ಶಿಕ್ಷಣವೇ ಶಕ್ತಿ

Tuesday, 22 December 2020

ಕರ್ನಾಟಕದ 4 ವಿಭಾಗಗಳು

ಕರ್ನಾಟಕದ ಜಿಲ್ಲೆಗಳು

ADD ARTICLE DESCRIPTION


ಕರ್ನಾಟಕದ ನಕ್ಷೆ


ಹಿನ್ನೆಲೆ

ನಮ್ಮ ರಾಜ್ಯ ಕರ್ನಾಟಕ. ನಮ್ಮ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ಆಡಳಿತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯ ಸರ್ಕಾರದ ಆಡಳಿತದ ಅನುಕೂಲಕ್ಕಾಗಿ ಇರುವ ಮೂವತ್ತು ಜಿಲ್ಲೆಗಳು ನಾಲ್ಕು ಕಂದಾಯ ವಿಭಾಗಗಳ ಅಡಿಯಲ್ಲಿ ಬರುವಂತೆ ರೂಪಿಸಲಾಗಿದೆ. ಅವು ಈ ಕೆಳಗಿನಂತೆ ಇವೆ:

1. ಬೆಂಗಳೂರು ವಿಭಾಗ

ಬೆಂಗಳೂರು ವಿಭಾಗದ ಜಿಲ್ಲೆಗಳು

ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: ಬೆಂಗಳೂರು ನಗರಬೆಂಗಳೂರು ಗ್ರಾಮಾಂತರಕೋಲಾರಚಿಕ್ಕಬಳ್ಳಾಪುರರಾಮನಗರತುಮಕೂರುಚಿತ್ರದುರ್ಗದಾವಣಗೆರೆ ಮತ್ತು ಶಿವಮೊಗ್ಗ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ.

2. ಮೈಸೂರು ವಿಭಾಗ

ಮೈಸೂರು ವಿಭಾಗದ ಜಿಲ್ಲೆಗಳು

ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: ಮೈಸೂರುಮಂಡ್ಯಹಾಸನಚಿಕ್ಕಮಗಳೂರುಉಡುಪಿದಕ್ಷಿಣ ಕನ್ನಡಚಾಮರಾಜನಗರಕೊಡಗು. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ.

3. ಬೆಳಗಾವಿ ವಿಭಾಗ

ಬೆಳಗಾವಿ ವಿಭಾಗದ ಜಿಲ್ಲೆಗಳು

ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಬೆಳಗಾವಿಧಾರವಾಡಗದಗಹಾವೇರಿವಿಜಯಪುರಬಾಗಲಕೋಟಉತ್ತರ ಕನ್ನಡ. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ.

4. ಕಲಬುರ್ಗಿ ವಿಭಾಗ

ಕಲಬುರ್ಗಿ ವಿಭಾಗದ ಜಿಲ್ಲೆಗಳು

ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಕಲಬುರ್ಗಿಬೀದರ್ಬಳ್ಳಾರಿರಾಯಚೂರುಕೊಪ್ಪಳಯಾದಗಿರಿ. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ ಕರ್ನಾಟಕ ಸರ್ಕಾರವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ ಭಾರತ ಸರ್ಕಾರ ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ.


ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕೃತ ಪಟ್ಟಿ

More information: ವಿವರಣೆ ...


More information: ಸಂಕೇತ, ಜಿಲ್ಲೆ ...
ಸಂಕೇತಜಿಲ್ಲೆಜಿಲ್ಲಾ ಕೇಂದ್ರಸ್ಥಾಪನೆತಾಲೂಕುಗಳುಜನಸಂಖ್ಯೆ(2011ರ ಜನಗಣತಿಯ ಪ್ರಕಾರ)ವಿಸ್ತೀರ್ಣಜನಸಾಂದ್ರತೆ(2011ರ ಜನಗಣತಿಯ ಪ್ರಕಾರ)ನಕ್ಷೆ
BKಬಾಗಲಕೋಟಬಾಗಲಕೋಟ15 ಆಗಸ್ಟ್ 19971,889,7526,575 km2 (2,539 sq mi)288/km2 (750/sq mi)
BNಬೆಂಗಳೂರು ನಗರಬೆಂಗಳೂರು1 ನವೆಂಬರ್ 19569,621,5512,190 km2 (850 sq mi)4,393/km2 (11,380/sq mi)
BRಬೆಂಗಳೂರು ಗ್ರಾಮಾಂತರಬೆಂಗಳೂರು15 ಆಗಸ್ಟ್ 1986990,9232,259 km2 (872 sq mi)431/km2 (1,120/sq mi)
BGಬೆಳಗಾವಿಬೆಳಗಾವಿ1 ನವೆಂಬರ್ 19564,779,66113,415 km2 (5,180 sq mi)356/km2 (920/sq mi)
BLಬಳ್ಳಾರಿಬಳ್ಳಾರಿ1 ನವೆಂಬರ್ 19562,452,5958,450 km2 (3,260 sq mi)290/km2 (750/sq mi)
BDಬೀದರ್ಬೀದರ್1 ನವೆಂಬರ್ 19561,703,3005,448 km2 (2,103 sq mi)313/km2 (810/sq mi)
BJವಿಜಯಪುರವಿಜಯಪುರ1 ನವೆಂಬರ್ 19562,177,33110,494 km2 (4,052 sq mi)207/km2 (540/sq mi)
CJಚಾಮರಾಜನಗರಚಾಮರಾಜನಗರ15 ಆಗಸ್ಟ್ 19971,020,7915,101 km2 (1,970 sq mi)181/km2 (470/sq mi)
ಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ10 ಸೆಪ್ಟೆಂಬರ್ 20071,255,1044,524 km2 (1,747 sq mi)296/km2 (770/sq mi)
CKಚಿಕ್ಕಮಗಳೂರುಚಿಕ್ಕಮಗಳೂರು1 ನವೆಂಬರ್ 19561,137,9617,201 km2 (2,780 sq mi)158/km2 (410/sq mi)
CTಚಿತ್ರದುರ್ಗಚಿತ್ರದುರ್ಗ1 ನವೆಂಬರ್ 19561,659,4568,440 km2 (3,260 sq mi)197/km2 (510/sq mi)
DKದಕ್ಷಿಣ ಕನ್ನಡಮಂಗಳೂರು1 ನವೆಂಬರ್ 19562,089,6494,560 km2 (1,760 sq mi)430/km2 (1,100/sq mi)
DAದಾವಣಗೆರೆದಾವಣಗೆರೆ15 ಆಗಸ್ಟ್ 19971,945,4975,924 km2 (2,287 sq mi)328/km2 (850/sq mi)
DHಧಾರವಾಡಧಾರವಾಡ1 ನವೆಂಬರ್ 19561,847,0234,260 km2 (1,640 sq mi)434/km2 (1,120/sq mi)
GAಗದಗಗದಗ24 ಆಗಸ್ಟ್ 19971,064,5704,656 km2 (1,798 sq mi)229/km2 (590/sq mi)
GUಕಲಬುರ್ಗಿಕಲಬುರ್ಗಿ1 ನವೆಂಬರ್ 19562,566,32610,951 km2 (4,228 sq mi)234/km2 (610/sq mi)
HSಹಾಸನಹಾಸನ1 ನವೆಂಬರ್ 19561,776,4216,814 km2 (2,631 sq mi)261/km2 (680/sq mi)
HVಹಾವೇರಿಹಾವೇರಿ24 ಆಗಸ್ಟ್ 19971,597,6684,823 km2 (1,862 sq mi)331/km2 (860/sq mi)
KDಕೊಡಗುಮಡಿಕೇರಿ1 ನವೆಂಬರ್ 1956554,5194,102 km2 (1,584 sq mi)135/km2 (350/sq mi)
KLಕೋಲಾರಕೋಲಾರ1 ನವೆಂಬರ್ 19561,536,4013,969 km2 (1,532 sq mi)386/km2 (1,000/sq mi)
KPಕೊಪ್ಪಳಕೊಪ್ಪಳ24 ಆಗಸ್ಟ್ 19971,389,9207,189 km2 (2,776 sq mi)250/km2 (650/sq mi)
MAಮಂಡ್ಯಮಂಡ್ಯ1 ನವೆಂಬರ್ 1956
(29 ಆಗಸ್ಟ್ 1939)
1,805,7694,961 km2 (1,915 sq mi)364/km2 (940/sq mi)
MYಮೈಸೂರುಮೈಸೂರು1 ನವೆಂಬರ್ 19563,001,1276,854 km2 (2,646 sq mi)476/km2 (1,230/sq mi)
RAರಾಯಚೂರುರಾಯಚೂರು1 ನವೆಂಬರ್ 19561,928,8126,827 km2 (2,636 sq mi)228/km2 (590/sq mi)
ರಾಮನಗರರಾಮನಗರ10 ಸೆಪ್ಟೆಂಬರ್ 20071,082,6363,556 km2 (1,373 sq mi)308/km2 (800/sq mi)
SHಶಿವಮೊಗ್ಗಶಿವಮೊಗ್ಗ1 ನವೆಂಬರ್ 19561,752,7538,477 km2 (3,273 sq mi)207/km2 (540/sq mi)
TUತುಮಕೂರುತುಮಕೂರು1 ನವೆಂಬರ್ 19562,678,98010,597 km2 (4,092 sq mi)253/km2 (660/sq mi)
UDಉಡುಪಿಉಡುಪಿ25 ಆಗಸ್ಟ್ 19971,177,3613,880 km2 (1,500 sq mi)329/km2 (850/sq mi)
UKಉತ್ತರ ಕನ್ನಡಕಾರವಾರ1 ನವೆಂಬರ್ 19561,437,16910,291 km2 (3,973 sq mi)140/km2 (360/sq mi)
ಯಾದಗಿರಿಯಾದಗಿರಿ30 ಡಿಸೆಂಬರ್ 2009
1,174,2715,273 km2 (2,036 sq mi)223/km2 (580/sq mi)
Close



No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು