ಶಿಕ್ಷಣವೇ ಶಕ್ತಿ

Wednesday, 19 May 2021

ಕಿರು ಪರಿಚಯ

ನಾಥೂರಾಮ್ ಗೋಡ್ಸೆ


ನಾಥೂರಾಮ್‌ ವಿನಾಯಕ್‌ ಗೋಡ್ಸೆ (೧೯ ಮೇ ೧೯೧೦ – ೧೫ ನವೆಂಬರ್‌‌ ೧೯೪೯), ಹಿಂದೂ ರಾಷ್ಟ್ರೀಯತಾವಾದಿ; ಮಹಾತ್ಮಾ ಗಾಂಧಿಯವರ ಹಂತಕ; ತನ್ನ ಸಹೋದರ ಗೋಪಾಲ ಗೋಡ್ಸೆ ಮತ್ತು ಇತರ ಆರು ಮಂದಿ ಸಹ-ಸಂಚುಗಾರರೊಂದಿಗೆ ಸೇರಿಕೊಂಡು ಗಾಂಧಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದ್ದನು.

The story ended usual way
 The way its always been
A bullet came out from Godse's gun
 And shot the beggar clean
- J S Khurmi
Collected Poems

Quick Facts ನಾಥೂರಾಮ್‌ ವಿನಾಯಕ್‌ ಗೋಡ್ಸೆ Nathuram Vinayak Godse नथूराम गोडसे, ಹುಟ್ಟು ...
ನಾಥೂರಾಮ್‌ ವಿನಾಯಕ್‌ ಗೋಡ್ಸೆ Nathuram Vinayak Godse नथूराम गोडसे
Nathuram Godse at his trial for the murder of Mahatma Gandhi
ಹುಟ್ಟು೧೯ ಮೇ ೧೯೧೦
Baramati, Pune District, Bombay Presidency, British India
(now in ಮಹಾರಾಷ್ಟ್ರ, India)
ಸಾವು೧೫ ನವೆಂಬರ್ ೧೯೪೯ (aged ೩೯)
Ambala Prison, East Punjab, India
(now in ಹರಿಯಾಣ, India)
ಸಾವಿನ ಕಾರಣExecution by hanging
ರಾಷ್ಟ್ರೀಯತೆಭಾರತೀಯ
ದುಷ್ಕೃತ್ಯ ಆಪಾದನೆ(ಗಳು)Assassination of Mohandas Karamchand Gandhi
Close

ಆರಂಭಿಕ ಜೀವನ

  • ನಾಥೂರಾಮ್‌ ಹುಟ್ಟಿದ್ದು ಪುಣೆ ಜಿಲ್ಲೆಗೆ ಸೇರಿದ ಬಾರಾಮತಿ ಎಂಬಲ್ಲಿ, ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ. ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದ ತಂದೆ ವಿನಾಯಕ ವಾಮನರಾವ್‌ ಗೋಡ್ಸೆ . ತಾಯಿ ಲಕ್ಷ್ಮೀ (ಜನ್ಮನಾಮ ಗೋದಾವರಿ) ಎಂಬುದಾಗಿತ್ತು. ನಾಥೂ ರಾಮನ ಹುಟ್ಟಿನ ಹೆಸರು ರಾಮಚಂದ್ರ ಎಂಬುದಾಗಿತ್ತು. ಸಾಮಾನ್ಯವಾಗಿ ಪ್ರಚಲಿತವಾಗಿರುವ ವಾದದ ಪ್ರಕಾರ ನಾಥೂರಾಮ್‌ಗೆ ಈ ಹೆಸರನ್ನು ನೀಡಲು ಒಂದು ದುರದೃಷ್ಟಕರ ಘಟನೆಯು ಕಾರಣವಾಗಿತ್ತು.
  • ನಾಥೂರಾಮನಿಗಿಂತ ಮೊದಲು ಹುಟ್ಟಿದ ಮೂರು ಗಂಡು ಮಕ್ಕಳೂ ಕಿರಿವಯಸ್ಸಿನಲ್ಲಿಯೇ ತೀರಿಹೋದರು. ಬದುಕಿದ್ದು ಒಬ್ಬ ಸೋದರಿ ಮಾತ್ರಾ. ತಮ್ಮ ಕುಟುಂಬದ ಗಂಡು ಮಕ್ಕಳ ಮೇಲೆ ಯಾವುದೋ ಶಾಪವಿದೆ ಎಂದುಕೊಂಡು , ಬಾಲಕ ರಾಮಚಂದ್ರನನ್ನು ಬಾಲ್ಯದಲ್ಲಿ ಮೂಗು ಚುಚ್ಚಿಸುವುದು, ಮೂಗುತಿ ಹಾಕುವುದು (ಮರಾಠಿಯಲ್ಲಿ "ನತ್‌" ಎಂದರೆ ಮೂಗುತಿ) ಸೇರಿದಂತೆ, ಹುಡುಗಿಯ ರೀತಿಯಲ್ಲಿ ಬೆಳೆಸಲಾಯಿತು. ಹೀಗಾಗಿ ಆತನಿಗೆ ನಾಥೂರಾಮ್ (ಮೂಗು ಚುಚ್ಚಿಸಿಕೊಂಡ ರಾಮ) ಎಂಬ ಹೆಸರು ಬಂತು.
  • ಆತನಿಗೊಬ್ಬ ತಮ್ಮನು ಹುಟ್ಟಿ,ದ ತರುವಾಯ ಅವರು ಮತ್ತೆ ಆತನನ್ನು ಹುಡುಗನಂತೆ ಬೆಳೆಸುವುದನ್ನು ಆರಂಭಿಸಿದರು.
  • ನಾಥೂರಾಮ್‌ ಗೋಡ್ಸೆಯು ಐದನೆಯ ತರಗತಿಯವರೆಗೆ ಬಾರಾಮತಿಯಲ್ಲಿನ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕೈಗೊಂಡ ನಂತರ, ಆಂಗ್ಲ-ಭಾಷಿಕ ಶಾಲೆಯಲ್ಲಿ ಓದಲೆಂಬ ದೃಷ್ಟಿಯಿಂದ ಆತನನ್ನು ಪುಣೆಯಲ್ಲಿನ ಚಿಕ್ಕಮ್ಮನ ಬಳಿಯಲ್ಲಿಯೇ ಉಳಿದು ಓದುವಂತೆ ಕಳಿಸಲಾಯಿತು. ತನ್ನ ಶಾಲಾದಿನಗಳಲ್ಲಿ ಆತನು ಗಾಂಧಿಯವರನ್ನು ಬಹಳವೇ ಗೌರವಿಸುತ್ತಿದ್ದ.
  • ೧೯೩೦ರಲ್ಲಿ ನಾಥೂರಾಮ್‌ನ ತಂದೆಯವರಿಗೆ ರತ್ನಾಗಿರಿ ಎಂಬ ಪಟ್ಟಣಕ್ಕೆ ವರ್ಗವಾಯಿತು. ಅಲ್ಲಿ ತನ್ನ ತಂದೆತಾಯಿಗಳೊಂದಿಗೆ ವಾಸಿಸುತ್ತಿರುವಾಗ ಬಾಲಕ ನಾಥೂರಾಮನಿಗೆ ಮೊತ್ತಮೊದಲಿಗೆ ಹಿಂದುತ್ವ ಸಿದ್ಧಾಂತ ಪ್ರತಿಪಾದಕರಾದ ವೀರ್‌ ಸಾವರ್ಕರ್‌‌ರನ್ನು ಭೇಟಿಯಾಯಿತು, ಇಬ್ಬರ ನಡುವೆ ಸ್ನೇಹವು ಬೆಳೆಯಿತು.

ರಾಜಕೀಯ ಜೀವನ

ಮೋಹನದಾಸ ಗಾಂಧಿಯವರ ಕೊಲೆಯ ಆಪಾದಿತರ ಸಮೂಹ ಭಾವಚಿತ್ರ. ನಿಂತಿರುವವರು, L ನಿಂದ R: ಶಂಕರ್‌ ಕಿಸ್ತೈಯಾ, ಗೋಪಾಲ ಗೋಡ್ಸೆ , ಮದನ್‌ಲಾಲ್‌ ಪಹ್‌ವಾ, ದಿಗಂಬರ್‌ ರಾಮಚಂದ್ರ ಬಡ್ಗೆ. ಕುಳಿತಿರುವವರು, L ನಿಂದ R: ನಾರಾಯಣ್‌ ಆಪ್ಟೆ , ವಿನಾಯಕ್‌ D. ಸಾವರ್ಕರ್‌‌ , ನಾಥೂರಾಮ್‌ ಗೋಡ್ಸೆ , ವಿಷ್ಣು ಕರ್ಕರೆ
  • ಗೋಡ್ಸೆಯು ಪ್ರೌಢಶಾಲೆಯಲ್ಲಿದ್ದಾಗ ಓದು ನಿಲ್ಲಿಸಿ, ಹಿಂದೂ ಮಹಾಸಭಾದ ಕಾರ್ಯಕರ್ತನಾದನು. ಆತನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತನಾಗಿದ್ದನೆಂಬ ಭಾರೀ ಪ್ರಚಾರವಾದ ಪ್ರತಿಪಾದನೆಗೆ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಅವರುಗಳು ನಿರ್ದಿಷ್ಟವಾಗಿ ಅಖಿಲ ಭಾರತ ಮುಸ್ಲಿಮ್‌ ಲೀಗ್‌ನ ಪ್ರತ್ಯೇಕತಾವಾದಿ ರಾಜಕೀಯನೀತಿಯನ್ನು ವಿರೋಧಿಸುತ್ತಿದ್ದರು.
  • ಗೋಡ್ಸೆಯು ಹಿಂದೂ ಮಹಾಸಭಾದ ಪರವಾಗಿ ಅಗ್ರಣಿ ಎಂಬ ಒಂದು ಮರಾಠಿ ವಾರ್ತಾಪತ್ರಿಕೆ/ವೃತ್ತಪತ್ರಿಕೆಯನ್ನು ಆರಂಭಿಸಿದನು, ಮುಂದೆ ಅದರ ಹೆಸರನ್ನು ಹಿಂದೂ ರಾಷ್ಟ್ರ ಎಂದು ಬದಲಾಯಿಸಲಾಯಿತು. ಹಿಂದೂ ಮಹಾಸಭಾವು ಮೊದಲಿಗೆ ಗಾಂಧಿಯವರ ಬ್ರಿಟಿಷ್‌ ಸರ್ಕಾರದ ವಿರುದ್ಧದ ನಾಗರಿಕ ಅಸಹಕಾರ ಚಳುವಳಿಯನ್ನು ಬೆಂಬಲಿಸಿತ್ತು.
  • ಆದರೆ, ಕಾಲಕ್ರಮೇಣ, ಮುಸಲ್ಮಾನರನ್ನು ಸಂತೋಷಗೊಳಿಸುವ ಪ್ರಯತ್ನದಲ್ಲಿ ಗಾಂಧಿಯವರು ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆಂಬ ಅಭಿಪ್ರಾಯ ತಳೆದು ,ಗೋಡ್ಸೆ ಹಾಗೂ ಆತನ ಮಾರ್ಗದರ್ಶಕರು ಗಾಂಧಿಯವರ ಪ್ರತಿಪಾದನೆಗಳ ವಿರೋಧಕರಾದರು. ಭಾರತದ ವಿಭಜನೆಯ ಕಾಲದಲ್ಲಿ ಉಂಟಾದ ಮತೀಯ ದಂಗೆಗೆ , ಅದರಿಂದಾದ ಸಾವಿರಾರು ಜನರ ಸಾವಿಗೆ,ಗಾಂಧಿಯವರೇ ಕಾರಣಕರ್ತರು ಎಂದು ಅವರ ಅಭಿಪ್ರಾಯವಾಗಿತ್ತು.
  • ಗೋಡ್ಸೆಯು ಗಾಂಧಿಯವರ ಕಟ್ಟಾ ಅಹಿಂಸೆಯ ಪ್ರತಿಪಾದನೆಗೆ ವಿರೋಧಿಯಾಗಿದ್ದನು. ಆತನ ಭಾವನೆಯ ಪ್ರಕಾರ ಇಂತಹಾ ಬೋಧನೆಗಳು ಹಿಂದೂಗಳು ತಮ್ಮ ಸ್ವರಕ್ಷಣೆಗೆ ನಡೆಸಲು ಬೇಕಾದ ಹೋರಾಟಕ್ಕೆ ಅಗತ್ಯವಾದ ಸಂಕಲ್ಪಶಕ್ತಿಯನ್ನೇ ಕಳೆದುಕೊಳ್ಳುವ ಹಾಗೆ ಮಾಡಿ ಅವರನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಿಬಿಡುತ್ತವೆ ಎಂಬುದಾಗಿತ್ತು. ಗಾಂಧಿಯವರನ್ನು ಹತ್ಯೆ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಆತನಿಗಿದ್ದ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿತ್ತು ಎನ್ನಲಾಗಿದೆ. ಗೋಡ್ಸೆಯು ಒಬ್ಫ ರಾಷ್ಟ್ರಪ್ರೇಮಿಯೂ ಆಗಿದ್ದ .

ಗಾಂಧಿ ಹತ್ಯೆ

  • ಗೋಡ್ಸೆಯು ಗಾಂಧಿಯವರನ್ನು ಜನವರಿ ೩೦, ೧೯೪೮ರಂದು ಹತ್ಯೆಗೈದನು. ಆತನು ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಅವರ ಬಳಿಗೆ ಸರಿದು ಬಾಗಿದನು. ಗಾಂಧಿಯವರ ಜೊತೆಗಿದ್ದ ಓರ್ವ ಹುಡುಗಿಯು "ಸಹೋದರ, ಬಾಪುರವರಿಗೆ ಈಗಾಗಲೇ ತಡವಾಗಿದೆ " ಎಂದು ಹೇಳಿ ಆತನನ್ನು ಪಕ್ಕಕ್ಕೆ ಸರಿಸಲು ಹೋದಾಗ ಆತನು ಆಕೆಯನ್ನು ಪಕ್ಕಕ್ಕೆ ತಳ್ಳಿ. ೩೮ ಬೆರೆಟ್ಟಾ ಅರೆ-ಸ್ವಯಂಚಾಲಿತ ಕೈಕೋವಿಯಿಂದ/ಪಿಸ್ತೂಲಿನಿಂದ ತೀರ ಸನಿಹದಿಂದ ಮೂರು ಬಾರಿ ಗುಂಡು ಹಾರಿಸಿ ಕೊಂದನು. ಗುಂಡು ಹಾರಿಸಿದ ನಂತರ ಆತನು ಓಡಲೂ ಪ್ರಯತ್ನಿಸಲಿಲ್ಲ ಅಥವಾ ಪಿಸ್ತೂಲು/ ಬಂದೂಕು/ ಕೈ ಕೋವಿಯು ತನ್ನ ಬಳಿಯೇ ಇದ್ದರೂ ಉಳಿದ ಯಾರನ್ನೂ ಬೆದರಿಸಲೂ ಹೋಗಿರಲಿಲ್ಲ. ಆತನನ್ನು ನೆಲದ ಕಡೆಗೆ ತಳ್ಳಿ ಒತ್ತಿಹಿಡಿದು ತದನಂತರ ಆತನನ್ನು ಬಂಧಿಸಲಾಯಿತು.

ವಿಚಾರಣೆ ಹಾಗೂ ಗಲ್ಲುಶಿಕ್ಷೆ ಜಾರಿ

  • ಮೋಹನದಾಸ ಗಾಂಧಿಯವರ ಹತ್ಯೆಯ ನಂತರ ಆತನ ವಿಚಾರಣೆಯನ್ನು ಮೇ ೨೭, ೧೯೪೮ರಂದು ಆರಂಭಿಸಲಾಯಿತು. ವಿಚಾರಣೆಯ ಸಮಯದಲ್ಲಿ ಆತನು ಯಾವುದೇ ಆರೋಪದ ವಿರುದ್ಧ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿಲ್ಲ ಮಾತ್ರವಲ್ಲ ಮುಕ್ತವಾಗಿಯೇ ಗಾಂಧಿ ಯವರನ್ನು ಕೊಲ್ಲಲು ತನಗಿರುವ ಕಾರಣಗಳ ಕುರಿತು ದೀರ್ಘ ಕಾಲ ಯೋಚಿಸಿ ಸನ್ನಾಹ ನಡೆಸಿದ ನಂತರ ಗಾಂಧಿಯವರನ್ನು ತಾನು ಕೊಂದೆನೆಂದು ಒಪ್ಪಿಕೊಂಡನು.  ನವೆಂಬರ್‌‌ ೮, ೧೯೪೯ರಂದು, ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು.
  • ಆರೋಪಿಗಳಿಗೆ ವಿಧಿಸಲಾದ ಮರಣದಂಡನೆಯನ್ನು ರದ್ದುಪಡಿಸಬೇಕೆಂದು ಕರೆ ನೀಡಿದವರಲ್ಲಿ ಜವಾಹರ್‌ಲಾಲ್‌ ನೆಹರೂ , ಹಾಗೂ ಗಾಂಧಿಯವರ ಇಬ್ಬರು ಪುತ್ರರು ಸೇರಿದ್ದರು, ಅವರುಗಳ ಪ್ರಕಾರ ವಿಚಾರಣೆಯಲ್ಲಿರುವ ಇಬ್ಬರು ವ್ಯಕ್ತಿಗಳು RSS ಮುಖಂಡರುಗಳ ಕೈಗೊಂಬೆಯಾಗಿದ್ದಾರೆಂದು ಹಾಗೂ ತಮ್ಮ ತಂದೆಯನ್ನು ಹತ್ಯೆ ಮಾಡಿದವರನ್ನು ಮರಣದಂಡನೆಗೆ ಗುರಿಪಡಿಸಿದರೆ ಮರಣದಂಡನೆಯ ಕಟ್ಟಾ ವಿರೋಧಿಯಾಗಿದ್ದ ತಮ್ಮ ತಂದೆಯ ಸ್ಮರಣೆ ಹಾಗೂ ಹಿರಿಮೆಗೆ ಅವಮರ್ಯಾದೆ ಸಲ್ಲಿಸಿದಂತಾಗುತ್ತದೆಂಬುದಾಗಿತ್ತು.
  • ಅಂಬಾಲಾದ ಸೆರೆಮನೆಯಲ್ಲಿ ನವೆಂಬರ್‌‌ ೧೫, ೧೯೪೯,ರಂದು ಮತ್ತೋರ್ವ ಸಂಚುಗಾರ ನಾರಾಯಣ್‌ ಆಪ್ಟೆಯೊಡನೆ ಗೋಡ್ಸೆಯನ್ನು ಗಲ್ಲಿಗೇರಿಸಲಾಯಿತು. ಆರ್‍ಎಸ್‍ಎಸ್‍ ಜೊತೆ ನಿಕಟ ಸಂಪರ್ಕವಿದ್ದ ಸಾವರ್ಕರ್‌‌ರ ಮೇಲೂ ಗಾಂಧಿಯವರ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದ್ದಿತಾದರೂ ಅವರನ್ನು ಖುಲಾಸೆಗೊಳಿಸಲಾಗಿ, ತದನಂತರ ಬಿಡುಗಡೆಗೊಳಿಸಲಾಯಿತು.

ಪರಿಣಾಮಗಳು

  • ಗಾಂಧಿಯವರ ಹತ್ಯೆಯಾದುದಕ್ಕಾಗಿ ಸಾವಿರಾರು ಮಂದಿ ಭಾರತೀಯರು ಶೋಕಿಸಿದರು.ಹಿಂದೂ ಮಹಾಸಭಾವನ್ನು ಬಹಳವಾಗಿ ಹೀಗಳೆಯಲಾಯಿತು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ RSS ಸಂಘವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಯಿತು. ಇಷ್ಟೆಲ್ಲಾ ಆದರೂ, ತನಿಖಾಧಿಕಾರಿಗಳು RSS ಪ್ರಭುತ್ವವು ಗೋಡ್ಸೆಯ ಸಂಚಿಗೆ ಯಾವುದೇ ವಿಧವಾದ ಔಪಚಾರಿಕ ಬೆಂಬಲವನ್ನು ಕೊಟ್ಟಿತ್ತು ಎಂಬುದಕ್ಕಾಗಲಿ ಅಥವಾ ಆತನ ಸಂಚು ಅವರಿಗೆ ತಿಳಿದಿತ್ತು ಎಂಬುದಕ್ಕೇ ಆಗಲಿ ಯಾವುದೇ ಸಾಕ್ಷ್ಯವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
  • RSS ಮೇಲಿನ ನಿಷೇಧವನ್ನು ೧೯೪೯ರಲ್ಲಿ ಪ್ರಧಾನಮಂತ್ರಿ ನೆಹರೂ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲರು ಹಿಂತೆಗೆದುಕೊಂಡರು. ಇಂದಿನ ದಿನದವರೆಗೂ RSS ಸಂಘವು ಗೋಡ್ಸೆಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲವೆಂದು ನಿರಾಕರಿಸುತ್ತದಲ್ಲದೇ ಆತನು ಅದರ ಸದಸ್ಯನಾಗಿದ್ದನೆಂಬ ಹೇಳಿಕೆಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತದೆ.
  • ಹತ್ಯೆಯಾದ ನಂತರ ಹಲವರು ಭಾರತದ ಸರ್ಕಾರವನ್ನು ಹಿಂದೊಮ್ಮೆ ಅದೇ ವಾರದಲ್ಲಿಯೇ ನಂತರ ಗುಂಡಿಟ್ಟು ಕೊಂದ ಇದೇ ಸಂಚುಗಾರರಿಂದ ಬಾಂಬ್‌ ದಾಳಿಗೆ ಗುರಿಯಾಗಲಿದ್ದು ಉಳಿದುಕೊಂಡಿದ್ದ ಗಾಂಧಿಯವರನ್ನು ರಕ್ಷಿಸಲು ಯಾವುದೇ ವಿಶೇಷ ಪ್ರಯತ್ನವನ್ನು ಕೈಗೊಂಡಿರಲಿಲ್ಲ ವೆಂದು ಟೀಕಿಸಿದರು.
  • ಇದಕ್ಕೆ ಪೂರಕವಾಗಿದ್ದ ನಿರ್ದಿಷ್ಟ ಆತಂಕದ ಪ್ರಕಾರ ಬಾಂಬೆಯ ಓರ್ವ ಗುಪ್ತಚರನು ಈ ಹಂತಕರ ಹೆಸರುಗಳು ಹಾಗೂ ಅವರ ಕುರಿತು ವಿವರಗಳನ್ನು ಅವರು ದೆಹಲಿಯಲ್ಲಿ ಗಾಂಧಿಯವರನ್ನು ಮರೆಯಲ್ಲಿ ಅನುಸರಿಸುತ್ತಾ ಬಂದಿದ್ದರೆಂದು ತಿಳಿದು ಬಂದಿದೆ ಎಂಬ ಮಾಹಿತಿಯೊಂದಿಗೆ ಎಚ್ಚರಿಕೆಯನ್ನು ರವಾನಿಸಿದ್ದರು. ಮತ್ತೊಂದೆಡೆಯಲ್ಲಿ ಗಾಂಧಿಯವರು ಪದೇ ಪದೇ ತನ್ನ ರಕ್ಷಣಾ ದಳದವರೊಂದಿಗೆ ಸಹಕರಿಸಲು ನಿರಾಕರಿಸುತ್ತಾ ಹಿಂಸಾತ್ಮಕ ಸಾವೇ ತನಗೆ ವಿಧಿನಿಯಾಮಕವಾಗಿದೆ ಎಂಬುದನ್ನು ಒಪ್ಪಿಕೊಂಡವರಂತೆ ನಡೆದುಕೊಂಡಿದ್ದರು.
  • ನೈನ್‌ ಅವರ್ಸ್ ಟು ರಾಮ ಎಂಬ ಚಲನಚಿತ್ರವೊಂದನ್ನು ೧೯೬೩ರಲ್ಲಿ ತಯಾರಿಸಲಾಗಿದ್ದು ಇದು ಹತ್ಯೆಯಾಗುವವರೆಗೆ ನಡೆದ ಘಟನೆಗಳನ್ನು ಆಧರಿಸಿತ್ತಾಗಿ ಪ್ರಮುಖವಾಗಿ ಗೋಡ್ಸೆಯ ದೃಷ್ಟಿಕೋನದಿಂದ ಇದನ್ನು ಚಿತ್ರಿಸಲಾಗಿತ್ತು. ೨೦೦೦ರಲ್ಲಿ ತಯಾರಾಗಿದ್ದ ಹೇ ರಾಮ್‌ ಎಂಬ ಚಿತ್ರವು ಕೂಡಾ ಹತ್ಯೆಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸುತ್ತದೆ. ಜನಪ್ರಿಯ ಮರಾಠಿ ಭಾಷಿಕ ನಾಟಕ ಮೀ ನಾಥೂರಾಮ್‌ ಗೋಡ್ಸೆ ಬೋಲ್ತೋಯ್‌ (ಮರಾಠಿ:मी नथुराम गोडसे बोलतोय)("ನಾನು ನಾಥೂರಾಮ್‌ ಗೋಡ್ಸೆ , ಮಾತನಾಡುತ್ತಿರುವುದು ")ವನ್ನು ಕೂಡಾ ಗೋಡ್ಸೆಯ ದೃಷ್ಟಿಕೋನದಿಂದಲೇ ರಚಿಸಲಾಗಿತ್ತು.

Tuesday, 18 May 2021

ಜಿಲ್ಲಾ ದರ್ಶನ

ಬೀದರ ಜಿಲ್ಲೆ

ADD ARTICLE DESCRIPTION


ಬೀದರ್ (ಕನ್ನಡ: ಬೀದರ, ಉರ್ದು: بیدار) ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ್ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ್ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು ಬೀದರ್ ಕರ್ನಾಟಕ ರಾಜ್ಯದ ಮುಕುಟ ಎಂದು ಕೂಡ ಕರೆಯಲ್ಪಡುತ್ತದೆ.

Quick Facts
ಬೀದರ

ಬೀದರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೀದರ ಜಿಲ್ಲೆ
ನಿರ್ದೇಶಾಂಕಗಳು17.70° N 77.13° E
ವಿಸ್ತಾರ
 - ಎತ್ತರ
- km²
 - 389 ಮೀ.
ಸಮಯ ವಲಯIST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
--
 - -/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - --
 - +--
 - KA---

ಬೀದರ್ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ಬೀದರ್ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೀದರ್ - ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಭಾಲ್ಕಿ, ಹುಮನಾಬಾದ್, ಬೀದರ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, ಬಿಜಾಪುರ, ಗೋಲ್ಕೊಂಡ, ಗುಲ್ಬರ್ಗಾ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ್ ಜಿಲ್ಲೆಯು ಬಸವಕಲ್ಯಾಣದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. ಬಸವಕಲ್ಯಾಣದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ ಭಾಲ್ಕಿ ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ.

ಉಪ-ವಿಭಾಗ ಮತ್ತು ತಾಲೂಕುಗಳು
ಬೀದರ್

1. ಬೀದರ್

2. ಔರಾದ್

3. ಭಾಲ್ಕಿ

ಬಸವಕಲ್ಯಾಣ್

1.ಬಸವಕಲ್ಯಾಣ್

2. ಹುಮ್ನಾಬಾದ್

ತಾಲ್ಲೂಕುಗಳು 05
1ಔರಾದ್153
2ಬಸವಕಲ್ಯಾಣ್116
3ಭಾಲ್ಕಿ134
4ಬೀದರ್137
5ಹುಮ್ನಾಬಾದ್89
ಒಟ್ಟು629

 


ಭೌಗೋಲಿಕ ವಿವರಗಳು

ಬೀದರ್ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ್ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ್ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.

ಬೀದರ್ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ ನಾಂದೇಡ್ ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ್ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.

ಭೌಗೋಳಿಕವಾಗಿ ಬೀದರ್ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ. ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.

ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. ಬಸವಕಲ್ಯಾಣ ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ ಹಳ್ಳಿಖೇಡ ನಾಲಾ ಇವುಗಳು ಸಣ್ಣ ಹೊಳೆಗಳು.

ಚರಿತ್ರೆ

ಚಾರಿತ್ರಿಕವಾಗಿ, ಬೀದರ್ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು ಬಸವಣ್ಣನವರ ಕಾಲದಲ್ಲಿ ಮತ್ತು ಬಹಮನಿ ಸುಲ್ತಾನರ ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. ರಾಷ್ಟ್ರಕೂಟರು, ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ ಬಸವಕಲ್ಯಾಣವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು ಬಿಜಾಪುರದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.

ಧರ್ಮ

ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.

ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.

ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.

ಬೀದರ್ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.

ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.

ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.

ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ : ಬೀದರ್-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ. ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.

ಬೀದರ್ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ್ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. ಬಸವಕಲ್ಯಾಣದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.

ಕರಕುಶಲ ಕಲೆ

ಬಿದರಿ ಕಲೆ

ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ್ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.

ಜಿಲ್ಲೆಯ ಪ್ರಮುಖರು

  • ಡಾ.ಚೆನ್ನಬಸವ ಪಟ್ಟದ್ದೇವರು - ಸಮಾಜಸೇವಕರು
  • ರಾಮಚಂದ್ರ ವೀರಪ್ಪಾ - ಸ್ವಾತಂತ್ರ್ಯ ಹೋರಾಟಗಾರರು
  • ವೀರೇಂದ್ರ ಸಿಂಪಿ - ಸಾಹಿತಿ
  • ಎಂ. ಜಿ. ಗಂಗನ್ ಪಳ್ಳಿ - ಕವಿ
  • ಮಚ್ಚೇಂದ್ರ ಪಿ ಅಣಕಲ್ - ಸಾಹಿತಿ
  • ಬಂಡೆಪ್ಪ ಖಾಶೆಂಪುರ್ - ರಾಜಕಾರಣಿ

ಪ್ರವಾಸೋದ್ಯಮ

ಬೀದರ್ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ್ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.

ಆಕರ್ಷಣೆಯ ಸ್ಥಳಗಳು

ಬೀದರ್ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ. ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಬೀದರ್ ಕೋಟೆ ವಿಹಂಗಮ ನೋಟ
  • ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
  • ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
  • ಗುರು ನಾನಕ್ ಝಿರ ಗುರುದ್ವಾರ
  • ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ್-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
  • ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
  • ಬೀದರ್ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
  • ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
  • ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ್ ನಲ್ಲಿವೆ.
  • ಬಸವೇಶ್ವರ ದೇವಾಲಯ
  • ಬಾರಿದ್ ಶಾಹಿ ಉದ್ಯಾನವನ
  • ಮೊಹಮ್ಮದ್ ಗವಾನ್ ಸಮಾಧಿ
  • ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
  • ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
  • ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
  • ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
  • ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
  • ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
  • ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
  • ಬೀದರ್ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
  • ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
  • ಮಾಣಿಕ್ ಪ್ರಭು ದೇವಾಲಯ. ಬೀದರ್ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
  • ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.

ಜನಸಂಖ್ಯಾ ವಿವರ

2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ್ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ್ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.

ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ. 


Monday, 17 May 2021

👮‍♀️𝐏𝐒𝐈 𝐎𝐥𝐝 𝐐𝐮𝐞𝐬𝐭𝐢𝐨𝐧 𝐏𝐚𝐩𝐞𝐫 𝐂𝐨𝐥𝐥𝐞𝐜𝐭𝐢𝐨𝐧𝐬👮‍♀️


✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 1998

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2000

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2002

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2005

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2007

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2008

✨ಅಬಕಾರಿ ನಿರೀಕ್ಷಕರ (ESI) ನೇಮಕಾತಿ ಪ್ರಶ್ನೆ ಪತ್ರಿಕೆ 2009

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2009

✨KSISF -SI ನೇಮಕಾತಿ ಪ್ರಶ್ನೆ ಪತ್ರಿಕೆ 2012

✨ಭಾರತೀಯ ಮೀಸಲು ಪಡೆ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2012

✨ಅಬಕಾರಿ ನಿರೀಕ್ಷಕರ ಹುದ್ದೆ ಪ್ರಶ್ನೆ ಪತ್ರಿಕೆ 2017

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ 2015

✨SRSI (KSRP) ಪ್ರಶ್ನೆ ಪತ್ರಿಕೆ 2016

✨ಪೋಲಿಸ್ ಸಬ್ ಇನ್ಸ್ ಪೆಕ್ಟರ್  ವೈರ್ಲಸ್ಸ್  ನೇಮಕಾತಿ ಪ್ರಶ್ನೆ ಪತ್ರಿಕೆ 2016

*ಮೇಲಿನ ಎಲ್ಲಾ ಸಂಪೂರ್ಣ ಮಾಹಿತಿ ಹೊಂದಿದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್ ಫೈಲ್ ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*
👇👇👇👇

➖➖➖➖➖➖➖➖➖➖➖➖➖➖➖


ಸಾಮಾನ್ಯ ಜ್ಞಾನ ೦೮

🌀ರಕ್ತದ ಬಗ್ಗೆ ಹಿಂದಿನ  ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು 🌀

1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
120 ದಿನಗಳು.

2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
 6-12 ದಿನಗಳು

3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
ಬಿಳಿ ರಕ್ತಕಣಗಳು


4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
12 ದಿನಗಳು

5. _ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
 ಕಿರುತಟ್ಟೆ.

6. _ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
ಬಿಳಿ ರಕ್ತಕಣಗಳ.

7. __ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
ಪಿತ್ತಜನಕಾಂಗ.

8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
9% ರಷ್ಟು.

9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
ವಿಲಿಯಂ ಹಾರ್ವೆ.

10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.

11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಹೆಮಟಾಲೋಜಿ.

12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಕಾರ್ಲ್ ಲ್ಯಾಂಡ್ ಸ್ಪಿನರ್.

13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?                         ಅಪಧಮನಿ.

14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
 O ಗುಂಪು.

15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
AB ಗುಂಪು.
__________________________________________
ಜೀವಿಗಳ ಉಸಿರಾಟದ ಅಂಗಗಳು ಮತ್ತು  ಅವುಗಳ ಚಲನಾಂಗಗಳು

""ಉಸಿರಾಟದ ಅಂಗಗಳು""

🦟 ಕೀಟಗಳು – ಟ್ರೇಕಿಯಾ

🐠. ಮೀನುಗಳು – ಕಿವಿರು

 🐸 ಕಪ್ಪೆ – ಚರ್ಮ ಮತ್ತು ಶ್ವಾಸಕೋಶ

🧍 ಮಾನವ – ಶ್ವಾಸಕೋಶ

🪴ಸಸ್ಯಗಳು – ಪತ್ರರಂಧ್ರಗಳು
__________________________________________
🦋  ಚಲನಾಂಗಗಳು🦋

1. ಅಮೀಬ – ಮಿಥ್ಯಾಪಾದ (ಸೂಡೋಪೋಡಿಯಾ)

2. ಯೂಗ್ಲಿನ – ಲೋಮಾಂಗ (ಸೀಲಿಯಾ)

3. ಪ್ಯಾರಾಮೀಸಿಯಂ – ಕಶಾಂಗ (ಫ್ಲಾಜಿಲ್ಲಾ)

4. ಹೈಡ್ರಾ – ಕರಬಳ್ಳಿ(ಟೆಂಟಕಲ್ಸ್)

5. ಮೀನು – ಈಜುರೆಕ್ಕೆ

6. ಪಕ್ಷಿ – ರೆಕ್ಕೆ

7. ಹಸು – ಕಾಲು

8. ನೀರಸ್ಪಾ – ಶ್ವಪಾದಗಳು(ಪ್ಯಾರಾಪೋಡಿಯಾ)

9. ಎರೆಹುಳು – ಬಿರುಗೂದಲು

10. ಕಂಟಕ ಚರ್ಮಿಗಳು – ನಳಿಕಾಪಾದ
__________________________________________
🏵️ ಭಾರತದ ಬುಡಕಟ್ಟು ಜನಾಂಗ🏵️

👉 ಕೋಡ: ಸೋಮು ಶಾಲು ಚೂಮೀ ಸಬಿ ಮುಜುಕೋ ಕಾನವುವ ತಗೋ ಚಾಲೆಗಾ ......

1) ಸೋಲಿಗರು= ಕರ್ನಾಟಕ

2) ಮುಂಡರು= ಜಾರ್ಖಂಡ್

3) ಶಾಂಪಿಯನ= ಅಂಡಮಾನ್ ಮತ್ತು ನಿಕೋಬಾರ್

4)ಲೂಸಿಯಾ= ಮಿಜೋರಾಂ , 

5)ಟುಟಿಯಾ= ಆಸ್ಸಾo
 
6)ಮೀನರು= ರಾಜಸ್ಥಾನ್

7) ಸಂತಾಲರು= ಪಶ್ಚಿಮ ಬಂಗಾಳ

8) ಬಿಲ್ಲರು= ಗುಜರಾತ್

9)ಮುರಾರಿ = ಮಧ್ಯ ಪ್ರದೇಶ್

10) ಜರ್ವ= ಅಂಡಮಾನ್ ಮತ್ತು ನಿಕೋಬಾರ್

11)ಕೊಂಡರು = ಓಡಿಸ್ಸಾ

12)ಕಾಸಿ = ಮೇಘಾಲಯ

13)ನಾಗ = ನಾಗಾಲ್ಯಾಂಡ್

13)ವುರ್ಲಿ= ಕೇರಳ

14) ವರ್ಲಿ= ಮಹಾರಾಷ್ಟ್ರ

15) ತೋಡಿಗರು= ತಮಿಳುನಾಡು

16) ಗೊಂಡರು= ಮಧ್ಯ ಪ್ರದೇಶ್

17) ಚಂಚು= ಆಂಧ್ರ ಪ್ರದೇಶ್

18) ಲೆಪ್ಚಾ= ಸಿಕ್ಕಿಂ

19)ಗಡ್ಡಿ = ಹಿಮಾಚಲ ಪ್ರದೇಶ
====================

🌸 ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು 👇👇👇

1)370= ಜಮ್ಮು ಮತ್ತು ಕಾಶ್ಮೀರ (PC-2020)

2)371ನೇ ವಿಧಿ = ಮಹಾ ರಾಷ್ಟ್ರ ಮತ್ತು ಗುಜರಾತ

3)371{A}= ನಾಗಲ್ಯಾಂಡ್

4)371{B]= ಆಸ್ಸಾO

5)371{C}= ಮಣಿಪುರ

6)371{D}= ಆಂಧ್ರಪ್ರದೇಶ &ತೆಲಂಗಾಣ [ ಉದ್ಯೋಗ]

7)371{E} ಆಂಧ್ರಪ್ರದೇಶ& ತೆಲಂಗಾಣ [ ಕಾನೂನು& ವಿಶ್ವವಿದ್ಯಾಲಯ]

8)371{F}= ಸಿಕ್ಕಿಂ

9)371{G}= ಮಿಜೋರಾಂ

10)371{H}= ಅರುಣಾಚಲ ಪ್ರದೇಶ

11)371{I}= ಗೋವಾ

12)371{J}= ಕರ್ನಾಟಕ [ ಹೈದ್ರಾಬಾದ್ ಕರ್ನಾಟಕ] HK
=====================
🌹 ರಾಜ್ಯಗಳು ಆಚರಿಸುವ ಉತ್ಸವಗಳು👇👇👇

1) ಕರ್ನಾಟಕ= ಯುಗಾದಿ

2) ಆಂಧ್ರಪ್ರದೇಶ= ಬ್ರಹ್ಮೋತ್ಸವ

3) ಅರುಣಾಚಲ ಪ್ರದೇಶ= ಲೋಸಾರ್

4) ಅಸ್ಸಾಂ= ಬೋಹಾಗ್ ಬಿಹು

5) ಬಿಹಾರ= ಚಹತ್ ಪೂಜ

6) ಛತ್ತೀಸ್ ಘಡ್= ಬಸ್ತಾರ್ ದಸರಾ*-

7) ಗೋವಾ= ಕಾರ್ನಿವಾಲ ಸಿಗಮೋ**

8) ಗುಜರಾತ್= ದೀಪಾವಳಿ. ಜನ್ಮಾಷ್ಟಮಿ

9) ಹರಿಯಾಣ= ಬೈಸಾಕಿ

10) ಹಿಮಾಚಲ ಪ್ರದೇಶ= ಮಹಾಶಿವರಾತ್ರಿ

11) ಜಮ್ಮು ಕಾಶ್ಮೀರ= ಈದ್-ಉಲ್- ಪಿತರ್

12) ಕೇರಳ= ಓಣಂ

13) ಮಹಾರಾಷ್ಟ್ರ= ಗಣೇಶ ಚತುರ್ಥಿ

14) ಮಣಿಪುರ= ಯಾಹೂ ಶಾಂಗ್

15) ಮೇಘಾಲಯ= ನೊಂಗ್ ಕ್ರೆಮ್ ಡ್ಯಾನ್ಸ್

16) ಮಿಜೋರಾಂ= ಚಪಚರಕುಟ್ 

17) ನಾಗಲ್ಯಾಂಡ್= ಹಾರ್ನ್ ಬಿಲ್ (DAR-2020)

18) ಓಡಿಸಾ= ರಾಜಾಪರ್ಬ

19) ಪಂಜಾಬ್= ಲೋಹಿo

20) ರಾಜಸ್ಥಾನ್= ಗಂಗೌರ್

21) ಸಿಕ್ಕಿಂ= ಸಾಗದವ್ ಲೋಸಾರ್

22) ತಮಿಳುನಾಡು= ಪೊಂಗಲ್ ಉತ್ಸವ

23) ತೆಲಂಗಾಣ= ಬೋನಾಲ್

24) ತ್ರಿಪುರ= ಖರ್ಚಿಪೋಜಾ

25) ಉತ್ತರ ಪ್ರದೇಶ್= ನವರಾತ್ರಿ, ರಾಮನವಮಿ
=====================

🍁🌹 ನೃತ್ಯಗಳು ಯಾವ ರಾಜ್ಯಕ್ಕೆ ಸಂಬಂಧಿಸಿವೆ .👇👇

1)🔸 ಭರತನಾಟ್ಯ= ತಮಿಳುನಾಡು, 

2) 🔸ಕುಚುಪುಡಿ= ಆಂಧ್ರ ಪ್ರದೇಶ್, 

3) 🔸ಯಕ್ಷಗಾನ= ಕರ್ನಾಟಕ

4) 🔸ತಾಲಿ ತೊಲ = ಪಶ್ಚಿಮ ಬಂಗಾಳ,

5) 🔸ನಮಸ್ಸಾ= ಮಹಾರಾಷ್ಟ್ರ

6) 🔸ಚಕ್ರಿ= ಜಮ್ಮು ಕಾಶ್ಮೀರ್

7) 🔸ಮಣಿಪುರಿ= ಮಣಿಪುರ 

8) 🔸ಓಡಿಸ್ಸಿ = ಒಡಿಸ್ಸಾ

9) 🔸ಕೆಳದಿ ಪಟ್ಟO= ಕೇರಳ

10) 🔸ಮೋಹಿನಿ ಅಟ್ಟಂ= ಕೇರಳ 

11) 🔸ಓಣಂ= ಕೇರಳ 

12) 🔸ನಹಿ ತಾಲಿಯ= ಮಣಿಪುರಿ

13) 🔸ನೌತಂಕಿ= ಉತ್ತರ ಪ್ರದೇಶ

14) 🔸ಕಥಕ= ಉತ್ತರಪ್ರದೇಶ ,
 
15) 🔸ಗಾಬ್ರಾಹ= ಗುಜರಾತ .

16) 🔸ಬಿಹು= ಆಸ್ಸo

17) 🔸ಭಾಂಗ್ರಹ= ಪಂಜಾಬ

18) 🔸ಡೊಳ್ಳು ಕುಣಿತ= ಕರ್ನಾಟಕ , 
=====================

🏵️  ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು
👇👇

1)👉 ಮೇಲುಕೋಟೆ= ವೈರಮುಡಿ ಉತ್ಸವ,

2)👉 ಬನವಾಸಿ= ಕದಂಬೋತ್ಸವ

3) 👉ವಿಜಾಪುರ= ನವರಸಪುರ ಉತ್ಸವ

4) 👉ಬದಾಮಿ= ಚಾಲುಕ್ಯ ಉತ್ಸವ 

5) 👉ಹಾಸನ= ಹೊಯ್ಸಳ ಉತ್ಸವ,

6) 👉ಕೊಪ್ಪಳ= ಹಾನೆಗುಂದಿ ಉತ್ಸವ 

7) 👉ಬಿದರ= ಬಸವ ಉತ್ಸವ, 

8) 👉ಮುಧೋಳ= ರನ್ನೋತ್ಸವ .

9= 👉ತಲಕಾವೇರಿ= ತೀರ್ಥೋತ್ಸವ 

10) 👉ಚಾಮರಾಜನಗರ= ಜಲಪಾತೋತ್ಸವ 

11) 👉ಮೈಸೂರು= ದಸರಾ ಉತ್ಸವ,

12) 👉ಬೆಂಗಳೂರು= ಕರಗೋತ್ಸವ, / ಗರಗೋತ್ಸವ

13) 👉ಬೆಳಗಾವಿ= ಕಿತ್ತೂರು ಉತ್ಸವ

14) 👉ಹಂಪಿ= ವಿಜಯೋತ್ಸವ


💖꧁꧂✺✺꧁꧂💖

Sunday, 16 May 2021

ಸಾಮಾನ್ಯ ಜ್ಞಾನ ೦೭

 
🌹ವಿಧಾನಸಭಾ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆ🌹

 ಅರುಣಾಚಲ ಪ್ರದೇಶ. 60
 
ಆಂಧ್ರ ಪ್ರದೇಶ್           175

 ಗುಜರಾತ್                  186

 ಹರಿಯಾಣ                  90

 ಜಮ್ಮು ಕಾಶ್ಮೀರ್          87

 ಕೇರಳ                        140

 ಮಹಾರಾಷ್ಟ್ರ              288

 ಮೇಘಾಲಯ             60

 ಅಸ್ಸಾಂ                     126

 ಬಿಹಾರ್                   242

 ಗೋವಾ                   40

 ಹಿಮಾಚಲ ಪ್ರದೇಶ   68

 ಕರ್ನಾಟಕ                224

 ಮಧ್ಯ ಪ್ರದೇಶ್        130

 ಮಣಿಪುರ್              60

 ಮಿಜೋರಾಂ           40

 ನಾಗಲ್ಯಾಂಡ್          60

 ಪಂಜಾಬ್              112

 ಸಿಕ್ಕಿಂ                     32

 ತ್ರಿಪುರ                   60

 ಪಶ್ಚಿಮ್ ಬಂಗಾಳ   294

 ಉತ್ತರಖಂಡ          70

 ತೆಲಂಗಾಣ             119

 ಓಡಿಶಾ                  147

 ರಾಜಸ್ಥಾನ             200

 ತಮಿಳುನಾಡು        134

 ಉತ್ತರಪ್ರದೇಶ        403

 ಛತ್ತಿಸ್ಗಢ                 90

__________________________________________

🔅ಪ್ರಪಂಚದ ದೇಶಗಳು ಮತ್ತು ರಾಜಧಾನಿ✍️ 
••••••••••••••••••••••••••••••••••••••••••
1. ಅಫ್ಘಾನಿಸ್ತಾನ -ಕಾಬೂಲ್
2. ಅಕ್ರೋತಿರಿ ಮತ್ತು ಧೆಕೆಲಿಯಾ- ಎಪಿಸ್ಕೋಪಿ ಕಂಟೋನ್ಮೆಂಟ್
3. ಅಲ್ಬೇನಿಯಾ -ಟಿರಾನಾ
4. ಅಲ್ಜೀರಿಯಾ -ಅಲ್ಜೀರಿಸ್
5. ಅಮೇರಿಕನ್ ಸಮೋವಾ ಪಾಗೋ- ಪಾಗೋ
6. ಅಂಡೋರಾ- ಅಂಡೋರಾ ಲಾ ವೆಲ್ಲಾ
7. ಅಂಗೋಲಾ- ಲುಆಂಡಾ
8. ಆಂಗ್ವಿಲಾ- ದಿ ವ್ಯಾಲ್ಲಿ
9. ಆಂಟಿಗುವಾ ಮತ್ತು ಬಾರ್ಬಡಾ -ಸೇಂಟ್ ಜಾನ್ಸ್
10. ಅರ್ಜೆಂಟೀನಾ- ಬ್ಯುನೋಸ್ ಐರಿಸ್
11. ಅರ್ಮೇನಿಯಾ- ಯೆರೆವಾನ್
12. ಅರುಬಾ ಓರನ್- ಜೆಸ್ತಾದ್
13. ಆಸ್ಟ್ರೇಲಿಯಾ -ಕ್ಯಾನ್ಬೆರಾ
14. ಆಸ್ಟ್ರಿಯಾ- ವಿಯೆನ್ನಾ
15. ಅಝರ್ಬೆಜಾನ್- ಬಾಕು
16. ಬಹಾಮಾಸ್- ನಾಸ್ಸಾಉ
17. ಬಹ್ರೇನ್ -ಮನಾಮಾ
18. ಬಾಂಗ್ಲಾದೇಶ್ -ಢಾಕಾ
19. ಬಾರ್ಬಡೋಸ್ -ಬ್ರಿಡ್ಜಟೌನ್
20. ಬೆಲಾರೂಸ್ ಮಿನ್ಸ್ಕ್
21. ಬೆಲ್ಜಿಯಮ್- ಬ್ರುಸ್ಸೆಲ್ಸ್
22. ಬೆಲಿಝ್ -ಬೆಲ್ಮೊಪಾನ್
23. ಬೆನಿನ್ ಪೊರ್ಟೋ-ನೋವೋ
24. ಬರ್ಮುಡಾ -ಹ್ಯಾಮಿಲ್ಟನ್
25. ಭೂತಾನ್ -ಥಿಂಪು
26. ಬೊಲಿವಿಯಾ -ಸುಕ್ರೆ / ಲಾ ಪಾಝ್
27. ಬೋಸ್ನಿಯಾ ಮತ್ತು ಹರ್ಝೆಗೋವಿನಾ- ಸರಜೆವೋ
28. ಬೋಟ್ಸ್ವಾನಾ -ಗೆಬರೋನ್
29. ಬ್ರಾಝಿಲ್ -ಬ್ರಾಸಿಲಿಯಾ
30. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್- ರೋಡ್ ಟೌನ್
31. ಬ್ರುನಿ ಬಂದಾರ್ ಸೇರಿ -ಬೇಗವಾನ್
32. ಬಲ್ಗೇರಿಯಾ -ಸೋಫಿಯಾ
33. ಬರ್ಕಿನಾ ಫಾಸೋ- ಉಆಗಡೌಗು
34. ಬುರುಂಡಿ- ಬುಜುಂಬುರಾ
35. ಕಾಂಬೋಡಿಯಾ- ಫೆನೋಮ್ ಪೆನ್
36. ಕ್ಯಾಮರೂನ್- ಯಾಂಡೇ
37. ಕೆನಡಾ -ಒಟ್ಟಾವಾ
38. ಕೇಪ್ ವರ್ಡ್- ಪ್ರೈಯಾ
39. ಕೇಮನ್ ಐಲ್ಯಾಂಡ್ಸ್ -ಜಾರ್ಜ್ ಟೌನ್
40. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್- ಬಾಂಗೈ
41. ಚಾಡ್ ಎನ್ ’ -ಜಮೇನಾ
42. ಚಿಲಿ -ಸ್ಯಾಂಟಿಯಾಗೋ
43. ಕ್ರಿಸ್ ಮಸ್ ಐಲ್ಯಾಂಡ್- ಫ್ಲಾಯಿಂಗ್ ಫಿಶ್ ಕೋವ್
44. ಕೊಕೋಸ್ ಐಲ್ಯಾಂಡ್ – ವೆಸ್ಟ್ ಐಲ್ಯಾಂಡ್
45. ಕೊಲಂಬಿಯ- ಬೊಗೊಟಾ
46. ಕೊಮೊರೋಸ್- ಮೊರೊನಿ
47. ಕುಕ್ ಐಲ್ಯಾಂಡ್ಸ್- ಅವರುಆ
48. ಕೋಸ್ಟಾ ರಿಕಾ- ಸ್ಯಾನ್ ಜೋಸ್
49. ಕ್ರೊಯೇಷಿಯಾ- ಝಾಗ್ರೇಬ್
50. ಕ್ಯೂಬಾ- ಹವಾನಾ
51. ಸಿಪ್ರಸ್- ನಿಕೋಸೊಯಾ
52. ಝೆಕ್ ಗಣರಾಜ್ಯ -ಪ್ರೇಗ್
53. ಕೋಟ್ ಡೆ ಐವರಿ- ಯಾಮೊಸೊಕ್ರೋ
54. ಕಾಂಗೋ ಪ್ರಜಾ ಗಣರಾಜ್ಯ -ಕಿನ್ಸ್ಹಾಸಾ
55. ಡೆನ್ಮಾರ್ಕ್ -ಕೋಪನ್ ಹೇಗನ್
56. ಜಿಬೌತಿ -ಜಿಬೌತಿ
57. ಡೊಮಿನಿಕಾ -ರೊಸ್ಯು
58. ಡೊಮಿನಿಕಾ ಗಣರಾಜ್ಯ-ಸ್ಯಾಂಟೋ ಡೊಮಿಂಗೋ
59. ಪೂರ್ವ ತಿಮೋರ್ -ಡಿಲಿ
60. ಇಕ್ವೆಡಾರ್- ಕ್ವಿಟೋ
61. ಈಜಿಪ್ಟ್ -ಕೈರೋ
62. ಎಲ್ ಸಾಲ್ವಡೋರ್- ಸಾನ್ ಸಾಲ್ವಡೋರ್
63. ಎಕ್ವೆಟೋರಿಯಲ್ ಗಿನಿಯಾ – ಮಲಬೊ
64. ಎರಿತ್ರಿಯಾ -ಅಸ್ಮಾರಾ
65. ಎಸ್ಟೋನಿಯಾ- ಟಾಲಿನ್
66. ಇಥಿಯೋಪಿಯಾ- ಆಡಿಸ್ ಅಬಾಬಾ
67. ಫಾಲ್ಕಲ್ಯಾಂಡ್ ದ್ವೀಪಗಳು- ಸ್ಟ್ಯಾನ್ಲಿ
68. ಫೆರೋ ದ್ವೀಪಗಳು -ಟೋರ್ಶ್ವಾನ್
69. ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ – ಪಾಲಿಕಿರ್
70. ಫಿಜಿ -ಸುವಾ
71. ಫಿನ್ ಲ್ಯಾಂಡ್- ಹೆಲ್ಸಿಂಕಿ
72. ಫ್ರಾನ್ಸ್- ಪ್ಯಾರಿಸ್
73. ಫ್ರೆಂಚ್ ಪಾಲಿನೇಷಿಯಾ- ಪಪೆಟ
74. ಗಬೊನ್-ಲಿಬ್ರವಿಲ್ಲೆ
75. ಗಾಂಬಿಯಾ- ಬಂಜುಲ್
76. ಜಾರ್ಜಿಯಾ- ಬಿಲಿಸಿ
77. ಜರ್ಮನಿ -ಬರ್ಲಿನ್
78. ಘಾನಾ- ಆಕ್ರಾ
79. ಜಿಬ್ರಾಲ್ಟರ್- ಜಿಬ್ರಾಲ್ಟರ್
80. ಗ್ರೀಸ್- ಅಥೆನ್ಸ್
81. ಗ್ರೀನ್ ಲ್ಯಾಂಡ್ -ನೂಕ್
82. ಗ್ರೆನಾಡಾ -ಸೇಂಟ್ ಜಾರ್ಜ್
83. ಗ್ವಾಮ್ -ಹಗತ್ನಾ
84. ಗ್ವಾಟೆಮಾಲಾ -ಗ್ವಾಟೆಮಾಲಾ ನಗರ
85. ಗೆರ್ನ್ಸೆ -ಸೇಂಟ್ ಪೀಟರ್ ಪೋರ್ಟ್
86. ಗಿನಿಯಾ- ಕೊನಾಕ್ರಿ
87. ಗಿನಿಯಾ- ಬಿಸಾಉ ಬಿಸಾಉ
88. ಗಯಾನಾ- ಜಾರ್ಜ್ ಟೌನ್
89. ಹೈಟಿ ಪೋರ್ಟ್- ಔ ಪ್ರಿನ್ಸ್
90. ಹೊಂಡುರಾಸ್- ತೆಗುಸಿಗಲ್ಪಾ
91. ಹಂಗರಿ- ಬುಡಾಪೆಸ್ಟ್
92. ಐಸ್ ಲ್ಯಾಂಡ್ -ರೆಯ್ಕಜಾವಿಕ್
93. ಭಾರತ -ನವದೆಹಲಿ
94. ಇಂಡೋನೇಷಿಯಾ -ಜಕಾರ್ತಾ
95. ಇರಾನ್- ತೆಹರಾನ್
96. ಇರಾಕ್ -ಬಾಗ್ದಾದ್
97. ಐರ್ ಲ್ಯಾಂಡ್- ಡಬ್ಲಿನ್
98. ಐಲ್ ಆಫ್ ಮ್ಯಾನ್ -ಡಗ್ಲಾಸ್
99. ಇಸ್ರೇಲ್- ಜೆರುಸಲೇಮ್
100. ಇಟಲಿ- ರೋಮ್
101. ಜಮೈಕಾ -ಕಿಂಗಸ್ಟನ್
102. ಜಪಾನ್- ಟೊಕಿಯೋ
103. ಜರ್ಸಿ- ಸೇಂಟ್ ಹೀಲರ್
104. ಜೋರ್ಡಾನ್ -ಅಮ್ಮಾನ್
105. ಕಝಕಿಸ್ತಾನ್- ಅಸ್ತಾನಾ
106. ಕೀನ್ಯಾ- ನೈರೋಬಿ
107. ಕಿರಿಬಾತಿ -ದಕ್ಷಿಣ ತರಾವಾ
108. ಕೊಸೊವೋ- ಪ್ರಿಸ್ಟಿನಾ
109. ಕುವೈತ್- ಕುವೈತ್ ನಗರ
110. ಕಿರ್ಗಿಸ್ತಾನ್- ಬಿಶ್ಕೇಕ್
111. ಲಾವೊಸ್- ವಿಯೆನ್ಶಿಯೇನ್
112. ಲಾತ್ವಿಯಾ- ರಿಗಾ
113. ಲೆಬನಾನ್ -ಬೀರತ್
114. ಲೆಸೋತೊ- ಮಾಸೇರು
115. ಲೈಬೀರಿಯಾ- ಮೊನ್ರೋವಿಯಾ
116. ಲಿಬಿಯಾ- ತ್ರಿಪೋಲಿ
117. ಲೀಶೆನ್ ಸ್ಟೈನ್ – ವಾಡುಝ್
118. ಲಿಥುಯೇನಿಯಾ- ವಿಲ್ನಿಯಸ್
119. ಲುಕ್ಸೆಂಬರ್ಗ್ -ಲುಕ್ಸೆಂಬರ್ಗ್ ನಗರ
120. ಮಸಿಡೋನಿಯಾ- ಸ್ಕೋಜೆ
121. ಮಡಗಾಸ್ಕರ್- ಅಂಟಾನನರಿವೊ
122. ಮಾಲಾವಿ -ಲಿಲೊಂಗ್ವೆ
123. ಮಲೇಷಿಯಾ- ಕೌಲಾಲಂಪುರ / ಪುತ್ರಾಜಯಾ
124. ಮಾಲ್ಡೀವ್ಸ್ -ಮಾಲೆ
125. ಮಾಲಿ- ಬಮಾಕೊ
126. ಮಾಲ್ಟಾ -ವೆಲೆಟ್ಟಾ
127. ಮಾರ್ಷಲ್ ದ್ವೀಪಗಳು- ಮಜುರೊ
128. ಮಾರಿಷಿಯಾನಾ- ನೌಕ್ಚೋಟ್
129. ಮಾರಿಷಿಯಸ್ -ಪೋರ್ಟ್ ಲೂಯಿಸ್
130. ಮೇಯೊಟ್ -ಮಾಮೌಡ್ಝು
131. ಮೆಕ್ಸಿಕೋ -ಮೆಕ್ಸಿಕೋ ನಗರ
132. ಮಾಲ್ಡೋವಾ- ಚಿಸಿನಾಉ
133. ಮೊನಾಕೋ- ಮೊನಾಕೊ
134. ಮಂಗೋಲಿಯಾ- ಉಲಾನ್ ಬತಾರ್
135. ಮಾಂಟೆನೆಗ್ರೋ- ಪೊಡ್ಗೋರಿಕಾ
136. ಮಾಂಟ್ಸೆರಾಟ್- ಪ್ಲೈಮೌಥ್
137. ಮೊರೊಕ್ಕೋ -ರಾಬಾತ್
138. ಮಾಝಾಂಬಿಕ್- ಮಾಪುಟೋ
139. ಮಯನ್ಮಾರ್- ನೇಪಿಡಾ
140. ನಮೀಬಿಯಾ -ವಿಂಢೋಕ್
141. ನೌರು- ಯಾರೆನ್
142. ನೇಪಾಳ -ಕಠ್ಮಂಡು
143. ನೆದರ್ ಲ್ಯಾಂಡ್ಸ್- ಆ್ಯಮ್ಸ್ಟ ರಡಾಮ್
144. ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್- ವಿಲ್ಲೆಮಸ್ಟಾಡ್
145. ನ್ಯೂ ಕ್ಯಾಲೆಡೋನಿಯಾ -ನೌಮಿಯಾ
146. ನ್ಯೂಝೀಲ್ಯಾಂಡ್,- ವೆಲಿಂಗ್ಟನ್
147. ನಿಕಾರಾಗುಆ- ಮನಾಗುಆ
148. ನೈಗರ್- ನಿಯಾಮಿ
149. ನೈಜೀರಿಯಾ- ಅಬುಜಾ
150. ನ್ಯೂ (niue) -ಅಲೋಫಿ
__________________________________________

♦️🌻ಅಳತೆಯ ಮಾಪನಗಳು🌻♦️

1) ಆಂಗಸ್ಟ್ರಮ್ : ಅಲೆಯ ಉದ್ದ
2) ನಾಟಿಕಲ್ಮೈಲ್ : ನೌಕಾಯಾನದ ಅಂತರ
3) ಕ್ಯಾರಟ್ : ಚಿನ್ನದ ಶುದ್ದತೆ
4) ಪ್ಯಾದಮ್ : ನೀರಿನ ಆಳ
5) ಜೌಲ್ : ಶಕ್ತಿ
6) ನಾಟ್ : ಗಾಳಿಯ ವೇಗ
7) ರೀಮ್ : ಕಾಗದ ಎಣಿಕೆ
8) ಪ್ಯಾರೆಡೆ : ವಿದ್ಯುತ್ ಚಲನೆ
9) ಆಂಪೀಯರ್ : ವಿದ್ಯುತ್ ಪ್ರವಾಹ
1೦) ಬಾಕ್ವೆರಲ್ : ವಿಕಿರಣ ಶೀಲತೆ
11) ಡೆಸಿಬಲ್ : ಶಬ್ದದ ಪ್ರಮಾಣ
12) ಕ್ಯಾಲರಿ : ಶಾಖದ ಪ್ರಮಾಣ
13) ಹೆರ್ಡ್ಸ : ವಿದ್ಯುತ್ಕಾಂತಿಯ ಅಲೆಗಳು
14) ಜೋತಿರ್ ವರ್ಷ : ನಕ್ಷತ್ರಗಳ ನಡುವಿನ ದೂರ
15) ಓಮ್ : ವಿದ್ಯುತ್ ಪ್ರತಿರೋದ
16) ಕ್ಯಾಂಡಿಲಾ : ಪ್ರಕಾಶದ ತೀವ್ರತೆ
17) ಮೋಲ್ : ದ್ರವ್ಯರಾಶಿ ಪ್ರಮಾಣ
18) ಬಾರ್ : ವಾಯುಮಂಡಲದ ಒತ್ತಡ
19) ವೋಲ್ಟ : ವಿದ್ಯುತ್ ಸಾಮರ್ಥೆ
20) ವ್ಯಾಟ್ : ವಿದ್ಯುತ್ ಶಕ್ತಿ
21) ಅಮ್ಮಿಟರ್ : ವಿದ್ಯುತ್ ಪ್ರವಾಹ
22) ಆಡಿಯೊಮೀಟರ್ : ಶಬ್ದದ ತಿವ್ರತೆ
23) ಅನಿಮೋ ಮೀಟರ್ : ಗಾಳಿಯ ವೇಗ & ದಿಕ್ಕು ಅಳೆಯುವಿಕೆ
24) ಆಲ್ಟಿಮೀಟರ್ : ಎತ್ತರ ಅಳೆಯುವಿಕೆ
25) ಬ್ಯಾರೊಮೀಟರ್ : ವಾಯುಮಂಡಲದ ಒತ್ತಡ
26) ಪ್ಯಾದೊಮೀಟರ್ : ಸಮುದ್ರದ ಆಳ
27) ಲ್ಯಾಕ್ಟೋಮೀಟರ್ : ಹಾಲಿನ ಶುದ್ದತೆ
28) ಟಾಕೋಮೀಟರ್ : ವಿಮಾನಗಳ ವೇಗ
29) ಸ್ಪೇಕ್ಟ್ರೋಮೀಟರ್ : ವರ್ಣಪಂಕ್ತಿ ವಿಶ್ಲೇಷಿಸಲು
30) ಸ್ಮಿಗ್ನೋಮಾನೊಮೀಟರ : ರಕ್ತದ ಒತ್ತಡ
31) ಎಲೆಕ್ಟ್ರೋಕಾರಡಿಯೋಗ್ರಾಫ್ : ಹೃದಯ ಕಾರ್ಯ
32) ಎಲೆಕ್ಟ್ರೋಎನ್ಸೀಫಿಲೋಗ್ರಾಫ್ : ಮೆದುಳಿನ ಕಾರ್
__________________________________________

"ಭಾರತದ 18 ರೈಲ್ವೆ ವಲಯ / ಕೇಂದ್ರ ಕಚೇರಿ"
================
1. ಉತ್ತರ ರೈಲ್ವೆ  / ನವದೆಹಲಿ
2. ಪಶ್ಚಿಮ ರೈಲ್ವೆ / ಮುಂಬೈ
3. ಆಗ್ನೇಯ ರೈಲ್ವೆ / ಕಲ್ಕತ್ತಾ
4. ದಕ್ಷಿಣ ಕೇಂದ್ರ ರೈಲ್ವೆ/ ಸಿಕಂದರಾಬಾದ್
5. ದಕ್ಷಿಣ ರೈಲ್ವೆ / ಚೆನ್ನೈ
6. ಕೇಂದ್ರ ರೈಲ್ವೆ / ಮುಂಬೈ
7. ಈಶಾನ್ಯ ರೈಲ್ವೆ /  ಗೋರಕ್ ಪುರ
8. ಪೂರ್ವ ರೈಲ್ವೆ / ಕೊಲ್ಕತ್ತಾ
9. ಈಶಾನ್ಯ ಗಡಿನಾಡು ರೈಲ್ವೆ / ಗೌಹಾತಿ
10. ಪೂರ್ವ ಕೇಂದ್ರ ರೈಲ್ವೆ / ಹಾಜಿಪುರ
11. ಪೂರ್ವ ಕರಾವಳಿ ರೈಲ್ವೆ / ಭುವನೇಶ್ವರ
12. ಉತ್ತರ ಕೇಂದ್ರ ರೈಲ್ವೆ / ಅಲಹಾಬಾದ್
13. ವಾಯುವ್ಯ ರೈಲ್ವೆ / ಜೈಪುರ
14. ನೈರುತ್ಯ ರೈಲ್ವೆ / ಹುಬ್ಬಳ್ಳಿ
15. ಪಶ್ಚಿಮ ಕೇಂದ್ರ ರೈಲ್ವೆ/  ಜಬ್ಬಲ್ ಪುರ 
16. ಅಗ್ನಿಯ ಕೇಂದ್ರ ರೈಲ್ವೆ. / ಬಿಲಾಸ್ ಪುರ
17. ಕಲ್ಕತ್ತಾ ಮೆಟ್ರೋ/  ಕಲ್ಕತ್ತಾ
18. ದಕ್ಷಿಣ ಕರಾವಳಿ ರೈಲ್ವೆ/  ವಿಶಾಖಪಟ್ಟಣಂ
==========
#. ಭಾರತದ ರೈಲ್ವೆ ವಲಯಗಳಲ್ಲಿ ಅತ್ಯಂತ ಚಿಕ್ಕದು :- ಈಶಾನ್ಯ ಗಡಿನಾಡು ರೈಲ್ವೆ - ಗೌಹಾತಿ
#. ಭಾರತದ ರೈಲ್ವೆ ವಲಯಗಳಲ್ಲಿ ಅತ್ಯಂತ ದೊಡ್ಡದು :- ಉತ್ತರ ರೈಲ್ವೆ - ದೆಹಲಿ
__________________________________________

🌲 ಭಾರತದ ಕೆಲವು ಪ್ರಮುಖ ಕೈಗಾರಿಕೆಗಳು...

☘ ಹತ್ತಿ ಬಟ್ಟೆ ಕೈಗಾರಿಕೆ...

ದಾವಣಗೆರೆ, ಹುಬ್ಬಳ್ಳಿ, ರಾಯಚೂರು, ಇಳಕಲ್, ಬೆಳಗಾವಿ, ಬಳ್ಳಾರಿ, ಬೆಂಗಳೂರು ಮೈಸೂರು.

☘ ರೇಷ್ಮೆ ಕೈಗಾರಿಕೆ....

ಕೋಲಾರ, ಮೈಸೂರು, ಬೆಳಗಾವಿ, ಗಂಗಾವತಿ, ಗೋಕಾಕ್

☘ ಸಕ್ಕರೆ ಕಾರ್ಖಾನೆ...

ಮಂಡ್ಯ, ದಾವಣಗೆರೆ, ಬೆಳಗಾವಿ, ಗಂಗಾವತಿ, ಗೋಕಾಕ್.

☘ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ..

ಭದ್ರಾವತಿ


☘ ಸಿಮೆಂಟ್ ಕೈಗಾರಿಕೆ...

ಭದ್ರಾವತಿ, ಬಾಗಲಕೋಟೆ, ತುಮಕೂರು, ಗುಲ್ಬರ್ಗ

☘ ಕಾಗದ ಕೈಗಾರಿಕೆ...

ದಾಂಡೇಲಿ, ಬೆಳಗೊಳ, ನಂಜನಗೂಡು
ಮುನಿರಾಬಾದ್, ಬೆಂಗಳೂರು, ಶಿವಮೊಗ್ಗ.

__________________________________________

★★ಸಾಮಾನ್ಯ ವಿಜ್ಞಾನ ಪ್ರಶೆಗಳು★★
★ವಿಷಯ : ಸಾಮಾನ್ಯ ವಿಜ್ಞಾನ ★

1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.*

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

__________________________________________

■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ

●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ

●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ

●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್

●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ

●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್

●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್

●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ

●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ

●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ

●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ

●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ

●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ

●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ಕೊಪ್ಪಳ

●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ

●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ

●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950 ರಲ್ಲಿ

●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ

●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ

●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ

●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ

●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ

●. ಧೃವ ••┈┈┈┈• ಜೆಟ್ಟಾಯಿ ಶಾಸನ

●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ 

●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ

●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ

●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
ರವಿ ಕೀರ್ತೀ ••┈┈┈┈• ಐಹೋಳೆ ಶಾಸನ

●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ

●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)

●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.

●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ

●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.

●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

●. ಹಲ್ಮಿಡಿ ಶಾಸನದ ಕರ್ತೃ ••┈┈┈• ಕಾಕುಸ್ಥವರ್ಮ .

●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ
 
●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .

●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .

●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .

●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ

●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ.
__________________________________________

☀️GRAPHS - USES

🔘ಹೈದರ ಗ್ರಾಫ್ -— ಉಷ್ಣಾಂಶ & ಮಳೆ 

🔘ಎರ್ಗೋ ಗ್ರಾಫ್-— ಬೆಳೆಗಳ ಸಂಬಂಧ - ಉಷ್ಣಾಂಶ & ಮಳೆ

🔘  ಕ್ಲೈಮೋ ಗ್ರಾಫ್ -— ಉಷ್ಣಾಂಶ. & ಸಾಪೇಕ್ಷ ಆರ್ದ್ರತೆ  

🔘 ಬ್ಯಾಂಡ್ ಗ್ರಾಫ್ -— ವಿವಿಧ ಬೆಳೆಗಳು & ಕ್ಷೇತ್ರ

🔘 ಫೈ ನಕ್ಷೆ -— ಭೂ ಬಳಕೆ & ನೀರಾವರಿ % ಪ್ರಮಾಣ

🔘ಪಿರಾಮಿಡ್ ನಕ್ಷೆ -— ವಯೋರಚನೆ , ಲಿಂಗಾನುಪಾತ

🔘 ಕ್ಲೋರೋಫ್ಲೆತ್ ನಕ್ಷೆ  -— ಜನಸಾಂದ್ರತೆ

🔘ಡಾಟ್ ನಕ್ಷೆ  -— ಜನಸಂಖ್ಯೆಯ ಹಂಚಿಕೆ 

🔘 ಐಸೋಪ್ಲೆತ್ ನಕ್ಷೆ  -— ಹವಾಗುಣ ಸೂಚನೆ

🔘 ಬ್ಯಾಥಿಮ್ಯಾಟ್ರಿಕ್ ನಕ್ಷೆ -— ಸಾಗರದ, ಸಮುದ್ರಗಳ ಆಳವನ್ನು  ತೋರಿಸಲು
__________________________________________
💡ರಾಷ್ಟ್ರೀಯ ಕ್ರೀಡೆಗಳು ಮತ್ತು ರಾಷ್ಟ್ರ

ಅಮೆರಿಕಾ ಸಂಯುಕ್ತ ಸಂಸ್ಥಾನಗಳು - ಬೇಸ್ ಬಾಲ್ 

ಸ್ಪೇನ್ - ಬುಲ್ - ಹೋರಾಟ 

ಕೆನಡಾ - ಐಸ್ ಹಾಕಿ 

ಭಾರತ - ಹಾಕಿ 

ಇಂಡೋನೇಷ್ಯಾ - ಬ್ಯಾಡ್ಮಿಂಟನ್ 

ರಷ್ಯಾ - ಚೆಸ್ 

ಸ್ಕಾಟ್ಲೆಂಡ್ - ರಗ್ಬಿ ಫುಟ್ಬಾಲ್ 

ಇಂಗ್ಲೆಂಡ್ - ಕ್ರಿಕೆಟ್ 

ಜಪಾನ್ - ಜು-ಜಿಟ್ಸು 

ಶ್ರೀಲಂಕಾ - ವಾಲಿ ಬಾಲ್ 

ಬ್ರೆಜಿಲ್ - ಫುಟ್ಬಾಲ್ 

ಭೂತಾನ್ - ಬಿಲ್ಲುಗಾರಿಕೆ 

ಆಸ್ಟ್ರೇಲಿಯಾ - ಕ್ರಿಕೆಟ್ 

ಪಾಕಿಸ್ತಾನ - ಹಾಕಿ 

ಚೀನಾ - ಟೇಬಲ್ ಟೆನಿಸ್ 

ಬಾಂಗ್ಲಾದೇಶ - ಕಬಡ್ಡಿ 

ಫ್ರಾನ್ಸ್ - ಫುಟ್ಬಾಲ್ 

ಮಲೇಷ್ಯಾ - ಬ್ಯಾಡ್ಮಿಂಟನ್


ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು