ಶಿಕ್ಷಣವೇ ಶಕ್ತಿ

Thursday, 11 February 2021

ನಮ್ಮ ದೇಶದ ಸಂಪೂರ್ಣ ಮಾಹಿತಿ


ಕ್ರಿ.ಪೂ.2005-1500. ಹರಪ್ಪ ನಾಗರಿಕತೆ. ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
 ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
 ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
 ಕ್ರಿ.ಶ.907-1256 ಚೋಳ ಸಾಮ್ರಾಜ್ಯ. 
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
 ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
 ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
 ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
 ಕ್ರಿ.ಶ.1290-1320  ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
 ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
 ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
 ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
 ಕ್ರಿ.ಶ.1627-1680 ಶಿವಾಜಿಯ ಕಾಲ.
 ಕ್ರಿ.ಶ.1757 ಪ್ಲಾಸಿ ಕದನ.
 ಕ್ರಿ.ಶ.1764 ಬಕ್ಸಾರ ಕದನ.
 ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
 ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
 ಕ್ರಿ.ಶ.1824-ಕಿತ್ತೂರು ದಂಗೆ.
 ಕ್ರಿ.ಶ.1857 ಸಿಪಾಯಿ ದಂಗೆ.
 ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
 ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...
⭐1973-ಕರ್ನಾಟಕ ಮರುನಾಮಕರಣ.

#ಪ್ರಮುಖ_ಹುದ್ದೆಗಳ_ಅವದಿ 🍡

⚫ ರಾಷ್ಟ್ರಪತಿ=5ವರ್ಷ
⚫ ಉಪರಾಷ್ಟ್ರಪತಿ=5ವರ್ಷ
⚫ ರಾಜ್ಯ ಸಭಾ ಸದಸ್ಯ=6ವರ್ಷ
⚫ ಲೋಕ ಸಭಾ ಸದಸ್ಯ=5ವರ್ಷ
⚫ ರಾಜ್ಯಪಾಲರು= 5ವರ್ಷ
⚫ ವಿಧಾನ ಸಭಾ ಸದಸ್ಯ=5ವರ್ಷ
⚫ ವಿಧಾನ ಪರಿಷತ್ ಸದಸ್ಯ=6ವರ್ಷ
📌📌📌📌📌📌📌

🍡 ಚುನಾವಣೆ ಸ್ಪರ್ಧಿಸುವ ವಯಸ್ಸು 🍡
⚫ ರಾಷ್ಟ್ರಪತಿ=35ವರ್ಷ
⚫ ಉಪರಾಷ್ಟ್ರಪತಿ=35ವರ್ಷ
⚫ ರಾಜ್ಯ ಸಭಾ ಸದಸ್ಯ=30ವರ್ಷ
⚫ ಲೋಕ ಸಭಾ ಸದಸ್ಯ=25ವರ್ಷ
⚫ ರಾಜ್ಯಪಾಲರು= 35ವರ್ಷ
⚫ ವಿಧಾನ ಸಭಾ ಸದಸ್ಯ=25ವರ್ಷ
⚫ ವಿಧಾನ ಪರಿಷತ್ ಸದಸ್ಯ=30ವರ್ಷ
⚫ ಗ್ರಮ ಪಂಜಾಯತ್ ಸದಸ್ಯ=21ವರ್ಷ
⚫ ಮತದಾನ ವಯಸ್ಸು=18ವರ್ಷ
📌📌📌📌📌📌📌

🍡 ಭಾರತದ ನೌಕಾಪಡೆ ಕಛೇರಿ🍡
⚫ ಪಶ್ಚಿಮ ನೌಕಾಪಡೆ=ಮುಂಬಯಿ
⚫ ಪೂರ್ವ ನೌಕಾಪಡೆ=ವಿಶಾಖಪಟ್ಟಣಂ
⚫ ದಕ್ಷಿಣ ನೌಕಾಪಡೆ=ಕೊಚ್ಚಿ
⚫ ಆಗ್ನೇಯ ನೌಕಾಪಡೆ=ಅಂಡಮಾನ್ ನಿಕೋಬಾರ್
📌📌📌📌📌📌📌

🍡ಪ್ರಾಣಿಗಳ ಉಸಿರಾಟದ ಅಂಗಗಳು🍡
⚫ಮೀನು=ಕಿವಿರು
⚫ಕಪ್ಪೆ=ತೇವಭರಿತ ಚರ್ಮ ಹಾಗೂ ಶ್ವಾಸಕೋಶ
⚫ಸಸ್ತನಿ= ಶ್ವಾಸಕೋಶ
⚫ಎರೆಹುಳು ಜಿಗಣಿ= ಚರ್ಮ
⚫ಕೀಟಗಳು=ಟಕ್ರಯಾ(ಶ್ವಾಸನಾಳ)
📌📌📌📌📌📌📌

🍡ಪ್ರಪಂಚದ ಪ್ರಮುಖ ಸಸ್ಯವರ್ಗಗಳು🍡
⚫ಅಮೆರಿಕಾ=ಪ್ರೈರಿ ಹುಲ್ಲುಗಾವಲು
⚫ದಕ್ಷಿಣ ಅಮೆರಿಕಾ=ಪಂಪಸ್ ಹುಲ್ಲುಗಾವಲು
⚫ಆಫ್ರಿಕಾ=ಸವನ್ನಾ ಹುಲ್ಲುಗಾವಲು
⚫ದಕ್ಷಿಣ ಆಫ್ರಿಕಾ=ವೈಲ್ಡಿ ಹುಲ್ಲುಗಾವಲು
⚫ಆಸ್ಟ್ರೇಲಿಯಾ=ಡೌನ್ಸ್ ಹುಲ್ಲುಗಾವಲು
⚫ಏಷ್ಯಾ=ಸ್ಟೆಪಿಸ್ ಹುಲ್ಲುಗಾವಲು
⚫ಯುರೋಪ್=ಸ್ಟೆಪಿಸ್ ಹುಲ್ಲುಗಾವಲು
⚫ಗಯಾನಾ=ಲಾನಸ್ ಹುಲ್ಲುಗಾವಲು
⚫ಹಂಗೇರಿ=ಪುಷ್ಟಿಸ್ ಹುಲ್ಲುಗಾವಲು

🍡ಕಣಿವೆ ಮಾರ್ಗ🍡
⚫ಶಿವಮೊಗ್ಗದಿಂದ ಉಡುಪಿ=ಆಗುಂಬೆ ಘಾಟ
⚫ಚಿಕ್ಕಮಂಗಳೂರುದಿಂದ ಮಂಗಳೂರು=ಚಾರ್ಮಡಿ ಘಾಟ
⚫ಶಿರೂರುದಿಂದ ಬೈಂದೂರು=ಕೊಲ್ಲೂರು ಘಾಟ

* ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು
1.ವಿಶಾಖಪಟ್ಟಣ     --  ಭಾಗ್ಯನಗರ,(city of destiny)
2.ವಿಜಯವಾಡ      --  ಗೆಲುವಿನ ಸ್ಥಾನ (place of victory)  
3.ಗುಂಟುರು         --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ 
 

 ಉತ್ತರಪ್ರದೇಶ
1.ಆಗ್ರಾ           --  ತಾಜನಗರಿ
2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3.ಲಕ್ನೋ          --  ನವಾಬರ ನಗರ (city of nawab's)
4.ಪ್ರಯಾಗ        --  ದೇವರ ಮನೆ
5.ವಾರಾಣಾಸಿ     --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವ ಜೀವಂತ ಹಳೆಯ ನಗರ, ಪವಿತ್ರ ನಗರ.

ಗುಜರಾತ
1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 
2.ಸೂರತ್           --   ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
ಕರ್ನಾಟಕ
1.ಬೆಂಗಳೂರು    --  ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2.ಕೂರ್ಗ್ಸ           --   ಭಾರತದ ಸ್ಕಾಟ್ಲೆಂಡ್.
3.ಮೈಸೂರ         --   ಸಾಂಸ್ಕ್ರತಿಕ ನಗರಿ.
ಓಡಿಸ್ಸಾ
1.ಭುವನೇಶ್ವರ    --  ಭಾರತದ ದೇವಾಲಯ ನಗರ
ತಮಿಳುನಾಡು
1.ಕೊಯಮತ್ತೂರು   --    ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2.ಮಧುರೈ           --    ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
3.ಸಲೇಂ             --    ಮಾವಿನ ಹಣ್ಣಿನ ನಗರ. 
4.ಚೆನ್ನೈ              --    ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india
ಪಶ್ಚಿಮ ಬಂಗಾಳ
1.ಡಾರ್ಜಿಲಿಂಗ್    --   ಬೆಟ್ಟಗಳ ರಾಣಿ,
2.ದುರ್ಗಾಪೂರ    --   ಭಾರತದ ರೋರ್
3.ಮಾಲ್ಡಾ         --   ಮಾವಿನ ಹಣ್ಣಿನ ನಗರ. 
4.ಕಲ್ಕತ್ತ          --    ಅರಮನೆಗಳ ನಗರ. 
ಜಾರ್ಖಂಡ್ 
1.ಧನಬಾದ್         --   ಭಾರತದ ಕಲ್ಲಿದ್ದಲು ರಾಜಧಾನಿ.
2.ಜಮಶೇಡಪುರ     --   ಭಾರತದ ಸ್ಟೀಲ್ ನಗರ
ತೆಲಂಗಾಣ
1.ಹೈದ್ರಾಬಾದ್      --  ಮುತ್ತುಗಳ ನಗರ, ಹೈಟೆಕ್ ಸಿಟಿ.
ರಾಜಸ್ತಾನ    
1.ಜೈಪುರ           --  ಗುಲಾಬಿ ನಗರ, ಭಾರತದ ಪ್ಯಾರಿಸ್
2.ಜೈಸಲ್ಮೇರ್       --  ಭಾರತದ ಸ್ವರ್ಣ ನಗರ
3.ಉದಯಪುರ      --  ಬಿಳಿನಗರ
4.ಜೋಧಪುರ       --  ನೀಲಿನಗರ, ಸೂರ್ಯನಗರ.
ಜಮ್ಮು ಕಾಶ್ಮೀರ
1.ಕಾಶ್ಮೀರ         --     ಭಾರತದ ಸ್ವಿಜರ್ಲೇಂಡ್
2.ಶ್ರೀನಗರ        --     ಸರೋವರಗಳ ನಗರ
ಕೇರಳ
1.ಕೊಚ್ಚಿ           --     ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು 
2.ಕೊಲ್ಲಂ          --     ಅರಬ್ಬೀ ಸಮುದ್ರದ ರಾಜ.
ಮಹಾರಾಷ್ಟ್ರ
1.ಕೊಲ್ಲಾಪುರ      --     ಕುಸ್ತಿಪಟುಗಳ ನಗರ
2.ಮುಂಬೈ         --     ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್.
3.ನಾಗ್ಪುರ್         --    ಕಿತ್ತಳೆ ನಗರ
4.ಪುಣೆ             --     ದಕ್ಷಿಣದ ರಾಣಿ(deccan queen)
5.ನಾಸಿಕ್         --      ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ.
ಉತ್ತರಖಂಡ
1.ಋಷಿಕೇಶ       --    ಋಷಿಗಳ ನಗರ, ಯೋಗ ನಗರ.
ದೆಹಲಿ
1.ದೆಹಲಿ          --     ಚಳುವಳಿಗಳ ನಗರ.
ಪಯಣ
1.ಪಟಿಯಾಲಾ    --    royal city of india, 
2.ಅಮೃತಸರ್    --    ಸ್ವರ್ಣಮಂದಿರದ ನಗರ.
ಹರಿಯಾಣ
1.ಪಾಣಿಪತ್ತ      --    ನೇಕಾರರ ನಗರ, ಕೈಮಗ್ಗದ ನಗರ.

: ★★★ ಕರ್ನಾಟಕ ನಮ್ಮ ರಾಜ್ಯ★★★ 

 1.ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
 2.ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
 3.ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
 4.ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
5.ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
 6.ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
7.ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
8.ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
9.1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.

10.ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
11.ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
12.1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
13.ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

★★★ ಕರ್ನಾಟಕದ ಪ್ರಥಮಗಳು ★★★

1.ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
2.ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
3.ಕನ್ನಡ ಭಾಷೆಯ ಮೊದಲ ಪದ : ಇಸಿಲ.
4.ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
5.ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
6.ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
7.ಕನ್ನಡದ ಮೊದಲ ವಂಶ : ಕದಂಬ
8.ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
9.ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.

10.ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

★★★ ಕರ್ನಾಟಕದ ಭೌಗೋಳಿಕ ಸ್ಥಾನ★★★

1.ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
2.ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
3.ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ.
4.ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ.
5.ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕ.
6.ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ.
7.ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ.
8.ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
9.ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750
10.ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400
11.ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು – ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
12.ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

★★★ ಕರ್ನಾಟಕದ ವಿಸ್ತೀರ್ಣ ★★★

1.ಒಟ್ಟು ವಿಸ್ತೀರ್ಣ – 191791 ಚಕಿಮೀಗಳು.
2.ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83
3.ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
4.ಜನಸಂಖ್ಯೆ – 61130704 (2011 ಜನಗಣತಿಯಂತೆ)
5.ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
6.ಕಂದಾಯ ವಿಭಾಗಗಳು – 04
7.ಮಹಾನಗರಗಳು – 10
8.ಜಿಲ್ಲೆಗಳು – 30
9.ತಾಲ್ಲೂಕಗಳು – 177
10.ಹೋಬಳಿಗಳು – 347
11.ಮುನಸಿಪಲ್ ಕಾರ್ಪೋರೇಷನಗಳು – 219
12.ಮಹಾನಗರಗಳು – ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
13.ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
14.ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ
15.ನಾಲ್ಕು ಕಂದಾಯ ವಿಭಾಗಗಳು – ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

★★★ ಕರ್ನಾಟಕದ ಒಂದು ಪಕ್ಷಿನೋಟ ★★★

1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್)
2.ರಾಜ್ಯ ಪ್ರಾಣಿ – ಆನೆ.
3.ರಾಜ್ಯ ವೃಕ್ಷ – ಶ್ರೀಗಂಧ.
4.ರಾಜ್ಯಪುಷ್ಪ – ಕಮಲ
5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.
11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12.ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75
14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16.ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
17.ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18.ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
19.ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್,ನಿಜಲಿಂಗಪ್ಪ
20.ವಿಧಾನಸಭೆಯ ಮೊದಲ ಸಭಾಪತಿ – ವಿ,ವೆಂಕಟಪ್ಪ
21.ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22.ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ – ಆರ್ , ವೆಂಕಟರಾಮಯ್ಯ.
23.ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು – ಹಾಸನದಲ್ಲಿ
24.ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.

ಅಂತೆಯೇ ,

2017ರ ಗಣತಿಯ ಪ್ರಕಾರ ಭಾರತದ ಧರ್ಮಾಧಾರಿತ ಜನಸಂಖ್ಯೆ*
         *ಭಾರತಾದ್ಯಂತ ಜನಸಂಖ್ಯೆ*
      ಹಿಂದೂ ಜನಸಂಖ್ಯೆ - 74.33%
      ಮುಸ್ಲಿಂ ಜನಸಂಖ್ಯೆ - 14.20%
             ಕ್ರಿಶ್ಚಿಯನ್ - 5.84%
                  ಸಿಖ್ಖ್ - 1.86%
     ಜನಾಂಗೀಯ ಧರ್ಮಗಳು - 1.35%
               ಬೌದ್ಧ - 0.82%
        ಧರ್ಮವಿಲ್ಲದವರು - 0.48%
             ಇತರ - 0.47% 
               
               *ಆಂಧ್ರಪ್ರದೇಶ*
ಹಿಂದೂ - 89.0%
ಮುಸ್ಲಿಂ - 9.2%
ಕ್ರಿಶ್ಚಿಯನ್ - 1.6%(3.0%)
ಇತರ - 0.2%
             
            *ಅರುಣಾಚಲ ಪ್ರದೇಶ*
ಹಿಂದೂ - 34.6%
ಜನಾಂಗೀಯ ಧರ್ಮಗಳು - 30.7%
ಬೌದ್ಧ - 13.0%
ಕ್ರಿಶ್ಚಿಯನ್ - 18.7%(25%)
ಮುಸ್ಲಿಂ - 1.9%

                   *ಅಸ್ಸಾಂ*
ಹಿಂದೂ - 65%
ಮುಸ್ಲಿಂ - 30.9%
ಕ್ರಿಶ್ಚಿಯನ್ - 3.7%(7.0%)
ಬೌದ್ಧ - 0.2%
ಇತರ - 0.2%

                 *ಬಿಹಾರ*
ಹಿಂದೂ - 83.2%
ಮುಸ್ಲಿಂ - 16.5%
ಕ್ರಿಶ್ಚಿಯನ್ - 0.1%(0.3%)

                 *ಛತ್ತೀಸಘಡ್*
 ಹಿಂದೂ - 94.7%
ಮುಸ್ಲಿಂ - 2.0%
ಕ್ರಿಶ್ಚಿಯನ್ - 1.9%(2.5%)
ಇತರ - 1.5%

                   *ದೆಹಲಿ*
ಹಿಂದೂ - 82%
ಮುಸ್ಲಿಂ - 11.7%
ಸಿಖ್ - 4.0%
ಜೈನ್ - 1.1%
ಕ್ರಿಶ್ಚಿಯನ್ - 0.9%(1.86%)

                 *ಗೋವಾ*
ಹಿಂದೂ - 65.8%
ಕ್ರಿಶ್ಚಿಯನ್ - 26.7%
ಮುಸ್ಲಿಂ - 6.8%
ಇತರ - 0.2%

                  *ಗುಜರಾತ್*
ಹಿಂದೂ - 89.1%
ಮುಸ್ಲಿಂ - 9.1%
ಜೈನ್ - 1.0%
ಕ್ರಿಶ್ಚಿಯನ್ - 0.6%(1.2%)

                *ಹರ್ಯಾಣ*
ಹಿಂದೂ - 88.2%
ಮುಸ್ಲಿಂ - 5.8%
ಸಿಖ್ - 5.5%
ಜೈನ್ - 0.3%
ಕ್ರಿಶ್ಚಿಯನ್ - 0.1%(0.3%)

           *ಹಿಮಾಚಲ ಪ್ರದೇಶ*
ಹಿಂದೂ - 95.4%
ಮುಸ್ಲಿಂ - 2.0%
ಬೌದ್ಧ - 1.3%
ಸಿಖ್ - 1.2%
ಕ್ರಿಶ್ಚಿಯನ್ - 0.1%(0.2%)

             *ಜಮ್ಮು ಕಾಶ್ಮೀರ*
ಮುಸ್ಲಿಂ - 67.0%
ಹಿಂದೂ - 29.6%
ಸಿಖ್ - 2.0%
ಬೌದ್ಧ - 1.1%
ಕ್ರಿಶ್ಚಿಯನ್ - 0.2%(0.3%)

                *ಜಾರ್ಖಂಡ್*
ಹಿಂದೂ - 68.6%
ಮುಸ್ಲಿಂ - 13.8%
ಬುಡಕಟ್ಟು ಧರ್ಮ - 13.0%
ಕ್ರಿಶ್ಚಿಯನ್ - 4.1%(6.0%)

                *ಕರ್ನಾಟಕ*
ಹಿಂದೂ - 83.9%
ಮುಸ್ಲಿಂ - 12.2%
ಕ್ರಿಶ್ಚಿಯನ್ - 1.9%(4.0%)
ಜೈನ್ - 0.8%
ಬೌದ್ಧ - 0.7%

                   *ಕೇರಳ*
ಹಿಂದೂ - 56.2%
ಮುಸ್ಲಿಂ - 24.7%
ಕ್ರಿಶ್ಚಿಯನ್ - 19.0%(35.5%)

               *ಮಧ್ಯ ಪ್ರದೇಶ*
ಹಿಂದೂ - 91.1%
ಮುಸ್ಲಿಂ - 6.4%
ಜೈನ್ - 0.9%
ಕ್ರಿಶ್ಚಿಯನ್ - 0.3%(2.2%)
ಇತರ - 1.2%

                 *ಮಹಾರಾಷ್ಟ್ರ*
ಹಿಂದೂ - 80.4%
ಮುಸ್ಲಿಂ - 10.6%
ಬೌದ್ಧ - 6.0%
ಜೈನ್ - 1.3%
ಕ್ರಿಶ್ಚಿಯನ್ - 1.1%(2%)
ಇತರ - 0.4%

                   *ಮಣಿಪುರ*
ಹಿಂದೂ - 46%
ಕ್ರಿಶ್ಚಿಯನ್ - 34%(41.8%)
ಮುಸ್ಲಿಂ - 8.8%
ಇತರ - 11.2%

                 *ಮೇಘಾಲಯ*
ಕ್ರಿಶ್ಚಿಯನ್ - 70.3%(76%)
ಹಿಂದೂ - 13.3%
ಮುಸ್ಲಿಂ - 4.3%
ಇತರ - 11.8%

              *ಮಿಜೋರಾಮ್*
ಕ್ರಿಶ್ಚಿಯನ್ - 87%(89.6%)
ಬೌದ್ಧ - 7.9%
ಹಿಂದೂ - 3.6%
ಮುಸ್ಲಿಂ - 1.1%

               *ನಾಗಾಲ್ಯಾಂಡ್*
ಕ್ರಿಶ್ಚಿಯನ್ - 90%(93.1%)
ಹಿಂದೂ - 7.7%
ಮುಸ್ಲಿಂ - 1.8%

                  *ಒರಿಸ್ಸಾ*
ಹಿಂದೂ - 94.4%
ಕ್ರಿಶ್ಚಿಯನ್ - 2.4%(2.0%)
ಮುಸ್ಲಿಂ - 2.1%
ಇತರ - 1.1%

                  *ಪಂಜಾಬ್*
ಸಿಖ್ - 59.9%
ಹಿಂದೂ - 36.9%
ಕ್ರಿಶ್ಚಿಯನ್ - 1.2%(2.2%)
ಮುಸ್ಲಿಂ - 1.6%
ಇತರ - 0.4%

                  *ರಾಜಸ್ಥಾನ*
ಹಿಂದೂ - 88.8%
ಮುಸ್ಲಿಂ - 8.5%
ಸಿಖ್ - 1.4%
ಜೈನ್ - 1.2%
ಕ್ರಿಶ್ಚಿಯನ್ - 0.1%(0.4%)

                    *ಸಿಕ್ಕಿಂ*
ಹಿಂದೂ - 60.9%
ಬೌದ್ಧ - 28.1%
ಕ್ರಿಶ್ಚಿಯನ್ - 6.7%(7.5%)
ಮುಸ್ಲಿಂ - 1.4%
ಇತರ - 2.6%

               *ತಮಿಳುನಾಡು*
ಹಿಂದೂ - 88.1%
ಕ್ರಿಶ್ಚಿಯನ್ - 6.1%(19.0%)
ಮುಸ್ಲಿಂ - 5.6%
ಇತರ - 0.2%

                   *ತ್ರಿಪುರ*
ಹಿಂದೂ - 85.6%
ಮುಸ್ಲಿಂ - 8.0%
ಬೌದ್ಧ - 3.1%
ಕ್ರಿಶ್ಚಿಯನ್ - 3.2%(5.5%)

            *ಉತ್ತರ ಪ್ರದೇಶ*
ಹಿಂದೂ -  80.6%
ಮುಸ್ಲಿಂ - 18.5%
ಸಿಖ್ - 0.4%
ಬೌದ್ಧ - 0.2%
ಕ್ರಿಶ್ಚಿಯನ್ - 0.1%(0.3%)
ಜೈನ್ - 0.1%

               *ಉತ್ತರಕಾಂಡ್*
ಹಿಂದೂ - 85%
ಮುಸ್ಲಿಂ - 11.9%
ಸಿಖ್ - 2.5%
ಕ್ರಿಶ್ಚಿಯನ್ - 0.3%(0.6%)
ಬೌದ್ಧ - 0.1%
ಜೈನ್ - 0.1%

             *ಪಶ್ಚಿಮ ಬಂಗಾಳ*
ಹಿಂದೂ - 72.5%
ಮುಸ್ಲಿಂ - 25.2%
ಕ್ರಿಶ್ಚಿಯನ್ - 0.6%(1.2%)
ಬೌದ್ಧ - 0.3%
ಇತರ - 1.3%

2017ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ, ದ್ರೋಣಾಚಾರ್ಯ, ಅರ್ಜನ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಗಳನ್ನೊಂಡ ಸಂಪೂರ್ಣ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು ಕ್ರೀಡಾ ಸಚಿವಾಲಯ ಘೋಷಿಸಿದೆ... ✍

2017 ಆಗಸ್ಟ್ 29ರಂದು ರಾಷ್ಟ್ರಪತಿ ಭವನದಲ್ಲಿ ಜರಗಲಿರುವ ವಿಶೇಷ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಅವರಿಂದ ಪ್ರಶಸ್ತಿಗೆ ಭಾಜನವಾಗಲಿದ್ದಾರೆ.
ಸಂಪೂರ್ಣ ಪಟ್ಟಿ ಇಲ್ಲಿದೆ:

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ 2017:

1. ಶ್ರೀ ದೇವೇಂದ್ರ, ವಿಭಾಗ- ಪ್ಯಾರಾ ಅಥ್ಲೀಟ್
2. ಶ್ರೀ ಸರ್ದಾರ್ ಸಿಂಗ್, ವಿಭಾಗ- ಹಾಕಿ

ದ್ರೋಣಾಚಾರ್ಯ ಪ್ರಶಸ್ತಿ 2017:

1. ದಿವಂಗತ ಡಾ.ಆರ್. ಗಾಂಧಿ, ವಿಭಾಗ- ಅಥ್ಲೀಟಿಕ್ಸ್
2. ಹೀರಾ ನಂದ್ ಕಟರಿಯಾ, ವಿಭಾಗ - ಕಬಡ್ಡಿ
3. ಜಿ.ಎಸ್.ಎಸ್.ವಿ ಪ್ರಸಾದ್, ವಿಭಾಗ - ಬ್ಯಾಡ್ಮಿಂಟನ್ (ಜೀವಮಾನ)
4. ಬ್ರಿಜ್ ಭುಷನ್ ಮೊಹಂತಿ, ವಿಭಾಗ - ಬಾಕ್ಸಿಂಗ್ (ಜೀವಮಾನ)
5. ಪಿ.ಎ. ರಾಫೇಲ್, ವಿಭಾಗ- ಹಾಕಿ (ಜೀವಮಾನ),
6. ಸಂಜಯ್ ಚಕ್ರವರ್ತಿ, ವಿಭಾಗ - ಶೂಟಿಂಗ್ (ಜೀವಮಾನ)
7. ರೋಶನ್ ಲಾಲ್, ವಿಭಾಗ- ಕುಸ್ತಿ (ಜೀವಮಾನ)

ಅರ್ಜುನ ಪ್ರಶಸ್ತಿ 2017

1. ವಿ.ಜೆ, ಸುರೇಖಾ, ವಿಭಾಗ- ಆರ್ಚರಿ
2. ಖುಷ್ಬಿರ್ ಕೌರ್, ವಿಭಾಗ - ಅಥ್ಲೇಟಿಕ್ಸ್
3. ಅರೋಕಿಯಾ ರಾಜೀವ್, ವಿಭಾಗ - ಅಥ್ಲೇಟಿಕ್ಸ್
4. ಪ್ರಶಾಂತಿ ಸಿಂಗ್, ವಿಭಾಗ - ಬಾಸ್ಕೆಟ್ಬಾಲ್
5. ಸಬ್. ಲೈಶ್ರಾಂ ದೆಬೆಂದ್ರೊ ಸಿಂಗ್, ವಿಭಾಗ- ಬಾಕ್ಸಿಂಗ್
6. ಚೇತೇಶ್ವರ ಪೂಜಾರ, ವಿಭಾಗ- ಕ್ರಿಕೆಟ್
7. ಹರ್ಮನ್ಪ್ರೀತ್ ಕೌರ್, ವಿಭಾಗ - ಕ್ರಿಕೆಟ್
8. ಬೆಂಬೆಮ್ ದೇವಿ, ವಿಭಾಗ - ಫುಟ್ಬಾಲ್
9. ಎಸ್.ಎಸ್.ಪಿ ಚೌರಾಸಿಯಾ, ವಿಭಾಗ - ಗಾಲ್ಫ್
10. ಎಸ್. ವಿ, ಸುನಿಲ್, ವಿಭಾಗ- ಹಾಕಿ
11. ಜಸ್ವೀರ್ ಸಿಂಗ್, ವಿಭಾಗ - ಕಬಡ್ಡಿ
12. ಪಿ.ಎಲ್. ಪ್ರಕಾಶ್, ವಿಭಾಗ - ಶೂಟಿಂಗ್
13. ಅಮಲ್ರಾಜ್, ವಿಭಾಗ - ಟೇಬಲ್ ಟೆನಿಸ್
14. ಸಾಕೇತ್ ಮೈನೇನಿ, ವಿಭಾಗ - ಟೆನಿಸ್
15. ಸತ್ಯವರ್ತ್ ಕಡಿಯನ್, ವಿಭಾಗ - ಕುಸ್ತಿ
16. ಮರಿಯಪ್ಪನ್ ತಂಗವೇಲು, ವಿಭಾಗ - ಪ್ಯಾರಾ ಅಥ್ಲೀಟ್
17. ವರುಣ್ ಸಿಂಗ್ ಭಾಟಿ,ವಿಭಾಗ - ಪ್ಯಾರಾ ಅಥ್ಲೀಟ್

ಧ್ಯಾನ್ ಚಂದ್ ಪ್ರಶಸ್ತಿ 2017

1. ಭುಪೇಂದ್ರ ಸಿಂಗ್, ವಿಭಾಗ - ಅಥ್ಲೇಟಿಕ್ಸ್
2. ಸೈಯದ್ ಶಾಹೀದ್ ಹಕೀಂ, ವಿಭಾಗ - ಫುಟ್ಬಾಲ್
3. ಸುಮರೈ ಟೆಟೆ, ವಿಭಾಗ - ಹಾಕಿ.

ಭಾರತ–ನೇಪಾಳ ಸಂಬಂಧ ಸುಧಾರಿಸಲಿದೆ ಹೊಸ ಸೇತುವೆ

ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಮೇಚಿ ನದಿಯ ಮೇಲೆ ₹ 158.65 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಭಾರತ–ನೇಪಾಳ ನಡುವಣ ಸಂಬಂಧ ವೃದ್ಧಿಯಾಗುವಲ್ಲಿ ಈ ಸೇತುವೆ ಮಹತ್ವದ ಪಾತ್ರ ವಹಿಸಲಿದೆ ಎಂದು ಮೂಲಗಳು ಹೇಳಿವೆ

* ಮೇಚಿ ನದಿಯ ಮೇಲೆ ಈಗಾಗಲೇ ಇರುವ ಎರಡು ಪಥಗಳ ಸೇತುವೆಯ ಮೇಲಿನ ಸಂಚಾರ ಒತ್ತಡವನ್ನು ತಗ್ಗಿಸಲು ಹೊಸ ಸೇತುವೆ ನಿರ್ಮಿಸಲಾಗುತ್ತದೆ

* ಹಳೆಯ ಸೇತುವೆಯಿಂದ ಉತ್ತರದಲ್ಲಿ 165 ಮೀಟರ್‌ ದೂರದಲ್ಲಿ ಹೊಸ ಸೇತುವೆ ನಿರ್ಮಿಸಲಾಗುತ್ತದೆ

* ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಾಲದ ಮೂಲಕ ಭಾರತವೇ ಯೋಜನೆಯ ವೆಚ್ಚ ಭರಿಸಲಿದೆ

* ಭಾರತದ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಸೇತುವೆಯನ್ನು ನಿರ್ಮಿಸಲಿದೆ

* ಭಾರತ–ನೇಪಾಳದ ಮಧ್ಯೆ ಸರಕು ಸಾಗಣೆ ಮತ್ತಷ್ಟು ಸರಾಗವಾಗಲಿದೆ

* ಸರಕು ಸಾಗಣೆ ಸಾಮರ್ಥ್ಯ ಹೆಚ್ಚಳ

* ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿನ ವಿಳಂಬ ತಪ್ಪಿಸಲಿದೆ

* ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಚೀನಾದ ಯತ್ನಕ್ಕೆ ಹಿನ್ನಡೆಯಾಗಲಿದೆ

* ಎರಡೂ ದೇಶಗಳ ಮಧ್ಯೆ ವಾಣಿಜ್ಯ ಮತ್ತು ಕೈಗಾರಿಕಾ ಸಂಬಂಧ ಸುಧಾರಿಸಲಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿಯಾಗಲಿದೆ

******************************************

24.7 ಮೀಟರ್‌/ ಸೇತುವೆಯ ಅಗಲ

11 ಮೀಟರ್/ ಒಂದು ಕಡೆಯ ರಸ್ತೆಯ ಅಗಲ

0.5 ಮೀಟರ್‌/ ತಡೆಗೋಡೆಯ ಅಗಲ

1.2 ಮೀಟರ್/ ರಸ್ತೆ ವಿಭಜಕದ ಅಗಲ

ಪಾದಚಾರಿ ಮಾರ್ಗ

ಸರ್ವಿಸ್ ರಸ್ತೆ

ಮುಖ್ಯ ಪಥಗಳು

*****************

675 ಮೀಟರ್‌

ಸೇತುವೆಯ ಉದ್ದ

545 ಮೀಟರ್

ನೇಪಾಳದ ಕಡೆಯ ರಸ್ತೆಯ ಉದ್ದ

280 ಮೀಟರ್

ಭಾರತದ ಕಡೆಯ ರಸ್ತೆಯ ಉದ್ದ

ಏಷಿಯನ್ ಹೆದ್ದಾರಿ

ಭಾರತ

ನೇಪಾಳ

ಹಳೆಯ ಸೇತುವೆ

ಪ್ರಸ್ತಾವಿತ ಹೊಸ ಸೇತುವೆ

ಬಾಂಗ್ಲಾದೇಶ

***************

₹ 158.65 ಕೋಟಿ ಯೋಜನೆಯ ಮೊತ್ತ

ಮಾಹಿತಿ: ಪಿಟಿಐ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವಿಸ್ತೃತ ಯೋಜನಾ ವರದಿ

🔴 ಪ್ರಪಂಚದ ಸರೋವರಗಳು ಮತ್ತು ದೇಶಗಳು 

*.ಕ್ಯಾಸ್ಪೀಯನ ಸರೋವರ-  ಇರಾನ್ 

*.ಸುಪೇರೀಯರ ಸರೋವರ-  ಅಮೆರಿಕ

*.ವಿಕ್ಟೋರಿಯಾ ಸರೋವರ-   ತಂಜೇನಿಯ 

*.ಯೂರಲ್ ಸರೋವರ-  ರಷ್ಯ

*.ಮಿಚಿಗನ್ ಸರೋವರ-  ಅಮೆರಿಕ

*.ಬೈಕಲ್ ಸರೋವರ-  ರಷ್ಯ

*.ಗ್ರೇಟಬೀಯರ ಸರೋವರ-  ಕೆನಡಾ

*.ಲದೂಗ ಸರೋವರ-  ರಷ್ಯ

*.ಮಾನಸ ಸರೋವರ-  ಟಿಬೆಟ್ 

*.ಸೋಸೇಕುರ ಸರೋವರ-  ಟಿಬೆಟ್ 

*.ಟಿಟಿಕಾಕ ಸರೋವರ-  ಪೆರು 

*.ರುಡಾಲ್ಫ್ ಸರೋವರ-  ಕೀನ್ಯಾ 

*.ನ್ಯಾಸ ಸರೋವರ-  ತಾಂಜೇನಿಯ 

*.ವಾನೇರ್ಸ ಸರೋವರ-  ಸ್ವಿಡನ

🔴ಪ್ರಪಂಚದ ಪ್ರಮುಖ ಮರುಭೂಮಿಗಳು :-
(Great Deserts of the World)

ಭೂಮಿಯ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು # ಮರುಭೂಮಿ ಎಂದು ಕರೆಯುತ್ತಾರೆ.

1.ಅಂಟಾರ್ಟಿಕ ಮರುಭೂಮಿ

2.ಸಹಾರ ಮರುಭೂಮಿ

3.ಆರ್ಟಿಕ್ ಮರುಭೂಮಿ

4.ಅರೇಬಿಯನ್ ಮರುಭೂಮಿ

5.ಕಲಹರಿ ಮರುಭೂಮಿ

6.ಪೆಟಗೋನಿಯನ್ ಮರುಭೂಮಿ

7.ಗ್ರೇಟ್ ವಿಕ್ಟೋರಿಯಾ ಮರುಭೂಮಿ

8.ಗ್ರೇಟ್ ಬಸಿನ್ ಮರುಭೂಮಿ

9.ಸೈರಿಯನ್ ಮರುಭೂಮಿ

1⃣ ಅಂಟಾರ್ಟಿಕ ಮರುಭೂಮಿ

💢 ಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ.

💢 ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ.

2⃣ ಸಹಾರ ಮರುಭೂಮಿ

💢 ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು "ಗ್ರೇಟ್ ಡೆಸರ್ಟ್" ಎಂದು ಕರೆಯುವರು,  

💢 ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ.

💢ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ "ಉಷ್ಣ ಮರುಭೂಮಿ" ಆಗಿದೆ. 

💢ಇಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಒಂಟೆ, ಚಿರತೆ, ನರಿ, ಹಲ್ಲಿ, ಆಫ್ರಿಕನ್ ಕಾಡು ನಾಯಿ, ಉಷ್ಟ್ರಪಕ್ಷಿ, ಮರುಭೂಮಿ ಮೊಸಳೆ.

3⃣ ಆರ್ಟಿಕ್ ಮರುಭೂಮಿ

💢 ಆರ್ಟಿಕ್ ಮರುಭೂಮಿ ಭೂಮಿಯ ಉತ್ತರ ದ್ರುವದಲ್ಲಿ ಕಂಡು ಬರುತ್ತದೆ. ಈ ಮರುಭೂಮಿ ಜಗತ್ತಿನ 3ನೇ ದೊಡ್ಡ ಮರುಭೂಮಿಯಾಗಿದ್ದು ಹಾಗೂ 2ನೇ ಅತಿ ದೊಡ್ಡ ಶೀತ ಮರುಭೂಮಿಯಾಗಿದೆ. 

💢 ಇದರ ವಿಸ್ತೀರ್ಣವು 2,600,000 ಚ.ಕಿ.ಮೀಗಳಾಗಿವೆ. ಈ ಮರುಭೂಮಿ ಹಿಮದಿಂದ ಕೂಡಿದೆ.

💢 ಈ ಮರುಭೂಮಿಯು ಅರ್ಟಿಕ್ ಸಾಗರ, ಕೆನಡಾ, ರಷ್ಯಾ, ಗ್ರೀನಲ್ಯಾಂಡ್, ಯುನೈಟೆಡ್ ಸ್ಪೇಟ್ಸ್, ನಾರ್ವೆ, ಸ್ಪೀಡನ್, ಪಿನಲ್ಯಾಂಡನ್ ಸ್ಪಲ್ಪ ಭಾಗವನ್ನು ಒಳಗೊಂಡಿದೆ.

💢 ಇಲ್ಲಿನ ಪ್ರಮುಖ ಪ್ರಾಣಿಗಳೆಂದರೆ ಆರ್ಟಿಕ್ ಮೊಲಸಾರಂಗ, ಅರ್ಟಿಕ್ ನರಿ ಮತ್ತು ತೋಳ, ಧ್ರುವ ಕರಡಿ, ಸೀಲ್, ಮುಂತಾದವುಗಳು. 

💢ಈ ಮರುಭೂಮಿಯು ಇತ್ತೀಚಿಗೆ ಜಾಗತಿಕ ತಾಪಮಾನ ಫಲವಾಗಿ ಇಲ್ಲಿನ ನೀರ್ಲಗಲ್ಲುಗಳು ಕರಗುತ್ತಿದೆ.

4⃣ ಅರೇಬಿಯನ್ ಮರುಭೂಮಿ

💢 ಈ ಮರುಭೂಮಿಯು ಮಧ್ಯ ಪೂರ್ವ ಪ್ರಾಂತ್ಯದಲ್ಲಿದ್ದು, ಇದು ಯಮನ್ ದೇಶದಿಂದ ಪರ್ಷಿಯನ್ ಗಲ್ಪ್ ವರೆಗೂ ಮತ್ತು ಒಮಾನ್ ನಿಂದ ಜೋರ್ಡಾನ ಮತ್ತು ಇರಾಕ್ ವರೆಗೂ ವಿಸ್ತರಿಸಿದೆ.

💢 ಇದು ಅರೆಬಿಯನ್ ಉಪಖಂಡದಲ್ಲಿ ವ್ಯಾಪಿಸಿದೆ. ಇದು ಜೋರ್ಡಾನ್, ಕುವೈತ್, ಇರಾಕ್, ಕತಾರ್, ಉಮ್ಮಾನ್, ಸೌದಿ ಅರೇಬಿಯಾ, ಯುನೈಟೆಡ್ ಎಮರೈಟಿಸ್, ಎಮನ್ ದೇಶದಲ್ಲಿ ವ್ಯಾಪಿಸಿದೆ.

💢 ಇದರ ವಿಸ್ತೀರ್ಣವು 2,330,000 ಚ.ಕಿ.ಮೀ, ಇಲ್ಲಿ ತೈಲ ಸ್ವಾಭಾವಿಕ ಅನಿಲ, ಪಾಸ್ಪೇಟ್, ಮತ್ತು ಗಂಧಕದ ಸಂಪನ್ಮೂಲವಿದೆ. ಈ ಮರುಭೂಮಿ ಬಹುತೇಕ ಸೌದಿ ಅರೇಬಿಯಾದಲ್ಲಿ ವಿಸ್ತರಿಸಿಕೊಂಡಿದೆ.

5⃣ ಕಲಹರಿ ಮರುಭೂಮಿ

💢 ಈ ಮರುಭೂಮಿಯು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದೆ. ಈ ಮರುಭೂಮಿಯಲ್ಲಿ ಬಾಡ್ಸಾನಾ, ನಮೀಬಿಯಾ, ದಕ್ಷಿಣ ಆಪ್ರ್ಹಿಕಾ ದೇಶಗಳಲ್ಲಿ ವ್ಯಾಪಿಸಿದೆ.

💢 ಈ ಮರುಭೂಮಿಯಲ್ಲಿ ಚೋಬೆ ನ್ಯಾಷನಲ್ ಪಾರ್ಕ, ಸೆಂಟ್ರಲ್ ಕಲಹರಿ ಗೇಮ್ ರಿಸರ್ವ, ಕಲಹರಿ ಬೇಸಿನ್ಸ್, ಕಲಹರಿ ಜೇಮ್ಸ್ ಬಾಕ್ ನ್ಯಾಷನಲ್ ಪಾರ್ಕ, ಮಾಕಗಾಡಿ ಪಾನ್ಸ್ ಸ್ಥಳಗಳು ಕಂಡು ಬರುತ್ತವೆ.

💢 ಕಲಹರಿ ಮರುಭೂಮಿಯ ವಿಸ್ತೀರ್ಣ 900,000 ಚ.ಕಿ.ಮೀ ಈ ಮರುಭೂಮಿ ಪಕ್ಕದಲ್ಲಿ ಅರೆಂಜ್ ನದಿಯು ಹರಿಯುತ್ತದೆ. ಬ್ರಾಂಡ್ ಬರ್ಗ ಪರ್ವತವು ಅತಿ ದೊಡ್ಡ ಪರ್ವತವಾಗಿದೆ 8560 ಅಡಿ.

6⃣ ಪೆಟಗೋನಿಯನ್ ಮರುಭೂಮಿ

💢 ಈ ಮರುಭೂಮಿಯು ವಿಸ್ತೀರ್ಣದಲ್ಲಿ ಜಗತ್ತಿನ 7ನೇ ದೊಡ್ಡ ಮರುಭೂಮಿ. ಈ ಮರುಭೂಮಿಯ ವಿಸ್ತೀರ್ಣ 670,000 ಚ.ಕಿ.ಮೀಗಳು.

💢 ಈ ಮರುಭೂಮಿಯು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದ್ದು, ಪ್ರಮುಖವಾಗಿ ಅರ್ಜೆಂಟೈನಾ ಮತ್ತು ಚಿಲಿ ದೇಶಗಳಲ್ಲಿ ವ್ಯಾಪಿಸಿದೆ.

💢 ಇಲ್ಲಿ ಹುಲ್ಲುಗಳಿಗೆ ಬದಲಾಗಿ ಪೊದೆಗಳು ಕಂಡು ಬರುತ್ತದೆ. ಈ ಮರುಭೂಮಿಯಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಗೂಬೆ, ಮರುಭೂಮಿ ಹಲ್ಲಿ, ಪಿಗ್ಮಿ ಆರಿಡಿಲೋ ಮುಂತಾದಗಳು.

7⃣ ಗ್ರೇಟ್ ವಿಕ್ಟೋರಿಯಾ ಮರುಭೂಮಿ

💢 ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಮರುಭೂಮಿಯಾಗಿದೆ, ಇದು ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ ಸಣ್ಣ ಸಣ್ಣ ಮರಳಿನ ಬೆಟ್ಟೆಗಳು ಕಂಡು ಬರುತ್ತದೆ.

💢 1875ರಲ್ಲಿ ಬ್ರಿಟಿಷ್ ನಾವಿಕ ಎರನೆಸ್ಟ್ ಗೆಲಿಸ್ ಮೊಟ್ಟ ಮೊದಲ ಬಾರಿಗೆ ಈ ಮರುಭೂಮಿಯಲ್ಲಿ ಹಾದು ಹೋದ ಯುರೋಪಿಯೆನ್ ಆಗಿದ್ದಾರೆ.

💢 ಈ ಮರುಭೂಮಿಯಲ್ಲಿ ವರ್ಲ್ಡ ವೈಡ್ ಲೈಫ್ ಫಂಡ್ ನ ಎಕೋ ರಿಜನ್ ಆಗಿದೆ. ಈ ಮರುಭೂಮಿಯಲ್ಲಿ ಗ್ರೇಟ್ ಡೆಸರ್ಟ ಸ್ಕಿಂಕ್ ಮತ್ತು ಸ್ಯಾಂಡಿ ಹಿಲ್ ಡುನಾಲ್ಡ್ ಎಂಬ ಪ್ರಾಣಿ ಕಂಡು ಬರುತ್ತದೆ.

8⃣ ಗ್ರೇಟ್ ಬಸಿನ್ ಮರುಭೂಮಿ

💢 ಈ ಮರುಭೂಮಿಯು ಉತ್ತರ ಅಮೇರಿಕಾದಲ್ಲಿ ವ್ಯಾಪಿಸಿದೆ. ಈ ಮರುಭೂಮಿಯು 492,000 ಕಿ.ಮೀ ವಿಸ್ತೀರ್ಣ ಹೊಂದಿದೆ.

💢 ಈ ಮರುಭೂಮಿಯು ನವೆಡಾ, ಕ್ಯಾಲಿಪೋರ್ನಿಯಾ, ಉತ್ತಾ ದೇಶಗಳಿಂದ ಕೊಲೊಡೊ ನದಿಯವರೆಗೆ ವ್ಯಾಪಿಸಿದೆ. ಇದು ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ದೇಶದಲ್ಲಿ ಹರಡಿಕೊಂಡಿದೆ.

💢 ಇಲ್ಲಿ ಆಲ್ಟ್ರಿಪ್ಲೆಕ್ಸ್ ಎಂಬ ವಿಶೇಷ ಜಾತಿಯ ಸಸ್ಯವು ಕಂಡು ಬರುತ್ತದೆ. ಸೆಜೆ ಬ್ರಷ್ ಎಂಬುದು ಈ ಮರುಭೂಮಿಯಲ್ಲಿ ಕಂಡುಬರುವ ಪ್ರಮುಖವಾದಂತಹ ಸಸ್ಯವಾಗಿದೆ.

9⃣ ಸೈರಿಯನ್ ಮರುಭೂಮಿ

💢 ಈ ಮರುಭೂಮಿಯು ಮಧ್ಯಪೂರ್ವ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಈ ಮರುಭೂಮಿಯು ಜಗತ್ತಿನ ಅತಿ ದೊಡ್ಡ ಮರುಭೂಮಿಯಾಗಿದೆ.

💢 ಇದರ ವಿಸ್ತೀರ್ಣ 520,000 ಆಗಿದೆ. ಈ ಮರುಭೂಮಿಯು ಸೈರಿಯಾ, ಇರಾಕ್, ಜೋಡಾರ್ನ, ಸೌದಿ ಅರೇಬಿಯಾಗಳಲ್ಲಿ ಕಂಡು ಬರುತ್ತದೆ.

*2017 ರ ಪ್ರಮುಖ ಜಾಗತಿಕ ಸೂಚ್ಯಂಕ ಗಳಲ್ಲಿ ಭಾರತದ ಸ್ಥಾನ*
--------------------
1) ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ- 1
2) ನವೀಕರಿಸಬಲ್ಲ ಇಂಧನ ಸೂಚ್ಯಂಕ- 2
3) ವಿಶ್ವ ಸ್ಪರ್ಧಾತ್ಮಕ ಸೂಚ್ಯಂಕ- 45
4) ಸುಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ-116
5) ವಿಶ್ವ ಸಂತೋಷ ಸೂಚ್ಯಂಕ- 122
6) ಮಾನವ ಅಭಿವೃದ್ಧಿ ಸೂಚ್ಯಂಕ-131
7) ಜಾಗತಿಕ ಶಾಂತಿ ಸೂಚ್ಯಂಕ--137
8) ಅಂತರಾಷ್ಟ್ರೀಯ ಆರ್ಥಿಕ ಅನುಸೂಚಿ- 143

👉ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು
೧) ಫುಡ್ ಪಾರ್ಕ್- ತುಮಕೂರು
೨)ರೈಸ್‌ ಪಾರ್ಕ್- ಕಾರಟಗಿ
೩) ಅಕ್ಷಯ ಆಹಾರ ಪಾರ್ಕ್- ಹಿರಿಯೂರು
೪)ಸ್ಪೈಸ್ ಪಾರ್ಕ್- ಬ್ಯಾಡಗಿ
೫) ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ
೬)ಸಾಗರೊತ್ಪನ್ನ ಪಾರ್ಕ್-ಮಂಗಳೂರ
೭)ಇನ್ನೊವ ಅಗ್ರಿ ಬಯೊಪಾರ್ಕ- ಮಾಲೂರು
೮)ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ
೯)ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು
೧೦)ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ  ಕೊನೇಹಳ್ಳಿ

ಅಣೆಕಟ್ಟು- ಸ್ಥಳ- ನದಿ- ಜಲಾಶಯ

✍✍ಭಾಕ್ರನOಗಲ್ ಅಣೆಕಟ್ಟು
.ಸ್ತಳ -ಬಿಲಸಪೂರ(ಹಿಮಾಚಲ ಪ್ರದೇಶ )
.ನದಿ -ಸಟ್ಲೇಜ 
.ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ.

✍✍ಹಿರಾಕುಡ್ ಅಣೆಕಟ್ಟು 
.ಸ್ತಳ -ಸಂಬಲಪುರ (ಒಡಿಶಾ )
.ನದಿ -ಮಹಾನದಿ.

✍✍ಮೇಟ್ಟುರು ಅಣೆಕಟ್ಟು 
.ಸ್ತಳ -ಮೇಟ್ಟುರು (ಸೇಲಮ ) ತಮಿಳುನಾಡು 
.ನದಿ -ಕಾವೇರಿ 
.ಜಲಶಯದ ಹೆಸರು -ಸ್ಟೇನ್ಲಿ ಜಲಶಯ.

✍✍ನಾಗಾರ್ಜುನ ಅಣೆಕಟ್ಟು 
.ಸ್ತಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
.ನದಿ -ಕೃಷ್ಣ.

✍✍ಇಡುಕ್ಕಿ ಆಣೇಕಟ್ಟು 
.ಸ್ತಳ -ಇಡುಕ್ಕಿ (ಕೇರಳ )
.ನದಿ -ಪೆರಿಯಾರ್.

✍✍ರಾಮ ಗಂಗಾ ಅಣೆಕಟ್ಟು 
.ಸ್ತಳ -ಕಲಾಗಡ (ಉತ್ತರಾಖಂಡ )
.ನದಿ -ರಾಮಗOಗಾ.

✍✍ಪೋಡOಪಾಡು ಅಣೆಕಟ್ಟು 
.ಸ್ತಳ -ನೀಜಮಾಬಾದ (ತೆಲಂಗಾಣ )
.ನದಿ -ಗೋದಾವರಿ.

✍✍ಊಕ್ಕೈ ಅಣೆಕಟ್ಟು 
ಸ್ತಳ -ಊಕ್ಕೈ (ಗುಜರಾತ್ )
.ಜಲಶಯದ ಹೆಸರು -ವಲ್ಲಭ ಸಾಗರ್ 
ನದಿ -ತಪತಿ.

✍✍ಪೋಂಗ ಅಣೆಕಟ್ಟು 
.ಸ್ತಳ -ತಲವಾರ ( ಹಿಮಾಚಲ ಪ್ರದೇಶ )
.ನದಿ -ಬಿಯಾಸ್.

✍✍✍ ಗಾಂಧಿ ಸಾಗರ್ ಅಣೆಕಟ್ಟು 
.ಸ್ತಳ -ಮ್ಯಂಡ್ ಸಾರ್ 
ನದಿ - ಚೇಂಬಲ ಯಮೂನ ನದಿ.

✍✍ಕೋಯನ್ನ ಅಣೆಕಟ್ಟು 
.ಸ್ತಳ -ಕೊಯ್ನ (ಮಹರಾಷ್ಟ)
.ನದಿ -ಕೋಯನ್ 
.ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ

✍✍ಅಲಮಟ್ಟಿ ಅಣೆಕಟ್ಟು 
.ಸ್ತಳ -ಅಲಮಟ್ಟಿ ( ಕರ್ನಾಟಕ )
.ನದಿ -ಕೃಷ್ಣ 
.ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ.

✍✍ತವಾ ಅಣೆಕಟ್ಟು
.ಸ್ತಳ -ಹೊಸಂಗಾಬಾದ 
( ಮಧ್ಯ ಪ್ರದೇಶ )
.ನದಿ -ತವಾ

✍✍ಜಯಕವಡಿ ಅಣೆಕಟ್ಟು 
.ಸ್ತಳ -ಜಯಕವಡಿ (ಮಹರಸ್ಟ್ರ )
.ನದಿ -ಗೋದವರೀ 
.ಜಲಶಯದ ಹೆಸರು -ನಾಥಸಾಗರ್ ಜಲಶಯ

✍✍ರಿಹಂದ ಅಣೆಕಟ್ಟು 
.ಸ್ತಳ -ಸೂನಭದ್ರ
( ಉತ್ತರ ಪ್ರದೇಶ )
.ನದಿ -ರಿಹಂದ

✍✍ಸರ್ದರ ಸರೋವರ ಅಣೆಕಟ್ಟು
.ಸ್ತಳ -ನವಗO (ಗುಜರಾತ್)
.ನದಿ - ನರ್ಮದಾ

✍✍✍ರಣ ಪ್ರತಾಪ್ ಸಾಗರ್ ಅಣೆಕಟ್ಟು
.ಸ್ತಳ -ರವಬತ (ರಾಜಸ್ತಾನ್ )

 

ಉತ್ತರ ಭಾರತದ ನದಿಗಳು :
1.ನದಿ :— ಸಿಂಧೂ (ಇಂಡಸ್ ನದಿ) 
●.ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್
●.ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ
●.ವ್ಯಾಪ್ತಿ ರಾಜ್ಯಗಳು :—  (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್
●.ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ
●.ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.
●.ವಿಶೇಷತೆಗಳು :— 
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.
2.ನದಿ :— ಗಂಗಾ
●.ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್
●.ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್
●.ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,
●.ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)
●.ವಿಶೇಷತೆಗಳು :—  
1.ಭಾರತದ ಅತೀ ಉದ್ದವಾದ ನದಿ
2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ.
3.ನದಿ :— ಬ್ರಹ್ಮಪುತ್ರ
●.ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್
●.ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
●.ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್
●.ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)
●.ವಿಶೇಷತೆಗಳು :—  
1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.
4..ನದಿ :— ಯಮುನಾ 
●.ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,
●.ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.
●.ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)
●.ವಿಶೇಷತೆಗಳು :—  
1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)
5..ನದಿ :— ಸಬರಮತಿ
●.ನದಿಯ ಉಗಮ ಸ್ಥಾನ :— ಉದಯಪುರ್,  ರಾಜಸ್ಥಾನ .
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ.
●.ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ
●.ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ
●.ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು
★ ದಕ್ಷಿಣ ಭಾರತದ ನದಿಗಳು :
1.ನದಿ :— ಕೃಷ್ಣಾ  (ದ.ಭಾರತದ ಪೂರ್ವಕ್ಕೆ ಹರಿಯುವ ನದಿ) 
●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.
●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.
●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು 
●.ವಿಶೇಷತೆಗಳು :— 
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.
2..ನದಿ :— ನರ್ಮದಾ (ರೇವಾ)  (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ) 
●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ.

ದಕ್ಷಿಣ ಭಾರತದ ಪ್ರಮುಖ ನದಿಗಳು

ನರ್ಮದಾ
ತಪತಿ
ಸಾಬರಮತಿ
ಕಾಳಿ
ಮಹಾದಾಯಿ
ಲೂನಿ
ಶರಾವತಿ
ನೇತ್ರಾವತಿ
ವಿ.ಸೂಚನೆ:~*ಈ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*

ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ
*ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ*

ಲುನಿ ನದಿಯ ಉಗಮಸ್ಥಾನ ;~ *ಅನಾಸಾಗರ*

ನರ್ಮದಾ ನದಿಯ ಉಗಮಸ್ಥಾನ :~ *ಅಮರಕಂಟಕ*

ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. *ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ*

*ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ*,

ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು *ಅಂಬುತಿರ್ಥ*

* ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ*

*ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು*

ದಾಮೋದರ ನದಿಯನ್ನು *"ಪಶ್ಚಿಮ ಬಂಗಾಳದ"* ಕಣ್ಣೀರು ನದಿ ಎಂದು ಕರೆಯುತ್ತಾರೆ.

*ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ*
ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.

ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.*
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.

ಕೃಷ್ಣಾ ನದಿಯ ಉಗಮಸ್ಥಾನ :` *ಮಹಬಲೇಶ್ವರ*

ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು.


⛰️ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ  ಮಾಹಿತಿ*👇

⛰️➤  *ನಂದಿ ಬೆಟ್ಟ* : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.

⛰️➤ *ಬಾಬಾಬುಡನ್‍ಗಿರಿ* : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ ಈಗ ವಿವಾದದಲ್ಲಿದೆ.

⛰️➤  *ಬಿಳಿಗಿರಿರಂಗನಬೆಟ್ಟ* : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.


 ⛰️➤  *ಮಲೈ ಮಹದೇಶ್ವರ ಬೆಟ್ಟ* : ‘ಏಳು ಮಲೆ’ ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ‘ಮಲೈ ಮಹದೇಶ್ವರ ಸ್ವಾಮಿ’ ದೇವಸ್ಥಾನವಿದೆ.

⛰️➤  *ಗೋಪಾಲಸ್ವಾಮಿ ಬೆಟ್ಟ* : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.

⛰️➤  *ಮುಳ್ಳಯ್ಯನಗಿರಿ* : ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲಿಯಲ್ಲಿದ್ದು, ಸಮುದ್ರ ಮಟ್ಟದಿಂದ 1925 ಮೀ ಎತ್ತರದಲ್ಲಿದೆ. ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಹಲವು ಪ್ರವಾಸಿಗರು ಆಗಮಿಸುತ್ತಾರೆ.


⛰️ ➤  *ಚಾಮುಂಡಿಬೆಟ್ಟ* : ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಈ ಹಿಂದೆ ಮಬ್ರ್ಬಳ ತೀರ್ಥವೆಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರನ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ.

⛰️➤  *ಕೊಡಚಾದ್ರಿ ಬೆಟ್ಟಗಳು*: ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ. ಈ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ.

⛰️➤  *ಶಿವಗಂಗೆ* : ಮಾಗಡಿ ಕೆಂಪೇಗೌಡನಿಂದ ಸ್ಥಾಪಿತವಾದ ಪವಿತ್ರ ಕ್ಷೇತ್ರವಾದ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿದೆ.

⛰️➤ *ಆದಿಚುಂಚನಗಿರಿ* : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.

⛰️➤ *ಕುಮಾರಸ್ವಾಮಿ ಬೆಟ್ಟ* : ಇದು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನಲ್ಲಿದೆ. ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ.

✍️ *ಭಾರತದ ನೆರೆಹೊರೆಯ ದೇಶಗಳು ಮತ್ತು ಕೆಲವು ಗಡಿರೇಖೆಗಳು*👇 

 👉ಭಾರತದ ಒಟ್ಟು ಗಡಿರೇಖೆ ಉದ್ದ *21.300 ಕಿ.ಮೀ.*

👉 "ಭೂ ಗಡಿ": *15,200 ಕಿ.ಮೀ.*

👉 "ಜಲ ಗಡಿ:" *6,100 ಕಿ.ಮೀ*.

👉 "ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ:"  *7,516.6 ಕಿ.ಮೀ.*

👉  "ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ
ದೇಶಗಳು": *7.*

1) ಭಾರತ ಮತ್ತು ಪಾಕ್ ನಡುವೆ=  *ರಾಡ್ ಕ್ಲಿಪ್*(3310km)

🔹 *ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು*👇

*ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ*

. 🔸 *ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು*👇

 *ಗುಜರಾತಿನ ಕಛ್ ಜೌಗು ವಲಯ*,
 *ಸರ್ ಕ್ರಿಕ್* *ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.*
=====================

 2)ಭಾರತ ಮತ್ತು ಅಪಘಾನಿಸ್ತಾನ್ ನಡುವೆ= *ಡ್ಯೂರಾಂಡ್ ರೇಖೆ.*(80km)

🔸ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯ
 *ಜಮ್ಮು ಕಾಶ್ಮೀರ.*
=====================

3) ಭಾರತ ಮತ್ತು ಚೀನಾ ನಡುವೆ= *ಮ್ಯಾಕ್ ಮೋಹನ್ ಗಡಿರೇಖೆ*(3917km)

🔸 *ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು*👇

*ಜಮ್ಮು ಕಾಶ್ಮೀರ*, *ಹಿಮಾಚಲ ಪ್ರದೇಶ*, *ಉತ್ತರಾಖಂಡ*, *ಸಿಕ್ಕಿಂ*
*ಅರುಣಾಚಲ ಪ್ರದೇಶ*

. 🔹 *ಚೀನಾದೊಂದಿಗಿನ ವಿವಾದಿತ ಪ್ರದೇಶಗಳು*:👇

*ಆಕ್ ಸಾಯ್ ಚಿನ್*
(ಕಾಶ್ಮೀರದ ಪೂರ್ವ ಭಾಗ) *ಅರುಣಾಚಲ ಪ್ರದೇಶ, ನತುಲಾ*
=====================

4) *ಭಾರತ ಮತ್ತು ಬಾಂಗ್ಲಾದೇಶ*(4096km)

"ಇದು ಭಾರತ ದೇಶ ಹೊಂದಿರುವ *ಅತಿ     ಉದ್ದವಾದ*
ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ"

🔹 *ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:*👇

 *ಆಸ್ಸಾಂ*, *ತ್ರಿಪುರಾ,* *ಮೇಘಾಲಯ*, *ಮಿಜೋರಾಂ* *ಪಶ್ಚಿಮಬಂಗಾಳ*

 *ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು*👇

"ಪರಕ್ಕಾ
ಆಣೆಕಟ್ಟು,"  "ಚಕ್ಮಾ ನಿರಾಶ್ರಿತರು ನ್ಯೂಮರ್ ದ್ವೀಪ, ತಿನ್ಬಿಕ್
ಪ್ರದೇಶ"
=====================

5)  *ಭಾರತ ಮತ್ತು ನೇಪಾಳ:*

. 👉 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:  *1752*
*ಕಿ.ಮೀ.*

🔹 *ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು*👇

 *ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ*

*ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:*👇

*"ಕಪಾಲಿನಿ,*
*ಸುಸ್ತಾ.*
=====================
6) *ಭಾರತ ಮತ್ತು ಭೂತಾನ್:*

.🔸 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:—  *587 ಕಿ.ಮೀ*

. 🔸ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇

*ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ*
=====================

7)  *ಭಾರತ ಮತ್ತು ಮಯನ್ಮಾರ್:*

. 🔸ಭಾರತದೊಂದಿಗೆ  ಹೊಂದಿರುವ ಗಡಿರೇಖೆಯ ಉದ್ದ:—  *1536*
*ಕಿ.ಮೀ*

. 🔸ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇

*ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ*
. ಕೆಲವೆಡೆ *ಇರವಾಡಿ ನದಿ'ಯು* ಅಂತರಾಷ್ಟ್ರೀಯ ಗಡಿಯಾಗಿದೆ.
=====================
👉 ಭಾರತ ಮತ್ತು ಶ್ರೀಲಂಕಾ ನಡುವೆ *ಪಾಕ್ ಜಲಸಂಧಿ ಎಂಬ ಗಡಿರೇಖೆ ಇದೆ*, 

 ✍️ *ವಿಶೇಷ ಅಂಶಗಳು*👇
1) ಭಾರತದೊಂದಿಗೆ ತಿ ಉದ್ದವಾದ ಗಡಿ ಹೊಂದಿರುವ ದೇಶ= *ಬಾಂಗ್ಲಾದೇಶ*(4096km)

2) ಭಾರತದೊಂದಿಗೆ ಅತಿ ಕಡಿಮೆ ಗಡಿರೇಖೆಯನ್ನು ಹೊಂದಿರುವ ದೇಶ= *ಅಪಘಾನಿಸ್ತಾನ*(80km)

 🇮🇳 *ಭಾರತದ ನೆರೆ ಹೊರೆ ದೇಶಗಳು*👇

1) ಭಾರತ ಉತ್ತರ ಭಾಗಕ್ಕೆ= *ಅಪಘಾನಿಸ್ತಾನ ವಿದೆ*

2) ಭಾರತದ ವಾಯುವ್ಯ ಭಾಗಕ್ಕೆ= *ಪಾಕಿಸ್ತಾನ ವಿದೆ*

3) ಭಾರತದ ಉತ್ತರ ಈಶಾನ್ಯಕ್ಕೆ= *ಚೀನಾ ಟಿಬೆಟ್ ದೇಶಗಳಿವೆ*

4) ಭಾರತದ ಪೂರ್ವ ಈಶಾನ್ಯಕ್ಕೆ= *ನೇಪಾಳ ಮತ್ತು ಭೂತಾನ ದೇಶಗಳಿವೆ*

5) ಭಾರತದ ಪೂರ್ವ ಭಾಗಕ್ಕೆ= *ಬಾಂಗ್ಲಾ ಮತ್ತು ಮಯನ್ಮಾರ ದೇಶಗಳಿವೆ*

6) ಭಾರತದ ದಕ್ಷಿಣ ಭಾಗಕ್ಕೆ= *ಶ್ರೀಲಂಕಾ ದೇಶವಿದೆ*

7) ಭಾರತದ ಪೂರ್ವ ಆಗ್ನೇಯ ಭಾಗಕ್ಕೆ= *ಥೈಲ್ಯಾಂಡ್ ಆದೇಶವಿದೆ*

8) ಭಾರತದ ದಕ್ಷಿಣ ಆಗ್ನೇಯ ಭಾಗಕ್ಕೆ= *ಇಂಡೋನೇಷಿಯಾ ಇದೆ*

9) ಭಾರತದ ನೈರುತ್ಯ ಭಾಗಕ್ಕೆ= *ಮಾಲ್ಡಿವ್ಸ್*

🇮🇳 ಭಾರತದೊಂದಿಗೆ *ಭೂಗಡಿ* ಹಂಚಿ ಕೊಂಡ ದೇಶಗಳು= *7*

1) "ಅಪಘಾನಿಸ್ತಾನ".
2) "ಬಾಂಗ್ಲಾದೇಶ", 
3) "ಭೂತಾನ," 
4) "ನೇಪಾಳ", 
5) "ಮಯನ್ಮಾರ್", 
6) "ಪಾಕಿಸ್ತಾನ", 
7) "ಚೀನಾ"

🇮🇳 ಭಾರತದೊಂದಿಗೆ *ಜಲಗಡಿ* ಹಂಚಿಕೊಂಡ ದೇಶಗಳು= *7*

1) "ಬಾಂಗ್ಲಾ".
2) "ಮಯನ್ಮಾರ", 
3) "ಪಾಕಿಸ್ತಾನ", 
4) "ಇಂಡೋನೇಷಿಯಾ", 
5) "ಮಾಲ್ಡಿವ್ಸ್", 
6) "ಶ್ರೀಲಂಕಾ," 
7) "ಥೈಲ್ಯಾಂಡ್"

🇮🇳 ಭಾರತದೊಂದಿಗೆ *ಜಲಗಡಿ* ಮತ್ತು *ಭೂಗಡಿ* ಎರಡು ಹೊಂದಿರುವ ದೇಶಗಳು= *3*

1) "ಬಾಂಗ್ಲಾದೇಶ".
2) "ಮಯನ್ಮಾರ್", 
3) "ಪಾಕಿಸ್ತಾನ"
________________________________

👩🏻‍⚖️ *ರಾಷ್ಟ್ರೀಯ ಮಹಿಳಾ ಆಯೋಗ* ಬಗ್ಗೆ ಸಂಕ್ಷಿಪ್ತ ಮಾಹಿತಿ. ✍✍✍
👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️

🔸 ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= *1990*

🔹 ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= *1992 ಜನೆವರಿ 31*

🔸 ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= *ನವದೆಹಲಿ*

🔹 ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು= *ಸಂಸತ್ತಿನ ನಿಬಂಧನೆಯಿಂದ*

🔸 ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು  ನೇಮಕ ಮಾಡುವರು= *ಕೇಂದ್ರ ಸರ್ಕಾರ*

🔹 ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ=  *3 ವರ್ಷ*

🔸 ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= *ಶ್ರೀಮತಿ ಜಯಂತಿ ಪಟ್ನಾಯಕ್*(1992)

🔹 ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= *ರೇಖಾ ಶರ್ಮ*(2018 ರಿಂದ---

🔸 ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ,

🔸 ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು👇

* ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. 

* ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು, 

* ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,  ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು. 

* ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು, 

👩🏻‍⚖️ *ಭಾರತದ ಪ್ರಥಮ ಮಹಿಳೆಯರು.*

👩🏻‍⚖️ ಭಾರತದ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ // ಅನ್ನ ಚಾಂಡಿ*

👩🏻‍⚖️ ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ// ಎಂ ಫಾತಿಮಾ ಬೀಬಿ*

👩🏻‍⚖️ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ= *ಶ್ರೀಮತಿ ಪ್ರತಿಭಾ ಪಾಟೀಲ್*

👩🏻‍⚖️ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ= *ಸುಚೇತಾ ಕೃಪಲಾನಿ*

👩🏻‍⚖️ ಭಾರತದ ಮೊದಲ ಮಹಿಳಾ ರಾಜ್ಯಪಾಲರು= *ಸರೋಜಿನಿ ನಾಯ್ಡು*

👩🏻‍⚖️ ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು= *ವಿ ಎಸ್ ರಮಾದೇವಿ*

👩🏻‍⚖️ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ= *ಶ್ರೀಮತಿ ಇಂದಿರಾಗಾಂಧಿ*

👩🏻‍⚖️ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ= *ಬಚೇಂದ್ರಿ ಪಾಲ್*

👩🏻‍⚖️ ಭಾರತದ ಮೊದಲ ಮಹಿಳಾ ಗಗನಯಾತ್ರಿ= *ಕಲ್ಪನಾ ಚಾವ್ಲಾ*

👩🏻‍⚖️ ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ
 *ರಜಿಯಾ ಸುಲ್ತಾನ್*

👩🏻‍⚖️ ಭಾರತದ ಮೊದಲ ವಿಶ್ವ ಸುಂದರಿ= *ರೀಟಾ ಫರಿಯಾ*

👩🏻‍⚖️ ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= *ಶ್ರೀಮತಿ ಸುಷ್ಮಾ ಸ್ವರಾಜ್*

👩🏻‍⚖️ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು= *ಶ್ರೀಮತಿ ಇಂದಿರಾಗಾಂಧಿ*

👩🏻‍⚖️ ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು= *ನಿರ್ಮಲಾ ಸೀತಾರಾಮನ್*

👩🏻‍⚖️ ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು= *ಅರುಂಧತಿ ಭಟ್ಟಾಚಾರ್ಯ*

👩🏻‍⚖️ ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=ನ್ಯಾ// *ಲೀಲಾ ಸೇಠ್*

👩🏻‍⚖️ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ= *ಕಿರಣ್ ಬೇಡಿ*

👩🏻‍⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು= *ಅನಿಬೆಸೆಂಟ್*( ಐರ್ಲೆಂಡ್ ದೇಶದವರು)

👩🏻‍⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು= *ಸರೋಜಿನಿ ನಾಯ್ಡು*

👩🏻‍⚖️ ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ= *ಸಿರಿಮಾವೋ ಬಂಡಾರ ನಾಯಕ್*( ಶ್ರೀಲಂಕಾ ದೇಶದವರು)

👩🏻‍⚖️ ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು= *ದೀಪಕ್ ಸಿಂದು*

👩🏻‍⚖️ ಭಾರತದ ಮಹಿಳಾ ರಾಯಭಾರಿ= *ಚೋನಿರ  ಬೆಳ್ಯಪ್ಪ ಮುತ್ತಮ್ಮ*

👩🏻‍⚖️ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ= *ಆಶಾಪೂರ್ಣ ದೇವಿ*

👩🏻‍⚖️ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್= *ಶ್ರೀಮತಿ ಮೀರಾ ಕುಮಾರ್*

👩🏻‍⚖️ ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್= *ಶ್ರೀಮತಿ ಸುಮಿತ್ರ ಮಹಜನ್*

👩🏻‍⚖️ ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್= *ಶನ್ನೋ ದೇವಿ*( ಹರಿಯಾಣ)

👩🏻‍⚖️ ಭಾರತದ ಮೊದಲ ಮಹಿಳಾ ಸಚಿವರು= *ಅಮೃತ ಕವರ್*( ಆರೋಗ್ಯ ಸಚಿವರು)

👩🏻‍⚖️ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ= *ಮದರ್ ತೆರೇಸಾ*( ಶಾಂತಿಗಾಗಿ-1979)

👩🏻‍⚖️ ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= *ಕಾಂಚನ ಚೌದ್ರಿ ಭಟ್ಟಾಚಾರ್ಯ*

👩🏻‍⚖️ ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= *ಶ್ರೀಮತಿ ನೀಲಮಣಿ ಎನ್ ರಾಜು*

👩🏻‍⚖️ ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ= *ಅರತಿ ಸಹಾ*

👩🏻‍⚖️ ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ// ಮಂಜುಳಾ ಚೆಲ್ಲೂರ್*

👩🏻‍⚖️ ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್= *ಕೆ ಎಸ್ ನಾಗರತ್ನಮ್ಮ*

👩🏻‍⚖️ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ= *ಶ್ರೀಮತಿ ಅನಿತಾ ಅಂಬಾನಿ*

👩🏻‍⚖️ ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ= *ಕರ್ಣಂ ಮಲ್ಲೇಶ್ವರಿ*( ಭಾರ ಎತ್ತುವಿಕೆ)

👩🏻‍⚖️ ಭಾರತದ ಮೊದಲ ರಕ್ಷಣಾ ಮಂತ್ರಿ= *ನಿರ್ಮಲಾ ಸೀತಾರಾಮನ್*

👩🏻‍⚖️ ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= *ನ್ಯಾ// ಇಂದು ಮಲ್ಹೊತ್ರ*

👩🏻‍⚖️ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್= *ದೀಪಾ ಮಲ್ಲಿಕ್*( ಶ್ಯಾಟ್  ಪುಟ್)


ಭಾರತದ ವಿಶ್ವ ಪರಂಪರೆಯ ತಾಣಗಳು


ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಅಸ್ಸಾಂ

ಬಿಹಾರ

ದೆಹಲಿ

ಗೋವಾ

ಗುಜರಾತ್

ಕರ್ನಾಟಕ

ಮಧ್ಯಪ್ರದೇಶ

ಮಹಾರಾಷ್ಟ್ರ

ಒಡಿಶಾ

ರಾಜಸ್ಥಾನ

ತಮಿಳುನಾಡು

ಉತ್ತರ ಪ್ರದೇಶ

ಉತ್ತರಾಖಂಡ

ಪಶ್ಚಿಮ ಬಂಗಾಳ

ಹಿಮಾಚಲ ಪ್ರದೇಶ


ಭಾರತ ಸರ್ಕಾರ ಇಲ್ಲಿಯವರೆಗೆ 12 ಪಂಚ ವಾರ್ಷಿಕ ಯೋಜನೆಗಳನ್ನು ದೇಶಕ್ಕೆ ಅರ್ಪಿಸಿರುತ್ತದೆ.

🔸*"ಒಂದನೇ ಪಂಚ ವಾರ್ಷಿಕ ಯೋಜನೆ"*=1951-56)

🔺 ಕಾರ್ಯಗತ ಗೊಂಡ ಅವಧಿ= *1-4-1951 ರಿಂದ 31-3-1956*

🔹 ಅಧ್ಯಕ್ಷರು= *ಜವಾಹರಲಾಲ್ ನೆಹರು*

🔸 ಉಪಾಧ್ಯಕ್ಷರು= *ಗುಲ್ಜಾರಿಲಾಲ್ ನಂದಾ*

🔺ಒಟ್ಟು ಹೂಡಿಕೆ= *1,960 ಕೋಟಿ*

🔹 ಆದ್ಯತೆ= *ಕೃಷಿ ಮತ್ತು ನೀರಾವರಿ*

🔸 ಮಾದರಿ= *ಹ್ಯಾರಡ್ ಮತ್ತು ಡೊಮಾರ್*

🔸 ಈ ಯೋಜನೆಯಲ್ಲಿ ಸ್ಥಾಪನೆಯಾದ ಪ್ರಮುಖ ಸಂಸ್ಥೆಗಳು👇

1) ದೇಶದ ಮೊದಲ ಐಐಟಿ ಸ್ಥಾಪನೆ= *1951*( ಪಶ್ಚಿಮ ಬಂಗಾಳದ ಕನಕಪುರದಲ್ಲಿ. ಸ್ಥಾಪನೆ ಮಾಡಿದರು= *ಮೌಲಾನಾ ಅಬುಲ್ ಕಲಾಂ ಆಜಾದ್*

2) ಸಮುದಾಯ ಅಭಿವೃದ್ಧಿ ಕಾರ್ಯಕ್ರಮ= *1952*

3) ಕುಟುಂಬ ಯೋಜನೆ= *1952*( ಕುಟುಂಬ ಕಲ್ಯಾಣ ಯೋಜನೆ ಎಂದು ಮರುನಾಮಕರಣ=1977)

4) ರಾಷ್ಟ್ರೀಯ ವಿಸ್ತೀರ್ಣ ಸೇವೆ(NES)= *1953*

5) ಪ್ರಮುಖ ಕೈಗಾರಿಕೆಗಳು= *HMT, BEL.*

6) UGC ಸ್ಥಾಪನೆ= *1956*

=============================

🌸 *ಎರಡನೇ ಪಂಚವಾರ್ಷಿಕ ಯೋಜನೆ*=1956-61

🔸 ಕಾರ್ಯಗತ ಗೊಂಡ ಅವಧಿ= *1-4-1956* ರಿಂದ *31-3-1961* ರ ವರಗೆ 

🔹ಒಟ್ಟು ಹೊಡಿಕೆ= *4,600 ಕೋಟಿ*

🔸 ಅಧ್ಯಕ್ಷರು= *ಜವಾಹರಲಾಲ್ ನೆಹರು* 

🔸 ಉಪಾಧ್ಯಕ್ಷರು *ಟಿ ಟಿ ಕೃಷ್ಣಮಾಚಾರಿ*

🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*

🔸 ಮಾದರಿ= *ಮಹಾನಲೋಬಿಸ್ ಮಾದರಿ*

🔹1956 ರಲ್ಲಿ *ಕೈಗಾರಿಕಾ ನೀತಿ ಘೋಷಣೆ*( ಇದನ್ನು ಭಾರತದ *ಆರ್ಥಿಕ ಸಂವಿಧಾನ* ಎಂದು ಕರೆಯುತ್ತಾರೆ, 

==================================

🌹 *ಮೂರನೇ ಪಂಚವಾರ್ಷಿಕ ಯೋಜನೆ*=(1961-66)

🔸ಕಾರ್ಯಗತ ಗೊಂಡ ಅವಧಿ = *1-4-1961 ರಿಂದ 31-3-1966*  ರ ವರಗೆ.

🔹 ಅಧ್ಯಕ್ಷರು= *ಜವಾಹರಲಾಲ್ * ನೆಹರು *ಮತ್ತು ಲಾಲ್ ಬೋದ್ ಶಾಸ್ತ್ರಿ*

🔸 ಉಪಾಧ್ಯಕ್ಷರು= *ಸಿ.ಎಂ ತ್ರಿವೇದಿ* ಮತ್ತು *ಅಶೋಕ್ ಮೆಹ್ತಾ*

🔹ಒಟ್ಟು ಹೊಡಿಕೆ= *8,600 ಕೋಟಿ*

🔸 ಆದ್ಯತೆ= *ಕೃಷಿ* "ಅಕ್ಕಿ" 

🔹 ಯೋಜನೆಗೆ= *ಗಾಡ್ಗೀಳ್ ಮತ್ತು ದೂರದೃಷ್ಟಿ ಯೋಜನೆ* ಎನ್ನುವರು.

🔹1965 ರಲ್ಲಿ *ಭಾರತ ಆಹಾರ ನಿಗಮ ಸ್ಥಾಪನೆ*. 

🔸1966 ರಲ್ಲಿ *ನೋಟು ಅಪಮೌಲ್ಯೀಕರಣ*

==================================

🌼 *ನಾಲ್ಕನೇ ಪಂಚವಾರ್ಷಿಕ ಯೋಜನೆ*(1969-74)

🔸ಕಾರ್ಯಗತ ಗೊಂಡ ಅವಧಿ= *1-4-1969 ರಿಂದ 31-3-1974* ರವರೆಗೆ. 

🔹 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*

🔸 ಉಪಾಧ್ಯಕ್ಷರು= *ಡಿ.ಆರ್ ಗಾಡ್ಗೀಳ್, ಸಿ ಸುಬ್ರಮಣ್ಯ, ದುರ್ಗಾ ಪ್ರಸಾದ್ ದಾರ*

🔹ಒಟ್ಟು ಹೊಡಿಕೆ= *15,902 ಕೋಟಿ*

🔸 ಆದ್ಯತೆ= *ಸ್ಥಿರತೆ ಯೊಂದಿಗೆ ಬೆಳವಣಿಗೆ, ಮತ್ತು ಸ್ವ ಪ್ರಗತಿಗೆ ಉತ್ತೇಜನ*

🔹 ಮಾದರಿ= *ಬಿ.ಆರ್ ಗಾಡ್ಗೀಳ್ *

🔸1969 ಜುಲೈ 19, *ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ*

🔹 ಈ ಯೋಜನೆಯಲ್ಲಿ *ಪೋಕ್ರಾನ್ ನಲ್ಲಿ ಅಣು ಪರೀಕ್ಷೆ 1974 ಮೇ 18 ರಂದು ಮಾಡಲಾಯಿತು,( ಇದಕ್ಕೆ *ಸ್ಮೈಲಿಂಗ್ ಬುದ್ಧ* ಎಂದು ಹೆಸರು ಕೊಡಲಾಯಿತು)

==============================

🌟 *5ನೇ ಪಂಚವಾರ್ಷಿಕ ಯೋಜನೆ*(1974-79)

🔹ಕಾರ್ಯಗತ ಗೊಂಡ ಅವಧಿ= *1-4-1974 ರಿಂದ 31-3-1979* ರವರೆಗೆ, 

🔸 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*

🔹 ಉಪಾಧ್ಯಕ್ಷರು= *ಪಿ.ಎನ್ ಹಕ್ಸನ್*

🔸 ಒಟ್ಟು ಹೂಡಿಕೆ= *39.303 ಕೋಟಿ*

🔹ಆದ್ಯತೆ= *ಉದ್ಯೋಗ, ಬಡತನ ನಿರ್ಮೂಲನೆ, ಮತ್ತು ಸಾಮಾಜಿಕ ನ್ಯಾಯ*

🔸1975 ಅಕ್ಟೋಬರ್ 2 ರಂದು *ಪ್ರಾದೇಶಿಕ ಗ್ರಾಮೀಣ ಬ್ಯಾಂಕ್* ಸ್ಥಾಪನೆಗೆ *ಆರ್.ಜಿ  ಸರಣಯ್ಯ ಸಮಿತಿ ಶಿಫಾರಸ್ಸು* ಮಾಡಿತ್ತು.

🔹 ಈ ಯೋಜನೆಯಲ್ಲಿ *ಉಳುವವನೇ ಭೂಮಿಯ ಒಡೆಯ* ನಿರ್ಧಾರ ತೆಗೆದುಕೊಳ್ಳಲಾಯಿತು.

✍️🔸 ಜೀತ ಪದ್ಧತಿ ರದ್ದು= *1976*

🔹 ಯೋಜನೆಯಲ್ಲಿ *ಕೂಲಿಗಾಗಿ ಕಾಳು ಯೋಜನೆ=1977 ಜಾರಿಯಾಯಿತು*

==============================

🌷 *ಆರನೇ ಪಂಚವಾರ್ಷಿಕ ಯೋಜನೆ*( 1980-85)

🔸 ಕಾರ್ಯಗತ ಗೊಂಡ ಅವಧಿ= *1-4-1980 ರಿಂದ 31-3-1985* ರವರಿಗೆ.

🔹 ಅಧ್ಯಕ್ಷರು= *ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ*

🔸 ಉಪಾಧ್ಯಕ್ಷರು= *ನಾರಾಯಣ ದತ್ತ ತಿವಾರಿ, ಎಸ್ ಬಿ  ಚೌಹಾಣ್ ಪ್ರಕಾಶ್ ಚಂದ್ರ ಸೇಥಿ, ಮತ್ತು ಪಿ.ವಿ ನರಸಿಂಹ ರಾವ್*

🔸ಒಟ್ಟು ಹೂಡಿಕೆ= *1,09,500 ಕೋಟಿ* 

🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*

🔸 ಯೋಜನೆಯಲ್ಲಿ *NREP-1980 ರಲ್ಲಿ ಜಾರಿ*

🔹 *ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ- 1980* 

🔸 ಈ ಯೋಜನೆಯಲ್ಲಿ 1982 ರಲ್ಲಿ *ನಬಾರ್ಡ್ ಬ್ಯಾಂಕ್ ಸ್ಥಾಪನೆ*( ಬಿ ಶಿವರಾಂ ಶಿಫಾರಸಿನ ಮೇರೆಗೆ)

🔹 *EXIM ಬ್ಯಾಂಕ್ ಸ್ಥಾಪನೆ= 1982*

🍁🍁🍁🍁🍁🍁🍁🍁🍁✍

🌸 *7ನೇ ಪಂಚವಾರ್ಷಿಕ ಯೋಜನೆ*=(1985-90)

🔸 ಕಾರ್ಯಗತಗೊಂಡ ಅವಧಿ= *1-4-1985 ರಿಂದ 31-3-1990* ರ ವರಗೆ

🔹 ಒಟ್ಟು ಹೂಡಿಕೆ= *1,80,000 ಕೋಟಿ*

🔸 ಅಧ್ಯಕ್ಷರು= *ರಾಜೀವ ಗಾಂಧಿ* 

🔹 ಉಪಾಧ್ಯಕ್ಷರು= *ಮನ್ಮೋಹನ್ ಸಿಂಗ್, ಶಿವಶಂಕರ್,ಮಾಧವ ಸಿಂಗ್ ಸೋಲಂಕಿ*

🔸 ಆದ್ಯತೆ= *ಆಹಾರ ಉದ್ಯೋಗ ಮತ್ತು ಉತ್ಪಾದಕತೆ*

🔹 ಯೋಜನೆಯಲ್ಲಿ *ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ*(MHRD) 1985 ರಲ್ಲಿ ಸ್ಥಾಪನೆ. 

🔸 *ಇಂದಿರಾ ಆವಾಸ್ ಯೋಜನೆ*(IAY) 1985-86)( ಯೋಜನೆಯು ಮುಂದೆ 2015 ಜೂನ್ 25ರಂದು *ಪ್ರಧಾನಮಂತ್ರಿ ಅವಾಸ್ ಯೋಜನೆ* ಎಂದು ಮರುನಾಮಕರಣ ವಾಯಿತು,  

ಈ ಯೋಜನೆ ಉದ್ದೇಶ= *ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿಗಳನ್ನು ನಿರ್ಮಿಸುವ ಉದ್ದೇಶ*

🔹 ಪಂಚವಾರ್ಷಿಕ ಯೋಜನೆಯಲ್ಲಿ *1988 ರಲ್ಲಿ SEBI ಸ್ಥಾಪನೆಯಾಯಿತು.*

🔸1988ರಲ್ಲಿ  *NRY*( ನೆಹರು ರೋಜ್ಗಾರ್ ಯೋಜನೆ) ಮತ್ತು *JRY*( ಜವಾಹರ್ ರೋಜಗಾರ್)  ಯೋಜನೆಗಳು ಜಾರಿ ಬಂದವು  . 

🔹ಈ 7 ನೇ ಪಂಚವಾರ್ಷಿಕ ಯೋಜನೆಯಲ್ಲಿ 1989 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ *ಮಕ್ಕಳ ಒಡಂಬಡಿಕೆ  ಘೋಷಣೆ ಆಯಿತು*.. ಮುಂದೆ 8ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ *ಸಹಿ ಹಾಕಲಾಯಿತು*. 

=================================

⚜️ *ಎಂಟನೇ ಪಂಚವಾರ್ಷಿಕ ಯೋಜನೆ*( 1992-97)

🔸 ಕಾರ್ಯಗತಗೊಂಡ ಅವಧಿ = *1-4-1992 ರಿಂದ 31-3-1997 ರ* ವರಗೆ.

🔹ಒಟ್ಟು ಹೂಡಿಕೆ= *4,34,100 ಕೋಟಿ*

🔸 ಅಧ್ಯಕ್ಷರು= *ನರಸಿಂಹ ರಾವ್, ವಾಜಪೇಯಿ, ದೇವೇಗೌಡರು*

🔹 ಉಪಾಧ್ಯಕ್ಷರು= *ಪ್ರಣಬ್  ಮುಖರ್ಜಿ*

🔸 ಆದ್ಯತೆ= *ಕೈಗಾರಿಕೆಗಳನ್ನು ಆಧುನಿಕರಣ ಮಾಡುವುದು*

🔹1993ರಲ್ಲಿ *ಪಂಚಾಯತ್ ರಾಜ್ ಕಾಯ್ದೆ, ನಗರ ಪಾಲಿಕೆ ಸ್ಥಾಪನೆ,*

🔸 *1993 ರಲ್ಲಿ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ*(PMRY) ಸ್ಥಾಪನೆ, 

🔹1995ರಲ್ಲಿ *WTO ಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆ*

🔸1995ರಲ್ಲಿ *ಪೋಲಿಯೋ ಲಸಿಕೆ ಕಾರ್ಯಕ್ರಮ ಮತ್ತು HDI ಮೊದಲ ಬಾರಿಗೆ ಸಿದ್ಧಪಡಿಸಲಾಯಿತು.*

================================

🌻 *9ನೇ ಪಂಚವಾರ್ಷಿಕ ಯೋಜನೆ*=(1997-2002)

🔹 ಕಾರ್ಯಗತಗೊಂಡ ಅವಧಿ= *1-4-1997 ರಿಂದ31-3-2002 ರ* ವರಗೆ. 

🔸 ಅಧ್ಯಕ್ಷರು= *ಐ.ಕೆ ಗುಜ್ರಾಲ್ ಮತ್ತು ವಾಜಪೇಯಿ*

🔹 ಉಪಾಧ್ಯಕ್ಷರು= *ಮಧು ದಂಡವತೆ. ಜಸ್ವಂತ್ ಸಿಂಗ್, ಕೆ.ಸಿ ಪಂತ್*

🔸 ಈ ಯೋಜನೆಯ ಕಾರ್ಯತಂತ್ರ= *ಪ್ರಗತಿಯೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ*

🔹1997ರಲ್ಲಿ *ಸ್ವರ್ಣ ಜಯಂತಿ ಶಹರಿ ರಾಜಗಾರ ಯೋಜನೆ ಮುಂದೆ 2012-2013ರಲ್ಲಿ *ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*. ಮತ್ತೆ ಈ ಯೋಜನೆಯು 2016-17 ರಲ್ಲಿ *ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*, 

1999 ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ ಇದನ್ನು 2010-11 ರಲ್ಲಿ *NRLM* ಎಂದು ಮರು ನಾಮಕರಣ ಮಾಡಲಾಯಿತು, ಇದನ್ನು ಕರ್ನಾಟಕ ಸರ್ಕಾರ "ಸಂಜೀವಿನಿ" ಎಂಬ ಹೆಸರಿನಲ್ಲಿ *ಅಜೀವಿಕಾ* ಯೋಜನೆ ಜಾರಿಗೆ ತಂದಿದೆ,  

🔹2000 ಡಿಸೆಂಬರ್ 25 ರಂದು *ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ*(PMGSY) ಮತ್ತು *ಅಂತ್ಯೋದಯ ಅನ್ನ ಯೋಜನೆ*(AAY) ಜಾರಿಗೆ ಬಂದಿವೆ. 

🔸2001 ರಲ್ಲಿ *ಸರ್ವಶಿಕ್ಷಣ ಅಭಿಯಾನ* ಜಾರಿಗೆ, 

🔹2001 ರಲ್ಲಿ, *ವಾಲ್ಮೀಕಿ ಅಂಬೇಡ್ಕರ್ ಅವಾಸ ಯೋಜನೆ*, 

🔸2001 ರಲ್ಲಿ, *ಸುವರ್ಣ ಚತುಷ್ಕೊನ ಪಥ ಯೋಜನೆ*. 

===============================

♦️ *10ನೇ ಪಂಚವಾರ್ಷಿಕ ಯೋಜನೆ*=(2002-2007)

🔸ಕಾರ್ಯಗತಗೊಂಡ ಅವಧಿ= *1-4-2002 ರಿಂದ 31-3-2007 ರ* ವರಗೆ.

 🔹 ಒಟ್ಟು ಹೂಡಿಕೆ= *15,25,639 ಕೋಟಿ*

🔸 ಅಧ್ಯಕ್ಷರು= *ಮನಮೋಹನ್ ಸಿಂಗ್*

🔹 ಉಪಾಧ್ಯಕ್ಷರು= *ಕೆ.ಸಿ ಪಂತ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ*

🔸 ಈ ಯೋಜನೆಯಲ್ಲಿ *2002 ರಲ್ಲಿ 86ನೇ ತಿದ್ದುಪಡಿ ಮಾಡಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ,*✍️

🔹2004ರಲ್ಲಿ *ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ, ಮತ್ತು ಕೂಲಿಗಾಗಿ ಕಾಳು ಯೋಜನೆ ಜಾರಿಗೆ*, 

🔸2005 ರಲ್ಲಿ *ಬೆಂಗಳೂರು ಒನ್,NHRM, SEZ, VAT, USHA, ASHA, ಕಾರ್ಯಕ್ರಮಗಳು* ಜಾರಿಗೆ ಆದವು.

================================

♣️ *11ನೇ ಪಂಚವಾರ್ಷಿಕ ಯೋಜನೆ*=(2007-12) 

🔸ಕಾರ್ಯಗತಗೊಂಡ ಅವಧಿ= *1-4-2007 ರಿಂದ 31-3-2012 ರವರೆಗೆ*

🔹 ಹೊಟ್ಟು ಹೂಡಿಕೆ= *36,44,718 ಕೋಟಿ*

🔸 ಅಧ್ಯಕ್ಷರು= *ಮನಮೋಹನ್ ಸಿಂಗ್*

🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*

🔸 ಉದ್ದೇಶ= *ತೋರಿತ ಮತ್ತು ಸಮನ್ವಯ ಪ್ರಗತಿ*

🔸2008 ರಲ್ಲಿ *ನರೇಗಾ* ಯೋಜನೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಯಿತು ಮತ್ತು, ಮತ್ತೆ ನರೇಗಾ ಯೋಜನೆಯು 2009 ಅಕ್ಟೋಬರ್ 2ರಂದು *MGNREGP* ಎಂದು ಮರುನಾಮಕರಣ ವಾಯಿತು, 

🔸ಈ ಹನ್ನೊಂದನೇ ಪಂಚವಾರ್ಷಿಕ ಯೋಜನೆಯನ್ನು ಮನಮೋಹನ ಸಿಂಗ ಅವರು *ಭಾರತೀಯ ಶಿಕ್ಷಣ ಯೋಜನೆ* ಎಂದು ಕರೆದಿದ್ದಾರೆ, 

================================

🌺 *12ನೇ ಪಂಚವಾರ್ಷಿಕ ಯೋಜನೆ*(2012-2017)

🔸 ಕಾರ್ಯಗತಗೊಂಡ ಅವಧಿ= *1-4-2012 ರಿಂದ 31-3-2017 ರ ವರಗೆ*

🔹ಒಟ್ಟು ಹೂಡಿಕೆ= *76,69,807 ಕೋಟಿ*

🔸 ಅಧ್ಯಕ್ಷರು= *ಮನಮೋಹನಸಿಂಗ್*

🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*

🔸 ಯೋಜನೆಯನ್ನು *ಆರೋಗ್ಯ ಯೋಜನೆ* ಎಂದು ಕರೆಯಲಾಗುತ್ತದೆ.

🔹2015 ಜನವರಿ 1ರಂದು ಪಂಚವಾರ್ಷಿಕ ಯೋಜನೆಯ ತೆಗೆದು *ನೀತಿ ಆಯೋಗ ಜಾರಿಗೆ ಬಂದಿತು*, 


🌴 ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು

~~

1. ರಂಗನತಿಟ್ಟು - ಮಂಡ್ಯ -1940

2. ಅರಬ್ಬಿತಿಟ್ಟು -ಮೈಸೂರು-1950

3. ಬ್ರಹ್ಮಗಿರಿ -ಕೊಡಗು-1974

4. ಮೂಕಾಂಬಿಕಾ -ಉಡುಪಿ -1974

5.  ನುಗು- ಮೈಸೂರು-1974

6. ಶರಾವತಿ ಘಾಟ್-ಶಿವಮೊಗ್ಗ -1974

7. ಸೋಮೇಶ್ವರ -ದಕ್ಷಿಣ ಕನ್ನಡ -1974

8.  ಶೆಟ್ಟಹಳ್ಳಿ -ಶಿವಮೊಗ್ಗ -1974

9. ರಾಣೆಬೆನ್ನೂರು-ಹಾವೇರಿ -1974

10. ಪುಷಗಿರಿ -ಕೊಡಗು-1974

11. ಮೇಲುಕೋಟೆ -ಮಂಡ್ಯ - 1974

12. ಘಟಪ್ರಭಾ - ಬೆಳಗಾವಿ-1974

13. ಕಾವೇರಿ- ಚಾಮರಾಜನಗರ-1987

14. ತಲಕಾವೇರಿ- ಕೊಡಗು-1987

15. ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981

16. ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974

17. ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987

18. ದಾಂಡೇಲಿ-ಉತ್ತರ ಕನ್ನಡ -1987

19. ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989

20. ದರೋಜಿ ಕರಡಿ ಧಾಮ -ಬಳ್ಳಾರಿ-1989

21. ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009

🔸🔸🔸🔸🔸🔸🔸🔸🔸🔸🔸🔸🔸🔸🔸

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಮಹಾರಾಷ್ಟ್ರ (ಮುಂಬಯಿ).


02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ದೆಹಲಿ (ಪಾಲಂ).


03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಗುಜರಾತ್(ಅಹ್ಮದಾಬಾದ್).


04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ತಮಿಳುನಾಡು (ಚೆನ್ನೈ) .


05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಪಶ್ಚಿಮ ಬಂಗಾಳ (ಕೊಲ್ಕತ್ತಾ).


06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಆಂಧ್ರಪ್ರದೇಶ (ಹೈದರಾಬಾದ್)


07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಅಸ್ಸಾಂ (ಗುವಾಹಟಿ).


08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಮಹಾರಾಷ್ಟ್ರ  (ನಾಗಪುರ).


09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಉತ್ತರ ಪ್ರದೇಶ (ಲಖನೌ).


10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. 

✔ ಕರ್ನಾಟಕ (ಬೆಂಗಳೂರು).


11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಕೇರಳ (ಕೊಚ್ಚಿ ).


12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್ ಬ್ಲೇರ್).


13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. 

✔ ಕೇರಳ (ಕೊಳಿಕೋಡ್ ).


14. ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಕೇರಳ (ತಿರುವನಂತಪುರಂ ).


15. ಗೋವಾ/ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಗೋವಾ (ಪಣಜಿ).


16. ಮಂಗಳೂರು/ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ಕರ್ನಾಟಕ (ಮಂಗಳೂರು).


17. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ

ನಿಲ್ದಾಣ.

✔ ಒಡಿಶಾ (ಭುವನೇಶ್ವರ).


18. ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ತಮಿಳುನಾಡು (ತಿರುಚಿರಾಪಳ್ಳಿ).


19. ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

✔ ತಮಿಳುನಾಡು (ಕೊಯಮತ್ತೂರು).


★•┈•┈•┈••✦✿✦••┈•┈•┈•★ 


__________________________________________
ಸಂಗ್ರಹ✍️ T. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು