✍️ *ಬಾದಾಮಿ ಚಾಲುಕ್ಯರ ಬಗ್ಗೆ ಸಂಕ್ಷಿಪ್ತ ಮಾಹಿತಿ, {540-753}*👇👇👇
🔹ಬಾದಾಮಿ ಚಾಲುಕ್ಯ ರಾಜ್ಯವನ್ನು ಸ್ಥಾಪಿಸಿದವರು= *ಜಯಸಿಂಹ*(SDA-2019)
🔸ಚಾಲುಕ್ಯ ರಾಜಧಾನಿ= *ಬಾಗಲಕೋಟೆ ಜಿಲ್ಲೆಯ ಬಾದಾಮಿ ಅಥವಾ ವಾತಾಪಿ*(PSI-2015/PC-2014/RSI/PSI-2016)
🔹ಪೂರ್ವ ಚಾಲುಕ್ಯರ ರಾಜಧಾನಿ= *ವೆಂಗಿ*
(PC/ಲೆಕ್ಚರ್-2012)
🔸 ರಾಜಲಾಂಛನ= *ಬಲ ಮುಖ ವರಹ*
🔹ಪ್ರಸಿದ್ಧ ದೊರೆ= *2ನೇ ಪುಲಿಕೇಶಿ*
🔸ಚಾಲುಕ್ಯರ ಆರಂಭದ ರಾಜಧಾನಿ= *ಐಹೊಳೆ*
🔹ಸಾಮ್ರಾಜ್ಯದ ವಿಸ್ತಾರ= *ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೆ*
🔸 ಸೈನ್ಯದ ಹೆಸರು= *ಕರ್ನಾಟ ಬಲ*(FDA-2019)
🔹ಬಾದಾಮಿಯ ಮೂರನೇ ಗುಹಾಲಯ ರಚಿಸಿದವರು= *ಮಂಗಳೇಶ*
🔸ವಾತಾಪಿ ನಿರ್ಮಾಪಕ= *ಒಂದನೇ ಕೀರ್ತಿವರ್ಮ*
🔹 ಎರಡನೇ ಪುಲಿಕೇಶಿಯಿಂದ ಸೋತ ರಾಷ್ಟ್ರಕೂಟರ ಸಾಮಂತರು= *ಗೋವಿಂದ ಮತ್ತು ಅಷ್ಟಯಿಕ*
🔸ಎರಡನೇ ಪುಲಿಕೇಶಿ ವಿವಾಹದ ಕದಂಬ ಅಳುಪರ ರಾಜಕುಮಾರಿ= *ಮಹಾದೇವಿ*
🔹ಎರಡನೇ ಪುಲಿಕೇಶಿಯಿಂದ ಸೋತ ಉತ್ತರಪಥೇಶ್ವರ= *ಹರ್ಷವರ್ಧನ*
(SDA-2011)
🔹2ನೇ ಪುಲಿಕೇಶಿ ಹರ್ಷವರ್ಧನನನ್ನು ಸೋಲಿಸಿದ ಯುದ್ಧ= *ನರ್ಮದಾ ನದಿ ಯುದ್ಧ*(634)
🔸 ಎರಡನೇ ಪುಲಿಕೇಶಿಯಯಿಂದ ಸೋತ ಪಲ್ಲವರ ದೊರೆ= *ಮಹೇಂದ್ರವರ್ಮ*( ಫುಲ್ಲಲೂರ ಕದನ)
🔹 ಇಮ್ಮಡಿ ಪುಲಿಕೇಶಿಯು *ಏಳನೇ ಶತಮಾನ ಆರಂಭದಲ್ಲಿ ರಾಜ್ಯವನ್ನು ಆಳುತ್ತಿದ್ದನು*, (PSI-2002)
🔸 ಎರಡನೇ ಪುಲಿಕೇಶಿಯ ಬಿರುದುಗಳು= *ಸತ್ಯಾಶ್ರಯ, ದಕ್ಷಿಣಪಥೇಶ್ವರ, ಪರಮ ಭಾಗವತ, ಪೃಥ್ವಿ ವಲ್ಲಭ,*
🔹13 ವರ್ಷ ಪಲ್ಲವರ ವಶದಲ್ಲಿದ್ದ ಬಾದಾಮಿಯನ್ನು ಮರು ವಶಪಡಿಸಿಕೊಂಡ ಚಾಲುಕ್ಯ ರಾಜ= *ಒಂದನೇ ವಿಕ್ರಾಮದಿತ್ಯ*
🔸ಎರಡನೇ ಪುಲಿಕೇಶಿಯ ಆಸ್ಥಾನಕ್ಕೆ ಭೇಟಿನೀಡಿದ ಚಿನಿ ಪ್ರವಾಸಿಗ= *ಹುಯೆನ್ ತ್ಸಾಂಗ್*(SDA-2008)
🔹ಹುಯೆನ್ ತ್ಸಾಂಗನ ಕೃತಿ= *ಸಿ-ಯು-ಕಿ*
🔹ಎರಡನೇ ಪುಲಿಕೇಶಿಯ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ ಪರ್ಷಿಯಾದ ದೊರೆ= *ಎರಡನೇ ಕುಶ್ರೋ*
🔹 ತನ್ನ ಕಂಚಿ ವಿಜಯದ ನೆನಪಿಗಾಗಿ ಕಂಚಿಯ ರಾಮೇಶ್ವರ ದೇವಸ್ಥಾನಕ್ಕೆ ದಾನ ನೀಡಿದ ಚಾಲುಕ್ಯ ರಾಜ= *ಎರಡನೇ ವಿಕ್ರಮಾದಿತ್ಯ*
🔹 ಬಾದಾಮಿ ಚಾಲುಕ್ಯರ ಆಡಳಿತದ ಘಟಕಗಳು= *ಮಹಾರಾಷ್ಟ್ರಕ- ರಾಷ್ಟ್ರ. ವಿಷಯ- ಭೋಗ*
🔹ಬಾದಾಮಿ ಚಾಲುಕ್ಯರ ಕಾಲದಲ್ಲಿ 14 ಕೆರೆಗಳನ್ನು ಕಟ್ಟಿಸಿದ ಉದಾಹರಣೆ ಇರುವ ಊರು= *ಗುಡಿಗೇರಿ*
🔸ಐಹೊಳೆ-500 ಎಂಬ ವ್ಯಾಪಾರಿ ಶ್ರೇಣಿ ಆರಂಭವಾಗಿದ್ದು= *ಬಾದಾಮಿ ಚಾಲುಕ್ಯರ ಕಾಲದಲ್ಲಿ*
🔹ಚಾಲುಕ್ಯರ ವಿಕ್ರಮ ಶಕೆ ಆರಂಭವಾಗಿದ್ದು= *ಕ್ರಿ.ಶ. 1076*(FDA-1997)
🔹ಬಾದಾಮಿ ಚಾಲುಕ್ಯರ ಕಾಲದ ಜೈನ ದೇವಾಲಯಗಳು ಕಂಡುಬರುವ ಸ್ಥಳಗಳು= *ಐಹೊಳೆ ಮತ್ತು ಬಾದಾಮಿ*
🔸ಪಟ್ಟದಕಲ್ಲಿನ ವಿರೂಪಾಕ್ಷ ( ಲೋಕೇಶ್ವರ)ದೇವಾಲಯ ಕಟ್ಟಿಸಿದ ರಾಣಿ= *ರಾಣಿ ಲೋಕಮಹಾದೇವಿ*
🔸 ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಾಲಯ ಕಟ್ಟಿದ ರಾಣಿ= *ರಾಣಿ ತ್ರೈಲೋಕಮಹಾದೇವಿ*
🔹 ನೃತ್ಯ ವಿದ್ಯಾದರೆ ಎಂಬ ಬಿರುದು ಹೊಂದಿದ ರಾಣಿ= *ಲಚ್ಚಲ ದೇವಿ*
🔹ಯುನೆಸ್ಕೊ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿರುವ ಚಾಲುಕ್ಯರ ಐತಿಹಾಸಿಕ ಸ್ಥಳ= *ಪಟ್ಟದಕಲ್ಲು*
🔸 ಕನ್ನಡ ತ್ರಿಪದಿ ಕವಿತೆ ರೂಪದಲ್ಲಿರುವ ಬಾದಾಮಿ ಚಾಲುಕ್ಯರ ಕಾಲದ ಶಾಸನ
*ಕಪ್ಪೆ ಅರೆಭಟ್ಟನ ಶಾಸನ*
🔹ಬಾದಾಮಿ ಚಾಲುಕ್ಯರ ಕಾಲದ ಐಹೊಳೆ ಶಾಸನ ರಚಿಸಿದವರು= *ರವಿಕೀರ್ತಿ*
🔸ಬದಾಮಿ ಚಾಲುಕ್ಯರ ಪುಲಿಕೇಶಿಯ ಸೊಸೆಆದ ವಿಜ್ಜಿಕಾ ಬರೆದ ನಾಟಕ
*ಕೌಮುದಿ ಮಹೋತ್ಸವ*
🔹 ಪಟ್ಟದಕಲ್ಲಿನ ವಿಜಯೇಶ್ವರ ದೇವಾಲಯ ನಿರ್ಮಿಸಿದವರು=
*ವಿಜಯಾದಿತ್ಯ*
🔸 ಐಹೊಳೆ ಶಾಸನದ ಭಾಷೆ= *ಸಂಸ್ಕೃತ*
🔹 ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ಕೇಂದ್ರಗಳು.
*ಬದಾಮಿ,ಪಟ್ಟದಕಲ್ಲು, ಐಹೊಳೆ*.
🔸ಭಾರತೀಯ ದೇವಾಲಯಗಳ ತೊಟ್ಟಿಲು ಎಂದು ಕರೆಯಲ್ಪಡುವ ಕಲಾಕೇಂದ್ರ= *ಐಹೊಳೆ*( ಕರೆದವರು= *ಪರ್ಸಿಬ್ರೌನ್*) (DR-2008)
🔹ಭಾರತದ ಸಂಸತ್ತನ್ನು ಹೋಲುವ ದೇವಾಲಯ= *ದುರ್ಗಾ ದೇವಾಲಯ*
🔸ದ್ರಾವಿಡ ವಾಸ್ತುಶಿಲ್ಪದ ಅತ್ಯುತ್ತಮ ಕಲಾಕೃತಿ ಎಂದು ಹೆಸರಾದ ದೇವಾಲಯ *ಪಟ್ಟದಕಲ್ಲು ವಿರೂಪಾಕ್ಷ ದೇವಾಲಯ*
🔺 *ಬದಾಮಿ ಚಾಲುಕ್ಯರ ವಾಸ್ತುಶಿಲ್ಪದ ಲಕ್ಷಣಗಳು*👇👇👇🟣🟡🟢
1) "ಗರ್ಭಗೃಹ ಜೊತೆಗೆ ಸ್ತಂಬ ಮಂಟಪ( ನವರಂಗ) ಮತ್ತು ಸುಖನಾಸಿಗಳ ನಿರ್ಮಾಣ ಚಾಲುಕ್ಯರ ಕೊಡುಗೆಯಾಗಿದೆ",
2) "ಉತ್ತರದ ನಾಗರ ಮತ್ತು ದಕ್ಷಿಣದ ದ್ರಾವಿಡದ ಶೈಲಿ ಗಳನ್ನು ಅನುಸರಿಸಿ ದೇವಾಲಯಗಳ ನಿರ್ಮಾಣ",
3) "ಚಿಕ್ಕದಾದ ತಳವಿನ್ಯಾಸ'
4) "ಕುದುರೆ ಲಾಳ ಕೃತಿ ತಳವಿನ್ಯಾಸ"( ದುರ್ಗಾದೇವಿ ದೇವಾಲಯ)
5) "ಚೌಕಾಕಾರ ಗರ್ಭಗೃಹ,"
6) "ಗರ್ಭಗುಡಿಯ ಮೇಲೆ ಪಿರಮಿಡ್ಗಳ ಆಕೃತಿಯ ಶಿಖರಗಳ ಯೋಜನೆ",
7) "ಏಕಕೂಟ,ದ್ವಿಕೋಟ, ತ್ರಿಕೂಟ ದೇವಾಲಯಗಳ ರಚನೆ",
8) "ಕೆಂಪು ಮರಳುಗಲ್ಲಿನ ಬಳಕೆ,"
🔹"ಐಹೊಳೆ ಮತ್ತು ಪಟ್ಟದಕಲ್ಲುಗಳು" ಇರುವ ಸುಂದರವಾದ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು= *ಚಾಲುಕ್ಯರು*( ಜೈಲರ್-2018)
ಬಾದಾಮಿ ಚಾಲುಕ್ಯರ ಅಭಿವೃದ್ಧಿಪಡಿಸಿದ ಶೈಲಿ- *ವೇಸರ ಶೈಲಿ*(PSI-2013)
*ಬಾದಾಮಿಯಲ್ಲಿನ ಪ್ರಮುಖ ದೇವಾಲಯಗಳು*, 👇👇🛕🛕
🛕 "ಭೂತನಾಥ ದೇವಾಲಯ",
🛕 "ಮೂಲಗಿತ್ತಿ ಶಿವಾಲಯ".
🛕 "ಲಕುಮೀಶ ದೇವಾಲಯ",
🛕 "ವಿರೂಪಾಕ್ಷ ದೇವಾಲಯ",
🔸 ಬಾದಾಮಿಯಲ್ಲಿ 4 ಗುಹಾಂತರ ದೇವಾಲಯಗಳು ಕಂಡುಬರುತ್ತವೆ,
🔺"1ನೇ ಗುಹೆ "= *ಶೈವ ಧರ್ಮಕ್ಕೆ ಸೇರಿದೆ*,
( ಈ ಗುಹೆಗಳಲ್ಲಿ *ಅರ್ಧನಾರೇಶ್ವರ ಮತ್ತು ನಟರಾಜನ* ಶಿಲ್ಪಗಳು ಕಂಡುಬರುತ್ತವೆ,
🔺2 ಮತ್ತು 3ನೇ ಗುಹೆಗಳು= *ವೈಷ್ಣವ ಧರ್ಮಕ್ಕೆ ಸೇರಿವೆ*
(2ನೇ ಗುಹೆಗಳಲ್ಲಿ *ವರಹ ಮತ್ತು ವಾಮನ ಉಬ್ಬುಶಿಲ್ಪಗಳು* ಮತ್ತು ಕಂಡುಬರುತ್ತವೆ, *3ನೇ ಗುಹೆ ಅತ್ಯಂತ ದೊಡ್ಡದು*)
🔺4ನೇ ಗುಹೆ= *ಜೈನಧರ್ಮಕ್ಕೆ ಸೇರಿದೆ*
( ಈ ಗುಹೆಯಲ್ಲಿ *ಮಹಾವೀರ ಮಹಾವೀರ ಶಿಷ್ಯ ಗೌತಮ ಮತ್ತು 23ನೇ ತೀರ್ಥಂಕ ಪಾರ್ಶ್ವನಾಥನ ಶಿಲ್ಪಗಳಿವೆ*.)
🔹 ಪಟ್ಟದಕಲ್ಲಿನ ಮೊದಲ ಹೆಸರು= *ಕಿಸುವೊಳಲು*
_________________________________________
ಸಂಗ್ರಹ✍️T.A.ಚಂದ್ರಶೇಖರ
No comments:
Post a Comment