ವಿಧಾನ ಪರಿಷತ್ತು
ADD ARTICLE DESCRIPTION
ಭಾರತದ ರಾಜ್ಯಗಳಲ್ಲಿ ಎರಡು ಶಾಸಕಾಂಗಗಳನ್ನು ಹೊಂದಿರುವ ರಾಜ್ಯಗಳ ಮೇಲ್ಮನೆ ಎಂದು ಪರಿಗಣಿತವಾಗುವ ಶಾಸನ ಸಭೆಯೇ ವಿಧಾನ ಪರಿಷತ್. ೨೦೧೬ರ ಅಂಕಿ ಅಂಶದಂತೆ ಭಾರತದ ಇಪ್ಪತ್ತೊಂಬತ್ತು ರಾಜ್ಯಗಳ ಪೈಕಿ ಏಳು ರಾಜ್ಯಗಳು ಮಾತ್ರವೇ ವಿಧಾನ ಪರಿಷತ್ ವ್ಯವಸ್ಥೆ ಹೊಂದಿವೆ.
ಸದ್ಯಕ್ಕೆ ಕೇವಲ ಆರು ರಾಜ್ಯಗಳು ವಿಧಾನ ಪರಿಷತ್ ಹೊಂದಿವೆ.
ಭಾರತದ ರಾಜ್ಯಗಳಿಗೆ ಸಂಬಂಧ ಪಟ್ಟಂತೆ ವಿಧಾನ ಸಭೆಯನ್ನು ವಿಸರ್ಜಿಸಲು ಕಾನೂನಿನಲ್ಲಿ ಅವಕಾಶವಿದೆ ಆದರೆ ವಿಧಾನ ಪರಿಷತ್ ಅನ್ನು ವಿಸರ್ಜಿಸಲು ಸಾಧ್ಯವಿಲ್ಲ. ಆದರಿಂದ ವಿಧಾನ ಪರಿಷತ್ ಅನ್ನು ಶಾಶ್ವತ ಶಾಸಕಾಂಗ ಎನ್ನಲಾಗುತ್ತದೆ. ಪ್ರತಿಯೊಬ್ಬ ವಿಧಾನ ಪರಿಷತ್ ಸದಸ್ಯನ ವಾಯಿದೆ ಆರು ವರ್ಷಗಳಾಗಿರುತ್ತವೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಕೇಂದ್ರದ ರಾಜ್ಯಸಭೆಯ ಮಾದರಿಯಲ್ಲಿಯೇ ವಿಧಾನ ಪರಿಷತ್ ನ ಮೂರನೇ ಒಂದರಷ್ಟು ಸದಸ್ಯರ ವಾಯಿದೆ ಪೂರ್ಣವಾಗುತ್ತದೆ.
ವಿಧಾನ ಪರಿಷತ್ ನ ಒಟ್ಟು ಸದಸ್ಯರ ಸಂಖ್ಯೆ ವಿಧಾನ ಸಭೆಯ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಇರಬೇಕು. ಅಂದರೆ ೩:೧ ಅನುಪಾತದಲ್ಲಿರಬೇಕು. ಹಾಗಿದ್ದಾಗ್ಯೂ ವಿಧಾನ ಪರಿಷತ್ ನ ಸದಸ್ಯರ ಕನಿಷ್ಠ ಸಂಖ್ಯೆ ೪೦ ಕ್ಕೆ ಮೀರಿರಬೇಕು. (ಜಮ್ಮು ಕಾಶ್ಮೀರ ರಾಜ್ಯಕ್ಕೆ ಇದರಿಂದ ವಿನಾಯಿತಿ ನೀಡಲಾಗಿದ್ದು ಅಲ್ಲಿನ ವಿಧಾನ ಪರಿಷತ್ ನಲ್ಲಿ ಕೇವಲ ೩೬ ಸದಸ್ಯರಿದ್ದಾರೆ.)
ವಿಧಾನ ಪರಿಷತ್ ಸದಸ್ಯರಾಗಲು ಬಯಸುವ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
- ಭಾರತೀಯ ನಾಗರೀಕನಾಗಿರಬೇಕು.
- ಕನಿಷ್ಠ ೩೦ ವರ್ಷಗಳನ್ನು ಪೂರೈಸಿರಬೇಕು.
- ಮಾನಸಿಕ ಅಸ್ವಸ್ಥೆಗಳಂತಹ ವಿಷಯಗಳಿಂದ ಬಳಲುತ್ತಿರಬಾರದು.
- ಅವರು ಯಾವ ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಲು ಬಯಸುತ್ತಾರೋ ಆ ರಾಜ್ಯದಿಂದ ಯಾವುದೇ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿರಬಾರದು.
- ಅದೇ ಸಮಯಕ್ಕೆ ಕೇಂದ್ರದಲ್ಲಿ ಲೋಕಸಭಾ ಅಥವಾ ರಾಜ್ಯ ಸಭಾ ಸದಸ್ಯರಾಗಿರಬಾರದು.
• ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಜನ ಇತರ ಸರ್ಕಾರಿ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿಗಳು ಹಾಗು ಜಿಲ್ಲಾ ಪರಿಷತ್ತುಗಳಿಂದ ಚುನಾಯಿತರಾಗಿರುತ್ತಾರೆ. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಜನ ವಿಧಾನ ಸಭಾ ಸದಸ್ಯರಿಂದ ಚುನಾಯಿತರಾಗುತ್ತಾರೆ. ಚುನಾಯಿತರಾಗುವ ವ್ಯಕ್ತಿಗಳು ವಿಧಾನ ಸಭೆಯ ಸದಸ್ಯರಾಗಿರಬಾರದು. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಹನ್ನೆರಡನೇ ಒಂದರಷ್ಟು ಸದಸ್ಯರು ಪದವೀಧರ ಕ್ಷೇತ್ರದ ಚುನಾವಣೆಯಿಂದ ಆಯ್ಕೆಯಾಗುತ್ತಾರೆ. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಹನ್ನೆರಡನೇ ಒಂದರಷ್ಟು ಸದಸ್ಯರು ಶಿಕ್ಷಕರ ಕ್ಷೇತ್ರದ ಚುನಾವಣೆಯಿಂದ ಆಯ್ಕೆಯಾಗುತ್ತಾರೆ. • ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಆರನೇ ಒಂದರಷ್ಟು ಸದಸ್ಯರು ರಾಜ್ಯಪಾಲರಿಂದ ನೇರವಾಗಿ ನೇಮಕವಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕಲೆ, ಸಮಾಜ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಜ್ಯ್ಪಾಲರು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ.
- ೨೦೧೦ರಲ್ಲಿ ಕೇಂದ್ರ ಸದನದಲ್ಲಿ ವಿಧಾನ ಪರಿಷತ್ತುಗಳ ಮರು ನವೀಕರಣಕ್ಕೆ ಕಾಯ್ದೆಯೊಂದನ್ನು ಎಂಟು ರಾಜ್ಯಗಳಿಗೆ ಅಂಗೀಕರಿಸಲಾಯಿತು.ಆದರೆ ತಮಿಳುನಾಡು ರಾಜ್ಯ ಮರುನವೀಕರಿಸದಂತೆ ತಡೆ ಹಿಡಿದಿದೆ. ಹಾಗು ರಾಜ್ಯಸಭೆಗೆ ತಮಿಳುನಾಡು ರಾಜ್ಯ ಸರ್ಕಾರ ವಿರೋಧ ತೋರಿದೆ.
- ಕೇಂದ್ರ ಸಂಪುಟ ಸಭೆ ನವೆಂಬರ್ ೨೮ ೨೦೧೩ ರಲ್ಲಿ ಅಸ್ಸಾಂ ರಾಜ್ಯದಲ್ಲಿ ವಿಧಾನ ಪರಿಷತ್ ರಚಿಸಲು ಒಪ್ಪಿಗೆ ನೀಡಿದೆ.
- ಒಡಿಶಾ ರಾಜ್ಯವು ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿನ ವಿಧಾನ ಪರಿಷತ್ತುಗಳ ಬಗ್ಗೆ ಅಧ್ಯಯನ ನಡೆಸಿ ಒಡಿಶಾದಲ್ಲೂ ವಿಧಾನ ಪರಿಷತ್ ರಚನೆಗೆ ಸಿದ್ಧತೆ ಮಾಡಿಕೊಂಡಿದೆ.
ವಿಧಾನ ಸಭೆ
ADD ARTICLE DESCRIPTION
ಒಂದೇ ಒಂದು ಶಾಸನ ಸಭೆಯುಳ್ಳ(ವಿಧಾನ ಸಭೆ ಮಾತ್ರ) ರಾಜ್ಯಗಳಲ್ಲಿ ವಿಧಾನ ಸಭೆ ಮುಖ್ಯ ಭೂಮಿಕೆಯಾಗಿಯೂ ಹಾಗೂ ಎರಡು ಶಾಸನ ಸಭೆ(ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು)ಗಳುಳ್ಳ ರಾಜ್ಯಗಳಲ್ಲಿ ಕೆಳಮನೆಯಾಗಿಯೂ ವಿಧಾನ ಸಭೆ ಕಾರ್ಯ ನಿರ್ವಹಿಸುತ್ತದೆ.
ಕೇಂದ್ರದಲ್ಲಿ ಲೋಕಸಭೆ ಕೆಳಮನೆಯಾದರೆ, ರಾಜ್ಯ ಸಭೆ ಮೇಲ್ಮನೆಯಾಗಿರುತ್ತದೆ. ಅಂತೆಯೇ ರಾಜ್ಯಗಳಲ್ಲಿ ವಿಧಾನ ಸಭೆ ಕೆಳಮನೆಯಾಗಿದ್ದು, ವಿಧಾನ ಪರಿಷತ್ತು ಮೇಲ್ಮನೆಯಾಗಿರುತ್ತದೆ. ವಿಧಾನ ಪರಿಷತ್ತು ಎಲ್ಲ ರಾಜ್ಯಗಳಲ್ಲೂ ಖಡ್ಡಾಯವಲ್ಲ. ಸದ್ಯಕ್ಕೆ ಭಾರತದ ೭ ರಾಜ್ಯಗಳು ವಿಧಾನ ಪರಿಷತ್ತು ಹೊಂದಿವೆ. ರಾಜ್ಯದ ಸ್ಥಾನ ಮಾನವಿಲ್ಲದ ಎರಡು ಕೇಂದ್ರಾಡಳಿತ ಪ್ರದೇಶಗಳು ವಿಧಾನಸಭೆಯನ್ನು ಹೊಂದಿವೆ. ಅವುಗಳೆಂದರೆ ದೆಹಲಿ ಮತ್ತು ಪುದುಚೇರಿ.
ವಿಧಾನಸಭೆಯ ಸದಸ್ಯರು ವಿಧಾನಸಭೆಯ ವ್ಯಾಪ್ತಿಯ ಒಂದು ಕ್ಷೇತ್ರದ ಹದಿನೆಂಟು ವಯಸ್ಸು ಮೀರಿದ ಮತದಾರರಿಂದ ನೇರವಾಗಿ ಆಯ್ಕೆಯಾಗಿರುತ್ತಾರೆ. ವಿಧಾನಸಭೆಯ ಸದಸ್ಯರ ಬಲವನ್ನು ಭಾರತದ ಸಂವಿಧಾನ ೬೦ಕ್ಕೆ ಕಡಿಮೆ ಹಾಗು ೫೦೦ಕ್ಕೆ ಹೆಚ್ಚು ಇರಬಾರದು ಎಂದು ನಮೂದಿಸಿದೆ. ಆದಾಗ್ಯೂ ಕೆಲ ಚಿಕ್ಕ ರಾಜ್ಯಗಳ ವಿಚಾರದಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕೆ ಕಡಿಮೆಯಿದೆ. ಗೋವಾ, ಸಿಕ್ಕಿಂ, ಮಿಝೋರಾಂ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚ್ಚೇರಿಯಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕಿಂತಲೂ ಕಡಿಮೆಯಿದ್ದು ಆ ರಾಜ್ಯಗಳಿಗೆ ವಿಧಾನಸಭಾ ಸದಸ್ಯರ ಸಂಖ್ಯಾ ಬಲದ ವಿಚಾರದಲ್ಲಿ ಸಡಿಲಿಕೆ ಕೊಡಲಾಗಿದೆ.
ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಒಬ್ಬ ವ್ಯಕ್ತಿಯನ್ನು ವಿಧಾನಸಭಾ ಸದಸ್ಯನಾಗಿ ನೇಮಕ ಮಾಡಿಕೊಳ್ಳಬಹುದು. ಆ ವ್ಯಕ್ತಿ ಅಲ್ಪ ಸಂಖ್ಯಾತ ಪ್ರತಿನಿಧಿಯಂತಿದ್ದು, ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿದ್ದರೆ ಅದನ್ನು ಸರಿದೂಗಿಸಲು ರಾಜ್ಯಪಾಲರಿಂದ ನೇಮಕವಾಗುತ್ತಾನೆ. ಎಲ್ಲ ವಿಧಾನಸಭಾ ಸದಸ್ಯರ ಕಾಲಾವಧಿ ಐದು ವರ್ಷಗಳಾಗಿದ್ದು ಆ ಸರ್ಕಾರದ ಐದು ವರ್ಷ ಮುಗಿಯುತ್ತಿದ್ದಂತೆಯೇ ಚುನಾವಣೆ ಎದುರಿಸಬೇಕಾಗುತ್ತದೆ.
ಒಂದು ವಿಧಾನ ಸಭೆಯ ಅವಧಿ ಐದು ವರ್ಷಗಳಾಗಿರುತ್ತದೆ. ತುರ್ತು ಪರಿಸ್ಥಿತಿಗಳಂತಹ ಸಂಧರ್ಭದಲ್ಲಿ ವಿಧಾನ ಸಭೆಯ ಅವಧಿಯನ್ನು ರಾಜ್ಯ ಪಾಲರು ಇನ್ನು ವಿಸ್ತರಿಸಬಹುದು ಅಥವಾ ಕಡಿತ ಮಾಡಲೂಬಹುದು. ವಿಧಾನ ಸಭೆಯ ಅವಧಿಯನ್ನು ರಾಜ್ಯಪಾಲರು ಗರಿಷ್ಠ ೬ ತಿಂಗಳವರೆಗೆ ವಿಸ್ತರಿಸಬಹುದು.
ಮುಖ್ಯಮಂತ್ರಿಗಳ ಮನವಿಯ ಆಧಾರದ ಮೇಲೆ ವಿಧಾನ ಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ವಿಧಾನ ಸಭೆಯಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ವಿಫಲ ವಾದರೆ ಅಥವಾ ಸರ್ಕಾರ ರಚಿಸಲು ಅವಶ್ಯವಾದ ಸದಸ್ಯ ಬಲ ಹೊಂದಿಲ್ಲವಾದರೆ ರಾಜ್ಯ ಪಾಲರು ವಿಧಾನ ಸಭೆ ವಿಸರ್ಜಿಸಲು ಅವಕಾಶವಿದೆ.
- ಸಂವಿಧಾನದ 170ನೇ ವಿಧಿಯ ಅನ್ವಯ ಪ್ರತಿಯೊಂದು ರಾಜ್ಯದ ವಿಧಾನಸಭೆಗೆ ನೇರ ಚುನಾವಣೆ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಒಂದು ವಿಧಾನಸಭೆಯಲ್ಲಿ ಕನಿಷ್ಠ 60 ಹಾಗೂ ಗರಿಷ್ಠ 500 ಸದಸ್ಯರು ಇರಬೇಕು.
- ಚುನಾವಣಾ ಕ್ಷೇತ್ರವನ್ನು ಹೇಗೆ ವಿಭಾಗ ಮಾಡಬೇಕು ಎಂಬ ಬಗ್ಗೆ 170(2)(1)ನೇ ವಿಧಿಯಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ಚುನಾವಣಾ ಕ್ಷೇತ್ರದಲ್ಲಿ ಇರುವ ಜನಸಂಖ್ಯೆ ಮತ್ತು ಆ ಕ್ಷೇತ್ರದಲ್ಲಿ ಮೀಸಲು ಇರುವ ಸ್ಥಾನಗಳ ಸಂಖ್ಯೆ ಇವೆರಡರ ನಡುವಿನ ಅನುಪಾತವು ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಾದ್ಯಂತ ಒಂದೇ ರೀತಿ ಆಗಿರಬೇಕು. ಹಿಂದಿನ ಜನಗಣತಿಗೆ ಅನುಗುಣವಾಗಿ ಜನಸಂಖ್ಯೆಯ ಮಾನದಂಡವನ್ನು ಇಟ್ಟು ಕೊಳ್ಳಬೇಕು. (10 ವರ್ಷಕ್ಕೊಮ್ಮೆ ನಡೆಯುವ) ಜನಗಣತಿಯು ಪೂರ್ಣಗೊಂಡ ಮೇಲೆ, ಪ್ರತಿಯೊಂದು ರಾಜ್ಯದ ವಿಧಾನಸಭೆಯಲ್ಲಿನ ಒಟ್ಟು ಸ್ಥಾನಗಳ ಆಧಾರದ ಮೇಲೆ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಿರುವ ಬಗ್ಗೆ ಸಂಸತ್ತು ನಿರ್ಧರಿಸಬೇಕು.
- ಈ ಸಂಬಂಧ ಒಂದು ಪ್ರಾಧಿಕಾರವನ್ನು ರೂಪಿಸಬೇಕು. ಆ ಪ್ರಕ್ರಿಯೆ ಮುಗಿಯುವವರೇಗೆ ಅಸ್ತಿತ್ವದಲ್ಲಿ ಇರುವ ವಿಧಾನಸಭೆಯು ಕಾರ್ಯ ಮುಂದುವರಿಸಬೇಕು. ಆ ನಂತರವಷ್ಟೇ ವಿಧಾನಸಭೆಯ ವಿಸರ್ಜನೆ ಮಾಡಬೇಕು. ರಾಷ್ಟ್ರಪತಿಯವರ ಅನುಮತಿಯ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು. ಈ ಮಧ್ಯೆ, ಚುನಾವಣೆ ಏನಾದರೂ ನಡೆದರೆ, ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆಯೇ ನಡೆಯಬೇಕು.
ವಿಧಾನ ಸಭೆಯ ಸದಸ್ಯನಾಗಲು ಇಚ್ಛಿಸುವ ವ್ಯಕ್ತಿಯು ಚುನಾವಣೆಯಲ್ಲಿ ಯಾವುದಾದರೂ ಒಂದು ಪಕ್ಷದಿಂದ ಅಥವಾ ಸ್ವತಂತ್ರ್ಯವಾಗಿ ಸ್ಫರ್ದಿಸಬೇಕು. ಸ್ಫರ್ದಿಸುವ ಮುನ್ನ ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.
- ಭಾರತೀಯ ನಾಗರೀಕನಾಗಿರಬೇಕು.
- ೨೫ ವರ್ಷಗಳನ್ನು ಪೂರೈಸಿರಬೇಕು.
- ಯಾವುದೇ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರಬಾರದು.
- ವಂಚನೆ ಇನ್ನಿತರ ಅಪರಾಧಗಳಲ್ಲಿ ಭಾಗಿಯಾಗಿರಬಾರದು.
- ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಬಾರದು.
ವಿಧಾನ ಸಭೆಯ ಕಾರ್ಯ ಕಲಾಪಗಳು, ಅಧಿವೇಶನಗಳು ವಿಧಾನ ಸಭಾಧ್ಯಕ್ಷ(ಸ್ಪೀಕರ್) ರ ನೇತೃತ್ವದಲ್ಲಿ ನಡೆಯುತ್ತವೆ. ಸಭಾಧ್ಯಕ್ಷರ ಗೈರುಹಾಜರಿ ಸಂಧರ್ಭಗಳಲ್ಲಿ ಉಪಸಭಾಧ್ಯಕ್ಷರು ವಿಧಾನ ಸಭೆಯನ್ನು ಮುನ್ನಡೆಸುತ್ತಾರೆ. ಸ್ಪೀಕರ್ ರವರು ಶೂನ್ಯ ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸಲಿದ್ದು ಸಭೆಯಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು, ಮಾತು ಕತೆಗಳನ್ನು ನಿಭಾಯಿಸುತ್ತಾರೆ.
ವಿಧಾನ ಸಭೆಯು ವಿಧಾನ ಪರಿಷತ್ ನಷ್ಟೇ ಸಾಂವಿಧಾನಿಕ ಶಕ್ತಿಯುಳ್ಳದ್ದಾಗಿರುತ್ತದೆ. ಇದಕ್ಕೆ ಮನಿ ಬಿಲ್ ಹೊರತಾಗಿರುತ್ತದೆ. ಮನಿ ಬಿಲ್ ವಿಧಾನಪರಿಷತ್ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಆ ವಿಚಾರದಲ್ಲಿ ವಿಧಾನಸಭೆಯೇ ಮುಖ್ಯವಾಗಿರುತ್ತದೆ.
- ಶಾಸನೀಯ ಅಧಿಕಾರ-
ರಾಜ್ಯ ಪಟ್ಟಿ ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯದ ಮೇಲೆ ಶಾಸನ ಮಾಡುವ ಅಧಿಕಾರ ವಿಧಾನಸಭೆಗೆ ಇದೆ, ಶಾಸನ ಕಾಯ್ದೆ ಆಗಬೇಕಾದರೆ ರಾಜ್ಯದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಸಹಿ ಪಡೆಯಬೇಕು. ರಾಜ್ಯಪಾಲರು ಕೆಲವು ಮಸೂದೆಗಳನ್ನು ಒಪ್ಪಿಕೊಳ್ಳ ಬಹುದು ಅಥವಾ ರಾಷ್ಟ್ರಪತಿಗಳ ಒಪ್ಪಿಗೆ ಕಾಯ್ದಿರಿಸಬಹುದು.
ಹಣಕಾಸಿನ ಅಧಿಕಾರ- ಹಣಕಾಸಿನ ವಿಷಯದಲ್ಲಿ ಸಂಬಂಧಿಸಿದಂತೆ ವಿಧಾನ ಸಭೆಗೆ ಹೆಚ್ಚಿನ ಅಧಿಕಾರ ಲಭಿಸಿದೆ ಹಣಕಾಸಿನ ಮಸೂದೆಯನ್ನು ವಿಧಾನಸಭೆಯಲ್ಲಿ ನಡೆಸಿದ ಮಸೂದೆಯನ್ನು ವಿಧಾನ ಪರಿಷತ್ಗೆ ಕಳಿಸಲಾಗುತ್ತದೆ ವಿಧಾನ ಪರಿಷತ್ ಮಸೂದೆಯನ್ನು ತಿರಸ್ಕರಿಸಲು ಅಧಿಕಾರವಿರುವುದಿಲ್ಲ ಕೇವಲ ಸೂಚನೆಗಳನ್ನು ನೀಡಬಹುದು ಸಲಹೆ ಸೂಚನೆಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವಿದೆ
- ೧ ಆಂಧ್ರಪ್ರದೇಶ ವಿಧಾನಸಭೆ
- ೨ ಅರುಣಾಚಲ ಪ್ರದೇಶ ವಿಧಾನಸಭೆ
- ೩ ಅಸ್ಸಾಂ ವಿಧಾನಸಭೆ
- ೪ ಬಿಹಾರ ವಿಧಾನಸಭೆ
- ೫ ಛತ್ತೀಸ್ಘಡ್ ವಿಧಾನಸಭೆ
- ೬ ಗೋವಾ ವಿಧಾನಸಭೆ
- ೭ ಗುಜರಾತ್ ವಿಧಾನಸಭೆ
- ೮ ಹಿಮಾಚಲ ಪ್ರದೇಶ
- ೯ ಹರಿಯಾಣ ವಿಧಾನಸಭೆ
- ೧೦ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ
- ೧೧ ಝಾರ್ಖಂಡ್ ವಿಧಾನಸಭೆ
- ೧೨ ಕರ್ನಾಟಕ ವಿಧಾನಸಭೆ
- ೧೩ ಕೇರಳ ವಿಧಾನಸಭೆ
- ೧೪ ಮಧ್ಯ ಪ್ರದೇಶ ವಿಧಾನಸಭೆ
- ೧೫ ಮಹಾರಾಷ್ಟ್ರ ವಿಧಾನಸಭೆ
- ೧೬ ಮಣಿಪುರ ವಿಧಾನಸಭೆ
- ೧೭ ಮೇಘಾಲಯ ವಿಧಾನಸಭೆ
- ೧೮ ಮಿಝೋರಾಂ ವಿಧಾನಸಭೆ
- ೧೯ ನಾಗಾ ಲ್ಯಾಂಡ್ ವಿಧಾನಸಭೆ
- ೨೦ ಒರಿಸ್ಸ ವಿಧಾನಸಭೆ
- ೨೧ ಪುದುಚೇರಿ ವಿಧಾನಸಭೆ
- ೨೨ ಪಂಜಾಬ್ ವಿಧಾನಸಭೆ
- ೨೩ ರಾಜಾಸ್ಥಾನ ವಿಧಾನಸಭೆ
- ೨೪ ಸಿಕ್ಕಿಮ್ ವಿಧಾನಸಭೆ
- ೨೫ ತಮಿಳುನಾಡು ವಿಧಾನಸಭೆ
- ೨೬ ತ್ರಿಪುರ ವಿಧಾನಸಭೆ
- ೨೭ ಉತ್ತರ ಪ್ರದೇಶ ವಿಧಾನಸಭೆ
- ೨೮ ಉತ್ತರಾಖಂಡ ವಿಧಾನಸಭೆ
- ೨೯ ಪಶ್ಚಿಮ ಬಂಗಾಲ ವಿಧಾನಸಭೆ
- ೩೦ ದೆಹಲಿ ವಿಧಾನಸಭೆ
- ಕೇಂದ್ರಾಡಳಿತ ಪ್ರದೇಶಗಳು
- ೩೧ ಅಂಡಮಾನ್ ಮತ್ತು ನಿಕೋಬರ್
- ೩೨ ಚಂಡೀಗಢ ವಿಧಾನಸಭೆ
- ೩೩ ದಾದ್ರ ಮತ್ತು ನಾಗರ್ ಹವೆಲಿ
- ೨೪ ದಮನ್ ಮತ್ತು ದಿಯು
- ೩೫ ಲಕ್ಷದ್ವೀಪ
Leadership | |
---|---|
ಸ್ಪೀಕರ್ | ಓಂ ಬಿರ್ಲಾ, ಭಾರತೀಯ ಜನತಾ ಪಕ್ಷ since 19 ಜೂನ್ 2019 |
ಡೆಪ್ಯುಟಿ ಸ್ಪೀಕರ್ | TBA |
ಕಾರ್ಯದರ್ಶಿ | ಸ್ನೇಹಲತಾ ಶ್ರೀವಾಸ್ತವ since 1 ಡಿಸೆಂಬರ್ 2017 |
ಆಡಳಿತ ಪಕ್ಷದ ನಾಯಕ | ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷ since 26 ಮೇ 2014 |
ವಿರೋಧ ಪಕ್ಷದ ನಾಯಕ | ಖಾಲಿ since 16 ಮೇ 2014 |
No comments:
Post a Comment