ಶಿಕ್ಷಣವೇ ಶಕ್ತಿ

Saturday 10 April 2021

ಲೋಹಗಳಿಗೆ ಸಂಬಂಧಿಸಿದ 35 ಸಾಮಾನ್ಯ ಪ್ರಶ್ನೆಗಳು


1. ಎಲೆಕ್ಟ್ರಾನ್‍ಗಳನ್ನು ಬಿಟ್ಟು ಕೊಡುವ ಗುಣವುಳ್ಳ ಧಾತುಗಳು ಯಾವುದು?
• ಲೋಹಗಳು
2. ಚಾಕುವಿನಿಂದ ಕತ್ತರಿಸಿವಷ್ಟು ಮೃದುವಾದ ಲೋಹ ಯಾವುದು?
• ಸೋಡಿಯಂ
3. ಪತ್ರಶೀಲತ್ವ ಮತ್ತು ತಾಂತವತೆ ಇಲ್ಲ ಲೋಹಗಳು ಯಾವುವು?
• ಸತು ಮತ್ತು ಕ್ಷಾರ ಲೋಹಗಳು
4. ರಾಜ ಲೋಹ ಯಾವುದು?
 ಚಿನ್ನ
5. ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವ ಲೋಹಗಳು ಯಾವುವು?
• ಚಿನ್ನ, ಪ್ಲಾಟಿನಂ, ಬೆಳ್ಳಿ
6. ಈ ಲೋಹದ ರಿಬ್ಬನ್ನನ್ನು ಜ್ವಾಲೆಯಲ್ಲಿ ಉರಿಸಿದಾಗ ಪ್ರಕಾಶಮಾನವಾಗಿ ಉರಿಯುತ್ತದೆ. ಈ ಲೋಹ ಯಾವುದು?
• ಮೆಗ್ನಿಷಿಯಂ
7. ಗಾಳಿಯೊಂದಿಗೆ ವರ್ತಿಸಿದೆ ಇರುವ ಲೋಹಗಳು ಸಾರವರ್ಧನೆ

• ಚಿನ್ನ ಮತ್ತು ಪ್ಲಾಟಿನಂ
8. ಭೂಮಿಯಲ್ಲಿ ಯಥೇಚ್ಚವಾಗಿ ದೊರೆಯುವ ಲೋಹ ಯಾವುದು?
• ಅಲ್ಯೂಮಿನಿಯಂ
9. ದುರ್ಬಲ ನೈಟ್ರಿಕ್ ಆಮ್ಲದೊಂದಿಗೆ ವರ್ತಿಸದೇ ಇರುವ ಲೋಹ ಯಾವುದು?
• ಕಬ್ಬಿಣ
10. ಕಬ್ಬಿಣವನ್ನು ಯಾವ ಕುಲುಮೆಯಲ್ಲಿ ಉದ್ಧರಿಸುತ್ತಾರೆ?
• ಊದುಕುಲುಮೆ
11. ಊದು ಕುಲುಮೆಯಲ್ಲಿ ದೊರೆಯುವ ಕಬ್ಬಿಣ ಯಾವುದು?
• ಬೀಡುಕಬ್ಬಿಣ
12. ಕಬ್ಬಿಣದ ಉದ್ಧರಣದಲ್ಲಿ ದೊರೆಯುವ ಕಿಟ್ಟ ಯಾವುದು?
• ಕ್ಯಾಲ್ಸಿಯಂ ಸಿಲಿಕೇಟ್
13. ತಾಮ್ರದ ಉದ್ಧರಣದಲ್ಲಿ ದೊರೆಯುವ ಕಿಟ್ಟ ಯಾವುದು?
• ಫೆರಸ್ ಸಿಲಿಕೇಟ್
14. ತಾಮ್ರದ ಉದ್ಧರಣದಲ್ಲಿ ಅದುರಿಗೆ ಯಾವುದನ್ನು ಸೇರಿಸಿ ಕಿಟ್ಟವನ್ನು ಹೊರತೆಗೆಯುವರು?
• ಮರಳು
15. ಅಲ್ಯೂಮಿನಿಯಂ ಅದಿರಿನ (ಬಾಕ್ಸೈಟ್) ಸಾರವರ್ಧನೆಯಲ್ಲಿ ಬೆರೆಸುವ ದ್ರಾವಣ ಯಾವುದು?
• ಸೋಡಿಯಂ ಹೈಡ್ರಾಕ್ಸೈಡ್
16. ಸೀಮೆಎಣ್ಣೆಯಲ್ಲಿ ಸಂಗ್ರಹಿಸುವ ಲೋಹ ಯಾವುದು?
• ಸೋಡಿಯಂ
17. ತಣ್ಣಿರಿನಲ್ಲಿ ಸಂಗ್ರಹಿಸುವ ಲೋಹ ಯಾವುದು?
• ಬಿಳಿರಂಜಕ

18. ಲೋಹಗಳು ನೀರಿನೊಂದಿಗೆ ಪ್ರತಿಕ್ರಿಯಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು?
• ಹೈಡ್ರೋಜನ್
19. ತಾಮ್ರವನ್ನು ಶುದ್ಧೀಕರಿಸುವ ವಿಧಾನ ಯಾವುದು?
• ವಿದ್ಯುದ್ವಿಶ್ಲೇಷಣೆ
20. ತಾಮ್ರದ ಶುದ್ಧೀಕರಣದಲ್ಲಿ ಬಳಸುವ ವಿದ್ಯದ್ವಿಭಾಜ್ಯ ಯಾವುದು?
• ತಾಮ್ರದ ಸಲ್ಫೇಟ್
21. ಅತ್ಯುತ್ತಮವಾದ ಉಷ್ಣ ಮತ್ತು ವಿದ್ಯುತ್ ವಾಹಕ ಲೋಹ ಯಾವುದು?
• ಬೆಳ್ಳಿ ಮತ್ತು ತಾಮ್ರ
22. ಅಶುದ್ಧವಾದ ತಾಮ್ರ ಯಾವುದು?
• ಬೊಬ್ಬೆ ತಾಮ್ರ
23. ಸಲ್ಫೈಟ್ ಅದಿರುಗಳನ್ನು ಸಾರವರ್ಧಿಸುವ ವಿಧಾನ ಯಾವುದು?
• ಬುರುಗುಪ್ಲವನ
24. ದ್ರವ ಲೋಹಗಳು ಯಾವುವು?
• ಪಾದರಸ ಮತ್ತು ಗ್ಯಾಲಿಯಂ
25. ಮಾನವನು ಅತ್ಯಧಿಕವಾಗಿ ಬಲಸುತ್ತಿರುವ ಲೋಹ ಯಾವುದು?
• ಕಬ್ಬಿಣ
26. ಲೋಹಗಳನ್ನು ತಂತಿಗಳನ್ನಾಗಿ ಮಾಡುವ ಗುನ ಯಾವುದು?
• ತನ್ಯ(ತಾಂತವತೆ)
27. ಲೋಹಗಳನ್ನು ತಗಡುಗಳನ್ನಾಗಿ ಮಾಡುವ ಗುಣ ಯಾವುದು?
• ಕುಟ್ಯ(ಪತ್ರಶೀಲತ್ವ)
28. ಅತ್ಯಂತ ಹಗುರ ಲೋಹ ಯಾವುದು?
• ಲಿಥಿಯಂ
29. ಯಾವ ಲೋಹವನ್ನು ಕ್ಲೋರಿನ್ ತುಂಬಿರುವ ಜಾಡಿಯಲ್ಲಿ ಹಾಕಿದಾಗ ಕಿಡಿಗಳು ಕಂಡುಬರುತ್ತವೆ?
• ಅಲ್ಯೂಮಿನಿಯಂ
30. ನೈಸರ್ಗಿಕವಾಗಿ ದೊರೆಯುವ ಲೋಹಿಯ ಮಿಶ್ರಣಗಳಿಗೆ ಎನೆನ್ನುತ್ತಾರೆ?
• ಖನಿಜಗಳು
31. ಯಾವ ಯಾವ ಖನಿಜಗಳಿಂದ ಆಯಾ ಲೋಹಗಳನ್ನು ಉದ್ಧರಿಸಬಹುದೋ ಆ ಖನಿಜಗಳನ್ನು ಎನೆನ್ನುತ್ತಾರೆ?
• ಅದಿರು
32. ಲೋಹಗಳನ್ನು ಅವುಗಳ ಅದಿರಿನಿಂದ ಉದ್ಧರಿಸಿ ಅವುಗಳನ್ನು ಶುದ್ಧೀಕರಿಸುವ ತಂತ್ರಜ್ಞಾನ ಯಾವುದು?
• ಲೋಹೋದ್ಧರಣ
33. ಲೋಹೋದ್ಧರಣದ ಮೊದಲ ಹಂತ ಯಾವುದು?
• ಅದುರಿನ ಸಾರವರ್ಧನೆ
34. ಅದುರಿನ ಜೊತೆ ಇರುವ ಮಣ್ಣು, ಕಲ್ಲು ಮುಂತಾದ ಭೌಮಿಕ ಪದಾರ್ಥಗಳಿಗೆ ಹೀಗೆನ್ನುವರು?
• ಮಡ್ಡಿ
35. ಅದುರಿನ ಜೊತೆ ಇರುವ ಭೌಮಿಕ ಪದಾರ್ಥಗಳನ್ನು ಬೇರ್ಪಡಿಸಿ ಅದುರಿನಲ್ಲಿ ಲೋಹದ ಪ್ರಮಾಣವನ್ನು ಹೆಚ್ಚಿಸುವ ಕ್ರಿಯೆ ಗೆ ಏನೆಂದು ಹೆಸರು?
• ಅದುರಿನ ಸಾರವರ್ಧನೆ 

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು