ಸೇವಾಲಾಲ್
🌸ಶ್ರೀ ಸೇವಾ ಲಾಲ್🌸
👉 ಸೇವಾಭಾಯ,ಸೇವಲಾಲ್ ಎಂಬ ನಾಮಾದೊಂದಿಗೆ ಬಡ ಬಂಜಾರರ ಅಜ್ಞಾನ ದೂರ ಮಾಡಲು ಫೆಬ್ರವರಿ 15 .1739 ರಲ್ಲಿ ಶ್ರೀ ಭೀಮ ನಾಯ್ಕ ಶ್ರೀಮತಿ ಧರ್ಮಿಣಿ ಮಾತೆ ಎಂಬ ದಂಪತಿಯ ಉದರದಲ್ಲಿ ಕರ್ನಾಟಕದ ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೋಪ್ಪ(ಭಾಯಗಡ್, ಸೂರ ಖಂಡ್) ಎಂಬಲ್ಲಿ ಈ ದೈವ ಪುರುಷನ ಜನನವಾಯಿತು.
👉 ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರರು.ಸಾವಿರಾರು ವರ್ಷಗಳಿಂದ ಗ್ರಾಮ,ನಗರ ಜೀವನಗಳಿಂದ ದೂರವಿದ್ದು,ಅಜ್ಞಾನ,ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಇವರಿಗೆ ಶ್ರೀ ಸೇವಾ ಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೇಟ್ಟಿಲಾಯಿತು.
👉 ಬಂಜಾರರು ಈ ದೈವ ಪುರುಷನನ್ನು "ಮೋತಿವಾಳೋ" "ಲಾಲ್ ಮೋತಿ" ಎಂದು ಕರೆಯುತ್ತರೆ.
👉 ಕಾರಣ ಮುಂಬಯಿಯ "ಸ್ಮಿತ್ ಭಾವುಚಾ" ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿ ಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದ ವೀರರಾಗಿದ್ದರು.ಅದರ ಪ್ರತಿಯಾಗಿ ಪೋರ್ಚುಗೀಸರು ಇವನಿಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು.ಅದಕ್ಕಾಗಿ ಇತನನ್ನು ಮೋತಿವಾಳೋ ಎಂದು ಕರೆಯುತ್ತರೆ.
👉 ಬುದ್ಧ,ಬಸವ,ಕಬೀರ,ಗುರು ನಾನಕ್ ,ಮುಂತಾದ ಧಾರ್ಮಿಕ ಮಾನವತವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತ ದನಗಾಹಿ ಗೋಪಾಲನಾಗಿದ್ದ ಸೇವಾಲಾಲ್ ತಮ್ಮ ಜೀವನನುಭವದ ಮೂಲಕ ಗೌರಯುತ ಮಾತುಗಳಲ್ಲಿ ಸತ್ಯ,ಅಹಿಂಸಾ ಮಾರ್ಗಗಳನ್ನು ಪ್ರಕಾಶಗೋಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು.ಒಂದು ಸಹೋದರತ್ವದ,ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು.
👉 ಇಂತ ಮಾನವತಾವಾದಿಯ ಜನನದ ಮತ್ತು ಜೀವನ ಮೌಲ್ಯಗಳು ಇಂದು ತಾಂಡಗಳಲ್ಲಿ ಜನ ಜನಿತವಾಗಿವೆ.
👉 ಹಲವಾರು ಅಜ್ಞಾನಗಳು,ಮೌಢ್ಯತೆಯ ಪರಾಕಾಷ್ಟೆ ತಲುಪಿ ಅಂಧಕಾರಲ್ಲಿ ಮುಳಗಿರುವ ಸಂದರ್ಭದಲ್ಲಿ ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಸೇವಾಲಾಲ್ ರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿವೆ.
🌺 ನುಡಿಗಳು,ತತ್ವಗಳು💐
* ಸೇನ ಸಾಯಿ ವೇಸ್
ಜೀವ ಜನಗಾನಿನ ಸಾಯಿವೇಸ್
ಖೂಂಟಾ ಮುಂಗ್ರಿನ್ ಸಾಯಿ ವೇಸ್
ಕೊರೆ - ಗೋರೂನ ಸಾಯಿವೇಸ್.
ಕೀಡಾ ಮಕೋಡಾನ ಸಾಯಿವೇಸ್.
ಅರ್ಥ : ಮನುಷ್ಯನಿಗೆ ಮಾತ್ರವಲ್ಲದೆ ಜೀವ
ಜಂತುಗಳಿಗೆ ಕ್ರೀಮಿ ಕೀಟಗಳಿಗೆ ಒಳ್ಳೆದಾಗಲಿ.ಎಂದು( ಇಲ್ಲಿ ತನ್ನ ಸ್ವರ್ಥಕ್ಕಿಂತ ಇಡಿ ಭೂಮಿಗೆ ಒಳ್ಳೆಯದನ್ನು ಬಯಸುತ್ತರೆ)
* "ಧನ್ ಧಾನೇತಿ ಧಪಾಡೇಸ್"
ಅರ್ಥ : ಧರ್ಮದ ವ್ಯಾಖ್ಯಾನು ಮಾಡುತ್ತ ಸತ್ಯ, ಅಹಿಂಸೆ,ದಯೆ,ಕರುಣೆ,ಪ್ರಜ್ಞೆಗಳನ್ನು ಪವಿತ್ರವೆಂದು ಒಪ್ಪಿಕೊಂಡು ಯಾರು ಕರ್ತವ್ಯವನ್ನು ಮಾಡುತ್ತಾರೋ ಅವರೇ ಧರ್ಮಿಗಳು,ಆದ್ದರಿಂದ ' ಪ್ರಕೃತಿಯೆ ಧರ್ಮ' ಎಂದು ಸಾರಿದರೂ.
* " ಬೋಲಜೋ ಮತ್ತ್ ಲುಚಿ(ಲಾಟಿ) ಲಬಾಡಿ"
ಅರ್ಥ : ಸುಳ್ಳನ್ನು ಯಾರು ನುಡಿಯ ಬಾರದು. ಎಂದು ಹೇಳಿದರು.ಸತ್ಯ ನುಡಿಯಿರಿ ಎಂದು ಜಗತ್ತಿಗೆ ಸಾರಿದರೂ.
* "ಮತ ಲೋ ಜೀವ
ಕಾಡೋ ಮತ್ ಕೋಯಿ ಲೋಯಿ"
ಅರ್ಥ : ಯಾವುದೇ ಜೀವಿಯನ್ನು ಕೋಲ್ಲಬೇಡ,ಅದರ ರಕ್ತವನ್ನು ತೆಗೆಯಬೇಡ. (ಅಹಿಂಸೆ ಯನ್ನು ಪ್ರತಿಪಾದಿಸಿದರೂ)
* ಚೋರಿ ಮತ್ತ್ ಕರೋ
ಕರಿಯೇ ಚೋರಿ ಖಾಂಯೆ ಕೋರಿ
ಹಾತೆ ಮಾಯಿ ಹತಕಡಿ,ಪಗಮಾಯಿ ಬೇಡಿ
ಡೋರಿ ಡೋರಿ ಹಿಂಡಿಯೇ.....,
ಅರ್ಥ : ಕಳ್ಳತನ ಮಾಡಬೇಡಿ,ಕಳ್ಳತನ ಮಾಡುವವರನ್ನು ಬೇಡಿ ಹಾಕಿ ಓಡಾಡಿಸುತ್ತರೆ.
* " ದಾರೂ,ಗಾಂಜಾ ಮತ್ ಪೀವೋ"
ಅರ್ಥ : ವ್ಯಸನ ಮುಕ್ತರಾಗಿ.
* "ಜೋರ್ ಜುಲೂಮ್
ಗೋರ್ ಗರೀಬ ದಾಂಡನ್ ಖಾಯೇ
ವೋರಿ ಸಾತ್ ಪೀಡೀ ಪರ ದಾಗ್ ಲಗ ಜಾಯೆ
ವಂಶ ಪರ ದೀವೋ ಕೋನಿ ರೀಯೇ.
ಅರ್ಥ : ಬಡವರಿಗೆ ಎಂದು ದಂಡ ಹಾಕಬೇಡಿ .
* ಕಾಮಾ ಕ್ರೋಧೇರಿ ಧೂಣಿ ಬಾಳೋ,ಸತ್ಯ ಧರ್ಮೆನ ಆಂಗ ಚಲಾಯೋ
ಭೂಕ ಜೇನ ಅನ್ನ ಖರಾಯೋ,ತರಸ ಜೇನ ಪಾಣಿ ಪರಾಯೋ.
ಅರ್ಥ : ತಮ್ಮ ಜೀವನದಲ್ಲಿ ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ.ಸತ್ಯ ಧರ್ಮವನ್ನು ಮುನ್ನೆಡೆಸಿ.
ಹಸಿದವರಿಗೆ ಅನ್ನ ನೀಡಿ.ಬಾಯಾರಿದವರಿಗೆ ಜಲ ಪ್ರಾಪ್ತಿಮಾಡಿ.
* ದಕ್ಯಾರೋ ದಕ್ ಕಾಡ್,ಪಾಪೀರ ಛಾತ್ತೀಪರ ಲಾತ್ ಮಾರ್.
ಸೂತೇರ ಸಪನೇಮ,ಬೇಟೇರ ಹರದೇಮ.
ಸೋನಾವಳಿ ಛಾಂಯ್ ರಕಾಡ್
ಅರಕತೇಮ ಬರಕತ್ ಕರ್.
ಅರ್ಥ : ದುಃಖದಲ್ಲಿರುವವರನ್ನು ಕಾಪಾಡು,ಪಾಪಿಗಳನ್ನು ನಾಶಪಡಿಸು .
ಈ ಮೇಲಿನ ತತ್ವಗಳನ್ನು ಲೋಕಕ್ಕೆ ಸಾರಿದ ಮಹಾರಾಜರ 279 ನೇ( ಜಯಂತಿ) ಆಚರಣೆಯನ್ನು ಇಂದು ರಾಜ್ಯದಾದ್ಯಂತ ಆಚರಿಸುತ್ತಿದ್ದೆವೆ. ಆದರೆ ಎಲ್ಲಿಯವರೆಗೂ ನಾವು ಇವರ ತತ್ವಗಳನ್ನು ನಮ್ಮ ತನು ಮನದಲ್ಲಿ ಆಳವಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗ ಇಂತಹ ದೈವಪುರುಷರ ಜಯಂತಿಗಳಿಗೆ ನಿಜವಾದ ಅರ್ಥ ಬರುವುದಿಲ್ಲ.
*ಜೈ ಸೇವಾಲಾಲ್*
No comments:
Post a Comment