ಶಿಕ್ಷಣವೇ ಶಕ್ತಿ

Tuesday, 22 December 2020

ಇಂದಿನ ಹೋಮ ವರ್ಕ್ 2️⃣2️⃣ 1️⃣2️⃣ 2️⃣0️⃣2️⃣0️⃣

*ದಿನಾಂಕ 22-12-2020 ವಾರ ಮಂಗಳವಾರ ಇಂದಿನ ಹೋಂವರ್ಕ್* 
~~~~~~~~~~~~~~~~~~~
 4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ  ಹೋಂವರ್ಕ್ 

 *ಪಾಠ- 25-- ನಮ್ಮ ರಾಜ್ಯ ನಮ್ಮ ಹೆಮ್ಮೆ* 
======================

 1. ಉತ್ತರ ಮೈದಾನ ಪ್ರದೇಶದಲ್ಲಿ ಎಂತಹ ಕಾಡುಗಳು ಕಂಡುಬರುತ್ತವೆ ?

2.  ಉತ್ತರ ಮೈದಾನ ಪ್ರದೇಶದ ಜನರ ಮುಖ್ಯ ಕಸುಬು ಯಾವುದು ?

3. ಉತ್ತರ ಮೈದಾನಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪಟ್ಟಿಮಾಡಿ 

ಮುಖ್ಯ ಖನಿಜಗಳು _____ ಮುಖ್ಯ ಪ್ರಾಣಿಗಳು _____
ಮುಖ್ಯ ಬೆಳೆಗಳು______

=====================
 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ -14--  ಕಾಲ*

 1. ಪೂರ್ಣಗೊಳಿಸು ಪುಟ ಸಂಖ್ಯೆ 87 

2. ಅಭ್ಯಾಸ 14.3 ಸರಿಯಾದುದನ್ನು ಗುರುತಿಸಿ .

======================
 *4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪಾಠ -10 ಪದ್ಯ --ಸರ್ವಜ್ಞನ ತ್ರಿಪದಿಗಳು* 

1.ಪದ್ಯವನ್ನು ಓದಿ ಬರೆಯಿರಿ .

2. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

3. ಭಾಷಾ ಚಟುವಟಿಕೆ 

ಸ್ಪಷ್ಟವಾಗಿ ಓದಿ ವ್ಯತ್ಯಾಸ ಗಮನಿಸಿ .

4.  ಮಾದರಿಯಂತೆ ಪದಗಳನ್ನು ಬರೆ .

5. ಮಾದರಿಯಂತೆ ಸೂಕ್ತ ಸ್ಥಳದಲ್ಲಿ ಸ,  ಶ , ಷ ,ಸೇರಿಸಿ ಪದ ರಚಿಸಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

======================
 *4 ನೇ ತರಗತಿ ಮಕ್ಕಳಿಗೆ English homework*

1. Make a pair of coins which have the same sounds.

2. List the words that are good for environment .

3. List the words that are bad for environment .

 *Write one page of neat copy writing.*

==================================

*ದಿನಾಂಕ 22-12-2020 ವಾರ ಮಂಗಳವಾರ ಇಂದಿನ ಹೋಂವರ್ಕ್* 

 *5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ -16 --ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*

1. ಭಾರತ ದೇಶದ ಈಗಿನ ಪ್ರಧಾನಮಂತ್ರಿ ________ 

2. ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿ ________

 3. ಭಾರತದ 9 ಕೇಂದ್ರಾಡಳಿತ ಪ್ರದೇಶಗಳು ಯಾವುವು ಬರೆಯಿರಿ .

 ಮೊದಲೆರಡು ಪದಗಳ ಸಂಬಂಧವನ್ನು ಗಮನಿಸಿ 3ನೇ ಪದಕ್ಕೆ ಸರಿಹೊಂದುವ 4ನೇ ಪದವನ್ನು ಬರೆ . ಪುಟ ಸಂಖ್ಯೆ 236 

======================
 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ-6 ತೂಕ ಮತ್ತು ಗಾತ್ರ* 

ಅಭ್ಯಾಸ 6.1 

1.ಕೆಳಗಿನ ವಾಕ್ಯ ರೂಪದ ಲೆಕ್ಕಗಳನ್ನು ಮಾಡಿರಿ .

2.  ಇವುಗಳನ್ನು ಪರಿವರ್ತಿಸಿರಿ 

ಪುಟ ಸಂಖ್ಯೆ 72

=======================
 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪದ್ಯ-8 --ಮೂಡಲ ಮನೆ* 


1. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .

1.  ನಮ್ಮೂರ _________
___________
___________ಹಾಂಗ ಬಿಳಲ||

2.  ಮೂಡ್ಯಾವ |_______
____________
_____________ ಭಾಗ ಮಾತ್ರ|| 

3. ವ್ಯಾಕರಣ ಮಾಹಿತಿ ಓದಿರಿ

4.  ಭೂತಕಾಲ ವರ್ತಮಾನಕಾಲ ಭವಿಷ್ಯತ್ಕಾಲ ಉದಾಹರಣೆಗಳನ್ನು ಓದಿರಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

======================

 *5 ನೇ ತರಗತಿ ಮಕ್ಕಳಿಗೆ English homework*

1. Choose and write the opposites of the following words. From those given in brackets. 

Page no 41

2. Fill in the blanks with the correct verb forms of the words given in brackets.

Page no 43.

==================================

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
*ವಾರ ಮಂಗಳವಾರ*
 *=========================* 
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

  ಭಾಗ-2

ಅಧ್ಯಾಯ 11
 *ಬೀಜ ಗಣಿತ* 

ಅಂಕ ಗಣಿತ ಎಂದರೇನು?

ರೇಖಾಗಣಿತ ಎಂದರೇನು?

ಬೀಜಗಣಿತ ಎಂದರೇನು?

ಅಭ್ಯಾಸ  11.1


ಪುಟ ಸಂಖ್ಯೆ  97 ರಿಂದ 104

*_______________________________* 
*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪಾಠ 8
 *ಕರ್ನಾಟಕ ಏಕೀಕರಣ* 


 *ವ್ಯಾಕರಣ ಮಾಹಿತಿ* 
ಸಂಸ್ಕೃತ ಸಂಧಿಗಳು
1. ವೃದ್ಧಿ ಸಂಧಿ

2. ಯನ್ ಸಂಧಿ

ಪ್ರಬಂಧ ರಚನೆ
 
ಪುಟ ಸಂಖ್ಯೆ   64 ರಿಂದ 65

 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 
______________________________
*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 7

Poem
*My people*

Write the names of the the professions:

1. A person who mends shoes.

2. A person who stitches clothes.

3. Person who make ornaments.

4. A person who represents people in court.

5. A person who works in the field.

6. A person who sells fruits and vegetables.

7. Do you know no any other professions?

8. Write them down and discuss the nature of work.

Read and memorize this poem.

On page number 123

*Daily one page neatly*
*_______________________*

*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವರ್ಕ*

ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ* 

ಭಾಗ-2

ಪಾಠ 1

*ನಮ್ಮ ಕರ್ನಾಟಕ (ಮುಂದುವರೆದ ಭಾಗ)*

ಕಲಬುರ್ಗಿ ವಿಭಾಗ

1. ಕಲಬುರ್ಗಿ ವಿಭಾಗದಲ್ಲಿ ಸ್ವಾತಂತ್ರ ಹೋರಾಟದ ಜೊತೆಯಲ್ಲಿ ಮತ್ತೆರಡು ಚಳುವಳಿಗಳು ನಡೆದವು. ಅವು ಯಾವುವು?

2. ನಿಜಾಮನ ಖಾಸಗಿ ಸೇನೆಯ ಹೆಸರೇನು?

3. ಕಲಬುರಗಿ ವಿಭಾಗದಲ್ಲಿ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಆರಂಭವಾದ ಎರಡು ರಾಷ್ಟ್ರೀಯ ಶಾಲೆಗಳ ಹೆಸರನ್ನು ಬರೆಯಿರಿ.

4. ಹೈದರಾಬಾದ್ ನಿಜಾಮರ ಸಂಸ್ಥಾನ ಯಾವ ದಿನಾಂಕದಂದು ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿತು.

5. ಕಲಬುರಗಿ ವಿಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರನ ಹೆಸರೇನು?

ಪುಟ ಸಂಖ್ಯೆ  9 ರಿಂದ 10

*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಪಾಠ 8
 *ದೇಹದ ಚಲನೆಗಳು* 

1. ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೇಗೆ ಚಲಿಸುತ್ತವೆ?

2. ಕೀಲುಗಳು ಅಥವಾ ಸಂಧಿಗಳು ಎಂದರೇನು?

3. ತಿರುಗಣಿ ಎಂದರೇನು?

4. ಸ್ಥಿರ ಕೀಲುಗಳು ಎಂದರೇನು?

5. ಮಾನವನ ಅಸ್ಥಿಪಂಜರ ಯಾವುದರಿಂದ ನಿರ್ಮಿತ ವಾಗಿರುತ್ತದೆ?

6. ಮಾನವನ ಪಕ್ಕೆಲುಬು ಗೂಡು ಯಾವ ಭಾಗದಲ್ಲಿರುತ್ತದೆ?

7. ಕಶೇರುಕ ಮತ್ತು ಅ ಕಶೇರುಕ ಎಂದರೇನು?

ಅಭ್ಯಾಸಗಳು

ಪುಟ ಸಂಖ್ಯೆ  97 ರಿಂದ 103

*__________________________*
*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 

 पाठ - 4

 बारहखड़ी  का अभ्यास और लिखो

अभ्यास

शब्द बनाओ 


 पेज नंबर 48 -50
==================================

*ಇಂದಿನ ಹೋಮ ವರ್ಕ್* 
 *ದಿನಾಂಕ 22-12-2020* 
 *ವಾರ ಮಂಗಳವಾರ* 
 *========================* 
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

 *ಭಾಗ-2* 
 ಅಧ್ಯಾಯ 14
 *ಘಾತಾಂಕಗಳು ಮತ್ತು ಘಾತಗಳು* 

ಅಭ್ಯಾಸ 14.3



ಪುಟ ಸಂಖ್ಯೆ 148 ರಿಂದ 150

*___________________________* 
*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪಾಠ-8
 *ಸಂಕ್ರಾಂತಿಯಂದು ಸುಖ ದುಃಖ* 

ಅಭ್ಯಾಸ

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

ಇ. ಹೊಂದಿಸಿ ಬರೆಯಿರಿ.

ಈ. ಕೆಳಗೆ ನೀಡಿರುವ ಪಟ್ಟಿಯಲ್ಲಿ ರಾಷ್ಟ್ರೀಯ ಅಥವಾ ನಾಡಹಬ್ಬಗಳ ಮಹತ್ವವನ್ನು ಐದು-ಆರು ವಾಕ್ಯಗಳಲ್ಲಿ ತಿಳಿಸಿ.

ಪುಟ ಸಂಖ್ಯೆ 85 

 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 

________________________________

*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*

Unit 7 
Poem
 *DEAR GRANDMA AND GRANDPA* 

C2. Discuss with your partner and answer the following questions

--> how do you express your love for your grand parents?

C3. Observe that the world *two* in line five rhymes with the word *you* in line six. Can you find the other rhyming words in the poem?


On page number 123 
 
*Daily one page lesson*
*_______________________*

*7 ನೆ ಯ ತರಗತಿ ಮಕ್ಕಳಿಗೆ  ಸಮಾಜ  *ವಿಜ್ಞಾನ ಹೋಮ  ವರ್ಕ್*

 *ಭಾಗ-2* 
 ಭೂಗೋಳ ವಿಜ್ಞಾನ

ಪಾಠ - 12

*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*

 ಅಭ್ಯಾಸಗಳು

ಪುಟ ಸಂಖ್ಯೆ  123 ರಿಂದ 126
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಭಾಗ 2

ಅಧ್ಯಾಯ 13
*ಚಲನೆ ಮತ್ತು ಕಾಲ*
ವಿವಿಧ ರೀತಿಯ ಕೆಲವು ಚಲನೆಗಳನ್ನು ಬರೆಯಿರಿ.

ಚಲನೆ ಎಂದರೇನು?

ಜವ ಎಂದರೇನು?

ಏಕರೂಪವಲ್ಲದ ಚಲನೆ ಮತ್ತು ಏಕರೂಪ ಚಲನೆ ಯ ನಡುವಿನ ವ್ಯತ್ಯಾಸವೇನು?

ಸರ ಲೋಲಕ ಎಂದರೇನು?

ಗುಂಡು ಎಂದರೇನು?


ಪುಟ ಸಂಖ್ಯೆ 46 ರಿಂದ 50
*__________________________*
*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*

 *पाठ  5* 

*हमारे राष्ट्रीय प्रतीक*

*अभ्यास* 

 2. निम्नलिखित वाक्यों के सामने सही (✓) या गलत (x) का निशान लगाओ:

2. पढ़ो और समझो

3. बिंदुओं को मिलाकर मोर का चित्र बनाओ और उसमें रंग भरो

4. सोचो, सही शब्द चुनो,  चित्रों के आगे लिखो


 पेज नंबर  -  37 to 38
==================================
✍️  T. A. ಚಂದ್ರಶೇಖರ
✍️ ಶ್ರೀಮತಿ ವನಿತಾ ರಮೇಶ

ಇಂದಿನ ಹೋಮ ವರ್ಕ್ 2️⃣2️⃣ 1️⃣2️⃣ 2️⃣0️⃣2️⃣0️⃣

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

ಈ ಕೆಳಗಿನ ಸಂಖ್ಯೆಗಳಿಗೆ ಸಂಕಲನ ಬರೆಯಿರಿ

1. 102 + 192 =

2. 230 + 249 =

3. 613 + 263 =

4. 644 + 133 =

5. 772 + 242 =

ಈ ಸಂಖ್ಯೆಗಳಿಗೆ ವ್ಯವಕಲನ ಮಾಡಿರಿ

1. 151 - 110 =

2. 127 -122 =

3. 613 - 213 =

4. 424 - 313 =

5. 742 - 411 =

2 ರಿಂದ 15ರ ವರೆಗೆ ಮಗ್ಗಿಯ ಕೋಷ್ಟಕ ರಚಿಸಿ ಬರೆಯಿರಿ. *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
 *ರೇಖಾಭ್ಯಾಸ* 
 *ಅಕ್ಷರಾಭ್ಯಾಸ 4* 

 *ಲ ಈ ಊ ಕ* 
ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 49

ನೀಡಿರುವ ಪದಗಳಲ್ಲಿ ಬಿಟ್ಟಿರುವ ಅಕ್ಷರವನ್ನು ಆವರಣದಲ್ಲಿರುವ ಅಕ್ಷರಗಳಿಂದ ಗುರುತಿಸಿ ಬರೆಯಿರಿ
1. ...... ದ.(ಕ ಲ ಊ)

2.  .....ಗ ( ಕ ಈ ಲ)

3.  .... ಟಕ(ಕ ಈ ಲ )

4.  ....... ರಟ  (ಈ ಕ ಲ)
ಪುಟ ಸಂಖ್ಯೆ 52
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *U*  under - ಅಂಡರ್ - ಒಳಗೆ.
unit - ಯೂನಿಟ್ - ಘಟಕ.
umbrella - ಅಂಬ್ರೆಲಾ - ಛತ್ರಿ.
Uniform - ಯೂನಿಫಾರ್ಮ್ - ಶಾಲಾ ಉಡುಪು.

 *V*  van - ವ್ಯಾನ್- ವಾಹನ.
Violin - ವಯಲಿನ್- ಪಿಟೀಲು.
vacate - ವಾಕ್ಯಾಟ್ - ಬರಿದುಮಾಡು.
verb - ವರ್ಬ್ - ಕ್ರಿಯಾಪದ

*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 6
 *ನಮ್ಮ ಮನೆ* 
1. ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?

2. ನಿನ್ನ ಮನೆಯ ಹತ್ತಿರ ಯಾರು ಯಾರು ಮನೆಗಳಿವೆ?

3. ನಿನ್ನ ಮನೆಯ ಪೂರ್ಣ ಜವಾಬ್ದಾರಿ ಯಾರ ಮೇಲೆ ಇದೆ?

4. ನಿಮ್ಮ ಮನೆಯ ಅಕ್ಕಪಕ್ಕ ಇರುವ ವಸ್ತುಗಳ ಹೆಸರನ್ನು ಬರೆ.

==================================
*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

4 ಅಂಕಿಯ ಸಂಖ್ಯೆಗಳನ್ನು ಸಂಕಲನ ಮಾಡಿರಿ.
1. 3221 + 2211 =

2. 7191 + 2011 = 

3. 3426 + 2616 =

4. 3366 + 1633 =

5. 3531 + 1211 =

6. 885 + 1113 =

4 ಅಂಕಿಯ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ

1. 5514 - 2213 =

2. 6951 - 3351 = 

3. 8862 - 5551 =

4. 9966- 7633 =

5. 9478 - 9346 =

6. 9099 - 2055 =

*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 7
 *ಅರಿವೇ ಗುರು* ಗದ್ಯ     

ಆವರಣದಲ್ಲಿರುವ ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳ ತುಂಬಿರಿ.
1. ನರಿಗೆ ದೂರದಲ್ಲಿ ತೋಟದ...... ಕಾಣಿಸಿತು
(ಕೊಳವೊಂದು, ಗುಹೆಯೊಂದು, ಮನೆಯೊಂದು)

2. ಸಮಯ ಸಾಧಿಸಿ ಸ್ವಲ್ಪ ದೂರದಲ್ಲಿ........(ಮಲಗಿತು, ನಿಂತಿತು, ಕುಳಿತಿತು)

3. ಕೋಳಿಗಳನ್ನು ಕಂಡು ನರಿಯ ಮರಿಯು ಮನದಲ್ಲೇ.......(ಕುಗ್ಗಿತು, ಓಡಿತು, ಹಿಗ್ಗಿತು).

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು
1. "ಅಮ್ಮ ಎಷ್ಟೊಂದು ಕೋಳಿಗಳು?"
ಯಾರು ಹೇಳಿದರು?......
ಯಾರಿಗೆ ಹೇಳಿದರು?......

2. "ನಿಮ್ಮ ಹಲ್ಲುಗಳು ಬಲಹೀನವಾಗಿವೆಯಲ್ಲವೇ?"
ಯಾರು ಹೇಳಿದರು? ......
ಯಾರಿಗೆ ಹೇಳಿದರು?......

3. "ನಮ್ಮ ಹಲ್ಲುಗಳು ಗಟ್ಟಿಯಾಗಿಯೇ ಇವೆ"
ಯಾರು ಹೇಳಿದರು? ......
ಯಾರಿಗೆ ಹೇಳಿದರು?......
*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Raju is going to school.

2. Sarha is going to school.

3. Daddy is going to office.

ಈ ಮೇಲಿನ ವಾಕ್ಯಗಳನ್ನು ಒಂದೇ ಪುಟದಲ್ಲಿ3 ಸಾರಿ ನಕಲು ಮಾಡಿ ಬರೆಯಿರಿ.
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 6 
 *ಬಗೆ ಬಗೆಯ ಆಹಾರ*

1. ಸಸ್ಯಹಾರಿಗಳು ಎಂದರೇನು?ಐದು ಸಸ್ಯಹಾರಿ ಗಳನ್ನು ಬರೆಯಿರಿ.

2.  ಮಿಶ್ರಹಾರಿಗಳು ಎಂದರೇನು? 5 ಮಿಶ್ರಹಾರಿ ಗಳನ್ನು ಬರೆಯಿರಿ.

3. ಮಾಂಸಹಾರಿಗಳು ಎಂದರೇನು? 5 ಮಾಂಸಹಾರಿಗಳು  ಬರೆಯಿರಿ

==================================

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 9
*ಹಣ*

1. ಒಂದು ರೂಪಾಯಿಯಲ್ಲಿ ಐವತ್ತು ಪೈಸೆಯ ನಾಣ್ಯ_____ ಇರುತ್ತವೆ.

2. ಎರಡು ರೂಪಾಯಿಯಲ್ಲಿ 50 ಪೈಸೆಯ____ ನಾಣ್ಯಗಳು ಇರುತ್ತದೆ.

3. 700 ಪೈಸೆಗಳು _______ ರೂಪಾಯಿಗೆ ಸಮ.

4. ₹20 ಇಲ್ಲಿ 5ರೂ ___ ನಾಣ್ಯಗಳಿವೆ.

ಅಭ್ಯಾಸ 9.1


ಪುಟ ಸಂಖ್ಯೆ 48 ರಿಂದ 49
  
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 2
*ನನ್ನ ಕನಸು*

ಹೊಸ ಪದಗಳ ಅರ್ಥ

ಟಿಪ್ಪಣಿ


 *ಅಭ್ಯಾಸ* 

ಅ. ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

ಪುಟ ಸಂಖ್ಯೆ 10 ರಿಂದ 11
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

*The Sun on a Holiday*

New words

 Answer the following questions in a word, a phrase or a sentence each.
1. Who disappeared from the sky suddenly?

2. "Something is wrong with the sun. Maybe he is ill". Who said this?

3. Why was the sun shocked?

4. What did the sun decide to do in the end?

Fill in the blanks with the words given below.

On page number 123 to 126
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 25
*ನನ್ನ ಜಿಲ್ಲೆ - ನಿನ್ನ ಜಿಲ್ಲೆ*

1. ನಿನ್ನ ಜಿಲ್ಲೆಯ ಹೆಸರೇನು?

2. ನಿನ್ನ ಜಿಲ್ಲೆಯಲ್ಲಿ ಒಟ್ಟು ತಾಲೂಕುಗಳು ಎಷ್ಟು?

3. ನಿನ್ನ ತಾಲೂಕು ಯಾವುದು?

4. ನೀನು ವಾಸಿಸುವ ಗ್ರಾಮದ ಹೆಸರೇನು?

5. ನೀನು ನೋಡಿರುವ ಇತರೆ ಜಿಲ್ಲೆಗಳ ಹೆಸರನ್ನು ಬರೆ.


ಪುಟ ಸಂಖ್ಯೆ  192 ರಿಂದ 193
==================================
✍️ T.A. ಚಂದ್ರಶೇಖರ

Monday, 21 December 2020

ಕನ್ನಡ ವ್ಯಾಕರಣ ಮಾಹಿತಿ

ಕನ್ನಡ ಅಕ್ಷರಮಾಲೆ

ಕನ್ನಡ ಭಾಷೆಯ ವರ್ಣಮಾಲೆ


ಇತಿಹಾಸ

  • ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪುರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ.
  • ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ.
  • ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ.
  • ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ.
  • ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.
  • ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ.

10-12ನೆಯ ಶತಮಾನ

  • ಕನ್ನಡ ಲಿಪಿ 10-12ನೆಯ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಯನ್ನು ಹೊಂದಿ ಒಂದು ಮುಖ್ಯವಾದ ಹಂತವನ್ನು ಸೂಚಿಸುತ್ತಿವೆ. ಈ ಕಾಲದ ಕೆಲವು ಅಕ್ಷರಗಳು ಇನ್ನಷ್ಟು ದುಂಡಾಗಿದ್ದು ಆಧುನಿಕ ಕನ್ನಡ ಲಿಪಿಯ ಅಕ್ಷರಗಳ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕ, ರ, ಯ ಮುಂತಾದ ಅಕ್ಷರಗಳ ಮೈಕಟ್ಟು ಹೆಚ್ಚು ಕಡಿಮೆ ಈಗಿನಂತೆಯೇ ಇದೆ. ಕೆಲವು ಅಕ್ಷರಗಳ ತಲೆಕಟ್ಟು ಕೋನಾಕೃತಿಯುಳ್ಳದಾಗಿದೆ.
  • ಚ, ವ, ಮ ಮುಂತಾದ ಅಕ್ಷರಗಳ ತಲೆಕಟ್ಟಿನ ಭಾಗ ಎರಡು ಭಾಗವಾಗಿ ಬೇರ್ಪಡೆಯಾಗಿದ್ದು ತಲೆಕಟ್ಟು ಬಲಭಾಗದ ರೇಖೆಗೆ ಹೊಂದಿ ಕೊಂಡಿರುತ್ತದೆ. ಅನೇಕ ಅಕ್ಷರಗಳ ತಲೆಕಟ್ಟು ಸ್ಪಷ್ಟವಾಗಿ ಎದ್ದುಕಾಣುವಂತಿದೆ. ಮುಂದೆ 12-13ನೆಯ ಶತಮಾನದಲ್ಲಿ ಹೊಯ್ಸಳ ಅರಸರ ಅನೇಕ ಶಾಸನಗಳನ್ನು ನುಣುಪಾದ ಕಲ್ಲಿನ ಹಲಗೆಗಳ ಮೇಲೆ ಅಲಂಕಾರಯುತವಾಗಿಯೂ ಕಲಾತ್ಮಕವಾಗಿಯೂ ಬರೆಯಲ್ಪಟ್ಟಿದ್ದು ಅಲ್ಲಿಯ ಅಕ್ಷರಗಳು ಬಹು ಸುಂದರವಾಗಿ ಕಾಣುತ್ತವೆ.
  • ಈ ಅಕ್ಷರಗಳನ್ನು ಸ್ಪಷ್ಟವಾಗಿಯೂ ಹೆಚ್ಚು ದುಂಡಾಗಿಯೂ ಬರೆಯಲಾಗಿದೆ. ಇಲ್ಲಿ ಕನ್ನಡ ಲಿಪಿ ಊರ್ಜಿತಾವಸ್ಥೆಯನ್ನು ಹೊಂದಿದೆಯೆಂದು ಹೇಳಬಹುದು. ಆದರೆ ಮುಂದಿನ 2-3 ಶತಮಾನಗಳ ಕಾಲದಲ್ಲಿ ಅಂದರೆ 14-16ನೆಯ ಶತಮಾನದ ವಿಜಯನಗರ ಅರಸರ ಶಾಸನಗಳಲ್ಲಿ ಅಕ್ಷರಗಳನ್ನು ಡೊಂಕು ಡೊಂಕಾಗಿ ಬರೆಯಲಾಗಿದ್ದು ಅವುಗಳ ಜೋಡಣೆಯ ವಿಷಯದಲ್ಲಿ ಅಷ್ಟು ಗಮನವನ್ನಿತ್ತಿಲ್ಲ.
  • ಆದುದರಿಂದ ಕಲ್ಯಾಣಿ ಚಾಳುಕ್ಯ ಹಾಗೂ ಹೊಯ್ಸಳರ ಕಾಲದ ಲಿಪಿಯ ಅಕ್ಷರಗಳಂತೆ ವಿಜನಗರ ಕಾಲದ ಲಿಪಿಯ ಅಕ್ಷರಗಳು ಅಂದವಾಗಿ ಕಾಣುವುದಿಲ್ಲ. ಆದರೂ ಈ ಕಾಲದ ಲಿಪಿಯ ಅಕ್ಷರಗಳು ಕನ್ನಡ ಲಿಪಿಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ಅ, ಞ, ಣ, ಷ, ಳ ಮುಂತಾದ ಅಕ್ಷರಗಳು ಈಗಿನ ರೂಪಗಳನ್ನು ಹೆಚ್ಚಾಗಿ ಹೋಲುತ್ತವೆ.
  • ದ, ಡ, ಪ ಮುಂತಾದ ಅಲ್ಪಪ್ರಾಣದ ಅಕ್ಷರಗಳಿಗೆ ಕೆಳಗಡೆ ಒಂದು ರೇಖೆಯನ್ನು ಸೇರಿಸಿ ಧ, ಢ, ಫ, ಮುಂತಾದ ಮಹಾಪ್ರಾಣಗಳ ಸಂಜ್ಞೆಗಳನ್ನು ಸೂಚಿಸಲಾಗಿದೆ. ಇದುವರೆಗೆ ಅಕ್ಷರಗಳ ಮೇಲ್ಭಾಗದಲ್ಲಿ ಒಂದು ಚುಕ್ಕೆ ಅಥವಾ ಚಿಕ್ಕ ಬಿಂದುವಿನಿಂದ ಸೂಚಿಸಲ್ಪಡುತ್ತಿದ್ದ ಅನುಸ್ವಾರವನ್ನು ಆಯಾ ಅಕ್ಷರಗಳ ಬಲಗಡೆಗೆ ಅಷ್ಟೇ ಗಾತ್ರದ ಬಿಂದುವಿನಿಂದ ತೋರಿಸಲಾಗಿದೆ.
  • 18ನೆಯ ಶತಮಾನದಲ್ಲಿ ಮೈಸೂರು ಅರಸರ ಕಾಲದಲ್ಲಿ ಕನ್ನಡ ಲಿಪಿ ವಿಜಯನಗರ ಕಾಲದ ಅಕ್ಷರಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದರೂ ಆಧುನಿಕ ಕನ್ನಡ ಲಿಪಿಗೆ ಬಹಳ ಹತ್ತಿರಬಾಗಿ ತೋರುತ್ತದೆ. ಇತ್ತೀಚೆಗೆ ಮುದ್ರಣ ಬಂದಮೇಲೆ ಇತರ ಲಿಪಿಗಳಂತೆ ಕನ್ನಡ ಲಿಪಿಯಾದರೂ ಒಂದು ಸ್ಥಿರತೆಯನ್ನು ಹೊಂದಿದ್ದರಿಂದ ಹೆಚ್ಚಿನ ವಿಕಾಸಕ್ಕೆ ಅಸ್ಪದವಿಲ್ಲದಂತಾಗಿದೆ. ಆದರೂ ಮುದ್ರಣದ ಲಿಪಿಯಲ್ಲಿ ಸಹ ಕಾಲಕಾಲಕ್ಕೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಹೆಚ್ಚಿನ ಅಂದವಾದ ಅಕ್ಷರಗಳನ್ನು ಅಚ್ಚು ಹಾಕುತ್ತಿರುವುದನ್ನು ನೋಡುತ್ತೇವೆ.

ಪರಿಣಾಮ

  • ಕನ್ನಡ ಲಿಪಿಯ ಒಂದು ವೈಶಿಷ್ಟ್ಯವೆಂದರೆ ಪ್ರಾಚೀನಕಾಲದಿಂದಲೂ ಕಾಗುಣಿತಾಕ್ಷರದ ಹೃಸ್ವ ಮತ್ತು ದೀರ್ಘ ಎ ಮತ್ತು ಏ ಕಾರಗಳನ್ನು ಹಾಗೂ ಒ ಮತ್ತು ಓ ಕಾರಗಳನ್ನು ಒಂದೇ ಸಂಜ್ಞೆಯಿಂದ ಸೂಚಿಸುತ್ತಿದ್ದು ಅವುಗಳಲ್ಲಿಯ ಹೃಸ್ವ ಮತ್ತು ದೀರ್ಘ ವರ್ಣಗಳ ಭೇದವನ್ನು ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬೇಕಾಗಿತ್ತು.
  • ಇತ್ತೀಚೆಗೆ ಅಂದರೆ 17-18ನೆಯ ಶತಮಾನದಂದೀಚೆಗೆ ಮಾತ್ರ ಕಾಗುಣಿತಾಕ್ಷರದ ದೀರ್ಘ ಏ ಕಾರ, ದೀರ್ಘ, ಓ ಕಾರ ಮತ್ತು ದೀರ್ಘ ಈ ಕಾರಗಳನ್ನು ಆಯಾ ಅಕ್ಷರಗಳ ಬಲಗಡೆ ಕೋಡಿಯುಳ್ಳ ಒಂದು ರೇಖೆಯಿಂದ ಸೂಚಿಸಲಾಗಿದೆ.

ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು.

  • 14-15ನೆಯ ಶತಮಾನಗಳಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಕೆಲವು ವ್ಯತ್ಯಾಸಗಳು ತಲೆದೋರಿದ್ದು ಮುಂದಿನ ಎರಡು ಮೂರು ಶತಮಾನಗಳಲ್ಲಿ ಗಮನಾರ್ಹವಾದ ಭೇದಗಳು ಕಂಡುಬರುತ್ತವೆ. ಆದರೂ ಅಲ್ಪ ಪ್ರಯತ್ನದಿಂದ ಕನ್ನಡಿಗರು ತೆಲುಗು ಲಿಪಿಯನ್ನೂ ಅದರಂತೆ ಆಂಧ್ರರು ಕನ್ನಡ ಲಿಪಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಬಾದಾಮಿ ಚಳುಕ್ಯರ ಕಾಲದಲ್ಲ ಕನ್ನಡ ಲಿಪಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿಯೂ ಪ್ರಚಲಿತವಿದ್ದು ಮುಂದೆ ಅಲ್ಲಿ ನಾಗರೀ ಲಿಪಿ ಬಳಕೆಗೆ ಬಂತು. * ಅಂತೂ ಮೇಲಿನ ವಿವೇಚನೆಯಿಂದ ಕನ್ನಡ ಲಿಪಿ ಸು. 2000 ವರ್ಷಕ್ಕೂ ಹೆಚ್ಚಿನ ಪರಂಪರೆಯುಳ್ಳದ್ದಾಗಿದೆಯೆಂದು ವಿಶದವಾಗುತ್ತದೆ. ಒಂದು ಲಿಪಿಯ ಹುಟ್ಟು ಮತ್ತು ಬೆಳೆವಣಿಗೆ ಅದನ್ನು ಉಪಯೋಗಿಸುವ ಜನರ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಆದರ್ಶ ಲಿಪಿಯಲ್ಲಿ ಪ್ರತಿಯೊಂದು ಶಬ್ದದ ಉಚ್ಚಾರಣೆಗೆ ಅಸಂದಿಗ್ಧವಾದ ಸಂಜ್ಞೆಯಿರಬೇಕು. ಬರೆದಂತೆ ಓದುವಂತಿರಬೇಕು. ಓದಿದಂತೆ ಬರೆಯುವಂತೆಯೂ ಇರಬೇಕು.
  • ಅಂದರೆ ಉಚ್ಚಾರಿತ ಅಕ್ಷರ ಹಾಗೂ ಲಿಖಿತ ವರ್ಣ ಇವುಗಳ ಸಂಬಂಧ ಸಂಪುರ್ಣವಿರಬೇಕು. ಈ ದೃಷ್ಟಿಯಿಂದ ವಿಚಾರಿಸಿದರೆ ಕನ್ನಡ ಲಿಪಿ ಪರಿಪುರ್ಣತೆಯನ್ನು ಪಡೆದಿದೆಯೆಂದು ಹೇಳಬಹುದು. ಈ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳು ಪುರ್ಣವಾಗಿದ್ದು ಆರ್ಯ ಮತ್ತು ದ್ರಾವಿಡ ಭಾಷೆಗಳ ಧ್ವನಿಗಳನ್ನು ಕೊರತೆಯಿಲ್ಲದೆ ಸೂಚಿಸಲಿಕ್ಕೆ ಉಪಯುಕ್ತವಾದ ಸಂಕೇತಗಳಿವೆ. ವ್ಯಂಜನಾಕ್ಷರಗಳೊಡನೆ ಸ್ವರಗಳ ಸುಂದರವಾದ ಸಂಯೋಗವಿದೆ.
  • ಹೀಗೆ ಕನ್ನಡ ಲಿಪಿ ಅಶೋಕನ ಬ್ರಾಹ್ಮೀಲಿಪಿಯಿಂದ ಉದ್ಬವಿಸಿ ಕಾಲಕ್ರಮದಿಂದ ಅನೇಕ ಮಾರ್ಪಾಟುಗಳನ್ನು ಹೊಂದಿ ವೈವಿಧ್ಯಪುರ್ಣವಾದ ವಿಕಾಸವನ್ನು ಪಡೆದು ಸಾಹಿತ್ಯ-ಸಂಸ್ಕೃತಿಗಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರದ ಉಗಮ, ವಿಕಾಸ, ಉಚ್ಚಾರಣೆ ಮುಂತಾದ ವಿವರಗಳು ಆಯಾ ಅಕ್ಷರಗಳ ಶೀರ್ಷಿಕೆಗಳಲ್ಲಿ ಬಂದಿವೆ. ಅವನ್ನು ನೋಡಬಹುದು. ಈಚೆಗೆ ಪರಭಾಷೆಯ ಪದಗಳನ್ನು ಎರವಲಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಒದಗಿಬಂದುದರಿಂದ ಈಚಿಣheಡಿ, ಈಚಿisಚಿಟ, Zoo, ಒಚಿಟಿ ಮೊದಲಾದುವನ್ನು; ಬರೆಯಲು ವಿಶಿಷ್ಟ ಸಂಜ್ಞೆಗಳನ್ನು ಬಳಸಲಾಗುತ್ತಿದೆ. ಉದಾ : ಫಾದರ್, ಫೈಸಲ್ ಜóÆ, ಮ್ಯಾನ್-ಹೀಗೆ.

ಸಂಜ್ಞಾ ಪ್ರಕರಣ :

ಕೇಶಿರಾಜನ ಸೂತ್ರದ ಪ್ರಕಾರ, ಅಕ್ಷರ ಮಾಲೆ/ವರ್ಣಮಾಲೆ ಎಂಬುದು ಒಂದು ಸಂಜ್ಞಾ ಪ್ರಕಾರವಾಗಿದೆ.

ಕವಿಗಳ್ ಸ್ವರದಿಂ ವರ್ಗದಿ

ನವರ್ಗದಿಂ ಯೋಗವಾಹದಿಂ ದೇಶಿಯಳು

ದ್ಭವಮಪ್ಪ ವರ್ಣದಿಂ ಪಂ

ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ

(ಸೂತ್ರ ವಿವರಣೆ:ಕವಿಗಳು ಸ್ವರದಿಂದ, ವರ್ಗಾಕ್ಷರಗಳಿಂದ, ಅವರ್ಗೀಯ ಅಕ್ಷರಗಳಿಂದ, ಯೋಗವಾಹ ಅಕ್ಷರದಿಂದದಿಂದ, ಮತ್ತು ದೇಶಿಯ ಅಕ್ಷರಗಳಿಂದ ಹುಟ್ಟಿರುವ ಐದು ವಿಧದ ಅಕ್ಷರಗಳನ್ನು ಶುದ್ಧಗೆ ಎಂದು ಹೇಳುತ್ತಾರೆ) (ಸೂತ್ರಸಂಖ್ಯೆ – ೪೧)

ಕನ್ನಡದ ಶುದ್ಧಾಕ್ಷರಗಳ ವಿಧಗಳು

ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು. ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ.

More information: ಶುದ್ಧಾಕ್ಷರ ವಿಧಗಳು, ಗಣನೆ ...
ಶುದ್ಧಾಕ್ಷರ ವಿಧಗಳುಗಣನೆಅಕ್ಷರಗಳು
ಸ್ವರ೧೩ಅ - ಔ
ವರ್ಗೀಯ ವ್ಯಂಜನ೨೫ಕಚಟತಪ-ವರ್ಗಗಳು
ಅವರ್ಗೀಯ ವ್ಯಂಜನ೯ಯ-ಳ
ಯೋಗವಾಹ೨ಅನುಸ್ವಾರ(ಂ), ವಿಸರ್ಗ ( ಃ)
ಹಳಗನ್ನಡ೨ಱ(ರ) ಮತ್ತು ೞ(ಳ)
ಹೊಸ ಸೇರ್ಪಡೆ೨ಫ಼ ಮತ್ತು ಜ಼
Close


ಈ ರೀತಿ ಕನ್ನಡದಲ್ಲಿ ೫೪ ಅಕ್ಷರಗಳಿವೆ (ಫ಼, ಜ಼ ಸೇರಿ). ಪ್ರಸ್ತುತ ಕನ್ನಡದಲ್ಲಿ ಬಳಸುತ್ತಿರುವುದು ೪೯ ಅಕ್ಷರಗಳು.

More information: ಕನ್ನಡ ಅಕ್ಷರಮಾಲೆ ...
ಕನ್ನಡ ಅಕ್ಷರಮಾಲೆ
ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಱ ಲ ವ ಶ ಷ ಸ ಹ ಳ ೞ
ಫ಼ ಜ಼
Close

ಕನ್ನಡ ವರ್ಣಮಾಲೆ

ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

  1. ಸ್ವರಗಳು -೧೩
  2. ವ್ಯಂಜನಗಳು -೩೪
  3. ಯೋಗವಾಹಗಳು-೦೨

ಸ್ವರ

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.

ಸ್ವರಗಳ ವಿಧ

ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರಗಳು.

ಹೃಸ್ವ ಸ್ವರ

ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು.

ದೀರ್ಘ

ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.

ವ್ಯಂಜನ

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ

  1. ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು)
  2. ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ)

ವರ್ಗೀಯ ವ್ಯಂಜನ

ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,

  1. ಕ-ವರ್ಗ, = ಕ, ಖ, ಗ, ಘ, ಙ.
  2. ಚ-ವರ್ಗ, = ಚ, ಛ, ಜ, ಝ, ಞ.
  3. ಟ-ವರ್ಗ ,= ಟ, ಠ, ಡ, ಢ, ಣ.
  4. ತ-ವರ್ಗ, = ತ, ಥ, ದ, ಧ, ನ.
  5. ಪ-ವರ್ಗ,= ಪ, ಫ, ಬ, ಭ, ಮ.

ಅವರ್ಗೀಯ ವ್ಯಂಜನ

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.

ಕನ್ನಡ ಒತ್ತಕ್ಷರಗಳು

ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ:

  1. ಕ್ಕ ಖ್ಖ ಗ್ಗ ಘ್ಘ ಙ್ಙ
  2. ಚ್ಚ ಛ್ಛ ಜ್ಜ ಝ್ಝ ಞ್ಞ
  3. ಟ್ಟ ಠ್ಠ ಡ್ಡ ಢ್ಢ ಣ್ಣ
  4. ತ್ತ ಥ್ಥ ದ್ದ ಧ್ಧ ನ್ನ
  5. ಪ್ಪ ಫ್ಫ ಬ್ಬ ಭ್ಭ ಮ್ಮ
  6. ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ

ಯೋಗವಾಹಗಳು

ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ.

  • ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ ೠ ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು.
  • ಹಳೆಗನ್ನಡದ ಮೂರು ಅಕ್ಷರಗಳಾದ ಱ, ೞ ಮತ್ತು ನ್(ನ್, ಇದಕ್ಕೆ ಯೂನಿಕೋಡ್ ಇಲ್ಲ) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು.
  • ಇಂಗ್ಲಿಷ್‌ನ F ಮತ್ತು Z ಅಕ್ಷರಗಳಿಗೆ ಫ಼ ಮತ್ತು ಜ಼ (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ.

ಸ್ವರಗಳು

  • ಕನ್ನಡದಲ್ಲಿ ಒಟ್ಟು ೧೩ ಸ್ವರಗಳಿವೆ. ಅವನ್ನು "ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ" ಹೀಗೆ 'ಅ'ಕಾರದಿಂದ ಮೊದಲು ಮಾಡಿ, 'ಔ'ಕಾರದ ವರೆಗೆ ಕೊನೆ ಮಾಡಿ, ಹೀಗೆ ಬರೆಯುವುದು ಸಂಸ್ಕೃತ ವ್ಯಾಕರಣದ ಅನುಕರಣೆ. ಸಂಸ್ಕೃತದಲ್ಲಿ ಈ ಬಗೆಯಲ್ಲಿ ಬರೆಯಲು ಕಾರಣ ಅದರ ಮಾಹೇಶ್ವರ ಸೂತ್ರ ಮತ್ತು ಸಂಧಿನಿಯಮಗಳು.
  • ಆದರೆ ಹೀಗೆ ಬರೆಯುವುದರಿಂದ ಕನ್ನಡದ ಸಂಧಿನಿಯಮಗಳನ್ನು ಅರಿಯಲು ಯಾವ ಅನುಕೂಲವೂ ಆಗುವುದಿಲ್ಲವೆಂಬ ಅಭಿಪ್ರಾಯವಿದೆ. "ಇ ಈ ಎ ಏ ಉ ಊ ಒ ಓ ಅ ಆ" ಎಂದು ಇನ್ನೊಂದು ಬಗೆಯಲ್ಲಿಯೂ ಬರೆಯುವುದುಂಟು. ಇಲ್ಲಿ ಸ್ವರಗಳನ್ನು ನಾಲಗೆಯ ತುದಿಯಿಂದ ಕೊನೆಯ ತನಕ ಅವುಗಳು ಹೊರಡುವ ನಾಲಗೆಯ ಭಾಗಕ್ಕೆ ಅನುಕ್ರಮವಾಗಿ ಬರೆಯಲಾಗಿದೆ.
  • ಅಂದರೆ "ಇ ಈ" ನಾಲಗೆಯ ತುತ್ತುದಿಯಿಂದ ಉಲಿದರೆ, "ಅ ಆ" ನಾಲಗೆಯ ಕಟ್ಟಕಡೆಯಲ್ಲಿ ಹೊರಡುವುದು. ೠ, ಱ, ೞ ಗಳನ್ನು ಬಿಟ್ಟಮಾತ್ರಕ್ಕೆ ಆ ಅಕ್ಷರಗಳು ಕನ್ನಡದಲ್ಲಿ ಇಲ್ಲ ಅಥವಾ ಜನರಿಗೆ ಉಚ್ಚರಿಸಲಾಗದೆಂದು ಹೇಳಲಾಗದು.

ಸ್ವರಗಳಲ್ಲಿ ನಾಲ್ಕು ವಿಧ

  • ಹೃಸ್ವಸ್ವರ/ಗಿಡ್ಡಸ್ವರ : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ
  • ದೀರ್ಘಸ್ವರ/ಉದ್ದಸ್ವರ. : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ
  • ಪ್ಲುತ ಸ್ವರ : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ.
  • ಸಂಧ್ಯಕ್ಷರ : ಎರಡು ಸ್ವರಗಳಿಂದ ಉಂಟಾಗುವ ಅಕ್ಷರಗಳು. ಐ, ಔ, ಏ, ಓ

ಯೋಗವಾಹಗಳು

ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ.

  1. ಅನುಸ್ವಾರ/ಬಿಂದು (ಅಂ) ಮತ್ತು
  2. ವಿಸರ್ಗ (ಅಃ)
  3. ಉಪಾಧ್ಮಾನೀಯ ‍: ೲ
  4. ಜಿಹ್ಹಾಮೂಲೀಯ : ೱ

ಉದಾಹರಣೆಗೆ: ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ
ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು.
ಉದಾ:

  • ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು )
  • ಅಞ್ಚೆ = ಅಂಚೆ
  • ತಙ್ಗಿ = ತಂಗಿ
  • ಗಣ್ಟೆ = ಗಂಟೆ
  • ಅನ್ದ = ಅಂದ
  • ಅಮ್ಬ = ಅಂಬ
  • ವಿವಿಧ ಸ್ವರಗಳೊಡನೆ ವಿಸರ್ಗ: ಅಂತಃಕರಣ, ದುಃಖ

ಕನ್ನಡ ಅಕ್ಷರಗಳ ಉಚ್ಚಾರಣೆ

More information: ಕನ್ನಡ, ದೇವನಾಗರಿ ...
ಕನ್ನಡದೇವನಾಗರಿISO 15919 ಸಂಕೇತಉಚ್ಚಾರಣೆ
ಅअa
ಆआā
ಇइi
ಈईī
ಉउu
ಊऊū
ಋऋru
ಎएe
ಏएॅē
ಐऐai
ಒओo
ಓऑō
ಔऔau
ಅಂअंaom
ಅಃअःahā
ಕकka
ಖखkha
ಗगga
ಘघgha
ಙङnga
ಚचcha
ಛछchha
ಜजja
ಝझjha
ಞञña
ಟटṭa
ಠठṭa
ಡडḍa
ಢढḍha
ಣणṇa
ತतta
ಥथtha
ದदda
ಧधdha
ನनna
ಪपpa
ಫफpha
ಬबba
ಭभbha
ಮमma
ಯयya
ರरra
ಲलla
ವवva
ಶशśa
ಷषṣa
ಸसsa
ಹहha
ಳळḷa
Close

ಕನ್ನಡ ಅಕ್ಷರಗಳನ್ನು ಬರೆಯುವ ವಿಧಾನ

More information: ಅಕ್ಷರ, ಅಕ್ಷರ ಚಿತ್ರಸಂಚಲನೆ Animation ...
ಅಕ್ಷರಅಕ್ಷರ ಚಿತ್ರಸಂಚಲನೆ Animation
ಅ
ಆ
ಇ
ಈ
ಉ
ಊ
ಋ
ಎ
ಏ
ಐ
ಒ
ಓ
ಔ
ಅಂ
ಅಃ
ಕ
ಖ
ಗ
ಘ
ಙ
ಚ
ಛ
ಜ
ಝ
ಞ
ಟ
ಠ
ಡ
ಢ
ಣ
ತ
ಥ
ದ
ಧ
ನ
ಪ
ಫ
ಬ
ಭ
ಮ
ಯ
ರ




ಲ
ವ
ಶ
ಷ
ಸ
ಹ
ಳ
Close

ವ್ಯಂಜನಗಳು

ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ. 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. ಪ್ರತಿ ವ್ಯಂಜನಕ್ಕೆ ಎರಡು ಸ್ವರಗಳಿವೆ:

  1. ಅಲ್ಪಪ್ರಾಣ: ಕ (ಕ್+ಅ)
  2. ಮಹಾಪ್ರಾಣ: ಕಾ (ಕ್+ಆ')

ಸಾಮಾನ್ಯ ವರ್ಣಮಾಲೆಯಲ್ಲಿ (ಅಕ್ಷರಮಾಲೆಯಲ್ಲಿ) ದೀರ್ಘ ಸ್ವರವು ಉಪಯೋಗವಾಗುತ್ತದೆ.

ಕನ್ನಡದ ಗುಣಿತಾಕ್ಷರಗಳು

More information: ಅ, ಆ ...
ಅಆಇಈಉಊಋಎಏಐಒಓಔಅಂಅಃ—
ಕಕಾಕಿಕೀಕುಕೂಕೃಕೆಕೇಕೈಕೊಕೋಕೌಕಂಕಃಕ್
ಖಖಾಖಿಖೀಖುಖೂಖೃಖೆಖೇಖೈಖೊಖೋಖೌಖಂಖಃಖ್
ಗಗಾಗಿಗೀಗುಗೂಗೃಗೆಗೇಗೈಗೊಗೋಗೌಗಂಗಃಗ್
ಘಘಾಘಿಘೀಘುಘೂಘೃಘೆಘೇಘೈಘೊಘೋಘೌಘಂಘಃಘ್
ಙಙಾಙಿಙೀಙುಙೂಙೃಙೆಙೇಙೈಙೊಙೋಙೌಙಂಙಃಙ್
ಚಚಾಚಿಚೀಚುಚೂಚೃಚೆಚೇಚೈಚೊಚೋಚೌಚಂಚಃಚ್
ಛಛಾಛಿಛೀಛುಛೂಛೃಛೆಛೇಛೈಛೊಛೋಛೌಛಂಛಃಛ್
ಜಜಾಜಿಜೀಜುಜೂಜೃಜೆಜೇಜೈಜೊಜೋಜೌಜಂಜಃಜ್
ಝಝಾಝಿಝೀಝುಝೂಝೃಝೆಝೇಝೈಝೊಝೋಝೌಝಂಝಃಝ್
ಞಞಾಞಿಞೀಞುಞೂಞೃಞೆಞೇಞೈಞೊಞೋಞೌಞಂಞಃಞ್
ಟಟಾಟಿಟೀಟುಟೂಟೃಟೆಟೇಟೈಟೊಟೋಟೌಟಂಟಃಟ್
ಠಠಾಠಿಠೀಠುಠೂಠೃಠೆಠೇಠೈಠೊಠೋಠೌಠಂಠಃಠ್
ಡಡಾಡಿಡೀಡುಡೂಡೃಡೆಡೇಡೈಡೊಡೋಡೌಡಂಡಃಡ್
ಢಢಾಢಿಢೀಢುಢೂಢೃಢೆಢೇಢೈಢೊಢೋಢೌಢಂಢಃಢ್
ಣಣಾಣಿಣೀಣುಣೂಣೃಣೆಣೇಣೈಣೊಣೋಣೌಣಂಣಃಣ್
ತತಾತಿತೀತುತೂತೃತೆತೇತೈತೊತೋತೌತಂತಃತ್
ಥಥಾಥಿಥೀಥುಥೂಥೃಥೆಥೇಥೈಥೊಥೋಥೌಥಂಥಃಥ್
ದದಾದಿದೀದುದೂದೃದೆದೇದೈದೊದೋದೌದಂದಃದ್
ಧಧಾಧಿಧೀಧುಧೂಧೃಧೆಧೇಧೈಧೊಧೋಧೌಧಂಧಃಧ್
ನನಾನಿನೀನುನೂನೃನೆನೇನೈನೊನೋನೌನಂನಃನ್
ಪಪಾಪಿಪೀಪುಪೂಪೃಪೆಪೇಪೈಪೊಪೋಪೌಪಂಪಃಪ್
ಫಫಾಫಿಫೀಫುಫೂಫೃಫೆಫೇಫೈಫೊಫೋಫೌಫಂಫಃಫ್
ಬಬಾಬಿಬೀಬುಬೂಬೃಬೆಬೇಬೈಬೊಬೋಬೌಬಂಬಃಬ್
ಭಭಾಭಿಭೀಭುಭೂಭೃಭೆಭೇಭೈಭೊಭೋಭೌಭಂಭಃಭ್
ಮಮಾಮಿಮೀಮುಮೂಮೃಮೆಮೇಮೈಮೊಮೋಮೌಮಂಮಃಮ್
ಯಯಾಯಿಯೀಯುಯೂಯೃಯೆಯೇಯೈಯೊಯೋಯೌಯಂಯಃಯ್
ರರಾರಿರೀರುರೂರೃರೆರೇರೈರೊರೋರೌರಂರಃ
ಲಲಾಲಿಲೀಲುಲೂಲೃಲೆಲೇಲೈಲೊಲೋಲೌಲಂಲಃಲ್
ವವಾವಿವೀವುವೂವೃವೆವೇವೈವೊವೋವೌವಂವಃವ್
ಶಶಾಶಿಶೀಶುಶೂಶೃಶೆಶೇಶೈಶೊಶೋಶೌಶಂಶಃಶ್
ಷಷಾಷಿಷೀಷುಷೂಷೃಷೆಷೇಷೈಷೊಷೋಷೌಷಂಷಃಷ್
ಸಸಾಸಿಸೀಸುಸೂಸೃಸೆಸೇಸೈಸೊಸೋಸೌಸಂಸಃಸ್
ಹಹಾಹಿಹೀಹುಹೂಹೃಹೆಹೇಹೈಹೊಹೋಹೌಹಂಹಃ
ಳಳಾಳಿಳೀಳುಳೂಳೃಳೆಳೇಳೈಳೊಳೋಳೌಳಂಳಃಳ್
Close

ಗುಣಿತಾಕ್ಷರ ಮತ್ತು ಒತ್ತಕ್ಷರ

ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಗಳಿಗೂ ಪ್ರತ್ಯೇಕ ಒತ್ತಕ್ಷರಗಳಿವೆ. ಅವುಗಳು ಹೀಗಿವೆ;

More information: ಕ, ಖ ...
ಕಖಗಘಙಚಛಜಝಞಟಠಡಢಣತಥದಧನಪಫಬಭಮಯರಱಲವಶಷಸಹಳೞ
ಕಕ್ಕಕ್ಖಕ್ಗಕ್ಘಕ್ಙಕ್ಚಕ್ಛಕ್ಜಕ್ಝಕ್ಞಕ್ಟಕ್ಠಕ್ಡಕ್ಢಕ್ಣಕ್ತಕ್ಥಕ್ದಕ್ಧಕ್ನಕ್ಪಕ್ಫಕ್ಬಕ್ಭಕ್ಮಕ್ಯಕ್ರಕ್ಱಕ್ಲಕ್ವಕ್ಶಕ್ಷಕ್ಸಕ್ಹಕ್ಳಕ್ೞ
ಖಖ್ಕಖ್ಖಖ್ಗಖ್ಘಖ್ಙಖ್ಚಖ್ಛಖ್ಜಖ್ಝಖ್ಞಖ್ಟಖ್ಠಖ್ಡಖ್ಢಖ್ಣಖ್ತಖ್ಥಖ್ದಖ್ಧಖ್ನಖ್ಪಖ್ಫಖ್ಬಖ್ಭಖ್ಮಖ್ಯಖ್ರಖ್ಱಖ್ಲಖ್ವಖ್ಶಖ್ಷಖ್ಸಖ್ಹಖ್ಳಖ್ೞ
ಗಗ್ಕಗ್ಖಗ್ಗಗ್ಘಗ್ಙಗ್ಚಗ್ಛಗ್ಜಗ್ಝಗ್ಞಗ್ಟಗ್ಠಗ್ಡಗ್ಢಗ್ಣಗ್ತಗ್ಥಗ್ದಗ್ಧಗ್ನಗ್ಪಗ್ಫಗ್ಬಗ್ಭಗ್ಮಗ್ಯಗ್ರಗ್ಱಗ್ಲಗ್ವಗ್ಶಗ್ಷಗ್ಸಗ್ಹಗ್ಳಗ್ೞ
ಘಘ್ಕಘ್ಖಘ್ಗಘ್ಘಘ್ಙಘ್ಚಘ್ಛಘ್ಜಘ್ಝಘ್ಞಘ್ಟಘ್ಠಘ್ಡಘ್ಢಘ್ಣಘ್ತಘ್ಥಘ್ದಘ್ಧಘ್ನಘ್ಪಘ್ಫಘ್ಬಘ್ಭಘ್ಮಘ್ಯಘ್ರಘ್ಱಘ್ಲಘ್ವಘ್ಶಘ್ಷಘ್ಸಘ್ಹಘ್ಳಘ್ೞ
ಙಙ್ಕಙ್ಖಙ್ಗಙ್ಘಙ್ಙಙ್ಚಙ್ಛಙ್ಜಙ್ಝಙ್ಞಙ್ಟಙ್ಠಙ್ಡಙ್ಢಙ್ಣಙ್ತಙ್ಥಙ್ದಙ್ಧಙ್ನಙ್ಪಙ್ಫಙ್ಬಙ್ಭಙ್ಮಙ್ಯಙ್ರಙ್ಱಙ್ಲಙ್ವಙ್ಶಙ್ಷಙ್ಸಙ್ಹಙ್ಳಙ್ೞ
ಚಚ್ಕಚ್ಖಚ್ಗಚ್ಘಚ್ಙಚ್ಚಚ್ಛಚ್ಜಚ್ಝಚ್ಞಚ್ಟಚ್ಠಚ್ಡಚ್ಢಚ್ಣಚ್ತಚ್ಥಚ್ದಚ್ಧಚ್ನಚ್ಪಚ್ಫಚ್ಬಚ್ಭಚ್ಮಚ್ಯಚ್ರಚ್ಱಚ್ಲಚ್ವಚ್ಶಚ್ಷಚ್ಸಚ್ಹಚ್ಳಚ್ೞ
ಛಛ್ಕಛ್ಖಛ್ಗಛ್ಘಛ್ಙಛ್ಚಛ್ಛಛ್ಜಛ್ಝಛ್ಞಛ್ಟಛ್ಠಛ್ಡಛ್ಢಛ್ಣಛ್ತಛ್ಥಛ್ದಛ್ಧಛ್ನಛ್ಪಛ್ಫಛ್ಬಛ್ಭಛ್ಮಛ್ಯಛ್ರಛ್ಱಛ್ಲಛ್ವಛ್ಶಛ್ಷಛ್ಸಛ್ಹಛ್ಳಛ್ೞ
ಜಜ್ಕಜ್ಖಜ್ಗಜ್ಘಜ್ಙಜ್ಚಜ್ಛಜ್ಜಜ್ಝಜ್ಞಜ್ಟಜ್ಠಜ್ಡಜ್ಢಜ್ಣಜ್ತಜ್ಥಜ್ದಜ್ಧಜ್ನಜ್ಪಜ್ಫಜ್ಬಜ್ಭಜ್ಮಜ್ಯಜ್ರಜ್ಱಜ್ಲಜ್ವಜ್ಶಜ್ಷಜ್ಸಜ್ಹಜ್ಳಜ್ೞ
ಝಝ್ಕಝ್ಖಝ್ಗಝ್ಘಝ್ಙಝ್ಚಝ್ಛಝ್ಜಝ್ಝಝ್ಞಝ್ಟಝ್ಠಝ್ಡಝ್ಢಝ್ಣಝ್ತಝ್ಥಝ್ದಝ್ಧಝ್ನಝ್ಪಝ್ಫಝ್ಬಝ್ಭಝ್ಮಝ್ಯಝ್ರಝ್ಱಝ್ಲಝ್ವಝ್ಶಝ್ಷಝ್ಸಝ್ಹಝ್ಳಝ್ೞ
ಞಞ್ಕಞ್ಖಞ್ಗಞ್ಘಞ್ಙಞ್ಚಞ್ಛಞ್ಜಞ್ಝಞ್ಞಞ್ಟಞ್ಠಞ್ಡಞ್ಢಞ್ಣಞ್ತಞ್ಥಞ್ದಞ್ಧಞ್ನಞ್ಪಞ್ಫಞ್ಬಞ್ಭಞ್ಮಞ್ಯಞ್ರಞ್ಱಞ್ಲಞ್ವಞ್ಶಞ್ಷಞ್ಸಞ್ಹಞ್ಳಞ್ೞ
ಟಟ್ಕಟ್ಖಟ್ಗಟ್ಘಟ್ಙಟ್ಚಟ್ಛಟ್ಜಟ್ಝಟ್ಞಟ್ಟಟ್ಠಟ್ಡಟ್ಢಟ್ಣಟ್ತಟ್ಥಟ್ದಟ್ಧಟ್ನಟ್ಪಟ್ಫಟ್ಬಟ್ಭಟ್ಮಟ್ಯಟ್ರಟ್ಱಟ್ಲಟ್ವಟ್ಶಟ್ಷಟ್ಸಟ್ಹಟ್ಳಟ್ೞ
ಠಠ್ಕಠ್ಖಠ್ಗಠ್ಘಠ್ಙಠ್ಚಠ್ಛಠ್ಜಠ್ಝಠ್ಞಠ್ಟಠ್ಠಠ್ಡಠ್ಢಠ್ಣಠ್ತಠ್ಥಠ್ದಠ್ಧಠ್ನಠ್ಪಠ್ಫಠ್ಬಠ್ಭಠ್ಮಠ್ಯಠ್ರಠ್ಱಠ್ಲಠ್ವಠ್ಶಠ್ಷಠ್ಸಠ್ಹಠ್ಳಠ್ೞ
ಡಡ್ಕಡ್ಖಡ್ಗಡ್ಘಡ್ಙಡ್ಚಡ್ಛಡ್ಜಡ್ಝಡ್ಞಡ್ಟಡ್ಠಡ್ಡಡ್ಢಡ್ಣಡ್ತಡ್ಥಡ್ದಡ್ಧಡ್ನಡ್ಪಡ್ಫಡ್ಬಡ್ಭಡ್ಮಡ್ಯಡ್ರಡ್ಱಡ್ಲಡ್ವಡ್ಶಡ್ಷಡ್ಸಡ್ಹಡ್ಳಡ್ೞ
ಢಢ್ಕಢ್ಖಢ್ಗಢ್ಘಢ್ಙಢ್ಚಢ್ಛಢ್ಜಢ್ಝಢ್ಞಢ್ಟಢ್ಠಢ್ಡಢ್ಢಢ್ಣಢ್ತಢ್ಥಢ್ದಢ್ಧಢ್ನಢ್ಪಢ್ಫಢ್ಬಢ್ಭಢ್ಮಢ್ಯಢ್ರಢ್ಱಢ್ಲಢ್ವಢ್ಶಢ್ಷಢ್ಸಢ್ಹಢ್ಳಢ್ೞ
ಣಣ್ಕಣ್ಖಣ್ಗಣ್ಘಣ್ಙಣ್ಚಣ್ಛಣ್ಜಣ್ಝಣ್ಞಣ್ಟಣ್ಠಣ್ಡಣ್ಢಣ್ಣಣ್ತಣ್ಥಣ್ದಣ್ಧಣ್ನಣ್ಪಣ್ಫಣ್ಬಣ್ಭಣ್ಮಣ್ಯಣ್ರಣ್ಱಣ್ಲಣ್ವಣ್ಶಣ್ಷಣ್ಸಣ್ಹಣ್ಳಣ್ೞ
ತತ್ಕತ್ಖತ್ಗತ್ಘತ್ಙತ್ಚತ್ಛತ್ಜತ್ಝತ್ಞತ್ಟತ್ಠತ್ಡತ್ಢತ್ಣತ್ತತ್ಥತ್ದತ್ಧತ್ನತ್ಪತ್ಫತ್ಬತ್ಭತ್ಮತ್ಯತ್ರತ್ಱತ್ಲತ್ವತ್ಶತ್ಷತ್ಸತ್ಹತ್ಳತ್ೞ
ಥಥ್ಕಥ್ಖಥ್ಗಥ್ಘಥ್ಙಥ್ಚಥ್ಛಥ್ಜಥ್ಝಥ್ಞಥ್ಟಥ್ಠಥ್ಡಥ್ಢಥ್ಣಥ್ತಥ್ಥಥ್ದಥ್ಧಥ್ನಥ್ಪಥ್ಫಥ್ಬಥ್ಭಥ್ಮಥ್ಯಥ್ರಥ್ಱಥ್ಲಥ್ವಥ್ಶಥ್ಷಥ್ಸಥ್ಹಥ್ಳಥ್ೞ
ದದ್ಕದ್ಖದ್ಗದ್ಘದ್ಙದ್ಚದ್ಛದ್ಜದ್ಝದ್ಞದ್ಟದ್ಠದ್ಡದ್ಢದ್ಣದ್ತದ್ಥದ್ದದ್ಧದ್ನದ್ಪದ್ಫದ್ಬದ್ಭದ್ಮದ್ಯದ್ರದ್ಱದ್ಲದ್ವದ್ಶದ್ಷದ್ಸದ್ಹದ್ಳದ್ೞ
ಧಧ್ಕಧ್ಖಧ್ಗಧ್ಘಧ್ಙಧ್ಚಧ್ಛಧ್ಜಧ್ಝಧ್ಞಧ್ಟಧ್ಠಧ್ಡಧ್ಢಧ್ಣಧ್ತಧ್ಥಧ್ದಧ್ಧಧ್ನಧ್ಪಧ್ಫಧ್ಬಧ್ಭಧ್ಮಧ್ಯಧ್ರಧ್ಱಧ್ಲಧ್ವಧ್ಶಧ್ಷಧ್ಸಧ್ಹಧ್ಳಧ್ೞ
ನನ್ಕನ್ಖನ್ಗನ್ಘನ್ಙನ್ಚನ್ಛನ್ಜನ್ಝನ್ಞನ್ಟನ್ಠನ್ಡನ್ಢನ್ಣನ್ತನ್ಥನ್ದನ್ಧನ್ನನ್ಪನ್ಫನ್ಬನ್ಭನ್ಮನ್ಯನ್ರನ್ಱನ್ಲನ್ವನ್ಶನ್ಷನ್ಸನ್ಹನ್ಳನ್ೞ
ಪಪ್ಕಪ್ಖಪ್ಗಪ್ಘಪ್ಙಪ್ಚಪ್ಛಪ್ಜಪ್ಝಪ್ಞಪ್ಟಪ್ಠಪ್ಡಪ್ಢಪ್ಣಪ್ತಪ್ಥಪ್ದಪ್ಧಪ್ನಪ್ಪಪ್ಫಪ್ಬಪ್ಭಪ್ಮಪ್ಯಪ್ರಪ್ಱಪ್ಲಪ್ವಪ್ಶಪ್ಷಪ್ಸಪ್ಹಪ್ಳಪ್ೞ
ಫಫ್ಕಫ್ಖಫ್ಗಫ್ಘಫ್ಙಫ್ಚಫ್ಛಫ್ಜಫ್ಝಫ್ಞಫ್ಟಫ್ಠಫ್ಡಫ್ಢಫ್ಣಫ್ತಫ್ಥಫ್ದಫ್ಧಫ್ನಫ್ಪಫ್ಫಫ್ಬಫ್ಭಫ್ಮಫ್ಯಫ್ರಫ್ಱಫ್ಲಫ್ವಫ್ಶಫ್ಷಫ್ಸಫ್ಹಫ್ಳಫ್ೞ
ಬಬ್ಕಬ್ಖಬ್ಗಬ್ಘಬ್ಙಬ್ಚಬ್ಛಬ್ಜಬ್ಝಬ್ಞಬ್ಟಬ್ಠಬ್ಡಬ್ಢಬ್ಣಬ್ತಬ್ಥಬ್ದಬ್ಧಬ್ನಬ್ಪಬ್ಫಬ್ಬಬ್ಭಬ್ಮಬ್ಯಬ್ರಬ್ಱಬ್ಲಬ್ವಬ್ಶಬ್ಷಬ್ಸಬ್ಹಬ್ಳಬ್ೞ
ಭಭ್ಕಭ್ಖಭ್ಗಭ್ಘಭ್ಙಭ್ಚಭ್ಛಭ್ಜಭ್ಝಭ್ಞಭ್ಟಭ್ಠಭ್ಡಭ್ಢಭ್ಣಭ್ತಭ್ಥಭ್ದಭ್ಧಭ್ನಭ್ಪಭ್ಫಭ್ಬಭ್ಭಭ್ಮಭ್ಯಭ್ರಭ್ಱಭ್ಲಭ್ವಭ್ಶಭ್ಷಭ್ಸಭ್ಹಭ್ಳಭ್ೞ
ಮಮ್ಕಮ್ಖಮ್ಗಮ್ಘಮ್ಙಮ್ಚಮ್ಛಮ್ಜಮ್ಝಮ್ಞಮ್ಟಮ್ಠಮ್ಡಮ್ಢಮ್ಣಮ್ತಮ್ಥಮ್ದಮ್ಧಮ್ನಮ್ಪಮ್ಫಮ್ಬಮ್ಭಮ್ಮಮ್ಯಮ್ರಮ್ಱಮ್ಲಮ್ವಮ್ಶಮ್ಷಮ್ಸಮ್ಹಮ್ಳಮ್ೞ
ಯಯ್ಕಯ್ಖಯ್ಗಯ್ಘಯ್ಙಯ್ಚಯ್ಛಯ್ಜಯ್ಝಯ್ಞಯ್ಟಯ್ಠಯ್ಡಯ್ಢಯ್ಣಯ್ತಯ್ಥಯ್ದಯ್ಧಯ್ನಯ್ಪಯ್ಫಯ್ಬಯ್ಭಯ್ಮಯ್ಯಯ್ರಯ್ಱಯ್ಲಯ್ವಯ್ಶಯ್ಷಯ್ಸಯ್ಹಯ್ಳಯ್ೞ
ರರ್‍ಕರ್‍ಖರ್‍ಗರ್‍ಘರ್‍ಙರ್‍ಚರ್‍ಛರ್‍ಜರ್‍ಝರ್‍ಞರ್‍ಟರ್‍ಠರ್‍ಡರ್‍ಢರ್‍ಣರ್‍ತರ್‍ಥರ್‍ದರ್‍ಧರ್‍ನರ್‍ಪರ್‍ಫರ್‍ಬರ್‍ಭರ್‍ಮರ್‍ಯರ್‍ರರ್‍ಱರ್‍ಲರ್‍ವರ್‍ಶರ್‍ಷರ್‍ಸರ್‍ಹರ್‍ಳರ್‍ೞ
ಱಱ್ಕಱ್ಖಱ್ಗಱ್ಘಱ್ಙಱ್ಚಱ್ಛಱ್ಜಱ್ಝಱ್ಞಱ್ಟಱ್ಠಱ್ಡಱ್ಢಱ್ಣಱ್ತಱ್ಥಱ್ದಱ್ಧಱ್ನಱ್ಪಱ್ಫಱ್ಬಱ್ಭಱ್ಮಱ್ಯಱ್ರಱ್ಱಱ್ಲಱ್ವಱ್ಶಱ್ಷಱ್ಸಱ್ಹಱ್ಳಱ್ೞ
ಲಲ್ಕಲ್ಖಲ್ಗಲ್ಘಲ್ಙಲ್ಚಲ್ಛಲ್ಜಲ್ಝಲ್ಞಲ್ಟಲ್ಠಲ್ಡಲ್ಢಲ್ಣಲ್ತಲ್ಥಲ್ದಲ್ಧಲ್ನಲ್ಪಲ್ಫಲ್ಬಲ್ಭಲ್ಮಲ್ಯಲ್ರಲ್ಱಲ್ಲಲ್ವಲ್ಶಲ್ಷಲ್ಸಲ್ಹಲ್ಳಲ್ೞ
ವವ್ಕವ್ಖವ್ಗವ್ಘವ್ಙವ್ಚವ್ಛವ್ಜವ್ಝವ್ಞವ್ಟವ್ಠವ್ಡವ್ಢವ್ಣವ್ತವ್ಥವ್ದವ್ಧವ್ನವ್ಪವ್ಫವ್ಬವ್ಭವ್ಮವ್ಯವ್ರವ್ಱವ್ಲವ್ವವ್ಶವ್ಷವ್ಸವ್ಹವ್ಳವ್ೞ
ಶಶ್ಕಶ್ಖಶ್ಗಶ್ಘಶ್ಙಶ್ಚಶ್ಛಶ್ಜಶ್ಝಶ್ಞಶ್ಟಶ್ಠಶ್ಡಶ್ಢಶ್ಣಶ್ತಶ್ಥಶ್ದಶ್ಧಶ್ನಶ್ಪಶ್ಫಶ್ಬಶ್ಭಶ್ಮಶ್ಯಶ್ರಶ್ಱಶ್ಲಶ್ವಶ್ಶಶ್ಷಶ್ಸಶ್ಹಶ್ಳಶ್ೞ
ಷಷ್ಕಷ್ಖಷ್ಗಷ್ಘಷ್ಙಷ್ಚಷ್ಛಷ್ಜಷ್ಝಷ್ಞಷ್ಟಷ್ಠಷ್ಡಷ್ಢಷ್ಣಷ್ತಷ್ಥಷ್ದಷ್ಧಷ್ನಷ್ಪಷ್ಫಷ್ಬಷ್ಭಷ್ಮಷ್ಯಷ್ರಷ್ಱಷ್ಲಷ್ವಷ್ಶಷ್ಷಷ್ಸಷ್ಹಷ್ಳಷ್ೞ
ಸಸ್ಕಸ್ಖಸ್ಗಸ್ಘಸ್ಙಸ್ಚಸ್ಛಸ್ಜಸ್ಝಸ್ಞಸ್ಟಸ್ಠಸ್ಡಸ್ಢಸ್ಣಸ್ತಸ್ಥಸ್ದಸ್ಧಸ್ನಸ್ಪಸ್ಫಸ್ಬಸ್ಭಸ್ಮಸ್ಯಸ್ರಸ್ಱಸ್ಲಸ್ವಸ್ಶಸ್ಷಸ್ಸಸ್ಹಸ್ಳಸ್ೞ
ಹಹ್ಕಹ್ಖಹ್ಗಹ್ಘಹ್ಙಹ್ಚಹ್ಛಹ್ಜಹ್ಝಹ್ಞಹ್ಟಹ್ಠಹ್ಡಹ್ಢಹ್ಣಹ್ತಹ್ಥಹ್ದಹ್ಧಹ್ನಹ್ಪಹ್ಫಹ್ಬಹ್ಭಹ್ಮಹ್ಯಹ್ರಹ್ಱಹ್ಲಹ್ವಹ್ಶಹ್ಷಹ್ಸಹ್ಹಹ್ಳಹ್ೞ
ಳಳ್ಕಳ್ಖಳ್ಗಳ್ಘಳ್ಙಳ್ಚಳ್ಛಳ್ಜಳ್ಝಳ್ಞಳ್ಟಳ್ಠಳ್ಡಳ್ಢಳ್ಣಳ್ತಳ್ಥಳ್ದಳ್ಧಳ್ನಳ್ಪಳ್ಫಳ್ಬಳ್ಭಳ್ಮಳ್ಯಳ್ರಳ್ಱಳ್ಲಳ್ವಳ್ಶಳ್ಷಳ್ಸಳ್ಹಳ್ಳಳ್ೞ
ೞೞ್ಕೞ್ಖೞ್ಗೞ್ಘೞ್ಙೞ್ಚೞ್ಛೞ್ಜೞ್ಝೞ್ಞೞ್ಟೞ್ಠೞ್ಡೞ್ಢೞ್ಣೞ್ತೞ್ಥೞ್ದೞ್ಧೞ್ನೞ್ಪೞ್ಫೞ್ಬೞ್ಭೞ್ಮೞ್ಯೞ್ರೞ್ಱೞ್ಲೞ್ವೞ್ಶೞ್ಷೞ್ಸೞ್ಹೞ್ಳೞ್ೞ
Close

ಸ೦ಯುಕ್ತಾಕ್ಷರಗಳಲ್ಲಿ ಎರಡು ವಿಧಗಳಿವೆ.

ಅವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟಿವೆ?

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು