ಕನ್ನಡ ವ್ಯಾಕರಣದ ಮುನ್ನುಡಿ
“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”
ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ. ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು. ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ನಮ್ಮ ಪ್ರೌಢ ಶಾಲೆಗಳ ಪಠ್ಯಕ್ರಮದಲ್ಲಿ ವ್ಯಾಕರಣ ಶಾಸ್ತ್ರದ ಮುಖ್ಯ ವಿಷಯಗಳನ್ನು ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ಕನ್ನಡ ವ್ಯಾಕರಣವು ಹೊಂದಿರುವ ಹಲವು ಅಂಶಗಳನ್ನು ಇಲ್ಲಿ ಸವಿವರವಾಗಿ ನೋಡಬಹುದು.
ಕನ್ನಡ ವರ್ಣಮಾಲೆ
ವ್ಯವಸ್ಥಿತವಾಗಿ ಜೋಡಿಸಿದ ಅಕ್ಷರಮಾಲೆಯ ಗುಂಪನ್ನು ವರ್ಣಮಾಲೆ ಎನ್ನಬಹುದು.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ವರ್ಣಮಾಲೆಯ ವಿಧಗಳು
ಸ್ವರಗಳು
ವ್ಯಂಜನಗಳು
ಯೋಗವಾಹಗಳು
ಸ್ವರಗಳು:13
“ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ”.
ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಸ್ವರಗಳ ವಿಧಗಳು
ಹ್ರಸ್ವಸ್ವರ :ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು.
ಉದಾ:ಅ ಇ ಉ ಋ ಎ ಒ
ದೀರ್ಘ ಸ್ವರ: ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ.
ಉದಾ:ಆ ಈ ಊ ಏ ಓ ಐ ಔ
ಪ್ಲುತ ಸ್ವರ:ಮೂರು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.
ಉದಾ:
ಅಕ್ಕಾ=ಕ್+ಆ=ಕಾs
ಅಮ್ಮಾ= ಮ್+ಆ=ಮಾs
ಅಯ್ಯಾ=ಯ್+ಆ=ಯಾs
ವ್ಯಂಜನಗಳು:34
ಸ್ವರಾಕ್ಷರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ.
ವ್ಯಂಜನಗಳ ವಿಧಗಳು:2
ವರ್ಗೀಯ ವ್ಯಂಜನಾಕ್ಷರಗಳು 25 :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.
ಉದಾ:
ಕ ವರ್ಗ - ಕ ಖ ಗ ಘ ಙ
ಚ ವರ್ಗ - ಚ ಛ ಜ ಝ ಞ
ಟ ವರ್ಗ - ಟ ಠ ಡ ಢ ಣ
ತ ವರ್ಗ - ತ ಥ ದ ಧ ನ
ಪ ವರ್ಗ- ಪ ಫ ಬ ಭ ಮ
ವರ್ಗೀಯ ವ್ಯಂಜನಾಕ್ಷರಗಳ ವಿಧಗಳು
ಅಲ್ಪ ಪ್ರಾಣಾಕ್ಷರಗಳು:10
ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ.
ಉದಾ:
ಕ,ಚ,ಟ.ತ,ಪ,
ಗ,ಜ,ಡ,ದ,ಬ
ಮಹಾ ಪ್ರಾಣಾಕ್ಷರಗಳು:10
ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ.
ಉದಾ:
ಖ, ಛ ,ಠ ,ಧ, ಫ , ಘ ,ಝ, ಢ, ಧ, ಭ
ಅನುನಾಸಿಕಾಕ್ಷರಗಳು:5
ಮೂಗಿನ ಸಹಾಯದಿಂದುಚ್ಛರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ. ಉದಾ:
ಙ ,ಞ ,ಣ, ನ, ಮ,
ಅವರ್ಗೀಯ ವ್ಯಂಜನಾಕ್ಷರಗಳು:9 ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು.
ಉದಾ:
ಯ ,ರ, ಲ, ವ ,ಶ, ಷ ,ಸ ,ಹ, ಳ
ಯೋಗವಾಹಗಳು:2
ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ.
ಉದಾ : ಅಂ ಅಃ
ಅನುಸ್ವರ- ಅಂ-ಯಾವುದೇ ಅಕ್ಷರವು ಒಂದು ಸೊನ್ನೆ ಬಿಂದು, ಎಂಬ ಸಂಕೇತನವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು, ಉದಾ:ಅಂಕ , ಒಂದು, ಎಂಬ
ವಿಸರ್ಗ - ಅಃ -ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೊಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು,ಉದಾ:ಅಂತಃ , ದುಃಖ, ಸಃ, ನಃ
ಸಂಯುಕ್ತಾಕ್ಷರಗಳು
ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ / ಒತ್ತಕ್ಷರ ಎಂದು ಕರೆಯುತ್ತೇವೆ.
ಉದಾ:
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ
ಸಂಧ್ಯಕ್ಷರಗಳು: ಸ್ವರದ ಮುಂದೆ ಸ್ವರ ಬಂದು ಮತ್ತೊಂದು ಸರ ಉದ್ದವಾದರೆ ಅದುವೇ ಸಂಧ್ಯಕ್ಷರ
ಉದಾ ಏ,ಐ,ಓ,ಔ- ಸಂಧ್ಯಕ್ಷರಗಳು(ಸಂಸ್ಕ್ರತ) ಏ,ಓ -ಕನ್ನಡದಲ್ಲಿ ಸಹಜಸ್ವರಗಳು. ಅಂತೆಏ ...
ಸಂಯುಕ್ತಾಕ್ಷರಗಳ ವಿಧಗಳು
ಸಜಾತಿಯ ಸಂಯುಕ್ತಾಕ್ಷರಗಳು- ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.
ಉದಾ:
ಕತೇ–ಕ್+ತ್+ತ್+ಎ
ಅಕ್ಕ –ಅ+ಕ್+ಕ್+ಅ
ಹಗ್ಗ,ಅಜ್ಜ,ತಮ್ಮ,ಅಪ್ಪ
ವಿಜಾತೀಯ ಸಂಯುಕ್ತಾಕ್ಷರಗಳು-ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.
ಉದಾ:
ಅಗ್ನಿ- ಆ + ಗ್ + ನ್ + ಇ
ಆಪ್ತ – ಆ + ಪ್ + ತ್ + ಅ
ಸೂರ್ಯ , ಮಗ್ನ , ಸ್ವರ , ಪ್ರಾಣ
ಕನ್ನಡ ವರ್ಣಮಾಲೆ ಒಟ್ಟು ಅಕ್ಷರಗಳು ಸಂಖ್ಯೆ
ಕನ್ನಡ ವರ್ಣಮಾಲೆ 49
ಸ್ವರಗಳು 13
ಹ್ರಸ್ವ ಸ್ವರಗಳು 6
ಧೀರ್ಘ ಸ್ವರಗಳು 7
ವ್ಯಂಜನಾಕ್ಷರಗಳು 34
ವರ್ಗೀಯಗಳು ವ್ಯಂಜನಾಕ್ಷರಗಳು 25
ಅವರ್ಗೀಯ ವ್ಯಂಜನಾಕ್ಷರಗಳು 9
ಅಲ್ಪಪ್ರಾಣಗಳು 10
ಮಹಾಪ್ರಾಣಗಳು 10
ಅನುನಾಸಿಕಗಳು 5
ಯೋಗವಾಹಗಳು ಅನುಸ್ವಾರ(ಂ)ವಿಸರ್ಗ(ಃ) 2
_____________________
ಲಿಂಗಗಳು ಎಂದರೇನು? ಲಿಂಗಗಳ ವಿಧಗಳು ಯಾವುವು? ಲಿಂಗಗಳ ಪ್ರಯೋಗ ಹೇಗೆ?
ಲಿಂಗಗಳು
ಒಂದು ನಾಮಪ್ರಕೃತಿ’ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗವೆಂದು ಹೆಸರು’
ಲಿಂಗಗಳ ವಿಧಗಳು
ಲಿಂಗಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು ಕೇಶಿರಾಜನ ಪ್ರಕಾರ ‘ಲಿಂಗಂವೊಂಬತ್ತು ತೆರೆಂ’
ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ
1.ಪುಲ್ಲಿಂಗ
ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.
ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ
2.ಸ್ತೀಲಿಂಗ
ಸ್ತೀಯನ್ನು ಕುರಿತು ಹೇಳುವ ಶಬ್ದಗಳೇ ಸ್ತೀಲಿಂಗ.ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ಹೆಂಗಸು ಎಂಬ ಅರ್ಥ ಹೊಳೆಯುವುದೋ ಅದೇ ಸ್ತೀಲಿಂಗ.
ಉದಾ:- ರಾಣಿ, ರಾಧೆ, ತಾಯಿ, ಅಕ್ಕ, ತಂಗಿ, ಚಲುವೆ, ಅರಸಿ, ಚಿಕ್ಕಮ್ಮ,……ಇತ್ಯಾದಿ
3.ನಪುಂಸಕ ಲಿಂಗ
ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು-ಗಂಡಸು ಎರಡೂ ಅಲ್ಲದ ಅಥ್ರ ವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕ ಲಿಂಗ ಎನಿಸುವುದು. ಪುಲ್ಲಿಂಗವೂ ಅಲ್ಲದ, ಸ್ತೀಲಿಂಗವೂ ಅಲ್ಲದ ಲಿಂಗಗಳು ನಪುಂಸಕ ಲಿಂಗಗಳಾಗಿವೆ.
ಉದಾ:- ಮನೆ, ನೆಲ, ಬೆಂಕಿ, ಹೊಲ, ಗದ್ದೆ, ತೋಟ, ಮರ, ಆಕಾಶ, ಬಂಗಾರ,…..ಇತ್ಯಾದಿ
ಲಿಂಗಗಳ ಅನ್ಯ ವಿಧಗಳು
ಪುನ್ನಪುಂಸಕ ಲಿಂಗಗಳು
“ಎಲ್ಲಾ ಗ್ರಹವಾಚಕ ಶಬ್ದಗಳನ್ನು ಪುಲ್ಲಿಂಗ, ಹಾಗೂ ನಪುಂಸಕ ಲಿಂಗದಂತೆಯೂ ಪ್ರಯೋಗದಲ್ಲಿ ಬಳಸುತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.
ಉದಾ:-ಸೂರ್ಯ ಚಂದ್ರ ಶನಿ ಮಂಗಳ……ಇತ್ಯಾದಿ ಚಂದ್ರ ಮೂಡಿತು.-ನಪುಂಸಕ ಲಿಂಗ ಚಂದ್ರ ಮೂಡಿದನು.-ಪುಲಿಂಗ ಶನಿಯು ಕಾಡುತ್ತದ-ನಪುಂಸಕ ಲಿಂಗ ಶನಿಯು ಕಾಡಿದನು-ಪುಲಿಂಗ ಸೂರ್ಯ ಉದಯವಾಯಿತು- ನಪುಂಸಕ ಲಿಂಗ ಸೂರ್ಯ ಉದಯವಾದನು-ಪುಲಿಂಗ
ಸ್ತ್ರೀ ನಪುಂಸಕ ಲಿಂಗಗಳು
ನಾಮಪದಗಳು ಸಂದರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ ಆದುದರಿಂದ ಇದಕ್ಕೆ ಸ್ತ್ರೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.
ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತ್ರೀ,ಸರಸ್ವತಿ, ಕೃಪೆ ಮಾಡಿತು, ಸ್ತ್ರೀ ನಪುಂಸಕ ಲಿಂಗ ಸರಸ್ವತಿ, ಕೃಪ ಮಾಡಿದಳು, ಸ್ತ್ರೀ,ಹುಡುಗಿ, ಓಡುತ್ತದೆ, ಸ್ತ್ರೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತ್ರೀ
ನಿತ್ಯ ನಪುಂಸಕ ಲಿಂಗಗಳು
ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.
ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು
ವಾಚ್ಯ ಲಿಂಗಗಳು
ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ.
ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ ನೀನು ಗಂಡಸು — ಪು
ಕೆಟ್ಟ ಹುಡುಗಿ——ಸ್ತ್ರೀ
ಕೆಟ್ಟ ನಾಯಿ——ನಪುಂ
ನಾನು ದೊಡ್ಡವನು——ಪು
ನಾನು ದೊಡ್ಡವಳು—–ಸ್ತ್ರೀ
ನಾನು ದೊಡ್ಡದು——ನಪುಂ
_________________________________________
ನಾಮಪದದ ಎಂದರೇನು? ನಾಮಪದದ ವಿಧಗಳು ಯಾವುವು?
ನಾಮ ಪದ ( ನಾಮ ಪ್ರಕೃತಿ): ಭಾಷೆಯಲ್ಲಿನ ಬಗೆ ಬಗೆಯ ಹೆಸರುಗಳನ್ನು ತಿಳಿಸುವುದೇ ನಾಮ ಪದ (ಪ್ರಕೃತಿ)
ಉದಾ: ರಾಮ, ಸೀತೆ, ಗಿಡ ಮರ, ಇತ್ಯಾದಿ
ಇದರಲ್ಲಿ 2 ವಿಧ
ಸಹಜ ನಾಮಪದ: ಮೂಲದಿಂದಲೂ ಸಹಜವಾಗಿ ಬಳಕೆಯಾಗುವ ಪದಗಳು
ಉದಾ: ರಾಮ, ಸೀತೆ, ಗಿಡ, ಮರ, ಶಾಲೆ ಇತ್ಯಾದಿಿ
ಸಾಧಿತ ನಾಮಪದ: ಒಂದು ನಾಮಪದವು ತಧ್ಧಿತ ಪ್ರತ್ಯಯೇ ಪಡೆದು ಇನ್ನೊಂದನ್ನು
ಪಡೆದುಕೊಳ್ಳುವುದು, ಅಥವಾ 2ಅಥವಾ 2 ಕಿಂತ ಹೆಚ್ಚುನಾಮ್ಪಪದಗಳು ಸೇರಿ ಒಂದೆ ಪದ
ಸಿದ್ಧಗೊಳ್ಳುವುದು ಅಥವಾ ಧಾತು ಅಥವಾ ಕ್ರಿಯಾ ಪ್ರತೇಯವನ್ನು ಪಡೆದು ಪದ ಸಿದ್ಧಗೊಂಡರೆ
ಅದಕ್ಕೆ ಸಾಧಿತ ನಾಮ ಪದ ಎನ್ನುವರು.
ಉದಾ: ಮಾಲೆ+ಗಾರ= ಮಾಲೆಗಾರ
ಕನಸು + ಇದ್ದರೆ; ಕನಸುಗಾರ
ಹೃದಯ+ವಂತ+ ಹೃದಯವಂತ
ನಾಮಪದಗಳಲ್ಲಿ 4 ವಿಧ ಇವುಗಳನ್ನು ಅವುಗಳ ಸ್ಬರೂಪದ ಹಿನ್ನೆಲೆಯಲ್ಲಿ ವಿಂಗಡಿಸಲಾಗಿದೆ.
I )ವಸ್ತು ವಾಚಕ ನಾಮಪದ: ವಸ್ತು ಹೆಸರುಗಳನ್ನು ತಿಳಿಸುವ ಶಬ್ದಗಳು:
ಉದಾ: ರಾಮ..ಸೀತೆ, ಗುಡ್ದ, ಬೆಟ್ಟ, ಇತ್ಯಾದಿ
ಇದರಲ್ಲಿ 3 ವಿಧ
1. ರೂಡನಾಮ: ರೂಡಿಯಿಂದ ಬಂದ ಹೆಸರುಗಳು
ಉದಾ: ಹುಡುಗ, ಹುಡುಗಿ ಮನುಷ್ಯ ಇತ್ಯಾದಿ
2. ಅಂಕಿತನಾಮ: ಗುರುತಿಸಲು ಬಳಿಸುವ ಪದಗಳು
ಉದಾ: ರಾಮ. ಸೀತೆ, ಬೆಂಗಳೂರು, ಭಾರತ
3. ಅನ್ವರ್ಥನಾಮ: ಅಂಗವ್ಯಕಲ್ಯ ಮತ್ತು ವೃತ್ತಿಯನ್ನು ಗುರಿತಿಸುವುದು;
ಉದಾ: ಕುಂಟ, ಕುರುಡ, ವೈದ್ಯ. ಶಿಕ್ಷಕಿ, ವಕೀಲ,
II )ವಿಶೇಷಣ ವಾಚಕ: ಗುಣ ಮತ್ತು ಸ್ವಭಾವಗಳನ್ನು ತಿಳಿಸುವುದು. ವಿಶೇಷಣ
ಉದಾ:ಬಿಳಿಯ ಬಟ್ಟೆ, ಓಡುವ ಗಾಡಿ, ಸುಂದರ ಯುವತಿ, ಭವ್ಯ ಕಟ್ಟಡ, ಗಂಗೆ, ಹಿರಿಯ ವಿಜ್ನಾನಿ, ಕೊದ್ದಂಡ ರಾಮ, ಕರಿಯಾ ಮೋಡ, ಚಿಕ್ಕ ಬಾಲೆ, ಶ್ರೇಷ್ಠ ಕಾವ್ಯ
ಇದರಲ್ಲಿ 5 ವಿಧಗಳು
1 ಗುಣವಾಚಕ: ಗುಣಸ್ವರೂಪಗಳನ್ನು ತಿಳಿಸುವ ನಾಮಪದ.
ಉದಾ: ದೊಡ್ಡ, ಚಿಕ್ಕ, ಒಳ್ಳೆಯ ಕೆಟ್ಟ, ಇತ್ಯಾದಿ.
2. ಸಂಖ್ಯಾವಾಚಕ: ಸಂಖ್ಯಗಳನ್ನು ತಿಳಿಸುವ ಪದಗಳು
ಉದಾ: ಒಂದಾನೊಂದು, ಎಂಟನೇಯ ತರಗತಿ,
ಮೂರನೇ ದರ್ಜೆ, ಇಮ್ಮಡಿ,ನಾಲ್ವಡಿ,
3. ಪರಿಮಾಣವಾಚಕ: ನಿರ್ಧಿಷ್ಟವಲ್ಲದ ಪರಿಮಣ & ಗಾತ್ರವನ್ನು ತಿಳಿಸುವುದು, \
ಉದಾ: ಸ್ವಲ್ಪ. ಕಡಿಮೆ, ಹೆಚ್ಛು. ಹಲವು, ಕೆಲವು, ಸುಮಾರು ಇತ್ಯಾದಿ.
4. ಪ್ರಕಾರವಾಚಕ: ನಿಜಸ್ಥಿತಿಯನ್ನು ತಿಳಿಸುವುದು. ಉದಾ: ಅಂಥ, ಇಂಥ, ಎಂಥ, ಅಂಥಹಾ, ಇಂಥಹಾ,
5. ದಿಗ್ವಾಚಕ: ದಿಕ್ಕುಗಳನ್ನು ತಿಳಿಸುವುದು:
ಊದಾ: ಉಈಪೂಅದನೈಪವ
ಮೂಪಬತೆಂೆಂೆಂೆ.
No comments:
Post a Comment