ಶಿಕ್ಷಣವೇ ಶಕ್ತಿ
Wednesday, 3 February 2021
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Tuesday, 2 February 2021
STS ತಂತ್ರಾಂಶ
ಎಸ್ ಎ ಟಿ ಎಸ್

Monday, 1 February 2021
ಕರಾವಳಿ ಪ್ರದೇಶಗಳು
ಕರಾವಳಿ ಪ್ರದೇಶಗಳು
✍ಕರಾವಳಿ ಪ್ರದೇಶಗಳು
# ಕರಾವಳಿ ಪ್ರದೇಶ ಪಶ್ಚಿಮದಲ್ಲಿ ಗುಜರಾತ್ ನ "ಕಛ್"ನಿಂದ ಪೂರ್ವದಲ್ಲಿ ಗಂಗಾನದಿಯ ಮುಖಜ ಭೂಮಿಯವರೆಗೆ ಹಬ್ಬಿದೆ.
# ಭಾರತದ ಕರಾವಳಿಯ ಉದ್ದ6,100 ಕಿ.ಮೀ (ದ್ವೀಪಗಳನ್ನು ಹೊರತುಪಡಿಸಿ).
# ಭಾರತದ ಕರಾವಳಿಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ.
ಪೂರ್ವ ಕರಾವಳಿ
ಪಶ್ಚಿಮ ಕರಾವಳಿ
👉🏾ಪೂರ್ವ ಕರಾವಳಿ
# ಉತ್ತರದ ಗಂಗಾನದಿ ಮುಖಜ ಭೂಮಿಯಿಂದ ದಕ್ಷಿಣದ ಕನ್ಯಾಕುಮಾರಿ ಯವರೆಗೂ, ಬಂಗಾಳ ಕೊಲ್ಲಿ ಮತ್ತು ಪೂರ್ವ ಘಟ್ಟಗಳ ನಡುವೆ ಹರಡಿದೆ.
# ಪೂರ್ವ ಕರಾವಳಿ ಪ್ರದೇಶವು ಹೆಚ್ಚು ಅಗಲವಾಗಿ ಮತ್ತು ಒಂದೇ ರೀತಿ ಸಮತಟ್ಟಾಗಿದೆ.
# ಪೂರ್ವ ಕರಾವಳಿ ತೀರದಲ್ಲಿ ಸಮುದ್ರದ ಉಪ್ಪು ನೀರಿನಿಂದ ನಿರ್ಮಿತವಾದ ಕೆಲವು ಲಗೂನ್ (ಸರೋವರ)ಗಳಿವೆ. ಅಂತಹ ಲಗೂನ್ ಗಳಿಗೆ ಉದಾ: ತಮಿಳುನಾಡಿನ 'ಪುಲಿಕಾಟ್' ಮತ್ತು ಒರಿಸ್ಸಾದ 'ಚಿಲ್ಕಾ' ಸರೋವರಗಳು.
# ಚಿಲ್ಕಾ ಸರೋವರ ಭಾರತದ ಅತಿ ದೊಡ್ಡ ಸರೋವರವಾಗಿದೆ.
# ಆಂಧ್ರಪ್ರದೇಶದ ಬಳಿ ಇರುವ ಶ್ರೀ ಹರಿಕೋಟಾ ದ್ವೀಪದಲ್ಲಿ ಇಸ್ರೋ (ISRO)ದ ಕೃತಕ ಉಪಗ್ರಹ ಉಡಾವಣಾ ಕೇಂದ್ರವಿದೆ.
# ಪೂರ್ವ ಕರಾವಳಿಯ ಉತ್ತರ ಭಾಗವನ್ನು "ಉತ್ಕಲ ತೀರ" ಮತ್ತು ದಕ್ಷಿಣ ಭಾಗವನ್ನು "ಕೋರಮಂಡಲ ತೀರ" ವೆಂದು ಕರೆಯುತ್ತಾರೆ.
# ಪೂರ್ವ ಕರಾವಳಿಯಲ್ಲಿ ಕಾಣ ಬಹುದುದಾದ ಪ್ರಮುಖ ಬಂದರುಗಳು ಹೀಗಿವೆ : ಪಾರಾದೀಪ್, ಹಲ್ದಿಯಾ, ಕೋಲ್ಕತ್ತಾ, ವಿಶಾಖಪಟ್ಟಣ, ಚೆನ್ನೈ ಮತ್ತು ಟುಟಿಕಾರ್ನ್.
👉🏾ಪಶ್ಚಿಮ ಕರಾವಳಿ
# ಗುಜರಾತಿನ "ಕಛ್" ಪ್ರದೇಶದಿಂದ ಕನ್ಯಾಕುಮಾರಿ ಯವರೆಗೂ, ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ಮಧ್ಯೆ ಹರಡಿದೆ.
# ಪಶ್ಚಿಮ ಕರಾವಳಿಯ ಉದ್ದ ಸುಮಾರು 1,500 ಕಿಲೋ ಮೀಟರ್ ನಷ್ಟಿದೆ.
# ಈ ಕರಾವಳಿ ಪ್ರದೇಶ ನೇರವಾಗಿ ರುವುದರಿಂದಲೂ, ವರ್ಷದ 6 ತಿಂಗಳು ಮಾನ್ಸೂನ್ ಮಾರುತಗಳಿಗೆ ಒಳಗಾಗುವುದರಿಂದ ಇಲ್ಲಿ ಸ್ವಾಭಾವಿಕ ಬಂದರುಗಳು ಕಡಿಮೆ ಪ್ರಮಾಣದಲ್ಲಿವೆ.
# ಪಶ್ಚಿಮ ಕರಾವಳಿಯನ್ನು ಮಲಬಾರ್ ತೀರ, ಕರ್ನಾಟಕ ಕರಾವಳಿ, ಕೊಂಕಣಿ ತೀರ, ಗುಜರಾತ್ ಕರಾವಳಿ, ಕಛ್ ಮತ್ತು ಕಾಟೇವಾಡ ಎಂಬ ಪರ್ಯಾಯ ದ್ವೀಪಗಳೆಂದು ವಿಭಾಗಿಸಲಾಗಿದೆ.
# ಅತಿ ಹೆಚ್ಚು ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗುಜರಾತ್".# ಅತಿ ಕಡಿಮೆ ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗೋವಾ".
# ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳು, ಮರ್ಮ ಗೋವಾ, ಕೊಚ್ಚಿ, ಕಾರವಾರ, ಮುಂಬಯಿ, ನವಶೇವ, ಮಂಗಳೂರು ಕಾಂಡ್ಲ .
✍ಕರಾವಳಿ ಪ್ರದೇಶದ ಉದ್ದ
👉🏾ರಾಜ್ಯಗಳು
👉🏾ಉದ್ದ
1. ಗುಜರಾತ್ ಕರಾವಳಿ ಉದ್ದ 1600 ಕಿ.ಮೀ
2. ಆಂಧ್ರಪ್ರದೇಶದ ಕರಾವಳಿ ಉದ್ದ 1000 ಕಿ.ಮೀ
3. ತಮಿಳುನಾಡು 910 ಕಿ.ಮೀ
4. ಮಹಾರಾಷ್ಟ್ರ 720 ಕಿ.ಮೀ
5. ಕೇರಳ 580 ಕಿ.ಮೀ
6. ಒರಿಸ್ಸಾ 480 ಕಿ.ಮೀ
7. ಪಶ್ಚಿಮ ಬಂಗಾಳ 350 ಕಿ.ಮೀ
8. ಕರ್ನಾಟಕ 320 ಕಿ.ಮೀ
9. ಗೋವಾ
👉🏾ಪೂರ್ವ ಕರಾವಳಿ ರಾಜ್ಯಗಳು :-
1.ಪಶ್ಚಿಮ ಬಂಗಾಳ
2.ಒರಿಸ್ಸಾ
3.ಆಂಧ್ರಪ್ರದೇಶ
4.ತಮಿಳುನಾಡು
👉🏾ಪಶ್ಚಿಮ ಕರಾವಳಿ ರಾಜ್ಯಗಳು :-
1.ಗುಜರಾತ್
2.ಮಹಾರಾಷ್ಟ್ರ
3.ಗೋವಾ
4.ಕರ್ನಾಟಕ
5.ಕೇರಳ
👉🏾ದ್ವೀಪಗಳು
# ಭಾರತಕ್ಕೆ ಸೇರಿದ 247ದ್ವೀಪಗಳಿವೆ.
# 247 ದ್ವೀಪಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ.
# ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ.
# ಲಕ್ಷದ್ವೀಪಗಳು ಹವಳಗಳಿಂದ ನಿರ್ಮಿತವಾಗಿವೆ.
_________________________________________
T.A.ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Sunday, 31 January 2021
ಭಾರತದ ಪ್ರಮುಖ ನದಿಗಳು
ಉತ್ತರ ಹಾಗೂ ದಕ್ಷಿಣ ಭಾರತದ ಪ್ರಮುಖ ನದಿಗಳು
ಉತ್ತರ ಭಾರತದ ಪ್ರಮುಖ ನದಿಗಳು
ಸಿಂಧು
ಬ್ರಹ್ಮಪುತ್ರ
ಗಂಗಾ
ಯಮುನಾ
ಇದರಲ್ಲಿ ಸಿಂಧು ನದಿ ಪಶ್ಚಿಮಕ್ಕೆ ಹರೆಯುವುದು, ಉಳಿದವು ಪೂರ್ವಕ್ಕೆ ಹರೆಯುವ ನದಿಗಳಾಗಿವೆ
*ಸಿಂಧು ನದಿ ಕೈಲಾಸ ಪರ್ವತದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವುದು*
ಸಿಂಧು ನದಿಯನ್ನು ನದಿಗಳ ತಂದೆ ಎಂದು ಕರೆಯುತ್ತಾರೆ
ಸಿಂಧು ನದಿಯ ಉಪನದಿಗಳು
*ಜೀಲಂ*
*ಚೀನಾಬ್*
*ಸಟ್ಲೇಜ್*
*ರಾವಿ*
*ಬಿಯಾಸ್* :~ ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! *ಪಂಜಾಬ್ ನ್ನು ಪಂಚನದಿಗ ರಾಜ್ಯ!* ಎಂದು ಕರೆಯುತ್ತಾರೆ
(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)
ಭಾರತದ ರಾಷ್ಟ್ರೀಯ ನದಿ ಎಂದು ಗಂಗಾ ನದಿಯನ್ನು ಕರೆಯುತ್ತಾರೆ.
*ಗಂಗಾನದಿಯ ಡಾಲ್ಫನನ್ನು ರಾಷ್ಟ್ರೀಯ ಜಲಜರ ಪ್ರಾಣಿ ಎಂದು ಘೋಷಿಸಿದೆ*
ಗಂಗಾನದಿಯ ಉಗಮ ಸ್ಥಳ :~ *ಗಂಗೋತ್ರಿ*
ಗಂಗಾನದಿಯ ದಡದಲ್ಲಿ ಇರತ್ಕಂತ ಪ್ರಮುಖ ನಗರಗಳು :~
ವಾರಣಸಿ
ಗಾಜಿಪುರ
ಕನ್ಪುರ್
ಪಾಟ್ನಾ
ಹರಿದ್ವಾರ
ಋಷಿಕೇಶ ಇತ್ಯಾದಿ
*ಯಮುನಾ ನದಿಯ ಉಗಮ ಸ್ಥಳ*
ಯನನೋತ್ರಿ
ಯಮುನಾ ನದಿ ದಡದಲ್ಲಿ ಕಂಡು ಬರುವ ಪ್ರಮುಖ ನಗರಗಳು
ದೆಹಲಿ
ಆಗ್ರಾ
ಮಥುರಾ ಇತ್ಯಾದಿ
ಬ್ರಹ್ಮ ಪುತ್ರ ನದಿ
ಬ್ರಹ್ಮ ಪುತ್ರ ನದಿಯ ಉಗಮಸ್ಥಾನ:~ *ಚಿಮಯುಂಗಡಂಗ್*
ತಿಸ್ತಾ ನದಿ ಬ್ರಹ್ಮಪುತ್ರ ನದಿಯ ಉಪನದಿಯಾಗಿದ್ದು ಇದನ್ನು *ಸಿಕ್ಕಂನ ಜೀವನದಿ ಎನ್ನುವರು*
ದಕ್ಷಿಣ ಭಾರತದ ಪ್ರಮುಖ ನದಿಗಳು
ನರ್ಮದಾ
ತಪತಿ
ಸಾಬರಮತಿ
ಕಾಳಿ
ಮಹಾದಾಯಿ
ಲೂನಿ
ಶರಾವತಿ
ನೇತ್ರಾವತಿ
ವಿ.ಸೂಚನೆ:~*ಈ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*
ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ
*ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ*
ಲುನಿ ನದಿಯ ಉಗಮಸ್ಥಾನ ;~ *ಅನಾಸಾಗರ*
ನರ್ಮದಾ ನದಿಯ ಉಗಮಸ್ಥಾನ :~ *ಅಮರಕಂಟಕ*
ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. *ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ*
*ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ*,
ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು *ಅಂಬುತಿರ್ಥ*
* ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ*
*ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು*
ದಾಮೋದರ ನದಿಯನ್ನು *"ಪಶ್ಚಿಮ ಬಂಗಾಳದ"* ಕಣ್ಣೀರು ನದಿ ಎಂದು ಕರೆಯುತ್ತಾರೆ.
*ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ*
ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.
ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.*
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.
ಕೃಷ್ಣಾ ನದಿಯ ಉಗಮಸ್ಥಾನ :` *ಮಹಬಲೇಶ್ವರ*
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು.
__________________________________________
ಸಂಗ್ರಹ ✍️T.A.ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ವಾಯುಗೋಳ
ವಾಯುಗೋಳ
ADD ARTICLE DESCRIPTION
ಭೂಮಿಯ ಮೇಲಿನ ಎಲ್ಲಾ ಜೀವಿಗಳೂ ಬದುಕಲು ಗಾಳಿ ಬೇಕೆಂಬುದು ನಮಗೆ ತಿಳಿದಿದೆ. ನಮಗೆ ಗಾಳಿಯು ಎಲ್ಲಿಂದ ದೊರೆಯುತ್ತದೆ? ಇದು ಭೂಮಿಯ ವಾತಾವರಣದಿಂದ ದೊರೆಯುತ್ತದೆ. ಭೂಮಿಯನ್ನು ಆವರಿಸಿಕೊಂಡಿರುವ ವಾಯುವಿನ ಪದರಕ್ಕೆ ವಾಯುಗೋಳ ಎನ್ನುವರು. ವಾಯುಗೋಳವು ಹೇಗೆ ಉಂಟಾಯಿತೆಂದು ನಿಮಗೆ ಗೊತ್ತಿದೆಯೆ? ಮೊದಲು ಭೂಮಿಯು ರೂಪುಗೊಂಡಾಗ ವಾಯುಗೋಳವಿರಲಿಲ್ಲ. ಭೂಮಿಯ ಒಳಗೆ ಬಂಧಿತವಾಗಿದ್ದ ಅನಿಲಗಳನ್ನು ಮತ್ತು ಹಬೆಯನ್ನು ಜ್ವಾಲಾಮುಖಿಗಳು ಸ್ಪೂಟಗೊಂಡು ಹೊರಚಿಮ್ಮಿಸಿದವು.ಈ ಅನಿಲಗಳು ಭೂಮಿಯ ಸುತ್ತ ಲಕ್ಷಾಂತರ ವರುಷಗಳಿಂದ ಸಂಗ್ರಹಗೊಂಡು, ವಾಯುಗೋಳ ರೂಪುಗೊಂಡಿತು.
ವಾಯುಗೋಳದ ಪದರಗಳು:
೧.ಹವಾಗೋಳ: ಭೂಮಿಯ ವಾಯುಗೋಳದ ಅತ್ಯಂತ ಕೆಳಗಿನ ಪದರವನ್ನು ಹವಾಗೋಳ ಎನ್ನುವರು. ನೀರಾವಿ, ನೈಟ್ರೂಜನ್, ಅಕ್ಸಿಜನ್, ಈ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಹವಾಗೋಳದ ಮೇಲ್ಭಾಗದ ಗಡಿಗೆ ಹವಾಸೀಮೆ ಎನ್ನುವರು.
೨.ಸ್ತರಗೋಳ:ಹವಾಸೀಮೆಯ ಮೇಲ್ಭಾಗದ ಪದರವನ್ನು ಸ್ತರಗೋಳ ಎನ್ನುವರು. ಸ್ತರಗೋಳದ ಮೇಲ್ಬಾಗದಲ್ಲಿ ಅಪಾಯಕಾರಿ ನೇರಳಾತೀತ ವಿಕಿರಣಗಳ ವಿರುದ್ಧ ರಕ್ಷಾಕವಚದಂತೆ ವರ್ತಿಸುವ ಓಝೂನ್ ಪದರವಿದೆ.
೩.ಮಧ್ಯಗೋಳ: ಸ್ತರಗೋಳದಿಂದ ಸುಮಾರು ೩೦ಕಿ.ಮೀ. ಎತ್ತರದಲ್ಲಿರುವ ಪ್ರದೇಶವನ್ನು ಮಧ್ಯಗೋಳ ಎನ್ನುವರು. ಇದು ವಾಯುಮಂಡಲದ ಅತ್ಯಂತ ತಂಪು ಪ್ರದೇಶವಾಗಿದೆ. ಇಲ್ಲಿರುವ ಗಾಳಿಯ ಪ್ರಮಾಣ ತುಂಬಾ ಕಡಿಮೆಯಿರುತ್ತದೆ.
೪.ಅಯಾನುಗೋಳ: ಮಧ್ಯಗೋಳದ ನಂತರ ಇರುವ ಪದರವನ್ನು ಅಯಾನುಗೋಳ ಎನ್ನುವರು. ಇದು ಅಯಾನು ಅಥವಾ ಆವೇಶಭರಿತ ಕಣಗಳಿಂದ ಆಗಿದೆ. ಆದ್ದರಿಂದ ರೇಡಿಯೂ ಪ್ರಸರಣಕ್ಕೆ ಈ ವಲಯ ಸಹಕರಿಸುತ್ತದೆ.
೫.ಬಹಿಗೋಳ:ಭೂಮಿಯ ವಾಯುಮಂಡಲದ ಅತ್ಯಂತ ಹೊರ ಪದರವನ್ನು ಬಹುಗೋಳ ಎನ್ನುವರು. ಇದು ಹಗುರವಾದ ಅನಿಲಗಳಾದ ಹೈಡ್ರೂಜನ್ ಮತ್ತು ಹೀಲಿಯಮ್ ನಿಂದ ಕೂಡಿದೆ.ಈ ಪ್ರದೇಶದಲ್ಲಿ ಕೆಲವು ಕೃತಕ ಉಪಗ್ರಹಗಳೂ ಸುತ್ತುತ್ತಿವೆ.
__________________________________________
ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
(The five layers of Atmosphere and its main features)
ಪರಿಸರ ವ್ಯವಸ್ಥೆ,
(Ecology, Environmental Studies)
ಭೂಗೋಳಶಾಸ್ತ್ರ
(Geography)
• ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ.
• ವಾಯುಗೋಳದ ಮುಖ್ಯ ಅನಿಲಗಳೆಂದರೆ
- ಸಾರಜನಕ ಶೇ.78.08,
- ಆಮ್ಲಜನಕ ಶೇ.20.94,
- ಆರ್ಗಾನ್ ಶೇ.0.93,
- ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005.
• ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ.
ವಾಯುಗೋಳದಲ್ಲಿರುವ ನೀರಾವಿಯು ಮೋಡದ ನಿರ್ಮಾಣ ಹಾಗೂ ವೃಷ್ಟಿಗೆ ಕಾರಣವಾಗುವುದಲ್ಲದೆ, ವಾಯುಗೋಳದ ಶಾಖ ಮತ್ತು ಶಕ್ತಿಯನ್ನು ಹಿಡಿದಿರಿಸಿಕೊಂಡು ಅದು ಒಂದು ಸ್ಥಳದ ಹವಾಮಾನದ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುವುದು.
•► ವಾಯುಗೋಳದ ರಚನೆ :
ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ ;
- ಪರಿವರ್ತನಾಮಂಡಲ,
- ಸಮೋಷ್ಣಮಂಡಲ,
- ಮಧ್ಯಂತರಮಂಡಲ,
- ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.
•► ಪರಿವರ್ತನಾಮಂಡಲ (Troposphere ) :
- ಇದು ವಾಯುಗೋಳದ ಅತ್ಯಂತ ಕೆಳಪದರ.
- ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. ಎತ್ತರದ ವರೆಗೆ ಕಂಡುಬರುವುದು.
- ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ.
- ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ.
- ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.
•► ಸಮೋಷ್ಣಮಂಡಲ (Stratosphere) :
- ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ.
- ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ.
- ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು.
- ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ.
- ಈ ಪದರವು ಮೋಡ ಹಾಗೂ ಇತರೆ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು.
- ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.
•► ಮಧ್ಯಂತರ ಮಂಡಲ (Mesosphere ) :
- ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ.
- ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು.
- ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.
•► ಉಷ್ಣತಾಮಂಡಲ (Thermosphere) :
- ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ.
- ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ.
- ಈ ಪದರದಲ್ಲಿನ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು.
- ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.
•► ಬಾಹ್ಯಮಂಡಲ (Exosphere) :
- ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ.
- ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.
__________________________________________
ಸಂಗ್ರಹ ✍️T.A. ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Saturday, 30 January 2021
ಜಲಪಾತಗಳು
ಜಲಪಾತ
ADD ARTICLE DESCRIPTION
ಜಲಪಾತಗಳು ಹರಿಯುತ್ತಿರುವ ನೀರು ಎತ್ತರದಿಂದ ದುಮುಕುವ ಒಂದು ಭೌಗೋಳಿಕ ಲಕ್ಷಣ. ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಏರು ತಗ್ಗುಗಳಲ್ಲಿ ಹರಿಯುವ ನದಿಗಳು ಸೃಷ್ಟಿಸುತ್ತವೆ.ಜಲಪಾತಗಳು ಸಾಮಾನ್ಯವಾಗಿ ನದಿಯ ಮೇಲಿನ ಪಥವುಗಳಿಂದ ರಚನೆಯಾಗುತ್ತವೆ.ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ, ಇವೆಲ್ಲವೂ ಜನರನ್ನು ಆಕರ್ಷಿಸುತ್ತವೆ. ಕರ್ನಾಟಕದ ಹಲವು ಜಲಪಾತಗಳು ೮ಅಬ್ಬೆ ಜಲಪಾತ
- ಇರುಪ್ಪು ಜಲಪಾತ
- ಸುತನಬ್ಬಿ / ಹನುಮನ ಗುಂಡಿ ಜಲಪಾತ
- ಹಿಡ್ಲುಮನೆ / ಹಿತ್ಲುಮನೆ ಜಲಪಾತ
- ಗಗನಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ)
- ಭರಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ
- ಹೆಬ್ಬೆ ಜಲಪಾತ
- ಅಬ್ಬೆ ಜಲಪಾತ
- ಮಾಗೋಡು ಜಲಪಾತ
- ಸಿರಿಮನೆ ಜಲಪಾತ
ಶಿವನ ಸಮುದ್ರ ಜಲಪಾತ
ಮಂಢ್ಯ
ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಇಲ್ಲಿ ೧೯೦೨ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಒಂದನ್ನು ಸ್ಥಾಪಿಸಲಾಯಿತು. ಇಡೀ ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು.ಇಷ್ಟೇ ಅಲ್ಲದೆ,ಈ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ ಮೊದಲ ಬಾರಿಗೆ ಕೋಲರಕ್ಕೆ ವಿದ್ಯುತ್ತನ್ನು ಕಳೆಸಲಾಗಿತ್ತು.

ಈ ಶಿಂಷಾ ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. ಮಧ್ಯರಂಗ ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. ಬೆಂಗಳೂರು-ಕೊಳ್ಳೇಗಾಲ ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.
ಶಿವನ ಸಮುದ್ರ ಜಲಪಾತವು ಕಾವೇರಿ ನದಿ ನೀರಾಗಿದೆ, ನದಿ ಬಂಡೆಗಳ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಪ್ರಪಾತಗಳು ಮೂಲಕ ತನ್ನ ಹಾದಿಯನ್ನು ಸುತ್ತಿಕೊಂಡು ಮತ್ತು ಜಲಪಾತಗಳು ರೂಪಿಸಲು ಹರಿದು ಹೋಗುತ್ತದೆ. ಶಿವನ ಸಮುದ್ರ ದ್ವೀಪ ಪಟ್ಟಣದ ಅವಳಿ ಜಲಪಾತಗಳು ನದಿ ವಿಂಗಡಿಸುತ್ತದೆ. ಇದು ಸಹಜವಾಗಿ ನದಿಗಳ ನಾಲ್ಕನೇ ದೊಡ್ಡ ದ್ವೀಪ ಸೃಷ್ಟಿಸುತ್ತದೆ. ಪ್ರಾಚೀನ ದೇವಾಲಯಗಳ ಗುಂಪು ಇಲ್ಲಿ ಇದೆ ಮತ್ತು ಬಹುಶಃ ಹಳ್ಳಿಗಳು ಇವೆ.
ಇದು ಒಂದು ವಿಭಜನೆಗೊಳಪಟ್ಟ ಜಲಪಾತ. ನೀರಿನ ಹರಿವು ಅಡ್ಡ ಜಲಪಾತಗಳ ಮೂಲಕ ಅನೇಕ ಅಡ್ಡ ಪರಿಣಾಮವಾಗಿ ಒಂದು ಬಂಡೆಯ ಮೇಲೆ ಬೀಳುವ ಮೊದಲು ಎರಡು ಅಥವಾ ಹಲವು ಚಾನಲ್ ಗಳಾಗಿ ವಿಂಗಡಿಸಲ್ಪಟ್ಟಿದೆ. ಅಲ್ಲಿ ವಿಭಜಿತ ಜಲಪಾತಗಳು ಸಂಭವಿಸುತ್ತವೆ. ಇದು 305 ಮೀಟರ್ಗಳಷ್ಟು ಅಗಲ, 98 ಮೀ ಎತ್ತರ, ಮತ್ತು 934 ಘನ ಮೀಟರ್ / ಸೆಕೆಂಡಿಗೆ ಸರಾಸರಿ ಗಾತ್ರವನ್ನು ಹೊಂದಿರುತ್ತದೆ. ಗರಿಷ್ಠ ರೆಕಾರ್ಡ್ ಪರಿಮಾಣ 18.887 ಘನ ಮೀಟರ್ / ಸೆಕೆಂಡು ಆಗಿದೆ. ಇದು ಒಂದು ದೀರ್ಘಕಾಲಿಕ ಜಲಪಾತ. ಮಳೆಗಾಲದಲ್ಲಿ ಜುಲೈಯಿಂದ ಅಕ್ಟೋಬರವರೆಗೆ ಅತ್ಯುತ್ತಮ ಹರಿವಿನ ಸಮಯ.
ಈ ಜಲಪಾತಗಳ ಬಗ್ಗೆ ಒಂದು ಸಾಮಾನ್ಯ ತಪ್ಪು ಕಲ್ಪನೆ ಇದೆ, ಎಡ ವಿಭಾಗ ಗಗನಚುಕ್ಕಿ ಕರೆಯಲಾಗುತ್ತದೆ ಮತ್ತು ಬಲ ವಿಭಾಗ ಭರಚುಕ್ಕಿ ಕರೆಯಲಾಗುತ್ತದೆ ಎಂದು ಆದರೆ ವಾಸ್ತವದಲ್ಲಿ ಭರಚುಕ್ಕಿ ಜಲಪಾತವು ಗಗನಚುಕ್ಕಿ ಜಲಪಾತದಿಂದ ನೈಋತ್ಯ ಕೆಲವು ಕಿಲೋಮೀಟರ್ ದೂರ ಇದೆ. ಇದು ಕಾವೇರಿ ನದಿಯು ಪಶ್ಚಿಮ ಮತ್ತು ಪೂರ್ವ ವಿಭಾಗಗಳಾಗಿ ದಕ್ಷಿಣಕ್ಕೆ ಕೆಲವು ಕಿಲೋಮೀಟರ್ ದೂರ ವಿಭಜಿಸುವ ಕಾರಣವಾಗಿದೆ. ಪಶ್ಚಿಮ ಶಾಖೆ ಗಗನಚುಕ್ಕಿ ಅವಳಿ ಜಲಪಾತಗಳು ಮತ್ತು ಪೂರ್ವ ಶಾಖೆ ಭರಚುಕ್ಕಿ ಜಲಪಾತಗಳನ್ನುಂಟುಮಾಡುತ್ತದೆ. ಗಗನ ಚುಕ್ಕಿ ಜಲಪಾತಗಳು ಶಿವನ ಸಮುದ್ರ ಗಡಿಯಾರ ಗೋಪುರರಿಂದ ಉತ್ತುಮವಾಗಿ ನೋಡಲಾಗುತ್ತದೆ. ಅವಳಿ ಜಲಪಾತಗಳು ತೋರಿಸುವ ಚಿತ್ರಗಳನ್ನು ಇಲ್ಲಿಂದ ತೆಗೆದುಕೊಳ್ಳಲಾಗುತ್ತದೆ.
ದೊಡ್ಡ ಕುದುರೆಬಾಲದ ಜಲಪಾತವು ಗಗನ ಚುಕ್ಕಿ ಎಡಭಾಗದಲ್ಲಿದೆ. ನದಿ ಕಬಿನಿಯು ನದಿ ಕಾವೇರಿಯೊಂದಿಗೆ ಒಟ್ಟಾಗಿ ಪ್ರವಾಹಿಸುವ ಸಂದರ್ಭದಲ್ಲಿ ಜುಲೈ - ಆಗಸ್ಟ್ - ಸಮಯದಲ್ಲಿ ದೊಡ್ಡ ಬಂಡೆಗಳ ಮೂಲಕ ನುಗ್ಗುತ್ತಿರುವ ನದಿಯ 90 ಮೀಟರ್ ಜಲಪಾತ ಪ್ರಯಾಣಿಕರನ್ನು ಆಹ್ವಾನಿಸುತ್ತದೆ.
ಭಾರಚುಕ್ಕಿ ಬಲಭಾಗದಲ್ಲಿರುವುದು ನಿಜವಾಗಿಯೂ ಮೊನಚಾದ ರೋರಿಂಗ್ ಕ್ಯಾಸ್ಕೇಡಿಂಗ್ ಜಲಪಾತ. ಭಾರಚುಕ್ಕಿಯು ಗಗನ್ ಚುಕ್ಕಿಯ ನೈಋತ್ಯ ಕಡೆಗೆ ಕಿ.ಮೀ ದೂರದಲ್ಲಿದೆ. ಭಾರಚುಕ್ಕಿ ಮಾರ್ಗದಲ್ಲಿ, ದಡದ ಉದ್ದಕ್ಕೂ ನೆಲೆಗೊಂಡಿರುವ ಪುರಾತನ ದರ್ಗಾ ಕಾಣಬಹುದು. ಇದು ಹಲವಾರು ಮುಸ್ಲಿಮರನ್ನು ದೈನಂದಿನ ಇಲ್ಲಿಗೆ ಭೇಟಿ ಮಾಡಲು ಮತ್ತು ಪೂಜಿಸಲು ಆಕರ್ಷಿಸುತ್ತದೆ. ಮಾರ್ಗದಲ್ಲಿ ತೊಂದರೆಗಳಾವು ಇಲ್ಲದೆ, ಅನೇಕ ಬಂಡೆಗಳು ಇಲ್ಲದೆ ಬೀಳುವ ನೀರಿನ ಸ್ಥಿರ ಅಲೆಗಳ ಕಾರಣ ಗಗನ್ ಚುಕ್ಕಿ ಹೋಲಿಸಿದರೆ, ಭಾರಚುಕ್ಕಿ ನೆಮ್ಮದಿಯ ಹಾಗೆ ಕಾಣಿಸುತ್ತದೆ.
ಗಗನ ಚುಕ್ಕಿಗೆ ಮತ್ತೊಂದು ಮಾರ್ಗ ದರ್ಗಾ ಹಜರತ್ ಮರ್ದನೆ ಗೈಬ್ . ಎಚ್ಚರಿಕೆಗಳ ಪೋಸ್ಟ್ ಇದ್ದರು ಸಹ, ಜಲಪಾತಗಳನ್ನು ವೀಕ್ಷಿಸಲು ಜನರು ಬಂಡೆಗಳಲ್ಲಿ ಕೆಳಗಿಳಿದು,ಅನೇಕ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಿದೆ. ಇದು ಬೆಂಗಳೂರು ನಗರದಿಂದ 139 ಕಿಮೀ ದೂರದಲ್ಲಿದೆ.
ಇಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ದ್ರಾವಿಡ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಶ್ರೀ ರಂಗನಾಥಸ್ವಾಮಿಯನ್ನು "ಮಧ್ಯ ರಂಗ" ಎಂದು ಕರೆಯಲಾಗುತ್ತದೆ. ಶ್ರೀ ವೈಷ್ಣವ ಭಕ್ತರು ಹೆಚ್ಚಾಗಿ ಪೂಜಿಸುತ್ತಾರೆ. ಎಲ್ಲಾ ಮೂರು ರಂಗಾ ನಡುವೆ, ಇಲ್ಲಿ ದೇವರ ವಿಗ್ರಹವನ್ನು ಪ್ರೀತಿಯಿಂದ ’ಮೋಹನ ರಂಗಾ’ ಮತ್ತು ’ಜಗಮೋಹನ್ ರಂಗಾ’ ಎಂದು ಕರೆಯಲಾಗುತ್ತದೆ, ದೇವರು ಯುವ ರೂಪ ಪ್ರತಿನಿಧಿಸುತ್ತದೆಂದು ನಂಬಲಾಗಿದೆ. ಮಧ್ಯ ರಂಗ ಪುರಾತನ ದೇವಸ್ಥಾನದ ವಸತಿ ಒಂದು ಸುಂದರ ಆರಾಧ್ಯ ವಿಗ್ರಹವಾಗಿದೆ, ಇದು ಸಾಮಾನ್ಯವಾಗಿ ಪ್ರಚಲಿತವಾಗಿಲ್ಲ, ಆದ್ದರಿಂದ ಕೆಲವು ಜನರು ಭೇಟಿ ನೀಡುತ್ತಾರೆ. ಇನ್ನೂ ಅರ್ಚಕ ಸಮಯಕ್ಕೆ ಸರಿಯಾಗಿ ಇರದ ಕಾರಣ ದೇವಾಲಯ ಆಗಾಗ್ಗೆ ಮುಚ್ಚಿ ಇರುತ್ತದೆ, ದುಃಖವೆಂದರೆ ಕರ್ನಾಟಕ ಸರಕಾರ ದೇವಾಲಯದ ಅಧಿಕಾರಿಗಳು ಈ ಸ್ಥಳ ನಿರ್ವಹಿಸಲು ಮತ್ತು ಪ್ರಚಾರ ಮಾಡಲು ಕಡಿಮೆ ಕೆಲಸ ಮಾಡಿದ್ದಾರೆ. ದ್ವೀಪದ ಮೂರು ಕಡೆಗಳಲ್ಲಿ ಮೂರು ದೇವಾಲಯಗಳಿವೆ.
ಪ್ರಾಚೀನ ಶ್ರೀ ಸೋಮೇಶ್ವರ ದೇವಸ್ಥಾನ ಶಿವನ ಸಮುದ್ರ ಹತ್ತಿರ ಇರುವ ಮತ್ತೊಂದು ಪ್ರಸಿದ್ಧ ದೇವಸ್ಥಾನ. ಆದಿ ಗುರು ಶ್ರೀ ಶಂಕರಾಚಾರ್ಯರ ಈ ಸ್ಥಳಕ್ಕೆ ಭೇಟಿ ನೀಡಿ ಮತ್ತು "ಶ್ರೀಚಕ್ರ" ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಸೋಮೇಶ್ವರ ಲಿಂಗವು ರಂಗನಾಥ ವಿಗ್ರಹದಗಿಂತ ಮುಂಚೆ ಇತ್ತು ಎಂದು ನಂಬಲಾಗಿದೆ. ಈ ಲಿಂಗವನ್ನು ಸಪ್ತರಿಷಿಗಳು ಪೂಜಿಸುತ್ತಿದ್ದರು ಹಾಗು ಆರಾಧಿಸುತ್ತಿದ್ದರು. ದುರ್ಗಾ ದೇವಿಯ ಶಕ್ತಿ ದೇವತೆ ದೇವಸ್ಥಾನ ಸೋಮೇಶ್ವರ ದೇವಸ್ಥಾನದಿಂದ 1 ಕಿ ಮೀ ದೊರ ಇದೆ.
ಏಷ್ಯಾದ ಮೊದಲ ಹೈಡ್ರೊ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಜಲಪಾತ ಇದು ಮತ್ತು ಇನ್ನೂ ಕ್ರಿಯಾತ್ಮಕ ವಾಗಿದೆ. ಈ ನಿಲ್ದಾಣ ಮೈಸೂರು ದಿವಾನ್ ಸರ್ ಕೆ ಶೇಷಾದ್ರಿ ಅಯ್ಯ ನಿಯೋಜಿಸಿದ್ದರು. ವಿದ್ಯುತ್ ಉತ್ಪಾದಿಸಲಾಗುತ್ತದೆ.
ಇದು ರಚಿತವಾದ ಆರಂಭದಲ್ಲಿ ವಿದ್ಯುತನ್ನು ಕೋಲಾರ ಗೋಲ್ಡ್ ಫೀಲ್ಡ್ಸ್ ಗೆ ಬಳಸಲಾಯಿತು.
ಮಡಿಕೇರಿ:
ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಮಡಿಕೇರಿಯನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ.
ಬರ್ಕಣ ಜಲಪಾತ :
ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ ಹಾಗು ಒಟ್ಟು ಎತ್ತರ ಸುಮಾರು ೮೫೦ ಅಡಿಗಳಾಗಿದೆ.ಈ ಜಲಪಾತವು ಭಾರತದಲ್ಲಿ ಹತ್ತು ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಕೇವಲ ಮಳೆಗಾಲದಲ್ಲಿ ಮಾತ್ರ ನೀರು ತುಂಬಿರುತ್ತದೆ.
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Thursday, 28 January 2021
ಸಾಮಾನ್ಯ ಜ್ಞಾನ
ಸಾಮಾನ್ಯ ಜ್ಞಾನ
__________________________________________
ಸೂಕ್ಷ್ಮಜೀವಿಗಳು - ಭಯಾನಕ ವೈರಸ್ಗಳು
1.AIDSನ್ನು ವಿಸ್ತರಿಸಿ.
ಅಕ್ವೈರ್ಡ್ ಇಮ್ಯುನೋ ಡಿಫಿಷಿಯನ್ಸಿ ಸಿಂಡ್ರೋಮ್
2. ಏಡ್ಸ್ ರೋಗಕ್ಕೆ ಕಾರಣವಾದ ವೈರಸ್ನ್ನು ಹೆಸರಿಸಿ.
ಹೆಚ್, ಐ. ವಿ ((HIV)
3. ಏಡ್ಸ್ ರೋಗವನ್ನು ಮೊಟ್ಟಮೊದಲು ಎಲ್ಲಿ ಗುರ್ತಿಸಲಾಯಿತು?
1981 ರಲ್ಲಿ ಅಮೇರಿಕಾದಲ್ಲಿ ಗುರ್ತಿಸಲಾಯಿತು.
4. ಭಾರತದಲ್ಲಿ ಮೊದಲು ಎಲ್ಲಿ ಗುರ್ತಿಸಲಾಯಿತು?
1987 ರಲ್ಲಿ ಚೆನ್ನೈ ನಲ್ಲಿ ಗುರ್ತಿಸಲಾಯಿತು.
5.ಹೆಚ್, ಐ. ವಿ (HIV) ಯಲ್ಲಿ ಕಂಡುಬರುವ ಅನುವಂಶೀಯ ವಸ್ತುವನ್ನು ಹೆಸರಿಸಿ.
ಆರ್.ಎನ್.ಎ (ಖಓಂ)
6. ಹೆಚ್, ಐ. ವಿ (HIV) ಯ ಅನುವಂಶೀಯ ವಸ್ತುವಿನಲ್ಲಿ ಕಂಡುಬರುವ ಕಿಣ್ವವನ್ನು ಹೆಸರಿಸಿ.
ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್.
7. ಏಡ್ಸ್ ರೋಗವನ್ನು ಮೊದಲು ಯಾವ ರೋಗಗಳ ಜೊತೆಯಲ್ಲಿ ಪತ್ತೆ ಹಚ್ಚಲಾಯಿತು?
ಈ ರೋಗವನ್ನು ಮೊದಲು ಚಿಂಪಾಂಜಿ, ಗೊರಿಲ್ಲಾ ಮತ್ತು ಸಲಿಂಗಿ ಮಾನವರಲ್ಲಿ ನ್ಯುಮೋನಿಯಾ ಮತ್ತು ಚರ್ಮದ ಕ್ಯಾನ್ಸರ್ ಜೊತೆ ಪತ್ತೆ ಹಚ್ಚಲಾಯಿತು.
8. ಹೆಚ್, ಐ. ವಿ (ಊ ಗಿ) ಹರಡುವ ವಿಧಾನಗಳನ್ನು ಹೆಸರಿಸಿ.
* ಸೋಂಕಿತ ವ್ಯಕ್ತಿಯೊಡನೆ ಅಸುರಕ್ಷಿತ ಲೈಂಗಿಕ ಸಂಪರ್ಕ, * ಸೋಂಕಿತ ವ್ಯಕ್ತಿಗಳು ಬಳಸಿದ ಸೂಜಿ ಮತ್ತು ಸಿರಂಜ್ಗಳನ್ನು ಶುಷ್ಕಿಕರಿಸದೆ ಬಳಸುವುದರಿಂದ
* ಸೋಂಕಿತ ವ್ಯಕ್ತಿಯಿಂದ ರಕ್ತವನ್ನು ಪರೀಕಿಸದೆ ಪಡೆಯುವುದರಿಂದ * ಸೋಂಕಿತ ತಾಯಿ ಯಿಂದ ಮಗುವಿಗೆ
9. ಯಾವ ಅಂಗವನ್ನು ದೇಹದ ರಾಸಾಯನಿಕ ಕಾಖರ್ಾನೆ ಎಂದು ಕರೆಯಲಾಗಿದೆ?
ಪಿತ್ತಕೋಶ.
10. ಹೆಪಟೈಟಿಸ್ ರೊಗಕ್ಕೆ ಕಾರಣವಾದ ಜೀವಿಯನ್ನು ಹೆಸರಿಸಿ.
ಹೆಚ್. ಬಿ. ವಿ. (HIV)
11. ಹೆಚ್, ಐ. ವಿ (HIV) ಪತ್ತೆಹಚ್ಚುವ ಪರೀಕ್ಷೆಗಲನ್ನು ಹೆಸರಿಸಿ.
* ಎಲಿಸಾ(ಎಂಜೈಮ್ ಲಿಂಕ್ಡ್ ಇಮ್ಯುನೋ ಸಾರ್ಬೆಂಟ್ ಅಸ್ಸೆ)
* ಪಿ.ಸಿ.ಆರ್ ಪರೀಕ್ಷೆ
* ವೆಸ್ಟರ್ನ್ ಬ್ಲಾಟ್ ಪರೀಕ್ಷೆ
12. ಹೆಚ್, ಐ. ವಿ (HIV)ದೇಹದ ಯಾವ ಕಣಗಳನ್ನು ನಾಶಪಡಿಸುತ್ತದೆ?
ಟಿ- ಲಿಂಪೋಸೈಟ್ಗಳನ್ನು ನಾಶಪಡಿಸುತ್ತದೆ.
ಆಹಾರೋತ್ಪಾದನೆ ಮತ್ತು ನಿರ್ವಹಣೆ
1. ಆಹಾರ ಕಲಬೆರಕಯ ಎರಡು ವಿಧಗಳನ್ನು ಹೆಸರಿಸಿ.
ಆಕಸ್ಮಿಕ ಕಲಬೆರಕೆ ಮತ್ತು ಉದ್ದೇಶ ಪೂರ್ವಕ ಕಲಬೆರಕೆ
2. ಆಕಸ್ಮಿಕ ಕಲಬೆರಕೆಗೆ ಉದಾ.ಕೊಡಿ.
* ಹಣ್ಣುಗಳ ಮೇಲೆ ರಾಸಾಯನಿಕಗಳ ಸಿಂಪಡಣೆ * ತರಕಾರಿಗಳಮೇಲಿನ ಕೀಟನಾಶಕಗಳು
3. ಆಹಾರವಸ್ತುಗಳಿಗೆ ಸೇರಿಸುವ ಕಲಬೆರಕೆ ವಸ್ತುಗಳು:
ಕಾಫಿ ಪುಡಿ- ಹುಣಸೆಬೀಜದ ಪುಡಿ, ಟೀ ಪುಡಿ-ಕಬ್ಬಿಣದ ಚೂರುಗಳು, ಒಣಗಿದ ಮೆಣಸಿನಕಾಯಿ ಪುಡಿ-ಬಣ್ಣ ಕಟ್ಟಿದ ಮರದ ಹೊಟ್ಟು ಸಕ್ಕರೆ ಪುಡಿ- ವಾಷಿಂಗ್ ಸೋಡಾ ತುಪ್ಪ ಮತ್ತು ಬೆಣ್ಣೆ - ವನಸ್ಪತಿ, ಜೇನು ತುಪ್ಪ - ಬೆಲ್ಲ ಅಥವಾ ಸಕ್ಕರೆ ಪಾಕ
ಅಡಿಗೆ - ದತ್ತೂರಿ ಎಣ್ಣೆ ಅರಿಶಿನದ ಪುಡಿ - ಮೆಟಾನಿಲ್ ಹಳದಿ, ಹಾಲು- ನೀರು, ಅಕ್ಕಿ ಮತ್ತು ಗೋಧಿ - ಮರಳು. ಕಲ್ಲಿನ ಚೂರುಗಳು, ಮಣ್ಣಿನ ಹೇಂಟೆ
4. ಕಲಬೆರಕೆಯುಕ್ತ ಆಹಾರಪದಾರ್ಥಗಳ ಸೇವನೆಯಿಂದ ಬರುವ ರೋಗಗಳು:
* ದತ್ತೂರಿ ಎಣ್ಣೆಯುಕ್ತ ಅಡಿಗೆ ಎಣ್ಣೆ- ಜಲೋದರ ಅಥವಾ ಮಹೋದರ, * ಮೆಟಾನಿಲ್ ಹಳದಿಯುಕ್ತ ಅರಿಶಿನ ಪುಡಿ- ಕ್ಯಾನ್ಸರ್
* ಸೋಡಿಯಂ ಕಾಬರ್ೋನೇಟ್ಉಕ್ತ ಸಕ್ಕರೆ ಪುಡಿ - ಕರುಳು ಬೇನೆ
5. ಆಹಾರ ಪದಾರ್ಥಗಳು ಯಾವ ಹಂತದಲ್ಲಿ ಕಲಬೆರಕೆಯಾಗುವ ಸಂಭವ ಹೆಚ್ಚು?
ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಹಂತದಲ್ಲಿ ಹೆಚ್ಚು ಕಲಬೆರಕೆ ಯಾಗುತ್ತದೆ.
6. ಆಹಾರ ಕಲಬೆರಕೆ ನಿವಾರಣಾ ಕಾನೂನು ಜಾರಿಗೆ ಬಂದ ವರ್ಷ ತಿಳಿಸಿ.
1954
7. ಆಹಾರ ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆಗಳನ್ನು ಹೆಸರಿಸಿ.
* ಆಗ್ಮಾರ್ಕ್ * ಐಎಸ್ಐ * ಸಿ.ಎಫ್.ಟಿ.ಆರ್.ಐ *ಎಫ್.ಪಿ.ಒ
8. ಸಂಸ್ಕರಿಸಿದ ಆಹಾರ ಪದಾರ್ಥಗಳು ಯಾವ ಸಂಸ್ಥೆಯ ಮೊಹರನ್ನು ಹೊಂದಿರಲೇಬೇಕು?
ಎಫ್.ಪಿ,ಒ.
9. ಆಹಾರ ವಸ್ತುಗಳನ್ನು ಕೊಂಡುಕೊಳ್ಳುವಾಗ ಪೊಟ್ಟಣದ ಮೇಲೆ ಗಮನಿಸಬೇಕಾದ ಅಂಶಗಳನ್ನು ಹೆಸರಿಸಿ.
* ತಯಾರಿಸಿದ ದಿನಾಂಕ * ಅವದಿ ಮುಗಿಯುವ ದಿನಾಂಕ * ತಯಾರಿಸಲು ಬಳಸಿದ ವಸ್ತುಗಳು ಮತ್ತು ಪ್ರಮಾಣ
* ಪೊಟ್ಟಣದ ತೂಕ * ಬೆಲೆ . . .
10. ಕೇಂದ್ರಿಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (C F T R I )ಎಲ್ಲಿದೆ?
ಕರ್ನಾಟಕದ ಮೈಸೂರು ಜಿಲ್ಲೆ.
11. ಹಾಲಿನ ಶುದ್ಧತೆ(ಸಾಂದ್ರತೆ)ಯನ್ನು ಅಳೆಯುವ ಸಾಧನವನ್ನು ಹೆಸರಿಸಿ.
ಲ್ಯಾಕ್ಟೋಮೀಟರ್ (ದುಗ್ಧಮಾಪಕ)
12. ಬೆಣ್ಣೆ ಅಥವಾ ತುಪ್ಪದಲ್ಲಿ ಬೆರೆತಿರುವ ಕಲಬೆರಕೆ ವಸ್ತುವನ್ನು ಪತ್ತೆ ಹಚ್ಚಲು ಬಳಸುವ ಆಮ್ಲ ಯಾವುದು?
ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ (HCl)
13. ಅಡಿಗೆ ಎಣ್ಣೆಯಲ್ಲಿ ಮಿಶ್ರಣವಾಗಿರುವ ದತ್ತೂರಿ ಎಣ್ಣೆಯನ್ನು ಪತೆಹಚ್ಚಲು ಬಳಸುವ ಆಮ್ಲವನ್ನು ಹೆಸರಿಸಿ.
ಪ್ರಬಲ ನೈಟ್ರಿಕ್ ಆಮ್ಲ (HNO3)
ಪರಿಸರ ವಿಜ್ಞಾನ
1. ಸಸ್ಯಗಳು ಪ್ರಾಣಿಗಳನ್ನು ಪೋಷಕಾಂಶಗಳಿಗೆ ನೇರವಾಗಿ ಅವಲಂಬಿಸಿರುವ ಉದಾಹರಣೆ ಕೊಡಿ.
ಕೀಟಹಾರಿ ಸಸ್ಯಗಳು ( ಡ್ರಾಸೆರಾ, ನೆಪೆಂಥಿಸ್. . .) ಕೀಟಗಳನ್ನು ಹಿಡಿದು ಭಕ್ಷಿಸಿ ಸಾರಜನಕವನ್ನು ಪಡೆಯುತ್ತವೆ.
2. ಜೀವ ಭೂ ರಾಸಾಯಿಕ ಚಕ್ರಗಳು ಎಂದರೇನು? ಅವುಗಳನ್ನು ಹೆಸರಿಸಿ. ಉದಾ.ಕೊಡಿ.
ಪರಿಸರ ವ್ಯವಸ್ಥೆಯಲ್ಲಿ ಮೂಲವಸ್ತುಗಳ ಚಕ್ರೀಯ ಚಲನೆಗೆ ಜೀವ ಭೂ ರಾಸಾಯನಿಕ ಚಕ್ರಗಳು ಎಂದು ಹೆಸರು.ಇವುಗಳಲ್ಲಿ ಎರಡು ವಿಧ: ಎ. ಅನಿಲದ ಚಕ್ರಗಳು, ಉದಾ: ಕಾರ್ಬನ್ ಚಕ್ರ, ನೈಟ್ರೋಜನ್ ಚಕ್ರ, ಆಕ್ಸಿಜನ್ ಚಕ್ರ. ಬಿ. ಚರಟದ ಚಕ್ರಗಳು, ಉದಾ: ಗಂಧಕದ ಚಕ್ರ, ರಂಜಕದ ಚಕ್ರ.
3. ಸಂಗ್ರಹ ಮೂಲ ಎಂದರೇನು? ಉದಾ.ಕೊಡಿ.
ಜೀವಿಗಳಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆಯುವ ಪ್ರದೇಶಗಳನ್ನು ಸಂಗ್ರಹಮೂಲ ಎನ್ನುವರು. ಉದಾ: ಶಿಲಾವರಣ, ಜಲಾವರಣ ಮತ್ತು ವಾತಾವರಣ
4. ವಿನಿಮಯಮೂಲ ಎಂದರೇನು? ಉದಾ.ಕೊಡಿ.
ಪೋಷಕಾಂಶಗಳು ಬಳಸಲ್ಪಡುವ ಪ್ರದೇಶವನ್ನು ವಿನಿಮಯ ಮೂಲ ಎನ್ನುವರು. ಉದಾ. ಜೀವಿಗೋಳ
5. ಸ್ಥಿರೀಕರಣ ಎಂದರೇನು?
ರಾಸಾಯನಿಕವಸ್ತುಗಳು ಸಂಗ್ರಹಮೂಲದಿಂದ ವಿನಿಮಯ ಮೂಲಕ್ಕೆ ಚಲಿಸುವುದನ್ನು ಸ್ಥಿರೀಕರಣ ಎನ್ನುವರು.
6. ಮರುಚಕ್ರೀಕರಣ ಎಂದರೇನು?
ರಾಸಾಯನಿಕವಸ್ತುಗಳು ವಿನಿಮಯ ಮೂಲದಿಂದ ಸಂಗ್ರಹಮೂಲಕ್ಕೆ ಹರಿಯುವುದನ್ನು ಮರುಚಕ್ರೀಕರಣ ಎನ್ನುವರು.
7. ನೈಟ್ರೋಜನ್ ಸ್ಥಿರೀಕರಣ ಎಂದರೇನು?
ವಾತಾವರಣದಲ್ಲಿರುವ ಮುಕ್ತವಾದ ನೈಟ್ರೋಜನ್ ಅನಿಲವನ್ನು ಉಪಯುಕ್ತವಾದ ನೈಟ್ರೋಜನ್ ಸಂಯುಕ್ತಗಳ ರೂಪಕ್ಕೆ ಪರಿವರ್ತಿಸುವ ಕ್ರಿಯೆ, ಇದು ರಡು ವಿಧಗಳಲ್ಲಿ ನಡೆಯುತ್ತದೆ. ನೈಸಗರ್ಿಕ ಸ್ಥಿರೀಕರಣ ಮತ್ತು ಕೃತಕ ಸ್ಥಿರೀಕರಣ.
8. ನೈಸರ್ಗಿಕ ಅಥವಾ ಜೈವಿಕ ಸ್ಥಿರೀಕರಣ ಎಂದರೇನು?
ವಾತಾವರಣದಲ್ಲಿರುವ ನೈಟ್ರೋಜನ್ ಅನಿಲವು ಸೂಕ್ಷ್ಮಾಣುಜೀವಿಗಳಾದ ರೈಜೋಬಿಯಂ, ನಾಸ್ಟಾಕ್, ಅನಾಬಿನಾ ಮುಂತಾದ ಜೀವಿಗಳಿಂದ ನಡೆದರೆ ಅದು ನೈಸರ್ಗಿಕ ಅಥವಾ ಜೈವಿಕ ಸ್ಥಿರೀಕರಣ.
9. ಕೃತಕ ಸ್ಥಿರೀಕರಣ ಅಥವಾ ವಿದ್ಯುತ್ರಾಸಾಯನಿಕ ಸ್ಥಿರೀಕರಣ ಎಂದರೇನು?
ವಾತಾವರಣದಲ್ಲಿರುವ ನೈಟ್ರೋಜನ್ ಅನಿಲವು ಆಕಾಶದಲ್ಲಿ ಗುಡುಗು ಉಂಟಾದಾಗ ನಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಹೆಚ್ಚು ತಾಪಮಾನದಿಂದಾಗಿ ನೈಟ್ರೋಜನ್ ಆಕ್ಸಿಜನ್ ಜೊತೆ ಸೇರಿ ನೈಟ್ರೋಜನ್ ಆಕ್ಸೈಡ್ ಆಗಿ ನೀರಿನೊಂದಿಗೆ ಬೆರೆತು ಸಾರಜನಕ ಸಂಯುಕ್ತಗಳಾಗುತ್ತವೆ.
10. ನೈಟ್ರೋಜನ್ ಮರುಚಕ್ರೀಕರಣದಲ್ಲಿ ಪಾಲ್ಗೊಳ್ಳುವ ಬ್ಯಾಕ್ಟೀರಿಯಾಗಳನ್ನು ಹೆಸರಿಸಿ.
ರೈಜೋಬಿಯಂ ಗುಂಪಿಗೆ ಸೇರಿದ ಬ್ಯಾಕ್ಟೀರಯಾಗಳಾದ ಸೂಡೋಮೊನಾಸ್, ನೈಟ್ರಸೋಮೊನಾಸ್, ನೈಟ್ರೋಬ್ಯಾಕ್ಟರ್, ಅಜಟೋಬ್ಯಾಕ್ಟರ್. . ಇತ್ಯಾದಿ
11. ಬ್ಯಾಕ್ಟೀರಿಯಾ ಹೊರತುಪಡಿಸಿ ಇತರ ಯಾವ ಜೀವಿಗಳು ಸಾರಜನಕ ಸ್ಥಿರೀಕರಣದಲ್ಲಿ ಪಾಲ್ಗೊಳ್ಳುತ್ತವೆ ?
ನಾಸ್ಟಾಕ್, ಅನಾಬಿನಾ, ಅಜೋಲ್ಲಾ, ಅಜೋಸ್ಪೈರಿಲ್ಲಂ. . .
12. ನೈಟ್ರೋಜನ್ ಚಕ್ರದಲ್ಲಿ ಪಾಲ್ಗೊಳ್ಳುವ ಬ್ಯಾಕ್ಟೀರಿಯಾಗಳು ಮತ್ತು ಕಾರ್ಯ;
ನೈಟ್ರಸೋಮೊನಾಸ್: ಅಮೋನಿಯ ಲವಣಗಳನ್ನು ನೈಟ್ರೇಟ್ಗಳಾಗಿ ಪರಿವರ್ತಿಸುತ್ತವೆ(ನೈಟ್ರೀಕರಣ) ನೈಟ್ರೋಬ್ಯಾಕ್ಟರ್: ನೈಟ್ರೈಟ್ಗಳನ್ನು ನೈಟ್ರೇಟ್ಗಳಾಗಿ ಪರಿವರ್ತಿಸುತ್ತವೆ. (ನೈಟ್ರೀಕರಣ) ಸೂಡೋಮೊನಾಸ್: ಮಣ್ಣಿನಲ್ಲಿರುವ ನೈಟ್ರೇಟ್ಗಳನ್ನು ಮುಕ್ತ ನೈಟ್ರೋಜನ್ ಅನಿಲದ ರೂಪಕ್ಕೆ ಪರಿವರ್ತಿಸುತ್ತದೆ. (ಡಿನೈಟ್ರೀಕರಣ)
13. ಜೀವಿಗಳ ದೇಹದಲ್ಲಿನ ಶಕ್ತಿಯ ಅಣುಗಳಲ್ಲಿ ರಂಜಕದ ರೂಪಗಳನ್ನು ಹೆಸರಿಸಿ.
ಅಡಿನೋಸಿನ್ ಟ್ರೈ ಪಾಸ್ಪೇಟ್ (ATP) ಮತ್ತು ನಿಕೋಟಿನಮೈಡ್ ಅಡಿನಿನ್ ಡೈ ನ್ಯೂಕ್ಲಿಯೋಟೈಡ್ ಪಾಸ್ಪೇಟ್ (ಓಂಆಕಊ)
14. ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳನ್ನು ಹೆಸರಿಸಿ.
ಡಿ.ಡಿ.ಟಿ., ಗಾಜು, ಎಂಡೋಸಲ್ಪಾನ್, ಪ್ಲಾಸ್ಟಿಕ್, ಪಾಲಿತಿನ್ದಾರಗಳು, ರಬ್ಬರ್, ಸೀಸಯುಕ್ತ ರಾಸಾಯನಿಕಗಳು . . .
15. ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕಗಳನ್ನು ಹೆಸರಿಸಿ.
ಒಳಚರಂಡಿ ನೀರು, ಸಲ್ಫರ್ಡೈಆಕ್ಸೈಡ್, ಸಸ್ಯಗಳ ಕೊಳೆತ ಭಾಗಗಳು, ಕಾಗದ, ಹತ್ತಿ ಬಟ್ಟೆಗಳು, ಇತ್ಯಾದಿ. .. .
16. ದ್ಯತಿರಾಸಾಯನಿಕ ಸ್ಮಾಗ್ ಎಂದರೇನು?
ಕೆಲವು ರಾಸಾಯನಿಕಗಳು ವಾತಾವರಣದಲ್ಲಿನ ನೈಟ್ರೋಜನ್ ಆಕ್ಸೈಡ್ಗಳ ಜೊತೆ ಸೇರಿ ದ್ಯುತಿರಾಸಾಯನಿಕಕ್ರಿಯೆಗಳಿಗೆ ಒಳಗಾಗಿ ಉಂಟುಮಾಡುವ ರಾಸಾಯನಿಕ ವಸ್ತುಗಳನ್ನು ದ್ಯುತಿರಾಸಾಯನಿಕ ಸ್ಮಾಗ್ ಎನ್ನುವರು.
17. ಸ್ಮಾಗ್ನಲ್ಲಿ ಕಂಡುಬರುವ ಅನಿಲಗಳನ್ನು ಹೆಸರಿಸಿ.
ನೈಟ್ರೋಜನ್ ಡೈಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್, ಇವು ಆಮ್ಲ ಮಳೆಗೆ ಕಾರಣವಾದ ಅನಿಲಗಳು.
18. ಓಝೋನ್ ಪದರವನ್ನು ನಾಶ ಮಾಡುವಂತಹ ವಾಯುಮಾಲಿನ್ಯಕಾರಕ ಯಾವುದು?
ಕ್ಲೋರೋಫ್ಲುರೋಕಾರ್ಬನ್ (ಅ ಈ ಅ)
19. ಮಿನಮಾಟ ರೋಗ ಹರಡುವ ಮಾಲಿನ್ಯಕಾರಕವನ್ನು ಹೆಸರಿಸಿ.
ಸೀಸಯುಕ್ತನೀರು ಮತ್ತು ಆಹಾರ
20. ಕೃಷಿ ಮೂಲಗಳಿಂದ ಬರುವ ತ್ಯಾಜ್ಯಗಳನ್ನು ಹೆಸರಿಸಿ.
ರಾಸಾಯನಿಕ ಗೊಬ್ಬರಗಳ ಉಳಿಕೆಗಳು, ಕೀಟನಾಶಕಗಳು, ಕಳೆನಾಶಕಗಳು . . .
21. ಮಣ್ಣುಮಾಲಿನ್ಯದ ನಿಯಂತ್ರಣ ಕ್ರಮಗಳನ್ನು ತಿಳಿಸಿ.
* ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದು * ರಾಸಾಯನಿಕ ಗೊಬ್ಬರಗಲ ಮಿತವಾದ ಬಳಕೆ
* ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು. * ಬೆಳೆ ಬದಲಾವಣೆ * ಆಸ್ಪತ್ರೆ ತ್ಯಾಜ್ಯಗಳನ್ನು ಸುಡುವುದು ಆಥವಾ ಊಳುವುದು
* ಇಳಿಜಾರು ಪ್ರದೇಶಗಳನ್ನು ಬದುಗಳನ್ನು ನಿಮರ್ಾಣ ಮಾಡುವುದು * ಹೆಚ್ಚು ಮರಗಿಡಗಳನ್ನು ಬೆಳೆಸುವುದು.
22. ಶಬ್ಧಮಾಲಿನ್ಯದ ಪರಿಣಾಮಗಳನ್ನು ಹೆಸರಿಸಿ.
* ಕಿವುಡುತನ * ರಕ್ತದೊತ್ತಡ ಏರಿಕೆ * ಮಿದುಳಿನ ಅಪಸಾಮಾನ್ಯತೆ * ಮುಂಗೋಪ * ಹೃದಯ ಸಂಬಂದಿ ಕಾಯಿಲೆ
23. ಶಬ್ಧಮಾಲಿನ್ಯದ ನಿಯಂತ್ರಣ ಕ್ರಮಗಳೇನು?
* ಹಳೆಯ ಯಂತ್ರೋಪಕರಣಗಳನ್ನು ಬದಲಾಯಿಸುವುದು * ಕೈಗಾರಿಕೆಗಳಲ್ಲಿ ಶಬ್ಧನಿಯಂತ್ರಣಗಳ ಅಳವಡಿಕೆ
ರಸ್ತೆ ಬದಿಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳನ್ನು ಬೆಳೆಸುವುದು * ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವುದು

ಸಂಗ್ರಹ ✍️ T.A. ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Wednesday, 27 January 2021
Chandru

Subscribe to:
Posts (Atom)
ಪ್ರಮುಖ ಅಂಶಗಳು
SSLC CORNER
Class-10 Study-Materials Final Exam Papers Notes & Solutions Model & Blue-Print Pre Board Papers Half Yearly ...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ