ಶಿಕ್ಷಣವೇ ಶಕ್ತಿ

Sunday, 2 May 2021

🌎 ಸೌರಮಂಡಲದ ಗ್ರಹಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ

☄️☄️🌏
🌎 ಸೌರಮಂಡಲದ ಗ್ರಹಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ,👇

☄️  ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಗ್ರಹಗಳು ಸೂರ್ಯನ ಸುತ್ತಲೂ ಅಂಡಾಕಾರದ ಪಥದಲ್ಲಿ ಗಡಿಯಾರದ ದಿಕ್ಕಿಗೆ ವಿರುದ್ಧವಾಗಿ ಚಲಿಸುತ್ತವೆ ,

☄️  ಸೌರವ್ಯೂಹದಲ್ಲಿ ಈ ಮುಂಚೆ "ಒಂಬತ್ತು" ಗ್ರಹಗಳು ಇದ್ದವು 2006ರಲ್ಲಿ ಜೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಎಂಬ  ಗ್ರಹವನ್ನು ತೆಗೆದುಹಾಕಿ, ಈಗ ಪ್ರಸ್ತುತ 8 ಗ್ರಹಗಳಿವೆ , 

 ☄️ ಎಂಟು ಗ್ರಹಗಳು👇

1) ಬುಧ ಗ್ರಹ
2) ಶುಕ್ರ ಗ್ರಹ , 
3) ಭೂಮಿ ಗ್ರಹ , 
4) ಮಂಗಳ ಗ್ರಹ,
5) ಗುರು ಗ್ರಹ
6) ಶನಿ ಗ್ರಹ , 
7) ಯುರೇನಸ್ ಗ್ರಹ
8) ನೆಪ್ಚೂನ್ ಗ್ರಹ

1}☄️ ಬುಧ ಗ್ರಹ (Mercury)

🌞 ಸೂರ್ಯನಿಗೆ ಸಮೀಪವಾದ ಗ್ರಹ, ಮತ್ತು ಸೌರಮಂಡಲದಲ್ಲಿ ಅತ್ಯಂತ ಚಿಕ್ಕದಾದ ಗ್ರಹವಾಗಿದೆ . 

🌞  ಸೂರ್ಯನಿಗೆ ಅತಿ ಸಮೀಪ ವಾಗಿರುವ ದಿಂದ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹವಾಗಿದೆ , 

🌞 ಬುಧ ಗ್ರಹವು ಕಂದು ಬಣ್ಣದಿಂದ ಕೂಡಿದೆ , 

🌞 ಈ ಗ್ರಹಕ್ಕೆ ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ ಯಾವುದೇ ಉಪಗ್ರಹ ಹೊಂದಿರುವುದಿಲ್ಲ , 
=====================

2}☄️ ಶುಕ್ರ ಗ್ರಹ (venus)

▪️ ಈ ಶುಕ್ರ ಗ್ರಹವನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯುತ್ತಾರೆ , 

▪️ ಸೌರವ್ಯೂಹದಲ್ಲಿ ಪರಿಭ್ರಮಣ( ಸೂರ್ಯನ ಸುತ್ತ) ಅವಧಿಗಿಂತ ಅಕ್ಷ ಭ್ರಮಣದ ( ತನ್ನ ಸುತ್ತ) ಅವಧಿ ಹೆಚ್ಚು ಹೊಂದಿರುವ ಗ್ರಹವಾಗಿದೆ , 

▪️ ಅತಿ ಹೆಚ್ಚು ಇಂಗಾಲದ ಡೈಯಾಕ್ಸೈಡ್ ಮತ್ತು ಸಲ್ಪೂರಿಕ್ ಆಮ್ಲ ಹೊಂದಿರುವುದರಿಂದ ಇದನ್ನು ಹಸಿರುಮನೆಯ ಗ್ರಹ ಎಂದು ಕರೆಯುತ್ತಾರೆ , 

▪️ ಇದು ಅತ್ಯಂತ ಪ್ರಕಾಶಮಾನವಾದ ಗ್ರಹ, ಮುಂಜಾನೆ ನಕ್ಷತ್ರ, ಬೆಳ್ಳಿಚುಕ್ಕಿ, ಮತ್ತು ರೈತನ ನಕ್ಷತ್ರ ಎಂದು ಕರೆಯುತ್ತಾರೆ , 

▪️ ಈ ಶುಕ್ರ ಗ್ರಹಕ್ಕೆ ಯಾವುದೇ ಉಪಗ್ರಹ ಗಳಿಲ್ಲ, ಇದನ್ನು ಹಳದಿ ಗ್ರಹ ಎಂದು ಸಹ ಕರೆಯುತ್ತಾರೆ,.
=====================
3}☄️ ಭೂಮಿ (Earth}

🔹 ಭೂಮಿಯು ಸೂರ್ಯನಿಗೆ ಮೂರನೇ ಸಮೀಪವಾದ ಗ್ರಹವಾಗಿದೆ , 

🔹 ಭೂಮಿ ಅತ್ಯಂತ ಭಾರವಾದ ಗ್ರಹ ಮತ್ತು ಅತಿ ಹೆಚ್ಚು ನೀರನ್ನು ಒಳಗೊಂಡಿರುವುದರಿಂದ ಇದನ್ನು ಜಲಾವೃತ ಗ್ರಹ ಎಂದು ಕರೆಯುತ್ತಾರೆ , 

🔹 ಭೂಮಿಯು ಜೀವರಾಶಿ ಮತ್ತು ವೈವಿಧ್ಯಮಯ ಸಸ್ಯಗಳಿಂದ ಕೂಡಿದ ಸೌರವ್ಯೂಹದ ಸುಂದರ ಗ್ರಹ'ಮತ್ತು ಜೀವಂತ ಗ್ರಹ ಎಂದು ಕರೆಯುತ್ತಾರೆ , 

🔹 ಭೂಮಿಯು ಗಾತ್ರದಲ್ಲಿ 5ನೇ ದೊಡ್ಡ ಗ್ರಹವಾಗಿದ್ದು ನೀಲಿ ಬಣ್ಣದಿಂದ ಕೂಡಿದೆ , 

🔹 ಭೂಮಿಯ ಅಕ್ಷ ಭ್ರಮಣ ಅವಧಿ 23 ಗಂಟೆ 56 ನಿಮಿಷ O.4 ಸೆಕೆಂಡ್ ಇದನ್ನು ನಾಕ್ಷತ್ರಿಕ ದಿನ ಎಂದು ಕರೆಯುತ್ತಾರೆ , 

🔹 ಭೂಮಿಯು ಪರಿಭ್ರಮಣ ಅವಧಿ 365 ದಿನ 5ಘಂಟೆ 48 ನಿಮಿಷ, ಇದನ್ನು ನಾಕ್ಷತ್ರಿಕ ವರ್ಷ ಎಂದು ಕರೆಯುತ್ತಾರೆ , 

🔹 ಭೂಮಿಯ ಒಟ್ಟು70.8% ನೀರು 29.2% ರಷ್ಟು ಭೂ ಭಾಗವಿದೆ , 

🔹 ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ

🔹 ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಎಂಟು ನಿಮಿಷಗಳು ಬೇಕಾಗುತ್ತೆ, ಅದೇ ರೀತಿ ಚಂದ್ರನ ಬೆಳಕು ಭೂಮಿಯನ್ನು ತಲುಪಲು 1.3 ಸೆಕೆಂಡ್ ಬೇಕು ,
=====================
4} ☄️ ಮಂಗಳ ಗ್ರಹ (Mars)

🔸 ಸೂರ್ಯನಿಗೆ 4ನೇ ಸಮೀಪವಾದ ಗ್ರಹವಾಗಿದ್ದು,  ಇದು ಹೆಚ್ಚಾಗಿ ಕಬ್ಬಿನ ಆಕ್ಸೈಡ್ ಹೊಂದಿರುವುದರಿಂದ ಇದು ಕೆಂಪುಬಣ್ಣವನ್ನು ಹೊಂದಿದೆ ,

🔸 ಈ ಗ್ರಹಣ ರೋಮನ್ನರ ಯುದ್ಧದೇವತೆ, ಅಂಗಾರಕ, ಕುಜಗ್ರಹ ಎಂದು ಸಹ  ಕರೆಯುತ್ತಾರೆ ,  

🔸 ಮಂಗಳ ಗ್ರಹವು ಫೋಬೋಸ್  ಮತ್ತು ಡಿಮೋಸ್ ಎಂಬ ಎರಡು ಉಪಗ್ರಹಗಳನ್ನು ಹೊಂದಿದೆ, 

🔸 ಮಂಗಳ ಗ್ರಹದ ಹೊರಮೈ ಹಲವಾರು ಜ್ವಾಲಮುಖಿ ಪರ್ವತಗಳಿಂದ ಕೂಡಿದೆ . 

🔸 ಇಸ್ರೋ ಬಾಹ್ಯಾಕಾಶ ಸಂಸ್ಥೆಯು 2013ರಲ್ಲಿ ಮಂಗಳಗ್ರಹಕ್ಕೆ, ಮಾರ್ಸ್ ಆರ್ಬಿಟಲ್ ಮಿಷನ್ ಎಂಬ ಉಪಗ್ರಹವನ್ನು ಉಡಾಯಿಸಿತು,
=====================

5) ☄️ ಗುರು ಗ್ರಹ

🌷 ಸೂರ್ಯನಿಗೆ 5ನೇ ಸಮೀಪವಾದ ಗ್ರಹ ಮತ್ತು ಸೌರಮಂಡಲದ ಅತ್ಯಂತ ದೊಡ್ಡ ಗ್ರಹ , 

🌷 ಶುಕ್ರಗ್ರಹದ ನಂತರ ಅತಿ ಹೆಚ್ಚು ಪ್ರಜ್ವಲಿಸುವ ಎಡನೇ ಗ್ರಹವಾಗಿದೆ , 

🌷 ಈ ಗುರು ಗ್ರಹ ಸೌರಮಂಡಲದಲ್ಲಿ ಅತಿ ಕಡಿಮೆ ಅಕ್ಷಭ್ರಮಣ ಅವಧಿಯನ್ನು ಹೊಂದಿರುವ ಗ್ರಹ (9ಘಂಟೆ 50ನಿಮಿಷ )

🌷 ಸೌರವ್ಯೂಹದಲ್ಲಿ ಅತಿ ಹೆಚ್ಚು ನೈಸರ್ಗಿಕ ಉಪಗ್ರಹಗಳನ್ನು ಹೊಂದಿರುವ ಗ್ರಹ , 

🌷 ಗುರುಗ್ರಹದ ಪ್ರಮುಖ ಉಪಗ್ರಹಗಳು ಗ್ಯಾನಿಮೇಡ್ , ಐಓ , ಯುರೋಪ್ , ಮತ್ತು ಕ್ಯಾಲಿಸ್ಟೊ , ಇವುಗಳನ್ನು ಗೆಲಿಲಿಯೋ ಗುರುತಿಸುವುದರಿಂದ ಗೆಲಿಲಿಯೋ ಉಪಗ್ರಹಗಳ ಎಂದು ಸಹ ಕರೆಯುತ್ತಾರೆ, 

🌷 ಗ್ಯಾನಿಮೇಡ್ ಎಂಬ ಉಪಗ್ರಹವು ಸೌರಮಂಡಲದಲ್ಲಿ ಅತಿದೊಡ್ಡ ಉಪಗ್ರಹವಾಗಿದೆ,

 🌷 ಗುರುಗ್ರಹದ ಕೆಲವು ಉಪಗ್ರಹಗಳು ಗುರುಗ್ರಹದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ . 
=====================
6)☄️ ಶನಿ ಗ್ರಹ (Saturn)

🔅 ಶನಿಗ್ರಹವು ಸೌರಮಂಡಲದಲ್ಲಿ ಎರಡನೇ ದೊಡ್ಡ ಗ್ರಹವಾಗಿದೆ , 

🔅 ಶನಿಗ್ರಹವು ಸುತ್ತಲೂ ಬಳೆಗಳನ್ನು ಹೊಂದಿದೆ ,

🔅 ಶನಿಗ್ರಹವು ಸೌರಮಂಡಲದಲ್ಲಿಯೇ  ಅತಿ ಹೆಚ್ಚು ಉಪಗ್ರಹಗಳನ್ನು  ಹೊಂದಿರುವ ಗ್ರಹ ,

🔅 ಶನಿಗ್ರಹದ ಪ್ರಮುಖ ಉಪಗ್ರಹ ಟೈಟಾನ್

🔅 ಶನಿಗ್ರಹವು ಆಕಾಶಕಾಯಗಳಲ್ಲಿ ಉಂಗುರಗಳಿಂದ ಕೂಡಿದೆ, ಈ ಗ್ರಹವು ಉಂಗುರಗಳ ವ್ಯವಸ್ಥೆ ಹೊಂದಿದೆ ಎಂದು (1655ರಲ್ಲಿ )ತಿಳಿಸಿದರು ಕ್ರಿಶ್ಚಿಯನ್ ಹೇಗೇನ್ಸ್ ಅವರು. ನಂತರ1675ರಲ್ಲಿ ಕ್ಯಾಸಿನೊ ಅವರು ಈ ಗ್ರಹದ ಉಂಗುರಗಳು ಬಿಡಿಬಿಡಿಯಾಗಿ ವೆ, ಮತ್ತು ಮಂಜುಗಡ್ಡೆ ಅಂತ ವಸ್ತುಗಳಿಂದ ನಿರ್ಮಾಣವಾಗಿದೆ ಎಂದು ಹೇಳಿದರು, 

🔅 ಶನಿ ಗ್ರಹ ಸೌರಮಂಡಲದಲ್ಲಿಯೇ  ಅತಿಸುಂದರ ಗ್ರಹವಾಗಿದೆ , 
=====================
7)☄️ ಯುರೇನಸ್ ಗ್ರಹ (Urenus)

👉 ಸೂರ್ಯನಿಗೆ 7ನೇ  ಸಮೀಪವಾದ ಗ್ರಹ 

ಸೂರ್ಯವ್ಯೂಹದ ಗ್ರಹಗಳು


No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು