ಶಿಕ್ಷಣವೇ ಶಕ್ತಿ

Sunday, 31 January 2021

ಭಾರತದ ಪ್ರಮುಖ ನದಿಗಳು

ಉತ್ತರ ಹಾಗೂ ದಕ್ಷಿಣ ಭಾರತದ ಪ್ರಮುಖ ನದಿಗಳು

ಉತ್ತರ ಭಾರತದ ಪ್ರಮುಖ ನದಿಗಳು

ಸಿಂಧು
ಬ್ರಹ್ಮಪುತ್ರ
ಗಂಗಾ
ಯಮುನಾ

ಇದರಲ್ಲಿ ಸಿಂಧು ನದಿ ಪಶ್ಚಿಮಕ್ಕೆ ಹರೆಯುವುದು, ಉಳಿದವು ಪೂರ್ವಕ್ಕೆ ಹರೆಯುವ ನದಿಗಳಾಗಿವೆ

*ಸಿಂಧು ನದಿ ಕೈಲಾಸ ಪರ್ವತದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವುದು*
ಸಿಂಧು ನದಿಯನ್ನು ನದಿಗಳ ತಂದೆ ಎಂದು ಕರೆಯುತ್ತಾರೆ
ಸಿಂಧು ನದಿಯ ಉಪನದಿಗಳು
*ಜೀಲಂ*
*ಚೀನಾಬ್*
*ಸಟ್ಲೇಜ್*
*ರಾವಿ*
*ಬಿಯಾಸ್* :~ ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! *ಪಂಜಾಬ್ ನ್ನು ಪಂಚನದಿಗ ರಾಜ್ಯ!* ಎಂದು ಕರೆಯುತ್ತಾರೆ
(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)

ಭಾರತದ ರಾಷ್ಟ್ರೀಯ ನದಿ ಎಂದು ಗಂಗಾ ನದಿಯನ್ನು ಕರೆಯುತ್ತಾರೆ.
*ಗಂಗಾನದಿಯ ಡಾಲ್ಫನನ್ನು ರಾಷ್ಟ್ರೀಯ ಜಲಜರ ಪ್ರಾಣಿ ಎಂದು ಘೋಷಿಸಿದೆ*
ಗಂಗಾನದಿಯ ಉಗಮ ಸ್ಥಳ :~ *ಗಂಗೋತ್ರಿ*
ಗಂಗಾನದಿಯ ದಡದಲ್ಲಿ ಇರತ್ಕಂತ ಪ್ರಮುಖ ನಗರಗಳು :~
ವಾರಣಸಿ
ಗಾಜಿಪುರ
ಕನ್ಪುರ್
ಪಾಟ್ನಾ
ಹರಿದ್ವಾರ
ಋಷಿಕೇಶ ಇತ್ಯಾದಿ

*ಯಮುನಾ ನದಿಯ ಉಗಮ ಸ್ಥಳ*
ಯನನೋತ್ರಿ
ಯಮುನಾ ನದಿ ದಡದಲ್ಲಿ ಕಂಡು ಬರುವ ಪ್ರಮುಖ ನಗರಗಳು
ದೆಹಲಿ
ಆಗ್ರಾ
ಮಥುರಾ ಇತ್ಯಾದಿ

ಬ್ರಹ್ಮ ಪುತ್ರ ನದಿ
ಬ್ರಹ್ಮ ಪುತ್ರ ನದಿಯ ಉಗಮಸ್ಥಾನ:~ *ಚಿಮಯುಂಗಡಂಗ್*
ತಿಸ್ತಾ ನದಿ ಬ್ರಹ್ಮಪುತ್ರ ನದಿಯ ಉಪನದಿಯಾಗಿದ್ದು ಇದನ್ನು *ಸಿಕ್ಕಂನ ಜೀವನದಿ ಎನ್ನುವರು*

ದಕ್ಷಿಣ ಭಾರತದ ಪ್ರಮುಖ ನದಿಗಳು

ನರ್ಮದಾ
ತಪತಿ
ಸಾಬರಮತಿ
ಕಾಳಿ
ಮಹಾದಾಯಿ
ಲೂನಿ
ಶರಾವತಿ
ನೇತ್ರಾವತಿ
ವಿ.ಸೂಚನೆ:~*ಈ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*

ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ
*ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ*

ಲುನಿ ನದಿಯ ಉಗಮಸ್ಥಾನ ;~ *ಅನಾಸಾಗರ*

ನರ್ಮದಾ ನದಿಯ ಉಗಮಸ್ಥಾನ :~ *ಅಮರಕಂಟಕ*

ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. *ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ*

*ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ*,

ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು *ಅಂಬುತಿರ್ಥ*

* ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ*

*ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು*

ದಾಮೋದರ ನದಿಯನ್ನು *"ಪಶ್ಚಿಮ ಬಂಗಾಳದ"* ಕಣ್ಣೀರು ನದಿ ಎಂದು ಕರೆಯುತ್ತಾರೆ.

*ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ*
ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.

ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.*
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.

ಕೃಷ್ಣಾ ನದಿಯ ಉಗಮಸ್ಥಾನ :` *ಮಹಬಲೇಶ್ವರ*

ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು.

__________________________________________

ಸಂಗ್ರಹ ✍️T.A.ಚಂದ್ರಶೇಖರ

ವಾಯುಗೋಳ

ವಾಯುಗೋಳ

ADD ARTICLE DESCRIPTION


ಭೂಮಿಯ ಮೇಲಿನ ಎಲ್ಲಾ ಜೀವಿಗಳೂ ಬದುಕಲು ಗಾಳಿ ಬೇಕೆಂಬುದು ನಮಗೆ ತಿಳಿದಿದೆ. ನಮಗೆ ಗಾಳಿಯು ಎಲ್ಲಿಂದ ದೊರೆಯುತ್ತದೆ? ಇದು ಭೂಮಿಯ ವಾತಾವರಣದಿಂದ ದೊರೆಯುತ್ತದೆ. ಭೂಮಿಯನ್ನು ಆವರಿಸಿಕೊಂಡಿರುವ ವಾಯುವಿನ ಪದರಕ್ಕೆ ವಾಯುಗೋಳ ಎನ್ನುವರು. ವಾಯುಗೋಳವು ಹೇಗೆ ಉಂಟಾಯಿತೆಂದು ನಿಮಗೆ ಗೊತ್ತಿದೆಯೆ? ಮೊದಲು ಭೂಮಿಯು ರೂಪುಗೊಂಡಾಗ ವಾಯುಗೋಳವಿರಲಿಲ್ಲ. ಭೂಮಿಯ ಒಳಗೆ ಬಂಧಿತವಾಗಿದ್ದ ಅನಿಲಗಳನ್ನು ಮತ್ತು ಹಬೆಯನ್ನು ಜ್ವಾಲಾಮುಖಿಗಳು ಸ್ಪೂಟಗೊಂಡು ಹೊರಚಿಮ್ಮಿಸಿದವು.ಈ ಅನಿಲಗಳು ಭೂಮಿಯ ಸುತ್ತ ಲಕ್ಷಾಂತರ ವರುಷಗಳಿಂದ ಸಂಗ್ರಹಗೊಂಡು, ವಾಯುಗೋಳ ರೂಪುಗೊಂಡಿತು.

ವಾಯುಗೋಳದ ಪದರಗಳು:

೧.ಹವಾಗೋಳ: ಭೂಮಿಯ ವಾಯುಗೋಳದ ಅತ್ಯಂತ ಕೆಳಗಿನ ಪದರವನ್ನು ಹವಾಗೋಳ ಎನ್ನುವರು. ನೀರಾವಿ, ನೈಟ್ರೂಜನ್, ಅಕ್ಸಿಜನ್, ಈ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಹವಾಗೋಳದ ಮೇಲ್ಭಾಗದ ಗಡಿಗೆ ಹವಾಸೀಮೆ ಎನ್ನುವರು.

೨.ಸ್ತರಗೋಳ:ಹವಾಸೀಮೆಯ ಮೇಲ್ಭಾಗದ ಪದರವನ್ನು ಸ್ತರಗೋಳ ಎನ್ನುವರು. ಸ್ತರಗೋಳದ ಮೇಲ್ಬಾಗದಲ್ಲಿ ಅಪಾಯಕಾರಿ ನೇರಳಾತೀತ ವಿಕಿರಣಗಳ ವಿರುದ್ಧ ರಕ್ಷಾಕವಚದಂತೆ ವರ್ತಿಸುವ ಓಝೂನ್ ಪದರವಿದೆ.

೩.ಮಧ್ಯಗೋಳ: ಸ್ತರಗೋಳದಿಂದ ಸುಮಾರು ೩೦ಕಿ.ಮೀ. ಎತ್ತರದಲ್ಲಿರುವ ಪ್ರದೇಶವನ್ನು ಮಧ್ಯಗೋಳ ಎನ್ನುವರು. ಇದು ವಾಯುಮಂಡಲದ ಅತ್ಯಂತ ತಂಪು ಪ್ರದೇಶವಾಗಿದೆ. ಇಲ್ಲಿರುವ ಗಾಳಿಯ ಪ್ರಮಾಣ ತುಂಬಾ ಕಡಿಮೆಯಿರುತ್ತದೆ.

೪.ಅಯಾನುಗೋಳ: ಮಧ್ಯಗೋಳದ ನಂತರ ಇರುವ ಪದರವನ್ನು ಅಯಾನುಗೋಳ ಎನ್ನುವರು. ಇದು ಅಯಾನು ಅಥವಾ ಆವೇಶಭರಿತ ಕಣಗಳಿಂದ ಆಗಿದೆ. ಆದ್ದರಿಂದ ರೇಡಿಯೂ ಪ್ರಸರಣಕ್ಕೆ ಈ ವಲಯ ಸಹಕರಿಸುತ್ತದೆ.

೫.ಬಹಿಗೋ‍ಳ:ಭೂಮಿಯ ವಾಯುಮಂಡಲದ ಅತ್ಯಂತ ಹೊರ ಪದರವನ್ನು ಬಹುಗೋಳ ಎನ್ನುವರು. ಇದು ಹಗುರವಾದ ಅನಿಲಗಳಾದ ಹೈಡ್ರೂಜನ್ ಮತ್ತು ಹೀಲಿಯಮ್ ನಿಂದ ಕೂಡಿದೆ.ಈ ಪ್ರದೇಶದಲ್ಲಿ ಕೆಲವು ಕೃತಕ ಉಪಗ್ರಹಗಳೂ ಸುತ್ತುತ್ತಿವೆ.

__________________________________________

ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು

ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
(The five layers of Atmosphere and its main features)

ಪರಿಸರ ವ್ಯವಸ್ಥೆ,
(Ecology, Environmental Studies)

ಭೂಗೋಳಶಾಸ್ತ್ರ
(Geography)

• ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ.

• ವಾಯುಗೋಳದ ಮುಖ್ಯ ಅನಿಲಗಳೆಂದರೆ
- ಸಾರಜನಕ ಶೇ.78.08,
- ಆಮ್ಲಜನಕ ಶೇ.20.94,
- ಆರ್ಗಾನ್ ಶೇ.0.93,
- ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005.

• ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ.
ವಾಯುಗೋಳದಲ್ಲಿರುವ ನೀರಾವಿಯು ಮೋಡದ ನಿರ್ಮಾಣ ಹಾಗೂ ವೃಷ್ಟಿಗೆ ಕಾರಣವಾಗುವುದಲ್ಲದೆ, ವಾಯುಗೋಳದ ಶಾಖ ಮತ್ತು ಶಕ್ತಿಯನ್ನು ಹಿಡಿದಿರಿಸಿಕೊಂಡು ಅದು ಒಂದು ಸ್ಥಳದ ಹವಾಮಾನದ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುವುದು.

•► ವಾಯುಗೋಳದ ರಚನೆ :


ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ ;
- ಪರಿವರ್ತನಾಮಂಡಲ,
- ಸಮೋಷ್ಣಮಂಡಲ,
- ಮಧ್ಯಂತರಮಂಡಲ,
- ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.

► ಪರಿವರ್ತನಾಮಂಡಲ (Troposphere ) : 


- ಇದು ವಾಯುಗೋಳದ ಅತ್ಯಂತ ಕೆಳಪದರ.
- ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. ಎತ್ತರದ ವರೆಗೆ ಕಂಡುಬರುವುದು.
- ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ.
- ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ.
- ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.

•► ಸಮೋಷ್ಣಮಂಡಲ (Stratosphere) : 


- ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ.
- ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ.
- ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು.
- ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ.
- ಈ ಪದರವು ಮೋಡ ಹಾಗೂ ಇತರೆ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು.
- ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.

► ಮಧ್ಯಂತರ ಮಂಡಲ (Mesosphere ) : 


- ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ.
- ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು.
- ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.

► ಉಷ್ಣತಾಮಂಡಲ (Thermosphere) : 


- ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ.
- ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ.
- ಈ ಪದರದಲ್ಲಿನ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು.
- ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.

► ಬಾಹ್ಯಮಂಡಲ (Exosphere) : 


- ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ.
- ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.

__________________________________________

ಸಂಗ್ರಹ ✍️T.A. ಚಂದ್ರಶೇಖರ

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು