ಶಿಕ್ಷಣವೇ ಶಕ್ತಿ

Wednesday, 13 January 2021

ಕರ್ನಾಟಕದ ಪ್ರಮುಖ ಉತ್ಸವಗಳು

==================
1. ಬೆಳಗಾವಿ - ಕಿತ್ತೂರು ಉತ್ಸವ

2. ಮುಧೋಳ - ರನ್ನ ಉತ್ಸವ
3. ಬಾದಾಮಿ - ಚಾಲುಕ್ಯ ಉತ್ಸವ
4. ಗದಗ - ಲಕ್ಕುಂಡಿ ಉತ್ಸವ
5. ವಿಜಯಪುರ - ನವರಸಪುರ ಉತ್ಸವ
6. ಧಾರವಾಡ - ಧಾರವಾಡ ಉತ್ಸವ
7. ಬನವಾಸಿ - ಕದಂಬೋತ್ಸವ
8. ಬಳ್ಳಾರಿ - ಹಂಪಿ ಉತ್ಸವ
9. ಮೈಸೂರು - ದಸರಾ ಉತ್ಸವ
10. ಬೆಂಗಳೂರು -  ಕರಗ ಉತ್ಸವ
11. ಶ್ರಾವಣ ಬೆಳಗೊಳ - ಮಹಾಮಸ್ತಾಭಿಷೇಕ
12. ಕರಾವಳಿ ಜಿಲ್ಲೆಗಳು - ಕಂಬಳ
13. ಬೀದರ್ - ಬೀದರ್ ಉತ್ಸವ, ಬಸ ವ ಉತ್ಸವ
14. ಮಂಡ್ಯ - ಗಗನಚುಕ್ಕಿ ಜಲಪಾತ ಉತ್ಸವ
15. ಚಾಮರಾಜನಗರ - ಭರಚುಕ್ಕಿ ಜಲಪಾತ ಉತ್ಸವ
______________________________________________________

ಸಂಗ್ರಹ ✍️T.A.ಚಂದ್ರಶೇಖರ

ಬುಧುವಾರ ಹೋಮ ವರ್ಕ್ 1st to 3rd class

ಬುಧುವಾರ ಹೋಮ ವರ್ಕ್ 1st to 3rd class

ಇಂದಿನ ಹೋಮ ವರ್ಕ್ ದಿನಾಂಕ 13 - 01 -2021
 *ವಾರ ಬುಧುವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 *1 ರಿಂದ 200 ವರೆಗೆ ಅಂಕಿಗಳನ್ನು ಬರೆ* 

*1 ರಿಂದ 30 ವರೆಗೆ ರೋಮನ್ ಸಂಖ್ಯೆ ಬರೆಯಿರಿ*

 *ಗುಣಾಕಾರ  ಬರೆಯಿರಿ* 

1. 9 × 1=_________

2. 9 × 2=_________

3. 9 × 3=_________

4. 9 × 4=_________

5. 9 × 5=_________

6. 9 × 6=_________

7. 9 × 7=_________

8. 9 × 8=_________

9. 9 × 9=_________

10. 9 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 ಕ ದಿಂದ  ಮ ವರೆಗೆ ಪ್ರತಿಯೊಂದು ಅಕ್ಷರಕ್ಕೆ  ಶಬ್ಧ ರಚಿಸಿ ಬರೆ.

ಶ ಶಾ  ....ಸ: ವರೆಗೆ ಕಾಗುಣಿತ ಬರೆಯಿರಿ

_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *Family members name* 
Father
Mother
Sister
Brother
Grandmother
Grandfather
Uncle
Aunty
Cousin sister
Cousin brother
Husband
Wife

ಈ ಮೇಲಿನ ಶಬ್ದಗಳು ನಕಲು ಮಾಡಿ ಬರೆಯಿರಿ.
 
 *A* to *Z* ವರೆಗೆ  ಶಬ್ಧಗಳನ್ನು ರಚಿಸಿ ಬರೆಯಿರಿ. 
Ex- A - Apple

 
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಈ ಕೆಳಗಿನ ಪ್ರಾಣಿ-ಪಕ್ಷಿಗಳ ಆಹಾರವನ್ನು ಬರೆಯಿರಿ.
1. ಎಮ್ಮೆ __________

2. ಹಸು ____________

3. ಪಾರಿವಾಳ_________

4. ಹಾವು ___________

5. ಮನುಷ್ಯ _________

6. ಕಪ್ಪೆ _____________


ಐದು ಹೂವುಗಳ ಹೆಸರನ್ನು ಬರೆಯಿರಿ.
1. _________
2. ________
3. ________
4. ________
5._________
👍👍👍👍👍👍👍👍👍👍👍👍👍👍👍👍👍👍👍👍
 *ಇಂದಿನ ಹೋಮ ವರ್ಕ್ ದಿನಾಂಕ 13-01-2021*
 *ವಾರ ಬುಧುವಾರ*
==========================

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್* 

ಪಾಠ 4

 *ವ್ಯವಕಲನ* 

ಅಭ್ಯಾಸ

ಮಾದರಿಯಂತೆ ಮೌಖಿಕವಾಗಿ ಸಂಕಲನ ಮಾಡು.

ಮಾದರಿಯಂತೆ ಮೌಖಿಕವಾಗಿ ವ್ಯವಕಲನ ಮಾಡಿ ಬರೆ.

ಮೌಖಿಕ ಲೆಕ್ಕಗಳು

ಪುಟ ಸಂಖ್ಯೆ 132 ಮತ್ತು 133

*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 14
 *ಕಡಲು* ಪದ್ಯ

 *ಅಭ್ಯಾಸ* 
1. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

2. ಖಾಲಿ ಬಿಟ್ಟ ಜಾಗದಲ್ಲಿ ಸರಿಯಾದ ಪದ ತುಂಬಿರಿ.

3. ಮಾದರಿಯಂತೆ ಪ್ರಾಸ ಪದಗಳನ್ನು ಬರೆಯಿರಿ.

ಪುಟ ಸಂಖ್ಯೆ 82 ಮತ್ತು 83

________________________________

*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*

 *Unit 6*
*Time* 

 *Find and circle the letters.* 

1. *i* : The prime minister is coming today.

2. *n* : Birds are singing and flying.

3. *k* : Monkey takes a cake packet.

4. *l* : Sheela is eating apple.


 *Copy to four line books* 👇👇

1. The sun rises in the East.

2. the sun is very hot and bright in the afternoon.

3. The sun sets in the evening.

_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ಯಾವ ಊರು ನಿನ್ನದು?

2. ನಿನ್ನ ತಾಲೂಕಿನ ಹೆಸರೇನು?

3. ನಿನ್ನ ಮನೆಯಲ್ಲಿ ಎಷ್ಟು ಜನ ಇದ್ದೀರಾ?

4. ನಿನ್ನ ಮನೆಯಲ್ಲಿ ಮಾತನಾಡುವ ಭಾಷೆ ಯಾವುದು?

5. ನಿನಗೆ ಅಚ್ಚುಮೆಚ್ಚಿನ ಆಟ ಯಾವುದು?

👍👍👍👍👍👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 13-01-2021*
 *ವಾರ ಬುಧುವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-3
*ಸಂಕಲನ*

ಅಭ್ಯಾಸ 3.2

1.  ಗೆರೆ ಎಳೆದು ಹೊಂದಿಸು

2. ಈ ಕೆಳಗೆ ಪ್ರತಿಯೊಂದು ಸಂಖ್ಯೆಗೂ ತಲಾ ಎರಡು ಸಮಸ್ಯೆಗಳನ್ನು ರಚಿಸಿ.

ಪುಟ ಸಂಖ್ಯೆ 90 ರಿಂದ 91
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 10
*ಮೃಗಾಲಯದಲ್ಲಿ ಒಂದು ದಿನ*

ಕೆಳಗಿನ ಪದಗಳನ್ನು ಬಳಸಿಕೊಂಡು ಸ್ವಂತ ವಾಕ್ಯ ರಚಿಸಿ.

1. ಫಲಕ _________________

2. ಗಮನ ________________

3. ಪರಿಮಳ _______________

ವಿರುದ್ಧಾರ್ಥಕ ಪದಗಳನ್ನು ಬರೆ.

ಚಿತ್ರಗಳನ್ನು ಗಮನಿಸಿ ಸೂಚನೆಗಳನ್ನು ಬರೆ.

ಭಿತ್ತಿಪತ್ರವನ್ನು ಓದಿಕೊಂಡು ಪ್ರಶ್ನೆಗಳಿಗೆ ಉತ್ತರಿಸಿ.

ಪುಟ ಸಂಖ್ಯೆ 72 ರಿಂದ 74

 *ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ* 
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

Unit 6
*Let's talk*

Answer the questions. Says 'Yes I do'. or 'No, I don't.

1. Do you watch television?_______

2. Do you listen to radio?________

3. Do you read newspaper?_______

4. Do you write letters?____

5. Do you use a cell phone?_______

6. Do you jump on the wall?

With the help of the clues given, rate a letter to your friend.

On page number 73

*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 15
*ಪತ್ರ ಸಂವಾದ*

1. ಪತ್ರಗಳನ್ನು ಏಕೆ ಬರೆಯುತ್ತಾರೆ?

2. ನೀನು ಯಾರಿಗಾದರೂ ಪತ್ರ ಬರೆದಿದ್ದಿಯಾ? ಹೌದಾದರೆ ಯಾರಿಗೆ, ಏಕೆ?

3. ನಿನ್ನ ಗೆಳೆಯರಿಗೆ ಒಂದು ಪತ್ರ ಬರೆ.
👍👍👍👍👍👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

ಬುಧುವಾರ ದ ಹೋಮ ವರ್ಕ್ 4th to 7th class

*ದಿನಾಂಕ 13-1-2021 ವಾರ . ಬುಧುವಾರ ಇಂದಿನ ಹೋಂವರ್ಕ್* 
****************************

 *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ -15 --  ಸಾರಿಗೆ ಮತ್ತು ಸಂಪರ್ಕ* 
°°°°°°°°°°°°°°°°°°°°°°°°°°°°°°°°°°

1. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಸಂಪರ್ಕ ಸಾಧನಗಳನ್ನು ಪಟ್ಟಿಮಾಡಿ  .

2. ಈಗಿನ ಕಾಲದಲ್ಲಿ ಬಳಸುತ್ತಿರುವ ಸಂಪರ್ಕಸಾಧನಗಳನ್ನು ಹೆಸರಿಸಿ  .


=======================

 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ 17 ಟ್ಯಾನ್ ಗ್ರಾಮ್ಸ್ ಮತ್ತು ವಿನ್ಯಾಸಗಳು* 
°°°°°°°°°°°°°°°°°°°°°°°°°°°°°°°°°°
ಅಭ್ಯಾಸ 17.1

1. ಸೂಚಿಸಿರುವ ತುಣುಕುಗಳನ್ನು ಬಳಸಿ ಚಿತ್ರದಲ್ಲಿರುವ ಆಕೃತಿಗಳನ್ನು ಮಾಡು .

2. ಪೂರ್ಣಗೊಳಿಸು ಅಭ್ಯಾಸ 17.2 .

3.  ಪೂರ್ಣಗೊಳಿಸು ಪುಟಸಂಖ್ಯೆ 120 ರಿಂದ 121 .

=======================

 *4 ನೇ ತರಗತಿಯ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪಾಠ -12 --ಪ್ರವಾಸ ಹೋಗೋಣ* 
°°°°°°°°°°°°°°°°°°°°°°°°°°°°°°°°°°°
1. ಪಾಠವನ್ನು ಗಟ್ಟಿಯಾಗಿ ಸ್ಪಷ್ಟವಾಗಿ ಓದಿರಿ .


ಭಾಷಾ ಚಟುವಟಿಕೆ

2. ನೀವು ಪ್ರವಾಸದಲ್ಲಿ ನೋಡಿದ ಸ್ಥಳಗಳ ಹೆಸರುಗಳನ್ನು ಪಟ್ಟಿಮಾಡಿ .

3. ಚಿತ್ರಗಳನ್ನು ಗಮನಿಸಿ ಇಬ್ಬರ ನಡುವೆ ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆಯಿರಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

=======================

 *4 ನೇ ತರಗತಿ ಮಕ್ಕಳಿಗೆ English homework*

 *Unit -9 --Adventure*
°°°°°°°°°°°°°°°°°°°°°°°°°°°°°°°°°°
1. Read the poem aloud.

2. Match the given rhyming words

Red , light , pair , hear , fare , near , night , bed 

 *Write one page of neat copy writing.*

=======================
👍👍👍👍👍👍👍👍👍👍👍👍👍👍👍👍👍👍👍👍

*ದಿನಾಂಕ 12-1-2021 ವಾರ . ಮಂಗಳವಾರ ಇಂದಿನ ಹೋಂವರ್ಕ್* 
****************************

 *5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ -11-- ವಸ್ತು ಸ್ವರೂಪ* 
°°°°°°°°°°°°°°°°°°°°°°°°°°°°°°°°°°

1. ಸಾಂದ್ರತೆ ಎಂದರೇನು ?

2. ಸಾಂದ್ರತೆಯ ಅಂತಾರಾಷ್ಟ್ರೀಯ ಮಾನ __________.

3. ಒತ್ತಡ ಎಂದರೇನು ?

4. ಪ್ಲವನತೆ ಎಂದರೇನು ?

=======================
 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

  
 *ಅಧ್ಯಾಯ-10 -ವಿನ್ಯಾಸಗಳು* 
°°°°°°°°°°°°°°°°°°°°°°°°°°°°°°°°°°°

1. ಬಿಟ್ಟಿರುವ ಬೆಸ ಸಂಖ್ಯೆಗಳನ್ನು ಭರ್ತಿ ಮಾಡಿರಿ ಮತ್ತು ವರ್ಗ ಸಂಖ್ಯೆಗಳನ್ನು ವೃತ್ತದಲ್ಲಿ ಬರೆಯಿರಿ .

2. ಪೂರ್ಣಗೊಳಿಸು ಪುಟ ಸಂಖ್ಯೆ 121 .

3. ಮಗ್ಗಿ ಗಳನ್ನು ಬರೆಯಿರಿ 3 ರ ,      5 ರ , 7 ರ , 9 ರ .

=======================
 *5 ನೇ ತರಗತಿಯ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪೂರಕ ಪಾಠ- 5-- ನನ್ನ ಕವಿತೆ* 
°°°°°°°°°°°°°°°°°°°°°°°°°°°°°°°°°°

1. ಪದ್ಯವನ್ನು ಸ್ಪಷ್ಟವಾಗಿ ರಾಗಬದ್ಧವಾಗಿ ಹಾಡುವುದನ್ನು ಕಲಿಯಿರಿ  .

2. ಹೊಸ ಪದಗಳಿಗೆ ಅರ್ಥಗಳನ್ನು ಬರೆಯಿರಿ .

3. ಕೃತಿಕಾರರ ಪರಿಚಯ ಸ್ಪಷ್ಟವಾಗಿ ಬರೆಯಿರಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

=======================

 *5 ನೇ ತರಗತಿಯ ಮಕ್ಕಳಿಗೆ English homework*

 Revision

   *Poetry- Results and Roses* 

°°°°°°°°°°°°°°°°°°°°°°°°°°°°°°°°°
1. Read the poem aloud.

2. Arrange the rhyming words

Fair    big  worth   seek
Earth.   there    week   dig     

 *Write one page of neat copy writing.*

=======================
👍👍👍👍👍👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 13-01-2021*
*ವಾರ ಬುಧುವಾರ*
 *=========================* 
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

  ಭಾಗ-1

ಅಧ್ಯಾಯ 1

 *ಸಂಖ್ಯೆಗಳನ್ನು ತಿಳಿಯುವುದು* 

ಅಭ್ಯಾಸ 1.1 ಮತ್ತು 1.2


ಪುಟ ಸಂಖ್ಯೆ  13 ಮತ್ತು 18 ರಿಂದ 19

*_______________________________* 
*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪದ್ಯಭಾಗ

ಪಾಠ 5
 *ಹೊಸಬಾಳು* 

ಕೃತಿಕಾರರ ಪರಿಚಯ

ಹೊಸ ಪದಗಳ ಅರ್ಥ

ಅಭ್ಯಾಸ

ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ


ಪುಟ ಸಂಖ್ಯೆ  91 ರಿಂದ 94

 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 
______________________________
*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

SUPPLEMENTARY READING

Lesson 2

*CHANNAPATNA TOYS*

*What are the full forms of the following abbreviations find out from a dictionary or from your friends*

*With the help of a dictionary write down some more short forms/abbreviations find and their expanasions*

On page number 158

*Daily one page neatly*
*_______________________*

*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವರ್ಕ*

ಭಾಗ-1

ಪಾಠ 3

*ಆರಂಭಿಕ ಸಮಾಜ*  

ಹೊಸ ಪದಗಳ ಪರಿಚಯ

ಅಭ್ಯಾಸ


ಪುಟ ಸಂಖ್ಯೆ  46 ರಿಂದ 53

*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಪಾಠ 2
 *ಆಹಾರದ ಘಟಕಗಳು*  

ಸಾರಾಂಶ

ಅಭ್ಯಾಸಗಳು

ಪುಟ ಸಂಖ್ಯೆ  24 ರಿಂದ 26

*__________________________*
*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 

 पाठ - 15
*ता, ते,ती,*

कविता का कंठस्ट  कीजिये

 शब्दार्थ

 अभ्यास

 
पेज नंबर 78

 👍👍👍👍👍👍👍👍👍👍👍👍👍👍👍👍👍👍👍👍

 *ಇಂದಿನ ಹೋಮ ವರ್ಕ್* 
 *ದಿನಾಂಕ  13-01-2021* 
 *ವಾರ ಬುಧುವಾರ* 
 *========================* 
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

 *ಭಾಗ-1* 
 ಅಧ್ಯಾಯ 3
 *ದತ್ತಾಂಶಗಳ ನಿರ್ವಹಣೆ* 

ಅಭ್ಯಾಸ 3.2

ಪುಟ ಸಂಖ್ಯೆ 83

___________________________________ 
*7 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ ವರ್ಕ್*  

ಪದ್ಯಭಾಗ

ಪಾಠ 6

*ಬಿಡುಗಡೆ ಹಾಡು*

ಕೃತಿಕಾರರ ಪರಿಚಯ

ಹೊಸ ಪದಗಳ ಅರ್ಥ

ಪುಟ ಸಂಖ್ಯೆ 116 ರಿಂದ 118

 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 

________________________________

*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*

 Supplementary reading

*Pandora's Box*

New words

*Answer the following questions*

Page number 146 to 148

*Daily one page lesson*
*_______________________*

*7 ನೆ ಯ ತರಗತಿ ಮಕ್ಕಳಿಗೆ  ಸಮಾಜ ವಿಜ್ಞಾನ ಹೋಮ  ವರ್ಕ್*

 *ಭಾಗ-1* 
 ಇತಿಹಾಸ

ಪಾಠ - 8

*ಮರಾಠರು*

ಅಭ್ಯಾಸಗಳು

ಪುಟ ಸಂಖ್ಯೆ  73 ರಿಂದ 75
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಅಧ್ಯಯ 1
*ಸಸ್ಯಗಳಲ್ಲಿ ಪೋಷಣೆ*

 ಅಭ್ಯಾಸಗಳು

ಪುಟ ಸಂಖ್ಯೆ 12 ರಿಂದ 15

*__________________________*
*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*

 *पाठ  12* 

*मित्र के नाम पत्र*

 शब्दार्थ 
*अभ्यास* 

 प्रश्नों के उत्तर लिखो

 दो-तीन वाक्य में उत्तर लिखो

 
 पेज नंबर  -  69 - 70
👍👍👍👍👍👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

✍️ ಶ್ರೀಮತಿ ವನಿತಾ ರಮೇಶ

ಭಾರತದ ಅರಣ್ಯಗಳು

ಭಾರತದಲ್ಲಿ ಅರಣ್ಯಾವೃತ ಪ್ರದೇಶ ಒಟ್ಟು ನೆಲದ 20.55% ಇದೆ. ಇದು ಪ್ರಪಂಚದ ಮಿತಿಗಿಂತ (33%) ಕಡಿಮೆ. ಈ ಪ್ರಮಾಣವನ್ನು 33.3%ಗೆ ಏರಿಸಬೇಕೆಂದು 1952 ರಲ್ಲಿ ರಾಷ್ಟ್ರೀಯ ಅರಣ್ಯಧೋರಣೆ ಠರಾವು ಸರ್ಕಾರಕ್ಕೆ ಸೂಚಿಸಿದೆ. ಭಾರತದ ಅರಣ್ಯಗಳನ್ನು ಐದು ಭಾಗಗಳಾಗಿ ವರ್ಗೀಕರಿಸಲಾಗಿದೆ-1 ನಿತ್ಯಹರಿದ್ವರ್ಣ: 2 ತೇವ ಪರ್ಣಪಾತಿ ಅಥವಾ ಕಾಲಕಾಲಕ್ಕೆ ಎಲೆ ಉದುರುವ ಅರಣ್ಯ: 3 ಶುಷ್ಕ ಪರ್ಣಪಾತಿ 4. ಬೆಟ್ಟ ಪ್ರದೇಶದ ಉಪುಷ್ಣವಲಯದ ಅರಣ್ಯ-ಮಾಂಟೇನ್ ಸಬ್ ಟ್ರಾಪಿಕಲ್ 5. ನದೀಮುಖದ ಅರಣ್ಯ.

ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ (69.0 ದ.ಲ.ಹೇ) ಅಂದರೇ ಭೌಗೋಳಿಕ ಕ್ಷೇತ್ರದ ಶೇ 21.02 ರಷ್ಟು ಭೂಭಾಗವು ಅರಣ್ಯಗಳಿಂದ ಕೂಡಿದೆ.

ಭಾರತದ ಅರಣ್ಯ ಪ್ರದೇಶವನ್ನು ಮುಖ್ಯವಾಗಿ ಆರು ಪ್ರಕಾರಗಳಾಗಿ ವಿಂಗಡಿಸಬಹುದಾಗಿದೆ. ಅವುಗಳೆಂದರೇ

 

1) ನಿತ್ಯಹರಿದ್ವರ್ಣದ ಅರಣ್ಯಗಳು:-

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು 250 ಸೆಂ.ಮೀ ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮೀ. ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣಬಹುದಾಗಿದೆ.

# ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡುಬರುತ್ತದೆ.

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು ಸುಮಾರು 2.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿವೆ. ಈ ಪ್ರದೇಶದಲ್ಲಿ ಸಸ್ಯವರ್ಗವು ವರ್ಷವೆಲ್ಲಾ ಹಸಿರಾಗಿರುವುದರಿಂದ ಇವುಗಳನ್ನು ನಿತ್ಯಹರಿದ್ವರ್ಣದ ಅಥವಾ ಸದಾ ಹಚ್ಚ ಹಸಿರಾಗಿರುವ ಅರಣ್ಯವೆಂದು ಕರೆಯುವರು.

 _________________________________________

2) ಎಲೆಯುದುರುವ ಮಾನ್ಸೂನ್ ಅರಣ್ಯಗಳು:-

# ಈ ಪ್ರಕಾರದ ಅರಣ್ಯಗಳು ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿವೆ. ಇವುಗಳು 75 ರಿಂದ 250 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ.

# ಇದು ಭಾರತದ ಶೇ. 65.5 ರಷ್ಟು ಒಟ್ಟು ಅರಣ್ಯದಲ್ಲಿ ಹರಡಿವೆ. ಇವುಗಳು ವರ್ಷದ ನಿರ್ದಿಷ್ಟ ಒಣ ಹವೆಯ ಋತುವಿನಲ್ಲಿ ಎಲೆಯನ್ನು ಉದುರಿಸುವುದನ್ನು ರೂಢಿಸಿಕೊಂಡಿರುವುದರಿಂದ ಇವುಗಳನ್ನು ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳೆಂದು ಕರೆಯುವರು.

 _________________________________________

3) ಉಷ್ಣವಲಯದ ಹುಲ್ಲುಗಾವಲು ಅರಣ್ಯ:-

# ಭಾರತದಲ್ಲಿ 60 ರಿಂದ 75 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ಹುಲ್ಲುಗಾವಲು ಸಸ್ಯವರ್ಗ ಪ್ರಧಾನವಾಗಿ ಕಂಡುಬರುವುದು.

# ಈ ವಲಯಗಳಲ್ಲಿ ಎತ್ತರವಾದ ಹುಲ್ಲು ಹಾಗೂ ವಿರಳವಾಗಿ ಅಲ್ಲಲ್ಲಿ ಕುರುಚಲ ಜಾತಿಯ ಸಸ್ಯವರ್ಗಗಳನ್ನು ಕಾಣಬಹುದು.

# ದಖನ್ ಪ್ರಸ್ಥಭೂಮಿಯ ಕೇಂದ್ರಭಾಗ, ಅರಾವಳಿ ಪರ್ವತಗಳ ಪಶ್ಚಿಮದಲ್ಲಿರುವ ಥಾರ್ ಮರುಭೂಮಿಯ ಅಂಚಿನ ವಲಯಗಳು ಈ ಬಗೆಯ ಸಸ್ಯವರ್ಗವನ್ನು ಹೊಂದಿವೆ. 

# ಬಬೂಲ್, ಶಿಷಮ್, ಸಭಾಯ್ ಹುಲ್ಲು ಇತ್ಯಾದಿ ಇಲ್ಲಿ ಬೆಳೆಯುತ್ತವೆ.

 _________________________________________

4) ಮ್ಯಾಂಗ್ರೋವ್ ಅರಣ್ಯಗಳು:-

# ಈ ಕಾಡುಗಳು ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತವೆ. 

# ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾನದಿ ಮುಖಜಭೂಮಿಯಲ್ಲಿ ಕಂಡುಬರುತ್ತವೆ. 

# ಗಂಗಾ ನದಿಯ ಮುಖಜ ಭೂಮಿಯಲ್ಲಿ ಸುಂದರಿ ಮರಗಳು ಹೇರಳವಾಗಿರುವುದರಿಂದ ಈ ಪ್ರದೇಶವನ್ನು ಸುಂದರಬನ್ ಎಂದು ಕರೆಯುತ್ತಾರೆ.

# ಈ ಅರಣ್ಯಗಳ ಕ್ಷೇತ್ರ ದೇಶದಲ್ಲಿ 4.4 ಸಾವಿರ ಚ.ಕಿ.ಮೀ ರಷ್ಟಿರುವುದು.

 _________________________________________

5) ಮರುಭೂಮಿ ಅರಣ್ಯಗಳು:-

# ಈ ಅರಣ್ಯಗಳು ಸಾಮಾನ್ಯವಾಗಿ ವಾರ್ಷಿಕ 50 ಸೆಂ.ಮೀ ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. 

# ರಾಜಸ್ಥಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಕೆಲವು ಭಾಗಗಳಲ್ಲಿ ಈ ಅರಣ್ಯಗಳಿವೆ.

# ಈ ಸಸ್ಯವರ್ಗಗಳು ಆಳವಾಗಿ ಬೇರುಗಳನ್ನು ಹೊಂದಿದ್ದು ಕುರುಚಲು ಜಾತಿಯ ಸಸ್ಯವರ್ಗಗಳು ಮುಳ್ಳು ಕಂಟಿಗಳಿಂದ ಕೂಡಿರುತ್ತವೆ.

 _________________________________________

6) ಹಿಮಾಲಯದ ಅಲ್ಪೈನ್ ಅರಣ್ಯಗಳು:-

# ಹಿಮಾಲಯ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡುಬರುತ್ತವೆ. ಏಕೆಂದರೆ ಎತ್ತರವು ಹೆಚ್ಚಿದಂತೆ ಉಷ್ಣವಲಯದಿಂದ ಧ್ರುವ ಪ್ರದೇಶದವರೆಗಿನ ವಾಯುಗುಣಗಳನ್ನು ಈ ಪರ್ವತಗಳಲ್ಲಿ ಕಾಣಬಹುದು.

# ವಾಯುಗುಣಕ್ಕೆ ಅನುಗುಣವಾಗಿ ವಿವಿಧ ಪ್ರಕಾರದ ಸಸ್ಯವರ್ಗಗಳು ಇಲ್ಲಿ ಕಂಡುಬರುವವು.

# ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೇ - ಸಾಲ್, ಬೈರಾ, ಟೂನ್, ಸಿಲ್ವರ್, ಸ್ಟ್ರೂಸ್, ಲಾರೆಲ್ ಮುಂತಾದ ಎಲೆ ಮೊನಚಾದ ಅರಣ್ಯಗಳು ಪ್ರಧಾನವಾಗಿ ಬೆಳೆದಿರುತ್ತವೆ.

ಮುಖ್ಯಾಂಶಗಳು:

• ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯ ಹರಿದ್ವರ್ಣ ಅರಣ್ಯ ಆಗಿದೆ.

• ಹಿಮಾಲಯದಲ್ಲಿ ಅಲ್ಫೈನ್ ಅರಣ್ಯಗಳು ಕಂಡುಬರುತ್ತವೆ.

• ಗಂಗಾನದಿ ಮುಖಜ ಭೂಮಿಯನ್ನು ಸುಂದರಬನ ಎಂದು ಕರೆಯುತ್ತಾರೆ.

• ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕರ್ನಾಟಕ ರಾಜ್ಯದಲ್ಲಿದೆ.

• ಸುಂದರಬನ್ ಎಂದು ಕರೆಯಲು ಸುಂದರಿ ಮರಗಳು ಬೆಳೆಯಲು ಕಾರಣವಾಗಿದೆ.

• ದೇಶದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯಲ್ಲಿ ಮಧ್ಯಪ್ರದೇಶ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ,

• ಹರಿಯಾಣ ರಾಜ್ಯವು ಕೊನೆ ಸ್ಥಾನದಲ್ಲಿದ್ದು, ಕರ್ನಾಟಕವು 13ನೇ ಸ್ಥಾನದಲ್ಲಿದೆ.

• ಭಾರತದಲ್ಲಿ ಇಂದು 523 ವನ್ಯಜೀವಿ ಧಾಮಗಳಿವೆ.

• ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್.

• ಜೀವವ್ಯವಸ್ಥೆಯನ್ನು ಕಾಪಾಡಲು ದೇಶದಲ್ಲಿ 18 ಜೈವಿಕ ವಲಯಗಳನ್ನು ಸಂರಕ್ಷಿಸಲಾಗಿದೆ.

• ದೇಶದಲ್ಲಿ ಪ್ರಥಮ ಜೈವಿಕ ಸಂರಕ್ಷಣಾ ವಲಯ ನೀಲಗಿರಿ ಸಂರಕ್ಷಣಾ ವಲಯ.

_________________________________________

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಭಾರತವು ಹೊಂದಿರುವ ಅರಣ್ಯ ಪ್ರದೇಶಗ¼ಇμಂಂಔ?

ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ.(69.0 ದ.ಲ.ಹೇ.) ಅಂದರೇ ಭೌಗೋಳಿಕ ಕ್ಷೇತ್ರದ ಶೇ. 21.02  ಭೂಭಾಗವು ಅರಣ್ಯಗಳಿಂದ ಕೂಡಿರುವುದಾಗಿದೆ.

_________________________________________

2. ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸಿ.

ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು : ಬಂಡಿಪುರ, ನಾಗರಹೊಳೆ, ಬನ್ನೇರುಘಟ್ಟ.

_________________________________________

3. ಸ್ವಾಭಾವಿಕ ಸಸ್ಯವರ್ಗ ಎಂದರೇನು?

ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.

_________________________________________

4. ಭಾರತದ ಸಸ್ಯವರ್ಗವನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?

• ಭಾರತದ ಸಸ್ಯವರ್ಗವನ್ನು ಆರು ವಿಧಗಳಾಗಿ ವಿಂಗಡಿಸಬಹುದು.

• 1. ಉಷ್ಟವಲಯದ ನಿತ್ಯ ಹರಿದ್ವರ್ಣ ಕಾಡುಗಳು

2. ಉಷ್ಟವಲಯದ ಎಲೆ ಉದುರುವಕಾಡುಗಳು

3. ಉಷ್ಟವಲಯದ ಮುಳ್ಳುಗಿಡಗಳು ಮತ್ತು ಪೊದೆಗಳು

4. ಮರುಭೂಮಿ ಸಸ್ಯವರ್ಗ

5. ಮ್ಯಾಂಗ್ರೋವ್ ಕಾಡುಗಳು

6. ಹಿಮಾಲಯ ಸಸ್ಯವರ್ಗ

_________________________________________

5. ಜೈವಿಕ ವೈವಿದ್ಯತೆ ಎಂದರೇನು?

ಭಾರತದಲ್ಲಿ ವೈವಿಧ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳೂ ವೈವಿಧ್ಯಮಯವಾಗಿವೆ. ಆದ್ದರಿಂದ ಇದನ್ನು ಜೈವಿಕ ವೈವಿದ್ಯತೆ ಎನ್ನುತ್ತಾರೆ.

_________________________________________

6. ದೇಶದಲ್ಲಿ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆಯೇನು? ಅಥವಾ ಅರಣ್ಯ ಸಂರಕ್ಷಣೆ ಎಂದರೇನು? ಸಂರಕ್ಷಣಾ ವಿಧಾನಗಳನ್ನು ತಿಳಿಸಿ.

ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.

ಅರಣ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು

• ಅರಣ್ಯದ ಮರಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸುವದು.

• ಸಸಿಗಳನ್ನು ನೆಡುವದು, ಬೀಜಗಳನ್ನು ಹರಡುವದು.

• ಕಾನೂನು ಬಾಹಿರವಾಗಿ ಮರ ಕಡಿಯುವದನ್ನು ನಿಯಂತ್ರಿಸುವದು.

• ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವದು.

• ಅರಣ್ಯಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸುವದನ್ನು ನಿಯಂತ್ರಿಸುವದು.

• ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವದು.

_________________________________________

7. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.

• ವಾರ್ಷಿಕ ಸರಾಸರಿ 75 ರಿಂದ 250 ಸೆಂ.ಮೀ. ಮಳೆ ಬೀಳುವ ಕಡೆಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ.

• ಈ ಕಾಡುಗಳಲ್ಲಿ ಮರಗಳು ವಿರಳವಾಗಿಯೂ, ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತವೆ.

• ಬೇಸಿಗೆಯ ಆರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ.

• ಬೆಲೆ ಬಾಳುವ ತೇಗ, ಸಾಲ, ಶ್ರೀಗಂಧ ಮರಗಳು ಹೆಚ್ಚಾಗಿ ಕಂಡುಬರುತ್ತವೆ.

• ಇವು ಪಶ್ಚಿಮ ಘಟ್ಟದ ಪೂರ್ವದ ಇಳಿಜಾರು, ಜಮ್ಮು & ಕಾಶ್ಮೀರ, ಬಂಗಾಳ, ಛತ್ತೀಸಘಡ್,

• ಒರಿಸ್ಸಾ, ಬಿಹಾರ & ಝಾರ್ಖಂಡ್ಗಳಲ್ಲಿ ಕಂಡುಬರುತ್ತವೆ.

_________________________________________

8. ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.

• ಈ ಸಸ್ಯವರ್ಗವು ವರ್ಷದಲ್ಲಿ 250 ಸೇಂ.ಮೀ.ಗಿಂತ ಹೆಚ್ಚು ಮಳೆ ಬೀಳುವ ಮತ್ತು 25’ರಿಂದ

• 27’ಸೆ. ಉಷ್ಣಾಂಶವಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.

• ಇಲ್ಲಿನ ಮರಗಳು 60 ಮೀಟರ ಎತ್ತರವಾಗಿ ಬೆಳೆದಿರುತ್ತವೆ.

• ಇಲ್ಲಿನ ಮುಖ್ಯ ಮರಗಳೆಂದರೆ ಎಬೋನಿ, ಮಹಾಗನಿ, ಕರಿಮರ, ಬಿದಿರು ಮತ್ತು ರಬ್ಬರ

• ಭಾರತದಲ್ಲಿ ಈ ಕಾಡುಗಳು ಪಶ್ಚಿಮ ಘಟ್ಟದ ಪಶ್ಚಿಮ ಭಾಗ, ಈಶಾನ್ಯ ಬೆಟ್ಟ ಗುಡ್ಡಗಳಪ್ರದೇಶ, ಅಂಡಮಾನ್ ಮತ್ತು ನಿಕೋಬಾರ ದ್ವೀಪಗಲ್ಲಿ ಕಂಡು ಬರುತ್ತವೆ.

_________________________________________

9. ಮಾನ್ಸೂನ್ ಕಾಡುಗಳು ಮತ್ತು ಮಾನ್ಗ್ರೋವ್ ಕಾಡುಗಳಲ್ಲಿ ಕಂಡುಬರುವ ವ್ಯತ್ಯಾಸಗಳೇನು?

ಮಾನ್ಸೂನ್ ಕಾಡುಗಳು 75 ರಿಂದ 250 ಸೆಂ.ಮೀ. ಮಳೆ 

ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಬೇಸಿಗೆ ಆರಂಭದಲ್ಲಿ

ಈ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ. ಆದರೆ 

ಮ್ಯಾನ್ಗ್ರೋವ್ ಅರಣ್ಯಗಳು ತೀರ ಪ್ರದೇಶಗಳ 

ತಗ್ಗುವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ

ಆವರಿಸಲ್ಪಡುತ್ತವೆ. ಈ ಕಾಡುಗಳು ನದಿಮುಖಜ ಮತ್ತು ನದಿ

ಅಳಿವೆಗಳ ತಗ್ಗು ಪ್ರದೇಶಗಳಲಿ ಕಂಡುಬರುತ್ತವೆ.

_________________________________________

10. ಸುಂದರಬನ್ಸ ಎಂದರೇನು?

ಗಂಗಾನದಿಯ ಮುಖಜಭೂಮಿಯಲ್ಲಿ ಸುಂದರಿ ಮರಗಳು ಅಧಿಕವಾಗಿರುವದರಿಂದ ಈ ಪ್ರದೇಶವನ್ನು ಸುಂದರಬನ್ಸ ಕಾಡುಗಳು ಎಂದು ಕರೆಯುತ್ತಾರೆ.

_________________________________________

11. ಅರಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ.

• ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಗಿಡಮೂಲಿಕೆಗಳು, ಪಶುಗಳಿಗೆ ಆಹಾರವನ್ನು ಒದಗಿಸುತ್ತವೆ.

• ಕಾಡುಗಳು ತೇವಾಂಶವನ್ನು ಪೂರೈಸಿ ಉμಂUಂ}Àವನ್ನು ಮಾರ್ಪಡಿಸುತ್ತವೆ.

• ತೇವಾಂಶವುಳ್ಳ ಮಾರುತಗಳನ್ನು ತಡೆದು ಮಳೆ ಬೀಳುವದಕ್ಕೆ ನೆರವಾಗುತ್ತವೆ.

• ಕಾಡುಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತವೆ.

• ಕಾಡುಗಳು ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿವೆ.

• ಕಾಡುಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತವೆ.

• ವನ್ಯಧಾಮಗಳನ್ನೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.

_________________________________________

ಸಂಗ್ರಹ ✍️ T.A.ಚಂದ್ರಶೇಖರ

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು