ಶಿಕ್ಷಣವೇ ಶಕ್ತಿ

Saturday, 6 March 2021

ವಿಧಾನ ಪರಿಷತ್ತು

ADD ARTICLE DESCRIPTION


ಭಾರತದ ರಾಜ್ಯಗಳಲ್ಲಿ ಎರಡು ಶಾಸಕಾಂಗಗಳನ್ನು ಹೊಂದಿರುವ ರಾಜ್ಯಗಳ ಮೇಲ್ಮನೆ ಎಂದು ಪರಿಗಣಿತವಾಗುವ ಶಾಸನ ಸಭೆಯೇ ವಿಧಾನ ಪರಿಷತ್. ೨೦೧೬ರ ಅಂಕಿ ಅಂಶದಂತೆ ಭಾರತದ ಇಪ್ಪತ್ತೊಂಬತ್ತು ರಾಜ್ಯಗಳ ಪೈಕಿ ಏಳು ರಾಜ್ಯಗಳು ಮಾತ್ರವೇ ವಿಧಾನ ಪರಿಷತ್ ವ್ಯವಸ್ಥೆ ಹೊಂದಿವೆ.

ಸದ್ಯಕ್ಕೆ ಕೇವಲ ಆರು ರಾಜ್ಯಗಳು ವಿಧಾನ ಪರಿಷತ್ ಹೊಂದಿವೆ.

  • ಆಂಧ್ರ ಪ್ರದೇಶ
  • ಬಿಹಾರ
  • ಕರ್ನಾಟಕ 
  • ಮಹಾರಾಷ್ಟ್ರ
  • ತೆಲಂಗಾಣ
  • ಉತ್ತರಪ್ರದೇಶ

ವಿಧಾನ ಪರಿಷತ್ ಸದಸ್ಯತ್ವ

ಭಾರತದ ರಾಜ್ಯಗಳಿಗೆ ಸಂಬಂಧ ಪಟ್ಟಂತೆ ವಿಧಾನ ಸಭೆಯನ್ನು ವಿಸರ್ಜಿಸಲು ಕಾನೂನಿನಲ್ಲಿ ಅವಕಾಶವಿದೆ ಆದರೆ ವಿಧಾನ ಪರಿಷತ್ ಅನ್ನು ವಿಸರ್ಜಿಸಲು ಸಾಧ್ಯವಿಲ್ಲ. ಆದರಿಂದ ವಿಧಾನ ಪರಿಷತ್ ಅನ್ನು ಶಾಶ್ವತ ಶಾಸಕಾಂಗ ಎನ್ನಲಾಗುತ್ತದೆ. ಪ್ರತಿಯೊಬ್ಬ ವಿಧಾನ ಪರಿಷತ್ ಸದಸ್ಯನ ವಾಯಿದೆ ಆರು ವರ್ಷಗಳಾಗಿರುತ್ತವೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಕೇಂದ್ರದ ರಾಜ್ಯಸಭೆಯ ಮಾದರಿಯಲ್ಲಿಯೇ ವಿಧಾನ ಪರಿಷತ್ ನ ಮೂರನೇ ಒಂದರಷ್ಟು ಸದಸ್ಯರ ವಾಯಿದೆ ಪೂರ್ಣವಾಗುತ್ತದೆ.

ವಿಧಾನ ಪರಿಷತ್ ನ ಒಟ್ಟು ಸದಸ್ಯರ ಸಂಖ್ಯೆ ವಿಧಾನ ಸಭೆಯ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಇರಬೇಕು. ಅಂದರೆ ೩:೧ ಅನುಪಾತದಲ್ಲಿರಬೇಕು. ಹಾಗಿದ್ದಾಗ್ಯೂ ವಿಧಾನ ಪರಿಷತ್ ನ ಸದಸ್ಯರ ಕನಿಷ್ಠ ಸಂಖ್ಯೆ ೪೦ ಕ್ಕೆ ಮೀರಿರಬೇಕು. (ಜಮ್ಮು ಕಾಶ್ಮೀರ ರಾಜ್ಯಕ್ಕೆ ಇದರಿಂದ ವಿನಾಯಿತಿ ನೀಡಲಾಗಿದ್ದು ಅಲ್ಲಿನ ವಿಧಾನ ಪರಿಷತ್ ನಲ್ಲಿ ಕೇವಲ ೩೬ ಸದಸ್ಯರಿದ್ದಾರೆ.)

ಅರ್ಹತೆಗಳು ಮತ್ತು ಮಾನದಂಡಗಳು

ವಿಧಾನ ಪರಿಷತ್ ಸದಸ್ಯರಾಗಲು ಬಯಸುವ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

  • ಭಾರತೀಯ ನಾಗರೀಕನಾಗಿರಬೇಕು.
  • ಕನಿಷ್ಠ ೩೦ ವರ್ಷಗಳನ್ನು ಪೂರೈಸಿರಬೇಕು.
  • ಮಾನಸಿಕ ಅಸ್ವಸ್ಥೆಗಳಂತಹ ವಿಷಯಗಳಿಂದ ಬಳಲುತ್ತಿರಬಾರದು.
  • ಅವರು ಯಾವ ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಲು ಬಯಸುತ್ತಾರೋ ಆ ರಾಜ್ಯದಿಂದ ಯಾವುದೇ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿರಬಾರದು.
  • ಅದೇ ಸಮಯಕ್ಕೆ ಕೇಂದ್ರದಲ್ಲಿ ಲೋಕಸಭಾ ಅಥವಾ ರಾಜ್ಯ ಸಭಾ ಸದಸ್ಯರಾಗಿರಬಾರದು.

ಸದಸ್ಯರನ್ನು ಆಯ್ಕೆ ಮಾಡುವ ರೀತಿ

• ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಜನ ಇತರ ಸರ್ಕಾರಿ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿಗಳು ಹಾಗು ಜಿಲ್ಲಾ ಪರಿಷತ್ತುಗಳಿಂದ ಚುನಾಯಿತರಾಗಿರುತ್ತಾರೆ. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಜನ ವಿಧಾನ ಸಭಾ ಸದಸ್ಯರಿಂದ ಚುನಾಯಿತರಾಗುತ್ತಾರೆ. ಚುನಾಯಿತರಾಗುವ ವ್ಯಕ್ತಿಗಳು ವಿಧಾನ ಸಭೆಯ ಸದಸ್ಯರಾಗಿರಬಾರದು. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಹನ್ನೆರಡನೇ ಒಂದರಷ್ಟು ಸದಸ್ಯರು ಪದವೀಧರ ಕ್ಷೇತ್ರದ ಚುನಾವಣೆಯಿಂದ ಆಯ್ಕೆಯಾಗುತ್ತಾರೆ. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಹನ್ನೆರಡನೇ ಒಂದರಷ್ಟು ಸದಸ್ಯರು ಶಿಕ್ಷಕರ ಕ್ಷೇತ್ರದ ಚುನಾವಣೆಯಿಂದ ಆಯ್ಕೆಯಾಗುತ್ತಾರೆ. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಆರನೇ ಒಂದರಷ್ಟು ಸದಸ್ಯರು ರಾಜ್ಯಪಾಲರಿಂದ ನೇರವಾಗಿ ನೇಮಕವಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕಲೆ, ಸಮಾಜ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಜ್ಯ್ಪಾಲರು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ.


ಮುಂಬರುವ ವಿಧಾನ ಪರಿಷತ್ತುಗಳು

  • ೨೦೧೦ರಲ್ಲಿ ಕೇಂದ್ರ ಸದನದಲ್ಲಿ ವಿಧಾನ ಪರಿಷತ್ತುಗಳ ಮರು ನವೀಕರಣಕ್ಕೆ ಕಾಯ್ದೆಯೊಂದನ್ನು ಎಂಟು ರಾಜ್ಯಗಳಿಗೆ ಅಂಗೀಕರಿಸಲಾಯಿತು.ಆದರೆ ತಮಿಳುನಾಡು ರಾಜ್ಯ ಮರುನವೀಕರಿಸದಂತೆ ತಡೆ ಹಿಡಿದಿದೆ. ಹಾಗು ರಾಜ್ಯಸಭೆಗೆ ತಮಿಳುನಾಡು ರಾಜ್ಯ ಸರ್ಕಾರ ವಿರೋಧ ತೋರಿದೆ.
  • ಕೇಂದ್ರ ಸಂಪುಟ ಸಭೆ ನವೆಂಬರ್ ೨೮ ೨೦೧೩ ರಲ್ಲಿ ಅಸ್ಸಾಂ ರಾಜ್ಯದಲ್ಲಿ ವಿಧಾನ ಪರಿಷತ್ ರಚಿಸಲು ಒಪ್ಪಿಗೆ ನೀಡಿದೆ.
  • ಒಡಿಶಾ ರಾಜ್ಯವು ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿನ ವಿಧಾನ ಪರಿಷತ್ತುಗಳ ಬಗ್ಗೆ ಅಧ್ಯಯನ ನಡೆಸಿ ಒಡಿಶಾದಲ್ಲೂ ವಿಧಾನ ಪರಿಷತ್ ರಚನೆಗೆ ಸಿದ್ಧತೆ ಮಾಡಿಕೊಂಡಿದೆ.
__________________________________________

ವಿಧಾನ ಸಭೆ

ADD ARTICLE DESCRIPTION


ಕರ್ನಾಟಕ ವಿಧಾನ ಸಭೆ

ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು

ಒಂದೇ ಒಂದು ಶಾಸನ ಸಭೆಯುಳ್ಳ(ವಿಧಾನ ಸಭೆ ಮಾತ್ರ) ರಾಜ್ಯಗಳಲ್ಲಿ ವಿಧಾನ ಸಭೆ ಮುಖ್ಯ ಭೂಮಿಕೆಯಾಗಿಯೂ ಹಾಗೂ ಎರಡು ಶಾಸನ ಸಭೆ(ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು)ಗಳುಳ್ಳ ರಾಜ್ಯಗಳಲ್ಲಿ ಕೆಳಮನೆಯಾಗಿಯೂ ವಿಧಾನ ಸಭೆ ಕಾರ್ಯ ನಿರ್ವಹಿಸುತ್ತದೆ.

ಕೇಂದ್ರದಲ್ಲಿ ಲೋಕಸಭೆ ಕೆಳಮನೆಯಾದರೆ, ರಾಜ್ಯ ಸಭೆ ಮೇಲ್ಮನೆಯಾಗಿರುತ್ತದೆ. ಅಂತೆಯೇ ರಾಜ್ಯಗಳಲ್ಲಿ ವಿಧಾನ ಸಭೆ ಕೆಳಮನೆಯಾಗಿದ್ದು, ವಿಧಾನ ಪರಿಷತ್ತು ಮೇಲ್ಮನೆಯಾಗಿರುತ್ತದೆ. ವಿಧಾನ ಪರಿಷತ್ತು ಎಲ್ಲ ರಾಜ್ಯಗಳಲ್ಲೂ ಖಡ್ಡಾಯವಲ್ಲ. ಸದ್ಯಕ್ಕೆ ಭಾರತದ ೭ ರಾಜ್ಯಗಳು ವಿಧಾನ ಪರಿಷತ್ತು ಹೊಂದಿವೆ. ರಾಜ್ಯದ ಸ್ಥಾನ ಮಾನವಿಲ್ಲದ ಎರಡು ಕೇಂದ್ರಾಡಳಿತ ಪ್ರದೇಶಗಳು ವಿಧಾನಸಭೆಯನ್ನು ಹೊಂದಿವೆ. ಅವುಗಳೆಂದರೆ ದೆಹಲಿ ಮತ್ತು ಪುದುಚೇರಿ.

ವಿಧಾನಸಭೆಯ ಸದಸ್ಯರು ವಿಧಾನಸಭೆಯ ವ್ಯಾಪ್ತಿಯ ಒಂದು ಕ್ಷೇತ್ರದ ಹದಿನೆಂಟು ವಯಸ್ಸು ಮೀರಿದ ಮತದಾರರಿಂದ ನೇರವಾಗಿ ಆಯ್ಕೆಯಾಗಿರುತ್ತಾರೆ. ವಿಧಾನಸಭೆಯ ಸದಸ್ಯರ ಬಲವನ್ನು ಭಾರತದ ಸಂವಿಧಾನ ೬೦ಕ್ಕೆ ಕಡಿಮೆ ಹಾಗು ೫೦೦ಕ್ಕೆ ಹೆಚ್ಚು ಇರಬಾರದು ಎಂದು ನಮೂದಿಸಿದೆ. ಆದಾಗ್ಯೂ ಕೆಲ ಚಿಕ್ಕ ರಾಜ್ಯಗಳ ವಿಚಾರದಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕೆ ಕಡಿಮೆಯಿದೆ. ಗೋವಾ, ಸಿಕ್ಕಿಂ, ಮಿಝೋರಾಂ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚ್ಚೇರಿಯಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕಿಂತಲೂ ಕಡಿಮೆಯಿದ್ದು ಆ ರಾಜ್ಯಗಳಿಗೆ ವಿಧಾನಸಭಾ ಸದಸ್ಯರ ಸಂಖ್ಯಾ ಬಲದ ವಿಚಾರದಲ್ಲಿ ಸಡಿಲಿಕೆ ಕೊಡಲಾಗಿದೆ.

ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಒಬ್ಬ ವ್ಯಕ್ತಿಯನ್ನು ವಿಧಾನಸಭಾ ಸದಸ್ಯನಾಗಿ ನೇಮಕ ಮಾಡಿಕೊಳ್ಳಬಹುದು. ಆ ವ್ಯಕ್ತಿ ಅಲ್ಪ ಸಂಖ್ಯಾತ ಪ್ರತಿನಿಧಿಯಂತಿದ್ದು, ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿದ್ದರೆ ಅದನ್ನು ಸರಿದೂಗಿಸಲು ರಾಜ್ಯಪಾಲರಿಂದ ನೇಮಕವಾಗುತ್ತಾನೆ. ಎಲ್ಲ ವಿಧಾನಸಭಾ ಸದಸ್ಯರ ಕಾಲಾವಧಿ ಐದು ವರ್ಷಗಳಾಗಿದ್ದು ಆ ಸರ್ಕಾರದ ಐದು ವರ್ಷ ಮುಗಿಯುತ್ತಿದ್ದಂತೆಯೇ ಚುನಾವಣೆ ಎದುರಿಸಬೇಕಾಗುತ್ತದೆ.

ಒಂದು ವಿಧಾನ ಸಭೆಯ ಅವಧಿ ಐದು ವರ್ಷಗಳಾಗಿರುತ್ತದೆ. ತುರ್ತು ಪರಿಸ್ಥಿತಿಗಳಂತಹ ಸಂಧರ್ಭದಲ್ಲಿ ವಿಧಾನ ಸಭೆಯ ಅವಧಿಯನ್ನು ರಾಜ್ಯ ಪಾಲರು ಇನ್ನು ವಿಸ್ತರಿಸಬಹುದು ಅಥವಾ ಕಡಿತ ಮಾಡಲೂಬಹುದು. ವಿಧಾನ ಸಭೆಯ ಅವಧಿಯನ್ನು ರಾಜ್ಯಪಾಲರು ಗರಿಷ್ಠ ೬ ತಿಂಗಳವರೆಗೆ ವಿಸ್ತರಿಸಬಹುದು.

ಮುಖ್ಯಮಂತ್ರಿಗಳ ಮನವಿಯ ಆಧಾರದ ಮೇಲೆ ವಿಧಾನ ಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ವಿಧಾನ ಸಭೆಯಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ವಿಫಲ ವಾದರೆ ಅಥವಾ ಸರ್ಕಾರ ರಚಿಸಲು ಅವಶ್ಯವಾದ ಸದಸ್ಯ ಬಲ ಹೊಂದಿಲ್ಲವಾದರೆ ರಾಜ್ಯ ಪಾಲರು ವಿಧಾನ ಸಭೆ ವಿಸರ್ಜಿಸಲು ಅವಕಾಶವಿದೆ.

ವಿಧಾನ ಸಭೆಯ ರಚನೆ

  • ಸಂವಿಧಾನದ 170ನೇ ವಿಧಿಯ ಅನ್ವಯ ಪ್ರತಿಯೊಂದು ರಾಜ್ಯದ ವಿಧಾನಸಭೆಗೆ ನೇರ ಚುನಾವಣೆ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಒಂದು ವಿಧಾನಸಭೆಯಲ್ಲಿ ಕನಿಷ್ಠ 60 ಹಾಗೂ ಗರಿಷ್ಠ 500 ಸದಸ್ಯರು ಇರಬೇಕು.
  • ಚುನಾವಣಾ ಕ್ಷೇತ್ರವನ್ನು ಹೇಗೆ ವಿಭಾಗ ಮಾಡಬೇಕು ಎಂಬ ಬಗ್ಗೆ 170(2)(1)ನೇ ವಿಧಿಯಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ಚುನಾವಣಾ ಕ್ಷೇತ್ರದಲ್ಲಿ ಇರುವ ಜನಸಂಖ್ಯೆ ಮತ್ತು ಆ ಕ್ಷೇತ್ರದಲ್ಲಿ ಮೀಸಲು ಇರುವ ಸ್ಥಾನಗಳ ಸಂಖ್ಯೆ ಇವೆರಡರ ನಡುವಿನ ಅನುಪಾತವು ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಾದ್ಯಂತ ಒಂದೇ ರೀತಿ ಆಗಿರಬೇಕು. ಹಿಂದಿನ ಜನಗಣತಿಗೆ ಅನುಗುಣವಾಗಿ ಜನಸಂಖ್ಯೆಯ ಮಾನದಂಡವನ್ನು ಇಟ್ಟು ಕೊಳ್ಳಬೇಕು. (10 ವರ್ಷಕ್ಕೊಮ್ಮೆ ನಡೆಯುವ) ಜನಗಣತಿಯು ಪೂರ್ಣಗೊಂಡ ಮೇಲೆ, ಪ್ರತಿಯೊಂದು ರಾಜ್ಯದ ವಿಧಾನ­ಸಭೆಯಲ್ಲಿನ ಒಟ್ಟು ಸ್ಥಾನಗಳ ಆಧಾರದ ಮೇಲೆ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಿರುವ ಬಗ್ಗೆ ಸಂಸತ್ತು ನಿರ್ಧರಿಸಬೇಕು.
  • ಈ ಸಂಬಂಧ ಒಂದು ಪ್ರಾಧಿಕಾರವನ್ನು ರೂಪಿಸಬೇಕು. ಆ ಪ್ರಕ್ರಿಯೆ ಮುಗಿಯುವವರೇಗೆ ಅಸ್ತಿತ್ವದಲ್ಲಿ ಇರುವ ವಿಧಾನಸಭೆಯು ಕಾರ್ಯ ಮುಂದುವರಿಸಬೇಕು. ಆ ನಂತರವಷ್ಟೇ ವಿಧಾನಸಭೆಯ ವಿಸರ್ಜನೆ ಮಾಡಬೇಕು. ರಾಷ್ಟ್ರಪತಿಯವರ ಅನುಮತಿಯ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು. ಈ ಮಧ್ಯೆ, ಚುನಾವಣೆ ಏನಾದರೂ ನಡೆದರೆ, ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆಯೇ ನಡೆಯಬೇಕು.

ವಿಧಾನಸಭೆ ಸಭಾದ್ಯೆಕ್ಶರ ಅವಧಿ ಏಷ್ಟು

ವಿಧಾನ ಸಭೆಯ ಸದಸ್ಯನಾಗಲು ಇಚ್ಛಿಸುವ ವ್ಯಕ್ತಿಯು ಚುನಾವಣೆಯಲ್ಲಿ ಯಾವುದಾದರೂ ಒಂದು ಪಕ್ಷದಿಂದ ಅಥವಾ ಸ್ವತಂತ್ರ್ಯವಾಗಿ ಸ್ಫರ್ದಿಸಬೇಕು. ಸ್ಫರ್ದಿಸುವ ಮುನ್ನ ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  • ಭಾರತೀಯ ನಾಗರೀಕನಾಗಿರಬೇಕು.
  • ೨೫ ವರ್ಷಗಳನ್ನು ಪೂರೈಸಿರಬೇಕು.
  • ಯಾವುದೇ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರಬಾರದು.
  • ವಂಚನೆ ಇನ್ನಿತರ ಅಪರಾಧಗಳಲ್ಲಿ ಭಾಗಿಯಾಗಿರಬಾರದು.
  • ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಬಾರದು.

ವಿಧಾನ ಸಭೆಯ ಕಾರ್ಯ ಕಲಾಪಗಳು, ಅಧಿವೇಶನಗಳು ವಿಧಾನ ಸಭಾಧ್ಯಕ್ಷ(ಸ್ಪೀಕರ್) ರ ನೇತೃತ್ವದಲ್ಲಿ ನಡೆಯುತ್ತವೆ. ಸಭಾಧ್ಯಕ್ಷರ ಗೈರುಹಾಜರಿ ಸಂಧರ್ಭಗಳಲ್ಲಿ ಉಪಸಭಾಧ್ಯಕ್ಷರು ವಿಧಾನ ಸಭೆಯನ್ನು ಮುನ್ನಡೆಸುತ್ತಾರೆ. ಸ್ಪೀಕರ್ ರವರು ಶೂನ್ಯ ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸಲಿದ್ದು ಸಭೆಯಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು, ಮಾತು ಕತೆಗಳನ್ನು ನಿಭಾಯಿಸುತ್ತಾರೆ.

ವಿಧಾನ ಸಭೆಯು ವಿಧಾನ ಪರಿಷತ್ ನಷ್ಟೇ ಸಾಂವಿಧಾನಿಕ ಶಕ್ತಿಯುಳ್ಳದ್ದಾಗಿರುತ್ತದೆ. ಇದಕ್ಕೆ ಮನಿ ಬಿಲ್ ಹೊರತಾಗಿರುತ್ತದೆ. ಮನಿ ಬಿಲ್ ವಿಧಾನಪರಿಷತ್ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಆ ವಿಚಾರದಲ್ಲಿ ವಿಧಾನಸಭೆಯೇ ಮುಖ್ಯವಾಗಿರುತ್ತದೆ.

ವಿಧಾನಸಭೆಗಿರುವ ವಿಶೇಷ ಅಧಿಕಾರಗಳು

  • ಶಾಸನೀಯ ಅಧಿಕಾರ-

ರಾಜ್ಯ ಪಟ್ಟಿ ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯದ ಮೇಲೆ ಶಾಸನ ಮಾಡುವ ಅಧಿಕಾರ ವಿಧಾನಸಭೆಗೆ ಇದೆ, ಶಾಸನ ಕಾಯ್ದೆ ಆಗಬೇಕಾದರೆ ರಾಜ್ಯದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಸಹಿ ಪಡೆಯಬೇಕು. ರಾಜ್ಯಪಾಲರು ಕೆಲವು ಮಸೂದೆಗಳನ್ನು ಒಪ್ಪಿಕೊಳ್ಳ ಬಹುದು ಅಥವಾ ರಾಷ್ಟ್ರಪತಿಗಳ ಒಪ್ಪಿಗೆ ಕಾಯ್ದಿರಿಸಬಹುದು.

ಹಣಕಾಸಿನ ಅಧಿಕಾರ- ಹಣಕಾಸಿನ ವಿಷಯದಲ್ಲಿ ಸಂಬಂಧಿಸಿದಂತೆ ವಿಧಾನ ಸಭೆಗೆ ಹೆಚ್ಚಿನ ಅಧಿಕಾರ ಲಭಿಸಿದೆ ಹಣಕಾಸಿನ ಮಸೂದೆಯನ್ನು ವಿಧಾನಸಭೆಯಲ್ಲಿ ನಡೆಸಿದ ಮಸೂದೆಯನ್ನು ವಿಧಾನ ಪರಿಷತ್ಗೆ ಕಳಿಸಲಾಗುತ್ತದೆ ವಿಧಾನ ಪರಿಷತ್ ಮಸೂದೆಯನ್ನು ತಿರಸ್ಕರಿಸಲು ಅಧಿಕಾರವಿರುವುದಿಲ್ಲ ಕೇವಲ ಸೂಚನೆಗಳನ್ನು ನೀಡಬಹುದು ಸಲಹೆ ಸೂಚನೆಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವಿದೆ

ಭಾರತದ ವಿಧಾನಸಭೆಗಳು

__________________________________________

ಲೋಕಸಭೆ
ಜನರ ಸದನ
ಹದಿನೇಳನೇ ಲೋಕಸಭೆ
Emblem of India
Type
Type
ಕೆಳಮನೆ
 of the ಭಾರತದ ಸಂಸತ್
Term limits5 ವರ್ಷಗಳು

Leadership
ಸ್ಪೀಕರ್ಓಂ ಬಿರ್ಲಾ, ಭಾರತೀಯ ಜನತಾ ಪಕ್ಷ
since 19 ಜೂನ್ 2019
ಡೆಪ್ಯುಟಿ ಸ್ಪೀಕರ್TBA
ಕಾರ್ಯದರ್ಶಿಸ್ನೇಹಲತಾ ಶ್ರೀವಾಸ್ತವ
since 1 ಡಿಸೆಂಬರ್ 2017
ಆಡಳಿತ ಪಕ್ಷದ ನಾಯಕನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷ
since 26 ಮೇ 2014
ವಿರೋಧ ಪಕ್ಷದ ನಾಯಕಖಾಲಿ
since 16 ಮೇ 2014





__________________________________________

Friday, 5 March 2021

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

_________________________________________
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಒಕ್ಕೂಟ ಪ್ರಾಂತ್ಯಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.

Quick Facts: ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವರ್ಗ ...
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು


ವರ್ಗFederated states
ಸ್ಥಳRepublic of India
ಸಂಖ್ಯೆ28 States
8 Union territories
ಜನಸಂಖ್ಯೆStates: Sikkim - 610,577 (lowest); ಉತ್ತರ ಪ್ರದೇಶ - 199,812,341(highest)
Union Territories: Lakshadweep - 64,473 (lowest); Delhi - 16,787,941 (highest)
ಪ್ರದೇಶಗಳುStates: 3,702 km2 (1,429 sq mi) Goa – 342,269 km2 (132,151 sq mi) Rajasthan
Union territories: 32 km2 (12 sq mi) Lakshadweep – 59,146 km2 (22,836 sq mi) Ladakh
ಸರಕಾರState governments, Union government (Union territories)
 ಉಪವಿಭಾಗಗಳುDistricts, Divisions

ರಾಜ್ಯಗಳು

  1. ಆಂಧ್ರ ಪ್ರದೇಶ
  2. ಅರುಣಾಚಲ ಪ್ರದೇಶ
  3. ಅಸ್ಸಾಂ
  4. ಬಿಹಾರ
  5. ಛತ್ತೀಸ್‌ಘಡ್
  6. ಗೋವ
  7. ಗುಜರಾತ್
  8. ಹರಿಯಾಣ
  9. ಹಿಮಾಚಲ ಪ್ರದೇಶ
  10. ಜಾರ್ಖಂಡ್
  11. ಕರ್ನಾಟಕ
  12. ಕೇರಳ
  13. ಮಧ್ಯ ಪ್ರದೇಶ
  14. ಮಹಾರಾಷ್ಟ್ರ
  1. ಮಣಿಪುರ
  2. ಮೇಘಾಲಯ
  3. ಮಿಝೋರಂ
  4. ನಾಗಲ್ಯಂಡ್
  5. ಒಡಿಶಾ
  6. ಪಂಜಾಬ್
  7. ರಾಜಸ್ಥಾನ
  8. ಸಿಕ್ಕಿಂ
  9. ತಮಿಳುನಾಡು
  10. ತೆಲಂಗಾಣ
  11. ತ್ರಿಪುರ
  12. ಉತ್ತರಾಖಂಡ
  13. ಉತ್ತರ ಪ್ರದೇಶ
  14. ಪಶ್ಚಿಮ ಬಂಗಾಳ

ರಾಜ್ಯಗಳು ಹಾಗು ಪ್ರಾಂತ್ಯಗಳ ಪಟ್ಟಿ

More information: ಕ್ರ.ಸ., ಹೆಸರು ...
ಭಾರತದ ರಾಜ್ಯಗಳು
ಕ್ರ.ಸ.ಹೆಸರುಜನಸಂಖ್ಯೆರಾಜಧಾನಿಅತಿ ದೊಡ್ಡ ನಗರ
(ರಾಜಧಾನಿ ಅಲದಿದ್ದಲ್ಲಿ)
೧ಆಂಧ್ರ ಪ್ರದೇಶ೪೯,೫೦೬,೭೯೯ಹೈದರಾಬಾದ್‌
೨ಅರುಣಾಚಲ ಪ್ರದೇಶ೧,೦೯೧,೧೨೦ಇಟಾನಗರ
೩ಅಸ್ಸಾಂ೨೬,೬೫೫,೫೨೮ದಿಸ್ಪುರ್ಗುವಾಹಟಿ
೪ಬಿಹಾರ೮೨,೯೯೮,೫೦೯ಪಾಟ್ನಾ
೫ಛತ್ತೀಸ್‌ಘರ್‌೨೦,೭೯೫,೯೫೬ರಾಯ್ಪುರ್
೬ಗೋವಾ೧೪೦೦೦೦೦ಪಣಜಿವಾಸ್ಕೋ ಡ ಗಾಮ
೭ಗುಜರಾತ್‌‌೫೦,೬೭೧,೦೧೭ಗಾಂಧಿನಗರ್‌ಅಹ್ಮದಾಬಾದ್
೮ಹರಿಯಾಣ೨೧,೦೮೨,೯೮೯ಚಂಡೀಗಡ (ಹಂಚಿಕೊಂಡ)ಫರಿದಾಬಾದ್‌
೯ಹಿಮಾಚಲ ಪ್ರದೇಶ೬,೦೭೭,೯೦೦ಶಿಮ್ಲಾ
೧೦ಜಾರ್ಖಂಡ್‌೨೬,೯೦೯,೪೨೮ರಾಂಚಿಜಮ್ಷೆಡ್‌ಪುರ
೧೧ಕರ್ನಾಟಕ೫೨,೮೫೦,೫೬೨ಬೆಂಗಳೂರುಮೈಸೂರು(ಕೆ.ಆರ್.ನಗರ)
೧೨ಕೇರಳ೩೧,೮೪೧,೩೭೪ತಿರುವನಂತಪುರಂಕೊಚ್ಚಿ
೧೩ಮಧ್ಯ ಪ್ರದೇಶ೬೦,೩೮೫,೧೧೮ಭೋಪಾಲ್‌ಇಂದೋರ್‌
೧೪ಮಹಾರಾಷ್ಟ್ರ೯೬,೭೫೨,೨೪೭ಮುಂಬಯಿ
೧೫ಮಣಿಪುರ೨,೩೮೮,೬೩೪ಇಂಫಾಲ
೧೬ಮೇಘಾಲಯ೨,೩೦೬,೦೬೯ಶಿಲ್ಲಾಂಗ್‌
೧೭ಮಿಝೋರಂ೮೮೮,೫೭೩ಐಝ್ವಾಲ್
೧೮ನಾಗಲ್ಯಾಂಡ್‌೧,೯೮೮,೬೩೬ಕೊಹಿಮಾದಿಮಾಪುರ್
೧೯ಒಡಿಶಾ೩೬,೭೦೬,೯೨೦ಭುವನೇಶ್ವರ
೨೦ಪಂಜಾಬ್‌೨೪,೨೮೯,೨೯೬ಚಂದಿಗರ್ಹ್ (ಹಂಚಿಕೊಂಡ)ಲೂಧಿಯಾನ
೨೧ರಾಜಸ್ಥಾನ೫೬,೪೭೩,೧೨೨ಜೈಪುರ
೨೨ಸಿಕ್ಕಿಂ೫೪೦,೪೯೩ಗ್ಯಾಂಗ್ಟಾಕ್
೨೩ತಮಿಳುನಾಡು೬೬,೩೯೬,೦೦೦ಚೆನ್ನೈ
೨೪ತ್ರಿಪುರ೩,೧೯೯,೨೦೩ಅಗರ್ತಲ
೨೫ಉತ್ತರ ಪ್ರದೇಶ೧೯೦,೮೯೧,೦೦೦ಲಕ್ನೋಕಾನ್ಪುರ್
೨೬ಉತ್ತರಖಂಡ್೮,೪೭೯,೫೬೨ಡೆಹ್ರಾಡೂನ್ (ಮಧ್ಯಂತರ )
೨೭ಪಶ್ಚಿಮ ಬಂಗಾಳ೮೦,೨೨೧,೧೭೧ಕೋಲ್ಕತ್ತಾ
೨೮ತೆಲಂಗಾಣ೩೫,೧೯೩,೯೭೮ಹೈದರಾಬಾದ್

ಕೇಂದ್ರಾಡಳಿತ ಪ್ರದೇಶಗಳು

More information: ಕ್ರ.ಸ., ಹೆಸರು ...

ರಾಷ್ಟ್ರ ರಾಜಧಾನಿ ಕ್ಷೇತ್ರ:

  1. ದೆಹಲಿ
________________________________________
ಸಂಗ್ರಹ ✍️ T. A. ಚಂದ್ರಶೇಖರ



Thursday, 4 March 2021

ಪ್ರಪಂಚದ ಕುರಿತು ಒಂದು ಮಾಹಿತಿ

🔰ಪ್ರಪಂಚದ ಕುರಿತು ಒಂದು ಮಾಹಿತಿ🔰✍✍✍🌷🌷🌷🌷🌷🌷 
🌸🍀🌸🌸🍀🌸🍀🌸🍀🌸
1) ಅತಿದೊಡ್ಡ ಸಮುದ್ರ -.ಚೀನಾ ಸಮುದ್ರ

2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್

3) ಅತಿದೊಡ್ಡ ನದಿ - ಅಮೇಜಾನ್

4) ಅತಿದೊಡ್ಡ ಖಂಡ - ಏಷ್ಯಾ

5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್

6) ಅತಿದೊಡ್ಡ ಮರಭೂಮಿ - ಸಹರಾ

7) ಅತಿದೊಡ್ಡ ದೇಶ - ರಷಿಯಾ

8) ಅತಿದೊಡ್ಡ ಸಸ್ತನಿ - ಬ್ಲೂ ವೇಲ್

9) ಅತಿದೊಡ್ಡ ವೈರಸ್ - TMV (ಟೊಬ್ಯಾಕೊ
ಮೋಜಾಯೀಕ್ ವೈರಸ್

10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ
ಸೀಕೋಯಿ

11) ಅತಿದೊಡ್ಡ ಜೀವಿ ಸಾಮ್ರಾಜ್ಯ - ಪ್ರಾಣಿ
ಸಾಮ್ರಾಜ್ಯ

12) ಅತಿದೊಡ್ಡ ಹೂ - ರೇಫ್ಲೇಶೀಯ ಗಿಯಾಂಟ್

13) ಅತಿದೊಡ್ಡ ಬೀಜ - ಕೋಕೋ ಡಿ ಮೇರ್

14) ಅತಿದೊಡ್ಡ ಅಕ್ಷ ಒ ಶ - 0 - ಅಕ್ಶಾಂಶ

15) ಅತಿದೊಡ್ಡ ಪಕ್ಷಿ - ಆಷ್ಟ್ರಚ್

16) ಅತಿದೊಡ್ಡ ಮುಖಜ ಭೂಮಿ - ಸು ಒ ದರಬನ್ಸ್

17) ಅತಿದೊಡ್ಡ ಗೃಹ - ಗುರು

18) ಅತಿದೊಡ್ಡ ಉಪಗೃಹ - ಗ್ಯಾನಿಮಿಡ್

19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್

20) ಅತಿದೊಡ್ಡ ಜ್ವಾಲಾಮುಖಿ - ಮೌ ಒ ಟ್ ವೇಸುವೀಯಸ್

21) ಅತಿದೊಡ್ಡ ಸಂವಿಧಾನ - ಭಾರತ ಸಂ.

22) ಅತಿದೊಡ್ಡ ಕರಾವಳಿ ರಾಷ್ಟ್ರ - ಕೆನಡಾ

23) ಅತಿದೊಡ್ಡ ವಿಮಾನ ನಿಲ್ದಾಣ - ಕಿಂಗ್ ಖಾಲಿದ್

24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್--
ಗೋರಖ್ಪುರ್

25) ಅತಿದೊಡ್ಡ ಕಾಲುವೆ - ಇಂದಿರಾ ಗಾಂಧಿ ಕಾಲುವೆ

26) ಅತಿ ದೊಡ್ಡ ಡ್ಯಾಮ್ - ಹೂವರ್

27) ಅತಿ ದೊಡ್ಡ ಸರಿಸೃಪ - ಕ್ರೊಕೊಡೈಲ್

28) ಅತಿ ದೊಡ್ಡ ಕೊಲ್ಲಿ - ಹಡ್ಸನ್ ಕೊಲ್ಲಿ

29) ಅತಿ ದೊಡ್ಡ ಖಾರಿ - ಮೆಕ್ಸಿಕೋ

30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ -
ಹವಾಯಿ ದ್ವೀಪದ ಹೋನಲುಲೂ

31) ಅತಿ ದೊಡ್ಡ ಕಂದರ - ಮರಿಯಾನೋ ಕಂದರ

32) ಅತಿ ದೊಡ್ಡ ಸುರಂಗ ಮಾರ್ಗ

33) ಅತಿ ದೊಡ್ಡ ನದಿ ದ್ವೀಪ - ಮಜೂಲಿ

34) ಅತಿ ದೊಡ್ಡ ಪರ್ವತ ಶ್ರೇಣಿ - ಹಿಮಾಲಯ ಪ. ಶ್ರೇಣಿ

35) ಅತಿ ದೊಡ್ಡ ನಾಗರೀಕತೆ - ಸಿಂಧು

36) ಅತಿ ದೊಡ್ಡ ಧರ್ಮ - ಕ್ರಿಷ್ಚಿಯನ್

37) ಅತಿದೊಡ್ಡ ಭಾಷೆ - ಮ್ಯಾಡ್ರಿನ್

ಪ್ರಮುಖ ಕ್ರಾಂತಿಗಳು


🍀🍀🍀🍀🍀🍀🍀🍀🍀🍀🍀
💠 *ಪ್ರಮುಖ ಕ್ರಾಂತಿಗಳು*
====================
🔸 "ಹಸಿರು ಕ್ರಾಂತಿ"= *ಆಹಾರ ಧಾನ್ಯ ಉತ್ಪಾದನೆ*

🔹 "ಕೆಂಪು ಕ್ರಾಂತಿ"= *ಟೊಮೇಟೊ. ಮಾಂಸ*

🔸 "ಗೋಲ್ಡನ್ ಫೈಬರ್ ಕ್ರಾಂತಿ"= *ಸೆಣಬು*

🔹 "ರಜತ ಕ್ರಾಂತಿ"= *ಮೊಟ್ಟೆ ಉತ್ಪಾದನೆ*

🔸 "ಕಂದು ಕ್ರಾಂತಿ"= *ಇಂಧನ, ಚರ್ಮ*

🔹 "ಪಿಂಕ್ ಕ್ರಾಂತಿ"= *ಈರುಳ್ಳಿ. ಔಷಧೀಯ ಸಸ್ಯಗಳು*

🔸 "ಸುವರ್ಣ ಕ್ರಾಂತಿ"= *ತರಕಾರಿ, ಹಣ್ಣು.ಹೂ*

🔹 "ದುಂಡು"= *ಆಲೂಗಡ್ಡೆ*

🔸 "ಶ್ವೇತ ಕ್ರಾಂತಿ"= *ಕ್ಷೀರೋತ್ಪಾದನೆ*

🔹 "ಬೂದು ಕ್ರಾಂತಿ"= *ರಸಗೊಬ್ಬರ*

🔸 "ಹಳದಿ ಕ್ರಾಂತಿ"= *ಖ್ಯಾದ್ಯ ತೈಲ*( ಎಣ್ಣೆ ಕಾಳುಗಳು)

🔹 "ಕಪ್ಪು ಕ್ರಾಂತಿ"= *ಪೆಟ್ರೋಲಿಯಂ ಉತ್ಪನ್ನಗಳು*
----------------------------------------


Tuesday, 2 March 2021

ಖಂಡಗಳು

ಖಂಡ

ADD ARTICLE DESCRIPTION


ಖಂಡಗಳು - ವಿಶ್ವದಲ್ಲಿನ ಎಲ್ಲಾ ದೇಶಗಳನ್ನು ಪ್ರಾಂತೀಯವಾಗಿ ವಿಂಗಡಿಸಿರುವ ಭಾಗಗಳು. ಲ್ಯಾಟಿನ್ ಭಾಷೆಯ 'ಕಾಂಟಿನಿಯರ್'(ಎಲ್ಲವನ್ನು ಒಟ್ಟಿಗೆ ಹಿಡಿದಿಡು) (continere) ಪದದಿಂದ ಆಂಗ್ಲದ 'ಕಾಂಟಿನೆಂಟ್'(continent) ಪದವು ರೂಪಗೊಂಡಿದ್ದು ಒಂದು ವಿಶಾಲ ಭೂಮಿ ಪ್ರದೇಶದ ಅರ್ಥ ಕೊಡುತ್ತದೆ. ಕನ್ನಡದಲ್ಲಿ ಖಂಡ ಎನ್ನುವ ಪದ ಬಳಕೆಯಲ್ಲಿದೆ.

ವಿವಿಧ ಖಂಡ ವ್ಯವಸ್ಥೆಗಳು

  • ೭ ಖಂಡಗಳು
  1. ಏಷ್ಯಾ - ಆಫ್ರಿಕ - ಆಸ್ಟ್ರೇಲಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
  2. ಏಷ್ಯಾ - ಆಫ್ರಿಕ - ಓಶನಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
  • ೬ ಖಂಡಗಳು
  1. ಆಫ್ರಿಕ - ಅಂಟಾರ್ಟಿಕಾ - ಓಶನಿಯಾ - ಯುರೇಶಿಯಾ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
  2. ಆಫ್ರಿಕ - ಅಮೆರಿಕ - ಅಂಟಾರ್ಟಿಕಾ - ಏಷ್ಯಾ - ಓಶನಿಯಾ - ಯುರೋಪ್
  • ೫ ಖಂಡಗಳು
  1. ಆಫ್ರಿಕ - ಅಮೆರಿಕ - ಓಶನಿಯಾ - ಅಂಟಾರ್ಟಿಕಾ - ಯುರೇಶಿಯಾ
  2. ಆಫ್ರಿಕ - ಅಮೆರಿಕ - ಓಶನಿಯಾ - ಯುರೋಪ್ - ಏಷ್ಯಾ
  • ೪ ಖಂಡಗಳು
  1. ಅಮೆರಿಕ - ಓಶನಿಯಾ - ಅಂಟಾರ್ಟಿಕಾ - ಯುರಾಫ್ರಿಶಿಯಾ

ಇವುಗಳನ್ನೂ ನೋಡಿ

Sunday, 28 February 2021

ಪ್ರವೇಶ ಪರೀಕ್ಷೆಗಳು‌ ಮತ್ತು ಫಲಿತಾಂಶಗಳು

ಪ್ರವೇಶ ಪರೀಕ್ಷೆಗಳು‌ ಮತ್ತು ಫಲಿತಾಂಶಗಳು


1. KREIS 2020-21 ENTRANCE EXAM

2. ಜವಹಾರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2020 ರ ಬಳ್ಳಾರಿ ಜಿಲ್ಲೆಯ ಫಲಿತಾಂಶ

3. JNV Bagalakot result 2020-21

4. JNV ALL DISTRICTS RESULTS 2020-21

5.KREIS 2020-21 ನೇ ಸಾಲಿಗೆ ದಾಖಲಾತಿ ಅಧಿಸೂಚನೆ

6.KREIS ದಾಖಲಾತಿ 2020-21

7.JNV Application

8.KREIS Application

9. KREIS ಅಧಿಸೂಚನೆ

10. 6ನೇ ತರಗತಿಗೆ ಮೊರಾರ್ಜಿ ಕಿತ್ತೂರು ರಾಣಿ ಚೆನ್ನಮ್ಮ‌ ಮುಂತಾದ ವಸತಿ ಶಾಲೆಗಳ ದಾಖಲಾತಿ ಅರ್ಜಿ ನಮೂನೆ -2019

11.*ವಸತಿ ಶಾಲೆಗಳ 6 ನೇತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿಸಲ್ಲಿಸಲು ದಿನಾಂಕ05/09/20 ವರೆಗೆ ಅವಧಿ ವಿಸ್ತರಿಸಿದ ಬಗ್ಗೆ

12.ಬಿಜಾಪುರ ಸೈನಿಕ‌ ಶಾಲೆಯ ದಾಖಲಾತಿ ಅರ್ಜಿ‌ ನಮೂನೆ

13.JNV old question paper

14.KREIS Admission 2020 kalaburgi

15.2020-21ನೇ ಸಾಲಿನ‌ ಆದರ್ಶ ವಿದ್ಯಾಲಯ selection list cut off list

16.2021-22ನೇ ಸಾಲಿಗೆ ನವೋದಯ ವಿದ್ಯಾಲಯ ಪ್ರವೇಶ ಪ್ರಕಟಣೆ

17.2020 ನೇ ಸಾಲಿಗೆ ಸೈನಿಕ ಶಾಲಾ ಪ್ರವೇಶಾತಿ ಕುರಿತು

18.2020-21ನೇ ಸಾಲಿಗೆ ಆದರ್ಶ ವಿದ್ಯಾಲಯ 6ನೇ ತರಗತಿ ದಾಖಲಾತಿಯ ಎರಡನೇ ಸುತ್ತಿನ ದಿನಾಂಕವನ್ನು ಮುಂದೂಡಿರುವ ಬಗ್ಗೆ

19.NTSE ಮತ್ತು NMMS ಪರೀಕ್ಷಾ ಕೈಪಿಡಿ

20.JNV application format

21.ಸೈನಿಕ‌ ಶಾಲೆ‌ ವಿಜಯಪುರ /ಕೊಡಗು ಪ್ರವೇಶ ಪರೀಕ್ಷೆ 2021

22.ಸೈನಿಕ ಶಾಲೆ ಪ್ರವೇಶ ಪರೀಕ್ಷೆ -2021 ಆಯ್ಕೆಗೆ ಅರ್ಹತಾ ಮಾನದಂಡಗಳು

23.ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2021-22ಕ್ಕೆ 6ನೇ ತರಗತಿಯ ವಿದ್ಯಾರ್ಥಿಗಳ ಅರ್ಜಿಗಳನ್ನು online ಮೂಲಕ (ಎಲ್ಲಾ ಶಾಲೆಯವರು) ಸಲ್ಲಿಸುವ ಕುರಿತು ಮಾನ್ಯ ಅಪರ ಆಯುಕ್ತರು‌ ಧಾರವಾಡ ಇವರ ಆದೇಶ

24.2021-2022ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಪ್ರವೇಶ ಪ್ರಕಟಣೆ

25. ಸೈನಿಕ ಶಾಲೆ ಪ್ರವೇಶಕ್ಕಾಗಿ online ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ ಕುರಿತು‌

26. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ 2020 21ನೇ ಶೈಕ್ಷಣಿಕ ಸಾಲಿನ 7 8 ಮತ್ತು9ನೇ ತರಗತಿಗಳ ಖಾಲಿ ಉಳಿದ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ  

27.2021-22 ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಭೆ ನಡವಳಿ

28.2020 ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆಸಲಾಗುವ 6ನೇ ತರಗತಿಯ ಪ್ರವೇಶ ಪರೀಕ್ಷೆಯ ಕುರಿತು

29. ಕರ್ನಾಟಕ ವಸತಿ ಸಂಘಗಳ 2020ನೇ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ

30.2021-22 ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅನುಸರಿಸಬೇಕಾದ ಸೂಚನೆಗಳು

31.2021-22 ನೇ ಸಾಲಿಗೆ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

32.2021-22 ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ದಾಖಲಾತಿಯ ಮಾರ್ಗಸೂಚಿ

33. ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ 2020 ರ ಮಾದರಿ ಪ್ರಶ್ನೆ ಪತ್ರಿಕೆಗಳು

34.2021-22 ನೇ ಸಾಲಿನ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ

35.KREIS model question papers 6th entrance exam

36. ದಿನಾಂಕ 24-02-2021 ರಂದು ನಡೆದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ

37. ದಿನಾಂಕ 24- 2- 2021ರಂದು ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಸಂಭಾವ್ಯ ಕೀ ಉತ್ತರಗಳು

38. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಕೀ ಉತ್ತರಗಳು


ಸ್ಪರ್ಧಾತ್ಮಕ‌ ಪರೀಕ್ಷೆಗಳ‌ ಸಂಪನ್ಮೂಲಗಳು

ಸ್ಪರ್ಧಾತ್ಮಕ‌ ಪರೀಕ್ಷೆಗಳ‌ ಸಂಪನ್ಮೂಲಗಳು


1.FDA SDA ಸಂಪನ್ಮೂಲ 

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ


1.KCSR ನಿಯಮಗಳನ್ವಯ ಕಡ್ಡಾಯವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡುವ ಬಗ್ಗೆ

ಮರಭೂಮಿಗಳು

ಮರುಭೂಮಿ

ADD ARTICLE DESCRIPTION


ಮರುಭೂಮಿ:ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ ಮಿಲ್ಲಿಮೀಟರ್ ಗಿಂತ ಕಡಿಮೆ) ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ.

ಸೌದಿ ಅರೇಬಿಯದ ಮರುಭೂಮಿಯ ಒಂದು ನೋಟ
ಅಟಕಾಮಾ ಮರುಭೂಮಿ

ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ. ಮರುಭೂಮಿಗಳು ಸಾಮಾನ್ಯವಾಗಿ ಮೂರು ಬಗೆಯವು.

ಉಷ್ಣವಲಯದ ಮರುಭೂಮಿಗಳಲ್ಲಿ ತಾಪಮಾನವು ೫೮ ಡಿಗ್ರಿ (ಸೆಂ)ವರೆಗೆ ತಲುಪುತ್ತದೆ.

  • ಉನ್ನತ ಪ್ರದೇಶಗಳ ಮರುಭೂಮಿಗಳು ( ಧ್ರುವ / ಶೀತ)
    • ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಪ್ರದೇಶಗಳು
    • ಲಢಾಕ್ ನ ಕೆಲಭಾಗಗಳು

ಮರುಭೂಮಿಯ ಸಸ್ಯಗಳು

೨೫ ಸೆಮೀಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳು ಮರುಭೂಮಿಯ ಸಸ್ಯಗಳು. ಇದಕ್ಕೆ ಇನ್ನೊಂದು ಹೆಸರು ಕ್ಸಿರೊಫೈಟ್ಸ್. ಬಾಹ್ಯ ಹಾಗೂ ಒಳರಚನೆಯಲ್ಲಿ ಅನೇಕ ಹೊಂದಾಣಿಕೆ, ಮಾರ್ಪಾಟುಗಳು ಕಂಡುಬರುತ್ತವೆ. ಅಧಿಕ ತಾಪಮಾನವನ್ನು ತಡೆಯಲು ಇವುಗಳು ಅನೇಕ ಬಾಹ್ಯ ಹಾಗೂ ಆಂತರಿಕ ಬದಲಾವಣೆಗಳನ್ನು ಹೊಂದಿರುತ್ತವೆ. ಕಳ್ಳಿ ಗಿಡಗಳಂತಹ ಗಿಡಗಳಲ್ಲಿ ನೀರು ಇಂಗುವಿಕೆಯನ್ನು ಕಡಿಮೆಮಾಡಲು ಬಹಳ ಕಡಿಮೆ ಎಲೆಗಳಿರುತ್ತವೆ. ಫ್ರೀಟೊಫೈಟ್ಸ್ ತಮ್ಮ ಅತಿಯಾದ ಉದ್ದ ಬೇರುಗಳಿಂದ ಬಹಳ ಕೆಳ ಮಟ್ಟಕ್ಕೆ ತಲುಪಿ ನೀರನ್ನು ಎಳೆದುಕೊಳ್ಳುವ ಸಾಮರ್ಥ್ಯವಿರುತ್ತದೆ.  ಬಹಳ ವರ್ಷಗಳ ಕಾಲಾವಧಿಯಲ್ಲಿ ಜೀವಿಸುವ ಗಿಡಗಳಿಗೆ ರಸಹೀನ ಬಹುವಾರ್ಷಿಕ ಸಸ್ಯಗಳೆಂದು ಕರೆಯಲಾಗಿದೆ. ಇವು ಶುಷ್ಕವಾಗಿರುವ ಮರುಭೂಮಿಯ ಸಸ್ಯಗಳು. ಇವುಗಳಿಗೆ ಮಾಂಸಲದೇಹವಿಲ್ಲಿ. ಇವು ನೀರನ್ನು ದೇಹದಲ್ಲಿ ಶೇಖರಿಸದೆಯೇ ನೇರವಾಗಿ ನೀರಿನ ಆಭಾವವನ್ನು ಎದುರಿಸಿ, ಇತರ ವಿಧಾನಗಳಿಂದ ಹೊಂದಾಣಿಕೆ ಮಾಡಿಕೊಳ್ಳುತ್ತವೆ.

ವಿವಿಧ ಪಾಪಸ್ ಕಳ್ಳಿಗಿಡಗಳು

ಒಟ್ಟಿನಲ್ಲಿ ಮರುಭೂಮಿ ಸಸ್ಯಗಳ ನೂರಾರು ಹೊಂದಾಣಿಕೆಗಳಲ್ಲಿ ಕೆಲವು ಹೀಗಿವೆ: ರಸಭರಿತ ಕಾಂಡ, ಎಲೆ (ಉದಾ; ಕಳ್ಳಿಗಿಡ, ಅಗೇವ್) ; ಎಲೆಗಳಿಲ್ಲದ ಮುಳ್ಳುಗಳಿಂದಾವೃತ ದೇಹ (ಉದಾ; ಕಳ್ಳಿಗಿಡ) ; ಹಸುರು ಕಾಂಡ (ಕ್ಯಾಸ್ಪರಿನಾ, ಮೊಹಲಂಬಿಕಿಯಾ, ಕಳ್ಳಿ ಇತ್ಯಾದಿ) ಮೇಣ (ವ್ಯಾಕ್ಸ್) ದಿಂದಾಗಿ ಹೊಳೆಯುವ ಹೊರಮೈ (ಅಗೇವ್) , ನೀರನ್ನು ಹುಡುಕಿಕೊಂಡು ಆಳಕ್ಕೆ ಇಳಿಯುವ ಬೇರು (ಅಲ್ಹಗೀ), ಅತಿ ಉಷ್ಣ ಹಾಗೂ ಬಿಸಿಲಿನ ಪರಿಸ್ಥಿತಿಯಲ್ಲಿ ಎಲೆಗಳನ್ನು ಸುರಳಿಯಂತೆ ಸುತ್ತಿಕೊಳ್ಳುವ ಅಥವಾ ಉದ್ದಕ‍್ಕೆ ಮಡಚಿಕೊಳ್ಳುವ ಎಲೆಗಳು (ಮರುಭೂಮಿಯ ಹುಲ್ಲುಗಳು), ಬಾಷ್ಪವಿಸರ್ಜನೆಯನ್ನು ಕಡಿಮೆಗೊಳಿಸಲು ಎಲೆಗಳಲ್ಲಿ ಕಡಿಮೆ ಪತ್ರರಂಧ್ರಗಳು, ಇತ್ಯಾದಿ.

ಉದಾಹರಣೆಗಳು

ಎಲಿಫ್ಯಾಂಟ್ ಮರ- ಇದು ಅತಿ ಅಪರೂಪದ ಸಸ್ಯ. ಯು.ಎಸ್.ಎ ದೇಶದಲ್ಲಿ ಬೆಳೆಯುತ್ತದೆ. ಮರದ ಕಾಂಡ ಬಹಳ ದಪ್ಪವಾಗಿದ್ದು ನೀರನ್ನು ಹಿಡಿದುಕೊಳ್ಳುವ ಶಕ್ತಿಯಿದೆ. ಇದರ ಆಕಾರ ಚಿಕ್ಕದಾಗಿದ್ದು ಇದರ ರೆಂಬೆಗಳು ಕಾಂಡಕ್ಕಿಂತ ಚಿಕ್ಕದಾಗಿದೆ. ಇದು ತನ್ನ ಬುಡದಲ್ಲಿ ಹಾಗೂ ಕಾಂಡದಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಮೊಗ್ಗು ಸಣ್ಣ ಹಾಗೂ ಹಳದಿ ವೃತ್ತಾಕಾರದಲ್ಲಿದ್ದು ಅದು ಅರಳಿದ ನಂತರ ಬಿಳಿ ಹಾಗೂ ನಕ್ಷತ್ರಾಕಾರವನ್ನು ಹೊಂದಿರುತ್ತದೆ. ಈ ಗಿಡಗಳ ಎಲ್ಲಾ ತಳಿಗಳು ಬರಗಾಲ ಹಾಗೂ ಅತ್ಯಂತ ಚಳಿಗಾಲದಲ್ಲಿ ಮಾತ್ರ ಎಲೆಗಳನ್ನು ಹೊಂದಿರುವುದಿಲ್ಲ.

ಆರ್ಗನ್ ಪೈಪ್ ಕಳ್ಳಿಗಿಡ- ಈ ಗಿಡದ ಎಲ್ಲಾ ತಳಿಗಳನ್ನು ಮೆಕ್ಸಿಕೊ ಹಾಗೂ ಯು.ಎಸ್.ಎ ನ ಮರುಭೂಮಿಯಲ್ಲಿ ನೋಡಬಹುದು. ಈ ಕಾಂಡವು ನೇರ ಹಾಗೂ ತೆಳುವಾದ ಕೊಂಬೆಗಳನ್ನು ಹೊಂದಿದೆ. ಇದು ಪೂರ್ಣವಾಗಿ ಬೆಳೆಯಲು ಸುಮಾರು ೧೫೦ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರದಿಂದ ಬೆಳೆಯುವ ಹಣ್ಣುಗಳು ಕಲ್ಲಂಗಡಿಗಿಂತಲೂ ಸಿಹಿಯಾಗಿರುವುದು. ಈ ಹಣ್ಣುಗಳನ್ನು ಅಮೇರಿಕಾದವರು ತಿನ್ನಲು ಹಾಗೂ ಇದನ್ನು ‍‍‌‌‍‍‍‍‍‍‌ಔಷಧಿಯನ್ನಾಗಿ ಬಳಸುವರು.

ಡೆಸರ್ಟ್ ಸೇಜ್- ಇದರ ಎತ್ತರ ೨-೩ ಮೀಟರ್. ಇದರ ಹೂಗಳು ನೀಲಿ ಬಣ್ಣವನ್ನು ಹೊಂದಿದೆ. ಇದರ ಮುಖ್ಯ ಲಕ್ಷಣವೇನೆಂದರೆ ಇದು ಪೂರ್ತಿಯಾಗಿ ಬೆಳೆದ ನಂತರ ಇದಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಔಷಧಿಯ ಗುಣಗಳೂ ಕೂಡ ಇವೆ. ಇದರ ಕಾಂಡ ಹಾಗೂ ಎಲೆಗಳನ್ನು ಕಾಡಿನ ಜನರು ನೆಗಡಿಗಾಗಿ ಔಷಧಿಯನ್ನಾಗಿ ಬಳಸಿಕೊಂಡರು. ಇದನ್ನು ತಲೆನೋವು, ಹೊಟ್ಟೆನೋವು, ಜ್ವರ, ಹಾಗೂ ಇನ್ನಿತರ ಕಣ್ಣು ನೋವಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.

ಡೆಸರ್ಟ್ ಮ್ಯಾರಿಗೋಲ್ಡ್- ಇವು ಆಸ್ಟರ್ ಕುಟುಂಬಕ್ಕೆ ಸೇರಿಸಲಾಗಿದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾಗದ ಯು.ಎಸ್.ಎ ಹಾಗೂ ಮೆಕ್ಸಿಕೊ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ವಾರ್ಷಿಕ ಹಾಗೂ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯಗಳಾಗಿದ್ದು ಇವು ಸುಮಾರು ೧೦ ರಿಂದ ೩೦ ಅಂಗುಲ ಎತ್ತರ ಬೆಳೆಯುತ್ತದೆ. ಇದರ ಹೂಗಳು ಹಳದಿ ಬಣ್ಣ ಇರುವುದರಿಂದ ಇವುಗಳನ್ನು ಮ್ಯಾರಿಗೋಲ್ಡ್ ಎನ್ನಲಾಗುತ್ತದೆ. ಈ ಹೂಗಳು ಬಹಳ ವಿಷಕಾರಿಕ. ಈ ಸಸ್ಯಗಳ ಸೇವನೆಯಿಂದಾಗಿ ಬಹಳ ಕುರಿಗಳು ಸಾವನಪ್ಪಿವೆ.

ಡೆಸರ್ಟ್ ಲಿಲ್ಲಿ- ಇದರ ಇನ್ನೊಂದು ಹೆಸರು ಹೆಸ್ಪರೋಕ್ಯಾಲಿಸ್. ಇದನ್ನು ಉತ್ತರ ಅಮೇರಿಕಾ, ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಹಾಗೂ ಆರಿಜೋನದ ಮರುಭೂಮೆಯಲ್ಲಿ ಕಾಣಬಹುದು. ಇದರ ಎಲೆಗಳು ಸುಮಾರು ಒಂದು ಅಂಗುಲದಷ್ಟು ಅಗಲವಿದ್ದು ಇನ್ನೂ ೮-೨೦ ಅಂಗುಲದಷ್ಟು ಅಗಲ ಬೆಳೆಯಬಹುದು. ಇದಕ್ಕೆ ಒಂದು ಆಳದ ಗಡ್ಡೆ ಇದ್ದು ಆ ಗಡ್ಡೆಯನ್ನು ಆಹಾರವನ್ನಾಗಿ ಅಮೇರಿಕಾದವರು ಬಳಸುತ್ತಾರೆ.

ಡೆಸರ್ಟ್ ವಿಲ್ಲೋ ಮರ- ಖಿಲೋಪ್ಸಿಸ್ ಎಂದೂ ಕರೆಯುತ್ತಾರೆ. ಇದು ಮೆಕ್ಸಿಕೊ ಹಾಗೂ ಯು.ಎಸ್.ಎನಲ್ಲಿ ಕಾಣುವ ಸೂಕ್ಷ್ಮ, ಸಣ್ಣದಾದ ಪತನಶೀಲ ಹೊದರು. ಇದು ಮೇ ತಿಂಗಳಲ್ಲಿ ಬೆಳೆದು ಸೆಪ್ಟೆಂಬರ್ ತಿಂಗಳವರೆಗೂ ಇರುತ್ತದೆ. ಈ ಹೂವಿನ ಪರಾಗಸ್ಪರ್ಷವನ್ನು ಜೇನುನೊಣ ಮಾಡುತ್ತದೆ. ಇದು ಶುಷ್ಕ ಸ್ಥಿತಿಯನ್ನು ತಡೆಕೊಳ್ಳುವುದು.

ತಾಳೆ ಜಾತಿಯ ಮರ- ಇದು ಉಷ್ಣವಲಯದ, ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆಯ ಸ್ಥಿತಿಯಲ್ಲಿ ಬೆಳೆಯುವುದು. ಇದು ಅತಿ ಶೀತಲ ಸ್ಥಿತಿಯನ್ನು ತಡೆಯುವುದಿಲ್ಲ. ಇದು ಸುಮಾರು ೨೬೦೦ ತಳಿಗಳನ್ನು ಹೊಂದಿದೆ. ಇದರ ಕಾಂಡವು ಬಹಳ ಉದ್ದವಾಗಿದ್ದು, ಇದರ ಉದ್ದದ ಎಲೆಗಳ ಗೊಂಚಲು ಕಾಂಡದ ತುದಿಯಲ್ಲಿ ಇರುವುದು. ಈ ಮರದಿಂದ ತೆಗೆದ ತೈಲವು ಖಾದ್ಯವಾಗಿದೆ. ಈ ಸಸ್ಯದ ರಸವನ್ನು ಹುದುಗಿಸಿ ಪಾಮ್ ವೈನ್ ತಯಾರಿಸುತ್ತಾರೆ. ಈ ಮರದಿಂದ ಬರುವ ತೆಂಗಿನಗರಿಯಿಂದ ಹಗ್ಗ, ಹಾಸಿಗೆ, ಕುಂಚವನ್ನು ಮಾಡಲಾಗುತ್ತದೆ.

ಸ್ಯಾಗ್ವರೊ- ಈ ಸಸ್ಯವು ಕಳ್ಳಿ ಗಿಡದ ತಳಿ. ಇದರ ಆಯಸ್ಸು ಸುಮಾರು ೧೫೦ ವರ್ಷ. ಇದರ ಬೆಳವಣಿಗೆ ಮರುಭೂಮಿಯ ವಾತಾವರಣದ ಮೇಲೆ ಅವಲಂಭಿಸಿರುತ್ತದೆ. ಇದರ ಬೆನ್ನುಹುರಿ ಒಂದು ದಿನಕ್ಕೆ ಸುಮಾರು ಒಂದು ಮಿಲಿ ಮೀಟರ್ನಷ್ಟು ಬೆಳೆಯುವುದು. ಇದರ ಹೂಗಳು ರಾತ್ರಿಯ ಸಮಯದಲ್ಲಿ ಬೆಳೆಯುವುದು. ಇದರಲ್ಲಿ ಬೆಳೆಯುವ ಕೆಂಪು ಹಣ್ಣುಗಳನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಇದರ ಒಂದೊಂದು ಹಣ್ಣುಗಳಲ್ಲಿ ಸುಮಾರು ೨೦೦೦ ಬೀಜಗಳಿದ್ದು ಅವುಗಳ ಪರಾಗಸ್ಪರ್ಷ ಸುಲಭವಾಗಿದೆ.

ಕಳ್ಳಿಗಿಡ- ಇದು ಸಾಮಾನ್ಯವಾಗಿ ಬೆಳೆಯುವ ಸಸ್ಯವಾಗಿದ್ದು ಇದರ ಎತ್ತರ ಸುಮಾರು ೧-೧೦ ಮೀಟರ್. ಇದರ ಬೆನ್ನುಹುರಿಯು ಚುಚ್ಚಿದರೆ ರೋಗನಿರೋಧಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

__________________________________________

ಸಂಗ್ರಹ T. A. ಚಂದ್ರಶೇಖರ

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು