ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೨೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
ಜ್ಞಾನಪೀಠ ಪ್ರಶಸ್ತಿ | ||
![]() | ||
ಪ್ರಶಸ್ತಿಯ ವಿವರ | ||
---|---|---|
ವರ್ಗ | ಸಾಹಿತ್ಯ (ವೈಯುಕ್ತಿಕ) | |
ಪ್ರಾರಂಭವಾದದ್ದು | ೧೯೬೧ | |
ಮೊದಲ ಪ್ರಶಸ್ತಿ | ೧೯೬೫ | |
ಕಡೆಯ ಪ್ರಶಸ್ತಿ | ೨೦೨೩ | |
ಒಟ್ಟು ಪ್ರಶಸ್ತಿಗಳು | ೬೩ | |
ಪ್ರಶಸ್ತಿ ನೀಡುವವರು | ಭಾರತೀಯ ಜ್ಞಾನಪೀಠ | |
ವಿವರ | ಭಾರತದ ಅತ್ಯುನ್ನತ ಸಾಹಿತ್ಯ ಪುರಸ್ಕಾರ | |
ಮೊದಲ ಪ್ರಶಸ್ತಿ ಪುರಸ್ಕೃತರು | ಜಿ. ಶಂಕರ ಕುರುಪ್ | |
ಕೊನೆಯ ಪ್ರಶಸ್ತಿ ಪುರಸ್ಕೃತರು | • ಗುಲ್ಜಾರ್ • ರಾಮಭದ್ರಾಚಾರ್ಯ |
ಜ್ಞಾನಪೀಠದ ಹಿನ್ನೆಲೆ ಮತ್ತು ವಿವರ
ಬದಲಾಯಿಸಿಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.
೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಬದಲಾಯಿಸಿಭಾರತ ರತ್ನ
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
ಭಾರತ ರತ್ನ | ||
![]() | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರೀಕ | |
ವರ್ಗ | ರಾಷ್ಟ್ರೀಯ | |
ಪ್ರಾರಂಭವಾದದ್ದು | ೧೯೫೪ | |
ಕಡೆಯ ಪ್ರಶಸ್ತಿ | ೨೦೧೯ | |
ಒಟ್ಟು ಪ್ರಶಸ್ತಿಗಳು | ೪೮ | |
ಪ್ರಶಸ್ತಿ ನೀಡುವವರು | ಭಾರತ ಸರ್ಕಾರ | |
ವಿವರ | ಸೂರ್ಯನ ಚಿತ್ರ ಮತ್ತು ಅರಳಿ ಎಲೆಯ ಚಿತ್ರದ ಮೇಲೆ ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ" | |
Ribbon | ![]() | |
ಮೊದಲ ಪ್ರಶಸ್ತಿ ಪುರಸ್ಕೃತರು | ೧೯೫೪ • ಸರ್ವೆಪಲ್ಲಿ ರಾಧಾಕೃಷ್ಣನ್ | |
ಕೊನೆಯ ಪ್ರಶಸ್ತಿ ಪುರಸ್ಕೃತರು | ೨೦೧೯ | |
ಪ್ರಶಸ್ತಿಯ ಶ್ರೇಣಿ | ||
ಯಾವುದೂ ಇಲ್ಲ ← ಭಾರತ ರತ್ನ → ಪದ್ಮ ವಿಭೂಷಣ |
ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ
+ ಭಾರತದ ಪೌರತ್ವ ಸ್ವೀಕೃತರು | • ವಿದೇಶಿಯರು | # ಮರಣೋತ್ತರ ಗೌರವ |
💫💫💫💫💫💫💫
ಪಂಪ ಪ್ರಶಸ್ತಿ |
ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.
ಪಂಪ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರೀಕ | |
ವರ್ಗ | ಸಾಹಿತ್ಯ | |
ಪ್ರಾರಂಭವಾದದ್ದು | ೧೯೮೭ | |
ಮೊದಲ ಪ್ರಶಸ್ತಿ | ೧೯೮೭ | |
ಕಡೆಯ ಪ್ರಶಸ್ತಿ | ೨೦೧೯ | |
ಒಟ್ಟು ಪ್ರಶಸ್ತಿಗಳು | ೩೩ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ರೂ. ಒಂದು ಲಕ್ಷ (೧೯೮೭ – ೨೦೦೭) ರೂ. ಮೂರು ಲಕ್ಷ (೨೦೦೮ – ) | |
ವಿವರ | ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಕರ್ನಾಟಕ | |
ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
ಕೊನೆಯ ಪ್ರಶಸ್ತಿ ಪುರಸ್ಕೃತರು | [ ಸಿದ್ಧಲಿಂಗಯ್ಯ |
ಪಂಪ ಪ್ರಶಸ್ತಿ ಪುರಸ್ಕೃತರು
ಬದಲಾಯಿಸಿ# | ಹೆಸರು | ವರ್ಷ | ಕೃತಿ |
---|---|---|---|
೧ | ಕುವೆಂಪು | ೧೯೮೭ | ಶ್ರೀ ರಾಮಾಯಣ ದರ್ಶನಂ |
೨ | ತೀ. ನಂ. ಶ್ರೀಕಂಠಯ್ಯ | ೧೯೮೮ | ಭಾರತೀಯ ಕಾವ್ಯ ಮೀಮಾಂಸೆ |
೩ | ಶಿವರಾಮ ಕಾರಂತ, | ೧೯೮೯ | ಮೈ ಮನಗಳ ಸುಳಿಯಲ್ಲಿ |
೪ | ಸಂ. ಶಿ. ಭೂಸನೂರ ಮಠ, | ೧೯೯೦ | ಶೂನ್ಯ ಸಂಪಾದನೆಯ ಪರಾಮರ್ಶೆ |
೫ | ಪು ತಿ ನರಸಿಂಹಾಚಾರ್ | ೧೯೯೧ | ಶ್ರೀ ಹರಿಚರಿತೆ |
೬ | ಎ.ಎನ್.ಮೂರ್ತಿರಾವ್ | ೧೯೯೨ | ದೇವರು |
೭ | ಗೋಪಾಲಕೃಷ್ಣ ಅಡಿಗ | ೧೯೯೩ | ಸುವರ್ಣ ಪುತ್ಥಳಿ |
೮ | ಸೇಡಿಯಾಪು ಕೃಷ್ಣಭಟ್ಟ | ೧೯೯೪ | ವಿಚಾರ ಪ್ರಪಂಚ |
೯ | ಕೆ.ಎಸ್. ನರಸಿಂಹಸ್ವಾಮಿ | ೧೯೯೫ | ದುಂಡು ಮಲ್ಲಿಗೆ |
೧೦ | ಎಂ.ಎಂ.ಕಲಬುರ್ಗಿ | ೧೯೯೬ | ಸಮಗ್ರ ಸಾಹಿತ್ಯ |
೧೧ | ಜಿ.ಎಸ್.ಶಿವರುದ್ರಪ್ಪ | ೧೯೯೭ | ಸಮಗ್ರ ಸಾಹಿತ್ಯ |
೧೨ | ದೇಜಗೌ | ೧೯೯೮ | ಸಮಗ್ರ ಸಾಹಿತ್ಯ |
೧೩ | ಚನ್ನವೀರ ಕಣವಿ | ೧೯೯೯ | ಸಮಗ್ರ ಸಾಹಿತ್ಯ |
೧೪ | ಎಲ್. ಬಸವರಾಜು | ೨೦೦೦ | ಸಮಗ್ರ ಸಾಹಿತ್ಯ |
೧೫ | ಪೂರ್ಣಚಂದ್ರ ತೇಜಸ್ವಿ | ೨೦೦೧ | ಸಮಗ್ರ ಸಾಹಿತ್ಯ |
೧೬ | ಚಿದಾನಂದ ಮೂರ್ತಿ | ೨೦೦೨ | ಸಮಗ್ರ ಸಾಹಿತ್ಯ |
೧೭ | ಚಂದ್ರಶೇಖರ ಕಂಬಾರ | ೨೦೦೩ | ಸಮಗ್ರ ಸಾಹಿತ್ಯ |
೧೮ | ಎಚ್ ಎಲ್ ನಾಗೇಗೌಡ | ೨೦೦೪ | ಸಮಗ್ರ |
೧೭ | ಚಂದ್ರಶೇಖರ ಕಂಬಾರ | ೨೦೦೩ | ಸಮಗ್ರ ಸಾಹಿತ್ಯ |
೧೮ | ಎಚ್ ಎಲ್ ನಾಗೇಗೌಡ | ೨೦೦೪ | ಸಮಗ್ರ ಸಾಹಿತ್ಯ |
೧೯ | ಎಸ್.ಎಲ್.ಭೈರಪ್ಪ | ೨೦೦೫ | ಸಮಗ್ರ ಸಾಹಿತ್ಯ |
೨೦ | ಜಿ.ಎಸ್.ಆಮೂರ [೧] | ೨೦೦೬ | ಸಮಗ್ರ ಸಾಹಿತ್ಯ |
೨೧ | ಯಶವಂತ ಚಿತ್ತಾಲ [೨] | ೨೦೦೭ | ಸಮಗ್ರ ಸಾಹಿತ್ಯ |
೨೨ | ಟಿ. ವಿ. ವೆಂಕಟಾಚಲ ಶಾಸ್ತ್ರಿ [೩] | ೨೦೦೮ | ಸಮಗ್ರ ಸಾಹಿತ್ಯ |
೨೩ | ಚಂಪಾ [೪] | ೨೦೦೯ | ಸಮಗ್ರ ಸಾಹಿತ್ಯ |
೨೪ | ಜಿ.ಎಚ್.ನಾಯಕ [೫] | ೨೦೧೦ | ಸಮಗ್ರ ಸಾಹಿತ್ಯ |
೨೫ | ಬರಗೂರು ರಾಮಚಂದ್ರಪ್ಪ | ೨೦೧೧ | ಸಮಗ್ರ ಸಾಹಿತ್ಯ |
೨೬ | ಡಾ.ಡಿ.ಎನ್.ಶಂಕರ ಭಟ್ಟ [೬] | ೨೦೧೨ | ಸಮಗ್ರ ಸಾಹಿತ್ಯ |
೨೭ | ಕಯ್ಯಾರ ಕಿಞ್ಞಣ್ಣ ರೈ [೭] | ೨೦೧೩ | ಸಮಗ್ರ ಸಾಹಿತ್ಯ |
೨೮ | ಪ್ರೊ. ಜಿ.ವೆಂಕಟಸುಬ್ಬಯ್ಯ | ೨೦೧೪ | ಕನ್ನಡ ನಿಘಂಟು [೮] |
೨೯ | ಬಿ.ಎ.ಸನದಿ | ೨೦೧೫ | ಸಮಗ್ರ ಸಾಹಿತ್ಯ |
೩೦ | ಹಂ. ಪ. ನಾಗರಾಜಯ್ಯ[೯] | ೨೦೧೬ | ಸಮಗ್ರ ಸಾಹಿತ್ಯ |
೩೧ | ಕೆ.ಎಸ್.ನಿಸಾರ್ ಅಹಮದ್[೧೦] | ೨೦೧೭ | ಸಮಗ್ರ ಸಾಹಿತ್ಯ |
೩೨ | ಷ.ಶೆಟ್ಟರ್[೧೧] | ೨೦೧೮ | ಸಂಶೋಧನೆ |
೩೩ | ಸಿದ್ದಲಿಂಗಯ್ಯ[೧೨] | ೨೦೧೯ | ಸಮಗ್ರ ಸಾಹಿತ್ಯ |
೩೪ | ಸಿ.ಪಿ ಕೃಷ್ಣಕುಮಾರ | ೨೦೨೦ | ಸಮಗ್ರ ಸಾಹಿತ್ಯ |
೩೫ | ಎಸ್.ಆರ್. ರಾಮಸ್ವಾಮಿ | ೨೦೨೧ | ಸಮಗ್ರ ಸಾಹಿತ್ಯ |
೩೬ | ಬಾಬು ಕೃಷ್ಣಮೂರ್ತಿ | ೨೦೨೨ | ಸಮಗ್ರ ಸಾಹಿತ್ಯ |
೩೭ | ನಾ.ಡಿಸೋಜ | ೨೦೨೩ | ಸಮಗ್ರ ಸಾಹಿತ್ಯ |
೩೮ | ಬಿ.ಎ.ವಿವೇಕ ರೈ[೧೩] | ೨೦೨೪ | ಸಮಗ್ರ ಸಾಹಿತ್ಯ |
ರಾಜ್ಯೋತ್ಸವ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೬೬ | |
ಮೊದಲ ಪ್ರಶಸ್ತಿ | ೧೯೬೬ | |
ಕಡೆಯ ಪ್ರಶಸ್ತಿ | ೨೦೨೦ | |
ಪ್ರಶಸ್ತಿ ನೀಡುವವರು | ![]() ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ₹ ೧,೦೦,೦೦೦ | |
ವಿವರ | ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ | |
ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಪ್ರಶಸ್ತಿ (೧೯೬೬–೧೯೭೨) | |
ಪ್ರಶಸ್ತಿಯ ಶ್ರೇಣಿ | ||
ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ → |
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
ಇತಿಹಾಸ
ಬದಲಾಯಿಸಿರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:
ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.
ಆದರೆ, ೨೦೦೭ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರದಾನ ಮಾಡಿದ್ದರು.
ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ[೨]. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.
202ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆನ್ ಲೈನ್ ಅಥವ ಆಫ್ ಲೈನ್ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಈ ಹಿಂದೆ ಹೊಸ ವ್ಯವಸ್ಥೆಯನ್ನು ತಂದು, ಮೆಚ್ಚುಗೆಯನ್ನು ಪಡೆದಿದ್ದರು. 2022ರಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸುವ , ಶಿಫಾರಸು ಮಾಡುವ ವ್ಯವ್ಸಥೆಸ್ಥಗಿತ ಮಾಡಲಾಯಿತು. ಮತ್ತೊಂದು ಹೊಸ ವಿಧಾನವನ್ನು ಜಾರಿಗೆ ತರಲಾಯಿತು. ಆ ಪ್ರಕಾರ ಹಲವು ಸಮಿತಿಗಳನ್ನು ನೇಮಿಸಿ ರಾಜ್ಯ ಪ್ರವಾಸ ನಡೆಸಿ ಸಮಿತಿಯೆ ಪ್ರಶಸ್ತಿಗೆ ಸೂಕ್ತ ಆದವರನ್ನು ಆಯ್ಕೆ ಮಾಡುವ ವಿಧಾನದ ಮೂಲ 2022ರ ರಾಜ್ಯೋತಸ್ವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ ಮಾಡಲಾಯಿತು.[೧]
ದಶಕವಾರು ಪ್ರಶಸ್ತಿಗಳ ಪಟ್ಟಿ
ಬದಲಾಯಿಸಿ🚀🚀🚀🚀🚀🚀🚀🚀🚀🚀
ಕರ್ನಾಟಕ ರತ್ನ
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.. ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ
ಕರ್ನಾಟಕ ರತ್ನ | ||
![]() | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರಿಕ | |
ವರ್ಗ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೯೧ | |
ಮೊದಲ ಪ್ರಶಸ್ತಿ | ೧೯೯೨ | |
ಕಡೆಯ ಪ್ರಶಸ್ತಿ | ೨೦೨೧ | |
ಒಟ್ಟು ಪ್ರಶಸ್ತಿಗಳು | ೧೦ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ![]() | |
ವಿವರ | ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ | |
ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
ಕೊನೆಯ ಪ್ರಶಸ್ತಿ ಪುರಸ್ಕೃತರು | ಪುನೀತ್ ರಾಜ್‌ಕುಮಾರ್ | |
ಪ್ರಶಸ್ತಿಯ ಶ್ರೇಣಿ | ||
← ಕರ್ನಾಟಕ ರತ್ನ → ರಾಜ್ಯೋತ್ಸವ ಪ್ರಶಸ್ತಿ |
ಪ್ರಶಸ್ತಿ ಪುರಸ್ಕೃತರು
ಕ್ರ.ಸಂ | ಹೆಸರು | ಭಾವಚಿತ್ರ | ಜನನ / ಮರಣ | ಗೌರವಿಸಿದ್ದು | ಕ್ಷೇತ್ರ | ಉಲ್ಲೇಖ |
---|---|---|---|---|---|---|
೧. | ಕುವೆಂಪು | ![]() | ೧೯೦೪–೧೯೯೪ | ೧೯೯೨ | ಸಾಹಿತ್ಯ | |
೨. | ರಾಜಕುಮಾರ್ | ![]() | ೧೯೨೯–೨೦೦೬ | ೧೯೯೨ | ಚಲನಚಿತ್ರ | |
೩. | ಎಸ್. ನಿಜಲಿಂಗಪ್ಪ | ![]() | ೧೯೦೨–೨೦೦೦ | ೧೯೯೯ | ರಾಜಕೀಯ | [೨] |
೪. | ಸಿ. ಎನ್. ಆರ್. ರಾವ್ | ![]() | ಜ.೧೯೩೪ | ೨೦೦೦ | ವಿಜ್ಞಾನ | [೩] |
೫. | ದೇವಿಪ್ರಸಾದ್ ಶೆಟ್ಟಿ | ![]() | ಜ.೧೯೫೩ | ೨೦೦೧ | ವೈದ್ಯಕೀಯ | [೪] |
೬. | ಭೀಮಸೇನ ಜೋಷಿ | ![]() | ೧೯೨೨–೨೦೧೧ | ೨೦೦೫ | ಸಂಗೀತ | [೪] |
೭. | ಶ್ರೀ ಶಿವಕುಮಾರ ಸ್ವಾಮಿಗಳು | ![]() | ೧೯೦೭–೨೦೧೯ | ೨೦೦೭ | ಸಾಮಾಜಿಕ ಸೇವೆ | [೫] |
೮. | ದೇ. ಜವರೇಗೌಡ | ![]() | ೧೯೧೮–೨೦೧೬ | ೨೦೦೮ | ಸಾಹಿತ್ಯ | [೧] |
೯. | ಡಿ. ವೀರೇಂದ್ರ ಹೆಗ್ಗಡೆ | ಜ.೧೯೪೮ | ೨೦೦೯ | ಸಾಮಾಜಿಕ ಸೇವೆ | [೧] | |
೧೦. | ಪುನೀತ್ ರಾಜಕುಮಾರ್ | ![]() | ೧೯೭೫–೨೦೨೧ | ೨೦೨೨ | ಸಿನಿಮಾ ಹಾಗೂ ಸಾಮಾಜಿಕ ಸೇವೆ | [೬] |