ವಚನ ಎಂದರೇನು? ವಿಧಗಳು ಯಾವುವು?
ವಚನಗಳು
ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಚನ ಎಂದರೆ ಸಂಖ್ಯೆ ಎಂದರ್ಥ..
ವಚನಗಳ ವಿಧಗಳು
ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು.ಅವುಗಳೆಂದರೆ :
ಏಕವಚನ.
ಬಹುವಚನ
ಏಕವಚನ
ಒಬ್ಬ ವ್ಯಕ್ತಿ , ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ. ಉದಾ ; ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ, ರಾಣಿ, ಊರು….. ಇತ್ಯಾದಿ
ಬಹುವಚನ
ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು..
ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ…
ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ
ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು
(ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.
ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ
(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ.
ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ
_________________________________________
ವಿಭಕ್ತಿ ಪ್ರತ್ಯಯ, ವಿಧಗಳು, ಹಳಗನ್ನಡ ಮತ್ತು ಹೊಸಗನ್ನಡದ ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯಗಳು
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.
ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು. ಅಥವಾ“ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”
ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ.ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ …
ವಿಭಕ್ತಿ ಪ್ರತ್ಯಯಗಳ ವಿಧಗಳು
ಕ್ರ ಸಂ ವಿಭಕ್ತಿಯ ಹೆಸರು ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ ಕಾರಕಗಳು
1 ಪ್ರಥಮ ವಿಭಕ್ತಿ ಉ ಮ್ ಕರ್ತೃ
2 ದ್ವಿತೀಯ ವಿಭಕ್ತಿ ಅನ್ನು ಅಮ್ ಕರ್ಮ
3 ತೃತೀಯಾ ವಿಭಕ್ತಿ ಇಂದ ಇಮ್ ಕರಣ
4 ಚತುರ್ಥಿ ವಿಭಕ್ತಿ ಗೆ ಕೆ ಸಂಪ್ರಧಾನ
5 ಪಂಚಮಿ ವಿಭಕ್ತಿ ದೆಸೆಯಿಂದ ಅತ್ತಣಿಂ ಅಪಧಾನ
6 ಷಷ್ಠಿ ವಿಭಕ್ತಿ ಆ ಆ ಸಂಬಂಧ
7 ಸಪ್ತಮಿ ವಿಭಕ್ತಿ ಅಲ್ಲಿ ಒಳ್ ಅಧಿಕರಣ
ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..
ಪ್ರಥಮ ವಿಭಕ್ತಿ ಉ
ದ್ವಿತೀಯ ವಿಭಕ್ತಿ ಅನ್ನು
ತೃತೀಯ ವಿಭಕ್ತಿ ಇಂದ
ಚತುರ್ಥಿ ವಿಭಕ್ತಿ ಗೆ, ಇಗೆ
ಪಂಚಮಿ ವಿಭಕ್ತಿ ದೆಸೆಯಿಂದ
ಷಷ್ಠಿ ವಿಭಕ್ತಿ ಅ
ಸಪ್ತಮಿ ವಿಭಕ್ತಿ ಅಲ್ಲಿ
ಸಂಭೋಧನ ವಿಭಕ್ತಿ ಮ ಏ
ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು
ಪ್ರಥಮ ಕತೃರ್ಥ ಉ
ದ್ವಿತೀಯ ಕರ್ಮಾರ್ಥ ಅನ್ನು
ತೃತೀಯ ಕರಣಾರ್ಥ ಇಂದ
ಚತುರ್ಥೀ ಸಂಪ್ರಧಾನ ಗೆ
ಪಂಚಮಿ ಅಪಧಾನ ದೆಸೆಯಿಂದ
ಷಷ್ಠಿ ಸಂಭಂಧ ಅ
ಅಪ್ತಮಿ ಅಧಿಕರಣ ಅಲ್ಲಿ
ಸಂಬೋಧನ ಅಭಿಮುಖೀ ಏ ಆಕರಣ ಹಳಗನ್ನಡ ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯ ರೂಪಗಳು
ಪ್ರಥಮಾ ಮ್ ಮ್ ರಾಮಂ
ದ್ವಿತೀಯಾ ಅಮ್ ರಾಮನಂ
ತೃತೀಯ ಇಮ್ ರಾಮನಿಂ
ಚತುರ್ಥೀ ಗೆ ರಾಮಂಗೆ
ಪಂಚಮಿ ಅತ್ತಣಿಂ ರಾಮನತ್ತಣಿಂ
ಷಷ್ಠಿ ಅ ರಾಮನ
ಸಪ್ತಮಿ ಒಳ್ ರಾಮನೊಳ್
_________________________________________
ಕ್ರಿಯಾ ಪದ, ಧಾತು, ಧಾತುಗಳ ವಿಧಗಳು
ಕ್ರಿಯಾ ಪದ ಪ್ರಕರಣ
ಕ್ರಿಯಾಪದ : ” ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ” ಅಥವಾ “ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.”
ಉದಾ ;
ದೀಪವು ಉರಿಯುತ್ತದೆ.
ಹಸುವು ಹಾಲನ್ನು ಕೊಡುತ್ತದೆ.
ತಾಯಿಯು ಅಡುಗೆಯನ್ನು ಮಾಡುತ್ತಾಳೆ.
ಅಣ್ಣ ಊಟವನ್ನು ಮಾಡುವ್ನು.
ದೇವರು ಒಳ್ಳೆದನ್ನು ಮಾಡಲಿ.
ಮೇಲಿನ ಉದಾ-ಗಳಲ್ಲಿ ಗೆರೆ ಎಳೆದಿರುವ ಪದಗಳೆಲ್ಲವೂ ಕ್ರಿಯೆಯ ಅರ್ಥವನ್ನು ಸೂಚಿಸುವ ಶಬ್ದಗಳಾಗಿರುವುದತಿಂದ ಕ್ತಿಯಾಪದಗಳು ಎನಿಸುತ್ತದೆ..
ಮೇಲಿನ ಶಬ್ದಗಳಲಿ “ಉರಿ ಕೊಡು ಮಾಡು ” ಎಂಬ ಶಬ್ಧ ಕ್ರಿಯೆಯ ಅರ್ಥಕೊಡುವ ಮೂಲ ರೂಪವಾಗಿದೆ..
ಧಾತು ಅಥವಾ ಕ್ರಿಯಾ ಪ್ರಕೃತಿ“
ಕ್ರಿಯಾ ಪದದ ಮೂಲ ರೂಪಕ್ಕೆ ಧಾತು / ಕ್ರಿಯಾಪ್ರಕೃತಿ ಎಂದು ಹೆಸರು ”ಅಥವಾ“ಕ್ರಿಯಾರ್ಥವನ್ನು ಕೂಡುವುದಾಗೆಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ / ಧಾತು ಎಂದು ಎಂದು ಹೆಸರು”ಧಾತುಗಳಿಗೆ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.
ಉದಾ : ಧಾತು + ಪ್ರತ್ಯಯ + ಕ್ರಿಯಾಪದ ಮಾಡು + ತ್ತಾನೆ + ಮಾಡುತ್ತಾನೆ ಯತ್ನ + ಇಸು + ಯತ್ನಿಸು ಕನ್ನಡ + ಇಸು + ಕನ್ನಡಿಸು ಭಾವ + ಇಸು + ಭಾವಿಸು ರಕ್ಷ + ಇಸು + ರಕ್ಷಿಸು ಓಡು +ತ್ತಾನೆ + ಓಡುತ್ತಾನೆ
ಧಾತುಗಳ ವಿಧಗಳು
ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
ಮೂಲಧಾತು (ಸಹಜ) ಗಳು
ಸಾಧಿತ ಧಾತುಗಳು
ಮೂಲ ಧಾತುಗಳು
“ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು”
ಉದಾ : ಮಾಡು, ಹೋಗು , ಬರು, ನಡೆ, ನೋಡು, ಓದು, ಹುಟ್ಟು, ಅಂಜು, ಸುತ್ತು, ಬಿತ್ತು , ಹೊಗಳು , ತೆಗಳು , ಎಳೆ , ಸೆಳೆ ತಿಳಿ , ಅರಿ , ಸುರಿ, ಅರಸು, ಸೆಳೆ, ಇತ್ಯಾದಿ
ಮೂಲಧಾತು + ಪ್ರತ್ಯಯ =ಕ್ರಿಯಾಪದ ಮಾಡು + ತ್ತಾನೆ =ಮಾಡುತ್ತಾನೆ ನೋಡು + ಇಸು =ನೋಡಿಸು ತಿನ್ನು +ತ್ತಾನೆ = ತಿನ್ನುತ್ತಾಳೆ
ಸಾಧಿತ ಧಾತುಗಳು
“ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.”ಇವಕ್ಕೆ ಪ್ರತ್ಯಯಾಂತ ಧಾತು ಎಂತಲೂ ಕರೆಯುತ್ತಾರೆ.
ಉದಾ : ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು ಅಬ್ಬರ + ಇಸು + ಅಬ್ಬರಿಸು ಕಳವಳ + ಇಸು + ಕಳವಳಿಸು ಕನ್ನಡ + ಇಸು + ಕನ್ನಡಿಸು ಚಿತ್ರ + ಇಸು + ಚಿತ್ರಿಸು ಸ್ತುತಿ + ಇಸು + ಸುತ್ತಿಸು ಸಿದ್ದಿ + ಇಸು + ಸಿದ್ದಿಸು ಓಲಗ + ಇಸು + ಓಲಗಿಸು ಮಲಗು + ಇಸು + ಮಲಗಿಸು ಪ್ರೀತಿ +ಇಸು + ಪ್ರೀತಿಸು ರಕ್ಷ + ಇಸು + ರಕ್ಷಿಸು ಧಗಧಗ + ಇಸು + ಧಗಧಗಿಸು ಥಳ ಥಳ + ಇಸು + ಥಳ ಥಳಿಸು
ಭಾವ ಸೂಚಕಗಳಾದ ಸಂಸ್ಕೃತ ಶಬ್ದಗಳು “ಇಸು” ಪ್ರತ್ತಯಯಗಳನ್ನು ಹೊಂದಿ ಸಾಧಿತ ಧಾತುಗಳಾಗುತ್ತವೆ.
ಉದಾ :ಯತ್ತಿಸಯ, ಸ್ತುತಿಸು , ಜಯಿಸು, ಲೇಪಿಸು, ಶೋಕಿಸು, ಭಾವಿಸು , ಇತ್ಯಾದಿ ಎಲ್ಲ ಧಾತುಗಳಿಗೂ ಪ್ರೇರಣಾರ್ಥಕದಲ್ಲಿ ‘ಇಸು’ ಪ್ರತ್ಯಯ ಸೇರುತ್ತದೆ. ಇವಕ್ಕೆ ಪ್ರೇರಣಾರ್ಥಕ ಧಾತುಗಳು ಎಂದು ಹೆಸರು.
ಪ್ರೇರಣೆ ಎಂದು ” ಇನೋಬ್ಬರಿಂದ ಕೆಲಸ ಮಾಡಿಸುವುದು” ಉದಾ :ಮೂಡಿಸು ಕಲಿಸು , ಬರೆಯಿಸು , ನುಡಿಸು ಹೇಳಿಸು…..ಇತ್ಯಾದಿ
ಸಾಧಿತ ಧಾತುಗಳ ವಿಧಗಳು
ಸಕರ್ಮಕ ಧಾತುಗಳು - ಅರ್ಥಪೂರ್ತಿಗಾಗಿ ಅರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತು ಎಂದು ಹೆಸರು .ಈ ಸಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದ ಏನನ್ನು ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೂಚಿಸಲು ವನ್ನು ಉಪಯೋಗಿಸಲಾಗುತ್ತದೆ.
ಉದಾ : ಕರ್ತೃಪದ ಪರ್ಮಪದ ಕ್ರಿಯಾಪದ ರಾಮನ್ನು ಮರವನ್ನು ಕಡಿಯುತ್ತಾನೆ ಭೀಮನ್ನು ಬಕಾಸುನನ್ನು ಕೊಂದನು ದೇವರು ಲೋಕವನ್ನು ರಕ್ಷಿಸುವನ್ನು ಶಿಲ್ಪಿಗಳು ಗುಡಿಯನ್ನು ಕಟ್ಟಿದರು ವಿದ್ಯಾರ್ಥಿಗಳು ಪಾಠವನ್ನು ಓದಿದರು ಹುಡುಗರು ಕೆಲಸವನ್ನು ಮಾಡುತ್ತಾರೆ ಅನೇಕರು ನದಿಯನ್ನು ದಾಟಿದರು ಸಾಧುಗಳು ದೇವರನ್ನು ನಂಬುತ್ತಾರೆ ಹುಡುಗಿ ಪಾತ್ರೆಯನ್ನು ತೋಳೆಯುತ್ತಾಳೆ
ಅಕರ್ಮಕ ಧಾತುಗಳು -ಕರ್ಮಪದದ ಅಪೇಕ್ಷೆಯಿಲ್ಲದೇ ಪೂಣಾರ್ಥವನ್ನು ಕೊಡಲು ಸಮ್ಥವಾದ ಧಾತುಗಳನ್ನು ಅಕರ್ಮಕ ಧಾತು ಎಂದುಕರೆಯುತ್ತೇವೆ. ಈ ಅಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದಕ್ಕೆ ಉದ್ಬವಿಸುವ ಪ್ರಶ್ನೆಗೆ ಉತ್ತರವನ್ನು ಸೂಚಿಸಲು ಕರ್ಮಪದವನ್ನು ಪ್ರಯೋಗ ಮಾಡಲಾಗುವುದಿಲ್ಲ.
ಉದಾ : ಕರ್ತೃಪದ ಕ್ರಿಯಾಪದ ಧಾತು ಮಗು ಹುಟ್ಟಿತು ಹುಟ್ಟು ರಾಮನು ಬಂದನು ಬಂದ ಮಳೆ ಬೀಳುತ್ತದೆ ಬೀಳು ಮಗುವು ಅಳುತ್ತಿದೆ ಅಳು ಕೂಸು ಮಲಗಿತು ಮೊಲಗು ರಾಮನು ಓಡಿದನ್ನು ಓಡು ಆಕಾಶ ಹೊಳೆಯುತ್ತಿದೆ ಹೊಳೆ ಅವನು ಬದುಕಿದನು ಬದುಕು ಕಳ್ಳರು ಹೆದರಿದರು ಹೆದರು ಅವರು ಸೇರಿದರು ಸೇರು ಇವಳು ನೆನೆದಳು ನೆನೆ ಹುಡುಗರು ಓದಿದರು ಓದು.
_________________________________________
ಕೃದಂತ-ತದ್ಧಿತಾಂತ
ಕೃದಂತ (ಕೃನ್ನಾಮ)
ಧಾತು | - | ಕ್ರಿಯಾಪದ | - | ಕೃದಂತನಾಮಪ್ರಕೃತಿ | - | ಕೃದಂತನಾಮಪದ | |
(೧) | ಮಾಡು | - | ಮಾಡಿದನು | - | ಮಾಡಿದ | - | ಮಾಡಿದವನು, ಮಾಡಿದವನನ್ನು, ಮಾಡಿದವನಿಂದ -ಇತ್ಯಾದಿ |
(೨) | ಹೋಗು | - | ಹೋಗುವನು | - | ಹೋಗುವ | - | ಹೋಗುವವನು, ಹೋಗುವವನನ್ನು, ಹೋಗುವವನಿಂದ -ಇತ್ಯಾದಿ |
(೩) | ತಿನ್ನು | - | ತಿನ್ನುತ್ತಾನೆ | - | ತಿನ್ನುವ | - | ತಿನ್ನುವವನು, ತಿನ್ನುವವನನ್ನು, ತಿನ್ನುವವನಿಗೆ, ತಿನ್ನುವವನಲ್ಲಿ -ಇತ್ಯಾದಿ |
(೪) | ಬರೆ | - | ಬರೆಯುವನು | - | ಬರೆಯುವ | - | ಬರೆಯುವವನು, ಬರೆಯುವವನನ್ನು -ಇತ್ಯಾದಿ |
ಕೃದಂತನಾಮ | ಕೃದಂತಭಾವನಾಮ | ಕೃದಂತಾವ್ಯಯ |
ಮಾಡಿದ | ಮಾಟ | ಮಾಡಿ |
ತಿನ್ನುವ | ತಿನ್ನುವಿಕೆ | ತಿಂದು |
ನಡೆಯುವ | ನಡೆತ | ನಡೆಯುತ್ತ |
ಹೋಗದ | ಹೋಗುವಿಕೆ | ಹೋಗಲು |
ಮಾಡು | + | ವ | + | ಅ | = | ಮಾಡುವ |
ತಿನ್ನು | + | ವ | + | ಅ | = | ತಿನ್ನುವ |
ಬರೆ | + | ಉವ | + | ಅ | = | ಬರೆಯುವ |
ಮಾಡು | + | ದ | + | ಅ | = | ಮಾಡಿದ |
ತಿನ್ನು | + | ದ | + | ಅ | = | ತಿಂದ |
ಹೋಗು | + | ದ | + | ಅ | = | ಹೋದ |
ಮಾಡು | + | ಅದ | + | ಅ | = | ಮಾಡದ |
ತಿನ್ನು | + | ಅದ | + | ಅ | = | ತಿನ್ನದ |
ಕೃದಂತ | ನಾಮಪದಗಳು | ||||||
ಮಾಡುವ | ಮಾಡುವ | + | ಅವನು | + | ಉ | = | ಮಾಡುವವನು |
ಮಾಡುವ | + | ಅವರು | + | ಉ | = | ಮಾಡುವವರು | |
ಮಾಡುವ | + | ಅವನು | + | ಅನ್ನು | = | ಮಾಡುವವನನ್ನು | |
ಮಾಡಿದ | + | ಅವನು | + | ಉ | = | ಮಾಡಿದವನು (ಏ.ವ.) | |
ಮಾಡಿದ | + | ಅವರು | + | ಉ | = | ಮಾಡಿದವರು (ಬ.ವ.) | |
ಮಾಡಿದ | + | ಅವರು | + | ಇಂದ | = | ಮಾಡಿದವರಿಂದ (ಬ.ವ.) | |
ಮಾಡದ | + | ಅವನು | + | ಉ | = | ಮಾಡದವನು (ಏ.ವ.) | |
ಮಾಡದ | + | ಅವನು | + | ಅಲ್ಲಿ | = | ಮಾಡದವನಲ್ಲಿ (ಏ.ವ.) | |
ಮಾಡದ | + | ಅವರು | + | ಅಲ್ಲಿ | = | ಮಾಡದವರಲ್ಲಿ (ಬ.ವ.) | |
ಕೃದಂತ | ನಾಮಪದಗಳು | ||||||
ಬರೆದ | ಬರೆದ | + | ಅವಳು | + | ಉ | = | ಬರೆದವಳು (ಏ.ವ.) |
ಬರೆದ | + | ಅವಳು | + | ಅನ್ನು | = | ಬರೆದವಳನ್ನು (ಏ.ವ.) | |
ಬರೆದ | + | ಅವರು | + | ಇಂದ | = | ಬರೆದವರಿಂದ (ಬ.ವ.) | |
ಬರೆದ | + | ಅವಳು | + | ಇಗೆ | = | ಬರೆದವಳಿಗೆ (ಏ.ವ.) | |
ಬರೆದ | + | ಅವರು | + | ಇಗೆ | = | ಬರೆದವರಿಗೆ (ಬ.ವ.) | |
ಬರೆದ | + | ಅವಳು | + | ಅಲ್ಲಿ | = | ಬರೆದವಳಲ್ಲಿ (ಏ.ವ.) | |
ಬರೆದ | + | ಅವಳು | + | ಏ | = | ಬರೆದವಳೇ (ಏ.ವ.) | |
ತಿನ್ನದ | + | ಅವಳು | + | ಉ | = | ತಿನ್ನದವಳು | |
ತಿನ್ನದ | + | ಅವರು | + | ಅನ್ನು | = | ತಿನ್ನದವರನ್ನು | |
ತಿನ್ನದ | + | ಅವಳು | + | ಇಂದ | = | ತಿನ್ನದವಳಿಂದ |
ಕೃದಂತ | ನಾಮಪದಗಳು | ||||||||
ಹೋಗುವ | ಹೋಗುವ | + | ಉದು | + | ಉ | = | ಹೋಗುವುದು | ||
ಹೋಗುವ | + | ಉದು | + | ಅನ್ನು | = | ಹೋಗುವುದನ್ನು | |||
ಹೋಗುವ | + | ಉವು | + | ಅನ್ನು | = | ಹೋಗುವುವನ್ನು | |||
ಹೋಗುವ | + | ಉದು | + | ಅರು | + | ಇಂದ | = | ಹೋಗುವುದರಿಂದ | |
ಹೋಗುವ | + | ಉದು | + | ಅಕ್ಕೆ | = | ಹೋಗುವುದಕ್ಕೆ | |||
ಹೋಗುವ | + | ಉದು | + | ಅರು | + | ಅಲ್ಲಿ | = | ಹೋಗುವುದರಲ್ಲಿ | |
ಹೋಗುವ | + | ಉವು | + | ಗಳು | + | ಅಲ್ಲಿ | = | ಹೋಗುವುವುಗಳಲ್ಲಿ | |
(ಅವು) | ಹೋಗುವವುಗಳಲ್ಲಿ | ||||||||
ಹೋದ | + | ಉದು | + | ಅನ್ನು | = | ಹೋದುದನ್ನು | |||
ಹೋದ | + | ಉವು | + | ಗಳು | + | ಇಂದ | = | ಹೋದುವುಗಳಿಂದ |
ಧಾತು | + | ಭಾವಾರ್ಥದಲ್ಲಿ ಕೃತ್ಪ್ರತ್ಯಯ | = | ಕೃದಂತ ಭಾವನಾಮ | - | ಇದರಂತೆ ಇರುವ ಇತರ ರೂಪಗಳು |
ಮಾಡು | + | ವುದು[3] | = | ಮಾಡುವುದು | - | ನೋಡುವುದು, ತಿನ್ನುವುದು |
ತಿನ್ನು | + | ಇಕೆ | = | ತಿನ್ನುವಿಕೆ | - | ನೋಡುವಿಕೆ, ಬರೆಯುವಿಕೆ, ಕೊರೆಯುವಿಕೆ |
ಅಂಜು | + | ಇಕೆ | = | ಅಂಜಿಕೆ | - | ನಂಬಿಕೆ, ಹೊಗಳಿಕೆ, ತೆಗಳಿಕೆ, ಆಳಿಕೆ, ನಾಚಿಕೆ, ಬಳಲಿಕೆ, ಕಲಿಕೆ |
ಉಡು | + | ಇಗೆ | = | ಉಡಿಗೆ | - | ತೊಡಿಗೆ, ಅಡಿಗೆ, ಮುತ್ತಿಗೆ, ಹಾಸಿಗೆ, ಏಳಿಗೆ |
ಉಡು | + | ಗೆ | = | ಉಡುಗೆ | - | ತೊಡುಗೆ, ನಂಬುಗೆ, ಹೊಲಿಗೆ, ಏಳ್ಗೆ |
ಬರು | + | ಅವು | = | ಬರವು | - | ಸೆಳವು, ಮರವು, ಒಲವು, ಕಳವು, ತೆರವು |
ಸಾ | + | ವು | = | ಸಾವು | - | ನೋವು, ಮೇವು, ದಣಿವು, ಅರಿವು |
ಕೊರೆ | + | ತ | = | ಕೊರೆತ | - | ಸೆಳೆತ, ಕಟೆತ, ಇರಿತ, ತಿವಿತ, ಕುಣಿತ, ಒಗೆತ |
ಓಡು | + | ಟ | = | ಓಟ | - | ಮಾಟ, ಕೂಟ, ನೋಟ, ಆಟ, ಕಾಟ |
ನಡೆ | + | ವಳಿ | = | ನಡೆವಳಿ | - | ನುಡಿವಳಿ, ಸಲುವಳಿ, ಹಿಡಿವಳಿ, ಕೂಡುವಳಿ, ಮುಗಿವಳಿ |
ಕಾ | + | ಪು | = | ಕಾಪು | - | ಮೇಪು, ತೀರ್ಪು, ತಿಳಿಪು, ಹೊಳೆಪು, ನೆನೆಪು, |
ಹೊಳೆ | + | ಅಪು | = | ಹೊಳಪು | - | ನೆನಪು |
ಮುಗ್ಗು | + | ಅಲು | = | ಮುಗ್ಗಲು | - | ಒಣಗಲು, ಜಾರಲು, |
ಬಿಕ್ಕಲು, ಒಕ್ಕಲು | ||||||
ನಗು | + | ಎ | = | ನಗೆ | - | ಹೊರೆ |
ಬೆರೆ | + | ಅಕೆ | = | ಬೆರಕೆ | - | ಮೊಳಕೆ |
ಬೆಳೆ | + | ವಳಿಕೆ | = | ಬೆಳೆವಳಿಕೆ | - | ತಿಳಿವಳಿಕೆ, ನಡೆವಳಿಕೆ |
ಮೆರೆ | + | ವಣಿಗೆ | = | ಮೆರೆವಣಿಗೆ | - | ಬೆಳವಣಿಗೆ, ಬರೆವಣಿಗೆ |
ಅಳೆ | + | ಅತೆ | = | ಅಳತೆ | - | ನಡತೆ |
ಮುಳಿ | + | ಸು | = | ಮುಳಿಸು | - | ತೊಳೆಸು, ಮುನಿಸು |
ಮುರಿ | + | ಅಕು | = | ಮುರಕು | - | ಹರಕು |
ನಡುಗು | + | ಉಕ | = | ನಡುಕ | - | ಮುರುಕ |
ಒಪ್ಪು | + | ಇತ | = | ಒಪ್ಪಿತ | - | ತಪ್ಪಿತ |
ಧಾತು | ಭಾವಕೃದಂತ | ನಾಮಪದ |
ಕಿಡು | ಕೇಡು | ಕೇಡನ್ನು, ಕೇಡಿನಿಂದ. |
ಬಿಡು | ಬೀಡು | ಬೀಡನ್ನು, ಬೀಡಿನಿಂದ, ಬೀಡಿಗೆ. |
ಪಡು | ಪಾಡು | ಪಾಡನ್ನು, ಪಾಡಿನಿಂದ, ಪಾಡಿಗೆ. |
ಧಾತು | ಭಾವಕೃದಂತ | ನಾಮಪದ |
ನಡೆ | ನಡೆ | ನಡೆಯನ್ನು, ನಡೆಯಿಂದ |
ನುಡಿ | ನುಡಿ | ನುಡಿಯು, ನುಡಿಯನ್ನು, ನುಡಿಯಿಂದ, ನುಡಿಗೆ-ಇತ್ಯಾದಿ |
ಓದು | ಓದು | ಓದು, ಓದನ್ನು, ಓದಿನಿಂದ, ಓದಿನಲ್ಲಿ-ಇತ್ಯಾದಿ |
ಕಟ್ಟು | ಕಟ್ಟು | ಕಟ್ಟು, ಕಟ್ಟನ್ನು, ಕಟ್ಟಿನಿಂದ, ಕಟ್ಟಿಗೆ, ಕಟ್ಟಿನಲ್ಲಿ |
ಅಂಟು | ಅಂಟು | ಅಂಟನ್ನು, ಅಂಟಿನ ದೆಸೆಯಿಂದ, ಅಂಟಿನಲ್ಲಿ |
ಹಿಡಿ | ಹಿಡಿ | ಹಿಡಿಯನ್ನು, ಹಿಡಿಯಿಂದ |
ಉರಿ | ಉರಿ | ಉರಿಯನ್ನು, ಉರಿಯಿಂದ |
ಹೇರು | ಹೇರು | ಹೇರನ್ನು, ಹೇರಿನಿಂದ, ಹೇರಿನಲ್ಲಿ |
ಉಗುಳು | ಉಗುಳು | ಉಗುಳನ್ನು, ಉಗುಳಿನ, ಉಗುಳಿನಲ್ಲಿ |
ಹುಟ್ಟು | ಹುಟ್ಟು | ಹುಟ್ಟನ್ನು, ಹುಟ್ಟಿನ, ಹುಟ್ಟಿನಲ್ಲಿ |
ಚಿಗುರು | ಚಿಗುರು | ಚಿಗುರನ್ನು, ಚಿಗುರಿನಲ್ಲಿ |
ಬೆಳೆ | ಬೆಳೆ | ಬೆಳೆಯನ್ನು, ಬೆಳೆಯಲ್ಲಿ |
ಸವಿ | ಸವಿ | ಸವಿಯನ್ನು, ಸವಿಯಲ್ಲಿ |
ಗುದ್ದು | ಗುದ್ದು | ಗುದ್ದನ್ನು, ಗುದ್ದಿನಲ್ಲಿ |
ಬದುಕು | ಬದುಕು | ಬದುಕನ್ನು, ಬದುಕಿನಲ್ಲಿ |
ಪ್ರತ್ಯಯಗಳು | - | ಧಾತು | + | ಪ್ರತ್ಯಯ | = | ಅವ್ಯಯಕೃದಂತ |
ಉತ | - | ಮಾಡು | + | ಉತ | = | ಮಾಡುತ, ಇದರಂತೆ ನೋಡುತ, ಮಾರುತ, ಬರುತ |
ಉತ್ತ[5] | - | ತಿನ್ನು | + | ಉತ್ತ | = | ತಿನ್ನುತ್ತ, ಇದರಂತೆ ನೋಡುತ್ತ, ನಡೆಯುತ್ತ, ಬರುತ್ತ |
ಅದೆ | - | ಮಾಡು | + | ಅದೆ | = | ಮಾಡದೆ, ಇದರಂತೆ ನೋಡದೆ, ತಿನ್ನದೆ, ಬರೆಯದೆ |
ಅಲು | - | ಬರು | + | ಅಲು | = | ಬರಲು, ಇದರಂತೆ ತಿನ್ನಲು, ಉಣ್ಣಲು, ನೋಡಲು, ನುಡಿಯಲು, ಬರೆಯಲು |
ಅಲಿಕ್ಕೆ | - | ತಿನ್ನು | + | ಅಲಿಕ್ಕೆ | = | ತಿನ್ನಲಿಕ್ಕೆ, ಇದರಂತೆ ಮಾಡಲಿಕ್ಕೆ, ತಿಳಿಯಲಿಕ್ಕೆ, ಬರಲಿಕ್ಕೆ, ನಡೆಯಲಿಕ್ಕೆ |
ಅ | - | ಹೇಳು | + | ಅ | = | ಹೇಳ[6], ಇದರಂತೆ ಮಾಡ, ನೋಡ, ನುಡಿಯ |
ಇ | - | ಮಾಡು | + | ಇ | = | ಮಾಡಿ, ಇದರಂತೆ ಹೇಳಿ, ಕೇಳಿ, ನೋಡಿ |
ದು | - | ತಿನ್ನು | + | ದು | = | ತಿಂದು, ಇದರಂತೆ ನುಡಿದು, ನಡೆದು, ಕರೆದು, ಬರೆದು |
(೧) ಮೋಸವನ್ನು ಮಾಡುವವನು ಇದ್ದಾನೆ.
(೨) ಅಲ್ಲಿ ಕನ್ನಡವನ್ನು ಬಲ್ಲವರು ಬಹಳ ಜನರಿದ್ದರು.
(೩) ಹಾವನ್ನು ಆಡಿಸುವವನು ಬಂದನು.
(೪) ಮಡಿಯನ್ನು ಮಾಡುವವನು ಇನ್ನೂ ಬಂದಿಲ್ಲ.
ಮೇಲಿನ ನಾಲ್ಕು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಎರಡೆರಡು ನಾಮಪದಗಳನ್ನು ಸೇರಿಸಿ ಅದೇ ಅರ್ಥಬರುವಂತೆ ಒಂದು ಪದವನ್ನಾಗಿ ಸಮಾಸದ ಹಾಗೆ ಮಾಡಬಹುದು. ಹೀಗೆ ನಾವು ಸಂಕ್ಷೇಪಗೊಳಿಸಿ ಹೇಳಿದಾಗ ಕಾಲ, ಶ್ರಮ, ಧ್ವನಿ ಮೊದಲಾದವುಗಳ ಉಳಿತಾಯವಾಗುವುದು. ಹಾಗಾದರೆ ಆ ಪದಗಳನ್ನು ಯಾವ ಕ್ರಮದಿಂದ ಕೂಡಿಸುತ್ತೇವೆ? ಇತ್ಯಾದಿಗಳ ಬಗೆಗೆ ಕೆಳಗೆ ನೋಡಿರಿ.
(೧) ಮೋಸವನ್ನು ಮಾಡುವವನು-ಎಂಬಲ್ಲಿ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬರ್ಥದಲ್ಲಿ ‘ಗಾರ’ ಪ್ರತ್ಯಯ ಸೇರಿಸಿ ಮೋಸವನ್ನು+ಗಾರ ಮಾಡುತ್ತೇವೆ. ಒಂದೇ ಪ್ರಕೃತಿಯ ಮೇಲೆ ಎರಡು ಪ್ರತ್ಯಯ ಸೇರುವುದಿಲ್ಲ. ಅನ್ನು ಎಂಬ ಪ್ರತ್ಯಯ ತೆಗೆದು-ಮೋಸ+ಗಾರ=ಮೋಸಗಾರ ಹೀಗೆ ಒಂದು ಹೊಸ ರೂಪ ಸಿದ್ಧವಾಯಿತು. ಇಲ್ಲಿ ‘ಗಾರ’ ಎಂಬುದೇ ತದ್ಧಿತಪ್ರತ್ಯಯ.
(೨) ಕನ್ನಡವನ್ನು ಬಲ್ಲವನು-ಎಂಬಲ್ಲಿ ಕನ್ನಡವನ್ನು ಎಂಬುದರ ಮೇಲೆ ಬಲ್ಲವನು ಎಂಬರ್ಥದಲ್ಲಿ ‘ಇಗ’ ಪ್ರತ್ಯಯ ಸೇರಿದಾಗ ಕನ್ನಡವನ್ನು+ಇಗ=ಕನ್ನಡ+ಇಗ=ಕನ್ನಡಿಗ ಎಂಬ ರೂಪ ಸಿದ್ಧವಾಯಿತು. ಇಲ್ಲಿ ‘ಇಗ’ ಎಂಬುದೇ ‘ತದ್ಧಿತ ಪ್ರತ್ಯಯ’.
(೩) ಹಾವನ್ನು ಆಡಿಸುವವನು-ಎಂಬಲ್ಲಿ ಹಾವನ್ನು ಎಂಬ ಪದದ ಮೇಲೆ ‘ಆಡಿಸುವವನು’ ಎಂಬರ್ಥದಲ್ಲಿ ‘ಆಡಿಗ’ ಎಂಬ ತದ್ಧಿತ ಪ್ರತ್ಯಯ ಬಂದು ಹಾವನ್ನು+ಆಡಿಗ=ಹಾವು+ಆಡಿಗ= ಹಾವಾಡಿಗ ಎಂಬ ರೂಪ ಸಿದ್ಧವಾಯಿತು.
(೪) ಮಡಿಯನ್ನು ಮಾಡುವವನು-ಎಂಬಲ್ಲಿ ‘ಮಾಡುವವನು’ ಎಂಬರ್ಥದಲ್ಲಿ ವಳ (ವಾಳ)ಎಂಬ ಪ್ರತ್ಯಯವು ಬಂದು ಮಡಿಯನ್ನು+ವಳ=ಮಡಿ+ವಳ=ಮಡಿವಳಎಂಬ ರೂಪವಾಯಿತು.
ಮೋಸವನ್ನು-ಮಾಡುವವನೆಂಬರ್ಥದಲ್ಲಿ-ಗಾರ.
ಕನ್ನಡವನ್ನು-ಬಲ್ಲವನು ಎಂಬರ್ಥದಲ್ಲಿ-ಇಗ.
ಹಾವನ್ನು-ಆಡಿಸುವವನು ಎಂಬರ್ಥದಲ್ಲಿ-ಆಡಿಗ.
ಮಡಿಯನ್ನು-ಮಾಡುವವನು ಎಂಬರ್ಥದಲ್ಲಿ-ವಳ.
ಹೀಗೆ ಹಲವಾರು ಅರ್ಥಗಳಲ್ಲಿ-ಗಾರ, ಇಗ, ಆಡಿಗ, ವಳ-ಎಂಬ ಪ್ರತ್ಯಯಗಳು ನಾಮಪದಗಳ ಮೇಲೆ ಬಂದು ಹೋಸ ಬಗೆಯ ಪ್ರಕೃತಿಗಳಾಗುವುವು. ಇಲ್ಲಿ ಬಂದಿರುವ ಇಂಥ ಪ್ರತ್ಯಯಗಳನ್ನು ತದ್ಧಿತ ಪ್ರತ್ಯಯಗಳೆನ್ನುವರು. ಇಂಥ ತದ್ಧಿತ ಪ್ರತ್ಯಯಗಳನ್ನು ಅಂತದಲ್ಲಿ ಉಳ್ಳ ಶಬ್ದರೂಪವೇ ‘ತದ್ಧಿತಾಂತ’ವೆನಿಸುವುದು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.
(೯೦) ತದ್ಧಿತಾಂತ-ನಾಮಪದಗಳ ಮೇಲೆಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ವಳ, ಇಕ, ಆಳಿ-ಇತ್ಯಾದಿ ತದ್ಧಿತಪ್ರತ್ಯಯಗಳು ಸೇರಿತದ್ಧಿತಾಂತಗಳೆನಿಸುವುವು.
ಈ ತದ್ಧಿತ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು. ಇವುಗಳಲ್ಲಿ – (೧) ತದ್ಧಿತಾಂತ ನಾಮ (೨) ತದ್ಧಿತಾಂತಭಾವನಾಮ (೩) ತದ್ಧಿತಾಂತಾವ್ಯಯಗಳೆಂದುಮೂರು ಬಗೆ.
(೧) ತದ್ಧಿತಾಂತ ನಾಮಗಳು
ನಾಮಪದಗಳ ಮೇಲೆ ಗಾರ, ಕಾರ, ಇಗ, ವಂತಇತ್ಯಾದಿ ಪ್ರತ್ಯಯಗಳು ಬಂದು ತದ್ಧಿತಾಂತ ನಾಮಗಳಾಗುವ ಬಗೆಯನ್ನು ಗಮನಿಸಿರಿ.
ಉದಾಹರಣೆಗೆ:
ತದ್ಧಿತಪ್ರತ್ಯಯ | - | ನಾಮಪದ | + | ಅರ್ಥ | = | ತದ್ಧಿತಪ್ರತ್ಯಯ | - | ತದ್ಧಿತಾಂತನಾಮ |
ಗಾರ | - | ಮಾಲೆಯನ್ನು | + | ಕಟ್ಟುವವನು | = | ಗಾರ | - | ಮಾಲೆಗಾರ |
ಬಳೆಯನ್ನು | + | ಮಾರುವವನು | = | ಗಾರ | - | ಬಳೆಗಾರ | ||
ಮೋಸವನ್ನು | + | ಮಾಡುವವನು | = | ಗಾರ | - | ಮೋಸಗಾರ | ||
ಪಾಲನ್ನು | + | ಹೊಂದುವವನು | = | ಗಾರ | - | ಪಾಲುಗಾರ | ||
ಛಲವನ್ನು | + | ಹೊಂದಿದವನು | = | ಗಾರ | - | ಛಲಗಾರ | ||
ಕಾರ | - | ಓಲೆಯನ್ನು | + | ತರುವವನು | = | ಕಾರ | - | ಓಲೆಕಾರ |
ಕೋಲನ್ನು | + | ಹಿಡಿಯುವವನು | = | ಕಾರ | - | ಕೋಲುಕಾರ | ||
ಕೈದನ್ನು | + | ಹಿಡಿದಿರುವವನು | = | ಕಾರ | - | ಕೈದುಕಾರ | ||
ಇಗ | - | ಕನ್ನಡವನ್ನು | + | ಬಲ್ಲವನು | = | ಇಗ | - | ಕನ್ನಡಿಗ |
ಲೆಕ್ಕವನ್ನು | + | ಬಲ್ಲವನು | = | ಇಗ | - | ಲೆಕ್ಕಿಗ | ||
ಚೆನ್ನನ್ನು | + | ಉಳ್ಳುವ | = | ಇಗ | - | ಚೆನ್ನಿಗ | ||
ಗಂದವನ್ನು | + | ಮಾರುವವನು | = | ಇಗ | - | ಗಂದಿಗ | ||
ಗಾಣವನ್ನು | + | ಆಡಿಸುವವನು | = | ಇಗ | - | ಗಾಣಿಗ | ||
ವಂತ | - | ಹಣವನ್ನು | + | ಉಳ್ಳವನು | = | ವಂತ | - | ಹಣವಂತ |
ಸಿರಿಯನ್ನು | + | ಉಳ್ಳವನು | = | ವಂತ | - | ಸಿರಿವಂತ | ||
ವಳ | - | ಮಡಿಯನ್ನು | + | ಮಾಡುವವನು | = | ವಳ | - | ಮಡಿವಳ |
= | (ವಾಳ) | - | ಮಡಿವಾಳ | |||||
ಹಡಪವನ್ನು | + | ಆಚರಿಸುವವನು | = | ವಳ | - | ಹಡಪವಳ | ||
ಆಡಿಗ | - | ಹಾವನ್ನು | + | ಆಡಿಸುವವನು | = | ಆಡಿಗ | - | ಹಾವಾಡಿಗ |
ಹೂವನ್ನು | + | ಕಟ್ಟುವವನು | = | ಆಡಿಗ | - | ಹೂವಾಡಿಗ | ||
ಇಕ | - | ಕರಿಯದನ್ನು (ಬಣ್ಣವನ್ನು) | + | ಉಳ್ಳವನು | = | ಇಕ | - | ಕರಿಕ |
ಬಿಳಿಯದನ್ನು(ಬಣ್ಣವನ್ನು) | + | ಉಳ್ಳವನು | = | ಇಕ | - | ಬಿಳಿಕ | ||
ಆಳಿ | - | ಮಾತನ್ನು | + | ಹೆಚ್ಚು ಆಡುವ ಸ್ವಭಾವವುಳ್ಳವನು | = | ಆಳಿ | - | ಮಾತಾಳಿ |
ಓದನ್ನು | + | ಹೆಚ್ಚು ಆಚರಿಸುವವನು | = | ಆಳಿ | - | ಓದಾಳಿ | ||
ಆಳಿ | - | ಜೂದನ್ನು | + | ಆಡುವವನು | = | ಆಳಿ | - | ಜೂದಾಳಿ |
ಗುಳಿ | - | ಲಂಚವನ್ನು | + | ತೆಗೆದುಕೊಳ್ಳುವವನು | = | ಗುಳಿ | - | ಲಂಚಗುಳಿ |
ಅನೆಯ | - | ಹತ್ತು | + | ಸಂಖ್ಯೆಯನ್ನುಳ್ಳುದು | = | ಅನೆಯ | - | ಹತ್ತನೆಯ |
ಒಂದು | + | ಸಂಖ್ಯೆಯನ್ನುಳ್ಳುದು | = | ಅನೆಯ | - | ಒಂದನೆಯ | ||
ಆರ | - | ಕುಂಬವನ್ನು | + | ಮಾಡುವವನು | = | ಆರ | - | ಕುಂಬಾರ[1] |
ಕಮ್ಮವನ್ನು | + | ಆಚರಿಸುವವನು | = | ಆರ | - | ಕಮ್ಮಾರ[1] |
ಸ್ತ್ರೀಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು
(೯೧) ಸ್ತ್ರೀಲಿಂಗದಲ್ಲಿ ಇತಿ, ಇತ್ತಿ, ಗಿತ್ತಿ, ತಿ, ಇ, ಎಇತ್ಯಾದಿ ತದ್ಧಿತ ಪ್ರತ್ಯಯಗಳು ಬಂದುಸ್ತ್ರೀಲಿಂಗದ ತದ್ಧಿತಾಂತಗಳು ಸಿದ್ಧಿಸುವುವು.
ಉದಾಹರಣೆಗೆ:
ಇತಿ – ಬೀಗಿತಿ, ಬ್ರಾಹ್ಮಣಿತಿ
ಇತ್ತಿ - ಒಕ್ಕಲಗಿತ್ತಿ, ಹೂವಾಡಗಿತ್ತಿ
ಗಿತ್ತಿ – ನಾಯಿಂದಗಿತ್ತಿ, ಅಗಸಗಿತ್ತಿ
ತಿ – ಗೊಲ್ಲತಿ, ವಡ್ಡತಿ, ಮಾಲೆಗಾರ‍್ತಿ
ಇ – ಅರಸಿ, ಅಣುಗಿ
ಎ – ಕಳ್ಳೆ, ಜಾಣೆ, ಗುಣವಂತೆ, ಇತ್ಯಾದಿ-
(೨) ತದ್ಧಿತಾಂತ ಭಾವನಾಮಗಳು
(ಅ) ಬಡತನ ಸಿರಿತನಗಳು ಸ್ಥಿರವಲ್ಲ.
(ಆ) ಈ ಊರ ಗೌಡಿಕೆ ರಾಮಣ್ಣನದು.
(ಇ) ನಮಗೆ ಅದೊಂದು ಹಿರಿಮೆ.
ಈ ಮೇಲಿನ ಮೂರು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಬಡತನ, ಸಿರಿತನ, ಗೌಡಿಕೆ, ಹಿರಿಮೆ-ಈ ಶಬ್ದಗಳನ್ನು ಯೋಚಿಸಿ ನೋಡಿದರೆ-ಬಡವನ ಭಾವವೇ-ಬಡತನ; ಸಿರಿವಂತನಭಾವವೇ-ಸಿರಿತನ; ಗೌಡನ ಭಾವವೇ-ಗೌಡಿಕೆ; ಹಿರಿಯದರ ಭಾವವೇ-‘ಹಿರಿತನ’ ಎಂದು ಅರ್ಥವಾಗುವುದು. ಇಲ್ಲಿ ಬಂದಿರುವ ತನ, ಇಕೆ, ಮೆ-ಪ್ರತ್ಯಯಗಳು ಭಾವಾರ್ಥದಲ್ಲಿ ಬಡವನ, ಸಿರಿವಂತನ, ಗೌಡನ, ಹಿರಿಯದರ – ಇತ್ಯಾದಿ ನಾಮಪದಗಳ ಮೇಲೆ ಬಂದಿವೆ ಎಂಬುದನ್ನು ಕೆಳಗೆ ಗಮನಿಸಿರಿ.
ಬಡವ-ಬಡತನ (ಬಡವನ ಭಾವ-ತನ)
ಸಿರಿ – ಸಿರಿತನ (ಸಿರಿ ಉಳ್ಳವನ ಭಾವ-ತನ)
ಗೌಡ-ಗೌಡಿಕೆ (ಗೌಡನ ಭಾವ-ಇಕೆ)
ಹಿರಿದು-ಹಿರಿಮೆ (ಹಿರಿದರ ಭಾವ-ಮೆ)
ಸಾಮಾನ್ಯವಾಗಿ ಈ ಪ್ರತ್ಯಯಗಳೆಲ್ಲ ಷಷ್ಠೀವಿಭಕ್ತ್ಯಂತಗಳಾದ ನಾಮಪದಗಳ ಮೇಲೆ ಬಂದಿವೆ. ಆದುದರಿಂದ ಈ ಬಗೆಗೆ ಸೂತ್ರವನ್ನು ಹೀಗೆ ಹೇಳಬಹುದು.
(೯೨) ತದ್ಧಿತಾಂತಭಾವನಾಮಗಳು-ಸಾಮಾನ್ಯವಾಗಿ ಷಷ್ಠೀವಿಭಕ್ತ್ಯಾಂತಗಳಾದನಾಮಪದಗಳ ಮುಂದೆ ಭಾವಾರ್ಥದಲ್ಲಿ ತನ, ಇಕೆ, ಪು, ಮೆ - ಇತ್ಯಾದಿ ತದ್ಧಿತಪ್ರತ್ಯಯಗಳುಸೇರಿ ತದ್ಧಿತಾಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಪ್ರತ್ಯಯ | - | ನಾಮಪದ | - | ಭಾವಾರ್ಥದಲ್ಲಿಪ್ರತ್ಯಯ | - | ತದ್ಧಿತಾಂತಭಾವನಾಮ |
ತನ | - | ದೊಡ್ಡವನ (ಭಾವ) | - | ತನ | - | ದೊಡ್ಡತನ |
ಜಾಣನ (ಭಾವ) | - | ತನ | - | ಜಾಣತನ; ಇದರಂತೆ ದಡ್ಡತನ, ಚಿಕ್ಕತನ, ಸಣ್ಣತನ, ಹುಡುಗತನ, ಕಿರಿತನ, ಕಳ್ಳತನ, ಕೆಟ್ಟತನ, ಸೋಮಾರಿತನ, -ಇತ್ಯಾದಿ | ||
ಇಕೆ | - | ಬ್ರಾಹ್ಮಣನ (ಭಾವ) | - | ಇಕೆ | - | ಬ್ರಾಹ್ಮಣಿಕೆ |
ಚಲುವಿನ (ಭಾವ) | - | ಇಕೆ | - | ಚಲುವಿಕೆ; ಇದರಂತೆ ಗೌಡಿಕೆ, ಉನ್ನತಿಕೆ, ತಳವಾರಿಕೆ, -ಇತ್ಯಾದಿ | ||
ಉ | - | ಕಿವುಡನ (ಭಾವ) | - | ಉ | - | ಕಿವುಡು |
ಕುಳ್ಳನ (ಭಾವ) | - | ಉ | - | ಕುಳ್ಳು; ಇದರಂತೆ ಕುರುಡು, ಕುಂಟು, ಮೂಕು, ತೊದಲು, -ಇತ್ಯಾದಿ. | ||
ಪು | - | ಬಿಳಿದರ (ಭಾವ) | - | ಪು | - | ಬಿಳುಪು[2] |
ಕರಿದರ (ಭಾವ) | - | ಪು | - | ಕಪ್ಪು[2] | ||
ಇನಿದರ (ಭಾವ) | - | ಪು | - | ಇಂಪು | ||
ತಣ್ಣನೆಯದರ (ಭಾವ) | - | ಪು | - | ತಂಪು[2] | ||
ನುಣ್ಣನೆಯದರ (ಭಾವ) | - | ಪು | - | ನುಣುಪು[2] | ||
ಮೆ | - | ಜಾಣನ (ಭಾವ) | - | ಮೆ | - | ಜಾಣ್ಮೆ |
ಜಾಣೆಯ (ಭಾವ) | - | ಮೆ | - | ಜಾಣ್ಮೆ | ||
ಕೂರಿತ್ತರ (ಭಾವ) | - | ಮೆ | - | ಕೂರ‍್ಮೆ | ||
ಪಿರಿದರ (ಭಾವ) | - | ಮೆ | - | ಪೆರ‍್ಮೆ | ||
ಹಿರಿದರ (ಭಾವ) | - | ಮೆ | - | ಹಿರಿಮೆ |
(೩) ತದ್ಧಿತಾಂತಾವ್ಯಯಗಳು
(ಅ) ಅವನು ರಾಮನಂತೆ ಕಾಣುವನು
(ಆ) ಊರವರೆಗೆ ನಡೆದನು
(ಇ) ಮನೆಯತನಕ ಕಳಿಸು
(ಉ) ಅವನಿಗೋಸುಗ ಬಂದೆನು
(ಊ) ಅವನಿಗಿಂತ ಚಿಕ್ಕವನು
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ರಾಮನಂತೆ, ಊರವರೆಗೆ, ಮನೆಯತನಕ, ಅವನಿಗೋಸುಗ, ಅವನಿಗಿಂತ – ಇತ್ಯಾದಿ ಪದಗಳನ್ನು ಬಿಡಿಸಿದರೆ ರಾಮನ+ಅಂತೆ, ಊರ+ವರಗೆ, ಮನೆಯ+ತನಕ, ಅವನಿಗೆ+ಓಸುಗ, ಅವನಿಗೆ+ಇಂತ-ಹೀಗಾಗುವುವು. ಇಲ್ಲಿ ಬಂದಿರುವ ಅಂತೆ, ವರೆಗೆ, ತನಕ, ಓಸುಗ, ಇಂತ – ಇತ್ಯಾದಿ ಪ್ರತ್ಯಯಗಳು ನಾಮ ಪದಗಳ ಮುಂದೆ ಸೇರುವುವು. ಆಗ ನಾಮಪದಗಳಲ್ಲಿರುವ ಅ, ಅ, ಅ, ಗೆ, ಗೆ – ಈ ನಾಮವಿಭಕ್ತಿಪ್ರತ್ಯಯಗಳು ಲೋಪವಾಗುವುದಿಲ್ಲ. ಇಂಥ ಪದಗಳನ್ನು ತದ್ಧಿತಾಂತಾವ್ಯಯಗಳೆಂದು ಕರೆಯುವುದು ವಾಡಿಕೆ.
(೯೩) ನಾಮಪದಗಳ ಮುಂದೆ ಅಂತೆ, ವೊಲ್, ವೊಲು, ವೋಲ್, ವೋಲು, ತನಕ, ವರೆಗೆ, ಮಟ್ಟಿಗೆ, ಓಸ್ಕರ, ಇಂತ, ಆಗಿ, ಓಸುಗ-ಇತ್ಯಾದಿಪ್ರತ್ಯಯಗಳು ಸೇರಿತದ್ಧಿತಾಂತಾವ್ಯಯಗಳೆನಿಸುವುವು.
ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿಪ್ರತ್ಯಯವು ಲೋಪವಾಗುವುದಿಲ್ಲ.
ಉದಾಹರಣೆಗೆ:
ಅಂತೆ | - | ರಾಮನಂತೆ, ಚಂದ್ರನಂತೆ, ಭೀಮನಂತೆ, ಅವನಂತೆ |
ವೊಲ್ | - | ರಾಮನವೊಲ್, ಚಂದ್ರನವೊಲ್, ಭೀಮನವೊಲ್, ಅವನವೊಲ್ |
ವೊಲು | - | ರಾಮನವೊಲು, ಚಂದ್ರನವೊಲು, ಭೀಮನವೊಲು, ನಿನ್ನವೊಲು |
ವೋಲು | - | ಮನೆಯವೋಲು, ಅವನವೋಲು, ಚಂದ್ರನವೋಲು |
ವೋಲ್ | - | ಮನೆಯವೋಲ್, ಅವನವೋಲ್, ಚಂದ್ರನವೋಲ್ |
ತನಕ | - | ಮನೆಯತನಕ, ಊರತನಕ, ಅಲ್ಲಿಯತನಕ |
ವರೆಗೆ | - | ಊರವರೆಗೆ, ಚಂದ್ರನವರೆಗೆ |
ಮಟ್ಟಿಗೆ | - | ಅವನಮಟ್ಟಿಗೆ, ನನ್ನಮಟ್ಟಿಗೆ, ನಿನ್ನಮಟ್ಟಿಗೆ |
ಓಸ್ಕರ | - | ಅವನಿಗೋಸ್ಕರ, ರಾಮನಿಗೋಸ್ಕರ |
ಸಲುವಾಗಿ | - | ನನ್ನ ಸಲುವಾಗಿ, ನಿನ್ನ ಸಲುವಾಗಿ |
ಇಂತ | - | ಅವನಿಗಿಂತ, ಇವನಿಗಿಂತ |
ಆಗಿ | - | ಅವನಿಗಾಗಿ, ನನಗಾಗಿ, ನಿನಗಾಗಿ |
ಓಸುಗ | - | ರಾಮನಿಗೋಸುಗ, ಕಳ್ಳನಿಗೋಸುಗ |
_________________________________________
No comments:
Post a Comment