ಶಿಕ್ಷಣವೇ ಶಕ್ತಿ

Thursday, 17 December 2020

 🌹ಹೊಸಬೆಳಕು🌹

=========================

🌼 ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ 🌼✍🌺🌺🌺🌺🌺🌺

👇👇👇👇👇👇👇👇👇👇

ಶ್ರೀ ಶಂಕರಾಚಾರ್ಯರ ಜೀವನ

 🔷ಶಂಕರಾಚಾರ್ಯರು ಜನಿಸಿದ ವರ್ಷ= 788


 🔷ನಂಬೋದರಿ ಎಂಬುದರ ಅರ್ಥ= ಪೂರ್ಣ ವಿಶ್ವಾಸವಿರುವ ಎಂದರ್ಥ


🔷ಶಂಕರಾಚಾರ್ಯರ ಜನಿಸಿದ ಸ್ಥಳ= ಕೇರಳದ ಕಾಲಡಿ


 🔷ಶಂಕರಾಚಾರ್ಯರ ತಂದೆ ತಾಯಿ ಹೆಸರು? 

 ತಂದೆ= ಶಿವಗುರು. ತಾಯಿ= ಆರ್ಯಾಂಬ


 🔷ಶಂಕರಾಚಾರ್ಯರ ಗುರು= ಗೋವಿಂದ ಭಗವತ್ಪಾದರು


 🔷ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= ಶಂಕರಾಚಾರ್ಯರು

ಸಿದ್ಧಾಂತ

 🔷ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ಅದ್ವೈತ ಸಿದ್ಧಾಂತ


 🔷ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= ಅದ್ವೈತ ಸಿದ್ಧಾಂತ


 🔷ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= ಶಂಕರಾಚಾರ್ಯರು


 🔷"ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= ಶಂಕರಾಚಾರ್ಯರು

ನಾಲ್ಕು ಮಠಗಳು

🔷ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ 4 ಮಠಗಳು

1) ಒರಿಸ್ಸಾದ ಪುರಿ ಗೋವರ್ಧನ ಪೀಠ

2) ಗುಜರಾತಿನ ದ್ವಾರಕಾ ಕಾಳಿಕಾಪೀಠ

3) ಉತ್ತರಪ್ರದೇಶದ ಭದ್ರಿಯ ಜ್ಯೋತಿರ್ಮಠ

4) ಕರ್ನಾಟಕದ ಶೃಂಗೇರಿಯ ಶಾರದಾ ಪೀಠ

 ಬೋಧನೆಗಳು

 🔷ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= ಸುರೇಶ್ವರ ಚಾರ್ಯರು


 🔷ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ  ಸೋತವರು= ಮಂಡನಮಿಶ್ರ


 🔷ವಿಜಯನಗರ ಅರಸರ ಕಾಲದಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸಿದವರು= ವಿದ್ಯಾರಣ್ಯರು


 🔷ಮರೆಮಾಡಿದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?

 ಶಂಕರಾಚಾರ್ಯರನ್ನು


 🔷ಶಂಕರಾಚಾರ್ಯರು ಮೋಕ್ಷಕ್ಕೆ ಬೋಧಿಸಿದ ಮಾರ್ಗ= ಜ್ಞಾನಮಾರ್ಗ


🔷 ಶಂಕರಾಚಾರ್ಯರ ಬಿರುದು= ಷಣ್ಮತ ಸ್ಥಾಪನಾಚಾರ್ಯ

==== ಶ್ರೀವೈಷ್ಣವ ಪಂತದ ಪ್ರವರ್ತಕರು( ಸ್ಥಾಪಕರು)= ಶ್ರೀ ರಾಮಾನುಚಾರ್ಯರು

ಶ್ರೀ ರಾಮಾನುಜಾಚಾರ್ಯರ ಜೀವನ

🔷 ಶ್ರೀರಾಮನು ಚಾರ್ಯರು ಜನಿಸಿದ ವರ್ಷ= 1017


 🔷ಜನಿಸಿದ ಸ್ಥಳ= ಪೆರಂಬದೂರು

( ತಮಿಳುನಾಡು)


 🔷ಶ್ರೀರಾಮನು ಚಾರ್ಯರ ತಂದೆ-ತಾಯಿ ಹೆಸರು? 

 ತಂದೆ= ಕೇಶವ ಸೋಮಯಾಜಿ

 ತಾಯಿ= ಕಾಂತಿಮತಿ


 🔷ಶ್ರೀರಾಮನು ಚಾರ್ಯರ ಗುರುಗಳು= ಯಾದವ ಪ್ರಕಾಶರು


 🔷ಯತಿರಾಜ ಎಂದು ಕರೆಯಲ್ಪಡುತ್ತಿದ್ದ ಸುಧಾರಕರು= ರಾಮಾನುಜಾಚಾರ್ಯರು

ಸಿದ್ಧಾಂತ

 🔷ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ವಿಶಿಷ್ಟಾದ್ವೈತ ಸಿದ್ಧಾಂತ


 🔷ರಾಮಾನುಚಾರ್ಯರ ಕಿರುಕುಳ ನೀಡಿದ ಚೋಳರ ದೊರೆ= ಒಂದನೇ ಕುಲತುಂಗ ಚೋಳ

 (ರಾಮಾನುಚಾರ್ಯರು ವೈಷ್ಣವರಾಗಿದ್ದ ಅದಕ್ಕೆ)


 🔷ರಾಮಾನುಚಾರ್ಯರ ಗೆ ಆಶ್ರಯ ನೀಡಿದ ಹೊಯ್ಸಳದೊರೆ= ವಿಷ್ಣುವರ್ಧನ(ಬಿಟ್ಟಿದೇವ)


 🔷ರಾಮಾನುಚಾರ್ಯರು ಕರ್ನಾಟಕದಲ್ಲಿ ವೈಷ್ಣವ ಮಠವನ್ನು= ಮೇಲುಕೋಟೆಯಲ್ಲಿ ಸ್ಥಾಪಿಸಿದರು

ಗ್ರಂಥಗಳು

 🔷ರಾಮಾನುಚಾರ್ಯರ ಗ್ರಂಥಗಳು= ವೇದಾಂತಸಾರ. ವೇದಾಂತ ಸಂಗ್ರಹ. ವೇದಾಂತ ದೀಪಿಕ. ಶ್ರೀ ಭಾಷ್ಯ , ಗೀತಾಭಾಷ್ಯ, 

3 ಮೂಲಾಂಶಗಳು

 🔷ರಾಮಾನುಚಾರ್ಯರು ಅಂತ ಮೂರು ಮೂಲಾಂಶಗಳು

1) ಚಿತ್( ಆತ್ಮ)

2) ರಚಿತ್( ಜಗತ್ತು)

3) ಬ್ರಹ್ಮನ( ಪರಮಾತ್ಮ)


 🔸ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯದವರು= ಜವಾಹರ್ ಲಾಲ್  ನೆಹರು✍✍🌺🌺🌺🌺🌺🌺

===================

ಶ್ರೀ ಮಧ್ವಚಾರ್ಯರ ಜೀವನ

🔷ಮದ್ವಾಚಾರ್ಯರು ಜನಿಸಿದ ವರ್ಷ= 1238


🔹 ಮದ್ವಾಚಾರ್ಯರು ಜನಿಸಿದ ಸ್ಥಳ= ಉಡುಪಿ ಜಿಲ್ಲೆಯ ಪಾಜಕ


🔸 ಮಧ್ವಾಚಾರ್ಯರ ತಂದೆ ತಾಯಿ ಹೆಸರು? 

 ತಂದೆ- ಮಧ್ಯಗೇಹ ನಾರಾಯಣ್ ಭಟ್

 ತಾಯಿ- ವೇದಾವತಿ


🔹 ಮಧ್ವಾಚಾರ್ಯರ ಮೂಲ ಹೆಸರು= ವಾಸುದೇವ


🔸 ಮಧ್ವಾಚಾರ್ಯ ಇನ್ನಿತರ ಹೆಸರುಗಳು= ಪೂರ್ಣಪ್ರಜ್ಞ ಮತ್ತು ಆನಂದತೀರ್ಥ


🔹 ಮಧ್ವಾಚಾರ್ಯ ಗುರುಗಳು= ಅಚ್ಯುತಪ್ರೇಕ್ಷರು


ಪ್ರತಿಪಾದಿಸಿದ ಸಿದ್ಧಾಂತ

🔷"ದ್ವೈತ ಸಿದ್ಧಾಂತದ" ಪ್ರತಿಪಾದಕರು= ಮದ್ವಾಚಾರ್ಯರು

🔸 ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ದ್ವೈತ ಸಿದ್ಧಾಂತ


🔹 ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆಬೇರೆ ಎಂದು ವಾದಿಸಿದ ಸುಧಾರಕ= ಮಧ್ವಾಚಾರ್ಯ


🔸 ಮಧ್ವಾಚಾರ್ಯರ ಕೃತಿಗಳು

1) ಗೀತಾಭಾಷ್ಯ, 

2) ಬ್ರಹ್ಮಸೂತ್ರ, 

3) ಅನುಭಾಷ್ಯ, 

4)  ಸ್ತೋತ್ರ


🔹 ಮಧ್ವಾಚಾರ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡು ಹಿಂತಿರುಗುವಾಗ ತಂದಂತ ಮೂರ್ತಿಗಳು ಯಾವವು? 

 ಕೃಷ್ಣಮೂರ್ತಿ ಮತ್ತು ಬಲರಾಮನ ಮೂರ್ತಿಗಳು


🔸 ಮಧ್ವಾಚಾರ್ಯರು ಕೃಷ್ಣನ ಮೂರ್ತಿ ಮತ್ತು ಬಲರಾಮನ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಿದರು? 

 ಕೃಷ್ಣನ ಮೂರ್ತಿ ಉಡುಪಿಯಲ್ಲಿ ಸ್ಥಾಪಿಸಿದರು,

 ಬಲರಾಮನ ಮೂರ್ತಿ ಮಲ್ಪೆಯಲ್ಲಿ ಸ್ಥಾಪಿಸಿದರು

ಉಡುಪಿಯ 8 ಮಠಗಳು

🔷 ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು👇

1) ಸೊದಿ ಮಠ.

2) ಶಿರೂರು ಮಠ, 

3) ಕಾಣಿಯೂರು ಮಠ

4) ಪೇಜಾವರ ಮಠ, 

5) ಪಲಿಮಾರು ಮಠ, 

6) ಅದಮಾರು ಮಠ, 

7) ಕೃಷ್ಣಾಪುರ ಮಠ, 

8) ಪುತ್ತಿಗೆ ಮಠ 

==================

ಶ್ರೀ ಬಸವೇಶ್ವರರ ಜೀವನ

🔷ಕರ್ನಾಟಕದ ಮಾರ್ಟಿನ್ ಲೂಥರ್ ಎನಿಸಿಕೊಂಡವರು= ಬಸವೇಶ್ವರರು

🔷ಬಸವೇಶ್ವರರು 1132(12ನೇ ಶತಮಾನ) ದಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು, 

🔷ಬಸವೇಶ್ವರ ತಂದೆ ತಾಯಿ ಹೆಸರು? 

 ತಂದೆ- ಮಾದರಸ

 ತಾಯಿ- ಮಾದಲಾಂಬಿಕೆ

 🔷ಬಸವೇಶ್ವರ ಗುರುಗಳು:-

 ಜಾತವೇದ ಮುನಿಗಳು ಮತ್ತು ಅಲ್ಲಮಪ್ರಭುಗಳು

ಪ್ರತಿಪಾದಿಸಿದ ಸಿದ್ಧಾಂತ

 🔷ಬಸವೇಶ್ವರ ಪ್ರತಿಪಾದಿಸಿದ ಸಿದ್ಧಾಂತ= ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

 🔷ಯಾರಲ್ಲಿ ಬಸವೇಶ್ವರರು ಪ್ರಧಾನಮಂತ್ರಿಯಾಗಿ  ಸೇವೆ ಸಲ್ಲಿಸಿದ್ದು, = ಕಳಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ

ಅನುಭವ ಮಂಟಪ

 🔷ಬಸವೇಶ್ವರ ಅನುಭವ ಮಂಟಪ ಎಲ್ಲಿ ಸ್ಥಾಪಿಸಿದರು?

 ಬಸವಕಲ್ಯಾಣದಲ್ಲಿ ಸ್ಥಾಪಿಸಿದರು

🔷 ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು? 

 ಅಲ್ಲಮಪ್ರಭುಗಳು

ಘೋಷವಾಕ್ಯ

ಬಸವೇಶ್ವರರು ಕಾಯಕವೇ ಕೈಲಾಸ ಎಂಬ ಘೋಷವಾಕ್ಯವನ್ನು ಪ್ರತಿಪಾದಿಸಿದರು.



🔷 ಬಸವೇಶ್ವರ ಲಿಂಗೈಕ್ಯರಾದ ಸ್ಥಳ= ಕೂಡಲಸಂಗಮದಲ್ಲಿ

(1168)


🔷ಕಾಯಕವೇ ಕೈಲಾಸ ಎಂದು ಹೇಳಿದವರು= ಬಸವೇಶ್ವರರು

📔 **

📒📕📗📘📙📓📘📙📒📕📓📕📘📓📙

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು