ದಕ್ಷಿಣ ಕನ್ನಡ
ಕರ್ನಾಟಕದ ಒಂದು ಜಿಲ್ಲೆ
ದಕ್ಷಿಣ ಕನ್ನಡ (ತುಳು: ದಕ್ಷಿಣ ಕನ್ನಡ) ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫ (೨೦೧೧ರ ಜನಗಣತಿಯಂತೆ) . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ: ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ, ಮೂಡಬಿದಿರೆ, ಕಡಬ.
{{#if:|
ದಕ್ಷಿಣ ಕನ್ನಡ Dakshina Kannada | |
— ಜಿಲ್ಲೆ — | |
Location in Karnataka, India | |
ರೇಖಾಂಶ: 12.87°N 74.88°E | |
ದೇಶ | ಭಾರತ |
---|---|
ರಾಜ್ಯ | ಕರ್ನಾಟಕ |
ಜಿಲ್ಲೆ | |
ಜಿಲ್ಲೆ ಕೇಂದ್ರ | ಮಂಗಳೂರು |
ಜನಸಂಖ್ಯೆ (2011) | |
- ಒಟ್ಟು | ೨೦,೮೩,೬೨೫ |
{{{language}}} | {{{ಭಾಷೆ}}} |
ಪಿನ್ ಕೋಡ್ | 5750xx(Mangalore), 574xxx |
ದೂರವಾಣಿ ಕೋಡ್ | + 91 (082xx) |
ಅಂತರ್ಜಾಲ ತಾಣ: www |
ಕೆಲವು ವರ್ಷಗಳ ಹಿಂದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: ಉಡುಪಿ, ಕುಂದಾಪುರ ಮತ್ತು ಕಾರ್ಕಳ. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಳುನಾಡು ಎಂದೂ ಕರೆಯಲಾಗುತ್ತದೆ. ತುಳು ಭಾಷೆ ಇಲ್ಲಿನ ಪ್ರಮುಖ ಭಾಷೆಯಾದ್ದರಿಂದ ಈ ಹೆಸರು ಬಂದಿದೆ.
ಹಿಂದೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಟ್ಟಾಗಿ ಕೆನರಾ (ಕನ್ನಡ ಶಬ್ದದ ಆಂಗ್ಲೀಕೃತ ರೂಪ) ಎಂದು ಕರೆಯಲಾಗುತ್ತಿತ್ತು. ೧೮೬೦ ರಲ್ಲಿ ಬ್ರಿಟಿಷರು ಈ ಭಾಗವನ್ನು ಉತ್ತರ ಕೆನರ ಮತ್ತು ದಕ್ಷಿಣ ಕೆನರ ಎಂದು ವಿಂಗಡಿಸಿದರು. ೧೮೬೨ ರಲ್ಲಿ ಉತ್ತರ ಕೆನರವನ್ನು ಬೋಂಬೆ ಪ್ರೆಸಿಡೆನ್ಸಿ ಹಾಗೂ ದಕ್ಷಿಣ ಕೆನರವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಲಾಯಿತು. ಕುಂದಾಪುರ ತಾಲೂಕು ಮೊದಲು ಉತ್ತರ ಕೆನರದಲ್ಲಿದ್ದರೂ ನಂತರ ದಕ್ಷಿಣ ಕೆನರಕ್ಕೆ ಸೇರಿಸಲಾಯಿತು.
ಸ್ವಾತಂತ್ರ್ಯದ ನಂತರ ಈ ಜಿಲ್ಲೆ ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿತ್ತು. ೧೯೫೬ರ ಪುನರ್ ವಿಂಗಡನೆ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ ಹಾಗೂ ಕಾಸರಗೋಡು ಜಿಲ್ಲೆಯನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು.
ಕರ್ನಾಟಕ ಸರ್ಕಾರ ಆಗಸ್ಟ್ ೧೯೯೭ರಲ್ಲಿ, ಆಡಳಿತ ದೃಷ್ಟಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಾಗಿ ವಿಂಗಡಿಸಿತು.
ಜನ ನಂಬುಗೆಯಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಪಶ್ಚಿಮ ಘಟ್ಟದಿಂದ ಕರಾವಳಿವರೆಗಿನ ’ಪರಶುರಾಮ ಸೃಷ್ಟಿ’ಯ ಭಾಗವಾಗಿದೆ. ಈ ನಂಬುಗೆಯಂತೆ, ಕ್ಷತ್ರಿಯರನ್ನು ಭೂಲೋಕದಿಂದ ನಿರ್ಮೂಲನ ಮಾಡುವ ಪ್ರತಿಜ್ಙೆ ಕೈಗೊಂಡ ಪರಶುರಾಮನು ಭೂಮಿಯನ್ನು ೨೧ ಬಾರಿ ಸುತ್ತಿ ಸಕಲ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿದ ನಂತರ ತಾನು ನೆಲೆಸಲು ಕ್ಷತ್ರಿಯರು ಕಾಲಿಡದ ಜಾಗವೊಂದನ್ನು ಸೃಷ್ಟಿಸಬಯಸುತ್ತಾನೆ. ಅದರಂತೆ ಪಶ್ಚಿಮ ಘಟ್ಟದ ಶಿಖರವೊಂದರ ಮೇಲೆ ನಿಂತು ರಕ್ತದಿಂದ ಮಲಿನವಾದ ತನ್ನ ಕೊಡಲಿ(ಪರಶು)ಯನ್ನು ಸಮುದ್ರದೆಡೆಗೆ ಎಸಯಲು ಸಮುದ್ರ ರಾಜನು ಕೊಡಲಿ ಬಿದ್ದಲ್ಲಿಯವರೆಗೆ ಹಿಂದೆ ಸರಿದು ಸೃಷ್ಟಿಯಾದ ಭೂಭಾಗವೇ ಈ ಪರಶುರಾಮ ಸೃಷ್ಟಿ. ಬಹುಶಃ ಪಶ್ಚಿಮ ಘಟ್ಟದ ಕೆಳಗಿನ ಭೂಭಾಗದಲ್ಲಿ ಈ ಜಿಲ್ಲೆ ಇರುವುದರಿಂದ ಈ ನಂಬಿಕೆಗೆ ಪುಷ್ಟಿ ಬಂದಿರಬಹುದು. ಯಕ್ಷಗಾನ ವೇಷ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ೧೫೦ ಕಿಲೋ ಮೀಟರ್ ಕರಾವಳಿ ಪ್ರದೇಶವನ್ನು ಹೊಂದಿದೆ. ಇಲ್ಲಿನ ಮುಖ್ಯ ಕಸುಬು ಮೀನುಗಾರಿಕೆ. ಇಲ್ಲಿ ಆಳವಾದ ಮೀನುಗಾರಿಕೆಯನ್ನು ಮಾಡುತ್ತಾರೆ. ಭತ್ತ ಮತ್ತು ತೆಂಗು ಇಲ್ಲಿಯ ಮುಖ್ಯ ಬೆಳೆಗಳು.
ಜಿಲ್ಲೆಗಳಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಅಭಿವೃದ್ದಿ ಹೊಂದಿದ ಜಿಲ್ಲೆ.ಮಂಗಳೂರು ನಗರವು ಇಲ್ಲಿಯ ಜಿಲ್ಲಾ ಕೇಂದ್ರವಾಗಿದೆ. ಮಂಗಳೂರು ನಗರವು ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದುತ್ತ ಇದೆ.ಬೆಂಗಳೂರಿನ ನಂತರ ೨ನೇ ಅಭಿವೃದ್ದಿ ಹೊಂದುತ್ತಿರುವ ನಗರ. ಇಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ,ಪ್ರಮುಖ ಬಂದರು ಇದೆ ಇದು ದೇಶದಲ್ಲಿಯೇ ೭ ಬೃಹತ್ ಬಂದರು. ಇಲ್ಲಿನ ರೈಲು ನಿಲ್ದಾಣವು ದೇಶದ ಪ್ರಮುಖ ನಿಲ್ದಾಣಗಳಲ್ಲಿ ಒಂದು.ಜಿಲ್ಲೆಯನ್ನು ಬುದ್ದಿವಂತರ ಜಿಲ್ಲೆಯೆಂದು ಕರೆಯುತ್ತಾರೆ. ಶೈಕ್ಷಣಿಕವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕ್ರಾಂತಿಯಲ್ಲಿ ಬಹಳ ಮುಂದುವರಿದಿದೆ. ಜಿಲ್ಲೆಯು ನೈಸಗಿ೯ಕವಾಗಿ ನೋಡಲು ಚೆಂದ ಇಲ್ಲಿಯ ಪ್ರಕೃತಿ ಸೌಂದಯ೯ವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ರಮಣೀಯವಾದಂತ ಗುಡ್ಡ ಬೆಟ್ಟಗಳು, ಬಯಲು ಸೀಮೆಗಳು, ನಿತ್ಯಹರಿದ್ವಣ೯ದ ಕಾಡುಗಳು,ಸಂಜೆಯ ಹೊತ್ತಿಗೆ ಕಡಲ ತೀರದಲ್ಲಿ ಸೂಯ೯ನು ಸಮುದ್ರವನ್ನು ತನ್ನ ಅಂತರಂಗದಲ್ಲಿ ಅದುಮಿಟ್ಟಾಗೆ ಪ್ರವಾಸಿಗರಿಗೆ ಗೋಚರಿಸಲ್ಪಡುತ್ತದೆ.
ಜಿಲ್ಲೆಯು ಮುಖ್ಯವಾಗಿ ಶೈಕ್ಷಣಿಕವಾಗಿ ಬಹಳ ಮುಂದುವರಿದಿದೆ. ಇಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ ವೈದ್ಯಕೀಯ, ದಂತ, ನಸಿ೯ಂಗ್, ಬಿ.ಪಿ.ಟಿ, ಇಂಜಿನಿಯರಿಂಗ್, ಯಮ್.ಬಿ.ಎ, ಮುಂತಾದ ಕೋಸ್೯ಗಳು ಇಲ್ಲಿ ಲಭ್ಯವಿದೆ, ಅತೀ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ.
ಸ್ವಾತಂತ್ರ್ಯದ ನಂತರ ಈ ಜಿಲ್ಲೆ ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿತ್ತು. ೧೯೫೬ರ ಪುನರ್ ವಿಂಗಡನೆ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ ಹಾಗೂ ಕಾಸರಗೋಡು ಜಿಲ್ಲೆಯನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು.
ದಕ್ಷಿಣ ಕನ್ನಡವು ಬುದ್ದಿವಂತರ ನಾಡಾಗಿದೆ.
ಜನ ನಂಬುಗೆಯಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಪಶ್ಚಿಮ ಘಟ್ಟದಿಂದ ಕರಾವಳಿವರೆಗಿನ ’ಪರಶುರಾಮ ಸೃಷ್ಟಿ’ಯ ಭಾಗವಾಗಿದೆ. ಈ ನಂಬುಗೆಯಂತೆ, ಕ್ಷತ್ರಿಯರನ್ನು ಭೂಲೋಕದಿಂದ ನಿರ್ಮೂಲನ ಮಾಡುವ ಪ್ರತಿಜ್ಙೆ ಕೈಗೊಂಡ ಪರಶುರಾಮನು ಭೂಮಿಯನ್ನು ೨೧ ಬಾರಿ ಸುತ್ತಿ ಸಕಲ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿದ ನಂತರ ತಾನು ನೆಲೆಸಲು ಕ್ಷತ್ರಿಯರು ಕಾಲಿಡದ ಜಾಗವೊಂದನ್ನು ಸೃಷ್ಟಿಸಬಯಸುತ್ತಾನೆ. ಅದರಂತೆ ಪಶ್ಚಿಮ ಘಟ್ಟದ ಶಿಖರವೊಂದರ ಮೇಲೆ ನಿಂತು ರಕ್ತದಿಂದ ಮಲಿನವಾದ ತನ್ನ ಕೊಡಲಿ(ಪರಶು)ಯನ್ನು ಸಮುದ್ರದೆಡೆಗೆ ಎಸಯಲು ಸಮುದ್ರ ರಾಜನು ಕೊಡಲಿ ಬಿದ್ದಲ್ಲಿಯವರೆಗೆ ಹಿಂದೆ ಸರಿದು ಸೃಷ್ಟಿಯಾದ ಭೂಭಾಗವೇ ಈ ಪರಶುರಾಮ ಸೃಷ್ಟಿ. ಬಹುಶಃ ಪಶ್ಚಿಮ ಘಟ್ಟದ ಕೆಳಗಿನ ಭೂಭಾಗದಲ್ಲಿ ಈ ಜಿಲ್ಲೆ ಇರುವುದರಿಂದ ಈ ನಂಬಿಕೆಗೆ ಪುಷ್ಟಿ ಬಂದಿರಬಹುದು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ೧೫೦ ಕಿಲೋ ಮೀಟರ್ ಕರಾವಳಿ ಪ್ರದೇಶವನ್ನು ಹೊಂದಿದೆ. ಇಲ್ಲಿನ ಮುಖ್ಯ ಕಸುಬು ಮೀನುಗಾರಿಕೆ. ಇಲ್ಲಿ ಆಳವಾದ ಮೀನುಗಾರಿಕೆಯನ್ನು ಮಾಡುತ್ತಾರೆ, ಭತ್ತ, ತೆಂಗು ಇಲ್ಲಿಯ ಮುಖ್ಯ ಬೆಳೆಗಳು.
ಜಿಲ್ಲೆಗಳಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಅಭಿವೃದ್ದಿ ಹೊಂದಿದ ಜಿಲ್ಲೆ. ಮಂಗಳೂರು ನಗರವು ಇಲ್ಲಿಯ ಜಿಲ್ಲಾ ಕೇಂದ್ರವಾಗಿದೆ, ಮಂಗಳೂರು ನಗರವು ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದುತ್ತ ಇದೆ. ಬೆಂಗಳೂರಿನ ನಂತರ ೨ನೇ ಅಭಿವೃದ್ದಿ ಹೊಂದುತ್ತಿರುವ ನಗರ. ಇಲ್ಲಿ ಅಂತಾರಷ್ಟ್ರೀಯ ವಿಮಾನ ನಿಲ್ದಾಣವಿದೆ, ಪ್ರಮುಖ ಬಂದರು ಇದೆ ಇದು ದೇಶದಲ್ಲಿಯೇ ೭ ಬೃಹತ್ ಬಂದರು, ಇಲ್ಲಿನ ರೈಲು ನಿಲ್ದಾಣವು ದೇಶದ ಪ್ರಮುಖ ನಿಲ್ದಾಣಗಳಲ್ಲಿ ಒಂದು. ಜಿಲ್ಲೆಯನ್ನು ಬುದ್ದಿವಂತರ ಜಿಲ್ಲೆಯೆಂದು ಕರೆಯುತ್ತಾರೆ. ಶೈಕ್ಷಣಿಕವಾಗಿ,ಬ್ಯಾಂಕಿಂಗ್ ಕ್ಷೇತ್ರದಲ್ಲಿ,ಉದ್ಯೋಗ ಕ್ರಾಂತಿಯಲ್ಲಿ ಬಹಳ ಮುಂದುವರಿದಿದೆ. ಜಿಲ್ಲೆಯು ನೈಸಗಿ೯ಕವಾಗಿ ನೋಡಲು ಚೆ೦ದ ಇಲ್ಲಿಯ ಪ್ರಕೃತಿ ಸೌಂದಯ೯ವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ .ರಮಣೀಯವಾದಂತ ಗುಡ್ಡ ಬೆಟ್ಟಗಳು,ಬಯಲು ಸೀಮೆಗಳು,ನಿತ್ಯಹರಿದ್ವಣ೯ದ ಕಾಡುಗಳು,ಸಂಜೆಯ ಹೊತ್ತಿಗೆ ಕಡಲ ತೀರದಲ್ಲಿ ಸೂಯ೯ನು ಸಮುದ್ರವನ್ನು ತನ್ನ ಅಂತರಂಗದಲ್ಲಿ ಅದುಮಿಟ್ಟಾಗೆ ಪ್ರವಾಸಿಗರಿಗೆ ಗೋಚರಿಸಲ್ಪಡುತ್ತದೆ.
ತುಳು ದಕ್ಷಿಣ ಕನ್ನಡದ ಪ್ರಮುಖ ಭಾಷೆ. ಕನ್ನಡ, ಹವ್ಯಕ ಕನ್ನಡ, ಕುಂದಾಪುರ ಕನ್ನಡ, ಅರೆಬಾಸೆ, ಕೊಂಕಣಿ, ಗೋವಾ ಕೊಂಕಣಿ, ಮತ್ತು ಬ್ಯಾರಿ ಭಾಷೆ ಇಲ್ಲಿನ ಇತರ ಭಾಷೆಗಳು.
ಸ್ಥಳಗಳುಸಂಪಾದಿಸಿ
ಬೋಳಾರ: ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ.
ಬೋಳಾರ: ಶ್ರೀ ಮಂಗಳಾದೇವಿ ದೇವಸ್ಥಾನ.
ಬೋಳಾರ: ಶ್ರೀ ಹನುಮಾನ್ ದೇವಸ್ಥಾನ.
ಕುದ್ರೋಳಿ: ಶ್ರೀ ಗೋಕರ್ನಾಥೇಶ್ವರ ದೇವಸ್ಥಾನ.
ಮುಲ್ಕಿ: ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ.
ಮೂಡುಬಿದಿರೆ: ಸಾವಿರ ಕಂಬದ ಬಸದಿ (ತ್ರಿಭುವನ ತಿಲಕ ಚೂಡಾಮಣಿ ಬಸದಿ), ಶ್ರೀ ಹನುಮಂತ ದೇವಸ್ಥಾನ, ಗುರು ಬಸದಿ (ಸಿದ್ಧಾಂತ ಬಸದಿ)
ಕದ್ರಿ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನ.
ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ದೇವಾಸ್ಥಾನ.
ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.
ಕುತ್ತಾರ್: ಕೊರಗಜ್ಜ ಆದಿಸ್ಥಳ( ಶ್ರೀ ಪಂಜಂದಾಯ ಬಂಟ ದೈವಸ್ಥಾನ ಭಂಡಾರ ಬೈಲ್).
ಕೊಂಡಾಣ: ಕೊಂಡಾಣ ಶ್ರೀ ಪಿಲಿಚಂಡಿ ಬಂಟ ದೈವಸ್ಥಾನ).
ಮಂಜನಾಡಿ: ಶ್ರೀ ಮಾಲರಾಯ ದೈವಸ್ಥಾನ).
ಕರ್ಬಿಂಸ್ತಾನ ದೈವಸ್ಥಾನ).
ಉಳ್ಳಾಲ ಸಯ್ಯಿದ್ ಮದನಿ (ರ) ದರ್ಗಾ ಶರೀಫ್. ದಕ್ಷಿಣ ಭಾರತದ ಪ್ರಮುಖ ಮಖ್ಬರ
ಮಂಗಳೂರು ಝೀನತ್ ಬಕ್ಷ್ ಜುಮಾ ಮಸೀದಿ. ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದು. ಜಲಾಲ್ ಮಸ್ತಾನ್ ವಲಿಯುಲ್ಲಾಹಿಯವರ ದರ್ಗಾ.
ನೆಲ್ಲಿತೀರ್ಥ:ಶ್ರೀ ಸೋಮನಾಥೇಶ್ವರ ಗುಹಾಲಯ.
ಕುಕ್ಕೆ ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕೆ.
ಶ್ರೀ ಸುಬ್ರಹ್ಮಣ್ಯ: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ .
ಪುತ್ತೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್, ಕೋಟಿ ಚೆನ್ನಯರ ಮೂಲಸ್ಥಾನ.
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
ಪುತ್ತೂರು ಕರವಡ್ತ ವಲಿಯುಲ್ಲಾಹಿ ದರ್ಗಾ ಶರೀಫ್.
ಕಾರ್ಕಳ: ಗೊಮ್ಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಅನಂತಶಯನ ದೇವಸ್ಥಾನ, ಕಾರ್ಕಳ ಪಡುತಿರುಪತಿ ವೆಂಕಟರಮಣ ದೇವಸ್ಥಾನ.
ಕಾರ್ಕಳ: ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್.
ಪುತ್ತಿಗೆ: ಮಹಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ.
ಕೊಡ್ಯಡ್ಕ:ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ.
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ.
ಬಪ್ಪನಾಡು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.
ಸೋಮೇಶ್ವರ: ಶ್ರೀ ಸೋಮನಾಥೇಶ್ವರ ದೇವಸ್ಥಾನ.
ಕೃಷ್ಣಾಪುರ:ಇಲ್ಲಿ ಅಷ್ಟಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದ ಶಾಖೆ ಇಲ್ಲಿ ಇದೆ.
ಪುತ್ತೂರು: ಸಾಲ್ಮರ ಸಯ್ಯಿದ್ ಮಲೆ ದರ್ಗಾ.
ಮಂಗಳೂರು:ಮಸ್ಜಿದ್ ತಕ್ವಾ ಪಂಪ್ವೆಲ್.
ಪುತ್ತೂರು: ದರ್ಗಾ ಶರೀಫ್ ಮಾಡನ್ನೂರ್.
ಪುತ್ತೂರು: ದರ್ಗಾ ಶರೀಫ್ ಬೈತಡ್ಕ.
ಬೆಳ್ತಂಗಡಿ : ದರ್ಗಾ ಶರೀಫ್ ಕಾಜೂರ್.
ಸೈಂಟ್ ಆಲೋಶಿಯಸ್ ಚರ್ಛ್ ಮಂಗಳೂರು
ವಿಠಲ ಶ್ರೀ ಸೋಮನಾಥೇಶ್ವರ ದೇವಸ್ಥಾನ, ದರೆಗುಡ್ಡೆ.
ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ದರೆಗುಡ್ಡೆ.
ಕೊಕ್ಕಡ :ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಮಠಂತಬೆಟ್ಟು.ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು,
ಸುಳ್ಯ - ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ.