ಭಾರತದಲ್ಲಿ ಅರಣ್ಯಾವೃತ ಪ್ರದೇಶ ಒಟ್ಟು ನೆಲದ 20.55% ಇದೆ. ಇದು ಪ್ರಪಂಚದ ಮಿತಿಗಿಂತ (33%) ಕಡಿಮೆ. ಈ ಪ್ರಮಾಣವನ್ನು 33.3%ಗೆ ಏರಿಸಬೇಕೆಂದು 1952 ರಲ್ಲಿ ರಾಷ್ಟ್ರೀಯ ಅರಣ್ಯಧೋರಣೆ ಠರಾವು ಸರ್ಕಾರಕ್ಕೆ ಸೂಚಿಸಿದೆ. ಭಾರತದ ಅರಣ್ಯಗಳನ್ನು ಐದು ಭಾಗಗಳಾಗಿ ವರ್ಗೀಕರಿಸಲಾಗಿದೆ-1 ನಿತ್ಯಹರಿದ್ವರ್ಣ: 2 ತೇವ ಪರ್ಣಪಾತಿ ಅಥವಾ ಕಾಲಕಾಲಕ್ಕೆ ಎಲೆ ಉದುರುವ ಅರಣ್ಯ: 3 ಶುಷ್ಕ ಪರ್ಣಪಾತಿ 4. ಬೆಟ್ಟ ಪ್ರದೇಶದ ಉಪುಷ್ಣವಲಯದ ಅರಣ್ಯ-ಮಾಂಟೇನ್ ಸಬ್ ಟ್ರಾಪಿಕಲ್ 5. ನದೀಮುಖದ ಅರಣ್ಯ.
ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ (69.0 ದ.ಲ.ಹೇ) ಅಂದರೇ ಭೌಗೋಳಿಕ ಕ್ಷೇತ್ರದ ಶೇ 21.02 ರಷ್ಟು ಭೂಭಾಗವು ಅರಣ್ಯಗಳಿಂದ ಕೂಡಿದೆ.
ಭಾರತದ ಅರಣ್ಯ ಪ್ರದೇಶವನ್ನು ಮುಖ್ಯವಾಗಿ ಆರು ಪ್ರಕಾರಗಳಾಗಿ ವಿಂಗಡಿಸಬಹುದಾಗಿದೆ. ಅವುಗಳೆಂದರೇ
1) ನಿತ್ಯಹರಿದ್ವರ್ಣದ ಅರಣ್ಯಗಳು:-
# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು 250 ಸೆಂ.ಮೀ ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮೀ. ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣಬಹುದಾಗಿದೆ.
# ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡುಬರುತ್ತದೆ.
# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು ಸುಮಾರು 2.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿವೆ. ಈ ಪ್ರದೇಶದಲ್ಲಿ ಸಸ್ಯವರ್ಗವು ವರ್ಷವೆಲ್ಲಾ ಹಸಿರಾಗಿರುವುದರಿಂದ ಇವುಗಳನ್ನು ನಿತ್ಯಹರಿದ್ವರ್ಣದ ಅಥವಾ ಸದಾ ಹಚ್ಚ ಹಸಿರಾಗಿರುವ ಅರಣ್ಯವೆಂದು ಕರೆಯುವರು.
_________________________________________
2) ಎಲೆಯುದುರುವ ಮಾನ್ಸೂನ್ ಅರಣ್ಯಗಳು:-
# ಈ ಪ್ರಕಾರದ ಅರಣ್ಯಗಳು ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿವೆ. ಇವುಗಳು 75 ರಿಂದ 250 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ.
# ಇದು ಭಾರತದ ಶೇ. 65.5 ರಷ್ಟು ಒಟ್ಟು ಅರಣ್ಯದಲ್ಲಿ ಹರಡಿವೆ. ಇವುಗಳು ವರ್ಷದ ನಿರ್ದಿಷ್ಟ ಒಣ ಹವೆಯ ಋತುವಿನಲ್ಲಿ ಎಲೆಯನ್ನು ಉದುರಿಸುವುದನ್ನು ರೂಢಿಸಿಕೊಂಡಿರುವುದರಿಂದ ಇವುಗಳನ್ನು ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳೆಂದು ಕರೆಯುವರು.
_________________________________________
3) ಉಷ್ಣವಲಯದ ಹುಲ್ಲುಗಾವಲು ಅರಣ್ಯ:-
# ಭಾರತದಲ್ಲಿ 60 ರಿಂದ 75 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ಹುಲ್ಲುಗಾವಲು ಸಸ್ಯವರ್ಗ ಪ್ರಧಾನವಾಗಿ ಕಂಡುಬರುವುದು.
# ಈ ವಲಯಗಳಲ್ಲಿ ಎತ್ತರವಾದ ಹುಲ್ಲು ಹಾಗೂ ವಿರಳವಾಗಿ ಅಲ್ಲಲ್ಲಿ ಕುರುಚಲ ಜಾತಿಯ ಸಸ್ಯವರ್ಗಗಳನ್ನು ಕಾಣಬಹುದು.
# ದಖನ್ ಪ್ರಸ್ಥಭೂಮಿಯ ಕೇಂದ್ರಭಾಗ, ಅರಾವಳಿ ಪರ್ವತಗಳ ಪಶ್ಚಿಮದಲ್ಲಿರುವ ಥಾರ್ ಮರುಭೂಮಿಯ ಅಂಚಿನ ವಲಯಗಳು ಈ ಬಗೆಯ ಸಸ್ಯವರ್ಗವನ್ನು ಹೊಂದಿವೆ.
# ಬಬೂಲ್, ಶಿಷಮ್, ಸಭಾಯ್ ಹುಲ್ಲು ಇತ್ಯಾದಿ ಇಲ್ಲಿ ಬೆಳೆಯುತ್ತವೆ.
_________________________________________
4) ಮ್ಯಾಂಗ್ರೋವ್ ಅರಣ್ಯಗಳು:-
# ಈ ಕಾಡುಗಳು ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತವೆ.
# ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾನದಿ ಮುಖಜಭೂಮಿಯಲ್ಲಿ ಕಂಡುಬರುತ್ತವೆ.
# ಗಂಗಾ ನದಿಯ ಮುಖಜ ಭೂಮಿಯಲ್ಲಿ ಸುಂದರಿ ಮರಗಳು ಹೇರಳವಾಗಿರುವುದರಿಂದ ಈ ಪ್ರದೇಶವನ್ನು ಸುಂದರಬನ್ ಎಂದು ಕರೆಯುತ್ತಾರೆ.
# ಈ ಅರಣ್ಯಗಳ ಕ್ಷೇತ್ರ ದೇಶದಲ್ಲಿ 4.4 ಸಾವಿರ ಚ.ಕಿ.ಮೀ ರಷ್ಟಿರುವುದು.
_________________________________________
5) ಮರುಭೂಮಿ ಅರಣ್ಯಗಳು:-
# ಈ ಅರಣ್ಯಗಳು ಸಾಮಾನ್ಯವಾಗಿ ವಾರ್ಷಿಕ 50 ಸೆಂ.ಮೀ ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
# ರಾಜಸ್ಥಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಕೆಲವು ಭಾಗಗಳಲ್ಲಿ ಈ ಅರಣ್ಯಗಳಿವೆ.
# ಈ ಸಸ್ಯವರ್ಗಗಳು ಆಳವಾಗಿ ಬೇರುಗಳನ್ನು ಹೊಂದಿದ್ದು ಕುರುಚಲು ಜಾತಿಯ ಸಸ್ಯವರ್ಗಗಳು ಮುಳ್ಳು ಕಂಟಿಗಳಿಂದ ಕೂಡಿರುತ್ತವೆ.
_________________________________________
6) ಹಿಮಾಲಯದ ಅಲ್ಪೈನ್ ಅರಣ್ಯಗಳು:-
# ಹಿಮಾಲಯ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡುಬರುತ್ತವೆ. ಏಕೆಂದರೆ ಎತ್ತರವು ಹೆಚ್ಚಿದಂತೆ ಉಷ್ಣವಲಯದಿಂದ ಧ್ರುವ ಪ್ರದೇಶದವರೆಗಿನ ವಾಯುಗುಣಗಳನ್ನು ಈ ಪರ್ವತಗಳಲ್ಲಿ ಕಾಣಬಹುದು.
# ವಾಯುಗುಣಕ್ಕೆ ಅನುಗುಣವಾಗಿ ವಿವಿಧ ಪ್ರಕಾರದ ಸಸ್ಯವರ್ಗಗಳು ಇಲ್ಲಿ ಕಂಡುಬರುವವು.
# ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೇ - ಸಾಲ್, ಬೈರಾ, ಟೂನ್, ಸಿಲ್ವರ್, ಸ್ಟ್ರೂಸ್, ಲಾರೆಲ್ ಮುಂತಾದ ಎಲೆ ಮೊನಚಾದ ಅರಣ್ಯಗಳು ಪ್ರಧಾನವಾಗಿ ಬೆಳೆದಿರುತ್ತವೆ.
• ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯ ಹರಿದ್ವರ್ಣ ಅರಣ್ಯ ಆಗಿದೆ.
• ಹಿಮಾಲಯದಲ್ಲಿ ಅಲ್ಫೈನ್ ಅರಣ್ಯಗಳು ಕಂಡುಬರುತ್ತವೆ.
• ಗಂಗಾನದಿ ಮುಖಜ ಭೂಮಿಯನ್ನು ಸುಂದರಬನ ಎಂದು ಕರೆಯುತ್ತಾರೆ.
• ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕರ್ನಾಟಕ ರಾಜ್ಯದಲ್ಲಿದೆ.
• ಸುಂದರಬನ್ ಎಂದು ಕರೆಯಲು ಸುಂದರಿ ಮರಗಳು ಬೆಳೆಯಲು ಕಾರಣವಾಗಿದೆ.
• ದೇಶದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯಲ್ಲಿ ಮಧ್ಯಪ್ರದೇಶ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ,
• ಹರಿಯಾಣ ರಾಜ್ಯವು ಕೊನೆ ಸ್ಥಾನದಲ್ಲಿದ್ದು, ಕರ್ನಾಟಕವು 13ನೇ ಸ್ಥಾನದಲ್ಲಿದೆ.
• ಭಾರತದಲ್ಲಿ ಇಂದು 523 ವನ್ಯಜೀವಿ ಧಾಮಗಳಿವೆ.
• ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್.
• ಜೀವವ್ಯವಸ್ಥೆಯನ್ನು ಕಾಪಾಡಲು ದೇಶದಲ್ಲಿ 18 ಜೈವಿಕ ವಲಯಗಳನ್ನು ಸಂರಕ್ಷಿಸಲಾಗಿದೆ.
• ದೇಶದಲ್ಲಿ ಪ್ರಥಮ ಜೈವಿಕ ಸಂರಕ್ಷಣಾ ವಲಯ ನೀಲಗಿರಿ ಸಂರಕ್ಷಣಾ ವಲಯ.
_________________________________________
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತವು ಹೊಂದಿರುವ ಅರಣ್ಯ ಪ್ರದೇಶಗ¼ಇμಂಂಔ?
ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ.(69.0 ದ.ಲ.ಹೇ.) ಅಂದರೇ ಭೌಗೋಳಿಕ ಕ್ಷೇತ್ರದ ಶೇ. 21.02 ಭೂಭಾಗವು ಅರಣ್ಯಗಳಿಂದ ಕೂಡಿರುವುದಾಗಿದೆ.
_________________________________________
2. ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸಿ.
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು : ಬಂಡಿಪುರ, ನಾಗರಹೊಳೆ, ಬನ್ನೇರುಘಟ್ಟ.
_________________________________________
3. ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.
_________________________________________
4. ಭಾರತದ ಸಸ್ಯವರ್ಗವನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?
• ಭಾರತದ ಸಸ್ಯವರ್ಗವನ್ನು ಆರು ವಿಧಗಳಾಗಿ ವಿಂಗಡಿಸಬಹುದು.
• 1. ಉಷ್ಟವಲಯದ ನಿತ್ಯ ಹರಿದ್ವರ್ಣ ಕಾಡುಗಳು
2. ಉಷ್ಟವಲಯದ ಎಲೆ ಉದುರುವಕಾಡುಗಳು
3. ಉಷ್ಟವಲಯದ ಮುಳ್ಳುಗಿಡಗಳು ಮತ್ತು ಪೊದೆಗಳು
4. ಮರುಭೂಮಿ ಸಸ್ಯವರ್ಗ
5. ಮ್ಯಾಂಗ್ರೋವ್ ಕಾಡುಗಳು
6. ಹಿಮಾಲಯ ಸಸ್ಯವರ್ಗ
_________________________________________
5. ಜೈವಿಕ ವೈವಿದ್ಯತೆ ಎಂದರೇನು?
ಭಾರತದಲ್ಲಿ ವೈವಿಧ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳೂ ವೈವಿಧ್ಯಮಯವಾಗಿವೆ. ಆದ್ದರಿಂದ ಇದನ್ನು ಜೈವಿಕ ವೈವಿದ್ಯತೆ ಎನ್ನುತ್ತಾರೆ.
_________________________________________
6. ದೇಶದಲ್ಲಿ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆಯೇನು? ಅಥವಾ ಅರಣ್ಯ ಸಂರಕ್ಷಣೆ ಎಂದರೇನು? ಸಂರಕ್ಷಣಾ ವಿಧಾನಗಳನ್ನು ತಿಳಿಸಿ.
ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.
ಅರಣ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು
• ಅರಣ್ಯದ ಮರಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸುವದು.
• ಸಸಿಗಳನ್ನು ನೆಡುವದು, ಬೀಜಗಳನ್ನು ಹರಡುವದು.
• ಕಾನೂನು ಬಾಹಿರವಾಗಿ ಮರ ಕಡಿಯುವದನ್ನು ನಿಯಂತ್ರಿಸುವದು.
• ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವದು.
• ಅರಣ್ಯಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸುವದನ್ನು ನಿಯಂತ್ರಿಸುವದು.
• ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವದು.
_________________________________________
7. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.
• ವಾರ್ಷಿಕ ಸರಾಸರಿ 75 ರಿಂದ 250 ಸೆಂ.ಮೀ. ಮಳೆ ಬೀಳುವ ಕಡೆಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ.
• ಈ ಕಾಡುಗಳಲ್ಲಿ ಮರಗಳು ವಿರಳವಾಗಿಯೂ, ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತವೆ.
• ಬೇಸಿಗೆಯ ಆರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ.
• ಬೆಲೆ ಬಾಳುವ ತೇಗ, ಸಾಲ, ಶ್ರೀಗಂಧ ಮರಗಳು ಹೆಚ್ಚಾಗಿ ಕಂಡುಬರುತ್ತವೆ.
• ಇವು ಪಶ್ಚಿಮ ಘಟ್ಟದ ಪೂರ್ವದ ಇಳಿಜಾರು, ಜಮ್ಮು & ಕಾಶ್ಮೀರ, ಬಂಗಾಳ, ಛತ್ತೀಸಘಡ್,
• ಒರಿಸ್ಸಾ, ಬಿಹಾರ & ಝಾರ್ಖಂಡ್ಗಳಲ್ಲಿ ಕಂಡುಬರುತ್ತವೆ.
_________________________________________
8. ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.
• ಈ ಸಸ್ಯವರ್ಗವು ವರ್ಷದಲ್ಲಿ 250 ಸೇಂ.ಮೀ.ಗಿಂತ ಹೆಚ್ಚು ಮಳೆ ಬೀಳುವ ಮತ್ತು 25’ರಿಂದ
• 27’ಸೆ. ಉಷ್ಣಾಂಶವಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
• ಇಲ್ಲಿನ ಮರಗಳು 60 ಮೀಟರ ಎತ್ತರವಾಗಿ ಬೆಳೆದಿರುತ್ತವೆ.
• ಇಲ್ಲಿನ ಮುಖ್ಯ ಮರಗಳೆಂದರೆ ಎಬೋನಿ, ಮಹಾಗನಿ, ಕರಿಮರ, ಬಿದಿರು ಮತ್ತು ರಬ್ಬರ
• ಭಾರತದಲ್ಲಿ ಈ ಕಾಡುಗಳು ಪಶ್ಚಿಮ ಘಟ್ಟದ ಪಶ್ಚಿಮ ಭಾಗ, ಈಶಾನ್ಯ ಬೆಟ್ಟ ಗುಡ್ಡಗಳಪ್ರದೇಶ, ಅಂಡಮಾನ್ ಮತ್ತು ನಿಕೋಬಾರ ದ್ವೀಪಗಲ್ಲಿ ಕಂಡು ಬರುತ್ತವೆ.
_________________________________________
9. ಮಾನ್ಸೂನ್ ಕಾಡುಗಳು ಮತ್ತು ಮಾನ್ಗ್ರೋವ್ ಕಾಡುಗಳಲ್ಲಿ ಕಂಡುಬರುವ ವ್ಯತ್ಯಾಸಗಳೇನು?
ಮಾನ್ಸೂನ್ ಕಾಡುಗಳು 75 ರಿಂದ 250 ಸೆಂ.ಮೀ. ಮಳೆ
ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಬೇಸಿಗೆ ಆರಂಭದಲ್ಲಿ
ಈ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ. ಆದರೆ
ಮ್ಯಾನ್ಗ್ರೋವ್ ಅರಣ್ಯಗಳು ತೀರ ಪ್ರದೇಶಗಳ
ತಗ್ಗುವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ
ಆವರಿಸಲ್ಪಡುತ್ತವೆ. ಈ ಕಾಡುಗಳು ನದಿಮುಖಜ ಮತ್ತು ನದಿ
ಅಳಿವೆಗಳ ತಗ್ಗು ಪ್ರದೇಶಗಳಲಿ ಕಂಡುಬರುತ್ತವೆ.
_________________________________________
10. ಸುಂದರಬನ್ಸ ಎಂದರೇನು?
ಗಂಗಾನದಿಯ ಮುಖಜಭೂಮಿಯಲ್ಲಿ ಸುಂದರಿ ಮರಗಳು ಅಧಿಕವಾಗಿರುವದರಿಂದ ಈ ಪ್ರದೇಶವನ್ನು ಸುಂದರಬನ್ಸ ಕಾಡುಗಳು ಎಂದು ಕರೆಯುತ್ತಾರೆ.
_________________________________________
11. ಅರಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ.
• ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಗಿಡಮೂಲಿಕೆಗಳು, ಪಶುಗಳಿಗೆ ಆಹಾರವನ್ನು ಒದಗಿಸುತ್ತವೆ.
• ಕಾಡುಗಳು ತೇವಾಂಶವನ್ನು ಪೂರೈಸಿ ಉμಂUಂ}Àವನ್ನು ಮಾರ್ಪಡಿಸುತ್ತವೆ.
• ತೇವಾಂಶವುಳ್ಳ ಮಾರುತಗಳನ್ನು ತಡೆದು ಮಳೆ ಬೀಳುವದಕ್ಕೆ ನೆರವಾಗುತ್ತವೆ.
• ಕಾಡುಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತವೆ.
• ಕಾಡುಗಳು ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿವೆ.
• ಕಾಡುಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತವೆ.
• ವನ್ಯಧಾಮಗಳನ್ನೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.
_________________________________________
ಸಂಗ್ರಹ ✍️ T.A.ಚಂದ್ರಶೇಖರ
No comments:
Post a Comment