ಶಿಕ್ಷಣವೇ ಶಕ್ತಿ

Wednesday 19 May 2021

ಕಿರು ಪರಿಚಯ

ನಾಥೂರಾಮ್ ಗೋಡ್ಸೆ


ನಾಥೂರಾಮ್‌ ವಿನಾಯಕ್‌ ಗೋಡ್ಸೆ (೧೯ ಮೇ ೧೯೧೦ – ೧೫ ನವೆಂಬರ್‌‌ ೧೯೪೯), ಹಿಂದೂ ರಾಷ್ಟ್ರೀಯತಾವಾದಿ; ಮಹಾತ್ಮಾ ಗಾಂಧಿಯವರ ಹಂತಕ; ತನ್ನ ಸಹೋದರ ಗೋಪಾಲ ಗೋಡ್ಸೆ ಮತ್ತು ಇತರ ಆರು ಮಂದಿ ಸಹ-ಸಂಚುಗಾರರೊಂದಿಗೆ ಸೇರಿಕೊಂಡು ಗಾಂಧಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದ್ದನು.

The story ended usual way
 The way its always been
A bullet came out from Godse's gun
 And shot the beggar clean
- J S Khurmi
Collected Poems

Quick Facts ನಾಥೂರಾಮ್‌ ವಿನಾಯಕ್‌ ಗೋಡ್ಸೆ Nathuram Vinayak Godse नथूराम गोडसे, ಹುಟ್ಟು ...
ನಾಥೂರಾಮ್‌ ವಿನಾಯಕ್‌ ಗೋಡ್ಸೆ Nathuram Vinayak Godse नथूराम गोडसे
Nathuram Godse at his trial for the murder of Mahatma Gandhi
ಹುಟ್ಟು೧೯ ಮೇ ೧೯೧೦
BaramatiPune DistrictBombay PresidencyBritish India
(now in ಮಹಾರಾಷ್ಟ್ರ, India)
ಸಾವು೧೫ ನವೆಂಬರ್ ೧೯೪೯ (aged ೩೯)
Ambala Prison, East PunjabIndia
(now in ಹರಿಯಾಣ, India)
ಸಾವಿನ ಕಾರಣExecution by hanging
ರಾಷ್ಟ್ರೀಯತೆಭಾರತೀಯ
ದುಷ್ಕೃತ್ಯ ಆಪಾದನೆ(ಗಳು)Assassination of Mohandas Karamchand Gandhi
Close

ಆರಂಭಿಕ ಜೀವನ

  • ನಾಥೂರಾಮ್‌ ಹುಟ್ಟಿದ್ದು ಪುಣೆ ಜಿಲ್ಲೆಗೆ ಸೇರಿದ ಬಾರಾಮತಿ ಎಂಬಲ್ಲಿ, ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ. ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದ ತಂದೆ ವಿನಾಯಕ ವಾಮನರಾವ್‌ ಗೋಡ್ಸೆ . ತಾಯಿ ಲಕ್ಷ್ಮೀ (ಜನ್ಮನಾಮ ಗೋದಾವರಿ) ಎಂಬುದಾಗಿತ್ತು. ನಾಥೂ ರಾಮನ ಹುಟ್ಟಿನ ಹೆಸರು ರಾಮಚಂದ್ರ ಎಂಬುದಾಗಿತ್ತು. ಸಾಮಾನ್ಯವಾಗಿ ಪ್ರಚಲಿತವಾಗಿರುವ ವಾದದ ಪ್ರಕಾರ ನಾಥೂರಾಮ್‌ಗೆ ಈ ಹೆಸರನ್ನು ನೀಡಲು ಒಂದು ದುರದೃಷ್ಟಕರ ಘಟನೆಯು ಕಾರಣವಾಗಿತ್ತು.
  • ನಾಥೂರಾಮನಿಗಿಂತ ಮೊದಲು ಹುಟ್ಟಿದ ಮೂರು ಗಂಡು ಮಕ್ಕಳೂ ಕಿರಿವಯಸ್ಸಿನಲ್ಲಿಯೇ ತೀರಿಹೋದರು. ಬದುಕಿದ್ದು ಒಬ್ಬ ಸೋದರಿ ಮಾತ್ರಾ. ತಮ್ಮ ಕುಟುಂಬದ ಗಂಡು ಮಕ್ಕಳ ಮೇಲೆ ಯಾವುದೋ ಶಾಪವಿದೆ ಎಂದುಕೊಂಡು , ಬಾಲಕ ರಾಮಚಂದ್ರನನ್ನು ಬಾಲ್ಯದಲ್ಲಿ ಮೂಗು ಚುಚ್ಚಿಸುವುದು, ಮೂಗುತಿ ಹಾಕುವುದು (ಮರಾಠಿಯಲ್ಲಿ "ನತ್‌" ಎಂದರೆ ಮೂಗುತಿ) ಸೇರಿದಂತೆ, ಹುಡುಗಿಯ ರೀತಿಯಲ್ಲಿ ಬೆಳೆಸಲಾಯಿತು. ಹೀಗಾಗಿ ಆತನಿಗೆ ನಾಥೂರಾಮ್ (ಮೂಗು ಚುಚ್ಚಿಸಿಕೊಂಡ ರಾಮ) ಎಂಬ ಹೆಸರು ಬಂತು.
  • ಆತನಿಗೊಬ್ಬ ತಮ್ಮನು ಹುಟ್ಟಿ,ದ ತರುವಾಯ ಅವರು ಮತ್ತೆ ಆತನನ್ನು ಹುಡುಗನಂತೆ ಬೆಳೆಸುವುದನ್ನು ಆರಂಭಿಸಿದರು.
  • ನಾಥೂರಾಮ್‌ ಗೋಡ್ಸೆಯು ಐದನೆಯ ತರಗತಿಯವರೆಗೆ ಬಾರಾಮತಿಯಲ್ಲಿನ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕೈಗೊಂಡ ನಂತರ, ಆಂಗ್ಲ-ಭಾಷಿಕ ಶಾಲೆಯಲ್ಲಿ ಓದಲೆಂಬ ದೃಷ್ಟಿಯಿಂದ ಆತನನ್ನು ಪುಣೆಯಲ್ಲಿನ ಚಿಕ್ಕಮ್ಮನ ಬಳಿಯಲ್ಲಿಯೇ ಉಳಿದು ಓದುವಂತೆ ಕಳಿಸಲಾಯಿತು. ತನ್ನ ಶಾಲಾದಿನಗಳಲ್ಲಿ ಆತನು ಗಾಂಧಿಯವರನ್ನು ಬಹಳವೇ ಗೌರವಿಸುತ್ತಿದ್ದ.
  • ೧೯೩೦ರಲ್ಲಿ ನಾಥೂರಾಮ್‌ನ ತಂದೆಯವರಿಗೆ ರತ್ನಾಗಿರಿ ಎಂಬ ಪಟ್ಟಣಕ್ಕೆ ವರ್ಗವಾಯಿತು. ಅಲ್ಲಿ ತನ್ನ ತಂದೆತಾಯಿಗಳೊಂದಿಗೆ ವಾಸಿಸುತ್ತಿರುವಾಗ ಬಾಲಕ ನಾಥೂರಾಮನಿಗೆ ಮೊತ್ತಮೊದಲಿಗೆ ಹಿಂದುತ್ವ ಸಿದ್ಧಾಂತ ಪ್ರತಿಪಾದಕರಾದ ವೀರ್‌ ಸಾವರ್ಕರ್‌‌ರನ್ನು ಭೇಟಿಯಾಯಿತು, ಇಬ್ಬರ ನಡುವೆ ಸ್ನೇಹವು ಬೆಳೆಯಿತು.

ರಾಜಕೀಯ ಜೀವನ

ಮೋಹನದಾಸ ಗಾಂಧಿಯವರ ಕೊಲೆಯ ಆಪಾದಿತರ ಸಮೂಹ ಭಾವಚಿತ್ರ. ನಿಂತಿರುವವರು, L ನಿಂದ R: ಶಂಕರ್‌ ಕಿಸ್ತೈಯಾ, ಗೋಪಾಲ ಗೋಡ್ಸೆ , ಮದನ್‌ಲಾಲ್‌ ಪಹ್‌ವಾ, ದಿಗಂಬರ್‌ ರಾಮಚಂದ್ರ ಬಡ್ಗೆ. ಕುಳಿತಿರುವವರು, L ನಿಂದ R: ನಾರಾಯಣ್‌ ಆಪ್ಟೆ , ವಿನಾಯಕ್‌ D. ಸಾವರ್ಕರ್‌‌ , ನಾಥೂರಾಮ್‌ ಗೋಡ್ಸೆ , ವಿಷ್ಣು ಕರ್ಕರೆ
  • ಗೋಡ್ಸೆಯು ಪ್ರೌಢಶಾಲೆಯಲ್ಲಿದ್ದಾಗ ಓದು ನಿಲ್ಲಿಸಿ, ಹಿಂದೂ ಮಹಾಸಭಾದ ಕಾರ್ಯಕರ್ತನಾದನು. ಆತನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತನಾಗಿದ್ದನೆಂಬ ಭಾರೀ ಪ್ರಚಾರವಾದ ಪ್ರತಿಪಾದನೆಗೆ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಅವರುಗಳು ನಿರ್ದಿಷ್ಟವಾಗಿ ಅಖಿಲ ಭಾರತ ಮುಸ್ಲಿಮ್‌ ಲೀಗ್‌ನ ಪ್ರತ್ಯೇಕತಾವಾದಿ ರಾಜಕೀಯನೀತಿಯನ್ನು ವಿರೋಧಿಸುತ್ತಿದ್ದರು.
  • ಗೋಡ್ಸೆಯು ಹಿಂದೂ ಮಹಾಸಭಾದ ಪರವಾಗಿ ಅಗ್ರಣಿ ಎಂಬ ಒಂದು ಮರಾಠಿ ವಾರ್ತಾಪತ್ರಿಕೆ/ವೃತ್ತಪತ್ರಿಕೆಯನ್ನು ಆರಂಭಿಸಿದನು, ಮುಂದೆ ಅದರ ಹೆಸರನ್ನು ಹಿಂದೂ ರಾಷ್ಟ್ರ ಎಂದು ಬದಲಾಯಿಸಲಾಯಿತು. ಹಿಂದೂ ಮಹಾಸಭಾವು ಮೊದಲಿಗೆ ಗಾಂಧಿಯವರ ಬ್ರಿಟಿಷ್‌ ಸರ್ಕಾರದ ವಿರುದ್ಧದ ನಾಗರಿಕ ಅಸಹಕಾರ ಚಳುವಳಿಯನ್ನು ಬೆಂಬಲಿಸಿತ್ತು.
  • ಆದರೆ, ಕಾಲಕ್ರಮೇಣ, ಮುಸಲ್ಮಾನರನ್ನು ಸಂತೋಷಗೊಳಿಸುವ ಪ್ರಯತ್ನದಲ್ಲಿ ಗಾಂಧಿಯವರು ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆಂಬ ಅಭಿಪ್ರಾಯ ತಳೆದು ,ಗೋಡ್ಸೆ ಹಾಗೂ ಆತನ ಮಾರ್ಗದರ್ಶಕರು ಗಾಂಧಿಯವರ ಪ್ರತಿಪಾದನೆಗಳ ವಿರೋಧಕರಾದರು. ಭಾರತದ ವಿಭಜನೆಯ ಕಾಲದಲ್ಲಿ ಉಂಟಾದ ಮತೀಯ ದಂಗೆಗೆ , ಅದರಿಂದಾದ ಸಾವಿರಾರು ಜನರ ಸಾವಿಗೆ,ಗಾಂಧಿಯವರೇ ಕಾರಣಕರ್ತರು ಎಂದು ಅವರ ಅಭಿಪ್ರಾಯವಾಗಿತ್ತು.
  • ಗೋಡ್ಸೆಯು ಗಾಂಧಿಯವರ ಕಟ್ಟಾ ಅಹಿಂಸೆಯ ಪ್ರತಿಪಾದನೆಗೆ ವಿರೋಧಿಯಾಗಿದ್ದನು. ಆತನ ಭಾವನೆಯ ಪ್ರಕಾರ ಇಂತಹಾ ಬೋಧನೆಗಳು ಹಿಂದೂಗಳು ತಮ್ಮ ಸ್ವರಕ್ಷಣೆಗೆ ನಡೆಸಲು ಬೇಕಾದ ಹೋರಾಟಕ್ಕೆ ಅಗತ್ಯವಾದ ಸಂಕಲ್ಪಶಕ್ತಿಯನ್ನೇ ಕಳೆದುಕೊಳ್ಳುವ ಹಾಗೆ ಮಾಡಿ ಅವರನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಿಬಿಡುತ್ತವೆ ಎಂಬುದಾಗಿತ್ತು. ಗಾಂಧಿಯವರನ್ನು ಹತ್ಯೆ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಆತನಿಗಿದ್ದ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿತ್ತು ಎನ್ನಲಾಗಿದೆ. ಗೋಡ್ಸೆಯು ಒಬ್ಫ ರಾಷ್ಟ್ರಪ್ರೇಮಿಯೂ ಆಗಿದ್ದ .

ಗಾಂಧಿ ಹತ್ಯೆ

  • ಗೋಡ್ಸೆಯು ಗಾಂಧಿಯವರನ್ನು ಜನವರಿ ೩೦, ೧೯೪೮ರಂದು ಹತ್ಯೆಗೈದನು. ಆತನು ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಅವರ ಬಳಿಗೆ ಸರಿದು ಬಾಗಿದನು. ಗಾಂಧಿಯವರ ಜೊತೆಗಿದ್ದ ಓರ್ವ ಹುಡುಗಿಯು "ಸಹೋದರ, ಬಾಪುರವರಿಗೆ ಈಗಾಗಲೇ ತಡವಾಗಿದೆ " ಎಂದು ಹೇಳಿ ಆತನನ್ನು ಪಕ್ಕಕ್ಕೆ ಸರಿಸಲು ಹೋದಾಗ ಆತನು ಆಕೆಯನ್ನು ಪಕ್ಕಕ್ಕೆ ತಳ್ಳಿ. ೩೮ ಬೆರೆಟ್ಟಾ ಅರೆ-ಸ್ವಯಂಚಾಲಿತ ಕೈಕೋವಿಯಿಂದ/ಪಿಸ್ತೂಲಿನಿಂದ ತೀರ ಸನಿಹದಿಂದ ಮೂರು ಬಾರಿ ಗುಂಡು ಹಾರಿಸಿ ಕೊಂದನು. ಗುಂಡು ಹಾರಿಸಿದ ನಂತರ ಆತನು ಓಡಲೂ ಪ್ರಯತ್ನಿಸಲಿಲ್ಲ ಅಥವಾ ಪಿಸ್ತೂಲು/ ಬಂದೂಕು/ ಕೈ ಕೋವಿಯು ತನ್ನ ಬಳಿಯೇ ಇದ್ದರೂ ಉಳಿದ ಯಾರನ್ನೂ ಬೆದರಿಸಲೂ ಹೋಗಿರಲಿಲ್ಲ. ಆತನನ್ನು ನೆಲದ ಕಡೆಗೆ ತಳ್ಳಿ ಒತ್ತಿಹಿಡಿದು ತದನಂತರ ಆತನನ್ನು ಬಂಧಿಸಲಾಯಿತು.

ವಿಚಾರಣೆ ಹಾಗೂ ಗಲ್ಲುಶಿಕ್ಷೆ ಜಾರಿ

  • ಮೋಹನದಾಸ ಗಾಂಧಿಯವರ ಹತ್ಯೆಯ ನಂತರ ಆತನ ವಿಚಾರಣೆಯನ್ನು ಮೇ ೨೭, ೧೯೪೮ರಂದು ಆರಂಭಿಸಲಾಯಿತು. ವಿಚಾರಣೆಯ ಸಮಯದಲ್ಲಿ ಆತನು ಯಾವುದೇ ಆರೋಪದ ವಿರುದ್ಧ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿಲ್ಲ ಮಾತ್ರವಲ್ಲ ಮುಕ್ತವಾಗಿಯೇ ಗಾಂಧಿ ಯವರನ್ನು ಕೊಲ್ಲಲು ತನಗಿರುವ ಕಾರಣಗಳ ಕುರಿತು ದೀರ್ಘ ಕಾಲ ಯೋಚಿಸಿ ಸನ್ನಾಹ ನಡೆಸಿದ ನಂತರ ಗಾಂಧಿಯವರನ್ನು ತಾನು ಕೊಂದೆನೆಂದು ಒಪ್ಪಿಕೊಂಡನು.  ನವೆಂಬರ್‌‌ ೮, ೧೯೪೯ರಂದು, ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು.
  • ಆರೋಪಿಗಳಿಗೆ ವಿಧಿಸಲಾದ ಮರಣದಂಡನೆಯನ್ನು ರದ್ದುಪಡಿಸಬೇಕೆಂದು ಕರೆ ನೀಡಿದವರಲ್ಲಿ ಜವಾಹರ್‌ಲಾಲ್‌ ನೆಹರೂ , ಹಾಗೂ ಗಾಂಧಿಯವರ ಇಬ್ಬರು ಪುತ್ರರು ಸೇರಿದ್ದರು, ಅವರುಗಳ ಪ್ರಕಾರ ವಿಚಾರಣೆಯಲ್ಲಿರುವ ಇಬ್ಬರು ವ್ಯಕ್ತಿಗಳು RSS ಮುಖಂಡರುಗಳ ಕೈಗೊಂಬೆಯಾಗಿದ್ದಾರೆಂದು ಹಾಗೂ ತಮ್ಮ ತಂದೆಯನ್ನು ಹತ್ಯೆ ಮಾಡಿದವರನ್ನು ಮರಣದಂಡನೆಗೆ ಗುರಿಪಡಿಸಿದರೆ ಮರಣದಂಡನೆಯ ಕಟ್ಟಾ ವಿರೋಧಿಯಾಗಿದ್ದ ತಮ್ಮ ತಂದೆಯ ಸ್ಮರಣೆ ಹಾಗೂ ಹಿರಿಮೆಗೆ ಅವಮರ್ಯಾದೆ ಸಲ್ಲಿಸಿದಂತಾಗುತ್ತದೆಂಬುದಾಗಿತ್ತು.
  • ಅಂಬಾಲಾದ ಸೆರೆಮನೆಯಲ್ಲಿ ನವೆಂಬರ್‌‌ ೧೫, ೧೯೪೯,ರಂದು ಮತ್ತೋರ್ವ ಸಂಚುಗಾರ ನಾರಾಯಣ್‌ ಆಪ್ಟೆಯೊಡನೆ ಗೋಡ್ಸೆಯನ್ನು ಗಲ್ಲಿಗೇರಿಸಲಾಯಿತು. ಆರ್‍ಎಸ್‍ಎಸ್‍ ಜೊತೆ ನಿಕಟ ಸಂಪರ್ಕವಿದ್ದ ಸಾವರ್ಕರ್‌‌ರ ಮೇಲೂ ಗಾಂಧಿಯವರ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದ್ದಿತಾದರೂ ಅವರನ್ನು ಖುಲಾಸೆಗೊಳಿಸಲಾಗಿ, ತದನಂತರ ಬಿಡುಗಡೆಗೊಳಿಸಲಾಯಿತು.

ಪರಿಣಾಮಗಳು

  • ಗಾಂಧಿಯವರ ಹತ್ಯೆಯಾದುದಕ್ಕಾಗಿ ಸಾವಿರಾರು ಮಂದಿ ಭಾರತೀಯರು ಶೋಕಿಸಿದರು.ಹಿಂದೂ ಮಹಾಸಭಾವನ್ನು ಬಹಳವಾಗಿ ಹೀಗಳೆಯಲಾಯಿತು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ RSS ಸಂಘವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಯಿತು. ಇಷ್ಟೆಲ್ಲಾ ಆದರೂ, ತನಿಖಾಧಿಕಾರಿಗಳು RSS ಪ್ರಭುತ್ವವು ಗೋಡ್ಸೆಯ ಸಂಚಿಗೆ ಯಾವುದೇ ವಿಧವಾದ ಔಪಚಾರಿಕ ಬೆಂಬಲವನ್ನು ಕೊಟ್ಟಿತ್ತು ಎಂಬುದಕ್ಕಾಗಲಿ ಅಥವಾ ಆತನ ಸಂಚು ಅವರಿಗೆ ತಿಳಿದಿತ್ತು ಎಂಬುದಕ್ಕೇ ಆಗಲಿ ಯಾವುದೇ ಸಾಕ್ಷ್ಯವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
  • RSS ಮೇಲಿನ ನಿಷೇಧವನ್ನು ೧೯೪೯ರಲ್ಲಿ ಪ್ರಧಾನಮಂತ್ರಿ ನೆಹರೂ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲರು ಹಿಂತೆಗೆದುಕೊಂಡರು. ಇಂದಿನ ದಿನದವರೆಗೂ RSS ಸಂಘವು ಗೋಡ್ಸೆಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲವೆಂದು ನಿರಾಕರಿಸುತ್ತದಲ್ಲದೇ ಆತನು ಅದರ ಸದಸ್ಯನಾಗಿದ್ದನೆಂಬ ಹೇಳಿಕೆಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತದೆ.
  • ಹತ್ಯೆಯಾದ ನಂತರ ಹಲವರು ಭಾರತದ ಸರ್ಕಾರವನ್ನು ಹಿಂದೊಮ್ಮೆ ಅದೇ ವಾರದಲ್ಲಿಯೇ ನಂತರ ಗುಂಡಿಟ್ಟು ಕೊಂದ ಇದೇ ಸಂಚುಗಾರರಿಂದ ಬಾಂಬ್‌ ದಾಳಿಗೆ ಗುರಿಯಾಗಲಿದ್ದು ಉಳಿದುಕೊಂಡಿದ್ದ ಗಾಂಧಿಯವರನ್ನು ರಕ್ಷಿಸಲು ಯಾವುದೇ ವಿಶೇಷ ಪ್ರಯತ್ನವನ್ನು ಕೈಗೊಂಡಿರಲಿಲ್ಲ ವೆಂದು ಟೀಕಿಸಿದರು.
  • ಇದಕ್ಕೆ ಪೂರಕವಾಗಿದ್ದ ನಿರ್ದಿಷ್ಟ ಆತಂಕದ ಪ್ರಕಾರ ಬಾಂಬೆಯ ಓರ್ವ ಗುಪ್ತಚರನು ಈ ಹಂತಕರ ಹೆಸರುಗಳು ಹಾಗೂ ಅವರ ಕುರಿತು ವಿವರಗಳನ್ನು ಅವರು ದೆಹಲಿಯಲ್ಲಿ ಗಾಂಧಿಯವರನ್ನು ಮರೆಯಲ್ಲಿ ಅನುಸರಿಸುತ್ತಾ ಬಂದಿದ್ದರೆಂದು ತಿಳಿದು ಬಂದಿದೆ ಎಂಬ ಮಾಹಿತಿಯೊಂದಿಗೆ ಎಚ್ಚರಿಕೆಯನ್ನು ರವಾನಿಸಿದ್ದರು. ಮತ್ತೊಂದೆಡೆಯಲ್ಲಿ ಗಾಂಧಿಯವರು ಪದೇ ಪದೇ ತನ್ನ ರಕ್ಷಣಾ ದಳದವರೊಂದಿಗೆ ಸಹಕರಿಸಲು ನಿರಾಕರಿಸುತ್ತಾ ಹಿಂಸಾತ್ಮಕ ಸಾವೇ ತನಗೆ ವಿಧಿನಿಯಾಮಕವಾಗಿದೆ ಎಂಬುದನ್ನು ಒಪ್ಪಿಕೊಂಡವರಂತೆ ನಡೆದುಕೊಂಡಿದ್ದರು.
  • ನೈನ್‌ ಅವರ್ಸ್ ಟು ರಾಮ ಎಂಬ ಚಲನಚಿತ್ರವೊಂದನ್ನು ೧೯೬೩ರಲ್ಲಿ ತಯಾರಿಸಲಾಗಿದ್ದು ಇದು ಹತ್ಯೆಯಾಗುವವರೆಗೆ ನಡೆದ ಘಟನೆಗಳನ್ನು ಆಧರಿಸಿತ್ತಾಗಿ ಪ್ರಮುಖವಾಗಿ ಗೋಡ್ಸೆಯ ದೃಷ್ಟಿಕೋನದಿಂದ ಇದನ್ನು ಚಿತ್ರಿಸಲಾಗಿತ್ತು. ೨೦೦೦ರಲ್ಲಿ ತಯಾರಾಗಿದ್ದ ಹೇ ರಾಮ್‌ ಎಂಬ ಚಿತ್ರವು ಕೂಡಾ ಹತ್ಯೆಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸುತ್ತದೆ. ಜನಪ್ರಿಯ ಮರಾಠಿ ಭಾಷಿಕ ನಾಟಕ ಮೀ ನಾಥೂರಾಮ್‌ ಗೋಡ್ಸೆ ಬೋಲ್ತೋಯ್‌ (ಮರಾಠಿ:मी नथुराम गोडसे बोलतोय)("ನಾನು ನಾಥೂರಾಮ್‌ ಗೋಡ್ಸೆ , ಮಾತನಾಡುತ್ತಿರುವುದು ")ವನ್ನು ಕೂಡಾ ಗೋಡ್ಸೆಯ ದೃಷ್ಟಿಕೋನದಿಂದಲೇ ರಚಿಸಲಾಗಿತ್ತು.

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು