✅ಬಂದರುಗಳು
# ಬಂದರು ಹಡಗುಗಳು, ದೋಣಿಗಳು, ಮತ್ತು ಸರಕು ದೋಣಿಗಳು ಬಿರುಗಾಳಿಯ ಹವೆಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲಾಗುತ್ತದೆ, ಮುಖ್ಯವಾಗಿ ವ್ಯಾಪಾರಕ್ಕೆ ಉತ್ತಮ ಸಾರಿಗೆ ಸಂಪರ್ಕವಾಗಿದೆ.
# ಬಂದರುಗಳು ನೈಸರ್ಗಿಕ ಅಥವಾ ಕೃತಕವಾಗಿರಬಹುದು. ಕೃತಕ ಬಂದರು ಉದ್ದೇಶಪೂರ್ವಕವಾಗಿ ನಿರ್ಮಿಸಿದ ಅಲೆತಡೆಗಳನ್ನು ಕಡಲಗೋಡೆಗಳನ್ನು ಅಥವಾ ಜೆಟ್ಟಿಗಳನ್ನು ಹೊಂದಿರುತ್ತದೆ. ಅಥವಾ ಅವುಗಳನ್ನು ಹೂಳೆತ್ತುವ ಮೂಲಕ ನಿರ್ಮಿಸಲು ಸಾಧ್ಯ. ಮತ್ತಷ್ಟು ಆವರ್ತಕ ಹೂಳೆತ್ತುವಿಕೆ ಮೂಲಕ ಅವುಗಳ ನಿರ್ವಹಣೆ ಅಗತ್ಯವಿರುತ್ತದೆ.
# ಭಾರತದ 90% ವಿದೇಶ ವ್ಯಾಪಾರವು ಹಡಗುಗಳ ಮುಖಾಂತರ ನಡೆಯುತ್ತದೆ.
# ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.
# ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.
$.ಬಂದರು:ಮುಂಬಯಿ
ರಾಜ್ಯ:ಮಹಾರಾಷ್ಟ್ರ
ವಿಶೇಷ:ಇದು ಸ್ವಾಭಾವಿಕ ಬಂದರಾಗಿದ್ದು ದೇಶದಲ್ಲೇ ಅತಿ ದೊಡ್ಡದು.
ರಪ್ತು:ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು
ಆಮದು:ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು
$.ಬಂದರು :ಚೆನ್ನೈ
ರಾಜ್ಯ :ತಮಿಳುನಾಡು
ವಿಶೇಷ :ಪೂರ್ವ ಕರಾವಳಿಯ ಕೃತಕ ಬಂದರು.
ರಫ್ತು:ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.
ಆಮದು:ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.
$.ಬಂದರು:ಕೊಲ್ಕತ್ತ
ರಾಜ್ಯ :ಪಶ್ಚಿಮ ಬಂಗಾಳ
ವಿಶೇಷ:ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್ನಿಂದ ನೀರನ್ನು ಹರಿಸಲಾಗುತ್ತದೆ.
ರಫ್ತು :ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,
ಆಮದು:ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.
$.ಬಂದರು :ವಿಶಾಖಪಟ್ಟಣ
ರಾಜ್ಯ :ಆಂಧ್ರಪ್ರದೇಶ
ವಿಶೇಷ :ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು
ರಫ್ತು :ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,
ಆಮದು :ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ
$.ಬಂದರು:ಮರ್ಮಗೋವಾ
ರಾಜ್ಯ :ಗೋವಾ
ವಿಶೇಷ:ಸ್ವಾಭಾವಿಕ ಬಂದರಾಗಿದೆ.
ರಫ್ತು :ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು, ಎಲೆ.
ಆಮದು:ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ
$.ಬಂದರು:ಕೊಚ್ಚಿನ್
ರಾಜ್ಯ:ಕೇರಳ
ವಿಶೇಷ:ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.
ರಫ್ತು :ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.
ಆಮದು :ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.
$.ಬಂದರು :ಕಾಂಡ್ಲಾ
ರಾಜ್ಯ :ಗುಜರಾತ್
ವಿಶೇಷ :ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.
ರಫ್ತು :ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.
ಆಮದು:ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.
$.ಬಂದರು:ಪಾರಾದೀಪ
ರಾಜ್ಯ:ಒರಿಸ್ಸಾ
ವಿಶೇಷ :ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.
ರಫ್ತು :ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು
ಆಮದು:ಯಂತ್ರಗಳು,
$.ಬಂದರು :ನವ ಮಂಗಳೂರು
ರಾಜ್ಯ:ಕರ್ನಾಟಕ
ವಿಶೇಷ :ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.
ರಫ್ತು :ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.
ಆಮದು :ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.
$.ಬಂದರು :ಟುಟಿಕಾರಿನ್
ರಾಜ್ಯ:ತಮಿಳುನಾಡು
ವಿಶೇಷ :ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರ
ು. ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)
ರಫ್ತು :ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು
ಆಮದು:ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು
$.ಬಂದರ:ನವಶೇವಾ (ಜವಾಹರ್ ಲಾಲ್ ನೆಹರು ಬಂದರು)
ರಾಜ್ಯ:ಮಹಾರಾಷ್ಟ್ರ
ವಿಶೇಷ :ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು.
==================================
ಸಂಗ್ರಹ✍️T.A.ಚಂದ್ರಶೇಖರ
No comments:
Post a Comment