ಶಿಕ್ಷಣವೇ ಶಕ್ತಿ

Monday, 10 May 2021

ಸಾಮಾನ್ಯ ಭೂಗೋಳ

*ಸಾಮಾನ್ಯ ಭೂಗೋಳ ೧೨*
__________________________________________







__________________________________________
          *ಸಂಗ್ರಹ ✍️T.A.ಚಂದ್ರಶೇಖರ*
__________________________________________


ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು :

ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು


(The Major Mountain Passes in India with their Elevations)

1.ಅಸಿರ್ ಘರ್ ಪಾಸ್  • ಮಧ್ಯಪ್ರದೇಶ

2. ಬಾರಾ-ಲಾಚಾ-ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •16,400 (ft)

3. ಬನಿಹಾಲ್ ಪಾಸ್ • ಜಮ್ಮು ಮತ್ತು ಕಾಶ್ಮೀರ • 9.291 (ft)

4.ಚಾಂಗ್ಲಾ  ಪಾಸ್ • ಜಮ್ಮು ಮತ್ತು ಕಾಶ್ಮೀರ •17.800 (ft)

5.ಫೋಟು ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 13.451 (ft)

6.ಜಿಲೇಪ ಲಾ ಪಾಸ್ •ಸಿಕ್ಕಿಂ • 14,300 (ft)

7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್ •ಸಿಕ್ಕಿಂ

8.ಡೊಂಗ್ ಖಲಾ ಪಾಸ್ •ಸಿಕ್ಕಿಂ •12,000 (ft)

9.ಹಲ್ದಿಘಾಟಿ  ಪಾಸ್ •ರಾಜಸ್ಥಾನ

10. ಡೆಬಸಾ ಪಾಸ್ • ಹಿಮಾಚಲ ಪ್ರದೇಶ •17.520 (ft)

11.ಇಂದ್ರಹಾರ  ಪಾಸ್ • ಹಿಮಾಚಲ ಪ್ರದೇಶ •14.473 (ft)

12.ಕುಂಜುಮ್  ಪಾಸ್ •ಹಿಮಾಚಲ ಪ್ರದೇಶ •14.931 (ft)

13.ಖಾರ್ ದುಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •18.380 (ft)

14.ಲಾಮ್ ಖಂಗಾ ಪಾಸ್ •ಹಿಮಾಚಲ ಪ್ರದೇಶ •17.336 (ft)

15.ಲುಂಗಾಲಾಚ್ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •16.600 (ft)

16.ಮಯಾಲಿ ಪಾಸ್, ಮರ್ಸಿಮಿಕ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ

17.ನಾಥು ಲಾ ಪಾಸ್ •ಸಿಕ್ಕಿಂ • 14.140 (ft)

18.ನಮಿಕಾ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 12.139 (ft)

19.ರೋಹ್ ಟಂಗ್ ಪಾಸ್ •ಹಿಮಾಚಲ ಪ್ರದೇಶ •13.051 (ft)

20.ಪಲಕ್ಕಾಡ್ ಗ್ಯಾಪ್ ಪಾಸ್ • ಕೇರಳ •1,000 (ft)

21.ಸೆಲಾ ಪಾಸ್ • ಅರುಣಾಚಲ ಪ್ರದೇಶ •14,000 (ft)

22.ಸಸ್ಸೇರ್ ಪಾಸ್ • ಜಮ್ಮು ಮತ್ತು ಕಾಶ್ಮೀರ •17.753 (ft)

23.ಟಾಂಗ್ ಲಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •17.583 (ft)

24.ಸಿನ್ ಲಾ ಪಾಸ್ • ಉತ್ತರಾಖಂಡ್ •18.028 (ft)

25.ಝೋಜಿಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •12.400 (ft)

26.ಟ್ರೈಲ್ ಸ್ ಪಾಸ್ • ಉತ್ತರಾಖಂಡ್ •17.100 (ft)

ಭಾರತದ ಆರ್ಥಿಕ ಕ್ರಾಂತಿಗಳು

ಭಾರತದ ಆರ್ಥಿಕತೆಯಲ್ಲಿ ಕ್ರಾಂತಿಗಳು

🌷ಭಾರತದ ಆರ್ಥಿಕತೆಯಲ್ಲಿ ಕ್ರಾಂತಿಗಳು🌷
👇🏻👇🏻👇🏻👇🏻👇🏻

🍃ರಜತನಾರು 👉🏻ಹತ್ತಿ ಉತ್ಪಾದನೆ

🍃ರಜತ 👉🏻ತತ್ತಿ

🍃ಕೆಂಪು 👉🏻ಮಾಂಸ/ ಟೊಮೆಟೊ

🍃ವೃತ್ತ👉🏻ಆಲೂಗಡ್ಡೆ ಉತ್ಪಾದನೆ.

🍃ಗುಲಾಬಿ 👉🏻 ಸಮುದ್ರದಲ್ಲಿನ ಚಿಕ್ಕ ಜೀವರಾಶಿಯ ರಕ್ಷಣೆ.

🍃ಕಂದು 👉🏻 ಮಸಾಲೆ ಪದಾರ್ಥಗಳು

🍃ಸ್ವರ್ಣ👉🏻ಹಣ್ಣುಗಳು/ಸೇಬು

🍃ಬೂದಿಬಣ್ಣದ ಕ್ರಾಂತಿ 👉🏻 ರಸಗೊಬ್ಬರಗಳು

ಸರೋವರಗಳು

ಸರೋವರಗಳು

_________________________________________

*ಬೈಕಲ್ ಲೇಕ್ (ರಶಿಯಾ)* ಪ್ರಪಂಚದ ಅತ್ಯಂತ ಆಳವಾದ ಸರೋವರವಾಗಿದೆ. ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಪ್ರಾಚೀನ ಸರೋವರಗಳ ಪೈಕಿ ಒಂದು

*ಐರ್ ಸರೋವರ*ಎಂಬುದು ಆಸ್ಟ್ರೇಲಿಯಾದ ಪ್ರಮುಖ ಸರೋವರವಾಗಿದೆ

*ಒನಕಲ್* (ಉಗಾಂಡಾ) ಮತ್ತು  *ಆಸ್ವಾನ್* (ಈಜಿಪ್ಟ್) ಗಳು ಮಾನವ ನಿರ್ಮಿತ ಸರೋವರಗಳಾಗಿವೆ.

ಟಿಬೆಟಿಯನ್ ಹಿಮಾಲಯದಲ್ಲಿರುವ *ಲೇಕ್ ಟಸ್ಸೊ* ಸೆಕುರು ವಿಶ್ವದ ಅತಿ ಎತ್ತರದ ಕೆರೆಯಾಗಿದೆ.

ಬೋಲಿವಿಯಾ ಮತ್ತು ಪೆರುಗಳ ಗಡಿಯಲ್ಲಿರುವ *ಟಿಟಿಕಾಕಾ* ಸರೋವರವು ವಿಶ್ವದ ಅತಿ ಹೆಚ್ಚು ಸಂಚಾರ ಮಾಡುವ ಸರೋವರವ

ಭಾರತದ ಅತ್ಯಂತ ಎತ್ತರದ ಕೆರೆ *Devtal* ಸರೋವರ

*ವ್ಯಾನ್ ಸರೋವರ* (ಟರ್ಕಿ) ಪ್ರಪಂಚದ ಅತ್ಯಂತ ಉಪ್ಪು ನೀರಿನ ಸರೋವರ

*ಕ್ಯಾಸ್ಪಿಯನ್ ಸಮುದ್ರವು ವಿಶ್ವದ ದೊಡ್ಡ ಸರೋವರವಾಗಿದೆ*. ಇದು ಒಂದು ಉಪ್ಪು ನೀರಿನ ಸರೋವರವಾಗಿದೆ. ಉತ್ತರದಿಂದ ಉರಲ್ ಮತ್ತು ವೋಲ್ಗಾ ನದಿಗಳು ಹರಿಯುತ್ತವೆ, ಆದ್ದರಿಂದ ಅದರ ಉತ್ತರದ ಭಾಗವು ಕಡಿಮೆ ಲವಣಯುಕ್ತವಾಗಿದೆ.

*ವಿಕ್ಟೋರಿಯಾ ಸರೋವರ*, ಉಗಾಂಡಾ, ತಾಂಜಾನಿಯಾ ಮತ್ತು ಕೀನ್ಯಾ ನಡುವಿನ ಗಡಿಯನ್ನು ರೂಪಿಸುತ್ತದೆ.

*ಸುಪೀರಿಯರ್ ಸರೋವರ*ವಿಶ್ವದ ಅತಿದೊಡ್ಡ ತಾಜಾ (ಸಿಹಿ) ನೀರಿನ ಸರೋವರವಾಗಿದೆ.

*ಲೋಪ್ ನಾರ್ ಸರೋವರ*. ಚೀನಾದ ಪರಮಾಣು ಪರೀಕ್ಷಾ ಶ್ರೇಣಿಯ ಬಳಿ ಇದೆ.

*ಚಾಡ್ ಸರೋವರ*,  ನೈಜೀರಿಯಾ, ಕ್ಯಾಮೂರನ್ ಗಡಿಯನ್ನು ರೂಪಿಸುತ್ತದೆ.

*ಗ್ರೇಟ್ ಬೀಯರ್ ಸರೋವರ* ಇದು  ರೇಡಿಯಮ್ ಪೋರ್ಟ ಎಂದು ಪ್ರಸಿದ್ಧವಾಗಿದೆ.

ಯುರೇನಿಯಂ ಸಿಟಿ ಎಂದು ಪ್ರಸಿದ್ಧವಾಗಿರುವ ಸರೋವರ *ಅಥಾಬಾಸ್ಕ*

ಘಾನಾದಲ್ಲಿನ *ವೂಲ್ಟಾ ಸರೋವರ* ದೊಡ್ಡ ಮಾನವ ನಿರ್ಮಿತ ಸರೋವರವಾಗಿದೆ.

ವೆನೆಜುವೆಲಾದ ಸರೋವರದ *ಮರಾಕೈಬೋ* ತೈಲ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ.

*ವುಲರ್ ಸರೋವರ* ಏಷ್ಯಾದ ಅತಿದೊಡ್ಡ ತಾಜಾ ನೀರಿನ ಸರೋವರ ಜಮ್ಮು ಮತ್ತು ಕಾಶ್ಮೀರದಲ್ಲಿದೆ

*ಲೋಕ್ಟಾಕ್ ಸರೋವರ* ಮಣಿಪುರದ . ಇದು ವಿಶ್ವದ ಏಕೈಕ ತೇಲುವ ಸರೋವರ ಎಂದೂ ಕರೆಯಲ್ಪಡುತ್ತದೆ.

*ಚಿಲ್ಕಾ ಸರೋವರ* ಇದು ಭಾರತದಲ್ಲಿನ ದೊಡ್ಡ ಕರಾವಳಿ ಸರೋವರವಾಗಿದೆ ಒರಿಸ್ಸಾದಲ್ಲಿ ನೆಲೆಗೊಂಡಿರುವ ಚಿಲ್ಕಾ ಸರೋವರ ಮತ್ತು ಏಷ್ಯಾದ ಅತಿ ದೊಡ್ಡ ಒಳನಾಡಿನ ಉಪ್ಪು ನೀರು ಆವೃತವಾಗಿದೆ.ಸಮುದ್ರದ ನೀರಿಗಿಂತಲೂ ಹೆಚ್ಚು ಉಪ್ಪಿನಾಂಶ ಇದೆ

*ಪುಲಿಕಾಟ್ ಸರೋವರ* ಇದು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿದೆ ಶ್ರೀಹರಿಕೋಟಾ ಉಪಗ್ರಹ ಉಡಾವಣಾ ಕೇಂದ್ರ ಇದರ ದಡದಲ್ಲಿದೆ

ಭಾರತದ ಅರಣ್ಯಗಳು

ಭಾರತದ ಅರಣ್ಯಗಳು (GEO)

ಭಾರತದ ಅರಣ್ಯಗಳು (GEO)

ಮುಖ್ಯಾಂಶಗಳು:
• ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯ ಹರಿದ್ವರ್ಣ ಅರಣ್ಯ ಆಗಿದೆ.
• ಹಿಮಾಲಯದಲ್ಲಿ ಅಲ್ಫೈನ್ ಅರಣ್ಯಗಳು ಕಂಡುಬರುತ್ತವೆ.
• ಗಂಗಾನದಿ ಮುಖಜ ಭೂಮಿಯನ್ನು ಸುಂದರಬನ ಎಂದು ಕರೆಯುತ್ತಾರೆ.
• ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕರ್ನಾಟಕ ರಾಜ್ಯದಲ್ಲಿದೆ.
• ಸುಂದರಬನ್ ಎಂದು ಕರೆಯಲು ಸುಂದರಿ ಮರಗಳು ಬೆಳೆಯಲು ಕಾರಣವಾಗಿದೆ.
• ದೇಶದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯಲ್ಲಿ ಮಧ್ಯಪ್ರದೇಶ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ,
• ಹರಿಯಾಣ ರಾಜ್ಯವು ಕೊನೆ ಸ್ಥಾನದಲ್ಲಿದ್ದು, ಕರ್ನಾಟಕವು 13ನೇ ಸ್ಥಾನದಲ್ಲಿದೆ.
• ಭಾರತದಲ್ಲಿ ಇಂದು 523 ವನ್ಯಜೀವಿ ಧಾಮಗಳಿವೆ.
• ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್.
• ಜೀವವ್ಯವಸ್ಥೆಯನ್ನು ಕಾಪಾಡಲು ದೇಶದಲ್ಲಿ 18 ಜೈವಿಕ ವಲಯಗಳನ್ನು ಸಂರಕ್ಷಿಸಲಾಗಿದೆ.
• ದೇಶದಲ್ಲಿ ಪ್ರಥಮ ಜೈವಿಕ ಸಂರಕ್ಷಣಾ ವಲಯ ನೀಲಗಿರಿ ಸಂರಕ್ಷಣಾ ವಲಯ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

_________________________________________
1. ಭಾರತವು ಹೊಂದಿರುವ ಅರಣ್ಯ ಪ್ರದೇಶಗ¼ಇμಂಂಔ?

ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ.(69.0 ದ.ಲ.ಹೇ.) ಅಂದರೇ ಭೌಗೋಳಿಕ ಕ್ಷೇತ್ರದ ಶೇ. 21.02  ಭೂಭಾಗವು ಅರಣ್ಯಗಳಿಂದ ಕೂಡಿರುವುದಾಗಿದೆ.

2. ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸಿ.
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು : ಬಂಡಿಪುರ, ನಾಗರಹೊಳೆ, ಬನ್ನೇರುಘಟ್ಟ.

3. ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.

4. ಭಾರತದ ಸಸ್ಯವರ್ಗವನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?
• ಭಾರತದ ಸಸ್ಯವರ್ಗವನ್ನು ಆರು ವಿಧಗಳಾಗಿ ವಿಂಗಡಿಸಬಹುದು.
• 1. ಉಷ್ಟವಲಯದ ನಿತ್ಯ ಹರಿದ್ವರ್ಣ ಕಾಡುಗಳು
2. ಉಷ್ಟವಲಯದ ಎಲೆ ಉದುರುವಕಾಡುಗಳು
3. ಉಷ್ಟವಲಯದ ಮುಳ್ಳುಗಿಡಗಳು ಮತ್ತು ಪೊದೆಗಳು
4. ಮರುಭೂಮಿ ಸಸ್ಯವರ್ಗ
5. ಮ್ಯಾಂಗ್ರೋವ್ ಕಾಡುಗಳು
6. ಹಿಮಾಲಯ ಸಸ್ಯವರ್ಗ

5. ಜೈವಿಕ ವೈವಿದ್ಯತೆ ಎಂದರೇನು?
ಭಾರತದಲ್ಲಿ ವೈವಿಧ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳೂ ವೈವಿಧ್ಯಮಯವಾಗಿವೆ.
ಆದ್ದರಿಂದ ಇದನ್ನು ಜೈವಿಕ ವೈವಿದ್ಯತೆ ಎನ್ನುತ್ತಾರೆ.

6. ದೇಶದಲ್ಲಿ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆಯೇನು? ಅಥವಾ
ಅರಣ್ಯ ಸಂರಕ್ಷಣೆ ಎಂದರೇನು? ಸಂರಕ್ಷಣಾ ವಿಧಾನಗಳನ್ನು ತಿಳಿಸಿ.

 ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.
ಅರಣ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು
• ಅರಣ್ಯದ ಮರಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸುವದು.
• ಸಸಿಗಳನ್ನು ನೆಡುವದು, ಬೀಜಗಳನ್ನು ಹರಡುವದು.
• ಕಾನೂನು ಬಾಹಿರವಾಗಿ ಮರ ಕಡಿಯುವದನ್ನು ನಿಯಂತ್ರಿಸುವದು.
• ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವದು.
• ಅರಣ್ಯಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸುವದನ್ನು  ನಿಯಂತ್ರಿಸುವದು.
• ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವದು.

7. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.
• ವಾರ್ಷಿಕ ಸರಾಸರಿ 75 ರಿಂದ 250 ಸೆಂ.ಮೀ. ಮಳೆ ಬೀಳುವ ಕಡೆಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ.
• ಈ ಕಾಡುಗಳಲ್ಲಿ ಮರಗಳು ವಿರಳವಾಗಿಯೂ, ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತವೆ.
• ಬೇಸಿಗೆಯ ಆರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ.
• ಬೆಲೆ ಬಾಳುವ ತೇಗ, ಸಾಲ, ಶ್ರೀಗಂಧ ಮರಗಳು ಹೆಚ್ಚಾಗಿ ಕಂಡುಬರುತ್ತವೆ.
• ಇವು ಪಶ್ಚಿಮ ಘಟ್ಟದ ಪೂರ್ವದ ಇಳಿಜಾರು, ಜಮ್ಮು & ಕಾಶ್ಮೀರ, ಬಂಗಾಳ, ಛತ್ತೀಸಘಡ್,
• ಒರಿಸ್ಸಾ, ಬಿಹಾರ & ಝಾರ್ಖಂಡ್‍ಗಳಲ್ಲಿ ಕಂಡುಬರುತ್ತವೆ.

8. ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.
• ಈ ಸಸ್ಯವರ್ಗವು ವರ್ಷದಲ್ಲಿ 250 ಸೇಂ.ಮೀ.ಗಿಂತ ಹೆಚ್ಚು ಮಳೆ ಬೀಳುವ ಮತ್ತು 25’ರಿಂದ
• 27’ಸೆ. ಉಷ್ಣಾಂಶವಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
• ಇಲ್ಲಿನ ಮರಗಳು 60 ಮೀಟರ ಎತ್ತರವಾಗಿ ಬೆಳೆದಿರುತ್ತವೆ.
• ಇಲ್ಲಿನ ಮುಖ್ಯ ಮರಗಳೆಂದರೆ ಎಬೋನಿ, ಮಹಾಗನಿ, ಕರಿಮರ, ಬಿದಿರು ಮತ್ತು ರಬ್ಬರ
• ಭಾರತದಲ್ಲಿ ಈ ಕಾಡುಗಳು ಪಶ್ಚಿಮ ಘಟ್ಟದ ಪಶ್ಚಿಮ ಭಾಗ, ಈಶಾನ್ಯ ಬೆಟ್ಟ ಗುಡ್ಡಗಳಪ್ರದೇಶ, ಅಂಡಮಾನ್ ಮತ್ತು ನಿಕೋಬಾರ ದ್ವೀಪಗಲ್ಲಿ ಕಂಡು ಬರುತ್ತವೆ.

8. ಮಾನ್ಸೂನ್ ಕಾಡುಗಳು ಮತ್ತು ಮಾನ್‍ಗ್ರೋವ್ ಕಾಡುಗಳಲ್ಲಿ ಕಂಡುಬರುವ ವ್ಯತ್ಯಾಸಗಳೇನು?
ಮಾನ್ಸೂನ್ ಕಾಡುಗಳು 75 ರಿಂದ 250 ಸೆಂ.ಮೀ. ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಬೇಸಿಗೆ ಆರಂಭದಲ್ಲಿ ಈ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ. ಆದರೆ ಮ್ಯಾನ್‍ಗ್ರೋವ್ ಅರಣ್ಯಗಳು ತೀರ ಪ್ರದೇಶಗಳ ತಗ್ಗುವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ ಆವರಿಸಲ್ಪಡುತ್ತವೆ. ಈ ಕಾಡುಗಳು ನದಿಮುಖಜ ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲಿ ಕಂಡುಬರುತ್ತವೆ.

10. ಸುಂದರಬನ್ಸ ಎಂದರೇನು?
    ಗಂಗಾನದಿಯ ಮುಖಜಭೂಮಿಯಲ್ಲಿ ಸುಂದರಿ ಮರಗಳು ಅಧಿಕವಾಗಿರುವದರಿಂದ ಈ ಪ್ರದೇಶವನ್ನು ಸುಂದರಬನ್ಸ ಕಾಡುಗಳು ಎಂದು ಕರೆಯುತ್ತಾರೆ.

11. ಅರಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ.
• ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಗಿಡಮೂಲಿಕೆಗಳು, ಪಶುಗಳಿಗೆ ಆಹಾರವನ್ನು ಒದಗಿಸುತ್ತವೆ.

• ಕಾಡುಗಳು ತೇವಾಂಶವನ್ನು ಪೂರೈಸಿ ಉμಂUಂ�}Àವನ್ನು ಮಾರ್ಪಡಿಸುತ್ತವೆ.

• ತೇವಾಂಶವುಳ್ಳ ಮಾರುತಗಳನ್ನು ತಡೆದು ಮಳೆ ಬೀಳುವದಕ್ಕೆ ನೆರವಾಗುತ್ತವೆ.

• ಕಾಡುಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತವೆ.

• ಕಾಡುಗಳು ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿವೆ.

• ಕಾಡುಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತವೆ.

• ವನ್ಯಧಾಮಗಳನ್ನೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಭಾರತದ ಮಣ್ಣು

ಭಾರತದ ಮಣ್ಣುಗಳು (GEO)

ಭಾರತದ ಮಣ್ಣುಗಳು (GEO)

ಮುಖ್ಯಾಂಶಗಳು:
• ನದಿಗಳು ಪರ್ವತ ಪ್ರದೇಶದಿಂದ ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎಂದು ಹೆಸರು.
• ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುವರು.
• ರಾಜಸ್ತಾನದಲ್ಲಿ ಮರಭೂಮಿ ಮಣ್ಣು ಹೆಚ್ಚಾಗಿ ಕಂಡುಬರುವದು.
• ಜೋಳ ಬೆಳೆಯಲು ಕಪ್ಪು ಮಣ್ಣು ಸೂಕ್ತವಾಗಿದೆ.
• ರಾಗಿ & ಎಣ್ಣೆ ಕಾಳು ಬೆಳೆಯಲು ಕೆಂಪು ಮಣ್ಣು ಸೂಕ್ತವಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

__________________________________________
1. ಕಪ್ಪು ಮಣ್ಣು ಯಾವ ಯಾವ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ?
• ಕಪ್ಪು ಮಣ್ಣು - ಹತ್ತಿ, ಜೋಳ, ಗೋದಿ, ಈರುಳ್ಳಿ,
ಮೆಣಸಿನಕಾಯಿ, ಹೊಗೆಸೊಪ್ಪು,
• ಎಣ್ಣೆಕಾಳುಗಳು, ನಿಂಬೆ & ದ್ರಾಕ್ಷಿ ಮುಂತಾದ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ.

2. ಭಾರತದಲ್ಲಿ ಕಂಡು ಬರುವ ಮಣ್ಣಿನ ಮುಖ್ಯ ಪ್ರಕಾರಗಳಾವವು?
ಭಾರತದಲ್ಲಿ ಕಂಡು ಬರುವ ಮಣ್ಣನ್ನು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ – 1. ಮೆಕ್ಕಲುಮಣ್ಣು, 2. ಕಪ್ಪುಮಣ್ಣು,
3. ಕೆಂಪುಮಣ್ಣು, 4. ಜಂಬಿಟ್ಟಿಗೆ ಮಣ್ಣು,
5. ಮರು¨Àೂsಮಿ ಮಣು,್ಣ 6. ಪರ್ವತ ಮಣ್ಣು.

3. ಉತ್ತರ ಮೈದಾನ ಪ್ರದೇಶದಲ್ಲಿ ಯಾವ ಮಣ್ಣು ಕಂಡು ಬರುತ್ತದೆ?
ಉತ್ತರ ಮೈದಾನ ಪ್ರದೇಶದಲ್ಲಿ ಮೆಕ್ಕಲು ಮಣ್ಣು ಕಂಡು ಬರುತ್ತದೆ.

4. ಮಣ್ಣಿನ ಸಂರಕ್ಷಣೆ ಎಂದರೇನು? ಅದರ ವಿಧಾನಗಳನ್ನು ಪಟ್ಟಿ ಮಾಡಿರಿ.
   ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ
ಫಲವತ್ತತೆಯನ್ನು ಕಾಪಾಡುವುದೇ ‘ಮಣ್ಣಿನ ಸಂರಕ್ಷಣೆ’ ಎನ್ನುವರು. ಮಣ್ಣಿನ ಸವೆತವನ್ನು ತಡೆಗಟ್ಟಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ
ಮುಖ್ಯವಾದವುಗಳೆಂದರೆ –
• ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
• ಅಡ್ಡ ಬದುಗಳನ್ನು ನಿರ್ಮಿಸುವದು.
• ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅನುಸರಿಸುವದು.
• ಅರಣ್ಯ ನಾಶವನ್ನು ತಡೆಗಟ್ಟಿ ಕಾಡನ್ನು ಬೆಳೆಸುವದು.
• ನೀರಿನ ಸೂಕ್ತ ಬಳಕೆ ಮಾಡುವದು.
• ಚೆಕ್ ಡ್ಯಾಮ್‍ಗಳ ನಿರ್ಮಾಣ.

5. ಮಣ್ಣಿನ ಸವೆತಕ್ಕೆ ಕಾರಣಗಳೇನು?
• ಅರಣ್ಯಗಳ ನಾಶ, 2. ಸಾಕು ಪ್ರಾಣಿಗಳನ್ನು ಮೇಯಿಸುವದು,
• ಅವೈಜ್ಞಾನಿಕ ಬೇಸಾಯ, 4. ಅಧಿಕ ನೀರಾವರಿ ಬಳಕೆ.

6. ಮೆಕ್ಕಲು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಸಮಾರು 7.7 ದಶಲಕ್ಷ ಚ.ಕಿ.ಮೀ. ಪ್ರದೇಶಗಳಲ್ಲಿ ಹರಡಿದೆ.
• ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತುತಂದು ಸಂಚಯಿಸಿರುವ ಮಣ್ಣಿನಿಂದ ರಚಿತವಾಗಿದೆ.
• ಈ ಮಣ್ಣಿನಲ್ಲಿ ¥ಇಂmಂಚಿμi ಮತ್ತು ಸುಣ್ಣ ಹೆಚ್ಚಾಗಿರುತ್ತದೆ.
• ಜೈವಿಕಾಂಶ & ಸಾರಜನಕ ಕಡಿಮೆ ಪ್ರಮಾಣದಲ್ಲಿರುತ್ತವೆ.
• 5 ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಗೋದಿ, ಭತ್ತ, ಕಬ್ಬು & ಸಣಬು.

7. ಮಣ್ಣಿನ ಸವೆತ ಎಂದರೇನು? ಅದರಿಂದ ಉಂಟಾಗುವ ಸಮಸ್ಯೆಗಳು ಅಥವಾ ಪರಿಣಾಮಗಳನ್ನು ಪಟ್ಟಿಮಾಡಿ.
    ಭೂಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ ಮಣ್ಣಿನ ಸವೆತ ಅಥವಾ ಭೂಸವೆತ ಎಂದು ಕರೆಯುತ್ತಾರೆ.
ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳು.
• ನದಿಗಳಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗುತ್ತದೆ.
• ನದಿಗಳು ತಮ್ಮ ದಿಕ್ಕನ್ನು ಬದಲಾಯಿಸಿ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡುತ್ತವೆ.
• ಜಲಾಶಯ ಅಥವಾ ಕರೆಗಳಲ್ಲಿ ಹೂಳು ತುಂಬುವದರಿಂದ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯ ಫಲವತ್ತತೆ ಕಡಿಮೆಯಾಗುವದು.

8. ಕಪ್ಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿರಿ.
• ಈ ಮಣ್ಣು ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾದುದು.
• ಈ ಮಣ್ಣು ಅಗ್ನಿಶಿಲೆಗಳ ಶಿಥಿಲಿಕರಣದಿಂದ ಉತ್ಪತ್ತಿಯಾಗಿದೆ.
• ಇದರಲ್ಲಿ ಜೇಡಿಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ.
• ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ.
• ಈ ಮಣ್ಣು ಕಬ್ಬಿಣ, ಸುಣ್ಣ ಹಾಗೂ ಮೆಗ್ನೀಷಿಯಂ ಕಾರ್ಬೋನೇಟ್‍ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.
• ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ.

9. ಕೆಂಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಈ ಮಣ್ಣು ಸ್ಪಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗುತ್ತದೆ.
• ಈ ಮಣ್ಣಿನಲ್ಲಿ ಕಬ್ಬಿಣದ ಅಂಶವು ಕಬ್ಬಿಣದ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವದರಿಂದ
• ಇದು ಕೆಂಪು ಬಣ್ಣವನ್ನು ಹೊಂದಿದೆ.
• ಜೈವಿಕಾಂಶ, ರಂಜಕ ಮತ್ತು ಸುಣ್ಣದ ಕೊರತೆ ಈ ಮಣ್ಣಿನಲ್ಲಿದೆ.
• ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹೊಗೆಸೊಪ್ಪು, ಎಣ್ಣೆಕಾಳು, ಕಬ್ಬು, ಹತ್ತಿ.

10. ಹಿಮಾಲಯ ಪರ್ವತಗಳಲ್ಲಿ ಯಾವ ಬಗೆಯ ಮಣ್ಣು ಕಂಡು ಬರುವುದು?
   ಹಿಮಾಲಯ ಪರ್ವತಗಳಲ್ಲಿ ಕೊಳೆತ ಜೈವಿಕಾಂಶಗಳನ್ನೊಳಗೊಂಡ ಮಣ್ಣು ಕಂಡು ಬರುವದು

ಭಾರತದ ನದಿಗಳು

ಭಾರತದ ಪ್ರಮುಖ ನದಿಗಳು

★ ಭಾರತದ ಪ್ರಾಕೃತಿಕ ಭೂಗೋಳ.
(Indian Physical Geography)

★ ಭಾರತದ ನದಿಗಳು
(Indian Drainage System)

ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಕೋನದಿಂದ ಅತ್ಯುಪಯುಕ್ತವೆಂದೆನಿಸಿದ ಭೌಗೋಳಿಕವಾಗಿ ಪ್ರಮುಖವೆಂದೆನಿಸಿದ ಭಾರತದ ಕೆಲವು ನದಿಗಳು ಹಾಗೂ ಅವುಗಳ ವಿಶೇಷತೆಗಳೊಂದಿಗೆ  ವಿವರಿಸಲು ಪ್ರಯತ್ನಿಸಲಾಗಿದ್ದು, ಏನಾದರೂ ತಪ್ಪುತಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.

★ ದಕ್ಷಿಣ ಭಾರತದ ನದಿಗಳು :

1.ನದಿ :— ಕೃಷ್ಣಾ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.
●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.
●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು
●.ವಿಶೇಷತೆಗಳು : —
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.

2..ನದಿ :— ನರ್ಮದಾ (ರೇವಾ) (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)
●.ವ್ಯಾಪ್ತಿ ರಾಜ್ಯಗಳು :— ಮಧ್ಯ ಪ್ರದೇಶ, ಮಹಾರಾಷ್ಟ್ರ ಗುಜರಾತ್
●.ಪ್ರಮುಖ ಉಪನದಿಗಳು :— ಶೇರ್, ಶಕ್ಕರ್, ದುಧಿ, ತವಾ, ಹಿರನ್, ಬರ್ನ, ಚೊರಲ್, ಕರಮ್
●.ಪ್ರಮುಖ ಅಣೆಕಟ್ಟುಗಳು :— ಸರ್ದಾರ್ ಸರೋವರ್ (ಗುಜರಾತ್), ನರ್ಮದಾ ಸಾಗರ್ (ಮಧ್ಯಪ್ರದೇಶ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕನ್ಹಾ ರಾಷ್ಟ್ರೀಯ ಉದ್ಯಾನ (ಸುರ್ಪನ್ ನದಿ)
●.ವಿಶೇಷತೆಗಳು :—
1. ಭಾರತೀಯ ಉಪಖಂಡದಲ್ಲಿ ಹರಿಯುವ 5ನೇ ಉದ್ದದ ನದಿ.
2.ಇದು ಪಶ್ಚಿಮಕ್ಕೆ ಹರಿಯುವ ಉದ್ದವಾದ ನದಿಗಳಲ್ಲಿ 1ನೇಯದು.
3.ಇದು ಕಪಿಲಧಾರ್, ಧರ್ದಿ ಮತ್ತು ಧುವಂಧರ್ ಗಳೆಂಬ ಮೂರು ಜಲಪಾತಗಳನ್ನು ಹೊಂದಿದೆ.
4. 'ಅಲಿಯಾಬೆಟ್' ಎಂಬುವುದು ನರ್ಮದಾ ನದಿ ನಿರ್ಮಿತ ದ್ವೀಪಗಳಲ್ಲಿ ಅತಿದೊಡ್ಡ ದ್ವೀಪ.

3.ನದಿ :— ಮಹಾನದಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ನಗರಿ ಟೌನ್, ಛತ್ತೀಸ್ ಗಢ.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ (ಒಡಿಶಾ)
●.ವ್ಯಾಪ್ತಿ ರಾಜ್ಯಗಳು :— ಛತ್ತೀಸ್ ಗಢ, ಒಡಿಶಾ
●.ಪ್ರಮುಖ ಉಪನದಿಗಳು :— ಸೆಯೊನಾಥ್, ಹಸ್ಡೆಯೋ, ಜೋಂಕ್, ಇಬ್, ಓಂಗ್, ಮಂಡ್, ಟೆಲೆನ್, ಸುವರ್ಣರೇಖಾ.
●.ಪ್ರಮುಖ ಅಣೆಕಟ್ಟುಗಳು :— ಹಿರಾಕುಡ್ ಅಣೆಕಟ್ಟು (ದೊಡ್ಡ ಅಣೆಕಟ್ಟು), ತಿಕ್ಕರಪಾರಾ ಅಣೆಕಟ್ಟು, ನಾರಾಜು ಅಣೆಕಟ್ಟು.

4.ನದಿ :— ಕಾವೇರಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಕೊಡಗು, ಕರ್ನಾಟಕ.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳುನಾಡು
●.ಪ್ರಮುಖ ಉಪನದಿಗಳು :— ಅಮರಾವತಿ, ಹಾರಂಗಿ,, ಲೋಕಪಾವನಿ, ಅರ್ಕಾವತಿ, ಲಕ್ಷಣತೀರ್ಥ, ಕಪಿಲಾ,, ಶಿಂಷಾ, ಹೇಮಾವತಿ, ನೋಯಲ್ , ಕಬಿನಿ, ಸುವರ್ಣಾವತಿ, ಭವಾನಿ ಮತ್ತು ಅಮರಾವತಿ.
●.ಪ್ರಮುಖ ಅಣೆಕಟ್ಟುಗಳು :— ಕೃಷ್ಣ ರಾಜ ಸಾಗರ ಅಣೆಕಟ್ಟು, ಮೆಟ್ಟೂರ್ ಅಣೆಕಟ್ಟು, ಬನಸುರಾ ಸಾಗರ ಅಣೆಕಟ್ಟು (ಕಬಿನಿ ನದಿ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಮುದುಮಲೈ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ), ಬಂಡೀಪುರ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ)
●.ವಿಶೇಷತೆಗಳು :—
1. ಇದನ್ನು 'ದಕ್ಷಿಣದ ಗಂಗೆ' ಎಂದು ಕರೆಯುವರು.
2.(ಶಿವನಸಮುದ್ರಂ) ಗಗನಚುಕ್ಕಿ ಮತ್ತು ಭರಚುಕ್ಕಿ, ಚುಂಚನಕಟ್ಡೆ ಮತ್ತು ಹೊಗೇನಕಲ್ ಜಲಪಾತಗಳನ್ನು ಹೊಂದಿದೆ.
3. ಇದು ಮೂರು ಅಂತರ್ ನದಿ ದ್ವೀಪಗಳನ್ನು ಒಳಗೊಂಡಿದೆ.
1)ಶ್ರೀರಂಗಪಟ್ಟಣ 2)ಶಿವನಸಮುದ್ರಂ 3) ಶ್ರೀರಂಗ.

5.ನದಿ :— ಗೋದಾವರಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ತ್ರಿಯಂಬಕ್, ನಾಸಿಕ್
●.ಕೊನೆಗೆ ಸೇರುವ ಪ್ರದೇಶ :— ಆಂಧ್ರಪ್ರದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಛತ್ತೀಸ್ಗಢ
●.ಪ್ರಮುಖ ಉಪನದಿಗಳು :— ಪೂರ್ಣಾ, ಪ್ರವರ, ಇಂದ್ರಾವತಿ, ಮಂಜೀರಾ, ಬಿಂದುಸಾರ, ಶಬರಿ, ವಾರ್ಧಾ, ವೇನ್ ಗಾಂಗಾ
●.ಪ್ರಮುಖ ಅಣೆಕಟ್ಟುಗಳು :— ಜಯಕ್ವಾಡಿ ಅಣೆಕಟ್ಟು , ಪೊಲಾವರಮ್ ಪ್ರಾಜೆಕ್ಟ್
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.
●.ವಿಶೇಷತೆಗಳು :—
1. ಸಂಪೂರ್ಣವಾಗಿ ಭಾರತದೊಳಗೆ ಹರಿಯುವ ಉದ್ದವಾದ ನದಿಗಳಲ್ಲಿ ಮೊದಲನೆಯದು.
2.ದಕ್ಷಿಣ ಭಾರತದ ಅತಿ ಉದ್ದವಾದ ನದಿ
3.ದಕ್ಷಿಣ ಭಾರತದ ವೃದ್ಧ ನದಿ.

6.ನದಿ :— ತಪತಿ (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಬೇತುಲ್, ಮಧ್ಯಪ್ರದೇಶ
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)
●.ವ್ಯಾಪ್ತಿ ರಾಜ್ಯಗಳು :— ಮಧ್ಯಪ್ರದೇಶ, ಗುಜರಾತ್
●.ಪ್ರಮುಖ ಉಪನದಿಗಳು :—ಪೂರ್ಣ, ಬೆಟುಲ್, ಗುಲಿ, ಬೊಕಾರ್, ಗಂಜಾಲ್, ದತ್ ಗಂಜ್, ಬೊಕಾಡ್, ಮಿಂಡೊಲಾ, ಗಿರ್ಣ, ಪಂಝರಾ, ವಾಘೂರ್, ಬೋರಿ, ಆನೆರ್.
●.ಪ್ರಮುಖ ಅಣೆಕಟ್ಟುಗಳು :— ಊಕಾಯಿ ಅಣೆಕಟ್ಟು, ಹಥನೂರ್ ಅಣೆಕಟ್ಟು (ಮಹಾರಾಷ್ಟ್ರ),

ಸಾಮಾನ್ಯ ಜ್ಞಾನ ೦೩

*📻SSLC ಆನ್ಲೈನ್ ಕ್ಲಾಸ್ಸ್📺*
_____________________________________









*_____________________________________*
*_____________________________________*


ಟೆಲಿಗ್ರಾಂ

ಪ್ರಮುಖ ಯೋಜನೆಗಳು ಮತ್ತು ನೀತಿಗಳು

💥ಪ್ರಥಮ ಅರಣ್ಯ ನೀತಿ 1894

💥ಕಾರ್ಖಾನೆಗಳ ಕಾಯ್ದೆ 1948

💥ಪ್ರಥಮ ವನ ಮಹೋತ್ಸವ 1950

💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954

💥ಅಂತರಾಜ್ಯ ಜಲ ಕಾಯ್ದೆ. 1956

💥ವನ್ಯಜೀವಿ ಸಂರಕ್ಷಣಾ ಕಾಯ್ದೆ.
 1972

💥ಸಿಂಹ ಯೋಜನೆ. 1972

💥ಹುಲಿ ಯೋಜನೆ. 1973

💥ಮೆಾಸಳೆ ಯೋಜನೆ. 1974

💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974

💥ಅರಣ್ಯ ಸಂರಕ್ಷಣಾ ಕಾಯ್ದೆ. 1980

💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980

💥ಪರಿಸರ ಸಂರಕ್ಷಣಾ ಕಾಯ್ದೆ. 1986

💥ಘೆಂಡಾಮ್ರಗ ಯೋಜನೆ. 1987

💥ಭಾರತದ ಹೊಸ ಅರಣ್ಯ ನೀತಿ. 1988

💥ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989

💥ಕರಾವಳಿ ಸಂರಕ್ಷಣಾ ಯೋಜನೆ. 1989

💥ಆನೆ ಯೋಜನೆ 1992

💥ಹಿಮ ಚಿರತೆ ಯೋಜನೆ. 2009

🌲ಕರ್ನಾಟಕದ ಪ್ರಮುಖ ಬುಡಕಟ್ಟು ಜನಾಂಗಗಳು...



☘ ಜೇನು ಕುರುಬರು... ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಬುಡಕಟ್ಟು ಜನಾಂಗವಾಗಿದೆ

🌿 ಇವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುವರು

☘  ಕೊರಗ ಸಮುದಾಯ....
ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯವಾಗಿದೆ

🌿 ದ.ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುವರು

☘ ಮಲೆಕುಡಿಯರು...                        

ಕೊಡಗು ಮತ್ತು ದ.ಕನ್ನಡ ಜಿಲ್ಲೆಯಲ್ಲಿ ಕಂಡುಬರುವರು

☘ ಇನ್ನಿತರ ಬುಡಕಟ್ಟು ಸಮುದಾಯಗಳು...

🌿 ಸೋಲಿಗರು, ಯರವರು,ಹಕ್ಕಿ ಪಿಕ್ಕಿ ,ಮತ್ತು ಹಲಸರು ಮೇದರು ಚಾಮರಾಜನಗರ ಜಿಲ್ಲೆಯಲ್ಲಿ ಕಂಡುಬರುವರು.

🌲6 ನೇ ತರಗತಿಯ ಪಠ್ಯ ಪುಸ್ತಕದ ಮಾಹಿತಿ

🌲ಸ್ಥಳೀಯ ಮಾರುತಗಳು...



☘ ಭಾರತ... ಲೂ

☘ ಯು.ಎಸ್.ಎ....ಚಿಕೂನ್or ಹಿಮ ಭಕ್ಷಕ

☘ ಆಲ್ಫ್ ಪರ್ವತ.... ಪೋಹ್ನ್

☘ ಪ್ರಾನ್ಸ್..... ಮಿಸ್ಟ್ರಲ್

☘ ಸಹಾರ ..... ಸಿರಾಕ್ಕೊ

☘ ಆಸ್ಟ್ರೇಲಿಯಾ.... ಬ್ರಿಕ್ ಫೀಲ್ಡರ್

☘ಅಂಟಾಕ್ಟಿಕಾ.... ಬ್ಲಿಜರ್ಡ

🦋ರಾಷ್ಟ್ರೀಯ ಉದ್ಯಾನಗಳು🦋



🦚🦚🦚🦚🦚🦚🦚🦚🦚🦚🦚🦚🦚🦚

            🟢 ರಾಜಸ್ಥಾನ🟢
 1.ರಣಥಂಬೋರ್ ರಾಷ್ಟ್ರೀಯ ಉದ್ಯಾನ
 2. ಸರಿಸ್ಕಾ ರಾಷ್ಟ್ರೀಯ ಉದ್ಯಾನ
 3. ಮರುಭೂಮಿ (ಡೆಸರ್ಟ್) ರಾಷ್ಟ್ರೀಯ ಉದ್ಯಾನ
 4. ಮೌಂಟ್ ಅಬು ವೈಲ್ಡ್ ಲೈಫ್ ಅಭಯಾರಣ್ಯ

            🟢ಮಧ್ಯಪ್ರದೇಶ🟢
 1. ಕನ್ಹಾ ರಾಷ್ಟ್ರೀಯ ಉದ್ಯಾನ
 2. ಪೆಂಚ್ ರಾಷ್ಟ್ರೀಯ ಉದ್ಯಾನ
 3. ಪನ್ನಾ ರಾಷ್ಟ್ರೀಯ ಉದ್ಯಾನ
 4. ಸತ್ಪುರ ರಾಷ್ಟ್ರೀಯ ಉದ್ಯಾನ
 5. ವ್ಯಾನ್ ವಿಹಾರ್ ಪಾರ್ಕ್
 6. ರುದ್ರ ಸಾಗರ್ ಸರೋವರ ರಾಷ್ಟ್ರೀಯ ಉದ್ಯಾನ
 7. ಬಾಂಧವಗಢ  ರಾಷ್ಟ್ರೀಯ ಉದ್ಯಾನ
 8. ಸಂಜಯ್ ರಾಷ್ಟ್ರೀಯ ಉದ್ಯಾನ
 9. ಮಾಧವ್ ರಾಷ್ಟ್ರೀಯ ಉದ್ಯಾನ
 10. ಕುನೋ ರಾಷ್ಟ್ರೀಯ ಉದ್ಯಾನ
 11. ಮಾಂಡ್ಲಾ ರಾಷ್ಟ್ರೀಯ ಉದ್ಯಾನ

       🟢 ಅರುಣಾಚಲ ಪ್ರದೇಶ🟢
 1. ನಮ್ದಾಫ ರಾಷ್ಟ್ರೀಯ ಉದ್ಯಾನ
2.  ಮೌಲಿಂಗ್ ರಾಷ್ಟ್ರೀಯ ಉದ್ಯಾನ

            🟢 ಹರಿಯಾಣ🟢
 1. ಸುಲ್ತಾನಪುರ ರಾಷ್ಟ್ರೀಯ ಉದ್ಯಾನ
 2. ಕಲೇಶರ್ ರಾಷ್ಟ್ರೀಯ ಉದ್ಯಾನ

           🟢 ಉತ್ತರ ಪ್ರದೇಶ🟢
 1. ದುದ್ವಾ  ರಾಷ್ಟ್ರೀಯ ಉದ್ಯಾನ
 2. ಚಂದ್ರಪ್ರಭ ವನ್ಯಜೀವಿ ವಿಹಾರ್

        🟢ಜಾರ್ಖಂಡ್🟢
 1. ಬೆಟ್ಲಾ ರಾಷ್ಟ್ರೀಯ ಉದ್ಯಾನ
 2. ಹಜಾರಿಬಾಗ್ ರಾಷ್ಟ್ರೀಯ ಉದ್ಯಾನ
 3. ಪಲಮಾವು ರಾಷ್ಟ್ರೀಯ ಉದ್ಯಾನ
4. ದಲ್ಮ ವನ್ಯಜೀವಿಧಾಮ

        🟢 ಮಣಿಪುರ🟢
 1. ಕೈಬುಲ್ ಲ್ಯಾಮ್‌ ಜಿಯೋ  ರಾಷ್ಟ್ರೀಯ ಉದ್ಯಾನ
 2. ಸಿರೋಹಿ ರಾಷ್ಟ್ರೀಯ ಉದ್ಯಾನ

             🟢 ಸಿಕ್ಕಿಂ🟢
 1. ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನ

               🟢ತ್ರಿಪುರ🟢
 1. ಮೋಡದ ಚಿರತೆ ರಾಷ್ಟ್ರೀಯ ಉದ್ಯಾನ

             🟢 ತಮಿಳುನಾಡು🟢
 1. ಗಲ್ಫ್ ಆಫ್ ಮನಾರ್ ರಾಷ್ಟ್ರೀಯ ಉದ್ಯಾನ
 2. ಇಂದಿರಾ ಗಾಂಧಿ (ಅಣ್ಣಾಮಲೈ) ರಾಷ್ಟ್ರೀಯ ಉದ್ಯಾನ
 3. ಪ್ಲ್ಯಾನಿ ಹಿಲ್ಸ್ ರಾಷ್ಟ್ರೀಯ ಉದ್ಯಾನ
 4. ಮುಕುರುತಿ ರಾಷ್ಟ್ರೀಯ ಉದ್ಯಾನ
 5. ಗುನಿಡೇ ರಾಷ್ಟ್ರೀಯ ಉದ್ಯಾನ

                 🟢 ಒಡಿಶಾ🟢
 1. ಇನ್ನರ್ಗನಿಕಾ ರಾಷ್ಟ್ರೀಯ ಉದ್ಯಾನ
 2. ಸಿಮ್ಲಿ ರಾಷ್ಟ್ರೀಯ ಉದ್ಯಾನ
 3. ನಂದಂಕಣನ್ ರಾಷ್ಟ್ರೀಯ ಮೃಗಾಲಯ
 4. ಚಿಲ್ಕಾ ಸರೋವರ ಅಭಯಾರಣ್ಯ

             🟢ಮಿಜೋರಾಂ🟢
 1. ಮೌಂಟೇನ್ ನ್ಯಾಷನಲ್ ಪಾರ್ಕ್
 2. ಮುರ್ಲೇನ್ ರಾಷ್ಟ್ರೀಯ ಉದ್ಯಾನ
 3. ಫಾಂಗ್ಪುಯಿ ರಾಷ್ಟ್ರೀಯ ಉದ್ಯಾನ
 4. ದಂಪಾ ಮೀಸಲು

       🟢 ಜಮ್ಮು ಮತ್ತು ಕಾಶ್ಮೀರ🟢
 1. ಡಚಿಗ್ರಾಮ್ ರಾಷ್ಟ್ರೀಯ ಉದ್ಯಾನ
 2. ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನ
 3. ಕಿಸ್ವಾಡ್ ರಾಷ್ಟ್ರೀಯ ಉದ್ಯಾನ
 4. ಹಮ್ನಿಶ್ ರಾಷ್ಟ್ರೀಯ ಉದ್ಯಾನ
 5. ಬಯೋಸ್ಫಿಯರ್ ರಿಸರ್ವ್, ಶ್ರೀನಗರ

          🟢ಪಶ್ಚಿಮ ಬಂಗಾಳ🟢
 1. ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ
 2. ಬುಕ್ಸಾ ರಾಷ್ಟ್ರೀಯ ಉದ್ಯಾನ
 3. ಜಲ್ಧಪರಾ ರಾಷ್ಟ್ರೀಯ ಉದ್ಯಾನ
 4. ಗೋರುವರಾ ರಾಷ್ಟ್ರೀಯ ಉದ್ಯಾನ
 5. ಸಿಂಹಲಿಲಾ ರಾಷ್ಟ್ರೀಯ ಉದ್ಯಾನ
 6. ನಿಯೋರಾ ವ್ಯಾಲಿ ರಾಷ್ಟ್ರೀಯ ಉದ್ಯಾನ

           🟢 ಅಸ್ಸಾಂ🟢
 1. ಮನಸ್ ರಾಷ್ಟ್ರೀಯ ಉದ್ಯಾನ
 2. ಕಾಜಿರಂಗಾ ರಾಷ್ಟ್ರೀಯ ಉದ್ಯಾನ
 3.ನಮೇರಿ ರಾಷ್ಟ್ರೀಯ ಉದ್ಯಾನ
 4. ರಾಜೀವ್ ಗಾಂಧಿ ಒರಾಂಗ್ ಪಾರ್ಕ್
 5. ದಿಬ್ರುಗಢ  ಶೇಖೋವಾಲ್ ರಾಷ್ಟ್ರೀಯ ಉದ್ಯಾನ

          🟢 ಆಂಧ್ರಪ್ರದೇಶ🟢
 1. ಕಸ್ರು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ
 2. ಇಂದಿರಾ ಗಾಂಧಿ ಪ್ರಾಣಿಶಾಸ್ತ್ರ ಉದ್ಯಾನ

👨‍⚖ಸರ್ವೋಚ್ಚ ನ್ಯಾಯಾಲಯ👨‍⚖



⚙ ಭಾರತದಲ್ಲಿ  ಮೊದಲು  1774ರಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆ ಆಯಿತು, ಇದರ ಮೊದಲ ನ್ಯಾಯಾಧೀಶರು ಸರ್ ಎಲಿಜಾ ಇಂಪೆ

⚙ ಭಾರತದ ಶ್ರೇಷ್ಠ ನ್ಯಾಯಾಲಯವಾಗಿದೆ.

⚙ ಸ್ವತಂತ್ರ ಭಾರತದ ಸುಪ್ರೀಂ ಕೋರ್ಟ್  "1950 ಜನವರಿ 28" ರಂದು ಸ್ಥಾಪಿಸಲಾಯಿತು.

⚙ ಸರ್ವೋಚ್ಚ ನ್ಯಾಯಾಲಯದ ಕುರಿತು 124ನೇ ವಿಧಿಯಿಂದ 147 ನೇ ವಿಧಿಯವರೆಗೂ ವಿವರಿಸಲಾಗಿದೆ.

⚙ನೇಮಕ : ಸಚಿವ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ.

⚙ ಅರ್ಹತೆಗಳು :

🔸ಉಚ್ಛನ್ಯಾಯಾಲಯದಲ್ಲಿ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿ ಅಥವಾ ಹತ್ತು ವರ್ಷಗಳ ಕಾಲ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸಬೇಕು.

🔸 ರಾಷ್ಟ್ರಪತಿಯವರ ದೃಷ್ಟಿಯಲ್ಲಿ ಕಾನೂನು ಪಂಡಿತರೆನಿಸಿರಬೇಕು.

⚙ ಅವಧಿ :  ನಿವೃತ್ತಿ ವಯಸ್ಸು 65

⚙ ಪ್ರಮಾಣವಚನ : ರಾಷ್ಟ್ರಪತಿ

⚙ ರಾಜೀನಾಮೆ : ರಾಷ್ಟ್ರಪತಿ

💢💢💢💢💢💢💢💢💢💢💢💢💢💢

🌷ಸ್ಥಳ : ದೆಹಲಿ

🌷 ಪ್ರಸ್ತುತ ನ್ಯಾಯಾಧೀಶರು : ಏನ್. ವಿ. ರಮಣ್ (48ನೇ ನ್ಯಾಯಮೂರ್ತಿ)

🌷47ನೇ ನ್ಯಾಯಮೂರ್ತಿ ಅರವಿಂದ್  ಬೊಬ್ಡೆ.

**💠ಭಾರತ್ ರತ್ನ ಪ್ರಶಸ್ತಿ ಪುರಸ್ಕೃತರು ಮತ್ತು ವರ್ಷ 💠*"


 

 ⚜ ಡಾ. ಚಂದ್ರಶೇಖರ್ ವೆಂಕಟರಮಣ ➾ 1954

⚜ ಚಕ್ರವರ್ತಿ ರಾಜಗೋಪಾಲಾಚಾರಿ ➾ 1954

 ⚜ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ➾ 1954

 ⚜ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ➾ 1955

⚜ ಡಾ. ಭಗವಾನ್ ದಾಸ್ ➾ 1955

⚜ ಜವಾಹರಲಾಲ್ ನೆಹರು ➾ 1955

⚜ ಗೋವಿಂದ್ ವಲ್ಲಭ್ ಪಂತ್ ➾ 1957

⚜ ಮಹರ್ಷಿ ಡಾ. ಧೋಂಡೋ ಕೇಶವ್ ಕಾರ್ವೆ ➾ 1958

 ⚜ ರಾಜರ್ಷಿ ಪುರುಷೋತ್ತಮ್ ದಾಸ್ ಟಂಡನ್ ➾ 1961

 ⚜ ಡಾ. ಬಿಧಾನ್ ಚಂದ್ರ ರೈ ➾ 1961

 ⚜ ಡಾ.ರಾಜೇಂದ್ರ ಪ್ರಸಾದ್ ➾ 1962

 ⚜ ಡಾ. ಜಾಕಿರ್ ಹುಸೇನ್ ➾ 1963

 ⚜ ಡಾ. ಪಾಂಡುರಂಗ್ ವಾಮನ್ ಕೇನ್ ➾ 1963

⚜ ಲಾಲ್ ಬಹದ್ದೂರ್ ಶಾಸ್ತ್ರಿ (ಮರಣೋತ್ತರ) ➾ 1966

⚜ ಇಂದಿರಾ ಗಾಂಧಿ ➾ 1971

 ⚜ ವರಹಗಿರಿ ವೆಂಕಟ ಗಿರಿ ➾ 1975

⚜ ಕುಮಾರಸ್ವಾಮಿ ಕಾಮರಾಜ್ (ಮರಣೋತ್ತರ) ➾ 1976

⚜ ಮದರ್ ತೆರೇಸಾ ➾ 1980

 ⚜ ಆಚಾರ್ಯ ವಿನೋಬಾ ಭಾವೆ (ಮರಣೋತ್ತರ) ➾ 1983

⚜ ಖಾನ್ ಅಬ್ದುಲ್ ಘಫರ್ ಖಾನ್ ➾ 1987

 ⚜ ಗೋಪಾಲನ್ ರಾಮಚಂದ್ರನ್ (ಮರಣೋತ್ತರವಾಗಿ) ➾ 1988

 ⚜ಡಾ. ಭೀಮರಾವ್ ಅಂಬೇಡ್ಕರ್ (ಮರಣೋತ್ತರವಾಗಿ) ➾ 1990

⚜ ನೆಲ್ಸನ್ ಮಂಡೇಲಾ➾ 1990

⚜ ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರವಾಗಿ) ➾1991

 ⚜ ಮೊರಾರ್ಜಿ ದೇಸಾಯಿ ➾1991

 ⚜ ರಾಜೀವ್ ಗಾಂಧಿ (ಮರಣೋತ್ತರ) ➾1991

⚜ ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರವಾಗಿ) ➾ 1992

 ⚜  ಆರ್.  ಡಿ. ಟಾಟಾ ➾ 1992

⚜ ಸತ್ಯಜಿತ್ ರೇ ➾ 1992

 ⚜ ಡಾ. ಎಪಿಜೆ ಅಬ್ದುಲ್ ಕಲಾಂ ➾1997

⚜ ಅರುಣಾ ಅಸಫ್ ಅಲಿ (ಮರಣೋತ್ತರ) ➾ 1997

⚜ ಗುಲ್ಜಾರಿ ಲಾಲ್ ನಂದಾ (ಮರಣೋತ್ತರ) ➾ 1997

⚜ಸುಬ್ಬುಲಕ್ಷ್ಮಿ  ➾1998

 ⚜ ಚಿದಂಬರಂ ಸುಬ್ರಹ್ಮಣ್ಯಂ ➾ 1998

 ⚜ ಜಯಪ್ರಕಾಶ್ ನಾರಾಯಣ್ (ಮರಣೋತ್ತರ)➾ 1998

⚜ ಪಂಡಿತ್ ರವಿಶಂಕರ್  ➾ 1999

 ⚜ ಪ್ರೊಫೆಸರ್ ಅಮರ್ತ್ಯ ಸೇನ್ ➾ 1999

⚜ ಗೋಪಿನಾಥ್ ಬೋರ್ಡೋಲಾಯ್ (ಮರಣೋತ್ತರ) ➾ 1999

⚜ ಉಸ್ತಾದ್ ಬಿಸ್ಮಿಲ್ಲಾ ಖಾನ್ ➾ 2001

⚜ ಲತಾ ಮಂಗೇಶ್ಕರ್ ➾ 2001

⚜ಭೀಮ್ಸೆನ್ ಜೋಶಿ ➾ 2008

⚜ಚಿಂತಾಮಣಿ ನಾಗೇಶ್ ರಾಮಚಂದ್ರ ರಾವ್ ➾ 2014

⚜ ಸಚಿನ್ ತೆಂಡೂಲ್ಕರ್ ➾ 2014

⚜ ಅಟಲ್ ಬಿಹಾರಿ ವಾಜಪೇಯಿ ➾ 2015

⚜ ಮದನ್ ಮೋಹನ್ ಮಾಳವಿಯಾ ➾ 2015

⚜ ನಾನಾಜಿ ದೇಶಮುಖ್ (ಮರಣೋತ್ತರ) ➾ 2019

⚜ ಪ್ರಣಬ್ ಮುಖರ್ಜಿ ➾ 2019

⚜ ಭೂಪೆನ್ ಹಜಾರಿಕಾ (ಮರಣೋತ್ತರ) ➾ 2019

 ═════════════════════════

ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದ ಲೇಖನಗಳ ಒಂದು ನೋಟ🔹

🔹
 ➨ ವಿಧಿ 124
 ಸುಪ್ರೀಂಕೋರ್ಟ್ ಸ್ಥಾಪನೆ , ರಚನೆ 

 ➨ ವಿಧಿ 125
 ನ್ಯಾಯಾಧೀಶರ ಸಂಬಳ, ಇತ್ಯಾದಿ

 ➨ ವಿಧಿ 126
ಮುಖ್ಯ ನ್ಯಾಯಮೂರ್ತಿಗಳ ನೇಮಕ

 ➨ ವಿಧಿ 127
 ತಾತ್ಕಾಲಿಕ ನ್ಯಾಯಾಧೀಶರ ನೇಮಕ

 ➨ ವಿಧಿ 128
 ಸುಪ್ರೀಂ ಕೋರ್ಟ್‌ನ ಸಭೆಗಳಲ್ಲಿ ನಿವೃತ್ತ ನ್ಯಾಯಾಧೀಶರ ಹಾಜರಾತಿ

 ➨ ವಿಧಿ 129
 ಸುಪ್ರೀಂ ಕೋರ್ಟ್ ದಾಖಲೆಯ ನ್ಯಾಯಾಲಯವಾಗಿದೆ.

 ➨ ವಿಧಿ 130
 ಸುಪ್ರೀಂ ಕೋರ್ಟ್‌ನ ಕಾರ್ಯಸ್ಥಾನ

 ➨ ವಿಧಿ 131
 ಸುಪ್ರೀಂ ಕೋರ್ಟ್‌ನ ಮೂಲ ಅಧಿಕಾರ ವ್ಯಾಪ್ತಿ / ನ್ಯಾಯವ್ಯಾಪ್ತಿ

 ➨ ವಿಧಿ 131 ಎ
 ಕೇಂದ್ರ ಕಾನೂನುಗಳ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ವಿಶೇಷ ನ್ಯಾಯವ್ಯಾಪ್ತಿ (ರದ್ದುಪಡಿಸಲಾಗಿದೆ)

 ➨ವಿಧಿ  132
 ಕೆಲವು ಪ್ರಕರಣಗಳಲ್ಲಿ ಹೈಕೋರ್ಟ್‌ಗಳಿಂದ ಬರುವ ಅಪೀಲುಗಳು ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರವ್ಯಾಪ್ತಿ.

 ➨ವಿಧಿ  133
 ಸಿವಿಲ್ ವಿಷಯಗಳ ಸಂಬಂಧದಲ್ಲಿ ಉಚ್ಚ ನ್ಯಾಯಲಯಗಳಿಂದ ಬರುವ ಅಫೀಲು  ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ.

 ➨  ವಿಧಿ 134
 ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ 
ಅಪೀಲು ಅಧಿಕಾರವ್ಯಾಪ್ತಿ.

 ➨  ವಿಧಿ 134 ಎ
 ಅನುಚ್ಛೇದದ ಮೇರೆಗೆ ಉಚ್ಚ ನ್ಯಾಯಾಲಯವು ಪ್ರಮಾಣೀಕರಿಸಿದರೆ ಅಂತ ತೀರ್ಪಿನ ಡಿಕ್ರಿಯ ಅಥವಾ ಅಂತಿಮ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫೀಲು ಹೂಡಲು ಅವಕಾಶ ಇರತಕ್ಕದ್ದು.

 ➨ ವಿಧಿ 135
ಅಪೀಲು ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯದಿಂದ ವಿಶೇಷ ಅನುಮತಿ.

 ➨ ವಿಧಿ 136
ಅಸ್ತಿತ್ವದಲ್ಲಿರುವ ಕಾನೂನಿನ ಮೇರೆಗೆ ಫೆಡರಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಚಲಾಯಿಸುವುದು.

 ➨ ವಿಧಿ 137
 ಸುಪ್ರೀಂ ಕೋರ್ಟ್‌ನ ತೀರ್ಪುಗಳು ಅಥವಾ ಆದೇಶಗಳ ಪರಿಶೀಲನೆ

 ➨  ವಿಧಿ 138
 ಸುಪ್ರೀಂ ಕೋರ್ಟ್‌ನ ನ್ಯಾಯವ್ಯಾಪ್ತಿಯ ವಿಸ್ತರಣೆ

 ➨ ವಿಧಿ 139
ಸರ್ವೋಚ್ಚ ನ್ಯಾಯಾಲಯಕ್ಕೆ ಕೆಲವು ರಿಟ್ಟಗಳನ್ನು ಹೊರಡಿಸಲು ಅಧಿಕಾರಗಳನ್ನು ನೀಡುವುದು.

 ➨ ವಿಧಿ 139 ಎ
 ಕೆಲವು ಪ್ರಕರಣಗಳ ವರ್ಗಾವಣೆ

 ➨ ವಿಧಿ 140
 ಸುಪ್ರೀಂ ಕೋರ್ಟ್‌ನ ಪೂರಕ ಅಧಿಕಾರಗಳು

 ➨ ವಿಧಿ 141
 ಸುಪ್ರೀಂ ಕೋರ್ಟ್ ಘೋಷಿಸಿದ ಕಾನೂನು ಎಲ್ಲಾ ನ್ಯಾಯಾಲಯಗಳಿಗೆ ಬದ್ಧವಾಗಿದೆ.

 ➨ ವಿಧಿ 142
 ಸುಪ್ರೀಂ ಕೋರ್ಟ್‌ನ ತೀರ್ಪುಗಳು ಮತ್ತು ಆದೇಶಗಳ ಜಾರಿ ಮತ್ತು ಆದೇಶಗಳು ಇತ್ಯಾದಿ.

 ➨ ವಿಧಿ 143
 ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅಧ್ಯಕ್ಷರ ಅಧಿಕಾರ

 ➨ ವಿಧಿ 144
 ನಾಗರಿಕ ಮತ್ತು ನ್ಯಾಯಾಂಗ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನ ನೆರವಿನೊಂದಿಗೆ ಕಾರ್ಯನಿರ್ವಹಿಸುವುದು.

 ➨ ವಿಧಿ 144 ಎ
 ಕಾನೂನುಗಳ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿಲೇವಾರಿ ಮಾಡುವ ಬಗ್ಗೆ ವಿಶೇಷ ನಿಬಂಧನೆಗಳು (ರದ್ದುಪಡಿಸಲಾಗಿದೆ)

 ➨ ವಿಧಿ 145
 ನ್ಯಾಯಾಲಯದ ನಿಯಮಗಳು, ಇತ್ಯಾದಿ.

 ➨ ವಿಧಿ 146
 ಅಧಿಕಾರಿಗಳು ಮತ್ತು ಸೇವಕರು ಮತ್ತು ಸುಪ್ರೀಂ ಕೋರ್ಟ್‌ನ ವೆಚ್ಚಗಳು

 ➨ ವಿಧಿ 147
 ಅರ್ಥ ವಿವರಣೆ.

ಶಾಸನಗಳು

🌀ಪ್ರಮುಖ ಶಾಸನಗಳು 🌀

☘ಐಹೊಳೆ ಶಾಸನ - ರವಿಕೀರ್ತಿ . ಮೇಗುತಿ ದೆವಾಲಯದಲ್ಲಿ ಕೆತ್ತಲಾಗಿದೆ
 ( ಇಮ್ಮಡಿ ಪುಲಕೇಶಿಯ ಕಾಲದ್ದು)

☘ ಚಂದ್ರವಳ್ಳಿ ಶಾಸನದ ಕತೃ - ಮಯೂರ ವರ್ಮ ( ಚಿತ್ರದುರ್ಗ)

☘ ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಇರುವುದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮ.

☘ ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ

☘ ಹಲ್ಮಿಡಿ ಶಾಸನದ ಕತೃ - ಕಾಕುತ್ಸ
 ವರ್ಮ.

☘ ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ

☘ ತಾಳಗುಂದ ಶಾಸನದ ಕತೃ - ಕವಿ ಕುಬ್ಜ
☘ ತಾಳಗುಂದ ಶಾಸನವನ್ನು ಬರೆಸಿದವರು - ಶಾಂತಿವರ್ಮ ( ಶಿವಮೊಗ್ಗ ಜಿಲ್ಲೆಯಲ್ಲಿದೆ)

☘ ನಿಟ್ಟೂರು ಶಾಸನದ ಕತೃ - ಚಡಪ.

☘ ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ - ದಂತಿದುರ್ಗ

☘ ಭಾಂಡ್ಕ ಮತ್ತು ತಾಳೆಗಾಂ ಶಾಸನ - ಒಂದನೇ ಕೃಷ್ಣ

☘ ಸಂಜಾನ್ ತಾಮ್ರ ಶಾಸನ - ಅಮೋಘ ವರ್ಷ

☘ ಬಾದಾಮಿ ಶಾಸನದ ಕತೃ - ಒಂದನೇ ಪುಲಿಕೇಶಿ

☘ ಮಹಾಕೂಟಸ್ತಂಭ ಶಾಸನ ಕತೃ - ಮಂಗಳೇಶ. ಬಾದಾಮಿಯ ಮಹಾಕೂಟೇಶ್ವರ ದೇವಾಲಯದಲ್ಲಿದೆ

🍁☘🍁☘🍁☘🍁☘🍁☘🍁☘

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು