🌹ಗಗನಯಾತ್ರಿಗಳು 🌹
💎💎💎💎💎💎💎💎💎💎💎💎💎💎💎
ಲೈಕಾ (ಮೊದಲ ಹೆಸರು ಕುದ್ರ್ಯಾವ್ಕಾ) ಎಂಬ ನಾಯಿ ಬಾಹ್ಯಾಕಾಶವನ್ನು ತಲುಪಿದ ಮೊದಲ ಜೀವಿ. ೧೯೫೭ರ ನವೆಂಬರ್ ೩ರಂದು ಸೋವಿಯತ್ ಒಕ್ಕೂಟದ ಸ್ಪುಟ್ನಿಕ್ ೨ ಗಗನ ನೌಕೆಯಲ್ಲಿ ಇದು ಪಯಣ ಬೆಳೆಸಿತು. ಪ್ರಾಣ ಸಹಿತ ಅಂತರಿಕ್ಷದೊಳಗೆ ಪ್ರವೇಶಿಸಿದ ಜೀವಿಯಾಗಿ ಇತಿಹಾಸದಲ್ಲಿ ಸ್ಥಾನಪಡೆದುಕೊಂಡಿದೆ.
ಜೀವವಿರುವ ಪ್ರಯಾಣಿಕನನ್ನು ಅಂತರಿಕ್ಷ ಕಕ್ಷೆಯೊಳಗೆ ಕಳುಹಿಸಬಹುದೆಂದು ಈ ಪ್ರಯೋಗದಿಂದ ದೃಢಪಟ್ಟಿತು.
ಮೊಟ್ಟಮೊದಲು ಅಂತರಿಕ್ ಪ್ರವೇಶಿಸಿದ ಯೂರಿ ಗಗಾರಿನ್ ಗೆ ‘ಲೈಕಾ’ ಸ್ಪೂರ್ತಿ. ಇದರಿಂದಾಗಿಯೇ 1961 ರಲ್ಲಿ ಅಂತರಿಕ್ಷದಲ್ಲಿ ಕಾಲಿರಿಸಿದ.
ಮರಳಿ ಬರಲು ಅವಕಾಶವಿರದ ರಾಕೆಟ್ ನಲ್ಲಿ ಲೈಕಾ ಅಂತರಿಕ್ಷಕ್ಕೆ ತೆರಳಿತು. ಲೈಕಾ ಮರಳಿ ಬರುವುದಿಲ್ಲವೆಂದು ತಿಳಿದಿದ್ದ ವಿಜ್ಞಾನಿಗಳು…ಒಂದು ವಾರಕ್ಕೆ ಸಾಕಾಗುವಷ್ಟು ಆಹಾರ ಲಭ್ಯವಿದ್ದರೂ…ಕಕ್ಷೆಯೊಳಗೆ ಪ್ರವೇಶಿಸಿದ ಏಳು ಗಂಟೆಗಳೊಳಗೆ ಲೈಕಾ ಸಾವನ್ನಪ್ಪಿತು
ಈ ಪ್ರಯೋಗದ ನಂತರ ಅಂತರಿಕ್ಷದೊಳಗೆ ಕಳುಹಿಸಲ್ಪಟ್ಟ ಪ್ರತಿ ಜೀವಿಯೂ ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿವೆ. ಸುಮಾರು 40 ವರ್ಷಗಳ ನಂತರ, ರಷ್ಯಾ ಹೀರೋ ಆಗಿ ಲೈಕಾ ನನ್ನು ಗುರುತಿಸಿ, ಸ್ಮಾರಕವನ್ನು ನಿರ್ಮಿಸಿತು. ಇದು ಲೈಕಾ ಅಮರತ್ವಕ್ಕೆ ನೀಡಿದ ಗೌರವ.
ಯೂರಿ ಅಲೆಕ್ಸೇಯವಿಚ್ ಗಗಾರಿನ್ (ಮಾರ್ಚ್ ೯, ೧೯೩೪ – ಮಾರ್ಚ್ ೨೭, ೧೯೬೮) ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿ ಪಡೆದ ಸೋವಿಯತ್ ಅಂತರಿಕ್ಷಯಾನಿ.
ಜೀವನ:
ಯೂರಿ ಗಗಾರಿನ್ ಜನ್ಮ ಮಾರ್ಚ್ ೯, ೧೯೩೪ರಂದು ಮಾಸ್ಕೊ ಪಶ್ಚಿಮದಲ್ಲಿರುವ ಕ್ಲುಶಿನೊ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಪರಿವಾರದಲ್ಲಾಯಿತು.
ಉನ್ನತ ವಿದ್ಯಾಭ್ಯಾಸದ ಸಮಯದಲ್ಲಿ ವಿಮಾನ ಉಡಾವಣೆಯ ಗೀಳು ಬೆಳಸಿಕೊಂಡ ಗಗಾರಿನ್ ತದನಂತರ ಸೇನಾ ವೈಮಾನಿಕ ಶಿಕ್ಷಣವನ್ನು ಒರೆನ್ಬರ್ಗ್ ಪೈಲಟ್ ಶಾಲೆಯಿಂದ ೧೯೫೫ರಲ್ಲಿ ಪಡೆದರು. ೧೯೬೦ರಲ್ಲಿ ಅಂತರಿಕ್ಷಯಾನಕ್ಕಾಗಿ ಸೋವಿಯತ್ ಅಂತರಿಕ್ಷ ಸಂಸ್ಥೆ ಆಯ್ಕೆ ಪ್ರಕ್ರಿಯೆ ಶುರುಮಾಡಿತು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಗಗಾರಿನ್ ಸೇರಿದಂತೆ ೨೦ ಅಂತರಿಕ್ಷಯಾನಿಗಳು ಕೊನೆಹಂತಕ್ಕೆ ತಲುಪಿದರು. ಅಂತಿಮವಾಗಿ ೫ ಅಡಿ ೨ ಅಂಗುಲದ ಗಗಾರಿನ್ ಸರ್ವಾನುಮತದಿಂದ ಆಯ್ಕೆಯಾದರು. ಏಪ್ರಿಲ್ ೧೨, ೧೯೬೧ ರೊಂದು ಗಗಾರಿನ್ ವೋಸ್ಟಾಕ್ ೩ಕೆಎ (ವೋಸ್ಟಾಕ್ ೧)ಅಂತರಿಕ್ಷ ನೌಕೆಯಲ್ಲಿ ಪ್ರಯಾಣಿಸಿ ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
"ಇಲ್ಲಿ ಯಾವ ದೇವರೂ ಇಲ್ಲ" ಎಂದು ಅಂತರಿಕ್ಷ ಕಕ್ಷೆಯಿಂದ ಗಗಾರಿನ್ ಉದ್ಗರಿಸಿದರೆಂದು ಪತ್ರಿಕೆಗಳು ಪ್ರಕಟಿಸಿದ್ದವು. ಅಂತರಿಕ್ಷಯಾನದ ಮಧ್ಯದಲ್ಲಿಯೆ ಸೋವಿಯತ್ ಸರ್ಕಾರದಿಂದ ಸೀನಿಯರ್ ಲೆಫ್ಟನೆಂಟ್ ಪದವಿಯಿಂದ ಮೇಜರ್ ಪದವಿಗೆ ಗಗಾರಿನ್ ಬಡ್ತಿ ಪಡೆದರು. ಗಗಾರಿನ್ ಸುರಕ್ಷಿತವಾಗಿ ಮರಳುವುದು ಬಹುತೇಕ ಅಸಂಭವವೆಂದು ಸೋವಿಯತ್ ಅಧಿಕಾರಿ ವರ್ಗ ನಂಬಿತ್ತು ಆದರೆ ಯಶಸ್ವಿಯಾಗಿ ಯಾನದಿಂದ ಮರಳಿದ ಗಗಾರಿನ್ ತದನಂತರ ವಿಶ್ವವಿಖ್ಯಾತರಾಗಿ ಪ್ರಪಂಚದ ಹಲವೆಡೆ ಸನ್ಮಾನಿತರಾದರು. ಮಾರ್ಚ್ ೨೭, ೧೯೬೮ರೊಂದು ನಿಯತ್ಕಾಲಿಕ ಮಿಗ್ ೧೫ ವಿಮಾನ ಚಾಲನೆ ಅಭ್ಯಾಸ ನಡೆಸುವಾಗಾದ ಒಂದು ದುರಂತ ಅಪಘಾತದಲ್ಲಿ ಗಗಾರಿನ್ ಮೃತಪಟ್ಟರು.
ವ್ಯಾಲೆಂಟಿನಾ ವ್ಲಾಡಿಮಿರೊನಾ ಟೆರೆಶ್ಕೋವಾ ಒಬ್ಬ ನಿವೃತ್ತ ರಷ್ಯಾದ ಗಗನಯಾತ್ರಿ, ಎಂಜಿನಿಯರ್ ಮತ್ತು ರಾಜಕಾರಣಿ. ರಷಿಯಾದ ವ್ಯಾಲೆಂಟಿನಾ ತೆರೆಶ್ಕೊವಾ ಮೊದಲ ಮಹಿಳಾ ಗಗನಯಾತ್ರಿ, ಹಾಗೆಯೇ ಬಹುಶಃ ಮೊದಲ ನಾಗರಿಕ ಗಗನಯಾತ್ರಿ .
ಗಗನಯಾತ್ರಿಯಾಗಿ ತನ್ನ ನೇಮಕಾತಿಗೆ ಮುಂಚಿತವಾಗಿ, ತೆರೇಶ್ಕೋವಾ ಜವಳಿ ಕಾರ್ಖಾನೆಯ ಜೋಡಣಾ ಕಾರ್ಯಕರ್ತರಾಗಿದ್ದರು ಮತ್ತು ಹವ್ಯಾಸಿ ಸ್ಕೈಡೈವರ್ ಆಗಿದ್ದರು
ಜೀವನ :
ಟೆರೆಶ್ಕೋವಾ ಮಧ್ಯ ರಷ್ಯಾದಲ್ಲಿರುವ ಯಾರೊಸ್ಲಾವ್ಬ್ ಒಬ್ಲಾಸ್ಟ್ನ ಟುಟಯೆವ್ಸ್ಕಿ ಜಿಲ್ಲೆಯ ಮ್ಯಾಸ್ಲೆನ್ನಿಕೊವೊ ಹಳ್ಳಿಯಲ್ಲಿ ಜನಿಸಿದರು. ಆಕೆಯ ಪೋಷಕರು ಬೆಲಾರಸ್ನಿಂದ ವಲಸೆ ಬಂದಿದ್ದರು. ತೆರೇಶ್ಕೋವಾ ಅವರ ತಂದೆ ಟ್ರಾಕ್ಟರ್ ಡ್ರೈವರ್ ಆಗಿದ್ದು, ತಾಯಿಯು ಜವಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು
ಅವರು ಝುಕೊವ್ಸ್ಕಿ ಏರ್ ಫೋರ್ಸ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದರು ಮತ್ತು ಗಗನಯಾತ್ರಿ ಎಂಜಿನಿಯರ್ ಆಗಿ ಪದವಿ ಪಡೆದರು. 1977 ರಲ್ಲಿ ಅವರು ಎಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪಡೆದರು.
ಫೆಬ್ರವರಿ 16, 1962 ರಂದು ವಲೆಂಟಿನಾ ತೆರೇಶ್ಕೋವಾ ಸ್ತ್ರೀ ಗಗನಯಾತ್ರಿಯಾಗಿ ಸೇರ್ಪಡೆಗೊಳ್ಳಲು ಆಯ್ಕೆಯಾದರು. 6 ಜೂನ್ 1963 ರಂದು ವ್ಯೋಮನೌಕೆ ವೋಸ್ಟಾಕ್ 6 ದೋಷರಹಿತವಾಗಿ ಉಡ್ಡಯಣಗೊಂಡಿತು , ಮತ್ತು ಟೆರೆಶ್ಕೋವಾ ಬಾಹ್ಯಾಕಾಶದಲ್ಲಿ ಮೊದಲ ಮಹಿಳೆಯಾದರು .
"ರಾಕೇಶ್ ಶರ್ಮಾ" (ಜನನ: ೧೩ ಜನವರಿ, ೧೯೪೯)ಅಂತರಿಕ್ಷಯಾನ ಮಾಡಿದ ಪ್ರ್ರಥಮ ಭಾರತೀಯ. ೩ ಏಪ್ರಿಲ್, ೧೯೮೪ರಲ್ಲಿ ಸೋವಿಯತ್ ಅಂತರಿಕ್ಷ ನೌಕೆ ಸೋಯಜ್ ಟಿ-೧೧ ರಲ್ಲಿ ಪ್ರಯಾಣಿಸಿ ಸುಮಾರು ೮ ದಿನ ಅಂತರಿಕ್ಷದಲ್ಲಿ ಕಳೆದರು.
ಜೀವನ :
ರಾಕೇಶ್ ಶರ್ಮಾ ೧೩ ಜನವರಿ, ೧೯೪೯ರೊಂದು ಭಾರತದ ಪಂಜಾಬ್ ಪ್ರಾಂತ್ಯದ ಪಟಿಯಾಲಾ ನಗರದಲ್ಲಿ ಜನಿಸಿದರು.
ಭಾರತೀಯ ವಾಯು ಸೇನೆಯಲ್ಲಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ, ೨೦ ಸೆಪ್ಟೆಂಬರ್, ೧೯೮೨ರಲ್ಲಿ ಅಂತರಿಕ್ಷಯಾನಿಯಾಗಿ ಆಯ್ಕೆಯಾದರು.
ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ರಾಕೇಶ್ ಶರ್ಮಾ ಮತ್ತು ವಿಂಗ್ ಕಮ್ಯಾಂಡರ್ ರವೀಶ್ ಮಲ್ಹೊತ್ರಾ ಆಯ್ಕೆಯಾಗಿ ರಷ್ಯಾದ ಯೂರಿ ಗಗಾರಿನ್ ಕೇಂದ್ರದಲ್ಲಿ ಮತ್ತು ಬೆಂಗಳೂರಿನ ಇಸ್ರೋ ಕೇಂದ್ರಗಳಲ್ಲಿ ಅಂತರಿಕ್ಷಯಾನಕ್ಕಾಗಿ ತರಬೇತಿ ಪಡೆದರು.
ಕೊನೆಯಲ್ಲಿ ರಾಕೇಶ್ ಶರ್ಮಾರನ್ನು ಅಂತರಿಕ್ಷಯಾನ ಮಾಡುವ ವ್ಯಕ್ತಿ ಮತ್ತು ಅವರ ಬದಲಿ ರವೀಶ್ ಮಲ್ಹೊತ್ರಾ ಎಂದು ನಿರ್ಧರಿಸಲಾಯಿತು. ಸೋವಿಯತ್ ಗಗನಯಾತ್ರಿ ಯೂರಿ ಮ್ಯಾಲಶೇವ್ ನೇತ್ವತ್ವದಲ್ಲಿ ಹಾಗು ಗೆನಡಿ ಸ್ಟ್ರೆಕಲೋವ್ ಜೊತೆಯಲ್ಲಿ ರಾಕೇಶ್ ೩ ಏಪ್ರಿಲ್, ೧೯೮೪ರೊಂದು ಇಂದಿನ ಕಜಖಸ್ಥಾನದಲ್ಲಿರುವ ಬೈಕನೌರ್ ಅಂತರಿಕ್ಷಾ ಉಡಾವಣಾ ಕೇಂದ್ರದಿಂದ ಹಾರಿದ ಸೋಯಜ್ ಟಿ-೧೧ ಏರಿ ಸಲ್ಯೂಟ್-೭ ಅಂತರಿಕ್ಷ ನಿಲ್ದಾಣ ಸೇರಿದರು. ತಮ್ಮ ೩೫ ವರ್ಷದಲ್ಲಿ ಅಂತರಿಕ್ಷಯಾನ ಮಾಡಿದ ರಾಕೇಶ್ ಸಲ್ಯೂಟ್-೭ ಅಂತರಿಕ್ಷ ನಿಲ್ದಾಣದಲ್ಲಿ ೮ ದಿನ ಕಳೆದು ಹಲವಾರು ಪ್ರಯೋಗಗಳು ಮತ್ತು ಛಾಯಾಗ್ರಹಣ ನೆಡಸಿದರು. ಈ ಸಾಧನೆಯಿಂದಾಗಿ ಭಾರತ ಅಂತರಿಕ್ಷಯಾನ ಕೈಗೊಂಡ ೧೪ನೆ ರಾಷ್ಟ್ರ ಮತ್ತು ರಾಕೇಶ್ ಅಂತರಿಕ್ಷಯಾನ ಮಾಡಿದ ೧೩೮ನೆ ಯಾತ್ರಿ ಎಂಬ ದಾಖಲೆ ಸೃಷ್ಟಿಯಾಯಿತು. ೧೧ ಏಪ್ರಿಲ್, ೧೯೮೪ರೊಂದು ರಾಕೇಶ್ ಸೋಯಜ್ ಟಿ-೧೦ ಏರಿ ಭೂಮಿ ಸೇರಿದರು.
ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಂತರಿಕ್ಷದಿಂದ ಭಾರತ ಹೇಗೆ ಕಾಣುತ್ತದೆ ಎಂದು ಕೇಳಿದಾಗ ಕವಿ ಮುಹಮ್ಮದ್ ಇಕ್ಬಾಲರ ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ಥಾನ್ ಹಮಾರಾ (ಎಲ್ಲಾ ನಾಡಿಗಿಂತ ಹಿಂದೂಸ್ಥಾನ ಶ್ರೇಷ್ಟ) ಕವಿತೆಯ ಸಾಲುಗಳನ್ನು ರಾಕೇಶ್ ವಾಚಿಸಿದ ಪ್ರಸಂಗ ಬಹು ಜನಪ್ರಿಯವಾಯಿತು.
ತಮ್ಮ ಸಾಧನೆಗಾಗಿ ೧೯೮೫ರಲ್ಲಿ ಭಾರತ ಸರ್ಕಾರದಿಂದ ರಾಕೇಶ್ ಅಶೋಕ ಚಕ್ರ ಪದಕ ಪಡೆದರು. ಯಾನದ ನಂತರ ವಾಯುಸೇನಾ ಪಡೆಯಿಂದ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಸೇರಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸಿದರು. ಕೊನೆಯಲ್ಲಿ ವಿಂಗ್ ಕಮ್ಯಾಂಡರ್ ಹುದ್ದೆ ಅಲಂಕರಿಸಿ, ೨೦೦೧ರಲ್ಲಿ ರಾಕೇಶ್ ಎಚ್‌ಎಎಲ್‌ನಿಂದ ನಿವೃತ್ತರಾದರು.
ಕಲ್ಪನಾ ಚಾವ್ಲ(ಜುಲೈ ೧, ೧೯೬೧ - ಫೆಬ್ರವರಿ ೧, ೨೦೦೩) - ಮೊದಲ ಭಾರತ ಸಂಜಾತ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆ. ಅಂತರಿಕ್ಷ ನೌಕೆ ಕೊಲಂಬಿಯಾ ಭೂವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು
ಜೀವನ :
1962 ಮಾರ್ಚ 17ರಂದು ಹರಿಯಾಣದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದ ಕಲ್ಪನಾ ಚಾವ್ಲ, 1982ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು ಅಮೇರಿಕಾ ದೇಶದಲ್ಲಿ ಅಧ್ಯಯನ ಮಾಡಿದರು.ಅಮೇರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು.
೧೯೯೫ರಲ್ಲಿ ಕಲ್ಪನಾ, ಅಮೇರಿಕಾದಲ್ಲಿನ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಸೇರಿದರು.
೧೯೯೭ರ ನವೆಂಬರ್ ೧೯ರಂದು ಇವರ ಮೊದಲ ಬಾಹ್ಯಾಕಾಶಯಾನ ಪ್ರಾರಂಭವಾಯಿತು.
ನಂತರ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು ೮೦ ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು.
ನಿಧನ:
೨೦೦೩ರ ಫೆಬ್ರವರಿ ೧ರಂದು ಕೊಲಂಬಿಯಾ ಆಕಾಶನೌಕೆ ಎಸ್.ಟಿ.ಎಸ್.-೮೭ರಲ್ಲಿ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ,ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.ಈ ನೌಕೆಯಲ್ಲಿ ಇವರೊಂದಿಗೆ ಇತರ ಆರು ಗಗನಯಾನಿಗಳಿದ್ದರು.
ನೆನೆಪಾಗಿ ಕಲ್ಪನಾ :
ಫೆಬ್ರವರಿ ೫ ೨೦೦೩ ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ "ಮೆಟ್ ಸ್ಯಾಟ್" ಉಪಗ್ರಹ ಸರಣಿಯನ್ನು "ಕಲ್ಪನಾ" ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
ನಕ್ಷತ್ರ ಗ್ರಹ "೫೧೮೨೬ ಕಲ್ಪನಾಚಾವ್ಲಾ" ಎಂದು ನಾಮಕರಣ ಮಾಡಲಾಗಿದೆ.
ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ "ಲಿಟಲ್ ಇಂಡಿಯಾ" ಪ್ರದೇಶದ ೭೪ನೇ ರಸ್ತೆಯನ್ನು "ಕಲ್ಪನಾ ಚಾವ್ಲಾ ಪಥ" ಎಂದು ಹೆಸರಿಸಲಾಗಿದೆ.
ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯ ದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
ನಾಸಾ ಸಂಸ್ಥೆಯು ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಲಾಗಿದೆ. [೧] (ndtv)
ಅಮರ ಚಿತ್ರ ಕಥೆ ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ ಕೊಲಂಬಿಯಾ ಪರ್ವತಗಳು ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.
ನೀಲ್ ಆರ್ಮ್‌ಸ್ಟ್ರಾಂಗ್ (ಜನನ: ೫ ಆಗಸ್ಟ್, ೧೯೩೦) ಅಮೇರಿಕಾ ಸಂಯುಕ್ತ ಸಂಸ್ಥಾನದ ಅಂತರಿಕ್ಷಯಾನಿ ಮತ್ತು ವೈಮಾನಿಕ. ನೀಲ್ ಆರ್ಮ್‌ಸ್ಟ್ರಾಂಗ್ ಭೂಮಿಯ ಉಪಗ್ರಹವಾದ ಚಂದ್ರನ ಮೇಲೆ ಕಾಲಿರಿಸಿದ ಮೊದಲ ಮಾನವ . ೧೯೬೬ರಲ್ಲಿ ಅಂತರಿಕ್ಷ ನೌಕೆಯಾದ ಜೆಮಿನಿ ೮ರ ಚಾಲಕರಾಗಿ ಹಾಗು ೧೯೬೯ರರಲ್ಲಿ ಚಂದ್ರಯಾನ ಮಾಡಿದ ನೌಕೆ ಅಪೊಲೊ ೧೧ರ ಮುಖ್ಯಸ್ಥರಾಗಿ ಒಟ್ಟು ಎರಡು ಬಾರಿ ಅಂತರಿಕ್ಷಯಾನ ಮಾಡಿದರು.
ಜೀವನ :
ಅಮೇರಿಕಾ ಸಂಯುಕ್ತ ಸಂಸ್ಥಾನದ ಒಹಾಯೊ ರಾಜ್ಯದ ವಾಪಕೊನೆಟಾ ಎಂಬ ಉರಿನಲ್ಲಿ ೫ ಆಗಸ್ಟ್, ೧೯೩೦ ರಂದು ವಯೋಲಾ ಮತ್ತು ಸ್ಟೀಫನ್ ಆರ್ಮ್‌ಸ್ಟ್ರಾಂಗ್ ದಂಪತಿಗಳ ಮೊದಲನೆ ಸಂತತಿಯಾಗಿ ನೀಲ್ ಆರ್ಮ್‌ಸ್ಟ್ರಾಂಗ್ ಜನಿಸಿದರು.
ತಂದೆ ಸ್ಟೀಫನ್ ಒಹಾಯೊ ರಾಜ್ಯಸರ್ಕಾರದ ಉದ್ಯೊಗಿಯಾದ ಕಾರಣ ಇವರ ಬಾಲ್ಯ ಆ ರಾಜ್ಯದ ಹಲವಾರು ನಗರಗಳಲ್ಲಿ ಕಳೆಯಿತು.
ತಮ್ಮ ಆರನೆ ವಯಸ್ಸಿನಲ್ಲಿ ಮೊದಲ ಬಾರಿ ವಿಮಾನಯಾನ ಮಾಡಿದ ನೀಲ್ ಆರ್ಮ್‌ಸ್ಟ್ರಾಂಗ್, ತಮ್ಮ ೮ನೆ ವಯಸ್ಸಿನಿಂದಲೆ ವಿಮಾನಗಳ ನಮೂನೆ ರಚಿಸಿತೊಡಗಿದರು.
ತಮ್ಮ ೧೫ನೆ ವಯಸ್ಸಿನಿಂದಲೆ ವಿಮಾನ ಚಾಲನೆಯ ಶಿಕ್ಷಣಕ್ಕಾಗಿ ಹಣ ಉಳಿಸತೊಡಗಿದ ಇವರು, ತಮ್ಮ ೧೬ನೆ ವಯಸ್ಸಿನಲ್ಲಿ ಪ್ರಥಮ ಬಾರಿಗೆ ವಿಮಾನ ಉಡಾವಣೆ ಮಾಡಿದರು.
ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿದ ನೀಲ್ ಆರ್ಮ್‌ಸ್ಟ್ರಾಂಗ್ ವ್ಯಾಸಂಗದ ನಡುವೆ ಮೂರು ವರ್ಷ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದರು. ಇವರು ನೌಕಾಪಡೆಯಲ್ಲಿರುವಾಗ ನೌಕಾಪಡೆಯ ವೈಮಾನಿಕ ಯೋಧನಾಗಿ ಕೊರಿಯಾ ಯುದ್ಧದ್ದಲ್ಲಿ ಪಾಲ್ಗೊಂಡು ಹಲವಾರು ಪದಕಗಳ ಮತ್ತು ಪ್ರಶಸ್ತಿಗಳನ್ನು ಪಡೆದರು. ಕೆಲ ವರುಷಗಳು ಕಾಲ ಪರೀಕ್ಷಣಾ ವಿಮಾನ ಚಾಲಕರಾಗಿ ಸೇವೆ ಸಲ್ಲಿಸಿದ ಇವರು, ೧೯೬೨ರಲ್ಲಿ ಅಂತರಿಕ್ಷಯಾನಿಯಾಗಿ ಆಯ್ಕೆಯಾದರು.
೧೬ ಮಾರ್ಚ್, ೧೯೬೬ರಲ್ಲಿ ಜೆಮಿನಿ ೮ ಅಂತರಿಕ್ಷ ನೌಕೆಯ ಮುಖ್ಯ ನಿರ್ವಾಹಕರಾಗಿ ನೀಲ್ ಆರ್ಮ್‌ಸ್ಟ್ರಾಂಗ್ ತಮ್ಮ ಮೊದಲ ಅಂತರಿಕ್ಷಯಾನ ಕೈಗೊಂಡರು. ೧೯೬೯ರಲ್ಲಿ ಅಪೊಲೊ ೧೧ರ ಉಡಾವಣೆಯ ಮುಖ್ಯಸ್ಥರಾಗಿ ನೇಮಿಸಲ್ಪಟ್ಟ ನೀಲ್ ಆರ್ಮ್‌ಸ್ಟ್ರಾಂಗ್, ಯುಜೀನ್(ಎಡ್ವಿನ್) "ಬಜ್" ಆಲ್ಡ್ರಿನ್ ಜೊತೆ ೨೦ ಜುಲೈ ೧೯೬೯ರೊಂದು ಚಂದ್ರನ ಮೇಲೆ ತಮ್ಮ ನೌಕೆಯನ್ನಿಳಿಸಿದರು.
೨೧ ಜುಲೈ ೧೯೬೯ ರಂದು ನೌಕೆಯಿಂದ ಇಳಿದು ಚಂದ್ರನ ಮೇಲೆ ಪದಾರ್ಪಣೆ ಮಾಡಿದ ಮೊದಲ ಮಾನವ ಎಂಬ ದಾಖಲೆ ಸೃಷ್ಟಿಸಿದರು.
"ದಟ್ಸ್ ಒನ್ ಸ್ಮಾಲ್ ಸ್ಟೆಪ್ ಫಾರ್ ಎ ಮ್ಯಾನ್, ಒನ್ ಜಯಂಟ್ ಲೀಪ್ ಫಾರ್ ಮ್ಯಾನ್‌ಕೈಂಡ್" (That's one small step for [a] man, one giant leap for mankind) ಅರ್ಥಾತ್ "ಅದು ಮುನುಷ್ಯನಿಗೆ ಒಂದು ಸಣ್ಣ ಹೆಜ್ಜೆ,[ಆದರೆ] ಮನುಕುಲಕ್ಕೆ ಅಗಾಧವಾದ ಲಂಘನ" ಎಂದು ಅವರು ಚಂದ್ರನ ಮೇಲೆ ಪದಾರ್ಪಣೆ ಮಾಡಿದ ನಂತರದ ಉದ್ಗರಿಸಿದ ಮಾತು ವಿಶ್ವವಿಖ್ಯಾತವಾಯಿತು.
೧೯೭೧ರಲ್ಲಿ ನಾಸಾದಿಂದ ನಿವೃತ್ತಿ ಪಡೆದು ಸಿನ್‌ಸಿನಾಟಿ ವಿಶ್ವಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಶ್ರೀಯುತರು ಕೆಲಸ ಶುರುಮಾಡಿದರು. ೧೯೭೮ರಲ್ಲಿ ಪ್ರಾಧ್ಯಾಪಕ ಉದ್ಯೋಗ ತ್ಯಜಿಸಿ, ಹಲವು ಸಂಸ್ಥೆಗಳಿಗೆ ಸಲಹೆಗಾರರಾಗಿ ಹಾಗು ವಾಗ್ಮಿಯಾಗಿ ಕೂಡ ಕಾರ್ಯ ನಿರ್ವಹಿಸಿದರು.
೨೫ ಆಗಸ್ಟ್ ೨೦೧೨ರಂದು ವಿಧಿವಶರಾದರು.
ಮನಾಲಿ ಕಲ್ಲತ್ ವೈನು ಬಪ್ಪು ಭಾರತೀಯ ಖಗೋಳಶಾಸ್ತ್ರಜ್ಞ ಮತ್ತು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಭಾರತದಲ್ಲಿ ಹಲವಾರು ಖಗೋಳ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲು ಬಪ್ಪು ನೆರವಾದರು
ವೈನು ಬಪ್ಪು ಅವರು ಥಿಯಿಯ ಕುಟುಂಬದಲ್ಲಿ 1927 ರ ಆಗಸ್ಟ್ 10 ರಂದು ಚೆನ್ನೈನಲ್ಲಿ ಮನಾಳಿ ಕುಕುಝಿ ಮತ್ತು ಸುನ್ನಣ್ಣ ಬಪ್ಪು ಅವರ ಏಕೈಕ ಪುತ್ರನಾಗಿ ಜನಿಸಿದರು
ಅವರು ಮದ್ರಾಸ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಅವರ ಪಿಎಚ್ಡಿಗಾಗಿ ಹಾರ್ವರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಆಸ್ಟ್ರೋನಮಿಗೆ ಹಾಜರಾಗಿದ್ದರು.
ಅವರು ನೈನಿತಾಲ್ನಲ್ಲಿ ಒಂದು ವೀಕ್ಷಣಾಲಯವನ್ನು ನಿರ್ಮಿಸಲು ಖಗೋಳಶಾಸ್ತ್ರಜ್ಞರ ತಂಡಕ್ಕೆ ಮುಖ್ಯಸ್ಥರಾಗಿ ನೇಮಕಗೊಂಡರು.
💎💎💎💎💎💎💎💎💎💎💎💎💎💎💎
ಸಂಗ್ರಹ. ✍️ T.A.ಚಂದ್ರಶೇಖರ
No comments:
Post a Comment