ಶಿಕ್ಷಣವೇ ಶಕ್ತಿ

Friday, 7 May 2021

ರವೀಂದ್ರನಾಥ್ ಠಾಗೋರ್

ರವೀಂದ್ರನಾಥ ಠಾಗೋರ್

ಬಂಗಾಳಿ ಕವಿ ಮತ್ತು ತತ್ವಜ್ಞಾನಿ


ರವೀಂದ್ರನಾಥ ಠಾಗೋರ್ ‌ಅವರು (ಬಂಗಾಳಿ:রবীন্দ্রনাথ ঠাকুর)α[›]β[›](೭ ಮೇ ೧೮೬೧ – ೭ ಆಗಸ್ಟ್ ೧೯೪೧), γ[›] ಅಂಕಿತ ನಾಮ:ಗುರುದೇವ್‌ δ[›]. ಅವರು ಬಂಗಾಳಿ ಮಹಾ ವಿದ್ವಾಂಸ. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿಸಿದ "ಸೂಕ್ಷ್ಮ ಸಂವೇದನೆಯ, ನವನವೀನವೂ ಮತ್ತು ಸುಂದರವೂ ಆದ ಪದ್ಯ" ಗೀತಾಂಜಲಿ ಕಾವ್ಯಕ್ಕೆ ೧೯೧೩ರ ನೊಬೆಲ್ ಸಾಹಿತ್ಯ ಪ್ರಶಸ್ತಿದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು.

ರವೀಂದ್ರನಾಥ ಠಾಗೋರ್
Close-up on a Bengali word handwritten with angular, jaunty letters.
೧೯೧೫ರಲ್ಲಿ ಕೊಲ್ಕತ್ತದಲ್ಲಿ ಠಾಗೋರ್
ಜನನ೭ ಮೇ ೧೮೬೧
ಕಲ್ಕತ್ತ
ಮರಣ೭ ಆಗಸ್ಟ್ ೧೯೪೧ (aged ೮೦)
ಕಲ್ಕತ್ತ
ವೃತ್ತಿಕವಿ, ಬರಹಗಾರ, ತತ್ವಶಾಸ್ತ್ರಜ್ಞ, ಕಲಾವಿದ
ಕಾಲಬಂಗಾಳ ನವೋದಯ
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ
(1913)


ಸಹಿ


ಕಲ್ಕತ್ತಾದ ಪಿರಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಟಾಗೋರ್ ‌ ತಮ್ಮ ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು. ಹದಿನಾರನೇ ವಯಸ್ಸಿನಲ್ಲಿ ಅವರು ಭಾನುಶಿಂಘೊ ("ಸೂರ್ಯ ಸಿಂಹ") ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು ಮತ್ತು ಅವರು ಮೊದಲು ಸಣ್ಣ ಕಥೆಗಳು ಮತ್ತು ನಾಟಕಗಳನ್ನು ೧೮೭೭ರಲ್ಲಿ ಬರೆದರು. ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ-ಇವು ಅವರ ಪ್ರಮುಖ ಕೊಡುಗೆ.

ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್‌ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು. ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ಗೀತಾಂಜಲಿ (ಗೀತೆಗಳು), ಗೋರ (ಸುಂದರ ಮುಖಿ)ಮತ್ತು ಘರೇ ಬೈರೆ((ಮನೆ ಮತ್ತು ಪ್ರಪಂಚ)) ಇವರ ಹಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ ವಾಸ್ತವಿಕತೆ ಗೆ, ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ. ಟಾಗೋರ್‌ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. 'ಜನ ಗಣ ಮನ' ಭಾರತದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾದರೆ 'ಅಮರ್ ಶೋನರ್ ಬಾಂಗ್ಲಾ' ಬಾಂಗ್ಲಾದೇಶದ್ದು.

ಆರಂಭಿಕ ಜೀವನ (೧೮೬೧–೧೯೦೧)

ಹದಿಹರೆಯದ ತಿಳಿ ನಗುವಿನ, ಕಪ್ಪು ಸೂಟ್ ಮತ್ತು ನೆಕ್‌ಟೈಯ, ಹಳೆಯ, ಸಣ್ಣ, ಕಡಿಮೆ-ಗುಣಮಟ್ಟದ, ಕಪ್ಪು-ಬಿಳುಪು ಛಾಯಾಚಿತ್ರ-ಭಾವಚಿತ್ರ.
ಇಂಗ್ಲೆಂಡ್‌ನಲ್ಲಿ ಟಾಗೋರ್, 1879

ದೇಬೇಂದ್ರನಾಥ ಟಾಗೋರ್ (೧೮೧೭-೧೯೦೫)ಮತ್ತು ಶಾರದಾ ದೇವಿ (೧೮೩೦-೧೮೭೫) ದಂಪತಿಗಳಿಗೆ ಕೊಲ್ಕೊತದ ಜೊರಸಂಕೊ ಭವನದಲ್ಲಿ ರವೀಂದ್ರನಾಥ್‌ ಜನಿಸಿದರು. ಬದುಕುಳಿದ ಹದಿಮೂರು ಮಕ್ಕಳಲ್ಲಿ ಈತನೇ ಅತ್ಯಂತ ಕಿರಿಯ. ಟಾಗೋರ್ ಕುಟುಂಬದ ಪೂರ್ವಜರು ಆದಿ ಧರ್ಮದ ಬ್ರಾಹ್ಮೊ ಸಂಸ್ಥಾಪಕರು. ತಾಯಿಯನ್ನು ಬಾಲ್ಯದಲ್ಲೇ ಕಳೆದುಕೊಂಡ, ತಂದೆಯದು ವ್ಯಾಪಕ ಪ್ರವಾಸ - ಹೀಗಾಗಿ ಬಾಲಕ ಟಾಗೋರ್‌ ಹೆಚ್ಚಾಗಿ ಮನೆಯಾಳುಗಳ ದೇಖರೇಖಿಯಲ್ಲಿ ಬೆಳೆದು ಬಂದರು. ನಾಲ್ಕು ಗೋಡೆಗಳ ನಡುವಿನ ಶಾಲಾ ಪದ್ಧತಿಯನ್ನು ಇಚ್ಛಿಸದ ಟಾಗೋರ್‌, ಭವನದೊಳಗೆಲ್ಲ ಸುತ್ತಾಡುತ್ತಿದ್ದರು. ಬೋಲ್ಪುರ್, ಪನಿಹಟಿ ಹಾಗೂ ಇನ್ನಿತರ ಊರುಗಳನ್ನು ಸುತ್ತುವುದು ಅಥವಾ ಗ್ರಾಮೀಣ ಪ್ರದೇಶದ ಸರಳ ಸುಂದರ ಪರಿಸರದಲ್ಲಿರುವುದನ್ನು ಇಷ್ಟಪಡುತ್ತಿದ್ದರು. ಹನ್ನೊಂದನೇ ವಯಸ್ಸಿನಲ್ಲಿ ಅವರ ಉಪನಯನ ಸಂಸ್ಕಾರ ನೆರವೇರಿತು. ಇದಾದ ನಂತರ ಟಾಗೋರ್‌ ತಮ್ಮ ತಂದೆಯೊಂದಿಗೆ ಭಾರತ ಪರ್ಯಟನೆ ಆರಂಭಿಸಿದರು. ೧೮೭೩ರ ಫೆಬ್ರುವರಿ ೧೪ರಲ್ಲಿ ಕಲ್ಕತ್ತಾವನ್ನು ಬಿಟ್ಟ ಇವರು ಅನೇಕ ತಿಂಗಳುಗಳ ಕಾಲ ಭಾರತವನ್ನು ಸುತ್ತಿದರು. ತಂದೆಯವರ ಶಾಂತಿನಿಕೇತನ ಎಸ್ಟೇಟಿಗೆ ಭೇಟಿ ನೀಡಿದ ಇವರು ಡಾಲ್‌ಹೌಸಿ ಹಿಮಾಲಯ ಗಿರಿಧಾಮವನ್ನು ತಲುಪುವ ಮೊದಲು ಅಮೃತ್‌ಸರದಲ್ಲಿ ತಂಗಿದರು. ಅಲ್ಲಿ ಕಿರಿಯ "ರಬೀ" ಜೀವನ ಚರಿತ್ರೆಗಳನ್ನು ಓದಿದ, ಇತಿಹಾಸ, ಖಗೋಳ ವಿಜ್ಞಾನ, ಆಧುನಿಕ ವಿಜ್ಞಾನ, ಮತ್ತು ಸಂಸ್ಕೃತದ ಬಗ್ಗೆ ಅಧ್ಯಯನ ಮಾಡಿದ್ದಲ್ಲದೇKālidāsaಶಾಸ್ತ್ರೀಯ ಕಾವ್ಯಗಳ ಒಳ ಹೊಕ್ಕು ನೋಡಿದ. ಮೈಥಿಲಿ ಶೈಲಿಯಲ್ಲಿ ರಚಿಸಿದ ದೀರ್ಘ ಪದ್ಯ ಸಂಗ್ರಹವನ್ನೂ ಒಳಗೊಂಡು, ಹಲವಾರು ಪ್ರಮುಖ ಕಾವ್ಯಗಳನ್ನು ೧೮೭೭ರಲ್ಲಿ ಅವರು ರಚಿಸಿದರು. ವಿದ್ಯಾಪತಿ ಎಂಬ ಕವಿ ಮೈಥಿಲಿ ಶೈಲಿಯ ರೂವಾರಿ. ಕಳೆದು ಹೋಗಿದ್ದ ೧೭ನೇ ಶತಮಾನದVaiṣṇava ಕವಿಯ ಕೃತಿಗಳು Bhānusiṃha ಇವು ಎಂದು ತಮಾಷೆಗಾಗಿ ಹೇಳುತ್ತಿದ್ದರು. "ಭಿಕಾರಿಣಿ" (೧೮೭೭; " ಭಿಕ್ಷುಕಿ"—ಬಂಗಾಳಿ ಭಾಷೆಯ ಮೊದಲ ಸಣ್ಣ ಕಥೆ) ಮತ್ತು ಸಂಧ್ಯಾ ಸಂಗೀತ (೧೮೮೨) ಪ್ರಸಿದ್ಧ ಪದ್ಯ "ನಿರ್ಝರೇರ್ ಸ್ವಪ್ನಭಂಗ" ("ಜಲಪಾತದ ಭೋರ್ಗರೆತ")ವನ್ನೂ ಒಳಗೊಂಡಂತೆ ಕೆಲವು (೧೮೮೨) ಕೃತಿಗಳನ್ನು ಬರೆದರು.

ಸುಂದರವಾಗಿ ಅಲಂಕೃತಗೊಂಡ ಪುರುಷ ಮತ್ತು ಮಹಿಳೆಯ ಕಪ್ಪು-ಬಿಳುಪು ಛಾಯಾಚಿತ್ರ: ನಗುತ್ತಿರುವ, ಬೆಂಚಿನ ಹಿಂದೆ ಹೆಗಲಲ್ಲಿ ಶಾಲು ಹೊದ್ದುಕೊಂಡ ಸೊಂಟಕ್ಕೆ ಕೈಇಟ್ಟುಕೊಂಡ ಮತ್ತು ಬಂಗಾಳಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ಪುರುಷ.ಬೆಂಚಿನಲ್ಲಿ ಕುಳಿತ, ಭಾರತೀಯ ಉಡುಗೆ ಮತ್ತು ಶಾಲಿನಲ್ಲಿರುವ ಮಹಿಳೆ; ಅವರು ಹೂದಾನಿ ಮತ್ತು ಹರಿವ ಎಲೆಗಳಿಂದ ರೂಪಿಸಿದ ಆಧಾರಕ್ಕೆ ಒರಗಿನಿಂತಿದ್ದಾರೆ.
ಟಾಗೋರ್ ಮತ್ತು ಮೃನಾಲಿನಿ ದೇವಿ, 1883

ಇಂಗ್ಲೆಂಡ್‌ನ ಪೂರ್ವ ಸಸ್ಸೆಕ್ಸ್‌ನ ಬ್ರಿಘ್ಟನ್‌ನಲ್ಲಿ ೧೮೭೮ರಲ್ಲಿ ಸಾರ್ವಜನಿಕ ಶಾಲೆಗೆ ಭಾವಿ ನ್ಯಾಯವಾದಿ ಟಾಗೋರ್‌ ಸೇರಿದರು. ಅವರು ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಕಾನೂನನ್ನು ಅಭ್ಯಸಿಸಿದರು, ಆದರೆ ಶೇಕ್ಸ್‌ಪಿಯರ್ ಮತ್ತು ರೆಲಿಜಿಯೊ ಮೆಡಿಸಿ , ಕೊರಿಯೊಲನಸ್ , ಮತ್ತು ಆಂಟೊನಿ ಮತ್ತು ಕ್ಲಿಯೊಪಾತ್ರ ; ಮೊದಲಾದವುಗಳ ಪರಿಪೂರ್ಣ ಅಧ್ಯಯನ ಮಾಡುವ ಉದ್ದೇಶದಿಂದ ಶಾಲೆಯನ್ನು ಬಿಟ್ಟರು. ಅವರು ೧೮೮೦ರಲ್ಲಿ ಪದವಿ-ಪಡೆಯದೆ ಬಂಗಾಳಕ್ಕೆ ಹಿಂದಿರುಗಿದರು. ಮೃಣಾಲಿನಿ ದೇವಿ (ಭಬತಾರಿಣಿ ತೌರು ಮನೆಯಲ್ಲಿಟ್ಟ ಹೆಸರು. ೧೮೭೩–೧೯೦೦) ಅವರನ್ನು ೧೮೮೩ರ ಡಿಸೆಂಬರ್‌ ೯ರಂದು ಅವರು ಮದುವೆಯಾದರು. ಜನಿಸಿದ ಐವರು ಮಕ್ಕಳಲ್ಲಿ ಇಬ್ಬರು ಪ್ರೌಢರಾಗುವ ಮುನ್ನವೇ ಸಾವನ್ನಪ್ಪಿದರು. ೧೮೯೦ರಲ್ಲಿ ಟಾಗೋರ್‌, ಈಗ ಬಾಂಗ್ಲಾದೇಶದಲ್ಲಿರುವ, ಶಿಲೈದಾಹದಲ್ಲಿರುವ ಅವರ ಕುಟುಂಬದ ವಿಸ್ತಾರವಾದ ಎಸ್ಟೇಟಿನ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೮೯೮ರಲ್ಲಿ ಅವರ ಪತ್ನಿ ಮತ್ತು ಪುತ್ರರೂ ಅವರನ್ನು ಸೇರಿ ಕೊಂಡರು."ಜಮೀನ್ದಾರ್ ಬಾಬು" ಟಾಗೋರ್‌ ಕುಟುಂಬದ ಐಷಾರಾಮಿ ನೌಕಾಗೃಹ ಪದ್ಮ ದಿಂದ ದೂರವಾಗಿ ಜೀವಿಸುತ್ತಿದ್ದ ಸಂದರ್ಭದಲ್ಲಿ ಕರಗಳನ್ನು (ಹೆಚ್ಚಿನವು ಸಾಂಕೇತಿಕ) ಸಂಗ್ರಹಿಸಲು ಮತ್ತು ಅವರ ಗೌರವಾರ್ಥವಾಗಿ ಔತಣಕೂಟಗಳನ್ನು ಏರ್ಪಡಿಸಿದ ಗ್ರಾಮಸ್ಥರನ್ನು ಆಶೀರ್ವದಿಸಲು ತಮ್ಮ ಜಮೀನಿನಾದ್ಯಂತ ಓಡಾಡಿದರು. ೧೮೯೧ರಿಂದ ೧೮೯೫-ಇದನ್ನು ಟಾಗೋರ್‌ರ ಸಾಧನಾ ಅವಧಿ ಎನ್ನುತ್ತಾರೆ. ಅವರ ಪತ್ರಿಕೆಗಳಲ್ಲಿ ಒಂದಕ್ಕೆ ಸಾಧನಾ ಎಂದು ಹೆಸರಿಡಲಾಗಿದೆ. ಈ ಅವಧಿಯು ಹೆಚ್ಚು ಸೃಜನಶೀಲವಾಗಿತ್ತು. ಮೂರು-ಸಂಪುಟಗಳ ಅರ್ಧಕ್ಕಿಂತ ಹೆಚ್ಚಿನ ಕಥೆಗಳನ್ನು ಮತ್ತು ಎಂಭತ್ತನಾಲ್ಕು ಕಥೆಗಳ ಸಂಗ್ರಹ ಗಲ್ಪಗುಚ್ಛ ವನ್ನೂ ಈ ಅವಧಿಯಲ್ಲಿಯೇ ಅವರು ಬರೆದುದು. ಬಂಗಾಳಿ ಜೀವನಶೈಲಿಯ ವಿಶೇಷವಾಗಿ ಗ್ರಾಮೀಣ ಜೀವನದ ವಿಸ್ತಾರವಾದ ವ್ಯಾಪ್ತಿಯನ್ನು ಅವರು ವ್ಯಂಗ್ಯ ಮತ್ತು ಭಾವನಾತ್ಮಕ ಪ್ರಭಾವದಿಂದ ಚಿತ್ರಿಸಿದ್ದಾರೆ.

ಶಾಂತಿನಿಕೇತನ (೧೯೦೧–೧೯೩೨)

ಗಾಢ ನೀಳುಡುಪಿನಲ್ಲಿರುವ ಗಡ್ಡವಿರುವ ಮಧ್ಯವಯಸ್ಕರ ಕಪ್ಪು-ಬಿಳುಪು ಛಾಯಾಚಿತ್ರ.ಅವರು ಸುಂದರವಾದ ಕೊಠಡಿಯ ನೆಲದಲ್ಲಿ ಮತ್ತು ಬೆಲೆಬಾಳುವ ಸೋಫಾದಲ್ಲಿ ಕುಳಿತಿದ್ದಾರೆ; ಅವರು ಕ್ಯಾಮೆರಾವನ್ನು ನೋಡುತ್ತಿಲ್ಲ.
ಟಾಗೋರ್, ಹ್ಯಾಂಪ್‌ಸ್ಟೆಡ್‌ನಲ್ಲಿ ಜಾನ್ ರೊಥೆನ್‌ಸ್ಟೈನ್‌ರಿಂದ ತೆಗೆದ ಛಾಯಾಚಿತ್ರ, 1912

೧೯೦೧ರಲ್ಲಿ ಟಾಗೋರ್‌ ಶಿಲೈದಾಹವನ್ನು ಬಿಟ್ಟು ಶಾಂತಿನಿಕೇತನಕ್ಕೆ ಬಂದರು. ಅಲ್ಲೊಂದು ಆಶ್ರಮ ಸ್ಥಾಪಿಸಿದರು. ಅಮೃತ ಶಿಲೆಯ ನೆಲದ ಪ್ರಾರ್ಥನಾ ಮಂದಿರ ಅಲ್ಲಿ ತಲೆ ಎತ್ತಿತು. ಗಿಡ ಮರಗಳ ತೋಪು, ಉದ್ಯಾನ, ಗ್ರಂಥಾಲಯ ಜೊತೆಗೊಂದು ಪ್ರಾಯೋಗಿಕ ಶಾಲೆ-ಇವೆಲ್ಲ ಸಿದ್ಧವಾದವು. ಟಾಗೋರ್‌ರ ಪತ್ನಿ ಮತ್ತು ಇಬ್ಬರು ಮಕ್ಕಳು ಇಲ್ಲಿ ಕೊನೆಯುಸಿರೆಳೆದರು. ೧೯೦೫ರ ಜನವರಿ ೧೯ರಂದು ಅವರ ತಂದೆ ವಿಧಿವಶರಾದರು. ಪಿತ್ರಾರ್ಜಿತವಾಗಿ ಇವರಿಗೆ ಸಂದಾಯವಾಗಬೇಕಿದ್ದನ್ನು ಪ್ರತಿ ತಿಂಗಳೂ ಅವರು ಪಡೆಯಲಾರಂಭಿಸಿದರು. ತ್ರಿಪುರದ ಮಹಾರಾಜನಿಂದ ಒಂದಷ್ಟು ಹಣ ಪಡೆದರು. ಕುಟುಂಬದ ಆಭರಣಗಳ ಮಾರಾಟದಿಂದ ಸ್ವಲ್ಪ ಬಂತು, ಪುರಿಯಲ್ಲಿನ ಸುಮುದ್ರತೀರದ ಬಂಗಲೆಯಿಂದ ಇನ್ನಷ್ಟು ಕೈ ಸೇರಿತು, ಇಷ್ಟಲ್ಲದೆ ಅವರ ಬರಹಗಳಿಗೆ ಸಿಕ್ಕಿದ ಸಾಧಾರಣ ರಾಯ ಧನಗಳಿಂದ (Rs. ೨,೦೦೦) ಸಿಗುತ್ತಿದ್ದುದು ಅವರ ಮತ್ತೊಂದು ಆದಾಯ ಮೂಲವಾಯಿತು. ಈ ಹೊತ್ತಿಗೆ ಅವರ ಬರಹಗಳು ಅವರಿಗೆ ಹೆಚ್ಚಿನ ಬಂಗಾಳಿ ಅಭಿಮಾನಿಗಳನ್ನು ಮತ್ತು ವಿದೇಶಿ ಓದುಗರನ್ನು ತಂದು ಕೊಟ್ಟಿತು. ನೈವೇದ್ಯ (೧೯೦೧) ಮತ್ತು ಖೇಯ (೧೯೦೬) ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಸಮಯದಲ್ಲಿ ಅವರು ತಮ್ಮ ಗೀತೆಗಳನ್ನು ಮುಕ್ತ ಛಂದಸ್ಸಿನ ಪದ್ಯಗಳನ್ನಾಗಿ ಅನುವಾದಿಸುವ ಕಾಯಕದಲ್ಲಿ ತೊಡಗಿದರು. ೧೯೧೩ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ತಮ್ಮ ಪಾಲಿಗೆ ಸಂದಿದ್ದು ಟಾಗೋರ್‌ಗೆ ೧೯೧೩ರ ನವೆಂಬರ್ ೧೪ರಂದು ಗೊತ್ತಾಯಿತು. ಗೀತಾಂಜಲಿ: ಪದ್ಯಾರ್ಪಣೆಗಳು ಹಾಗೂ ಇನ್ನಿತರ ಅವರ ಅನುವಾದಿತ ಸಾಹಿತ್ಯ ಪಾಶ್ಚಾತ್ಯ ಓದುಗರಿಗೆ ಸಣ್ಣ ಪ್ರಮಾಣದಲ್ಲಿ ದೊರೆಯುವಂತಾದದ್ದನ್ನು ಹಾಗೂ ಅದರ ಆದರ್ಶವಾದವನ್ನು ಸ್ವೀಡಿಶ್ ಅಕಾಡೆಮಿ ಮೆಚ್ಚಿಕೊಂಡಿತು. ೧೯೧೫ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯ ಟಾಗೋರ್‌ಗೆ ನೈಟ್ ಬಿರುದನ್ನು ನೀಡಿ ಗೌರವಿಸಿತು .

ಟಾಗೋರ್ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಲಿಯೊನಾರ್ಡ್ ಎಲ್ಮಿರ್ಸ್ಟ್ಸೇರಿಕೊಂಡು ಶಾಂತಿನಿಕೇತನದ ಆಶ್ರಮದ ಹತ್ತಿರದ ಹಳ್ಳಿ ಸುರುಲ್‌ನಲ್ಲಿ ೧೯೨೧ರಲ್ಲಿ ಗ್ರಾಮೀಣ ಪುನರುತ್ಥಾನಕ್ಕಾಗಿ ಸಂಸ್ಥೆಯೊಂದನ್ನು (ಟಾಗೋರ್‌ ಇದಕ್ಕೆ ಶ್ರೀನಿಕೇತನ—"ಸಂಪತ್ತಿನ ನೆಲೆ" ಎಂದು ಮರುಹೆಸರಿಸಿದರು) ಪ್ರಾರಂಭಿಸಿದರು. ಗಾಂಧಿ ನೇತೃತ್ವದ ಪ್ರತೀಕಕ್ಕೆ, ಸ್ವರಾಜ್ ಚಳವಳಿಗೆ ಬೆಂಬಲ ನೀಡಿ ಪರ್ಯಾಯವೊಂದನ್ನು ಟಾಗೋರ್‌ ಒದಗಿಸಲು ಯತ್ನಿಸಿದರು."ಅಸಹಾಯಕತೆ ಮತ್ತು ಅಜ್ಞಾನದ ತೊಳಲಾಟದಿಂದ ನರಳುತ್ತಿರುವ ಹಳ್ಳಿಗಳನ್ನು" 'ಜ್ಞಾನಾಭಿವೃದ್ಧಿ'ಯಿಂದ ಮುಕ್ತವಾಗಿಸುವ, ಮತ್ತು ಇದಕ್ಕಾಗಿ ಸಂಸ್ಥೆಗೆ ನೆರವಾಗುವ ಉದ್ದೇಶದಿಂದ ವಿದ್ವಾಂಸರು, ದಾನಿಗಳು ಮತ್ತು ಅಧಿಕಾರಿಗಳನ್ನು ಬೇರೆ ಬೇರೆ ರಾಷ್ಟ್ರಗಳಿಂದ ನಿಯೋಜಿಸಿದರು. ಭಾರತದ "ಜಾತಿ ಪದ್ಧತಿಯ ಕಾಠಿಣ್ಯ" ಮತ್ತು ಅಸ್ಪೃಶ್ಯತೆಯ ಆಚರಣೆಯನ್ನು ೧೯೩೦ರ ಆರಂಭದಲ್ಲಿ ಅವರು ಖಂಡಿಸಿದರು.ಈ ಎಲ್ಲ ಅನಿಷ್ಟಗಳ ವಿರುದ್ಧ ದನಿ ಎತ್ತಿದರು, ನಾಟಕ ಮತ್ತು ಕವನಗಳನ್ನು ರಚಿಸಿದರು, ಯಶಸ್ವೀ ಆಂದೋಲನದ ಮೂಲಕ ಗುರುವಾಯೂರ್‌ ದೇವಾಲಯವನ್ನು ದಲಿತರ ಪ್ರವೇಶಕ್ಕಾಗಿ ಮುಕ್ತಗೊಳಿಸಿದರು.

ಬದುಕಿನ ಸಂಧ್ಯಾಕಾಲ (೧೯೩೨–೧೯೪೧)

ತೆಳ್ಳಗಿನ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುತ್ತಿರುವ, ಗಾಢ ಮೇಲಂಗಿ ಧರಿಸಿದ, ಗಡ್ಡವಿರುವ ವಯಸ್ಸಾದ ವ್ಯಕ್ತಿ. ಅವರು ಹಾಳೆಗಳ ಬಂಡಲು ಅಲ್ಲದೆ ಬೇರೇನೂ ಇಲ್ಲದ ಖಾಲಿ ಮೇಜಿನ ಮುಂದೆ ಕುಳಿತಿದ್ದಾರೆ; ಹಿಂದೆ ತೆಳು-ಬಣ್ಣದ ಕರ್ಟೈನ್ ಇದೆ.
ಬರ್ಲಿನ್‌ನಲ್ಲಿ, 1930

ಕೊನೆಯಲ್ಲಿ ಟಾಗೋರ್‌ ಸಾಂಪ್ರದಾಯಿಕತೆಯನ್ನು ಒರೆ ಹಚ್ಚಿ ನೋಡಿದರು. ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡ ೧೯೩೪ರ ಜನವರಿ ೧೫ರಂದು ಬಿಹಾರ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪವನ್ನು ದಲಿತರ ದಬ್ಬಾಳಿಕೆಯಿಂದಾದ ದೈವದತ್ತ ಪ್ರತಿಫಲ ಎಂಬ ಗಾಂಧಿ ಮಾತಿಗೆ ಅವರು ಛೀಮಾರಿ ಹಾಕಿದರು. ಕಲ್ಕತ್ತಾದ ಸ್ಥಳೀಯ ಬಡತನದ ಬಗ್ಗೆ ಮತ್ತು ಬಂಗಾಳದ ಸಮಾಜಾರ್ಥಿಕ ಪರಿಸ್ಥಿತಿ ಕ್ಷೀಣಿಸಿದ ಬಗ್ಗೆ ಅವರು ಖೇದ ವ್ಯಕ್ತಪಡಿಸಿದರು. ಇದರಿಂದುಂಟಾದ ದುಃಖವನ್ನು ಪ್ರಾಸಬದ್ಧವಲ್ಲದ ನೂರು-ಸಾಲುಗಳ ಪದ್ಯದಲ್ಲಿ ತೋಡಿಕೊಂಡಿದ್ದಾರೆ. ಸತ್ಯಜಿತ್ ರೈ ಅವರ ಅಪೂರ್ ಸಂಸಾರ್ ಚಿತ್ರಕ್ಕೆ ಇದು ಪೂರ್ವ ಭೂಮಿಕೆ ಒದಗಿಸಿತು. ಟಾಗೋರ್‍‌ರ ಬರಹಗಳನ್ನೊಳಗೊಂಡ ಹದಿನೈದು ಹೊಸ ಸಂಪುಟಗಳು ಹೊರ ಬಂದವು. ಅವುಗಳಲ್ಲಿ ಪುನಶ್ಚ (೧೯೩೨), ಶೇಸ್ ಸಪ್ತಕ್ (೧೯೩೫), ಮತ್ತು ಪತ್ರಾಪುಟ್ (೧೯೩೬) ಗದ್ಯ-ಪದ್ಯ ರೂಪದ ಕೃತಿಗಳು. ಪ್ರಯೋಗ ಹೀಗೇ ಮುಂದುವರಿಯಿತು: ಅವರು ಗದ್ಯ ರೂಪದ ಹಾಡುಗಳನ್ನೂ ಹಾಗೂ ನೃತ್ಯನಾಟಕಗಳನ್ನೂ ಬರೆದು ಹೊಸ ಹಾದಿ ಹಾಕಿದರು.ಚಿತ್ರಾಂಗದ (೧೯೧೪), ಶ್ಯಾಮ (೧೯೩೯), ಮತ್ತು ಚಂಡಾಲಿಕಾ (೧೯೩೮) ಮುಂತಾದ ಅನೇಕ ನೃತ್ಯ-ನಾಟಕಗಳನ್ನು ಬರೆದರು ಮತ್ತು ದುಯ್ ಬೋನ್ (೧೯೩೩), ಮಲಂಚ (೧೯೩೪), ಮತ್ತು ಚಾರ್ ಅಧ್ಯಾಯ್ (೧೯೩೪) ಕಾಂದಬರಿ ಗಳನ್ನು ರಚಿಸಿದರು. ಜೀವಿತದ ಕೊನೆಯ ವರ್ಷಗಳಲ್ಲಿ ಟಾಗೋರ್‌ ವಿಜ್ಞಾನ ವಿಷಯದಲ್ಲಿ ಆಸಕ್ತಿ ತಾಳಿ ವಿಶ್ವ-ಪರಿಚಯ್ (೧೯೩೭) ಕೃತಿ ನೀಡಿದರು (ಪ್ರಬಂಧಗಳ ಸಂಗ್ರಹ). ಜೀವಶಾಸ್ತ್ರ, ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರದ ಬಗೆಗಿನ ಅಧ್ಯಯನ ಅವರ ಕಾವ್ಯದ ಮೇಲೆ ಪ್ರಭಾವ ಬೀರಿದವು. ನಿಸರ್ಗವಾದವನ್ನು ವ್ಯಾಪಕವಾಗಿ ಹೊಂದಿದ್ದರಿಂದಾಗಿ ವೈಜ್ಞಾನಿಕ ನಿಯಮಗಳ ಬಗ್ಗೆ ಅವರಿಗಿದ್ದ ಅಪಾರ ಆದರವನ್ನು ಎತ್ತಿ ತೋರುತ್ತದೆ. ವಿಜ್ಞಾನಿಗಳ ಕಥನವನ್ನೂ ಒಳಗೊಂಡಂತೆ, ಸೆ (೧೯೩೭), ತೀನ್ ಸಂಗಿ (೧೯೪೦), ಮತ್ತು ಗಲ್ಪಸಲ್ಪ (೧೯೪೧)ದಂತಹ ಸಂಪುಟಗಳಲ್ಲಿ ಅನೇಕ ಕಥೆಗಳ ಮೂಲಕ ಅವರು ವಿಜ್ಞಾನ ಪ್ರಕ್ರಿಯೆಯನ್ನು ನಿರೂಪಿಸಿದರು.

ಕೊನೆಯ ನಾಲ್ಕು ವರ್ಷ ಟಾಗೋರ್‌ ದೀರ್ಘಕಾಲದ ನೋವಿನಿಂದ ಬಳಲಿದರು ಮತ್ತು ಎರಡು ಬಾರಿ ದೀರ್ಘ ಅಸ್ವಸ್ಥತೆಯಿಂದ ನರಳಿದರು. ೧೯೩೭ರ ಕೊನೆಯಲ್ಲಿ ಟಾಗೋರ್‌ ಸ್ಮರಣೆ ಕಳೆದುಕೊಂಡು ಕೋಮ ಸ್ಥಿತಿ ತಲಪಿ ಸಾವಿನಂಚನ್ನು ತಲಪಿದರು. ಅದರಿಂದ ಗುಣಮುಖರಾಗದ ಅವರನ್ನು ೧೯೪೦ರ ಕೊನೆಯವರೆಗೆ ಸತಾಯಿಸಿತು. ಮೃತ್ಯು ದವಡೆಯಲ್ಲಿ ಇದ್ದುಕೊಂಡೇ ಬರೆದ ಈ ಅವಧಿಯಲ್ಲಿನ ಅವರ ಸಾಹಿತ್ಯ ವಿಭಿನ್ನ, ಉತೃಷ್ಟ ಮಟ್ಟದ್ದು ಎಂದು ಪರಿಗಣಿಸಲಾಗಿದೆ. ದೀರ್ಘ ಕಾಲೀನ ಅಸ್ವಸ್ಥತೆಯಿಂದ ನರಳಿದ ಟಾಗೋರ್‌ ತಾವು ಬೆಳೆದುಬಂದ ಜೊರಸಂಕೊ ಭವನದ ಮೇಲ್ಮಹಡಿಯಲ್ಲಿ ೧೯೪೧ರ ಆಗಸ್ಟ್ ೭ರಂದು (೨೨ ಶ್ರಾವಣ ೧೩೪೮) ಕೊನೆಯುಸಿರೆಳೆದರು. ಬೆಂಗಾಲೀ ಭಾಷಿಕ ಜಗತ್ತು ದುಃಖ ಸಾಗರದಲ್ಲಿ ಮುಳುಗಿತು.

ಪರ್ಯಟನೆ

ಬಹುಃಶ ಪ್ರಾಚೀನ ಪ್ಲೇಟೋಪಂಥಿಗಳಾದ, ಸಾಂಪ್ರದಾಯಿಕ ಉಡುಗೆಯಲ್ಲಿರುವ, ಏಳು ಚೈನೀಸ್ ವ್ಯಕ್ತಿಗಳ ಕಪ್ಪು-ಬಿಳುಪು ಗ್ರೂಪ್ ಛಾಯಾಚಿತ್ರ: ಇಬ್ಬರು ಯುರೋಪಿಯನ್-ಶೈಲಿ ಉಡುಗೆಯನ್ನು ತೊಟ್ಟಿದ್ದಾರೆ, ಐದು ಮಂದಿ ಚೈನೀಸ್ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದಾರೆ; ನಾಲ್ಕು ಮಂದಿ ನೆಲದಲ್ಲಿ ಮುಂಭಾಗದಲ್ಲಿ ಕುಳಿತಿದ್ದಾರೆ; ಕೆಲವರು ಅವರ ಹಿಂದೆ ಕುರ್ಚಿಯಲ್ಲಿ ಕುಳಿತಿದ್ದಾರೆ; ಉಳಿದಿಬ್ಬರು ಹಿಂದೆ ನಿಂತುಕೊಂಡಿದ್ದಾರೆ. ನೀಳುಡುಪು, ಗಡ್ಡವಿರುವ, ಮತ್ತು ಮಧ್ಯದಲ್ಲಿ ಕುರ್ಚಿಯಲ್ಲಿ ಕುಳಿತಿರುವ ಎಂಟನೇ ವ್ಯಕ್ತಿಯನ್ನು ಅವರು ಆವರಿಸಿದ್ದಾರೆ. ಸುಂದರವಾದ ನಾಲ್ಕು ಕಿಟಕಿಗಳು ಅವರ ಹಿಂದೆ ಇವೆ.
ತ್ಸಿಂಘ್ವ ವಿಶ್ವಾವಿದ್ಯಾನಿಲಯದಲ್ಲಿ ಟಾಗೋರ್, 1924

೧೮೭೮ರಿಂದ ೧೯೩೨ರವರೆಗೆ ಟಾಗೋರ್‌ ಐದು ಖಂಡಗಳ ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದರು. ಭಾರತೀಯರಲ್ಲದವರಿಗೆ ಅವರ ಕಾರ್ಯ ಗಳ ಪರಿಚಯ ಮಾಡಿಸುವುದು ಮತ್ತು ಅವರ ರಾಜಕೀಯ ಆಲೋಚನೆಗಳನ್ನು ಬಿತ್ತುವ ಕಾಯಕದಲ್ಲಿ ತೊಡಗುವುದು ಕಠಿಣಮಯವಾಗಿರುತ್ತಿತ್ತು. ೧೯೧೨ರಲ್ಲಿ, ಅವರು ಅನುವಾದಿತ ಪುಸ್ತಕಗಳ ಕಂತೆಗಳನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋದರು. ಅಲ್ಲಿ ಅವರು ಧರ್ಮಪ್ರಚಾರಕರಾದ ಮತ್ತು ಗಾಂಧಿ ಅನುಯಾಯಿಗಳಾದ ಚಾರ್ಲ್ಸ್ F. ಆಂಡ್ರಿವ್ಸ್, ಆಂಗ್ಲೊ-ಐರಿಷ್ ಕವಿ ವಿಲಿಯಮ್ ಬಟ್ಲರ್ ಯೀಟ್ಸ್ಎಜ್ರ ಪೌಂಡ್ರಾಬರ್ಟ್ ಬ್ರಿಡ್ಜಸ್ಅರ್ನೆಸ್ಟ್ ರೈಸ್ಥಾಮಸ್ ಸ್ಟರ್ಗ್ ಮೋರ್, ಮತ್ತು ಇತರ ಮೇಲೆ ಪ್ರಭಾವ ಬೀರಿದರು. ಅದರ ಫಲವಾಗಿ, ಯೀಟ್ಸ್ ಗೀತಾಂಜಲಿಯ ಇಂಗ್ಲೀಷ್ ಅನುವಾದಕ್ಕೆ ಮುನ್ನುಡಿ ಬರೆದರೆ, ಆಂಡ್ರಿವ್ಸ್ ಶಾಂತಿನಿಕೇತನಕ್ಕೆ ಬಂದು ಟಾಗೋರ್‌ ಜೊತೆ ಸೇರಿಕೊಂಡ. ೧೯೧೨ರ ನವೆಂಬರ್ ೧೦ರಂದು, ಟಾಗೋರ್‌ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ಆಂಡ್ರಿವ್ಸ್‌ನ ಪಾದ್ರಿ ಸ್ನೇಹಿತರೊಂದಿಗೆ ಸ್ಟಾಫರ್ಡ್‌ಶೈರ್‌ನ ಬಟ್ಟರ್ಟನ್‌ನಲ್ಲಿ ತಂಗಿದರು. ೧೯೧೬ರ ಮೇ ೩ರಿಂದ ೧೯೧೭ರ ಎಪ್ರಿಲ್‌ವರೆಗೆ, ಟಾಗೋರ್‌ ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಪನ್ಯಾಸ ನಡೆಸಿಕೊಟ್ಟರು ಮತ್ತು ರಾಷ್ಟ್ರೀಯತೆಯ ಕಲ್ಪನೆಯನ್ನು ಬಹಿರಂಗವಾಗಿ ಖಂಡಿಸಿದರು. "ಭಾರತದಲ್ಲಿ ರಾಷ್ಟ್ರೀಯತೆ" ಎಂಬ ಪ್ರಬಂಧವನ್ನು ಅವರು ಬರೆದರು. ಅದು ತಿರಸ್ಕಾರ ಮತ್ತು ಪ್ರಶಂಸೆ ಎರಡಕ್ಕೂ ಅದು ಈಡಾಯಿತು. ರೊಮೈನ್ ರೊಲ್ಯಾಂಡ್‌ನನ್ನು ಒಳಗೊಂಡ ಶಾಂತಿಪ್ರಿಯರಿಂದ ಪ್ರಶಂಸೆ ಪಡೆಯಿತು.

ಚಿತ್ರ:Figh2.jpg
ಆಲ್ಬರ್ಟ್ ಐನ್‌ಸ್ಟೈನ್‌ರೊಂದಿಗೆ ಟಾಗೋರ್, ಅವರ 1930ರ ಜುಲೈ 14ರ ಸಂಭಾಷಣೆಯ ಸಂದರ್ಭದಲ್ಲಿ

ಭಾರತಕ್ಕೆ ಹಿಂದಿರುಗಿದ ಅಲ್ಪಾವಧಿಯಲ್ಲೇ ಪೆರುವಿಯನ್ ಸರಕಾರ ತಮ್ಮ ದೇಶಕ್ಕೆ ಭೇಟಿ ನೀಡಿರೆಂದು ಟಾಗೋರ್‌ರನ್ನು ಆಮಂತ್ರಿಸಿತು. ಆಗ ಅವರಿಗೆ ತಮ್ಮ ೬೩ ವರ್ಷ. ನಂತರ ಅವರು ಮೆಕ್ಸಿಕೊಗೆ ಪ್ರಯಾಣ ಬೆಳೆಸಿದರು. ಅವರ ಭೇಟಿಯ ಸ್ಮರಣಾರ್ಥವಾಗಿ ಶಾಂತಿನಿಕೇತನದ ಶಾಲೆ ಗೆಂದು (ವಿಶ್ವ-ಭಾರತಿ) $೧೦೦,೦೦೦ ಅನ್ನು ಪ್ರತೀ ಸರಕಾರವು ನೀಡಿದವು. ಟಾಗೋರ್‌ ೧೯೨೪ರ ನವೆಂಬರ್ ೬ರಲ್ಲಿ ಅರ್ಜೆಂಟೈನಾದ ಬ್ಯುನೋಸ್ ಐರೆಸ್‌ಗೆ  ತಲುಪಿದ ಒಂದು ವಾರದ ನಂತರ ವಿಕ್ಟೋರಿಯ ಒಕಾಂಪೊಕೋರಿಕೆಯ ಮೇರೆಗೆ ವಿಲ್ಲಾ ಮಿರಾಲ್ರಿಯೊಗೆ ಭೇಟಿ ನೀಡಿದರು. ೧೯೨೫ರ ಜನವರಿಯಲ್ಲಿ ಅವರು ಭಾರತಕ್ಕೆ ಪ್ರಯಾಣ ಬೆಳೆಸಿದರು. ೧೯೨೬ರ ಮೇ ೩೦ರಲ್ಲಿ ಟಾಗೋರ್‌ ಇಟಲಿಯ ನೇಪಲ್ಸ್ ಅನ್ನು ತಲುಪಿದರು; ಮರುದಿನವೇ ರೋಮ್‌ನಲ್ಲಿ ಫ್ಯಾಷಿಸ್ಟ್ ಮನೋಭಾವದ ನಿರಂಕುಶಾಧಿಕಾರಿ ಬೆನಿಟೊ ಮುಸ್ಸೋಲಿನಿ ಅವರನ್ನು ಭೇಟಿ ಮಾಡಿದರು. ೧೯೨೬ರ ಜುಲೈ ೨೦ರಂದು ಟಾಗೋರ್‌ ಮುಸ್ಸೋಲಿನಿ ವಿರುದ್ಧ ಮಾತನಾಡಿದರು. ಪರಿಣಾಮವಾಗಿ ಅವರ ಆರಂಭದ ಸೌಹಾರ್ದ ಸಂಬಂಧದ ಉತ್ಸಾಹ ಬತ್ತಿ ಹೋಯಿತು.

ಭವ್ಯ ಕಟ್ಟಡದ ಮುಂಭಾಗದಲ್ಲಿ ಒಟ್ಟುಸೇರಿದ ಹಲವಾರು ಮಂದಿಯ ಗ್ರೂಪ್ ಶಾಟ್; ಅದರಲ್ಲಿ ಎರಡು ಸಾಲುಗಳಿವೆ. ಎಲ್ಲರೂ ಕ್ಯಾಮೆರಾವನ್ನು ನೋಡುತ್ತಿದ್ದಾರೆ. ಮುಂಭಾಗದ ಮಧ್ಯದಲ್ಲಿ, ತಿಳಿ-ಬಣ್ಣದ ಪರ್ಷಿಯನ್ ಉಡಿಗೆ ಧರಿಸಿರುವ ಒಬ್ಬ ಮಹಿಳೆ ಹಾಗೂ ಅವಳ ಎಡಕ್ಕೆ, ಮೊದಲ ಸಾಲಿನಲ್ಲಿ, ಬಿಳಿಗಡ್ಡವನ್ನು ಹೊಂದಿರುವ ಗಾಢ-ಬಣ್ಣದ ಪೂರ್ವದೇಶದ ಟೋಪಿ ಮತ್ತು ನೀಳುಡುಪನ್ನು ಧರಿಸಿರುವ ಪುರುಷ ಹೀಗೆ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಆರಾಮ ಉಡುಪನ್ನು ಧರಿಸಿದ್ದಾರೆ. ಟಾಗೋರ್ (ಮೊದಲ ಸಾಲು, ಬಲದಿಂದ ಮೂರನೇ ವ್ಯಕ್ತಿ) 1932ರ ಏಪ್ರಿಲ್ ಅಥವಾ ಮೇನಲ್ಲಿ, ಟೆಹ್ರಾನ್‌ನಲ್ಲಿ ಇರಾನಿಯನ್ ಮಜ್ಲಿಸ್ ಸದಸ್ಯರನ್ನು ಭೇಟಿ ಮಾಡುತ್ತಿದ್ದಾರೆ. ಟಾಗೋರ್‌ರವರು ಶಿರಾಜ್‌ರನ್ನು ಅದೇ ವರ್ಷದಲ್ಲಿ ಭೇಟಿ ಮಾಡಿದರು.
ಮಜ್ಲಿಸ್ತೆಹ್ರಾನ್, ೧೯೩೨

೧೯೨೭ರ ಜುಲೈ ೧೪ರಂದು ಇಬ್ಬರು ಅನುಯಾಯಿಗಳ ಜೊತೆಗೂಡಿ ಟಾಗೋರ್‌ ನಾಲ್ಕು-ತಿಂಗಳ ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡರು. ಅಲ್ಲಿ ಅವರು ಬಲಿ, ಜಾವ, ಕ್ವಾಲಲುಂಪುರ್, ಮಲಾಕ್ಕ, ಪೆನಾಂಗ್, ಸಿಯಾಮ್, ಮತ್ತು ಸಿಂಗಾಪುರ್‌ಗೆ ಭೇಟಿ ನೀಡಿದರು. "ಜಾತ್ರಿ" ಸಂಕಲನ ಟಾಗೋರ್‌ ಬರೆದ ಪ್ರವಾಸ ಕಥನ. ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸುಮಾರು ಒಂದು ವರ್ಷದ ಪ್ರಯಾಣಕ್ಕಾಗಿ ೧೯೩೦ರ ಆರಂಭದಲ್ಲಿ ಅವರು ಬಂಗಾಳವನ್ನು ಬಿಟ್ಟರು. ಅವರ ವರ್ಣಚಿತ್ರಗಳು ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಸಂದರ್ಭದಲ್ಲಿ ಅವರು UKಗೆ ಹೋಗಿದ್ದರು. ಆಗ ಅವರು ಬರ್ಮಿಂಘ್ಯಾಮ್‌ನಲ್ಲಿನ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಅವರು ಆಕ್ಸ್‌ಫರ್ಡ್ ವಿಶ್ವಾವಿದ್ಯಾನಿಲಯಕ್ಕಾಗಿ ಹಿಬ್ಬರ್ಟ್ ಲೆಕ್ಚರ್ಸ್ ಅನ್ನು ಬರೆದರು (ಅದು " ದೇವರ ಮಾನವೀಯತೆ ಕಲ್ಪನೆ, ಅಥವಾ ಮಾನವನ ದೈವತ್ವ "ದ ಕುರಿತಾಗಿದೆ) ಮತ್ತು ಲಂಡನ್‌ನ ವಾರ್ಷಿಕ ಕ್ವೇಕರ್ ಕೂಟದಲ್ಲಿ ಮಾತನಾಡಿದರು. ಅಲ್ಲಿ ಟಾಗೋರ್‌(ನಂತರದ ಎರಡು ವರ್ಷಗಳಲ್ಲಿ ಅವರು ಎದುರಿಸಲಿದ್ದ ವಿಷಯ, ಬ್ರಿಟಿಷ್ ಮತ್ತು ಭಾರತೀಯರ ನಡುವಿನ ಸಂಬಂಧವನ್ನು ಸಂಬೋಧಿಸಿ), "ಅಗಲಿಕೆಯ ಕಂದರದ ಕರಾಳ ಮುಖ"ದ ಬಗ್ಗೆ ಮಾತನಾಡಿದರು. ನಂತರ ಅವರು ಅಗಾ ಖಾನ್ III‌ರನ್ನು ಭೇಟಿ ಮಾಡಿದರು, ಡಾರ್ಟಿಂಗ್ಟನ್ ಹಾಲ್‌ನಲ್ಲಿ ತಂಗಿ, ಅಲ್ಲಿಂದ ೧೯೩೦ರ ಜೂನ್‌ನಿಂದ ಮಧ್ಯ-ಸೆಪ್ಟೆಂಬರ್‌ವರೆಗೆ ಸ್ವಿಟ್ಜರ್‌ಲ್ಯಾಂಡ್‌, ಡೆನ್ಮಾರ್ಕ್‌ಗೆ ಮತ್ತು ಜರ್ಮನಿ ಪ್ರವಾಸ ಮುಗಿಸಿ ನಂತರ ಸೋವಿಯತ್ ಒಕ್ಕೂಟಕ್ಕೆ ಪ್ರಯಾಣ ಬೆಳೆಸಿದರು. ಅಂತಿಮವಾಗಿ ೧೯೩೨ರ ಎಪ್ರಿಲ್‌ನಲ್ಲಿ, ಪರ್ಷಿಯನ್ ಯೋಗಿ ಹಫೆಜ್‌ರ ಚರಿತ್ರೆ ಮತ್ತು ಬರಹಗಳ ಪರಿಚಯವಿದ್ದ ಟಾಗೋರ್‌ಗೆ ಇರಾನ್‌ನ ರೇಜ ಶಾಹ್ ಪಹ್ಲಾವಿ ಆತಿಥ್ಯ ನೀಡಿದರು. ಆ ರೀತಿಯ ವ್ಯಾಪಕ ಪ್ರವಾಸ ಟಾಗೋರ್‌ಗೆ ಹೆನ್ರಿ ಬರ್ಗ್ಸನ್ಆಲ್ಬರ್ಟ್ ಐನ್‌ಸ್ಚೈನ್ರಾಬರ್ಟ್ ಫ್ರೋಸ್ಟ್ಥಾಮಸ್ ಮ್ಯಾನ್ಜಾರ್ಜ್ ಬರ್ನಂಡ್ ಶಾH.G. ವೆಲ್ಸ್ ಮತ್ತು ರೊಮೈನ್ ರೊಲ್ಯಾಂಡ್ ಮೊದಲಾದ ಅನೇಕ ಪ್ರಸಿದ್ಧ ಸಮಕಾಲೀನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಸಹಕಾರಿಯಾಯಿತು. ಟಾಗೋರ್‌ರವರ ಪರ್ಷಿಯಾ ಮತ್ತು ಇರಾಕ್ ಭೇಟಿ (೧೯೩೨ರಲ್ಲಿ) ಮತ್ತು ೧೯೩೩ರಲ್ಲಿ ಸಿಲೋನ್ ಭೇಟಿಯನ್ನೂ ಒಳಗೊಂಡು, ಕೊನೆಯ ವಿದೇಶಿ ಪ್ರಯಾಣವು ಮಾನವನ ಪ್ರತ್ಯೇಕತಾ ಒಲವು ಮತ್ತು ರಾಷ್ಟ್ರೀಯತೆಯ ಬಗೆಗಿನ ಅವರ ಅಭಿಪ್ರಾಯಗಳನ್ನು ಮತ್ತಷ್ಟು ಸಾಣೆ ಹಿಡಿಯಿತು.

ಕೃತಿಗಳು

ಬಂಗಾಳಿ ಲಿಪಿಯಲ್ಲಿ "ರಾ" ಮತ್ತು "ತಾ" ಎಂದು ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಬರೆದ ಮರದ ತುಂಡಿನ ಕಪ್ಪು-ಬಿಳುಪು ಸಮೀಪ-ಛಾಯಾಚಿತ್ರ. ಟಾಗೋರ್‌ರವರ ಬಂಗಾಳಿ-ಭಾಷಾ ಪ್ರಾರಂಭವು ಈ "ರಾ-ತಾ" ಮರದ ಗುರುತಿನಿಂದ ಆಗಿದೆ. ಅದು ಸಾಂಪ್ರದಾಯಿಕ ಹೈದ ಕೆತ್ತನೆಯಲ್ಲಿ ಬಳಸಿದ ವಿನ್ಯಾಸಕ್ಕೆ ಸಮೀಪದ ಹೋಲಿಕೆಯನ್ನು ಹೊಂದಿದೆ. ಟಾಗೋರ್‌ರವರು ಅವರ ಹಸ್ತಪ್ರತಿಗಳನ್ನು ಇಂತಹ ಕಲೆಗಳಿಂದ ಸುಂದರಗೊಳಿಸಿದ್ದಾರೆ.

ಕಾವ್ಯಕ್ಕೆ ಹೆಸರುವಾಸಿಯಾದರೂ, ಟಾಗೋರ್‌ ಕಾದಂಬರಿಗಳು, ಪ್ರಬಂಧಗಳು, ಸಣ್ಣ ಕಥೆಗಳು, ಪ್ರವಾಸ ಕಥನಗಳು, ನಾಟಕಗಳು, ಮತ್ತು ಸಾವಿರಾರು ಗೀತೆಗಳನ್ನೂ ರಚಿಸಿದ್ದಾರೆ. ಗದ್ಯ ಪ್ರಕಾರದಲ್ಲಿ ಟಾಗೋರ್‌ರ ಕಿರು ಕಥೆಗಳು ಅತ್ಯುತ್ಕೃಷ್ಟ ಎನಿಸಿವೆ. ಬೆಂಗಾಲಿ ಭಾಷೆಯ ಹೊಸ ಶೈಲಿಯ ಜನಕ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಲಯಬದ್ಧತೆ, ಆಶಾವಾದ, ಮತ್ತು ಗೇಯ ಗುಣದಿಂದಾಗಿ ಅವರ ಬರಹಗಳು ಗುರುತಿಸಲ್ಪಟ್ಟಿವೆ. ಜನ ಸಾಮಾನ್ಯರ ಜೀವನದ ಸುಲಭ ಸರಳ ವಿಷಯಗಳಿಂದ ಅವರ ಕಿರುಕಥೆಗಳ ಹಂದರ ನಿರ್ಮಿಸಲಾಗಿದೆ.

ಕಾದಂಬರಿಗಳು ಮತ್ತು ಅಕಲ್ಪಿತ ಕೃತಿ ಟಾಗೋರ್‌ರವರು ಎಂಟು ಕಾದಂಬರಿಗಳನ್ನೂ, ನಾಲ್ಕು ಕಥೆಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ -

  • ಚತುರಂಗ , ಶೇಶರ್ ಕೋಬಿತ , ಚಾರ್ ಓಧಯ್ , ಮತ್ತು ನೌಕದುಬಿ . ಘರೆ ಬೈರೆ (ಮನೆ ಮತ್ತು ವಿಶ್ವ )—ಆದರ್ಶಾತ್ಮಕ ಜಮೀನ್ದಾರ್ ನಾಯಕ ನಿಖಿಲ್‌ನ ಮಾರ್ಗದರ್ಶನದ ಮೂಲಕ—ಭಾರತೀಯ ರಾಷ್ಟ್ರೀಯತೆ, ಭಯೋತ್ಪಾದನೆಯ ಬೆಳವಣಿಗೆಯನ್ನು ಮತ್ತು ಸ್ವದೇಶಿ ಚಳವಳಿಯಲ್ಲಿನ ಧಾರ್ಮಿಕ ಹುರುಪನ್ನು ತೀವ್ರವಾಗಿ ಟೀಕಿಸಿದೆ; ಇದು ಟಾಗೋರ್‌ರ ಭಾವನಾತ್ಮಕ ಸಂಘರ್ಷದ ನೇರ ಅಭಿವ್ಯಕ್ತಿಯಾಗಿದೆ, ಅದು ೧೯೧೪ರ ಕುಸಿತದ ಶಕ್ತಿಪರೀಕ್ಷೆಯಾಗಿ ಹೊರಹೊಮ್ಮಿತು.
  • ಕಾದಂಬರಿಯು ಹಿಂದು-ಮುಸ್ಲಿಮ್ ಹಿಂಸೆ ಮತ್ತು ನಿಖಿಲ್‌ಗೆ (ಮಾರಣಾಂತಿಕ) ಗಾಯವಾಗುವುದರೊಂದಿಗೆ ಕೊನೆಯಾಗುತ್ತದೆ. ಹಾಗೆಯೇ, ಗೋರ ಭಾರತೀಯತೆಯ ಬಗ್ಗೆ ವಿವಾದಾತ್ಮಕ ಪ್ರಶ್ನೆಗಳನ್ನು ಸೃಷ್ಟಿಸಿದೆ. ಘೋರೆ ಬೈರೆ ಯಲ್ಲಿರುವಂತೆ, ಸ್ವಂತ ಅಸ್ತಿತ್ವ (jāti ), ವೈಯಕ್ತಿಕ ಸ್ವಾತಂತ್ರ್ಯ, ಮತ್ತು ಧರ್ಮವು ಸಂಗತಿಗಳು ಕೌಟುಂಬಿಕ ಕಥೆ ಮತ್ತು ತ್ರಿಕೋನ ಪ್ರೇಮ ರೂಪದಲ್ಲಿ ಹೊರಹೊಮ್ಮಿದೆ.
  • ಜೋಗಾಜೋಗ್ ‌ನಲ್ಲಿ (ಸಂಬಂಧಗಳು ), ರವರು ಚಿತ್ರಿಸಿರುವ ಶಿವ-ಸತಿ ಆದರ್ಶರೂಪಗಳಿಂದ ಪರಿಮಿತಿಗೊಳಪಟ್ಟ ನಾಯಕಿ ಕುಮುದಿನಿಯು ಅವಳ ಪ್ರಗತಿಶೀಲ ಮತ್ತು ಸಹಾನುಭೂತಿಯುಳ್ಳ ಅಣ್ಣನ ಕಳೆಗುಂದುತ್ತಿದ್ದ ಭವಿಷ್ಯ ಮತ್ತು ಅವನ ಸೋಲಿಗಾಗಿ ಮರುಕಪಡುವುದರಲ್ಲೇ ಹಾಗೂ ಅವಳನ್ನು ಶೋಷಿಸುವ, ಲಂಪಟ ಸ್ವಭಾವದ, ವಯಸ್ಸಾದ ಪತಿಯಿಂದಾಗಿ ಅವಳು ಛಿದ್ರಛಿದ್ರವಾಗಿ ಹೋಗುತ್ತಾಳೆ. ಗರ್ಭಿಣಿಯಾಗುವುದು, ದುಡಿಯುವುದು, ಮತ್ತು ಕುಟುಂಬದ ಗೌರವ ಕಾಪಾಡುವುದು ಎಂಬ ಪಾಶಕ್ಕೆ ಒಳಗಾದ ಬಂಗಾಳಿ ಮಹಿಳೆಯ ಅವಸ್ಥೆ ಮತ್ತು ಸಾವನ್ನು ಚಿತ್ರಿಸಲು ಕರುಣಾರಸ ವನ್ನು ಬಳಸಿಕೊಂಡು ಟಾಗೋರ್‌ ತಮ್ಮ ಸ್ತ್ರೀ ಪರ ನಿಲುವನ್ನು ಅದರಲ್ಲಿ ತೋರಿದ್ದಾರೆ; ಏಕಕಾಲದಲ್ಲಿ, ಅವರು ಬಂಗಾಳಕ್ಕೆ ಬಂದಿದ್ದ ಮಿತಜನಾಧಿಪತ್ಯವನ್ನು ನಿರಾಕರಿಸುತ್ತಾರೆ.

ನಾಟಕ ಸಾಹಿತ್ಯ' ಹದಿನಾರನೇ ವಯಸ್ಸಿನಲ್ಲಿ ಅವರ ಸಹೋದರ ಜ್ಯೋತಿರೀಂದ್ರನಾಥರ ಮೊಲೈರೆಯ ಲಿ ಬೌರ್ಗಿಯೋಸ್ ಗೆಂಟಿಲ್ಹೊಮ್ಮೆ ಯನ್ನು ಸೂಕ್ತ ಮಾರ್ಪಾಡಿನೊಂದಿಗೆ ನಡೆಸಿದರು. ಇಪ್ಪತ್ತರ ವಯಸ್ಸಿನಲ್ಲಿ ಅವರು ವಾಲ್ಮೀಕಿ ಪ್ರತಿಭಾ (ವಾಲ್ಮೀಕಿಯ ಪ್ರತಿಭೆ ) ಎಂಬ ಮೊದಲ ಗೀತ-ನಾಟಕವನ್ನು ಬರೆದರು. ಅದು ದರೋಡೆಕೋರ ವಾಲ್ಮೀಕಿಯು ಹೇಗೆ ಅವನ ಗುಣವನ್ನು ಬದಲಾಯಿಸಿಕೊಂಡ, ಸರಸ್ವತಿಯಿಂದ ಹೇಗೆ ಹರಸಲ್ಪಟ್ಟ, ಮತ್ತು ರಾಮಾಯಣ ವನ್ನು ಬರೆದ ಎಂಬುದನ್ನು ವಿವರಿಸುತ್ತದೆ. ಇದರ ಮೂಲಕ ಟಾಗೋರ್‌ ನಾಟಕ ಶೈಲಿಗಳ ಮತ್ತು ಭಾವನೆಗಳ ವಿಸ್ತಾರವನ್ನು ಅತ್ಯುತ್ಸಾಹದಿಂದ ಹೆಚ್ಚಿಸಿದರು ಹಾಗೂ ಪರಿಷ್ಕರಿಸಿದ ಕೀರ್ತನೆಗಳ ಬಳಕೆ ಮತ್ತು ಸಾಂಪ್ರದಾಯಿಕ ಇಂಗ್ಲೀಷ್ ಮತ್ತು ಐರಿಷ್ ಜಾನಪದ ಮಧುರ ಗೀತಗಳನ್ನು ಕುಡಿತದ ಹಾಡುಗಳಾಗಿ ಪರಿವರ್ತಿಸಿದರು. ಇನ್ನೊಂದು ಪ್ರಮುಖ ನಾಟಕ ಡಾಕ್ ಘರ್ (ಅಂಚೆ ಕಛೇರಿ ). ಅದು ಮಗುವೊಂದು ಸಂಕೋಲೆಗಳಿಂದ ಹೊರಬರಲು ಹೇಗೆ ಹೆಣಗಾಡುತ್ತದೆ ಹಾಗೂ ಅಂತಿಮವಾಗಿ "ದೀರ್ಘನಿದ್ರೆಗೆ ಜಾರುತ್ತದೆ" ಎಂಬುದನ್ನು ವಿವರಿಸುತ್ತದೆ (ಅದು ಅವರ ಭೌತಿಕ ಸಾವಿನ ಸಂಕೇತ). ವಿಶ್ವವ್ಯಾಪಿ ಮೆಚ್ಚುಗೆ ಪಡೆದ ಕಥೆ (ಇದು ಯುರೋಪ್‌ನಲ್ಲಿ ಅಬ್ಬರದ ವಿಮರ್ಶೆಗಳನ್ನು ಪಡೆಯಿತು) ಡಾಕ್ ಘರ್ ಮರಣದೊಂದಿಗೆ, ಟಾಗೋರ್‌ ಮಾತುಗಳಲ್ಲಿ, ಇದು "ಕೂಡಿಟ್ಟ ಸಂಪತ್ತು ಮತ್ತು ಪ್ರಮಾಣೀಕರಿಸಿದ ಸಿದ್ಧಾಂತಗಳಿಂದ ತುಂಬಿದ ಪ್ರಪಂಚ"ದಿಂದ "ಆಧ್ಯಾತ್ಮಿಕ ಸ್ವಾತಂತ್ರ್ಯ". ವಿಶ್ವ ಸಮರ IIರ ಸಂದರ್ಭದಲ್ಲಿ, ಪೋಲಿಶ್ ವೈದ್ಯ ಮತ್ತು ಶಿಕ್ಷಣತಜ್ಞ ಜನುಸ್ಜ್ ಕೋರ್ಸ್‌ಜ್ಯಾಕ್ "ಅಂಚೆ ಕಛೇರಿ"ಯನ್ನು ವಾರ್ಸವ್ ಘೆಟ್ಟೊದಲ್ಲಿ ಅವನ ಕಾಳಜಿಯಲ್ಲಿದ್ದ ಅನಾಥರು ಪ್ರದರ್ಶಿಸುವ ನಾಟಕವಾಗಿ ಆಯ್ಕೆ ಮಾಡಿದನು. ಇದು ೧೯೪೨ರ ಜುಲೈ ೧೮ರಲ್ಲಿ, ಅವರು ಟ್ರೆಬ್ಲಿಂಕಾ ನಿರ್ನಾಮ ಶಿಬಿರಕ್ಕೆ ಬರುವ ಮೂರು ವಾರಗಳ ಮೊದಲು ಸಂಭವಿಸಿತು. ಆತನ ಪ್ರಮುಖ ಇಂಗ್ಲೀಷ್-ಭಾಷಾ ಆತ್ಮಚರಿತ್ರೆಕಾರ ಬೆಟ್ಟಿ ಜೀನ್ ಲಿಫ್ಟನ್‌ ಅವರ ಪುಸ್ತಕ ದ ಕಿಂಗ್ ಆಫ್ ಚಿಲ್ಡ್ರನ್ ‌‌ನಲ್ಲಿ 'ಒಬ್ಬರು ಯಾವಾಗ ಮತ್ತು ಹೇಗೆ ಸಾಯ ಬಹುದು ಎಂದು ನಿರ್ಧರಿಸ ಬಹುದಾ' ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಬಹುದಾ ಎಂಬ ಅದ್ಭುತ ವಿಷಯವನ್ನು ಡಾ.ಕೋರ್ಸ್‌ಜ್ಯಾಕ್‌ರವರು ಯೋಚಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಮರಣವನ್ನು ಸ್ವೀಕರಿಸುವ ಹಾದಿಯನ್ನು ಅವರ ಅನಾಥಾಲಯದಲ್ಲಿದ್ದ ಮಕ್ಕಳಿಗಾಗಿ ಹುಡುಕಲು ಪ್ರಯತ್ನಿಸಿರಬಹುದು.

ತಿರುಳಿರುವ ಯೋಚನೆಯನ್ನು ಕೇಂದ್ರೀಕರಿಸಿದ ಸಾಹಿತ್ಯದ ಹರಿವು ಮತ್ತು ಭಾವನಾತ್ಮಕ ಲಯಗಳನ್ನು ಹೊಂದಿದ್ದ ಅವರ ಸಾಧನೆಗಳು ಹಿಂದಿನ ಬಂಗಾಳಿ ನಾಟಕಗಳಿಗಿಂತ ಭಿನ್ನ. ಅವರ ಸಾಧನೆಗಳನ್ನು ಟಾಗೋರ್‌ ಮಾತುಗಳಲ್ಲಿ ಹೇಳುವುದಾದರೆ " ಭಾವನೆಗಳಿಂದ ತುಂಬಿರುವ ಅಭಿನಯವಿಲ್ಲದ ನಾಟಕ"ವನ್ನು ಸುಸಂಬದ್ಧವಾಗಿ ನಡೆಸಲು ಮಾಡಿದ ಪ್ರಯತ್ನ. ೧೮೯೦ರಲ್ಲಿ ಅವರು ವಿಸರ್ಜನ್ (ತ್ಯಾಗ )ವನ್ನು ಬರೆದರು, ಅದು ಅವರ ಅತ್ಯುತ್ತಮ ನಾಟಕ. ಬಂಗಾಳಿ-ಭಾಷೆಯು ಆದಿಕಾಲದಲ್ಲಿ ಸಂಕೀರ್ಣ ಕಥಾವಸ್ತು ಹೊಂದಿದ್ದ ಮತ್ತು ವಿಸ್ತಾರ ಏಕಪಾತ್ರಾಭಿನಯವನ್ನು ನಾಟಕ ಒಳಗೊಂಡಿರುತ್ತಿತ್ತು. ನಂತರದ ಅವರ ನಾಟಕಗಳು ಹೆಚ್ಚು ತತ್ವಶಾಸ್ತ್ರದ ಮತ್ತು ಗೂಡಾರ್ಥದ ವಿಷಯಗಳನ್ನು ಒಳಹೊಕ್ಕು ನೋಡಿದವು; ಇವುಗಳಲ್ಲಿ ಡಾಕ್ ಘರ್ ಕೂಡಾ ಒಂದು.ಟಾಗೋರ್‌ರವರ ಮತ್ತೊಂದು ನಾಟಕ ಚಂಡಾಲಿಕಾ (ಅಸ್ಪೃಶ್ಯ ಹುಡುಗಿ ). ಅದು ಗೌತಮ ಬುದ್ಧನ ಅನುಯಾಯಿ ಆನಂದನು ಆದಿವಾಸಿ ("ಅಸ್ಪೃಶ್ಯ") ಹುಡುಗಿಯಿಂದ ಹೇಗೆ ನೀರನ್ನು ಕೇಳುತ್ತಾನೆ ಎಂಬುದನ್ನು ವಿವರಿಸುವ ಪುರಾತನ ಬೌದ್ಧ ಕಥೆಯ ನಿರೂಪಣೆಯನ್ನು ಹೊಂದಿದೆ.[168]ಕೊನೆಯದಾಗಿ, ಅವರ ಹೆಚ್ಚು ಜನಪ್ರಿಯ ನಾಟಕಗಳಲ್ಲಿ ಒಂದಾದ ರಕ್ತಕಾರವಿ ಯು (ಕೆಂಪು ಕರವೀರಗಳು ) ದರೋಡೆಕೋರ ರಾಜನು ಅವನ ಪ್ರಜೆಗಳಿಗೆ ಗಣಿ ಅಗೆಯುವ ಕೆಲಸಗಳನ್ನು ಹೇರುತ್ತಾ ತಾನು ಶ್ರೀಮಂತನಾದುದನ್ನು ವಿವರಿಸುತ್ತದೆ.ನಾಯಕಿ ನಂದಿನಿಯು ದಾಸ್ಯಕ್ಕೆ ಗುರಿಮಾಡುವಿಕೆಯ ಈ ಕುರುಹುಗಳನ್ನು ನಾಶಪಡಿಸಲು ಅಂತಿಮವಾಗಿ ಸಾಮಾನ್ಯ ಜನರನ್ನು ಒಟ್ಟಗೂಡಿಸುತ್ತಾಳೆ. ಟಾಗೋರ್‌ರವರ ಇತರ ನಾಟಕಗಳು ಇವು -ಚಿತ್ರಾಂಗದ , ರಾಜ , ಮತ್ತು ಮಾಯರ್ ಖೇಲ .ಟಾಗೋರ್‌ರವರ ನಾಟಕಗಳನ್ನು ಆಧಾರಿತ ನೃತ್ಯ ನಾಟಕಗಳನ್ನು ಸಾಮಾನ್ಯವಾಗಿ ರವೀಂದ್ರ ನೃತ್ಯ ನಾಟ್ಯಗಳು ಎಂದು ಕರೆಯುತ್ತಾರೆ.

ಸಣ್ಣ ಕಥೆಗಳು

ಚಿತ್ರ:The Hero Illustration.jpg
ಟಾಗೋರ್‌ರವರ ಸಣ್ಣಕಥೆ "ದ ಹೀರೊ"ವನ್ನು ನಿರೂಪಿಸುವ ನಂದಲಾಲ್ ಬೋಸ್‌ರವರು ರಚಿಸಿದ ಚಿತ್ರಕಲೆ, ಅದು 1913 ಮ್ಯಾಕ್‌ಮಿಲನ್‌ರ ಬಿಡುಗಡೆ ದ ಕ್ರೆಸೆಂಟ್ ಮೂನ್‌ನಲ್ಲಿ ಕಂಡುಬಂದಿತು

ಅರ್ಧಕ್ಕಿಂತ ಹೆಚ್ಚು ಕಥೆಗಳನ್ನು ಹೊಂದಿರುವ ಮೂರು-ಸಂಪುಟದಲ್ಲಿರುವ, ಎಂಭತ್ತ-ನಾಲ್ಕು ಕಥೆಗಳ ಸಂಗ್ರಹ ಗಲ್ಪಗುಚ್ಛ ವನ್ನು ಬರೆದ "ಸಾಧನ" ಅವಧಿಯು (೧೮೯೧–೧೮೯೫) ಟಾಗೋರ್‌‌ ಪಾಲಿಗೆ ಸಮೃದ್ಧಿಯ ಕಾಲ. ಅಂತಹ ಕಥೆಗಳು ಸಾಮಾನ್ಯವಾಗಿ ಟಾಗೋರ್‌ ಸುತ್ತಮುತ್ತದ ಪರಿಸ್ಥಿತಿ, ಆಧುನಿಕ ಮತ್ತು ಸಾಂಪ್ರದಾಯಿಕ ಚಿಂತನೆಗಳು ಮತ್ತು ಆಸಕ್ತಿದಾಯಕ ಪದಬಂಧಗಳ (ಅದರೊಂದಿಗೆ ಟಾಗೋರ್‌ ಅವರ ಬುದ್ಧಿಶಕ್ತಿಯನ್ನು ಪರಿಶೀಲಿಸುತ್ತಿದ್ದರು) ಮೇಲಿನ ಪರ್ಯಾಲೋಚನೆಯನ್ನು ತೋರಿಸುತ್ತವೆ.ಅವರ ಆರಂಭದ ಕಥೆಗಳನ್ನು ("ಸಾಧನ " ಅವಧಿಯಲ್ಲಿ ರಚಿಸಿದ) ಟಾಗೋರ್‌ ಚೈತನ್ಯ ಮತ್ತು ಸ್ವಾಭಾವಿಕ ಸಮೃದ್ಧಿಯಿಂದ ವಿಶಿಷ್ಟವಾಗಿ ಸಂಯೋಜಿಸಿದ್ದಾರೆ; ಈ ವೈಶಿಷ್ಟ್ಯಗಳು ಟಾಗೋರ್‌ ಜೀವನವನ್ನು ಅವರ ಕುಟುಂಬದ ವಿಸ್ತಾರ ಆಸ್ತಿಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಪಾತಿಸರ್, ಶಾಜದ್ಪುರ್, ಮತ್ತು ಶಿಲೈದ ಸಾಮಾನ್ಯ ಹಳ್ಳಿಗಳೊಂದಿಗೆ ಆತ್ಮೀಯ ಸಂಬಂಧವನ್ನು ಕಲ್ಪಿಸಿದವು.[170]ಅಲ್ಲಿ ಅವರು ಭಾರತೀಯ ಬಡ ಮತ್ತು ಸಾಮಾನ್ಯ ಜನರ ಜೀವನಗಳನ್ನು ಅವಲೋಕಿಸಿದರು; ಅವರ ಜೀವನದ ಆಳಕ್ಕಿಳಿದು ಟಾಗೋರ್‌ ಅಳೆಯಲಾರಂಭಿಸಿದರು. ಈ ಕಾಲ ಘಟ್ಟದ ವರೆಗೆ ಭಾರತೀಯ ಸಾಹಿತ್ಯದಲ್ಲಿ ಈ ರೀತಿಯ ಅನುಸಂಧಾನ ಆದದ್ದು ಇದೇ ಮೊದಲು.

"ದ ಫ್ರೂಟ್‌ಸೆಲ್ಲರ್ ಫ್ರಮ್ ಕಾಬುಲ್"‌ನಲ್ಲಿ ಟಾಗೋರ್‌, ಅಫ್ಘಾನಿ ವ್ಯಾಪಾರಿಯನ್ನು ಅನಿರೀಕ್ಷಿತವಾಗಿ ಸಂಧಿಸಿದ ನಗರ ವಾಸಿ ಮತ್ತು ಕಾದಂಬರಿಕಾರನ ನಡುವಿನ ಸಂಭಾಷಣೆಯನ್ನು ಪ್ರಥಮ ಪುರುಷದಲ್ಲಿ ನಿರೂಪಿಸಿದ್ದಾರೆ.ಪ್ರಪಂಚದ ಮತ್ತು ಭಾರತೀಯ ನಗರ ಜೀವನದ ಜೀವನೋಪಾಯ ಜಮೀನಿನ ಮಿತಿಯ ಬಲೆಯಲ್ಲಿ ಸಿಕ್ಕಿದವರಿಂದ ಭಾವಿಸಿದ ತವಕದ ಹಂಬಲಿಕೆಯನ್ನು ಸಾರೀಕರಿಸಲು ಅವರು ಪ್ರಯತ್ನಿಸಿದರು, ದೂರ ಮತ್ತು ಗುಡ್ಡಗಾಡು ಪ್ರದೇಶಗಳ ವಿವಿಧ ಜೀವನದ ಕನಸಿನ ನಾಟಕಗಳನ್ನು ನೀಡುತ್ತಾ: "ರಾಜನು ಗೆಲುವಿನ ಸಾಧನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಶರತ್ಕಾಲದ ಬೆಳಗಿತ್ತು; ಮತ್ತು ಕಲ್ಕತ್ತಾದ ನನ್ನ ಸಣ್ಣ ಮೂಲೆಯಿಂದ ಕದಲದ ನಾನು ನನ್ನ ಮನಸ್ಸನ್ನು ಸಂಪೂರ್ಣ ಪ್ರಪಂಚ ಸುತ್ತಲು ಬಿಡುತ್ತಿದ್ದೆ.ಮತ್ತೊಂದು ದೇಶದ ಹೆಸರು ಬಂದ ಕೂಡಲೇ ನನ್ನ ಹೃದಯ ಅಲ್ಲಿಗೆ ಹೋಗಿಬಿಡುತ್ತಿತ್ತು ...ನಾನು ಬೆಟ್ಟಗುಡ್ಡಗಳ, ಕಣಿವೆಗಳ, ಕಾಡುಗಳ ಕನಸಿನ ಜಾಲ ಹೆಣೆಯುತ್ತಿದ್ದೆ ....". ಹೆಚ್ಚಿನ ಇತರ ಗಲ್ಪಗುಚ್ಛ ಕಥೆಗಳು ಟಾಗೋರ್‌ರ ಸಬೂಜ್ ಪತ್ರ ಅವಧಿಯಲ್ಲಿ (೧೯೧೪–೧೯೧೭; ಟಾಗೋರ್‌ರವರ ಪತ್ರಿಕೆಗಳಲ್ಲಿ ಒಂದಕ್ಕೆ ಹೀಗೆಯೇ ಹೆಸರಿಡಲಾಗಿದೆ) ಬರೆಯಲ್ಪಟ್ಟಿವೆ.[176]

ಗೊಲ್ಪೊಗುಚ್ಛೊ (ಕಥೆಗಳ ಹಂದರ ) ಅನೇಕ ಯಶಸ್ವೀ ಚಲನಚಿತ್ರಗಳಿಗೆ ಮತ್ತು ನಾಟಕಗಳಿಗೆ ವಿಷಯ ವಸ್ತುವನ್ನು ಒದಗಿಸಿದೆ. ಅದು ಬಂಗಾಳಿ ಸಾಹಿತ್ಯದ ಕಲ್ಪಿತ ಕಥನ ಸಾಹಿತ್ಯದಲ್ಲಿ ಹೆಚ್ಚು ಪ್ರಸಿದ್ಧವಾದುದು.ಸತ್ಯಜಿತ್ ರೈರ ಚಾರುಲತ ಚಿತ್ರವು ಟಾಗೋರ್‌ರ ವಿವಾದಾತ್ಮಕ ಕಥೆ ನಷ್ಟನಿರ್ಹ್ (ಒಡೆದುಹೋದ ಗೂಡು )ಅನ್ನು ಆಧಾರಿಸಿದೆ.ಅತಿಥಿ ಯಲ್ಲಿ (ಇದನ್ನೂ ಸಹ ಚಲನಚಿತ್ರವಾಗಿ ಮಾಡಲಾಗಿದೆ), ಬ್ರಾಹ್ಮಣ ಹುಡುಗ ತಾರಪಾದ ಹಳ್ಳಿಯ ಜಮೀನ್ದಾರನ ದೋಣಿ ಪ್ರಯಾಣದಲ್ಲಿ ಜೊತೆಗೂಡುತ್ತಾನೆ. ಎಂದಿಗೂ ಎಲ್ಲೆಡೆ ಸುತ್ತಾಟ ಮಾಡುತ್ತಿರಬೇಕು ಎಂಬ ಉದ್ದೇಶದಿಂದ ಮನೆ ಬಟ್ಟು ಓಡಿ ಬಂದಿದ್ದೇನೆ ಎಂದು ಹುಡುಗ ಹೇಳುತ್ತಾನೆ.ಕರುಣೆತೋರಿದ ಜಮೀನ್ದಾರ ನು ಅವನನ್ನು ದತ್ತು ತೆಗೆದುಕೊಳ್ಳುತ್ತಾನೆ ಮತ್ತು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ.ಆದರೆ, ಮದುವೆಯ ಹಿಂದಿನ ರಾತ್ರಿ ತಾರಪದ ಮತ್ತೆ ಓಡಿ ಹೋಗುತ್ತಾನೆ. ಸ್ಟ್ರಿರ್ ಪತ್ರ ವು (ಪತ್ನಿಯಿಂದ ಬಂದ ಪತ್ರ ) ಬಂಗಾಳಿ ಸಾಹಿತ್ಯದ ಆರಂಭದ ದಿಟ್ಟ ಮಹಿಳಾ ಸ್ವಾತಂತ್ರ್ಯದ ಚಿತ್ರಣವನ್ನು ಹೊಂದಿದೆ.ಬಂಗಾಳಿ ಮಧ್ಯಮ ವರ್ಗದ ಪುರುಷ ಪ್ರಧಾನ ಸಾಂಕೇತಿಕ ವ್ಯಕ್ತಿಯ ಪತ್ನಿ, ಮೃಣಾಲ. ಅವಳೇ ನಾಯಕಿ. ಅವಳು ಪ್ರಯಾಣಿಸುತ್ತಿದ್ದಾಗ ಪತ್ರವೊಂದನ್ನು ಬರೆಯುತ್ತಾಳೆ (ಅದು ಸಂಪೂರ್ಣ ಕಥೆಯನ್ನು ಹೇಳುತ್ತದೆ).ಕ್ಷುಲ್ಲಕ ಬಾಳಿನ ಅವಳ ಹೋರಾಟವನ್ನು ಅದು ವಿವರಿಸುತ್ತದೆ.ಅವಳು ಅಮಿಯೊ ಬಚ್ಚೊ ಎಂಬ ಹೇಳಿಕೆಯೊಂದಿಗೆ, "ಪತಿಯ ಮನೆಗೆ ಹಿಂದಿರುಗುವುದಿಲ್ಲ, ಎಂದು ಸಾರುತ್ತಾಳೆ. ನಾನು ಬದುಕುತ್ತೇನೆ ಮತ್ತು ಇಲ್ಲಿಯೇ ಬದುಕುತ್ತೇನೆ..." ಎಂದು ಹೇಳುತ್ತಾಳೆ. ಐ ಬಚ್ಲುಮ್ : "ಮತ್ತು ನಾನು ಬದುಕಬೇಕು.ಇಲ್ಲಿ ನಾನು ಬದುಕುತ್ತೇನೆ".

ಹಿಂದು ಮದುವೆಯ ಆಚರಣೆ ಮತ್ತು ವಿವಾಹಿತ ಬಂಗಾಳಿ ಮಹಿಳೆಯರ ವಿಷಾದಕರ ಬರಡು ಜೀವನ, ಮಧ್ಯಮ ವರ್ಗದ ಭಾರತೀಯರ ಬೂಟಾಟಿಕೆಯ ಮೇಲೆ ಹೈಮಂತಿ ಯಲ್ಲಿ, ಟಾಗೋರ್‌ ವಾಗ್ದಾಳಿ ನಡೆಸಿದ್ದಾರೆ. ಸೂಕ್ಷ್ಮ ಸ್ವಭಾವದ ಯುವತಿ ಹೈಮಂತಿಯು ಅವಳ ನವಿರು ಸ್ವಭಾವದಿಂದಾಗಿ ಜೀವನವನ್ನು ಹೇಗೆ ತೊರೆಯಬೇಕಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.ರಾಮನ ಸಂಶಯದಿಂದಾಗಿ ಪ್ರಾಣತ್ಯಾಗದ ಪರೀಕ್ಷೆಗೊಳಪಟ್ಟ ಸೀತೆಯ ಸ್ಥಿತಿಯನ್ನು ವೈಭವೀಕರಿಸುವ ಹಿಂದು ಸಂಪ್ರದಾಯದ ಮೇಲೆ ಟಾಗೋರ್‌ ನೇರ ಆಕ್ರಮಣ ನಡೆಸುತ್ತಾರೆ.ಹಿಂದು-ಮುಸ್ಲಿಮ್ ಬಿಕ್ಕಟ್ಟುಗಳನ್ನು ಮುಸಲ್ಮಾನಿ ದೀದಿ ಯಲ್ಲಿ ಟಾಗೋರ್‌ ಪರಾಮರ್ಶಿಸಿದ್ದಾರೆ. ಅದು ಅವರ ಮಾನವೀಯ ಮುಖವನ್ನು ಅನೇಕ ರೂಪದಲ್ಲಿ ಅನಾವರಣಗೊಳಿಸುತ್ತದೆ.ಇನ್ನೊಂದೆಡೆ ಯುವಕನೊಬ್ಬ ತನ್ನ ಸಾಹಿತ್ಯ ಆಕಾಂಕ್ಷೆಗಳನ್ನು ಗುಪ್ತವಾಗಿಡುವುದನ್ನು ವಿವರಿಸುವ ಮೂಲಕ ದರ್ಪಹರಣ್‌ ಟಾಗೋರ್‌ರ ಸ್ವಪ್ರಜ್ಞೆಯನ್ನು ಬಿಂಬಿಸುತ್ತದೆ.ಅವರು ಪತ್ನಿಯನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಸ್ವಂತ ಸಾಹಿತ್ಯಕ ಭವಿಷ್ಯವನ್ನು ದಮನಿಸಿದರು. ಇದು ವನಿತೆಯರ ಕ್ಷೇತ್ರವಲ್ಲ ಎಂಬ ಅವರ ತಿಳಿವು ಹೀಗಾಗಲು ಕಾರಣವಾಯಿತು. ತಮ್ಮ ಯೌವನದಲ್ಲಿ ಟಾಗೋರ್‌ ಸ್ತ್ರೀಯರ ಬಗ್ಗೆ ಸಂಕೋಚ ಪ್ರವೃತ್ತಿ ಹೊಂದಿದ್ದರೆಂದು ತೋರುತ್ತದೆ.ತನ್ನ ಪತ್ನಿಯ ಪ್ರಬುದ್ಧ ನಿಲುವುಗಳಿಗಾಗಿ ಪತಿ ಹಪಹಪಿಸುವುದನ್ನು ದರ್ಪಹರಣ್‌ ಬಿಚ್ಚಿಡುತ್ತದೆ. ಇತರ ಟಾಗೋರ್ ಕಥೆಗಳಲ್ಲಿ ಒಂದಾದ ಜಿಬಿಟೊ ಒ ಮ್ರಿಟೊ ಬಂಗಾಳಿಗರಿಗೆ ಅವರು ಹೆಚ್ಚು ಬಳಸುತ್ತಿದ್ದ ನುಡಿಗಟ್ಟೊಂದನ್ನು ವಿವರಿಸುತ್ತದೆ. ಆ ನುಡಿಗಟ್ಟು ಹೀಗಿದೆ - ಕಾದೊಂಬಿನಿ ಮೊರಿಯ ಪ್ರೊಮಾನ್ ಕೊರಿಲೊ ಶಿ ಮೋರ್ ನೈ ("ಕಾದೊಂಬಿನಿ ಸತ್ತಳು, ಅದರ ಮೂಲಕ ಅವಳಿಲ್ಲ ಎಂಬುದನ್ನು ಸಾಬೀತು ಮಾಡಿದಳು").

ಕಾವ್ಯ

ನಾಲ್ಕು ಮಧ್ಯವಯಸ್ಕ ವ್ಯಕ್ತಿಗಳು ಮಸುಕಾದ ಹೊರಾಂಗಣದಲ್ಲಿ, ಮುಖಾಮುಖಿಯಾಗಿ ಕುಳಿತುಕೊಂಡು ಸಾಂಪ್ರದಾಯಿಕ ವಾದ್ಯಗಳಾದ ಮೃದಂಗ, ಕೊಳಲು, ಲೂಟ್ ವಾದ್ಯ, ಮತ್ತು ಮತ್ತೊಂದು ವಾದ್ಯವನ್ನು ನುಡಿಸುತ್ತಿದ್ದಾರೆ; ಅವರ ಸುತ್ತ ಅರ್ಧ-ಡಜನ್‌ನಷ್ಟು ಪ್ರೇಕ್ಷಕರು ಕುಳಿತುಕೊಂಡಿದ್ದಾರೆ, ನಿಂತುಕೊಂಡಿದ್ದಾರೆ.
ಶಾಂತಿನಿಕೇತನದಲ್ಲಿ ಹೋಲಿಯ ಸಂದರ್ಭದಲ್ಲಿ

ಶಾಸ್ತ್ರೀಯ ಸಾಂಪ್ರದಾಯಿಕತೆಯಿಂದ ವಿನೋದ, ಕಲ್ಪನೆ, ಮತ್ತು ಭಾವಪರವಶತೆಯ ಶೈಲಿಗೆ ಬದಲಾವಣೆಗೊಂಡ ಟಾಗೋರ್‌ರ ಕಾವ್ಯ ೧೫ನೇ ಮತ್ತು ೧೬ನೇ ಶತಮಾನದ [178] ಕವಿಗಳಿಂದ ಹುಟ್ಟಿದ ಪರಂಪರೆಯ ಮುಂದುವರಿಕೆ. ಉಪನಿಷತ್ತುಅನ್ನು ರಚಿಸಿದ ವ್ಯಾಸ ಮುಂತಾದ ಋಷಿ -ಸಾಹಿತಿಗಳು, ಭಕ್ತ-ಸೂಫಿ ಆಧ್ಯಾತ್ಮಿಕಾರ್ಥದ ಕಬೀರ, ಮತ್ತು ರಾಂಪ್ರಸಾದ್ ಮೊದಲಾದವರ ಅಧ್ಯಾತ್ಮ ಜ್ಞಾನದಿಂದ ಟಾಗೋರ್‌ ಪ್ರಭಾವಿತರಾದವರು.[180]ಗ್ರಾಮೀಣ ಬಂಗಾಳದ ಜಾನಪದ ಸಂಗೀತಕ್ಕೆ ಟಾಗೋರ್‌ ಒಡ್ಡಿಕೊಂಡ ನಂತರ ಅವರ ಕಾವ್ಯಕ್ಕೆ ಹೊಸಹೊಸ ಆಯಾಮಗಳು ದೊರೆಯಿತು ಮತ್ತು ಪಕ್ವವಾಯಿತು, ಅದು [181] ಜಾನಪದ ಗಾಯಕರಿಂದ, ವಿಶೇಷವಾಗಿ ಪ್ರಾಚೀನ ಕವಿಗಳು [[ಲಲನ್|ಟೆಂಪ್ಲೇಟು:ಯೂನಿಕೋಡ್]], ಹಾಡಲ್ಪಟ್ಟ ಲಾವಣಿಗಳನ್ನು ಒಳಗೊಂಡಿದೆ.[183][185]ಟಾಗೋರ್‌ರಿಂದ ಪುನಶ್ಯೋಧಿಸಲ್ಪಟ್ಟ ಮತ್ತು ಜನಪ್ರಿಯಗೊಳಿಸಲ್ಪಟ್ಟ ಇವು ೧೯ನೇ ಶತಮಾನದ Kartābhajā ಸ್ತ್ರೋತ್ರಗಳನ್ನು ಹೋಲುತ್ತವೆ. ಅವು ಅಂತರಂಗದ ದೈವತ್ವಕ್ಕೆ ಒತ್ತು ನೀಡುತ್ತವೆ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಸಾಂಪ್ರದಾಯಿಕತೆಯ ವಿರುದ್ಧ ಬಂಡಾಯವೇಳುತ್ತವೆ. ಅವರು ಶಿಲೈದಾಹದಲ್ಲಿದ್ದ ಸಂದರ್ಭದಲ್ಲಿ, ಅವರ ಪದ್ಯಗಳು ಮಾನರ್ ಮಾನುಸ್ ‌ನಿಂದ (ಬೌಲ್ಸ್‌ರ "ಹೃದ್ಗತ ಮಾನವ") ಮಾತನಾಡುವ ಮೂಲಕ ಅಥವಾ ಜೀವನ್ ದೇವತಾ ("ಅಂತರ್ಗತ ದೈವ")ದ ಬಗ್ಗೆ ಧ್ಯಾನ ಮಾಡುವ ಮೂಲಕ ಸಾಹಿತ್ಯಕ ಗುಣಮಟ್ಟವನ್ನು ಪಡೆದುಕೊಂಡವು. ಇವು ಈ ರೀತಿಯಾಗಿ, ಪ್ರಕೃತಿ ಮಾತೆಗೆ ಮನವಿ ಮತ್ತು ಮಾನವನ ಅಂತರಂಗದ ಭಾವನಾತ್ಮಕ ನಾಟಕದ ಕೊಂಡಿ ಸೇರಿಸುವ ಮೂಲಕ ದೈವತ್ವದೊಂದಿಗೆ ಸಂಪರ್ಕವನ್ನು ತರಲು ಪ್ರಯತ್ನಿಸಿದವು. ಎಂತಹ ಕಲಾತಂತ್ರಗಳನ್ನು ತಮ್ಮ Bhānusiṃha ಗೀತೆಗಳಲ್ಲಿ ಟಾಗೋರ್‌ ಬಳಸುತ್ತಿದ್ದರೆಂದರೆ (ಅವು ರಾಧ ಮತ್ತು ಕೃಷ್ಣರ ಪ್ರೇಮ ಪ್ರಸಂಗವನ್ನು ನಿರೂಪಿಸುತ್ತವೆ) ಅವುಗಳನ್ನು ಅವರು ಎಪ್ಪತ್ತು ವರ್ಷಗಳ ಕಾಲ ಪುನಃಪುನಃ ಪರಿಷ್ಕರಣೆಗೆ ಒಳಪಡಿಸುತ್ತಿದ್ದರು.

ಪ್ರಾಯೋಗಿಕ ಸಾಧನೆಗಳ ಮೂಲಕ ಬಂಗಾಳ ಸಾಹಿತ್ಯದಲ್ಲಿನ ಆಧುನಿಕತೆ ಮತ್ತು ವಾಸ್ತವಿಕತೆಯ ಸಂಕಟಸ್ಥಿತಿಗೆ ಟಾಗೋರ್‌ ೧೯೩೦ರಲ್ಲಿ, ಪ್ರತಿಕ್ರಿಯಿಸಿದರು. ಅಂತಹ ಬರಹಗಳಿಗೆ ಉದಾಹರಣೆಗಳೆಂದರೆ - ಆಫ್ರಿಕ ಮತ್ತು ಕ್ಯಾಮಲಿಯ , ಇವು ನಂತರದ ಅವರ ಪದ್ಯಗಳಲ್ಲಿ ಪ್ರಸಿದ್ಧವಾದವು.ಅವರು ಅಗೊಮ್ಮೆ ಈಗೊಮ್ಮೆ ಶಾಧು ಭಾಷಾ ವನ್ನು (ಸಂಸ್ಕೃತಭೂಯಿಷ್ಟ ಬಂಗಾಳಿ ಪ್ರಾಂತಭಾಷೆ) ಬಳಸಿಕೊಂಡು ಕಾವ್ಯ ರಚಿಸುತ್ತಿದ್ದರು. ನಂತರ ಅವರು ಚೋಲ್ತಿ ಭಾಷಾ ವನ್ನು (ಜನಪ್ರಿಯ ಪ್ರಾಂತ ಭಾಷೆ) ಬಳಸಲು ಪ್ರಾರಂಭಿಸಿದರು.ಮಾನಸಿ , ಸೋನಾರ್ ತೋರಿ (ಬಂಗಾರದ ದೋಣಿ ), ಬಲಕ (ಕಾಡು ಬಾತುಗಳು —ವಲಸೆಹೋಗುವ ಆತ್ಮಗಳು ಎಂಬುದಕ್ಕೆ ಇರುವ ರೂಪಕಾಲಂಕಾರ), ಮತ್ತು ಪುರೊಬಿ ಇವು ರವೀಂದ್ರರ ಇತರ ಗಮನಾರ್ಹ ಬರಹಗಳು. ಜೀವನ ಮತ್ತು ಸಾಧನೆಯ ಕ್ಷಣಿಕ ಗುಣದೊಂದಿಗೆ ಸಂಬಂಧವನ್ನು ಹೊಂದಿದ ಸೋನಾರ್ ತೋರಿಯು ಸುಪ್ರಸಿದ್ಧ ಪದ್ಯ. ಅದೇ ಹೆಸರಿನಿಂದ ಅದು ಮುಂದುವರಿಯುತ್ತದೆ; ಹಾಗೂ ಚಿರಸ್ಮರಣೀಯ ಸೂಕ್ತಿಯೊಂದಿಗೆ ಕೊನೆಗೊಳ್ಳುತ್ತದೆ "শূন্য নদীর তীরে রহিনু পড়ি / যাহা ছিল লয়ে গেল সোনার তরী" ("ಶುನ್ನೊ ನೊಡಿರ್ ಟೈರ್ ರೊಹಿನು ಪೊರಿ / ಜಹ ಚಿಲೊ ಲೊಯ್ ಗೆಲೊ ಶೊನಾರ್ ತೋರಿ"—"ನಾನು ಸಾಧಿಸಿದ ಎಲ್ಲವೂ ಬಂಗಾರದ ದೋಣಿಯಲ್ಲಿ ಕೊಂಡೊಯ್ಯಲ್ಪಟ್ಟಿದೆ-ನಾನು ಉಳಿದಿದ್ದೇನೆ."). ಅಂತಾರಾಷ್ಟ್ರೀಯವಾಗಿ, ಗೀತಾಂಜಲಿ (ಬಂಗಾಳಿ:গীতাঞ্জলি)ಯು ಟಾಗೋರ್‌ರವರ ಸರ್ವಶ್ರೇಷ್ಠ ಸಂಗ್ರಹವಾಗಿದೆ ಹಾಗೂ ಅದು ಅವರಿಗೆ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಗೀತಾಂಜಲಿಯ ಹಾಡು VII (গীতাঞ্জলি ೧೨೭):

ಇತರೆ ಉನ್ನತ ಕೃತಿಗಳು:

  • ಶೇಶರ್ ಕೋಬಿಟ (ಲಾಸ್ಟ್ ಪೋಯಮ್ ಮತ್ತು ಫೇರ್‌ವೆಲ್ ಸಾಂಗ್ ಎಂಬುದಾಗಿ ಎರಡು ಬಾರಿ ಅನುವಾದಿಸಿದ್ದಾರೆ) ಇದು ಅವರ ಹೆಚ್ಚು ಭಾವಗೀತಾತ್ಮಕವಾದ ಕಾದಂಬರಿ. ಪ್ರಮುಖ ಪಾತ್ರ ವಹಿಸಿರುವ ಕವಿಯೊಬ್ಬ ಇದರಲ್ಲಿ ಗೀತೆಗಳನ್ನು ರಚಿಸುತ್ತಾನೆ. ವಿಡಂಬನೆ ಹಾಗೂ ನವ್ಯೋತ್ತರತೆಯ ಅಂಶಗಳನ್ನು ಇದು ಒಳಗೊಂಡಿದೆ. ಕಾಲಕ್ಕೊಗ್ಗದ, ಕಂದಾಚಾರದ ಹೆಸರಾಂತ ಕವಿಯೊಬ್ಬನ ಖ್ಯಾತಿಯ ಮೇಲೆ ಕೆಲವು ಪಾತ್ರಗಳು ಮುತ್ತಿಗೆ ಹಾಕುತ್ತವೆ. ಪ್ರಾಸಂಗಿಕವಾಗಿ, ಆ ಕವಿಯ ಹೆಸರು ರವೀಂದ್ರನಾಥ ಟಾಗೋರ್‌ ಎಂದು ತಿಳಿದು ಬರುತ್ತೆ. ಇವರ ಬರಹಗಳಲ್ಲಿ ಕನಿಷ್ಠ ಮೆಚ್ಚುಗೆ ಪಡೆದ ಪ್ರಕಾರವೆಂದರೆ ಕಾದಂಬರಿಗಳು. ಸತ್ಯಜಿತ್ ರೈ ಮತ್ತು ಇನ್ನಿತರರಿಂದ ಚಲನಚಿತ್ರಗಳಾಗಿ ರೂಪಾಂತರ ಹೊಂದಿದ ಮೇಲೆ ಈ ಪ್ರಕಾರದ ಅವರ ಬರಹ ಹೊಸದಾಗಿ ಗಮನ ಸೆಳೆದವು. ಚೋಖೇರ್ ಬಾಲಿ , ಮತ್ತು ಘರೆ ಬೈರೆ ಇದಕ್ಕೆ ಉದಾಹರಣೆ. ಇವುಗಳ ಸೌಂಡ್‌ ಟ್ರ್ಯಾಕ್‌ (ಧ್ವನಿ ಪಥ) ರವೀಂದ್ರ ಸಂಗೀತ ವೆಂದೇ ವಿಶೇಷವಾಗಿ ಗುರುತಿಸಲ್ಪಟ್ಟಿವೆ. ಟಾಗೋರ್‌ ಭಾರತೀಯ ಇತಿಹಾಸ ದಿಂದ ಹಿಡಿದು ಭಾಷಾಶಾಸ್ತ್ರದವರೆಗೆ ಅನೇಕ ವಿಷಯಗಳ ವಾಸ್ತವ ಕೃತಿಗಳನ್ನು ಬರೆದಿದ್ದಾರೆ.ಆತ್ಮಚರಿತ್ರೆಗೆ ಸಂಬಂಧಿಸಿದ ಬರಹಗಳಲ್ಲದೆ, ಅವರ ಪ್ರವಾಸ ಕಥನಗಳು, ಪ್ರಬಂಧಗಳು, ಮತ್ತು ಯುರೋಪ್ ಜಾತ್ರಿರ್ ಪತ್ರೊ (ಯುರೋಪ್‌‌ನಿಂದ ಪತ್ರಗಳು ) ಮತ್ತು ಮನುಶೇರ್ ಧೊರ್ಮೊ (ಮಾನವನ ಧರ್ಮ ) ಮೊದಲಾದ ಉಪನ್ಯಾಸಗಳನ್ನು ಅನೇಕ ಸಂಪುಟಗಳಲ್ಲಿ ಹೊರತರಲಾಗಿದೆ.

ಸಂಗೀತ ಮತ್ತು ಕಲೆ

ಕೆಂಪು ಮತ್ತು ಕಿತ್ತಳೆ ಬಣ್ಣದ ಗೆರೆಗಳಿಂದ ಮಾಡಿದ, ಅಂಗಾಲು ಮತ್ತು ಕಾಲುಗಳನ್ನು ವಿಲಕ್ಷಣವಾಗಿ ರೂಪಿಸಿದ, ಮಹಿಳಾ ಉಡುಪು ಧರಿಸಿರುವ, ಭಾಗಶಃ ಮಸುಕಾಗಿರುವ ತಲೆ, ಮೇಲೆ ಚಾಚಿರುವ ಕೈಗಳನ್ನು ಹೊಂದಿರುವ ಸಿಟ್ಟನಿಂದಿರುವ ಅಥವಾ ಕೆರಳಿದಂತಿರುವ ಚಿತ್ರಕಲೆ. ಚಿತ್ರವು ಚಲನೆಯೊಂದಿಗೆ ಜೀವಂತವಾಗಿದೆ; ಹಿಂದಕ್ಕೆ ಕಂದುಬಣ್ಣದ ಹಿನ್ನೆಲೆಯನ್ನು ಹೊಂದಿದೆ.
"ನರ್ತಿಸುತ್ತಿರುವ ಹುಡುಗಿ", ದಿನಾಂಕ ಸೂಚಿಸದ ಹಾಳೆಯ ತುಣುಕಿನಲ್ಲಿ ಟಾಗೋರ್‌ ರವರಿಂದ ಗೀಚಲ್ಪಟ್ಟ ಶಾಹಿ.

ಸರಿ ಸುಮಾರು ೨,೨೩೦ ಪದ್ಯಗಳನ್ನು ಟಾಗೋರ್‌ ರಚಿಸಿದ್ದಾರೆ ಮತ್ತು ಅವರೊಬ್ಬ ಯಥೇಚ್ಛವಾಗಿ ಚಿತ್ರಗಳನ್ನು ಬಿಡಿಸಿರುವ ಕಲಾವಿದ. ಅವರ ಪದ್ಯಗಳು ಬಂಗಾಳಿ ಸಂಸ್ಕೃತಿಯ ಅವಿಭಾಜ್ಯ ಅಂಗ-ರವೀಂದ್ರ ಸಂಗೀತ (ಬಂಗಾಳಿ:রবীন্দ্র সংগীত—"ಟಾಗೋರ್ ಗೀತೆಗಳು")ವನ್ನು ಒಳಗೊಂಡಿದೆ. ರವೀಂದ್ರರ ಸಂಗೀತ ಮತ್ತು ಸಾಹಿತ್ಯ ಬೇರ್ಪಡಿಸಲಾಗಂಥವು-ಗೀತೆಗಳು, ಕಾದಂಬರಿಗಳ ಅಥವಾ ಕಿರುಕಥೆಗಳ ಭಾಗಗಳು, ಅಥವಾ ನಾಟಕಗಳು—ಅವರ ಹೆಚ್ಚಿನ ಪದ್ಯಗಳಿಗೆ ಗ್ರಾಸ ಒದಗಿಸಿತು.ಪ್ರಾಥಮಿಕವಾಗಿ ಅವರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಠುಮುರಿ ಶೈಲಿಯಿಂದ ಪ್ರಭಾವಿತರಾದವರು. ಅವರ ಆರಂಭದ ಶೋಕಗೀತೆ ಮಾದರಿಯ ಬ್ರಾಹ್ಮೋ ಭಕ್ತಿ ಶ್ಲೋಕಗಳಿಂದ ಹಿಡಿದು, ಹೆಚ್ಚೂ ಕಡಿಮೆ ಶೃಂಗಾರ ಕಾವ್ಯದಂತೆ ಮಾನವನ ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಸ್ವರಶ್ರೇಣಿಯ ಹಾಡುಗಳನ್ನು ಹರಿಯಬಿಟ್ಟರು. ಅವು ಬೇರೆಬೇರೆ ಮಟ್ಟದಲ್ಲಿ ಶಾಸ್ತ್ರೀಯ ರಾಗಗಳ ಸ್ವರ ವಿನ್ಯಾಸವನ್ನು ಮೀರಲು ಪ್ರಯತ್ನಿಸಿದವು. ಕೆಲವೊಮ್ಮೆ ಅವರ ಪದ್ಯಗಳು ರಾಗದ ಇಂಪು ಮತ್ತು ಲಯಗಳನ್ನು ಯಶಸ್ವಿಯಾಗಿ ಅನುಕರಿಸಿದರೂ ಸಹ ವಿವಿಧ ರಾಗಗಳ ಆಂಶಿಕ ಸಂಮ್ಮಿಶ್ರಣ ಮಾಡಿ ಅವರು ಹೊಸತನ್ನು ಸ್ಋಷ್ಟಿಸುತ್ತಿದ್ದರು.

ಭಾವೋತ್ತೇಜಕ ಶಕ್ತಿ ಮತ್ತು ಸುಂದರತೆಯ ಸಮ್ಮಿಲನ ಬಂಗಾಳಿಗರಲ್ಲಿ ಟಾಗೋರ್‌ ಕಾವ್ಯಕ್ಕಿಂತಲೂ ಮಿಗಿಲಾದವು ಎಂದು ವಿವರಿಸಲ್ಪಟ್ಟಿದೆ. ಆಧುನಿಕ ಪುನರವಲೋಕನ ಆಧುನಿಕ ವಿಮರ್ಶಕರು ಹೀಗೆ ಹೇಳುತ್ತಾರೆ, "ಬಂಗಾಳದಲ್ಲಿ ರವೀಂದ್ರನಾಥರ ಪದ್ಯಗಳನ್ನು ಹಾಡದ ಅಥವಾ ಹಾಡಲು ಪ್ರಯತ್ನಿಸದ ಸುಸಂಸ್ಕೃತ ಮನೆಯೇ ಇಲ್ಲ. ಹಳ್ಳಿಯ ಅನಕ್ಷರಸ್ಥರೂ ಸಹ ಅವರ ಪದ್ಯಗಳನ್ನು ಹಾಡುತ್ತಿದ್ದರು". ದ ಅಬ್ಸರ್ವರ್ ‌ನ ಅರ್ಥೂರ್ ಸ್ಟ್ರಾಂಗ್‌ವೇಸ್ಹಿಂದುಸ್ಥಾನಿ ಸಂಗೀತ ದಲ್ಲಿ ರವೀಂದ್ರ ಸಂಗೀತ ಕ್ಕೆ ಬಂಗಾಳಿಯರಲ್ಲದವರನ್ನೂ ಪರಿಚಯಿಸಿದರು, ಅದನ್ನು ಹೀಗೆಂದು ಹೇಳುತ್ತಾ "ವ್ಯಕ್ತಿತ್ವದ ವಾಹಿನಿ. [ಅದು] ಸ್ವಾಧೀನಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳು ಹಸ್ತವನ್ನು ಚಾಚಿದ ಆ ಧ್ವನಿ ಮಾಧುರ್ಯಕ್ಕಾಗಿ ಸಂಗೀತ ವ್ಯವಸ್ಥೆಯ ಹಿಂದೆ ಹೋಗುತ್ತದೆ." ಬಾಂಗ್ಲಾದೇಶದ ರಾಷ್ಟ್ರಗೀತೆ ಅಮರ್ ಶೋನರ್ ಬಾಂಗ್ಲ (ಬಂಗಾಳಿ:আমার সোনার বাঙলা) ಮತ್ತು ಭಾರತದ ರಾಷ್ಟ್ರಗೀತೆ ಜನ ಗಣ ಮನ{/0 {2/} } ಅವುಗಳಲ್ಲಿ ಪ್ರಮುಖವಾದವು. ಎರಡು ರಾಷ್ಟ್ರ ಗೀತೆಗಳನ್ನು ರಚಿಸಿದ ಟಾಗೋರ್‌ಗೆ ವ್ಯಕ್ತಿ ವೈಶಿಷ್ಟ್ಯದ ಛಾಪನ್ನು ನೀಡಿದವು.ಸಿತಾರ್ ಪರಿಣತರಾದ ವಿಲಾಯತ್ ಖಾನ್, ಮತ್ತು ಸರೋದ್‌ವಾದಕರಾದ ಬುದ್ಧದೇವ್ ದಾಸ್‌ಗುಪ್ತ ಮತ್ತು ಅಮ್ಜದ್ ಆಲಿ ಖಾನ್‌ರಂತಹ ಸಂಗೀತಗಾರರ ಶೈಲಿಯ ಮೇಲೆ ಇವರು ಗಾಢ ಪರಿಣಾಮ ಬೀರಿದರು.

ಬುಡಕಟ್ಟು ಜನಾಂಗದ ಶವಸಂಸ್ಕಾರದ ಉಡುಗೆಯನ್ನು ಒಳಗೊಂಡ ವಿಲಕ್ಷಣ ಚಿತ್ರಣದ ಕಪ್ಪು-ಬಿಳುಪು ಛಾಯಾಚಿತ್ರ.
ಟಾಗೋರ್‌ರವರು ಪ್ರಾಕ್ತನತೆಯಲ್ಲಿ ತೊಡಗಿದರು: ಉತ್ತರ ನ್ಯೂ ಐರ್ಲ್ಯಾಂಡ್‌ನ ನೀಲಿಬಣ್ಣದ ಮಲಗನ್ ಉಡುಗೆಯ ಚಿತ್ರಣ

ಅರವತ್ತರ ವಯಸ್ಸಿನಲ್ಲಿ ಟಾಗೋರ್‌ ರೇಖಾ ಚಿತ್ರ ಮತ್ತು ವರ್ಣ ಚಿತ್ರ ಕಲೆಯನ್ನು ಪ್ರಾರಂಭಿಸಿದರು; ಅವರ ಅನೇಕ ಸಾಧನೆಗಳ ಯಶಸ್ವೀ ಪ್ರದರ್ಶನಗಳು ಯುರೋಪ್‌ನಾದ್ಯಂತ ನಡೆಯಿತು. ದಕ್ಷಿಣ ಫ್ರಾನ್ಸ್‌ನಲ್ಲಿ ಅವರು ಭೇಟಿ ಮಾಡಿದ ಕಲಾವಿದರಿಂದ ಪ್ರೋತ್ಸಾಹಿಸಿಲ್ಪಟ್ಟರು ಮತ್ತು ಪ್ಯಾರಿಸ್‌ನಲ್ಲಿ ಅದು ಪ್ರಥಮ ಪ್ರದರ್ಶನ ಕಂಡಿತು. ಟಾಗೋರ್‌—ಹೆಚ್ಚಾಗಿ ಪ್ರದರ್ಶನಗೊಂಡ ಪ್ರೊಟನೋಪಿಯ ("ವರ್ಣ ಅಂಧತೆ"), ಅಥವಾ ಬಣ್ಣ ಗ್ರಹಣಶಕ್ತಿಯ ಭಾಗಶಃ ಕೊರತೆ ( ಟಾಗೋರ್‌ರಲ್ಲಿದ್ದಂತೆ ಕೆಂಪು-ಹಸಿರು,)-ಕಲಾತ್ಮಕವಾದ ಮತ್ತು ಬಣ್ಣ ರೂಪರೇಖೆಯಲ್ಲಿ ವೈಶಿಷ್ಟತೆಯಿರುವ ಶೈಲಿಯಲ್ಲಿ ಚಿತ್ರಬಿಡಿಸಿದ್ದಾರೆ. ಅದೇನೇ ಇದ್ದರೂ, ಉತ್ತರ ನ್ಯೂ ಐರ್ಲ್ಯಾಂಡ್‌ನ ಕರಕುಶಲ ಕೆಲಸಗಳು, ಕೆನಡದ ಪಶ್ಚಿಮ ಕರಾವಳಿಯ(ಬ್ರಿಟಿಷ್ ಕೊಲಂಬಿಯ)ಹೈದಕೆತ್ತನೆಯ ಶಿಲ್ಪಗಳು, ಮತ್ತು ಮ್ಯಾಕ್ಸ್ ಪೆಚ್ಸ್ಟೈನ್‌ನ ಮರದ ಪಡಿಯಚ್ಚುಗಳನ್ನೂ ಒಳಗೊಂಡು, ಟಾಗೋರ್‌ ಅಸಂಖ್ಯಾತ ಶೈಲಿಗಳನ್ನು ಉತ್ಸಾಹದಿಂದ ಅನುಸರಿಸಿದ್ದಾರೆ. ಟಾಗೋರ್‌ ಸರಳ ಸಮಂಜಸ ರಚನೆಗಳನ್ನೂ ಒಳಗೊಂಡು, ಅವರ ಸ್ವಂತ ಬರವಣಿಗೆಗಳನ್ನು, ಅವಸರದಲ್ಲಿ ಬರೆದ ಕೈಬರಹಗಳನ್ನು, ಹೊಡೆದುಹಾಕಿದವುಗಳನ್ನು, ಮತ್ತು ಅವರ ಹಸ್ತಪ್ರತಿಯಲ್ಲಿರುವ ಪದ ವಿನ್ಯಾಸಗಳನ್ನು ಸರಳ ಕಲಾತ್ಮಕ ಸ್ವರಪುಂಜಗಳಾಗಿ ಅಂದಗೊಳಿಸುವ ಕಲಾತ್ಮಕ ನಿಲುವು ಅವರಲ್ಲಿತ್ತು.

ಟಾಗೋರ್‍ ಕಾವ್ಯಗಳಿಗೆ ಅನೇಕ ಸಂಗೀತಕಾರರು ಸಂಗೀತ ಸಂಯೋಜನೆ ನೀಡಿದ್ದಾರೆ, ಶಾಸ್ತ್ರೀಯ ಸಂಗೀತಕಾರ ಅರ್ಥೂರ್ ಶೆಫರ್ಡ್‌ರವರ ಅತ್ಯುಚ್ಚ ತಾರ ಸ್ಥಾಯಿಯಲ್ಲಿ ತ್ರಿಸ್ವರ ಮತ್ತು ತಂತಿವಾದ್ಯ ಚತುಷ್ಕ ಹಾಗೂ ಟಾಗೋರ್‌ರ ಕಾವ್ಯ ಗೀತಾಂಜಲಿಯ "ಸ್ಟ್ರೀಮ್ ಆಫ್ ಲೈಫ್"‌ನ ರೂಪಾಂತರ, ಸಂಗೀತಕಾರ ಗ್ಯಾರಿ ಸ್ಕೈಮ್ಯನಾನ್‌ರವರ "ಪ್ರಾಣ್" ಮೊದಲಾದವು ಅವುಗಳಲ್ಲಿ ಪ್ರಮುಖವಾದವುಗಳು. ಅನಂತರದವುಗಳಿಗೆ, ಇಂಟರ್ನೆಟ್ ಪ್ರಖ್ಯಾತಿ ಮಟ್ ಹಾರ್ಡಿಂಗ್‌ನ ೨೦೦೮ ವೈರಲ್ ವೀಡಿಯೊಗೆ ಜತೆಗೂಡಲು ಪಲ್ಬಾಶ ಸಿದ್ದಿಕೀ ಸಂಗೀತ ನೀಡಿದ್ದಾರೆ ಹಾಗೂ ಅವು ಅವರ ಧ್ವನಿಯಿಂದಲೇ ಮೂಡಿಬಂದಿವೆ.

ರಾಜಕೀಯ ನಿಲುವು

At a formal function, an aged bald man and an old women are humbly dressed and seated side-by-side with legs folded on a rug-strewn dais at right; the man looks at a bearded, robed, and garlanded old man seated on another dais at left, who is reading from a sheet of paper held in his left hand. In the foreground, various dishes and ceremonial objects are arrayed; in the background, a half-dozen dignitaries and dozens of ordinary people observe.
ಗಾಂಧಿ ಮತ್ತು ಪತ್ನಿ ಕಸ್ತೂರಬಾ ಜೊತೆಯಲ್ಲಿ ಶಾಂತಿನಿಕೇತನದಲ್ಲಿ ೧೯೪೦ರಲ್ಲಿ

ಟಾಗೋರ್‌ರ ರಾಜಕೀಯ ಚಿಂತನೆ ಕ್ಲಿಷ್ಟಕರ.ಸಾರ್ವಭೌಮತ್ವವನ್ನು ವಿರೋಧಿಸಿದ ಅವರು ಭಾರತೀಯ ರಾಷ್ಟ್ರೀಯತಾವಾದಿಗಳನ್ನು ಬೆಂಬಲಿಸಿದರು. ಹಿಂದು-ಜರ್ಮನ್ ಗುಪ್ತಕೂಟ ಪ್ರಯೋಗದ ಸಂದರ್ಭದಲ್ಲಿ ಅವರು ಮಂಡಿಸಿದ ರುಜುವಾತುಗಳು ಮತ್ತು ನಂತರದ ವಿವರಣೆಗಳು ಘಾದರೈಟ್ ಗುಪ್ತಕೂಟದ ಬಗ್ಗೆ ಅವರಿಗೆ ಅರಿವಿತ್ತಂಬುದನ್ನು ದೃಢೀಕರಿಸಿವೆ. ಅವರು ಜಪಾನಿನ ಪ್ರಧಾನ ಮಂತ್ರಿ ತೆರೌಚಿ ಮಸಟೇಕ್ ಮತ್ತು ಮಾಜಿ ಪ್ರಧಾನ ಸಚಿವ ಒಕುಮ ಶಿಗೆನೊಬು‌ರವರ ಬೆಂಬಲಕ್ಕಾಗಿ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ. ಆದರೂ ಅವರು ಸ್ವದೇಶಿ ಚಳವಳಿಯನ್ನು ಅವರ ೧೯೨೫ರ ಪ್ರಬಂಧ "ದ ಕಲ್ಟ್ ಆಫ್ ದ ಚರಕ"ದಲ್ಲಿ ತೀಕ್ಷ್ಣ ವಿಡಂಬನೆಗೆ ಈಡು ಮಾಡಿದ್ದಾರೆ.ಬ್ರಿಟಿಷ್ ಸಾರ್ವಭೌಮತ್ವವನ್ನು "ನಮ್ಮ ಸಾಮಾಜಿಕ ರೋಗದ ರಾಜಕೀಯ ಲಕ್ಷಣಗಳು" ಎಂದು ಟೀಕಿಸಿದರು. "ಅಂಧ ಕ್ರಾಂತಿಯ ಪ್ರಶ್ನೆಯೇ ಇಲ್ಲ, ಆದರೆ ದೃಢ ಮತ್ತು ಉದ್ದೇಶಪೂರ್ಣ ಶಿಕ್ಷಣದ ಅಗತ್ಯವಿದೆ" ಎಂಬುದನ್ನು ಸ್ವೀಕರಿಸಲು ಭಾರತೀಯರನ್ನು ಪ್ರೇರೇಪಿಸಿದರು. ಈ ಮೂಲಕ, ಅವರು ಸ್ವ-ಸಹಾಯ ಮತ್ತು ವೈಚಾರಿಕ ಸಮ್ಋದ್ಧಿ ಜನಸಾಮಾನ್ಯರಲ್ಲಿ ಬೆಳೆಯಲಿ, ಅದೊಂದೇ ಪರ್ಯಾಯ ಮಾರ್ಗ ಎಂದರು.

ಇಂತಹ ಅಭಿಪ್ರಾಯಗಳು ಅನೇಕರನ್ನು ಅನಿವಾರ್ಯವಾಗಿ ಕೆರಳಿಸಿತು. ೧೯೧೬ರಲ್ಲಿ ಅವರು ಸ್ಯಾನ್ ಫ್ರಾನ್ಸಿಸ್ಕೊ ಹೋಟೆಲ್‌ನಲ್ಲಿ ತಂಗಿದ್ದಾಗ ಭಾರತೀಯ ವಲಸಿಗರಿಂದ ಹತ್ಯೆಯಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಹತ್ಯೆಗೆ ಹೊಂಚು ಹಾಕಿದ್ದ ಕೊಲೆಪಾತಕರು ಜಗಳದಲ್ಲಿ ತೊಡಗಿದ್ದರಿಂದ ಆ ಸಂಚು ವಿಫಲವಾಯಿತು. ಆದರೂ ಟಾಗೋರ್‌ ಭಾರತೀಯ ಸ್ವತಂತ್ರ ಚಳವಳಿಯನ್ನು ಪ್ರತಿಬಿಂಬಿಸುವ ಹಾಡುಗಳನ್ನು ಬರೆದರು ಮತ್ತು ೧೯೧೯ರ ಜಲಿಯನ್‌ವಾಲಾ ಬಾಘ್ ಹತ್ಯಾಕಾಂಡದ ವಿರುದ್ಧದ ಪ್ರತಿಭಟನಾರ್ಥ ಅವರ ನೈಟ್‌ಹುಡ್‌ ಪದವಿಯನ್ನು ಪರಿತ್ಯಜಿಸಿದರು. ಟಾಗೋರ್‌ರ ಹೆಚ್ಚು ರಾಜಕೀಯ ಜವಾಬ್ದಾರಿಯುತ ಕಾರ್ಯಗಳೆಂದರೆ - "ಚಿಟ್ಟೊ ಜೇಥ ಭಾಯ್‌ಶುನ್ಯೊ" ("ಅಂಜಿಕೆಯಿಲ್ಲದ ಮನವಿದ್ದಲ್ಲಿ") ಮತ್ತು ಹೆಚ್ಚಾಗಿ ಗಮನಸೆಳೆದ ಹಾಗೂ ಗಾಂಧಿಯವರಿಂದ ಮೆಚ್ಚುಗೆಗೆ ಪಾತ್ರವಾದ "ಎಕ್ಲ ಚಲೊ ರೆ" ("ನಿನ್ನ ಕರೆಗೆ ಅವರು ಓಗೊಡದಿದ್ದರೆ, ನಡೆ ಒಬ್ಬನೇ ಮುನ್ನಡೆ"). ಗಾಂಧಿ-ಟಾಗೋರ್‌ ಅವರದು ಪ್ರಕ್ಷುಬ್ಧ ಸಂಬಂಧ.ಆದರೂ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾರ ಸಮುದಾಯ ನಿರ್ಮಾಣವಾಗ ಬೇಕು ಎಂಬ ಗಾಂಧಿ-ಅಂಬೇಡ್ಕರ್ ನಡುವಿನ ಜಗಳವನ್ನು ಪರಿಹರಿಸುವಲ್ಲಿ ಹಾಗೂ ಗಾಂಧಿಯವರ "ಆಮರಣ" ಉಪವಾಸವನ್ನು ಕೊನೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು.

ಒಂದು ಹಕ್ಕಿಯನ್ನು ಪಂಜರದಲ್ಲಿಟ್ಟು, ಅದು ಸಾಯುವವರೆಗೆ ಪುಸ್ತಕದ ಹರಿದ ಪುಟಗಳನ್ನು ಬಲವಂತವಾಗಿ ತಿನ್ನಿಸುವ ಕಥೆ "ದ ಪ್ಯಾರೊಟ್ಸ್ ಟ್ರೈನಿಂಗ್"‌ನಲ್ಲಿ ಟಾಗೋರ್‌ ಸಾಂಪ್ರದಾಯಕ ಶಾಲಾ ಪದ್ಧತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಈ ಸಾಧನೆಗಳು ಟಾಗೋರ್‌ರವರು, ೧೯೧೭ರ ಅಕ್ಟೋಬರ್ ೧೧ರಲ್ಲಿ ಹೊಸರೀತಿಯ ವಿಶ್ವಾವಿದ್ಯಾನಿಲಯವನ್ನು ರೂಪಿಸಲು ಕ್ಯಾಲಿಫೋರ್ನಿಯಾದ ಸಂತ ಬಾರ್ಬರಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕನಸು ಕಂಡರು. "[ಅವರ ಆಶ್ರಮ] ಶಾಂತಿನಿಕೇತನವನ್ನು ಭಾರತ ಮತ್ತು ಪ್ರಪಂಚದ ಸಂಪರ್ಕ ಸೇತುವಾಗಿ ಮಾಡಬೇಕು, [ಹಾಗೂ] ರಾಷ್ಟ್ರ ಮತ್ತು ಭೌಗೋಳಿಕ ಸೀಮಾ ರೇಖೆಯ ಮಿತಿಗಳನ್ನು ದಾಟಿ ಮಾನವೀಯತೆ ಶಿಕ್ಷಣದ ವಿಶ್ವಕೇಂದ್ರವಾಗಿ ಮಾಡಬೇಕು" ಎಂದು ಅಪೇಕ್ಷಿಸಿದರು. ಅವರು ವಿಶ್ವ-ಭಾರತಿζ[›] ಎಂದು ಹೆಸರಿಸಿದ ಶಾಲೆಯ ಅಡಿಪಾಯ ೧೯೧೮ರ ಡಿಸೆಂಬರ್ ೨೨ರಲ್ಲಿ ಹಾಕಲ್ಪಟ್ಟಿತು; ಅದನ್ನು ೧೯೨೧ರ ಡಿಸೆಂಬರ್ ೨೨ರಲ್ಲಿ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಿಗೆ ವೈಯಕ್ತಿಕ ಮಾರ್ಗದರ್ಶನ ನೀಡಲು ಗುರುಗಳ ನ್ನು ನೇಮಕಮಾಡಿಕೊಂಡು ಬ್ರಹ್ಮಚರ್ಯ ಶೈಕ್ಷಣಿಕ ಸಂಸ್ಥೆಯನ್ನು ಇಲ್ಲಿ ಟಾಗೋರ್‌ ಸ್ಥಾಪಿಸಿದರು. ಶಾಲೆಗಾಗಿ ಮತ್ತು ಶಾಲಾ ಸಿಬ್ಬಂದಿ ವರ್ಗಕ್ಕಾಗಿ ಹಣ ಸಂಗ್ರಹಿಸಲು ಟಾಗೋರ್‌ ತುಂಬಾ ಶ್ರಮಿಸಿದರು. ಅವರ ನೊಬೆಲ್ ಪ್ರಶಸ್ತಿಯ ಹಣವನ್ನೆಲ್ಲಾ ಅದಕ್ಕಾಗಿ ವಿನಿಯೋಗಿಸಿದರು.ಶಾಂತಿನಿಕೇತನದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಮಾಡುವಂಥ ಜಬಾಬ್ದಾರಿಗಳಲ್ಲಿ ಟಾಗೋರ್‌ ಸದಾ ಕಾರ್ಯನಿರತರಾಗಿರುವಂತೆ ಮಾಡಿದವು. ಬೆಳಗ್ಗೆ ತರಗತಿಗಳಲ್ಲಿ ಬೋಧಿಸಿದರೆ ಮಧ್ಯಾಹ್ನ ಮತ್ತು ಸಂಜೆ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳನ್ನು ಬರೆಯುವುದರಲ್ಲಿ ತಲ್ಲೀನರಾಗಿರುತ್ತಿದ್ದರು.ಶಾಲೆಗಾಗಿ ೧೯೧೯ ಮತ್ತು ೧೯೨೧ರ ನಡುವಿನ ಅವಧಿಯಲ್ಲಿ ಯುರೋಪ್ ಮತ್ತು U.S.ನಲ್ಲಿ ಟಾಗೋರ್‌ ಹಣ ಸಂಗ್ರಹಿಸಿದರು.

ಪರಿಣಾಮ ಮತ್ತು ಆಸ್ತಿ

ಗುಲಾಬಿ ಬಣ್ಣದ ಗೋಡೆಗಳನ್ನು ಮತ್ತು ಮರದ ಫಲಕ ಜೋಡಣೆಯನ್ನು ಹೊಂದಿರುವ, ಸಣ್ಣ ಅಲಂಕೃತ ಅಷ್ಟಕೋನೀಯ ವಸ್ತುಸಂಗ್ರಹಾಲಯವನ್ನು ಹೊಂದಿರುವ, ದೊಡ್ಡ ಕಂಬಗಳ ಮೇಲಿರುವ ಉದ್ದ ಮರದ ಪೀಠಕ್ಕೆ ಒರಗಿ ನಿಂತಿರುವ ಕಂಚಿನ ಎದೆಯ ಮಧ್ಯ-ವಯಸ್ಸಿನ ಮತ್ತು ಉದ್ದ ಗಡ್ಡವನ್ನು ಹೊಂದಿರುವ ವ್ಯಕ್ತಿ; ಎಡದಲ್ಲಿ, ವೇಷಭೂಷಣದಿಂದ ಅಲಂಕೃತಗೊಂಡ ಯುವಜನರು ನಾಟಕವಾಡುತ್ತಿರುವ ದೃಶ್ಯ ಹಾಗೂ ಬಲದಲ್ಲಿ, ಕಪ್ಪು ಮತ್ತು ಬಿಳಿ ನೀಳುಡುಪನ್ನು ಧರಿಸಿರುವ ಉದ್ದ ಬಿಳಿ ಗಡ್ಡದ ವಯಸ್ಸಾದ ಗಂಡಸಿನ ಪ್ರತಿಕೃತಿಯನ್ನು ತೋರಿಸುವ ಟಾಗೋರ್‌ರವರ ಎರಡು ಚಿತ್ರಕಲೆಯಿರುವ ಗೋಡೆಗೆ ಮುಖಮಾಡಿ ನಿಂತುಕೊಂಡಿದ್ದಾನೆ.
ಟಾಗೋರ್ರವರ ಕೊಠಡಿ, ಸರ್ದಾರ್ ಪಟೇಲ್ ಮೆಮೋರಿಯಲ್, ಅಹ್ಮದಾಬಾದ್

ಟಾಗೋರ್‌ ಇಂದಿಗೂ ಎಷ್ಟು ಪ್ರಸ್ತುತ ಎಂಬುದಕ್ಕೆ ಅವರ ಗೌರವಾರ್ಥ ಆಚರಿಸಲಾಗುವ ಹಬ್ಬಗಳೇ ಒಂದು ಮಾನದಂಡ: ಟಾಗೋರ್‌ ಜನ್ಮದಿನೋತ್ಸವ ಕಬಿಪ್ರಾಣಮ್ ; ಅಮೇರಿಕ ಸಂಯುಕ್ತ ಸಂಸ್ಥಾನದ ಇಲ್ಲಿನೋಯಿಸ್‌ನ ಉರ್ಬಾನದಲ್ಲಿ ನಡೆದ ಟಾಗೋರ್ ವಾರ್ಷಿಕೋತ್ಸವ; ರವೀಂದ್ರ ಪಥ ಪರಿಕ್ರಮ ಯಾತ್ರಾರ್ಥಿಗಳು ಕಲ್ಕತ್ತಾದಿಂದ ಶಾಂತಿನಿಕೇತನಕ್ಕೆ ಹೋಗುವುದು; ಪ್ರಮುಖ ವಾರ್ಷಿಕೋತ್ಸವಗಳಲ್ಲಿ ನಡೆಸಲ್ಪಡುವ ಟಾಗೋರ್‌ರ ಕಾವ್ಯದ ವಿಧ್ಯುಕ್ತ ವಾಚನ; ಹಾಗೂ ಇತ್ಯಾದಿಗಳು. ಭಾಷೆ ಮತ್ತು ಕಲೆಯಿಂದ ಇತಿಹಾಸ ಮತ್ತು ರಾಜಕೀಯದವರೆಗೆ ಅನುರಣಿಸಿದ ಈ ಆಸ್ತಿ ಬಂಗಾಳಿ ಸಂಸ್ಕೃತಿಯಲ್ಲಿ ಸ್ಫುಟವಾಗಿ ಗೋಚರಿಸುತ್ತದೆ.ಅವರೊಬ್ಬ 'ಶಿಖರಪ್ರಾಯ ಪುರುಷ', 'ಬಹುಮುಖಿ ವ್ಯಕ್ತಿತ್ವದ ಇವರ ಚಿಂತನೆ ಇಂದಿಗೂ ಪ್ರಸ್ತುತ' ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಟಾಗೋರ್‌ ಅವರನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ಟಾಗೋರ್‌ರ ಬಂಗಾಳಿ-ಭಾಷಾ ಬರಹಗಳನ್ನು—೧೯೩೯ Rabīndra Rachanāvalī —ಬಂಗಾಳದ ಅಮೂಲ್ಯ ಸಾಂಸ್ಕೃತಿಕ ಸಂಪತ್ತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. "ಭಾರತ ಸೃಷ್ಟಿಸಿದ ಮಹಾ ಕವಿ" ಎಂದು ಟಾಗೋರ್‌ ತಮ್ಮನ್ನು ತಾವು ಬಣ್ಣಿಸಿಕೊಂಡಿದ್ದಾರೆ.

ಟಾಗೋರ್‌ ಯುರೋಪ್, ಉತ್ತರ ಅಮೇರಿಕ, ಮತ್ತು ಪೂರ್ವ ಏಷ್ಯಾದ್ಯಂತ ಪ್ರಖ್ಯಾತರು. ಅವರು ಪ್ರಗತಿಶೀಲ ಸಹಶಿಕ್ಷಣ ಸಂಸ್ಥೆ ಡಾರ್ಟಿಂಗ್‌ಟನ್ ಹಾಲ್ ಸ್ಕೂಲ್‌ ಸ್ಥಾಪನೆಯ ಪ್ರಮುಖ ರೂವಾರಿ; ಜಪಾನಿನಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ಯಶುನಾರಿ ಕವಬತರಂತಹ ಅನೇಕ ವ್ಯಕ್ತಿಗಳ ಮೇಲೆ ತಮ್ಮ ಪ್ರಭಾವ ಬೀರಿದರು. ಬಹುವಾಗಿ ಇಂಗ್ಲೀಷ್, ಡಚ್, ಜರ್ಮನ್, ಸ್ಪ್ಯಾನಿಶ್, ಮತ್ತು ಇತರ ಯುರೋಪಿಯನ್ ಭಾಷೆಗಳಿಗೆ ಅನುವಾದಗೊಂಡಿವೆ. ಜೆಕ್ ದೇಶದ ಇತಿಹಾಸಜ್ಞ ವಿನ್ಸೆಂಕ್ ಲೆಸ್ನಿ, ಫ್ರೆಂಚ್ ನೊಬೆಲ್ ಪ್ರಶಸ್ತಿ ವಿಜೇತ ಆಂಡ್ರೆ ಗೈಡ್, ರಷ್ಯಾದ ಕವಿ ಅನ್ನ ಅಖ್ಮತೋವ, ಮಾಜಿ ಟರ್ಕಿಶ್ ಪ್ರಧಾನ ಮಂತ್ರಿ ಬುಲೆಂಟ್ ಎಸೆವಿಟ್, ಮತ್ತು ಇತರರಿಂದ ಟಾಗೋರ್‌ರ ಬರಹಗಳು ಅನುವಾದಿಸಲ್ಪಟ್ಟಿವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಾಗೋರ್‌ ನೀಡಿದ ಉಪನ್ಯಾಸವು ಬಹು ಜನಪ್ರಿಯ (ವಿಶೇಷವಾಗಿ ೧೯೧೬–೧೯೧೭ರ ಅವಧಿಯದ್ದು). ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದ ಶ್ರೋತೃಗಳಿಂದ ಮುಕ್ತ ಪ್ರಶಂಸೆಗೆ ಒಳಗಾದ ಉಪನ್ಯಾಸಗಳಿವು.ಇವರ ಸುತ್ತಲೂ ಎದ್ದ ವಿವಾದಗಳ ಹುತ್ತη[›] ಜಪಾನ್ ಮತ್ತು ಉತ್ತರ ಅಮೇರಿಕಾದಲ್ಲಿ ಅವರ ಜನಪ್ರಿಯತೆ ಕುಗ್ಗಲು ಕಾರಣವಾಯಿತು. ೧೯೨೦ರ ನಂತರದ ವಿದ್ಯಮಾನವಿದು. ಕೊನೆಗೆ ಬಂಗಾಳದ ಆಚೆ ಇವರ ವರ್ಚಸ್ಸಿಗೆ 'ಗ್ರಹಣ' ಹಿಡಿದಂತಾಯಿತು.

ಅನುವಾದಗಳ ಮೂಲಕ ಟಾಗೋರ್‌ ಸ್ಪ್ಯಾನಿಶ್ ಸಾಹಿತ್ಯದ ಮೇಲೆ ಪ್ರಭಾವ ಬೀರಿದರು: ಚಿಲಿ ದೇಶದವರಾದ ಪಬ್ಲೊ ನೆರುಡ ಮತ್ತು ಗಾಬ್ರಿಯೆಲ ಮಿಸ್ಟ್ರಲ್, ಮೆಕ್ಸಿಕನ್ ಬರಹಗಾರ ಒಕ್ಟಾವಿಯೊ ಪಾಜ್, ಮತ್ತು ಸ್ಪೇನ್ ದೇಶದವರಾದ ಜೋಸ್ ಒರ್ಟೆಗ ವೈ ಗ್ಯಾಸೆಟ್ಜೆನೊಬಿಯ ಕ್ಯಾಂಪ್ರುಬಿ, ಮತ್ತು ಜ್ವಾನ್ ರಾಮನ್ ಜಿಮೆನೆಜ್.೧೯೧೪ ಮತ್ತು ೧೯೨೨ರ ಮಧ್ಯೆ, ಜಿಮೆನೆಜ್-ಕ್ಯಾಂಪ್ರುಬಿ ದಂಪತಿಗಳು ಟಾಗೋರ್‌ರ ಇಪ್ಪತ್ತೆರಡು ಪುಸ್ತಕಗಳನ್ನು ಇಂಗ್ಲಿಷ್‌ನಿಂದ ಸ್ಪ್ಯಾನಿಶ್‌ಗೆ ಅನುವಾದಿಸಿದರು ಮತ್ತು ವ್ಯಾಪಕ ಪರಿಷ್ಕರಣೆಗೆ ಒಳಪಡಿಸಿ ಅದಕ್ಕೆ ಟಾಗೋರ್‌ರ ದ ಕ್ರಿಸೆಂಟ್ ಮೂನ್ ಎಂದು ಹೆಸರಿಸಿದರು. ಈ ಸಂದರ್ಭದಲ್ಲಿ, ಜಿಮೆನೆಜ್‌ರವರು ಪ್ರಮುಖ ಹೊಸಕಲ್ಪನೆ "ನೇಕೆಡ್ ಪೋಯೆಟ್ರಿ"ಯನ್ನು (ಸ್ಪ್ಯಾನಿಶ್: «ಪೊಯೆಸಿಯ ದೆಸ್ನುಡ») ಸೃಷ್ಟಿಸಿದರು. ಇದು ಅನ್ವೇಷಣೆಯ ಹೆಗ್ಗುರುತಾಯಿತು. "ಪರಿಪೂರ್ಣತೆಗಾಗಿ ನಾವೆಲ್ಲ ಹಪಹಪಿಸುವುದರ ಬಗ್ಗೆ ತುಟಿ ತೆಗೆದು ಆಡಿದ ಮಾತುಗಳೇ ಟಾಗೋರ್‌ರ ಇಷ್ಟೊಂದು ಜನಾದರಣೀಯತೆಗೆ ಕಾರಣ" ಎಂದು ಒರ್ಟೆಗ ವೈ ಗ್ಯಾಸೆಟ್ ಬರೆದಿದ್ದಾನೆ.ಬಾಲಿಶ ಕೌತುಕದ ಸುಪ್ತ ಪ್ರಜ್ಞೆಯನ್ನು ಟಾಗೋರ್‌ ಜಾಗೃತಿಗೊಳಿಸುತ್ತಾರೆ ಮತ್ತು ಪೂರ್ವದೇಶದ ಅಧ್ಯಾತ್ಮದ ಬಗ್ಗೆ ಆಳವಾಗಿ ಗಮನಹರಿಸುವ ಓದುಗರನ್ನು ಮೋಡಿಗೊಳಿಸುವ ಎಲ್ಲಾ ರೀತಿಯ ಭಾಷೆಯೊಂದಿಗೆ ಅವರನ್ನು ಆರ್ದ್ರಗೊಳಿಸುತ್ತಾರೆ". ೧೯೨೦ರಲ್ಲಿ ದಾಂತೆ ಅಲಿಘೈರಿಮಿಗ್ವೆಲ್ ದೆ ಸರ್ವಾಂಟೆಸ್ಜೋಹನ್ ವೋಲ್ಫ್‌ಗಂಗ್ ವನ್ ಗೊಯಥೆಪ್ಲೇಟೊ, ಮತ್ತು ಲಿಯೊ ಟಾಲ‌್‌ಸ್ಟಾಯ್ ಮೊದಲಾದವರ ಸಮಕಾಲೀನದಲ್ಲಿ ಟಾಗೋರ್‌‌ರವರ ಬರವಣಿಗೆಗಳು ಉಚಿತ ಆವೃತ್ತಿಗಳಾಗಿ ಪ್ರಸರಣಗೊಂಡಿದ್ದವು.

ಸಲ್ಲಬೇಕಾದ್ದಕ್ಕಿಂತಲೂ ಮೀರಿದ ಗೌರವಾದರವನ್ನು ಟಾಗೋರ್‌ಗೆ ನೀಡಲಾಯಿತು ಎಂದು ಕೆಲವು ಪಾಶ್ಚಾತ್ಯರು ಪರಿಗಣಿಸಿದ್ದಾರೆ."ಯೀಟ್ಸ್‌ ಹೊರತು ಪಡಿಸಿ ಬೇರೆ ಯಾರಾದರೂ ಅವರ ಕವನಗಳನ್ನು ಇನ್ನೂ ಗಂಭೀರವಾಗಿ ಪರಿಗಣಿಸಬಹುದು" ಎಂದು}ಗ್ರಹಮ್ ಗ್ರೀನಿ ಸಂಶಯಿಸುತ್ತಾರೆಟಾಗೋರ್‌ ಬಗ್ಗೆ ಗೌರವಾದರವನ್ನು ಹೊಂದಿದ್ದ ಗತಕಾಲದ ಲ್ಯಾಟಿನ್ ಅಮೇರಿಕನ್‌ನ ಆಧುನಿಕ ಕುರುಹುಗಳು ಕಂಡುಬಂದಿವೆ. ಸಲ್ಮಾನ್ ರುಶ್ದಿಯು ಆತನ ನಿಕರಾಗುವದ ಭೇಟಿ ಸಮಯದಲ್ಲಿ ಸೋಜಿಗಕ್ಕೆ ಒಳಗಾಗಿದ್ದು ಇದಕ್ಕೊಂದು ನಿದರ್ಶನ.

ಗ್ರಂಥ ಋಣ (ಆಂಶಿಕ)

More information ಕಾವ್ಯ, ನಾಟಕಗಳು ...


Thursday, 6 May 2021

ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳು

🔷🔷🔷🔷🔷🔷
*💫IAS 2006*
*💫KAS 2000*
*💫KAS 2010*
*💫KAS 1998*
*💫SUB REG 2009*
*💫TET 2009*
*💫HIG School CET 2003*
*💫PDO 2009*
*💫RSI -2008*
*💫Hostel warden 2009*
*💫PSI 2009*
*💫FDA 2009*
*💫KAS 2008*
*💫SDA 2008*
*💫PDO 2009*
*💫Forest guard 2010*

ಕರ್ನಾಟಕ TET 2020-21

🌟 *100 % ಉಪಯುಕ್ತ*🌟


➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
➖➖➖➖➖➖➖➖➖➖➖➖➖➖
ಸಂಗ್ರಹ T.A. ಚಂದ್ರಶೇಖರ

ಜಿಲ್ಲಾ ದರ್ಶನ

ಚಾಮರಾಜನಗರ


ಚಾಮರಾಜನಗರ ದಕ್ಷಿಣ ಕರ್ನಾಟಕದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕೇಂದ್ರ ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ಮೊದಲಾದ ಇತರ ಕೆಲವು ತಾಲೂಕುಗಳು ಈ ಜಿಲ್ಲೆಯಲ್ಲಿ ಸೃಷ್ಟಿಯಾಗಿವೆ.

{{#if:|

Quick Facts: ದೇಶ, ಭಾರತ ...
ಚಾಮರಾಜನಗರ ಜಿಲ್ಲೆ
  ಜಿಲ್ಲೆ  
ರೇಖಾಂಶ: 12°N 77.3°E
ದೇಶಭಾರತ
ರಾಜ್ಯಕರ್ನಾಟಕ
ಕೇಂದ್ರಚಾಮರಾಜನಗರ
ತಾಲ್ಲೂಕುಗಳುಯಳಂದೂರುಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲಹನೂರು
ಸರ್ಕಾರ
 - Deputy Commissioner
ವಿಸ್ತೀರ್ಣ
 - ಒಟ್ಟು೫,೧೦೧ ಚದರ ಕಿಮಿ (೧,೯೬೯.೫ ಚದರ ಮೈಲಿ)
ಜನಸಂಖ್ಯೆ (2001)
 - ಒಟ್ಟು೯,೬೫,೪೬೨
 - ಸಾಂದ್ರತೆ೧೮೯/ಚದರ ಕಿಮಿ (೪೮೯.೫/ಚದರ ಮೈಲಿ)
{{{language}}}{{{ಭಾಷೆ}}}
ಪಿನ್ ಕೋಡ್571 313
ದೂರವಾಣಿ ಕೋಡ್08226
ಅಂತರ್ಜಾಲ ತಾಣ: chamrajnagar.nic.in



ಇತಿವೃತ್ತ

  • ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆ ಕನ್ನಡ. ಇಲ್ಲಿ ಮಾತನಾಡಲ್ಪಡುವ ಅಲ್ಪಸಂಖ್ಯಾತ ಭಾಷೆಗಳಲ್ಲಿ ಪ್ರಮುಖವಾದವು ಸೋಲಿಗನುಡಿ (ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟದ ಪ್ರದೇಶದಲ್ಲಿ)
  • ಚಾಮರಾಜನಗರ ಜಿಲ್ಲೆಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯ ಸಾಕಷ್ಟು ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧವಾದದ್ದು ಮಲೆಮಹದೇಶ್ವರ ಬೆಟ್ಟ. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯಲ್ಲಿ ನೈಸರ್ಗಿಕ ಸೌಂದರ್ಯದ ಉದಾಹರಣೆಗಳಲ್ಲಿ ಮುಖ್ಯವಾದವುಗಳೆಂದರೆ-
  1. ಬಿಳಿಗಿರಿರಂಗನ ಬೆಟ್ಟ ,
  2. ಮಲೆಮಹದೇಶ್ವರ ಬೆಟ್ಟ ಮತ್ತು
  3. ಹಿಮವದ್ಗೋಪಾಲಸ್ವಾಮಿಬೆಟ್ಟ.
  4. ಶಿವನ ಸಮುದ್ರ
  5. ಬಂಡಿಪುರ ರಾಷ್ಟ್ರೀಯ ಉದ್ಯಾನವು ಜಿಲ್ಲೆಯ ದಕ್ಷಿಣಭಾಗದಲ್ಲಿದೆ. ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯಗಳಿದ್ದು ಇಲ್ಲಿನ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ಇತ್ಯಾದಿ. ಇಲ್ಲಿನ ಕಾಡುಗಳು, ಮುಖ್ಯವಾಗಿ ಮಲೆಮಹದೇಶ್ವರ ಬೆಟ್ಟ, ಕುಖ್ಯಾತವಾದ ಕಾಡುಗಳ್ಳ ವೀರಪ್ಪನ್ ನ ಅಡಗುದಾಣಗಳಾಗಿದ್ದವು.

ಚಾಮರಾಜನಗರ ಜಿಲ್ಲೆಯ ಪರಿಚಯ

  • ಕರ್ನಾಟಕದ ದಕ್ಷಿಣ ತುತ್ತತುದಿಯಲ್ಲಿರುವ ಚಾಮರಾಜನಗರ ಜಿಲ್ಲೆ ಭೂಪಟದಲ್ಲಿ ಬಾಹುಬಲಿಯ ಬಲಭಾಗದ ಪಾದುಕೆಯಂತೆ ಕಂಗೊಳಿಸುವುದನ್ನು ಕಾಣಬಹುದು. ದಕ್ಷಿಣ ಒಳನಾಡಿನ ಎಲೆ ಉದುರುವ, ಮಳೆಗಾಲದಲ್ಲಿ ಸದಾ ಹಸಿರಾಗಿರುವ ಅರಣ್ಯ ಸಾಲನ್ನು ಹೊಂದಿದೆ. ತಮಿಳುನಾಡು ಮತ್ತು ಕೇರಳಗಡಿಗುಂಟ ಹಂಚಿಕೊಂಡಿರುವ ಈ ಜಿಲ್ಲೆ ೧೧.೩೫ ಉತ್ತರ ಅಕ್ಷಾಂಶದಿಂದ ೧೨.೧೮ ಉತ್ತರ ಅಕ್ಷಾಂಶದವರೆವಿಗೂ, ೭೨.೨೪ ಪೂರ್ವ ರೇಖಾಂಶದಿಂದ ೭೭.೪೬ ಪೂರ್ವ ರೇಖಾಂಶದ ನಡುವೆ ೫೬೮೫ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.
  • ಪೂರ್ವ ಮತ್ತು ಪಶ್ಚಿಮ ಘಟ್ಟ ಸಂದಿಸುವ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನ ಬೆಟ್ಟ ವನ್ಯಧಾಮ ಮತ್ತು ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ೧೪೧೩ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿದೆ. ಜಿಲ್ಲೆಯ ಎತ್ತರದ ಕತ್ತರಿಬೆಟ್ಟ ೧೮೧೬ ಮೀ (ಇದು ಅತ್ತಿಖಾನೆ ಗ್ರಾಮದ ಹತ್ತಿರದಲ್ಲಿದೆ), ಬಿಳಿಗಿರಿರಂಗನ ಬೆಟ್ಟ ೧೧೫೧ ಎಂ, ಬೇಡಗುಳಿ ಎಸ್ಟೇಟು ೧೪೦೦ ಮೀ ಗಳಾಗಿದ್ದು ಆನೆ, ಹುಲಿ, ಚಿರತೆ, ಕಾಡುಕೋಣ, ಸೀಳುನಾಯಿ, ಜಿಂಕೆ, ಕರಡಿ, ಸಾರಂಗ, ಸಿಂಗಳೀಕ, ನವಿಲು, ಅಪರೂಪದ ಕೀಟ ಪ್ರಭೇದವನ್ನು ಒಳಗೊಂಡಿದೆ.
  • ಕೀಟಭಕ್ಷಕ ಸಸ್ಯವರ್ಗ ಒಳಗೊಂಡಂತೆ ಶ್ರೀಗಂಧ, ಬೀಟೆ, ಹೊನ್ನೆ, ನೀಲಗಿರಿ ಮತ್ತು ಸಿಂಕೋನ ವೃಕ್ಷಗಳ ಜೀವ-ವೈವಿದ್ಯತಾ ಆವಾಸಗಳ ನಡುವೆ ಕಾಣಬರುತ್ತದೆ.ಕ್ರಿಸ್ತಪೂರ್ವದಿಂದಲೂ ಆದಿ ಮಾನವನ ನೆಲೆಯಾಗಿದ್ದ ಶಿಲಾ ಸಮಾಧಿಗಳನ್ನು ಬುಡಕಟ್ಟು ಜನಾಂಗ ಸೋಲಿಗರು ವಾಸಿಸುವುದನ್ನು ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಣಬಹುದಾಗಿದೆ. ಈ ಭಾಗದ ಜೀವನದಿಗಳಾದ ಸುವರ್ಣವತಿ ಚಿಕ್ಕಹೊಳೆ ಕಬಿನಿ, ಗುಂಡ್ಲು ನದಿಗಳು ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯ ಉಪನದಿಗಳಾಗಿವೆ.
  • ಇವುಗಳಿಗೆ ಅಲ್ಲಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಜೀವನದಿ ಕಾವೇರಿ ೧೧೦ ಕಿ.ಮೀ. ದೂರವನ್ನು ಕ್ರಮಿಸಿ, ಗಗನಚುಕ್ಕಿ, ಭರಚುಕ್ಕಿ ಜಲಪಾತ ಸೃಷ್ಟಿಸಿ ೧೯೦೨ ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ತಯಾರಿಕೆ ನೆಲೆಯಾಗಿದ್ದು ಇದೇ ಜಿಲ್ಲೆಯಲ್ಲಿ. ಮುಂದೆ ಮಹದೇಶ್ವರ ಬೆಟ್ಟದಿಂದ ೫೦ ಕಿ.ಮೀ ಅಂತರದಲ್ಲಿರುವ ಹೊಗೆನಕಲ್ ಜಲಪಾತ ನೈಸರ್ಗಿಕ ಶಿಲೆಗಳನ್ನು ಸೃಷ್ಟಿಸಿದೆ.
  • ರಾಜ್ಯ, ರಾಷ್ಟ್ರ, ವಿದೇಶಿಯರ ಆಕರ್ಷಣೀಯ ನೈಸರ್ಗಿಕ ಜಲಪಾತಗಳು ಇಲ್ಲಿನ ವೈಶಿಷ್ಟ್ಯ ಗಂಗರು, ಹೊಯ್ಸಳರು, ವಿಜಯನಗರ, ಮೈಸೂರರಸರ ಕಲಾವೈಭವವನ್ನು ಚಾಮರಾಜನಗರದ ಬಳಿ ಇರುವ ನರಸಮಂಗಲ, ಹರದನಹಳ್ಳಿ, ಶಿಲಾಶಾಸನ, ಗುಂಡ್ಲುಪೇಟೆ ತಾಲೂಕಿನಲ್ಲಿ ಕಂಡುಬರುವ ವರಹಾವಾಸುದೇವ ಮಂದಿರ, ಹುಲುಗನ ಮೊರಡಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಳೇಮಂಟಪ, ಜಹಾಗಿರ್‌ದಾರ್ ಬಂಗಲೆ, ಕೊಳ್ಳೆಗಾಲದ ಬಳಿಯ ಮಧ್ಯರಂಗ ಇಲ್ಲಿನ ಐತಿಹಾಸಿಕ ಕುರುಹುಗಳಾಗಿವೆ.

ಜನಸಂಖ್ಯೆ

ಗಡಿಗಳಲ್ಲಿ ತಮಿಳು, ಮಲೆಯಾಳಂ ಮಾತನಾಡುವ ಜನರಿದ್ದು ಅತಿ ಹೆಚ್ಚು ಕನ್ನಡಿಗರಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳ ಸಮನ್ವಯವನ್ನು ಕಾಣಬಹುದು. ಪ್ರಪಂಚದಲ್ಲಿಯೆ ವಿಶಿಷ್ಟವೆನಿಸಿದ ಕಪ್ಪುಶಿಲೆ ಅಥವ ಕರಿಕಲ್ಲು(ಗ್ರಾನೈಟ್) ಇಲ್ಲಿ ಕಂಡು ಬರುತ್ತದೆ. ಜತೆಗೆ ಸುಣ್ಣದ ಕಲ್ಲಿನ ನಿಕ್ಷೇಪವು ಹೇರಳವಾಗಿದೆ. ಶೇ ೪೮ ದಟ್ಟಾರಣ್ಯದಿಂದ ಸುತ್ತುವರಿದಿರುವ ಈ ಜಿಲ್ಲೆ ರಾಜ್ಯದಲ್ಲಿ ೨೫ನೇ ಸ್ಥಾನದಲ್ಲಿದೆ. ೨೦೦ ಯಿಂದ ೩೫೦ ಉಷ್ಣಾಂಶವನ್ನು ಹೊಂದಿದ್ದು ೭೦ ರಿಂದ ೧೦೦ ಸೆಂ.ಮೀ. ಮಳೆಯನ್ನು ಪಡೆಯುತ್ತದೆ.

  • ಕೃಷಿಯ ಬಹುಭಾಗ ಮಳೆ ಆಶ್ರಯದ ಜತೆಗೆ ಕೊಳವೆ ಬಾವಿ, ತೆರೆದ ಬಾವಿ, ಕಬಿನಿ ನಾಲೆಗಳು ಕೃಷಿಕಾರ‍್ಯಗಳಿಗೆ ನೀರನ್ನು ಒದಗಿಸುತ್ತವೆ. ರೈತರು ಕಬ್ಬು, ಭತ್ತ, ರಾಗಿ, ಬಾಳೆ, ಕಡ್ಲೆಕಾಯಿ, ತೆಂಗು ಮತ್ತು ಅಡಿಕೆ ಬೆಳೆಗಳ ಜತೆಗೆ ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ.

೨೦೧೧ರ ಜನಗಣತಿಯ ಪ್ರಕಾರ ೧೦,೨೦,೭೯೧ ಜನಸಂಖ್ಯೆ ಹೊಂದಿದ್ದು ಪ್ರತಿ ಚ.ಕಿ.ಮೀ. ಪ್ರದೇಶದಲ್ಲಿ ೧೮೯ ಜನರು ವಾಸಿಸುತ್ತಿದ್ದಾರೆ. ೫೧.೨೬% ಸಾಕ್ಷರ ಪ್ರಮಾಣವಿದ್ದು ಲಿಂಗಾನುಪಾತ ೯೯೩ ಆಗಿದೆ.

  • ೧೯೯೭ರಲ್ಲಿ ಜಿಲ್ಲಾ ಸ್ಥಾನ ಪಡೆದ ನಂತರ ೪ ತಾಲೂಕುಗಳನ್ನು ಹೊಂದಿದ್ದು ೧೫,೮೧೮ ತಲಾಧಾಯ ಇದೆ. ಮಲೆ ಮಹದೇಶ್ವರ, ರಾಚಪ್ಪಾಜಿ, ಸಿದ್ಧಪ್ಪಾಜಿ, ಮಂಟೇಸ್ವಾಮಿ ಮೊದಲಾದ ಪವಾಡ ಪುರುಷರ ಪಾದ ಸ್ಪರ್ಶದಿಂದ ಧಾರ್ಮಿಕವಾಗಿ ಮಹದೇಶ್ವರ ಬೆಟ್ಟ, ಚಿಕ್ಕಲೂರು, ಬಿಳಿಗಿರಿರಂಗ ಬೆಟ್ಟದ ಜಾತ್ರೆ, ಶಿಂಷಾದ ಬಳಿಯ ದರ್ಗಾಗಳು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ಜನಪದ ಕಾವ್ಯಗಳಿಗೆ ಸ್ಫೂರ್ತಿಯಾಗಿವೆ. ಗೊರವರ ಕುಣಿತ, ಕಂಸಾಳೆ, ವೀರಗಾಸೆ, ಧಾರ್ಮಿಕ ಹಿನ್ನೆಲೆಯಲ್ಲಿ ರೂಪತಳೆದಿವೆ.
  • ಮುರಾರ್ಜಿ, ವಸತಿ ಶಾಲೆಗಳ ಜತೆಗೆ ನವೋದಯ ಕೇಂದ್ರೀಯ ವಿದ್ಯಾಲಯದ ಮತ್ತು ವೃತ್ತಿ ಕಾಲೇಜುಗಳಾದ ಎಂಜಿನಿಯರ್, ಪಾಲಿಟೆಕ್ನಿಕ್, (ಡಿ.ಎಡ್) ಬಿ.ಎಡ್., ಪದವಿ., ಕಾಲೇಜುಗಳು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿವೆ. ರಾಷ್ಟ್ರೀಯ ಹೆದ್ದಾರಿ ೨೦೯ ಮತ್ತು ೨೧೨ ಇಲ್ಲಿ ಹಾದು ಹೋಗಿರುವುದರ ಜತೆಗೆ ಬ್ರಾಡ್‌ಗೇಜ್ ರೈಲು ಮಾರ್ಗ ಕರ್ನಾಟಕದ ದಕ್ಷಿಣ ತುದಿಯ ಈ ಜಿಲ್ಲೆಯನ್ನು ಸಂಪರ್ಕಿಸುತ್ತದೆ.
  • ಚಾಮರಾಜನಗರ ಉತ್ತರ ಭಾಗದಲ್ಲಿ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿದ್ದು ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಜಿಲ್ಲೆಯ ಗಡಿಯನ್ನು ಹಂಚಿಕೊಂಡಿವೆ. ಪೂರ್ವ ಪಶ್ಚಿಮಭಾಗಗಳು ಬಹುತೇಕ ಅರಣ್ಯಗಳಿಂದ ಕೂಡಿವೆ. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಹಲವಾರು ಕವಿ, ಕಲಾವಿದರ ಜತೆಗೆ ನಟ ಡಾ||ರಾಜಕುಮಾರ ರಂತವರನ್ನು ನೀಡಿರುವ ಈ ಜಿಲ್ಲೆ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ ಹಾಗೂ ಉತ್ತಮ ಜನರನ್ನು ಕೊಡುಗೆ ನೀಡಿದೆ.


ಜಿಲ್ಲೆಯ ಪ್ರವಾಸಿ ತಾಣಗಳು

ಚಾಮರಾಜೇಶ್ವರ ದೇವಾಲಯ

  • ಚಾಮರಾಜೇಶ್ವರ ದೇವಾಲಯ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ದೇವಾಲಯ ಸ್ಥಾಪನೆಯಾದದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಒಂದು ಕಾಲದಲ್ಲಿ ಅರಿಕುಠಾರ ಎಂಬ ಗ್ರಾಮವಾಗಿದ್ದು, ಇದು ಚಾಮರಾಜ ಒಡೆಯರ್ ಜನಿಸಿದ್ದರಿಂದ ಚಾಮರಾಜನಗರ ಎಂಬ ಹೆಸರನ್ನು ಪಡೆಯಿತು. ದೇವಾಲಯದ ಮಹಾದ್ವಾರ ಪೂರ್ವ ದಿಕ್ಕಿಗಿದ್ದು ೫ ಅಂತಸ್ತಿನ ಗೋಪುರವಿದೆ. ತುದಿಯಲ್ಲಿ ೫ ಸುಂದರ ಚಿನ್ನದ ರಂಗಿನ ಕಲಶಗಳಿದ್ದು ಮುಂದೆ ಗರುಡಗಂಬವಿದೆ.
  • ದೇವಾಲಯ ಪ್ರವೇಶ ಮಾಡಿದಾಗ ಈಶ್ವರನಿಗೆ ಮುಖ ಮಾಡಿರುವ ಬೃಹತ್ ನಂದಿ ಇದೆ. ದೇವಾಲಯದ ಪ್ರಕಾರದಲ್ಲಿ ೬೪ ಪುರಾತನ ಭಕ್ತರ ವಿಗ್ರಹಗಳಿವೆ. ಉತ್ತರದಲ್ಲಿ ಈಶ್ವರ ವಿಗ್ರಹ, ಈಶಾನ್ಯದಲ್ಲಿ ಯೋಗಶಾಲೆ, ಆಗ್ನೇಯದಲ್ಲಿ ಪಾಕ ಶಾಲೆಯೂ ಇದೆ. ಇಲ್ಲಿ ವಾಸ್ತುಶಿಲ್ಪವು ಹೊಯ್ಸಳರ ಕಲೆಯನ್ನು ನೆನಪಿಸುತ್ತವೆ.
  • ಈ ದೇವಾಲಯದ ಒಳಭಾಗದಲ್ಲಿ ಕಂಡು ಬರುವ ಚಿತ್ರಗಳೆಂದರೆ ಗಿರಿಜಾ ಕಲ್ಯಾಣ, ಸಮುದ್ರಮಥನ ಮತ್ತು ಚಾಮುಂಡೇಶ್ವರಿ, ಇವು ೧೦೦ ವರ್ಷದ ಹಳೆಯವು. ಇಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ಆಷಾಡದ ಹುಣ್ಣಿಮೆಯ ದಿನ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ನವದಂಪತಿಗಳು ಹಣ್ಣು ಜವನವನ್ನು ಎಸೆದು ಭಕ್ತಿ ಭಾವ ಮೆರೆಯುವರು.

ದೀನ ಬಂಧು

  • ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಿ.ಎಸ್. ಜಯದೇವ್ ಇವರು ದೀನ-ದಲಿತರ ಉದ್ಧಾರಕ್ಕಾಗಿ ಹೆಸರೇ ಸೂಚಿಸುವಂತೆ ದೀನಬಂಧು ಸಂಸ್ಥೆಯನ್ನು ೧೯೯೨ರಲ್ಲಿ ಪ್ರಾರಂಭಿಸಿದರು. ಇದು ಜಿಲ್ಲಾ ಕೇಂದ್ರದಿಂದ ೩ ಕಿ.ಮೀ. ದೂರದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಪಕ್ಕದ ಅರಣ್ಯ ಇಲಾಖೆಯ ನರ್ಸರಿ ಫಾರಂಗೆ ಹೊಂದಿಕೊಂಡಂತೆ ಇದೆ.
  • ಸಂಸ್ಥಾಪಕರ ಮೆಚ್ಚುಗೆಗೆ ಪಾತ್ರರಾದ ಅನೇಕ ಸಂಘಸಂಸ್ಥೆಗಳು ಮತ್ತು ದಾನಿಗಳ ಉದಾರ ಕೊಡುಗೆಯಿಂದ ೧ ರಿಂದ ೮ನೇ ತರಗತಿಯವರೆಗೆ ಸ್ವಂತ ಕಟ್ಟಡದಲ್ಲಿ “ಸೃಜನಶೀಲ ಕಲಿಕೆ” ತತ್ವದ ಮಾದರಿಯಲ್ಲಿ ನಡೆಯುತ್ತದೆ. ಅನಾಥ ಮಕ್ಕಳ ವಸತಿ ಸಹಿತ ಶಾಲೆ, ಗಂಡು ಹೆಣ್ಣು ಮಕ್ಕಳಿಗೆ "ದೀನಬಂಧು ಮಕ್ಕಳ ಮನೆ" ಎಂಬ ಹೆಸರಿನ "ವಸತಿ ಸಹಿತ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರ" ಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿದೆ. ಇದು ಶಿಕ್ಷಕರ ಸಂಪನ್ಮೂಲ ಕೇಂದ್ರ ಹೊಂದಿದ್ದು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಅವಿರತ ಪ್ರಯತ್ನ ನಡೆಸುತ್ತಿದೆ.

ಸುವರ್ಣಾವತಿ ಜಲಾಶಯ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೧೮ ಕಿ.ಮೀ. ಚಾಮರಾಜನಗರ ತಾಲೂಕಿನ ಜೀವನಾಡಿ ಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ ಗಜ್ಜಲ ಹಟ್ಟಿ ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ.

  • ಕಾವೇರಿ ಕಣಿವೆಗೆ ಸೇರಿದ ಈ ಜಲಾಶಯದ ನೀರಿನ ಸಾಮರ್ಥ್ಯ ೨೫೮,೭೮ ಕ್ಯೂಸೆಕ್ಸ್ ಇದೆ. ಇದರ ೨ ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿ ಚಿಕ್ಕಹೊಳೆ ಅಣೆಕಟ್ಟು ಇದ್ದು ಇದು ಮಧ್ಯಮಗಾತ್ರದ ಅಣೆಕಟ್ಟು ಆಗಿದೆ. ಈ ಎರಡೂ ಜಲಾಶಯಗಳು ನಿಸರ್ಗದ ಮಡಿಲಲ್ಲಿದ್ದು, ನೀರಾವರಿ, ಮೀನುಗಾರಿಕೆ, ತೋಟಗಾರಿಕೆಗೆ ಪ್ರೋತ್ಸಾಹವಿದೆ. ಇದು ನೀರಾವರಿ ಇಲಾಖೆಗೆ ಸೇರಿದ್ದು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ.

ನರಸಮಂಗಲ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೪ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ನೈರುತ್ಯದಲ್ಲಿರುವ ಗಂಗರ ಇತಿಹಾಸ ಬಿಂಬಿಸುವ ಗ್ರಾಮ ನರಸಮಂಗಲ, ಈ ಸ್ಥಳವು ಪ್ರಾಚೀನ ರಾಮಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗಂಗರ ಕಾಲದಲ್ಲಿ ಅನೇಕ ಸುಂದರ ದೇವಾಲಯ ಮತ್ತು ಬಸದಿಗಳು ನಿರ್ಮಾಣಗೊಂಡವು ಅವುಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ಶಿವಲಿಂಗವು ೬ ಅಡಿ ಎತ್ತರ ೧೨ ಅಡಿಗಳನ್ನು ಸುತ್ತಳತೆ ಹೊಂದಿದೆ.

  • ಈ ದೇವಾಲಯವು ವಿಶಾಲವಾದ ಗರ್ಭಗೃಹ, ಕಿರಿದಾದ ಸುಖನಾಸಿ ಒಂಭತ್ತು ಅಂಕಣಗಳ ನವರಂಗಗಳಿವೆ. ಮೇಲೆ ವಿಮಾನ ಗೋಪುರವಿದೆ. ಇದು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುವುದು. ಶಿಲ್ಪಗಳು ಬಹು ಸುಂದರ ಕಲಾ ಕೃತಿಗಳಾಗಿವೆ. ರಾಮಾಯಣ ಮಹಾಭಾರತ ಕಥೆಗೆ ಸಂಬಂಧಪಟ್ಟ ಹಲವಾರು ಸನ್ನಿವೇಷಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದೇವಾಲಯವನ್ನು ಭಾರತ ಸರ್ಕಾರವು ೧೯೫೮ರಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ.

ಮಲೆಯೂರಿನ ಕನಕಗಿರಿ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ. ಚಾಮರಾಜನಗರ ಪಶ್ಚಿಮದಲ್ಲಿರುವ ಮಲೆಯೂರಿನ ಕನಕಗಿರಿ ಜಗತ್ತಿನ ಸುಪ್ರಸಿದ್ಧ ಜೈನ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಪಶ್ಚಿಮಕ್ಕಿರುವ ಈ ಬೆಟ್ಟದ ಬಂಡೆಗಳ ಮೇಲೆ ಚರಣ ಪಾದುಕೆಗಳು, ಶಿಲಾಶಾಸನಗಳು, ಸಮಾಧಿ ಮಂಟಪ ಮತ್ತು ಗುಹೆಗಳಿವೆ. ೧೦ನೇ ಶತಮಾನಕ್ಕೆ ಸೇರಿದ ಕನಕಗಿರಿ ಮೇಲಿನ ಪಾರ್ಶ್ವನಾಥ ಬಸದಿ ಅತಿ ಪುರಾತನ ಹಾಗೂ ಸುಂದರ ಬಸದಿಯಾಗಿದೆ. ಈ ಸ್ಥಳದಲ್ಲಿ ನಾಗಾರ್ಜುನನಿಗೆ ಪದ್ಮಾವತಿ ಅಮ್ಮನವರು ಲೋಹ ವನ್ನು ಚಿನ್ನ ಮಾಡುವ ವಿದ್ಯೆಯನ್ನು ತಿಳಿಸಿದರು.

  • ಈ ಕಾರಣದಿಂದ ಇದಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ. ಗಂಗರು ಮತ್ತು ಹೊಯ್ಸಳ ಕಾಲದ ಕಟ್ಟಡಗಳು, ಶಿಲಾಶಾಸನಗಳು ಇಲ್ಲಿ ಕಂಡು ಬರುತ್ತವೆ. ಇಲ್ಲಿನ ಶಿಲಾಶಾಸನಗಳ ಪ್ರಕಾರ ಅಜಿತಮುನಿ ಚಂದ್ರಸೇನಾಚಾರ್ಯ ಮುಂತಾದ ಹಲವರು ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಪಡೆದರೆಂದು ತಿಳಿಯುತ್ತದೆ. 'ಕಲ್ಯಾಣಕಾರಕ ಚಿಕಿತ್ಸಾಶಾಸ್ತ್ರ' ಗ್ರಂಥ ಬರೆದ ಶ್ರೀ ಪೂಜ್ಯಪಾದರು ಈ ಊರಿನವರು.

ದಿವ್ಯಲಿಂಗೇಶ್ವರ ದೇಗುಲ

  • ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಆಗ್ನೇಯದಿಕ್ಕಿಗಿರುವ ಹೋಬಳಿಕೇಂದ್ರ ಹರದನಹಳ್ಳಿ ಗ್ರಾಮದಲ್ಲಿ ಈ ದೇವಾಲಯವಿದೆ. ಹಿಂದೆ ಹೊಯ್ಸಳರು, ವಿಜಯನಗರ ಅರಸರು ಮತ್ತು ಮೈಸೂರು ಅರಸರು ಆಳುತ್ತಿದ್ದರು. ಈ ಊರಿನಲ್ಲಿ ಹಿಂದೆ ಕೋಟೆಯಿದ್ದು ಈಗ ಹಾಳಾಗಿದೆ. ಈ ಊರಿಗೆ ಕಳಸಪ್ರಾಯವಾಗಿರುವುದು ದಿವ್ಯ ಲಿಂಗೇಶ್ವರ ದೇವಾಲಯ. ಈ ದೇಗುಲವು ಗೋಪುರ ಮತ್ತು ಗರುಡಗಂಭವನ್ನು ಒಳಗೊಂಡಿದ್ದು ೨೦೦೧ನೇ ಇಸವಿಯ ಮಳೆಗಾಲದಲ್ಲಿ ರಾಜಗೋಪರವು ಶಿಥಿಲಗೊಂಡು ನೆಲಸಮವಾಗಿದೆ. *೧೩ನೇ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳರ ಕಾಲದಲ್ಲಿ ನಿರ್ಮಾಣವಾಗಿತ್ತು. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಕಲಾತ್ಮಕವಾಗಿದೆ. ಇದರಿಂದ ೧೦೫ ಅಡಿ ದೂರದಲ್ಲಿ ನಂದೀಶ್ವರನ ವಿಗ್ರಹವಿದೆ. ಇದೊಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದು ಆಕರ್ಷಿಣಿಯ ಸ್ಥಳವಾಗಿದೆ. ಈ ಗ್ರಾಮವು ಮಹಿಮಾಪುರುಷರಾದ "ಎಡೆಯೂರು ಸಿದ್ಧಲಿಂಗೇಶ್ವರ"ರ ಜನ್ಮಸ್ಥಳವೂ ಹೌದು.

ಬೂದಿ ಪಡಗ

  • ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ. ಸುವರ್ಣಾವತಿ ಜಲಾಶಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ಧ ವನ್ಯಜೀವಿ ವಿಶ್ರಾಂತಿಧಾಮ, ಮೈಸೂರು ಮಹಾರಾಜರು – ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ವಸತಿಗೃಹಗಳು ವಿಶಾಲಹುಲ್ಲು ಮೈದಾನ. ಅಮೂಲ್ಯ ವನ್ಯ ಜೀವಿಗಳು, ಬೂದಿಪಡಗದ ವಿಶೇಷಗಳು. ವನ್ಯಜೀವಿ ಛಾಯಾ ಗ್ರಾಹಕರಿಗೆ, ಪ್ರವಾಸಿಗರಿಗೆ ಸಂಶೋಧಕರಿಗೆ ಇದು ಅಚ್ಚುಮೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಬೂದಿಪಡಗ ಬಿಳಿಗಿರಿರಂಗನ ಬೆಟ್ಟಗಳಲ್ಲಿ ವನ್ಯ ಜೀವಿಧಾಮದ ಭಾಗವಾಗಿದೆ.

ಬೇಡಗುಳಿ ಮತ್ತು ಅತ್ತಿಖಾನೆ

  • ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫೦ ಮತ್ತು ೬೨ ಕಿ.ಮೀ ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ನೀಲಗಿರಿ ಶ್ರೇಣಿಯ ಅಂಜಿನಲ್ಲಿರುವ ಬೇಡಗುಳಿ ಕರ್ನಾಟಕ – ತಮಿಳುನಾಡಿನ ಸೀಮಾರೇಖೆ. ನಿತ್ಯಹರಿದ್ವರ್ಣದ ವನ್ಯಜೀವಿಧಾಮ. ಬೇಡಗುಳಿ ಮತ್ತು ಅತ್ತಿಖಾನೆ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ನರ ಕಾಲದ ಕಾಫಿ ತೋಟಗಳು ವಿಶೇಷಗಳು. ಬೇಡಗುಳಿ ಮತ್ತು ಅತ್ತಿಖಾನೆ ಗಿರಿಜನರ ಹಾಡಿಗಳು ಅವರ ಹಾಡುಪಾಡು.
  • ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ಸುಂದರ ಗಿರಿಶ್ರೇಣಿಗಳು ಅದ್ಭುತ ಕಣಿವೆಗಳು ಮನೋಹರ ಜಲಪಾತಗಳು ಆಕರ್ಷಕ. ವನ್ಯಜೀವಿಗಳು ಬೇಡಗುಳಿ ಮತ್ತು ಅತ್ತಿಖಾನೆ ಅರಣ್ಯ ಪ್ರದೇಶದ ವಿಶೇಷ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾಗಿದೆ. ವನ್ಯಜೀವಿ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ.
  • ಎಲೆಮರೆಯ ಕಾಯಿಯಂತಿರುವ ಅತ್ತಿಖಾನೆಯ ಕತ್ತರಿ ಬೆಟ್ಟವು (ಸಮುದ್ರ ಮಟ್ಟದಿಂದ ೧೮೧೬ ಮೀ) ಈ ಜಿಲ್ಲೆಯಲ್ಲೆ ಅತಿ ಎತ್ತರವಾದ ಬೆಟ್ಟವಾಗಿದ್ದು, ಇದರ ತಪ್ಪಲಿನಲ್ಲಿ ಹುಟ್ಟುವ ಝರಿಗಳೆ ತೊರೆಯಾಗಿ ಹರಿದು ಚಾಮರಾಜನಗರ ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ನದಿಯಾಗಿ ಹರಿದು ಸುವರ್ಣಾವತಿ ಜಲಾಶಯದ ಒಡಲಸೇರಿ ಜಿಲ್ಲೆಯ ಆಧಾರವಾಗಿದೆ. ಅತ್ತಿಖಾನೆ ಗ್ರಾಮವು ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದ್ದು ಸುಂದರ ಅತಿಸುಂದರ ಗಿರಿಕಣಿವೆಗಳ ಆಗರವೇ ಆಗಿದೆ.

ಜೋಡಿಗೆರೆ

  • ಜೋಡಿಗೆರೆ ಸೌಂದರ್ಯವನ್ನು ಒಂದೆರಡು ಮಾತಿನಲ್ಲಿ ವರ್ಣಿಸಲಾಗದು. ಇದೊಂದು ಪ್ರಕೃತಿಯ ಅಪ್ರತಿಮ ಕೊಡುಗೆ ನಿಂತು ನೋಡಿದರೆ ನೋಡಿದಷ್ಟು ಆನಂದ. ವಿಶಾಲ ಹುಲ್ಲು ಗಾವಲು. ಶೋಲಾ ಅರಣ್ಯ ಪ್ರದೇಶ. ಮನಬಿಚ್ಚಿ ಓಡಾಡುವ ವನ್ಯಜೀವಿಗಳು ಸುಯ್‌ಗುಡುವ ತಂಗಾಳಿ. ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ.
  • ಜಗತ್ತಿನ ಅಪರೂಪದ ಪ್ರದೇಶವೆಂಬಂತೆ ವನ್ಯಜೀವಿಗಳು ಹುಲ್ಲುಗಾವಲಿನಲ್ಲಿ ಗುಂಪುಗುಂಪಾಗಿ ನಲಿದಾಡುವುದನ್ನು ನೋಡಿದರೆ ಇದೊಂದು ಮಿನಿ ಜುರಾಸಿಕ್ ಪಾರ್ಕ್‌ನಂತೆ ಕಾಣುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೧೬೦೦ ಮೀಟರ್‌ಗಳಷ್ಟು ಎತ್ತರದಲ್ಲಿರುವ ಜೋಡಿಗೆರೆ ಬಿಳಿಗಿರಿ ರಂಗನಬೆಟ್ಟ ವನ್ಯಜೀವಿಧಾಮದ ಒಂದು ಭಾಗವಾಗಿದ್ದು ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ.

ಕೆ. ಗುಡಿ (ಕ್ಯಾತೇದೇವರ ಗುಡಿ)

  • ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ. ಸಮುದ್ರ ಮಟ್ಟದಿಂದ ೧೪೫೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿ ಕರ್ನಾಟಕ ಜಂಗಲ್ ಲಾಡ್ಜ್ ನ ವನ್ಯಜೀವಿ ಪ್ರವಾಸೋದ್ಯಮ ಕೆಲಸ ಮಾಡುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಅರಣ್ಯ ಇಲಾಖೆಯ ಆನೆ ಸಫಾರಿ ಮತ್ತು ವನ್ಯಜೀವಿ ಸಫಾರಿ ಬಹಳ ಪ್ರಸಿದ್ಧ.
  • ಕೆ. ಗುಡಿಗೆ ದೇಶ-ವಿದೇಶಗಳು ಪ್ರವಾಸಿಗರ ಆಗಮನವಿದೆ. ಪ್ರಾಣಿ ಪಕ್ಷಿ, ಪ್ರಕೃತಿ ಸಂಶೋಧಕರಿಗೆ ಮತ್ತು ಪ್ರವಾಸಿಗರಿಗೆ ಕೆ. ಗುಡಿ ರಮ್ಯತಾಣವಾಗಿದ್ದು ಇಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಡವೆ ಈ ಅರಣ್ಯದ ಪ್ರಮುಖ ವನ್ಯಜೀವಿಗಳು.

ಬೆಲ್ಲತ್ತ ಪಕ್ಷಿರಾಶಿ

ಚಾಮರಾಜನಗರ ತಾಲ್ಲೋಕಿ ನಲ್ಲಿರುವ ಬೆಲ್ಲತ್ತ ಜಲಾಶಯ ಬಿಳಿಗಿರಿರಂಗನ ಬೆಟ್ಟದ ಕಾಡಂಚಿನಲ್ಲಿದೆ. ಕಾಡಂಚಿಗೆ ತಾಗಿಕೊಂಡಿರುವ ಹಿನ್ನೀರಿ ನಿಂದಾಗಿ ಪ್ರಾಣಿಗಳು ಪಕ್ಷಿಗಳಿಗೆ ಸಮೃದ್ಧ ಪ್ರದೇಶವಾಗಿದೆ. ಈ ಜಲಾಶಯದ ಸುತ್ತ ದೇಶ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ಸಮ್ಮಿಲನವಾಗುತ್ತದೆ. ನಿಸರ್ಗ ಪ್ರಿಯರಿಗೆ ಪಕ್ಷಿ ಛಾಯಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಇದೊಂದು ಉತ್ತಮ ತಾಣವಾಗಿದೆ.

ಯಳಂದೂರು

  • ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. ೧೦೧೮ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು.
  • ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ ಸಂಚಿ ಹೊನ್ನಮ್ಮ ರಚಿಸಿದ ಹದಿಬದಿಯ ಧರ್ಮ ಶ್ರೇಷ್ಠ ಕೃತಿಗಳಾಗಿವೆ. ಇಂತಹ ಪುಣ್ಯ ಭೂಮಿಯಲ್ಲಿ (ಸುವರ್ಣಾವತಿ) ಹೊನ್ನು ಹೊಳೆ ಹರಿಯುತ್ತದೆ. ಇದಕ್ಕೆ ಇರುವ ದಂತ ಕಥೆಯ ಉಲ್ಲೇಖವು ಶಾಸನವೊಂದರಲ್ಲಿ ದೊರೆಯುತ್ತದೆ. ಯಳಂದೂರು ಸಂಪದ್ಭರಿತವಾದ ಹಾಗೂ ಜನಾಕರ್ಷಕವಾದ ಸ್ಥಳವಾಗಿದ್ದು ನಿರ್ದಿಷ್ಟ ರಾಜಮನೆತನಗಳು ಇದ್ದವು ಎಂಬುದು ತಿಳಿದು ಬಂದಿದೆ.

ಬಳೇ ಮಂಟಪ

ಯಳಂದೂರಿನ ಗೌರೀಶ್ವರ ದೇವಾಲಯದ ಮುಖ ಮಂಟಪವನ್ನು ಕ್ರಿ.ಶ. ೧೬೫೪ರಲ್ಲಿ ಮುದ್ದುರಾಜನು ಬಹಳ ರಮ್ಯವಾಗಿ ಕಟ್ಟಿಸಿದ್ದಾನೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲ್ಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ ೨೭ ಕಲ್ಲಿನ ರಥವನ್ನು ಹೋಲುತ್ತದೆ. ಈ ಮಂಟಪವು ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಈ ಮಂಟಪವೂ ಚತುರ್ಮುಖಗಳನ್ನು ಹೊಂದಿದ್ದು ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ.

  • ಶಿಲೆಯ ಗೋಡೆಯಲ್ಲಿ ಶೈವ ಪುರಾಣದ, ರಾಮಾಯಣದ ಹಾಗೂ ಮಹಾಭಾರತದ ಕೆಲವು ಘಟನೆಗಳನ್ನು ಅತ್ಯಂತ ಮನೋಹರವಾಗಿ ಸುಂದರವಾಗಿ ಕೆತ್ತಿರುವುದನ್ನು ನೋಡಬಹುದು. ಈ ಮಂಟಪದ ಮಧ್ಯಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ಮನೋಹರವಾಗಿದೆ. ಈ ಮಂಟಪದ ಮೂಲೆಗಳಲ್ಲಿ ಬಳೆಗಳನ್ನು ಒಂದರೊಳಗೊಂದು ಜೋಡಿಸಿದಂತೆ ಒಂದೇ ಕಲ್ಲಿನಿಂದ ಮಾಡಿರುವುದು ಅದ್ಭುತವಾಗಿದೆ. ಈ ಬಳೆಗಳು ಇರುವುದರಿಂದಲೇ ರೂಢಿಯಿಂದ ಈ ಮಂಟಪವನ್ನು ಬಳೆ ಮಂಟಪ ಎಂದು ಕರೆಯುತ್ತಾರೆ.

ಗೌರೀಶ್ವರ ದೇವಾಲಯ

  • ಯಳಂದೂರಿನಲ್ಲಿರುವ ಗೌರೀಶ್ವರ ದೇವಾಲಯದ ವೈಶಿಷ್ಟತೆಯನ್ನು ತಿಳಿಯಲು ಇಲ್ಲಿರುವ ಶಿಲಾಶಾಸನ ಒಂದೇ ಆಧಾರ ಯಳಂದೂರಿನಲ್ಲಿ ಆಳಿದ ರಾಜ ಮನೆತನಗಳಲ್ಲಿ ಪದಿನಾಡ ಅರಸರೇ ಪ್ರಮುಖರು. ಈ ಮನೆತನದ ಮೊದಲನೆರಾಜ ಸಿಂಗದೇವಭೂಪನು ಗೌರೀಶ್ವರ ದೇವಾಲಯವನ್ನು ಮುದ್ದುರಾಜನು ಕ್ರಿ.ಶ. ೧೬೫೪ರಲ್ಲಿ ದೇವಾಲಯದ ಮುಖ ಮಂಟಪ ಪಂಚಲಿಂಗಗಳನ್ನೊಳಗೊಂಡ ಗುಡಿಗಳನ್ನು ಕಟ್ಟಿಸಿದ್ದಾನೆ.
  • ಈ ಗೌರೀಶ್ವರನು ಹಿಂದೆ ಕೃತಾಯುಗದಲ್ಲಿ ಜಮದಗ್ನಿ ಮಹಾರ್ಷಿಯಿಂದ “ತ್ರಿಪುರಾಂತಕ”ನೆಂದೂ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ “ನೀಲಕಂಠ” ನೆಂದೂ, ದ್ವಾಪರಾಯುಗದಲ್ಲಿ ಪಾಂಡವರಿಂದ ಲೋಕೇಶ್ವರನೆಂದೂ ಕಲಿಯುಗದಲ್ಲಿ ಪದಿನಾಡಿನ ರಾಜ ವಂಶಸ್ಥರು ಗೌರೀಶ್ವರನೆಂದೂ ಪೂಜಿಸುತ್ತಿದ್ದರು. ಈ ದೇವಾಲಯದ ಆವರಣದಲ್ಲಿರುವ ಎರಡು ಪಗಡೆ ಮರಗಳು ದೇವಾಲಯದ ಆವರಣವನ್ನು ಬೇಸಿಗೆಯಲ್ಲೂ ತಂಪಾಗಿಸುತ್ತಿದೆ.

ಬಿಳಿಗಿರಿರಂಗನಬೆಟ್ಟ

  • ಪೂರ್ವ ಘಟ್ಟದಲ್ಲಿ ಮಲೈ ಮಹಾದೇಶ್ವರ ಬೆಟ್ಟ ಶ್ರೇಣಿ ಹಾಗೂ ದಿಂಬಮ್ ಬೆಟ್ಟ ಶ್ರೇಣಿಗಳ ನಡುವೆ ೩೦ ಮೈಲಿ ದೂರ ಫಲವತ್ತಾದ ಮಣ್ಣು ಮತ್ತು ದಟ್ಟ ಅರಣ್ಯದಿಂದ ಕೂಡಿರುವ ಬೆಟ್ಟವೇ ಬಿಳಿಗಿರಿರಂಗನ ಬೆಟ್ಟ. ಯಳಂದೂರು ತಾಲ್ಲೂಕಿನಿಂದ ೨೪ ಕಿ.ಮೀ. ದೂರದಲ್ಲಿರುವ ಈ ಬೆಟ್ಟವು ಬಿಳಿಕಲ್ಲು ಬೆಟ್ಟ. ಶ್ವೇತಾದ್ರಿಬೆಟ್ಟ. ಬಿಳಿಗಿರಿರಂಗಸ್ವಾಮಿ ಬೆಟ್ಟ ಎಂದು ಹಲವಾರು ಹೆಸರುಗಳಿಂದ ಪ್ರಸಿದ್ಧವಾಗಿದೆ.
  • ಈ ಬೆಟ್ಟವು ಸಮುದ್ರಮಟ್ಟದಿಂದ ೪೪೭೦ ಅಡಿಗಳ ಎತ್ತರದಲ್ಲಿದ್ದು, ಔಷಧಿ ಸಸ್ಯಗಳಿಂದಲೂ, ತೇಗ, ಬೀಟೆ, ಹೊನ್ನೇ, ಮತ್ತಿ, ಬಿದುರು, ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ, ಆನೆ, ಕಾಡೆಮ್ಮೆ, ಕರಡಿ, ಮುಂತಾದ ಕಾಡು ಮೃಗಗಳು ಇವೆ. ಈ ಕಾನನ ಪ್ರದೇಶವನ್ನು ಪಾಂಡವರ ಕಾಲದಲ್ಲಿ ಚಂಪಕಾರಣ್ಯ ಎಂದು, ಗಂಗರ ಕಾಲದಲ್ಲಿ ಗಜಾರಾಣ್ಯ ಎಂದು ಕರೆಯುತ್ತಿದ್ದರು.
  • ಶಿಲಾಯುಗದ ಮಾನವರು ಬಳಸುತ್ತಿದ್ದ ಆಯುಧಗಳು, ಮಡಿಕೆಗಳು, ಮತ್ತು ಅವರ ಸಮಾಧಿಗಳು, ಕಂಡು ಬಂದಿದೆ. ಬಿಳಿಗಿರಿರಂಗಸ್ವಾಮಿ ಬೆಟ್ಟದಲ್ಲಿರುವ ಶ್ರೀ ರಂಗಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ದೊಡ್ಡ ಜಾತ್ರೆಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ.

ದೊಡ್ಡ ಸಂಪಿಗೆ

ಇದು ಬಿಳಿಗಿರರಂಗನ ಬೆಟ್ಟದ ಕಾಡಿಗೆ ಸೇರಿದ ಪ್ರದೇಶದಲ್ಲಿದ್ದು ಈ ಸ್ಥಳದಲ್ಲಿ ಭಾರ್ಗವೀ ನದಿ ನಯನ ಮನೋಹರವಾದ ಕಣಿವೆಯಲ್ಲಿ ಹರಿಯುತ್ತಿದೆ. ಪರಶುರಾಮನು ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸಾಚರಿಸಿದರೆಂದು ಪ್ರತೀತಿ. ಈ ಸ್ಥಳದಲ್ಲಿ ದೊಡ್ಡ ಸಂಪಿಗೆ ವೃಕ್ಷವಿದೆ. ಈ ಮಹಾವೃಕ್ಷದಲ್ಲಿ ೩ ಕೊಂಬೆಗಳಿದ್ದು ಇವು ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದು ತಿಳಿಯಲಾಗಿದೆ. ಈ ಮಹಾವೃಕ್ಷವನ್ನು ‘ಸೋಲಿಗರು’ ತಮ್ಮ ಆರಾಧ್ಯ ದೈವವಾಗಿ ಭಯ ಭಕ್ತಿಯಿಂದ ಪೂಜಿಸುತ್ತಾರೆ.

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ.)

  • ತಲೆತಲಾಂತರದಿಂದ ಗುಡ್ಡಗಾಡುಗಳಲ್ಲಿ ಸಂಚರಿಸುತ್ತಾ ನಾಡಿನ ಸಂಪರ್ಕವನ್ನು ಕಳೆದುಕೊಂಡಿದ್ದ ಸೋಲಿಗ ಬುಡಕಟ್ಟು ಜನರಲ್ಲಿ ಆತ್ಮ ವಿಶ್ವಾಸ ತುಂಬಿ ವಂಶ ಪರಂಪರೆಯಾಗಿ ಅವರಲ್ಲಿ ಮನೆ ಮಾಡಿದ್ದ ಅನಿಮಿಯ ರೋಗದಿಂದ ಅವರನ್ನು ಪಾರು ಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ದೆಸೆಯಲ್ಲಿ ೧೯೮೧ರಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರವೇ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ.
  • ಸೋಲಿಗರ ಪ್ರಗತಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಕೇಂದ್ರ ಅವರಿಗೆ ಸೀಮಿತವಾಗಿರದೆ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಪಣಿಯ, ಹಕ್ಕಿಪಿಕ್ಕಿ, ಯರವ, ಲಂಬಾಣಿ,ಕೊರಮ ಇತ್ಯಾದಿ ಬುಡಕಟ್ಟಿನ ಜನರ ಪ್ರಗತಿಗೆ ಶ್ರಮಿಸುತ್ತಿದೆ. ಆರಂಭದಲ್ಲಿ ಏಳು ಮಕ್ಕಳ ಪ್ರವೇಶದೊಂದಿಗೆ ಆರಂಭವಾದ ಪ್ರಾಥಮಿಕ ಶಾಲೆ, ಇಂದು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಮತ್ತು ವೃತ್ತಿಪರ ಕಾಲೇಜನ್ನು ಹೊಂದಿರುವುದರ ಜೊತೆಗೆ ಸಾಮಾಜಿಕವಾಗಿಯೂ ಬೆಳೆದು ಹೆಮ್ಮರವಾಗಿದೆ.
  • ಬುಡಕಟ್ಟು ಜನರ ಅರಿವಿನ ಆಶ್ರಯಧಾಮವಾಗಿದೆ.ಸೋಲಿಗರ ಬದುಕನ್ನು ಹಸನು ಮಾಡಲು ಜೀವನ ತ್ಯಾಗ ಮಾಡಿದ ಡಾ. ಎಚ್. ಸುದರ್ಶನ್ ರವರಿಗೆ ಮಹತ್ಕಾರ‍್ಯವನ್ನು ಪ್ರಶಂಸಿಸಿ ೯ ಡಿಸೆಂಬರ್ ೧೯೯೪ರಂದು ಅಂತರರಾಷ್ಟ್ರೀಯ ಸಂಸ್ಥೆಯೊಂದು ‘ರೈಟ್ ಲೈವಿಲಿಹುಡ್ ಅವಾರ್ಡ್’ನೀಡಿ ಗೌರವಿಸಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಲಯದ ಪ್ರವಾಸಿ ತಾಣಗಳು

  1. ಮರಡಿಗುಡ್ಡ,
  2. ಚಿಲಕವಾಡಿ,
  3. ಕುಂತೂರು,
  4. ಕುರುಬನ ಕಟ್ಟೆ,
  5. ಕನಕಗಿರಿ ಕ್ಷೇತ್ರ,
  6. ಚಿಕ್ಕಲ್ಲೂರು,
  7. ಉಗನಿಯ,
  8. ಶಿವನ ಸಮುದ್ರ,
  9. ವೆಸ್ಲಿ ಸೇತುವೆ,
  10. ಬೂದಬಾಳು ಕ್ಷೇತ್ರ,
  11. ಭರಚುಕ್ಕಿ,
  12. ಯಡಕುರಿ

ಕೊಳ್ಳೇಗಾಲ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೦ ಕಿ.ಮೀ. ಕೊಳ್ಳೇಗಾಲ ವಲಯ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಗಡಿ ತಾಲ್ಲೂಕು, ಪ್ರಕೃತಿ ಸಂಪತ್ತು ಬಹಳಷ್ಟಿದ್ದು ಜಲಪಾತಗಳು, ದೇವಸ್ಥಾನಗಳನ್ನು ಹೊಂದಿದೆ. ವಲಯದ ಸ್ವಲ್ಪಭಾಗ ನೀರಾವರಿ ಹೊಂದಿದೆ. ಈ ಹಿಂದೆ ಈ ಪಟ್ಟಣದಲ್ಲಿ ಕೌಹಳ ಮತ್ತು ಗಾಲವ ಎಂಬ ಈರ್ವರು ಮಹರ್ಷಿಗಳು ನೆಲೆಸಿದ್ದರಿಂದ ಕೌಹಳಗಾಲವ ನಗರವಾಗಿ ಮುಂದೆ ಕೊಳ್ಳೇಗಾಲವೆಂದು ಪ್ರಸಿದ್ಧಿ ಪಡೆಯಿತು. ಇಲ್ಲಿಯ ರೇಷ್ಮೆ ಮಾರುಕಟ್ಟೆಯು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ. ಕೊಳ್ಳೇಗಾಲದ ಚಾರಿತ್ರಿಕ ಮುಖವನ್ನು ಅವಲೋಕಿಸಿದರೆ ಜನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿಯಂತಹ ಜಂಗಮ ಶ್ರೇಷ್ಠರು ನಡೆದಾಡಿದ ಪುಣ್ಯಭೂಮಿ. ನಾಡಿನ ಹಿರಿಯ ಕವಿ ಷಟ್ ಶಾಸ್ತ್ರ ಕೋವಿದ ಶ್ರೀ ನಿಜಗುಣಶಿವಯೋಗಿ ನಂತರದ ಶ್ರೀ ಕುಮಾರ ನಿಜಗುಣಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ಸಿಂಗಾನಲ್ಲೂರಿನವರಾಗಿದ್ದು ಇವರೆಲ್ಲರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ಪ್ರದೇಶವಾಗಿದೆ.

ಮರಡಿಗುಡ್ಡ

ಪವಾಡ ಪುರುಷ ಶ್ರೀ ಮಹದೇಶ್ವರರು ಮಂಡಿ ಊರಿದ ಸ್ಥಳ ಮರಡಿಗುಡ್ಡವಾಗಿದೆ. ಬಸ್ತೀಪುರ : ಪಟ್ಟಣದ ಉತ್ತರ ದಿಕ್ಕಿನಲ್ಲಿದ್ದು, ಜೈನ ಬಸದಿಗಳಿದ್ದ ಪುರಾವೆಗಳಿವೆ.

ಇತರೆ ಸ್ಥಳಗಳು

  1. ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನ,
  2. ಮಾಳಿಗೆ ಮಾರಮ್ಮ,
  3. ಸೋಮೇಶ್ವರ ಸ್ವಾಮಿ ದೇವಸ್ಥಾನ,
  4. ಚೌಡೇಶ್ವರಿ ದೇವಸ್ಥಾನ,
  5. ಮುರುಡೇಶ್ವರ ಸ್ವಾಮಿ ದೇವಸ್ಥಾನ,
  6. ಕನ್ನಿಕಾ ಪರಮೇಶ್ವರಿ ದೇವಸ್ಥಾನ,
  7. ಉಚ್ಛಾಲಮ್ಮ ದೇವಸ್ಥಾನ,
  8. ಮಕ್ಕಳ ಮಹದೇಶ್ವರ ದೇವಸ್ಥಾನ,
  9. ನಾರಾಯಣ ಸ್ವಾಮಿ ದೇವಸ್ಥಾನ ಹಾಗೂ
  10. ಕಲ್ಯಾಣಿ.

ಚಿಲಕವಾಡಿ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ಇದೊಂದು ಧಾರ್ಮಿಕ ಹಾಗೂ ಕವಿಗಳ ಊರು. ಇಲ್ಲಿ ಶ್ರೀ ಶಂಭುಲಿಂಗೇಶ್ವರರ ಬೆಟ್ಟವಿದ್ದು, ದುರ್ಗಾಂಭ ದೇವಿಯ ದೇವಸ್ಥಾನ ಕೂಡ ಇದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸ್ವಾಮಿಯ ಉತ್ಸವ ನಡೆಯುತ್ತಿದ್ದು, ಜಾತ್ರೆ ಕೂಡ ಏರ್ಪಾಡಾಗುತ್ತದೆ. ದೇವಸ್ಥಾನದ ಸಮೀಪದಲ್ಲಿ ಅನುಭವ ಮಂಟಪ ಇದ್ದು, ಕುಮಾರ ನಿಜಗುಣ ಸ್ವಾಮಿಗಳವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರು ಬರೆದ ’ಬೋಳು ಬಸವನ ಬೊಂತೆ” ಒಂದು ಅಮರ ಕೃತಿ. ಇವರು ಸಂಸಾರಿಕ ಜೀವನವನ್ನು ತ್ಯಜಿಸಿ, ಶ್ರೀ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಗಳವರಿಂದ ದೀಕ್ಷೆಯನ್ನು ಪಡೆದು ವಿರಕ್ತಿ ಮಾರ್ಗದೆಡೆಗೆ ನಡೆದಿದ್ದಾರೆ. ಈ ಸ್ಥಳದಲ್ಲಿ ಶ್ರೀ ನಿಜಗುಣಶಿವಯೋಗಿಗಳು ತಪೋಗೈದ ಗುಹೆ ಇದೆ.

ಕುಂತೂರು

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೦ ಕಿ.ಮೀ. ಈ ಗ್ರಾಮದಲ್ಲಿ ಶ್ರೀ ಪ್ರಭುದೇವಸ್ವಾಮಿಯವರ ಬೆಟ್ಟ ಇದ್ದು, ವರ್ಷಕ್ಕೊಮ್ಮೆ ಸ್ವಾಮಿಗೆ ಹಾಲೆರೆವ ಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ. ಇಲ್ಲಿ ಕಾರ್ಖಾನೆಯ ನೌಕರರಿಗೆ ವಸತಿಗೃಹಗಳಿದ್ದು, ಕಾಲೋನಿಯೊಂದು ನಿರ್ಮಾಣಗೊಂಡಿದೆ. ಊರಿನ ಕೇಂದ್ರಸ್ಥಳದಲ್ಲಿ ದಾಸೋಹ ಮಠವಿದ್ದು, ಈ ಮಠದಲ್ಲಿ ಹಿಂದೆ ಶ್ರೀ ಮಾದೇಶ್ವರರವರು ಬಂದು ಹೋಗಿದ್ದ ಐತಿಹ್ಯವಿದೆ. ಶ್ರೀ ಮಠದಲ್ಲಿ ಅನ್ನದಾಸೋಹ ನಡೆಯುತ್ತದೆ.

ಶ್ರೀ ಸಿದ್ಧೇಶ್ವರ ಕ್ಷೇತ್ರ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೩ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೩ ಕಿ.ಮೀ. ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಗಿರಿಯಲ್ಲಿ ಗುಹೆಗಳು ಅಧಿಕವಾಗಿವೆ. ತುಟ್ಟತುದಿಯಲ್ಲಿರುವ ಮೊದಲ ಗುಹೆ ವಿಶಾಲವಾದುದು. ಪೂಜಾ ಬಾಗಿಲು, ದರ್ಶನ ಬಾಗಿಲು, ಸ್ವರ್ಗದ ಬಾಗಿಲು ಈ ರೀತಿ ೦೩ ಬಾಗಿಲುಗಳಿವೆ. ಪೂಜೆಯನ್ನು ಭಕ್ತರು ದರ್ಶನದ ಬಾಗಿಲ ಹತ್ತಿರ ಬಂದು ಮಾಡಿಸುತ್ತಾರೆ. ಸ್ವರ್ಗದ ಬಾಗಿಲ ಬಗ್ಗೆ ಒಂದು ದಂತಕಥೆಯಿದ್ದು, ಒಮ್ಮೆ ಮಕ್ಕಳಿಲ್ಲದ ದಂಪತಿಗಳು ಮಗುವಾದರೆ ಅದನ್ನು ಅದರ ಆಭರಣ ಉಡುಪಿನ ಜೊತೆ ನಿನಗರ್ಪಿಸುತ್ತೇವೆಂದು ವಿಚಿತ್ರ ಹರಕೆ ಹೊತ್ತರು. ಮಗುವಾಯಿತು. ಬಹಳ ದಿನಗಳ ನಂತರ ಮಗುವನ್ನು ಸಿಂಗರಿಸಿ ದೇವರ ದರ್ಶನಕ್ಕೆ ಹೋದರು. ಮಗು ಸ್ವರ್ಗದ ಬಾಗಿಲಲ್ಲಿ ಹೋಗಿ ಮತ್ತೆ ಹಿಂತಿರುಗಲಿಲ್ಲ. ಈಗಲೂ ಕೆಲವು ಸಂರ್ದಬ ಗುಹೆಯಲ್ಲಿ ಮಗುವಿನ ಗೆಜ್ಜೆಯ ಸದ್ದು ಕೇಳಿಸುವುದೆಂದು ಪ್ರತೀತಿ ಇದೆ.

ಕುರುಬನ ಕಟ್ಟೆ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೮ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕೊಳ್ಳೇಗಾಲದ ಪಕ್ಕದಲ್ಲಿರುವ ಕುರುಬನ ಕಟ್ಟೆಯು ಶೀ ಮಂಟೆಸ್ವಾಮಿ ಯವರು ತಪಗೈದ ಸ್ಥಳ. ಇಲ್ಲಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತದೆ. ಪರಮ ಪರಂಜ್ಯೋತಿ ನೀವೇ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ ಎಂದು ಹಾಡುವ ನೀಲಗಾರರ ಮೇಳ ಈ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಪಕ್ಕದಲ್ಲಿ ಕರಳಕಟ್ಟೆ ಎಂಬ ಗ್ರಾಮವಿದ್ದು, ಸೋಲಿಗರು ಇಲ್ಲಿ ವಾಸವಾಗಿದ್ದಾರೆ.

ಕನಕಗಿರಿ ಕ್ಷೇತ್ರ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೯ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೯ ಕಿ.ಮೀ. ಕ್ಷೇತ್ರವು ದೊಡ್ಡಿಂದವಾಡಿ ಗ್ರಾಮದ ಸನಿಹದಲ್ಲಿರುವ ಗಿರಿ ಪ್ರದೇಶ ಇಲ್ಲಿ ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಪಂಚಲಿಂಗ ದರ್ಶನದಂದು ತಲಕಾಡಿನ ೦೫ ಲಿಂಗಗಳನ್ನು ದರ್ಶನ ಮಾಡಿ, ಕನಕಗಿರಿಯ ಪಾರ್ವತಿ-ಪರಮೇಶ್ವರರ ದರ್ಶನ ಪಡೆದರೆ ಕೈಲಾಸ ಪದವಿ ಪ್ರಾಪ್ತವಾಗುವುದೆಂದು ಪ್ರತೀತಿ ಇದೆ. ಆದ್ದರಿಂದಾಗಿ ಈ ದೇವರ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇದೊಂದು ವೈದಿಕ ಮತ್ತು ಜಾನಪದ ಸಾಂಸ್ಕೃತಿಕ ಆಚರಣೆಯ ಸಂಗಮ, ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ವೈದಿಕ ಪರಂಪರೆಯನ್ನು ಪ್ರತಿನಿಧಿಸಿದರೆ ’ಶ್ರೀ ಗುಡ್ಡದ ಮಾರಮ್ಮನ ದೇವಸ್ಥಾನ ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಕೆಂಡಗಣ್ಣ ಸ್ವಾಮಿಗಳ ಗದ್ದುಗೆಯೂ ಪ್ರಮುಖವಾದುದಾಗಿದೆ.

ಗುಂಡಾಲ್ ಜಲಾಶಯ

ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಕೊಳ್ಳೇಗಾಲದಿಂದ ಲೊಕ್ಕನ ಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ. ಇಲ್ಲಿ ಬೆಟ್ಟ ಗುಡ್ಡಗಳಿವೆ, ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ವಾಸ್ತವ್ಯಕ್ಕೆ ಪ್ರವಾಸಿ ಬಂಗಲೆಯಿದೆ. ಈ ಜಲಾಶಯದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

ಚಿಕ್ಕಲ್ಲೂರು

ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಶ್ರೀ ಚಕ್ಕಲ್ಲೂರು ಪುಣ್ಯಕ್ಷೇತ್ರವು ಧರೆಗೆ ದೊಡ್ಡವರು ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿಯವರು ಐಕ್ಯವಾದ ಸ್ಥಳವಾಗಿದೆ. ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯವರು ನಿಡುಗಟ್ಟ ಗ್ರಾಮದ ಮುದ್ದೋಜಿ ಲಿಂಗವಂತ ಪಂಚಾಳದವರು, ಆತನ ಕಿರಿಯ ಮಗ ಕೆಂಪಣ್ಣ ಮಂಟೇಸ್ವಾಮಿಯ ಶಿಷ್ಯರಾಗಿ ಅನೇಕ ಪವಾಡಗಳನ್ನು ಮೆರೆಸಿ, ಕೊನೆಯಲ್ಲಿ ಚಿಕ್ಕಲ್ಲೂರು ಬಂದು ಐಕ್ಯವಾಗುತ್ತಾರೆ. ಈ ಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ ಮಾಸದಲ್ಲಿ ಬರುವ ಪೌರ್ಣಿಮೆ ದಿನ ಸಂಕ್ರಾಂತಿಯ ಸಮಯದಲ್ಲಿ ಚಂದ್ರಮಂಡಲ ಆರಂಭದಿಂದ ಪಂತಿ ಸೇವೆಯಲ್ಲಿ ಮುಕ್ತಾಯವಾಗುವ ೦೫ ದಿನಗಳ ಜಾತ್ರೆ ನಡೆಯುತ್ತದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಕಾವೇರಿ ನದಿಯು ಸನಿಹದಲ್ಲಿ ಹರಿಯುತ್ತದೆ. ಸಮೀಪದಲ್ಲಿಯೇ ಮುತ್ತತ್ತಿರಾಯನ ಕ್ಷೇತ್ರವಿದೆ.

ಉಗನಿಯ

ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ವಾಸವಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ : ಕೊಳ್ಳೇಗಾಲದಿಂದ ಬೆಂಗಳೂರು ರಸ್ತೆಯಲ್ಲಿ ಕ್ರಮಿಸಿ ಧನಗೆರೆ ಊರಿನಿಂದ ಸ್ವಲ್ಪದೂರ ಮುಂದೆ ಹೋದಾಗ ಒಂದು ಕಚ್ಚಾ ರಸ್ತೆಯ ಮೂಲಕ ತಲುಪಿದಾಗ ಸಿಗುವ ಭವ್ಯ ದೇವಾಲಯ ಶ್ರೀ ವಾಸವಾಡಿ ವೀರಭದ್ರೇಶ್ವರ ಸನ್ನಿದಿ ಹಲವಾರು ಭಕ್ತರ ಸಮೂಹ ಹೊಂದಿರುವ ಅತಿ ಪುರಾತನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ತಯಾರಿಸಿ ನೀಡುವ ಅನ್ನ ಚಟ್ನಿ ತುಂಬಾ ವಿಶೇಷವಾದ ಪ್ರಸಾದವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಅನ್ನಬ್ರಹ್ಮೋತ್ಸವವ ನಡೆಯಲಿದ್ದು ತುಂಬಾ ಸಂಖ್ಯೆಯ ಭಕ್ತಾದಿಗಳು ಸೇರಿ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ದೇವಾಲಯದ ಪಕ್ಕದಲ್ಲಿ ಕೆರೆ ಇದ್ದು ಸುತ್ತಲಿನ ಪರಿಸರ ಸುಂದರ ಹಾಗೂ ಆಕರ್ಷಣೀಯವಾಗಿದೆ.

ಶಿವನ ಸಮುದ್ರ

ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ವೈಷ್ಣವ, ಶೈವ ಹಾಗೂ ಶಕ್ತಿ ದೇವತೆಗಳಿಗೆ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ. ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ಸೇರು ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ.

ವೆಸ್ಲಿ ಸೇತುವೆ

ಶಿವನಸಮುದ್ರ ಪ್ರದೇಶದಲ್ಲಿ ಕಾವೇರಿನದಿಗೆ ಅಡ್ಡಲಾಗಿ ೩ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವೆಸ್ಲೆ ಸೇತುವೆ ಹಳೆಯಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬೂದಬಾಳು ಕ್ಷೇತ್ರ

ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಬೂದಬಾಳು : ಕೊಳ್ಳೇಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ಗುಡಿಹಟ್ಟಿ ವೆಂಕರಮಣಸ್ವಾಮಿ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆಯಾಗಿದ್ದು ಮೊದಲ ದಿನ ತೇರು, ಎರಡನೇ ದಿನ ವಧೆ ಅಥವಾ ರಾಕ್ಷಸನ ಸಂಹಾರ. ಮೂರನೇ ದಿನ ವಸಂತೋತ್ಸವ ನಡೆಯುತ್ತದೆ. ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ದರ್ಗಾ

ತಾಲ್ಲೂಕು ಕೇಂದ್ರದಿಂದ = ೨೦ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೦ ಕಿ.ಮೀ. ಮುಸಲ್ಮಾನರ ಪವಿತ್ರ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರ. ಭೋರ್ಗರೆದು ಧುಮ್ಮಿಕ್ಕುವ ಕಾವೇರಿ ತಟದಲ್ಲಿದ್ದು, ಗಗನಚುಕ್ಕಿ ಜಲಪಾತವನ್ನು ಉಂಟು ಮಾಡುವ ಸ್ಥಳವಾಗಿದೆ. ಈ ಜಲಾಶಯ ಉಕ್ಕಿ ಹರಿಯುವ ನೀರಿನಿಂದ ರಮ್ಯ ಮನೋಹರವಾಗಿದೆ. ಈ ತಟದಿಂದ ನಿಂತು ನೋಡಿದರೆ ವಿಶ್ವವಿಖ್ಯಾತ ಏಷ್ಯಾ ಖಂಡದ ಪ್ರಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಫ್‌ನ ಸುಂದರ ನೋಟ ಕಾಣಿಸುತ್ತದೆ. ಈ ದರ್ಗ ಹಿಂದು-ಮುಸಲ್ಮಾನರ ಐಕ್ಯದ ಸಂಕೇತವನ್ನು ಸೂಚಿಸುವ ಸ್ಥಳವಾಗಿದೆ.

ಭರಚುಕ್ಕಿ

ಇಲ್ಲಿಂದ ಸ್ವಲ್ಪ ದೂರ ಮುಂದೆ ಹೋದಾಗ ಜಗತ್ತಿನಲ್ಲಿಯೇ ಅಪರೂಪದ ಭೂಸೃಷ್ಟಿಯ ಅಚ್ಚರಿ ಕಾವೇರಿಯ ಆರ್ಭಟ ಭರಚುಕ್ಕಿ ಜಲಪಾತವಿದೆ. ಇಲ್ಲಿ ಸುಮಾರು ೧ ಕಿ.ಮೀ. ಅಗಲವಾಗಿ ಮೈದೆಳೆದಿರುವ ಕಾವೇರಿ ಸುಮಾರು ೭೫ ರಿಂದ ೧೦೦ ಅಡಿಯವರೆಗೆ ಭೂಮಿಯಿಂದ ಭೂಮಿಗೆ ಧುಮ್ಮಿಕ್ಕುವಳು. ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತ ವಿಶ್ವದ ಜಲಪಾತಗಳಲ್ಲಿ ೮೩ನೇ ಸ್ಥಾನವನ್ನು ಪಡೆದಿದೆ.

ಯಡಕುರಿ

ತಾಲ್ಲೂಕು ಕೇಂದ್ರದಿಂದ = ೧೪ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೪ ಕಿ.ಮೀ. ಚಾಮರಾಜನಗರ ಜಿಲ್ಲೆಯ ಏಕೈಕ ದ್ವೀಪ ಸ್ಥಳ. ಕಾವೇರಿ ನದಿಯು ತಲ ಕಾವೇರಿಯಲ್ಲಿ ಉಗಮವಾಗಿ ತಾನು ಹರಿಯುವ ಉದ್ದಕ್ಕೂ ವೈಚಿತ್ರಗಳನ್ನು ಸೃಷ್ಟಿಮಾಡುತ್ತದೆ. ಇಂತಹ ವೈಚಿತ್ರ್ಯಗಳಲ್ಲಿ ಯಡಕುರಿಯ ಕೂಡ ಒಂದು. ಇಲ್ಲಿ ಕಾವೇರಿ ನದಿ ಕವಲೊಡೆದು ಎರಡು ಭಾಗಗಳಾಗಿ ಮುಂದೆ ಮತ್ತೆ ಒಂದಾಗಿ ಸೇರುತ್ತದೆ. ಈ ಒಂದಾಗಿ ಸೇರುವ ಸ್ಥಳಕ್ಕೆ ಕೂಡುಮೂಲೆ ಎಂದು ಅಲ್ಲಿನ ಜನರು ಕರೆಯುತ್ತಾರೆ. ಯಡಕುರಿಯ ಸುತ್ತಲೂ ನೀರಿನಿಂದ ಸುತ್ತುವರಿದ ದ್ವೀಪ ಊರು. ಊರಿಗೆ ಹೋಗಲು ಹರಿಗೋಲೆ ಬೇಕು. ಅಂಬಿಗಣ್ಣನ ಅಪ್ಪಣೆ ಇಲ್ಲದೆ ಊರಿಗೆ ಪ್ರವೇಶವಿಲ್ಲ. ಇಲ್ಲಿಗೆ ವಿಶೇಷವಾಗಿ ಪಕ್ಷಿಗಳು ವಲಸೆ ಬರುವುದನ್ನು ಕಾಣಬಹುದು.

ಚಾಮರಾಜನಗರದ ತಾಲೂಕುಗಳು

  1. ಚಾಮರಾಜನಗರ
  2. ಯಳಂದೂರು
  3. ಕೊಳ್ಳೇಗಾಲ
  4. ಗುಂಡ್ಲುಪೇಟೆ
  5. ಹನೂರು

ಚಾರಣ

ಬಂಡಿಪುರ ಬಿಳಿಗಿರಿ ಬೆಟ್ಟ ಮಹದೇಶ್ವರ ಬೆಟ್ಟ ಗೋಪಾಲಸ್ವಾಮಿ ಬೆಟ್ಟ ಇವುಗಳು ಚಾಮರಾಜನಗರದಲ್ಲಿರುವ ಪ್ರಸಿದ್ದ ಚಾರಣ ಸ್ಥಳವಾಗಿವೆ.

ಇದನ್ನೂ ನೋಡಿ



ಜಿಲ್ಲೆಯ ಬಗ್ಗೆ

ಚಾಮರಾಜನಗರವು ಕರ್ನಾಟಕ ರಾಜ್ಯದ ದಕ್ಷಿಣದ ಜಿಲ್ಲೆಯಾಗಿದೆ. 1997 ರಲ್ಲಿ ದೊಡ್ಡ ಮೈಸೂರು ಜಿಲ್ಲೆಯಿಂದ ಇದನ್ನು ಬೇರ್ಪಡಿಸಲಾಗಿದೆ. ಈ ಜಿಲ್ಲೆಯ ಜಿಲ್ಲಾ ಕೇಂದ್ರವು ಚಾಮರಾಜನಗರ ಪಟ್ಟಣ.

ಚಾಮರಾಜನಗರವನ್ನು ಮೊದಲು ಶ್ರೀ ಅರಿಕೊಟ್ಟಾರ ಎಂದು ಕರೆಯಲಾಗುತ್ತಿತ್ತು. ಮೈಸೂರಿನ ಒಡೆಯರ್ ಚಾಮರಾಜ ಒಡೆಯರ್ ಇಲ್ಲಿ ಜನಿಸಿದರು ಮತ್ತು ಆದ್ದರಿಂದ ಈ ಸ್ಥಳವನ್ನು ಅವನ ನಂತರ ಮರುನಾಮಕರಣ ಮಾಡಲಾಯಿತು. ವಿಜಯ ಪಾರ್ಶ್ವನಾಥ ಬಸದಿ, ಪವಿತ್ರ ಜೈನ ದೇವಾಲಯವನ್ನು ಹೊಯ್ಸಳ ಅರಸ ಗಂಗರಾಜ ಕಮಾಂಡರ್ ಪುನೈಸಂಡನಾಯಕ 1117 ರಲ್ಲಿ ನಿರ್ಮಿಸಿದನು.

ಮತಷ್ಟು ಓದು 

ಐ ಆರ್ ಎ ಡಿ

ಬಿ ಎಸ್ ಯಡಿಯೂರಪ್ಪ
ಗೌರವಾನ್ವಿತ ಮುಖ್ಯಮಂತ್ರಿಗಳುಬಿ ಎಸ್ ಯಡಿಯೂರಪ್ಪ
B B Cauvery
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಡಾ.ಎಂ ಆರ್ ರವಿ, ಭಾ.ಆ.ಸೇ.
  • ಗೋಪಾಲಸ್ವಾಮಿ ದೇವಸ್ಥಾನ
    ಗೋಪಾಲಸ್ವಾಮಿ ದೇವಸ್ಥಾನ
  • ಹೊಗೇನಕಲ್ ಫಾಲ್ಸ್
    ಹೊಗೇನಕಲ್ ಫಾಲ್ಸ್
  • ಮಲೆ ಮಹದೇಶ್ವರ ಬೆಟ್ಟ
    ಮಲೆ ಮಹದೇಶ್ವರ ಬೆಟ್ಟ
  • National Portal of India
  • pmindia

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು