ಶಿಕ್ಷಣವೇ ಶಕ್ತಿ

Tuesday, 29 December 2020

ಭಾರತದ ವಿಶ್ವ ಪರಂಪರೆಯ ತಾಣಗಳು


ಭಾರತದ ವಿಶ್ವ ಪರಂಪರೆಯ ತಾಣಗಳು


ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಅಸ್ಸಾಂ

ಬಿಹಾರ

ದೆಹಲಿ

ಗೋವಾ

ಗುಜರಾತ್

ಕರ್ನಾಟಕ

ಮಧ್ಯಪ್ರದೇಶ

ಮಹಾರಾಷ್ಟ್ರ

ಒಡಿಶಾ

ರಾಜಸ್ಥಾನ

ತಮಿಳುನಾಡು

ಉತ್ತರ ಪ್ರದೇಶ

ಉತ್ತರಾಖಂಡ

ಪಶ್ಚಿಮ ಬಂಗಾಳ

ಹಿಮಾಚಲ ಪ್ರದೇಶ

__________________________________________
ಸಂಗ್ರಹ✍️T.A.ಚಂದ್ರಶೇಖರ

2️⃣9️⃣ 1️⃣2️⃣ 2️⃣0️⃣2️⃣0️⃣

2️⃣9️⃣  1️⃣2️⃣  2️⃣0️⃣2️⃣0️⃣

 *ಇಂದಿನ ಹೋಮ ವರ್ಕ್ 
ದಿನಾಂಕ 29-12-2020*
 *ವಾರ ಮಂಗಳವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 101 ರಿಂದ 200 ಅಂಕಿಗಳನ್ನು ಬರೆಯಿರಿ

 *ಸಂಕಲನ ಬರೆಯಿರಿ* 

1. 15 + 11=

2. 14 + 15=

3. 16 + 12=

4. 25 + 11=

5. 12 + 10=

 *ವ್ಯವಕಲನ ಬರೆಯಿರಿ ಬರೆಯಿರಿ* 

1. 9 - 4=____

2. 8 - 5=_____

3. 22 -11=_____

4. 17 -15=_______

5. 32 -21=______

2 ರಿಂದ 10ರ ವರೆಗೆ ಮಗ್ಗಿಗಳ ಕೋಷ್ಟಕ ಬರೆದು ಕಂಠಪಾಠ ಮಾಡಿರಿ

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 ಸ್ವರಗಳನ್ನು ಬರೆಯಿರಿ

ವ್ಯಂಜನಗಳನ್ನು ಬರೆಯಿರಿ

ಕ ಕಾ .....ಖಃ ವರೆಗೆ ಕಾಗುಣಿತ ಬರೆಯಿರಿ

_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Capital letters *A*  to  *Z* 


2. Small letters *a* to *z* 

ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.

*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
 
1. 5 ಹೂಗಳ ಹೆಸರು?

2. ಪ್ರಾಣಿಗಳ ಹೆಸರು?

3. 5 ದೇಹದ ಭಾಗಗಳ ಹೆಸರನ್ನು ಬರೆಯಿರಿ?

👍👍👍👍👍👍👍👍👍👍👍👍✍️👍👍
 *ಇಂದಿನ ಹೋಮ ವರ್ಕ್ 
ದಿನಾಂಕ 29-12-2020*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 *ಬಿಟ್ಟಸ್ಥಳ ತುಂಬಿರಿ* 
1.  88 ______ಸಂಖ್ಯೆ ಹಿಂದೆ ಬರುತ್ತದೆ.

2. 10 ಮತ್ತು 12ರ ಮಧ್ಯೆ ದ ಸಂಖ್ಯೆ_______.

3. 96 ಇದು ಸಂಖ್ಯೆಯ ______ಮುಂದೆ ಬರುತ್ತದೆ.

4. _______ಸಂಖ್ಯೆ ಮುಂದೆ 56 ಬರುತ್ತದೆ.

5. ______ಸಂಖ್ಯೆಯ ಹಿಂದೆ 39 ಬರುತ್ತದೆ.

6. 47 ಇದು ______ಮತ್ತು _______ಸಂಖ್ಯೆ ಮಧ್ಯೆ ಬರುತ್ತದೆ.

7. 55 ಇದು _______ಸಂಖ್ಯೆ ಹಿಂದೆ ಬರುತ್ತದೆ.

1 ರಿಂದ 15ರವರೆಗೆ ಬಗ್ಗೆ ವರ್ಗಸಂಖ್ಯೆ ಬರೆದು ಕಂಠಪಾಠ ಮಾಡು.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 10
 *ಸತ್ಯವಂತ ಬಾಲಕ* 

 *ಈ ಕೆಳಗಿನ ಪ್ರಶ್ನೆಗಳಿಗೆ 2 ಅಥವಾ 3 ವಾಕ್ಯದಲ್ಲಿ ಉತ್ತರ ಉತ್ತರ ಬರೆಯಿರಿ* 

1. ಗುರುಗಳ ಬಳಿ ಬಾಲಕನು ಏನೆಂದು ಸತ್ಯವನ್ನು ಹೇಳಿದನು?

2.  ಗುರುಗಳು ಬಾಲಕನಿಗೆ ಏನೆಂದು ಹರಿಸಿದರು?

3. ಗೋಖಲೆಯವರು ಜನರಲ್ಲಿ ಯಾವ ಜಾಗೃತಿ ಮೂಡಿಸಿದರು?


*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. My name is........

2. My father name is......

3. My mother name is.....

4. My brother name is......

5. My sister name is......

6. My grandfather name is.....

7. My grandmother name is.....

8. My village name is......

9. My school name is.....

*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ದಿಕ್ಕುಗಳನ್ನು ಬರೆಯಿರಿ

ಮಾಸಗಳನ್ನು ಬರೆಯಿರಿ

ದೇಹದ ಭಾಗಗಳನ್ನು ಬರೆಯಿರಿ

👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ 
ದಿನಾಂಕ 29-12-2020*
 *ವಾರ ಮಂಗಳವಾರ*

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-2
*ಸಂಖ್ಯೆಗಳು* 

 ಇಳಿಕೆ ಕ್ರಮ ದಲ್ಲಿ ಬರೆಯಿರಿ.
1. 12, 33, 14, 17,10, 20, 09

2. 22, 32, 10, 88, 19, 18

3. 43, 29, 19, 21, 11 10

ಏರಿಕೆ ಕ್ರಮ ದಲ್ಲಿ ಬರೆಯಿರಿ.

1. 20, 33, 21, 17, 22, 18

2. 88, 33, 22, 10, 01, 30

3. 22, 98, 56, 44 , 33, 09

ಸಂಕಲನ ಮಾಡಿರಿ
234 + 322= 

333 + 223=

344 + 443 =

443 + 333=
 
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

1. ಮೂರು ಅಕ್ಷರದ 20 ಶಬ್ದಗಳನ್ನು ಬರೆಯಿರಿ

2. 20 ವಿರುದ್ಧಾರ್ಥಕ ಪದಗಳನ್ನು ಬರೆಯಿರಿ

ಪ್ರತಿದಿನ ಒಂದು ಫೇಸ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

 eat - ate - eaten - eating 

drink - drank - drunk drinking 

come - came - come - coming 

read - read - read - reading 

write - wrote - writen - writing

ಈ ಮೇಲಿನ ಕ್ರಿಯಾಪದಗಳನ್ನು ನಕಲು ಮಾಡಿ ಅಂದವಾಗಿ ಬರೆಯಿರಿ. 
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳ ಹೆಸರನ್ನು ಪಟ್ಟಿ ಮಾಡಿರಿ

 ಹಬ್ಬಗಳ ಹೆಸರನ್ನು ಬರೆಯಿರಿ
________________________________________
✍️T.A.ಚಂದ್ರಶೇಖರ

2️⃣9️⃣ 1️⃣2️⃣ 2️⃣0️⃣2️⃣0️⃣

2️⃣9️⃣  1️⃣2️⃣  2️⃣0️⃣2️⃣0️⃣
 *ದಿನಾಂಕ 29-12-2020 
ವಾರ ಮಂಗಳವಾರ 
ಇಂದಿನ ಹೋಂವರ್ಕ* 
***************************

 *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ -25-- ನಮ್ಮ ರಾಜ್ಯ  -ನಮ್ಮ ಹೆಮ್ಮೆ*
°°°°°°°°°°°°°°°°°°°°°°°°°°°°°°°°°
 1. ಬೆಂಗಳೂರಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು ಯಾವುವು  ?

2. ಮೈಸೂರಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಬರೆಯಿರಿ  .

3. ನಿನ್ನ ಜಿಲ್ಲೆಯ ಪ್ರಮುಖ ನಗರವೊಂದರ ಬಗ್ಗೆ ನಾಲ್ಕು ಸಾಲುಗಳನ್ನು ಬರೆ .

4. ಐತಿಹಾಸಿಕ ಸ್ಥಳಗಳು ಎಂದರೇನು ?

======================

 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ* 

 *ಅಧ್ಯಾಯ -15 ---ದತ್ತಾಂಶಗಳ ನಿರ್ವಹಣೆ*
°°°°°°°°°°°°°°°°°°°°°°°°°°°°°°°°° 

1. ಚಿತ್ರವನ್ನು ವೀಕ್ಷಿಸಿ ಕೊಟ್ಟಿರುವ ಕೋಷ್ಟಕವನ್ನು ಪೂರ್ಣಗೊಳಿಸು .
ಪುಟ ಸಂಖ್ಯೆ 91 .

2.  ಕೋಷ್ಟಕವನ್ನು ವೀಕ್ಷಿಸಿ ಮುಂದಿನ ಪ್ರಶ್ನೆಗಳಿಗೆ ಉತ್ತರಿಸಿ ಪುಟ ಸಂಖ್ಯೆ 92 .

======================

 *4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪಾಠ -11--ವೀರ ಅಭಿಮನ್ಯು* 
°°°°°°°°°°°°°°°°°°°°°°°°°°°°°°°°°
 
1. ಪಾಠವನ್ನು ಜೋರಾಗಿ ಗಟ್ಟಿಯಾಗಿ ಓದಿರಿ .

ಅಭ್ಯಾಸ
2.  ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

3. ಕೊಟ್ಟಿರುವ  ಮಾತುಗಳನ್ನು ಯಾರು  ? ಯಾರಿಗೆ ಹೇಳಿದರು ?

 *ಒಂದು ಪುಟ ಶುದ್ಧ ಬರಹ ಬರೆಯಿರಿ*

======================

 *4 ನೇ ತರಗತಿ ಮಕ್ಕಳಿಗೆ English homework.*

1. Write the opposites for the following
          
              1). Good × _____
              2).smart × ______
              3).friend × ______
              4).long × ______
              5). new × ______
              6). hard × ______
              7).sweet × ______

 *Write one page of neat copy writing.*

=======================
👍👍👍👍👍👍👍👍👍👍👍👍👍👍👍

*ದಿನಾಂಕ 29-12-2020 
ವಾರ ಮಂಗಳವಾರ 
ಇಂದಿನ ಹೋಂವರ್ಕ್* 
++++++++++++++++++++++

 *5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ -16 ನಮ್ಮ-- ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*
°°°°°°°°°°°°°°′°°°°°°°°°°°°°°°°°°°
1. ನಮ್ಮ  ರಾಷ್ಟ್ರೀಯ ಹಬ್ಬಗಳನ್ನು ಹೆಸರಿಸಿ .

2.  ನಮ್ಮ ರಾಷ್ಟ್ರ ಧ್ವಜದಲ್ಲಿರುವ ಬಣ್ಣಗಳು ಯಾವುವು  ?

3. ರಾಷ್ಟ್ರಧ್ವಜದ ಬಣ್ಣಗಳು ಏನನ್ನು ಸೂಚಿಸುತ್ತವೆ ?
4. ಪೂರ್ಣಗೊಳಿಸು ಪುಟ ಸಂಖ್ಯೆ  240 .

======================

 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ-7 --ಕಾಲ* 
°°°°°°°°°°°°°°°°°°°°°°°°°°°°°°°°°°

1. ಒಂದು ದಿನಕ್ಕೆ ______ ಗಂಟೆಗಳು  .

ಅಭ್ಯಾಸ 7.1 

2.ಮೌಕಿಕ ಲೆಕ್ಕಗಳನ್ನು ಬಿಡಿಸಿ 

3. ನೀಡಿರುವ ವೇಳೆಗಳನ್ನು a.m. ಮತ್ತು p.m. ಗಳಲ್ಲಿ ನಮೂದಿಸಿ .

4.  ಈ ಕೆಳಗಿನ ವೇಳೆಗಳನ್ನು 12 ಗಂಟೆ ಗಡಿಯಾರಕ್ಕೆ ಪರಿವರ್ತಿಸಿ ಮತ್ತು a.m ಅಥವಾ p.m  ಗಳಲ್ಲಿ ಸೂಚಿಸು .

=======================

 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪದ್ಯ -9 --ಭುವನೇಶ್ವರಿ* 
°°°°°°°°°°°°°°°°°°°°°°°°°°°°°°°°°

 1. ಪದ್ಯ ಸ್ಪಷ್ಟವಾಗಿ ಓದಿರಿ .

2. ಪದ್ಯವನ್ನು ಒಮ್ಮೆ ಬರೆಯಿರಿ 

3.ಹೊಸ ಪದಗಳ ಅರ್ಥ ಬರೆಯಿರಿ 

 *ಒಂದು ಪುಟ ಶುದ್ಧ ಬರಹ ಬರೆಯಿರಿ* 

====================== 

 *5 ನೇ ತರಗತಿ ಮಕ್ಕಳಿಗೆ English homework* 

1. List the names of Domestic animals.

2. List the names of Wild animals.

 *Write one page of neat copy writing.*

👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 29-12-2020*
*ವಾರ ಮಂಗಳವಾರ*
 *=========================* 
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

  ಭಾಗ-2

ಅಧ್ಯಾಯ 11
 *ಬೀಜ ಗಣಿತ* 


ಅಭ್ಯಾಸ  11.4


ಪುಟ ಸಂಖ್ಯೆ  112 ರಿಂದ 114

*_______________________________* 
*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪದ್ಯಭಾಗ

ಪಾಠ 1
 *ಬೇಸಿಗೆ* 

 *ವ್ಯಾಕರಣ ಮಾಹಿತಿ* 

ಪ್ರಾಸಾಕ್ಷರಗಳು

ಆವರಣದಿಂದ ಸೂಕ್ತ ಪದ ಆರಿಸಿ ಖಾಲಿ ಬಿಟ್ಟ ಸ್ಥಳದಲ್ಲಿ ಬರೆಯಿರಿ.

ಈ ಪದದಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆಯಿರಿ.
ಬೇಸಿಗೆ ಪದ್ಯ ವನ್ನು ರಾಗಬದ್ಧವಾಗಿ ಹಾಡಿ ಬರೆಯಿರಿ.

ಸೂರ್ಯ, ಚಂದ್ರ, ಭೂಮಿ ಕುರಿತಾದ ಚಟುವಟಿಕೆಗಳನ್ನು ರಚಿಸಿರಿ.

ಪುಟ ಸಂಖ್ಯೆ   69 ರಿಂದ 71

 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 
______________________________
*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 8

*WHAT I WANT FOR YOU AND EVERY CHILD A LETTER FROM OBAMA TO HIS DAUGHTERS*

Listen to the text being read by your teacher and fill in the blanks.

New words

On page number 130 to 133

*Daily one page neatly*
*_______________________*

*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವರ್ಕ*

ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ* 

ಭಾಗ-2

ಪಾಠ 1

*ನಮ್ಮ ಕರ್ನಾಟಕ (ಮುಂದುವರೆದ ಭಾಗ)*

*ಬೆಳಗಾವಿ ವಿಭಾಗ*

 1. ಬೆಳಗಾವಿ ವಿಭಾಗದ ಎರಡು ಪ್ರಮುಖ ನದಿಗಳ ಹೆಸರನ್ನು ಬರೆಯಿರಿ.

2. ಈ ವಿಭಾಗದಲ್ಲಿರುವ ಪ್ರಮುಖ ವನ್ಯಮೃಗಧಾಮಗಳು ಹೆಸರನ್ನು ಬರೆಯಿರಿ.

3. ಇಳಕಲ್ಲಿನಲ್ಲಿ ಯಾವ ಸಂಪನ್ಮೂಲ ದೊರೆಯುತ್ತದೆ?

4. ನಿತ್ಯಹರಿದ್ವರ್ಣ ಕಾಡುಗಳು ಎಂದರೆ ಯಾವುವು ?

5. ಬೆಳಗಾವಿ ಭಾಗದ ಪ್ರಮುಖ ಜಲಪಾತಗಳು ಹೆಸರಿಸಿ.

6. ಬೆಳಗಾವಿ ವಿಭಾಗದ ಯಾವ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ?


ಪುಟ ಸಂಖ್ಯೆ  19 ರಿಂದ 20

*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಪಾಠ 9
 *ಜೀವಿಗಳು-ಅವುಗಳ ಲಕ್ಷಣಗಳು ಮತ್ತು ಆವಾಸಗಳು* 

ಸಾರಾಂಶ

ಅಭ್ಯಾಸಗಳು


ಪುಟ ಸಂಖ್ಯೆ  135 ರಿಂದ 137

*__________________________*
*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 

 पाठ - 5

 अभ्यास

 पढ़ो और लिखो

 रेफ लगाकर शब्द पूरा करो

 पदेन लगाकर शब्द पूरा करो

 पढ़ो और लिखो

पेज नंबर 56

 👍👍👍👍👍👍👍👍👍👍👍


 *ಇಂದಿನ ಹೋಮ ವರ್ಕ್* 
 *ದಿನಾಂಕ 29-12-2020* 
 *ವಾರ ಮಂಗಳವಾರ* 
 *========================* 
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

 *ಭಾಗ-2* 
 ಅಧ್ಯಾಯ 15
 *ಘನಾಕೃತಿಗಳು* 

1. ಆಕೃತಿಗಳನ್ನು ಹೆಸರಿನೊಂದಿಗೆ ಹೊಂದಿಸಿ.

2. ಘನಾಕೃತಿಗಳ ಮುಖಗಳು ಅಂಚುಗಳು ಹಾಗೂ ಮೂಲೆಗಳನ್ನು ಗುರುತಿಸಿ.

ಅಭ್ಯಾಸ 15.3 ಮತ್ತು 15.4


ಪುಟ ಸಂಖ್ಯೆ 163 ಮತ್ತು 167

*___________________________* 
*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
ಪದ್ಯಭಾಗ
ಪಾಠ-1
 *ಗಿಡ ಮರ* 

ಅಭ್ಯಾಸ

ಅ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

ಇ. ಸ್ಥಳವನ್ನು ಪದದಿಂದ ಆರಿಸಿದ ಸೂಕ್ತ ಪದಗಳಿಂದ ತುಂಬಿರಿ.

ಈ. ಕೆಳಗೆ ನೀಡಿರುವ ಪದಗಳಲ್ಲಿ ಗಿಡ-ಮರಗಳಿಗೆ ಮತ್ತು ಮಾನವನಿಗೆ ಸಂಬಂಧಿಸಿರುವ ಪದಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಿ.

ಚಟುವಟಿಕೆಗಳು
ಅ. ಕೆಳಗೆ ನೀಡಿರುವ ಪದಗಳನ್ನು ಅ  ಕಾರಾದಿಯಾಗಿ ಬರೆಯಿರಿ.

ಭಾಷಾಭ್ಯಾಸ

ಅ. ಕೆಳಗೆ ನೀಡಿರುವ ವಾಕ್ಯಗಳನ್ನು ಆವರಣದಲ್ಲಿ ನೀಡಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ವಾಕ್ಯ ಪೂರ್ಣ ಗೊಳಿಸಿರಿ.

ಪುಟ ಸಂಖ್ಯೆ 91 ರಿಂದ  93 

 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 

________________________________

*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*

Unit 8

*WEALTH AND VALUE*

Answer the following questions

1. Why did Rahul feel the need for money again?

2. Rahul was reminded of his _____when he thought of his comfortable life before he left home.
a. Father
b. Brother
c. Servants
(Choose the right answer)

3. What was the decision taken by Rahul?

4. Rahul's a father welcomed him_______
a. Angrily
b. Happily
c. Sadly
(Choose the right answer)

5. Who was angry with Rahul's father?

6. What was the the reason for his anger?

On page number 127 to 128

*Daily one page lesson*
*_______________________*

*7 ನೆ ಯ ತರಗತಿ ಮಕ್ಕಳಿಗೆ  ಸಮಾಜ ವಿಜ್ಞಾನ ಹೋಮ  ವರ್ಕ್*

 *ಭಾಗ-1* 
 ಇತಿಹಾಸ

ಪಾಠ - 1

*ವಿಜಯನಗರದ ಅರಸು ಮನೆತನಗಳು*



ಅಭ್ಯಾಸಗಳು


ಪುಟ ಸಂಖ್ಯೆ  10 ರಿಂದ 12
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಭಾಗ 2

ಅಧ್ಯಾಯ 14
*ವಿದ್ಯುತ್ ಪ್ರವಾಹ ಮತ್ತು ಅದರ ಪರಿಣಾಮಗಳು*

1. ವಿದ್ಯುತ್ ಸಲಕರಣೆಗಳ ಸಂಕೇತಗಳನ್ನು ಬರೆಯಿರಿ.

2. ವಿದ್ಯುತ್ ಪ್ರವಾಹ ಎಂದರೇನು?

3. ತೆರೆದ ಮಂಡಲ ಎಂದರೇನು?

4. ತಾಪಕ ತಂತು ಎಂದರೇನು?


ಪುಟ ಸಂಖ್ಯೆ 65 ರಿಂದ 71
*__________________________*
*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*

 *पाठ  7* 

*रसोईघर*


 शब्दार्थ

 कविता कंटेस्ट कीजिए


*अभ्यास* 

 जोड़ी चुनकर लिखो

 फल तथा सब्जियों के रंग चुनकर लिखो

 विभिन्न सब्जियों के नाम लिखो

 रसोई घर में पकने वाली कौन-कौन सी चीजें तुम रोज खाते हो? 
 
 पेज नंबर  -  42 to 43
________________________________________
✍️T.A.ಚಂದ್ರಶೇಖರ
✍️ ಶ್ರೀಮತಿ ಅನಿತಾ ರಮೇಶ

Monday, 28 December 2020

ಖನಿಜ ಶಾಸ್ತ್ರ

ಖನಿಜ ಶಾಸ್ತ್ರ

ADD ARTICLE DESCRIPTION


ಖನಿಜಶಾಸ್ತ್ರ ಖನಿಜಗಳ ಸ್ಫಟಿಕಶಾಸ್ತ್ರ, ಭೌತ ಹಾಗೂ ರಾಸಾಯನಿಕ ಗುಣಗಳ ವರ್ಗೀಕರಣ, ಅನ್ವೇಷಣೆ ಇವೇ ಮುಂತಾದವನ್ನು ವಿವೇಚಿಸುವ ವಿಜ್ಞಾನ ನಿಭಾಗ (ಮಿನರಾಲಜಿ). ಖನಿಜಗಳ ಜೊತೆಗೆ ಆಕಾಶದಿಂದ ಭೂಮಿಯ ಮೇಲೆ ಆಗಾಗ ಬೀಳುವ ಉಲ್ಕೆಗಳನ್ನು ಸಹ ಈ ಶಾಸ್ತ್ರದಲ್ಲಿ ವಿವೇಚಿಸಲಾಗುತ್ತದೆ. ಇನಾಗ್ರ್ಯಾನಿಕ್ ಕ್ರಿಯೆಗಳಿಂದ ಉಂಟಾಗುವ ವಸ್ತು ಖನಿಜ. ಇದಕ್ಕೆ ಒಂದು ನಿರ್ದಿಷ್ಟವಾದ ರಾಸಾಯನಿಕ ಸಂಯೋಜನೆ ವಸ್ತು ಉಂಟು. ಪ್ರಕೃತಿಯಲ್ಲಿ ಅನುಕೂಲಕರವಾದ ವಾತಾವರಣದಲ್ಲಿ ಖನಿಜಗಳು ಉಂಟಾದಲ್ಲಿ ಇವುಗಳಿಗೆ ಒಂದು ನಿಖರವಾದ ಒಳ ಅಣುರಚನೆಯೂ ಇರುವುದು. ಈ ಕಾರಣದಿಂದಲೇ ಅನೇಕ ಖನಿಜಗಳು ಹರಳುಗಳಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಅವುಗಳಲ್ಲಿ ಕಂಡುಬರುವ ಹಲವಾರು ಭೌತ ಗುಣಗಳಿಗೂ ಈ ಅಣುರಚನೆಯೇ ಕಾರಣ. ಇವೆಲ್ಲಕ್ಕೂ ಮಿಗಿಲಾಗಿ ಮುಖ್ಯ ಲಕ್ಷಣವೆಂದರೆ ಖನಿಜವನ್ನು ಉಂಟುಮಾಡುವ ಮೂಲಧಾತುಗಳ ಸಂಪೂರ್ಣ ಸಮ್ಮಿಳನ. ಆದ್ದರಿಂದಲೇ ಖನಿಜಗಳನ್ನು ಕೆಲವು ರಾಸಾಯನಿಕ ಸಂಕೇತಗಳಿಂದ ಗುರುತಿಸಲಾಗಿದೆ.

ಖನಿಜಶಾಸ್ತ್ರವು ರಸಾಯನಶಾಸ್ತ್ರ, ಭೌತಶಾಸ್ತ್ರ,ಮೆಟೀರಿಯಲ್ಸ್ ಸೈನ್ಸ್,ಭೂವಿಜ್ಞಾನ ಒಟ್ಟಾದ ರೂಪ.

ಇತಿಹಾಸ

೧೯ನೆಯ ಶತಮಾನದ ಆದಿಭಾಗದವರೆಗೂ ಖನಿಜಶಾಸ್ತ್ರದ ವೈಜ್ಞಾನಿಕ ಬೆಳವಣಿಗೆ ಕಂಡುಬರುವುದಿಲ್ಲ. ಆ ವೇಳೆಗೆ ಸುಪ್ರಸಿದ್ಧ ವಿಜ್ಞಾನಿ ಜವಾಯ್ ಸ್ಫಟಿಕಶಾಸ್ತ್ರದ ಮೂಲಭೂತ ತತ್ತ್ವಗಳನ್ನು ಪ್ರತಿಪಾದಿಸಿ ಖನಿಜಶಾಸ್ತ್ರಕ್ಕೆ ಒಂದು ಹೊಸ ಆಯಾಮ ನೀಡಿದ. ಅಲ್ಲದೇ ಅದೇ ಸುಮಾರಿಗೆ ರಸಾಯನ ವಿಜ್ಞಾನದಲ್ಲಿ ಒಂದು ಹೊಸ ಸ್ಪಂದನ ತಲೆದೋರಿತ್ತು. ಹೀಗಾಗಿ ರಾಸಾಯನಿಕ ಸಂಯೋಜನೆ ಮತ್ತು ಅವುಗಳ ಬಾಹ್ಯರೂಪ ಬಹು ಪ್ರಮುಖವಾದ ಅಂಶಗಳೆಂದೂ ಇತರ ಗುಣಗಳು ಅನೇಕ ಬಾರಿ ಅಲ್ಪಸ್ವಲ್ಪ ಬದಲಾವಣೆಗಳನ್ನು ತೋರಿಸಬಹುದೆಂದೂ ಅಭಿಪ್ರಾಯಪಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಖನಿಜಗಳಿಗೆ ಪ್ರಕಾಶ ವಿಜ್ಞಾನದ (ಆಪ್ಟಿಕ್ಸ್) ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸಿ ಖನಿಜಕರಣ ಎಷ್ಟೇ ಸೂಕ್ಷ್ಮವಾಗಿದ್ದರೂ ಸೂಕ್ಷ್ಮದರ್ಶಿಯ ಸಹಾಯದಿಂದ ಅದರ ನಿರ್ದಿಷ್ಟ ಗುಣಗಳನ್ನು ನಿರ್ಧರಿಸಲು ಸಾಧ್ಯವಾಗಿದೆ. ಈಗ ಖನಿಜಗಳ ಅಧ್ಯಯನದಲ್ಲಿ ಅವುಗಳ ಭೌತ ಲಕ್ಷಣಗಳು ಮತ್ತು ರಾಸಾಯನಿಕ ಸಂಯೋಜನೆಯ ಜೊತೆಗೆ ಅವುಗಳ ಸ್ಫಟಿಕ ರೂಪ, ಪ್ರಕಾಶವಿಜ್ಞಾನಕ್ಕೆ ಸಂಬಂಧಿಸಿದ ಗುಣಗಳು, ಅವುಗಳ ಅಣು ಗಾತ್ರ ಮತ್ತು ರಚನಾವೈವಿಧ್ಯಗಳನ್ನು ಕೂಡ ನಿರ್ಧರಿಸಲಾಗುತ್ತದೆ.

ಖನಿಜಶಾಸ್ತ್ರ ವಿಭಾಗದ ಶೀರ್ಷಿಕೆಗಳಲ್ಲಿ

೧. ಸ್ಫಟಿಕಶಾಸ್ತ್ರ

ಇದು ಮುಖ್ಯವಾಗಿ ಖನಿಜಗಳ ಆಕೃತಿ ಅಥವಾ ಹೊರರೂಪಕ್ಕೆ ಸಂಬಂಧಿಸಿದ್ದು. ಖನಿಜದ ಸ್ಫಟಿಕಾಕೃತಿ ಅದರ ಒಳರಚನೆಯನ್ನು ಅವಲಂಬಿಸಿದೆ. ಹಲವು ಖನಿಜಗಳಂತೂ ತಮ್ಮದೇ ಆದ ಒಂದು ವಿಶಿಷ್ಟ ರೀತಿಯ ಆಕಾರವನ್ನು ಎಂಥ ಸಂದರ್ಭಗಳಲ್ಲಾದರೂ ಪಡೆಯುತ್ತದೆ. ಸ್ಫಟಿಕಾಕೃತಿಗೂ ಖನಿಜಕ್ಕೂ ಹೆಚ್ಚಿನ ನಂಟುತನ ಉಂಟು. ಹೊರ ಆಕಾರವನ್ನು ಆಧರಿಸಿ ಇಂಥದೇ ಖನಿಜವೆಂದು ಹೆಚ್ಚು ಕಷ್ಟವಿಲ್ಲದೆ ಗುರುತಿಸಬಹುದು. ಈ ದೃಷ್ಟಿಯಿಂದ ಖನಿಜ ಶಾಸ್ತ್ರದಲ್ಲಿ ಸೂಜಿಯಿಂದ, ನಕ್ಷತ್ರದಂಥ, ನೂಲಿನಂಥ, ಸ್ತಂಭಾಕೃತಿಯ ಅಲಗಿನಂಥ, ಪಟ್ಟಿಯಂಥ ಅನೇಕ ಆಕಾರಗಳನ್ನು ನೋಡಿ ಹೆಸರಿಸಬಹುದು.

೨. ಸ್ಫಟಿಕಗಳ ಒಳರಚನೆ

ಖನಿಜಗಳ ಅಣುರಚನೆಯನ್ನು ಎಕ್ಸ್ ಕಿರಣಗಳ ಸಹಾಯದಿಂದ ಸುಲಭವಾಗಿ ನಿರ್ಧರಿಸಬಹುದು. ಈಚಿನ ವರ್ಷಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿದೆ. ಖನಿಜಶಾಸ್ತ್ರದಲ್ಲಿ ಎಕ್ಸ್‍ಕಿರಣಗಳ ಬಳಕೆಯನ್ನು ಲಾವೆ ಎಂಬಾತ ಮೊದಲ ಬಾರಿಗೆ ಜಾರಿಗೆ ತಂದ. ಇದರಿಂದ ಖನಿಜಗಳ ಒಳರಚನೆಯೇ ಅಲ್ಲದೆ ಆ ರಚನೆಯ ಚೌಕಟ್ಟಿನಲ್ಲಿ ವಿವಿಧ ಅಣುಗಳಿರುವ ಸ್ಥಾನಗಳನ್ನು ಸಹ ಗುರುತಿಸಬಹುದು. ಒಂದು ಸಣ್ಣ ಪ್ರನಾಳದಲ್ಲಿರುವ ಖನಿಜದ ಪುಡಿಯ ಮೇಲೆ ಎಕ್ಸ್‍ಕಿರಣಗಳನ್ನು ಹಾಯಿಸಿ ಛಾಯಾಚಿತ್ರವನ್ನು ತೆಗೆದಲ್ಲಿ ಅಣು ಚೌಕಟ್ಟು ಸ್ಪಷ್ಟಗೊಳ್ಳುತ್ತದೆ.

೩. ಭೌತ ಖನಿಜಶಾಸ್ತ್ರ

ಇದರಲ್ಲಿ ಮುಖ್ಯವಾಗಿ ಖನಿಜಗಳ ಭೌತ ಲಕ್ಷಣಗಳನ್ನು ವಿವೇಚಿಸಲಾಗುವುದು. ಖನಿಜಗಳ ಕಾಠಿಣ್ಯ, ಸಾಂಧ್ರತೆ, ಬಣ್ಣ, ಒರೆ, ಸೀಳುಗಳು, ಬಿರಿತಗಳು ಮತ್ತು ವಿದ್ಯುತ್ತು ಹಾಗೂ ಕಾಂತದ ಪ್ರಭಾವಕ್ಕೆ ಒಳಗಾದಾಗ ಉಂಟಾಗುವ ಗುಣಗಳು ಇವೇ ಮುಖ್ಯವಾದವು. ಇವು ಕೂಡ ವಿವಿಧ ಖನಿಜಗಳನ್ನು ಗುರುತಿಸಲು ಬಹು ಸಹಾಯಕವಾಗಿದೆ.

೪. ರಾಸಾಯನಿಕ ಖನಿಜಶಾಸ್ತ್ರ

ಖನಿಜಗಳ ರಾಸಾಯನಿಕ ಸಂಯೋಜನೆಯನ್ನು ಅವುಗಳ ಒಂದು ಬಹುಮುಖ್ಯ ಗುಣವೆಂದು ಪರಿಗಣಿಸಬಹುದು. ಕೆಲವು ಪ್ರಯೋಗಗಳಿಂದ ಖನಿಜಗಳ ನಿಜಸ್ವರೂಪವನ್ನು ಅಷ್ಟು ಕಷ್ಟವಿಲ್ಲದೆ ಗುರುತಿಸಬಹುದು. ಇವುಗಳಲ್ಲಿ ಊದುಕೊಳವೆ ಮತ್ತು ಸೂಕ್ಷ್ಮ ರಾಸಾಯನಿಕ ಪ್ರಯೋಗಗಳು ಬಲು ಪ್ರಯೋಜನಕಾರಿ. ಆದರೆ ಒಂದು ಖನಿಜದ ಸಂಪೂರ್ಣ ಲಕ್ಷಣಗಳನ್ನು ಅರಿಯಬೇಕಾದರೆ ಆ ಖನಿಜದ ವಿವಿಧಾಂಶಗಳನ್ನು ರಾಸಾಯನಿಕ ವಿಶ್ಲೇಷಣೆಯಿಂದ ನಿರ್ಧರಿಸಬಹುದು. ಈಚಿನ ವರ್ಷಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿದೆ.

ಆಕರ ಮತ್ತು ಉತ್ಪತ್ತಿ

ಖನಿಜಗಳು ಶಿಲೆಗಳ ಬಿರುಕುಗಳಲ್ಲಿ ಮತ್ತು ಕುಳಿಗಳಲ್ಲಿ ದೊರೆಯುತ್ತವೆ. ಅಲ್ಲದೆ ಶಿಲೆಗಳ ಮುಖ್ಯ ಅಂಶಗಳೇ ಖನಿಜಗಳೆಂದು ಈಗಾಗಲೇ ವಿವರಿಸಲಾಗಿದೆ. ಅನೇಕ ಖನಿಜಗಳು ಮಾತೃಶಿಲಾದ್ರವ (ಮಾಗ್ಮ), ಅಲ್ಲಿರುವ ಮೂಲಜಲ (ಮಾಗ್ಮ್ಯಾಟಿಕ್ ವಾಟರ್) ಅಥವಾ ಅಂತರ್ಜಲ (ಗ್ರೌಂಡ್‍ವಾಟರ್) ಇವುಗಳಿಂದ ರೂಪಗೊಳ್ಳುತ್ತವೆ. ಮಾತೃಶಿಲಾದ್ರವ ಮತ್ತು ಖನಿಜಗಳು ತಲೆದೋರುತ್ತವೆ. ಈ ಕಾರಣದಿಂದಲೇ ಅಗ್ನಿಪರ್ವತಗಳನ್ನು ಬಿಸಿನೀರಿನ ಚಿಲುಮೆಗಳು ಮತ್ತು ಗೇಸರುಗಳು ಇವುಗಳ ಸಮೀಪದಲ್ಲಿ ಸಾಮಾನ್ಯವಾಗಿ ಖನಿಜಗಳನ್ನು ನೋಡಬಹುದು. ಪ್ರಯೋಗಶಾಲೆಯಲ್ಲಿ ಖನಿಜಗಳ ಸಂಯೋಜನೆಯಲ್ಲಿ ಕಂಡು ಬರುವ ಮೂಲತತ್ತ್ವಗಳು ಪ್ರಕೃತಿಯಲ್ಲಿ ಪ್ರಭಾವಬೀರಿ ಖನಿಜೋತ್ಪತ್ತಿಗೆ ಮುಖ್ಯ ಕಾರಣವಾಗಿವೆ. ಬಹುಶಃ ಒತ್ತಡ, ಉಷ್ಣ ಮತ್ತು ಕಾಲಪರಿಮಿತಿ ಇವುಗಳಲ್ಲಿ ಈ ಎರಡು ಕಾರ್ಯರಂಗಗಳಿಗೂ ಅಷ್ಟು ಹೆಚ್ಚಿನ ಸಾಮ್ಯ ಇರದು.

ಉಪಯೋಗಗಳು

ಎಲ್ಲ ಲೋಹಗಳಿಗೂ ಮೂಲ ಖನಿಜಗಳು. ಅನೇಕ ರಾಸಾಯನಿಕ ಮತ್ತು ಇತರ ಕೈಗಾರಿಕೆಗಳಿಗೆ ಅಗತ್ಯವಾದ ಮೂಲವಸ್ತುಗಳು ಖನಿಜಗಳೇ. ಸಸ್ಯ ಸಂಬಂಧವಾದ ಮತ್ತು ಪ್ರಾಣಿಸಂಬಂಧವಾದ ವಸ್ತುಗಳ ಉತ್ಪತ್ತಿಯಲ್ಲಿ ಕೂಡ ಪಾತ್ರ ಪ್ರಮುಖವಾದುದು. (ನೋಡಿ- ಖನಿಜಾನ್ವೇಷಣೆ) (ಎಸ್.ಕೆ.ವಿ.)


ಖನಿಜ

ಪ್ರಾಕೃತಿಕವಾದ ಸಂಯುಕ್ತ


ಪ್ರಕೃತಿಯಲ್ಲಿ ದೊರೆಯುವ, ಅಜೈವಿಕ ಮೂಲದ ಸಾಮಾನ್ಯವಾಗಿ ಸ್ಪಟಿಕರೂಪವನ್ನು ಹೊಂದಿರುವ ನಿಸರ್ಗ ಸಹಜವಾದ ರಾಸಾಯನಿಕ ಸಂಯುಕ್ತಗಳನ್ನು ಖನಿಜಗಳು ಎನ್ನುತ್ತಾರೆ.

ಖನಿಜ

"ಖನಿಜ" (ಅಂದರೆ ಖನಿ[ಗಣಿ] ಯಲ್ಲಿ ಜನ್ಯ[ಹುಟ್ಟಿದ] ವಸ್ತು), ಎಂಬ ಶಬ್ಧ ಸಂಸ್ಕೃತ ಮೂಲದಿಂದ ಬಂದಿದೆ. ಇಂಗ್ಲೀಷಿನಲ್ಲಿ ಮಿನರಲ್ (mineral) ಎನ್ನುತ್ತಾರೆ. ಖನಿಜಗಳ ಅಧ್ಯಯನವನ್ನು "ಖನಿಜ ವಿಜ್ಞಾನ" ಅಥವಾ "ಖನಿಜಶಾಸ್ತ್ರ" ಎಂದು ಕರೆಯಲಾಗುತ್ತದೆ.

ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಸಹಜ ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರ(ತೊಗಟೆ crust )ಯಲ್ಲಿ ಅತಿ ಹೆಚ್ಚು ಇರುವ ಮೂಲವಸ್ತುಗಳು ಇವೆರಡು ಸುಮಾರು ೭೫% ನಷ್ಟು ಪ್ರಮಾಣ ದಲ್ಲಿವೆ. ವಿವಿಧ ಖನಿಜ ಪ್ರಬೇಧಗಳನ್ನು ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂದ ಗುರುತಿಸಲಾಗುತ್ತದೆ.

ಫ್ಲೋರೈಟು ಖನಿಜ

ಖನಿಜಗಳು

ನೈಸರ್ಗಿಕವಾಗಿ ದೊರೆಯುವ, ಸಾಮಾನ್ಯವಾಗಿ ಸ್ಪಟಿಕ ರೂಪದಲ್ಲಿರುವ , ಅಜೈವಿಕ ಉಗಮದ ರಾಸಾಯನಿಕ ಸಂಯುಕ್ತ ವನ್ನು ಖನಿಜವೆಂದು ಕರೆಯುತ್ತಾರೆ. ಯಾವುದೇ ಒಂದು ಖನಿಜಕ್ಕೆ ನಿರ್ದಿಷ್ಟವಾದ ರಾಸಾಯನಿಕ ಸಂಘಟನೆ ಇರುತ್ತದೆ. ವಿವಿಧ ಬಗೆಯ ಖನಿಜಗಳು (minerals) ಅಥವಾ ಖನಿಜರೂಪಿಗಳು (mineraloids) ಸೇರಿಕೊಂಡಿರುವ ನೈಸರ್ಗಿಕ ವಸ್ತುವನ್ನು ಶಿಲೆ(rock) ಯೆಂದು ಪರಿಗಣಿಸಲಾಗುತ್ತದೆ.

ಈ ಹಿಂದೆ 1995 ರಲ್ಲಿ ಅಂತರ್ರಾಷ್ಟ್ರೀಯ ಖನಿಜವಿಜ್ಞಾನ ಸಂಘ ( IMA) ಅಂಗೀಕರಿಸಿದ ವ್ಯಾಖ್ಯೆಯ ಪ್ರಕಾರ ಭೂವೈಜ್ಙಾನಿಕ ಪ್ರಕ್ರಿಯೆಗಳಿಂದ ಉತ್ಪತ್ತಿಯಾದ ಸ್ಫಟಿಕ ರಚನೆಯಿರುವ ಯಾವುದೇ ಒಂದು ಮೂಲವಸ್ತು (ಧಾತು) ಅಥವಾ ರಾಸಾಯನಿಕ ಸಂಯುಕ್ತ ವನ್ನು ಖನಿಜ ವೆನ್ನಲಾಗುತ್ತದೆ.

ಖನಿಜಗಳ ಅಧ್ಯಯನವನ್ನು ”ಖನಿಜವಿಜ್ಞಾನ” ಅಥವಾ “ಖನಿಜಶಾಸ್ತ್ರ “(mineralogy) ಎನ್ನುತ್ತಾರೆ.

ಪ್ರಪಂಚದಲ್ಲಿ 2017ರ ಮಾರ್ಚ್ ತಿಂಗಳವರೆಗೆ 5300 ವಿಧ(ತಳಿ)ಗಳನ್ನು ಖನಿಜ ಗುರುತಿಸಲಾಗಿದೆ. ಇವುಗಳಲ್ಲಿ 5230 ಖನಿಜ ವಿಧಗಳನ್ನು ಅಂತರಾಷ್ಟ್ರಿಯ ಖನಿಜವಿಜ್ಞಾನ ಸಂಘ ವು (IMA -ಇಂಟರ ನ್ಯಾಶನಲ್ ಮಿನರಲೊಜಿಕಲ್ ಅಸೋಸಿಯೇಶನ್ ) ಅಂಗೀಕರಿಸಿದೆ.

ಭೂಮಿಯ ಹೊರತೊಗಟೆ (crust) ಯಲ್ಲಿರುವ ಖನಿಜಗಳಲ್ಲಿ ಹೆಚ್ಚುಕಡಿಮೆ 90% ದಷ್ಟು ಸಿಲಿಕೇಟು ಖನಿಜಗಳಾಗಿವೆ. ಭೂಮಿಯ ರಾಸಾಯನಿಕಗುಣಶಾಸ್ತ್ರದ ಅನುಸಾರವಾಗಿ ವಿವಿಧ ಲಭ್ಯ ಖನಿಜ ವಿಧಗಳ ವೈವಿಧ್ಯತೆ ಮತ್ತು ವಿಪುಲತೆ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಆಮ್ಲಜನಕ ಎಂಬ ಮೂಲವಸ್ತುಗಳು ಭೂಮಿಯ ಹೊರತೊಗಟೆಯಲ್ಲಿ ಅಂದಾಜು 75 % ದಷ್ಟು ಇರುವ ಕಾರಣ, ಈ ಮೂಲವಸ್ತುಗಳನ್ನು ಹೊಂದಿರುವ ಸಿಲಿಕೇಟು ವಿಧದ ಖನಿಜಗಳು ವ್ಯಾಪಕವಾಗಿ ಕಂಡು ಬರುತ್ತವೆ.

ಖನಿಜಗಳ ಗುರುತು ಹಚ್ಚುವುದು

ಖನಿಜಗಳನ್ನು ವಿವಿಧ ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಧರ್ಮಗಳ ಸಹಾಯದಿಂದ ಗುರುತಿಸಬಹುದಾಗಿದೆ. ಉತ್ಪತ್ತಿಯಾಗುವ ಭೂವೈಜ್ಞಾನಿಕ ಪರಿಸರದ ಅನುಗುಣವಾಗಿ ಖನಿಜಗಳ ರಾಸಾಯನಿಕ ಸಂಘಟನೆ ಮತ್ತು ಸ್ಪಟಿಕ ರಚನೆಗಳಲ್ಲಿ ಉಂಟಾಗುವ ವ್ಯತಾಸಗಳನ್ನು ಆಧರಿಸಿ ವಿವಿಧ ಖನಿಜ ವಿಧಗಳನ್ನು ಗುರುತಿಸಬಹುದು. ಶಿಲಾ ವಸ್ತುಗಳ ಉಗಮ ಪರಿಸರದಲ್ಲಿ ಉಂಟಾಗುವ ಉಷ್ಣತೆ, ಒತ್ತಡ ಮತ್ತು ಸಮಗ್ರ ಸಂಘಟನೆಯಲ್ಲಿ ಬದಲಾವಣೆಗಳು ಅದರಲ್ಲಿರುವ ಖನಿಜಗಳಲ್ಲಿ ಬದಲಾವಣೆಗೆ ಕಾರಣವಾಗುತ್ತವೆ.

ಖನಿಜಗಳ ರಾಸಾಯನಿಕ ರಚನೆ ಮತ್ತು ಸಂಘಟನೆಗೆ ಸಂಬಂಧಪಟ್ಟ ವಿವಿಧ ಭೌತಿಕ ಗುಣಧರ್ಮಗಳ ಆಧಾರದ ಮೇಲೆ ಖನಿಜಗಳನ್ನು ವಿವರಿಸಬಹುದು. ಖನಿಜಗಳನ್ನು ಗುರುತಿಸಲು ಸಹಕಾರಿಯಾದ ಸಾಮಾನ್ಯ ಭೌತಿಕ ಗುಣಗಳೆಂದರೆ ಅವುಗಳ ಸ್ಪಟಿಕ ರಚನೆ, ಬಾಹ್ಯರೂಪ, ಗಡಸುತನ, ಹೊಳಪು, ಪಾರದರ್ಶಕತ್ವ ,ಬಣ್ಣ, ಪುಡಿ, ಸೀಳಿಕೆ, ಬಿರುಕು,ಸಂದುಗಳು ಮತ್ತು ವಿಶಿಷ್ಟ ಸಾಂದ್ರತೆ. ಇದಲ್ಲದೆ ಖನಿಜಗಳ ಆಯಸ್ಕಾಂತೀಯ ಗುಣ, ರುಚಿ, ವಾಸನೆ, ವಿಕಿರಣಶೀಲತ್ವ ಮತ್ತು ಆಮ್ಲದೊಂದಿಗೆ ವರ್ತನೆಯಂತಹ ವಿಶಿಷ್ಟ ಗುಣಗಳನ್ನು ಬಳಸಿ ಇನ್ನಷ್ಟು ನಿಖರವಾಗಿ ಖನಿಜ ಪ್ರಭೇಧವನ್ನು ಗುರುತಿಸಬಹುದು.

ಖನಿಜಗಳು ಒಳಗೊಂಡಿರುವ ಮುಖ್ಯ ರಾಸಾಯನಿಕ ಘಟಕಗಳ ಆಧಾರದ ಮೇಲೆ ಅವುಗಳನ್ನು ವರ್ಗಿಕರಿಸುತ್ತಾರೆ. ಖನಿಜಗಳ ವರ್ಗಿಕರಣ ಕ್ಕಾಗಿ (೧) ಡಾನಾ ವರ್ಗಿಕರಣ ಮತ್ತು (೨) ಸ್ಟ್ರುಂಝ್ ವರ್ಗಿಕರಣ ಎಂಬ ಎರಡು ಮುಖ್ಯವಾದ ಪದ್ಧತಿಗಳಿವೆ.

ಸಿಲಿಕೇಟು ಖನಿಜಗಳು

ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.
ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.

ಸಿಲಿಕೇಟು (Silicate) ವರ್ಗಕ್ಕೆ ಸೇರಿದ ಖನಿಜಗಳನ್ನು ಅವುಗಳ ಬಹುಕಣಕರಣ (ಪಾಲಿಮರಿಕರಣ -polymerization) ಮತ್ತು ಸ್ಪಟಿಕ ರಚನೆಗಳ (crystal structure)ಆಧಾರದ ಮೇಲೆ ಆರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಸಿಲಿಕೇಟು ಖನಿಜಗಳಲ್ಲಿ [SiO4]4- ಎಂಬ ಸಿಲಿಕಾ(silica) ಚತರ್ಮುಖಿ ಗಳ (tetrahedron) ಮೂಲ ಘಟಕಗಳಿರುತ್ತವೆ. ಸಿಲಿಕಾ ಚತುರ್ಮುಖಿ ಅಂದರೆ, ಒಂದು ಸಿಲಿಕಾನ್ ಧನಾಯಾನು(cation)ವಿನ ಸುತ್ತ ನಾಲ್ಕು ಆಮ್ಲಜನಕದ ಋಣಾಯನುಗಳು (anions) ಕೂಡಿಕೊಂಡು ಉಂಟಾದ ಚತುರ್ಮುಖ ರೂಪದ ರಚನೆ. ಬಹುಕಣಕರಣಗೊಂಡ ಇಂತಹ ಸಿಲಿಕಾನ್ ಚತುರ್ಮುಖಿಗಳನ್ನು ಈ ಕೆಳಗಿನಂತೆ ಉಪವಿಭಾಗಿಸಬಹುದು.

  • ನೇರ ಸಿಲಿಕೇಟುಗಳು (ಆರ್ಥೋ ಸಿಲಿಕೇಟುಗಳು- Orthosilicates ಬಹುಕಣವಿಲ್ಲದ ಒಂಟಿ ಸಿಲಿಕಾ ಚತುರ್ಮುಖಿಗಳು)
  • ದ್ವ ಸಿಲಿಕೇಟುಗಳು (ಡೈ ಸಿಲಿಕೇಟುಗಳು-Disilicates ಪರಸ್ಪರ ಬಂಧಿಸಿದ ಎರಡು ಸಿಲಿಕಾ ಚತುರ್ಮುಖಿಗಳು)
  • ಚಕ್ರಿಯ ಸಿಲಿಕೇಟುಗಳು (ಸೈಕ್ಲೋಸಿಲಿಕೇಟುಗಳು cyclosilicates- ಉಂಗುರರೂಪದ ಸಿಲಿಕಾ ಚತುರ್ಮುಖಿಗಳು )
  • ಸರಣಿ ಸಿಲಿಕೇಟುಗಳು( ಇನೊ ಸಿಲಿಕೇಟುಗಳು inosilicates- ಸರಣಿರೂಪದ ಸಿಲಿಕಾ ಚತುರ್ಮುಖಿಗಳು )
  • ಪದರ ಸಿಲಿಕೇಟುಗಳು ( ಫಿಲ್ಲೊಸಿಲಿಕೇಟುಗಳು phyllosilicates- ಪದರರೂಪದ ಸಿಲಿಕಾ ಚತುರ್ಮುಖಿಗಳು ) ಮತ್ತು
  • ಜಾಲ ಸಿಲಿಕೇಟುಗಳು ( ಟೆಕ್ಟೊಸಿಲಿಕೇಟುಗಳು- tectosilicates-ಮೂರು ಆಯಾಮದ ಜಾಲದಂತಹ ಸಿಲಿಕಾ ಚತುರ್ಮುಖಿಗಳು ).

ಇತರ ಖನಿಜ ವರ್ಗಗಳು

ಸಿಲಿಕೇಟುಗಳಲ್ಲದೆ ಇತರ ಪ್ರಮುಖ ಖನಿಜ ವರ್ಗಗಳೆಂದರೆ:

ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ
ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ
  • ಸಲ್ಫೈಡುಗಳು (sulfides),
  • ಆಕ್ಸೈಡುಗಳು (oxides),
  • ಹೇಲೈಡುಗಳು (halides),
  • ಕಾರ್ಬೋನೇಟುಗಳು(carbonates),
  • ಸಲ್ಫೇಟುಗಳು (sulfates) ಮತ್ತು
==================================
ಸಂಗ್ರಹ✍️T.A.ಚಂದ್ರಶೇಖರ

ಇಂದಿನ ಹೋಮ ವರ್ಕ್

2️⃣8️⃣  1️⃣2️⃣  2️⃣0️⃣2️⃣0️⃣

ಇಂದಿನ ಹೋಮ ವರ್ಕ್ ದಿನಾಂಕ 28-12-2020*
 *ವಾರ ಮಂಗಳವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 *ಹಿಂದಿನ ಸಂಖ್ಯೆ ಬರೆಯಿರಿ* 
1. ___18

2. _____19

3. ______16

4. ______22

5. ______31

 *ಮಧ್ಯದ ಸಂಖ್ಯೆ ಬರೆಯಿರಿ* 

1. 15___17

2. 19___21

3. 38____40

4. 26____28

5. 10_____12

 *ಮುಂದಿನ ಸಂಖ್ಯೆ ಬರೆಯಿರಿ* 

1. 9____

2. 8_____

3. 22_____

4. 17_______

5. 32______

2 ರಿಂದ 10ರ ವರೆಗೆ ಮಗ್ಗಿಗಳ ಕೋಷ್ಟಕ ಬರೆದು ಕಂಠಪಾಠ ಮಾಡಿರಿ

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 *ಅಕ್ಷರಭ್ಯಾಸ 3* 

( *ಪ ಯ ಉ ಡ ಟ ಚ* )
ಪುಟ ಸಂಖ್ಯೆ 45

 *ಈ ಪದಗಳು ಸ್ಪಷ್ಟವಾಗಿ ಉಚ್ಚರಿಸಿ ನಕುಲ ಮಾಡಿ ಬರೆಯಿರಿ.* 

1. ಪಟ    ಪದ  ಜಪ   ವಚನ

2. ಪದರ  ನಯ  ಜಯ  ನಯನ

3. ಉಡ  ಉದಯ  ಊರಗ  ಉರ 

4. ಡಬಡಬ  ಡವಡವ  ನಟ  ನಟನ

5. ಟಪಟಪ  ಚರ  ಚದರ  ವಚನ
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Grape - grapes 

2. Orange - oranges

3. Papaya - papayas

4. Banana - bananas

5. Apple - apples

6. Mango - mangoes

ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.

*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
 
ಪಾಠ 8
 *ಸುರಕ್ಷತೆ ಮತ್ತು ಶಿಸ್ತು* 

 *ಕೆಳಗಿನ ವಾಕ್ಯಗಳಲ್ಲಿ ಸರಿ (✓) ಯಾವುದು ತಪ್ಪು (x) ಯಾವುದು ಗುರುತಿಸಿ.* 

1. ಸಾಲಿನಲ್ಲಿ ನಿಂತರೆ ಸಮಯ ಹಾಳು._____

2. ಸರತಿಯಲ್ಲಿ ನಿಂತರೆ ಎಲ್ಲರಿಗೂ ನೀರು ಸಿಗುತ್ತದೆ._____

3. ಸಾಲಿನಲ್ಲಿ ನಿಂತರೆ ಯಾರಿಗೂ ತೊಂದರೆಯಾಗುವುದಿಲ್ಲ._____

4. ಬಸ್ ಹತ್ತಲು ಸಾಲಿನಲ್ಲಿ ನಿಂತರು ಒಳ್ಳೆಯದು.______

5. ಶಾಲಾ ಪ್ರಾರ್ಥನಾ ಸಮಯದಲ್ಲಿ ಶಿಸ್ತಿನಿಂದ  ನಿಂತು ಕೊಳ್ಳಬಾರದು______

 *ಈಗಿನ ಪ್ರಶ್ನೆ ಗಳಿಗೆ ಉತ್ತರ ಬರೆಯಿರಿ*

1. ಬೀದಿ ದೀಪ ಬೇಕೆಬೇಕು?

2. ಶಾಲೆ ಏಕೆ ಬೇಕು?

3. ಬಸ್ ನಿಲ್ದಾಣದಿಂದ ನಿನಗೇನು ಉಪಯೋಗ?

4. ನಿಮ್ಮ ಆಸ್ಪತ್ರೆಗೆ ಹೇಗೆ ಹೋಗುವೆ?
👍👍👍👍👍👍👍👍👍👍👍👍👍👍

 *ಇಂದಿನ ಹೋಮ ವರ್ಕ್ ದಿನಾಂಕ 28-12-2020*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 *ಬಿಟ್ಟಸ್ಥಳ ತುಂಬಿರಿ* 
1.  78 ______ಸಂಖ್ಯೆ ಹಿಂದೆ ಬರುತ್ತದೆ.

2. 6 ಮತ್ತು ಎಂಟರ ಮಧ್ಯೆ ದ ಸಂಖ್ಯೆ_______.

3. 98 ಇದು ಸಂಖ್ಯೆಯ ______ಮುಂದೆ ಬರುತ್ತದೆ.

4. _______ಸಂಖ್ಯೆ ಮುಂದೆ 50 ಬರುತ್ತದೆ.

5. ______ಸಂಖ್ಯೆಯ ಹಿಂದೆ 36 ಬರುತ್ತದೆ.

6. 48 ಇದು ______ಮತ್ತು _______ಸಂಖ್ಯೆ ಮಧ್ಯೆ ಬರುತ್ತದೆ.

7. 39 ಇದು _______ಸಂಖ್ಯೆ ಹಿಂದೆ ಬರುತ್ತದೆ.

2 ರಿಂದ 15ರವರೆಗೆ ಬಗ್ಗೆ ಕೋಷ್ಟಕಗಳನ್ನು ಬರೆದು ಕಂಠಪಾಠ ಮಾಡು.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 10
 *ಸತ್ಯವಂತ ಬಾಲಕ* 

 *ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ* 

1. ಗುರುಗಳು ಎಲ್ಲಿಗೆ ಬಂದರು?

2. ಒಬ್ಬ ಬಾಲಕ ಎದ್ದುನಿಂತು ಗುರುಗಳಿಗೆ ಏನೆಂದು ಹೇಳಿದನು?

3. ಗುರುಗಳು ಹುಡುಗನಿಗೆ ಯಾವ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಿದರು?

4. ಬಾಲಕನಿಗೆ ಏನು ಹೇಳಲು ಮನಸ್ಸು ಬರಲಿಲ್ಲ?

5. ಗುರುಗಳಿಗೆ ಅಚ್ಚರಿ ಮತ್ತು ಆನಂದ ಏಕಾಯಿತು?

6. ಸತ್ಯವಂತ ಬಾಲಕನ ಹೆಸರೇನು?
*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. COLOURS name* 

 *2. Name me using the close* 

a) M__th__r.

b) B__th__r.

c) Fa__t__e__.

d) Gr____d Mo_____er.

e) S__s______r.

f) Gr____d ___a_____er.

*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 7
*ಮನೆ ಬೇಕು ಮನೆ*

1.  ನೀನು ಎಲ್ಲಿ ವಾಸಿಸುವೆ?

2.  ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?

3. ನಿಮ್ಮ ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ್ದೀರಾ?

4. ಹೌದು ಇಲ್ಲಿ ವಾಸಿಸುತ್ತವೆ?
👍👍👍👍👍👍👍👍👍👍👍👍👍👍👍

: *ಇಂದಿನ ಹೋಮ ವರ್ಕ್ ದಿನಾಂಕ 28-12-2020*
 *ವಾರ ಮಂಗಳವಾರ*

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-2
*ಸಂಖ್ಯೆಗಳು* 

1. ಇಳಿಕೆ ಕ್ರಮ ಎಂದರೇನು?

2. ಏರಿಕೆ ಕ್ರಮ ಎಂದರೇನು?

ಅಭ್ಯಾಸ 2.4 
ಪುಟ ಸಂಖ್ಯೆ 59 ರಿಂದ 60
 
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ-13 
 *ಹೊಯ್ಸಳ* 

1. ಈ ವಾಕ್ಯಗಳು ಸರಿ ಇದ್ದರೆ ( *√* )ಎಂದು ತಪ್ಪು ಇದ್ದರೆ ( *x* )ಎಂದು ಗುರುತಿಸಿ.

2. ಮಾದರಿಯಂತೆ ಕೂಡಿಸಿ ಬರೆ.

3. ಕೊಟ್ಟಿರುವ ಕೆಳಗೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು.

4. 20 ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಪುಟ ಸಂಖ್ಯೆ 96

ಪ್ರತಿದಿನ ಒಂದು ಫೇಸ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

 Unit 3
 *Celebration* 

 *Complete the sentences.* 
1. I am...... Sweets.

2. Nehru was....... on November 14.

3. We......... dipawali in November.

4. My parents give....... on my birthday.

5. Children are the ......of our nation.

 *Copy the sentences in the four lines.* 

1. Celebration bring joy and happiness.

3. Celebration unite people and families.

On page number 37
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 9
*ಚಂದದ ಮನೆ*

1. ನಿನ್ನ ಮನೆಯ ಅಲಂಕಾರವನ್ನು ಕುರಿತು ನಾಲ್ಕು ಸಾಲುಗಳಲ್ಲಿ ಬರೆಯಿರಿ.

2. ನಿನ್ನ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಿರಿಯರಿಗೆ ನೀನು ಹೇಗೆ ನೆರವಾಗುವ?

3. ಮನೆಯಲ್ಲಿ ಸಿಂಗರಿಸಲು ಬಳಸಬಹುದಾದ ವಸ್ತುಗಳನ್ನು ಪಟ್ಟಿ ಮಾಡಿ.

4. ಮನೆಯ ಅಂದವಾದ ಚಿತ್ರ ಬಿಡಿಸಿ ಬಣ್ಣ ತುಂಬು.
👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

Sunday, 27 December 2020

ಕರ್ನಾಟಕದ ಆಣೆಕಟ್ಟುಗಳು

ಕರ್ನಾಟಕದ ಅಣೆಕಟ್ಟುಗಳು

ADD ARTICLE DESCRIPTION


ಕರ್ನಾಟಕದ ಒಂದು ಸುಂದರ ಅಣೆಕಟ್ಟೆ

mn Nv k j j jv

ಪೀಠಿಕೆ

ಅಣೆಕಟ್ಟುಗಳು ಎಂದರೆ ‘ಭವ್ಯ ಭಾರತ ನಿರ್ಮಾಣದ ದೇಗುಲಗಳಿದ್ದಂತೆ ಎಂದು ‘ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಹೇಳಿದ್ದರು. ಅವರ ಮಾತಿನಂತೆ ‘ಭಾರತದಲ್ಲಿ ಅದೆಷ್ಟೋ ಅಣೆಕಟ್ಟುಗಳು ನಿರ್ಮಾಣವಾಗಿವೆ. ಕರ್ನಾಟಕದಲ್ಲಿಯೂ ‘ಭಾರಿ ಸಂಖ್ಯೆಯಲ್ಲಿಯೇ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಇರುವ ದೊಡ್ಡ ಅಣೆಕಟ್ಟುಗಳ ಸಂಖ್ಯೆ 23. ಅವುಗಳಲ್ಲದೇ ಚಿಕ್ಕಪುಟ್ಟ ಅಣೆಕಟ್ಟುಗಳ ಸಂಖ್ಯೆಗಳೂ ಹಲವಷ್ಟಿವೆ. ಅವುಗಳಲ್ಲಿ ಕೆಲವು ಅಣೆಕಟ್ಟುಗಳ ಬಗ್ಗೆ ಕಿರು ನೋಟ.

ಕೃಷ್ಣರಾಜ ಸಾಗರ ಅಣೆಕಟ್ಟು

ಭಾರತದ, ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ಇದು ‘ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸು. ಕಾವೇರಿ ನದಿಗೆ ಶ್ರೀರಂಗಪಟ್ಟಣದಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 130 ಅಡಿ ಎತ್ತರವಾಗಿದೆ. ಕೆ ಆರ್ ಎಸ್ ಎಂದೇ ಹೆಸರಾಗಿರುವ ಈ ಅಣೆಕಟ್ಟು ಮಂಡ್ಯ, ಮೈಸೂರು ಜಿಲ್ಲೆಗಳ ಸಾವಿರಾರು ಎಕರೆಗೆ ನೀರುಣಿಸುತ್ತದೆ. ‘ಭಾರತ ಸ್ವತಂತ್ರವಾಗುವ ಮೊದಲೇ ನಿರ್ಮಾಣಗೊಂಡಿರುವ ಈ ಅಣೆಕಟ್ಟು ಹಿಂದಿನ ತಲೆಮಾರಿನ ತಂತ್ರಜ್ಞರ ಯಶಸ್ವಿ ತಂತ್ರಜ್ಞಾನಕ್ಕೆ ಸಾಕ್ಷಿ. ಈ ಅಣೆಕಟ್ಟಿನ ಕೆಳ ಭಾಗದಲ್ಲಿ ನಿರ್ಮಿಸಲಾಗಿರುವ ಬೃಂದಾವನ ಉದ್ಯಾನವನವೂ ಅಷ್ಟೇ ಪ್ರಸಿದ್ಧಿ ಹೊಂದಿದ್ದು ವಿಶ್ವ ವಿಖ್ಯಾತಿ ಗಳಿಸಿದೆ.

ಲಿಂಗನ ಮಕ್ಕಿ ಅಣೆಕಟ್ಟು.

ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1819 ಅಡಿ ಎತ್ತರವಾಗಿದೆ. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.

ಸುಪಾ ಅಣೆಕಟ್ಟು

ಕಾಳಿ ನದಿಗೆ ನಿರ್ಮಿಸಲಾಗಿರುವ ಸುಪಾ ಅಣೆಕಟ್ಟು ಕರ್ನಾಟಕದ ಅತ್ಯಂತ ಎತ್ತರವಾದ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸುಪಾದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು ವಿದ್ಯುತ್ ಉತ್ಪಾದನೆಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿದೆ. 1101 ಮೀಟರ್ ಎತ್ತರ ಇರುವ ಸುಪಾ ಅಣೆಕಟ್ಟು 332 ಮೀಟರ್ ಉದ್ದವಾಗಿದೆ. ಅಣೆಕಟ್ಟನ್ನು 1985ರಂದು ಉದ್ಘಾಟಿಸಲಾಗಿದೆ. ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದೆ. ಕಾಳಿನದಿಗೆ ಕಟ್ಟಲಾಗಿರುವ ಹಲವಾರು ದೊಡ್ಡ ಅಣೆಕಟ್ಟುಗಳಲ್ಲಿ ಇದೂ ಒಂದು.

ತುಂಗಭದ್ರಾ ಅಣೆಕಟ್ಟು

2441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹೊಂದಿರುವ ತುಂಗಭದ್ರಾ ಅಣೆಕಟ್ಟು ನೀರಾವರಿ ಉದ್ದೇಶದಿಂದ ನಿರ್ಮಾಣಗೊಂಡಿದೆ. ಇದು ಹೊಸಪೇಟೆಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. 33 ಬಹುದೊಡ್ಡ ಗೇಟುಗಳನ್ನು ಹೊಂದಿರುವ ತುಂಗಭದ್ರ ಅಣೆಕಟ್ಟು ಬಹುದೊಡ್ಡ ಗಾತ್ರವನ್ನು ಹೊಂದಿದೆ. ಈ ಅಣೆಕಟ್ಟಿನಿಂದ ಸಂಗ್ರಹಿಸಲಾದ ನೀರನ್ನು ಕಾಲುವೆಗಳ ಮೂಲಕ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂದ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನಿರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಬಿರುಬಿಸಿಲಿನ ಬಯಲುಸೀಮೆಯ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯೆನಿಸಿದೆ. ಆದರೆ ಇಂದು ಈ ಆಣೆಕಟ್ಟಿನ ಕಾಲು ಭಾಗ ಹೂಳಿನಿಂದ ತುಂಬಿದೆ. ಹೀಗಾಗಿ ನೀರಿನ ಶೇಖರಣೆಯ ಪ್ರಮಾಣ ಕಡಿಮೆಯಾಗಿದ್ದು. ಈ ಭಾಗದ ರೈತರಲ್ಲಿ ಆತಂಕ ಉಂಟುಮಾಡಿದೆ. ಈ ನಿಟ್ಟಿನಲ್ಲಿ ಪ್ರಭುತ್ವ ಮಹತ್ವದ ಹೆಜ್ಜೆ ಇಟ್ಟು ಬರದ ನಾಡಿನ ಜನರ ಬಾಯಾರಿಕೆಯನ್ನು ನೀಗಿಸಬೇಕಿದೆ. ಹಾಗೆಯೇ ಅನೇಕ ಕಾರ್ಖಾನೆಗಳಿಂದ ಹೊರ ಸೂಸುವ ಕಲುಷಿತ ನೀರು ಈ ಆಣೆಕಟ್ಟಿನ ನೀರನ್ನು ಸೇರುವುದರಿಂದ ಕಳೆದ ನಾಲ್ಕೈದು ವರ್ಷಗಳಿಂದ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದಾಗಿ ಈ ಭಾಗದ ಲಕ್ಷಾಂತರ ಜನರ ಆರೋಗ್ಯ ಹದಗೆಡುತ್ತಿದೆ. ಪಾನಕ್ಕೆ ತುಂಗಾ ನೀರೇ ಶ್ರೇಷ್ಠವೆಂದು ಕರೆಯಿಸಿಕೊಂಡ ನೀರು ಇಂದು ಕುಡಿಯಲಿಕ್ಕೂ ಯೋಗ್ಯವಿಲ್ಲದಂತಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಜನರು ಜಾಗೃತಗೊಳ್ಳಬೇಕು ಮತ್ತು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಬಡತನದ ಬೇಗೆಯಲ್ಲಿ ಬದುಕುತ್ತಿರುವ ಈ ಭಾಗದ ಜನರ ಆರೋಗ್ಯ ರಕ್ಷಣೆಯ ಬಗೆಗೆ ಮತ್ತಷ್ಟು ಗಮನಹರಿಸಬೇಕಿದೆ. ಹಾಗೆಯೇ ಜನರೂ ಸಹ ನೀರನ್ನು ಕಲುಷಿತಗೊಳಿಸದೆ ಶುದ್ಧವಾಗಿಡಬೇಕು.

ಕೊಡಸಳ್ಳಿ ಅಣೆಕಟ್ಟು

ಕಾಳಿನದಿಗೆ ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಬಳಿ ನಿರ್ಮಿಸಲಾಗಿರುವ ಈ ಅಣೆಕಟ್ಟನ್ನು 1997ರಲ್ಲಿ ಉದ್ಘಾಟಿಸಲಾಯಿತು. ವಿದ್ಯುತ್ ಉತ್ಪಾದನೆಯ ಉದ್ದೇಶದಿಂದಲೇ ನಿರ್ಮಾಣಗೊಂಡ ಅಣೆಕಟ್ಟು ಇದಾಗಿದೆ. ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಕಾಡಿನ ನಾಶದ ವಿರುದ್ಧ ಹಲವು ಹೋರಾಟಗಳು ನಡೆದಿದ್ದವು.

ಜುಲೈ2005ರಲ್ಲಿ ಉದ್ಘಾಟನೆಯಾದ ಆಲಮಟ್ಟಿ ಅಣೆಕಟ್ಟು ಸಮುದ್ರ ಮಟ್ಟದಿಂದ 509 ಮೀಟರ್ ಎತ್ತರವಾಗಿದೆ. ಇದನ್ನು ಈಗ ಸುಪ್ರಿಂ ಕೋರ್ಟಿನ ಆದೇಶದ ಮೇರೆಗೆ 519 ಮೀಟರ್ಗೆ ಏರಿಸಲಾಗುತ್ತಿದೆ. ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಈ ಅಣೆಕಟ್ಟು ನಿರಾವರಿ ಹಾಗೂ ವಿದ್ಯುತ್ ಉತ್ಪಾದನೆ ಈ ಎರಡೂ ಉದ್ದೇಶ ಹೊಂದಿದೆ. ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1565.15 ಮೀಟರ್ ಉದ್ದವಾಗಿದೆ. 42.19 ಟಿಎಂಸಿ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಿದೆ.r n shetty

ಸಮಾರೋಪ

ಇವು ಕರ್ನಾಟಕದ ಪ್ರಮುಖ ಅಣೆಕಟ್ಟುಗಳು. ಇವಲ್ಲದೆ ಭದ್ರಾ ಅಣೆಕಟ್ಟು, ನಾರಾಯಣಪುರ(ಬಸವಸಾಗರ),ಕಬಿನಿ, ಹಾರಂಗಿ, ಗಾಜನೂರು, ಕದ್ರಾ, ಬಾಚಣಕಿ, ಗೋರೂರು, ಹಿಡಕಲ್, ಕಣ್ವ, ಲಕ್ಕವಳ್ಳಿ, ಮಾರ್ಕೋನಹಳ್ಳಿ, ಸಾತನೂರು, ವಾಣಿವಿಲಾಸ ಸಾಗರ ಮುಂತಾದ ಹಲವು ಮಧ್ಯಮ ಗಾತ್ರದ ಅಣೆಕಟ್ಟುಗಳಿವೆ. ಅದಲ್ಲದೆ ನೂರಕ್ಕೂ ಹೆಚ್ಚಿನ ಚಿಕ್ಕಪುಟ್ಟ ಅಣೆಕಟ್ಟುಗಳಿವೆ. ಇವುಗಳ ಜೊತೆಗೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೂರಾರು ಚಿಕ್ಕ ಪುಟ್ಟ ಅಣೆಕಟ್ಟುಗಳ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಇವುಗಳ ವಿರುದ್ಧ ಪರಿಸರವಾದಿಗಳು ಹೋರಾಟ ಪ್ರಾರಂಭಿಸಿದ್ದಾರೆ. ಕನ್ನಡ ನಾಡಿಗೆ ವಿದ್ಯುತ್ತಿನ ಜೊತೆಗೆ ಬೆಳೆಗಳಿಗೆ ನೀರನ್ನೂ ನೀಡುತ್ತಿರುವ ಈ ಅಣೆಕಟ್ಟುಗಳು ಭವ್ಯ ಭಾರತದ ದೇಗುಲಗಳೇ ಹೌದು.

ಜಲಾಶಯಗಳಲ್ಲಿ ನೀರು ಮತ್ತು ಹೂಳು

ಕುಡಿಯುವ ನೀರು, ನೀರಾವರಿ, ವಿದ್ಯುತ್‌ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ರಾಜ್ಯದ ಪ್ರಮುಖ ಜಲಾಶಯಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿವೆ. ತುಂಗಭದ್ರಾ ಜಲಾಶಯದಲ್ಲಿ ಶೇಖರವಾಗಿರುವ ಭಾರಿ ಪ್ರಮಾಣದ ಹೂಳನ್ನು ತೆಗೆಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದೆ೧.

ಅದರ ಪಟ್ಟಿ ಕೆಳಗೆ ಕೊಟ್ಟಿದೆ
More information: ಕ್ರಮ ಸಂಖ್ಯೆ, ಜಲಾಶಯ ...
ಕ್ರಮ ಸಂಖ್ಯೆಜಲಾಶಯನೀರಿನ ಸಂಗ್ರಹ ಸಾಮರ್ಥ್ಯತುಂಬಿರುವ ಹೂಳು
..ಟಿ.ಎಂ.ಸಿ.ಗಳಲ್ಲಿಟಿ.ಎಂ.ಸಿ.ಗಳಲ್ಲಿ
1ತುಂಗಭದ್ರಾ100.85531.616
2ಆಲಮಟ್ಟಿ32.31510.157
3ಕೃಷ್ಣರಾಜ ಸಾಗರ49.4525.309
4ಮಲಪ್ರಭಾ37.732.744
5ಹೇಮಾವತಿ37.1032.689
6ಭದ್ರಾ71.5352.125
7ಹಾರಂಗಿ8.500.833
8ಕಬಿನಿ19.520.814
9ವಾಟೆಹೊಳೆ1.500.235
10ಮಾರ್ಕೋನಹಳ್ಳಿ2.4010.136
11ಹಿಪ್ಪರಗಿ6.000.126
12ತೀತಾ0.2420.005
Close

ಹೆಚ್ಚಿನ ವಿವರ: ಕರ್ನಾಟಕ ನದಿಗಳ ಸಾಮರ್ಥ್ಯ:

ಕಲಬುರ್ಗಿ ಜಿಲ್ಲೆಯ ನದಿಗಳು

  • ಕಲಬುರ್ಗಿ ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿಗಳು ೨೦೨೦ರಲ್ಲಿ ತುಂಬಿ ಹರಿಯುತ್ತಿವೆ. 5 ವರ್ಷದ ಬಳಿಕ ಎಲ್ಲ 6 ಜಲಾಶಯಗಳು 2020 ಆಗಸ್ಟ್‍ನಲ್ಲಿ ಭರ್ತಿಯಾದವು. ಬೆಣ್ಣೆತೊರಾ, ಅಮರ್ಜಾ, ಸೊನ್ನ ಭೀಮಾ ಬ್ಯಾರೇಜ್, ಚಂದ್ರಂಪಳ್ಳಿ, ಗಂಡೋರಿ ನಾಲಾ ಮತ್ತು ನಾಗರಾಳ ಜಲಾಶಯಗಳು ೨೦೨೦ ಆಗಸ್ಡ್ 12 ರ ಸಮಯಕ್ಕೆ ಭರ್ತಿಯಾದವು. 2020 ಆಗಸ್ಟ್‍ನಲ್ಲಿ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯ ಜೀವನಾಡಿ ಭೀಮಾನದಿಯು ತುಂಬಿ ಹರಿಯಿತು. ಇದರಿಂದ ಅಫಜಲಪೂರ, ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನ ಹಲವು ಕೆರೆಗಳು ಭರ್ತಿಯಾದವು.

ಭದ್ರಾ ಜಲಾಶಯ

ಚಿಕ್ಕಮಗಳೂರು–ಶಿವಮೊಗ್ಗ ಜಿಲ್ಲೆ ಭಾಗದ ಲಕ್ಕವಳ್ಳಿ ಬಳಿ ಭದ್ರಾ ನದಿಗೆ 1964ರಲ್ಲಿ ಅಣೆಕಟ್ಟೆ ಕಟ್ಟಲಾಗಿದೆ. 71.53 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ, 186 ಅಡಿ ಎತ್ತರದ ಜಲಾಶಯ. ಮಲೆನಾಡು–ಬಯಲು ಸೀಮೆಯ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 1.82 ಲಕ್ಷ ಹೆಕ್ಟೇರ್ ಜಮೀನುಗಳಿಗೆ ನೀರುಣಿಸುತ್ತದೆ. ಜತೆಗೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಗದಗ ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಈ ಜಲಾಶಯವೇ ಆಧಾರ.

  • 2019 ವರ್ಷದ ಆಗಸ್ಟ್ ಕೊನೆಯಲ್ಲಿ ಈ ಜಲಾಶಯ ಭರ್ತಿಯಾಗಿತ್ತು. 2014ರಲ್ಲಿ ಭರ್ತಿಯಾಗಿದ್ದ ಜಲಾಶಯ ಮತ್ತೆ ತುಂಬಿದ್ದು 2018ರಲ್ಲಿ. 2020ರ ವರ್ಷದಲ್ಲಿ ಆಗಸ್ಟ್‍ನಲ್ಲಿ 178.6 ಅಡಿಗೆ ತಲುಪಿತು. 71.53 ಟಿಎಂಸಿ ಅಡಿ: ಸಂಗ್ರಹ ಸಾಮರ್ಥ್ಯ; 186 ಅಡಿ: ಗರಿಷ್ಠ ಮಟ್ಟ.

ಕಾವೇರಿ ಕಣಿವೆಯ ‘ಹಾರಂಗಿ’ಜಲಾಶಯ

  • ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಹಾರಂಗಿಯೂ ಒಂದು. . 2020 ರಲ್ಲಿ ಜುಲೈ 17ರಂದೇ ಜಲಾಶಯ ಭರ್ತಿ ಆಯಿತು. 2019ರಲ್ಲಿ ಮತ್ತು 2018ರಲ್ಲಿ ಜುಲೈ ತಂಗಳಲ್ಲೇ ಜಲಾಶಯ ತುಂಬಿತ್ತು. ಇದು ಕೊಡಗು ಸೇರಿದಂತೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ 1,34,895 ಎಕರೆ ಪ್ರದೇಶಕ್ಕೆ ನೀರು ಪೂರೈಸುತ್ತದೆ. ಜಲಾಶಯದ ನೀರನ್ನು ಬಳಸಿಕೊಂಡು ‘ಎನರ್ಜಿ ಡೆವಲಪ್‌ಮೆಂಟ್ ಕಂಪೆನಿ’ (ಇ.ಡಿ.ಸಿ.ಎಲ್) ವಿದ್ಯುತ್‌ ಉತ್ಪಾದಿಸುತ್ತಿದೆ. ಸರ್ಕಾರದೊಂದಿಗೆ ಇಡಿಸಿಎಲ್‌ 30 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಅದು 1998ರಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿತ್ತು.
  • 2,859 ಅಡಿ: ಗರಿಷ್ಠ ಮಟ್ಟ
  • 2,858.18 ಅಡಿ: ಈಗಿನ ಸಂಗ್ರಹ
  • 8.5 ಟಿಎಂಸಿ ಅಡಿ: ನೀರು ಸಂಗ್ರಹ ಸಾಮರ್ಥ್ಯ

ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಯ ಜಲಾಶಯ

  • ಇದು ಶರಾವತಿ ನದಿಗೆ 1964ರಲ್ಲಿ ನಿರ್ಮಿಸಿದ ಜಲಾಶಯವು. 59.13ಮೀ ಎತ್ತರ, 2,749ಮೀ ಉದ್ದ ಇರುವ ಅಣೆಕಟ್ಟೆಯನ್ನು ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಯಿತು. ಈ ಜಲಾಶಯ1,992 ಚದರ ಕಿ.ಮೀ ಜಲಾನಯನ ಪ್ರದೇಶ ಹೊಂದಿದೆ. ಅದು 44.35 ಕೋಟಿ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಜಲಾಶಯದ ನೀರು ಬಳಸಿಕೊಂಡು ಮಹಾತ್ಮ ಗಾಂಧಿ, ಶರಾವತಿ, ಲಿಂಗನಮಕ್ಕಿ ಮತ್ತು ಗೇರುಸೊಪ್ಪ ಘಟಕಗಳಲ್ಲಿ ಒಟ್ಟು 1,469.8 ಮೆಗಾವಾಟ್‌ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ಜಲಾಶಯ ಸಮುದ್ರ ಮಟ್ಟದಿಂದ 1,819 ಅಡಿ ಗರಿಷ್ಠಮಟ್ಟ ಇದೆ. ಅದು ಭರ್ತಿಯಾದ ನಂತರ ಹೊರಗೆ ಹರಿಸುವ ನೀರು ಕಾರ್ಗಲ್‌ ಜಲಾಶಯದ ಮೂಲಕ ಜೋಗ ಜಲಪಾತದಿಂದ ಧುಮ್ಮಿಕ್ಕುವ ಮನಮೋಹಕ ದೃಶ್ಯ ವಿಶ್ವ ಪ್ರಸಿದ್ಧವಾಗಿದೆ. ವರ್ಷ 2019 ರಲ್ಲಿ ಜಲಾಶಯ ಭರ್ತಿಯಾಗಿತ್ತು. ಈ ವರ್ಷ 1,799 ಅಡಿಗೆ ತಲುಪಿದೆ. 2020

ಕಾವೇರಿ ಕಣಿವೆಯ ಜಲಾಶಯಗಳು

  • ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು 2020 ರಲ್ಲಿ ಭರ್ತಿಯಾದವು. 2020 ಆಗಸ್ಟ್ 15 ಸಮಯಕ್ಕೆ ಜಲಾಶಯ ಗರಿಷ್ಠ ಮಟ್ಟ (124.80 ಅಡಿ ತಲುಪಿದೆ. 2019 ಆ.15 ರಂದೇ ಕೆಆರ್‌ಎಸ್‌ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. ಜಲಾಶಯದಿಂದ 11.5 ಲಕ್ಷ ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಡುತ್ತದೆ. ಜೊತೆಗೆ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ತಮಿಳುನಾಡಿಗೆ ಜೂನ್‌ 1ರಿಂದ ಇಲ್ಲಿಯವರೆಗೆ 63 ಟಿಎಂಸಿ ಅಡಿ ನೀರು ಹರಿದು ಹೋಗಿದೆ.ಕಬಿನಿ ಭರ್ತಿ:
  • ಎಚ್‌.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 2,284 ಅಡಿ ಎತ್ತರದ ಈ ಜಲಾಶಯದಲ್ಲಿ 2020 ಆಗಸ್ಟ್ 15 ಸಮಯಕ್ಕೆ 2,283.25 ಅಡಿ ನೀರಿನ ಸಂಗ್ರಹವಿತ್ತು. 19.52 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ 18.87 ಟಿಎಂಸಿ ಅಡಿ ನೀರು ಇತ್ತು.
  • ಈ ಜಲಾಶಯವು ಎಡದಂಡೆ ನಾಲೆ ವ್ಯಾಪ್ತಿಯಲ್ಲಿ 2,910 ಎಕರೆ, ಬಲದಂಡೆ ನಾಲೆ ವ್ಯಾಪ್ತಿಯಲ್ಲಿ 1.05 ಲಕ್ಷ ಎಕರೆ ಪ್ರದೇಶ ಒಳಗೊಂಡಿದೆ. ಜೊತೆಗೆ ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗೆ ನೀರು ಹರಿಸಲಾಗುತ್ತದೆ.

ಹೇಮಾವತಿ ಜಲಾಶಯ

  • ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯವು ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಹೇಮಾವತಿ ಜಲಾನಯನ ಪ್ರದೇಶದಲ್ಲಿ 2020 ರಲ್ಲಿ ಉತ್ತಮವಾಗಿ ಮಳೆಯಾಗಿ ಜಲಾಶಯ ಆಗಸ್ಟ್‍ನಲ್ಲಿ ಭರ್ತಿಯಾಯಿತು.,ಹೆಚ್ಚಿನ ನೀರನ್ನು 6 ಕ್ರಸ್ಟ್‌ ಗೇಟ್‌ಗಳ ಮೂಲಕ 15 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿ ಬಿಡಲಾಯಿತು.
  • ಹಾಸನದ 1,07,480 ಎಕರೆ, ಮಂಡ್ಯದ 2,27,920 ಎಕರೆ, ತುಮಕೂರು 3,14,000 ಎಕರೆ ಹಾಗೂ ಮೈಸೂರು ಜಿಲ್ಲೆಯಲ್ಲಿ 5,600 ಎಕರೆ ಅಚ್ಚುಕಟ್ಟು ಪ್ರದೇಶ ಒಳಗೊಂಡಿದೆ. ತುಮಕೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಅಚ್ಚುಕಟ್ಟು ಹೊಂದಿದೆ. ಜೊತೆಗೆ 24 ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವುದು.
  • ಹೇಮಾವತಿ ಜಲಾಶಯವು 2018- 2019- 2020 ವರ್ಷಗಳಲ್ಲಿ ನಿರಂತರವಾಗಿ ತುಂಬಿದೆ.
  • 37.103 ಟಿಎಂಸಿ ಅಡಿ: ಸಂಗ್ರಹ ಸಾಮರ್ಥ್ಯ.
  • 36.64 ಟಿಎಂಸಿ ಅಡಿ: 2020 ಆಗಸ್ಟ್‍ನಲ್ಲಿ ಸಂಗ್ರಹ.

ತುಂಗಭದ್ರಾ ಜಲಾಶಯ

  • ತುಂಗಭದ್ರಾ ಜಲಾಶಯವು ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ಇದೆ. ಇದರಿಂದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ 3 ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೆ ಒಳಪಟ್ಟಿದೆ. ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗಿರುವುದರಿಂದ ಜಲಾಶಯ 2020 ರಲ್ಲಿ ತುಂಬಿತು.

ಬಸವಸಾಗರ ಜಲಾಶಯ

  • ಬಸವಸಾಗರ ಜಲಾಶಯವನ್ನು ಯಾದಗಿರಿ ಜಿಲ್ಲೆಯ ನಾರಾಯಣಪುರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ 2020 ಆಗಸ್ಟ್ ನಲ್ಲಿ ಭರ್ತಿಯಾಗಿದೆ. ಇದರ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತದೆ.
  • ಮೂರು ವರ್ಷಗಳಿಂದ ಜಲಾಶಯ ಭರ್ತಿಯಾಗುತ್ತಿದ್ದು, 2020 ಆಗಸ್ಟ್ 7ರಂದು ಭರ್ತಿಯಾಗಿದೆ. 27 ಗೇಟುಗಳ ಮೂಲಕ ನೀರು ಹರಿಸಲಾಯಿತು.
  • 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 6 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. ಕೃಷ್ಣಾ ನದಿಯು ಯಾದಗಿರಿ, ವಿಜಯಪುರ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ಜೀವನದಿಯಾಗಿದೆ.

ತುಂಗಭದ್ರಾ ಜಲಾಶಯ (75ರ ವರ್ಷ)

  • ಹೊಸಪೇಟೆಗೆ ಸಮೀಪದ ತುಂಗಭದ್ರಾ ಜಲಾಶಯ 2020 ರಲ್ಲಿ 75 ವರ್ಷ ಪೂರ್ಣಗೊಳಿಸಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಅವಿಭಜಿತ ಆಂಧ್ರ ಪ್ರದೇಶದ ಕಡಪ, ಕರ್ನೂಲು, ಅನಂತಪುರ ಹಾಗೂ ಮೆಹಬೂಬ್‌ ನಗರದ ಜೀವನಾಡಿಯಾಗಿರುವ ಈ ಅಣೆಕಟ್ಟೆ ಒಟ್ಟು 5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ. 127 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತದೆ.
  • ಒಟ್ಟು 33 ಕ್ರಸ್ಟ್ ಗೇಟ್‌ಗಳನ್ನು ಒಳಗೊಂಡಿದೆ. ಕಾಲುವೆಗಳು 250 ಕಿ.ಮೀ ವರೆಗೆ ವಿಸ್ತರಿಸಿವೆ. ಪ್ರತಿ ವರ್ಷ ಈ ಕಾಲುವೆಗಳನ್ನು ಹಂತ ಹಂತವಾಗಿ ದುರಸ್ತಿಗೊಳಿಸಲಾಗುತ್ತಿದೆ. ವರ್ಷ 2019 ರಲ್ಲಿ ಉಪಗ್ರಹದಿಂದ ಸಮೀಕ್ಷೆ ಮಾಡಿ, ಕಾಲುವೆಗೆ ಸೇರಿದ ಆಸ್ತಿಯನ್ನು ಸಂರಕ್ಷಿಸಿದ್ದು ವಿಶೇಷ.
  • ಇದು 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ. ಇದರಲ್ಲಿ 32 ಟಿಎಂಸಿ ಹೂಳು ತುಂಬಿಕೊಂಡಿದೆ.

ಆಲಮಟ್ಟಿ ಜಲಾಶಯ

  • ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಾಗರ ಅಥವಾ ಆಲಮಟ್ಟಿ ಅಣೆಕಟ್ಟೆ 2020 ಆಗಸ್ಟ್ ೧೫ ಕ್ಕೆ ಭರ್ತಿಯಾಯಿತು.. ಇದುವರೆಗೆ 2015ನೇ ಇಸವಿ ಹೊರತು ಪಡಿಸಿ ಪ್ರತಿ ವರ್ಷ ಜಲಾಶಯ ತುಂಬಿ ಹರಿದಿದೆ. 123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 6.22 ಲಕ್ಷ ಹೆಕ್ಟೆರ್‌ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. 519.60 ಮೀಟರ್‌ ವರೆಗೆ ನೀರು ಸಂಗ್ರಹ ಮಾಡಲಾಗುತ್ತಿದೆ.ಆಳ–ಅಗಲ | ಜಲಸಮೃದ್ಧಿ; ಪ್ರಜಾವಾಣಿ ;d: 18 ಆಗಸ್ಟ್ 2020

       /////////////////////////////////

ಸಂಗ್ರಹ ✍️T.A.ಚಂದ್ರಶೇಖರ


ಬದಾಮಿ ಚಾಲುಕ್ಯರು

✍️ *ಬಾದಾಮಿ ಚಾಲುಕ್ಯರ ಬಗ್ಗೆ ಸಂಕ್ಷಿಪ್ತ ಮಾಹಿತಿ, {540-753}*👇👇👇

 🔹ಬಾದಾಮಿ ಚಾಲುಕ್ಯ ರಾಜ್ಯವನ್ನು ಸ್ಥಾಪಿಸಿದವರು= *ಜಯಸಿಂಹ*(SDA-2019)

 🔸ಚಾಲುಕ್ಯ ರಾಜಧಾನಿ= *ಬಾಗಲಕೋಟೆ ಜಿಲ್ಲೆಯ ಬಾದಾಮಿ ಅಥವಾ ವಾತಾಪಿ*(PSI-2015/PC-2014/RSI/PSI-2016)

 🔹ಪೂರ್ವ ಚಾಲುಕ್ಯರ ರಾಜಧಾನಿ= *ವೆಂಗಿ*
(PC/ಲೆಕ್ಚರ್-2012)

🔸 ರಾಜಲಾಂಛನ= *ಬಲ ಮುಖ ವರಹ*

 🔹ಪ್ರಸಿದ್ಧ ದೊರೆ= *2ನೇ ಪುಲಿಕೇಶಿ*

 🔸ಚಾಲುಕ್ಯರ ಆರಂಭದ ರಾಜಧಾನಿ= *ಐಹೊಳೆ*

 🔹ಸಾಮ್ರಾಜ್ಯದ ವಿಸ್ತಾರ= *ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೆ*

🔸 ಸೈನ್ಯದ ಹೆಸರು= *ಕರ್ನಾಟ ಬಲ*(FDA-2019)

 🔹ಬಾದಾಮಿಯ ಮೂರನೇ ಗುಹಾಲಯ ರಚಿಸಿದವರು= *ಮಂಗಳೇಶ*

 🔸ವಾತಾಪಿ ನಿರ್ಮಾಪಕ= *ಒಂದನೇ ಕೀರ್ತಿವರ್ಮ*

🔹 ಎರಡನೇ ಪುಲಿಕೇಶಿಯಿಂದ ಸೋತ ರಾಷ್ಟ್ರಕೂಟರ ಸಾಮಂತರು= *ಗೋವಿಂದ ಮತ್ತು ಅಷ್ಟಯಿಕ*

 🔸ಎರಡನೇ ಪುಲಿಕೇಶಿ ವಿವಾಹದ ಕದಂಬ ಅಳುಪರ ರಾಜಕುಮಾರಿ= *ಮಹಾದೇವಿ*

 🔹ಎರಡನೇ ಪುಲಿಕೇಶಿಯಿಂದ  ಸೋತ ಉತ್ತರಪಥೇಶ್ವರ= *ಹರ್ಷವರ್ಧನ*
(SDA-2011)

 🔹2ನೇ ಪುಲಿಕೇಶಿ ಹರ್ಷವರ್ಧನನನ್ನು  ಸೋಲಿಸಿದ ಯುದ್ಧ= *ನರ್ಮದಾ ನದಿ ಯುದ್ಧ*(634)

🔸 ಎರಡನೇ ಪುಲಿಕೇಶಿಯಯಿಂದ  ಸೋತ ಪಲ್ಲವರ ದೊರೆ= *ಮಹೇಂದ್ರವರ್ಮ*( ಫುಲ್ಲಲೂರ ಕದನ)

🔹 ಇಮ್ಮಡಿ ಪುಲಿಕೇಶಿಯು *ಏಳನೇ ಶತಮಾನ ಆರಂಭದಲ್ಲಿ ರಾಜ್ಯವನ್ನು ಆಳುತ್ತಿದ್ದನು*, (PSI-2002)

🔸 ಎರಡನೇ ಪುಲಿಕೇಶಿಯ  ಬಿರುದುಗಳು= *ಸತ್ಯಾಶ್ರಯ, ದಕ್ಷಿಣಪಥೇಶ್ವರ, ಪರಮ ಭಾಗವತ, ಪೃಥ್ವಿ ವಲ್ಲಭ,*

 🔹13 ವರ್ಷ ಪಲ್ಲವರ ವಶದಲ್ಲಿದ್ದ ಬಾದಾಮಿಯನ್ನು ಮರು ವಶಪಡಿಸಿಕೊಂಡ ಚಾಲುಕ್ಯ ರಾಜ= *ಒಂದನೇ ವಿಕ್ರಾಮದಿತ್ಯ*

 🔸ಎರಡನೇ ಪುಲಿಕೇಶಿಯ ಆಸ್ಥಾನಕ್ಕೆ ಭೇಟಿನೀಡಿದ ಚಿನಿ ಪ್ರವಾಸಿಗ= *ಹುಯೆನ್ ತ್ಸಾಂಗ್*(SDA-2008)

 🔹ಹುಯೆನ್ ತ್ಸಾಂಗನ ಕೃತಿ= *ಸಿ-ಯು-ಕಿ*

 🔹ಎರಡನೇ ಪುಲಿಕೇಶಿಯ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ ಪರ್ಷಿಯಾದ ದೊರೆ= *ಎರಡನೇ ಕುಶ್ರೋ*

🔹 ತನ್ನ ಕಂಚಿ ವಿಜಯದ ನೆನಪಿಗಾಗಿ ಕಂಚಿಯ ರಾಮೇಶ್ವರ ದೇವಸ್ಥಾನಕ್ಕೆ ದಾನ ನೀಡಿದ ಚಾಲುಕ್ಯ ರಾಜ= *ಎರಡನೇ ವಿಕ್ರಮಾದಿತ್ಯ*

🔹 ಬಾದಾಮಿ ಚಾಲುಕ್ಯರ ಆಡಳಿತದ  ಘಟಕಗಳು= *ಮಹಾರಾಷ್ಟ್ರಕ- ರಾಷ್ಟ್ರ. ವಿಷಯ- ಭೋಗ*

 🔹ಬಾದಾಮಿ ಚಾಲುಕ್ಯರ ಕಾಲದಲ್ಲಿ 14 ಕೆರೆಗಳನ್ನು ಕಟ್ಟಿಸಿದ ಉದಾಹರಣೆ ಇರುವ ಊರು= *ಗುಡಿಗೇರಿ*

 🔸ಐಹೊಳೆ-500 ಎಂಬ ವ್ಯಾಪಾರಿ ಶ್ರೇಣಿ ಆರಂಭವಾಗಿದ್ದು= *ಬಾದಾಮಿ ಚಾಲುಕ್ಯರ ಕಾಲದಲ್ಲಿ*

 🔹ಚಾಲುಕ್ಯರ ವಿಕ್ರಮ ಶಕೆ ಆರಂಭವಾಗಿದ್ದು= *ಕ್ರಿ.ಶ. 1076*(FDA-1997)

 🔹ಬಾದಾಮಿ ಚಾಲುಕ್ಯರ ಕಾಲದ ಜೈನ ದೇವಾಲಯಗಳು ಕಂಡುಬರುವ ಸ್ಥಳಗಳು= *ಐಹೊಳೆ ಮತ್ತು ಬಾದಾಮಿ*

 🔸ಪಟ್ಟದಕಲ್ಲಿನ ವಿರೂಪಾಕ್ಷ ( ಲೋಕೇಶ್ವರ)ದೇವಾಲಯ ಕಟ್ಟಿಸಿದ ರಾಣಿ= *ರಾಣಿ ಲೋಕಮಹಾದೇವಿ*

🔸 ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಾಲಯ ಕಟ್ಟಿದ ರಾಣಿ= *ರಾಣಿ ತ್ರೈಲೋಕಮಹಾದೇವಿ*

🔹 ನೃತ್ಯ ವಿದ್ಯಾದರೆ ಎಂಬ ಬಿರುದು ಹೊಂದಿದ ರಾಣಿ= *ಲಚ್ಚಲ ದೇವಿ*

 🔹ಯುನೆಸ್ಕೊ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿರುವ ಚಾಲುಕ್ಯರ ಐತಿಹಾಸಿಕ ಸ್ಥಳ= *ಪಟ್ಟದಕಲ್ಲು*

🔸 ಕನ್ನಡ ತ್ರಿಪದಿ ಕವಿತೆ ರೂಪದಲ್ಲಿರುವ ಬಾದಾಮಿ ಚಾಲುಕ್ಯರ ಕಾಲದ ಶಾಸನ
 *ಕಪ್ಪೆ ಅರೆಭಟ್ಟನ ಶಾಸನ*

 🔹ಬಾದಾಮಿ ಚಾಲುಕ್ಯರ ಕಾಲದ ಐಹೊಳೆ ಶಾಸನ ರಚಿಸಿದವರು= *ರವಿಕೀರ್ತಿ*

 🔸ಬದಾಮಿ ಚಾಲುಕ್ಯರ ಪುಲಿಕೇಶಿಯ ಸೊಸೆಆದ ವಿಜ್ಜಿಕಾ ಬರೆದ ನಾಟಕ
 *ಕೌಮುದಿ ಮಹೋತ್ಸವ*

🔹 ಪಟ್ಟದಕಲ್ಲಿನ ವಿಜಯೇಶ್ವರ ದೇವಾಲಯ ನಿರ್ಮಿಸಿದವರು=
 *ವಿಜಯಾದಿತ್ಯ*

🔸 ಐಹೊಳೆ ಶಾಸನದ ಭಾಷೆ= *ಸಂಸ್ಕೃತ*

🔹 ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ಕೇಂದ್ರಗಳು.
*ಬದಾಮಿ,ಪಟ್ಟದಕಲ್ಲು, ಐಹೊಳೆ*.

 🔸ಭಾರತೀಯ ದೇವಾಲಯಗಳ ತೊಟ್ಟಿಲು ಎಂದು ಕರೆಯಲ್ಪಡುವ ಕಲಾಕೇಂದ್ರ= *ಐಹೊಳೆ*( ಕರೆದವರು= *ಪರ್ಸಿಬ್ರೌನ್*) (DR-2008)

 🔹ಭಾರತದ ಸಂಸತ್ತನ್ನು ಹೋಲುವ ದೇವಾಲಯ= *ದುರ್ಗಾ ದೇವಾಲಯ*

 🔸ದ್ರಾವಿಡ ವಾಸ್ತುಶಿಲ್ಪದ  ಅತ್ಯುತ್ತಮ ಕಲಾಕೃತಿ ಎಂದು ಹೆಸರಾದ ದೇವಾಲಯ *ಪಟ್ಟದಕಲ್ಲು ವಿರೂಪಾಕ್ಷ ದೇವಾಲಯ*

 🔺 *ಬದಾಮಿ ಚಾಲುಕ್ಯರ ವಾಸ್ತುಶಿಲ್ಪದ ಲಕ್ಷಣಗಳು*👇👇👇🟣🟡🟢

1) "ಗರ್ಭಗೃಹ ಜೊತೆಗೆ ಸ್ತಂಬ ಮಂಟಪ( ನವರಂಗ) ಮತ್ತು ಸುಖನಾಸಿಗಳ ನಿರ್ಮಾಣ ಚಾಲುಕ್ಯರ ಕೊಡುಗೆಯಾಗಿದೆ", 

2) "ಉತ್ತರದ ನಾಗರ ಮತ್ತು ದಕ್ಷಿಣದ ದ್ರಾವಿಡದ ಶೈಲಿ ಗಳನ್ನು ಅನುಸರಿಸಿ ದೇವಾಲಯಗಳ ನಿರ್ಮಾಣ",

3) "ಚಿಕ್ಕದಾದ ತಳವಿನ್ಯಾಸ'

4) "ಕುದುರೆ ಲಾಳ ಕೃತಿ ತಳವಿನ್ಯಾಸ"( ದುರ್ಗಾದೇವಿ ದೇವಾಲಯ)

5) "ಚೌಕಾಕಾರ ಗರ್ಭಗೃಹ," 

6) "ಗರ್ಭಗುಡಿಯ ಮೇಲೆ ಪಿರಮಿಡ್ಗಳ ಆಕೃತಿಯ ಶಿಖರಗಳ ಯೋಜನೆ", 

7) "ಏಕಕೂಟ,ದ್ವಿಕೋಟ, ತ್ರಿಕೂಟ ದೇವಾಲಯಗಳ ರಚನೆ", 

8) "ಕೆಂಪು ಮರಳುಗಲ್ಲಿನ ಬಳಕೆ," 

 🔹"ಐಹೊಳೆ ಮತ್ತು ಪಟ್ಟದಕಲ್ಲುಗಳು" ಇರುವ ಸುಂದರವಾದ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು= *ಚಾಲುಕ್ಯರು*( ಜೈಲರ್-2018)

 ಬಾದಾಮಿ ಚಾಲುಕ್ಯರ ಅಭಿವೃದ್ಧಿಪಡಿಸಿದ ಶೈಲಿ- *ವೇಸರ ಶೈಲಿ*(PSI-2013)

 *ಬಾದಾಮಿಯಲ್ಲಿನ ಪ್ರಮುಖ ದೇವಾಲಯಗಳು*, 👇👇🛕🛕

🛕 "ಭೂತನಾಥ ದೇವಾಲಯ", 

🛕 "ಮೂಲಗಿತ್ತಿ ಶಿವಾಲಯ".

🛕 "ಲಕುಮೀಶ  ದೇವಾಲಯ", 

🛕 "ವಿರೂಪಾಕ್ಷ ದೇವಾಲಯ",

🔸 ಬಾದಾಮಿಯಲ್ಲಿ 4 ಗುಹಾಂತರ ದೇವಾಲಯಗಳು ಕಂಡುಬರುತ್ತವೆ, 

🔺"1ನೇ ಗುಹೆ "= *ಶೈವ ಧರ್ಮಕ್ಕೆ ಸೇರಿದೆ*, 
( ಈ ಗುಹೆಗಳಲ್ಲಿ *ಅರ್ಧನಾರೇಶ್ವರ ಮತ್ತು ನಟರಾಜನ* ಶಿಲ್ಪಗಳು ಕಂಡುಬರುತ್ತವೆ, 

🔺2 ಮತ್ತು 3ನೇ ಗುಹೆಗಳು= *ವೈಷ್ಣವ ಧರ್ಮಕ್ಕೆ ಸೇರಿವೆ*
(2ನೇ ಗುಹೆಗಳಲ್ಲಿ *ವರಹ ಮತ್ತು ವಾಮನ ಉಬ್ಬುಶಿಲ್ಪಗಳು* ಮತ್ತು ಕಂಡುಬರುತ್ತವೆ, *3ನೇ ಗುಹೆ ಅತ್ಯಂತ ದೊಡ್ಡದು*)

🔺4ನೇ ಗುಹೆ= *ಜೈನಧರ್ಮಕ್ಕೆ ಸೇರಿದೆ*
( ಈ ಗುಹೆಯಲ್ಲಿ *ಮಹಾವೀರ ಮಹಾವೀರ ಶಿಷ್ಯ ಗೌತಮ ಮತ್ತು 23ನೇ ತೀರ್ಥಂಕ ಪಾರ್ಶ್ವನಾಥನ ಶಿಲ್ಪಗಳಿವೆ*.)

🔹 ಪಟ್ಟದಕಲ್ಲಿನ ಮೊದಲ ಹೆಸರು= *ಕಿಸುವೊಳಲು*


_________________________________________
ಸಂಗ್ರಹ✍️T.A.ಚಂದ್ರಶೇಖರ

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು