪ್ರಯೋಗಗಳು ಬಲು ಪ್ರಯೋಜನಕಾರಿ. ಆದರೆ ಒಂದು ಖನಿಜದ ಸಂಪೂರ್ಣ ಲಕ್ಷಣಗಳನ್ನು ಅರಿಯಬೇಕಾದರೆ ಆ ಖನಿಜದ ವಿವಿಧಾಂಶಗಳನ್ನು ರಾಸಾಯನಿಕ ವಿಶ್ಲೇಷಣೆಯಿಂದ ನಿರ್ಧರಿಸಬಹುದು. ಈಚಿನ ವರ್ಷಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿದೆ.

ಆಕರ ಮತ್ತು ಉತ್ಪತ್ತಿ

ಖನಿಜಗಳು ಶಿಲೆಗಳ ಬಿರುಕುಗಳಲ್ಲಿ ಮತ್ತು ಕುಳಿಗಳಲ್ಲಿ ದೊರೆಯುತ್ತವೆ. ಅಲ್ಲದೆ ಶಿಲೆಗಳ ಮುಖ್ಯ ಅಂಶಗಳೇ ಖನಿಜಗಳೆಂದು ಈಗಾಗಲೇ ವಿವರಿಸಲಾಗಿದೆ. ಅನೇಕ ಖನಿಜಗಳು ಮಾತೃಶಿಲಾದ್ರವ (ಮಾಗ್ಮ), ಅಲ್ಲಿರುವ ಮೂಲಜಲ (ಮಾಗ್ಮ್ಯಾಟಿಕ್ ವಾಟರ್) ಅಥವಾ ಅಂತರ್ಜಲ (ಗ್ರೌಂಡ್‍ವಾಟರ್) ಇವುಗಳಿಂದ ರೂಪಗೊಳ್ಳುತ್ತವೆ. ಮಾತೃಶಿಲಾದ್ರವ ಮತ್ತು ಖನಿಜಗಳು ತಲೆದೋರುತ್ತವೆ. ಈ ಕಾರಣದಿಂದಲೇ ಅಗ್ನಿಪರ್ವತಗಳನ್ನು ಬಿಸಿನೀರಿನ ಚಿಲುಮೆಗಳು ಮತ್ತು ಗೇಸರುಗಳು ಇವುಗಳ ಸಮೀಪದಲ್ಲಿ ಸಾಮಾನ್ಯವಾಗಿ ಖನಿಜಗಳನ್ನು ನೋಡಬಹುದು. ಪ್ರಯೋಗಶಾಲೆಯಲ್ಲಿ ಖನಿಜಗಳ ಸಂಯೋಜನೆಯಲ್ಲಿ ಕಂಡು ಬರುವ ಮೂಲತತ್ತ್ವಗಳು ಪ್ರಕೃತಿಯಲ್ಲಿ ಪ್ರಭಾವಬೀರಿ ಖನಿಜೋತ್ಪತ್ತಿಗೆ ಮುಖ್ಯ ಕಾರಣವಾಗಿವೆ. ಬಹುಶಃ ಒತ್ತಡ, ಉಷ್ಣ ಮತ್ತು ಕಾಲಪರಿಮಿತಿ ಇವುಗಳಲ್ಲಿ ಈ ಎರಡು ಕಾರ್ಯರಂಗಗಳಿಗೂ ಅಷ್ಟು ಹೆಚ್ಚಿನ ಸಾಮ್ಯ ಇರದು.

ಉಪಯೋಗಗಳು

ಎಲ್ಲ ಲೋಹಗಳಿಗೂ ಮೂಲ ಖನಿಜಗಳು. ಅನೇಕ ರಾಸಾಯನಿಕ ಮತ್ತು ಇತರ ಕೈಗಾರಿಕೆಗಳಿಗೆ ಅಗತ್ಯವಾದ ಮೂಲವಸ್ತುಗಳು ಖನಿಜಗಳೇ. ಸಸ್ಯ ಸಂಬಂಧವಾದ ಮತ್ತು ಪ್ರಾಣಿಸಂಬಂಧವಾದ ವಸ್ತುಗಳ ಉತ್ಪತ್ತಿಯಲ್ಲಿ ಕೂಡ ಪಾತ್ರ ಪ್ರಮುಖವಾದುದು. (ನೋಡಿ- ಖನಿಜಾನ್ವೇಷಣೆ) (ಎಸ್.ಕೆ.ವಿ.)


ಖನಿಜ

ಪ್ರಾಕೃತಿಕವಾದ ಸಂಯುಕ್ತ


ಪ್ರಕೃತಿಯಲ್ಲಿ ದೊರೆಯುವ, ಅಜೈವಿಕ ಮೂಲದ ಸಾಮಾನ್ಯವಾಗಿ ಸ್ಪಟಿಕರೂಪವನ್ನು ಹೊಂದಿರುವ ನಿಸರ್ಗ ಸಹಜವಾದ ರಾಸಾಯನಿಕ ಸಂಯುಕ್ತಗಳನ್ನು ಖನಿಜಗಳು ಎನ್ನುತ್ತಾರೆ.

ಖನಿಜ

"ಖನಿಜ" (ಅಂದರೆ ಖನಿ[ಗಣಿ] ಯಲ್ಲಿ ಜನ್ಯ[ಹುಟ್ಟಿದ] ವಸ್ತು), ಎಂಬ ಶಬ್ಧ ಸಂಸ್ಕೃತ ಮೂಲದಿಂದ ಬಂದಿದೆ. ಇಂಗ್ಲೀಷಿನಲ್ಲಿ ಮಿನರಲ್ (mineral) ಎನ್ನುತ್ತಾರೆ. ಖನಿಜಗಳ ಅಧ್ಯಯನವನ್ನು "ಖನಿಜ ವಿಜ್ಞಾನ" ಅಥವಾ "ಖನಿಜಶಾಸ್ತ್ರ" ಎಂದು ಕರೆಯಲಾಗುತ್ತದೆ.

ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಸಹಜ ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರ(ತೊಗಟೆ crust )ಯಲ್ಲಿ ಅತಿ ಹೆಚ್ಚು ಇರುವ ಮೂಲವಸ್ತುಗಳು ಇವೆರಡು ಸುಮಾರು ೭೫% ನಷ್ಟು ಪ್ರಮಾಣ ದಲ್ಲಿವೆ. ವಿವಿಧ ಖನಿಜ ಪ್ರಬೇಧಗಳನ್ನು ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂದ ಗುರುತಿಸಲಾಗುತ್ತದೆ.

ಫ್ಲೋರೈಟು ಖನಿಜ

ಖನಿಜಗಳು

ನೈಸರ್ಗಿಕವಾಗಿ ದೊರೆಯುವ, ಸಾಮಾನ್ಯವಾಗಿ ಸ್ಪಟಿಕ ರೂಪದಲ್ಲಿರುವ , ಅಜೈವಿಕ ಉಗಮದ ರಾಸಾಯನಿಕ ಸಂಯುಕ್ತ ವನ್ನು ಖನಿಜವೆಂದು ಕರೆಯುತ್ತಾರೆ. ಯಾವುದೇ ಒಂದು ಖನಿಜಕ್ಕೆ ನಿರ್ದಿಷ್ಟವಾದ ರಾಸಾಯನಿಕ ಸಂಘಟನೆ ಇರುತ್ತದೆ. ವಿವಿಧ ಬಗೆಯ ಖನಿಜಗಳು (minerals) ಅಥವಾ ಖನಿಜರೂಪಿಗಳು (mineraloids) ಸೇರಿಕೊಂಡಿರುವ ನೈಸರ್ಗಿಕ ವಸ್ತುವನ್ನು ಶಿಲೆ(rock) ಯೆಂದು ಪರಿಗಣಿಸಲಾಗುತ್ತದೆ.

ಈ ಹಿಂದೆ 1995 ರಲ್ಲಿ ಅಂತರ್ರಾಷ್ಟ್ರೀಯ ಖನಿಜವಿಜ್ಞಾನ ಸಂಘ ( IMA) ಅಂಗೀಕರಿಸಿದ ವ್ಯಾಖ್ಯೆಯ ಪ್ರಕಾರ ಭೂವೈಜ್ಙಾನಿಕ ಪ್ರಕ್ರಿಯೆಗಳಿಂದ ಉತ್ಪತ್ತಿಯಾದ ಸ್ಫಟಿಕ ರಚನೆಯಿರುವ ಯಾವುದೇ ಒಂದು ಮೂಲವಸ್ತು (ಧಾತು) ಅಥವಾ ರಾಸಾಯನಿಕ ಸಂಯುಕ್ತ ವನ್ನು ಖನಿಜ ವೆನ್ನಲಾಗುತ್ತದೆ.

ಖನಿಜಗಳ ಅಧ್ಯಯನವನ್ನು ”ಖನಿಜವಿಜ್ಞಾನ” ಅಥವಾ “ಖನಿಜಶಾಸ್ತ್ರ “(mineralogy) ಎನ್ನುತ್ತಾರೆ.

ಪ್ರಪಂಚದಲ್ಲಿ 2017ರ ಮಾರ್ಚ್ ತಿಂಗಳವರೆಗೆ 5300 ವಿಧ(ತಳಿ)ಗಳನ್ನು ಖನಿಜ ಗುರುತಿಸಲಾಗಿದೆ. ಇವುಗಳಲ್ಲಿ 5230 ಖನಿಜ ವಿಧಗಳನ್ನು ಅಂತರಾಷ್ಟ್ರಿಯ ಖನಿಜವಿಜ್ಞಾನ ಸಂಘ ವು (IMA -ಇಂಟರ ನ್ಯಾಶನಲ್ ಮಿನರಲೊಜಿಕಲ್ ಅಸೋಸಿಯೇಶನ್ ) ಅಂಗೀಕರಿಸಿದೆ.

ಭೂಮಿಯ ಹೊರತೊಗಟೆ (crust) ಯಲ್ಲಿರುವ ಖನಿಜಗಳಲ್ಲಿ ಹೆಚ್ಚುಕಡಿಮೆ 90% ದಷ್ಟು ಸಿಲಿಕೇಟು ಖನಿಜಗಳಾಗಿವೆ. ಭೂಮಿಯ ರಾಸಾಯನಿಕಗುಣಶಾಸ್ತ್ರದ ಅನುಸಾರವಾಗಿ ವಿವಿಧ ಲಭ್ಯ ಖನಿಜ ವಿಧಗಳ ವೈವಿಧ್ಯತೆ ಮತ್ತು ವಿಪುಲತೆ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಆಮ್ಲಜನಕ ಎಂಬ ಮೂಲವಸ್ತುಗಳು ಭೂಮಿಯ ಹೊರತೊಗಟೆಯಲ್ಲಿ ಅಂದಾಜು 75 % ದಷ್ಟು ಇರುವ ಕಾರಣ, ಈ ಮೂಲವಸ್ತುಗಳನ್ನು ಹೊಂದಿರುವ ಸಿಲಿಕೇಟು ವಿಧದ ಖನಿಜಗಳು ವ್ಯಾಪಕವಾಗಿ ಕಂಡು ಬರುತ್ತವೆ.

ಖನಿಜಗಳ ಗುರುತು ಹಚ್ಚುವುದು

ಖನಿಜಗಳನ್ನು ವಿವಿಧ ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಧರ್ಮಗಳ ಸಹಾಯದಿಂದ ಗುರುತಿಸಬಹುದಾಗಿದೆ. ಉತ್ಪತ್ತಿಯಾಗುವ ಭೂವೈಜ್ಞಾನಿಕ ಪರಿಸರದ ಅನುಗುಣವಾಗಿ ಖನಿಜಗಳ ರಾಸಾಯನಿಕ ಸಂಘಟನೆ ಮತ್ತು ಸ್ಪಟಿಕ ರಚನೆಗಳಲ್ಲಿ ಉಂಟಾಗುವ ವ್ಯತಾಸಗಳನ್ನು ಆಧರಿಸಿ ವಿವಿಧ ಖನಿಜ ವಿಧಗಳನ್ನು ಗುರುತಿಸಬಹುದು. ಶಿಲಾ ವಸ್ತುಗಳ ಉಗಮ ಪರಿಸರದಲ್ಲಿ ಉಂಟಾಗುವ ಉಷ್ಣತೆ, ಒತ್ತಡ ಮತ್ತು ಸಮಗ್ರ ಸಂಘಟನೆಯಲ್ಲಿ ಬದಲಾವಣೆಗಳು ಅದರಲ್ಲಿರುವ ಖನಿಜಗಳಲ್ಲಿ ಬದಲಾವಣೆಗೆ ಕಾರಣವಾಗುತ್ತವೆ.

ಖನಿಜಗಳ ರಾಸಾಯನಿಕ ರಚನೆ ಮತ್ತು ಸಂಘಟನೆಗೆ ಸಂಬಂಧಪಟ್ಟ ವಿವಿಧ ಭೌತಿಕ ಗುಣಧರ್ಮಗಳ ಆಧಾರದ ಮೇಲೆ ಖನಿಜಗಳನ್ನು ವಿವರಿಸಬಹುದು. ಖನಿಜಗಳನ್ನು ಗುರುತಿಸಲು ಸಹಕಾರಿಯಾದ ಸಾಮಾನ್ಯ ಭೌತಿಕ ಗುಣಗಳೆಂದರೆ ಅವುಗಳ ಸ್ಪಟಿಕ ರಚನೆ, ಬಾಹ್ಯರೂಪಗಡಸುತನಹೊಳಪು, ಪಾರದರ್ಶಕತ್ವ ,ಬಣ್ಣ, ಪುಡಿ, ಸೀಳಿಕೆ, ಬಿರುಕು,ಸಂದುಗಳು ಮತ್ತು ವಿಶಿಷ್ಟ ಸಾಂದ್ರತೆ. ಇದಲ್ಲದೆ ಖನಿಜಗಳ ಆಯಸ್ಕಾಂತೀಯ ಗುಣ, ರುಚಿ, ವಾಸನೆ, ವಿಕಿರಣಶೀಲತ್ವ ಮತ್ತು ಆಮ್ಲದೊಂದಿಗೆ ವರ್ತನೆಯಂತಹ ವಿಶಿಷ್ಟ ಗುಣಗಳನ್ನು ಬಳಸಿ ಇನ್ನಷ್ಟು ನಿಖರವಾಗಿ ಖನಿಜ ಪ್ರಭೇಧವನ್ನು ಗುರುತಿಸಬಹುದು.

ಖನಿಜಗಳು ಒಳಗೊಂಡಿರುವ ಮುಖ್ಯ ರಾಸಾಯನಿಕ ಘಟಕಗಳ ಆಧಾರದ ಮೇಲೆ ಅವುಗಳನ್ನು ವರ್ಗಿಕರಿಸುತ್ತಾರೆ. ಖನಿಜಗಳ ವರ್ಗಿಕರಣ ಕ್ಕಾಗಿ (೧) ಡಾನಾ ವರ್ಗಿಕರಣ ಮತ್ತು (೨) ಸ್ಟ್ರುಂಝ್ ವರ್ಗಿಕರಣ ಎಂಬ ಎರಡು ಮುಖ್ಯವಾದ ಪದ್ಧತಿಗಳಿವೆ.

ಸಿಲಿಕೇಟು ಖನಿಜಗಳು

ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.
ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.

ಸಿಲಿಕೇಟು (Silicate) ವರ್ಗಕ್ಕೆ ಸೇರಿದ ಖನಿಜಗಳನ್ನು ಅವುಗಳ ಬಹುಕಣಕರಣ (ಪಾಲಿಮರಿಕರಣ -polymerization) ಮತ್ತು ಸ್ಪಟಿಕ ರಚನೆಗಳ (crystal structure)ಆಧಾರದ ಮೇಲೆ ಆರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಸಿಲಿಕೇಟು ಖನಿಜಗಳಲ್ಲಿ [SiO4]4- ಎಂಬ ಸಿಲಿಕಾ(silica) ಚತರ್ಮುಖಿ ಗಳ (tetrahedron) ಮೂಲ ಘಟಕಗಳಿರುತ್ತವೆ. ಸಿಲಿಕಾ ಚತುರ್ಮುಖಿ ಅಂದರೆ, ಒಂದು ಸಿಲಿಕಾನ್ ಧನಾಯಾನು(cation)ವಿನ ಸುತ್ತ ನಾಲ್ಕು ಆಮ್ಲಜನಕದ ಋಣಾಯನುಗಳು (anions) ಕೂಡಿಕೊಂಡು ಉಂಟಾದ ಚತುರ್ಮುಖ ರೂಪದ ರಚನೆ. ಬಹುಕಣಕರಣಗೊಂಡ ಇಂತಹ ಸಿಲಿಕಾನ್ ಚತುರ್ಮುಖಿಗಳನ್ನು ಈ ಕೆಳಗಿನಂತೆ ಉಪವಿಭಾಗಿಸಬಹುದು.

  • ನೇರ ಸಿಲಿಕೇಟುಗಳು (ಆರ್ಥೋ ಸಿಲಿಕೇಟುಗಳು- Orthosilicates ಬಹುಕಣವಿಲ್ಲದ ಒಂಟಿ ಸಿಲಿಕಾ ಚತುರ್ಮುಖಿಗಳು)
  • ದ್ವ ಸಿಲಿಕೇಟುಗಳು (ಡೈ ಸಿಲಿಕೇಟುಗಳು-Disilicates ಪರಸ್ಪರ ಬಂಧಿಸಿದ ಎರಡು ಸಿಲಿಕಾ ಚತುರ್ಮುಖಿಗಳು)
  • ಚಕ್ರಿಯ ಸಿಲಿಕೇಟುಗಳು (ಸೈಕ್ಲೋಸಿಲಿಕೇಟುಗಳು cyclosilicates- ಉಂಗುರರೂಪದ ಸಿಲಿಕಾ ಚತುರ್ಮುಖಿಗಳು )
  • ಸರಣಿ ಸಿಲಿಕೇಟುಗಳು( ಇನೊ ಸಿಲಿಕೇಟುಗಳು inosilicates- ಸರಣಿರೂಪದ ಸಿಲಿಕಾ ಚತುರ್ಮುಖಿಗಳು )
  • ಪದರ ಸಿಲಿಕೇಟುಗಳು ( ಫಿಲ್ಲೊಸಿಲಿಕೇಟುಗಳು phyllosilicates- ಪದರರೂಪದ ಸಿಲಿಕಾ ಚತುರ್ಮುಖಿಗಳು ) ಮತ್ತು
  • ಜಾಲ ಸಿಲಿಕೇಟುಗಳು ( ಟೆಕ್ಟೊಸಿಲಿಕೇಟುಗಳು- tectosilicates-ಮೂರು ಆಯಾಮದ ಜಾಲದಂತಹ ಸಿಲಿಕಾ ಚತುರ್ಮುಖಿಗಳು ).

ಇತರ ಖನಿಜ ವರ್ಗಗಳು

ಸಿಲಿಕೇಟುಗಳಲ್ಲದೆ ಇತರ ಪ್ರಮುಖ ಖನಿಜ ವರ್ಗಗಳೆಂದರೆ:

ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ
ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ
  • ಸಲ್ಫೈಡುಗಳು (sulfides),
  • ಆಕ್ಸೈಡುಗಳು (oxides),
  • ಹೇಲೈಡುಗಳು (halides),
  • ಕಾರ್ಬೋನೇಟುಗಳು(carbonates),
  • ಸಲ್ಫೇಟುಗಳು (sulfates) ಮತ್ತು
==================================
ಸಂಗ್ರಹ✍️T.A.ಚಂದ್ರಶೇಖರ

ಇಂದಿನ ಹೋಮ ವರ್ಕ್

2️⃣8️⃣  1️⃣2️⃣  2️⃣0️⃣2️⃣0️⃣

ಇಂದಿನ ಹೋಮ ವರ್ಕ್ ದಿನಾಂಕ 28-12-2020*
 *ವಾರ ಮಂಗಳವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 *ಹಿಂದಿನ ಸಂಖ್ಯೆ ಬರೆಯಿರಿ* 
1. ___18

2. _____19

3. ______16

4. ______22

5. ______31

 *ಮಧ್ಯದ ಸಂಖ್ಯೆ ಬರೆಯಿರಿ* 

1. 15___17

2. 19___21

3. 38____40

4. 26____28

5. 10_____12

 *ಮುಂದಿನ ಸಂಖ್ಯೆ ಬರೆಯಿರಿ* 

1. 9____

2. 8_____

3. 22_____

4. 17_______

5. 32______

2 ರಿಂದ 10ರ ವರೆಗೆ ಮಗ್ಗಿಗಳ ಕೋಷ್ಟಕ ಬರೆದು ಕಂಠಪಾಠ ಮಾಡಿರಿ

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 *ಅಕ್ಷರಭ್ಯಾಸ 3* 

( *ಪ ಯ ಉ ಡ ಟ ಚ* )
ಪುಟ ಸಂಖ್ಯೆ 45

 *ಈ ಪದಗಳು ಸ್ಪಷ್ಟವಾಗಿ ಉಚ್ಚರಿಸಿ ನಕುಲ ಮಾಡಿ ಬರೆಯಿರಿ.* 

1. ಪಟ    ಪದ  ಜಪ   ವಚನ

2. ಪದರ  ನಯ  ಜಯ  ನಯನ

3. ಉಡ  ಉದಯ  ಊರಗ  ಉರ 

4. ಡಬಡಬ  ಡವಡವ  ನಟ  ನಟನ

5. ಟಪಟಪ  ಚರ  ಚದರ  ವಚನ
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Grape - grapes 

2. Orange - oranges

3. Papaya - papayas

4. Banana - bananas

5. Apple - apples

6. Mango - mangoes

ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.

*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
 
ಪಾಠ 8
 *ಸುರಕ್ಷತೆ ಮತ್ತು ಶಿಸ್ತು* 

 *ಕೆಳಗಿನ ವಾಕ್ಯಗಳಲ್ಲಿ ಸರಿ (✓) ಯಾವುದು ತಪ್ಪು (x) ಯಾವುದು ಗುರುತಿಸಿ.* 

1. ಸಾಲಿನಲ್ಲಿ ನಿಂತರೆ ಸಮಯ ಹಾಳು._____

2. ಸರತಿಯಲ್ಲಿ ನಿಂತರೆ ಎಲ್ಲರಿಗೂ ನೀರು ಸಿಗುತ್ತದೆ._____

3. ಸಾಲಿನಲ್ಲಿ ನಿಂತರೆ ಯಾರಿಗೂ ತೊಂದರೆಯಾಗುವುದಿಲ್ಲ._____

4. ಬಸ್ ಹತ್ತಲು ಸಾಲಿನಲ್ಲಿ ನಿಂತರು ಒಳ್ಳೆಯದು.______

5. ಶಾಲಾ ಪ್ರಾರ್ಥನಾ ಸಮಯದಲ್ಲಿ ಶಿಸ್ತಿನಿಂದ  ನಿಂತು ಕೊಳ್ಳಬಾರದು______

 *ಈಗಿನ ಪ್ರಶ್ನೆ ಗಳಿಗೆ ಉತ್ತರ ಬರೆಯಿರಿ*

1. ಬೀದಿ ದೀಪ ಬೇಕೆಬೇಕು?

2. ಶಾಲೆ ಏಕೆ ಬೇಕು?

3. ಬಸ್ ನಿಲ್ದಾಣದಿಂದ ನಿನಗೇನು ಉಪಯೋಗ?

4. ನಿಮ್ಮ ಆಸ್ಪತ್ರೆಗೆ ಹೇಗೆ ಹೋಗುವೆ?
👍👍👍👍👍👍👍👍👍👍👍👍👍👍

 *ಇಂದಿನ ಹೋಮ ವರ್ಕ್ ದಿನಾಂಕ 28-12-2020*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 *ಬಿಟ್ಟಸ್ಥಳ ತುಂಬಿರಿ* 
1.  78 ______ಸಂಖ್ಯೆ ಹಿಂದೆ ಬರುತ್ತದೆ.

2. 6 ಮತ್ತು ಎಂಟರ ಮಧ್ಯೆ ದ ಸಂಖ್ಯೆ_______.

3. 98 ಇದು ಸಂಖ್ಯೆಯ ______ಮುಂದೆ ಬರುತ್ತದೆ.

4. _______ಸಂಖ್ಯೆ ಮುಂದೆ 50 ಬರುತ್ತದೆ.

5. ______ಸಂಖ್ಯೆಯ ಹಿಂದೆ 36 ಬರುತ್ತದೆ.

6. 48 ಇದು ______ಮತ್ತು _______ಸಂಖ್ಯೆ ಮಧ್ಯೆ ಬರುತ್ತದೆ.

7. 39 ಇದು _______ಸಂಖ್ಯೆ ಹಿಂದೆ ಬರುತ್ತದೆ.

2 ರಿಂದ 15ರವರೆಗೆ ಬಗ್ಗೆ ಕೋಷ್ಟಕಗಳನ್ನು ಬರೆದು ಕಂಠಪಾಠ ಮಾಡು.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 10
 *ಸತ್ಯವಂತ ಬಾಲಕ* 

 *ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ* 

1. ಗುರುಗಳು ಎಲ್ಲಿಗೆ ಬಂದರು?

2. ಒಬ್ಬ ಬಾಲಕ ಎದ್ದುನಿಂತು ಗುರುಗಳಿಗೆ ಏನೆಂದು ಹೇಳಿದನು?

3. ಗುರುಗಳು ಹುಡುಗನಿಗೆ ಯಾವ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಿದರು?

4. ಬಾಲಕನಿಗೆ ಏನು ಹೇಳಲು ಮನಸ್ಸು ಬರಲಿಲ್ಲ?

5. ಗುರುಗಳಿಗೆ ಅಚ್ಚರಿ ಮತ್ತು ಆನಂದ ಏಕಾಯಿತು?

6. ಸತ್ಯವಂತ ಬಾಲಕನ ಹೆಸರೇನು?
*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. COLOURS name* 

 *2. Name me using the close* 

a) M__th__r.

b) B__th__r.

c) Fa__t__e__.

d) Gr____d Mo_____er.

e) S__s______r.

f) Gr____d ___a_____er.

*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 7
*ಮನೆ ಬೇಕು ಮನೆ*

1.  ನೀನು ಎಲ್ಲಿ ವಾಸಿಸುವೆ?

2.  ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?

3. ನಿಮ್ಮ ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ್ದೀರಾ?

4. ಹೌದು ಇಲ್ಲಿ ವಾಸಿಸುತ್ತವೆ?
👍👍👍👍👍👍👍👍👍👍👍👍👍👍👍

: *ಇಂದಿನ ಹೋಮ ವರ್ಕ್ ದಿನಾಂಕ 28-12-2020*
 *ವಾರ ಮಂಗಳವಾರ*

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-2
*ಸಂಖ್ಯೆಗಳು* 

1. ಇಳಿಕೆ ಕ್ರಮ ಎಂದರೇನು?

2. ಏರಿಕೆ ಕ್ರಮ ಎಂದರೇನು?

ಅಭ್ಯಾಸ 2.4 
ಪುಟ ಸಂಖ್ಯೆ 59 ರಿಂದ 60
 
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ-13 
 *ಹೊಯ್ಸಳ* 

1. ಈ ವಾಕ್ಯಗಳು ಸರಿ ಇದ್ದರೆ ( *√* )ಎಂದು ತಪ್ಪು ಇದ್ದರೆ ( *x* )ಎಂದು ಗುರುತಿಸಿ.

2. ಮಾದರಿಯಂತೆ ಕೂಡಿಸಿ ಬರೆ.

3. ಕೊಟ್ಟಿರುವ ಕೆಳಗೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು.

4. 20 ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಪುಟ ಸಂಖ್ಯೆ 96

ಪ್ರತಿದಿನ ಒಂದು ಫೇಸ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

 Unit 3
 *Celebration* 

 *Complete the sentences.* 
1. I am...... Sweets.

2. Nehru was....... on November 14.

3. We......... dipawali in November.

4. My parents give....... on my birthday.

5. Children are the ......of our nation.

 *Copy the sentences in the four lines.* 

1. Celebration bring joy and happiness.

3. Celebration unite people and families.

On page number 37
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 9
*ಚಂದದ ಮನೆ*

1. ನಿನ್ನ ಮನೆಯ ಅಲಂಕಾರವನ್ನು ಕುರಿತು ನಾಲ್ಕು ಸಾಲುಗಳಲ್ಲಿ ಬರೆಯಿರಿ.

2. ನಿನ್ನ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಿರಿಯರಿಗೆ ನೀನು ಹೇಗೆ ನೆರವಾಗುವ?

3. ಮನೆಯಲ್ಲಿ ಸಿಂಗರಿಸಲು ಬಳಸಬಹುದಾದ ವಸ್ತುಗಳನ್ನು ಪಟ್ಟಿ ಮಾಡಿ.

4. ಮನೆಯ ಅಂದವಾದ ಚಿತ್ರ ಬಿಡಿಸಿ ಬಣ್ಣ ತುಂಬು.
👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು