ಶಿಕ್ಷಣವೇ ಶಕ್ತಿ
Wednesday, 3 February 2021
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Tuesday, 2 February 2021
STS ತಂತ್ರಾಂಶ
ಎಸ್ ಎ ಟಿ ಎಸ್

Monday, 1 February 2021
ಕರಾವಳಿ ಪ್ರದೇಶಗಳು
ಕರಾವಳಿ ಪ್ರದೇಶಗಳು
✍ಕರಾವಳಿ ಪ್ರದೇಶಗಳು
# ಕರಾವಳಿ ಪ್ರದೇಶ ಪಶ್ಚಿಮದಲ್ಲಿ ಗುಜರಾತ್ ನ "ಕಛ್"ನಿಂದ ಪೂರ್ವದಲ್ಲಿ ಗಂಗಾನದಿಯ ಮುಖಜ ಭೂಮಿಯವರೆಗೆ ಹಬ್ಬಿದೆ.
# ಭಾರತದ ಕರಾವಳಿಯ ಉದ್ದ6,100 ಕಿ.ಮೀ (ದ್ವೀಪಗಳನ್ನು ಹೊರತುಪಡಿಸಿ).
# ಭಾರತದ ಕರಾವಳಿಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ.
ಪೂರ್ವ ಕರಾವಳಿ
ಪಶ್ಚಿಮ ಕರಾವಳಿ
👉🏾ಪೂರ್ವ ಕರಾವಳಿ
# ಉತ್ತರದ ಗಂಗಾನದಿ ಮುಖಜ ಭೂಮಿಯಿಂದ ದಕ್ಷಿಣದ ಕನ್ಯಾಕುಮಾರಿ ಯವರೆಗೂ, ಬಂಗಾಳ ಕೊಲ್ಲಿ ಮತ್ತು ಪೂರ್ವ ಘಟ್ಟಗಳ ನಡುವೆ ಹರಡಿದೆ.
# ಪೂರ್ವ ಕರಾವಳಿ ಪ್ರದೇಶವು ಹೆಚ್ಚು ಅಗಲವಾಗಿ ಮತ್ತು ಒಂದೇ ರೀತಿ ಸಮತಟ್ಟಾಗಿದೆ.
# ಪೂರ್ವ ಕರಾವಳಿ ತೀರದಲ್ಲಿ ಸಮುದ್ರದ ಉಪ್ಪು ನೀರಿನಿಂದ ನಿರ್ಮಿತವಾದ ಕೆಲವು ಲಗೂನ್ (ಸರೋವರ)ಗಳಿವೆ. ಅಂತಹ ಲಗೂನ್ ಗಳಿಗೆ ಉದಾ: ತಮಿಳುನಾಡಿನ 'ಪುಲಿಕಾಟ್' ಮತ್ತು ಒರಿಸ್ಸಾದ 'ಚಿಲ್ಕಾ' ಸರೋವರಗಳು.
# ಚಿಲ್ಕಾ ಸರೋವರ ಭಾರತದ ಅತಿ ದೊಡ್ಡ ಸರೋವರವಾಗಿದೆ.
# ಆಂಧ್ರಪ್ರದೇಶದ ಬಳಿ ಇರುವ ಶ್ರೀ ಹರಿಕೋಟಾ ದ್ವೀಪದಲ್ಲಿ ಇಸ್ರೋ (ISRO)ದ ಕೃತಕ ಉಪಗ್ರಹ ಉಡಾವಣಾ ಕೇಂದ್ರವಿದೆ.
# ಪೂರ್ವ ಕರಾವಳಿಯ ಉತ್ತರ ಭಾಗವನ್ನು "ಉತ್ಕಲ ತೀರ" ಮತ್ತು ದಕ್ಷಿಣ ಭಾಗವನ್ನು "ಕೋರಮಂಡಲ ತೀರ" ವೆಂದು ಕರೆಯುತ್ತಾರೆ.
# ಪೂರ್ವ ಕರಾವಳಿಯಲ್ಲಿ ಕಾಣ ಬಹುದುದಾದ ಪ್ರಮುಖ ಬಂದರುಗಳು ಹೀಗಿವೆ : ಪಾರಾದೀಪ್, ಹಲ್ದಿಯಾ, ಕೋಲ್ಕತ್ತಾ, ವಿಶಾಖಪಟ್ಟಣ, ಚೆನ್ನೈ ಮತ್ತು ಟುಟಿಕಾರ್ನ್.
👉🏾ಪಶ್ಚಿಮ ಕರಾವಳಿ
# ಗುಜರಾತಿನ "ಕಛ್" ಪ್ರದೇಶದಿಂದ ಕನ್ಯಾಕುಮಾರಿ ಯವರೆಗೂ, ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ಮಧ್ಯೆ ಹರಡಿದೆ.
# ಪಶ್ಚಿಮ ಕರಾವಳಿಯ ಉದ್ದ ಸುಮಾರು 1,500 ಕಿಲೋ ಮೀಟರ್ ನಷ್ಟಿದೆ.
# ಈ ಕರಾವಳಿ ಪ್ರದೇಶ ನೇರವಾಗಿ ರುವುದರಿಂದಲೂ, ವರ್ಷದ 6 ತಿಂಗಳು ಮಾನ್ಸೂನ್ ಮಾರುತಗಳಿಗೆ ಒಳಗಾಗುವುದರಿಂದ ಇಲ್ಲಿ ಸ್ವಾಭಾವಿಕ ಬಂದರುಗಳು ಕಡಿಮೆ ಪ್ರಮಾಣದಲ್ಲಿವೆ.
# ಪಶ್ಚಿಮ ಕರಾವಳಿಯನ್ನು ಮಲಬಾರ್ ತೀರ, ಕರ್ನಾಟಕ ಕರಾವಳಿ, ಕೊಂಕಣಿ ತೀರ, ಗುಜರಾತ್ ಕರಾವಳಿ, ಕಛ್ ಮತ್ತು ಕಾಟೇವಾಡ ಎಂಬ ಪರ್ಯಾಯ ದ್ವೀಪಗಳೆಂದು ವಿಭಾಗಿಸಲಾಗಿದೆ.
# ಅತಿ ಹೆಚ್ಚು ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗುಜರಾತ್".# ಅತಿ ಕಡಿಮೆ ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗೋವಾ".
# ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳು, ಮರ್ಮ ಗೋವಾ, ಕೊಚ್ಚಿ, ಕಾರವಾರ, ಮುಂಬಯಿ, ನವಶೇವ, ಮಂಗಳೂರು ಕಾಂಡ್ಲ .
✍ಕರಾವಳಿ ಪ್ರದೇಶದ ಉದ್ದ
👉🏾ರಾಜ್ಯಗಳು
👉🏾ಉದ್ದ
1. ಗುಜರಾತ್ ಕರಾವಳಿ ಉದ್ದ 1600 ಕಿ.ಮೀ
2. ಆಂಧ್ರಪ್ರದೇಶದ ಕರಾವಳಿ ಉದ್ದ 1000 ಕಿ.ಮೀ
3. ತಮಿಳುನಾಡು 910 ಕಿ.ಮೀ
4. ಮಹಾರಾಷ್ಟ್ರ 720 ಕಿ.ಮೀ
5. ಕೇರಳ 580 ಕಿ.ಮೀ
6. ಒರಿಸ್ಸಾ 480 ಕಿ.ಮೀ
7. ಪಶ್ಚಿಮ ಬಂಗಾಳ 350 ಕಿ.ಮೀ
8. ಕರ್ನಾಟಕ 320 ಕಿ.ಮೀ
9. ಗೋವಾ
👉🏾ಪೂರ್ವ ಕರಾವಳಿ ರಾಜ್ಯಗಳು :-
1.ಪಶ್ಚಿಮ ಬಂಗಾಳ
2.ಒರಿಸ್ಸಾ
3.ಆಂಧ್ರಪ್ರದೇಶ
4.ತಮಿಳುನಾಡು
👉🏾ಪಶ್ಚಿಮ ಕರಾವಳಿ ರಾಜ್ಯಗಳು :-
1.ಗುಜರಾತ್
2.ಮಹಾರಾಷ್ಟ್ರ
3.ಗೋವಾ
4.ಕರ್ನಾಟಕ
5.ಕೇರಳ
👉🏾ದ್ವೀಪಗಳು
# ಭಾರತಕ್ಕೆ ಸೇರಿದ 247ದ್ವೀಪಗಳಿವೆ.
# 247 ದ್ವೀಪಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ.
# ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ.
# ಲಕ್ಷದ್ವೀಪಗಳು ಹವಳಗಳಿಂದ ನಿರ್ಮಿತವಾಗಿವೆ.
_________________________________________
T.A.ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Sunday, 31 January 2021
ಭಾರತದ ಪ್ರಮುಖ ನದಿಗಳು
ಉತ್ತರ ಹಾಗೂ ದಕ್ಷಿಣ ಭಾರತದ ಪ್ರಮುಖ ನದಿಗಳು
ಉತ್ತರ ಭಾರತದ ಪ್ರಮುಖ ನದಿಗಳು
ಸಿಂಧು
ಬ್ರಹ್ಮಪುತ್ರ
ಗಂಗಾ
ಯಮುನಾ
ಇದರಲ್ಲಿ ಸಿಂಧು ನದಿ ಪಶ್ಚಿಮಕ್ಕೆ ಹರೆಯುವುದು, ಉಳಿದವು ಪೂರ್ವಕ್ಕೆ ಹರೆಯುವ ನದಿಗಳಾಗಿವೆ
*ಸಿಂಧು ನದಿ ಕೈಲಾಸ ಪರ್ವತದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವುದು*
ಸಿಂಧು ನದಿಯನ್ನು ನದಿಗಳ ತಂದೆ ಎಂದು ಕರೆಯುತ್ತಾರೆ
ಸಿಂಧು ನದಿಯ ಉಪನದಿಗಳು
*ಜೀಲಂ*
*ಚೀನಾಬ್*
*ಸಟ್ಲೇಜ್*
*ರಾವಿ*
*ಬಿಯಾಸ್* :~ ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! *ಪಂಜಾಬ್ ನ್ನು ಪಂಚನದಿಗ ರಾಜ್ಯ!* ಎಂದು ಕರೆಯುತ್ತಾರೆ
(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)
ಭಾರತದ ರಾಷ್ಟ್ರೀಯ ನದಿ ಎಂದು ಗಂಗಾ ನದಿಯನ್ನು ಕರೆಯುತ್ತಾರೆ.
*ಗಂಗಾನದಿಯ ಡಾಲ್ಫನನ್ನು ರಾಷ್ಟ್ರೀಯ ಜಲಜರ ಪ್ರಾಣಿ ಎಂದು ಘೋಷಿಸಿದೆ*
ಗಂಗಾನದಿಯ ಉಗಮ ಸ್ಥಳ :~ *ಗಂಗೋತ್ರಿ*
ಗಂಗಾನದಿಯ ದಡದಲ್ಲಿ ಇರತ್ಕಂತ ಪ್ರಮುಖ ನಗರಗಳು :~
ವಾರಣಸಿ
ಗಾಜಿಪುರ
ಕನ್ಪುರ್
ಪಾಟ್ನಾ
ಹರಿದ್ವಾರ
ಋಷಿಕೇಶ ಇತ್ಯಾದಿ
*ಯಮುನಾ ನದಿಯ ಉಗಮ ಸ್ಥಳ*
ಯನನೋತ್ರಿ
ಯಮುನಾ ನದಿ ದಡದಲ್ಲಿ ಕಂಡು ಬರುವ ಪ್ರಮುಖ ನಗರಗಳು
ದೆಹಲಿ
ಆಗ್ರಾ
ಮಥುರಾ ಇತ್ಯಾದಿ
ಬ್ರಹ್ಮ ಪುತ್ರ ನದಿ
ಬ್ರಹ್ಮ ಪುತ್ರ ನದಿಯ ಉಗಮಸ್ಥಾನ:~ *ಚಿಮಯುಂಗಡಂಗ್*
ತಿಸ್ತಾ ನದಿ ಬ್ರಹ್ಮಪುತ್ರ ನದಿಯ ಉಪನದಿಯಾಗಿದ್ದು ಇದನ್ನು *ಸಿಕ್ಕಂನ ಜೀವನದಿ ಎನ್ನುವರು*
ದಕ್ಷಿಣ ಭಾರತದ ಪ್ರಮುಖ ನದಿಗಳು
ನರ್ಮದಾ
ತಪತಿ
ಸಾಬರಮತಿ
ಕಾಳಿ
ಮಹಾದಾಯಿ
ಲೂನಿ
ಶರಾವತಿ
ನೇತ್ರಾವತಿ
ವಿ.ಸೂಚನೆ:~*ಈ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*
ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ
*ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ*
ಲುನಿ ನದಿಯ ಉಗಮಸ್ಥಾನ ;~ *ಅನಾಸಾಗರ*
ನರ್ಮದಾ ನದಿಯ ಉಗಮಸ್ಥಾನ :~ *ಅಮರಕಂಟಕ*
ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. *ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ*
*ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ*,
ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು *ಅಂಬುತಿರ್ಥ*
* ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ*
*ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು*
ದಾಮೋದರ ನದಿಯನ್ನು *"ಪಶ್ಚಿಮ ಬಂಗಾಳದ"* ಕಣ್ಣೀರು ನದಿ ಎಂದು ಕರೆಯುತ್ತಾರೆ.
*ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ*
ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.
ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.*
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.
ಕೃಷ್ಣಾ ನದಿಯ ಉಗಮಸ್ಥಾನ :` *ಮಹಬಲೇಶ್ವರ*
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು.
__________________________________________
ಸಂಗ್ರಹ ✍️T.A.ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ವಾಯುಗೋಳ
ವಾಯುಗೋಳ
ADD ARTICLE DESCRIPTION
ಭೂಮಿಯ ಮೇಲಿನ ಎಲ್ಲಾ ಜೀವಿಗಳೂ ಬದುಕಲು ಗಾಳಿ ಬೇಕೆಂಬುದು ನಮಗೆ ತಿಳಿದಿದೆ. ನಮಗೆ ಗಾಳಿಯು ಎಲ್ಲಿಂದ ದೊರೆಯುತ್ತದೆ? ಇದು ಭೂಮಿಯ ವಾತಾವರಣದಿಂದ ದೊರೆಯುತ್ತದೆ. ಭೂಮಿಯನ್ನು ಆವರಿಸಿಕೊಂಡಿರುವ ವಾಯುವಿನ ಪದರಕ್ಕೆ ವಾಯುಗೋಳ ಎನ್ನುವರು. ವಾಯುಗೋಳವು ಹೇಗೆ ಉಂಟಾಯಿತೆಂದು ನಿಮಗೆ ಗೊತ್ತಿದೆಯೆ? ಮೊದಲು ಭೂಮಿಯು ರೂಪುಗೊಂಡಾಗ ವಾಯುಗೋಳವಿರಲಿಲ್ಲ. ಭೂಮಿಯ ಒಳಗೆ ಬಂಧಿತವಾಗಿದ್ದ ಅನಿಲಗಳನ್ನು ಮತ್ತು ಹಬೆಯನ್ನು ಜ್ವಾಲಾಮುಖಿಗಳು ಸ್ಪೂಟಗೊಂಡು ಹೊರಚಿಮ್ಮಿಸಿದವು.ಈ ಅನಿಲಗಳು ಭೂಮಿಯ ಸುತ್ತ ಲಕ್ಷಾಂತರ ವರುಷಗಳಿಂದ ಸಂಗ್ರಹಗೊಂಡು, ವಾಯುಗೋಳ ರೂಪುಗೊಂಡಿತು.
ವಾಯುಗೋಳದ ಪದರಗಳು:
೧.ಹವಾಗೋಳ: ಭೂಮಿಯ ವಾಯುಗೋಳದ ಅತ್ಯಂತ ಕೆಳಗಿನ ಪದರವನ್ನು ಹವಾಗೋಳ ಎನ್ನುವರು. ನೀರಾವಿ, ನೈಟ್ರೂಜನ್, ಅಕ್ಸಿಜನ್, ಈ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಹವಾಗೋಳದ ಮೇಲ್ಭಾಗದ ಗಡಿಗೆ ಹವಾಸೀಮೆ ಎನ್ನುವರು.
೨.ಸ್ತರಗೋಳ:ಹವಾಸೀಮೆಯ ಮೇಲ್ಭಾಗದ ಪದರವನ್ನು ಸ್ತರಗೋಳ ಎನ್ನುವರು. ಸ್ತರಗೋಳದ ಮೇಲ್ಬಾಗದಲ್ಲಿ ಅಪಾಯಕಾರಿ ನೇರಳಾತೀತ ವಿಕಿರಣಗಳ ವಿರುದ್ಧ ರಕ್ಷಾಕವಚದಂತೆ ವರ್ತಿಸುವ ಓಝೂನ್ ಪದರವಿದೆ.
೩.ಮಧ್ಯಗೋಳ: ಸ್ತರಗೋಳದಿಂದ ಸುಮಾರು ೩೦ಕಿ.ಮೀ. ಎತ್ತರದಲ್ಲಿರುವ ಪ್ರದೇಶವನ್ನು ಮಧ್ಯಗೋಳ ಎನ್ನುವರು. ಇದು ವಾಯುಮಂಡಲದ ಅತ್ಯಂತ ತಂಪು ಪ್ರದೇಶವಾಗಿದೆ. ಇಲ್ಲಿರುವ ಗಾಳಿಯ ಪ್ರಮಾಣ ತುಂಬಾ ಕಡಿಮೆಯಿರುತ್ತದೆ.
೪.ಅಯಾನುಗೋಳ: ಮಧ್ಯಗೋಳದ ನಂತರ ಇರುವ ಪದರವನ್ನು ಅಯಾನುಗೋಳ ಎನ್ನುವರು. ಇದು ಅಯಾನು ಅಥವಾ ಆವೇಶಭರಿತ ಕಣಗಳಿಂದ ಆಗಿದೆ. ಆದ್ದರಿಂದ ರೇಡಿಯೂ ಪ್ರಸರಣಕ್ಕೆ ಈ ವಲಯ ಸಹಕರಿಸುತ್ತದೆ.
೫.ಬಹಿಗೋಳ:ಭೂಮಿಯ ವಾಯುಮಂಡಲದ ಅತ್ಯಂತ ಹೊರ ಪದರವನ್ನು ಬಹುಗೋಳ ಎನ್ನುವರು. ಇದು ಹಗುರವಾದ ಅನಿಲಗಳಾದ ಹೈಡ್ರೂಜನ್ ಮತ್ತು ಹೀಲಿಯಮ್ ನಿಂದ ಕೂಡಿದೆ.ಈ ಪ್ರದೇಶದಲ್ಲಿ ಕೆಲವು ಕೃತಕ ಉಪಗ್ರಹಗಳೂ ಸುತ್ತುತ್ತಿವೆ.
__________________________________________
ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
(The five layers of Atmosphere and its main features)
ಪರಿಸರ ವ್ಯವಸ್ಥೆ,
(Ecology, Environmental Studies)
ಭೂಗೋಳಶಾಸ್ತ್ರ
(Geography)
• ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ.
• ವಾಯುಗೋಳದ ಮುಖ್ಯ ಅನಿಲಗಳೆಂದರೆ
- ಸಾರಜನಕ ಶೇ.78.08,
- ಆಮ್ಲಜನಕ ಶೇ.20.94,
- ಆರ್ಗಾನ್ ಶೇ.0.93,
- ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005.
• ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ.
ವಾಯುಗೋಳದಲ್ಲಿರುವ ನೀರಾವಿಯು ಮೋಡದ ನಿರ್ಮಾಣ ಹಾಗೂ ವೃಷ್ಟಿಗೆ ಕಾರಣವಾಗುವುದಲ್ಲದೆ, ವಾಯುಗೋಳದ ಶಾಖ ಮತ್ತು ಶಕ್ತಿಯನ್ನು ಹಿಡಿದಿರಿಸಿಕೊಂಡು ಅದು ಒಂದು ಸ್ಥಳದ ಹವಾಮಾನದ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುವುದು.
•► ವಾಯುಗೋಳದ ರಚನೆ :
ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ ;
- ಪರಿವರ್ತನಾಮಂಡಲ,
- ಸಮೋಷ್ಣಮಂಡಲ,
- ಮಧ್ಯಂತರಮಂಡಲ,
- ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.
•► ಪರಿವರ್ತನಾಮಂಡಲ (Troposphere ) :
- ಇದು ವಾಯುಗೋಳದ ಅತ್ಯಂತ ಕೆಳಪದರ.
- ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. ಎತ್ತರದ ವರೆಗೆ ಕಂಡುಬರುವುದು.
- ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ.
- ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ.
- ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.
•► ಸಮೋಷ್ಣಮಂಡಲ (Stratosphere) :
- ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ.
- ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ.
- ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು.
- ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ.
- ಈ ಪದರವು ಮೋಡ ಹಾಗೂ ಇತರೆ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು.
- ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.
•► ಮಧ್ಯಂತರ ಮಂಡಲ (Mesosphere ) :
- ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ.
- ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು.
- ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.
•► ಉಷ್ಣತಾಮಂಡಲ (Thermosphere) :
- ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ.
- ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ.
- ಈ ಪದರದಲ್ಲಿನ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು.
- ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.
•► ಬಾಹ್ಯಮಂಡಲ (Exosphere) :
- ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ.
- ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.
__________________________________________
ಸಂಗ್ರಹ ✍️T.A. ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Subscribe to:
Posts (Atom)
ಪ್ರಮುಖ ಅಂಶಗಳು
10 ನೆ ತರಗತಿಯ ಸಮಾಜ ವಿಜ್ಞಾನ
ಸಮಾಜ ವಿಜ್ಞಾನ ಭಾಗ-1 Sl.No Chapters View PDF Download PDF ಇತಿಹಾಸ 1 ಭಾರತಕ್ಕೆ ಯುರೋಪಿಯನ್ನರ ಆಗಮನ View Download Now 2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ V...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ