ಶಿಕ್ಷಣವೇ ಶಕ್ತಿ

Saturday, 9 January 2021

ವನ್ಯಜೀವಿಗಳ ಒಂದಿಷ್ಟು ಮಾಹಿತಿ


✍️ ಈಗ ಬದುಕಿರುವ ಪ್ರಾಣಿಗಳಲ್ಲಿ 4 ಕೊಂಬನ್ನು ಹೊಂದಿರುವ ಪ್ರಪಂಚದ ಏಕೈಕ ಪ್ರಾಣಿ ಯಾವುದು? ಯಾವ ದೇಶದಲ್ಲಿದೆ?
🔸ಕೊಂಡು ಕುರಿ (four horned antelope) ಭಾರತ

✍️ ಪ್ರಪಂಚದ ಅತೀ ಉದ್ದವಾದ ಹಾವು ಯಾವುದು?
🔸ರೆಟಿಕ್ಯುಲೇಟೆಡ್ ಹೆಬ್ಬಾವು(Reticulated python)

✍️ ತನ್ನ ದೇಹದ ಉದ್ದಕ್ಕಿಂತ ಒಂದೂವರೆ ಪಟ್ಟು ಉದ್ದದ ನಾಲಿಗೆ ಹೊಂದಿ ಪ್ರಪಂಚದ ಅತೀ ಉದ್ದ ನಾಲಿಗೆ ಸಸ್ತನಿ ಎನಿಸಿಕೊಂಡ ಜೀವಿ ಯಾವುದು?
🔸ಟ್ಯೂಬ್ ಲಿಪ್ಡು ನೆಕ್ಟರ್ ಬ್ಯಾಟ್(Tube lipped nector bat) ಸಮಭಾಜಕ ವೃತ್ತ.

✍️ ವಿಶ್ವದ ಅತೀ ದೊಡ್ಡ ಕಾಡು ದನ(Wild cattle) ಯಾವುದು?
🔸ಕಾಟಿ (Gaur)

✍️ಕಾಡೆಮ್ಮೆ ಕಾಡುಕೋಣಗಳನ್ನು ಸುಲಭವಾಗಿ ನೋಡಲು ಯಾವ ರಾಜ್ಯಕ್ಕೆ ಹೋಗಬೇಕು?
🔸 ಅಸ್ಸಾಂ ನ ಕಾಜಿರಂಗಾ ರಾಷ್ಟ್ರೀಯ ಉದ್ಯಾನ or ಮನಾಸ್ ಅಭಯಾರಣ್ಯ.

✍️ ನಮ್ಮ ದೇಶದಲ್ಲಿ ಕಾಡು ಕತ್ತೆ (Wild ass)ಅಭಯಾರಣ್ಯ ಎಲ್ಲಿದೆ?
🔸ರಾಜಸ್ಥಾನದ ಕಚ್ ಅಭಯಾರಣ್ಯ

✍️ ಪ್ರಪಂಚದ ದೊಡ್ಡ ದಂಶಕ(Rodent) ಪ್ರಾಣಿ ಯಾವುದು?
🔸 ದಕ್ಷಿಣ ಅಮೆರಿಕಾದ ಕ್ಯಾಫಿ ಬಾರ (Capybara)

✍️ ಭಾರತದ ದೊಡ್ಡ ದಂಶಕ(Rodent) ಪ್ರಾಣಿ ಯಾವುದು?
🔸 ಮುಳ್ಳುಹಂದಿ (porcupine)

✍️ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುವ ಕಾಡು ಆಡು ಯಾವುದು?
🔸 ನೀಲಗಿರಿ ಟಾಹರ್ (Nilgiri Tahr)

✍️ ಭಾರತದಲ್ಲಿ ಕಂಡುಬರುವ ಬೆಕ್ಕಿನ ಕುಟುಂಬದ(Wild Cats) ಪ್ರಾಣಿಗಳು ಎಷ್ಟು?
🔸 15

✍️ ವಿಶ್ವದಾದ್ಯಂತ ಈಗ ಇರುವ ಹುಲಿಯ ಪ್ರಭೇದಗಳೆಷ್ಟು? ತಮ್ಮ ದೇಶದ ಹುಲಿಗೆ ಏನೆನ್ನುತ್ತಾರೆ?
🔸 ಆರು ಪ್ರಭೇದಗಳು, ನಮ್ಮಲ್ಲಿರುವ ಹುಲಿ ಬಂಗಾಳದ ಹುಲಿ ಅಥವಾ Royal Bengal Tiger

✍️ ಕಾಡು ಬೆಕ್ಕುಗಳು (Wild Cat's) ಇಲ್ಲದ ಖಂಡಯಾವುದು?
🔸 ಆಸ್ಟ್ರೇಲಿಯಾ

✍️ಕಡಲಾಮೆಗಳಲ್ಲಿ ದೊಡ್ಡ ಆಮೆ ಯಾವುದು?
🔸 leather back turtle

✍️ ಅಮೆಜಾನ್ ನದಿಯಲ್ಲಿ ಕಂಡು ಬರುವ ಮೊಸಳೆಗಳಿಗೆ ಏನೆಂದು ಕರೆಯುತ್ತಾರೆ?
🔸 ಕೆಯ್ಮ್ಯಾನ್ (Caiman)

✍️ ಗೂಡು ಕಟ್ಟಿ ಮೊಟ್ಟೆ ಇಡುವ ಪ್ರಪಂಚದ ಏಕೈಕ ಹಾವು ಯಾವುದು?
🔸 ಕಾಳಿಂಗ ಸರ್ಪ (King Cobra)

✍️ ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುವ ಸಿಂಗಳೀಕ ಕಪಿ(Lion Tailed macaque) ಗಳು ಯಾವ ರಾಜ್ಯಗಳಿಗೆ ಸೀಮಿತ?
🔸ಕರ್ನಾಟಕ, ಕೇರಳ, ತಮಿಳುನಾಡು,

✍️ ಭಾರತದ ನಾಲ್ಕು ಅಪಾಯಕಾರಿ ಹಾವುಗಳು ಯಾವುವು?
🔸 ನಾಗರಹಾವು (Spectacle Cobra) 
ಕೊಳಕು ಮಂಡಲ (Russell viper) 
ಕಟ್ಟುಹಾವು (Common krait) ಗರಗಸ ಹುರುಪೆ ಮಂಡಲ ಹಾವು (Sawscaled viper)

✍️ ಅತೀ ವೇಗವಾಗಿ ಓಡುವ ಪ್ರಾಣಿ ಯಾವುದು?
🔸 ಚೀತಾ (Cheetah)

✍️ ಪ್ರಪಂಚದ ದೊಡ್ಡ ಗಾತ್ರದ ಹಾವು ಯಾವುದು?
🔸 ಹಸಿರು ಅನಕೊಂಡ (Green Anaconda)

✍️ ಅತೀ ದೊಡ್ಡ ಮೀನು ಯಾವುದು ?
🔸 ವ್ಹೇಲ್ ಶಾರ್ಕ್ (Whale shark)

✍️ ನಮ್ಮ ರಾಷ್ಟ್ರೀಯ ಜಲಚರ (National aquatic animal) ಯಾವುದು?
🔸 ಗಂಗಾ ನದಿಯ ಡಾಲ್ಫಿನ್(Gangetic Dolphin)

✍️ ನಮ್ಮ ದೇಶದ ಕಾಡುಗಳಲ್ಲಿ ಕಂಡುಬರುವ ಮೊಲಗಳಿಗೆ ಏನೆಂದು ಕರೆಯುತ್ತಾರೆ?
🔸 Hares ಎನ್ನುತ್ತಾರೆ, Rabbits ಗಳು ನಮ್ಮ ದೇಶದಲ್ಲಿ ಇಲ್ಲ.

✍️ ನಮ್ಮ ದೇಶದ ದೊಡ್ಡ ಜಿಂಕೆ ಯಾವುದು?
🔸 ಕಡವೆ (Samber)

✍️ ವಿಶ್ವದ ಚಿಕ್ಕ ಕಾಡು ಬೆಕ್ಕು(Wild cat) ಯಾವುದು?
🔸 ತುಕ್ಕು ಚುಕ್ಕೆಗಳ ಬೆಕ್ಕು (Rusty spotted cat)

✍️ ಕೃಷ್ಣಮೃಗ ಕ್ಕೆ (Black buck) ಆ ಹೆಸರು ಬರಲು ಕಾರಣವೇನು?
🔸 ಗಂಡು ಪ್ರಾಯಕ್ಕೆ ಬಂದ ನಂತರ ಅದರ ಬಣ್ಣ ಕಪ್ಪಾಗುತ್ತದೆ.

✍️ ಭಾರತದಲ್ಲಿರುವ ಕತ್ತೆ ಕಿರುಬಕ್ಕೆ ಏನೆಂದು ಕರೆಯುತ್ತಾರೆ?
🔸 ಪಟ್ಟೆ ಕತ್ತೆ ಕಿರುಬ (Striped  Hyena)

✍️ ಭಾರತದ ದೊಡ್ಡ ಮುಂಗುಸಿ ಯಾವುದು?
🔸ಪಟ್ಟೆ ಕತ್ತಿ ನ ಮುಂಗುಸಿ (Striped necked mongoose)

✍️ ವಿಶ್ವದ ಅತೀ ಉದ್ದ ಕೊಕ್ಕಿನ ಪಕ್ಷಿ (ತನ್ನ ದೇಹದ ಉದ್ದಕ್ಕ ಹೋಲಿಸಿದರೆ )ಯಾವುದು?
🔸 sword billed Humming bird

✍️ ಆಫ್ರಿಕಾದ ಅತ್ಯಂತ ವಿಷಕಾರಿ ಹಾವು ಯಾವುದು?
🔸ಕಪ್ಪು ಮಾಂಬಾ ( black Mamba)

✍️ ಭಾರತದ ಅಳಿವಿನ ಅಂಚಿನ ಪಕ್ಷಿಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವುದು ಯಾವುದು?
🔸 Great Indian busterd  (ಹೆಬ್ಬಕ)

✍️ ತಮ್ಮ ಹೊಟ್ಟೆಯ ಚೀಲಗಳಲ್ಲಿ ಮರಿಗಳನ್ನು ಬೆಳೆಸುವ ಸಸ್ತನಿಗಳಿಗೆ ಏನೆಂದು ಕರೆಯುತ್ತಾರೆ?
🔸 marsupial Mammal

✍️ ಹುಲಿ ಹಾಗು ಸಿಂಹಗಳನ್ನು ಮೃಗಾಲಯದಲ್ಲಿ ಕೂಡಿಸಿ ಹುಟ್ಟುವ ಸಂಕರಣ ತಳಿ ಗಳಿಗೆ(Hybrid)  ಏನೆಂದು ಹೆಸರು ?
🔸 ಗಂಡು ಹುಲಿ ಮತ್ತು ಹೆಣ್ಣು ಸಿಂಹಕ್ಕಾದ ಸಂತತಿಗೆ- ಟೈಗಾನ್ (Tigon)
ಗಂಡು ಸಿಂಹ ಮತ್ತು ಹೆಣ್ಣು ಹುಲಿಗಾದ ಸಂತತಿಗೆ ಲೈಗಾನ್(Ligon)

✍️ ಆಫ್ರಿಕಾ ಬಿಟ್ಟರೆ ಸಿಂಹಗಳು ಇರುವ ಏಕೈಕ ನೈಸರ್ಗಿಕ ನೆಲೆ?
🔸ಭಾರತದ ಗಿರ್ ಅಭಯಾರಣ್ಯ (Asiatic lions)

✍️ ಭಾರತದಲ್ಲಿ ಕಂಡುಬರುವ ಕಾಡು ಪಾಪಗಳ (Lori's) ವಿಧಗಳು ಎಷ್ಟು?
🔸 ಎರಡು ವಿಧ
Slow Lori's, Slender Lori's
__________________________________________
ಸಂಗ್ರಹ✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು