💎💎💎💎💎💎💎💎💎💎💎💎💎💎
ಪದಗಳು | ವಿವರಣೆ |
---|---|
ಹೆಮಟಾಲಜಿ | ರಕ್ತ ಹಾಗೂ ರಕ್ತಕ್ಕೆ ಸಂಬಂಧಿಸಿದ ವ್ಯಾಧಿಗಳ ಬಗ್ಗೆ ತಿಳಿಸುವ ಶಾಸ್ತ್ರ |
ನ್ಯೂರಾಲಜಿ | ನರಮಂಡಲದ ಚಟುವಟಿಕೆ ಹಾಗೂ ವ್ಯಾಧಿಗಳ ಬಗ್ಗೆ ವಿವರಿಸುವ ಶಾಸ್ತ್ರ |
ನೆಫ್ರಾಲಜಿ | ಮೂತ್ರಪಿಂಡಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ವಿವರಿಸುವ ಶಾಸ್ತ್ರ |
ಗೈನಕಾಲಜಿ | ಸ್ತ್ರೀ ಸಂಬಂಧಿ ವ್ಯಾಧಿಗಳ ಬಗ್ಗೆ ತಿಳಿಸುವ ಶಾಸ್ತ್ರ |
ಕಾರ್ಡಿಯಾಲಜಿ | ಹೃದಯಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ಪರಿಶೀಲಿಸುವ ಶಾಸ್ತ್ರ |
ಬಯೋಮೆಟ್ರಿ | ಜೀವಿಗಳ ಪರಿಶೋಧನೆಗೆ ಉಪಯೋಗಿಸುವ ಗಣಿತಶಾಸ್ತ್ರ |
ಸೈಟಾಲಜಿ | ಕಣಗಳ ಅಧ್ಯಯನ ಶಾಸ್ತ್ರ |
ಜೆನೆಟಿಕ್ಸ್ | ಅನುವಂಶಿಯತೆ ಹಾಗೂ ಅವುಗಳ ನಿಯಮಗಳ ಬಗ್ಗೆ ತಿಳಿಸುವ ಶಾಸ್ತ್ರ |
ಎಥಾಲಜಿ | ಜಂತುಗಳ ಗುಣಲಕ್ಷಣ ಸ್ವಾಭಾವಗಳ ಬಗ್ಗೆ ತಿಳಿಸುವ ಶಾಸ್ತ್ರ |
ಹೈಡ್ರಾಲಜಿ | ನೀರಿನ ಲಭ್ಯತೆ ಅದರ ನಿಯಮಗಳ ಬಗ್ಗೆ ತಿಳಿಸುವ ಶಾಸ್ತ್ರ |
ವೈರಾಲಜಿ | ವೈರಸ್ ಗಳ ಬಗೆಗಿನ ಅಧ್ಯಯನ ಶಾಸ್ತ್ರ |
ಹಿಪ್ನಾಟಿಸಂ | ಸಮ್ಮೋಹನ ಶಾಸ್ತ್ರ |
ಎಂಟಮಾಲಜಿ | ಕ್ರಿಮಿಕೀಟಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ |
ಮೈಕ್ರೋ ಬಯಾಲಜಿ | ಸೂಕ್ಷ್ಮ ಜೀವಿಗಳ ಬಗ್ಗೆ ತಿಳಿಸುವ ಅಧ್ಯಯನ |
ಅನಾಟಮಿ | ಶರೀರ ನಿರ್ಮಾಣ ಶಾಸ್ತ್ರ |
ಸಂಗ್ರಹ ✍️ T.A. ಚಂದ್ರಶೇಖರ
No comments:
Post a Comment