ಶಿಕ್ಷಣವೇ ಶಕ್ತಿ

Thursday 17 December 2020

 🌹 *ಹೊಸಬೆಳಕು*🌹

==========================

⚜️ *ಗುಜರಾತ್ ರಾಜ್ಯದ* ಸಂಪೂರ್ಣ ಮಾಹಿತಿ,

🌸🌸🌸🌸🌸🌸🌸🌸🌸


🔹 ಗುಜರಾತ್ ರಾಜ್ಯದ ವಿಸ್ತೀರ್ಣ= *1,96,024 ಚ.ಕಿಮೀ.*


🔸ರಾಜ್ಯವಾಗಿ ರಚನೆಯಾದ ವರ್ಷ- *1960 ಮೇ 1*


🔸 ರಾಜ್ಯಧಾನಿ- *ಗಾಂಧಿನಗರ*( ಮೊದಲ ರಾಜಧಾನಿ *ಅಮದಾಬಾದ್*)


🔸 ಗುಜರಾತ ರಾಜ್ಯದ ಅಧಿಕೃತ ಭಾಷೆ= *ಗುಜರಾತಿ*


🔹 ಗುಜರಾತ್ ರಾಜ್ಯದ ಹಾಡು= *ಜೈ ಜೈ ಗರವಿ ಗುಜರಾತ್*

'' ಹೆಮ್ಮೆಯ ಗುಜರಾತ್‌ಗೆ ವಿಜಯ ''


🔸 ಗುಜರಾತ್ ರಾಜ್ಯದ ಪ್ರಾಣಿ= *ಏಷ್ಯಾಟಿಕ್ ಸಿಂಹ*


🔹ಗುಜರಾತ್ ರಾಜ್ಯದ ಪಕ್ಷಿ= *ಗ್ರೇಟರ್ ಫ್ಲೆಮಿಂಗೊ*


🔸 ಗುಜರಾತ್ ರಾಜ್ಯದ ಹೂವು= *ಮಾರಿಗೋಲ್ಡ್* ( ಗಲ್ಗೋಟಾ )


🔹 ಗುಜರಾತ್ ರಾಜ್ಯದ ಹಣ್ಣು = *ಮಾವು*


🔸 ಗುಜರಾತ್ ರಾಜ್ಯದ ಮರ= *ಆಲದ ಮರ*


🔹 ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ= *Vibrant Gujarat*

( "ರೋಮಾಂಚಕ ಗುಜರಾತ್")


🔹 ಪ್ರಸ್ತುತ ಗುಜರಾತ್ ರಾಜ್ಯದ ಮುಖ್ಯಮಂತ್ರಿ- *ವಿಜಯ್ ರೂಪಾನಿ,*


🔸 ಪ್ರಸ್ತುತ ಗುಜರಾತ್ ರಾಜ್ಯದ ರಾಜ್ಯಪಾಲ- *ಆಚರ್ಯ ದೇವವ್ರತ,*

  

🔸 ಗುಜರಾತ ರಾಜ್ಯದ ನೃತ್ಯಗಳು- *ಗಾಬ್ರ*. *ದಾಂಡಿಯಾ,* *ಬಾವಿ*, 


🔹 ವಿಧಾನಸಭೆ- *182 ಸದಸ್ಯರು* , 


🔸 ರಾಜ್ಯಸಭೆ= *11 ಸದಸ್ಯರು*


🔹 ಲೋಕಸಭೆ= *26 ಸದಸ್ಯರು*


🔸 *2017ರಲ್ಲಿ ಗುಜರಾತ್ ರಾಜ್ಯದ ಅಮದಾಬಾದ್ ನಗರವು ವಿಶ್ವಪರಂಪರೆ ಪಟ್ಟಿಗೆ ಸೇರಿದೆ,* 


🔹ಅಹಮದಬಾದ್ ನಗರವು *ವಿಶ್ವಪರಂಪರೆ ಪಟ್ಟಿಗೆ ಸೇರಿದ ಭಾರತದ ಮೊದಲ ನಗರವಾಗಿದೆ*, 


🔹ಗುಜರಾತ್ ರಾಜ್ಯದ ರಾಜಧಾನಿ *ಗಾಂಧಿನಗರದಲ್ಲಿ ಅಂತರಾಷ್ಟ್ರೀಯ ಶೇರು ವಿನಿಮಯ ಕೇಂದ್ರವನ್ನು ಸ್ಥಾಪಿಸಲಾಗಿದೆ*, 


🔹 ಭಾರತದಲ್ಲಿ *ಅತಿ ಹೆಚ್ಚು ಕರಾವಳಿ ತೀರ ಹೊಂದಿರುವ ರಾಜ್ಯ ಗುಜರಾತ್*(1600KM )


🔹 ಗುಜರಾತ್ ರಾಜ್ಯದಲ್ಲಿರುವ ಪ್ರಮುಖ ಬಂದರುಗಳು, *ಕಾಂಡ್ಲಾ ಬಂದರು*

 *ಲೋಥಲ್ ಬಂದರು*- ಇದು ಸಿಂಧೂ ನಾಗರಿಕತೆ ಕಾಲಕ್ಕೆ ಸಂಬಂಧಿಸಿದ, ಲೋಥಲ್ ಬಂದರು ಪ್ರಪಂಚದ ಮೊದಲ ಬಂದರು ಎಂದು ಪ್ರಸಿದ್ಧಿ ಪಡೆದಿದೆ,

 *ಅಲಾಂಗ್ ಬಂದರು*- ಇದು ಹಡಗು ಒಡೆಯುವ ಬಂದರು,


🔹 *1026ರಲ್ಲಿ ಗಜನಿ ಮಮ್ಮದ್ 16ನೇ ದಾಳಿಯನ್ನು ಗುಜರಾತ ರಾಜ್ಯದಲ್ಲಿರುವ ಸೋಮನಾಥ ದೇವಾಲಯದ ಮೇಲೆ ಮಾಡಿದನು, ಸೋಮನಾಥ ದೇವಾಲಯವನ್ನು ಸೋಲಂಕಿ ದೊರೆಗಳು ಕಟ್ಟಿಸಿದ್ದಾರೆ*,   


🔹ಗುಜರಾತ್ ರಾಜ್ಯದಲ್ಲಿರುವ *ಜುನಾಗಡ್ ಕಲ್ಲಿನ ಶಾಸನ ಅಥವಾ ಗಿರ್ನಾರ್ ಶಾಸನವು,  ಭಾರತದ ಪ್ರಥಮ ಸಂಸ್ಕೃತ ಶಾಸನ ವಾಗಿದೆ, ಈ ಶಾಸನವು ರುದ್ರದಾಮನಿಗೆ ಸಂಬಂಧಿಸಿದೆ*


🔹ಗುಜರಾತ್ ರಾಜ್ಯದ *ಅಂಕಲೇಶ್ವರ ಎಂಬ ಸ್ಥಳದಲ್ಲಿ ಪೆಟ್ರೋಲಿಯಂ ಶುದ್ಧೀಕರಣ ಘಟಕ ಇದೆ*


🔸ಗುಜರಾತ್ ಕಛ್ ಜಿಲ್ಲೆಯಲ್ಲಿ *ಧೋಲವಿರ ಬಂದರವಿದೆ.*


🔹1869. ಅಕ್ಟೋಬರ್ 2ರಂದು  ಗುಜರಾತ್ ರಾಜ್ಯದ ಪೂರ ಬಂದರು ಎಂಬ ಸ್ಥಳದಲ್ಲಿ *ಮಹಾತ್ಮ ಗಾಂಧೀಜಿ ಅವರು ಜನಿಸಿದರು,*


🔹ಗುಜರಾತ್ ರಾಜ್ಯದ ಅಮದಾಬಾದ್ ಎಂಬ ಸ್ಥಳದಲ್ಲಿ *ಸರ್ದಾರ್ ವಲ್ಲಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ,*


🔹ಗುಜರಾತ್ ರಾಜ್ಯದ ಅಮದಾಬಾದ್ ಎಂಬ ಸ್ಥಳದಲ್ಲಿ ಗಾಂಧೀಜಿ1916 ರಲ್ಲಿ ನಿರ್ಮಿಸಿದ *ಸಬರಮತಿ ಆಶ್ರಮ ಸ್ಥಾಪಿಸಿದರು*,  


ಗುಜರಾತ್ ರಾಜ್ಯದ *ಗಿರಿ ರಾಷ್ಟ್ರೀಯ ಉದ್ಯಾನವು ಸಿಂಹಗಳಿಗೆ ಹೆಸರುವಾಸಿಯಾಗಿದೆ*, 


🔸ಗುಜರಾತ್ ರಾಜ್ಯದ *ಆನಂದ್ ಎಂಬ ಸ್ಥಳದಲ್ಲಿ 1965ರಲ್ಲಿ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು  ಸ್ಥಾಪಿಸಲಾಯಿತು*


🔹ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಮೊದಲ ಅಧ್ಯಕ್ಷರು ಭಾರತದ ಶ್ವೇತ ಕ್ರಾಂತಿ/ ಕ್ಷೀರ ಕ್ರಾಂತಿಯ ಪಿತಾಮಹ *ಡಾಕ್ಟರ್ ವರ್ಗೀಸ್ ಕುರಿಯನ್ ಆಗಿದ್ದರು,*


🔸ಗುಜರಾತ್ ರಾಜ್ಯದ ನರ್ಮದಾ ನದಿಗೆ *ಸರ್ದಾರ್ ಸರೋವರ ಡ್ಯಾಮ್ ನಿರ್ಮಿಸಲಾಗಿದೆ*, 


🔹ಗುಜರಾತ್ ರಾಜ್ಯವು *ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯವಾಗಿದೆ,*


🔸🔸ಭಾರತದ ಪಶ್ಚಿಮದ ತುತ್ತತುದಿ *ಗುಜರಾತ್ ರಾಜ್ಯವಾಗಿದೆ.*


🔹ಭಾರತದಲ್ಲಿ ಬ್ರಿಟಿಷರು ಪ್ರಾರಂಭಿಸಿದ ಪ್ರಥಮ ವ್ಯಾಪಾರ ಕೇಂದ್ರ ಗುಜರಾತ್ ರಾಜ್ಯದ *ಸೂರತ್ ಎಂಬ ಸ್ಥಳದಲ್ಲಿ. ಸುರತ್ ಎಂಬ ಸ್ಥಳವು  ತಪತಿ ನದಿ ದಂಡೆ ಮೇಲಿದೆ,*  


🔸ಭಾರತದಲ್ಲಿ ಮಹಾತ್ಮಗಾಂಧಿ "ಮೊದಲು ಉಪವಾಸ ಸತ್ಯಾಗ್ರಹ" ಗುಜರಾತ್ ರಾಜ್ಯದ *ಅಹಮದಾಬಾದ್ ಎಂಬ ಸ್ಥಳದಲ್ಲಿ 1918 ರಲ್ಲಿ ಹತ್ತಿ ಗಿರಣಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಮಾಡಿದರು*,


🔹ಗುಜರಾತ್ ರಾಜ್ಯದ *ಖೇಡಾ  ಎಂಬಲ್ಲಿ ರೈತರಿಗೆ ಸಂಬಂಧಿಸಿದ ಸತ್ಯಾಗ್ರಹ1918ರಲ್ಲಿ ನಡಿಯಿತು.*


🔹ಗುಜರಾತ್ ರಾಜ್ಯದ ಸುರತ್ ಎಂಬಲ್ಲಿ *ಕಕ್ರಪಾರ ಅನು ವಿದ್ಯುತ್ ಸ್ಥಾವರ ಇದೆ*, 


🔸ವಿಶ್ವದ ಅತಿ ದೊಡ್ಡ "ಉಪ್ಪಿನ ಮರಭೂಮಿ" *ರಾಣಾ ಆಫ್ ಕಚ್ ಗುಜರಾತ್ ರಾಜ್ಯದಲ್ಲಿದೆ*,


🔹ಗುಜರಾತ್ ರಾಜ್ಯದ ಸೂರತ್ ಎಂಬಲ್ಲಿ 1907ರಲ್ಲಿ *ರಾಸಬಿಹಾರಿ ಘೋಷ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯಿತು*, 


🔹ಗುಜರಾತ್ ರಾಜ್ಯದ ಮೊದಲ ಮಹಿಳಾ ಡಿಜಿಪಿ- *ಗೀತಾ ಜೋಹ್ರೀ*


🔸ಗುಜರಾತ್ ರಾಜ್ಯದ ಗಾಂಧಿನಗರ ಎಂಬಲ್ಲಿ 2008ರಲ್ಲಿ *ಐ.ಐ.ಟಿ ಯನ್ನು  ಸ್ಥಾಪಿಸಲಾಯಿತು*.


🔸ಗುಜರಾತ್ ರಾಜ್ಯದ ರಾಜಕೋಟ್ ಎಂಬಲ್ಲಿ *ವ್ಯಾಟ್ಸನ್ ವಸ್ತುಸಂಗ್ರಹಾಲಯವಿದೆ*,  


🔸ಗುಜರಾತ್ ರಾಜ್ಯ  ಸಮುದ್ರ ಉಪ್ಪನ್ನು (ಅಡುಗೆ ಉಪ್ಪು) ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ,


🔹ಗುಜರಾತ್ ರಾಜ್ಯದ  *ಗಿರ್ನಾರ್ ನಗರವು ಜೈನ ದೇವಾಲಯದ ನಗರ ಎಂದು ಪ್ರಸಿದ್ಧಿ ಪಡೆದಿದೆ*


🔹ಗುಜರಾತ್ ರಾಜ್ಯದ "ದ್ವಾರಕನಾಥ್" ಎಂಬ ಸ್ಥಳದಲ್ಲಿ *ಶಂಕರಾಚಾರ್ಯರು ಸ್ಥಾಪಿಸಿದ ಕಾಳಿಕಾಪೀಠ ವಿದೆ,*


🔸ಗುಜರಾತ *ರಾಣಿ ಬಾವಿ* ವಿಶ್ವಪರಂಪರೆ ಪಟ್ಟಿಗೆ ಸೇರಿದೆ,


🔹ಗುಜರಾತ್ ರಾಜ್ಯದ *ಬುಜ್* ಎಂಬ ಸ್ಥಳದಲ್ಲಿ *ಏಷ್ಯಾದ ಮೊದಲ ಸೌರ ಕೊಳವನ್ನು ನಿರ್ಮಿಸಲಾಗಿದೆ*, 


🔸ಗುಜರಾತ್ ರಾಜ್ಯದ *ಹೈಕೋರ್ಟ್ ಅಮದಾಬಾದ್ ನಗರದಲ್ಲಿದೆ*.


🔹ಗುಜರಾತ್ ರಾಜ್ಯದ *ಸನಂದ* ಎಂಬ ಪ್ರದೇಶದಲ್ಲಿ *ಟಾಟಾ ನ್ಯಾನೋ ತಯಾರಿಕ ಘಟಕ ಇದೆ*


🔹ಗುಜರಾತ್ ರಾಜ್ಯದ ಅಹಮದ್ ಬಾದ್ ಎಂಬ ನಗರದಲ್ಲಿ *ಸರ್ದಾರ್ ವಲ್ಲಬಾಯ್ ಪಟೇಲ್ ಸ್ಟೇಡಿಯಮ್ ಇದೆ*,


🔹ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾದ *ವಜುಭಾಯಿ ವಾಲಾ* ಅವರು ಗುಜರಾತ್ ರಾಜ್ಯದವರು

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು