ವಿಶ್ವದ ಅದ್ಭುತಗಳು
ADD ARTICLE DESCRIPTION
ವಿಶ್ವದಲ್ಲಿಯ ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. ಪ್ರಾಚೀನ ವಿಶ್ವದ ಏಳು ಅದ್ಭುತಗಳು ಈ ರೀತಿಯ ಪಟ್ಟಿ ಗಳಲ್ಲಿ ಮೊದಲನೆಯದು. ಈ ಪಟ್ಟಿಯಲ್ಲಿ ಮಾನವನಿರ್ಮಿತ ಉತ್ಕೃಷ್ಟ ಪ್ರಾಚೀನಾವಶೇಷಗಳನ್ನು ಹೆಲೆನಿಕ್ ಸ್ಥಳ ವೀಕ್ಷಕರ ಮಾಹಿತಿ ಗ್ರಂಥದಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪಟ್ಟಿ ಮಾಡಿದವುಗಳೆಲ್ಲ ಮೆಡಿಟರೇನಿಯನ್ ಭಾಗದಲ್ಲಿರುವವುಗಳಾಗಿವೆ. ಸಂಖ್ಯೆ 7 ಪರಿಪೂರ್ಣತೆ ಮತ್ತು ಅಧಿಕ್ಯವನ್ನು ಪ್ರತಿನಿಧಿಸುತ್ತದೆ ಎಂದು ಗ್ರೀಕರ ನಂಬಿಕೆಯಿರುವುದರಿಂದ ಈ ಸಂಖ್ಯೆಯನ್ನು ಅಯ್ಕೆಮಾಡಿಕೊಳ್ಳಲಾಗಿದೆ. ಮಧ್ಯಯುಗ ಮತ್ತು ಆಧುನಿಕ ಯುಗದ ಅದ್ಭುತಗಳ ಪಟ್ಟಿಯ ಜೊತೆಗೆ ಇದೇ ರೀತಿಯ ಇನ್ನೂ ಹಲವಾರು ಪಟ್ಟಿಗಳನ್ನು ಮಾಡಲಾಗಿದೆ.
ಇತಿಹಾಸ ತಜ್ಞ ಹೆರೋಡೋಟಸ್ (484 BC–ca. 425 BC)ಮತ್ತು ಅಲೆಗ್ಸಾಂಡ್ರಿಯಾ ವಸ್ತು ಸಂಗ್ರಹಾಲಯದಲ್ಲಿದ್ದ ಸೈರೆನ್ನ ವಿದ್ವಾಂಸ ಕ್ಯಾಲಿಮ್ಯಾಕಸ್, ಏಳು ಅದ್ಭುತಗಳ ಪಟ್ಟಿಯನ್ನು ಮುಂಚಿತವಾಗಿಯೇ ರಚಿಸಿದ್ದರೂ ಉಲ್ಲೇಖ ಹೊರತುಪಡಿಸಿ ಅವನ ಬರವಣಿಗೆ ಅಸ್ತಿತ್ವದಲ್ಲಿ ಉಳಿಯಲಿಲ್ಲ. ಪ್ರಾಚೀನ ಜಗತ್ತಿನ ಏಳು ಅದ್ಭುತಗಳು ಈ ರೀತಿ ಇವೆ:
- ೧.ಗೀಜಾದ ಮಹಾ ಪಿರಾಮಿಡ್
- ೨.ಬ್ಯಾಬಿಲೊನ್‌ನ ತೂಗು ಉದ್ಯಾನ
- ೩.ಒಲಿಂಪಿಯಾದ ಜೂಸ್‌ನ ಪ್ರತಿಮೆ
- ೪.ಎಫೆಸಿಸ್ ನಲ್ಲಿರುವ ಆರ್ತೆಮಿಸ್ ದೇವಾಲಯ
- ೫.ಹ್ಯಾಲಿಕಾರ್ನೆಸಸ್‌ನಲ್ಲಿರುವ ಮುಸ್ಸೊಲಸ್‌ನ ಭವ್ಯ ಸಮಾಧಿ
- ೬.ರೋಡ್ಸ್‌ನ ಬೃಹದಾಕಾರದ ಪ್ರತಿಮೆ
- ೭.ಅಲೆಗ್ಸಾಂಡ್ರಿಯಾದ ದೀಪಸ್ತಂಭ
ಹಿಂದಿನ ಪಟ್ಟಿಯು ಅಲೆಗ್ಸಾಂಡ್ರಿಯಾದ ದೀಪಸ್ತಂಭದ ಬದಲಾಗಿ ಇಶ್ತಾರ್ ಗೇಟ್ನ್ನು ಜಗತ್ತಿನ ಏಳನೆಯ ಅದ್ಭುತವಾಗಿ ಗುರುತಿಸಿತ್ತು. ಗ್ರೀಕ್‌ರೂ ಕೂಡ ಒಂದು ಪಟ್ಟಿಯನ್ನು ಮಾಡಿದ್ದು, ಅದನ್ನು ವಿಶ್ವದ ಅದ್ಭುತಗಳ ಪಟ್ಟಿ ಎಂದು ಕರೆಯಲಾಗುವುದಿಲ್ಲ. ಆದರೆ ಅದನ್ನು ಅವರು ತೌಮಾಟಾ (ಗ್ರೀಕ್:Θαύματα ), ಇದನ್ನು, "ನೋಡಲೇಬೇಕಾದಂತವುಗಳು" ಎಂದು ಸುಮಾರಾಗಿ ಅರ್ಥೈಸಬಹುದು. ಇಂದು ನಮಗೆ ತಿಳಿದಿರುವ ಪಟ್ಟಿಯು ಸಕಲನಗೊಂಡಿದ್ದು ಮಧ್ಯ ಯುಗೀನ ಕಾಲದಲ್ಲಿ, ಆ ಸಮಯದಲ್ಲಾಗಲೇ ಹಲವಾರು ಸ್ಥಳಗಳು ಅಸ್ತಿತ್ವದಲ್ಲಿ ಉಳಿದಿರಲಿಲ್ಲ. ಈಗ, ಇಂದಿಗೂ ಅಸ್ತಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ವಿಶ್ವದ ಅದ್ಭುತವೆಂದರೆ ಅದು ಗೀಜಾದ ಮಹಾ ಪಿರಾಮಿಡ್.
- ಬಹಳಷ್ಟು ಅದ್ಭುತಗಳು ಮಧ್ಯಯುಗದ ಸಮಯದಲ್ಲಿ ಅಸ್ತಿತ್ವದಲ್ಲಿದ್ದವುಗಳಾಗಿವೆ. ಮಧ್ಯಯುಗ ಅನ್ನುವ ಶಬ್ಧವೇ ಆ ಕಾಲದಲ್ಲಿ ಚಾಲ್ತಿಯಲ್ಲಿರಲಿಲ್ಲ. ಬೌದ್ಧಿಕ ಉಚ್ಚ್ರಾಯದ ಕಾಲದಲ್ಲಿ ಆ ಶಬ್ಧ ಹಾಗೂ ಪರಿಕಲ್ಪನೆ ಮೂಡಿಬಂತು. 16 ನೇ ಶತಮಾನದ ನಂತರವೇ ಮಧ್ಯಯುಗ ಅನ್ನುವ ಪರಿಕಲ್ಪನೆ ಪ್ರಸಿದ್ಧಿಗೆ ಬಂತು. ಮಧ್ಯಯುಗದ ನಂತರ ರಚಿಸಿದ್ದು ಎಂದು ತಿಳಿಸುತ್ತಾ ಬ್ರೆವರ್ ಇದನ್ನು "ನಂತರದ ಪಟ್ಟಿ(ಗಳು)" ಎಂದು ಗುರುತಿಸುತ್ತಾನೆ.
- ಈ ಪಟ್ಟಿಯಲ್ಲಿರುವ ಹಲವಾರು ರಚನೆಗಳು ಮಧ್ಯಯುಗಕ್ಕಿಂತಲೂ ಮುಂಚಿತವಾಗಿಯೇ ಕಟ್ಟಲ್ಪಟ್ಟಿದ್ದು, ಅದಾಗಲೇ ಪ್ರಸಿದ್ಧಿಯಾಗಿದ್ದವು.
- ಈ ಪಟ್ಟಿಗಳು "ಮಧ್ಯಯುಗೀನ ಅದ್ಭುತಗಳು"(ಏಳು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಮಿತಿಯನ್ನು ಸೂಚಿಸಲಾಗಿಲ್ಲ), "ಮಧ್ಯಯುಗೀನ ಏಳು ಅದ್ಭುತಗಳು", "ಮಧ್ಯಯುಗದ ವಾಸ್ತುಶಿಲ್ಪದ ಅದ್ಭುತಗಳು ಮತ್ತು ಮಧ್ಯಕಾಲಿನ ಮನಸ್ಸುಗಳು" ಎಂಬ ಹೆಸರನ್ನು ಹೊಂದಿದ್ದವು. ಮಧ್ಯ ಯುಗದ ಏಳು ಪ್ರಧಾನ ಅದ್ಭುತಗಳ ವಿಶಿಷ್ಟ ಪ್ರತಿನಿಧಿಗಳು :
- ೧.ಸ್ಟೋನ್‌ಹೆಂಜ್
- ೨.*ಬಯಲುಕುಸ್ತಿ ಪ್ರಾಂಗಣ
- ೩.ಕೊಮ್ ಎಲ್ ಸೊಕ್ಯಾಫಾ ಕ್ಯಾಟಕೊಂಬ್
- ೪.ಚೀನಾದ ಮಹಾ ಗೋಡೆ
- ೫.ನಾನ್‌ಜಿಂಗ್‌ನ ಪಿಂಗಾಣಿ ಗೋಪುರ
- ೬.ಹ್ಯಾಗಿಯಾ ಸೊಫಿಯ
- ೭.ಪೀಸಾದ ವಾಲುಗೋಪುರ
ಈ ಪಟ್ಟಿಗಳಲ್ಲಿರುವ ಇತರ ಸ್ಥಳಗಳು:
- ೧.ತಾಜ್ ಮಹಲ್
- ೨.ಕೈರೊ ಕೋಟೆ
- ೩.ಎಲಿ ಪ್ರಧಾನ ಚರ್ಚ್
- ೪.ಕ್ಲೂನಿ ಚರ್ಚ್
ಆಧುನಿಕ ಯುಗದಲ್ಲಿ ನಿರ್ಮಾಣವಾದ ಶ್ರೇಷ್ಠ ರಚನೆಗಳನ್ನು ಅಥವಾ ಪ್ರಸ್ತುತ ವಿಶ್ವದಲ್ಲಿರುವ ಅದ್ಭುತಗಳನ್ನು ನಮೂದಿಸುವ ಸಲುವಾಗಿ ಅನೇಕ ಪಟ್ಟಿಗಳನ್ನು ರಚಿಸಲಾಗಿದೆ. ಕೆಲವು ಗಮನಾರ್ಹವಾದ ಪಟ್ಟಿಗಳನ್ನು ಈ ಕೆಳಗೆ ನೀಡಲಾಗಿದೆ.
ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್
ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್ ಆಧುನಿಕ ವಿಶ್ವದ ಅದ್ಭುತಗಳನ್ನು ಪಟ್ಟಿ ಮಾಡಿದೆ.
ಆದ್ಭುತಗಳು | ಆರಂಭಗೊಂಡ ದಿನಾಂಕ | ಮುಕ್ತಾಯಗೊಂಡ ದಿನಾಂಕ | ಸ್ಥಳ |
ಸುರಂಗ ಕಾಲುವೆ | ಡಿಸೆಂಬರ್ 1, 1987 | ಮೇ 6, 1994 | ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್ ನಡುವಿನ ಡೊವರ್ ಜಲಸಂಧಿ |
ಸಿಎನ್ ಗೋಪುರ | ಫೆಬ್ರುವರಿ 6, 1973 | ಜೂನ್ 26, 1976, ಯಾವುದೇ ಆಧಾರವಿಲ್ಲದೆ ನಿಂತಿರುವ ಜಗತ್ತಿನ ಅತ್ಯಂತ ಎತ್ತರದ ಗೋಪುರ 1976-2007. | ಟೊರಾಂಟೊ, ಒಂಟೆರಿಯೊ, ಕೆನಡಾ |
ಎಂಪೈರ್ ಸ್ಟೇಟ್ ಬಿಲ್ಡಿಂಗ್ | ಜನವರಿ 22, 1930 | ಮೇ 1, 1931, ಜಗತ್ತಿನ ಅತ್ಯಂತ ಎತ್ತರದ ರಚನೆ 1931-1967. ನೂರಕ್ಕೂ ಹೆಚ್ಚು ಮಹಡಿ ಹೊಂದಿರವ ಮೊದಲ ಕಟ್ಟಡ | ನ್ಯೂಯಾಕ್೯, NY, U.S. |
ಗೋಲ್ಡನ್ ಗೇಟ್ ಸೇತುವೆ | ಜನವರಿ 5, 1933 | ಮೇ 27, 1937 | ಗೋಲ್ಡನ್ ಗೇಟ್ ಜಲಸಂಧಿ, ದಕ್ಷಿಣ ಸ್ಯಾನ್ ಪ್ರಾನ್ಸಿಸ್ಕೊ , ಕ್ಯಾಲಿಪೋರ್ನಿಯಾ,U.S. |
ಇತೈಪು ಆಣೆಕಟ್ಟು | ಜನವರಿ 1970 | ಮೇ 5, 1984 | ಬ್ರಾಜಿಲ್ ಮತ್ತು ಪೆರುಗ್ವೆ ನಡುವಿನ ಪರಾನ ನದಿ |
ಡೆಲ್ಟಾ ವರ್ಕ್ಸ್ ಜ್ಯೂಡರ್ಜಿ ವರ್ಕ್ಸ್ | 1950 | ಮೇ 10, 1997 | ನೆದರ್ಲೆಂಡ್ಸ್ |
ಪನಾಮ ಕಾಲುವೆ | ಜನವರಿ 1, 1880 | ಜನವರಿ7, 1914 | ಪನಾಮಾ ಭೂಸಂಧಿ |
ನ್ಯೂ 7 ವಂಡರ್ಸ್ ಪೌಂಡೇಷನ್ ಪಟ್ಟಿ ಮಾಡಿರುವ ವಿಶ್ವದ ಏಳು ಅದ್ಭುತಗಳು
- 2001ರಲ್ಲಿ ಮೊದಲ ಬಾರಿಗೆ ಸ್ವಿಸ್ ಕಾರ್ಫೊರೇಶನ್‌ನ ನ್ಯೂ 7 ವಂಡರ್ಸ್ ಸಂಸ್ಥೆಯು, ಪಟ್ಟಿಮಾಡಿರುವ 200 ಸ್ಮಾರಕಗಳಲ್ಲಿ ವಿಶ್ವದ ಹೊಸ ಏಳು ಅದ್ಭುತಗಳನ್ನ ಅಯ್ಕೆ ಮಾಡಿತು. ಮೊದಲು ಜನವರಿ 1, 2006. ರಲ್ಲಿ ಇಪ್ಪತ್ತೊಂದು ಅಂತಿಮ ಸ್ಪರ್ಧಿಗಳನ್ನು ಘೋಷಣೆ ಮಾಡಲಾಯಿತು.
- ಈಜಿಪ್ಟ್ ಈ ಸಂಗತಿಯಿಂದಾಗಿ ಅಷ್ಟು ಸಂತೋಷಗೊಳ್ಳಲಿಲ್ಲ. ಕೇವಲ ಮೂಲ ಅದ್ಭುತಗಳು ಅಂದರೆ ಸ್ವಾತಂತ್ರ್ಯ ದೇವಿ ಪ್ರತಿಮೆ, ಸಿಡ್ನಿಯ ಒಪೆರಾ ಹೌಸ್ ಹಾಗೂ ಇತರ ಚಾರಿತ್ರಿಕ ಹೆಗ್ಗುರುತುಗಳು ಮಾತ್ರ ಸ್ಪರ್ಧಿಸಬೇಕಿತ್ತು. ಆದ್ದರಿಂದ ಇದನ್ನು ಈಜಿಪ್ಟ್ ಇದೊಂದು ಅಸಂಬದ್ಧ ಯೋಜನೆಯೆಂದು ಹೆಸರಿಸಿತು. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೋಸ್ಕರ ಗೀಜಾವನ್ನು ಗೌರವಾರ್ಥ ಅಭ್ಯರ್ಥಿಯನ್ನಾಗಿ ಹೆಸರಿಸಲಾಯಿತು
- ಫಲಿತಾಂಶವನ್ನು ಜುಲೈ 7, 2007 ರಂದು ಪೋರ್ಚುಗಲ್ ಲಿಸ್‌ಬೊನ್‌ನಲ್ಲಿನ ಬೆನ್‌ಪಿಕಾ ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಘೋಷಿಸಲಾಯಿತು. ಅಂದು ಪ್ರಕಟಿಸಲಾದ ಅದ್ಭುತಗಳ ಪಟ್ಟಿಯನ್ನು ಕೆಳಗೆ ನಮೂದಿಸಲಾಗಿದೆ
ಅದ್ಭುತಗಳು | ರಚನೆಯ ದಿನಾಂಕ | ಸ್ಥಳ |
---|---|---|
ಚೀನಾದ ಮಹಾ ಗೋಡೆ | ಕ್ರಿ.ಪೂ 5 ನೇ ಶತಮಾನ –ಕ್ರಿ.ಶ 16ನೇ ಶತಮಾನ | ಚೀನಾ |
ಪೆಟ್ರಾ | c. 100 BCE | ಜೋರ್ಡಾನ್ |
ವಿಮೋಚಕ ಕ್ರಿಸ್ತ | ಆರಂಭ 12 ಅಕ್ಟೋಬರ್1931 | ಬ್ರೆಜಿಲ್ |
ಮಾಚು ಪಿಕು | c. 1450 | ಪೆರು |
ಚಿಚೆನ್ ಇಟ್ಜಾ | c. 600 | ಮೆಕ್ಸಿಕೊ |
ರೋಮ್‌ನ ಕೊಲೋಸಿಯಮ್ | ಮುಕ್ತಾಯ 80 CE | ಇಟಲಿ |
ತಾಜ್ ಮಹಲ್ | ಮುಕ್ತಾಯc. 1648 | ಭಾರತ |
ಗ್ರೇಟ್ ಪಿರಾಮಿಡ್ (ಗೌರವಾರ್ಥ ಅಭ್ಯರ್ಥಿ) | ಮುಕ್ತಾಯ c. ಕ್ರಿ.ಪೂ 2560 | ಈಜಿಪ್ಟ್ |
ಯು.ಎಸ್.ಎ ಟುಡೆಯ ಹೊಸ ಏಳು ಅದ್ಭುತಗಳು
- ನವೆಂಬರ್ 2006ರಲ್ಲಿ, ಅಮೇರಿಕಾದ ರಾಷ್ಟ್ಟ್ರೀಯ ವೃತ್ತ ಪತ್ರಿಕೆ ಯು.ಎಸ್.ಎ ಟುಡೆ ಅಮೇರಿಕಾದ ದೂರದರ್ಶನ ಕಾರ್ಯಕ್ರಮ ಗುಡ್ ಮಾರ್ನಿಂಗ್ ಅಮೇರಿಕಾ ದ ಸಹಯೋಗದೊಂದಿಗೆ ಆರು ತೀರ್ಪುಗಾರರಿಂದ ಆಯ್ಕೆಗೊಂಡ ವಿಶ್ವದ ಹೊಸ ಏಳು ಅದ್ಭುತಗಳನ್ನು ಬಹಿರಂಗಗೊಳಿಸಿತು.
- ದಿನಕ್ಕೊಂದರಂತೆ ವಾರದ ಏಳುದಿನ ಗುಡ್ ಮಾರ್ನಿಂಗ್ ಅಮೇರಿಕಾ ಕಾರ್ಯಕ್ರಮದಲ್ಲಿ ಅದ್ಭುತಗಳನ್ನು ಘೋಷಿಸಲಾಯಿತು. ಎಂಟನೆಯ ಅದ್ಭುತವು ನವೆಂಬರ್ 24ರಂದು ವೀಕ್ಷಕರ ಅಭಿಪ್ರಾಯದ ಮೇರೆಗೆ ಆಯ್ಕೆಯಾಯಿತು.
ಕ್ರಮ ಸಂಖ್ಯೆ | ಆದ್ಭುತ | ಪ್ರದೇಶ |
---|---|---|
1 | ಪೊಟಾಲಾ ಅರಮನೆ | ಲ್ಹಾಸಾ, ಟಿಬೇಟ್, ಚೀನಾ |
2 | ಜೆರುಸಲೆಮ್ ನ ಪ್ರಾಚೀನ ನಗರ | ಜೆರುಸಲೆಮ್, ಇಸ್ರೇಲ್ |
3 | ಧೃವ ಪ್ರದೇಶದ ಮಂಜುಗುಡ್ಡಗಳು | ಧೃವ ಪ್ರದೇಶ |
4 | ಪಾಪಾನೊಮ್‌ಮೌವ್‌ಕುಕಿ ಮರೈನ್‌ನ ರಾಷ್ಟ್ರೀಯ ಪ್ರತಿಮೆ | ಹವಾಯಿ, ಸಂಯುಕ್ತ ರಾಷ್ಟ್ರ |
5 | ಅಂತರ್ಜಾಲ | ಲಭ್ಯವಿಲ್ಲ |
6 | ಮಾಯಾ ಭಗ್ನಾವಶೇಷಗಳು | ಯುಕಾಟನ್ ಪೆನಿನ್ಸುಲಾ, ಮೆಕ್ಷಿಕೊ |
7 | ಸೆರೆಂಗೆಟಿ ಮತ್ತು ಮಸೈ ಮಾರಾದ ಮಹಾವಲಸೆ | ತಾಂಜಾನಿಯ ಮತ್ತು ಕೀನ್ಯಾ |
8 | ಮಹಾ ಕಣಿವೆ (ವೀಕ್ಷಕರಿಂದ ಆಯ್ಕೆಗೊಂಡ ಎಂಟನೆಯ ಅದ್ಭುತ) | ಅರಿಜೊನಾ, ಸಂಯುಕ್ತ ರಾಷ್ಟ್ರ |
ವಿಶ್ವದ ಏಳು ನೈಸರ್ಗಿಕ ಅದ್ಭುತಗಳು
ಇತರ ಅದ್ಭುತಗಳ ಪಟ್ಟಿಯಂತೆ, ವಿಶ್ವದ ಹೊಸ ಏಳು ನೈಸರ್ಗಿಕ ಅದ್ಭುತಗಳ ಪಟ್ಟಿಗಳ ಬಗ್ಗೆ ಒಮ್ಮತವಿರಲಿಲ್ಲ, ಅಲ್ಲದೆ ವಿವರಗಳ ಪಟ್ಟಿ ಎಷ್ಟು ವಿಸ್ತಾರವಾಗಿರಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಸಿಎನ್ಎನ್ ನಿಂದ ಸಂಗ್ರಹಿಸಲ್ಪಟ್ಟ ವಿವರಗಳ ಒಂದು ಪಟ್ಟಿ :
- ೧.ಮಹಾ ಕಣಿವೆ
- ೨.ಮಹಾ ತಡೆಗೋಡೆ
- ೩.ರಿಯೊ ಡಿ ಜನೈರೊದ ಬಂದರು
- ೪.ಮೌಂಟ್ ಎವರೆಸ್ಟ್
- ೫.ಔರೋರಾ
- ೬.ಪರಿಕ್ಯೂಟಿನ್ ಜ್ವಾಲಾಮುಖಿ
- ೭.ವಿಕ್ಟೋರಿಯ ಜಲಪಾತ
ಜಾಗತಿಕ ಮತದಾನದ ಮೂಲಕ ಜನರಿಂದ ಆಯ್ಕೆಗೊಂಡ ಹೊಸ ಏಳು ನೈಸರ್ಗಿಕ ಅದ್ಭುತಗಳ ರಚನೆ ನ್ಯೂ ಸೆವೆನ್ ವಂಡರ್ಸ್ ಅಪ್ ನೇಚರ್‌ನ ಒಂದು ಸಮಕಾಲೀನ ಪ್ರಯತ್ನ. ಇದನ್ನು ಸಂಘಟಿಸಿದ್ದು ವಿಶ್ವದ ಹೊಸ ಏಳು ಅದ್ಬುತಗಳು ಎಂಬ ಕಾರ್ಯಾಚರಣೆಯನ್ನು ಆರಂಭಿಸಿದ್ದು ನ್ಯೂ ಒಪನ್ ವರ್ಲ್ಡ್ ಕಾರ್ಪೊರೇಶನ್ (NOWC) ಏಳು ನೈಸರ್ಗಿಕ ಅದ್ಭುತಗಳು:ಇದನ್ನು ಈಗಾಗಲೆ ಸ್ಥಾಪಿಸಲ್ಪಟ್ಟಿರುವ ಏಳು ನೈಸರ್ಗಿಕ ಅದ್ಭುತಗಳನ್ನು ರಕ್ಷಣೆ ಮಾಡುವುದಕ್ಕೋಸ್ಕರ ರಚಿಸಲಾಗಿತ್ತು ಹೊರತು ಇದು ಲಾಭದ ಕಾರ್ಯಾಚರಣೆಯಾಗಿರಲಿಲ್ಲ.
ವಿಶ್ವದ ಜಲಾಂತರ್ಗತ ಏಳು ಅದ್ಭುತಗಳು
ವಿಶ್ವದ ಜಲಾಂತರ್ಗತ ಏಳು ಅದ್ಭುತಗಳ ಪಟ್ಟಿಯನ್ನು ರಚನೆ ಮಾಡಿದ್ದು ಸಮುದ್ರ ಸಂರಕ್ಷಣೆ ಮತ್ತು ಸಂಶೋಧನೆಗೆ ಮೀಸಲಾಗಿರುವ ಅಮೇರಿಕಾ ಮೂಲದ ಸಾಮಾಜಿಕ ಮೌಲ್ಯೋತ್ಪಾದಕ ಸಂಘಟನೆಯಾದ ಸಿಇಡಿಎಎಮ್ ಇಂಟರ್‌ನ್ಯಾಷನಲ್. ಸಂರಕ್ಷಣೆಗೆ ಯೋಗ್ಯವಾದ ನೀರೊಳಗಿನ ಪ್ರದೇಶವನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಿಇಡಿಎಎಮ್ 1989ರಲ್ಲಿ ಡಾ.ಯುಗೀನ್ ಕ್ಲಾರ್ಕ್ ಸೇರಿದಂತೆ ಜಲವಿಜ್ಞಾನಿ ತಜ್ಞರ ಸಮಿತಿ ರಚನೆ ಮಾಡಿತು. ಸೀ ಹಂಟ್ ಕಿರುತೆರೆ ಕಾಯ೯ಕ್ರಮದ ನಟ ಲಾಯಿಡ್ ಬ್ರಿಡ್ಜ್‌ಸ್ ವಾಷಿಂಗ್‌ಟನ್ ನ್ಯಾಶನಲ್ ಅಕ್ವೇರಿಯಮ್‌ನಲ್ಲಿ ಈ ಫಲಿತಾಂಶವನ್ನು ಘೋಷಿಸಿದರು.{3/
- ೧.ಪಾಲಾವ್
- ೨.ಬೆಲೈಜ್ ತಡೆಗೋಡೆ
- ೩.ಮಹಾ ತಡೆಗೋಡೆ
- ೪.ಆಳವಾದ ಸಮುದ್ರ ಕಿಂಡಿ
- ೫.ಗ್ಯಾಲಪಗೊಸ್ ದ್ವೀಪ
- ೬.ಬೈಕಲ್ ಸರೋವರ
- ೭.ದಕ್ಷಿಣದ ಕೆಂಪು ಸಮುದ್ರ
ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು
ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು ಎಂಬ ಪುಸ್ತಕ ಬರೆದವರು ಬ್ರಿಟೀಷ್ ಲೇಖಕ ದೆಬೋರಾ ಕ್ಯಾಡ್‌ಬರಿ. ಈ ಪುಸ್ತಕ ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಯಂತ್ರವಿಜ್ಞಾನದ ಏಳು ಅದ್ಭುತಗಳ ಕತೆಯನ್ನು ಹೇಳುತ್ತದೆ.ಈ ಪುಸ್ತಕದ ಮೇಲೆ 2003 ರಲ್ಲಿ ಬಿಬಿಸಿ ಏಳು ಭಾಗಗಳಿರುವ ಸಾಕ್ಷ್ಯಚಿತ್ರ ಸರಣಿಯನ್ನು ರಚಿಸಿತು. ಈ ಕೈಗಾರಿಕಾ ಅದ್ಭುತಗಳಲ್ಲಿ ಪ್ರತಿಯೊಂದನ್ನೂ ಈ ಮೊದಲು ಹೇಗೆ ಕಟ್ಟಿರಬಹುದು ಎಂಬುದನ್ನು ಈ ಸಾಕ್ಷ್ಯ ಚಿತ್ರಗಳಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಏಳು ಕೈಗಾರಿಕಾ ಅದ್ಭುತಗಳು:
- ೧.ಎಸ್ಎಸ್ ಗ್ರೇಟ್ ಈಸ್ಟರ್ನ್
- ೨.ಬೆಲ್ ರಾಕ್ ದೀಪಗೃಹ
- ೩.ಬ್ರೂಕ್ಲಿನ್ ಸೇತುವೆ
- ೪.ಲಂಡನ್ನ ಒಳಚರಂಡಿ ವ್ಯವಸ್ಥೆ
- ೫.ಮೊದಲ ಖಂಡಾಂತರದ ರೈಲು ಮಾರ್ಗ
- ೬.ಪನಾಮ ಕಾಲುವೆ
- ೭.ಹೂವರ್ ಆಣೆಕಟ್ಟು
ಜಗತ್ತಿನ ಪ್ರವಾಸಿ ಅದ್ಭುತಗಳು
ಪ್ರಮುಖ ಮಾನವ ನಿರ್ಮಿತ ಅದ್ಭುತಗಳ ಪಟ್ಟಿಯ ಸಂಕಲನಕಾರರಲ್ಲಿ ಪ್ರವಾಸಿ ಬರಹಗಾರನಾದ ಹಾವರ್ಡ್ ಹಿಲ್‌ಮನ್ ಕೂಡ ಒಬ್ಬ ಮತ್ತು ನೈಸರ್ಗಿಕ ಜಗತ್ತಿನ ಯಾತ್ರಿಕರ ಪ್ರವಾಸಿ ಅದ್ಭುತಗಳು:
ಮಾನವ ನಿರ್ಮಿತ ಪ್ರವಾಸಿ ಅದ್ಬುತಗಳು
- ಗೀಜಾದ ಪಿರಾಮಿಡ್ ಸಂಕೀರ್ಣ
- ಚೀನಾದ ಮಹಾ ಗೋಡೆ
- ತಾಜ್ ಮಹಲ್
- ಮಾಚು ಪಿಚು
- ಬಾಲಿ
- ಅಂಕೂರ್ ವಾಟ್
- ನಿಷೇಧಿತ ನಗರ
- ಬಾಗನ್ ದೇವಾಲಯ ಮತ್ತು ಪವಿತ್ರ ಭವನ
- ಕರ್ನಾಕ್ ದೇವಾಲಯ
- ಟಿಹೋತಿಹ್ಯೂಕಾನ್
ನೈಸರ್ಗಿಕ ಪ್ರವಾಸಿ ಅದ್ಭುತಗಳು
- ಸೆರೆಂಗೆಟಿ ವಲಸೆ
- ಗ್ಯಾಲಪಾಗೋಸ್ ಐಸ್‌ಲ್ಯಾಂಡ್
- ಬೃಹದ್ ಕಣಿವೆ
- ಇಗುವಾಜು ಜಲಪಾತ
- ಅಮೆಜಾನ್ ಮಳೆಕಾಡು
- ನುಗೊರೊಂಗೊರೊ ಜ್ವಾಲಾಮುಖಿ
- ಮಹಾ ತಡೆಗೋಡೆ
- ವಿಕ್ಟೋರಿಯಾ ಜಲಪಾತ
- ಬೋರಾ ಬೋರಾ
- ಕ್ಯಾಪಡೋಸಿಯ
- ವಿಶ್ವದ ಎಂಟನೆಯ ಅದ್ಭುತ
- ವಿಶ್ವ ಪರಂಪರಾ ಪಟ್ಟಿ-800ಕ್ಕಿಂತ ಹೆಚ್ಚು ಸ್ಥಳಗಳನ್ನು ಯುನೆಸ್ಕೊ "ಮಹೋನ್ನತ ಸಾರ್ವತ್ರಿಕ ಮೌಲ್ಯವುಳ್ಳವುಗಳಾಗಿ" ಗುರುತಿಸಿದೆ.
- ಏಳು ಅದ್ಭುತಗಳ ರಾಷ್ಟ್ರೀಯ ಪಟ್ಟಿಗಳು
- ಕೆನಡಾದ ಏಳು ಅದ್ಭುತಗಳು
- ಪೋಲ್ಯಾಂಡ್‌ನ ಏಳು ಅದ್ಭುತಗಳುಪೋಲಾಂಡ್‌ನ ಏಳು ಅದ್ಭುತಗಳು/0}
- ಪೋರ್ಚುಗಲ್‌ನ ಏಳು ಅದ್ಭುತಗಳು
- ಉಕ್ರೇನಿನ ಏಳು ಅದ್ಭುತಗಳು
- ವೇಲ್ಸ್‌ನ ಏಳು ಅದ್ಭುತಗಳು
- ಸೆವೆನ್ ವಂಡರ್ಸ್ ಅಪ್ ದಿ ಪೋರ್ (ಪೋರ್‍ನ ಚರ್ಚ್, ಐರ್ಲೇಂಡ್)
- ಮಹಾತ್ಮಾ ಗಾಂಧಿಯವರ ಪಟ್ಟಿ-ವಿಶ್ವದ ಏಳು ಪ್ರಸಿದ್ಧ ಪ್ರಮಾದಗಳು
No comments:
Post a Comment