ಶಿಕ್ಷಣವೇ ಶಕ್ತಿ

Tuesday, 25 May 2021

ವಿಶ್ವಸಂಸ್ಥೆಯ ಮತ್ತು ಅಂತರಾಷ್ಟ್ರೀಯ ಸಂಘಟನೆಗಳು

ಸಂಯುಕ್ತ ರಾಷ್ಟ್ರ ಸಂಸ್ಥೆ

ಸಂಯುಕ್ತ ರಾಷ್ಟ್ರ ಸಂಸ್ಥೆ (ಅಥವಾ ವಿಶ್ವಸಂಸ್ಥೆ) ೧೯೪೫ರಲ್ಲಿ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಎರಡನೆ ವಿಶ್ವ ಯುದ್ಧದ ನಂತರ ಯುದ್ಧ ವಿಜಯಿ ದೇಶಗಳಾದ ಫ್ರಾನ್ಸ್ಯು.ಎಸ್.ಎ.ಚೀನಾಸೋವಿಯಟ್ ಸಂಸ್ಥಾನ ಮತ್ತು ಯು.ಕೆ.ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, ಜೂನ್ ೨೬೧೯೪೫ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು. ೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.

ವಿಶ್ವಸಂಸ್ಥೆಯ ಧ್ವಜ
ವಿಶ್ವಸಂಸ್ಥೆಯ ಚಿಹ್ನೆ- ಎಂಬ್ಲಮ್







  • ಪ್ರಧಾನ ಕಚೇರಿ=ನ್ಯೂಯಾರ್ಕ್ ನಗರ(ಅಂತರರಾಷ್ಟ್ರೀಯ ಪ್ರದೇಶ)
  • ಅಧಿಕೃತ ಭಾಷೆಗಳು=ಅರೇಬಿಕ್; ಚೈನೀಸ್; ಆಂಗ್ಲ; ಫ್ರೆಂಚ್; ರಷ್ಯನ್; ಸ್ಪ್ಯಾನಿಷ್
  • ಮಾದರಿ=ಅಂತರ್ ಸರ್ಕಾರಿ ಸಂಸ್ಥೆ
  • ಸದಸ್ಯತ್ವ =193 ಸದಸ್ಯ ರಾಷ್ಟ್ರಗಳು
  • ವೀಕ್ಷಕ ರಾಜ್ಯಗಳು= 2
  • ನಾಯಕರು :-
ಕಾರ್ಯದರ್ಶಿಜನರಲ್ಆಂಟೋನಿಯೊ ಗುಟೆರೆಸ್.
ಉಪ ಪ್ರಧಾನ ಕಾರ್ಯದರ್ಶಿಅಮಿನಾ ಜೆ. ಮೊಹಮ್ಮದ್.
ಜನರಲ್ ಅಸೆಂಬ್ಲಿ ಅಧ್ಯಕ್ಷಟಿಜ್ಜಾನಿ ಮುಹಮ್ಮದ್-ಬಂಡೆ.
ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧ್ಯಕ್ಷ = ಮೋನಾ ಜುಲ್
ಭದ್ರತಾ ಮಂಡಳಿ ಅಧ್ಯಕ್ಷ = ಡ್ಯಾಂಗ್ ದಿನ್ಹ್ ಕ್ವಿ
  • -----------
  • ಸ್ಥಾಪನೆ = ಯುಎನ್ ಚಾರ್ಟರ್ ಸಹಿ ಮಾಡಿದ ದಿನ:26 ಜೂನ್ 1945 (74 ವರ್ಷಗಳ ಹಿಂದೆ)
  • ಚಾರ್ಟರ್/ ಸನ್ನದು ಜಾರಿಗೆ ಬಂದದಿನ=24 ಅಕ್ಟೋಬರ್ 1945 (74 ವರ್ಷಗಳ ಹಿಂದೆ)
  • -----------
  • [೧]=ಅಂತರ್ಜಾಲ
.

ವಿಶ್ವಸಂಸ್ಥೆಯ ಹುಟ್ಟುಸಂಪಾದಿಸಿ

  • ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಅಧಿಕೃತವಾಗಿ ಸ್ಥಾಪಿತವಾಯಿತು. ಒಂದನೆಯ ಮಹಾಯುದ್ಧದ ಅನಂತರ ಸ್ಥಾಪಿಸ ಲಾಗಿದ್ದ ಲೀಗ್ ಆಫ್ ನೇಷನ್ಸ್‍ನ(ರಾಷ್ಟ್ರ ಸಂಘ) ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ ಪರಿಣಾಮಗಳನ್ನರಿತು ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವಜನಾಂಗದ ಜೀವನಮಟ್ಟ ಸುಧಾರಿಸುವ ಧ್ಯೇಯದೊಂದಿಗೆ ಇದನ್ನು ಸ್ಥಾಪಿಸಲಾಯಿತು. ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್, ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಹಾಗೂ ರಷ್ಯದ ಅಧ್ಯಕ್ಷ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು. ಇದರ ತಾತ್ಕಾಲಿಕ ಕೇಂದ್ರ ಕಚೇರಿ ಲೇಕ್‍ಸಕ್ಸಸ್ ಪ್ರದೇಶದಲ್ಲಿತ್ತು, ಅನಂತರ ಜಾನ್ ಡಿ.ರಾಕ್‍ಫೆಲ್ಲರ್ ಎಂಬ ಶ್ರೀಮಂತ ವಿಶಾಲ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‍ಹಟನ್‍ನಲ್ಲಿ ನೀಡಿದಾಗ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸ ಲಾಯಿತು(1951). ಇಂಗ್ಲಿಷ್, ಅರೇಬಿಕ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೀನಿ ಇದರ ಅಧಿಕೃತ ಭಾಷೆಗಳು. ಪ್ರಸ್ತುತ ವಿಶ್ವಸಂಸ್ತೆಯಲ್ಲಿ 193 (2011) ಸದಸ್ಯ ರಾಷ್ಟ್ರಗಳಿವೆ.

ಆಶಯ:ಸಂಪಾದಿಸಿ

  • ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದತೆ; ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಸಹಕಾರತತ್ತ್ವದ ಮೇಲೆ ಬಗೆಹರಿಸಿ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿ ಧೋರಣೆಯನ್ನು ನಿಯಂತ್ರಿಸುವ ಧ್ಯೇಯೋದ್ದೇಶ ಗಳನ್ನು ಹೊಂದಿದೆ. ಎಲ್ಲ ಜನಾಂಗಗಳ ಮೂಲಭೂತ ಹಕ್ಕುಗಳನ್ನು ಕಾಪಾಡಿ, ಸಾಮಾಜಿಕ ಪ್ರಗತಿ ಮತ್ತು ಜನತೆಯ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಇದು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಾರ್ವಭೌಮತ್ವದ ಆಧಾರದ ಮೇಲೆ ತನ್ನ ಸದಸ್ಯ ರಾಷ್ಟ್ರಗಳ ಹಲವು ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ಇದು ತನ್ನ ಬಹುಮುಖ್ಯ ಕಾರ್ಯಗಳನ್ನು ನಿರ್ವಹಿಸಲು ಆರು ಪ್ರಧಾನ ಸಮಿತಿ ಹಾಗೂ ಉಪಸಮಿತಿಗಳನ್ನು ಹೊಂದಿದೆ.
1. ಸಾಮಾನ್ಯ ಸಭೆ: ಇದು ಇದರ ಪ್ರಧಾನ ಕಾರ್ಯಾಲಯ. ಇದು ಪ್ರಪಂಚದ ಶಾಸಕಾಂಗದ ರೀತಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಶಾಂತಿಪ್ರಿಯ ರಾಷ್ಟ್ರ ಇದರ ಸದಸ್ಯತ್ವ ಪಡೆಯಬಹುದು. ಪ್ರತಿಯೊಂದು ರಾಷ್ಟ್ರಕ್ಕೂ ಕೇವಲ ಒಂದು ಮತ ಚಲಾಯಿಸುವ ಹಕ್ಕಿರುತ್ತದೆ. 1946 ಜನವರಿ 10ರಂದು ಪ್ರಥಮ ಸಾಮಾನ್ಯ ಸಭೆ ಸೇರಿತ್ತು. ಭಾರತ 1945 ಅಕ್ಟೋಬರ್ 30ರಂದು ಇದರ ಸದಸ್ಯತ್ವ ಪಡೆಯಿತು.
2. ಭದ್ರತಾ ಮಂಡಳಿ: ಇದು ಪ್ರಪಂಚದ ಕಾರ್ಯಾಂಗದ ರೀತಿ ಕಾರ್ಯನಿರ್ವಹಿಸುತ್ತದೆ. ವಿಶ್ವಶಾಂತಿ ಹಾಗೂ ಭದ್ರತೆ ಕಾಪಾಡುವ ಮೂಲಕ ಮೂರನೆಯ ಮಹಾಯುದ್ಧ ಸಾಧ್ಯತೆಯನ್ನು ತಡೆಯುವ ಜವಾಬ್ದಾರಿ ಹೊಂದಿದೆ. ಇದು 5 ಖಾಯಮ್ ಸದಸ್ಯ ರಾಷ್ಟ್ರಗಳು ಹಾಗೂ 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಖಾಯಮ್ ಸದಸ್ಯ ರಾಷ್ಟ್ರಗಳ ಸದಸ್ಯರಿಗೆ ವಿಟೋ ಅಧಿಕಾರವಿದೆ.
3. ಆರ್ಥಿಕ ಮತ್ತು ಸಾಮಾಜಿಕ ಮಂಡಳಿ: ಇದು ಸದಸ್ಯ ರಾಷ್ಟ್ರಗಳಲ್ಲಿ ಶಾಂತಿ ಹಾಗೂ ಪ್ರಗತಿ ಸಾಧಿಸಲು ಸರಿಯಾದ ಆರ್ಥಿಕ ಮತ್ತು ಸಾಮಾಜಿಕ ವಾತಾವರಣ ನಿರ್ಮಿಸುವ ಗುರಿ ಹೊಂದಿದೆ ಹಾಗೂ ಮಾನವ ಹಕ್ಕುಗಳು, ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತದೆ.
4. ಧರ್ಮದರ್ಶಿ ಮಂಡಳಿ: ಇದು ರಾಷ್ಟ್ರಸಂಘದ ಮ್ಯಾಂಡೇಟ್ ಪದ್ಧತಿಯ ಉತ್ತರಾಧಿಕಾರಿಯಾಗಿದೆ. ಯುದ್ಧದಲ್ಲಿ ನಿರಾಶ್ರಿತರಾದವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಪ್ರಗತಿ ಸಾಧಿಸಲು ಯತ್ನಿಸುತ್ತದೆ.
5. ಅಂತಾರಾಷ್ಟ್ರೀಯ ನ್ಯಾಯಾಲಯ: ಇದರ ಪ್ರಧಾನ ಕಚೇರಿ ಹಾಲೆಂಡಿನ ಹೇಗ್ ನಗರದಲ್ಲಿದೆ. ಇದು ಅಂತಾರಾಷ್ಟ್ರೀಯ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತದೆ.
6. ಕಾರ್ಯಾಲಯ: ಕೇಂದ್ರ ಕಚೇರಿ ಅಮೆರಿಕದ ನ್ಯೂಯಾರ್ಕ್‍ನಲ್ಲಿದೆ. ಇದು ಸಂಸ್ಥೆಯ ಕಾರ್ಯಕಲಾಪಗಳನ್ನು ನಿರ್ವಹಿಸುತ್ತದೆ. ಕಾರ್ಯದರ್ಶಿ ಇದರ ಮುಖ್ಯಸ್ಥ.

ಕಾರ್ಯದರ್ಶಿಗಳುಸಂಪಾದಿಸಿ

ಇದರ ಪ್ರಥಮ ಕಾರ್ಯದರ್ಶಿ ನಾರ್ವೆಯ ಟ್ರೈಗ್ವೆಲೀ(1945-53). ಅನಂತರ ಡ್ಯಾಗ್ ಹ್ಯಾಮರ್ ಶೀಲ್ಡ್(1953-61), ಬರ್ಮದ (ಮೈನ್ಮಾರ್) ಉ.ಥಾಂಟ್(1961-71), ಆಸ್ಟ್ರಿಯದ ಕರ್ಟ್‍ವಾಲ್ಡ್‍ಹೀಮ್(1971-81), ಪೆರು ದೇಶದ ಪೆರೇಜ್‍ಡಿಕ್ಯೂಲರ್ (1982-91), ಈಜಿಪ್ಟಿನ ಭುಟ್ರೋಸ್ ಘಾಲಿ(1992-96) ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಘಾನ ದೇಶದ ಕೋಫಿ ಅನ್ನನ್(1997 ರಿಂದ) ಕಾರ್ಯದರ್ಶಿಯಾಗಿದ್ದರು. ಅಂಟೊನಿಯೊ ಗುಟೆರಸ್‌(2013) ಜನವರಿ 1,2017 ರಿಂದ ಕಾರ್ಯದರ್ಶಿಗಳಾಗಿದ್ದಾರೆ.[೧]

ಉಪಸಮಿತಿಗಳಸಂಪಾದಿಸಿ

ವಿಶ್ವಸಂಸ್ಥೆ ಹಲವು ಉಪಸಮಿತಿಗಳನ್ನು ಹೊಂದಿದೆ. ಅವು ಹೀಗಿವೆ:
  1. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‍ಎಒ),
  2. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕøತಿಕ ಸಂಸ್ಥೆ(ಯುನೆಸ್ಕೋ),
  3. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ),
  4. ವಿಶ್ವಕಾರ್ಮಿಕ ಸಂಸ್ಥೆ(ಐಎಲ್‍ಒ),
  5. ವಿಶ್ವಹಣಕಾಸುನಿಧಿ(ಐಎಮ್‍ಎಫ್),
  6. ವಿಶ್ವನಾಗರಿಕ ವಿಮಾನಯಾನ ಸಾರಿಗೆ ಸಂಸ್ಥೆ (ಐಸಿಎಒ),
  7. ವಿಶ್ವಅಣುಶಕ್ತಿ ಸಂಸ್ಥೆ (ಐಎಇಎ),
  8. ವಿಶ್ವಬ್ಯಾಂಕ್ ಮೊದಲಾದವು.

ಜಾಗತಿಕ ಸಮಸ್ಯೆಗಳಿಗೆ ಪರಿಹಾರಸಂಪಾದಿಸಿ

ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳುಸಂಪಾದಿಸಿ

__________________________________________
ಅಂತರಾಷ್ಟ್ರೀಯ ಸಂಘಟನೆಗಳು

ಪ್ರಮುಖ ಅಂತರರಾಷ್ಟ್ರೀಯ ಸಂಘಟನೆಗಳುಸಂಪಾದಿಸಿ

ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ಮುಖ್ಯ ಸಂಸ್ಥೆಗಳ ಸೂಕ್ಷ್ಮಪರಿಚಯವನ್ನಿಲ್ಲಿ ಕೊಡಲಾಗಿದೆ.

ಜಾಗತಿಕ ಸಂಘಟನೆಗಳುಸಂಪಾದಿಸಿ

  • ಸಂಯುಕ್ತ ರಾಷ್ಟ್ರ ಸಂಸ್ಥೆ, ಮತ್ತು ಅದರ ವಿಭಾಗೀಯ ಸಂಸ್ಥೆಗಳು.
  • ಇಂಟರ್‍ಪೋಲ್
  • International Hydrographic Organization
  • ವಿಶ್ವ ವ್ಯಾಪಾರ ಸಂಸ್ಥೆ
  • Universal Postal Union
  • ಅಂತಾರಾಷ್ಟ್ರೀಯ ಗ್ರಂಥಾಲಯ ಸಂಘಗಳ ಸಂಯುಕ್ತ ಸಂಘ (ಇಂಟನಾರ್ಯಷನಲ್ ಫೆ಼ಡರೇಷನ್ ಆ¥sóï ಲೈಬ್ರರಿ ಅಸೋಸಿಯೇಷನ್ಸ) : ಸ್ಥಾಪನೆ 1962ರಲ್ಲಿ. ಆಡಳಿತ ಕಚೇರಿ ಇಂಗ್ಲೆಂಡಿನಲ್ಲಿದೆ. ಗ್ರಂಥಾಲಯ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸುವುದು, ಅದರಲ್ಲೂ ಮುಖ್ಯವಾಗಿ ಗ್ರಂಥಾಲಯಗಳ, ಗ್ರಂಥಾಲಯ ಸಂಘಗಳ ಹಾಗೂ ಗ್ರಂಥಸೂಚಿಕಾರರ ನಡುವೆ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕವನ್ನೇರ್ಪಡಿಸುವುದು ಇದರ ಮುಖ್ಯ ಉದ್ದೇಶ. ಅಂತಾರಾಷ್ಟ್ರೀಯ ಮೈತ್ರಿ ಒಕ್ಕೂಟ (ಇಂಟನಾರ್ಯಷನಲ್ ಫೆ಼್ರಂಡ್ಷಿಪ್ ಲೀಗ್) : ಸ್ವಯಂಪ್ರೇರಿತ ಹಾಗೂ ರಾಜಕೀಯದಿಂದ ದೂರವಿರುವ ಈ ಒಕ್ಕೂಟದ ಉದ್ದೇಶ ಪ್ರಪಂಚದ ಜನರ ಪ್ರವಾಸಾಭಿಲಾಷೆ ಮೈತ್ರಿಮನೋಭಾವಗಳನ್ನು ಬೆಳೆಸುವುದೇ ಆಗಿದೆ.
  • ಅಂತಾರಾಷ್ಟ್ರೀಯ ಆರೋಗ್ಯ ಶಿಕ್ಷಣದ ಬ್ರಿಟಿಷ್ ಸಂಘ (ಬ್ರಿಟಿಷ್ ಸೊಸೈಟಿ ಫಾ಼ರ್ ಇಂಟನಾರ್ಯಷನಲ್ ಹೆಲ್ತ ಎಜ್ಯುಕೇಷನ್) : ಶೈಕ್ಷಣಿಕ ವಿಧಾನಗಳಿಂದ ಜನಾರೋಗ್ಯವನ್ನು ಉತ್ತಮಗೊಳಿಸಲು ತಾಂತ್ರಿಕ ನೆರವನ್ನು ನೀಡುತ್ತಿರುವ ಈ ಸಂಘಕ್ಕೆ ಆರೋಗ್ಯ ಶಿಕ್ಷಣ ಹಾಗೂ ಕೈಗಾರಿಕಾಕ್ಷೇತ್ರದ ಪ್ರಮುಖ ಪರಿಣತರು ಸದಸ್ಯರಾಗಿದ್ದಾರೆ. ವಿಶ್ವಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು ಈ ಸಂಸ್ಥೆ ಗಣನೀಯ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಕೇಂದ್ರ ಕಚೇರಿ ಲಂಡನ್ನಿನಲ್ಲಿದೆ.
  • ಅಂತಾರಾಷ್ಟ್ರೀಯ ಬೌದ್ಧಿಕ ಸಹಕಾರ ಸಂಸ್ಥೆ (ಇಂಟನಾರ್ಯಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಟಲೆಕ್ಚುಯಲ್ ಕೋಆಪರೇಷನ್) : 1922ರಲ್ಲಿ ರಾಷ್ಟ್ರಗಳ ಒಕ್ಕೂಟದ ಅಂಗವಾಗಿ ರೂಪುಗೊಂಡ ಈ ಸಂಘದ ಉದ್ದೇಶ ಸಾಹಿತ್ಯ ವಿಜ್ಞಾನ ಹಾಗೂ ಕಲೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಂತರರಾಷ್ಟ್ರೀಯ ಸಹಕಾರ ದೃಷ್ಟಿಯಿಂದ ಪರಿಶೀಲಿಸುವುದೇ ಆಗಿದೆ. ಈಗ ಈ ಸಂಸ್ಥೆಯ ಕೆಲಸವನ್ನು ಯುನೆಸ್ಕೊ ವಹಿಸಿಕೊಂಡಿದೆ.
  • ಅಂತಾರಾಷ್ಟ್ರೀಯ ಭಾಷೆ : ಅಂತಾರಾಷ್ಟ್ರೀಯ ವ್ಯವಹಾರ ಮಾಧ್ಯಮವಾಗಿ ವಿಶ್ವಭಾಷೆಯೊಂದನ್ನು ರೂಪಿಸುವ ಕೆಲಸ ನಡೆದಿದೆ.
  • ಅಂತಾರಾಷ್ಟ್ರೀಯ ನ್ಯಾಯ : ಅಂತಾರಾಷ್ಟ್ರೀಯ ವ್ಯವಹಾರಗಳು ಯಾವ ರೀತಿಯಲ್ಲೂ ತೊಡಕಿಲ್ಲದೆ ಸಾಗಲು, ಒದಗಬಹುದಾದ ಸಮಸ್ಯೆಗಳನ್ನು ಒಡಂಬಡಿಕೆಯ ಮೂಲಕ ಪರಿಹಾರ ಮಾಡಿಕೊಳ್ಳಲು, ಕಾಯಿದೆಗಳಿಗೆ ಮಾನ್ಯತೆ ಕೊಟ್ಟು ಪರಸ್ಪರ ಕೀರ್ತಿಗೌರವಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ತಯಾರಾದ ನ್ಯಾಯಸೂತ್ರಗಳಿವು. 1945ರಲ್ಲಿ ವಿಶ್ವಸಂಸ್ಥೆ ಈ ಬಗ್ಗೆ ಒಂದು ನ್ಯಾಯ ಪ್ರಣಾಳಿಕೆಯನ್ನು ಹೊರತಂದಿದೆ. ನ್ಯಾಯಪರಿಪಾಲನೆ, ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಷಯಗಳು ಇಲ್ಲಿ ಅಡಕವಾಗಿವೆ.
  • ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಇಂಟನಾರ್ಯಷನಲ್ ಪ್ರೆಸ್ ಇನ್ಸ್ಟಿಟ್ಯೂಟ್) : ಪತ್ರಿಕಾ ಸ್ವಾತಂತ್ರ್ಯ, ಸಂಬಂಧಗಳಿಗೆ ಸಂಬಂಧಪಟ್ಟ ಸಂಸ್ಥೆ (ನೋಡಿ-ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ).

ಇತರೆ

Regional organizationsಸಂಪಾದಿಸಿ

Organizations grouping almost all the countries in their respective continents. ರಷ್ಯಾis member of both the Council of Europe and the ACD.
Several smaller regional organizations with non-overlapping memberships.
Several non-overlapping large alliances. Softer colors indicate observer/associate or candidate countries.

ಯುರೋಪ್:

ಏಷ್ಯಾ:

ಯುರೇಷ್ಯಾ:

ಆಫ್ರಿಕ:

Western Hemisphere:

Trans-atlantic:

ಆರ್ಕ್ಟಿಕ್ ಮಹಾಸಮುದ್ರ:

ಹಿಂದೂ ಮಹಾಸಾಗರ:

ಪೆಸಿಫಿಕ್ ಮಹಾಸಾಗರ:

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು