ಶಿಕ್ಷಣವೇ ಶಕ್ತಿ

Saturday 15 May 2021

ಇತಿಹಾಸ

📚ಭಾರತದ ಇತಿಹಾಸದ ಪರಿಚಯ📚

🔴ಭಾರತದ ಇತಿಹಾಸ ತಿಳಿಯಲಿರುವ ಆಧಾರಗಳು
  • ಜುನಾಗಡ್ ಶಾಸನದ ಕರ್ತು- ರುದ್ರದಾಮ
  • ಉತ್ತರ ಮೆರೂರು ಶಾಸನದ ಕರ್ತು- ಪರಾಂತರ ಚೋಳ
  • ಅಲಹಾಬಾದ್ ಸ್ತಂಭ ಶಾಸನದ ಕರ್ತು- ಸಮುದ್ರ ಗುಪ್ತ
  • ಐಹೊಳೆ ಶಾಸನದ ಕರ್ತು-ರವಿವರ್ಮ
  • ಅಶ್ವ ಮೇಧ ಎಂಬ ನಾಣ್ಯವನ್ನು ಜಾರಿಗೆ ತಂದವನು - ಸಮುದ್ರ ಗುಪ್ತ
  • ಭಾರತದ ಹಾಗೂ ಇರಾನ್ ನಡುವಿನ ಸಂಬಂಧದ ಕುರಿತು ತಿಳಿಸುವ
  • ಹೆರಡೋಟಸ್ ನ ಕೃತಿ-Historia.
  • ಇರಾನ್ ನ ಪ್ರಾಚೀನ ಹೆಸರು- ಪರ್ಶಿಯಾ.
  • ಮೆಗಾಸ್ತನಿಸ್ ಈ ಆಸ್ಥಾನದ ರಾಜಧೂತ - ಚಂದ್ರಗುಪ್ತಮೌರ್ಯ.
  • ಇಂಡಿಕಾ ಕೃತಿಯ ಕರ್ತು- ಮೆಗಾಸ್ತನೀಸ್.
  • principle of the Exithrian Seen ಕೃತಿಯ ಕರ್ತು- ಗ್ರೀಕ್ ದೇಶದವನು.
  • The geography ಕೃತಿಯ ಕರ್ತು-ಟಾಲೆಮಿ.

🔴ಗ್ರೀಕರ ಬರವಣಿಗೆಗಳು
  • ಹೆರಡೋಟಸ್ - Historia
  • ಅಲೆಗ್ಸಾಂಡರನ ಭಾರತ ಆಕ್ರಮಣದ ವಿವರಗಳು
  • ಇಂಡಿಕಾ ಕೃತಿಯ ಕರ್ತು-ಮೆಗಾಸ್ತಲೀಸ್.
  • ಮೌರ್ಯರ ಆಡಳಿತ ಬಗೆಗೆ ಬೆಳಕು ಚೆಲ್ಲುವ ಗ್ರಂಥ - ಇಂಡಿಕಾ
➖➖➖➖➖➖➖➖➖➖➖➖➖➖➖

📚ಭಾರತದ ಇತಿಹಾಸದಲ್ಲಿ ಭೂಗೋಳ📚

💥ಭಾರತದ ಇತಿಹಾಸ ಪರಿಚಯ💥

  • ಭೂಗೋಳದಲ್ಲಿ ಭಾರತದ ಸ್ಥಾನ.
  • ಉತ್ತರ ಗೋಳಾರ್ಧ ಉತ್ತರ ಅಕ್ಷಾಂಶ 8 ಡಿಗ್ರಿ ಯಿಂದ 37 ಡಿಗ್ರಿವರೆಗೆ
  • ಪೂರ್ವ ರೇಖಾಂಶ 70 ಡಿಗ್ರಿ ಯಿಂದ 93 ಡಿಗ್ರಿ ವರೆಗೆ ಹೊಂದಿದೆ.


💥ಭಾರತದ ವಿವಿಧ ಹೆಸರುಗಳು💥.

  • ಭರತ ವರ್ಷ, ಭರತ ಖಂಡ, ಜಂಬೂದ್ವೀಪ, ಇಂಡಿಯಾ ಹಾಗೂ ಹಿಂದೂಸ್ಥಾನ್.


💥ಭಾರತದ ಪ್ರಮುಖ ಗಡಿಗಳುು💥

  • ಉತ್ತರದಲ್ಲಿ ಹಿಮಾಲಯ ಪರ್ವತ
  • ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ ಹಿಂದೂ ಮಹಾಸಾಗರ
  • ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ
  • ಪಶ್ಚಿಮದಲ್ಲಿ ಪಾಕಿಸ್ತಾನ ಹಾಗೂ ಅರಬ್ಬೀ ಸಮುದ್ರ


💥ಭಾರತದ ಇತಿಹಾಸದ ಕಾಲಮಾನಗಳು💥

  • ಇತಿಹಾಸದ ಪೂರ್ವಯುಗ (ಕ್ರಿ.ಪೂ.20000-5000)
  • ಪ್ರಾಚೀನ ಯುಗ(ಕ್ರಿ.ಪೂ 600 ರಿಂದ ಕ್ರಿ.ಶ 1200)
  • ಮಧ್ಯಯುಗ (ಕ್ರಿ.ಶ 1200-1700)
  • ಆಧುನಿಕ ಯುಗ(ಕ್ರಿ.ಶ. 1700-ಇಂದಿನವರೆಗೆ)

 

  • ಪ್ರಾಚೀನ ಭಾರತದ ಇತಿಹಾಸವು 1921 ರವರೆಗೆ ಹಾಗೂ ಅರ್ಯರು ಆರಂಭಿಸಿದ ವೇದಕಾಲದ ನಾರರೀಕತೆಯಿಂದ ಆರಂಭವಾಗುತ್ತದೆ.
  • ಭಾರತ ಸಂಪೂರ್ಣವಾಗಿ - ಉತ್ತರಾರ್ಧಗೋಳದಲ್ಲಿದೆ.
  • ಜನ ಸಂಖ್ಯೆಯಲ್ಲಿ ಭಾರತ - ಎರಡನೇಯ ಸ್ಥಾನದಲ್ಲಿದೆ.
  • ಭಾರತ - ಏಷ್ಯಾ ಖಂಡದಲ್ಲಿದೆ.

💥ಸರಹದ್ದುಗಳು💥

  • ಪೂರ್ವದಲ್ಲಿ - ಬಂಗಾಳಕೊಲ್ಲಿ
  • ಪಶ್ಚಿಮದಲ್ಲಿ- ಅರಬ್ಬೀ ಸಮುದ್ರ
  • ಉತ್ತರದಲ್ಲಿ- ಹಿಮಾಲಯ ಪರ್ವತ
  • ದಕ್ಷಿಣದಲ್ಲಿ - ಹಿಂದೂಮಹಾಸಾಗರ


📚ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ📚.
__________________________________________
💥ಅರ್ಥ💥

⭕History ಎಂಬ ಪದವು ಗ್ರೀಕ್ ಭಾಷೆಯ Historia ದಿಂದ ಉಗಮವಾಗಿದೆ.

⭕History ಎಂದರೆ ವಿಚಾರಣೆ ಅಥವಾ ತನಿಖೆ ಮಾಡು ಎಂದರ್ಥ.

⭕ಇತಿಹಾಸವು ಸಂಸ್ಕೃತದ ಪದವಾಗಿದೆ.

⭕ಇತಿಹಾಸವನ್ನು ಬರೆದವರಲ್ಲಿ ಗ್ರೀಕರು ಮೊದಲಿಗರು.

⭕ಇತಿಹಾಸದ ಪಿತಾಮಹಾ – ಹೆರಡೊಟಸ್ .

⭕Parshion war ಕೃತಿಯ ಕರ್ತೃ –ಹೆರಡೊಟಸ್ .

⭕City of God ಕೃತಿಯ ಕರ್ತೃ- ಸಂತ ಅಗಸ್ಚನ್.

⭕ಚರ್ಚು ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಪ್ರಥಮವಾಗಿ ಚಿಂತಿಸಿದವರು – ಸಂತ ಅಗಸ್ಚನ್.

➖➖➖➖➖➖➖➖➖➖➖➖➖➖➖
💥ಪ್ರಮುಖ ಹೇಳಿಕೆಗಳು💥.
__________________________________________

🔻ಭೂತ ಕಾಲದ ರಾಜಕೀಯವೇ ವರ್ತಮಾನ ಕಾಲದ ಇತಿಹಾಸ, ಇಂದಿನ ರಾಜಕೀಯವೇ ಭವಿಷ್ಯತ್ತಿನ ಇತಿಹಾಸ- Freeman.

🔻ವ್ಯಕ್ತಿಗಳ ಜೀವನ ಚರಿತ್ರೆಯೇ ಇತಿಹಾಸ –ಥಾಮಸ್ ಕಾರ್ಲೈಲ್ .

🔻ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟವೇ ಇತಿಹಾಸ – ಕಾರ್ಲ್ ಮಾರ್ಕ್ಸ್
Das Capital ಈತನ ಕೃತಿ.

🔻ಜದುನಾಥ್ ಸರ್ಕಾರರವರ
ಪ್ರಮುಖ ಕೃತಿಗಳು .
Declaine and Fall of the
Maghal Empire
Shivaji and His Times.
India Through the ages.

🔻ಇತಿಹಾಸದ ಎಂದರೆ ನಾಗರೀಕತೆಗಳ ಏಳು ಬೀಳಿನ ಕತೆ- ಆರ್ನಾಲ್ಡ್ ಟಾಯ್ನ್ ಬಿ.

🔻A study of History- ಕೃತಿಯ ಕರ್ತೃ- ARNALD TOYNBI.

🔻ವಿಶ್ವದ 26 ನಾಗರೀಕತೆಗಳ ಸಮಗ್ರ ಅಧ್ಯಯನ ಕೃತಿಯೇ Taynbi ವಿರಚಿತ A study of History.

🔻ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದ ಮಾನವನ ಕತೆಯೇ ಇತಿಹಾಸ-  ನೆಹರೂ

🔻ಮಾನವ ಕುಲದ ಕತೆಯೇ ಇತಿಹಾಸ – ಹೆನ್ನಿಕ್ ವಾನ್ ಲೂನ್

🔻ಯುಗ ಯುಗದಲ್ಲಿ ನಡೆದ ಮಾನವನ ಹೋರಾಟವೇ ಇತಿಹಾಸ ಪಿಯರ್ಸ್.

🔻ಇತಿಹಾಸ ಲೇಖನಾ ಕಲೆಯ ತವರು ಮನೆ- ಗ್ರೀಕ್.

🔻ಹೆರೋಡೋಟಸ್ ನು – ಪೆಲಿಕ್ಲಿಸ್ ನ ಆಸ್ಥಾನದಲ್ಲಿದ್ದನು.

🔻Historia ಎಂಬ ಕೃತಿಯ ಕರ್ತು –ಹೆರೋಡೋಟಸ್

🔻Felopanedian war
ಕೃತಿಯ ಕರ್ತು-ಥುಸಿಡೈಡಸ್.

🔻ಜರ್ಮನ್ನರು ಇತಿಹಾಸವನ್ನು – ಗೆಸ್ ಚಿಸ್ಟೆ- ಎನ್ನುತ್ತಿದ್ದರು.

🔻ಇತಿಹಾಸವು ಒಂದು ಅನ್ವೇಷಣೆ ಅಥವಾ ಮಹಾನ್ ವೀರರ ಕಥಾನಕ್ ಎಂದವರು- ಹೆರೋಡೋಟಸ್ .

🔻ಇತಿಹಾಸ ಬದಲಾಗದ ಗತಕಾಲ ಎಂದವರು- ಅರಿಸ್ಟಾಟಲ್

🔻ದಾಸ್ ಕ್ಯಾಪಿಟಲ್ ಹಾಗೂ ಕಮ್ಯೂನಿಸ್ಟ್  ಮ್ಯಾಸಿಪ್ಯಾಸ್ಟ್ರೋ ಕೃತಿಗಳ ಕರ್ತು- ಕಾರ್ಲ್ ಮಾರ್ಕ್ಸ್.

🔻ಜಗತ್ ಕಥಾವಲ್ಲರಿ- ಕೃತಿಯ ಕರ್ತುಜವಾಹರಲಾಲ್
ನೆಹರು.

🔻ಇತಿಹಾಸವು ಸಮಾಜಗಳ ನೆನಪುಗಳು ಎಂದವರು –ರೀನಿಯರ್.

🔻ಇತಿಹಾಸ ಜಯಭೇರಿ ಹೊಡೆದ ಯುದ್ದಗಳ ವರ್ಣನೆ-ಎಂದವರು ಹಿಟ್ಲರ್.

🔻ಸದ್ಗುಣ ಹಾಗೂ ದುರ್ಗುಣಗಳ ನಡುವಿನ ಹೋರಾಟ ಇತಿಹಾಸ ಎಂದವರು- ಅಗಸ್ಟೆನ್.

🔻ಎಲ್ಲಾ ಸಮಾಜ ವಿಜ್ಞಾನಗಳ ಪಿತೃ ಅಥವಾ ಮಾತೃ-
ಇತಿಹಾಸ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎಂದವರು ಡಾ. ಬಿ.ಆರ್.ಅಂಬೇಡ್ಕರ್

🔻ಸಿಂಧೂ ಬಯಲಿನ ನಾಗರೀಕತೆಯನ್ನು ಪತ್ತೆ ಹಚ್ಚಲಾದ ವರ್ಷ-1921.

🔻ಇತಿಹಾಸದ ಅರ್ಥವನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸಿದವರು- FREEMAN

🔻ಇತಿಹಾಸವನ್ನು ವ್ಯಕ್ತಿಗಳಿಗೆ ಹೋಲಿಸಿದವರು ಕಾರ್ಲೈಲ್ ರವರು.

🔻ಇತಿಹಾಸವನ್ನು ಆರ್ಥಿಕ ವಿಶ್ಲೇಷಣೆೆಗೆ  ಸೀಮಿತಗೊಳಿಸಿದವರು ಕಾರ್ಲ್ ಮಾರ್ಕ್ಸ್.

🔻ಪ್ರಾಚೀನ ಕಾಲದಲ್ಲಿ ಇತಿಹಾಸ ಕೇವಲ  ದಂತಕತೆಗಳಿಗೆ ಸೀಮಿತವಾಗಿತ್ತು.

🔻19 ನೇ ಶತಮಾನದವರೆಗೆ- ರಾಜಕೀಯ ಅಂಶಗಳು ಪ್ರಧಾನವಾಗಿತ್ತು.

🔻ಇತಿಹಾಸ ಸತ್ತವರ ಮೇಲೆ ಹೆಣೆದ ಸುಳ್ಳಿನ ಕಂತೆ ಎಂದವರು- ನೆಪೋಲಿಯನ್

ಕನ್ನಡ ವ್ಯಾಕರಣ ಮುಂದುವರೆದ ಭಾಗ....

ವಚನ ಎಂದರೇನು? ವಿಧಗಳು ಯಾವುವು?

ವಚನಗಳು
ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಚನ ಎಂದರೆ ಸಂಖ್ಯೆ ಎಂದರ್ಥ..

ವಚನಗಳ ವಿಧಗಳು
ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು.ಅವುಗಳೆಂದರೆ :

ಏಕವಚನ.
ಬಹುವಚನ


ಏಕವಚನ

ಒಬ್ಬ ವ್ಯಕ್ತಿ , ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ. ಉದಾ ; ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ, ರಾಣಿ, ಊರು….. ಇತ್ಯಾದಿ

ಬಹುವಚನ
ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು..

 ಉದಾ :  ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ… 

ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ

ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು

(ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.

  ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ

(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ. 

ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ

_________________________________________

ವಿಭಕ್ತಿ ಪ್ರತ್ಯಯ, ವಿಧಗಳು, ಹಳಗನ್ನಡ ಮತ್ತು ಹೊಸಗನ್ನಡದ ವಿಭಕ್ತಿ ಪ್ರತ್ಯಯಗಳು

ವಿಭಕ್ತಿ ಪ್ರತ್ಯಯಗಳು
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.

ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು. ಅಥವಾ“ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”

ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ.ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ …

ವಿಭಕ್ತಿ ಪ್ರತ್ಯಯಗಳ ವಿಧಗಳು
ಕ್ರ ಸಂ ವಿಭಕ್ತಿಯ ಹೆಸರು ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ ಕಾರಕಗಳು


1 ಪ್ರಥಮ ವಿಭಕ್ತಿ ಮ್ ಕರ್ತೃ
2 ದ್ವಿತೀಯ ವಿಭಕ್ತಿ ಅನ್ನು ಅಮ್ ಕರ್ಮ
3 ತೃತೀಯಾ ವಿಭಕ್ತಿ ಇಂದ ಇಮ್ ಕರಣ
4 ಚತುರ್ಥಿ ವಿಭಕ್ತಿ ಗೆ ಕೆ ಸಂಪ್ರಧಾನ
5 ಪಂಚಮಿ ವಿಭಕ್ತಿ ದೆಸೆಯಿಂದ ಅತ್ತಣಿಂ ಅಪಧಾನ
6 ಷಷ್ಠಿ ವಿಭಕ್ತಿ ಆ ಆ ಸಂಬಂಧ
7 ಸಪ್ತಮಿ ವಿಭಕ್ತಿ ಅಲ್ಲಿ ಒಳ್ ಅಧಿಕರಣ
ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..

ಪ್ರಥಮ ವಿಭಕ್ತಿ ಉ
ದ್ವಿತೀಯ ವಿಭಕ್ತಿ ಅನ್ನು
ತೃತೀಯ ವಿಭಕ್ತಿ ಇಂದ
ಚತುರ್ಥಿ ವಿಭಕ್ತಿ ಗೆ, ಇಗೆ
ಪಂಚಮಿ ವಿಭಕ್ತಿ ದೆಸೆಯಿಂದ
ಷಷ್ಠಿ ವಿಭಕ್ತಿ ಅ
ಸಪ್ತಮಿ ವಿಭಕ್ತಿ ಅಲ್ಲಿ
ಸಂಭೋಧನ ವಿಭಕ್ತಿ ಮ ಏ
ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು

ಪ್ರಥಮ ಕತೃರ್ಥ ಉ
ದ್ವಿತೀಯ ಕರ್ಮಾರ್ಥ ಅನ್ನು
ತೃತೀಯ ಕರಣಾರ್ಥ ಇಂದ
ಚತುರ್ಥೀ ಸಂಪ್ರಧಾನ ಗೆ
ಪಂಚಮಿ ಅಪಧಾನ ದೆಸೆಯಿಂದ
ಷಷ್ಠಿ ಸಂಭಂಧ ಅ
ಅಪ್ತಮಿ ಅಧಿಕರಣ ಅಲ್ಲಿ
ಸಂಬೋಧನ ಅಭಿಮುಖೀ ಏ ಆಕರಣ ಹಳಗನ್ನಡ ವಿಭಕ್ತಿ ಪ್ರತ್ಯಯಗಳು

ವಿಭಕ್ತಿ ಪ್ರತ್ಯಯ ರೂಪಗಳು
ಪ್ರಥಮಾ ಮ್ ಮ್ ರಾಮಂ
ದ್ವಿತೀಯಾ ಅಮ್ ರಾಮನಂ
ತೃತೀಯ ಇಮ್ ರಾಮನಿಂ
ಚತುರ್ಥೀ ಗೆ ರಾಮಂಗೆ
ಪಂಚಮಿ ಅತ್ತಣಿಂ ರಾಮನತ್ತಣಿಂ
ಷಷ್ಠಿ ಅ ರಾಮನ
ಸಪ್ತಮಿ ಒಳ್ ರಾಮನೊಳ್

_________________________________________

ಕ್ರಿಯಾ ಪದ, ಧಾತು, ಧಾತುಗಳ ವಿಧಗಳು

ಕ್ರಿಯಾ ಪದ ಪ್ರಕರಣ
ಕ್ರಿಯಾಪದ : ” ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ” ಅಥವಾ “ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.” 

ಉದಾ ;
ದೀಪವು ಉರಿಯುತ್ತದೆ.
ಹಸುವು ಹಾಲನ್ನು ಕೊಡುತ್ತದೆ.
ತಾಯಿಯು ಅಡುಗೆಯನ್ನು ಮಾಡುತ್ತಾಳೆ.
ಅಣ್ಣ ಊಟವನ್ನು ಮಾಡುವ್ನು.
ದೇವರು ಒಳ್ಳೆದನ್ನು ಮಾಡಲಿ.
ಮೇಲಿನ ಉದಾ-ಗಳಲ್ಲಿ ಗೆರೆ ಎಳೆದಿರುವ ಪದಗಳೆಲ್ಲವೂ ಕ್ರಿಯೆಯ ಅರ್ಥವನ್ನು ಸೂಚಿಸುವ ಶಬ್ದಗಳಾಗಿರುವುದತಿಂದ ಕ್ತಿಯಾಪದಗಳು ಎನಿಸುತ್ತದೆ..

ಮೇಲಿನ ಶಬ್ದಗಳಲಿ “ಉರಿ ಕೊಡು ಮಾಡು ” ಎಂಬ ಶಬ್ಧ ಕ್ರಿಯೆಯ ಅರ್ಥಕೊಡುವ ಮೂಲ ರೂಪವಾಗಿದೆ..

ಧಾತು ಅಥವಾ ಕ್ರಿಯಾ ಪ್ರಕೃತಿ
ಕ್ರಿಯಾ ಪದದ ಮೂಲ ರೂಪಕ್ಕೆ ಧಾತು / ಕ್ರಿಯಾಪ್ರಕೃತಿ ಎಂದು ಹೆಸರು ”ಅಥವಾ“ಕ್ರಿಯಾರ್ಥವನ್ನು ಕೂಡುವುದಾಗೆಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ / ಧಾತು ಎಂದು ಎಂದು ಹೆಸರು”ಧಾತುಗಳಿಗೆ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.

ಉದಾ : ಧಾತು + ಪ್ರತ್ಯಯ + ಕ್ರಿಯಾಪದ ಮಾಡು + ತ್ತಾನೆ + ಮಾಡುತ್ತಾನೆ ಯತ್ನ + ಇಸು + ಯತ್ನಿಸು ಕನ್ನಡ + ಇಸು + ಕನ್ನಡಿಸು ಭಾವ + ಇಸು + ಭಾವಿಸು ರಕ್ಷ + ಇಸು + ರಕ್ಷಿಸು ಓಡು +ತ್ತಾನೆ + ಓಡುತ್ತಾನೆ

ಧಾತುಗಳ ವಿಧಗಳು
ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.

ಮೂಲಧಾತು (ಸಹಜ) ಗಳು
ಸಾಧಿತ ಧಾತುಗಳು


ಮೂಲ ಧಾತುಗಳು

“ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು”

ಉದಾ : ಮಾಡು, ಹೋಗು , ಬರು, ನಡೆ, ನೋಡು, ಓದು, ಹುಟ್ಟು, ಅಂಜು, ಸುತ್ತು, ಬಿತ್ತು , ಹೊಗಳು , ತೆಗಳು , ಎಳೆ , ಸೆಳೆ ತಿಳಿ , ಅರಿ , ಸುರಿ, ಅರಸು, ಸೆಳೆ, ಇತ್ಯಾದಿ

ಮೂಲಧಾತು + ಪ್ರತ್ಯಯ =ಕ್ರಿಯಾಪದ ಮಾಡು + ತ್ತಾನೆ =ಮಾಡುತ್ತಾನೆ ನೋಡು + ಇಸು =ನೋಡಿಸು ತಿನ್ನು +ತ್ತಾನೆ = ತಿನ್ನುತ್ತಾಳೆ

ಸಾಧಿತ ಧಾತುಗಳು
“ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.”ಇವಕ್ಕೆ ಪ್ರತ್ಯಯಾಂತ ಧಾತು ಎಂತಲೂ ಕರೆಯುತ್ತಾರೆ. 

ಉದಾ : ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು ಅಬ್ಬರ + ಇಸು + ಅಬ್ಬರಿಸು ಕಳವಳ + ಇಸು + ಕಳವಳಿಸು ಕನ್ನಡ + ಇಸು + ಕನ್ನಡಿಸು ಚಿತ್ರ + ಇಸು + ಚಿತ್ರಿಸು ಸ್ತುತಿ + ಇಸು + ಸುತ್ತಿಸು ಸಿದ್ದಿ + ಇಸು + ಸಿದ್ದಿಸು ಓಲಗ + ಇಸು + ಓಲಗಿಸು ಮಲಗು + ಇಸು + ಮಲಗಿಸು ಪ್ರೀತಿ +ಇಸು + ಪ್ರೀತಿಸು ರಕ್ಷ + ಇಸು + ರಕ್ಷಿಸು ಧಗಧಗ + ಇಸು + ಧಗಧಗಿಸು ಥಳ ಥಳ + ಇಸು + ಥಳ ಥಳಿಸು

ಭಾವ ಸೂಚಕಗಳಾದ ಸಂಸ್ಕೃತ ಶಬ್ದಗಳು “ಇಸು” ಪ್ರತ್ತಯಯಗಳನ್ನು ಹೊಂದಿ ಸಾಧಿತ ಧಾತುಗಳಾಗುತ್ತವೆ.

ಉದಾ :ಯತ್ತಿಸಯ, ಸ್ತುತಿಸು , ಜಯಿಸು, ಲೇಪಿಸು, ಶೋಕಿಸು, ಭಾವಿಸು , ಇತ್ಯಾದಿ ಎಲ್ಲ ಧಾತುಗಳಿಗೂ ಪ್ರೇರಣಾರ್ಥಕದಲ್ಲಿ ‘ಇಸು’ ಪ್ರತ್ಯಯ ಸೇರುತ್ತದೆ. ಇವಕ್ಕೆ ಪ್ರೇರಣಾರ್ಥಕ ಧಾತುಗಳು ಎಂದು ಹೆಸರು.

ಪ್ರೇರಣೆ ಎಂದು ” ಇನೋಬ್ಬರಿಂದ ಕೆಲಸ ಮಾಡಿಸುವುದು” ಉದಾ :ಮೂಡಿಸು ಕಲಿಸು , ಬರೆಯಿಸು , ನುಡಿಸು ಹೇಳಿಸು…..ಇತ್ಯಾದಿ

ಸಾಧಿತ ಧಾತುಗಳ ವಿಧಗಳು

ಸಕರ್ಮಕ ಧಾತುಗಳು - ಅರ್ಥಪೂರ್ತಿಗಾಗಿ ಅರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತು ಎಂದು ಹೆಸರು .ಈ ಸಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದ ಏನನ್ನು ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೂಚಿಸಲು ವನ್ನು ಉಪಯೋಗಿಸಲಾಗುತ್ತದೆ. 

ಉದಾ : ಕರ್ತೃಪದ ಪರ್ಮಪದ ಕ್ರಿಯಾಪದ ರಾಮನ್ನು ಮರವನ್ನು ಕಡಿಯುತ್ತಾನೆ ಭೀಮನ್ನು ಬಕಾಸುನನ್ನು ಕೊಂದನು ದೇವರು ಲೋಕವನ್ನು ರಕ್ಷಿಸುವನ್ನು ಶಿಲ್ಪಿಗಳು ಗುಡಿಯನ್ನು ಕಟ್ಟಿದರು ವಿದ್ಯಾರ್ಥಿಗಳು ಪಾಠವನ್ನು ಓದಿದರು ಹುಡುಗರು ಕೆಲಸವನ್ನು ಮಾಡುತ್ತಾರೆ ಅನೇಕರು ನದಿಯನ್ನು ದಾಟಿದರು ಸಾಧುಗಳು ದೇವರನ್ನು ನಂಬುತ್ತಾರೆ ಹುಡುಗಿ ಪಾತ್ರೆಯನ್ನು ತೋಳೆಯುತ್ತಾಳೆ

ಅಕರ್ಮಕ ಧಾತುಗಳು -ಕರ್ಮಪದದ ಅಪೇಕ್ಷೆಯಿಲ್ಲದೇ ಪೂಣಾರ್ಥವನ್ನು ಕೊಡಲು ಸಮ್ಥವಾದ ಧಾತುಗಳನ್ನು ಅಕರ್ಮಕ ಧಾತು ಎಂದುಕರೆಯುತ್ತೇವೆ. ಈ ಅಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದಕ್ಕೆ ಉದ್ಬವಿಸುವ ಪ್ರಶ್ನೆಗೆ ಉತ್ತರವನ್ನು ಸೂಚಿಸಲು ಕರ್ಮಪದವನ್ನು ಪ್ರಯೋಗ ಮಾಡಲಾಗುವುದಿಲ್ಲ. 

ಉದಾ : ಕರ್ತೃಪದ ಕ್ರಿಯಾಪದ ಧಾತು ಮಗು ಹುಟ್ಟಿತು ಹುಟ್ಟು ರಾಮನು ಬಂದನು ಬಂದ ಮಳೆ ಬೀಳುತ್ತದೆ ಬೀಳು ಮಗುವು ಅಳುತ್ತಿದೆ ಅಳು ಕೂಸು ಮಲಗಿತು ಮೊಲಗು ರಾಮನು ಓಡಿದನ್ನು ಓಡು ಆಕಾಶ ಹೊಳೆಯುತ್ತಿದೆ ಹೊಳೆ ಅವನು ಬದುಕಿದನು ಬದುಕು ಕಳ್ಳರು ಹೆದರಿದರು ಹೆದರು ಅವರು ಸೇರಿದರು ಸೇರು ಇವಳು ನೆನೆದಳು ನೆನೆ ಹುಡುಗರು ಓದಿದರು ಓದು.

_________________________________________

ಕೃದಂತ-ತದ್ಧಿತಾಂತ

ಕೃದಂತ-ತದ್ಧಿತಾಂತ

ಕೃದಂತ (ಕೃನ್ನಾಮ)


ನಾಮಪ್ರಕೃತಿಗಳು ನಾಲ್ಕು ಪ್ರಕಾರಗಳೆಂದು ತಿಳಿದಿರುವಿರಿ.
(೧) ಸಹಜನಾಮಪ್ರಕೃತಿಗಳು
(೨) ಕೃದಂತಗಳು
(೩) ತದ್ಧಿತಾಂತಗಳು
(೪) ಸಮಾಸಗಳು – ಎಂದೇ ಆ ನಾಲ್ಕುವಿಧವಾದ ನಾಮಪ್ರಕೃತಿಗಳು.
ಸಹಜನಾಮಪ್ರಕೃತಿಗಳೆಂದರೇನು? ಅವು ನಾಮವಿಭಕ್ತಿಪ್ರತ್ಯಯ ಸೇರಿ, ನಾಮಪದಗಳಾಗು ವಿಕೆ, ಅವುಗಳ ಲಿಂಗ, ವಚನಾದಿಗಳ ಬಗೆಗೂ, ಸಮಾಸವೆಂದರೇನು? ಅವುಗಳ ಪ್ರಕಾರಗಳ ಬಗೆಗೂ ಹಿಂದಿನ ಪ್ರಕರಣಗಳಲ್ಲಿ ತಿಳಿದಿದ್ದೀರಿ.  ಈಗ ಕೃದಂತ, ತದ್ಧಿತಾಂತಗಳೆಂದರೇನೆಂಬ ಬಗೆಗೆ ತಿಳಿಯಿರಿ.
ಮೊದಲು ಕೃದಂತಪ್ರಕರಣದಲ್ಲಿ ಕೃದಂತಗಳ ಬಗೆಗೂ, ಅನಂತರ ತದ್ಧಿತಾಂತ ಪ್ರಕರಣದಲ್ಲಿ ತದ್ಧಿತಾಂತಗಳ ಬಗೆಗೂ ವಿವರಗಳನ್ನು ನೋಡಿರಿ.
ಧಾತು-ಕ್ರಿಯಾಪದ-ಕೃದಂತನಾಮಪ್ರಕೃತಿ-ಕೃದಂತನಾಮಪದ
(೧)ಮಾಡು-ಮಾಡಿದನು-ಮಾಡಿದ-ಮಾಡಿದವನು, ಮಾಡಿದವನನ್ನು, ಮಾಡಿದವನಿಂದ -ಇತ್ಯಾದಿ
(೨)ಹೋಗು-ಹೋಗುವನು-ಹೋಗುವ-ಹೋಗುವವನು, ಹೋಗುವವನನ್ನು, ಹೋಗುವವನಿಂದ -ಇತ್ಯಾದಿ
(೩)ತಿನ್ನು-ತಿನ್ನುತ್ತಾನೆ-ತಿನ್ನುವ-ತಿನ್ನುವವನು, ತಿನ್ನುವವನನ್ನು, ತಿನ್ನುವವನಿಗೆ, ತಿನ್ನುವವನಲ್ಲಿ -ಇತ್ಯಾದಿ
(೪)ಬರೆ-ಬರೆಯುವನು-ಬರೆಯುವ-ಬರೆಯುವವನು, ಬರೆಯುವವನನ್ನು -ಇತ್ಯಾದಿ

ಮೇಲಿನ ನಾಲ್ಕು ಉದಾಹರಣೆಗಳಲ್ಲಿ-ಮಾಡು, ಹೋಗು, ತಿನ್ನು, ಬರೆ-ಈ ನಾಲ್ಕು ಧಾತುಗಳು-ಮಾಡಿದನು, ಹೋಗುವನು, ತಿನ್ನುತ್ತಾನೆ, ಬರೆಯುವನು ಈ ನಾಲ್ಕು ರೀತಿಯ ಕ್ರಿಯಾಪದಗಳಾಗಿವೆ.  ಇವು ಕ್ರಿಯಾಪದಗಳಾಗುವ ರೀತಿಯನ್ನು ಹಿಂದಿನ ಕ್ರಿಯಾಪದ ಪ್ರಕರಣದಲ್ಲಿ ತಿಳಿದಿದ್ದೀರಿ.  ಅವುಗಳ ಮುಂದಿರುವ ಮಾಡಿದ, ಹೋಗುವ, ತಿನ್ನುವ, ಬರೆಯುವ- ಇವು ಕ್ರಮವಾಗಿ – ಮಾಡು+ದ+ಅ=ಮಾಡಿದ, ಹೋಗು+ವ+ಅ=ಹೋಗುವ, ತಿನ್ನು+ವ+ಅ=ತಿನ್ನುವ, ಬರೆ+ಉವ+ಅ=ಬರೆಯುವ – ಹೀಗಾಗಿವೆ.  ಇವು ಎಲ್ಲಾ ಕಡೆಗೂ ಕೊನೆಯಲ್ಲಿ ಅ ಎಂಬ ಪ್ರತ್ಯಯವನ್ನೂ ಮಧ್ಯದಲ್ಲಿ ದ, ವ, ಉವ ಇತ್ಯಾದಿ ಪ್ರತ್ಯಯಗಳನ್ನೂ ಹೊಂದಿವೆ.  ಧಾತುಗಳು ಹೀಗೆ – ಮಾಡಿದ, ಹೋಗುವ, ತಿನ್ನುವ, ಬರೆಯುವ – ಇತ್ಯಾದಿ ರೂಪ ಪಡೆದ ಮೇಲೆ ಧಾತುವಿನಿಂದ ಹುಟ್ಟಿದ ನಾಮಪ್ರಕೃತಿಗಳೆನಿಸಿದವು.  ಅಥವಾ ಕೃದಂತನಾಮ ಪ್ರಕೃತಿಗಳೆನಿಸಿದವು.  ಇನ್ನು ಇವುಗಳ ಮೇಲೆ-ಉ, ಅನ್ನು, ಇಂದ, ಗೆ, ಇಗೆ, ಕ್ಕೆ, ಅಕ್ಕೆ, ದೆಸೆಯಿಂದ, ಅ, ಅಲ್ಲಿ – ಇತ್ಯಾದಿ ಸಪ್ತ ವಿಧವಾದ ನಾಮವಿಭಕ್ತಿಪ್ರತ್ಯಯಗಳೂ ಸೇರಿ ಕೃದಂತನಾಮಪದಗಳೆನಿಸುತ್ತವೆ.  ಇಂಥವನ್ನೇ ನಾವು ಸಾಧಿತ ನಾಮಗಳು ಎನ್ನುತ್ತೇವೆ.  ಮೇಲಿನ ಉದಾಹರಣೆಗಳಲ್ಲಿ ಕೊನೆಯಲ್ಲಿ ಬಂದಿರುವ ಅ ಎಂಬುದೇ ಕೃತ್‌ಪ್ರತ್ಯಯ.  ಇಂಥ ಕೃತ್‌ಪ್ರತ್ಯಯವನ್ನು ಅಂತದಲ್ಲಿ ಉಳ್ಳದ್ದೇ ಕೃದಂತ.  ಮಧ್ಯದಲ್ಲಿ ಬಂದಿರುವ ದ, ವ, ಉವಗಳು ಕಾಲವನ್ನು ಸೂಚಿಸುವ ಪ್ರತ್ಯಯಗಳು.  ಇವಕ್ಕೆ ಕಾಲಸೂಚಕ ಪ್ರತ್ಯಯಗಳೆನ್ನುವರು.  ಹಾಗಾದರೆ ಕೃದಂತವೆಂದರೇನು? ಎಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೮೬ಕೃದಂತ:- ಧಾತುಗಳಿಗೆಕೃತ್ಪ್ರತ್ಯಯಗಳು ಸೇರಿಕೃದಂತಗಳೆನಿಸುವುವುಇವಕ್ಕೆಕೃನ್ನಾಮಗಳೆಂದೂ ಹೆಸರು.
ಕೃದಂತಗಳು ಕೃದಂತನಾಮ (ಕೃನ್ನಾಮ), ಕೃದಂತ ಭಾವನಾಮಕೃದಂತಾವ್ಯಯಗಳೆಂದು ಮೂರು ವಿಧ.
ಉದಾಹರಣೆಗೆ:-
ಕೃದಂತನಾಮಕೃದಂತಭಾವನಾಮಕೃದಂತಾವ್ಯಯ
ಮಾಡಿದಮಾಟಮಾಡಿ
ತಿನ್ನುವತಿನ್ನುವಿಕೆತಿಂದು
ನಡೆಯುವನಡೆತನಡೆಯುತ್ತ
ಹೋಗದಹೋಗುವಿಕೆಹೋಗಲು

(ಕೃದಂತ ನಾಮಗಳು
(೮೭ಕೃದಂತನಾಮಗಳು:- ಧಾತುಗಳಿಗೆಕರ್ತೃ ಮೊದಲಾದ ಅರ್ಥಗಳಲ್ಲಿಸಾಮಾನ್ಯವಾಗಿ  ಎಂಬ ಕೃತ್ಪ್ರತ್ಯಯವುಬರುವುದುಆಗ ಧಾತುವಿಗೂಕೃತ್ಪ್ರತ್ಯಯಕ್ಕೂ ಮಧ್ಯದಲ್ಲಿ ವರ್ತಮಾನಭವಿಷ್ಯತ್ಕಾಲಗಳಲ್ಲಿ  ಉವ ಎಂಬಕಾಲಸೂಚಕ ಪ್ರತ್ಯಯಗಳೂಭೂತಕಾಲದಲ್ಲಿ  ಎಂಬ ಕಾಲಸೂಚಕಪ್ರತ್ಯಯವೂನಿಷೇಧಾರ್ಥದಲ್ಲಿ ಅದಎಂಬುದೂ ಆಗಮಗಳಾಗುತ್ತವೆಇವನ್ನೇಕೃದಂತನಾಮಗಳೆ ನ್ನುವರು.
ಇವು ನಾಮಪ್ರಕೃತಿಗಳೆನಿಸಿದ್ದರಿಂದ ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರಿ ನಾಮಪದಗಳಾಗುವುವು.
ಉದಾಹರಣೆಗೆ:-
(i) ವರ್ತಮಾನ ಕೃದಂತಕ್ಕೆ-
ಮಾಡು++=ಮಾಡುವ
ತಿನ್ನು++=ತಿನ್ನುವ
ಬರೆ+ಉವ+=ಬರೆಯುವ

ಇದರಂತೆ-ಹೋಗುವ, ಬರುವ, ತಿನ್ನುವ, ನೋಡುವ, ಓಡುವ, ನಡೆಯುವ, ಕಾಣುವ, ಕೊಡುವ[1].
(ii) ಭೂತ ಕೃದಂತಕ್ಕೆ-
ಮಾಡು++=ಮಾಡಿದ
ತಿನ್ನು++=ತಿಂದ
ಹೋಗು++=ಹೋದ

ಇದರಂತೆ ಬರೆದ, ನೋಡಿದ, ನಡೆದ, ಕಂಡ, ಕರೆದ-ಇತ್ಯಾದಿ.
(iii) ನಿಷೇಧ ಕೃದಂತಕ್ಕೆ-
ಮಾಡು+ಅದ+=ಮಾಡದ
ತಿನ್ನು+ಅದ+=ತಿನ್ನದ

ಇದರಂತೆ ಹೋಗದ, ಬರದ, ನೋಡದ, ನುಡಿಯದ, ಬರೆಯದ-ಇತ್ಯಾದಿ.
ಮೇಲೆ ಹೇಳಿದ ವರ್ತಮಾನ, ಭವಿಷ್ಯತ್, ಭೂತ, ನಿಷೇಧಾರ್ಥ ಕೃದಂತನಾಮಗಳೆಲ್ಲ ಈಗ ನಾಮವಿಭಕ್ತಿಪ್ರತ್ಯಯ ಹತ್ತಲು ಸಿದ್ಧವಾದವು. ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿ ಆಗುವ ವ್ಯಾಕರಣ ವಿಶೇಷಗಳನ್ನು ಈ ಕೆಳಗೆ ನೋಡಿರಿ.
(i) ಪುಲ್ಲಿಂಗದಲ್ಲಿ-
ಕೃದಂತನಾಮಪದಗಳು
ಮಾಡುವಮಾಡುವ+ಅವನು+=ಮಾಡುವವನು

ಮಾಡುವ+ಅವರು+=ಮಾಡುವವರು

ಮಾಡುವ+ಅವನು+ಅನ್ನು=ಮಾಡುವವನನ್ನು

ಮಾಡಿದ+ಅವನು+=ಮಾಡಿದವನು (ಏ.ವ.)

ಮಾಡಿದ+ಅವರು+=ಮಾಡಿದವರು (ಬ.ವ.)

ಮಾಡಿದ+ಅವರು+ಇಂದ=ಮಾಡಿದವರಿಂದ (ಬ.ವ.)

ಮಾಡದ+ಅವನು+=ಮಾಡದವನು (ಏ.ವ.)

ಮಾಡದ+ಅವನು+ಅಲ್ಲಿ=ಮಾಡದವನಲ್ಲಿ (ಏ.ವ.)

ಮಾಡದ+ಅವರು+ಅಲ್ಲಿ=ಮಾಡದವರಲ್ಲಿ (ಬ.ವ.)









(ii) ಸ್ತ್ರೀಲಿಂಗದಲ್ಲಿ-
ಕೃದಂತನಾಮಪದಗಳು
ಬರೆದಬರೆದ+ಅವಳು+=ಬರೆದವಳು (ಏ.ವ.)

ಬರೆದ+ಅವಳು+ಅನ್ನು=ಬರೆದವಳನ್ನು (ಏ.ವ.)

ಬರೆದ+ಅವರು+ಇಂದ=ಬರೆದವರಿಂದ (ಬ.ವ.)

ಬರೆದ+ಅವಳು+ಇಗೆ=ಬರೆದವಳಿಗೆ (ಏ.ವ.)

ಬರೆದ+ಅವರು+ಇಗೆ=ಬರೆದವರಿಗೆ (ಬ.ವ.)

ಬರೆದ+ಅವಳು+ಅಲ್ಲಿ=ಬರೆದವಳಲ್ಲಿ (ಏ.ವ.)

ಬರೆದ+ಅವಳು+=ಬರೆದವಳೇ (ಏ.ವ.)

ತಿನ್ನದ+ಅವಳು+=ತಿನ್ನದವಳು

ತಿನ್ನದ+ಅವರು+ಅನ್ನು=ತಿನ್ನದವರನ್ನು

ತಿನ್ನದ+ಅವಳು+ಇಂದ=ತಿನ್ನದವಳಿಂದ

(iii) ನಪುಂಸಕಲಿಂಗದಲ್ಲಿ-
ಕೃದಂತನಾಮಪದಗಳು
ಹೋಗುವಹೋಗುವ+ಉದು+=ಹೋಗುವುದು


ಹೋಗುವ+ಉದು+ಅನ್ನು=ಹೋಗುವುದನ್ನು


ಹೋಗುವ+ಉವು+ಅನ್ನು=ಹೋಗುವುವನ್ನು


ಹೋಗುವ+ಉದು+ಅರು+ಇಂದ=ಹೋಗುವುದರಿಂದ

ಹೋಗುವ+ಉದು+ಅಕ್ಕೆ=ಹೋಗುವುದಕ್ಕೆ


ಹೋಗುವ+ಉದು+ಅರು+ಅಲ್ಲಿ=ಹೋಗುವುದರಲ್ಲಿ

ಹೋಗುವ+ಉವು+ಗಳು+ಅಲ್ಲಿ=ಹೋಗುವುವುಗಳಲ್ಲಿ
(ಅವು)

ಹೋಗುವವುಗಳಲ್ಲಿ

ಹೋದ+ಉದು+ಅನ್ನು=ಹೋದುದನ್ನು


ಹೋದ+ಉವು+ಗಳು+ಇಂದ=ಹೋದುವುಗಳಿಂದ
- ಇತ್ಯಾದಿ
ಮೇಲೆ ಹೇಳಿದ ಉದಾಹರಣೆಗಳನ್ನೆಲ್ಲ ನೋಡಿದರೆ ಕೃದಂತಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಕೃದಂತಕ್ಕೂ, ನಾಮವಿಭಕ್ತಿಪ್ರತ್ಯಯಕ್ಕೂ ಮಧ್ಯದಲ್ಲಿ ಪುಲ್ಲಿಂಗ ಏಕವಚನದಲ್ಲಿ ಅವನುಎಂಬುದೂಬಹುವಚನದಲ್ಲಿ ಅವರುಎಂಬ ಸರ್ವನಾಮಗಳೂ ಆಗಮಗಳಾಗಿಬರುತ್ತವೆ.
ಸ್ತ್ರೀಲಿಂಗದ ಏಕವಚನದಲ್ಲಿ ಅವಳುಬಹುವಚನದಲ್ಲಿ ಅವರು ಎಂಬ ಸರ್ವನಾಮಬರುತ್ತವೆ.
ನಪುಂಸಕಲಿಂಗದ ಏಕವಚನದಲ್ಲಿ ಉದು(ಅದುಮತ್ತು ಬಹುವಚನದಲ್ಲಿ ಉವು(ಅವುಎಂಬ ಸರ್ವನಾಮಗಳುಬರುತ್ತವೆ[2].
(ಇದುವರೆಗೆ ತಿಳಿಸಿದ ಕೃದಂತನಾಮಗಳುನಾಮಪದಗಳನ್ನು ವಿಶೇಷಿಸುತ್ತವೆ.
(i) ವರ್ತಮಾನಭವಿಷ್ಯತ್ ಕೃದಂತಗಳುನಾಮಪದಗಳನ್ನು ವಿಶೇಷಿಸುವುದಕ್ಕೆ-
ಮಾಡುವ ಕೆಲಸ
ಹಾಡುವ ಪದ
ನೋಡುವ ಕಾರ‍್ಯ
ತಿನ್ನುವ ಪದಾರ್ಥ – ಇತ್ಯಾದಿ.

(ii) ಭೂತಕೃದಂತಗಳು ನಾಮಪದಗಳನ್ನುವಿಶೇಷಿಸುವುದಕ್ಕೆ-
ಮಾಡಿದ ಕೆಲಸ
ಹಾಡಿದ ಪದ
ನೋಡಿದ ಕಾರ‍್ಯ
ತಿಂದ ಪದಾರ್ಥ – ಇತ್ಯಾದಿ.

(iii) ನಿಷೇಧಕೃದಂತಗಳು ನಾಮಪದಗಳನ್ನುವಿಶೇಷಿಸುವುದಕ್ಕೆ-
ಮಾಡದ ಕೆಲಸ
ಹಾಡದ ಪದ
ನೋಡದ ಕಾರ‍್ಯ
ತಿನ್ನದ ಪದಾರ್ಥ – ಇತ್ಯಾದಿ.

(ಕೃದಂತಭಾವನಾಮಗಳು(ಭಾವಕೃದಂತ)
(i) ಆತನ ಓಟ ಚೆನ್ನಾಗಿತ್ತು
(ii) ಅದರ ನೆನಪು ಇಲ್ಲ
(iii) ಗಡಿಗೆಯ ಮಾಟ ಸೊಗಸು
(iv) ಇದರ ಕೊರೆತ ಹಸನಾಗಿದೆ
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಓಟಮಾಟನೆನಪುಕೊರೆತ-ಈ ಶಬ್ದಗಳನ್ನು ಗಮನಿಸಿರಿ.
ಓಡುವ ರೀತಿಯೇ ಓಟ – ಓಡು .
ಮಾಡಿರುವ ರೀತಿಯೇ ಮಾಟ – ಮಾಡು .
ನೆನೆಯುವ ರೀತಿಯೇ ನೆನಪು – ನೆನೆ ಅಪು.
ಕೊರೆದಿರುವಿಕೆಯೇ ಕೊರೆತ – ಕೊರೆ +.
ಇವೆಲ್ಲ ಕ್ರಿಯೆಯ ಭಾವವನ್ನು ತಿಳಿಸುತ್ತದೆ.  ಆದುದರಿಂದ ಇವನ್ನು ಕೃದಂತ ಭಾವನಾಮಗಳು ಅಥವಾ ಭಾವಕೃದಂತಗಳು ಎನ್ನುತ್ತಾರೆ.

(೮೮ಕೃದಂತಭಾವನಾಮಗಳು-ಧಾತುಗಳಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳುಸೇರಿ ಕೃದಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಧಾತು+ಭಾವಾರ್ಥದಲ್ಲಿ ಕೃತ್ಪ್ರತ್ಯಯ=ಕೃದಂತ ಭಾವನಾಮ-ಇದರಂತೆ ಇರುವ  ಇತರ ರೂಪಗಳು
ಮಾಡು+ವುದು[3]=ಮಾಡುವುದು-ನೋಡುವುದು, ತಿನ್ನುವುದು
ತಿನ್ನು+ಇಕೆ=ತಿನ್ನುವಿಕೆ-ನೋಡುವಿಕೆ, ಬರೆಯುವಿಕೆ, ಕೊರೆಯುವಿಕೆ
ಅಂಜು+ಇಕೆ=ಅಂಜಿಕೆ-ನಂಬಿಕೆ, ಹೊಗಳಿಕೆ,  ತೆಗಳಿಕೆ, ಆಳಿಕೆ,  ನಾಚಿಕೆ, ಬಳಲಿಕೆ, ಕಲಿಕೆ
ಉಡು+ಇಗೆ=ಉಡಿಗೆ-ತೊಡಿಗೆ, ಅಡಿಗೆ,  ಮುತ್ತಿಗೆ, ಹಾಸಿಗೆ, ಏಳಿಗೆ
ಉಡು+ಗೆ=ಉಡುಗೆ-ತೊಡುಗೆ, ನಂಬುಗೆ, ಹೊಲಿಗೆ, ಏಳ್ಗೆ
ಬರು+ಅವು=ಬರವು-ಸೆಳವು, ಮರವು, ಒಲವು, ಕಳವು, ತೆರವು
ಸಾ+ವು=ಸಾವು-ನೋವು, ಮೇವು,  ದಣಿವು, ಅರಿವು
ಕೊರೆ+=ಕೊರೆತ-ಸೆಳೆತ, ಕಟೆತ, ಇರಿತ,  ತಿವಿತ, ಕುಣಿತ, ಒಗೆತ
ಓಡು+=ಓಟ-ಮಾಟ, ಕೂಟ, ನೋಟ, ಆಟ, ಕಾಟ
ನಡೆ+ವಳಿ=ನಡೆವಳಿ-ನುಡಿವಳಿ, ಸಲುವಳಿ, ಹಿಡಿವಳಿ, ಕೂಡುವಳಿ, ಮುಗಿವಳಿ
ಕಾ+ಪು=ಕಾಪು-ಮೇಪು, ತೀರ್ಪು, ತಿಳಿಪು, ಹೊಳೆಪು, ನೆನೆಪು,
ಹೊಳೆ+ಅಪು=ಹೊಳಪು-ನೆನಪು
ಮುಗ್ಗು+ಅಲು=ಮುಗ್ಗಲು-ಒಣಗಲು, ಜಾರಲು,






ಬಿಕ್ಕಲು, ಒಕ್ಕಲು
ನಗು+=ನಗೆ-ಹೊರೆ
ಬೆರೆ+ಅಕೆ=ಬೆರಕೆ-ಮೊಳಕೆ
ಬೆಳೆ+ವಳಿಕೆ=ಬೆಳೆವಳಿಕೆ-ತಿಳಿವಳಿಕೆ, ನಡೆವಳಿಕೆ
ಮೆರೆ+ವಣಿಗೆ=ಮೆರೆವಣಿಗೆ-ಬೆಳವಣಿಗೆ, ಬರೆವಣಿಗೆ
ಅಳೆ+ಅತೆ=ಅಳತೆ-ನಡತೆ
ಮುಳಿ+ಸು=ಮುಳಿಸು-ತೊಳೆಸು, ಮುನಿಸು
ಮುರಿ+ಅಕು=ಮುರಕು-ಹರಕು
ನಡುಗು+ಉಕ=ನಡುಕ-ಮುರುಕ
ಒಪ್ಪು+ಇತ=ಒಪ್ಪಿತ-ತಪ್ಪಿತ

(೧) ಕೆಲವು ಧಾತುಗಳು ಅಲ್ಪಸ್ವಲ್ಪ ವ್ಯತ್ಯಾಸದಿಂದ ಭಾವಕೃದಂತ (ಭಾವನಾಮ)ಗಳಾಗುವುವು.
ಧಾತುಭಾವಕೃದಂತನಾಮಪದ
ಕಿಡುಕೇಡುಕೇಡನ್ನು, ಕೇಡಿನಿಂದ.
ಬಿಡುಬೀಡುಬೀಡನ್ನು, ಬೀಡಿನಿಂದ, ಬೀಡಿಗೆ.
ಪಡುಪಾಡುಪಾಡನ್ನು, ಪಾಡಿನಿಂದ, ಪಾಡಿಗೆ.

(೨) ಕೆಲವು ಧಾತುಗಳು ಇದ್ದ ರೂಪದಲ್ಲಿಯೇ ಭಾವಕೃದಂತ (ಕೃದಂತ ಭಾವನಾಮ) ಗಳಾಗುವುವು.
ಧಾತುಭಾವಕೃದಂತನಾಮಪದ
ನಡೆನಡೆನಡೆಯನ್ನು, ನಡೆಯಿಂದ
ನುಡಿನುಡಿನುಡಿಯು, ನುಡಿಯನ್ನು, ನುಡಿಯಿಂದ, ನುಡಿಗೆ-ಇತ್ಯಾದಿ
ಓದುಓದುಓದು, ಓದನ್ನು, ಓದಿನಿಂದ, ಓದಿನಲ್ಲಿ-ಇತ್ಯಾದಿ
ಕಟ್ಟುಕಟ್ಟುಕಟ್ಟು, ಕಟ್ಟನ್ನು, ಕಟ್ಟಿನಿಂದ, ಕಟ್ಟಿಗೆ, ಕಟ್ಟಿನಲ್ಲಿ
ಅಂಟುಅಂಟುಅಂಟನ್ನು, ಅಂಟಿನ ದೆಸೆಯಿಂದ, ಅಂಟಿನಲ್ಲಿ
ಹಿಡಿಹಿಡಿಹಿಡಿಯನ್ನು, ಹಿಡಿಯಿಂದ
ಉರಿಉರಿಉರಿಯನ್ನು, ಉರಿಯಿಂದ
ಹೇರುಹೇರುಹೇರನ್ನು, ಹೇರಿನಿಂದ, ಹೇರಿನಲ್ಲಿ
ಉಗುಳುಉಗುಳುಉಗುಳನ್ನು, ಉಗುಳಿನ, ಉಗುಳಿನಲ್ಲಿ
ಹುಟ್ಟುಹುಟ್ಟುಹುಟ್ಟನ್ನು, ಹುಟ್ಟಿನ, ಹುಟ್ಟಿನಲ್ಲಿ
ಚಿಗುರುಚಿಗುರುಚಿಗುರನ್ನು, ಚಿಗುರಿನಲ್ಲಿ
ಬೆಳೆಬೆಳೆಬೆಳೆಯನ್ನು, ಬೆಳೆಯಲ್ಲಿ
ಸವಿಸವಿಸವಿಯನ್ನು, ಸವಿಯಲ್ಲಿ
ಗುದ್ದುಗುದ್ದುಗುದ್ದನ್ನು, ಗುದ್ದಿನಲ್ಲಿ
ಬದುಕುಬದುಕುಬದುಕನ್ನು, ಬದುಕಿನಲ್ಲಿ

(೩) ಹಳಗನ್ನಡದ ಕೆಲವು ಕೃದಂತ ಭಾವನಾಮಗಳು ಹೊಸಗನ್ನಡದಲ್ಲಿ ರೂಪಾಂತರ ಹೊಂದುತ್ತವೆ.
ಏಳ್ಗೆ-ಏಳಿಗೆ, ಸಲ್ಗೆ-ಸಲಿಗೆ, ಕಾಣ್ಕೆ-ಕಾಣಿಕೆ, ಒಲ್ಮೆ-ಒಲುಮೆ, ಪೂಣ್ಕೆ-ಪೂಣಿಕೆ – ಇತ್ಯಾದಿ.
(ಕೃದಾಂತಾವ್ಯಯಗಳು (ಅವ್ಯಯಕೃದಂತ)
ಧಾತುವಿನಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂಥ ಶಬ್ದ ರೂಪಗಳೇ ಕೃದಂತಾವ್ಯಯಗಳು ಅಥವಾ ಅವ್ಯಯಕೃದಂತಗಳುಈ ಕೆಳಗಿನ ಕೆಲವು ಉದಾಹರಣೆ ನೋಡಿರಿ.
(೧) ರಾಮನು ಉಣ್ಣದೆ ಮಲಗಿದನು.
(೨) ಮಳೆ ಬರಲು ಕರೆ ತುಂಬಿತು.
(೩) ಅವನು ಬರುತ್ತ ತಿಂದನು.
(೪) ಅದನ್ನು ಬರೆದು ಕಳುಹಿಸಿದನು.
(೫) ಅಲ್ಲಿಗೆ ಹೋಗಲಿಕ್ಕೆ ತಡವಾಯಿತು.
ಮೇಲಿನ ವಾಕ್ಯಗಳಲ್ಲಿ ದಪ್ಪಕ್ಷರ ಶಬ್ದಗಳಾದ ಉಣ್ಣದೆ, ಬರಲುಬರುತ್ತಬರೆದುಹೋಗಲಿಕ್ಕೆ-ಮುಂತಾದವುಗಳು ಉಣ್ಣು+ಅದೆಬರು+ಅಲುಬರು+ಉತ್ತಬರೆ+ದುಹೋಗು+ಅಲಿಕ್ಕೆ-ಹೀಗೆ ಧಾತುಗಳ ಮೇಲೆ-ಅದೆಅಲುಉತ್ತದುಅಲಿಕ್ಕೆ-ಇತ್ಯಾದಿ ಪ್ರತ್ಯಯಗಳು ಬಂದು ಆದ ಶಬ್ದರೂಪಗಳು.  ಇವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಗಳಲ್ಲೂ, ಏಕವಚನ ಬಹುವಚನಗಳಲ್ಲೂ ಒಂದೇ ರೂಪವಾಗಿರುತ್ತವೆ.  ಅಲ್ಲದೆ ಇವುಗಳ ಮೇಲೆ ಇನ್ನಾವ ವಿಭಕ್ತಿಪ್ರತ್ಯಯಗಳೂ ಬರುವುದಿಲ್ಲ.  ಆದ್ದರಿಂದ-ಇಂಥ ಶಬ್ದಗಳು ಅವ್ಯಯದ[4]ಗುಣವನ್ನು ಪಡೆದವು.  ಆದ್ದರಿಂದಲೇ ಇವುಗಳನ್ನು ಅವ್ಯಯಕೃದಂತಗಳು ಅಥವಾ ಕೃದಂತಾವ್ಯಯಗಳು ಎನ್ನುವರು.  ಕೆಳಗಿನ ಸೂತ್ರವನ್ನು ಗಮನಿಸಿರಿ.
(೮೯ಧಾತುಗಳ ಮೇಲೆ ಉತಉತ್ತಅದೆದರೆಅಲುಅಲಿಕ್ಕೆದು-ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳೆನಿಸುವುವು.
ಇವು ಪೂರ್ಣಕ್ರಿಯಾರ್ಥವನ್ನು ಕೊಡದೆಇನ್ನೊಂದು ಕ್ರಿಯೆಯನ್ನಪೇಕ್ಷಿಸುವುದರಿಂದ ಇವನ್ನು ಅಪೂರ್ಣಕ್ರಿಯೆ ಅಥವಾ ನ್ಯೂನಕ್ರಿಯೆಗಳೆಂದು ಕರೆಯುವರು.
(ರಾಮನು ಉಣ್ಣುತ್ತಾ ಮಾತಾಡಿದನು.
ಎಂಬ ಈ ವಾಕ್ಯದಲ್ಲಿ ರಾಮನೆಂಬ ಕರ್ತೃವು ಉಣ್ಣುವ ಮತ್ತು ಮಾತನಾಡುವ ಕ್ರಿಯೆಗಳೆರಡನ್ನೂ ಮಾಡಿದನಾದ್ದರಿಂದ ಇಂಥವು ಏಕಕರ್ತೃಕ ಕ್ರಿಯೆಗಳು.
(ಮಳೆ ಬರಲು ಕೆರೆ ತುಂಬಿತು.
ಎಂಬ ಈ ವಾಕ್ಯದಲ್ಲಿ ಬರಲು ಎಂಬ ಕ್ರಿಯೆಗೆ ಮಳೆಯೂ, ತುಂಬುವ ಕ್ರಿಯೆಗೆ ಕೆರೆಯೂ ಕರ್ತೃಗಳಾದ್ದರಿಂದ ಇವೆರಡೂ ಕ್ರಿಯೆಗೆ ಬೇರೆ ಬೇರೆ ಕರ್ತೃಗಳು ಇದ್ದಹಾಗಾಯಿತು.  ಇಂಥವನ್ನು ಭಿನ್ನಕರ್ತೃಗಳು ಎನ್ನುತ್ತಾರೆ.
ಉದಾಹರಣೆಗೆ:
ಪ್ರತ್ಯಯಗಳು-ಧಾತು+ಪ್ರತ್ಯಯ=ಅವ್ಯಯಕೃದಂತ
ಉತ-ಮಾಡು+ಉತ=ಮಾಡುತ, ಇದರಂತೆ ನೋಡುತ, ಮಾರುತ, ಬರುತ
ಉತ್ತ[5]-ತಿನ್ನು+ಉತ್ತ=ತಿನ್ನುತ್ತ, ಇದರಂತೆ ನೋಡುತ್ತ, ನಡೆಯುತ್ತ, ಬರುತ್ತ
ಅದೆ-ಮಾಡು+ಅದೆ=ಮಾಡದೆ, ಇದರಂತೆ ನೋಡದೆ, ತಿನ್ನದೆ, ಬರೆಯದೆ
ಅಲು-ಬರು+ಅಲು=ಬರಲು, ಇದರಂತೆ ತಿನ್ನಲು, ಉಣ್ಣಲು, ನೋಡಲು, ನುಡಿಯಲು, ಬರೆಯಲು
ಅಲಿಕ್ಕೆ-ತಿನ್ನು+ಅಲಿಕ್ಕೆ=ತಿನ್ನಲಿಕ್ಕೆ, ಇದರಂತೆ ಮಾಡಲಿಕ್ಕೆ, ತಿಳಿಯಲಿಕ್ಕೆ, ಬರಲಿಕ್ಕೆ, ನಡೆಯಲಿಕ್ಕೆ
-ಹೇಳು+=ಹೇಳ[6], ಇದರಂತೆ ಮಾಡ, ನೋಡ, ನುಡಿಯ
-ಮಾಡು+=ಮಾಡಿ, ಇದರಂತೆ ಹೇಳಿ, ಕೇಳಿ, ನೋಡಿ
ದು-ತಿನ್ನು+ದು=ತಿಂದು, ಇದರಂತೆ ನುಡಿದು, ನಡೆದು, ಕರೆದು, ಬರೆದು
ಈಗ ಏಕಕರ್ತೃಕ ಕೃದಂತಾವ್ಯಯಗಳು ಮತ್ತು ಭಿನ್ನಕರ್ತೃಕ ಕೃದಂತಾವ್ಯಯಗಳಲ್ಲಿ ಯಾವ ಯಾವ ಪ್ರತ್ಯಯಗಳು ಬರುತ್ತವೆಂಬುದರ ವ್ಯವಸ್ಥೆಯನ್ನು ನೋಡಿರಿ.
(ಏಕಕರ್ತೃಕ ಕೃದಂತಾವ್ಯಯಗಳು.
(i) ಒಂದು ಕರ್ತೃವಿನಿಂದ ಎರಡು ಕ್ರಿಯೆಗಳು ನಡೆದಾಗ ಮೊದಲು ಹೇಳುವ ಕ್ರಿಯೆಯಲ್ಲಿ ಭೂತಕಾಲ ತೋರಿದರೆ ದು ಅಥವಾ ಇ ಪ್ರತ್ಯಯಗಳು ಬರುತ್ತವೆ.
[7](ಅ) ಅದನ್ನು ತಿಂದು ಹೋದನು (ತಿನ್ನು+ದು=ತಿಂದು)
83(ಆ) ಆ ಕೆಲಸವನ್ನು ಮಾಡಿ ಬಂದೆನು (ಮಾಡು+ಇ=ಮಾಡಿ)
-ಇಲ್ಲಿ ತಿಂದು, ಮಾಡಿ ಎಂಬುವೆರಡೂ ಮೊದಲ ಕ್ರಿಯೆಗಳು ಮುಗಿದು ಹೋದ (ಭೂತ) ಕಾಲವನ್ನು ತೋರಿಸುತ್ತವಾದ್ದರಿಂದ, ದು, ಇ ಪ್ರತ್ಯಯಗಳು ಬಂದಿವೆ.

(ii) ಒಂದೇ ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಮೊದಲನೆಯ ಕ್ರಿಯೆಯ ಮೇಲೆ ಉತ್ತ (ಉತ್ತಾಪ್ರತ್ಯಯವೂನಿಷೇಧ ತೋರಿದರೆ ಅದೇ ಪ್ರತ್ಯಯವೂ ಬರುವುವು.
(ಅ) ಅವನು ಉಣ್ಣುತ್ತ ಮಾತನಾಡಿದನು (ಏಕಕಾಲದಲ್ಲಿ ನಡೆದ ಕ್ರಿಯೆಗಳು)
(ಆ) ಅವನು ಉಣ್ಣದೆ ಹೋದನು (ನಿಷೇಧ)
-ಇಲ್ಲಿ ಮೊದಲ ವಾಕ್ಯದಲ್ಲಿ ಮಾತನಾಡುವ ಕ್ರಿಯೆ, ಉಣ್ಣುವ ಕ್ರಿಯೆಗಳು ಒಬ್ಬನಿಂದಲೇ ಏಕಕಾಲದಲ್ಲಿ ಆಗಿವೆ.  ಆದ್ದರಿಂದ ಉತ್ತ ಎಂಬುದೂ, ಎರಡನೆಯ ವಾಕ್ಯದಲ್ಲಿ ನಿಷೇಧ ಕ್ರಿಯೆ, ಹೋಗುವ ಕ್ರಿಯೆಗಳೆರಡೂ ಒಬ್ಬ ಕರ್ತೃವಿನಿಂದ ನಡೆದಿವೆ.  ಆದ್ದರಿಂದ ಅದೆ ಎಂಬುದು ಮೊದಲ ಕ್ರಿಯೆಯ ಮೇಲೆ ಬಂದಿದೆ.
(iii) ಒಂದು ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಪ್ರಯೋಜನ ತೋರಿದರೆ ಅಲು ಅಲಿಕ್ಕೆ ಪ್ರತ್ಯಯಗಳು ಮೊದಲನೆಯ ಕ್ರಿಯೆಯ ಮೇಲೆ ಬರುತ್ತವೆ.
(ಅ) ಅವನು ತಿನ್ನಲು ಹೋದನು (ಪ್ರಯೋಜನ)
(ಆ) ಅವನು ತಿನ್ನಲಿಕ್ಕೆ ಹೋದನು (    “    )
-ಮೇಲಿನ ಎರಡೂ ವಾಕ್ಯಗಳಲ್ಲಿ ಹೋಗುವ ಕ್ರಿಯೆಯು ತಿನ್ನುವ ಪ್ರಯೋಜನಕ್ಕಾಗಿ.  ಆದ್ದರಿಂದ ಮೊದಲ ಕ್ರಿಯೆಯ ಮೇಲೆ ಅಲು, ಅಲಿಕ್ಕೆ ಪ್ರತ್ಯಯಗಳು ಬಂದಿವೆ.

(ಭಿನ್ನಕರ್ತೃಕ ಕೃದಂತಾವ್ಯಯಗಳು
(i) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳುಂಟಾದಾಗ ಕಾರಣ ತೋರುವಾಗ ಅಲು ಮತ್ತು ದು ಪ್ರತ್ಯಯಗಳು ಮೊದಲ ಕ್ರಿಯೆಯ ಮೇಲೆ ಬರುತ್ತವೆ.
ಉದಾಹರಣೆಗೆ:
(ಅ) ಹೊಲ ಬೆಳೆಯಲು ರೈತನು ಸುಖ ಹೊಂದಿದನು.
(ಆ) ಹೊಲ ಬೆಳೆದು ರೈತನಿಗೆ ಸುಖ ಬಂದಿತು.
(ii) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳು ಏಕ ಕಾಲದಲ್ಲಿ ತೋರಿದರೆ ಉತ್ತದುಅದೆ ಪ್ರತ್ಯಯಗಳು ಬಂದಾಗ ಅವುಗಳ ಮುಂದೆ ಇರಲು ಇರಲಾಗಿ ಎಂಬುವು ಸೇರುವುವು.
ಉದಾಹರಣೆಗೆ:
(ಅ) ಅವನು ಬರುತ್ತಿರಲು ಎಲ್ಲರೂ ಓಡಿದರು.
(ಆ) ಅವನು ಬರುತ್ತಿರಲಾಗಿ ಎಲ್ಲರೂ ಓಡಿದರು.
(ಇ) ಅವನು ಬರದಿರಲು ನಾವು ಮನೆಗೆ ಹೋದೆವು.
(ಈ) ಅವನು ಬರದಿರಲಾಗಿ ನಾವು ಮನೆಗೆ ಹೋದೆವು.
(ಉ) ಅವನು ಬಂದಿರಲು ನಾವೇಕೆ ಬರಬಾರದು.
(ಊ) ಅವನು ಬಂದಿರಲಾಗಿ ನಾವೇಕೆ ಬರಬಾರದು.
(iii) ಎರಡು ಕ್ರಿಯೆಗಳು ಬೇರೆ ಬೇರೆ ಕರ್ತೃಗಳಿಂದ ನಡೆದಾಗ ಪಕ್ಷಾರ್ಥ ತೋರಿದರೆ ದರೆ ಎಂಬುದೂಭಾವಾರ್ಥ ತೋರಿದರೆ ಅ ಎಂಬುದೂ ಬರುವುವು.
ಉದಾಹರಣೆಗೆ:
(೧) ಪಕ್ಷಾರ್ಥಕ್ಕೆ
(ಅ) ಮಳೆ ಬಂದರೆ, ಕರೆ ತುಂಬುವುದು.
(ಆ) ನೀವು ಬಂದರೆ ನಾವು ಬರುತ್ತೇವೆ.
(೨) ಭಾವಾರ್ಥಕ್ಕೆ
(ಅ) ಅವನು ನನ್ನನ್ನು ಹೋಗ ಹೇಳಿದನು. (ಹೋಗು+ಅ=ಹೋಗ)
(ಆ) ಅವನಿಗೆ ಅಲ್ಲಿ ಮಾಡ ಕೆಲಸವಿಲ್ಲ.  (ಮಾಡು+ಅ=ಮಾಡ)
ಮೇಲಿನ ವಾಕ್ಯಗಳಲ್ಲಿನ ‘ಮಾಡ’ ‘ಹೋಗ’ ಇವು ಭಾವಾರ್ಥಕ ಕ್ರಿಯೆಗಳೆಂದು ತಿಳಿಯಬೇಕು.

[1] ವರ್ತಮಾನ ಮತ್ತು ಭವಿಷ್ಯತ್ ಕೃದಂತಗಳು ಒಂದೇ ರೂಪವಾಗಿರುತ್ತವೆ.  ಇವೆರಡು ಕೃದಂತಗಳಲ್ಲೂ ಕಾಲಸೂಚಕ ಪ್ರತ್ಯಯ ಒಂದೇ ತೆರನಾಗಿರುತ್ತದೆ.  ಕೆಲವರು ವರ್ತಮಾನ ಕೃದಂತಗಳೇ ಇರುವುದಿಲ್ಲ ಎಂದೂ ಹೇಳುವುದುಂಟು.
[2] ನಪುಂಸಕಲಿಂಗದಲ್ಲಿ-ಹೋಗುವುದರಿಂದ-ಇತ್ಯಾದಿಗಳಿಗೆ ಪ್ರತಿಯಾಗಿ ಹೋಗುವಂತಹುದರಿಂದ, ನಡೆಯುವಂಥಾದ್ದರಿಂದ, ತಿನ್ನುವವುಗಳಿಂದ ಎಂಬುದಕ್ಕೆ ತಿನ್ನುವಂತಹವುಗಳಿಂದ, ತಿನ್ನುವಂಥವುಗಳಿಂದ-ಇತ್ಯಾದಿಯಾಗಿ ಹೊಸಗನ್ನಡದಲ್ಲಿ ಉಪಯೋಗಿಸುವುದುಂಟು.  ನಡೆಯುವುದನ್ನು, ನಡೆಯುವದನ್ನು-ಹೀಗೆ ಎರಡು ರೂಪಗಳ ಪ್ರಯೋಗವೂ ರೂಢಿಯಲ್ಲುಂಟು.  ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.
[3] ಸಾಮಾನ್ಯವಾಗಿ ಎಲ್ಲ ಧಾತುಗಳ ಮೇಲೂ ಭಾವಾರ್ಥದಲ್ಲಿ ವುದು, ವಿಕೆ – ಎಂಬ ಪ್ರತ್ಯಯಗಳು ಬರುತ್ತವೆ.  ವಿಕೆ ಪ್ರತ್ಯಯಕ್ಕೆ ಪ್ರತಿಯಾಗಿ ಕೆಲವರು ಇಕೆ ಬರುತ್ತದೆಂದು ಹೇಳಿ ನೋಡುವಿಕೆ (ನೋಡು+ವ್+ಇಕೆ=ನೋಡುವಿಕೆ) ಇತ್ಯಾದಿ ರೂಪಗಳು ಆಗುತ್ತವೆನ್ನುತ್ತಾರೆ.  ಆದರೆ ಇವೆರಡೂ ಪ್ರತ್ಯಯಗಳು ಬೇರೆಬೇರೆಯೇ ಆಗಿವೆ.
[4] ಅವ್ಯಯ ಎಂದರೆ ಲಿಂಗ, ವಚನ, ವಿಭಕ್ತಿಗಳಿಂದ ವ್ಯತ್ಯಾಸವಾಗದ ಶಬ್ದರೂಪ.  ಇವುಗಳ ವಿಷಯವನ್ನು ಮುಂದೆ ತಿಳಿಯುತ್ತೀರಿ.
[5] ಉತ್ತ ಪ್ರತ್ಯಯವನ್ನು ಹೊಸಗನ್ನಡದಲ್ಲಿ ಕೆಲವರು ಉತ್ತಾ ಎಂದು ಹೇಳಿ ಹೋಗುತ್ತಾ, ಬರುತ್ತಾ, ತಿನ್ನುತ್ತಾ ಇತ್ಯಾದಿಯಾಗಿ ಕೃದಂತಾವ್ಯಯಗಳನ್ನು ಬಳಸುವುದುಂಟು.
[6] ಹೇಳ ಬಂದನು, ಹೇಳ ಬಂದಳು, ಮಾಡ ಬಂದಳು, ನುಡಿಯ ಬಂದನು, ನುಡಿಯ ಬಂದಿತು-ಇತ್ಯಾದಿಗಳು ಈ ಶಬ್ದಗಳು ಬಂದ ವಾಕ್ಯಗಳು.
[7] ಮಾಡಿ, ತಿಂದು, ನೋಡಿ, ನೀಡಿ, ಉಂಡು, ಕೊಟ್ಟು ಇವೆಲ್ಲ ಭೂತನ್ಯೂನಗಳು.
------------------------------------------------------------------------------------

 ತದ್ಧಿತಾಂತಗಳು (ತದ್ಧಿತ+ಅಂತ)
‘ತದ್ಧಿತ ಎಂಬ ಹೆಸರಿನ ಪ್ರತ್ಯಯವನ್ನು ಅಂತದಲ್ಲಿ ಉಳ್ಳುದೇ ತದ್ಧಿತಾಂತವೆನಿಸುವುದು.  ಈ ಕೆಳಗಿನ ವಾಕ್ಯಗಳನ್ನು ನೋಡಿರಿ.
(೧) ಮೋಸವನ್ನು ಮಾಡುವವನು ಇದ್ದಾನೆ.
(೨) ಅಲ್ಲಿ ಕನ್ನಡವನ್ನು ಬಲ್ಲವರು ಬಹಳ ಜನರಿದ್ದರು.
(೩) ಹಾವನ್ನು ಆಡಿಸುವವನು ಬಂದನು.
(೪) ಮಡಿಯನ್ನು ಮಾಡುವವನು ಇನ್ನೂ ಬಂದಿಲ್ಲ.
ಮೇಲಿನ ನಾಲ್ಕು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಎರಡೆರಡು ನಾಮಪದಗಳನ್ನು ಸೇರಿಸಿ ಅದೇ ಅರ್ಥಬರುವಂತೆ ಒಂದು ಪದವನ್ನಾಗಿ ಸಮಾಸದ ಹಾಗೆ ಮಾಡಬಹುದು.  ಹೀಗೆ ನಾವು ಸಂಕ್ಷೇಪಗೊಳಿಸಿ ಹೇಳಿದಾಗ ಕಾಲ, ಶ್ರಮ, ಧ್ವನಿ ಮೊದಲಾದವುಗಳ ಉಳಿತಾಯವಾಗುವುದು.  ಹಾಗಾದರೆ ಆ ಪದಗಳನ್ನು ಯಾವ ಕ್ರಮದಿಂದ ಕೂಡಿಸುತ್ತೇವೆ?  ಇತ್ಯಾದಿಗಳ ಬಗೆಗೆ ಕೆಳಗೆ ನೋಡಿರಿ.
(೧) ಮೋಸವನ್ನು ಮಾಡುವವನು-ಎಂಬಲ್ಲಿ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬರ್ಥದಲ್ಲಿ ‘ಗಾರ ಪ್ರತ್ಯಯ ಸೇರಿಸಿ ಮೋಸವನ್ನು+ಗಾರ ಮಾಡುತ್ತೇವೆ.  ಒಂದೇ ಪ್ರಕೃತಿಯ ಮೇಲೆ ಎರಡು ಪ್ರತ್ಯಯ ಸೇರುವುದಿಲ್ಲ.  ಅನ್ನು ಎಂಬ ಪ್ರತ್ಯಯ ತೆಗೆದು-ಮೋಸ+ಗಾರ=ಮೋಸಗಾರ ಹೀಗೆ ಒಂದು ಹೊಸ ರೂಪ ಸಿದ್ಧವಾಯಿತು.  ಇಲ್ಲಿ ‘ಗಾರ’ ಎಂಬುದೇ ತದ್ಧಿತಪ್ರತ್ಯಯ.
(೨) ಕನ್ನಡವನ್ನು ಬಲ್ಲವನು-ಎಂಬಲ್ಲಿ ಕನ್ನಡವನ್ನು ಎಂಬುದರ ಮೇಲೆ ಬಲ್ಲವನು ಎಂಬರ್ಥದಲ್ಲಿ ‘ಇಗ’ ಪ್ರತ್ಯಯ ಸೇರಿದಾಗ ಕನ್ನಡವನ್ನು+ಇಗ=ಕನ್ನಡ+ಇಗ=ಕನ್ನಡಿಗ ಎಂಬ ರೂಪ ಸಿದ್ಧವಾಯಿತು.  ಇಲ್ಲಿ ‘ಇಗ’ ಎಂಬುದೇ ‘ತದ್ಧಿತ ಪ್ರತ್ಯಯ’.
(೩) ಹಾವನ್ನು ಆಡಿಸುವವನು-ಎಂಬಲ್ಲಿ ಹಾವನ್ನು ಎಂಬ ಪದದ ಮೇಲೆ ‘ಆಡಿಸುವವನು’ ಎಂಬರ್ಥದಲ್ಲಿ ‘ಆಡಿಗ’ ಎಂಬ ತದ್ಧಿತ ಪ್ರತ್ಯಯ ಬಂದು ಹಾವನ್ನು+ಆಡಿಗ=ಹಾವು+ಆಡಿಗಹಾವಾಡಿಗ ಎಂಬ ರೂಪ ಸಿದ್ಧವಾಯಿತು.
(೪) ಮಡಿಯನ್ನು ಮಾಡುವವನು-ಎಂಬಲ್ಲಿ ಮಾಡುವವನು’ ಎಂಬರ್ಥದಲ್ಲಿ ವಳ (ವಾಳ)ಎಂಬ ಪ್ರತ್ಯಯವು ಬಂದು ಮಡಿಯನ್ನು+ವಳ=ಮಡಿ+ವಳ=ಮಡಿವಳಎಂಬ ರೂಪವಾಯಿತು.
ಮೋಸವನ್ನು-ಮಾಡುವವನೆಂಬರ್ಥದಲ್ಲಿ-ಗಾರ.
ಕನ್ನಡವನ್ನು-ಬಲ್ಲವನು ಎಂಬರ್ಥದಲ್ಲಿ-ಇಗ.
ಹಾವನ್ನು-ಆಡಿಸುವವನು ಎಂಬರ್ಥದಲ್ಲಿ-ಆಡಿಗ.
ಮಡಿಯನ್ನು-ಮಾಡುವವನು ಎಂಬರ್ಥದಲ್ಲಿ-ವಳ.
ಹೀಗೆ ಹಲವಾರು ಅರ್ಥಗಳಲ್ಲಿ-ಗಾರಇಗಆಡಿಗವಳ-ಎಂಬ ಪ್ರತ್ಯಯಗಳು ನಾಮಪದಗಳ ಮೇಲೆ ಬಂದು ಹೋಸ ಬಗೆಯ ಪ್ರಕೃತಿಗಳಾಗುವುವು. ಇಲ್ಲಿ ಬಂದಿರುವ ಇಂಥ ಪ್ರತ್ಯಯಗಳನ್ನು ತದ್ಧಿತ ಪ್ರತ್ಯಯಗಳೆನ್ನುವರು. ಇಂಥ ತದ್ಧಿತ ಪ್ರತ್ಯಯಗಳನ್ನು ಅಂತದಲ್ಲಿ ಉಳ್ಳ ಶಬ್ದರೂಪವೇ ತದ್ಧಿತಾಂತ’ವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೯೦ತದ್ಧಿತಾಂತ-ನಾಮಪದಗಳ ಮೇಲೆಹಲವಾರು ಅರ್ಥಗಳಲ್ಲಿ ಗಾರಕಾರಇಗಆಡಿಗವಂತವಳಇಕಆಳಿ-ಇತ್ಯಾದಿ ತದ್ಧಿತಪ್ರತ್ಯಯಗಳು ಸೇರಿತದ್ಧಿತಾಂತಗಳೆನಿಸುವುವು.
ಈ ತದ್ಧಿತ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.  ಇವುಗಳಲ್ಲಿ – (ತದ್ಧಿತಾಂತ ನಾಮ (ತದ್ಧಿತಾಂತಭಾವನಾಮ (ತದ್ಧಿತಾಂತಾವ್ಯಯಗಳೆಂದುಮೂರು ಬಗೆ.
(ತದ್ಧಿತಾಂತ ನಾಮಗಳು
ನಾಮಪದಗಳ ಮೇಲೆ ಗಾರಕಾರಇಗವಂತಇತ್ಯಾದಿ ಪ್ರತ್ಯಯಗಳು ಬಂದು ತದ್ಧಿತಾಂತ ನಾಮಗಳಾಗುವ ಬಗೆಯನ್ನು ಗಮನಿಸಿರಿ.
ಉದಾಹರಣೆಗೆ:
ತದ್ಧಿತಪ್ರತ್ಯಯ-ನಾಮಪದ+ಅರ್ಥ=ತದ್ಧಿತಪ್ರತ್ಯಯ-ತದ್ಧಿತಾಂತನಾಮ
ಗಾರ-ಮಾಲೆಯನ್ನು+ಕಟ್ಟುವವನು=ಗಾರ-ಮಾಲೆಗಾರ
ಬಳೆಯನ್ನು+ಮಾರುವವನು=ಗಾರ-ಬಳೆಗಾರ
ಮೋಸವನ್ನು+ಮಾಡುವವನು=ಗಾರ-ಮೋಸಗಾರ
ಪಾಲನ್ನು+ಹೊಂದುವವನು=ಗಾರ-ಪಾಲುಗಾರ
ಛಲವನ್ನು+ಹೊಂದಿದವನು=ಗಾರ-ಛಲಗಾರ
ಕಾರ-ಓಲೆಯನ್ನು+ತರುವವನು=ಕಾರ-ಓಲೆಕಾರ
ಕೋಲನ್ನು+ಹಿಡಿಯುವವನು=ಕಾರ-ಕೋಲುಕಾರ
ಕೈದನ್ನು+ಹಿಡಿದಿರುವವನು=ಕಾರ-ಕೈದುಕಾರ
ಇಗ-ಕನ್ನಡವನ್ನು+ಬಲ್ಲವನು=ಇಗ-ಕನ್ನಡಿಗ
ಲೆಕ್ಕವನ್ನು+ಬಲ್ಲವನು=ಇಗ-ಲೆಕ್ಕಿಗ
ಚೆನ್ನನ್ನು+ಉಳ್ಳುವ=ಇಗ-ಚೆನ್ನಿಗ
ಗಂದವನ್ನು+ಮಾರುವವನು=ಇಗ-ಗಂದಿಗ
ಗಾಣವನ್ನು+ಆಡಿಸುವವನು=ಇಗ-ಗಾಣಿಗ
ವಂತ-ಹಣವನ್ನು+ಉಳ್ಳವನು=ವಂತ-ಹಣವಂತ
ಸಿರಿಯನ್ನು+ಉಳ್ಳವನು=ವಂತ-ಸಿರಿವಂತ
ವಳ-ಮಡಿಯನ್ನು+ಮಾಡುವವನು=ವಳ-ಮಡಿವಳ
=(ವಾಳ)-ಮಡಿವಾಳ

ಹಡಪವನ್ನು+ಆಚರಿಸುವವನು=ವಳ-ಹಡಪವಳ
ಆಡಿಗ-ಹಾವನ್ನು+ಆಡಿಸುವವನು=ಆಡಿಗ-ಹಾವಾಡಿಗ

ಹೂವನ್ನು+ಕಟ್ಟುವವನು=ಆಡಿಗ-ಹೂವಾಡಿಗ
ಇಕ-ಕರಿಯದನ್ನು (ಬಣ್ಣವನ್ನು)+ಉಳ್ಳವನು=ಇಕ-ಕರಿಕ

ಬಿಳಿಯದನ್ನು(ಬಣ್ಣವನ್ನು)+ಉಳ್ಳವನು=ಇಕ-ಬಿಳಿಕ
ಆಳಿ-ಮಾತನ್ನು+ಹೆಚ್ಚು ಆಡುವ ಸ್ವಭಾವವುಳ್ಳವನು=ಆಳಿ-ಮಾತಾಳಿ

ಓದನ್ನು+ಹೆಚ್ಚು ಆಚರಿಸುವವನು=ಆಳಿ-ಓದಾಳಿ
ಆಳಿ-ಜೂದನ್ನು+ಆಡುವವನು=ಆಳಿ-ಜೂದಾಳಿ
ಗುಳಿ-ಲಂಚವನ್ನು+ತೆಗೆದುಕೊಳ್ಳುವವನು=ಗುಳಿ-ಲಂಚಗುಳಿ
ಅನೆಯ-ಹತ್ತು+ಸಂಖ್ಯೆಯನ್ನುಳ್ಳುದು=ಅನೆಯ-ಹತ್ತನೆಯ

ಒಂದು+ಸಂಖ್ಯೆಯನ್ನುಳ್ಳುದು=ಅನೆಯ-ಒಂದನೆಯ
ಆರ-ಕುಂಬವನ್ನು+ಮಾಡುವವನು=ಆರ-ಕುಂಬಾರ[1]

ಕಮ್ಮವನ್ನು+ಆಚರಿಸುವವನು=ಆರ-ಕಮ್ಮಾರ[1]
ಇದರ ಹಾಗೆಯೆ ಉಳಿದ ಕಡೆಗೆ ಬೇರೆ ಬೇರೆ ಪ್ರತ್ಯಯಗಳು ಬಂದು ತದ್ಧಿತಾಂತಗಳಾಗುತ್ತ ವೆಂದು ತಿಳಿಯಬೇಕು.

ಸ್ತ್ರೀಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು
(೯೧ಸ್ತ್ರೀಲಿಂಗದಲ್ಲಿ ಇತಿಇತ್ತಿಗಿತ್ತಿತಿಇತ್ಯಾದಿ ತದ್ಧಿತ ಪ್ರತ್ಯಯಗಳು ಬಂದುಸ್ತ್ರೀಲಿಂಗದ ತದ್ಧಿತಾಂತಗಳು ಸಿದ್ಧಿಸುವುವು.
ಉದಾಹರಣೆಗೆ:
ಇತಿ – ಬೀಗಿತಿ, ಬ್ರಾಹ್ಮಣಿತಿ
ಇತ್ತಿ - ಒಕ್ಕಲಗಿತ್ತಿ, ಹೂವಾಡಗಿತ್ತಿ
ಗಿತ್ತಿ – ನಾಯಿಂದಗಿತ್ತಿ, ಅಗಸಗಿತ್ತಿ
ತಿ – ಗೊಲ್ಲತಿ, ವಡ್ಡತಿ, ಮಾಲೆಗಾರ‍್ತಿ
 – ಅರಸಿ, ಅಣುಗಿ
 – ಕಳ್ಳೆ, ಜಾಣೆ, ಗುಣವಂತೆ,  ಇತ್ಯಾದಿ-

(ತದ್ಧಿತಾಂತ ಭಾವನಾಮಗಳು 
(ಅ) ಬಡತನ ಸಿರಿತನಗಳು ಸ್ಥಿರವಲ್ಲ.
(ಆ)  ಊರ ಗೌಡಿಕೆ ರಾಮಣ್ಣನದು.
(ಇ) ನಮಗೆ ಅದೊಂದು ಹಿರಿಮೆ
ಈ ಮೇಲಿನ ಮೂರು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಬಡತನಸಿರಿತನಗೌಡಿಕೆಹಿರಿಮೆ-ಈ ಶಬ್ದಗಳನ್ನು ಯೋಚಿಸಿ ನೋಡಿದರೆ-ಬಡವನ ಭಾವವೇ-ಬಡತನಸಿರಿವಂತನಭಾವವೇ-ಸಿರಿತನಗೌಡನ ಭಾವವೇ-ಗೌಡಿಕೆಹಿರಿಯದರ ಭಾವವೇ-‘ಹಿರಿತನ’ ಎಂದು ಅರ್ಥವಾಗುವುದು.  ಇಲ್ಲಿ ಬಂದಿರುವ ತನಇಕೆಮೆ-ಪ್ರತ್ಯಯಗಳು ಭಾವಾರ್ಥದಲ್ಲಿ ಬಡವನಸಿರಿವಂತನಗೌಡನಹಿರಿಯದರ – ಇತ್ಯಾದಿ ನಾಮಪದಗಳ ಮೇಲೆ ಬಂದಿವೆ ಎಂಬುದನ್ನು ಕೆಳಗೆ ಗಮನಿಸಿರಿ.
ಬಡವ-ಬಡತನ (ಬಡವನ ಭಾವ-ತನ)
ಸಿರಿ  – ಸಿರಿತನ (ಸಿರಿ ಉಳ್ಳವನ ಭಾವ-ತನ)
ಗೌಡ-ಗೌಡಿಕೆ (ಗೌಡನ ಭಾವ-ಇಕೆ)
ಹಿರಿದು-ಹಿರಿಮೆ (ಹಿರಿದರ ಭಾವ-ಮೆ)
ಸಾಮಾನ್ಯವಾಗಿ ಈ ಪ್ರತ್ಯಯಗಳೆಲ್ಲ ಷಷ್ಠೀವಿಭಕ್ತ್ಯಂತಗಳಾದ ನಾಮಪದಗಳ ಮೇಲೆ ಬಂದಿವೆಆದುದರಿಂದ ಈ ಬಗೆಗೆ ಸೂತ್ರವನ್ನು ಹೀಗೆ ಹೇಳಬಹುದು.

(೯೨ತದ್ಧಿತಾಂತಭಾವನಾಮಗಳು-ಸಾಮಾನ್ಯವಾಗಿ ಷಷ್ಠೀವಿಭಕ್ತ್ಯಾಂತಗಳಾದನಾಮಪದಗಳ ಮುಂದೆ ಭಾವಾರ್ಥದಲ್ಲಿ ತನಇಕೆಪುಮೆ ಇತ್ಯಾದಿ ತದ್ಧಿತಪ್ರತ್ಯಯಗಳುಸೇರಿ ತದ್ಧಿತಾಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಪ್ರತ್ಯಯ-ನಾಮಪದ-ಭಾವಾರ್ಥದಲ್ಲಿಪ್ರತ್ಯಯ-ತದ್ಧಿತಾಂತಭಾವನಾಮ
ತನ-ದೊಡ್ಡವನ (ಭಾವ)-ತನ-ದೊಡ್ಡತನ
ಜಾಣನ (ಭಾವ)-ತನ-ಜಾಣತನ; ಇದರಂತೆ ದಡ್ಡತನ, ಚಿಕ್ಕತನ, ಸಣ್ಣತನ, ಹುಡುಗತನ, ಕಿರಿತನ, ಕಳ್ಳತನ, ಕೆಟ್ಟತನ, ಸೋಮಾರಿತನ,  -ಇತ್ಯಾದಿ
ಇಕೆ-ಬ್ರಾಹ್ಮಣನ (ಭಾವ)-ಇಕೆ-ಬ್ರಾಹ್ಮಣಿಕೆ
ಚಲುವಿನ (ಭಾವ)-ಇಕೆ-ಚಲುವಿಕೆ; ಇದರಂತೆ  ಗೌಡಿಕೆ, ಉನ್ನತಿಕೆ, ತಳವಾರಿಕೆ, -ಇತ್ಯಾದಿ
-ಕಿವುಡನ (ಭಾವ)--ಕಿವುಡು
ಕುಳ್ಳನ (ಭಾವ)--ಕುಳ್ಳು; ಇದರಂತೆ ಕುರುಡು, ಕುಂಟು, ಮೂಕು, ತೊದಲು, -ಇತ್ಯಾದಿ.
ಪು-ಬಿಳಿದರ (ಭಾವ)-ಪು-ಬಿಳುಪು[2]
ಕರಿದರ (ಭಾವ)-ಪು-ಕಪ್ಪು[2]
ಇನಿದರ (ಭಾವ)-ಪು-ಇಂಪು
ತಣ್ಣನೆಯದರ (ಭಾವ)-ಪು-ತಂಪು[2]
ನುಣ್ಣನೆಯದರ (ಭಾವ)-ಪು-ನುಣುಪು[2]
ಮೆ-ಜಾಣನ (ಭಾವ)-ಮೆ-ಜಾಣ್ಮೆ
ಜಾಣೆಯ (ಭಾವ)-ಮೆ-ಜಾಣ್ಮೆ
ಕೂರಿತ್ತರ (ಭಾವ)-ಮೆ-ಕೂರ‍್ಮೆ
ಪಿರಿದರ (ಭಾವ)-ಮೆ-ಪೆರ‍್ಮೆ
ಹಿರಿದರ (ಭಾವ)-ಮೆ-ಹಿರಿಮೆ

(ತದ್ಧಿತಾಂತಾವ್ಯಯಗಳು
(ಅ) ಅವನು ರಾಮನಂತೆ ಕಾಣುವನು
(ಆ) ಊರವರೆಗೆ ನಡೆದನು
(ಇ) ಮನೆಯತನಕ ಕಳಿಸು
(ಉ) ಅವನಿಗೋಸುಗ ಬಂದೆನು
(ಊ) ಅವನಿಗಿಂತ ಚಿಕ್ಕವನು
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ರಾಮನಂತೆಊರವರೆಗೆಮನೆಯತನಕಅವನಿಗೋಸುಗಅವನಿಗಿಂತ – ಇತ್ಯಾದಿ ಪದಗಳನ್ನು ಬಿಡಿಸಿದರೆ ರಾಮನ+ಅಂತೆಊರ+ವರಗೆಮನೆಯ+ತನಕಅವನಿಗೆ+ಓಸುಗಅವನಿಗೆ+ಇಂತ-ಹೀಗಾಗುವುವು.  ಇಲ್ಲಿ ಬಂದಿರುವ ಅಂತೆವರೆಗೆತನಕಓಸುಗಇಂತ – ಇತ್ಯಾದಿ ಪ್ರತ್ಯಯಗಳು ನಾಮ ಪದಗಳ ಮುಂದೆ ಸೇರುವುವು.  ಆಗ ನಾಮಪದಗಳಲ್ಲಿರುವ ಗೆಗೆ – ಈ ನಾಮವಿಭಕ್ತಿಪ್ರತ್ಯಯಗಳು ಲೋಪವಾಗುವುದಿಲ್ಲ.  ಇಂಥ ಪದಗಳನ್ನು ತದ್ಧಿತಾಂತಾವ್ಯಯಗಳೆಂದು ಕರೆಯುವುದು ವಾಡಿಕೆ.

(೯೩ನಾಮಪದಗಳ ಮುಂದೆ ಅಂತೆವೊಲ್ವೊಲುವೋಲ್ವೋಲುತನಕವರೆಗೆಮಟ್ಟಿಗೆಓಸ್ಕರಇಂತಆಗಿಓಸುಗ-ಇತ್ಯಾದಿಪ್ರತ್ಯಯಗಳು ಸೇರಿತದ್ಧಿತಾಂತಾವ್ಯಯಗಳೆನಿಸುವುವು.
ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿಪ್ರತ್ಯಯವು ಲೋಪವಾಗುವುದಿಲ್ಲ.
ಉದಾಹರಣೆಗೆ:
ಅಂತೆ-ರಾಮನಂತೆ, ಚಂದ್ರನಂತೆ, ಭೀಮನಂತೆ, ಅವನಂತೆ
ವೊಲ್-ರಾಮನವೊಲ್, ಚಂದ್ರನವೊಲ್, ಭೀಮನವೊಲ್, ಅವನವೊಲ್
ವೊಲು-ರಾಮನವೊಲು, ಚಂದ್ರನವೊಲು, ಭೀಮನವೊಲು, ನಿನ್ನವೊಲು
ವೋಲು-ಮನೆಯವೋಲು, ಅವನವೋಲು, ಚಂದ್ರನವೋಲು
ವೋಲ್-ಮನೆಯವೋಲ್, ಅವನವೋಲ್, ಚಂದ್ರನವೋಲ್
ತನಕ-ಮನೆಯತನಕ, ಊರತನಕ, ಅಲ್ಲಿಯತನಕ
ವರೆಗೆ-ಊರವರೆಗೆ, ಚಂದ್ರನವರೆಗೆ
ಮಟ್ಟಿಗೆ-ಅವನಮಟ್ಟಿಗೆ, ನನ್ನಮಟ್ಟಿಗೆ, ನಿನ್ನಮಟ್ಟಿಗೆ
ಓಸ್ಕರ-ಅವನಿಗೋಸ್ಕರ, ರಾಮನಿಗೋಸ್ಕರ
ಸಲುವಾಗಿ-ನನ್ನ ಸಲುವಾಗಿ, ನಿನ್ನ ಸಲುವಾಗಿ
ಇಂತ-ಅವನಿಗಿಂತ, ಇವನಿಗಿಂತ
ಆಗಿ-ಅವನಿಗಾಗಿ, ನನಗಾಗಿ, ನಿನಗಾಗಿ
ಓಸುಗ-ರಾಮನಿಗೋಸುಗ, ಕಳ್ಳನಿಗೋಸುಗ

[1] ಕುಂಭಕಾರ, ಕರ್ಮಕಾರ-ಎಂಬ ಸಂಸ್ಕೃತ ಪದಗಳು ತದ್ಭವವಾಗಿ, ಕುಂಬಾರ, ಕಮ್ಮಾರ ಪದಗಳು ಸಿದ್ಧಿಸಿದೆ ಎಂಬುದು ಕೆಲವರ ಮತ.  ಆದರೆ ಹಳಗನ್ನಡದಲ್ಲಿ ಆರ ಪ್ರತ್ಯಯ ಬಂದು ಕುಂಬರ, ಕಮ್ಮರ ಎಂದಾದ ಈ ಶಬ್ದಗಳು ಹೊಸಗನ್ನಡದಲ್ಲಿ ಕುಂಬಾರ, ಕಮ್ಮಾರ-ಎಂದು ಆದುವೆಂದು ತಿಳಿಯುವುದು ಯುಕ್ತ.
[2] ಹಳಗನ್ನಡದಲ್ಲಿ ಇವುಗಳ ರೂಪಗಳು ಬೆಳ್ಪು, ಕರ್ಪು, ತುಣ್ಪು, ನುಣ್ಪು-ಇತ್ಯಾದಿಯಾಗಿ ಆಗುವುವು.

_________________________________________

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು